ಅಡುಗೆ ಮಾಡುವಾಗ ಎಡಗೈಯಿಂದ ಉಪ್ಪನ್ನು ಅಡುಗೆಗೆ ಹಾಕಬಾರದು ಮತ್ತೆ ಊಟಕ್ಕೆ ಕುಳಿತಾಗ ಎಡಗೈಯಿಂದ ಉಪ್ಪನ್ನ ಮುಟ್ಟಬಾರದು. ಯಾಕಂದರೆ ಮನೆಯಲ್ಲಿ ಅಶಾಂತತೆ ಇರುತ್ತೆ ಮಾನಸಿಕ ನೆಮ್ಮದಿ ಇರಲ್ಲ ಅಂತ..
ಮನೆಯ ಎಲ್ಲ ಮೂಲೆಗಳು ಯಾವಾಗಲೂ ಸ್ವಚ್ಛ ವಾಗಿರಬೇಕು ಮೂಲೆಯಲ್ಲಿ ಒಂದು ಚಿಟಿಕೆ ಕಸ ಇರಬಾರದು .. ಇಲ್ಲದಿದ್ದರೆ ನೀವೆಷ್ಟೇ ದುಡಿದರೂ ದುಡ್ಡು ನಿಲ್ಲಲ್ಲ...
ನೀವು ಮಲಗುವ ಪಲ್ಲಂಗದ ಕೆಳಗೆ ಖಾಲಿ ಜಾಗವಿರಬೇಕು
ದಿನಾಲೂ ಕಸಗೂಡಿಸಿ ಒರೆಸಬೇಕು , ಕೆಲವರು ಪಲ್ಲಂಗದ ಕೆಳಗೆ ಹರಕುಬಟ್ಟೆ ಬೇಡವಾದ ಸಾಮಗ್ರಿಗಳನ್ನು ಒಟ್ಟಿರುತ್ತಾರೆ... ಹಾಗೆ ಮಾಡಿದಲ್ಲಿ ನೀವು ದುಡಿದ ದುಡ್ಡಿನಲ್ಲಿ ಅರ್ದದಷ್ಟು ಔಷಧಿಗೆ ಖರ್ಚು ಮಾಡುತ್ತೀರಾ ಅನಾರೋಗ್ಯ ಸಂಕೇತ...
ಮನೆಯಲ್ಲಿ ಜೇಡರ ಬಲೆ ಕಟ್ಟಬಾರದು. ಇದರಿಂದ ಮನೆಯಲ್ಲಿ ಜಗಳಗಳೇ ಜಾಸ್ತಿ... ಅದಕ್ಕಾಗಿ ಆಗಾಗ ಸ್ವಚ್ಛ ಮಾಡುತ್ತಾ ಇರಬೇಕು
ಯಾವದೇ ಕಾರಣಕ್ಕೂ ಕಸಬರಿಗೆ ಹಿಡಿಯನ್ನು ಕೇಳಗೆ ಮಾಡಿ ಇಡಬೇಡಿ.
ಉಪ್ಪು ,ಎಣ್ಣೆ ಎಳ್ಳು ಉದ್ದು ಈ ಪದಾರ್ಥಗಳನ್ನು ಅಕ್ಕಪಕ್ಕದ ಮನೆಯಿಂದ ಖಡ ಕೇಳಿ ತರಬೇಡಿ..... ನಿಮಗೆ ಕಾಡುತ್ತೆ
ಉಪ್ಪು ಎಣ್ಣೆಯನ್ನು ಒಂದೇ ಸಲ ಅಂಗಡಿಯಿಂದ ಖರಿದಿಸಬಾರದು ಶನಿವಾರ ಉಪ್ಪು ತರಬಾರದು...
ಸಂಜೆಯಾದ ಮೇಲೆ ಮೊಸರು ಮತ್ತು ಅಜವಾನ (ಓಂ ಕಾಳು ) ಯಾರ ಕೇಳಿದರೂ ಮನೆಯಿಂದ ಹೊರಗೆ ಕೊಡಬೇಡಿ ಮೊಸರನ್ನು ಲಕ್ಷೀ ಅಂತ ಹೇಳತೇವೆ..
ನಿಂಬೆಹಣ್ಣನ್ನು ಇನ್ನೊಬ್ಬರ ಕೈಯಿಂದ ತೆಗೆದುಕೊಳ್ಳಬೇಡಿ ಕಾರಣ ನಿಂಬೆಹಣ್ಣು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನ ಬೇಗನೆ ಹೀರಿಕೊಳ್ಳುವ ಶಕ್ತಿ ಇದೆ ಅದಕ್ಕೆ ಅದನ್ನು ಮಾಟ ಮಂತ್ರಕ್ಕೆ ಉಪಯೋಗಿಸುತ್ತಾರೆ , ದೃಷ್ಟಿ ದೋಷ ವಾದಾಗ ನಿಂಬೆಹಣ್ಣು ನಿವಾಳಿಸಿ ಒಗೆಯುತ್ತಾರೆ..
ನಿಮಗೆಲ್ಲಾದರೂ ದಾರಿಯಲ್ಲಿ ಹೋಗುವಾಗ ರುದ್ರಾಕ್ಷಿ ಸಿಕ್ಕರೆ ಅದನ್ನು ಧರಿಸಿ ಇಲ್ಲದಿದ್ದರೆ ಮನೆಯಲ್ಲಿ ಒಂದು ಡಬ್ಬಿ ಯಲ್ಲಿ ಹಾಕಿ ಪೂಜೆ ಮಾಡಿ ... ಅದಕ್ಕೂ ಕೂಡಾ ನಿಮ್ಮ ಮನೆಯಲ್ಲಿ ಋಣಾತ್ಮಕ ಅಂಶವನ್ನು ತಡೆಯುವ ಶಕ್ತಿ ಇದೆ...
ನಿಮ್ಮ ಮನೆಯ ತಲೆಬಾಗಿಲಿಗೆ ಎದುರಾಗಿ ಆಂನೇಯ ಪೋಟೊ ಹಾಕಿ ಆಂಜನೇಯ ಪೋಟೊದ ಮುಖ ದಕ್ಷಿಣಕ್ಕೆ ಇರಲಿ ಆಗ ಆಂಜನೇಯನ ಮುಖ ಪೂರ್ವಕ್ಕೆ ಆಗುತ್ತೆ ಎಲ್ಲೇ ಹೊರಗಡೆ ಹೋಗುವಾಗ ಆಂಜನೇಯ ಮುಖದರ್ಶನ ಮಾಡಿ ಹೋದರೆ , ಮತ್ತು ನಾವು ಎಲ್ಲಿಂದಲೋ ಒಳಗೆ ಬಂದಾಗ ನಮಗೆ ನೆಮ್ಮದಿ ಸಿಗುತ್ತೆ ದರ್ಶನ ದಿಂದ ದುಷ್ಟ ಶಕ್ತಿಗಳು ಒಳ ಪ್ರವೇಶಿಸುವದಿಲ್ಲ....
ನಿಮಗೆಷ್ಟೇ ಕೆಲಸವಿರಲಿ ಹೊಸ್ತಿಲಿಗೆ ರಂಗೋಲಿ ಹಾಕುವದು ಬಿಡಬೇಡಿ ವಾಸ್ತುಪುರುಷ ವಿರುವ ಸ್ಥಾನವದು....
ದೇವರ ಮನೆಯಲ್ಲಿ ಸದಾ ದೀಪ ಇರುವಂತೆ ನೋಡಿಕೊಳ್ಳಿ...ಪ್ರತಿದಿನ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಆಗ ಮನೆಯಲ್ಲಿ ಶಾಂತತೆ ನೆಮ್ಮದಿ ಇರುತ್ತೆ.....
ಹತ್ತಿಯನ್ನು ಸೋಮವಾರ ಮುಟ್ಟಬಾರದು ಹತ್ತಿ ಬತ್ತಿ ಮಾಡಬಾರದು.... ಅಮವಾಸ್ಯೆ ಕೂಡಾ ಹತ್ತಿ ಬತ್ತಿ ಮಾಡಬಾರದು.
******
No comments:
Post a Comment