SEARCH HERE

Wednesday, 2 January 2019

ಆರೋಗ್ಯ ನಿಂಬೆ and ನಿಂಬೆಹಣ್ಣಿನ ಸಿಪ್ಪೆ ಉಪಯೋಗಗಳು lemon and lemon skin



ನಿಂಬೆ ನಮ್ಮ ದಿನನಿತ್ಯದ ಆಹಾರದಲ್ಲಿ ಹಾಸುಹೊಕ್ಕಾಗಿರುವ ವಸ್ತು. ಬೀಜದಿಂದ ಪಡೆದ ಸಸಿಯನ್ನು ದೊಡ್ಡ ಕುಂಡಗಳಲ್ಲೂ ಬೆಳೆಸಬಹುದು. ನಿಂಬೂಕ, ಜಂಬೀರ ಮುಂದಾದ ಹೆಸರುಗಳನ್ನು ಪಡೆದಿರುವ ನಿಂಬೆ, ರುಚಿಯಲ್ಲಿ ಹುಳಿ, ಸಿ-ಜೀವಸತ್ವದ ಆಗರನಿಂಬೆಯ ಔಷಧೀಯ ಗುಣಗಳು ಅಪಾರವಾಗಿದ್ದು, ಹಸಿವನ್ನು ಹೆಚ್ಚಿಸಿ, ರಕ್ತವನ್ನು ವೃದ್ಧಿಸಿ, ಕೊಬ್ಬನ್ನು ಕರಗಿಸಿ, ದೇಹದ ಎಲ್ಲಾ ವ್ಯವಸ್ಥೆಗಳ ಮೇಲೂ ಪ್ರಭಾವ ಬೀರುವ ಗುಣವನ್ನು ಹೊಂದಿರುವಂತ ಅಮೃತಪ್ರದವಾಗಿದೆ. ಹಾಗಾದ್ರೇ.. ನಿಂಬೆಹಣ್ಣಿನ ಉಪಯೋಗವೇನು  ಎನ್ನುವ ಬಗ್ಗೆ ಕೆಳಗಿದೆ  ವಿವರಣೆ
ನಿಂಬೆ ಹಣ್ಣಿನ ಉಪಯೋಗ
1.ದೇಹಕ್ಕೆ ಬೇಕಾದ ಕಬ್ಬಿಣ ಜೇನುತುಪ್ಪದಲ್ಲಿದ್ದರೇ, ಈ ಕಬ್ಬಿಣವನ್ನು ರಕ್ತಕ್ಕೆ ಸೇರಿಸುವ ಸಾಮರ್ಥ್ಯ ನಿಂಬೆ ರಸದಲ್ಲಿರುವಂತ ಸಿ-ಜೀವಸತ್ವಕ್ಕಿದೆ. ಹೀಗಾಗಿ 2.ನಿಂಬೆರಸ-ಜೇನುತುಪ್ಪಗಳನ್ನು ನಿಯಮಿತವಾಗಿ ಸೇವಿಸುವುದರಿಂದ, ರಕ್ತ ವೃದ್ಧಿಯಾಗುತ್ತದೆ.
3.ಬೇಡದ ಕೊಬ್ಬನ್ನು ಕರಗಿಸುವ ನೈಸರ್ಗಿಕ ಪದಾರ್ಥಗಳಲ್ಲಿ ನಿಂಬೆಗೆ ಉತ್ಕೃಷ್ಟ ಸ್ಥಾನವಿದೆ.
ನಿಂಬೆರಸ ಮತ್ತು ಜೇನುತಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಬ್ಬು ಕರಗಿ, ಸ್ಮಾರ್ಟ್ ಆಗೋದಕ್ಕೆ ಸಹಾಯವಾಗಲಿದೆ.
4.ಸ್ನಾನದ ಕೊನೆಯಲ್ಲಿ ಒಂದೆರಡು ತೊಟ್ಟು ನಿಂಬೆರಸವನ್ನು ನೀರಿಗೆ ಹಾಕಿ, ತಲೆ ತೊಳೆದುಕೊಂಡರೂ ಸಾಕು, ಕೂದಲಿನ ಹೊಳಪು ಬಹಳ ಕಾಲದವರೆಗೂ ಇರಲಿದೆ.
5.ಒಂದು ಚಮಚ ನಿಂಬೆರಸಕ್ಕೆ ಒಂದು ಚಮಚ ಹಾಲಿನ ಕೆನೆ ಸೇರಿಸಿ, ಮುಖಕ್ಕೆ ಹಚ್ಚುವುದರಿಂದ ಚರ್ಮಮೃದುವಾಗಿ, ಕಾಂತಿ ಹೆಚ್ಚಾಗಲಿದೆ.
6.ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಹಲ್ಲು ಒಸಡುಗಳನ್ನು ಮೃದುವಾಗಿ ಉಜ್ಜುವುದರಿಂದ ಹಲ್ಲು ಮತ್ತು ಒಸಡು ಶುದ್ಧಿಯಾಗಲಿದೆ.
7.ನಿಂಬೆಯ ಎಲೆಗೆ ಅರಿಶಿನ ಸೇರಿಸಿ ಅರೆದು, ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ.
8.ನಿಂಬೆರಸ, ನಮ್ಮ ದೇಹದ ಎಲ್ಲಾ ವ್ಯವಸ್ಥೆಗಳ ಮೇಲೂ ಪ್ರಭಾವ ಬೀರುವ ದ್ರವ್ಯ. ಎಲ್ಲಾ ವ್ಯವಸ್ಷೆಗಳೂ ಸರಿಯಾಗಿ ಕೆಲಸ ಮಾಡುವಂತೆ ಪ್ರಚೋದಿಸುವ ವಸ್ತು.
9.ಉಗುರು ಬೆಚ್ಚಗಿನ ನೀರಿಗೆ ಒಂದು ಅರ್ಧ ಹೋಳು ನಿಂಬೆಹಣ್ಣು, ಸೋಡಾ, ಉಪ್ಪು ಸೇರಿಸಿ ಕಲಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಕಡಿಮೆ ಆಗಲಿದೆ.
10.ನಿಂಬೆ ರಸ, ಜೇನುತುಪ್ಪವನ್ನು ಬಿಸಿ ನೀರಿಗೆ ಬೆರೆಸಿ, ಕುಡಿಯುವುದರಿಂದ ಅಜೀರ್ಣ ನಿವಾರಣೆಯಾಗಲಿದೆ.
****

No comments:

Post a Comment