SEARCH HERE

Tuesday, 1 January 2019

ದಾನಗಳು ಅಧಿಕ ಮಾಸ ಚೈತ್ರ ಶ್ರಾವಣ ಮಾಸ ಗೌರಿ ಹಬ್ಬ ಕಾರ್ತಿಕ ಮಾಘ ಫಾಲ್ಗುಣ daana various occasions dana



Know contents of BAGINA ಬಾಗಿನ 

ದಾನಗಳು
ಏನೇನ ದಾನವ ಮಾಡಲು - ಹರಿಯ |
ಧ್ಯಾನಕೆ ಸಮವಾದ ದಾನಂಗಳುಂಟೆ ? ||ಪ.

ದಿನಕೊಂದು ಲಕ್ಷ ಗೋದಾನವ ಮಾಡಲು |
ಅನುದಿನ ಉದಕದಾನವ ಮಾಡಲು ||
ಮನಶುದ್ಧವಾದ ಭೂದಾನವ ಮಾಡಲು |
ವನಜನಾಭನ ಧ್ಯಾನಕೆ ಸಮವುಂಟೆ ? 1

ಉತ್ತಮವಾದ ವಸ್ತ್ರವ ದಾನಮಾಡಲು |
ಮುತ್ತು ಮಾಣಿಕವ ದಾನವ ಮಾಡಲು ||
ಅತ್ಯಂತ ವಿದ್ಯಾ ಪ್ರದಾನವ ಮಾಡಲು |
ಚಿತ್ತಜಪಿತನ ಧ್ಯಾನಕೆ ಸಮವುಂಟೆ ? 2

ಶತಕೋಟಿ ಕನ್ಯಾಪ್ರದಾನವ ಮಾಡಲು |
ಶತಶತ ಸುವರ್ಣ ದಾನವ ಮಾಡಲು ||
ಮಿತಿಯಿಲ್ಲದೆ ಅನ್ನದಾನವ ಮಾಡಲು |
ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? 3

ನಾನಾ ತೀರ್ಥದಲಿ ಸ್ನಾನವ ಮಾಡಲು |
ಕಾನನದೊಳಗೆ ತಪವ ಮಾಡಲು |
ಜಾÕನಿಯಾಗಿ ಕಾಶೀಯಾತ್ರೆಯ ಮಾಡಲು |
ಜಾನಕೀಪತಿಯ ಧ್ಯಾನಕೆ ಸಮವುಂಟೆ ? 4

ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |
ಹರುಷದಿ ವಿಷ್ಣುಪಂಚಕ ಮಾಡಲು ||
ಪರಮ ಕಠಿಣ ಚಾಂದ್ರಾಯಣ ಮಾಡಲು |
ಪುರಂದರವಿಠಲನ ಧ್ಯಾನಕೆ ಸಮವುಂಟೆ ? 5
***

 ದಾನದ ಫಲ

1. ಅಕ್ಕಿಯನ್ನು ಧಾನ ಮಾಡುವುದರಿಂದ ಪಾಪ ವಿಮುಕ್ತಿ.
2. ಬೆಳ್ಳಿಯನ್ನು ಧಾನ ಮಾಡುವುದರಿಂದ ಮಾನಸಿಕ ನೆಮ್ಮದಿ(ಮನಃಶಾಂತಿ).
3. ಸುವರ್ಣ(ಚಿನ್ನ) ಧಾನ ಮಾಡುವುದರಿಂದ ಸರ್ವ ದೋಷ ನಿವಾರಣೆ.
4. ಹಣ್ಣು ಧಾನ ಮಾಡುವುದರಿಂದ ಬುದ್ಧಿ ವಿಕಾಸ ಹಾಗೂ ಸಿದ್ದಿ.
5. ಮೊಸರು ಧಾನ ಮಾಡುವುದರಿಂದ ಇಂದ್ರಿಯ ನಿಗ್ರಹ.
6. ಗೃತ (ತುಪ್ಪ)ಧಾನ ಮಾಡುವುದರಿಂದ ರೋಗನಾಸ, ಆರೋಗ್ಯ ವೃದ್ಧಿ.
7.ಹಾಲು(ಕ್ಷೀರ)ಧಾನ ಮಾಡುವುದರಿಂದ ಸುಖ ನಿದ್ರೆ ಬರುವುದು.
8. ಮದು (ಜೇನು) ಧಾನ ಮಾಡುವುದರಿಂದ ಸಂತಾನ ಭಾಗ್ಯ ಉಂಟಾಗುವುದು.
9. ನೆಲ್ಲಿ ಕಾಯಿ ಧಾನ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚುವುದು.
10. ತೆಂಗಿನ ಕಾಯಿ ಧಾನ ಮಾಡುವುದರಿಂದ ಸಂಕಲ್ಪ ಕಾರ್ಯ ಸಿದ್ಧಿ.
11. ದೀಪ ಧಾನ ಮಾಡುವುದರಿಂದ ಕಣ್ಣಿನ ನೋಟ ವೃದ್ಧಿ ಯಾಗುವುದು.
12. ಗೋಧಾನ ಧಾನ ಮಾಡುವುದರಿಂದ ಋಣ ಮುಕ್ತರು, ಋಷಿ ಮುನಿಗಳ ಆಶಿರ್ವಾದ ದೊರೆಯುವುದು.
13.ಭೂ  ಧಾನ ಮಾಡುವುದರಿಂದ ಬ್ರಹ್ಮ ಲೋಕ, ಕೈಲಾಸ ದರುಸನ ಪ್ರಾಪ್ತಿ.
14. ವಸ್ತ್ರ ಧಾನ ಮಾಡುವುದರಿಂದ ಆಯುಷ್ ವೃದ್ಧಿ ಯಾಗುವುದು.
15. ಅನ್ನದಾನ  ಮಾಡುವುದರಿಂದ ಬಡತನ ನಿರ್ಮೂಲನೆ, ಧನ ಧಾನ್ಯ ವೃದ್ಧಿ ಯಾಗುವುದು.
ಅವರ ಅವರ ಸಕ್ತಾನುಸಾರ ಮಾಡಬಹುದು ಎಲ್ಲವೂ ಮಾಡಲು ಸಾದ್ಯ ವಿದ್ದವರು ಮಾಡಬಹುದು.ಅದಕ್ಕಾಗಿ ಹೇಳನೆ ಮಾಡುವುದು ಮಾಡಬಾರದು ಇಷ್ಟ ವಾದಾರೆ ಬೇರೆಯವರಿಗೂ ಕಳುಹಿಸಿ ಕೊಡಿ. ಪ್ರತಿ ದಿನ ಇಷ್ಟ ದೇವರ ಪ್ರಾರ್ಥನೆ ಮಾಡಿ.



ಅಧಿಕಮಾಸದಲ್ಲಿ ನಿತ್ಯ ದಾನ

ಶುಕ್ಲ ಪಕ್ಷ         

ಪಾಡ್ಯ:- ಅರಿಶಿನ ಕುಂಕುಮ ಎಲೆಅಡಿಕೆದಕ್ಷಿಣೆ 
ಬಿದಿಗೆ:- ಕುಂಕುಮ ಅರಿಶಿನ ಎಲೆಅಡಿಕೆದಕ್ಷಿಣೆ
ತದಿಗೆ:- ಕೊಬ್ಬರಿ ಸಕ್ಕರೆ
ಚೌತಿ:- ನಿಂಬೆ ಹಣ್ಣು ಸಕ್ಕರೆ ಏಲಕ್ಕಿ
ಪಂಚಮಿ:- ಅಕ್ಕಿ ಎಲೆ ಅಡಿಕೆ ದಕ್ಷಿಣೆ
ಷಷ್ಠಿ:- ಮೊಸರು
ಸಪ್ತಮಿ:- ಹಣ್ಣು
ಅಷ್ಟಮಿ:- ತೊಗರಿಬೇಳೆ 
ನವಮಿ:- ಗೋರಿಕಾಯಿ
ದಶಮಿ:- 2 ಬೆಲ್ಲದ ಅಚ್ಚು
ದ್ವಾದಶಿ:- ಹಾಲು
ತ್ರಯೋದಶಿ:- ಗೋಧಿಹಿಟ್ಟು
ಚತುರ್ದಶಿ:- ಮಲ್ಲಿಗೆ ಹೂವು
ಹುಣ್ಣಿಮೆ:- ಸೌತೆಕಾಯಿ

ಕೃಷ್ಣ ಪಕ್ಷ

ಪಾಡ್ಯ:- ಹೀರೇಕಾಯಿ
ಬಿದಿಗೆ:- ಗೆಡ್ಡೆ ಗೆಣಸು
ತದಿಗೆ:- ಕುಪ್ಪಸ ಎಲೆ ಅಡಿಕೆ ದಕ್ಷಿಣೆ
ಚೌತಿ:- ಹುರಿಗಡಲೆ
ಪಂಚಮಿ:- ಕಡಲೆಕಾಯಿ ಬೀಜ
ಷಷ್ಠಿ:- ರವೆ ಎಲೆ ಅಡಿಕೆ ದಕ್ಷಿಣೆ
ಸಪ್ತಮಿ:- ಶ್ರೀ ಕೃಷ್ಣ ಸಮೇತ ತುಳಸಿ ದಾನ
ಅಷ್ಟಮಿ:- ಹತ್ತಿ
ನವಮಿ:- ಕಡ್ಲೆಹಿಟ್ಟು
ದಶಮಿ:- ಗಾಜಿನ ಬಳೆ
ದ್ವಾದಶಿ:- ಹೆಸರುಬೇಳೆ
ತ್ರಯೋದಶಿ:- ಅವಲಕ್ಕಿ
ಚತುರ್ದಶಿ:- ಕಡ್ಲೆಕಾಯಿ ಎಣ್ಣೆ
ಅಮಾವಾಸ್ಯೆ:- ಕಡ್ಲೆಬೇಳೆ
ಶುದ್ಧ ಪಾಡ್ಯ:- ಕುಪ್ಪಸ ಎಲೆ ಅಡಿಕೆ ದಕ್ಷಿಣೆ 
********

ಅಧಿಕಮಾಸದ ದಾನ
ಮೂವತ್ತ್ಮೂರು ಆಕಳುಕರು ದಾನ  ನಿಮ್ಮ ಆರ್ಥಿಕ ಅನಕೂಲ ಬೆಳ್ಳಿ ಅಥವಾ ಹಿತ್ತಾಳೆ
ಮುವತ್ತ್ಮೂರು ವಿಷ್ಣುಪಾದ ದಾನ 
ಮೂವತ್ತ್ಮೂರು ಅನ್ನಪೂರ್ಣೇಶ್ವರಿ  ಮೂರ್ತಿ ದಾನ 
ಮೂವತ್ತ್ಮೂರುಅರಿಷಿಣ ಕುಂಕುಮ ಬಟ್ಟಲು ದಾನ (ಆರ್ಥಿಕ  ಅನಕೂಲ ಅನುಸಾರ ಬೆಳ್ಳಿ ಹಿತ್ತಾಳೆ , ಸ್ಟೀಲ ಮಾತ್ರ ಬೇಡ)
ಮೂವತ್ತ್ಮೂರು ಮುತ್ತೈದೆಯರಿಗೆ ಉಡಿ ತುಂಬುವ ವೃತ 
ಮೂವತ್ತ್ಮೂರು ಮುತ್ತೈದೆಯರಿಗೆ ಬಳೆ ಇಡಿಸುವ ವೃತ 
ಒಂದು ವಟುವಿಗೆ ದಿನಾಲೂ ಊಟ ಹಾಕುವ ವೃತ 
ಒಂದು ಮತ್ತೈದೆಗೆ ದಿನಾಲೂ ಹರಳು ಹಾಕಿ ಹೂ ಮುಡಿಸುವ ವೃತ ..
ಒಂದು ಬ್ರಾಹ್ಮಣ ಮುತ್ತೈದೆಗೆ ದಿನಾಲೂ ತಾಂಬೂಲಧಕ್ಷಿಣೆ ವೃತ 
ತುಳಸಿ ಸಸಿಗಳನ್ನು ಹಚ್ಚಿ ದಾನ ಮಾಡಿ 
ಒಂದು ಒಣಖೊಬ್ಬರೆ ಗಿಟುಕಿನಲ್ಲಿ ರಂದ್ರಮಾಡಿ ಅಕ್ಕಿಯನ್ನು ತುಂಬಿ ಕೃಷ್ಣನ ಮೂರ್ತಿಯನ್ನು ಇಟ್ಟು ಮತ್ತೆ ಗಿಕಿನ ರಂದ್ರ ಮುಚ್ಚಿ  ತಾಂಬೂಲಧಕ್ಷಿಣೆ ಸಹಿತ ದಾನ ಮಾಡಿದರೆ ಗೋವರ್ಧನ ಪರ್ವತ ದಾನ ಮಾಡಿದ ಫಲ  ಪ್ರಾಪ್ತಿ.....
ಮೂವತ್ತ್ಮೂರು ಮುತ್ತೈದೆಯರಿಗೆ ವಸ್ತ್ರ ದಾನ 
ಮೂವತ್ತ್ಮೂರು ವಟುಗಳಿಗೆ ಸಂಧ್ಯಾವಂದನೆ ಸಾಮಗ್ರಿ ಅಂದರೆ ಥಾಲಿ ತಾಬಾಣ  ತೀರ್ಥದ ಸೌಟು ದಾನ 
ಮೂವತ್ತ್ಮೂರು ಮರದ ಬಾಗಿಣ ಸಹಿತ ಮೂವತ್ತ್ಮೂರು ದಂಪತಿ ಭೋಜನ 
ಮೂವತ್ತ್ಮೂರು ಚವರಿ ದಾನ ಅಂದರೆ  ಹೆರಳಲ್ಲಿ ಹಾಕಿಕೊಳ್ಳುವ ಸಪ್ಲಿಮೆಂಟ ಕೂದಲು ದಾನ 
ಮೂವತ್ತ್ಮೂರು  ಜೊತೆ ದೀಪ ದಾನ  ಅದು  ಕೂಡಾ ಬೆಳ್ಳಿ ಹಿತ್ತಾಳೆ .
ಹಾಲು ಮೊಸರು ತುಂಬಿದ ಪಾತ್ರೆಗಳ ದಾನ
ದೇವರ ಪುಸ್ತಕ ದಾನ  
ಅಪೂಪ ದಾನ ವಿಷೇಶ ವಾದದ್ದು ಅಂದೆ ಅಕ್ಕಿ ಬೆಲ್ಲ  ತುಪ್ಪ ದಿಂದ ಮಾಡಿದ ಭಕ್ಷ್ಯ ಮೂವತ್ತ್ಮೂರು ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಬ್ರಾಹ್ಮಣ ನಿಗೆ ಅಥವಾ ಅಳಿಯನಿಗೆ ,ಅಣ್ಣ ತಮ್ಮಂದಿರಿಗೆ ದಾನ ಕೊಡಬೇಕು .
ಅನಾರಸ ಶ್ರೇಷ್ಠ , ಖರ್ಚಿಕಾಯಿ , ಬೇಸನಲಾಡು , ಅಥವಾ ನಿಮಗೆ ಏನು ಅನಕೂಲ ಅದನ್ನು ಮಾಡಿ ದಾನ ಮಾಡಿ ......ಅಪೂಪ ದಾನ ಹುಣ್ಣಿಮೆ ಯ ಒಳಗೆ 
ನಂತರ   ಮೂವತ್ತ್ಮೂರು ಫಲ  ದಾನ....
ಇನ್ನೂ ಶ್ರಾದ್ಧದ ವಿಚಾರ .... ಜೇಷ್ಠದಲ್ಲಿ ಶ್ರಾದ್ಧವಿದ್ದವರು ಎರಡೂ ಶ್ರಾದ್ಧವನ್ನೂ ಮಾಡಬೇಕು ಅಧಿಕ ಜೇಷ್ಠ ಶ್ರಾದ್ಧ ಮತ್ತು ನಿಜ ಜೇಷ್ಠ ಶ್ರಾದ್ಧ... ಅಧಿಕ ಶ್ರಾದ್ಧವನ್ನು ಹಾಲು ಹಣ್ಣು ಕೊಟ್ಟು ಮಾಡಿ ನಂತರ  ನಿಜ ಶ್ರಾದ್ಧದಲ್ಲಿ ಭೋಜನ ಹಾಕಬಹುದು....
*******

Kannada and English Translation                                                        
Adhika Maasa (ಅಧಿಕ ಮಾಸ  - ದಾನ ವಿವರಗಳು)  Daana Details  1. ಅಪೂಪ (Apoopa) -33 Nos
2. ಅರಿಶಿನ+ ಕುಂಕುಮ –ಲೋಹದ ಬಟ್ಟಲು (Turmeric + Kumkum in Metal cups)
3. (Missing)
4. ತುಳಸಿ ಪೂಜಾ ಸಾಮಗ್ರಿ (Tulasi pooja items)
5. ಸಾಲಿಗ್ರಾಮ ಪೂಜಾ ಸಾಮಗ್ರಿ (Saligrama pooja items)
6. ರವೇ ಉಂಡೆ – 33 (Rave Unde)
7. ಪಾಯಸ + ಪಾತ್ರೆ (Payasa= Paatre)
8. ಅರುಳು ಉಂಡೆ – 33 (Arulu unde0
9. ಗಂಡಸರ  ಪಂಚ ಮುದ್ರೆ (Men’s pancha Mudra)
10. ಗೋಪಿ ಚಂದನ – 33  (Gopi Chandana)
11. ಜನಿವಾರ – 33 ಜನಕ್ಕೆ ( Janeu for 33 people)
12. ತೊಟ್ಲು + ಕೃಷ್ಣ (Cradle + Krishna)
13. ಘಂಟೆ(Bell)
14. ಜಾಗಟೆ (set) –   Gong-set
15. ಫಲ ದಾನ (Plates with fruits)
16. ದಂಪತಿ ತಾಂಬೂಲ  - 33  (Betel leaves+ Betel nuts + Coconut + Dakshina)
17. ವಸ್ತ್ರ (ಸುಮಂಗಲಿ/ ದಂಪತಿ)   (Vastra – Sumangali/ couple)
18. ಮರದ ಬಾಗಿನ  (Murada Baagina)
19. ದೀಪ - 33 ಜನಕ್ಕೆ (Deepa – for 33 people)
20. ಜೇನು + ತುಪ್ಪ (Honey+ Ghee)                                            21. ಶಯ್ಯಾ ದಾನ (ಜಮಖಾಳ+ಹೊದ್ದಿಕೆ+ದಿಂಬು Set (Shayya Daana          Durrie+Blanket+pillow ) 
22. ಮಂದಾಸನ (Mandaasana)
23. ತರಕಾರಿಗಳು (Vegetables)
24.  ಭೋಜನ ಸಾಮಾನುಗಳು (Food items – may be groceries))
25. ಶ್ರೀಗಂಧ (Sandal paste)
26. ಸಾಣೆಕಲ್ಲು + ಶ್ರೀ ಗಂಧ ಚೆಕ್ಕೆ (Sadalwood extracting stone and wood piece)
27. ಸಾಲಿಗ್ರಾಮ (saligrama)
28. ಗೋದಾನ (Godana)
29. ಸ್ವರ್ಣದಾನ (Swarna daana)
30. ಗೃಹದಾನ (Written as graha daana, must be Griha daana)
31. ಉದಕುಂಭ ದಾನ (Waterpot )
32. ಬೆಳ್ಳಿ ದಾನ (Silver gift)
33. ಪುಸ್ತಕ ದಾನ (Book )
34. ಚಕ್ರಾಣಿಕೆ (Chakraanike)
35. ಆಸನ (ಮಣೆ – ಪೀಠ) – Asana (Plank)
36. ಸಕ್ಕರೆ /ಕಲ್ಲುಸಕ್ಕರೆ (Sugar/ sugar-candy) 
37. ಪಾನಕ / ಮಜ್ಜಿಗೆ  (Paanaka / Buttermilk)
38. ಮೊಸರನ್ನ /ಪುಳಿಯೋಗರೆ (Curd rice / Tamarind rice)
39. ಕೊಡೆ (Umbrella)
40. ಚೆಪ್ಲಿ (Chappal)
41. ತುಳಸಿ ಮಣಿ (Tulasi bead)
42. ಚಾಪೆ – ಜತೆ ( Mat – pair)
43. ವಿಷ್ಣು ಪಾದ (Vishnu Paada)
44. 100 Nos ಹೂ ಬತ್ತಿ (100 nos -Hoo Batti)
45. ಗೆಜ್ಜೆವಸ್ತ್ರ  - 33 Nos (Gejjevastar)
46. ಹಾಲು + ಲೋಟ (Milk+ Tumbler)
47. ಮೊಸರು(Curd)
48. 100 Nos ಮಂಗಳ ಹಾರತಿ ಬತ್ತಿ (100 nos -Managala Haarati Batti)
49. ಸಕ್ಕರೆ ಪೊಂಗಲ್/ ಬೆಣ್ಣೆ ಪೊಂಗಲ್ (ಹುಗ್ಗಿ) – (Sweet pongal/ Pongal)
50. ನಾಣ್ಯ -33 (Coins-33)
51. ಭೂ ದಾನ (Bhoomi daana)
52. ಕನ್ನಡಿ (Mirror)
53. ನೆಲ್ಲಿ ಕಾಯಿ – 33 Nos (Amla -33)
54. ವಿಗ್ರಹ (Vigraha)
55. ಅರಿಶಿನ+ ಕುಂಕುಮ+ ಕನ್ನಡಿ + ಬಾಚಣಿಗೆ + ಬಳೆ + ಕರಿಮಣಿ – (Full set -for 33 people) 
56. ತೆಂಗಿನಕಾಯಿ (Coconut)
57. ಕೈಕೋಲು (Walking stick)
58. ಅನ್ನ ದಾನ ( Anna daana)
59.  ನೋಟು ಪುಸ್ತಕ + ಪೆನ್ನು+ ಪೆನ್ಸಿಲ್ (Notebook + Pen + pencil)
60. ವಾದ್ಯ ಬಗೆ (Types of Musical instruments).
********

ಚೈತ್ರಮಾಸದಲ್ಲಿ ಕೊಡಬೇಕಾದ ದಾನಗಳು

1)ಜಲದಾನ 

2)ಛತ್ರಿದಾನ
3)ಬಿಸಣಿಕೆದಾನ
4)ಉದಕುಂಭದಾನ
5)ಕನ್ನಡಿದಾನ
6)ತಾಂಬೂಲದಾನ
7)ಗುಡ(ಬೆಲ್ಲ) ದಾನ
8)ಶಯ್ಯಾ(ಹಾಸಿಗೆ)ದಾನ
9)ತುಪ್ಪತುಂಬಿದ ಕಂಚಿನಪಾತ್ರೆದಾನ
10)ಗೋಧಿದಾನ
11)ಮೊಸರು ದಾನ
12)ತೆಂಗಿನಕಾಯಿ ದಾನ
13)ಮಾವಿನಹಣ್ಣಿನದಾನ
14)ತೆಳುವಸ್ತ್ರದಾನ
15)ಗ್ರಂಥದಾನ
16)ಮಠ ಮಂದಿರಗಳಿಗೆ ತೈಲದಾನ
17)ಹಣ್ಣು ,ತರಕಾರಿ ,ಗಡ್ಡೆ ,ಗೆಣಸು ,
ಚಂದನ , ತಂಪುನೀರು ,ಪಚ್ಚಕರ್ಪೂರ ,ಕಸ್ತೂರಿ ಮುಂತಾದವುಗಳನ್ನು ದಾನಕೊಡಬೇಕು 
18)ದೀಪದಾನ ,ಆಕಳಹಾಲದಾನ. ,
ತುಪ್ಪ , ಮಜ್ಜಿಗೆ ,ಕುಂಕುಮಕೇಸರಿದಾನ , ಲವಂಗ ,ದಾಳಿಂಬೆ, ಸುಗಂಧದ್ರವ್ಯ . ನಿಂಬೆಹಣ್ಣು , ಹಲಸಿನಹಣ್ಣುದಾನ ಕುಂಬಳಕಾಯಿ , ಚಪ್ಪಲಿದಾನ ,
ನೆಲ್ಲಿಕಾಯಿದಾನ ,ಪಾನಕದಾನ , ಕೊಸಂಬರಿದಾನ .

ಒಂದು ತಟ್ಟೆಯಲ್ಲಿ ಗೋಧಿಹಾಕಿ ಸೀತಾಫಲಗಳನ್ನಿಟ್ಟು ದಾನ ಕೊಡಬೇಕು .


ಇವುಗಳನ್ನು ಚೈತ್ರಮಾಸದಲ್ಲಿ ಬ್ರಾಹ್ಮಣರಿಗೆ ದಾನಕೊಡಬೇಕು ಎಂದು ಚೈತ್ರಮಾಸಮಹಾತ್ಮೆಯಲ್ಲಿ ಪುಣ್ಯಕೀರ್ತಿರಾಜನಿಗೆ ಮಾಂಡವ್ಯ ಋಷಿಗಳು ತಿಳಿಸಿದ್ದಾರೆ .


           || ಶ್ರೀಕೃಷ್ಣಾರ್ಪಣಮಸ್ತು ||
********

ಕಾರ್ತಿಕಮಾಸದದಾನಗಳು karthika masa daanagalu

ಅತ್ಯಂತ ಶ್ರೇಷ್ಠ ದಾನ ಕಾರ್ತಿಕ ಮಾಸದಲ್ಲಿ ಅಂದರೆ ದೀಪ ದಾನ, ಮತ್ತು ಕಂಚಿನ ಪಾತ್ರೆಯಲ್ಲಿ   ಆಕಳ ತುಪ್ಪ ವನ್ನು  ಹಾಕಿ ದಾನ ಕೊಡುವದು.

ಸಕ್ಕರೆ,ಬೆಲ್ಲ,ತುಪ್ಪ, ಇವುಗಳನ್ನು ನೀವು ಯಥಾಶಕ್ತಿ ಯಾಗಿ ಯಾವುದಾದರೂ ದೇವಸ್ಥಾನಕ್ಕೆ ಕೊಡಿ.

ಕೆಲವರು  ಈ ಕಾರ್ತಿಕ ಮಾಸದಲ್ಲಿ ತೈಲತ್ಯಾಗ ವ್ರತ ಮಾಡುತ್ತಾರೆ ಅಂದರೆ ಕಾರ್ತಿಕ ಮಾಸಪೂರ್ಣ  ಎಣ್ಣೆಯಿಲ್ಲದ ಅಡುಗೆಯನ್ನು ಊಟಮಾಡುತ್ತಾರೆ , ಅಂತವರು  ಕಂಚಿನ ಪಾತ್ರೆಯಲ್ಲಿ ಎಳ್ಳನ್ನು ತುಂಬಿ ದಾನ ಮಾಡಬೇಕು .

ಇನ್ನು ಕೆಲವರು ಮೌನ ಬೋಜನ ವ್ರತವನ್ನು ಮಾಡುತ್ತಾರೆ , ಅಂದರೆ ಊಟ ಮುಗಿಯುವವರೆಗೂ ಮೌನದಲ್ಲೇ ಇರಬೇಕು , ಅವರು ಎಳ್ಳು ತುಂಬಿದ ಪಾತ್ರೆ ಜೊತೆಗೆ  ದೇವರ ಪೂಜೆಗೆ ಉಪಯೋಗಿಸುವ ಘಂಟೆಯನ್ನು ದಾನ ಮಾಡಬೇಕು....

ಉದ್ದಿನ ಜೊತೆಗೆ ಕುಂಬಳಕಾಯಿ ದಾನ ಕೂಡ ಶ್ರೇಷ್ಠ ವಾದದ್ದು..

ಕೆಲವರು ಫಲವನ್ನು  ತಿನ್ನದೆ ವ್ರತವನ್ನು ಮಾಡಿರುವವರು ... ಬ್ರಾಹ್ಮಣರಿಗೆ  ತಟ್ಟೆಯಲ್ಲಿಟ್ಟು ಎಲ್ಲ ತರಹದ ಫಲದಾನ ಮಾಡಬೇಕು..

ಯಾರು  ಧಾನ್ಯಗಳನ್ನು ವರ್ಜಮಾಡಿರುತ್ತಾರೋ ಅವರು ಆ ಎಲ್ಲ ತರಹದ ಧಾನ್ಯಗಳನ್ನು ದಾನಮಾಡಬೇಕು .ಅಂದರೆ ಆ ವ್ರತಗಳ ಫಲವನ್ನು ಪಡೆಯುತ್ತಾರೆ.

ಇನ್ನು ದೀಪದಾನ ಬಗ್ಗೆ ಹೇಳುವದಾದರೆ ಒಂಟಿ ದೀಪವನ್ನು ಕೊಡಬೇಡಿ ನಿಮಗೆ ದುಃಖದಾರಿದ್ರ್ಯ ಬರುತ್ತದೆ ....

ಯಾವದೇ ದೀಪದಾನ ಮಾಡಿ ಜೋಡಿಯಾಗಿಯೇ ಕೊಡಿ  ಅದರಲ್ಲಿ ಎಳೆಬತ್ತಿ ಸ್ವಲ್ಪ ತುಪ್ಪವನ್ನು ಹಾಕಿ ಅರಿಷಿಣ ಕುಂಕುಮ ಎರಿಸಿ ಕೊಡಿ  ...ಖಾಲಿ ದೀಪವನ್ನು ಕೊಡಬೇಡಿ...

ದೀಪದಾನ ಬೆಳ್ಳಿಯದಾಗಲಿ , ಕಂಚು , ಹಿತ್ತಾಳೆ , ತಾಮ್ರ ,  ಆದರೆ ಸ್ಟೀಲ ನದ್ದು ಕೊಡಬೇಡಿ , ಸ್ಟೀಲದೀಪದಾನ ತೆಗೆದುಕೊಳ್ಳಬೇಡಿ ಅದು ಕಬ್ಬಿಣದ ವಸ್ತು ಕಬ್ಬಿಣದ ವಸ್ತುವನ್ನು ದಾನ ಕೊಡುವದು ತೆಗೆದುಕೊಳ್ಳುವದು ಒಳ್ಳೆಯದಲ್ಲ.

ಶನಿ ಪ್ರಿತ್ಯರ್ಥವಾಗಿ ಮಾತ್ರ ಕಬ್ಬಿಣದ ವಸ್ತು (ಸ್ಟೀಲ )ದಾನ ಕೊಡಬೇಕು.

ಇನ್ನು  ಅನ್ನದಾನ ಬ್ರಾಹ್ಮಣ ಬೋಜನ ಮಾಡಿಸಿದರೆ ಒಳ್ಳೆಯದು ಆಗದಿದ್ದಲ್ಲಿ  ಯಾವುದಾದರೂ ದೇವಸ್ಥನಕ್ಕೆ ಹೋಗಿರತೀರಾ ಅಲ್ಲಿ ನಿಮಗೆ ಕೈಲಾದಷ್ಟು ಯಥಾಶಕ್ತಿ ಅನ್ನ ದಾನಕ್ಕೆ ಅಂತ  ಮನದಲ್ಲೇ ಸಂಕಲ್ಪ ಮಾಡಿ ಕೊಡಿ. 

ರಂಗೋಲಿ ದಾನ ... ಯಾವ ಸ್ತ್ರೀಯರು ರಂಗವಲ್ಯಾದಿಗಳಿಂದ  ಶಾಲಿಗ್ರಾಮ ಮೊದಲಾದವು ದೇವತಾ ಸನ್ನಿಧಿಯಲ್ಲಿ  ಸ್ವಸ್ತಿಕ ಮೊದಲಾದ ಮಂಡಲಗಳನ್ನು ರಚಿಸುವಳೋ  ಅವಳು ಸ್ವರ್ಗಾದಿ ಸುಖವನ್ನು ಅನುಭವಿಸುವದಲ್ಲದೆ , ಸಪ್ತ ಜನ್ಮದಲ್ಲೂ ವೈದವ್ಯವನ್ನು ಹೊಂದುವದಿಲ್ಲ ಆದ್ದರಿಂದ ಪ್ರತಿ ಹೆಣ್ಣುಮಕ್ಕಳು ಮನೆ ಬಾಗಿಲಲ್ಲಿ ,  ದೇವರಮುಂದೆ ತಪ್ಪದೇ ರಂಗವಲ್ಲಿ ಯನ್ನು ಹಾಕಿ.

ನಂತರ  ರಂಗೋಲಿ ತಾಂಬೂಲಧಕ್ಷಿಣೆ  ದಕ್ಷಿಣೆ ಸಹಿತ ದಾನ ಮಾಡಿ.

ಉಪ್ಪು ದಾನವನ್ನು ಕೊಡಬೇಕು ಅಂತ ಹೇಳುತ್ತದೆ ಶಾಸ್ತ್ರ  ಆದರೆ ಯಾರೂ ತೆಗೆದುಕೊಳ್ಳಲ್ಲ , ಹೀಗಾಗಿ ಅದನ್ನು ಕೂಡಾ ದೇವಸ್ಥೋನಕ್ಕೆ ಅನ್ನ ಸಂತರ್ಪಣೆ ನಡೆಯುವಲ್ಲಿ ಕೊಡಿ.

ಇನ್ನು ಗೋದಾನ ಅತ್ಯಂತ ಶ್ರೇಷ್ಠದಾನ ದಾನದಲ್ಲೇ ಅದಕ್ಕೆ ಗೋದಾನ ಕೊಡುವ ಸಾಮರ್ಥ್ಯ ಇದ್ದರು ಖಂಡಿತ ಮಾಡಿ  ಆಗದೆ ಇದ್ದವರು ಬೆಳ್ಳಿ ಹಿತ್ತಾಳೆ ತಾಮ್ರದ ಆಕಳುಗಳನ್ನ ದಾನ ಮಾಡಬಹುದು.

ವಿಷ್ಣು ಪಾದ ದಾನ 
ಗಂಗಾಜಲ ದಾನ 
ಸಾಲಿಗ್ರಾಮ ದಾನ 
ಶಂಖದಾನ  
ಪಾರಿಜಾತ ಹೂವು ದಾನ 
ಬೆಳ್ಳಿಯಿಂದ ತಯಾರಿಸಿದ  ಹೂವಿನ ಹಾರಗಳನ್ನು ವಿಷ್ಣುವಿಗೆ ಅರ್ಪಿಸುವದು...ಇವು ಕೂಡಾ ಶ್ರೇಷ್ಠ ದಾನಗಳು..
- ವೀಣಾ ಜೋಶಿ..
********

ದೀಪಾವಳೀ ದಿನಕ್ಕೆ ಎರಡು ದಿನ ಮುಂಚೆ 

ಆಶ್ವಯಜ ಬಹುಳ ಏಕಾದಶಿಯಂದು ಯಮದೀಪದಾನ

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

ಯಮದೀಪದಾನ : 
ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಧನತ್ರಯೋದಶಿಯಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) (ಟಿಪ್ಪಣಿ ೧) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು. ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿಡಬೇಕು. ಆನಂತರ ಮುಂದಿನ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂದಿಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ||

ಅರ್ಥ: ಧನತ್ರಯೋದಶಿಯಂದು ಯಮನಿಗೆ ನೀಡಿದ ದೀಪದ ದಾನದಿಂದ ಅವನು ಪ್ರಸನ್ನನಾಗಿ ನನ್ನನ್ನು ಮೃತ್ಯುಪಾಶ ಮತ್ತು ಶಿಕ್ಷೆಯಿಂದ ಮುಕ್ತಗೊಳಿಸಲಿ.

ಟಿಪ್ಪಣಿ ೧ – ಕೆಲವು ಕಡೆಗಳಲ್ಲಿ ೧೩ ದೀಪಗಳನ್ನು ಹಚ್ಚುವ ಪದ್ಧತಿಯಿದೆ.
********

ದೀಪಾವಳಿ ದಿನದಂದು ಲಕ್ಷೀ ಕೃಪೆಗಾಗಿ ಮಾಡಿ ದಾನ
ಮಾಹಾಲಕ್ಷೀ ಮಂದಿರದಲ್ಲಿ ತೆಂಗಿನಕಾಯಿ,ಏಲಕ್ಕೀ,ಕಪೂರ್,ಲವಂಗ,ಕೆಂಪು ಅರಿವೆ, ಕಮಲ ಗಟ್ಟೆ ಮಾಲೆ, ಬಾಳೆಹಣ್ಣು ನಿಮ್ಮ ಸಾಮರ್ಥ್ಯ ಹೊಂದುವರೀತಿ ದಾನ ಮಾಡಿ.
ಅಕ್ಕಿ ಗೋದಿ ಸಕ್ಕರೆ ಬ್ರಾಹ್ಮಣ ರಿಗೆ ದಾನ ಮಾಡಿ.

********

ಗೌರೀ ಹಬ್ಬ ಮರದಬಾಗಿಣ ದಾನ gowri festival baagina daana

ಮುತೈದೆ ದೇವತೆಯರು ೧೬  ಜನರು.
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ,  ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..

ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ

ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ ಅದಕ್ಕೆ ಮಹಿಳೆಯರು ಏನೇ ಪ್ರಸಾದ ಮತ್ತು ಆಶೀರ್ವಾದ ಅಕ್ಷತೆಯನ್ನು ಪಡೆಯುವಾಗ ಸೀರೆಯ ಸೆರಗು ಬಳಸಿ ತೆಗೆದು ಕೊಳ್ಳುವುದು
ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಹೇಳುತ್ತಾರೆ..

ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..
ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ, ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..

ಈ ೧೬ ದೇವತೆಗಳು ನಿತ್ಯಸುಮಂಗಲಿಯರು..
ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..

ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..
೧೬ ಅರಿಸಿನ ದಾರ, 
೧೬ ಗಂಟುಗಳು, 
೧೬ ಬಾಗಿನ, 
೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..

ದಾನಗಳು ಮತ್ತು ಫಲಗಳು

೧. ಅರಿಸಿನ ದಾನ : 
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ :
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ:
ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೪. ಕನ್ನಡೀ(ರೂಪಲಕ್ಷ್ಮೀ) :
ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

೫. ಬಾಚಣಿಗೆ : 
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

೬. ಕಾಡಿಗೆ :
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

೭. ಅಕ್ಕಿ : 
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

೮. ತೊಗರಿಬೇಳೆ : 
ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

೯. ಉದ್ದಿನ ಬೇಳೆ : 
ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

೧೦. ತೆಂಗಿನಕಾಯಿ : 
ಇಷ್ಟಾರ್ಥಸಿದ್ಧಿಯಾಗುತ್ತದೆ.. , 
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

೧೧. ವೀಳ್ಯದೆಲೆ : 
ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

೧೨. ಅಡಿಕೆ : 
ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

೧೩. ಫಲದಾನ :  
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

೧೪. ಬೆಲ್ಲ (ರಸಲಕ್ಷ್ಮೀ) : 
ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..
ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

೧೫. "ವಸ್ತ್ರಲಕ್ಷ್ಮೀ" : 
ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

೧೬. "ಹೆಸರುಬೇಳೆ" : ವಿದ್ಯಾಲಕ್ಷ್ಮೀ -  
ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ  ಎಲ್ಲರಿಗೂ ಸಂತೋಷವಾಗುತ್ತದೆ..
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..
ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌
Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..

- ಶ್ರೀ ಸುಧಾಕರ
**********

ಪಾಲ್ಗುಣ ಮಾಸದ ಮಹತ್ವ


ಪಾಲ್ಗುಣ ಮಾಸಕ್ಕೆ ಗೋವಿಂದರೂಪಿ ಪರಮಾತ್ಮನು  ನಿಯಾಮಕನು. ಪಾಲ್ಗುಣಮಾಸದಲ್ಲಿ  ಗೋದಾನ ,ಭತ್ತ ,ಅಕ್ಕಿ  ,ವಸ್ತ್ರ  ಶಯ್ಯಾ , ಆಸ, ಛತ್ರಿ ,ಭೂಮಿ ,ಗೃಹ ,ತಿಲ (ಎಳ್ಳು )ತಿಲದೇನು ,ತುಪ್ಪ . ಪಾದರಕ್ಷ  ,ಅನ್ನದಾನ ,ಜಲ ,ಹಾಲು ತಾಂಬೂಲ ದಾನಗಳನ್ನು ಮಾಡಬೇಕು ಎಂದು ಪಾಲ್ಗುಣ ಮಾಸ ಮಹಾತ್ಮೆಯಲ್ಲಿ  ಪರಮಾತ್ಮನು ನಾರದರಿಗೆ ತಿಳಿಸಿದ್ದಾನೆ .
***********

ಅಧಿಕಮಾಸದ ಮಹತ್ವ 
                           || ಸಂಚಿಕೆ-7 ||
ಅಧಿಕಮಾಸದಲ್ಲಿ ನಿಷಿದ್ಧಕಾರ್ಯಗಳು

ಅನಿತ್ಯಮನಿಮಿತ್ತಂ ಚ ದಾನಂ ಚ ಮಹಾದಾನಾದಿಕಮ್
 ಅಗ್ನ್ಯಾಧಾನಧ್ವರಾ ಪೂರ್ವತೀರ್ಥ ಯಾತ್ರಾ ಮರೇಕ್ಷಣಂ ||
 ದೇವಾರಾಮತಟಾಕಾದಿಪ್ರತಿಷ್ಠಾಂ ಮೌಂಜಿಬಂಧನಮ್ |
ಆಶ್ರಮಸ್ವೀಕೃತಿಂ ಕಾಮ್ಯವೃಷೋತ್ಸರ್ಗಂ ಚ ನಿಷ್ಕ್ಕ್ರಮ ಮ್ ||

 ರಾಜ್ಯಾಭಿಷೇಕಂ ಪ್ರಥಮಂ ಚೂಡಾಕರ್ಮವ್ರತಾನಿ ಚ |
ಅನ್ನಪ್ರಾಶನಮಾರಂಭಂ ಸಮಾಪ್ತಿಂ ಚ ಕಾಮ್ಯಕರ್ಮ ಚ ಪಾಪ್ಮಾನಾಮ್ ||

 ರಾಜ್ಯಾಭಿಷೇಕಂ ಪ್ರಥಮಂ ಚೂಡಾಕರ್ಮವ್ರತಾನಿ ಚ |
ಅನ್ನಪ್ರಾಶನಮಾರಂಭಂ ಗ್ರಹಾಣಾಂ ಚ ಪ್ರವೇಶನಮ್ ||

 ಸ್ನಾನಂ ವಿವಾಹಂ ನಾಮಾತಿಪನ್ನಂ ದೇವಮಹೋತ್ಸವಮ್ |
ವ್ರತರಂಭಂ ಸಮಾಪ್ತಿಂ ಚ ಕಾಮ್ಯಕರ್ಮ ಚ ಪಾಪ್ಮಾನಾಮ್ ||
ಪ್ರಾಯಶ್ಚಿತ್ತಂ ಚ ಸರ್ವಸ್ಯ ಮಲಮಾಸೇ ವಿವರ್ಜಯೇತ್ ||

ತುಲಾಪುರುಷದಾನದಿ ಮಹಾದಾನಗಳು ಅಗ್ನ್ಯಾಧಾನ ,ಯಜ್ಞ ,ಉದ್ಯಾನವನಗಳ ನಿರ್ಮಾಣ ಕೆರೆ ಕಟ್ಟಿಸುವುದು ,ಉಪನಯನ , ಸಂನ್ಯಾಸ ಸ್ವೀಕಾರ ,ಜ್ಯೋತಿಷ್ಟೋಮಾದಿ ಕಾಮ್ಯಕಾರ್ಮಗಳು ಮಗುವನ್ನು. ಮೊದಲಬಾರಿಗೆ ಮನೆಯಿಂದ ಹೊರಕ್ಕೆ ಕರೆದೊಯ್ಯುವ ಕಾರ್ಯ ,ಚೌಲ ,ಉಪನಯನ ,ವಿಶೇಷರೀತಿಯ ವ್ರತಗಳು ,ಅನ್ನಪ್ರಾಶನ ,ಗೃಹಾರಂಭ ,
ಗೃಹಪ್ರವೇಶ ,ವಿಶೇಷ ತೀರ್ಥಸ್ನಾನ ವಿವಾಹ ,ಪಾಪಗಳಿಗೆ ಪ್ರಾಯಶ್ಚಿತ್ತ ,ಈ ಕಾರ್ಯಗಳನ್ನು.ಅಧಿಕಮಾಸದಲ್ಲಿ ಮಾಡಕೊಡದು .(ಅಧಿಕಮಾಸದಲ್ಲಿ ಬಿಡುವ ಈ ಮೇಲಿನ ಕಾರ್ಯಗಳನ್ನು ಮುಂದೆಶುದ್ಧಮಾಸದಲ್ಲಿಯೇ ಮಾಡಬೇಕು..)ಅಧಿಕಮಾಸಕ್ಕಿಂತ ಮುಂಚಿತವಾಗಿ ಪ್ರಾರಂಭಿಸಿದ (ವಿಷ್ಣುಪಂಚಕಾದಿ) ವ್ರತ ಮತ್ತು ವೈಶಾಖ ಸ್ನಾನಾದಿಕಾರ್ಯಗಳನ್ನು ಮಾತ್ರ ಅಧಿಕಮಾಸದಲ್ಲಿ ಮುಂದುವರಿಸಬೇಕು.
    -ಬೃಹಸ್ಪತಿಃ(ಸ್ಮೃತಿಮುಕ್ತಾವಳೀ)

ಮಲ್ಲಿಮ್ಲುಚೇತು ಸಂಪ್ರಾಪ್ತೇ ಕ್ರಿಯಾ ಸರ್ವಾಃಪರಿತ್ಯಜೇತ್ |
 ಪಿತೃಕಾರ್ಯಂ ತು ಸಂಪ್ರಾಪ್ತೇ ತೀರ್ಥಯಾತ್ರಾವ್ರತಾದಿಕಮ್ ||

ಕ್ಷೌರಂ ಮೌಂಜಿವಿವಾಹೌ ಚ ವ್ರತಂ ಕಾಮ್ಯೋಪವಾಸಕಮ್ |

ಮಲ್ಲಿಮ್ಲುಚೇ ಸದಾ ತ್ಯಜ್ಯಂ ಗೃಹಸ್ಥೈಶ್ಚ ವಿಶೇಷತಃ ||

ಅಧಿಕಮಾಸವು ಬಂದಾಗ ತೀರ್ಥಯಾತ್ರೆ ಪಿತೃಕಾರ್ಯ ,ತೀರ್ಥಶ್ರಾದ್ಧ ,ಕ್ಷೌರ ,ಉಪನಯನ ,ವಿವಾಹ ಕಾಮ್ಯವ್ರತ , ಕಾಮ್ಯ ಉಪವಾಸ ಮೊದಲದುವುಗಳನ್ನು ಮಾಡಬಾರದು .
     -ಬೃಹನ್ನಾರದೀಯ ಪುರಾಣ 3-37 ,38


***********

ಕ್ಷೌರಂ ಮೌಂಜಿ ಕಾಮ್ಯೋಪವಾಸಕಮ್ |
ಮಲ್ಲಿಮ್ಲುಚೇ ಸದಾ ತ್ಯಜ್ಯಂ ಗೃಹಸ್ಥೇನ ವಿಶೇಷತಃ ||

ಮಲ(ಅಧಿಕ)ಮಾಸದಲ್ಲಿ ಕ್ಷೌರ ,ಉಪನಯನ ,ವಿವಾಹ ,ಕಾಮ್ಯವ್ರತ ಹಾಗೂ ಕಾಮ್ಯೋಪವಾಸಗಳನ್ನು ಗೃಹಸ್ಥನಾದವನು ವಿಶೇಷವಾಗಿ ತೊರೆಯಬೇಕು .
      -ಭವಿಷ್ಯೋತ್ತರಪುರಾಣ

ಅಧಿಕಮಾಸದ ವಿಶೇಷಪರ್ವಕಾಲಗಳು

ವೈಧೃತಿಶ್ಚ ವ್ಯತಿಪಾತೋ ರಾಕಶ್ಚೈವ ಕುಹೂಸ್ತಥಾ |
ದ್ವಾದಶೀ ಪಂಚಪರ್ವಣಿ ಪರಂಶ್ರೇಷ್ಠಾನ್ಯನುಕ್ರಮಾತ್ ||

ವೈಧೃತಿ ವ್ಯತಿಪಾತ (ಎಂಬ ಎರಡು ಯೋಗಗಳು )ಹುಣ್ಣಿಮೆ ಅಮಾವಾಸ್ಯೆ ಹಾಗೂ ದ್ವಾದಶೀ ಈ ಐದು ಅನುಕ್ರಮವಾಗಿ ಹೆಚ್ಚು ಹೆಚ್ಚು ಮಹತ್ವದ ಅಧಿಕಮಾಸದ ಮಹಾಪರ್ವದಿವಸಗಳು (ಉಭಯ ಪಕ್ಷದ ದ್ವಾದಶಿಗಳು ಮಹಾವಿಶೇಷಪರ್ವಕಾಲಗಳು ಎಂದರ್ಥ)
        -ಪದ್ಮಪುರಾಣ 12-4

*********

ಅಧಿಕಮಾಸದಲ್ಲಿ ಉಪವಾಸದ ಮಹತ್ವ

ದ್ವಾತ್ರಿಂಶದ್ಭಿರ್ಗತೈರ್ಮಾಸೈರ್ದಿನೈಷೋರ್ಡಶಭಿಸ್ತಥಾ |
ಘಟಿಕಾನಾಂ ಚತುಷ್ಕೇಣ ಪತತ್ಯಧಿಕಮಾಸಕಃ ||
ಪಂಚಮೇ ಪಂಚಮೇ ವರ್ಷೇ ದೌ ಮಾಸಾವಧಿಮಾಸಕೌ |
ತೇಷಾಂ ಕಾಲತಿರೇಕೇಣ ಗ್ರಹಾಣಾಮತಿಚಾರತಃ ||
ಏಕಮಪ್ಯುಪವಾಸಂ ಯಃ ಕರೋತ್ಯಸ್ಮಿನ್ ತಪೋನಿಧೇ |
ಅಸಾವನಂತಪಾಪಾನಿ ಭಸ್ಮೀಕೃತ್ಯ ದ್ವೀಜೋತ್ತಮ ||

ಸರಾಸರಿ ಲೆಕ್ಕದಲ್ಲಿ ಮೂವತ್ತೆರಡು ತಿಂಗಳು.ಹದಿನಾರು ದಿನಗಳು ಹಾಗೂ ನಾಲ್ಕು ಘಳಿಗೆಯೊಮ್ಮೆ ಅಧಿಕಮಾಸವು ಬರುತ್ತದೆ . ಪ್ರತಿ ಐದುವರ್ಷಗಳಲ್ಲಿ ಎರಡು ಅಧಿಕಮಾಸಗಳಾಗುತ್ತವೆ. ಇಂತಹ ಪವಿತ್ರವಾದ ಅಧಿಕಮಾಸದಲ್ಲಿ ಒಂದುದಿನವಾದರೂ ಉಪವಾಸ ಮಾಡುವವನು ಅನಂತಪಾಪಗಳಿಂದ ಬಿಡುಗಡೆ ಹೊಂದುವನು.
                     -ಸ್ಮೃತಿ

**********

ಏಕಭುಕ್ತೇನ ನಕ್ತೇನ ತಥೈವಾಯಾಚಿತೇನ ವಾ |
ಉಪವಾಸೇನ ಕುರ್ವೀತ ಮಲಮಾಸವ್ರತಂ ನರಃ ||

ಅಧಿಕಮಾಸದಲ್ಲಿ ಏಕಭುಕ್ತ (ಒಂದೇ ಊಟ)ನಕ್ತಭೋಜನ (ರಾತ್ರಿಯಲ್ಲಿ ಮಾತ್ರ ಭೋಜನ)ಅಥವಾ ಉಪವಾಸ ವ್ರತಗಳನ್ನು ಆಚರಿಸಬೇಕು.
       -ಪದ್ಮಪುರಾಣ 2-5

ಅಧಿಮಾಸೇ ನರೋ ನಕ್ತಂ ಯೋ ಭುಂಕ್ತೇ ಸ ನರಾಧಿಪ |
ಸರ್ವಾನ್ ಕಾಮಾನವಾಪ್ನೋತಿ ನರೋ ನೈವಾತ್ರ ಸಂಶಯಃ ||

ಅಧಿಕಮಾಸದಲ್ಲಿ ನಕ್ತ(ರಾತ್ರಿಮಾತ್ರ)ಭೋಜಪವ್ರತವನ್ನು ಮಾಡುವುದು. ಸಹ ವಿಹಿತ ಇದನ್ನು ಆಚರಿಸುವವನು ಸಕಲ ಆಕಾಂಕ್ಷೆಗಳನ್ನು ಈಡೆರಿಸಿಕೂಳ್ಳುವನು ; ಇದು.ನಿಶ್ಚಿತ .
   -ಬೃಹನ್ನಾರದೀಯ ಪುರಾಣ 26-16

***********
                ||  ಏಕಾನ್ನವ್ರತ ||

ಏಕಾನ್ನೇನ ನರೋ ತಸ್ತು ಮಲಮಾಸಂ ನಿಷೇವತೇ.|
ಚತುರ್ಭುಜೋ ನರೋ ಭೂತ್ವಾ ಸ ಯಾತಿ ಪರಮಾಂ ಗತಿಮ್ ||
ಏಕಾನ್ನಾನ್ನಾಪರಂ ಕಿಂಚಿತ್ ಪವಿತ್ರಮೀಹ ವಿದ್ಯತೇ |
ಏಕಾನ್ನಾನ್ಮುನಯಃ ಸಿದ್ಧಾಃ ಪರಂ ನಿರ್ವಾಣಮಾಗತಾಃ ||

ಒಂದುಬಾರಿ ಮಾತ್ರ ಉಂಡ ಊಟ ,ಕುಡಿದ ನೀರು ಎಂಬ ಏಕಾನ್ನಭೋಜನದ ವ್ರತ ಅಧಿಕಮಾಸದಲ್ಲಿ ವಿಶೇಷವಾಗಿ ವಿಹಿತ. ಇದನ್ನು ಆಚರಿಸುವವನು ಚತುರ್ಭುಜದಿಂದ ಕೂಡಿದ ಸಾರೂಪ್ಯಮುಕ್ತಿಯನ್ನು ಪಡೆಯುವನು . ಈ ವ್ರತಕ್ಕೆ ಸಮನಾದ ಬೇರೊಂದು ಪವಿತ್ರವ್ರತ ಇಲ್ಲ ಇದರ ಅನುಷ್ಠಾನದಿಂದ ಮುನಿಗಳು ಶ್ರೇಷ್ಠಸಿದ್ಧಿಯನ್ನು ಮುಂದೆ ಮುಕ್ತಿಯನ್ನು ಪಡೆದಿರುವರು .
  -ಬೃಹನ್ನಾರದೀಯ ಪುರಾಣ 26 -14 ,15
                 || ಶ್ರೀಕೃಷ್ಣಾರ್ಪಣಮಸ್ತು ||


ಶ್ರೀಐತರೇಯ....
*****
ದ್ವಿಹೇತು ಷಡಧಿಷ್ಠಾನಂ ಷಡಂಗಂ ಚ ದ್ವಿಪಾಕಯತ್|ಚತುಷ್ಪ್ರಕಾರಂ ತ್ರಿವಿಧಂ ತ್ರಿನಾಶಂ ದಾನಮುಚ್ಯತೇ|| -(ಸ್ಕಾಂದ ಪುರಾಣ , ಕುಮಾರಿಕಾ ಖಂಡ) 
    ದಾನ ಎನ್ನುವದು ದ್ವಿಹೇತುವಾಗಿದೆ , ಆರು ಅಧಿಷ್ಠಾನವುಳ್ಳದ್ದು , ಆರು ಅಂಗಗಳು , ಎರಡು ಪರಿಪಾಕ , ಮೂರು ನಾಶವುಳ್ಳದ್ದು , ನಾಲ್ಕು ಪ್ರಕಾರದ್ದಾಗಿದೆ . 
 ದ್ವಿಹೇತು- ಅಂದ್ರೆ ಶ್ರದ್ಧಾ ಮತ್ತು ಭಕ್ತಿ ಎಂಬ ಎರಡು ಉದ್ದೇಶ ಉಳ್ಳದ್ದು ದಾನ . ಅಲ್ಪವಾದರೂ ಧನವನ್ನು ಶ್ರದ್ಧೆಯಿಂದ ನೀಡಬೇಕು .ತನ್ನ ಕುಟುಂಬಕ್ಕೆ ಬೇಕಾದಷ್ಟು ಇಟ್ಟು ಉಳಿದ ಹಣವನ್ನು ದಾನ ಮಾಡ್ಬೇಕು . ಶಕ್ತಿ ಮೀರಿ ಎಂದೂ ದಾನ ಮಾಡ್ಬಾರ್ದು . ಕುಟುಂಬಭುಕ್ತಭರಣಾದ್ ದೇಯಂ ಯದತಿರಿಚ್ಯತೇ|| 

ಷಡಧಿಷ್ಠಾನಂ- ೧) ಧರ್ಮ , ೨)ಅರ್ಥ೩)ಕಾಮ೪)ನಾಚಿಕೆ೫)ಭಯ೬)ಸಂತೋಷ . ಹೀಗೆ ದಾನಕ್ಕೆ ಆರು ಅಧಿಷ್ಠಾನಗಳಿವೆ . ಪ್ರತಿಫಲದ ಅಪೇಕ್ಷೆಯಿಲ್ಲದೇ ಭಗವಂತನ ಪ್ರೀತಿಯನ್ನು ಮಾತ್ರ ಉದ್ದೇಶಿಸಿ ಮಾಡುವ ದಾನವು ಧರ್ಮದಾನ. ಲೌಕಿಕ ಪ್ರಯೋಜನವನ್ನುಉದ್ದೇಶಿಸಿ ಮಾಡುವ ದಾನವು ಅರ್ಥದಾನ . ಸ್ತ್ರೀಕಾಮನೆ, ಸುರಾಪಾನ , ಜೂಜು ಇವುಗಳನ್ನು ಉದ್ದೇಶಿಸಿ ಮಾಡುವ ದಾನ ಕಾಮದಾನ ಎನಿಸಿಕೊಳ್ತದ . ತುಂಬಿದ ಸಭೆಯಲ್ಲಿ ದಾನ ನೀಡ್ತಾಯಿರುವವರನ್ನ ನೋಡಿ ನಾಚಿಕೆಯಿಂದ ನಾನೂ ಮಾಡೀದ್ರಾಯ್ತು ಅಂದ ಮಾಡುವದಾನ ಲಜ್ಜಾದಾನ ಅನಿಸ್ಕೋತದ . ಇದನ್ನೇ ಶ್ರುತಿಯು ಹ್ರಿಯಾ ದೇಯಮ್ ಎಂದು ತಿಳಿಸಿದೆ . ತನಗೆ ಯಾರಾದರೂ ಪುತ್ರೋತ್ಸವಾದಿ ಸಂತಸ ಸುದ್ದಿ ಮುಟ್ಟಿಸಿದಾಗ ಹರ್ಷೋದ್ರೇಕದಿಂದ ನೀಡುವ ದಾನ ಸಂತೋಷದ ದಾನ ಅನಿಸ್ಗೋತದ . ತನಗೆ ಪರಲೋಕದಲ್ಲಿ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಮಾಡಿದ ದಾನ ಭಯದ ದಾನ ಅನಿಸ್ಗೋತದ . ಶ್ರುತಿಯು ಇದನ್ನೇ ಭಿಯಾದೇಯಮ್ ಎಂದಿದೆ . 
ಷಡಂಗಗಳು- ೧) ದಾತಾ ೨) ಪ್ರತಿಗೃಹೀತಾ೩)ಶುದ್ಧಿ ೪) ದೇಯವಸ್ತು ೫) ಯೋಗ್ಯದೇಶ ೬)ಯೋಗ್ಯಕಾಲ ಹೀಗೆ ದಾನಕ್ಕೆ ಆರು ಅಂಗಗಳಿವೆ . 
   ೧)ದಾತಾ-  ದಾನ ಮಾಡುವವನು ರೋಗಿಯಾಗಿರದೇ ,ವ್ಯಸನಿಯಾಗಿರದೇ , ಸ್ವಂತ ಬುದ್ಧಿಯಿಂದಲೇ ದಾನ‌ಮಾಡುವವನಿರಬೇಕು . ನೀಚ ಕೃತ್ಯಗಳನ್ನು ಮಾಡಿರದೇ ಶುಚಿರ್ಭೂತನಾದವನು ಉತ್ತಮ ದಾತಾ ಎನಿಸಿಕೊಳ್ಳುವನು . 
೨) ಪ್ರತಿಗೃಹೀತಾ- ದಾನ ಸ್ವೀಕರಿಸುವವನು ತ್ರಿಶುಕ್ಲನಾಗಿರಬೇಕು .ದಯಾಳು , ಇಂದ್ರಿಯ ನಿಗ್ರಹಿಯಾದವನೇ ದಾನ ಸ್ವೀಕರಸಲು ಯೋಗ್ಯನಾದವನು . 
೪)ಶುದ್ಧಿ- ದಾನಿಗಳು ಬಂದಾಗ ಹುಬ್ಬುಗಂಟಿಕ್ಕದೇ ಸತ್ಕರಿಸುವದು , ತಪ್ಪನ್ನು ಎತ್ತಿಹೇಳದೇ , ಅಸೂಯೆ ತಾಳದಿರುವದೇ ಶುದ್ಧಿ ಅನಿಸ್ಗೋತದ . 
೫) ದೇಯ- ತನ್ನ ಪ್ರಯತ್ನದಿಂದಲೇ ಸಂಪಾದಿಸಿದ ವಸ್ತುವೇ ದೇಯ ಅನಿಸ್ಗೋತದ . ಲಂಚಾದಿಗಳಿಂದ ಗಳಿಸಿದ ಧನವನ್ನು ದಾನ ಮಾಡಿದರೆ ಅದು ಅದೇಯ ಅನಸ್ಗೋತದ . 
೬)ದೇಶ-ಕಾಲ = ಯಾವ ದೇಶದಲ್ಲಿ ಯಾವ ಕಾಲದಲ್ಲಿ ಯಾವ ವಸ್ತುವು ಸುಲಭವಾಗಿ ಲಭ್ಯವಾಗದೋ ಆ ವಸ್ತುವನ್ನು ಆ ದೇಶ ಕಾಲಗಳಲ್ಲಿ ಲಭ್ಯವಾಗುವಂತೆ ಮಾಡುವದೇ ದಾನಯೋಗ್ಯ ದೇಶ ದಾನಯೋಗ್ಯ ಕಾಲ ಅನಿಸ್ಗೋತದ . 
ದ್ವಿಪಾಕಯುಕ್- ದಾನವು ಎರಡು ಪರಿಣಾಮ ಉಳ್ಳದ್ದು . ಸತ್ಪುರುಷರಿಗೆ ನೀಡಿದ ದಾನವು ಪರಲೋಕದಲ್ಲಿ ಫಲನೀಡುತ್ತದೆ . ದುರ್ಜನರಿಗೆ ನೀಡಿದ ದಾನವು ಈ ಲೋಕದಲ್ಲಿಯೇ ಫಲನೀಡುತ್ತದೆ . 
,ಚತುಷ್ಪ್ರಕಾರಃ- ದಾನವು ಧ್ರುವ , ತ್ರಿಕ , ಕಾಮ್ಯ , ನೈಮಿತ್ತಿಕ ಎಂದು ನಾಲ್ಕು ಪ್ರಕಾರವಾಗಿದೆ. ೧) ಧ್ರುವ - ಸಮಸ್ತ ವರ್ಣದ ಜನರಿಗೆ ಉಪಯುಕ್ತವಾದ ಬಾವಿ , ಉದ್ಯಾನವನ ರಚನೆ , ತಟಾಕಾದಿಗಳನ್ನು ರಚಿಸುವದು ಧ್ರುವದಾನ ಅನಿಸ್ಗೋತದ . ೨) ತ್ರಿಕ- ಪ್ರತಿದಿನವೂ ನೀಡುವ ದಾನವು ತ್ರಿಕ ದಾನ . ೩) ಕಾಮ್ಯ- ಆಯುಸ್ಸು , ಆರೋಗ್ಯ , ಪುತ್ರಸಂತಾನ ವಿಜಯಾದಿಗಳನ್ನು ಅಪೇಕ್ಷಿಸಿ ಮಾಡುವ ದಾನವೇ ಕಾಮ್ಯದಾನ . ೪) ಸಂಕ್ರಮಣ , ಗ್ರಹಣ , ಶ್ರಾದ್ಧ , ವಿವಾಹ , ವಿದ್ಯಾಭ್ಯಾಸ , ದೇವತಾ ಪೂಜಾದಿಕ ನಿಮಿತ್ತವನ್ನು ಆಧರಿಸಿ ಮಾಡುವ ದಾನವೇ ನೈಮಿತ್ತಕ ದಾನ . 
   ದಾನವು ಉತ್ತಮ - ಮಧ್ಯಮ- ಅಧಮ ಎಂದು ಮೂರು ವಿಧಗಳಿಂದ ಕೂಡಿದೆ . ಮನೆ ಮಠ ,ಭೂಮಿ , ಸುವರ್ಣ , ಧೇನು , ಪ್ರಾಣ ಇವುಗಳನ್ನು ದಾನ ಮಾಡುವದು ಉತ್ತಮ ದಾನ ಎನಿಸಿದೆ . ಅನ್ನ , ವಸ್ತ್ರ , ವಾಹನಾದಿಗಳನ್ನು ದಾನ ಮಾಡುವದು ಮಧ್ಯಮ ದಾನ . ಚಪ್ಪಲಿ , ಛತ್ರಿ , ಪಾತ್ರೆಗಳು ,ಹಾಲು ಮೊಸರು , ದೀಪ ಇವೇ ಮೊದಲಾದವು ಅಧಮ ದಾನ ಎನಿಸಿವೆ . 
ತ್ರಿನಾಶ- ೧) ದಾನ ಮಾಡಿದ ಮೇಲೆ ದಾನ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಡುವದು ಅಸುರದಾನ ಎನಿಸಿಕೊಂಡು ನಾಶವಾಗಿಬಿಡುತ್ತದೆ ೨) ಶ್ರದ್ಧೆಯಿಲ್ಲದೇ ಮಾಡಿದ ದಾನವು ರಾಕ್ಷಸ ದಾನ ಎನಿಸಿಕೊಂಡು ನಾಶವಾಗಿಬಿಡುತ್ತದೆ . ೩) ದಾನ ಸ್ವೀಕರಿಸುವವರನ್ನು ನಿಂದೆ ಮಾಡಿ ಧಿಕ್ಕಾರ ಹಾಕಿ ನೀಡಿದ ದಾನ ಪೈಶಾಚಿಕ ದಾನ ಎನಸಿಕೊಂಡು ನಾಶವಾಗಿಬಿಡುತ್ತದೆ . 

     ಸ್ಕಾಂದಪುರಾಣದಲ್ಲಿ ಬಂದಿರುವ ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಜವಾದ ಅರ್ಥದಲ್ಲಿ ದಾನ ಮಾಡಲು ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಬೇಕು 🙏🏻
***

ದಾನದ ಮಹತ್ವ

ಈ ಯಾಂತ್ರಿಕ ಜೀವನದಲ್ಲಿ ಕೆಲವು ಜನರಿಗೆ ಕೆಲಸದ ಒತ್ತಡದಲ್ಲಿ ತಮ್ಮ ಸಮಸ್ಯೆ ಗಳಿಗೆ ಪರಿಹಾರ ಮಾಡಿಕೊಳ್ಳಬೇಕು ಎಂದರೆ ಅವರಿಗೆ ಜಪ, ತಪ, ಹೋಮ ಹಾಗೂ ಮುದ್ರಾ ಅಥವಾ ತೀರ್ಥ ಕ್ಷೆತ್ರ ಗಳಿಗೆ ತಿರುಗಲು ಇವೆಲ್ಲ ಮಾಡಲು ಸಮಯವೇ ಇರಲ್ಲ.ಹಿಂದೆ ಋಷಿ - ಮುನಿಗಳು ದೇವರನ್ನು ಆರಾದಿಸಿ ಆ ದೇವರನ್ನು ಕೊಂಡಾಡಿ ತಮ್ಮ ಸಂಕಲ್ಪವನ್ನು ಆ ದೇವರ ಮುಂದೆ ಈ ರೀತಿಯಾಗಿ ಇಡುತ್ತಾರೆ.ದೇವ ಭೂಲೋಕ ದಲ್ಲಿ ದರಿದ್ರ, ರೋಗ ಬಾಧೆ, ಹಾಗೂ ಸಾಲ ಬಾಧೆ ಹೆಚ್ಚಾಗಿದೆ..ಜಪ ತಪ ಅನುಷ್ಠಾನ ಹೋಮ ಹವನ ಹಾಗೂ ಪೂಜೆ ಗಳೆಲ್ಲ ಹೊರತಾಗಿ ಬೇರೆ ಸರಳ ಪರಿಹಾರ ಸುಲಭವಾಗಿ ಮಾಡುವಂತ ಪರಿಹಾರ ಕೇಳಿಕೊಂಡಾಗ ದೇವರು ತಿಳಿಸಿದ್ದು " ದಾನ " ತನ್ನಲಿದ್ದ ಅಗತ್ಯ ವಸ್ತು ಗಳನ್ನು ಬೇರೆಯವರಿಗೆ ದಾನಕ್ಕೆ ಅರ್ಹ ಉಳ್ಳವರಿಗೆ ಕೊಡುವುದೇ "
ದಾನ ಎಂದಾಗುತ್ತದೆ.ಯಾವಾಗ ಮನುಷ್ಯ ತನ್ನ ಸ್ವಂತ ದುಡಿಮೆ ಯಿಂದ ದುಡಿದ ಹಣದಿಂದ ಸರಿಯಾದ ಸಮಯದಲ್ಲಿ ಸರಿಯಾದ ಸಂದರ್ಭದಲ್ಲಿ ತನಗೆ ಇಷ್ಟ ಬಂದ ವಸ್ತುವನ್ನು ನೀಡುವುದೇ ದಾನ ಎಂದಾಗುತ್ತದೆ.ಈ ರೀತಿ ದಾನ ಮಾಡಿದಾಗ ಆ ವ್ಯಕ್ತಿಯಲ್ಲಿ ರಕ್ತ ಶುದ್ದಿ ಹಾಗೂ ನರ ದೌರ್ಬಲ್ಯ ಮೂಳೆಯಲ್ಲಿ ತೊಂದರೆ ಇದ್ದರೆ ಮಾನಸಿಕ ವಾಗಿ ದೌರ್ಬಲ್ಯತೇ ಇದ್ದರೆ ಹಾಗೂ ಆತನ ನಡುವಳಿಕೆಯಲ್ಲಿ ದೋಷ ಇದ್ದರೆ ಸರಿ ಆಗುತ್ತದೆ. ಪ್ರತಿ ಒಂದು ಮನುಷ್ಯನ ಅಂಗಕ್ಕೂ ಒಂದೊಂದು ದೇವತೆ ಗಳಿದ್ದಾರೆ ಅದಕ್ಕೆ ಸಂಬಂಧಪಟ್ಟ ದಾನ್ಯ ಹಾಗೂ ಸಸ್ಯ ಗಳಿವೆ.ಉದಾಹರಣೆಗೆ ಮೆದುಳಿಗೆ ಸಂಬಂಧ ಪಟ್ಟ ದೇವತೆ ನರಸಿಂಹ ಸ್ವಾಮಿ ಆಗಿರುತ್ತಾರೆ. ಅಂತ ದೇವತೆಗೆ ಇಷ್ಟ ಇರುವ ವಸ್ತು ಕೊಟ್ಟಾಗ ಮೆದುಳಿಗೆ ಇರುವ ಸಮಸ್ಯೆ ದೂರವಾಗುತ್ತೆ ಹಾಗೆ ವಿದ್ಯೆ ಗೆ ಸರಸ್ವತಿ ಆಗಿರುತ್ತಾಳೆ ಇವಳು ಕೂಡಾ ಮೆದುಳಿಗೆ ಸಂಬಂಧಪಟ್ಟ ದೇವತೆ ಆಗಿದ್ದು ಇವಳಿಗೆ ಸಂಬಂಧ ಪಟ್ಟ ವಸ್ತು ಕೊಟ್ಟಾಗ ವಿದ್ಯೆ ಗೆ ಸಂಬಂಧ ಪಟ್ಟ ದೋಷ ದೂರವಾಗುತ್ತದೆ. ಯಾರಿಗೆ ಜಪ ತಪ ಹೋಮ ಯಾಗ ಯಜ್ಞ ಮುದ್ರೆ ಮಾಡಲಿಕ್ಕೆ ಸಾಧ್ಯವಿಲ್ಲವೊ ಅವರು ಈ ದಾನ ಎಂಬ ಪರಿಹಾರ ಮಾಡಬಹುದು.ನೀವು ಮಾಡಿದ ದಾನ ನೇರವಾಗಿ ಮಹಾವಿಷ್ಣುವಿಗೆ ಅರ್ಪಣೆ ಆಗುತ್ತೆ. ಅವನು ಅದನ್ನು ರವಿ ಚಂದ್ರ ಗುರು ಹಾಗೂ ಶುಕ್ರ ಗ್ರಹ ಗಳಿಗೆ ಅರ್ಪಣೆ ಮಾಡುತ್ತಾನೆ ಈ 4 ಗ್ರಹಗಳು ದಾನ ಕಾರಕ ಗ್ರಹಗಳಾಗಿವೆ. ದಾನವನ್ನು ಯಾವಾಗಲೂ ತುಂಬು ಹೃದಯದಿಂದ ದಾನ ಮಾಡಬೇಕಾಗುತ್ತದೆ.ಈ ದಾನದಲ್ಲಿ 3 ಪ್ರಕಾರ ಇದೆ.

*ದೇವತೆಗೆ ದಾನ ಕೊಡುವುದು
*ಪ್ರಕೃತಿ ಗೆ ದಾನ ಕೊಡುವುದು
*ಮನುಷ್ಯರಿಗೆ ದಾನ ಕೊಡುವುದು

ಈ ರೀತಿ ದಾನ ಕೊಡುವುದರಿಂದ ಎಂತ ಮಾಟ ಮಂತ್ರ ಅಥವಾ ವಾಸ್ತು ದೋಷ ಹಾಗೂ ಸಾಲಬಾಧೆ ಮತ್ತು ರೋಗ ಬಾಧೆ ಇದ್ದರು ನಿವಾರಣೆ ಆಗುವುದು.
ವಿವಿಧ ರೀತಿಯ ದಾನಗಳು ಮತ್ತು ಅದರ ಲಾಭಗಳು
*ಯಾರು icu ನಲ್ಲಿ ಅಥವಾ ಅತ್ಯಂತ ರೋಗ ಬಾಧೆ ಯಿಂದ ಆಸ್ಪತ್ರೆ ಯಲ್ಲಿ ನರಳುತ್ತಾ ಇರುತ್ತಾರೋ ಅವರ ಹೆಸರಲ್ಲಿ ಅವರ ಕೈ ಮುಟ್ಟಿಸಿ ಹರಳೆಣ್ಣೆ ಯನ್ನು ದಾನ ಮಾಡುವುದರಿಂದ ಆ ಪೀಡಿತ ವ್ಯಕ್ತಿಯು ದಾನ ಮಾಡಿದ 2 ರಿಂದ 3 ಗಂಟೆಯಲ್ಲಿ ಚೇತರಿಸಿ ಕೊಳ್ಳುತ್ತಾನೆ.ಇದಕ್ಕೆ ತೈಲ ದಾನ ಎನ್ನುತ್ತಾರೆ.
*ಯಾರಿಗೆ ಶೀತ ಕೆಮ್ಮು ಕಫ ಹಾಗೂ ಮೂರ್ಛೆ ಹೊಂದುವುದು ಇದ್ದre ಅಂತವರು ತಕ್ಷಣ ವಸ್ತ್ರ ದಾನ ಮಾಡಿದರೆ ಅವರ ಈ ರೋಗ ಬಾಧೆ ದೂರವಾಗುತ್ತೆ.
*ಕೆಲವು ಜನ ತನ್ನ ಮಗ /ಮಗಳು ಊಟ ಸೇರ್ತ ಇಲ್ಲ ಊಟ ಮಾಡೋಕೆ ಹೋದರೆ ವಾಕರಿಕೆ ಬರುತ್ತೆ ಎಂದರೆ ತುಂಬಾ ಸಮಯ ಆಯ್ತು ಊಟ ಮಾಡದೆ ಎಂದರೆ ಅಂತವರು ಬತ್ತ ಅಥವಾ ಗೋದಿ ಅಥವಾ ರಾಗಿ ನೋ ಹೆಸರು ಕಾಳೋ ಈ ಯಾವುದಾದರೂ ಒಂದು ದಾನ್ಯ ಒಂದು ಕೆಜಿ ದಾನ ಮಾಡಿದರೆ ಈ ಸಮಸ್ಯೆ ದೂರವಾಗಿ ಅವನು/ಅವಳು ಊಟ ಮಾಡಲಿಕ್ಕೆ ಮನಸ್ಸು ಮಾಡಿ ಊಟ ಮಾಡುತ್ತಾರೆ.
*ಇದ್ದಕಿದ್ದ ಹಾಗೆ ಫುಡ್ ಪಾಯಿಸನ್ ಆದರೆ ಇದರಿಂದ ಲೂಸ್ ಮೋಶನ್ ಶುರು ಆದರೆ ಅಂತವರು ಸೌತೆಕಾಯಿ ದಾನ ಮಾಡಿ
*ಅಕಾಲ ಮೃತ್ಯು ದೋಷ ಅಥವಾ ಅಪಘಾತ ಆಗುವಂತ ಕಂಟಕಾದಿಗಳು ಇದ್ದರೆ ವಾರಕ್ಕೊಮ್ಮೆ ಒಂದು ಹಿಡಿ ಉಪ್ಪನ್ನು ದಾನ ಮಾಡಿ ಸಾಕು ಆ ವಾರದಲ್ಲಿ ನಡೆಯುವ ಎಲ್ಲ ರೀತಿಯ ಅಪಮೃತ್ಯು ದೋಷ ದೂರ ಮಾಡುತ್ತದೆ.
*ಯಾರಿಗೆ ಚಿಕ್ಕ ವಯಸ್ಸಿಗೆ ದೃಷ್ಟಿ ದೋಷವಿದೆಯೋ ಅಂದರೆ ದೂರದಲ್ಲಿ ಕಾಣದೆ ಇರುವುದು ಕಣ್ಣು ನೋವು ಬರುವುದು ಇಂತ ದೋಷ ಇದ್ದಾಗ ದೇವಸ್ಥಾನ ಕ್ಕೆ ದೀಪ ದಾನ ಮಾಡಿ ಕಂಚಿ ವರದ ರಾಯರ ದ್ಯಾನ ಅಥವಾ ಅವರ ದರ್ಶನ ಮಾಡಬೇಕು.
*ಯಾರಿಗೆ ದುಡಿದ ಹಣ ದುಂದು ವೆಚ್ಚ ಆಗ್ತಾ ಇದೆಯೋ ಅಥವಾ ಸ್ವಲ್ಪ ಸ್ವಲ್ಪ ಕಾಣೆ ಆಗ್ತಾ ಇದೆಯೋ ಹಣ ಅವರು ವೀಳ್ಯದೆಲೆ ದಕ್ಷಿಣೆ ಸಹಿತ ಆಗಾಗ ದಾನ ಮಾಡಬೇಕು.
*ತೆಂಗಿನ ಕಾಯಿ ದಾನ ಮಾಡುವುದರಿಂದ ಕಷ್ಟ ಕಾರ್ಪಣ್ಯ ದೂರವಾಗುತ್ತೆ ಚಿಂತೆ ದೂರವಾಗುತ್ತೆ ಇದನ್ನು ವಾರಕ್ಕೆ ಒಮ್ಮೆ ಆದರೂ ಮಾಡಬೇಕು.
*ಚಂದನವನ್ನು ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.ಮನಸ್ಸಿನ ಚಂಚಲತೆ ನಿವಾರಣೆ ಆಗುತ್ತದೆ. ಯಾರು ಮನಸ್ಸಿನಲ್ಲೆ ಒಬ್ಬೊಬ್ಬರೇ ಮಾತಾಡಿಕೊಳ್ಳೋದು ಹಾಗೂ  ನಿದ್ರೆ ಯಲ್ಲಿ ಮಾತಾಡೋದು ಮತ್ತು ನಿದ್ರೆಯಲ್ಲಿ ಬೆಚ್ಚಿ ಬೀಳೋದು ಇವೆಲ್ಲ ದೋಷ ನಿವಾರಣೆ ಆಗುತ್ತೆ.
*ಕೆಲವರಿಗೆ ಮಾಟ ಮಂತ್ರ ಬಾನಾಮಾತಿಯಿಂದ ಮನೆಯಲ್ಲಿ ಯಾರೋ ಓಡಾಡಿದ ಅನುಭವ ಆಗೋದು, ಹಾಗೂ ಮನೆಯ ಮುಂದೆ ರಕ್ತ ಅಥವಾ ನಿಂಬೆಹಣ್ಣು ಮಂತ್ರಿಸಿ ಹಾಕುವುದು ರಾತ್ರಿ ಮಲಗಿದ್ದಾಗ ಯಾರೋ ಕತ್ತು ಹಿಚುಕಿದ ಅನುಭವ ಆಗೋದು ಹಾಗೂ ಬಾಯಿ ಕಟ್ಟಿದ ಅನುಭವ ಮತ್ತು ಎದೆಯ ಮೇಲೆ ಯಾರೋ ಕೂತಿದ್ದ ಹಾಗೆ ಅನುಭವ ಆದರೆ ಇವರು ಕೂಷ್ಮಾಂಡ ವನ್ನು ದಾನ ಮಾಡಬೇಕು.
*ಮಾತಾ ಪಿತೃ ಗಳು ಹಾಗೂ ಹಿರಿಯರು ಕನಸಲ್ಲಿ ಪದೇ ಪದೇ ಬರ್ತಾ ಇದ್ದರೆ ಬೇಗ ಮೃತ್ಯು ಆದ ಸ್ನೇಹಿತರು ಅಥವಾ ಬೇರೆಯವರಿಂದ ಸಾಲ ಪಡೆದು ಸಾಲ ತೀರಿಸುವ ಮೊದಲೇ ಅವರು ತಿರಿ ಹೋಗಿ ಆಗಾಗ ಕನಸಲ್ಲಿ ಬಂದು ಪಿಡಿಸುತ್ತ ಇದ್ದರೆ
ಅಥವಾ ಮೈ ಮೇಲೆ ಆಹ್ವಾನ ಆಗ್ತಾ ಇದ್ದರೆ ಅಂತವರು ಆಕಳನ್ನು ಗೋ ದಾನ ಮಾಡಿದಾಗ ಅವರಿಗೆ ಮೋಕ್ಷ ಸಿಗುತ್ತೆ ಅವರ ಈ ಮೇಲಿನ ಕನಸಲ್ಲಿ ಬಂದು ತೊಂದರೆ ಕೊಡುವುದು ಮೈ ಮೇಲೆ ಆಹ್ವಾನ ಆಗುವ ಸಮಸ್ಯೆ ನಿವಾರಣೆ ಆಗುತ್ತೆ.
***

No comments:

Post a Comment