(೧)ನೇ ಸ್ಕಂಧ,ಪರಿಕ್ಷೀತ ಮಹಾರಾಜ ಮನೆಬಿಟ್ಟು ಗಂಗಾ ತೀರಕ್ಕೆ ಹೋದ ಉದಾಹರಣೆ.
ಅಂದರೆ ಮೃತ್ಯು ನಮಗೆ ಸದಾ ಬೆನ್ನು ಹಿಂದೆ ಇದೆ,ಅಂತ ಜೀವನು ಅಭಿಮಾನವನ್ನು ಬಿಡಬೇಕು. ಎಂದು
(೨)ನೇ ಸ್ಕಂದ ಯೋಗ್ಯರ ಮೂಲಕ ಭಗವತ್ಕಥಾ ಶ್ರವಣ ಮಾಡಬೇಕು ಅಂತ ತಿಳಿಸಿ,ಆ ಪ್ರಭುವಿನ ಅತ್ಯಧ್ಬುತ ಮಹಿಮೆಯನ್ನು ತಿಳಿಯಲು ಸ್ಥೂಲೋಪಾಸನೆ ಮಾಡಬೇಕು ಎಂದು ತಿಳಿಸಿ.
(೩)ನೆ ಸ್ಕಂದ ತತ್ವ ನಿಶ್ಚಯ ಮಾಡಿಕೊ ಎಂದು ತಿಳಿಸಿ ಕಪಿಲ ಗೀತೆಯನ್ನು ಅರುಹಿ.
(೪)ನೇ ಸ್ಕಂದ ಸ್ತೋತ್ತಮರ ನಿಂದನೆ ಮಹಾ ಅನರ್ಥಕ್ಕೆ ಕಾರಣ ಅಂತ ದಕ್ಷ ಪ್ರಜಾಪತಿಯ ಕತೆ,
ಧ್ರುವ ಚರಿತ್ರೆ
ಭಗವಂತನ ಒಲಿಸಿಕೊಳ್ಳಲು ವಯಸ್ಸು ಮುಖ್ಯ ವಲ್ಲ.ಭಕ್ತಿ ಮುಖ್ಯ ಅಂತ.
(೫)ನೆ ಸ್ಕಂದ ಋಷಭ ರೂಪಿ ಪರಮಾತ್ಮ ಹೇಳಿದ ವಾಣಿ ಸನ್ಮಾರ್ಗದಲ್ಲಿ ನಡೆಯಿರಿ.
ಮತ್ತು
ಜಡಭರತನ ಕತೆ ಭಗವಂತನ ಭಕ್ತರಿಗೆ ರಕ್ಷಣಾ ಮಾಡಲು ಎಲ್ಲಾ ದೇವತೆಗಳು ಸಿದ್ದರಾಗಿರುವರು ಅಂತ
(೬)ನೆಯ ಸ್ಕಂದ ಅಜಾಮಿಳನ ಕತೆ, ಭಗವಂತನ ನಾಮ ಸ್ಮರಣೆಯ ಮಹಿಮೆ ಹಾಗು ವೃತಾಸುರನ ಕತೆ..,
(೭)ನೆಯ ಸ್ಕಂದ ಭಗವಂತ ಒಬ್ಬನೇ ಸರ್ವಶ್ರೇಷ್ಠ, ಸರ್ವಶಕ್ತ ಎನ್ನುವ ಪ್ರಹ್ಲಾದ ರಾಜರ ಚರಿತ್ರೆ, ತನ್ನ ಭಕ್ತರು ರಕ್ಷಣಾ ಮಾಡಲು ಹೇಗಾದರು ಬರಬಲ್ಲೆ ಎನ್ನುವ ನರಸಿಂಹ ದೇವರ ಚರಿತ್ರೆ..
(೮)ನೇ ಸ್ಕಂದ ಗಜೇಂದ್ರನ ಚರಿತ್ರೆ.
ಎಂತಹ ಆಪತ್ಕಾಲ ಬಂದರು ಭಗವಂತನ ನಾಮ ಸ್ಮರಣೆಯನ್ನು ಬಿಡಬಾರದು ಎನ್ನುವ ದರ ಬಗ್ಗೆ.
(೯)ನೆಯ ಸ್ಕಂದ ವಿರಕ್ತಿ ದೊಡ್ಡ ದು ಎಂದು ಅನೇಕ ರಾಜರು ಗಳ ಚರಿತ್ರೆ.
(೧೦)ನೆಯ ಸ್ಕಂದ ಭಗವಂತನ ಕತೆ.
ಒಂಬತ್ತು ಅಧ್ಯಾಯಗಳು ಅವನ ಭಕ್ತರ ಚರಿತ್ರೆ, ಹತ್ತನೆಯ ಅಧ್ಯಾಯದಲ್ಲಿ ಭಗವಂತನ ಬಾಲ ಲೀಲೆ,ದುಷ್ಟ ಶಿಕ್ಷಣ, ಹಾಗು ಗೋಪಿಕೆಯರ ಭಕ್ತಿ ಮುಖಾಂತರ ಭಕ್ತಿ ದೊಡ್ಡದು ಅನ್ನು ವದರ ಬಗ್ಗೆ ತಿಳಿಸಿ.
(೧೧)ನೆಯ ಸ್ಕಂದ ಉಪಾಸನೆಯ ಬಗ್ಗೆ ಉದ್ದವನಿಗೆ ತಿಳಿಸಿದ ಉದಾಹರಣೆ ತಿಳಿದು ಅದರಂತೆ
ಆಚರಿಸಿದರೆ ಸಿಗುವ ಸದ್ಗತಿ ಯನ್ನು ಹೇಳಿ.
(೧೨)ನೆಯ ಸ್ಕಂದ ಮಾರ್ಕಂಡೇಯ ಮುನಿಗಳ ಚರಿತ್ರೆ ಯನ್ನು ತಿಳಿಸಿ ಭಗವಂತನ ಕರುಣಾ ಇಂದ ಚಿರಂಜೀವಿತನವನ್ನು ಹೊಂದಿದ ಬಗ್ಗೆ ತಿಳಿಸಿ ಕೊಡುತ್ತದೆ..
ಇಂತಹ ಪರಮ ಮಂಗಳಕರವಾದ ಭಾಗವತ ಶ್ರವಣ ನಿತ್ಯ ಮಾಡುವ ಭಾಗ್ಯ ನಮಗೆಲ್ಲ ಸಿಗಲಿ ಅಂತ ಪ್ರಾರ್ಥನೆ ಮಾಡುತ್ತಾ..
ಹರಯೇ ನಮಃ
******
No comments:
Post a Comment