ವಿಷ್ಣು ಸಹಸ್ರನಾಮದಲ್ಲಿ ಹೀಗೆ ಬರುತ್ತದೆ
ಪಾರ್ವತಿ ಕೇಳುತ್ತಾಳಂತೆ "ಸಹಸ್ರನಾಮ ಪೂರ್ತಿ ಹೇಳಲಾಗದಿದ್ರೆ ಏನು ಮಾಡಬೇಕು?" ಅಂತ.
ಶಿವ ಉತ್ತರಿಸುತ್ತಾನಂತೆ :
"ಶ್ರೀರಾಮ ರಾಮ ರಾಮೇತಿ ರಮೇರಾಮೇ ಮನೋರಮೆ
ಸಹಸ್ರನಾಮತತ್ತುಲ್ಯಮ್ ರಾಮನಾಮ ವರಾನನೇ"
ಅಂತ ಮೂರು ಬಾರಿ ಅಂದರೂ ಸಾಕು. ಆ ಪುಣ್ಯ ಪ್ರಾಪ್ತಿ ಆಗುತ್ತದೆ
ಶ್ರೀ(೧) ರಾಮ(೨) ರಾಮ(೩) ರಾಮೇ(೪)ತಿ ರಮೇ(೫) ರಾಮೆ(೬) ಮನೋ ರಮೇ,(೭)
ಸಹಸ್ರ ನಾಮ(೮) ಮತತುಲ್ಯಂ ರಾಮ(೯) ನಾಮ(೧೦) ವರಾನನೇ..
ಇಲ್ಲಿ ಶ್ರೀ ಅಂದರೂ ನಾರಾಯಣ
ನಾಮ ಅಂದರೂ ನಾರಾಯಣ
ಒಟ್ಟು ಹತ್ತು ಬಾರಿ ಬರುತ್ತದೆ
ಇದನ್ನು ಮೂರು ಬಾರಿ ಹೇಳಿದರೆ ಸಾವಿರ ಹೇಗಾಗುತ್ತೆ ಗೊತ್ತಾ...
ಅಲ್ಲೇ ಇರೋದು, ನಮ್ಮ ಪೂರ್ವಿಕರ ಜಾಣ್ಮೆ..
ಸೊನ್ನೆ(೦) ಕಂಡುಹಿಡಿದಿದ್ದು ಭಾರತೀಯರು ಎಂದು ಎಲ್ಲರಿಗೂ ಗೊತ್ತು...
ನಮ್ಮ ಪೂರ್ವೀಕರು ಇನ್ನೂ ಬಹಳ ಮುಂದಿದ್ದರು..ಆದರೆ ನಮಗೆ ಅರ್ಥವಾಗಿಲ್ಲ..
10°3 ಅಂದರೆ 10x10x10=1000
********
||ಶ್ರೀ ವಿಷ್ಣುಸಹಸ್ರ ನಾಮ||
||श्री विष्णुसहस्र नाम||
||Sri VishNu sahasra nAma||
ಚಿಂತನೆ ॐ ನಾಮ- 106
भावनम् ॐ नामन् - 106
Thought ॐ Name - 106
***
ಸತ್ಯ:
सत्य:
satyah
*****
ॐ श्री ಸತ್ಯಾಯ ನಮ:
ॐ श्री सत्याय नम:
ॐ श्री satyAya namah
*****
ಸತ್ಯ: = ನಿಜವಾದ, ಶುದ್ಧ, ಸ್ವಾಭಾವಿಕವಾಗಿ, ನಿಷ್ಠಾವಂತ, ಪ್ರಾಮಾಣಿಕ, ಸದ್ಗುಣ, ಫಲಕಾರಿ, ಅಧಿಕೃತ, ಉತ್ತಮ, ಮಾನ್ಯ, ಯಥಾರ್ಥ, ಅಶ್ವತ್ಥವೃಕ್ಷ, ಅರಳಿಮರ, ಸತ್ಯಯುಗ, ಕೃತಯುಗ, ಸುವರ್ಣಯುಗ, ಸತ್ಯಲೋಕ, ಸೃಷ್ಟಿಪ್ರದ, ಸ್ಥಿತಿಪ್ರದ, ಸಂಹಾರಪ್ರದ, ನಿಯಾಮಕ, ಜ್ಞಾನಪ್ರದ, ಅಜ್ಞಾನಪ್ರದ, ಬಂದಪ್ರದ, ಮೋಕ್ಷಪ್ರದ, ಇತ್ಯಾದಿ.,
ಸೃಷ್ಟಿ-ಸ್ಥಿತಿ-ಸಂಹಾರ ನಿಯಾಮಕನಾಗಿ, ಜ್ಞಾನಾಜ್ಞಾನ-ಬಂದ-ಮೋಕ್ಷಗಳಿಗೆ ಕಾರಣನಾಗಿರುವ, ಸದ್ಗುಣ ಸ್ವರೂಪ ಜ್ಞಾನಾನಂದಮಯನಾದ ಭಗವಂತ "ಸತ್ಯ:" ಎಂದು ಕರೆಯ್ಪಡುತ್ತಾನೆ.
ಭಗವಂತನು ಸೃಷ್ಟಿಯ ಮೊದಲು, ಸೃಷ್ಟಿಯ ಕಾಲದಲ್ಲಿ ಹಾಗೂ ಸೃಷ್ಟಿಯ ನಂತರವೂ ಕೂಡ ಬದಲಾವಣೆ ಆಗದೆ ಒಂದೇ ರೀತಿಯಾಗಿರುತ್ತಾನೆ. ಆದುದರಿಂದ ಭಗವಂತನಿಗೆ "ಸತ್ಯ:" ಎಂದು ಹೆಸರು.
ಸತ್ + ತಿ + ಯಮ್ = ಸತ್ಯಂ.
'ಸತ್' ಎಂದರೆ ಪ್ರಾಣ; 'ತಿ' ಎಂದರೆ ಆಹಾರ; 'ಯಮ್' ಎಂದರೆ ಸೂರ್ಯ; ಆದ್ದರಿಂದ 'ಸತ್ಯಂ' ಎಂದರೆ ಎಲ್ಲರ ಅಸ್ತಿತ್ವಕ್ಕೆ ಕಾರಣವಾದ ಈ ಮೂರರ ರೂಪದಲ್ಲಿರುವವನು.
ಸತ್-ಚಿತ್-ಆನಂದ ಸ್ವರೂಪನಾಗಿರುವವನು;
ಸದ್ಗುಣಗಳಿಂದ ಪೂರ್ಣನಾದವನು;
ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳನ್ನು ಕೊಡುವವನು;
ಅವಿಕಾರಿಯು;
ಮರ್ತ್ಯ-ಅಮೂರ್ತ್ಯಗಳಿಗೆ ಸೇತುವೆಯಾಗಿರುವವನು;
ಸತ್ಯಸ್ವರೂಪನಾದ ಪರಮಾತ್ಮನು;
ಪ್ರಾಣ, ಅನ್ನ ಮತ್ತು ಆದಿತ್ಯರೂಪನಾದವನು;
ಸತ್ಪುರುಷರಲ್ಲಿ ಸಾಧುವಾದುವನು;
ಸದ್ಭಾವವನ್ನು ಹೊಂದಿಸುವವನು;
ವಿಷಯವಾದ ವಸ್ತುಗಳಲ್ಲಿ ಸಮನಾಗಿರುವ ಏಕವಸ್ತುವು;
ಸರ್ವಭೂತಗಳಲ್ಲಿಯೂ ಸಮನಾದ ಸ್ವರೂಪ, ಸ್ವಭಾವ ಮತ್ತು ಮನಸ್ಸುಳ್ಳವನು;
ಸಾರಭೂತನಾದವನು;
ರಾಗ-ದ್ವೇಷಾದಿಗಳಿಂದ ದೂಷಿತವಲ್ಲದ ಸಮನಾದ ಮನಸ್ಸುಳ್ಳವನು;
ಜ್ಞಾನಿಗಳಿಗೆ ಆತ್ಮನಾದವನು;
ಸತ್ಯಸ್ವರೂಪನು;
ಸತ್ತ್ವಗುಣಸಂಪನ್ನನಾದವನು;
ಸತ್ಯವನ್ನು ನುಡಿಯುವ ಧರ್ಮದ ರೂಪದಲ್ಲಿರುವವನು;
ಜಗತ್ತನ್ನು ಸೃಷ್ಟಿಸುವವನು;
ಸಾತ್ತ್ವಿಕಶಾಸ್ತ್ರದ ಪ್ರತಿಪಾದ್ಯನಾಗಿರುವವನು;
ಯಥಾರ್ಥವಾದ ವೈಭವವುಳ್ಳವನು;
ತಾನು ಸತ್ಯದಲ್ಲಿಯೂ-ಸತ್ಯವು ತನ್ನಲ್ಲಿಯೂ ಪ್ರತಿಷ್ಠಿತವಾಗಿರುವವನು;
ಎಲ್ಲ ವಸ್ತುವಿಚಾರಗಳನ್ನೂ ಸಮಗ್ರವಾಗಿ, ಪೂರ್ಣವಾಗಿ ತಿಳಿದಿರುವವನು;
ಸತ್ಯವಚನರೂಪವಾದ ಧರ್ಮವಾಗಿರುವವನು;
ಆದುದರಿಂದ ಭಗವಂತನಿಗೆ "ಸತ್ಯ:" ಎಂದು ಹೆಸರು.
"ಸತ್ಯೇ ಪ್ರತಿಷ್ಠಿತ: ಕೃಷ್ಣ: ಸತ್ಯಮತ್ರ ಪ್ರತಿಷ್ಠಿತಮ್|
ಸತ್ಯಾತ್ಸತ್ಯಂ ತು ಗೋವಿಂದ: ತಸ್ಮಾತ್ಸತ್ಯೋಪಿ ನಾಮತ:||"
"ಯಥಾರ್ಥವೈಭವ: ಸತ್ಯ: ಸರ್ವಶಾಸ್ತ್ರೇಷು ವಿಶ್ರುತ:||"
"ಸತ್ಸು ಸಾಧು: ಸತ್ಯ ಇತಿ||"
"ಸದ್ಭಾವಂ ಯಾಪಯೇದ್ಯಸ್ಮಾತ್ಸತ್ಯಂ ತತ್ತೇನ ಕಥ್ಯತೇ||"
"ಮನ್ವಾದಿಷ್ವಪಿ ಸಾಧುತ್ವಾತ್ಸತ್ಯ ಇತ್ಯಭಿಧೀಯತೇ||"
"ಸಮಾತ್ಮಾ ಸಮಚಿತ್ತತ:||"
"ಸತ್ಯಂ ಜ್ಞಾನಂ ಅನಂತಂ ಬ್ರಹ್ಮ||"
ಸತ್ಯವೆಂಬ ಪದವು ಸರ್ವೋತ್ತಮತ್ವ, ಪೂರ್ಣತ್ವ ಮತ್ತು ಸರ್ವಜ್ಞತ್ವ ಇವೆಲ್ಲವನ್ನೂ ಸಮಷ್ಟಿಯಾಗಿ ಹೇಳುವ ಒಂದೇ ಪದವಾಗಿದೆ.
satyah = True, Pure, Intrinsical, Faithful, Actual, Honest, Sincere, Virtuous, Effectual, Authentic, Truth, Successful, Promise, Water, Oath, Good, Real, Genuine, Valid, Realism, Peepul, Golden Age, satyayuga, satyalOka, etc.,
One Whose form is made up of prANa, matter and sun;
One Who is well-disposed towards the good;
One Who is well-disposed towards pious souls;
One Who is good in a supreme way;
HE Who is Real, and Who alone exists;
So BhagavAn is called "satyah".
'satya' is that which is the same in all three periods (Past, Present, and Future). BhagavAn is the only one who fits this definition, and so HE is called "satyah".
***
ಸಂಗ್ರಹ/संग्रह/Collection.
ವಿಜಯೇಂದ್ರ ಭಟ್. ಶಿವಮೊಗ್ಗ.
विजयेंद्र भट्. सिवमोग्ग.
S. V. Bhat. Shivamogga.
****
08-07-2018.
*****
No comments:
Post a Comment