SEARCH HERE

Tuesday, 1 January 2019

ಮಾಧ್ವ ಸಂಪ್ರದಾಯ ಸೂತ್ರಗಳು madhwa sampradaya sutra customs


ಮಾಧ್ವ ಸ೦ಪ್ರದಾಯದ ನೂರಾರು ಸೂತ್ರಗಳು - ಭಾಗ -1 

1. ಬೆಳಿಗ್ಗೆ ಉಷ:ಕಾಲಕ್ಕೆ ಏಳುವುದು ಒ೦ದು ಸಾಧನೆ, ಎದ್ದ ತಕ್ಷಣ ಮುಖ ತೊಳೆದು ತುಳಸೀಗಿಡಕ್ಕೆ ನೀರು ಹಾಕಿ ಮೃತ್ತಿಕೆಯನ್ನು ಹಣೆಯಲ್ಲಿ (ಲಲಾಟ) ಹಚ್ಚಿಕೊಳ್ಳುವುದು ಒ೦ದು ಸಾಧನೆ.
2. ನ೦ತರ ಗೋಸ್ಮರಣೆ, ನವಗ್ರಹ ಸ್ಮರಣೆ ಮಾಡಿ ಸ್ನಾನಕ್ಕೆ ಹೋಗುವುದೊ೦ದು ಸಾಧನೆ. ಸ್ನಾನವನ್ನು ಸ೦ಕಲ್ಪ ಮಾಡಿ ಮಾಡುವುದು ಸಾಧನೆ. ಇಲ್ಲದಿದ್ದರೆ ಅದು ಕಾಗೆ ಸ್ನಾನ ಫಲವಿಲ್ಲ.
ವಿ.ಸೂ : - ಯಾವ ಯಾವ ಸಾಧನೆಯಿ೦ದ ಎಷ್ಟೆಷ್ಟು ಪುಣ್ಯ ಬರುತ್ತದೆ ಎಷ್ಟೆಷ್ಟು ಪಾಪ ಬರುತ್ತದೆ ಎ೦ಬುದನ್ನ ತಿಳಿಯಲು ಯಾವ ಮಾಪಕಗಳಿಲ್ಲ, ಇದು ನಿಜ, ಹಾಗೂ ಸತ್ಯ, ಆದರೆ ಸಾಧಕರು ತಮ್ಮ ಒಳಿತಿಗೋಸ್ಕರವಾಗಿ ಸತ್ಕರ್ಮಗಳನ್ನೇ ಮಾಡಬೇಕು. ಸತ್ಕರ್ಮ ಮಾಡುವಾಗ ವಿಸ್ಮರಣೆಯಿ೦ದ ಮಾಡಿದರೆ ಪಾಪದ ಫಲ ಎನ್ನುತ್ತಾರೆ. ಸ್ಮರಣಪೂರ್ವಕ ಮಾಡಿದರೆ ಪುಣ್ಯ ಎ೦ಬುದು ಜ್ಞಾನಿಗಳ ಮಾತು, ಇದರಲ್ಲಿ ನ೦ಬಿಕೆ ಪ್ರಾಮುಖ್ಯತೆ ಪಡೆದುಕೂಳ್ಳುತ್ತದೆ.
3. ತ್ರಿಕಾಲ ಸ೦ಧ್ಯಾ, ಜಪ, ತಪ, ಪಾರಾಯಣ ಸಾಧನೆ.
4. ದೇವರಪೂಜೆ ಕಡ್ಡಾಯ ಇದು ಒ೦ದು ಪ್ರಮುಖ ಸಾಧನೆ. ಆಜೀವ ಪರ್ಯ೦ತ ಮಾಡಲಿಲ್ಲ ಅ೦ದರೆ ಪಾಪ.
5. ದೇವರ ನೈವೇದ್ಯ, ವೈಶ್ವದೇವ ಹಸ್ತೋದಕ ಕಡ್ಡಾಯ ಇದನ್ನು ಅರಿತು ಮಾಡಲು ಪ್ರಯತ್ನಿಸಬೇಕು.
6. ದಿನದಿನಕ್ಕೂ ಶ್ರೀಹರಿಯ ವಿಚಾರ ತಿಳಿಯಲು ಉತ್ಸುಕತೆ ಇರುವುದು ಉತ್ತಮ ಸಾಧನೆ, ಜ್ಞಾನಕಾರ್ಯ ಎಲ್ಲೆ ನಡೆದರೂ ಪ್ರಯತ್ನಿಸಿ ಹೋಗುವುದು ಸಾಧನೆ. ನವವಿಧ ಭಕ್ತಿಯಲ್ಲಿ ಶ್ರವಣವೇ ಮೊದಲು, ಶ್ರವಣದಿ೦ದಲೇ ಉತ್ತಮ ಸಾಧನೆ. ನಮ್ಮಲ್ಲಿ ಅನೇಕರಲ್ಲಿ ಈ ಪ್ರವೃತ್ತಿ ಇಲ್ಲ. ಶ್ರವಣಜ್ಞಾನ ಬರಲಿಲ್ಲವೆ೦ದರೆ ಪಾಪ ಅ೦ತ ಬೇರೆ ಹೇಳಬೇಕಿಲ್ಲವಷ್ಟೇ.
7. ಅವಕಾಶ ಸಿಕ್ಕಾಗೆಲ್ಲಾ ನಮ್ಮ ಮತದ ಬಗ್ಗೆ, ನಮ್ಮ ತತ್ವದ ಬಗ್ಗೆ, ನಮ್ಮ ಸ೦ಪ್ರದಾಯದ ಬಗ್ಗೆ, ಗುರು ಪರ೦ಪರೆ ಬಗ್ಗೆ ಸರಿಯಾಗಿ ತಿಳಿದುಕೊ೦ಡವರಲ್ಲಿ ತಿಳಿಯುವುದು ಉತ್ತಮ ಸಾಧನೆ.
8. ವೈಷ್ಣವ ಚಿಹ್ನೆ ಧರಿಸುವುದು ಉತ್ತಮೋತ್ತಮ ಸಾಧನೆ, ಆದರೆ ಧರಿಸಿರುವವರನ್ನು ನೋಡಿ ಅಪಹಾಸ್ಯ ಮಾಡುವುದು ಪಾಪ ಸಾಧನೆ.
9. ಗೋಪಿಚ೦ದನ, ಶ್ರೀಗ೦ಧ, ಅ೦ಗಾರ, ಅಕ್ಷತೆ ಹಚ್ಚಿಕೊಳ್ಳುವುದು ವೈಷ್ಣವ ದೀಕ್ಷಾ ಸಾಧನೆ (ಬಹಳ ಮುಖ್ಯವಾದದ್ದು)
10. ತೀರ್ಥಯಾರ್ತೆ ಮಾಡುವುದು ಮತ್ತು ಇತರರಿಗೆ ತೀರ್ಥಯಾರ್ತೆ ಮಾಡಲು ಸಹಕಾರಿಯಾಗುವುದು ಸಾಧನೆ.
11. ಸಾಲಿಗ್ರಾಮ, ತ೦ದೆ, ತಾಯಿ, ಗುರು, ತುಳಸಿ, ನದಿ, ಸಮುದ್ರ, ಅಶ್ವಥವೃಕ್ಷ ಇವುಗಳನ್ನು ಪ್ರಥಮ ಆದ್ಯತೆ ಮೇರೆಗೆ ಗೌರವಿಸುವುದು ಪ್ರತ್ಯಕ್ಷ ದೇವರೆ೦ದು ತಿಳಿಯುವುದು ಸಾಧನೆ.
12. ದೇವರು, ಧರ್ಮ, ಸ೦ಪ್ರದಾಯ, ಹರಿ-ವಾಯು-ಗುರುಗಳಲ್ಲಿ ನ೦ಬಿಕೆ ಬಹು ದೊಡ್ಡ ಸಾದನೆ.
13. ನೈವೇದ್ಯವಿಲ್ಲದ ಭೋಜನ ಸೂಕರ ಭೋಜನ ಪಾಪ. ನಾವು ತಿನ್ನುವ ಅಡಿಗೆ ಭಗವ೦ತನಿಗೆ ಸಮರ್ಪಿಸಲಾಗದಿದ್ದರೂ, ಕೊನೆ ಪಕ್ಷ ಸಣ್ಣ ಅಗ್ಗೀಷ್ಟಿಕೆಯಲ್ಲಿ ಒ೦ದು ಪಾವಿನಷ್ಟಾದರೂ ಅನ್ನಕ್ಕೆ ಇಟ್ಟುಕೊ೦ಡು, ಸ೦ಧ್ಯಾ ಪೂಜೆ ಹೊತ್ತಿಗೆ ತನ್ನಷ್ಟಕ್ಕೆ ತಾನೆ ಆಗುತ್ತದೆ, ಅದನ್ನ ಶ್ರೀಹರಿಗೆ ತೋರಿಸಿ, ಊಟಕ್ಕೆ ಹಾಕಿ ತಿನ್ನೀರಿ. ಇದೂ೦ದು ದೊಡ್ಡ ಯಜ್ಞ. ಇದು ಪ್ರತಿಯೊಬ್ಬರಿಗೂ ಸಾಧ್ಯ. ಮನಸ್ಸು ಮಾಡುವುದೇ ಬಹುದೊಡ್ಡ ಸಾಧನೆ.
14. ಪ್ಯಾ೦ಟು, ಶರ್ಟು, ಬನೀನು ಹಾಕಿಕೊ೦ಡು ಊಟ ಮಾಡುವುದು, ಮೇಜಿನ ಮೇಲೆ ಊಟ, ನಿರ೦ತರ ನರಕಸದೃಶವಾದ ಸಾಧನೆ.
15. ನಮ್ಮ ಹಿರಿಯರು, ದಾಸರು, ಯತಿಗಳು ಕೊಟ್ಟಿರುವ ಕೊಡಿಗೆ ಬಗ್ಗೆ ಚಿ೦ತಿಸಿ, ಅವರ ಗ್ರ೦ಥ ಓದಿರಿ, ದೇವರನಾಮ, ಉಗಾಭೋಗ, ಸುಳ್ಹಾದಿ ಅಧ್ಯಯನ ಮಾಡಿರಿ, ತಿಳಿಯಿರಿ ಮತ್ತು ತಿಳಿಸಿರಿ.
16. ತ್ರಿಕಾಲ ಸ೦ಧ್ಯಾ ಆಗದಿದ್ದವರು 3 ಕಾಲವಾದರು ಮಾಡಿ, 2 ಕಾಲ ಆಗದಿದ್ದರೂ ಒಪ್ಪತ್ತಾದರೂ ಮಾಡಿ, ಅದೂ ಆಗದಿದ್ದವರು, ಆ ಕಾಲದಲ್ಲಿ ಸ್ಮರಿಸಿ ಮಾನಸಿಕ 3 ಅರ್ಘ 10 ಗಾಯತ್ರೀ ಜಪ ಮಾಡಿರಿ. ಒಪ್ಪತ್ತು ಮಾಡುವವರು 2 ಕಾಲಕ್ಕೆ ಬನ್ನಿರಿ. ಎರಡು ಕಾಲ ಸ೦ಧ್ಯಾ ಮಾಡುತ್ತಿರುವವರು ಮೂರು ಕಾಲ ಮಾಡಿರಿ. ಇದು ಸದಾ ಶ್ರೀ ಕೃಷ್ಣಾ ಬ್ಯಾ೦ಕನಲ್ಲಿ ಕಾಣದ ಹಣ ಸ೦ಗ್ರಹವಾಗುತ್ತಿರುತ್ತದೆ. ಒಪ್ಪತ್ತು ಮಾಡುವವರೂ ಕೊನೆ ಪಕ್ಷ 12 ಅರ್ಘೆ ಬಿಟ್ಟು 32 * 3 = 96 ಗಾಯತ್ರೀ ಜಪವನ್ನಾದರೂ ಮಾಡಿ ಉತ್ತಮ ಸಾಧನೆ.
17. ಪ್ರತಿನಿತ್ಯ ತಪ್ಪದೇ ಶ್ರೀರಾಘವೇ೦ದ್ರಗುರುಸಾರ್ವಭೌಮರು ರಚಿಸಿರುವ ಪ್ರಾತಃಸ೦ಕಲ್ಪಗದ್ಯ ಬೆಳಿಗ್ಗೆ ಹಾಗೂ ಸ೦ಜೆ ಸರ್ವಸಮರ್ಪಣ ಗದ್ಯವನ್ನು ಹೇಳುವುದನ್ನು ರೊಢಿ ಮಾಡಿಕೊಳ್ಳಿ, ಇದರಿ೦ದ ಪ್ರತಿ ನಿತ್ಯ ನೀವು ಮಾಡುವ ಕರ್ಮಗಳೆಲ್ಲವನ್ನು ಶ್ರೀ ಹರಿ-ವಾಯು-ಗುರುಗಳಿಗೆ ಸಮರ್ಪಿಸಿದ೦ತಾಗುತ್ತದೆ. 
18. ದಿನನಿತ್ಯ ಸಮಯಾವಕಾಶ ಸಿಕ್ಕಾಗಲೆಲ್ಲಾ, ಶ್ರೀ ವೇ೦ಕಟೇಶ ಸ್ತೋತ್ರ, ಕುಲದೇವತಾ ಸ್ತೋತ್ರಗಳು, ಅನೇಕ ಶ್ರೇಷ್ಠ ಯತಿಗಳಿ೦ದ ರಚಿತವಾದ ಶ್ರೀ ಹರಿಯ ಸ್ತುತಿಗಳು, ತಾರತ್ಯಮೋಕ್ತವಾಗಿ ದೇವಾತಾ ಸ್ತುತಿಗಳು, ಶ್ರೀ ವಾಯುಸ್ತುತಿ...ಇತ್ಯಾದಿ ಶ್ರೀ ಹರಿ-ವಾಯು-ಗುರುಗಳ ಸ್ತೋತ್ರಗಳನ್ನು ಪಠಿಸುವುದು ಅತ್ತ್ಯುತ್ತಮ ಸಾಧನೆ.
19. ಸ್ನಾನ ಮಾಡುವಾಗ ನೀರೂ ಜಡ, ನಾವು ಜಡ. ಆದ್ದರಿ೦ದ ಜಡಾಭಿಮಾನಿ ಸ೦ಕರುಷರೂಪಿ ಶ್ರೀಹರಿಯ ಸ್ಮರಿಸು. ಅವನಿಗೆ ಸ್ನಾನಮಾಡಿಸುತ್ತಿದ್ದೇನೆ ಎನ್ನಿ, ಫಲ ಜಾಸ್ತಿ.
20. ದೇವರ ದೀಪ ಹಚ್ಚುವಾಗ, ಅದರಲ್ಲಿ ಭಗವ೦ತನ 13 ರೂಪ ಇದೆ (ಹಣತೆ-ಬತ್ತಿ-ಎಣ್ಣೆ-ದೀಪದಕಡ್ಡಿ) ಎನ್ನಿರಿ, ಇದೊ೦ದು ಸಾಧನೆ.
21. ಶ್ರೀತುಳಸಿಯನ್ನು ಏರಿಸುವಾಗ ಅದರಲ್ಲಿ 5317 ಭಗವ೦ತನ ರೂಪ ಇದೆ ಎ೦ದು ತಿಳಿಯಿರಿ.
22. ಹೂವನ್ನು ಏರಿಸುವಾಗ ಅದರಲ್ಲಿ ಭಗವ೦ತನ 161 ರೂಪ ಇದೆ ಎ೦ದು ತಿಳಿಯಿರಿ. ಒಳೆಯ ಹೂ ಏರಿಸಿದರೆ ಒಳ್ಳೆಯ ಫಲ, ಕೆಟ್ಟ ಹೂ ಏರಿಸಿದರೆ ಅದಕ್ಕೆ ತಕ್ಕ ಫಲ. 
ಏರಿಸಬೇಕಾದ ಹೂಗಳು : ಮಲ್ಲಿಗೆ, ಜಾಜಿ, ಸೇವ೦ತಿಗೆ, ಇರುವ೦ತಿಗೆ, ಸುಗ೦ಧರಾಜ, ಕಣಗೆಲೆ, ಸ೦ಪಿಗೆ, ದವನ, ಗುಲಾಬಿ, ಪಾರಿಜಾತ, ನ೦ದಿಬಟ್ಲು, ಕ್ಯಾದಿಗೆ...ಇತ್ಯಾದಿ. 
ಏರಿಸಬಾರದ ಹೂಗಳು : ಚೆ೦ಡು-ಕಾಕಡ, ತು೦ಬೆ ಹೂ, ಕನಕಾ೦ಬರ, ಎಕ್ಕದ ಹೂ, ಸ್ಪಟಿಕ ಏರಿಸಿದರೆ ನರಕ.
23. ನೈವೇದ್ಯ ಅ೦ದರೆ, ಪ್ರತಿಮಾ ಸಾಲಿಗ್ರಾಮದಲ್ಲಿರುವ ನೈವೇದ್ಯದ ಪದಾರ್ಥಗಳಲ್ಲಿರುವ ಹಾಗೂ ನೈವೇದ್ಯ ಮಾಡುವವರಲ್ಲಿ ಅ೦ತರ್ಯಾಮಿಯಾಗಿರುವ ಬಿ೦ಬನೇ ಶ್ರೀಹರಿ ಎ೦ದು ಐಕ್ಯ ಚಿ೦ತನೆಯೇ ನೈವೇದ್ಯ, ಅರಿಯುವುದು ಉತ್ತಮ ಸಾಧನೆ.
ಸಾಲಿಗ್ರಾಮದಲ್ಲಿ 5335 ರೂಪದಿ೦ದ ಇದ್ದಾನೆ
ಪ್ರತಿಮಾದಲ್ಲಿ 517 ರೂಪದಿ೦ದ ಇದ್ದಾನೆ.
ನೀರಿನಲ್ಲಿ 24 ರೂಪದಿ೦ದ ಇದ್ದಾನೆ.
ಶ್ರೀಗ೦ಧದಲ್ಲಿ 403 ರೂಪದಿ೦ದ ಇದ್ದಾನೆ.
ಉಪಕರಣದಲ್ಲಿ 52115 ರೂಪದಿ೦ದ ಇದ್ದಾನೆ
24. ನಾನು, ನಮ್ಮದು ಎ೦ಬ ಮ೦ತ್ರ ಬಿಟ್ಟು, ನೀನು ನಿನ್ನದು ಎ೦ಬ ಮ೦ತ್ರ ಉತ್ತಮ ಸಾಧನೆ.
25. ಜೀವರಿಗೆ ಕಷ್ಟ, ಸುಖ, ದು:ಖ, ನೋವು, ನಲಿವು ಇತ್ಯಾದಿ ಹೇಗೆ ಬರುತ್ತದೆ, ಬ೦ದಿದೆ ? ಅ೦ದರೆ ಜೀವರ ಯೋಗ್ಯತೆ, ಜೀವರ ಗುಣ, ಜೀವರು ಮಾಡಿರುವ ಕರ್ಮ ಇದರಿ೦ದ ಸಾಧನೆ ಮಾಡಿಸಿರುತ್ತಾನೆ ಎ೦ದು ತಿಳಿಯುವುದೇ ಸಾಧನೆ.
***

ಹರಿ ಸ್ಮರಣೆ ಮಾಡೊ ನಿರಂತರ 
1) ಪ್ರಾತಃ ಕಾಲದಲ್ಲಿ ಏಳುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ನಾರಾಯಣಾಯ ನಮಃ 
2) ಮಲಮೂತ್ರ ವಿಸರ್ಜನೆ ಕಾಲದಲ್ಲಿ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೇಶವಾಯನಮಃ
3) ಹಲ್ಲು ಉಜ್ಜುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಹರಯೇ ನಮಃ
3) ಮುಖ ತೊಳೆಯುವಾಗ ಯಾರ ಸ್ಮರಣೆ ಮಾಡಬೇಕು?
ಜ,:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಮಾಧವಾಯ ನಮಃ 
4) ಆಕಳಿಗೆ ನಮಸ್ಕರಿಸುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಉದ್ಗೀತಾಭಿನ್ನ ಶ್ರೀ ಕೃಷ್ಣಾಯ ನಮಃ 
5) ತುಲಸೀದೇವಿಗೆ ನಮಸ್ಕರಿಸುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣುವೇ ನಮಃ
6) ಸ್ನಾನಮಾಡುವಾಗ  ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ತ್ರಿವಿಕ್ರಮ ವರಾಹಭಿನ್ನ ದ್ರವರೂಪಿ ಶ್ರೀ ಹರಯೇ ನಮಃ
7) ವಸ್ತ್ರ ಉಡುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಉಪೇಂದ್ರಾಯ  ನಮಃ 
8) ನಿರ್ಮಾಲ್ಯತೀರ್ಥ ತೆಗೆದು ಕೊಳ್ಳುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ವಿಶ್ವಾಯ ನಮಃ , ತೈಜಸಾಯ ನಮಃ , ಪ್ರಾಜ್ಞಾಯ ನಮಃ 
9) ನಿರ್ಮಾಲ್ಯತೀರ್ಥ ಪ್ರೋಕ್ಷಿಸಿ ಕೊಳ್ಳುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ತುರ್ಯಾಭಿನ್ನ ಮುಕುಂದಾಯ ನಮಃ 
10) ಸಂಧ್ಯಾವಂದನೆ ಮಾಡುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರಾಮಾಯ ನಮಃ
11) ಶಂಖೋದಕವನ್ನು  ಪ್ರೋಕ್ಷಿಸಿ ಕೊಳ್ಳುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಮುಕುಂದಾಯ ನಮಃ 
12)ತೀರ್ಥ ತೆಗೆದು ಕೊಳ್ಳುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರಾಮಾಯ ನಮಃ , ಶ್ರೀ ಕೃಷ್ಣಾಯ ನಮಃ , ಶ್ರೀ ವೇದವ್ಯಾಸಾಯ ನಮಃ 
13) ಭಜನೆ ಮಾಡುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಯೋಗೀಶ್ವರಾಯ ನಮಃ 
14)ತುಲಸಿಯನ್ನು ಧರಿಸುವಾಗ, ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರಾಮಾಯ ನಮಃ 
15) ಗುರು, ಹಿರಿಯರಿಗೆ ನಮಸ್ಕರಿಸುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಗರುಡಾಂತರ್ಗತ  ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಹರಯೇ ನಮಃ 
16) ಪ್ರದಕ್ಷಿಣೆ ಮಾಡುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಶೇಷಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಹರಯೇ ನಮಃ 
17) ದಾನ ಕೊಡುವಾಗ ಯಾರ ಸ್ಮರಣೆ ಮಾಡಬೇಕು?
ಜ :- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಪರಶುರಾಮಾಯ ನಮಃ 
18)ದಾನ ತೆಗೆದು ಕೊಳ್ಳುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಾಮನಾಯ ನಮಃ 
19) ಹಾದಿಯಲ್ಲಿ ನಡೆಯುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಭೂವರಾಹಾಯ ನಮಃ 
20) ನದಿಗಳನ್ನು ದಾಟುವಾಗ, ನೀರಿನಲ್ಲಿ ಇರುವಾಗ ಯಾರ ಸ್ಮರಣೆ ಮಾಡಬೇಕು?
ಜ;- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಮತ್ಸ್ಯಾಯ ನಮಃ
21) ಅಡವಿಯಲ್ಲಿ ಪ್ರಯಾಣಿಸುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ನಾರಸಿಂಹಾಯ ನಮಃ 
22) ಆಕಾಶದಲ್ಲಿ ( Airoplane) ಪ್ರಯಾಣಿಸುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ತ್ರಿವಿಕ್ರಮಾಯ ನಮಃ 
23) ಪರ್ವತದಲ್ಲಿ ನಡೆಯುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಪರಶುರಾಮಾಯ ನಮಃ 
24) ರೋಗಾದಿಗಳು ಬಂದಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಧನ್ವಂತರಯೇ ನಮಃ 
25)ಔಷಧಿ ತೆಗೆದು ಕೊಳ್ಳುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ವೈದ್ಯರೂಪ ನಾರಾಯಣಾಯ ನಮಃ 
26) ಹೂವು ಮುಗಿಯುವಾಗ ಯಾರ ಸ್ಮರಣೆ ಮಾಡಬೇಕು? ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕಪಿಲಾಯ ನಮಃ 
27) ಮಗುವನ್ನು ಮುದ್ದಿಸುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾಯ ನಮಃ 
28) ತಾಂಬೂಲ ಮೆಲ್ಲುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಪ್ರದ್ಯುಮ್ನಾಯ ನಮಃ 
29) ಮಲಗುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಪದ್ಮನಾಭಾಯ ನಮಃ 
30) ಯಜ್ಞೋಪವೀತ ಧಾರಣೆ ಮಾಡುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ವಾಮನಾಯ ನಮಃ
31) ಶ್ರೀ ಹರಿಗೆ ಅನ್ನವನ್ನು ಯಾರು ಸಿದ್ಧ ಮಾಡುತ್ತಾರೆ?
ಜ:- ಸರಸ್ವತೀ ದೇವಿ , ಬ್ರಹ್ಮದೇವರುಸಿದ್ಧ ಮಾಡುತ್ತಾರೆ 
32) ಶ್ರೀ ಹರಿಗೆ ತೊವ್ವೆಯನ್ನು ಯಾರು ಸಿದ್ಧ ಮಾಡುತ್ತಾರೆ?
ಜ:- ಶ್ರೀದೇವಿಸಿದ್ಧ ಮಾಡುತ್ತಾಳೆ
33) ಶ್ರೀ ಹರಿಗೆ ಭಕ್ಷ್ಯಗಳನ್ನು ಯಾರು ಸಿದ್ಧ ಮಾಡುತ್ತಾರೆ?
ಜ:- ಬ್ರಹ್ಮದೇವರುಸಿದ್ಧ ಮಾಡುತ್ತಾರೆ 
34) ಶ್ರೀ ಹರಿಗೆ ಪರಮಾನ್ನವನ್ನು ಯಾರು ಸಿದ್ಧ ಮಾಡುತ್ತಾರೆ?
ಜ:- ಭಾರತೀದೇವಿ ಸಿದ್ಧ ಮಾಡುತ್ತಾರೆ 
35) ಶ್ರೀ ಹರಿಗೆ ಕಾಯಿಪಲ್ಯ ಗೀಳನ್ನು ಸಿದ್ಧ ಮಾಡುತ್ತಾರೆ?
ಜ:- ಚಂದ್ರ ಸಿದ್ಧ ಮಾಡುತ್ತಾನೆ 
36) ಅಡಿಗೆ ಮಾಡುವವರಲ್ಲಿ ಯಾವ ದೇವತೆ ಇರುತ್ತಾರೆ? ಯಾವ ಪರಮಾತ್ಮ ಅಂತರ್ಯಾಮಿ ಯಾಗಿ ಇರುತ್ತಾರೆ?
ಜ:- ಅಡಿಗೆ ಮಾಡುವವರಲ್ಲಿ ಶ್ರೀದೇವಿ ಇರುತ್ತಾಳೆ . ಅವಳಲ್ಲಿ ವಿಶ್ವಂಭರ ನಾಮಕ ಪರಮಾತ್ಮ ಅಂತರ್ಯಾಮಿ ಯಾಗಿ *ಇರುತ್ತಾರೆ
37) ನೈವೇದ್ಯಕ್ಕಾಗಿ ಆಹಾರ ಪದಾರ್ಥಗಳನ್ನು ಇಡುವ ಮಂಡಲದಲ್ಲಿ ಯಾವ ದೇವತೆ ಇರುತ್ತಾರೆ? ಅವಳ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ನೈವೇದ್ಯಕ್ಕಾಗಿ ಆಹಾರ ಪದಾರ್ಥಗಳನ್ನು ಇಡುವ ಮಂಡಲದಲ್ಲಿ ಭೂದೇವಿ ಇರುತ್ತಾಳೆ . ಆವಳ ಅಂತರ್ಯಾಮಿ ಯಾಗಿ ಭೂವರಾಹ ದೇವರು ಇರುತ್ತಾರೆ 
38) ಶ್ರೀ ಹರಿಗೆ ಅಡಿಗೆ ಮಾಡಿದ ಪಾತ್ರೆಗಳನ್ನು ಶುದ್ಧ ಮಾಡುವವರು ಯಾರು?
ಜ:- ಕರ್ಮಾಭಿಮಾನಿಯಾದ  ಪುಷ್ಕರ ಪಾತ್ರೆಗಳನ್ನು ಶುದ್ಧ ಮಾಡುತ್ತಾನೆ 
39) ಶ್ರೀ ಹರಿಯ ನೈವೇದ್ಯಕ್ಕಾಗಿ ಮಾಡಿದ ಪದಾರ್ಥಗಳ ಮೇಲೆ ಹೊದಿಸುವ ಬಟ್ಟೆಯಲ್ಲಿ ಯಾವ ದೇವತೆ ಇರುತ್ತಾರೆ? ಅವರ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ಆಹಾರ ಪದಾರ್ಥಗಳನ್ನು ಮೇಲೆ ಹೊದಿಸುವ ಬಟ್ಟೆಯಲ್ಲಿ ಗಣಪತಿ , ಅವರ ಅಂತರ್ಯಾಮಿ ಯಾಗಿ ಸನತ್ಕುಮಾರ ಇರುತ್ತಾರೆ 
40) ಆಹಾರ ಪದಾರ್ಥಗಳಲ್ಲಿ ಹಾಕುವ ತುಳಸಿಯಲ್ಲಿ ಯಾವ ದೇವತೆ ಇರುತ್ತಾರೆ? ಅವಳ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ಆಹಾರ ಪದಾರ್ಥಗಳಲ್ಲಿ ಹಾಕುವ ತುಳಸಿಯಲ್ಲಿ ಶ್ರೀ ರಮಾದೇವಿ ಇರುತ್ತಾಳೆ. ಅವಳ ಅಂತರ್ಯಾಮಿ ಯಾಗಿ ಕಪಿಲ ನಾಮಕ ಪರಮಾತ್ಮ ಇರುತ್ತಾರೆ
41)  ನೈವೇದ್ಯ ಇಟ್ಟಾಗ ಹಾಕಿದ ಪರದೆಯಲ್ಲಿ ಯಾವ ದೇವತೆ ಇರುತ್ತಾರೆ? ಅವರ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ನೈವೇದ್ಯ ಇಟ್ಟಾಗ ಹಾಕಿದ ಪರದೆಯಲ್ಲಿ ವಿಷ್ಟಕ್ಸೇನ ಇರುತ್ತಾರೆ . ಅವರ ಅಂತರ್ಯಾಮಿ ಯಾಗಿ ಪುರುಷ ನಾಮಕ ಪರಮಾತ್ಮ ಇರುತ್ತಾರೆ 
42) ಅಡಿಗೆ ಮಾಡುವ ಒಲೆಗಳಲ್ಲಿ ಯಾವ ದೇವತೆ ಇರುತ್ತಾರೆ? ಅವರ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ಅಡಿಗೆ ಮಾಡುವ ಒಲೆಗಳಲ್ಲಿ ಅಗ್ನಿದೇವರು , ಅವರ ಅಂತರ್ಯಾಮಿ ಭಾರ್ಗವ ನಾಮಕ ಪರಮಾತ್ಮ ಇರುತ್ತಾರೆ 
43) ಕುರುಳು, ಕಟ್ಟಿಗೆ, ಇದ್ದಲುಗಳಲ್ಲಿ ಯಾವ ದೇವತೆ ಇರುತ್ತಾರೆ? ಅವರ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ವಸಂತ ನಾಮಕ ದೇವತೆ , ಅವರ ಅಂತರ್ಯಾಮಿ ಯಾಗಿ  ಭಾರ್ಗವ ನಾಮಕ ಪರಮಾತ್ಮ ಇರುತ್ತಾರೆ 
44) ಅಡಿಗೆ ಮಾಡುವ ಪಾತ್ರೆಗಳಲ್ಲಿ ಯಾವ ದೇವತೆ ಅವರ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ವಾರುಣಿ ನಾಮಕ ದೇವತೆ , ಅವರ ಅಂತರ್ಯಾಮಿ ಯಾಗಿ ಆನಂತ ನಾಮಕ ಪರಮಾತ್ಮ ಇರುತ್ತಾರೆ 
45) ಭೋಜನ ಮಾಡುವ ಬಾಳೆಎಲೆ ಮುಂತಾದವುದಗಳಲ್ಲಿ  ಯಾವ ದೇವತೆ, ಅವರ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ದುರ್ಗಾದೇವಿ , ಅವರ ಅಂತರ್ಯಾಮಿ ಯಾಗಿ ಸತ್ಯ ನಾಮಕ ಪರಮಾತ್ಮ ಇರುತ್ತಾರೆ 
46) ತುಪ್ಪದ ಬಟ್ಟಲಿನಲ್ಲಿ ಯಾವ ದೇವತೆ ಇರುತ್ತಾರೆ? ಅವರ ಅಂತರ್ಯಾಮಿ ಯಾಗಿ ಯಾವ ಪರಮಾತ್ಮ ಇರುತ್ತಾರೆ?
ಜ:- ಸೌಪರ್ಣಿ ನಾಮಕ ದೇವತೆ , ಅವರ ಅಂತರ್ಯಾಮಿ ಯಾಗಿ ದತ್ತ ನಾಮಕ ಪರಮಾತ್ಮ ಇರುತ್ತಾರೆ 
47) ಪರಮಾನ್ನವನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಕೃತಿಪತಿ ಪ್ರದ್ಯುಮ್ನನ ಸ್ಮರಣೆ ಮಾಡಬೇಕು 
48) ಅನ್ನವನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಮಾಯಾಪತಿ ವಾಸುದೇವನನ್ನು ಸ್ಮರಣೆ ಮಾಡಬೇಕು
49) ಕಾಯಿಪಲ್ಯಗಳನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ವಾಮನ ನಾಮಕ ಪರಮಾತ್ಮನನ್ನು , ಧನ್ವಂತರಿಯನ್ನು ಸ್ಮರಣೆ ಮಾಡಬೇಕು 
50) ತೊವ್ವೆ,ಹುಳಿಗಳನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಗರುಡಾರೂಢ ನಾರಾಯಣನನ್ನು ಸ್ಮರಣೆ ಮಾಡಬೇಕು
51) ಭಕ್ಷ್ಯಗಳನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಜಯಾಪತಿ ಸಂಕರುಷಣ , ಅಚ್ಯುತ ರನ್ನು ಸ್ಮರಣೆ ಮಾಡಬೇಕು 
52) ಬೆಣ್ಣೆ,ತುಪ್ಪಗಳನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಶಾಂತಿಪತಿ ಅನಿರುದ್ಧ , ತಾಂಡವ ಕೃಷ್ಣರನ್ನು ಸ್ಮರಣೆ ಮಾಡಬೇಕು 
53) ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ವೈಕುಂಠ ಪತಿ ವೆಂಕಟೇಶನನ್ನು ಸ್ಮರಣೆ ಮಾಡಬೇಕು 
54)ಮೊಸರನ್ನವನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಶ್ರೀನಿವಾಸ ನನ್ನೀ ಸ್ಮರಣೆ ಮಾಡಬೇಕು 
55) ಹಣ್ಣುಗಳನ್ನು ತಿನ್ನುವಾಗ ಯಾರ ಸ್ಮರಣೆ ಮಾಡಬೇಕು?
ಜ:- ಬಾಲಕೃಷ್ಣನನ್ನು ಸ್ಮರಣೆ ಮಾಡಬೇಕು 
56) ನೀರು ಕುಡಿಯುವಾಗ ಯಾರ ಸ್ಮರಣೆ ಮಾಡಬೇಕು?
ಜ:- ವಿಷ್ಣುವನ್ನು ಸ್ಮರಣೆ ಮಾಡಬೇಕು 
57) ತುತ್ತು ತುತ್ತಿಗೂ ಯಾರ ಸ್ಮರಣೆ ಮಾಡಬೇಕು?
ಜ:- ಗೋವಿಂದಾ , ಗೋವಿಂದಾ ಎಂದು ಸ್ಮರಣೆ ಮಾಡಬೇಕು 
58)ಮಾನವನ ದೇಹದಲ್ಲಿ ಎಷ್ಟು ಅಗ್ನಿಗಳಿವೆ?
ಅವು ಯಾವುವು?
ಜ:- ಮಾನವನ ದೇಹದಲ್ಲಿ ಐದು ( 5 ) ಅಗ್ನಿಗಳಿವೆ 
1. ಬಾಯಿಯಲ್ಲಿ -- ಆವಹನೀಯಾಗ್ನಿ 
2. ಹೃದಯದಲ್ಲಿ  ಗಾಹ೯ಸ್ಪತ್ಯಾ 
3. ನಾಭಿಯಲ್ಲಿ 
 ದಕ್ಷಿಣಾಗ್ನಿ 
4. ನಾಭಿಯ ಬಲಭಾಗದಲ್ಲಿ 
 ಶರಭಿಅಗ್ನಿ 
5. ನಾಭಿಯ ಎಡಭಾಗದಲ್ಲಿ 
 ಅವಶರಭಿ ಅಗ್ನಿ 
59) ಊಟ ಮಾಡುವ ವ್ಯಕ್ತಿಯ ಕಣ್ಣುಗಳಲ್ಲಿ ಯಾವ ಪರಮಾತ್ಮ ಇದ್ದು ಯಾವ ಕಾರ್ಯವನ್ನು ಮಾಡುತ್ತಾನೆ?
ಜ:- ಊಟ ಮಾಡುವ ವ್ಯಕ್ತಿಯ ಕಣ್ಣುಗಳಲ್ಲಿ ಕಪಿಲ ನಾಮಕ ಪರಮಾತ್ಮ ಇದ್ದು , ಆಹಾರ ಪದಾರ್ಥಗಳನ್ನು ನೋಡುವನು 
60) ಮೂಗಿನಲ್ಲಿ ಯಾವ ಪರಮಾತ್ಮ ಇದ್ದು ಯಾವ ಕಾರ್ಯವನ್ನು ಮಾಡುತ್ತಾನೆ?
ಜ:- ಮೂಗಿನಲ್ಲಿ ನರಹರಿಯು ಇದ್ದು ಪದಾರ್ಥಗಳನ್ನು ಮೂಸಿ ನೋಡುವನು
***
ದೇವತಾ ತಾರತಮ್ಯ

1ನೆ ಕಕ್ಷ ಶ್ರೀ ಹರಿ 
2 ನೆ ಕಕ್ಷ ಲಕ್ಷ್ಮೀದೇವಿ
3ನೆ ಕಕ್ಷ ಬ್ರಹ್ಮ, ವಾಯು ದೇವರು
4ನೆ ಕಕ್ಷ ಸರಸ್ವತೀ ದೇವಿ, ಭಾರತೀ ದೇವಿ
5 ನೆ ಕಕ್ಷ ಗರುಡ, ಶೇಷ, ರುದ್ರದೇವರು
6 ನೆ  ಕಕ್ಷ ಜಾಂಬವತಿ, ಭದ್ರಾ, ನೀಲಾ, ಕಾಳಿಂದಿ, ಮಿತ್ರವಿಂದಾ ಮತ್ತು ಲಕ್ಷಣಾದೇವಿ
7 ನೆ ಕಕ್ಷ ಸೌಪರ್ಣೀ ದೇವಿ ವಾರುಣೀದೇವಿಮತ್ತು ಪಾರ್ವತೀ ದೇವಿ
8 ನೆ ಕಕ್ಷ ಇಂದ್ರ,ಕಾಮ
9 ನೆ ಕಕ್ಷ ಅಹಂಕಾರಿಕ ಪ್ರಾಣದೇವರು
10 ನೆ ಕಕ್ಷ ಸ್ವಾಯಂಭು, ದಕ್ಷ ಪ್ರಜಾಪತಿ, ಬೃಹಸ್ಟತ್ಯಾಚಾರ್ಯರು ಅನಿರುದ್ಧದೇವರು ಶಚೀದೇವಿ ಮತ್ತು ರತೀದೇವಿ
11 ನೆ ಕಕ್ಷ ಪ್ರವಾಹ ವಾಯು ದೇವರು
12 ನೆ ಕಕ್ಷ ಸೂರ್ಯ, ಚಂದ್ರ,ಯಮದೇವರು ಮತ್ತು ಶತರೂಪಾ ದೇವಿ
13 ನೆ ಕಕ್ಷ ವರುಣದೇವರು
14 ನೆ ಕಕ್ಷ ನಾರದ ಮಹರ್ಷಿ
15 ನೆ ಕಕ್ಷ ಅಗ್ನಿದೇವರು, ಭೃಗು ಮಹರ್ಷಿ ಮತ್ತು ಪ್ರಸೂತಿ ದೇವಿ 
16 ನೆ ಕಕ್ಷ ಬ್ರಹ್ಮ ಪುತ್ರರು:- ಮರೀಚಿ, ಅತ್ರಿ,ಅಂಗೀರಸ, ಪುಲಸ್ಥ್ಯ ಪುಲಹ,ಕ್ರತು,
ವಶಿಷ್ಟ, ವೈವಸ್ವತ ಮನು ಮತ್ತು ವಿಶ್ವಾಮಿತ್ರರು
17 ನೆ ಕಕ್ಷ ಮಿತ್ರನಾಮಕ ಸೂರ್ಯ, ನಿರಋತಿ,ಪ್ರಾವಹೀದೇವಿ ಮತ್ತು ತಾರಾದೇವಿ
18 ನೆ ಕಕ್ಷ ವಿಷ್ವಕ್ಸೇನ, ಗಣಪತಿ, ಅಶ್ವಿನೀ ದೇವತೆಗಳು 
19 ನೆ ಕಕ್ಷ ಕರ್ಮಜದೇವತೆಗಳು
20 ನೆ ಕಕ್ಷ ಮೇಘಾಭಿಮಾನಿ ಪರ್ಜನ್ಯ,ವರುಣ ಪತ್ನಿ ಗಂಗಾ, ಯಮ ಪತ್ನಿ ಶ್ಯಾಮಲಾ ದೇವಿ, ಸೂರ್ಯ ಪತ್ನಿ ಸಂಜ್ಞಾ ದೇವಿ, ಚಂದ್ರ ಪತ್ನಿ ರೋಹಿಣಿ, ಅನಿರುದ್ಧ ಪತ್ನಿ ವಿರಾಡುಷಾದೇವಿ
21 ನೆ ಕಕ್ಷ ಕೂರ್ಮದಿ ಅನಾಖ್ಯಾದಿ ದೇವತೆಗಳು
22 ನೆ ಕಕ್ಷ ಸ್ವಾಹಾ ದೇವಿ , ಮಂತ್ರಾಭಿಮಾನಿನಿ ಅಗ್ನಿಪತ್ನಿಯರು
23 ನೆ ಕಕ್ಷ  ಜಲಾಭಿಮಾನಿ ಬುಧ
24 ನೆ ಕಕ್ಷ ದೇವಕಿ ದೇವಿ, ಯಶೋದಾ ದೇವಿ, ಉಷಾದೇವಿ (ಅಶ್ವಿನೀ ಪತ್ನಿ) ನಾಮಾಭಿಮಾನಿ
25 ನೆ ಕಕ್ಷ ಶನೈಶ್ಚರ,ಧರಾದೇವಿ
26 ನೆ ಕಕ್ಷ ಪುಷ್ಕರ ( ಕರ್ಮಾಭಿಮಾನಿ)
 27ನೆ ಕಕ್ಷ ಅಜಾನಜಾ ದೇವತೆಗಳು, ಸಿದ್ಧರು,ಸಾಧ್ಯರು, ಗುಹ್ಯಕರು, ಕಿನ್ನರರು, ಕಿಂಪುರುಷರು,ಚಾರಣರು, ಯಕ್ಷರು, ರಾಕ್ಷಸರು, ವಿದ್ಯಾಧರರು, ಅಸುರರು, ಗಂಧರ್ವರು ಅಪ್ಸರಾಸ್ತ್ರೀಯರು, ಶ್ರೀ ಕೃಷ್ಣಾಂಗ ಸಂಗಿಗಳಾದ ಗೋಪಿಕಾ ಸ್ತ್ರೀಯರು , ಶತೋನಶತ ಕೋಟಿ ಋಷಿಗಳು 
28 ನೆ ಕಕ್ಷ ಚಿರಪಿತೃಗಳು
29 ನೆ ಕಕ್ಷ ದೇವಗಂಧರ್ವರು
30 ನೆ ಕಕ್ಷ ಮನುಷ್ಯ ಗಂಧರ್ವರು
31 ನೆ ಕಕ್ಷ ಕ್ಷಿತಿಪತಿ
32 ನೆ ಕಕ್ಷ ಮನುಷ್ಯೋತ್ತಮರು
33 ನೆ ಕಕ್ಷ ಭೂಚರ ( ಪಶುಗಳು) 
ಖೇಚರ  (ಪಕ್ಷಿಗಳು) 
ಜಲಚರ ( ಕ್ರಿಮಿ ಕೀಟಕಗಳು
ಸ್ಥಾವರ ಜೀವಿಗಳು, ವೃಕ್ಷ,ಲತಾ ಗುಲ್ಮಗಳು
  ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು🙏🙏
***

1)ಲಕ್ಷ್ಮೀದೇವಿ ಯಾವ ಸಮಯದಲ್ಲಿ ಉದ್ಭವಿಸಿದಳು?
 ಜ:- ಕ್ಷೀರ ಸಾಗರ ಮಥನಕಾಲದಲ್ಲಿ *ಉದ್ಭವಿಸಿದಳು.
2)ಬೊಮ್ಮಾನ ಪ್ರಳಯದಲ್ಲಿ ಎಂಬುವ ಪದ್ಯದಲ್ಲಿ "ಸುಮ್ಮಾನೆ ಮಲಗಿಪ್ಪ " ಎಂದಿದ್ದಾರೆ?
ಇಲ್ಲಿ ಸುಮ್ಮಾನೆ ಎಂದರೆ ಅರ್ಥ ಏನು?
ಜ:- ಸುಮ್ಮಾನೆ ಅಂದರೆ  ಸಂತೋಷದಿಂದ , ತೃಪ್ತಿ ಎಂದು ಅರ್ಥ .
3)ಸುರಾಸುರರಿಗೆ ಸಮುದ್ರಮಥನ ಎಷ್ಟು ಬಾರಿ ನಡೆಯುತು?
ಜ:- ಎರಡು ಬಾರಿ ನಡೆಯುತು 
4) ಸುರಾಸುರರಿಗೆ ಸಮುದ್ರಮಥನ ಯಾವ ಯಾವ ಸಮಯದಲ್ಲಿ ನಡೆಯುತು?
ಜ:- ರೈವತ ಮನ್ವಂತರದಲ್ಲಿ ಮತ್ತು ವೈವಸ್ವತ ಮನ್ವಂತರದಲ್ಲಿ ನಡೆಯುತು .
5) ಲಕ್ಷ್ಮೀ ಶೋಭಾನೆ ಯಾವ ವಿಷಯವನ್ನು ಸ್ಪಷ್ಟಗೊಳಿಸುತ್ತದೆ?
ಜ:- ಶ್ರೀ ಹರಿಯ ಸರ್ವೋತ್ತಮತ್ವನ್ನು ತಿಳಿಸುತ್ತದೆ 
6) ಕೆಲವರು ತಲೆಯೂರಿ ತಪಗೈದು ಪುಣ್ಯವ ಗಳಿಸಿದ್ದರೂ ಫಲಿತಇಲ್ಲ ಎಂದು ಲಕ್ಷ್ಮೀದೇವಿ ಯಾರನ್ನು ಕಂಡು ನಿರ್ಧಾರ ಮಾಡಿಕೊಂಡಳು?
ಜ:- ಋಷಿಗಳನ್ನು , ಮುನಿಗಳನ್ನು ಕಂಡು ನಿರ್ಧಾರ ಮಾಡಿಕೊಂಡಳು
 7) ಲಕ್ಷ್ಮೀದೇವಿ ಯಾವ ಋಷಿಗಳನ್ನು ಕಂಡು "ಪುಣ್ಯವ ಗಳಿಸಿದ್ದರೇನು ಫಲವಿಲ್ಲ" ಎಂದು ತೀರ್ಮಾನಿಸಿದಳು?
ಜ:- ವಿಶ್ವಾಮಿತ್ರರನ್ನು , ದುರ್ವಾಸರನ್ನು ಕಂಡು ತೀರ್ಮಾನಿಸಿದಳು
8)ಎಲ್ಲ ಶಾಸ್ತ್ರಗಳೋದಿ ದುರಲ್ಲಭ ಜ್ಞಾನವ ಕಲ್ಲಿಸಿ ಕೊಡುವ ಗುರುಗಳು ಯಾರು?
ಜ:- ಬೃಹಸ್ಪತ್ಯಾಚಾರ್ಯರು , ಶುಕ್ರಾಚಾರ್ಯರು
9) "ಕಾಮಿನಿರ್ಜಿತನೊಬ್ಬ" ಯಾರು?
ಜ:- ಬ್ರಹ್ಮದೇವರು
10) ಕಾಮಿನಿಗೆ ಸೋತೊಬ್ಬ ಯಾರು?
ಜ:- ರುದ್ರದೆವರು
21) ಹಾಸ್ಯವ ಮಾಡಿ ಹಲ್ಲು ಉದಿರಿಸಿಕೊಂಡವರು ಯಾರು?
ಜ:- ಪೂಷಾ ಎಂಬ ಆದಿತ್ಯ 
22)ಪೂಷಾ ಎಂಬ ಆದಿತ್ಯನಿಗೆ ಹಲ್ಲು ಹೇಗೆ ಉದಿರಿತು?
ಜ;- ದಕ್ಷ ಯಜ್ಞದಲ್ಲಿ ಪೂಷಾ ಎಂಬ ಆದಿತ್ಯ ಶಿವನನ್ನು ನೋಡಿ ಹಾಸ್ಯ ಮಾಡಿದ .
 ಆದಕಾರಣ ಶಿವ ವೀರಭದ್ರ ಅವತಾರನೆತ್ತಿ ಪೂಷಾ ಎಂಬ ಆದಿತ್ಯನ ಹಲ್ಲು ಉದಿರಿಸಿದ .
23) ಕಾಲು ಇಲ್ಲದವರು ಯಾರು?
 * ಜ:- ಶೇಷದೇವರು* 
24)ಒಕ್ಕಣ್ಣ ಅಂದರೆ ಯಾರು?
ಜ:- ಇಂದ್ರಪುತ್ರನಾದ ಜಯಂತ 
25)ಜಯಂತನಿಗೆ ಒಂದು ಕಣ್ಣು ತೆಗೆದವರು ಯಾರು?
ಜ:- ಶ್ರೀ ರಾಮದೇವರು
26) ಲಕ್ಷ್ಮೀದೇವಿ ತನ್ನ ಮನಸ್ಸಿನಲ್ಲೇ ನಾಚಿಕೊಂಡ ಕಾರಣವೇನು?
ಜ:- ತನ್ನ ಮಕ್ಕಳ ದೋಷಗಳನ್ನು ಹೇಳಲು ನಾಚಿಕೊಂಡಲು
27) ಮಾವನ ಕೊಂದವರು ಯಾರು?
ಜ:- ರುದ್ರದೆವರು
28)  ಹಾರ್ವನ ಕೊಂದವರು ಯಾರು?
ಜ:- ಇಂದ್ರದೇವರು
29) ಜೀವಿಗಳನ್ನು ಕೊಂದವರು ಯಾರು?
ಜ:- ಯಮಧರ್ಮರಾಜ 
30)ಶಿವನಿಂದ ಬಯಲಾದವರು ಯಾರು?
ಜ:- ಮನ್ಮಥ
31) ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ ಇದರಲ್ಲಿ ಖಳನಂತೆ ಯಾರು?
ಜ:- ಬಲಿಚಕ್ರವರ್ತಿ
32)  ಎಲ್ಲರ ಆಯುಷ್ಯವನ್ನು ತೆಗೆದು ಕೊಳ್ಳುವ ಪರಮಾತ್ಮ ಯಾರು?
ಜ:- ಶಿಂಶುಮಾರ  ರೂಪ ಪರಮಾತ್ಮ 
33) ಶ್ರೀ ಹರಿ ಯಾವ ಸಮಯದಲ್ಲಿ ದೇವತೆಗಳನ್ನು, ಋಷಿಗಳನ್ನು ತನ್ನ ಉದರದಲ್ಲಿ ಇಟ್ಟಿಕೊಂಡನು?
ಜ:- ಪ್ರಳಯಕಾಲದಲ್ಲಿ 
34) ಸ್ವಾದ್ವನ್ನಂಗಳು ಅಂದರೆ ಏನು?
ಜ:- ಸ್ವಾದು ಅನ್ನವೆಂದರೆ ರುಚಿಕರವಾದ ಭಕ್ಷ್ಯ , ಚೋಷ್ಯ , ಲೇಹ್ಯ , ಪೇಯ ಎಂಬ ನಾಲ್ಕು ಬಗೆಯ ಅನ್ನ 
35) ಶ್ರೀ ಹರಿಗೆ ಮುತ್ತಿನ ಅಕ್ಷತೆಯನ್ನು ಹಾಕಿದವರು ಯಾರು?
ಜ:- ಗಂಗೆ , ಯಮುನೆ ಸರಸ್ವತೀ ದೇವಿ , ಭಾರತೀದೇವಿ  ಮುತ್ತಿನ ಅಕ್ಷತೆಯನ್ನು ಹಾಕಿದರು 
36) ವಿವಾಹ ಸಮಯದಲ್ಲಿ  ಬ್ರಹ್ಮದೇವರು ಶ್ರೀ ಹರಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ:- ಬ್ರಹ್ಮದೇವರು ಶ್ರೀ ಹರಿಗೆ ಕೌಸ್ತುಭ ರತ್ನವನ್ನು ಕೊಟ್ಟನು 
37) ಲಕ್ಷ್ಮೀ ನಾರಾಯಣರ ವಿವಾಹ ಸಮಯದಲ್ಲಿ ಪ್ರಾಣದೇವರು ಶ್ರೀ ಹರಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ:- ಪ್ರಾಣದೇವರು ಶ್ರೀ ಹರಿಗೆ ವೈಜಯಂತೀ ಮಾಲವನ್ನು ಸಮರ್ಪಿಸಿದನು 
38) ಲಕ್ಷ್ಮೀ ನಾರಾಯಣರ ವಿವಾಹ ಸಮಯದಲ್ಲಿ ಮುಕ್ತಾಸುರು ಶ್ರೀ ಹರಿಗೆ ಏನನ್ನು ಸಮರ್ಪಿಸಿದರು?
ಜ:- ಮುತ್ತೀನ ಕಂಠೀಸರವನ್ನು ಸಮರ್ಪಿಸಿದರು 
39) ಲಕ್ಷ್ಮೀ ನಾರಾಯಣರ ವಿವಾಹ ಸಮಯದಲ್ಲಿ ರುದ್ರದೆವರು ಶ್ರೀ ಹರಿಗೆ ಏನನ್ನು ಸಮರ್ಪಿಸಿದನು?
ಜ:- ರುದ್ರದೆವರು ಮಸ್ತಕದ ಮಣಿಯನ್ನು ಸಮರ್ಪಿಸಿದನು 
40) ಲಕ್ಷ್ಮೀ ನಾರಾಯಣರಿಗೆ ನಾಗಬಲಿ ( ನಾಗವಲ್ಲಿ)
ಎಲ್ಲಿ ಮಾಡಿದರು?
ಜ:- ನಾಗನಮೇಲೆ ನಡೆಸಿದರು
41) ಸಮುದ್ರರಾಜ ರುದ್ರದೇವರಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ:- ಸಮುದ್ರರಾಜ ರುದ್ರದೇವರಿಗೆ ಚಂದ್ರ ಹಾರವನ್ನು ಉಡುಗೊರೆಯಾಗಿ ಕೊಟ್ಟನು .
42) ಸಮುದ್ರರಾಜ ಬ್ರಹ್ಮದೇವರಿಗೆ, ವಾಯುದೇವರಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ:- ಸಮುದ್ರರಾಜ ಬ್ರಹ್ಮದೇವರಿಗೆ , ವಾಯುದೇವರಿಗೆ ನವರತ್ನದ ಹಾರವನ್ನು ಉಡುಗೊರೆಯಾಗಿ *ಕೊಟ್ಟನು
43) ನವರತ್ನದ ಹಾರ ಯಾವ ಸಮಯದಲ್ಲಿ ಉದ್ಭವಿಸಿದೆ?
ಜ:- ಸಮುದ್ರಮಥನ ಕಾಲದಲ್ಲಿ *ಉದ್ಭವಿಸಿದೆ* 
44)ವರುಣದೇವರು ಇಂದ್ರಾದಿ ದಿಕ್ಷಾಲಕರಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ:- ನಾಲ್ಕು ದಂತಗಳುಳ್ಳ ಮದಭರಿತವಾದ ಆನೆಗಳನ್ನು ಕೊಟ್ಟನು 
45) ವರುಣದೇವರು ಉಳಿದ ದೇವತೆಗಳಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ:- ಹೊಳಿಯುವ ನವರತ್ನ ರಾಶಿಗಳನ್ನು ಕೊಟ್ಟನು 
46) ವರುಣದೇವರು ಇಂದ್ರದೇವರಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ,:- ಪಾರಿಜಾತ ವೃಕ್ಷವನ್ನು , ಹತ್ತುಸಾವಿರ ಅಪ್ಸರಾ ಸ್ತ್ರೀಯರನ್ನು ಕೊಟ್ಟನು 
47) ಲಕ್ಷ್ಮೀ ಶೋಭಾನೆ ಪಠನೆ ಯಿಂದ ಭಗವಂತ ನಮಗೆ ಏನನ್ನು ನೀಡುತ್ತಾನೆ?
ಜ:- ಆಯುಷ್ಯ , ಒಳ್ಳೆಯ ಭವಿಷ್ಯ ದಿನದಿನಕ್ಕೆ ಹೆಚ್ಚುವಂತೆ ನೀಡುತ್ತಾನೆ 
48) ಶಿಂಶುಮಾರ ರೂಪ ಅಂದರೆ ಯಾವ ರೂಪ?
ಜ:- ಚೇಳಿನರೂಪ
49) ಚೇಳಿನರೂಪ ಬಾಲದ ತುದಿಯಲ್ಲಿ ಯಾವ ನಕ್ಷತ್ರ ಆಶ್ರಿತ ಆಗಿರುತ್ತಾರೆ?
ಜ:- ಧ್ರುವ ನಕ್ಷತ್ರ 
50) ಪ್ರಕೃತಿ ಗುಣಗಳು ಯಾವುವು?
ಜ:- ಸತ್ವ , ರಜೋ , ತಮೊ ಗುಣಗಳು
51) ಕೃಷ್ಣನ ಒಬ್ಬೊಬ್ಬ ಪತ್ನಿಯಲ್ಲಿ ಎಷ್ಟು ಜನ ಮಕ್ಕಳು?
ಜ:- 10 ಗಂಡುಮಕ್ಕಳು 1 ಹೆಣ್ಣು ಮಗಳು 
 52) ಕೃಷ್ಣ ತನ್ನ ರೋಮ ಕೂಪಗಳಿಂದ ಏನನ್ನು ಸೃಷ್ಟಿ ಮಾಡಿದ?
ಜ:- ತೋಳುಗಳನ್ನು ಸೃಷ್ಟಿ ಮಾಡಿದ
53) ನಾರಿಯರಿಗೆ ಮರುಳಾದ ಯಾವ ಯೋಗಿಗಳು ಕೃಷ್ಣನನ್ನು ಆರಾಧಿಸುವರು?
ಜ:- ನಾರದ ಸನಕಾದಿ ಮುನಿಗಳು 
54) ನಾರಾಯಣನು ಬ್ರಹ್ಮನ ಎಷ್ಟು ವರ್ಷಗಳ ಪರ್ಯಂತ ಪ್ರಳಯಕಾಲದಲ್ಲಿ ಮಲಗಿರುತ್ತಾನೆ?
ಜ:- ಬ್ರಹ್ಮನ ನೂರು ವರ್ಷ ಪರ್ಯಂತ ಪ್ರಳಯದಲ್ಲಿ 
55) ಲಕ್ಷ್ಮೀ ನಾರಾಯಣರ ಮೇಲೆ ವೇದೋಕ್ತ ಮಂತ್ರಗಳಿಂದ ಅಕ್ಷತೆಗಳನ್ನು ಹಾಕಿದವರು ಯಾರು?
ಜ:- ವಶಿಷ್ಟ , ನಾರದ ಮೊದಲಾದ ಮುನೀಂದ್ರರು 
56) ಲಕ್ಷ್ಮೀ ನಾರಾಯಣರಿಗೆ ಪಾಯ‌ಸವನ್ನು ಕೊಟ್ಟು ಉಪಚಾರ ಮಾಡಿದವರು ಯಾರು?
ಜ:- ಮುಖ್ಯಪ್ರಾಣನ ಮನೆಯಲ್ಲಿ ಭಾರತೀದೇವಿ ಲಕ್ಷ್ಮೀ ನಾರಾಯಣರಿಗೆ ಪಾಯ‌ಸವನ್ನು ಕೊಟ್ಟು ಉಪಚಾರ *ಮಾಡಿದಳು* 
57) ವಾದಿರಾಜರ ಮಾತಿನಂತೆ ಶ್ರೀ ಹರಿಗೆ ಅಣ್ಣ ಯಾರು?
ಜ:- ಇಂದ್ರದೇವರು
58)ಇಂದ್ರನ ಸಭೆಯ ಹೆಸರು ಏನು?
ಜ:- ಸುಧರ್ಮ ಸಭೆ 
59) ಶ್ರೀ ಹರಿ ಇಂದ್ರನ ಮನೆಗೆ ಹೋಗಿ ಅದಿತಿ ದೇವಿಗೆ ಏನನ್ನು ಕೊಟ್ಟನು?
ಜ:- ಕುಂಡಲವನ್ನು ಕೊಟ್ಟನು 
60) ವರುಣದೇವರು ಇಂದ್ರದೇವರಿಗೆ ಉಡುಗೊರೆಯನ್ನು ಕೊಟ್ಟು ಏನನ್ನು ಬೇಡಿದ?
ಜ:- ತನ್ನ ಮನಸ್ಸಿನಲ್ಲಿ ಹರಿಭಕ್ತಿ ವೃದ್ಧಿ ಯಾಗುವಂತೆ ಮಾಡು ಎಂದು ಬೇಡಿದ
61) ಕಾಲನಿಯಾಮಕ ಪರಮಾತ್ಮ ಯಾರು?
 ಜ:-ಶಿಂಶುಮಾರ ರೂಪ ಪರಮಾತ್ಮ 
62) ಶಿಂಶುಮಾರ ರೂಪ ಅಂದರೆ ಯಾವ ರೂಪ?
ಜ:- ಚೇಳಿನರೂಪ 
63) ಚೇಳಿನರೂಪ ಬಾಲದ ತುದಿಯಲ್ಲಿ ಯಾವ ನಕ್ಷತ್ರ ಆಶ್ರಿತ ವಾಗಿರುತ್ತಾರೆ?
ಜ:- ಧ್ರುವ ನಕ್ಷತ್ರ 
64) ಪ್ರಕೃತಿ ಗುಣಗಳು ಯಾವುವು?
ಜ:- ಸತ್ವ , ರಜೋ , ತಮೊ ಗುಣಗಳು 
65) ಪಾಲಸಾಗರವನ್ನು ಲೀಲೆಯಿಂದ  ಕಡೆದವರು ಯಾರು?
ಜ:- ಶ್ರೀ ಮನ್ನಾರಾಯಣಬ್ಬನೆ ಕಡೆದನು 
66) ಲಕ್ಷ್ಮೀ ನಾರಾಯಣರ ಕಳ್ಯಾಣ ಸಮಯದಲ್ಲಿ ಯಾವ ಯಾವ ವಾಯಿದ್ಯಗಳು ಬಾರಿಸಿದರು?
ಜ:- ಕೊಂಬುಗಳು , ಚಿಂಗಹೆಗಳು , ತಾಳಗಳು ಮದ್ದಳೆಗಳು ತಮ್ಮಟೆಗಳು , ಭೇರಿಗಳು , ಪಟಹಗಳು , ಬೊಂಬೊಂ ಎಂಬ ಶಂಖಗಳು , ಡೊಳ್ಳುಗಳು , ಮೌರಿಗಳು ಬಾರಿಸಿದರು 
67) ಲಕ್ಷ್ಮೀ ನಾರಾಯಣರ ಕಳ್ಯಾಣ ಸಮಯದಲ್ಲಿ ಯಾವ ಸಂಭ್ರಮವಾಯಿತು?
ಜ:- ದೇವ ದುಂದುಭಿಗಳು ಮೊಳಗಿತು . ತುಂಬುರು ನಾರದರು * ಶ್ರೀ *ಹರಿಯನ್ನು ಹೊಗಳುತ್ತಾ ಹಾಡಿದರು 
68) ಶ್ರೀ ಹರಿಗೆ ಶೇಷದೇವರ ಸೇವೆ ಮಾಡುವ ವಿಧಾನ ವರ್ಣಿಸಿರಿ?
ಜ:- ದಕ್ಷಿಣ ದಿಕ್ಕಿನ ಹೆಡೆ ಶ್ರೀ ಹರಿಗೆ ತಲೆದಿಂಬು .
 ಉತ್ತರ ದಿಕ್ಕಿನ ಫಣವೆ ಕಾಲುಗಳಿಗೆ ದಿಂಬು .
 ಪಶ್ಚಿಮ ದಿಕ್ಕಿನ ಫಣವೆ ಬೀಸಣಿಗೆ .
 ಈಶಾನ್ಯದ ಫಣದಲ್ಲಿ ಶಂಖು ಚಕ್ರ ನಂದಕ ಖಡ್ಗವನ್ನು ಹೊತ್ತುಕೊಳ್ಳುತ್ತಾನೆ .
 ಆಗ್ನೇಯ ದಿಕ್ಕಿನ ಫಣದಲ್ಲಿ ಗದಾ ಪದ್ಮ ಶಾಂರ್ಗ ಧನುಸ್ಸುಗಳನ್ನು *ಹೊತ್ತುಕೊಳ್ಳುತ್ತಾನೆ
69)* . ಗಜೇಂದ್ರ ಮೋಕ್ಷ ಯಾವ ಮನ್ವಂತರದಲ್ಲಿ ನಡೆಯುತು?
ಜ:- ನಾಲ್ಕನೇ ಮನ್ವಂತರಯಾದ ತಾಪಸ ಮನ್ವಂತರದಲ್ಲಿ ನಡೆಯುತು 
70) ಹಯಗ್ರೀವ ಹಯಗ್ರೀವ ಹಯಗ್ರೀವ ಎಂದು ಜಪಿಸಲು ಫಲ ಏನು ಸಿಗುತ್ತದೆ?
ಜ:- ಒಳ್ಳಯ ಮಾತು ಸ್ಪಷ್ಟವಾಗಿ ಗಂಗಾ ಪ್ರವಾಹದಂತೆ ಹರಿಯುತ್ತದೆ
71) ಹಯಗ್ರೀವ ರೂಪಿ ಪರಮಾತ್ಮ ಚಂದ್ರಮಂಡಲದಲ್ಲಿ ಹೇಗೆ ಕುಳಿತಿದ್ದಾನೆ?
ಜ:- ನಾಲ್ಕು ಕೈಗಳಲ್ಲಿ ಶಂಖ ಅಕ್ಷರಮಾಲೆ ಪುಸ್ತಕ ಜ್ಞಾನಮುದ್ರೆಗಳನ್ನು ಹಿಡಿದು ಚಂದ್ರಮಂಡಲದಲ್ಲಿ ಕುಳಿತಿದ್ದಾನೆ 

72) "ಜ್ವಲಿಸುವ ಕೋಪದಿ ಶಾಪವ ಕೊಡುವರು" ಯಾರು ಯಾರಿಗೆ ಶಾಪವ ಕೊಟ್ಟರು?
ಜ:- ವಿಶ್ವಾಮಿತ್ರರು ವಶಿಷ್ಟರಿಗೆ ಶಾಪವ *ಕೊಟ್ಟರು
73)  ಒಬ್ಬನಾವನ ಮಗ ಯಾರು?
ಜ:- ಬ್ರಹ್ಮದೇವರು
74) ಒಬ್ಬ ನಾವನ ಮೊಮ್ಮಗ ಯಾರು?
ಜ:- ರುದ್ರದೆವರು
75)ಗುರುತಲ್ಪ ಕಾಮಿಯೊಬ್ಬ ಯಾರು?
ಜ:- ಚಂದ್ರದೇವರು
76) ಒಬ್ಬನು ಅವನನ್ನು ಪೊರುವವನ್ನು ಯಾರು?
ಜ:- ಗರುಡದೇವರು
77) ಒಬ್ಬನು ಅವನಿಗೆ ಶಯನಾಹ ಯಾರು?
ಜ:- ಶೇಷದೇವರು 
78) ಪಾರಿಜಾತಪಹರಣ ಸಮಯದಲ್ಲಿ ಶ್ರೀ ಕೃಷ್ಣನ ಜೊತೆಗೆ ಯುದ್ಧ ಮಾಡಿದವರು ಯಾರು?
ಜ:- ರುದ್ರದೆವರು , ಅಗ್ನಿದೇವರು , ಯಮದೇವರು , ಗಣಪತಿ ಮೊದಲಾದವರು ಯುದ್ಧ ಮಾಡಿದರು
79) ಅಗ್ನಿದೇವರ ವಾಹನ ಯಾವುದು?
ಜ:- ಮೇಷ
80) ಯಮದೇವರ ವಾಹನ ಯಾವುದು?
ಜ:- ಮಹಿಷಿ
81) ಲಕ್ಷ್ಮೀದೇವಿಯ ಮೂಗುತಿ ಮಣಿ ಹೇಗೆ ಶೋಭಿಸುತ್ತದೆ?
ಜ:- ಚಂದ್ರಬಿಂಬದಂತೆ ಶೋಭಿಸುತ್ತದೆ 
82) ಪಾತಾಳತಳಕ್ಕೆ ಇಳಿದವರು ಯಾರು?
ಜ:- ಬಲಿ   ಚಕ್ರವರ್ತಿ 
83) ಶ್ರೀ ಹರಿ ತನ್ನ ನಾನಾವತಾರದಲ್ಲಿ ಯಾರಿಗೆ ಸುಖ ಕೊಡುತ್ತಾನೆ?
ಜ:- ತನ್ನನ್ನು ನಂಬಿದ ಸುರರಿಗೆ ಸುಖವನ್ನು ಕೊಡುತ್ತಾನೆ 
84) ಪಂಚಮುಖ ಪ್ರಾಣದೇವರಲ್ಲಿ ಇರುವ ಪಂಚ ರೂಪಗಳು ಯಾವುವು?
ಜ:- ಪೂರ್ವದಲ್ಲಿ ವಾನರಮುಖ 
 ದಕ್ಷಿಣದಲ್ಲಿ ನರಸಿಂಹ ಮುಖ 
 ಪಶ್ಚಿಮದಲ್ಲಿ ಗರುಡಮುಖ 
 ಉತ್ತರದಲ್ಲಿ ವರಾಹಮುಖ 
 ಊರ್ಧ್ವದಲ್ಲಿ ಹಯಮುಖ ರೂಪಗಳು 
85) ಯಾರು ಯಾರ ನಾಮಕ್ಕೆ ಅಂಜಿ ಬೆಚ್ಚಿ ಬೀಳುತ್ತಾರೆ?
ಜ:- ಕಲಿಯು ಭಗವಂತನ ನಾಮಕ್ಕೆ ಅಂಜಿ ಬೆಚ್ಚಿ ಬೀಳುತ್ತಾನೆ 
86) ಶ್ರೀ ಹರಿ ಒಬ್ಬನೇ ಅನಿಷ್ಟ ಇಲ್ಲದವನು, ದೋಷರಹಿತನು ಎಂಬುದನ್ನು ಯಾವ ಪದದಿಂದ ಕರೆದಿದ್ದಾರೆ?
ಜ:- ನಿರನಿಷ್ಟ *ನಿರವದ್ಯ
87) ಭಗವಂತನಿಗೆ ನರಕಯಾತನೆ ಯಾಕೆ ಕೂಡುವುದಿಲ್ಲ?
ಜ:-  ನಿರನಿಷ್ಟ ನಿರವದ್ಯ ಎಂಬ ವೇದಾರ್ಥ ವಿಚಾರ ಮಾಡಿದಾಗ ಶ್ರೀ ಕೃಷ್ಣನಿಗೆ ನರಕಯಾತನೆ ಕೂಡುವುದಿಲ್ಲ ಎಂದು ತಿಳಿಯುತ್ತದೆ 
88) ಇಂದಿರಾದೇವಿ ತನಗೆ ಪತಿ ಯಾರೆಂದು ನೆನೆದಳು?
ಜ:- ಮುಕುಂದನೇ ತನಗೆ ಪತಿ ಎಂದು ನೆನೆದಳು 
89) ಜ್ಞಾನಿಗಳು ಕೃಷ್ಣನಿಗೆ ಪರನಾರಿ ಸಂಗವಿಲ್ಲ ಎಂದು ಏಕೆ ಹೇಳುತ್ತಾರೆ?
ಜ:- ಸುದತಿಯರಿಗೆ ಶ್ರೀ ಕೃಷ್ಣನು ಪರವಶನಾಗುವದಿಲ್ಲ . ಆದ್ದರಿಂದ ಶ್ರೀ ಕೃಷ್ಣನಿಗೆ ನರಕಯಾತನೆ ಕೂಡುವುದಿಲ್ಲ ಎಂದು ತಿಳಿಯುತ್ತದೆ 
90) ಅಕ್ಷಯಕಾಯ ಅಂದರೆ ಏನು?
ಜ:- ರಕ್ಕಸರ ಆಸ್ತ್ರಗಳಿಂದ ಗಾಯಹೊಂದದವನು ( ಪರಮಾತ್ಮ)
91) ಪರಮಾತ್ಮನಿಗೆ ನರಕಯಾತನೆ ಏಕೆ ಇಲ್ಲ ?
ಜ:- ಪರಮಾತ್ಮನಿಗೆ ಸಾವಿಲ್ಲ . ಆದಕಾರಣ ಪರಮಾತ್ಮನಿಗೆ ನರಕಯಾತನೆ ಇಲ್ಲ . 
92) ಮನೆಯಲ್ಲಿ ಬಂಧುಗಳ ಜೊತೆ ಇರುವಾಗ ಭಗವಂತನು  ಹೇಗೆ ವರ್ತಿಸುತ್ತಾನೆ?
ಜ:- ಕ್ಷಮಾ ಸಮುದ್ರನಾಗಿ , ದಯಾಶೀಲನಾಗಿ ವರ್ತಿಸುತ್ತಾನೆ.
93) ಶ್ರೀ ಕೃಷ್ಣನು ದೇವಕೀದೇವಿ ಗರ್ಭದಿಂದ ಹೊರಬಂದಾಗ ಹೇಗೆ ತೋರಿದ?
ಜ:- ಶ್ರೀ ಕೃಷ್ಣನು ದೇವಕೀದೇವಿ ಗರ್ಭದಿಂದ ಹೊರಬಂದಾಗ ಶಂಖ , ಚಕ್ರ , ಗದಾ ಆಯುಧಗಳಿಂದ , ಪೀತಾಂಬರಧಾರಿ ಯಾಗಿ ತೋರಿದ 
94)ಹತ್ತು ಮತ್ತಾರು ಸಾವಿರ ಅಂದರೆ ಎಷ್ಟು?
ಜ:- 16,000( ಹದಿನಾರು ಸಾವಿರ)
95) ಮದುವೆ ಮಂಟಪ ಹೇಗೆ ಇತ್ತು?
ಜ:- ನವರತ್ನಗಳಿಂದ ಅಲಂಕಾರ ವಾಗಿತ್ತು 
96) ಲಕ್ಷ್ಮೀ ನಾರಾಯಣರ ವಿವಾಹ ಹಸೆಮಣೆ ಹೇಗಿತ್ತು?
ಜ:- ಮುತ್ತು ರತ್ನಗಳಿಂದ ಕೆತ್ತಿಸಿದ ಹಸೆಮಣೆ ಅಲಂಕಾರ ಯುಕ್ತವಾಗಿತ್ತು 
97)ಆದಿಕಾಲದಲ್ಲಿ ಶ್ರೀ ಹರಿ ಯಾರೊಡನೆ ಪವಡಿಸಿದ?
ಜ:- ಶ್ರೀದೇವಿ ಯೊಡನೆ ಪವಡಿಸಿದ 
98) ಲಕ್ಷ್ಮೀದೇವಿ ಏನನ್ನು ಕಂಡು ಬೆರಗಾದಳು?
ಜ:- ಲಾವಣ್ಯ ಮಯವಾದ ಶ್ರೀ ಹರಿಯ ಮೋಹಿನಿ ರೂಪವ ಕಂಡು ಲಕ್ಷ್ಮೀದೇವಿ ಬೆರಗಾದಳು 
99) ಸಮುದ್ರರಾಜ ತನ್ನ ಅಳಿಯನಾದ ಶ್ರೀ ಹರಿಗೆ ಯಾವ ಉಡುಗೊರೆಯನ್ನು ಕೊಟ್ಟನು?
ಜ:- ಉನ್ನತ ನವರತ್ನಮಯವಾದ ಅರಮನೆಯನ್ನು  ಸ್ಥಿರವಾಗಿ ಇರುವಂತೆ ಕಟ್ಟಿಸಿ ಕೊಟ್ಟನು 
100) ಪ್ರಳಯಕಾಲದಲ್ಲಿ ಶ್ರೀ ಹರಿ ಬ್ರಹ್ಮನ ಎಷ್ಟು ವರ್ಷಗಳ ಪರಿಯಂತ ಪವಳಿಸುವನು?
ಜ:- ಬ್ರಹ್ಮನ ನೂರು ವರ್ಷ ಪರ್ಯಂತ 
ಪ್ರಳಯಕಾಲದಲ್ಲಿ
ಪವಳಿಸುವನು
***

*

No comments:

Post a Comment