SEARCH HERE

Wednesday 14 April 2021

ಮಕ್ಕಳವಿದ್ಯಾಪ್ರಾಪ್ತಿಗಾಗಿ ಪಠಿಸಿ


ಮಕ್ಕಳವಿದ್ಯಾಪ್ರಾಪ್ತಿಗಾಗಿ_ಪಠಿಸಿ

||ಜ್ಞಾನನಂದಮಯಂ ದೇವಂ ನಿರ್ಮಲಂ ಸ್ಪಟಿಕಾಕೃತಿಂ ಆಧಾರಂ ಸರ್ವ ವಿದ್ಯಾಂನಾಂ ಹಯಗ್ರೀವ ಉಪಾಸ್ಮಹೇ ll

#ಶ್ರೀಹಯಗ್ರೀವಸಂಪದಾಂ_ಸ್ತೋತ್ರಮ್ ॥

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಂ।
ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಷಿತಃ ll

ಹಯಗ್ರೀವ ಹಯಗ್ರೀವ ಹಯಗ್ರೀವನೆಂದು ಭಜಿಸುವವನ ಬಹು ಬಗೆಯ ಪಾಪಗಳು, ಬಡವನನ್ನು ಭಾಮಿನಿಯರು ಬಿಡುವಂತೆ ಬಿಡುತ್ತವೆ.॥1॥

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋವದೇತ್।
ತಸ್ಯ ನಿಸ್ಸರತೇ ವಾಣೀ ಜಹ್ನು ಕನ್ಯಾ ಪ್ರವಾಹವತ್ ॥2॥

ಹಯಗ್ರೀವ ಹಯಗ್ರೀವ ಹಯಗ್ರೀವನೆಂದು ನುಡಿಯುವವನ ನುಡಿಯು ಗಂಗಾ ಪ್ರವಾಹದಂತೆ (ಮಂಗಳಕರವು, ಮಹಿಮಾಸ್ಪದವು, ಮಹಾಬಲಿಷ್ಠವು ಮತ್ತು ನಿರರ್ಗಳವು ಆಗಿ) ಹೊರಬೀಳುತ್ತದೆ. ॥2॥

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ ।
ವಿಶೋಭತೇ ಚ ವೈಕುಂಠ ಕವಾಟೋದ್ಘಾಟಿನಕ್ಷಮಃ ॥ 3॥

ಹಯಗ್ರೀವ ಹಯಗ್ರೀವ ಹಯಗ್ರೀವನೆಂಬ ಧ್ವನಿಯು ವೈಕುಂಠದ ದ್ವಾರವನ್ನು ತೆಗೆಯಲು ಸಮರ್ಥವಾಗಿದೆ. ॥3॥

ಶ್ಲೋಕತ್ರಯಮಿದಂ ಪುಣ್ಯಂ ಹಯಗ್ರೀವ ಪದಾಂಕಿತಂ।
ವಾದಿರಾಜಯತಿ ಪ್ರೋಕ್ತಂ ಪಠತಾಂ ಸಂಪದಾಂ ಪದಂ ॥ 4 ॥

ಶ್ರೀ ವಾದಿರಾಜ ಯತಿಗಳು ರಚಿಸಿರುವ ಶ್ರೀ ಹಯಗ್ರೀವ ಸ್ವಾಮಿಯ ಈ ಮೂರು ಮಂಗಳಕರವಾದ ಶ್ಲೋಕಗಳನ್ನು ಮನನ ಮಾಡುವವನಿಗೆ ಸಂಪದವು ಪ್ರಾಪ್ತವಾಗುತ್ತದೆ.

ಹಯಗ್ರೀವ ಮಂತ್ರವನ್ನು ನಿತ್ಯ ಪಠನೆ ಮಾಡುವುದರಿಂದ ತ್ರಿಕಾಲ ಅಂದರೆ ಹಿಂದಿನ, ಮುಂದಿನ ಮತ್ತು ಈಗಿನ ಜ್ಞಾನವನ್ನು ಪಡೆದು, ಯಾರು ಏನೇ ಹೇಳಿದರೂ ಉತ್ತರ ಹೇಳಬಹುದು

ವಾಗ್ರೀಶ್ವರಾಯ ವಿದ್ಮಹೇ ಹಯಗ್ರೀವಾಯ ಧೀಮಹೀ ತನ್ನೋ
ಹಂಸಃ ಪ್ರಚೋದಯಾತ್

ಮೂಲ ಮಂತ್ರ :-
ಇದು ಅಮೂಲ್ಯವಾದುದು ಈ ಮಂತ್ರದಿಂದ ಸರಸ್ವತಿಯು ಶೀಘ್ರವಾಗಿ ಒಲಿಯುವಳು

ಕೃಷ್ಣಾರ್ಪಣಮಸ್ತು

*******


No comments:

Post a Comment