Nalvadi Krishnaraja Wodeyar
1884 - 1940
Mummadi Jayachamaraja Wodeyar
1884 - 1940
Mummadi Jayachamaraja Wodeyar
Some one asked me today how is Mysuru as a place?
Whoa..! What a question for a Mysoorian...:)
Mysuru the name has it all, split in English as ‘My’ - Nanna, ‘Suru’ - Shelter.
I have lived in Mysuru and am definitely eligible to answer this. Mysoorian by heart u know ;)
Mysuru is not just a city it’s an emotion and proud. :) <3
Places To Visit In And Around Mysore is below
Mysore Palace, chamundi Hill, Kabini, St. Philomena’s Church, Mysore Zoo, Laliltha Mahal Palace ,Jaganmohan Art Gallery ,Devaraja Market, Railway Museum, Folk Lore Museum, Kukkarahalli &Karanji lake, Mysore Silk Factory, Chamundi Hills ,Brindavan Gardens, KRS Dam, Tippu summer palace, Gumbaz in Srirangapatna, Ranganathittu Bird Sanctuary, Kesava Temple in Somnathpur, Jayalakshmi Vilas Mansion, Vasantha Mahal Palace, Ranganathittu Bird Sanctuary and many more.....
If you want to breathe fresh air everyday - Mysuru is the place
If you are in love - Mysuru is the place
We have song too - koorak kukkralli kere from the movie ‘Nenapirali’ ;)
If you want to feel royal - Mysuru is the place
If you want to have a morning walk around lakes (we have 3 ;)) - Mysuru is the place
If you want to reach your destination within 30mins - Mysuru is the place
If you want to enjoy good parenting and spend valuable time with kids - Mysuru is the place
If you want good education for your children - Mysuru is the place
If you want to enjoy traffic free commutation - Mysuru is the place
If you want to pursue your career in Education, Automotive, software etc - Mysuru is the place
If you love Animals (Zoo) - Mysuru is the place
If you love hill view - Mysuru is the place
If you love moderate climate - Mysuru is the place
If you want to make real friends - Mysuru is the place
If you want learn proper literature Kannada - Mysuru is the place
If you want to cherish the beauty of nature - Mysuru is the place
If you are a foodie(Mysur Masale dose, Mysur pak are named after but these are not the only ones we make good ;)) - Mysuru is the place
If you are little too lazy and love to spend extra minutes under the blanket - Mysuru is the place
If you are budding photographer - Mysuru is the place
If you want to reach a beach in half a day (Mangalore, udupi, cochin) - Mysuru is the place
If you want to reach a hill station in half a day (Coorg, Ooty, Wainad)- Mysuru is the place
If you want to reach forest in less than half a day (Bandipur, Nagarahole)- Mysuru is the place
If you want to reach a metropolitan in 3 hrs (Bengaluru)- Mysuru is the place
If you want to take holy bath in river kaveri and kapila - Mysuru is the place
If you are a person of spiritual beliefs - Mysuru is the place
If you want to live in one of the cleanest cities - Mysuru is the place
If you are looking for a city which offers everything a metropolitan city offers and is not overly crowded - Mysuru is the place
If you want to live in harmony - Mysuru is the place
If you want a peaceful life - Mysuru is the place
Can keep on writing but for now I will stop,
For anything else running in your mind- Mysuru is the place :)
*****
ಕರುನಾಡ ಹೆಮ್ಮೆಯ ರಾಜಮನೆತನಗಳಲ್ಲಿ ಮೈಸೂರು ಒಡೆಯರ ವಂಶವೂ ಒಂದು. ಕರ್ನಾಟಕದ ಇಂದಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಅರಮನೆಗಳ ನಗರಿ ಎಂದು ಖ್ಯಾತವಾಗಿದ್ದೇ ಒಡೆಯರ ಕಾಲದಲ್ಲಿ.
ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಹಾಗೂ ಸಹೃದಯಿ ವೀಳೆಯದೆಲೆ ಗಂದದ ನಾಡು ರೆಷ್ಮೇ ಯ ಗೂಡು..
ಮೈಸೂರು ದಸರೆಯಷ್ಟೇ ಮೈಸೂರು ಅರಮನೆಯೂ ವಿಶ್ವವಿಖ್ಯಾತ. ಕರುನಾಡ ನೆಲದಲ್ಲಿ ಕಟ್ಟಲಾದ ಇತ್ತೀಚಿನ ಅರಮನೆ ಎಂಬ ಖ್ಯಾತಿಯೂ ಇದಕ್ಕಿದೆ. ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪದಿಂದ ಒಡಮೂಡಿದ ಈ ಸುಂದರ ಸೌಧ, ಬ್ರಿಟಿಷರು ಭಾರತದಲ್ಲಿ ಬಲವಾದ ಹಿಡಿತ ಹೊಂದಿದ್ದ ಕಾಲದಲ್ಲಿ ಹಾಗೂ ಆಧುನಿಕತೆಯ ಗಾಳಿ ಬೀಸುತ್ತಿದ್ದ ಕಾಲದಲ್ಲಿ ನಿರ್ಮಾಣವಾದ ಭವ್ಯ ಬಂಗಲೆ.
#ವಾಸ್ತುಶಿಲ್ಪ
ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಗುಂಬಗಳು ಹಾಗೂ 145 ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ದೊಡ್ಡ ಉದ್ಯಾನವಿದೆ. ಬಂಗಾರದ ಗುಡಿಯಂತಿದೆ.
#ದೇವಸ್ಥಾನಗಳು
ಅರಮನೆಯ ಆವರಣದಲ್ಲಿ 12 ದೇವಸ್ಥಾನಗಳಿವೆ. ೧೪ ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು ೧೯೫೩ ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳಲ್ಲಿ ಪ್ರಸಿದ್ಧವಾದ ಕೆಲವು:
ಸೋಮೇಶ್ವರನ ದೇವಸ್ಥಾನ
ಲಕ್ಶ್ಮೀರಮಣ ದೇವಸ್ಥಾನ
ಆಂಜನೇಯಸ್ವಾಮಿ ದೇವಸ್ಥಾನ
ಗಣೇಶ ದೇವಸ್ಥಾನ
ಶ್ವೇತ ವರಾಹ ಸ್ವಾಮಿ ದೇವಸ್ಥಾನ
ಆಕರ್ಷಣೆಗಳು
#ನಿರ್ಮಾಣದಹಿಂದೆವೈಭವದಕಥೆ
ಇಂಡೋ ಸಾರ್ಸನಿಕ್ ಶೈಲಿಯಲ್ಲಿ ಅಂಬಾವಿಲಾಸ ಅರಮನೆಯನ್ನು ಕಲ್ಲಿನಲ್ಲಿ ಕಟ್ಟಲಾಗಿದೆ. ಮೂರು ಮಹಡಿಗಳಿರುವ ಅರಮನೆಯ ಸುತ್ತಲೂ ವಿಶಾಲವಾದ ಹಸಿರು ಉದ್ಯಾನವಿದೆ. ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ. ಒಳಗೆಲ್ಲಾ ಚಿನ್ನದ ಲೇಪನದ ಕಲಾ ವೈಭವ.
ಮೈಸೂರು ಸಂಸ್ಥಾನ 1399 ರಿಂದ 1947 ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ 'ಒಡೆಯರ್ ವಂಶದ ಅರಸ'ರಿಂದ ಆಳಲ್ಪಟ್ಟಿತು. ಒಡೆಯರ್ ಅರಸರು 14 ನೆಯ ಶತಮಾನದಲ್ಲಿಯೇ ಮೈಸೂರಿನಲ್ಲಿ ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ 1638 ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು.
1912ರಲ್ಲಿ ಎದ್ದುನಿಂತ ಈಗಿನ ಅರಮನೆ
ಆದರೆ 18ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ 1793 ರಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. 1803ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ 1897 ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು. ಇನ್ನು ಇದೇ ವರುಷದಲ್ಲಿ ಈಗ ಇರುವ ಅಂಬಾವಿಲಾಸ ಅರಮನೆ ಕಟ್ಟಲು ಆರಂಭಿಸಿ 1912 ರಲ್ಲಿ ಅರಮನೆ ನಿರ್ಮಾಣ ಕಾರ್ಯ ಸಂಪೂರ್ಣವಾಯಿತ
ತಜ್ಞರಿಂದ ನೀಲನಕ್ಷೆ
72 ಎಕರೆ ಪ್ರದೇಶದಲ್ಲಿ ಹಿಂದೂ, ಇಸ್ಲಾಮಿಕ್ ಹಾಗೂ ಪಾಶ್ಚಿಮಾತ್ಯ ವಾಸ್ತುಶೈಲಿಯ ಸಮ್ಮಿಲನದಿಂದ ವೇಸರ (ಇಂಡೋ ಸಾರ್‌ಸಾನಿಕ್) ಶೈಲಿಯಲ್ಲಿ ಮೈಸೂರು ಅರಮನೆ ಸುಂದರವಾಗಿ ಮೈದಳೆಯಿತು. ಮೈಸೂರು ಸಂಸ್ಥಾನದ ಆಳ್ವಿಕೆಯ ಹೊಣೆಯನ್ನು ಹೊತ್ತಿದ್ದ ವಾಣಿವಿಲಾಸ ಸನ್ನಿಧಾನ ಬಿರುದಾಂಕಿತರಾದ ಕೆಂಪನಂಜಮ್ಮಣ್ಣಿಯವರು ಅರಮನೆ ನಿರ್ಮಾಣದ ದಿಟ್ಟ ನಿರ್ಧಾರ ತಳೆದರೆಂಬುದು ವಿಶೇಷ ಅಂಶ.
ಈ ಅರಮನೆಗೆ ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ನಕಾಶೆ ತಯಾರಿಸಿದರೆಂದು ಇತಿಹಾಸ ಹೇಳುತ್ತದೆ. ಈ ವಾಸ್ತು ವಿನ್ಯಾಸಕ್ಕಾಗಿ ಆತ ಆಗಿನ ಕಾಲದಲ್ಲೇ 12 ಸಾವಿರ ರೂ.ಗಳನ್ನು ವಾಸ್ತುಶುಲ್ಕವಾಗಿ ಪಡೆದಿದ್ದನಂತೆ. ಅರಮನೆ ನಿರ್ಮಾಣಕ್ಕೆ ಮುನ್ನ ಚಿತ್ರಕಲಾವಿದರನ್ನು ಅಧ್ಯಯನಾರ್ಥ ಯುರೋಪ್ ರಾಷ್ಟ್ರಕ್ಕೆ ಹಾಗೂ ಭಾರತದ ಹೆಸರಾಂತ ಹಳೆಬೀಡು, ಬೇಲೂರು, ತಂಜಾವೂರು, ಮಧ್ಯಪ್ರದೇಶ, ಜಯಪುರ ಸೇರಿದಂತೆ ವಿವಿಧೆಡೆಗೆ ಕಳುಹಿಸಲಾಗಿತ್ತು.
ಅರಮನೆ ನಗರಿ ಎಂಬ ಹೆಸರು ಬಂದಿದ್ದೇ ಇದದರಿಂದ!
ಅರಮನೆಯ ಮುಂಭಾಗದಲ್ಲಿ ಏಳು ವಿಶಾಲವಾದ ಮತ್ತು ಎರಡು ಚಿಕ್ಕ ಕಮಾನುಗಳಿವೆ. ಮಧ್ಯದ ಕಮಾನಿನ ಮೇಲಿರುವ ಗಜಲಕ್ಷ್ಮಿಯ ಶಿಲ್ಪ ಹೃದಯಂಗಮವಾಗಿದೆ. ಮೈಸೂರಿಗೆ ಅರಮನೆಗಳ ನಗರಿ ಎಂದು ಹೆಸರು ಬರಲು ಮೂರು ಅಂತಸ್ತಿನ ಈ ಭವ್ಯ ಸೌಧದ ಕೊಡುಗೆ ಅಪಾರ. ಚಚ್ಚೌಕದ ಕಂಬಗಳು, ಮೇಲೆ ಸುಂದರ ವಿನ್ಯಾಸದ ಗೋಪುರ, ವಿಶಾಲವಾದ ಮೈದಾನ, ಸುಂದರ ಹಾಗೂ ಮನಮೋಹಕ ಶಿಲ್ಪಗಳಿಂದ, ನುಣುಪಾದ ನೆಲಹಾಸು, ಗಾಜಿನ ಅಲಂಕಾರಿಕ ವಿನ್ಯಾಸದಿಂದ ಕೂಡಿದ ದರ್ಬಾರ್ ಹಾಲ್, ಅರಮನೆಯ ಸುತ್ತ ಇರುವ ಸಿಂಹ ಲಾಂಛನಗಳು, ಸುಂದರ ಶಿಲ್ಪದ ಪ್ರವೇಶದ್ವಾರದ ನೋಟವೇ ಒಂದು ಸೊಬಗು.
ಅರಮನೆಯ ವಿಶೇಷತೆ
ರಾಜರುಗಳು ದರ್ಬಾರು ನಡೆಸುತ್ತಿದ್ದ, ದರ್ಬಾರ್ ಹಾಲ್, ದಿವಾನ್-ಇ-ಆಮ್ ಕಲ್ಯಾಣ ಮಂಟಪ, ಗೊಂಬೆ ತೊಟ್ಟಿ ಇವುಗಳು ಇತಿಹಾಸವನ್ನು ಸಾರುತ್ತವೆ. ಕಲ್ಯಾಣ ಮಂಟಪದ ಗೋಡೆಯ ಮೇಲೆ ಬರೆದಿರುವ ಚಿತ್ತಾರಗಳು, ತೈಲವರ್ಣದ ಕಲಾಕೃತಿಗಳು ಹಿಂದಿನ ಕಾಲದ ಮೆರವಣಿಗೆ ಮತ್ತು ದಸರಾದ ಭವ್ಯತೆಯನ್ನು ಬಿಂಬಿಸುತ್ತವೆ. ಗೊಂಬೆತೊಟ್ಟಿಯಲ್ಲಿ ಹಳೆಯ ಸಾಂಪ್ರದಾಯಿಕ ಗೊಂಬೆಗಳಿವೆ. ಆಗ ಅರಸೊತ್ತಿಗೆಯ ಮಂದಿಯನ್ನೊಯ್ಯಲು ಬಳಸುತ್ತಿದ್ದ 84 ಕೆಜಿ ಚಿನ್ನದ ಕುಸುರಿಯಿಂದ ಅಲಂಕರಿಸಿರುವ ಮರದ ಅಂಬಾರಿ ಇಲ್ಲಿದೆ.
ಆಯುಧ ಶಾಲೆ
ಅರಮನೆಯಲ್ಲಿರುವ ಬೇರೆಲ್ಲ ಕೋಣೆಯದ್ದು ಒಂದು ತೂಕವಾದರೆ, ಆಯುಧಶಾಲೆಯದ್ದೇ ಒಂದು ತೂಕ. ರಾಜಮನೆತನದವರು ಬಳಸುತ್ತಿದ್ದ ವಿವಿಧ ಬಗೆಯ ಆಯುಧಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. 14ನೆ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಘ್ರನಖ ಮುಂತಾದ ಆಯುಧಗಳ ತಾಳಕ್ಕೆ 20ನೆಯ ಶತಮಾನದ ಪಿಸ್ತೂಲುಗಳು, ಬ೦ದೂಕುಗಳ ಮೇಳವಿದೆ.
ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ
ವಜ್ರಮುಷ್ಠಿ
ಒಡೆಯರ್ ವ೦ಶದ ಪ್ರಸಿದ್ಧ ಅರಸು ರಣಧೀರ ಕ೦ಠೀರವ ಅವರು ಉಪಯೋಗಿಸಿದ್ದ ಖಡ್ಗಗಳಲ್ಲಿ ಒ೦ದಾದ 'ವಜ್ರಮುಷ್ಠಿ' ಇಲ್ಲಿದೆ. ಮೈಸೂರು ಹುಲಿ ಟಿಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳು ಕೂಡ ಇಲ್ಲಿವೆ. ಅರಮನೆಯ ಆವರಣದಲ್ಲಿ 12 ದೇವಾಲಯಗಳಿವೆ. ಇವುಗಳಲ್ಲಿ ಸೋಮೇಶ್ವರ ಮತ್ತು ಲಕ್ಷ್ಮೀರಮಣ ದೇವಾಲಯಗಳು ಸುಪ್ರಸಿದ್ಧ. 14ನೆ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಡಿಭೈರವನ ದೇವಾಲಯ ಅತ್ಯಂತ ಪುರಾತನವಾಗಿದೆ.
ಆ ಸೊಬಗು ಬಲ್ಲವನೇ ಬಲ್ಲ!
ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ. ಈ ವೇಳೆ ಸಾರ್ವಜನಿಕ ವೀಕ್ಷಣೆಗೆ ಅರಮನೆ ಲಭ್ಯ. ಮೈಸೂರು ಅರಸರ ಕಾಲದ ಗತ ವೈಭವನ್ನು ಕಣ್ಣಲ್ಲಿ ತುಂಬಿಕೊಂಡಷ್ಟೂ ತುಳುಕುತ್ತದೆ. ನೋಡಿದಷ್ಟೂ ಮುಗಿಯುವುದಿಲ್ಲ. ಮತ್ತೆ ಮತ್ತೆ ಕಣ್ಮನ ಸೆಳೆಯುತ್ತದೆ ಅಂಬಾ ವಿಲಾಸ ಅರಮನೆ. ಮೈಸೂರು ಅರಮನೆಯು 97ಸಾವಿರಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಕಂಗೊಳಿಸುವಾಗ ಸೊಬಗು ಬಲ್ಲವನೇ ಬಲ್ಲನೇನೋ! ಮೊದಲೇ ಸುಂದರವಾಗಿರುವ ಮೈಸೂರು ಅರಮನೆಗೆ ಮತ್ತಷ್ಟು ಶೋಭೆ ಬಂದದ್ದು ರಾಜಾ ರವಿವರ್ಮನ ಚಿತ್ರಗಳಿಂದ. ಖ್ಯಾತ ಶಿಲ್ಪಿ ವೆಂಕಟಪ್ಪನವರ ಕೊಡುಗೆಯೂ ಅರಮನೆಗೆ ಅಪಾರವಾಗಿದೆ.
above info is from FB- Veena Joshi
****

ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ ? ಅಂಬಾರಿ ಅರಮನೆಗೆ ಬಂದ ರೋಚಕ ಕಥೆ!
ಮೈಸೂರು ದಸರಾ ಎಂದರೆ ಅದು ಕನ್ನಡನಾಡಿಗೆ ನಾಡಹಬ್ಬವಾದರೆ, ಈ ಸಾಂಸ್ಕೃತಿಕ ಹಬ್ಬದ ಕೀರ್ತಿ ಮಾತ್ರ ವಿಶ್ವಪ್ರಸಿದ್ಧ!, ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಬಹುಮುಖ್ಯವಾದ ಆಕರ್ಷಣೆ ಎಂದರೆ ಅದು ಚಿನ್ನದಅಂಬಾರಿ. ಜಂಬೂಸವಾರಿಯಲ್ಲಿ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತರುವ, ಈ ಅಂಬಾರಿಯಲ್ಲಿ ವಿರಾಜಮಾನಳಾಗಿ ಬರುವ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಜನರು ದೇಶ ವಿದೇಶಗಳಿಂದ ಬರುತ್ತಾರೆ. ಇಂತಹ ಅಂಬಾರಿಯ ಬಗ್ಗೆ ನಾವು ತಿಳಿಯಲೇ ಬೇಕಾದ ಇತಿಹಾಸವಿದೆ. ಅತ್ತ ಒಂದು ದೃಷ್ಟಿ ಹರಿಸೋಣ ಬನ್ನಿ.
ಅಂಬಾರಿಯ ಇತಿಹಾಸ ಬಹಳ ರೋಚಕವಾಗಿದೆ. ಮೂಲತಃ ಈ ರತ್ನಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನುದೇವಗಿರಿಯ ರಾಜ ಮುಮ್ಮಡಿಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು. ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟ ದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ.
ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲರಾಜ್ಯದ ಮೇಲೆ ಧಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನುರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀರಂಗಪಟ್ಟಣ್ಣವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ.
ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರಾ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಪುನೀತವಾಗಿದೆ.
********
ಅಂಬಾರಿ ಹೊತ್ತ ಆನೆಗಳ ಇತಿಹಾಸ----►
ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿ ಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ.
ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ. ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಅರಮನೆಯ ಮಹಾದ್ವಾರಗಳಲ್ಲೊಂದಾದ ಜಯಮಾರ್ತಾಂಡ ದ್ವಾರಕ್ಕೆ ಈ ಆನೆ ಹೆಸರು ಇಡಲಾಗಿದೆ.
1902 ರಿಂದ ಅಂಬಾರಿ ಹೊತ್ತ ಆನೆಗಳೆಂದರೆ
🐘ವಿಜಯಬಹದ್ದೂರ್
🐘ನಂಜುಂಡ
🐘ರಾಮಪ್ರಸಾದ್
🐘ಮೋತಿಲಾಲ್
🐘ಸುಂದರ್ ರಾಜ್
🐘ಐರಾವತ
1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್
ಚಿತ್ರ 'ದಿ ಎಲಿಫೆಂಟ್ ಬಾಯ್'ಗೆ
ಬಳಸಿಕೊಳ್ಳಲಾಯಿತು ಆನೆಯ ಮಾವುತನೆ
ಚಿತ್ರದ ನಾಯಕ,ಚಿತ್ರ ಜಗತ್ತಿನಾದ್ಯಂತ
ಪ್ರದರ್ಶನಗೊಂಡಿತು. ಆ ಮಾವುತ
ಮತ್ಯಾರು ಅಲ್ಲ 7 ವರ್ಷದ ಹುಡುಗ
ಮೈಸೂರು ಸಾಬು.
🐘ಗಜೇಂದ್ರ
🐘ಬಿಳಿಗಿರಿ
ಇದು ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ
ದೈತ್ಯ ಆನೆಯಾಗಿದ್ದು ಇದರ ಎತ್ತರ 10.5
ಅಡಿ. ಸುಮಾರು 7 ಸಾವಿರ ಕೆ.ಜಿ. ಇತ್ತಂತೆ.
1975ರಲ್ಲಿ ಇದು ಮರಣ ಹೊಂದಿತ್ತು. ಇದರ
ಮಾವುತ ಗೌಸ್ ಅಂತ. ಬಿಳಿಗಿರಿ ಹೆಗ್ಗಳಿಕೆ ಏನೆಂದರೆ
ಇದೇ ಮಹಾರಾಜರನ್ನು ಹೊತ್ತೂಯ್ದು ಕೊನೇ ಆನೆ.
🐘ರಾಜೇಂದ್ರ,
ಗಂಧದ ಗುಡಿ' ಚಿತ್ರದಲ್ಲಿ ಡಾ. ರಾಜ್ ಆನೆಯ
ದಂತದ ಮೇಲೆ ಕುಳಿತು ಹಾಡುವ ಹಾಡುವ
ಹಾಡು ಯಾರಿಗೆ ತಾನೆ ನೆನಪಿಲ್ಲ.ಈ ಆನೆಯ
ಹೆಸರು ರಾಜೇಂದ್ರ.
ಚಿತ್ರದುದ್ದಕ್ಕೂ ಇದು ಭಾಗವಹಿಸಿದೆ. ಡಾ.
ರಾಜ್ಗೆ ಅಚ್ಚುಮೆಚ್ಚಿನ ಆನೆ ಕೂಡ.
🐘ದ್ರೋಣ
ದ್ರೋಣ 10.25 ಎತ್ತರದ ಆನೆ ದ್ರೋಣ.
ಅದು ಸುಮಾರು 6,400 ಕೆ.ಜಿ ತೂಕ
ಇತ್ತು.ದ್ರೋಣ ಆನೆ 18 ವರ್ಷ ಸತತವಾಗಿ
ಅಂಬಾರಿಗೆ ಬೆನ್ನುಕೊಟ್ಟ ಖ್ಯಾತಿ,
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ
ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್
ಟಿಪ್ಪುಸುಲ್ತಾನ್'ನ
ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದೂ ಇದೇ ದ್ರೋಣ,
1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಗುಲಿ
ದ್ರೋಣ ಸಾವನ್ನಪ್ಪಿತು.
🐘ಅರ್ಜುನ
ದ್ರೋಣ ನ ನಂತರ ಅರ್ಜುನ ಒಮ್ಮೆ ಅಂಬಾರಿ
ಹೊತ್ತಿದ್ದ ಆದರೆ ನಂತರದ ದಿನಗಳಲ್ಲಿ
ಮಾವುತನನ್ನು ಕೊಂದ ಆರೋಪದಲ್ಲಿ
ಅರ್ಜುನನನ್ನು ಉತ್ಸವದಿಂದ
ಹೊರಗುಳಿಸಲಾಯಿತು.
🐘ಬಲರಾಮ
ಅರ್ಜುನನ ನಂತರ ಬಲರಾಮನಿಗೆ ಅಂಬಾರಿ
ಹೊರಿಸಲಾಯಿತು,ಬಲರಾಮ ಶಾಂತ ಸ್ವಭಾವದ
ಆನೆ ಆಗಿದ್ದು 1987ರಲ್ಲಿ ಕಟ್ಟೆಪುರದಲ್ಲಿ
ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ,
ಪ್ರಶಾಂತ ಈ ಐದೂ ಆನೆಗಳನ್ನು ಹಿಡಿದಿದ್ದರು.
ಹನ್ನೊಂದು ವರ್ಷಗಳ ಕಾಲ ಅಂಬಾರಿ ಹೊತ್ತ
ಬಲರಾಮನಿಗೆ ಕಳೆದ ವರ್ಷ ನಿವೃತ್ತಿ ದೊರೆತಿದೆ.
🐘ಅರ್ಜುನ
ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ
ಹೊತ್ತಿದ್ದ ಅರ್ಜುನನ ಗುಣದಲ್ಲಿ ಸ್ವಲ್ಪ
ಕೀಟಲೆ ಸ್ವಭಾವವಿರುವ ಅರ್ಜುನನ ಮೇಲೆ
ಸಾಕಷ್ಟು ಟೀಕೆಗಳು ಬಂದಿತ್ತು ಆದರೂ ಬಲರಾಮನಿಗೆ
ವಯಸ್ಸಾದ ಕಾರಣ ಕಳೆದವರ್ಷದಿಂದ ಅಂಬಾರಿ
ಹೊರುವ ಜವಾಬ್ದಾರಿ ಅರ್ಜುನನಿಗೆ ನೀಡಲಾಗಿದೆ.
ಅರ್ಜನ ಬರೋಬ್ಬರಿ 5,535 ಕೆಜಿ
ತೂಕವನ್ನು ಹೊಂದುವ ಮೂಲಕ ತಂಡದ
ಎಲ್ಲಾ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ. (died in 2019)
***********
2020 song by vijay prakash

ನಮ್ಮ ಮೈಸೂರು..
ರಾಮಾನುಜಾ ರಸ್ತೆಯ ಶ್ರೀನಿವಾಸ ಅಗ್ರಹಾರದಲ್ಲಿ ಭಕ್ತಕುಂಬಾರ ಖ್ಯಾತಿಯ ಹುಣಸೂರು ಕೃಷ್ಣಮೂರ್ತಿಗಳು...
ಎಂಟನೇ ಕ್ರಾಸಿನಲ್ಲಿ ಪುಟ್ಟಣ್ಣ ಕಣಗಾಲ್ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು...
ಹತ್ತನೇ ಕ್ರಾಸಿನ ಮೊದಲನೇ ಪಾರ್ಕಿನ ಮೂಲೆಯ ಮನೆಯಲ್ಲಿ ನಟ ನಿರ್ಮಾಪಕ ಚೇತನ್ ರಾಮರಾವ್...
ಹದಿನೆಂಟನೇ ಕ್ರಾಸಿಗೆ ಬಂದರೆ ಬಲಭಾಗದ ಎರಡನೇ ಮನೆ ಹಾಸ್ಯನಟ ರತ್ನಾಕರ್ ಅವ್ರದ್ದು..
ಹತ್ತೊಂಭತ್ತರಲ್ಲಿ ಬಾಲಿವುಡ್ಡಿನ ನಿರ್ದೇಶಕ ರೋಹಿತ್ ಶೆಟ್ಟಿಯ ಅಪ್ಪ ಫೈಟರ್ ಶೆಟ್ಟಿ ಇದ್ರು...
ನೂರೊಂದು ಗಣಪತಿ ಹಿಂಭಾಗದ ಬಸವೇಶ್ವರ ರಸ್ತೆಲೇ ನಮ್ಮ ಜೂನಿಯರ್ ನರಸಿಂಹರಾಜು ಹುಟ್ಟಿ ಬೆಳೆದಿದ್ದು...
ಅದೇ ನೂರೊಂದು ಗಣಪತಿಯನ್ನು ಬಳಸಿಕೊಂಡು ನಂಜುಮಳಿಗೆ ಸರ್ಕಲ್ಲು ಹತ್ತಿ ನೈರುತ್ಯಕ್ಕೆ ಬಂದರೆ ಅಲ್ಲಿ ನಿಮಗೆ ಸಿಗೋದು ಗೋಪಾಲ ಸ್ವಾಮಿ ಶಿಶುವಿಹಾರ... ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ ಅಲ್ಲೇ ಓದುತ್ತಾ ಇದ್ದಿದ್ದು...
ಅದೇ ದೇಗುಲದ ವಾಯುವ್ಯ ಮೂಲೆಯಲ್ಲಿದ್ದ ಚಡ್ಡಿ ಚಪಾತಿ ಗುರುಮಲ್ಲಪ್ಪ ಹೋಟೆಲಿನ ಹಿಂಭಾಗದ ಮನೆಯ ಖಾಯಂ ಸದಸ್ಯ / ಅತಿಥಿ ಕಲಾರತ್ನ ಉದಯ ಕುಮಾರ್...
ಅಲ್ಲಿಂದ ಉತ್ತರಕ್ಕೆ ತಿರುಗಿ ಸೀದಾ ಲಕ್ಷ್ಮೀಪುರಂ ಗೆ ಬನ್ನಿ... ಅಲ್ಲಿ ನೀವು "ಕುಮಾರಿ ಜಯಲಲಿತಾ" ಹುಟ್ಟಿದ ಮನೆ ಕಣ್ತುಂಬಿಕೊಳ್ಳಬಹುದು...
ಅಲ್ಲಿ ಅದನ್ನ ನೋಡ್ಕೊಂಡು ಸೀದಾ ಕೆಳಕ್ಕಿಳಿದು ಬಲ್ಲಾಳ್ ಸರ್ಕಲ್ಲು ದಾಟಿ ಕೊಪ್ಪಲ್ ರೈಲ್ವೆ ಸೇತುವೆ ಕೆಳಗೆ ಬಂದ್ರೆ... ಸರಸ್ವತಿಪುರದ ಮೂರನೇ ಮೈನಿನಲ್ಲಿ ನಮ್ಮ ಜಲೀಲ... ಅಂಬರೀಶಣ್ಣ...
ಮೊದಲನೇ ಮೈನಿನಲ್ಲಿ ೧೯೫೧ ರಲ್ಲಿ ಬಿಡುಗಡೆಯಾದ "ಜಗನ್ಮೋಹಿನಿ" ಚಿತ್ರದ ನಾಯಕಿ ಪ್ರತಿಮಾದೇವಿ,ಮತ್ತವರ ಮಕ್ಕಳಾದ ನಟ, ನಿರ್ಮಾಪಕ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ನಾಯಕಿ ನಿರ್ಮಾಪಕಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ಹೀರೋ ಆದಿತ್ಯ...
ಅಲ್ಲಿಂದ ಎರಡು ಕ್ರಾಸು ಪಕ್ಕಕ್ಕೆ ರಾಮಾಚಾರಿ ಮೇಷ್ಟ್ರು... ಅಶ್ವಥ್......
ಸರಸ್ವತಿಪುರಂ ದಾಟಿ ಮಾನಸಗಂಗೋತ್ರಿ ಮುಟ್ಟಿ ಪಕ್ಕಕ್ಕೆ ಬಂದ್ರೆ ಪಡುವಾರಹಳ್ಳಿ... ಅಲ್ಲೇ ನಮ್ ಅಣ್ತಮ್ಮ ಯಶ್...
ಅಲ್ಲಿಂದ ಸೀದಾ ಕಾಳಿದಾಸ ರಸ್ತೆಗೆ ಬನ್ನಿ... ಪಂಚವಟಿ ಜಂಗ್ಷನ್ನು ... ಎಂಪಿ ಶಂಕರ್... ಅವರ ಮನೆ ಹೆಸರೇ ಪಂಚವಟಿ... ಅದನ್ನೇ ಆ ಕೂಡು ರಸ್ತೆಗೂ ಇಟ್ಟಿದ್ದಾರೆ...
ಅಲ್ಲಿಂದ ಕೆ.ಆರ್. ಸರ್ಕಲ್ ದಾಟಿ ಕೊಂಡು ಹಾರ್ಡಿಂಗ್ಸ್ ಸರ್ಕಲ್ ಮುಟ್ಟಿ ಬಲಕ್ಕೆ ತಿರುಗಿದರೆ ಇಟ್ಟಿಗೆ ಗೂಡು... ಅಲ್ಲೇ ನಮ್ ಬಂಗ್ಲೆ ಶಾಮರಾಯರ ಮಗ ದ್ವಾರಕೀಶ್ ಹುಟ್ಟಿ ಬೆಳೆದಿದ್ದು...
ಅಲ್ಲಿಂದ ಒಂದು ನೂರಡಿ ದೂರದಲ್ಲಿ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜು ಅವರ ನಿವಾಸ...
ಅಲ್ಲಿಂದ ಕಾರಂಜಿ ಕೆರೆಗೆ ಬಿದ್ದು ಈಜಿಕೊಂಡು ಆ ಕಡೆ ದಡ ಮುಟ್ಟಿದ್ರೆ ಸಿದ್ದಾರ್ಥ ಲೇ ಔಟು.. ನಮ್ಮ ತೂಗುದೀಪ ಶ್ರೀನಿವಾಸ್ ಮನೆ ಕಟ್ಕೊಂಡಿದ್ದು... ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲೇ ಹುಟ್ಟಿ ಬೆಳೆದಿದ್ದು... ಅವರ ಸಹೋದರ ನಿರ್ಮಾಪಕ ದಿನಕರ್ ಈಗ್ಲೂ ಅಲ್ಲೇ ಇರೋದು ...
ಆಲ್ಮೋಸ್ಟ್ ಇಡೀ ಕನ್ನಡ ಚಿತ್ರರಂಗದ ಮಧ್ಯೆ .....
ನಮ್ಮ ಮೈಸೂರು
************
ಹುಟ್ಟಿದ ಊರು ಎಲ್ಲರಿಗೂ ಹೆಮ್ಮೆ ಎನಿಸುವುದು ಆಶ್ಚರ್ಯವಿಲ್ಲ.
ಆದರೇ, ಮೈಸೂರಿನಲ್ಲಿ ಹುಟ್ಟಿದವರಿಗೆ ಆ ಹೆಮ್ಮೆಯ ಜತೆ ಸ್ವಲ್ಪ ಗರ್ವವೂ ಸೇರಿರಬೇಕು. ಹಾಗಿಲ್ಲದಿದ್ದರೆ ಅದು ನನ್ನಷ್ಟರ ಮಟ್ಟಿಗೆ ತಪ್ಪಾದೀತು.
ಆಗಿನ ಐನೂರ ಇಪ್ಪತ್ತೈದು ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನವೇ ಶ್ರೇಷ್ಠವಾದ ಸಂಸ್ಥಾನ ಎಂದರೆ ತಪ್ಪಾಗಲಾರದು. ಗಾಂಧೀಜಿ ಅದಕ್ಕೆ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರನ್ನು ‘ರಾಜ ಋಷಿ’ ಎಂದು ಕರೆದರೇನೋ. ಲಾರ್ಡ್ ಸ್ಯಾಂಕೇ 1930 ರ ಎರಡನೇಯ ರೌಂಡ್ ಟೇಬಲ್ ಕಾನ್ಫ್ರೆಂಸ್ ನಲ್ಲಿ ‘Mysore is the best administered state in the world’. ಎಂದು ಹೇಳಿದನೇನೋ.
1799 ರ ಈಸ್ಟ್ ಇಂಡಿಯಾ ಕಂಪನಿಗೂ – ಮೈಸೂರು ಮಹಾರಾಣಿ ಲಕ್ಷ್ಮಮ್ಮಣಿಯವರ ನಡುವಿನ ತಹನಾಮೆಯ ಪ್ರಕಾರ ಉತ್ತರಕ್ಕೆ ಮಹಾರಾಷ್ಟ್ರ ಸೀಮೆ, ಬಳ್ಳಾರಿ ಜಿಲ್ಲೆ, ಪೂರ್ವಕ್ಕೆ ಕರ್ನೂಲ್, ಕಡಪ, ಚಿತ್ತೂರ್ ಜಿಲ್ಲೆಗಳು, ದಕ್ಷಿಣಕ್ಕೆ ಕೋಯಂಬತ್ತೂರ್, ಪಶ್ಚಿಮಕ್ಕೆ ಕೊಡಗು ಇವುಗಳ ನಡುವಿನ 230 ಮೈಲಿ ಪೂರ್ವಪಶ್ಚಿಮ, 190 ಮೈಲಿ ಉತ್ತರ ದಕ್ಷಿಣ – ಪ್ರದೇಶವನ್ನು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು.
ಇಂದು ನಾವು ಸಿಡುಬು ಖಾಯಿಲೆಯಿಂದ ಮುಕ್ತರಾಗಿದ್ದೇವೆ ಎಂದರೆ ಅದಕ್ಕೆ ಕಾರಣ, 1796 ರಲ್ಲಿ ಪ್ರಪ್ರಥಮ ಬಾರಿ ಸಿಡುಬು ಲಸಿಕೆಯ ಪ್ರಯೋಗ ನಡೆದದ್ದು ಮೈಸೂರು ಅರಮನೆಯಲ್ಲಿ. ಅದರ ಮೊದಲ ಬಳಕೆ ಮೈಸೂರಿನಲ್ಲಿ. 1833ರಲ್ಲಿ ಅಲೋಪತಿ ವೈದ್ಯಕೀಯ ಪದ್ಧತಿ ರಾಜ್ಯದಲ್ಲಿ ಪ್ರಾರಂಭವಾದದ್ದು.
ಕನ್ನಡಿ – ಕೈಸೋಪು ಬಳಕೆ ಶ್ರೀಮಂತರಿಗೆ ಸೀಮಿತವಾಗಿದ್ದ ಕಾಲದಲ್ಲಿ – 1932-34ರಲ್ಲಿ ಎಲ್ಲ ಹಳ್ಳಿಗಳಿಗೂ ಉಚಿತವಾಗಿ ನೀಡುತ್ತಿದ್ದರು- ಕ್ಲೀನಾಗಿರಿ – ನೀಟಾಗಿರಿ ಆಂದೋಲನಕ್ಕೆ ಕಾರಣವಾದ ದಿವಾನ್ ಮಿರ್ಜಾ ಇಸ್ಮಾಯಿಲ್.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಿಧವಾ ವೇತನ ನೀಡುತ್ತಿದ್ದರು. ತಿಂಗಳಿಗೆ ಐದು ರೂಪಾಯಿ, 25 ಸೇರು ಅಕ್ಕಿ.
ಅಮೆರಿಕ ಮಹಿಳೆಯರಿಗೆ ಓಟಿನ ಹಕ್ಕು ದೊರೆಯುವ ಮೊದಲೇ 1907ರಲ್ಲೇ ಮೈಸೂರು ಮಹಿಳೆಯರಿಗೆ ಓಟಿನ ಹಕ್ಕು ಮತ್ತು ಮೈಸೂರು ಲೆಜಿಸ್ಲೇಟಿವೆ ಕೌನ್ಸಿಲ್ ನಲ್ಲಿ ಭಾಗವಹಿಸುವ ಅವಕಾಶವಿತ್ತು.
ಬೆಂಗಳೂರಿನ ಸುತ್ತಮುತ್ತ 1000 ಕೂ ಹೆಚ್ಚು ಕೆರೆ ಕುಂಟೆಗಳನ್ನು ನಿರ್ಮಾಣಿಸಿದರು.
1917 ರಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಮಹಾರಾಣಿ ಕಾಲೇಜು ಪ್ರಾರಂಭವಾಯಿತು. 1934ರಲ್ಲಿ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪಿಸಲಾಯಿತು.
1882ರಲ್ಲಿ ಮೈಸೂರು ಬೆಂಗಳೂರು ರೈಲು ಮಾರ್ಗ ಪ್ರಾರಂಭವಾಯಿತು.
ಕಣ್ಣಂಬಾಡಿ, ಸಿಲ್ಕ್ ಫ್ಯಾಕ್ಟರಿ, ಟಿನ್ ಫ್ಯಾಕ್ಟರಿ, ಸೋಪ್ ಫ್ಯಾಕ್ಟರಿ, ಗಂಧದ ಎಣ್ಣೆ ಕಾರ್ಖಾನೆ(1917) ಪೊರ್ಸಲೈನ್- ಗ್ಲಾಸ್ ಫ್ಯಾಕ್ಟರಿ, ಸಕ್ಕರೆ ಕಾರ್ಖಾನೆ, ಪೇಪರ್ ಫ್ಯಾಕ್ಟರಿ, ಉಕ್ಕು ಕಾರ್ಖಾನೆ(1923) ಫೆರ್ಟಿಲೈಸರ್ ಕಾರ್ಖಾನೆ, ಕೋಲಾರ ಚಿನ್ನದ ಗಣಿ, ಸಿಮೆಂಟ್ ಕಾರ್ಖಾನೆ, ವಿಮಾನ ಕಾರ್ಖಾನೆ, ಮೈಸೂರ್ ಬ್ಯಾಂಕ್,(1913) ಚೇಂಬರ್ ಆಫ್ ಕಾಮರ್ಸ್ ಹೀಗೆ ರಾಜ್ಯದ ಆರ್ಥಿಕ ಬೆಳವಣಿಗೆಗೆ ಮೈಸೂರು ರಾಜ್ಯ ನೆರವಾಗುತ್ತಿತ್ತು.
ಬೆಂಗಳೂರಿಗೆ ಭಾರತದಲ್ಲೇ ಮೊದಮೊದಲು ವಿದ್ಯುತ್ಚಕ್ತಿ ಬರುತ್ತದೆ. ಮೊದಲ ಎಲಕ್ಟ್ರಿಸಿಟಿ ಆಫೀಸ್ ಎಂಜಿ ರಸ್ತೆಯಲ್ಲಿ ಇಂದಿಗೂ ಇದೆ.
ಮೈಸೂರ್ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಚಾಮರಾಜ ಟೆಕ್ನಿಕಲ್ ಇನ್ಸ್ಟಿಟ್ಯೂಟ್, ಸಂಸ್ಕೃತ ವಿದ್ಯಾ ಸಂಸ್ಥೆ – ಮೈಸೂರು ಮೆಡಿಕಲ್ ಕಾಲೇಜು (1924)ಹೀಗೆ ಹಲವಾರು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದರು.
ವೀಣಾ ವಾದನಕ್ಕೆ ಮತ್ತು ಇತರ ಸಂಗೀತ ಕಲೆಗಳಿಗೆ – ಮೈಸೂರು ಪೆಯಿಂಟಿಂಗ್- ಇವುಗಳಿಗೆ ಮೈಸೂರು ಪ್ರಖ್ಯಾತ. 1915ರಲ್ಲೇ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಲಾಯಿತು.
1886 ರಲ್ಲಿ - ಮೈಸೂರು ಮಾರುಕಟ್ಟೆ – ವ್ಯವಸ್ಥಿತವಾಗಿ ಕಟ್ಟಲ್ಪಟ್ಟ ಭಾರತದ ಮೊದಲ ಮಾರುಕಟ್ಟೆ. 1122 ಅಂಗಡಿಗಳಿವೆ.
ಮೈಸೂರಿನಲ್ಲಿದ್ದಷ್ಟು ಉಚಿತ ವಿದ್ಯಾರ್ಥಿ ನಿಲಯಗಳು ಎಲ್ಲೂ ಇದ್ದಿರಲಾರದೇನೋ. ಮೈಸೂರಿನ ಅನೇಕ ಸಾಹುಕಾರರು ವಿದ್ಯಾರ್ಥಿನಿಲಯಗಳನ್ನು ಕಟ್ಟಿಸಿದ್ದರು. ಅದಲ್ಲದೆ ಅಲ್ಲಿಯ ಇಂದ್ರ ಭವನ್, ರಾಘವೇಂದ್ರ ಭವನ್ ಮುಂತಾದ ಹೋಟೆಲುಗಳು ಬಡ ಹುಡುಗರಿಗೆ ಉಚಿತವಾಗಿ ಊಟ ತಿಂಡಿ ನೀಡುತ್ತಿದ್ದರು. ಅನೇಕ ಮನೆಗಳಲ್ಲಿ ವಾರದನ್ನ ಪದ್ದತಿ ನಡೆಯುತ್ತಿತ್ತು. ನಮ್ಮ ಮನೆಗೂ ಇಬ್ಬರು ಹುಡುಗರು ವಾರಕ್ಕೊಮ್ಮೆ ಬರುತ್ತಿದ್ದರು.
1892 ರಲ್ಲಿ ವಿವೇಕಾನಂದ ಮೈಸೂರಿಗೆ ಬರುತ್ತಾರೆ. ಆಗ ಅವರು ಸದ್ವಿದ್ಯಾ ಪಾಠಶಾಲೆಗೆ ಬೇಟಿ ನೀಡುತ್ತಾರೆ. ಅದಾದ ಸುಮಾರು 75 ವರ್ಷಗಳನಂತರ, ಅದೇ ಶಾಲೆಯಲ್ಲೇ ನಾನು ನನ್ನ ಮಿಡ್ಲ್ ಸ್ಕೂಲ್ ಓದಿದ್ದು.
ಮೈಸೂರು ನೆನಪಾದಾಗಲೆಲ್ಲ ಮೈಸೂರು ಪಾಕಿನಂತೆಯೇ ಕರಗಿಹೋಗುತ್ತದೆ ಮನಸ್ಸು. ತಮ್ಮ ಹುಟ್ಟಿದ ನೆಲ, ಜಲ, ಜನ ಎಂದೆಂದಿಗೂ ನಮ್ಮ ಬರುವಿಗಾಗಿ ಬೆಚ್ಚನೆ ತೋಳುಗಳನ್ನುತೆರೆದಿಟ್ಟುಕೊಂಡು ಕಾಯುತ್ತಲೇ ಇರುತ್ತದೆ.
from- Netflix ನಲ್ಲಿ ನೋಡಿದ Mango Dreams – Hinglish – ಸಿನೆಮಾ ಹಾಗೂ ಧರ್ಮೇಂದ್ರ ಕುಮಾರ್ ಅರೇನಹಳ್ಳಿಯವರ ‘ಮರೆತುಹೋದ ಮೈಸೂರಿನ ಪುಟಗಳು’
******
Some picictures clicked
September 17, 2020
chamundi goddess with gold ornaments donated by king of mysore
I love you Mysuru song
2019
Year 2021
***
No comments:
Post a Comment