SEARCH HERE

Tuesday, 1 January 2019

garuda panchami celebrated on naga panchami ನಾಗರಪಂಚಮಿ ದಿನ ಗರುಡ ಪಂಚಮಿ ಇದೆ


gAruDa pAncHami (brief about Garuda)
+ Garuda Dwadasanama Stothra..... by Sri Bhargava Sarma

Sravana Sukla Panchami is also reckoned as GARUDA PANCHAMI dedicated to Lord Garuda the divine King of Birds.

On this day Lord Garuda is also worshiped along with Sesha Devaru/Nagadevatha;

Said to be an embodiment of Vedas (Veda Swaroopi) Garuda is prominently eulogized in Puranas for his knowledge, strength and power.

With the head and wings of an eAgle, with a strong nose and body of a human, Garuda is regarded as the King of birds Pakshiraja. His reference we find in several Puranas.

Garuda Purana one of the Ashtadasa Puranas is exclusively dedicated in the name of Garuda. This shows Garuda’s prominence in Hindu philosophy. Garuda Purana is regarded as a Saattvik Purana.

Garuda was born to Kashyapa Prajapathi and his wife Vinatha. Anoora the Rathasaarathi (charioteer) of Surya the Sun God is his brother. Serpents are his Gnathis (step brothers) born to Kadhru another wife of Sage Kashyapa and sister of Vinatha.

Garuda had even ventured to bring Amrutha from Heaven in order to get his mother released from the bondage (Daasya).

Sravana Sukla Panchami is believed to be the day Garuda & His mother got released from Daasya (bondage) and hence, the day is reckoned as Garuda Panchami.

Devotees believe Garuda Panchami to be the day Garuda was born and hence, it is also celebrated as Garuda Jayanthi.

On this day special celebrations are held at Tirumala temple where Malayappa Swamy (Lord Venkateshwara) is taken out in procession on Garuda Vahana.

Garudaadri one of the seven hills among the Tirumala hills is named after Garuda.

Tirumala Srivaari Brahmotsavam of Lord Sri Venkateswara starts with the hoisting of a flag with a picture of Garuda on the Dhwajasthambha.

On the fifth day of the festival, famous Garudotsavam takes place when Lord Venkateshwara is taken out in procession with Garuda carrying the Lord on his shoulders.

It is believed and said that it is highly meritorious and mukthi pradham to have darshan of the Lord seated on Garuda.

Lord Sri Krishna says in Bhagawadgita Vibhuthi Yoga (sloka # 30) that He is Garuda among birds "Vynatheyatcha Pakshinaam".

Panchamukha Aanjaneya Swamy (five headed Hanuman) is depicted as having Garuda as one of the five faces facing west.

Garuda is the Divine Vehicle or Vaahana (chief mount) of Lord Vishnu carrying Him on his shoulders and thus Lord Vishnu is called as Garudavahana.

An ardent devotee of Lord Vishnu, Garuda always resides in Sri Vaikunta engaged in eternal service to Lord SriManNarayana.

Pouranically Garuda is also known by other names viz.

> Garuthmantha,
> Vynatheya,
> Suparna,
> Naagaanthaka,
> Pakshiraja and
> Vinathasutha.

As per Taratamya Garuda is placed in 5th Kaksha along with Sesha Devaru & Rudra DEvaru; Lord Vishnu is antaryaAmi of Garuda; There is no avathara for Garuda;

> Garuda Dwadasanama Stothra (English)

suparNaM vainatEyaM cha naagaariM naagabhooShaNam|
viShaaMtakaM shashaaMkaM cha aadityam vishwatOmukham|| 1||

rugmaMtam khagapatiM taarkShyaM kaashyapanaMdanaM
dwaadashaitaani naamaani garuDasya mahaatmanaH ||2||

yaH paThEt praatarutthaaya sarvatra vijayI bhavEt|
viShaM naakramatE tasya na taM hiMsati pannagaH ||3||

saMgraamE vyavahaarE cha kaaryasiddhiM cha maanavaH
baMdhanaanmuktimaapnOti yaatraayaaM siddhimaapnuyaat
kaaryasiddhiM kuruShwaarya vihagaaya namO stutE ||4||

|| iti garuDadwaadashanaama stOtram ||
madhwEshaArpaNamastu

hAri sArvottamA - vaAyu jeevottamA - Hara Vaishnavottama
Sri GuruRaajo Vijayathe

On the day of Garuda Panchami, Lord Garuda also to be worshiped along with Sesha Devaru/Naaga Devatha.

*********

" ದಿನಾಂಕ : 25.07.2020 ಶನಿವಾರ - ಶ್ರಾವಣ ಶುದ್ಧ ಪಂಚಮೀ " ಶ್ರೀ ಗರುಡ ಪಂಚಮೀ "
" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ ವಿರಚಿತ ಪ್ರಮೇಯಸಂಗ್ರಹಃ " ದಲ್ಲಿ - ಶ್ರೀ ಗರುಡದೇವರು ".
।। ತತಃ ಸೂಕ್ಷ್ಮ ಸೃಷ್ಟಿ ಪ್ರಕಾರಃ ।।
ವಾಸುದೇವಾತ್ ಮಾಯಾಯಾ೦ ಪುರುಷನಾಮ ಜಾತಃ । ಸಂಕರ್ಷಣಾತ್ ಜಯಾಯಾ೦ ಸೂತ್ರ ನಾಮಾ ವಾಯುರ್ಜಾತಃ । ಪ್ರದ್ಯುಮ್ನಾತ್ ಪ್ರಕೃತ್ಯಾಂ ಪ್ರಧಾನಸಂಜ್ಞಾ ಸರಸ್ವತೀ, ಶ್ರದ್ಧಾ, ಸಂಜ್ಞಾ, ಭಾರತೀ ಚ ಜಾತಾ ಇತಿ । ತತಃ ಪುರುಷನಾಮ್ನೋ ಬ್ರಹ್ಮಣಃ ಪ್ರಧಾನಸಂಜ್ಞಾಯಾ೦ ಸರಸ್ವತ್ಯಾಂ ಶೇಷನಾಮಕ ಜೀವೋ ಜಾತಃ । ಸೂತ್ರನಾಮ್ನೋ ವಾಯೋ: ಶ್ರದ್ಧಾಸಂಜ್ಞಾಯಾಂ ಭಾರತ್ಯಾಂ ಕಾಲನಾಮ ಗರುಡ ಉತ್ಪನ್ನ: ।।
ಶ್ರೀ ವಾಸುದೇವನಿಂದ ಶ್ರೀ ಮಾಯಾದೇವಿಯಲ್ಲಿ " ಪುರುಷ " ನೆಂಬುವನು ಹುಟ್ಟಿದನು.
ಶ್ರೀ ಸಂಕರ್ಷಣನಿಂದ ಶ್ರೀ ಜಯಾದೇವಿಯಲ್ಲಿ " ಸೂತ್ರ " ನಾಮಕರಾದ ಶ್ರೀ ವಾಯುದೇವರು ಹುಟ್ಟಿದರು.
ಶ್ರೀ ಪ್ರದ್ಯುಮ್ನನಿಂದ ಶ್ರೀ  ಕೃತೀದೇವಿಯಲ್ಲಿ " ಪ್ರಧಾನ " ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರೂ, " ಶ್ರೀ ಶ್ರದ್ಧಾ " ಎಂಬ ಹೆಸರುಳ್ಳ ಶ್ರೀ ಭಾರತೀದೇವಿಯರು ಹುಟ್ಟಿದರು.
ಅನಂತರ ಶ್ರೀ ಪುರುಷ ನಾಮಕರಾದ ಶ್ರೀ ಬ್ರಹ್ಮದೇವರಿಂದ ಶ್ರೀ ಪ್ರಧಾನ ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರಲ್ಲಿ " ಶ್ರೀ ಶೇಷ " ನೆಂಬ ಜೀವನು ( ಜೀವಾಭಿಮಾನಿಯು ) ಹುಟ್ಟಿದರು.
" ಸೂತ್ರ " ವೆಂದರೆ ಶ್ರೀ ಮುಖ್ಯಪ್ರಾಣದೇವರು. ಅವರಿಂದ ಶ್ರೀ ಶ್ರದ್ಧೆ ಯೆಂಬ ಹೆಸರಿನ ಶ್ರೀ ಭಾರತೀದೇವಿಯರಲ್ಲಿ " ಕಾಲ " ನೆಂಬ ಹೆಸರಿನ ಶ್ರೀ ಗರುಡನು ಉತ್ಪನ್ನರಾದರು.
ಶ್ರೀ ಸಹ್ಲಾದಾಂಶ ಜಗನ್ನಾಥದಾಸರು....
ಜಗದುದರನ ಸುರೋತ್ತಮನ ನಿಜ ।
ಪೆಗಲೊಳಾಂತು ಕರಾಬ್ಜದೋಳ್ ಪದ ।
ಯುಗ ಧರಿಸಿ ನಖ ಪಂಕ್ತಿಯೋಳು 
ರಮಣೀಯತರವಾದ ।।
ನಗಧರನ ಪ್ರತಿಬಿಂಬ ಕಾಣುತ ।
ಮಿಗೆ ಹರುಷದಿಂ ಪೊಗಳಿ ಹಿಗ್ಗುವ ।
ಖಗ ಕುಲಾಧಿಪ ಕೊಡಲಿ ಮಂಗಳ 
ಸಕಲ ಸುಜನರಿಗೆ ।। ಹ ಸಾ 32/8 ।।
ಜಗತ್ತನ್ನು ಉದರದಲ್ಲಿ ಧರಿಸಿರುವ ದೇವ ದೇವೋತ್ತಮನಾದ ಶ್ರೀ ಹರಿಯನ್ನು ತನ್ನ ಭುಜದ ಮೇಲೆ ಹೊತ್ತು ತನ್ನ ಕರಕಮಲದಲ್ಲಿ ಅವನ ಎರಡು ಪಾದಗಳನ್ನು ಇರಿಸಿಕೊಂಡು, ಅದರ ನಖ ಸಾಲಿನಲ್ಲಿ  ಅತ್ಯಂತ ಮನೋಹರವಾದ, ನಗಧರನಾದ ಶ್ರೀ ಹರಿಯ ಪ್ರತಿಬಿಂಬವನ್ನು ಕಾಣುತ್ತಾ ಮತ್ತೆ ಮತ್ತೆ ಹರುಷದಿಂದ ಹೊಗಳಿ ಹಿಗ್ಗುವ ಪಕ್ಷಿ ಕುಲಗಳಿಗೆ ಒಡೆಯನಾದ ಶ್ರೀ ಗರುಡದೇವರು ಸಕಲ ಸುಜ್ಜನರಿಗೂ ಮಂಗಳವನ್ನುಂಟು ಮಾಡಲಿ!!
ನಗ = ಪರ್ವತ
ನಗಧರ = ಮಂದರ, ಗೋವರ್ಧನ ಗಿರಿಗಳನ್ನು ಧರಿಸಿದವನು = ಶ್ರೀ ಹರಿ
" ಶ್ರೀ ಗರುಡದೇವರ ಬಗ್ಗೆ ಮತ್ತಷ್ಟು ಮಾಹಿತಿ "
ಶ್ರೀ ಗರುಡದೇವರು ೫ನೇ ಕಕ್ಷಾಪನ್ನರು.
ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರದೇವರು ಸಮಾನ ಕಕ್ಷಾಪನ್ನರು.
ಸೂಕ್ಷ್ಮ ಸೃಷ್ಟಿಯಲ್ಲಿ ಶ್ರೀ ಸರಸ್ವತೀದೇವಿಯರು, ಶ್ರೀ ಭಾರತೀದೇವಿಯರು ಜನಿಸಿದ ಎರಡು ವರ್ಷಕ್ಕೆ ಶ್ರೀ ಪುರುಷ ನಾಮಕ ಶ್ರೀ ಚತುರ್ಮುಖ ಬ್ರಹ್ಮದೇವರಿಗೆ ಶ್ರೀ ಪ್ರಕೃತಿ ನಾಮಕ ಶ್ರೀ ಸರಸ್ವತೀದೇವಿಯರಲ್ಲಿ ಶ್ರೀ ಶೇಷದೇವರು ಜನಿಸಿದ ಅವಧಿಯಲ್ಲಿ, ಶ್ರೀ ಜಯಾ ಪತಿ ಶ್ರೀ ಸಂಕರ್ಷಣ ದೆಸೆಯಿಂದ ಜನಿಸಿದ ಶ್ರೀ ಸೂತ್ರ ನಾಮಕ ಶ್ರೀ ವಾಯುದೇವರಿಂದ ಶ್ರೀ ಭಾರತೀದೇವಿಯರಲ್ಲಿ " ಕಾಲನಾಮಕ ಶ್ರೀ ಗರುಡದೇವರ ಉತ್ಪನ್ನವಾಯಿತು.
ಪದವಿ ದೆಸೆಯಿಂದ ಶ್ರೀ ಗರುಡದೇವರು, ಶ್ರೀ ಶೇಷದೇವರಿಗಿಂತ ಕಿಂಚಿತ್ ಅಧಿಕರು.
" ನ ವೀಂದ್ರಸ್ಯ ಅವತಾರೋತ್ಪತ್ತಿ ಭ್ಯೂಮ್ಯಾಮ್ " 
ಎಂಬ ಪ್ರಮಾಣ ವಚನದಂತೆ ಶ್ರೀ ಗರುಡದೇವರಿಗೆ ಭೂಮಿಯಲ್ಲಿ ಅವತಾರವಿಲ್ಲ!!
ಶ್ರೀ ಸೌಪರ್ಣೀದೇವಿಯರು ಶ್ರೀ ಗರುಡದೇವರ ಪತ್ನೀ!
ಶ್ರೀ ಗರುಡದೇವರಂತೆ ಶ್ರೀ ಸೌಪರ್ಣೀದೇವಿಯರಿಗೂ ಭೂಮಿಯಲ್ಲಿ ಅವತಾರವಿಲ್ಲ.
ಒಂದು ಬ್ರಹ್ಮ ಕಲ್ಪದಲ್ಲಿ ಶ್ರೀ ಗರುಡ ಪದವಿಗಾಗಿ ಸಾಧನ ಮಾಡುವ ಜೀವರ ಸಂಖ್ಯೆ 100. ಅದರಲ್ಲಿ ಒಬ್ಬರು ಮಾತ್ರ ಪದಾರ್ಹರು.
ಶ್ರೀ ಕಶ್ಯಪ ಮಹಾ ಮುನಿಗಳಿಗೆ 13 ಮಂದಿ ಪತ್ನಿಯರು. ಅವರಲ್ಲಿ ವಿನುತಾ ದೇವಿಯಲ್ಲಿ ಶ್ರೀ ಗರುಡದೇವರು ಜನಿಸಿದರು.
ವಿನುತಾತ್ಮಜನಾದ ಶ್ರೀ ಗರುಡದೇವರ ಅಣ್ಣ ಶ್ರೀ ಸೂರ್ಯದೇವರ ರಥ ಸಾರಥಿಯಾದ ಶ್ರೀ ಅರುಣ.
ಸ್ವರ್ಗ ಲೋಕಕ್ಕೆ ಹೋಗಿ, ಶ್ರೀ ಇಂದ್ರದೇವರೊಡನೆ ಯುದ್ಧ ಮಾಡಿ, ಅಮೃತ ಕಲಶವನ್ನು ಮಲತಾಯಿಯಾದ ಕದ್ರುವಿಗೆ ಕೊಟ್ಟು, ತನ್ನ ಮಾತೆಯಾದ ವಿನುತೆಯನ್ನು ಕದ್ರುವಿನ ದಾಸ್ಯದಿಂದ ಮುಕ್ತಗೊಳಿಸಿದ ಮಹಾ ಮಹಿಮರು ಶ್ರೀ ಗರುಡದೇವರು.
ಶ್ರೀ ಹರಿಯ ವಾಹನ. ಇದರಿಂದ ಶ್ರೀ ಹರಿಯು ಗರುಡಗಮನನು.
ಆಲದ ಮರದ ಕೆಳಗೆ ತಪಸ್ಸು ಮಾಡುತ್ತಿದ್ದ ಶ್ರೀ ವಾಲಖಿಲ್ಯರ ಅನುಗ್ರಹವನ್ನು ಸಂಪಾದಿಸಿದವರು.
ಶ್ರೀ ಶ್ಯಾಮಸುಂದರದಾಸರು...
ರಾಗ : ದುರ್ಗಾ          ತಾಳ : ತ್ರಿಪುಟ
ರಕ್ಷಿಸೆನ್ನನು ಪಕ್ಷೀ೦ದ್ರನೇ 
ನೀನು ।। ಪಲ್ಲವಿ ।।
ರಕ್ಷಿಸೆನ್ನನು ಪಕ್ಷಿಪ ಕರುಣಾ । ಕ ।
ಟಾಕ್ಷದಿಂದೀಕ್ಷಿಸು 
ತೀಕ್ಷಣ ಬಿಡದೆ ।। ಅ ಪ ।।
ತಂದೆಯನುಜ್ಞದಿ 
ಸಿಂಧೂರ ಕೂರ್ಮ ।
ದ್ವಂದ್ವ ಪ್ರಾಣಿಗಳ 
ತಿಂದ ಮಹಾತ್ಮ ।। ಚರಣ ।।
ಅಂದು ಪೀಯೂಷವ 
ತಂದು ಮಾತೆಯ ।
ಬಂಧನ ಬಿಡಿಸಿದ 
ಬಂಧುರ ಮಹಿಮನೆ ।। ಚರಣ ।।
ಗಗನಗಮನ 
ಪನ್ನಗವಗೆ ಪ್ರಾರ್ಥಿಪೆ ।
ಮಿಗೆ ಕರುಣದಿ ಎನ್ನಘ 
ದೂರೋಡಿಸಿ ।। ಚರಣ ।।
ಧಾರುಣಿಯೊಳವತಾರ 
ರಹಿತ । ಶೃಂ ।
ಗಾರವಾದ ಬಂಗಾರ 
ಶರೀರ ।। ಚರಣ ।।
ವಂದಿಪೆ ವಿನುತ 
ನಂದನ । ಶ್ಯಾಮ ।
ಸಂದರ ವಿಠಲನಸ್ಯ೦ದನ 
ಶೂರ ।। ಚರಣ ।।
ಶ್ರೀ ಶ್ಯಾಮಸುಂದರದಾಸರು ಒಂದನೇ ಚರಣದಲ್ಲಿ.... 
" ದ್ವಂದ್ವ ಪ್ರಾಣಿಗಳ ತಿಂದ ಮಹಾತ್ಮ "  
ಸಮುದ್ರ ಮಧ್ಯದಲ್ಲಿ ಬೃಹದಾಕಾರವಾದ ಆನೆ ಮತ್ತು ಕೂರ್ಮಗಳ ರೂಪದಲ್ಲಿ ನಾವಿಕರನ್ನು ಪೀಡಿಸಿ ತಿನ್ನುತ್ತಿದ್ದ ದೈತ್ಯರನ್ನು ತಂದೆಯ ಆದೇಶದಂತೆ ತನ್ನ ಹಸ್ತ ದ್ವಯಗಳಿಂದ ಎತ್ತಿಕೊಂಡು ಹೋಗಿ ಭಕ್ಷಿಸಿ ಸಜ್ಜನರನ್ನು ರಕ್ಷಿಸಿದರು ಶ್ರೀ ಗರುಡದೇವರು ಎಂದು - ಪದ್ಮಪುರಾಣ, ಹರಿವಂಶ, ಗರುಡಪುರಾಣಗಲ್ಲಿ ಉಲ್ಲೇಖಿಸಲ್ಪಟ್ಟಿದೆ. 
ಆ ವಿಷಯವನ್ನೇ ನಮ್ಮೆಲ್ಲರ ಪ್ರೀತಿಯ ಶ್ರೀ ಶ್ಯಾಮಸುಂದರದಾಸರು ತಿಳಿಸಿದ್ದಾರೆ.  
ಶ್ರೀ ಗರುಡದೇವರ ಮೇಲೆ ಶ್ರೀ ಹರಿಯ ದಾಸರು ರಚಿಸಿದ ಕೃತಿಗಳು... 
1. ಶ್ರೀ ಜಗನ್ನಾಥದಾಸರು - ಅತಿ ಶೋಭಿಸುತಿದೆ ಶ್ರೀಪತಿ ವಾಹನ 
2. ರಕ್ಷಿಸಬೇಕಮ್ಮನನುದಿನದಲ್ಲಿ ಪಕ್ಷಿರಾಜನೆ ಹರಿಸ್ಯಂದನ ಸ್ವಾಮಿ - 
ಶ್ರೀ ಪ್ರಾಣೇಶದಾಸರು 
3. ಪಾಹಿ ವಿನತಾತ್ಮಜ ಪತಗಾಧಿರಾಜಾ - ಶ್ರೀ ಕಾರ್ಪರ ನರಹರಿ 
4. ವಿನತಾತ್ಮಜಾತಾ ನಮೋ ನಮೋ ಕನಕದ್ವಿಪರ್ಣ ನಮೋ - 
ಶ್ರೀ ತಂದೆ ವೆಂಕಟೇಶ ವಿಠಲ 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
*******

” ಶ್ರೀ ಗರುಡ” ದೇವರ ಅಷ್ಟೋತ್ತರ ಓದಿದರೆ ಏನು ಫಲ..? ವಿದ್ವಾಂಸರಾದ ಡಾ.ಶೆಲ್ವಪ್ಪಿಳ್ಳೈ ಅಯ್ಯಂಗಾರ್ ವಿವರಿಸಿದ್ದಾರೆ. ಗಮನವಿಟ್ಟು ಓದಿ ಫಲ ಪಡೆಯಿರಿ..
===============
ನಾಮಾವಳಿ ಸಹಿತ
================
1 ಕಣ್ಣಿಗೆ ಸಂಭಂದ ಪಟ್ಟ “ಸಮೀಪ ದೃಷ್ಟಿದೋಷ, ದೂರದೃಷ್ಟಿದೋಷ ನಿವಾರಣೆಯಾಗುತ್ತದೆ..
ಕಣ್ಣು ಕೆಂಪಾಗುವುದು, ನೋವು, ಉರಿ ನಿವಾರಣೆಯಾಗುತ್ತದೆ..

2. ದ್ವಿತೀಯ ರಾಹು, ಪಂಚಮ ರಾಹು, ಸಪ್ತಮ ರಾಹು, ದ್ವಾದಶ ರಾಹು ದೋಷಗಳು, ಸರ್ವರೀತಿಯ ಸರ್ಪದೋಷಗಳೂ ನಿವಾರಣೆಯಾಗುತ್ತದೆ..

3 *ಮನಸ್ಸಿನಲ್ಲಿ ನೋವು, ಅಸಮಾಧಾನ , ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಓದಿದರೆ ಮನಸ್ಸು ನಿರ್ಮಲವಾಗುತ್ತದೆ..ಶಾಂತವಾಗಿರುತ್ತಾರೆ.

4. ಸರ್ಪದೋಷ, ಕಾಳಸರ್ಪದೋಷ, .. ಇತ್ಯಾದಿ ಸರ್ಪದೋಷಗಳ ಪೂರ್ಣವಾಗಿ ನಿವಾರಣೆಯಾಗುತ್ತದೆ..

5. ಸಮಸ್ತ ಕುಜದೋಷಗಳು ನಿವಾರಣೆಯಾಗುತ್ತದೆ..

6. ಸರ್ಪಸುತ್ತು ವಾಸಿಯಾಗುತ್ತದೆ..

7. ರಾಹು ನಕ್ಷತ್ರಗಳಲ್ಲಿ ಜನಿಸಿದ್ದರೆ – ಆರಿದ್ರಾ, ಸ್ವಾತಿ, ಶತಭಿಷ..!
ಕೇತು ನಕ್ಷತ್ರಗಳಲ್ಲಿ ಜನಿಸಿದ್ದರೆ – ಅಶ್ವಿನಿ, ಮಖಾ, ಮೂಲಾ ..!
ಕುಜನ ನಕ್ಷತ್ರಗಳಲ್ಲಿ ಜನಿಸಿದ್ದರೆ – ಮೃಗಶಿರ, ಚಿತ್ತ, ಧನಿಷ್ಟ..!

ಆದವರ ನಕ್ಷತ್ರಗಳ ದೋಷ ನಿವಾರಣೆಯಾಗುತ್ತದೆ..

8. ” ಮಿಥುನ”ಲಗ್ನದಲ್ಲಿ ಜನಿಸಿದ ಎಲ್ಲರೂ, ವಿವಾಹದ ನಂತರ ಜೀವನದಲ್ಲಿ ನೆಮ್ಮದಿ ಇಲ್ಲದವರು ಓದಿದರೆ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ಮಾಡುತ್ತಾರೆ..

9. ದೈವದೋಷವಿರುವವರು, ದೈವಶಾಪವಿರುವವರು,
“ಆಶ್ಲೇಷ” ಬಲಿ ಮಾಡಿಸಿದ್ದರೂ ದೋಷ ಹೋಗದೇ ಕಷ್ಟ ಅನುಭವಿಸುತ್ತಿದ್ದರೆ ಅಂತವರು “ಗರುಡ ಅಷ್ಟೋತ್ತರ” ಓದಿದರೆ “ಸರ್ವ ದೋಷಗಳು” ನಿವಾರಣೆಯಾಗುತ್ತದೆ..

11. ಸರ್ಪಸಂಸ್ಕಾರ ಮಾಡಿಸಿಯೂ ದೋಷ ಹೋಗದಿದ್ದರೆ, ನೆನೆದ ಕಾರ್ಯಗಳು ಆಗದೇ ಇದ್ದರೆ ಅಂತವರು ಓದಿದರೆ ಶುಭವಾಗುತ್ತದೆ..

12. ಸತಿಪತಿಗಳ ಜಗಳ ನಿವಾರಣೆಯಾಗುತ್ತದೆ.. ರಾಹು-ಕೇತು ದೋಷಗಳು ನಿವಾರಣೆಯಾಗುತ್ತದೆ..

13. ಅನುಮಾನ, ಒಳಜಗಳ, ಪರದಾಟಗಳು ನಿವಾರಣೆಯಾಗುತ್ತದೆ..

14. ಪ್ರಸವ ಕಾಲದಲ್ಲಿ ಶಿಶುವು ಮಾಲೆಯನ್ನು ಹಾಕಿಕೊಂಡು ಜನಿಸಿದ್ದರೆ, ಕರುಳಬಳ್ಳಿ ಸುತ್ತಿ ಹುಟ್ಟಿದೆ ಅನ್ನುವ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ..

15. ಮಕ್ಕಳು ತುಬಾ ಅನಾರೋಗ್ಯದಿಂದ ಇದ್ದು, ಜ್ವರ ಬಂದು ವಾಸೊಯಾಗದೇ ಇದ್ದರೆ, ಮಗುವಿನ ಕತ್ತು ಮತ್ತು ಸೊಂಟ ಸರಿಯಾಗಿ ನಿಲ್ಲದಿದ್ದರೆ, ಆ ಮನೆಯವರು, ಶಾಸ್ತ್ರೋಕ್ತವಾಗಿ ಗರುಡದೇವರನ್ನು ಪೂಜಿಸಿ, ಯಾವುದಾದರೂ ಎಣ್ಣೆಯಲ್ಲಿ ಅಭಿಮಂತ್ರಿಸಿ ಹಚ್ಚಿದರೆ ಬಹಳ ಬೇಗ ಮಗು ಆರೋಗ್ಯವಂತರಾಗುತ್ತಾರೆ..

16. ಕಣ್ಣಿನಲ್ಲಿ ಪೊರೆ ಬರುತ್ತಿರುವವರು, ಕಣ್ಣು ಕೆಂಪಗೆ ಆಗುತ್ತಿದ್ದರೆ, *ಉರಿ ಬರುತ್ತಿದ್ದರೆ,
ಗರುಡ ಮಂತ್ರವನ್ನು ನೀರಿನಲ್ಲಿ ಅಭಿಮಂತ್ರಿಸಿ, ಆ ನೀರನ್ನು EYE CUP ಗೆ ಹಾಕಿ ನೀರಿನಿಂದ ಕಣ್ಣು ಶುದ್ಧ ಮಾಡಿಕೊಂಡರೆ, ಸಮಸ್ತ ನೇತ್ರದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..

ಓಂ ಪಕ್ಷಿಣೇ ನಮಃ
ಓಂ ವೈನತೇಯಾಯ ನಮಃ
ಓಂ ಖಗಪತಯೇ ನಮಃ
ಓಂ ಕಾಶ್ಯಪಾಯ ನಮಃ
ಓಂ ಅಗ್ನಯೇ ನಮಃ
ಓಂ ಮಹಾಬಲಾಯ ನಮಃ
ಓಂ ತಪ್ತಕಾನ್ಚನವರ್ಣಾಭಾಯ ನಮಃ
ಓಂ ಸುಪರ್ಣಾಯ ನಮಃ
ಓಂ ಹರಿವಾಹನಾಯ ನಮಃ
ಓಂ ಛಂದೋಮಯಾಯ ನಮಃ || ೧೦ ||
ಓಂ ಮಹಾತೇಜಸೇ ನಮಃ
ಓಂ ಮಹೋತ್ಸಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಬ್ರಹ್ಮಣ್ಯಾಯ ನಮಃ
ಓಂ ವಿಶ್ಣುಭಕ್ತಾಯ ನಮಃ
ಓಂ ಕುಂದೇಂದುಧವಳಾನನಾಯ ನಮಃ
ಓಂ ಚಕ್ರಪಾಣಿಧರಾಯ ನಮಃ
ಓಂ ಶ್ರೀಮತೇ ನಮಃ
ಓಂ ನಾಗಾರಯೇ ನಮಃ
ಓಂ ನಾಗಭೂಶಣಾಯ ನಮಃ || ೨೦ ||
ಓಂ ವಿಗ್ಯಾನದಾಯ ನಮಃ
ಓಂ ವಿಶೇಶಗ್ಯಾಯ ನಮಃ
ಓಂ ವಿದ್ಯಾನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಭೂತಿದಾಯ ನಮಃ
ಓಂ ಭುವನದಾತ್ರೇ ನಮಃ
ಓಂ ಭೂಶಯಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಪ್ತಛಂದೋಮಯಾಯ ನಮಃ
ಓಂ ಪಕ್ಶಿಣೇ ನಮಃ || ೩೦ ||
ಓಂ ಸುರಾಸುರಪೂಜಿತಾಯ ನಮಃ
ಓಂ ಗಜಭುಜೇ ನಮಃ
ಓಂ ಕಚ್ಛಪಾಶಿನೇ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ಅರುಣಾನುಜಾಯ ನಮಃ
ಓಂ ಅಮ್ಱುತಾಂಶಾಯ ನಮಃ
ಓಂ ಅಮ್ಱುತವಪುಶೇ ನಮಃ
ಓಂ ಆನಂದನಿಧಯೇ ನಮಃ
ಓಂ ಅವ್ಯಯಾಯ ನಮಃ
ಓಂ ನಿಗಮಾತ್ಮನೇ ನಮಃ || ೪೦ ||
ಓಂ ನಿರಾಹಾರಾಯ ನಮಃ
ಓಂ ನಿಸ್ತ್ರೈಗುಣ್ಯಾಯ ನಮಃ
ಓಂ ನಿರವ್ಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ಪರಸ್ಮೈಜ್ಯೋತಿಶೇ ನಮಃ
ಓಂ ಪರಾತ್ಪರತರಾಯ ನಮಃ
ಓಂ ಪರಸ್ಮೈ ನಮಃ
ಓಂ ಶುಭಾನ್ಗಾಯ ನಮಃ
ಓಂ ಶುಭದಾಯ ನಮಃ
ಓಂ ಶೂರಾಯ ನಮಃ || ೫೦ ||
ಓಂ ಸೂಕ್ಶ್ಮರೂಪಿಣೇ ನಮಃ
ಓಂ ಬ್ಱುಹತ್ತನವೇ ನಮಃ
ಓಂ ವಿಶಾಶಿನೇ ನಮಃ
ಓಂ ವಿದಿತಾತ್ಮನೇ ನಮಃ
ಓಂ ವಿದಿತಾಯ ನಮಃ
ಓಂ ಜಯವರ್ಧನಾಯ ನಮಃ
ಓಂ ದಾರ್ಡ್ಯಾನ್ಗಾಯ ನಮಃ
ಓಂ ಜಗದೀಶಾಯ ನಮಃ
ಓಂ ಜನಾರ್ದನಮಃಾಧ್ವಜಾಯ ನಮಃ
ಓಂ ಸತಾಂಸಂತಾಪವಿಚ್ಛೇತ್ರೇ ನಮಃ || ೬೦ ||
ಓಂ ಜರಾಮರಣವರ್ಜಿತಾಯ ನಮಃ
ಓಂ ಕಲ್ಯಾಣದಾಯ ನಮಃ
ಓಂ ಕಾಲಾತೀತಾಯ ನಮಃ
ಓಂ ಕಲಾಧರಸಮಪ್ರಭಾಯ ನಮಃ
ಓಂ ಸೋಮಪಾಯ ನಮಃ
ಓಂ ಸುರಸನ್ಘೇಶಾಯ ನಮಃ
ಓಂ ಯಗ್ಯಾನ್ಗಾಯ ನಮಃ
ಓಂ ಯಗ್ಯಭೂಶಣಾಯ ನಮಃ
ಓಂ ಮಹಾಜವಾಯ ನಮಃ
ಓಂ ಜಿತಾಮಿತ್ರಾಯ ನಮಃ || ೭೦ ||
ಓಂ ಮನ್ಮಥಪ್ರಿಯಬಾಂಧವಾಯ ನಮಃ
ಓಂ ಶನ್ಖಭ್ಱುತೇ ನಮಃ
ಓಂ ಚಕ್ರಧಾರಿಣೇ ನಮಃ
ಓಂ ಬಾಲಾಯ ನಮಃ
ಓಂ ಬಹುಪರಾಕ್ರಮಾಯ ನಮಃ
ಓಂ ಸುಧಾಕುಂಭಧರಾಯ ನಮಃ
ಓಂ ಧೀಮತೇ ನಮಃ
ಓಂ ದುರಾಧರ್ಶಾಯ ನಮಃ
ಓಂ ದುರಾರಿಘ್ನೇ ನಮಃ
ಓಂ ವಜ್ರಾನ್ಗಾಯ ನಮಃ || ೮೦ ||
ಓಂ ವರದಾಯ ನಮಃ
ಓಂ ವಂದ್ಯಾಯ ನಮಃ
ಓಂ ವಾಯುವೇಗಾಯ ನಮಃ
ಓಂ ವರಪ್ರದಾಯ ನಮಃ
ಓಂ ವಿನುತಾನಂದನಾಯ ನಮಃ
ಓಂ ಶ್ರೀದಾಯ ನಮಃ
ಓಂ ವಿಜಿತಾರಾತಿಸನ್ಕುಲಾಯ ನಮಃ
ಓಂ ಪತದ್ವರಿಶ್ಠರಾಯ ನಮಃ
ಓಂ ಸರ್ವೇಶಾಯ ನಮಃ
ಓಂ ಪಾಪಘ್ನೇ ನಮಃ || ೯೦ ||
ಓಂ ಪಾಪನಾಶನಾಯ ನಮಃ
ಓಂ ಅಗ್ನಿಜಿತೇ ನಮಃ
ಓಂ ಜಯಘೋಶಾಯ ನಮಃ
ಓಂ ಜಗದಾಹ್ಲಾದಕಾರಕಾಯ ನಮಃ
ಓಂ ವಜ್ರನಾಸಾಯ ನಮಃ
ಓಂ ಸುವಕ್ತ್ರಾಯ ನಮಃ
ಓಂ ಶತ್ರುಘ್ನಾಯ ನಮಃ
ಓಂ ಮದಭನ್ಜನಾಯ ನಮಃ
ಓಂ ಕಾಲಗ್ಯಾಯ ನಮಃ
ಓಂ ಕಮಲೇಶ್ಟಾಯ ನಮಃ || ೧೦೦ ||
ಓಂ ಕಲಿದೋಶನಿವಾರಣಾಯ ನಮಃ
ಓಂ ವಿದ್ಯುನ್ನಿಭಾಯ ನಮಃ
ಓಂ ವಿಶಾಲಾನ್ಗಾಯ ನಮಃ
ಓಂ ವಿನುತಾದಾಸ್ಯವಿಮೋಚನಾಯ ನಮಃ
ಓಂ ಸ್ತೋಮಾತ್ಮನೇ ನಮಃ
ಓಂ ತ್ರಯೀಮೂರ್ಧ್ನೇ ನಮಃ
ಓಂ ಶ್ರೀಪಕ್ಷಿರಾಜಪರಬ್ರಹ್ಮಣೇ ನಮಃ || ೧೦೮||
ಇತಿ ಗರುಡ ಅಷ್ಟೋತ್ತರ ಶತನಾಮಾವಳಿಃ
***

No comments:

Post a Comment