ಪುಷ್ಯ ಮಾಸದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು
ಪುತ್ರದಾ ಏಕಾದಶಿ; ವೈಕುಂಠ ಏಕಾದಶಿ (ಶುಕ್ಲ ಏಕಾದಶಿ)
ಮುಕ್ಕೋಟಿ ದ್ವಾದಶಿ (ಶುಕ್ಲ ದ್ವಾದಶಿ)
ಬನದ ಹುಣ್ಣಿಮೆ / ಮಾಘಸ್ನಾನಾರಂಭ (ಹುಣ್ಣಿಮೆ)
ತ್ಯಾಗರಾಜ ಆರಾಧನ (ಕೃಷ್ಣ ಪಂಚಮಿ)
ಷಟ್ತಿಲಾ ಏಕಾದಶಿ (ಕೃಷ್ಣ ಏಕಾದಶಿ)
ಮಕರ ಸಂಕ್ರಾಂತಿ
ಉತ್ತರಾಯಣ ಪರ್ವಕಾಲ
ಧನುರ್ಮಾಸ ಸಮಾಪ್ತಿ
PusHya MaAsa - Significance.... Pushya maasa is the 10th month as per Hindu Lunar Calendar when Sun will be transiting partly in Dhanus Raasi (Sagittarius) and partly in Makara raasi (Capricorn) of the zodiac;
The montH in which Moon is @ or nearer to PusHyami star on full Moon day is reckoned as PusHya maAsa.
Pushyami star falls in the zodiac sign Karkataka (Cancer) Raasi; While Saturn (Shani) is Star Lord of Pushyami; Bruhaspathi (Jupiter) is the NakashthraAbhimaAni dEvata;
Imbibed and derived from the term PUSHTI (nourishmEnt) Pushya maAsa is also Pausha Maasa the Sun centric month; Sun is also called as PUSHAN;
Lord Sri Lakshmi-Narayana the great nourisher and supporter of the Universe, the one who is PUSHTI the vital force and sustaining power of all beings is the Maasa Niyaamaka governing Lord of Pushya Maasa;
Important festivals like Bhogi, Makara Sankranthi occurs during Pushya Masam.
Solar month Dhanurmasam ends with Bhogi festival.
When Sun enters Makara Raasi that day is celebrated as Makara Sankranthi or Makara Sankramana.
Lot of religious and spiritual significance is attached to this day as it marks the beginning of Sun’s travel in the Northward direction which is known as Uttarayana as per the calendars followed in South India.
Generally Makara Sankramana occurs on 14th day of January every year. Sometimes depending on the transit time of Sun into Makara raasi it will be observed on the next day ie. 15th January.
Makara Sankramana marks the beginning of famous bathing festival and religious fair known as Magha Mela held at Triveni Sangam (Prayaga-Allahabad).
It is said and believed that while carrying the nectar pot (Amrita Kalasa) by Lord Vishnu few drops of nectar fell at Allahabad (Prayaga), Haridwar, Nasik and Ujjain. These holy places (Theerthas) have acquired significant reputation where human beings could wash their sins by way of sacred bath at these places.
Taking holy bath at these places on Makara Sankranthi day has attained lot of spiritual significance which is considered as highly meritorious.
For learning Vedas full moon day in Pushya masa is considered as highly auspicious.
Aaradhana of Saint Sri Narahari Theertharu, Sri Purandara Dasaru, Sri Gopala Dasaru occurs during Pushya maasa.
Famous Paryaaya festival at Udupi Sri Krishna temple takes place during Pushya maAsa once in two years.
As per Solar calendar, full Moon day (Pournami) during Pushya maasa marks the beginning of Maagha Snaana that continues for a period of one month.
Vasthra dana and Thila dana are prescribed during Pushya Maasa;
Hari Sarvottama - Vaayu Jeevottama
Sri Gururaajo Vijayate
Important events during Pushya MaAsa
-Dhanur Vyatheepaatha Yoga;
-Bhogi festival – end of Dhanurmaasa;
-Makara Sankranthi (Uttarayana Parva Kaala);
-MaAgha SnaAna Aarambha;
-Sri Narahari Theerthara Aaraadhana (Hampi);
-Sri Gopala Daasara Aaraadhana;
-Sri Purandara Daasara Aaraandha (Hampi)
Important events during Pushya MaAsa
-Dhanur Vyatheepaatha Yoga;
-Bhogi festival – end of Dhanurmaasa;
-Makara Sankranthi (Uttarayana Parva Kaala);
-MaAgha SnaAna Aarambha;
-Sri Narahari Theerthara Aaraadhana (Hampi);
-Sri Gopala Daasara Aaraadhana;
-Sri Purandara Daasara Aaraandha (Hampi)
*****
ಪುಷ್ಯ ಮಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಇದರಿಂದ ಶನಿ ದೋಷವೇ ದೂರ..!
ಪುಷ್ಯ ಮಾಸವೆಂದರೆ ಅದುವೇ 10 ನೇ ಮಾಸ. ಈ ಮಾಸವು ಮಕರ ಸಂಕ್ರಾಂತಿ ಹಬ್ಬದೊಂದಿಗೆ ಆರಂಭವಾಗುತ್ತದೆ. ಈ ಮಾಸವನ್ನು ಶೂನ್ಯ ಮಾಸವೆಂದೂ ಕರೆಯಲಾಗುತ್ತದೆ. ಪುಷ್ಯ ಮಾಸವನ್ನು ಶೂನ್ಯ ಮಾಸವೆನ್ನಲು ಕಾರಣವೇನು..? ಪುಷ್ಯ ಮಾಸದ ಪ್ರಾಮುಖ್ಯತೆಯೇನು..? ಪುಷ್ಯ ಮಾಸದಲ್ಲಿ ಯಾವ ದೇವರುಗಳನ್ನು ಪೂಜಿಸಬೇಕು..? ಪುಷ್ಯ ಮಾಸದ ಪೂಜೆಯಿಂದ ಶನಿ ದೋಷ ದೂರಾಗುವುದಂತೆ ನಿಜವೇ..?
ಪುಷ್ಯ ಮಾಸವು ತೆಲುಗು ಮತ್ತು ಕನ್ನಡ ಕ್ಯಾಲೆಂಡರ್‌ನಲ್ಲಿ ಒಂದು ಪ್ರಮುಖ ಚಂದ್ರ ತಿಂಗಳು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಪುಷ್ಯ ಮಾಸಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇದರ ನಂತರ, ಮಾಘ ಮಾಸ ಆರಂಭವಾಗುವುದು. ಪುಷ್ಯ ಮಾಸವು ಭಗವಾನ್ ಶ್ರೀಮನ್ ನಾರಾಯಣನಿಗೆ ಅರ್ಪಿತವಾದ ಮಾಸವಾಗಿದೆ. ಪುಷ್ಯ ತಿಂಗಳಲ್ಲಿ ಪುಷ್ಯ ನಕ್ಷತ್ರದ ಮೇಲೆ ಬೀಳುವ ಹುಣ್ಣಿಮೆ ಪುಷ್ಯ ಯೋಗದ ಸೂಚಕವಾಗಿದೆ. ರಾಮಾಯಣದಲ್ಲಿ ರಾಮನ ಸಹೋದರನು ಜನಿಸಿದ ಈ ಮಾಸದ ಪ್ರಾಮುಖ್ಯತೆಯೇನು..? ಪುಷ್ಯ ಮಾಸದಲ್ಲಿ ಏನು ಮಾಡಬೇಕು..? ಏನು ಮಾಡಬಾರದು.? ಎನ್ನುವುದನ್ನು ತಿಳಿದುಕೊಳ್ಳೋಣ.
ಪುಷ್ಯ ಮಾಸವೆಂದರೆ ಚಂದ್ರನ ಕ್ಯಾಲೆಂಡರ್ ಪ್ರಕಾರ, ಮಾಸಗಳಲ್ಲಿ 10ನೇ ಮಾಸ. ಪುಷ್ಯ ತಿಂಗಳಿನಲ್ಲಿ ಸೂರ್ಯ ದೇವನು ದೇವರುಗಳ ದಿಕ್ಕೆಂದು ಗುರುತಿಸಿಕೊಂಡ ಉತ್ತರ ದಿಕ್ಕಿನಲ್ಲಿ ಸಂಚಾರವನ್ನು ಮಾಡುತ್ತಾನೆ. ಮತ್ತು ಅಂದಿನಿಂದ ಉತ್ತರಾಯಣ ಪುಣ್ಯಕಾಲವು ಪ್ರಾರಂಭವಾಗುತ್ತದೆ. ಉತ್ತರಾಯಣವು ಮಕರ ಸಂಕ್ರಾಂತಿಯ ಅತ್ಯಂತ ಪ್ರಸಿದ್ಧ ಹಬ್ಬದೊಂದಿಗೆ ಪ್ರಾರಂಭವಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದೇ ಪುಷ್ಯ ಮಾಸ ಆರಂಭವಾಗಿದೆ.
ಚಂದ್ರನ ಕ್ಯಾಲೆಂಂಡರ್ ಪ್ರಕಾರ, ಆಯಾ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಬರುವ ನಕ್ಷತ್ರದ ಹೆಸರನ್ನು ಆ ತಿಂಗಳಿಗೆ ಇಡಲಾಗುತ್ತದೆ. ಹುಣ್ಣಿಮೆಯ ದಿನದಂದು ಚಂದ್ರನೊಂದಿಗೆ ಸಂಬಂಧ ಹೊಂದಿರುವ ನಕ್ಷತ್ರವು ಪುಷ್ಯ ನಕ್ರತ್ರವಾದ್ದರಿಂದ ಈ ಮಾಸವನ್ನು ಪುಷ್ಯ ಮಾಸವೆಂದು ಕರೆಯಲಾಗುತ್ತದೆ. ಪ್ರತೀ ಬಾರಿ ಪುಷ್ಯ ಮಾಸವು ಆರಂಭವಾಗುವ ಮುನ್ನ ಧನುರ್ಮಾಸ ಅಥವಾ ಮಾರ್ಗಶೀರ್ಷ ಮಾಸ ಬರುತ್ತದೆ ಮತ್ತು ಪುಷ್ಯ ಮಾಸದ ನಂತರ ಮಾಘ ಮಾಸವು ಆರಂಭವಾಗುತ್ತದೆ.
ಸಂಕ್ರಾಂತಿ ಮರುದಿನ ದೀಪ ದಾನ ಮಾಡಿದರೆ ಸಂತಾನ ಪ್ರಾಪ್ತಿ..! ದೀಪ ದಾನಕ್ಕೆ ಶುಭ ದಿನ
ಪುಷ್ಯ ಮಾಸದ ಮಹತ್ವವೇನು..?
ಬಹಳಷ್ಟು ಆಧ್ಯಾತ್ಮಿಕ ಮಹತ್ವವು ಪುಷ್ಯ ಮಾಸದೊಂದಿಗೆ ವೀಶೇಷ ಸಂಬಂಧವನ್ನು ಹೊಂದಿದೆ. ಪುಷ್ಯ ಮಾಸವನ್ನು ಶೂನ್ಯ ಮಾಸವೆಂದು ಪರಿಗಣಿಸಲಾಗುವುದರಿಂದ ಈ ಮಾಸದಲ್ಲಿ,ಮದುವೆಗಳನ್ನು, ಗೃಹ ಪ್ರವೇಶವನ್ನು ಅಥವಾ ಇನ್ನಿತರ ಮಂಗಳ ಕಾರ್ಯಕ್ರಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಯಾಕೆಂದರೆ ಈ ಪುಷ್ಯ ಮಾಸದಲ್ಲಿ ಯಾವುದೇ ರೀತಿಯ ಶುಭ ಮುಹೂರ್ತವನ್ನು ನಾವು ಕಾಣಲು ಸಾಧ್ಯವಿಲ್ಲ.
ಅಂಗೈಯಲ್ಲೇ ಇದೆ ತೀರ್ಥಯಾತ್ರೆ.! ಅಂಗೈನ ಈ ಭಾಗ ಸ್ಪರ್ಶಿಸಿ ಅಷ್ಟೇ ಸಾಕು
ಹಾಗಾದರೆ ಪುಷ್ಯ ಮಾಸದಲ್ಲಿ ಏನು ಮಾಡಬೇಕು..?
ಪುಷ್ಯ ಮಾಸದಲ್ಲಿ ಮಂಗಳ ಕಾರ್ಯಕ್ರಮಗಳ ಹೊರತಾಗಿ, ಈ ಮಾಸದಲ್ಲಿ ಪೂಜೆಗಳನ್ನು ಮತ್ತು ಇನ್ನಿತರ ಸಾಮಾನ್ಯ ಆಚರಣೆಗಳನ್ನು ಮಾಡಲು ಪುಷ್ಯ ತಿಂಗಳು ಒಳ್ಳೆಯದು. ಪಿತೃಗಳಿಗೆ ಸಂತೋಷವನ್ನು ನೀಡಲು, ಪಿತೃ ದೋಷದಿಂದ ಮುಕ್ತಿಯನ್ನು ಹೊಂದಲು ಈ ಪುಷ್ಯ ಮಾಸವು ಉಪಯುಕ್ತಕಾರಿ. ಇನ್ನು ಪುಷ್ಯ ಮಾಸದಲ್ಲಿ ಬರುವ ಪೌರ್ಣಮಿ ಅಥವಾ ಪುಷ್ಯ ಪೌರ್ಣಮಿ ದಿನದಂದು ವೇದಗಳನ್ನು ಅಧ್ಯಯನ ಮಾಡಲು ಬಯಸುವವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪುಷ್ಯ ಪೌರ್ಣಮಿ ದಿನದಂದು ವೇದ ಅಧ್ಯಯನ ಅಥವಾ ವೇದಗಳ ಅಧ್ಯಯನವನ್ನು ಪ್ರಾರಂಭಿಸಲು ಉತ್ತಮ ದಿನವೆಂದು ಪರಿಗಣಿಸಲಾಗಿದೆ.
ಪುಷ್ಯ ಮಾಸದ ಆರಾಧನೆ
ಪುಷ್ಯ ಮಾಸದಲ್ಲಿ ಅಥವಾ ಪೌಷ್ಯ ಮಾಸದಲ್ಲಿ ದೇವರ ಆರಾಧನೆಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಲಕ್ಷ್ಮಿ ನಾರಾಯಣ ಅಂದರೆ ಲಕ್ಷ್ಮಿ ಮತ್ತು ವಿಷ್ಣು ಈ ಮಾಸದ ಪ್ರಧಾನ ದೇವ ಮತ್ತು ದೇವತೆಯಾಗಿದ್ದಾರೆ. ಅವರನ್ನು ಲಕ್ಷ್ಮಿ ನಾರಾಯಣ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಶನಿ ಗ್ರಹವು ಪುಷ್ಯ ಮಾಸದ ಪ್ರಧಾನ ಗ್ರಹವಾಗಿದೆ. ಮತ್ತು ಬೃಹಸ್ಪತಿ ಅಥವಾ ಗುರುವನ್ನು ಈ ಮಾಸದ ನಕ್ಷತ್ರ ದೇವತೆಯೆಂದು ಪರಿಗಣಿಸಲಾಗುತ್ತದೆ.
ಪುಷ್ಯ ಮಾಸದಲ್ಲಿ ಭೇಟಿ ನೀಡಬೇಕಾದ ದೇವಾಲಯಗಳು
ಪುಷ್ಯ ಮಾಸದಲ್ಲಿ ಮನೆಯಲ್ಲೇ ದೇವರನ್ನು ಪೂಜಿಸುವುದರೊಂದಿಗೆ ದೇವಾಲಯಕ್ಕೂ ಭೇಟಿ ನೀಡಿ ದೇವರ ಪೂಜೆಯನ್ನು ಮಾಡಬೇಕಾಗುತ್ತದೆ. ಭಕ್ತರು ವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡಿ ಲಕ್ಷ್ಮಿ ನಾರಾಯಣನನ್ನು ಪೂಜಿಸಬೇಕು. ಭಗವಾನ್ ಶನಿ ಮತ್ತು ಗುರು ಗ್ರಹವು ಪುಷ್ಯ ತಿಂಗಳ ಆಡಳಿತ ಗ್ರಹವಾಗಿರುವುದರಿಂದ ಭಗವಾನ್ ಶನಿಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಬೇಕು.
ಪುಷ್ಯ ಮಾಸದ ಆಚರಣೆಗಳು
ಪುಷ್ಯ ಮಾಸದಲ್ಲಿ ಸಾಮಾನ್ಯವಾಗಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪದ್ಧತಿಯಿದೆ. ಮಕರ ಸಂಕ್ರಾಂತಿಯಿಂದ ಪುಷ್ಯ ಮಾಸವು ಆರಂಭವಾಗಿ, ಈ ಮಾಸದಲ್ಲಿ ಅನೇಕ ಆಚರಣೆಗಳು ಕಂಡು ಬರುತ್ತದೆ. ಪುಷ್ಯ ಮಾಸದಲ್ಲಿ ಏಕಾದಶಿ, ಹುಣ್ಣಿಮೆ, ಕೃಷ್ಣ ಪಂಚಮಿ, ಮಕರ ಸಂಕ್ರಾಂತಿ, ಉತ್ತರಾಯಣ ಪರ್ವಕಾಲ ಸೇರಿದಂತೆ ಇನ್ನು ಅನೇಕ ಆಚರಣೆಗಳು ಪುಷ್ಯ ಮಾಸದಲ್ಲಿ ಇರುತ್ತದೆ.
ಪುಷ್ಯ ಮಾಸಾದಲ್ಲಿ ಪೂಜೆ
ಪುಷ್ಯ ಮಾಸದಲ್ಲಿ ಬರುವ ಅಮಾವಾಸ್ಯೆಯ ದಿನದಂದು ಭಗವಾನ್ ಶನಿಗೆ ತೈಲಾಭಿಷೇಕವನ್ನು ಮಾಡಬೇಕು. ಇದು ನಿಮ್ಮ ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಪರಿಗಣಿಸಲಾಗಿದೆ. ಭಕ್ತರು ಲಕ್ಷ್ಮಿ ದೇವಿಯನ್ನು ಧನ್ಯ ಲಕ್ಷ್ಮಿ ಮತ್ತು ಧನ ಲಕ್ಷ್ಮಿ ರೂಪದಲ್ಲಿ ಪುಷ್ಯ ಮಾಸದಲ್ಲಿ ಪೂಜಿಸಬೇಕು. ಇದರಿಂದ ಧನ - ಧಾನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
ಪುಷ್ಯ ಮಾಸಾದಲ್ಲಿ ದಾನ
ಪುಷ್ಯ ಮಾಸದಲ್ಲಿ ಬಹುಮುಖ್ಯವಾಗಿ ವಸ್ತ್ರ ದಾನ ಅಂದರೆ ಬಟ್ಟೆ ದಾನವನ್ನು ಮತ್ತು ಎಳ್ಳು ದಾನವನ್ನು ಮಾಡಬೇಕು. ಪುಷ್ಯ ಮಾಸದ ಅಮಾವಾಸ್ಯೆಯ ದಿನದಂದು ವಸ್ತ್ರದಾನ ಮತ್ತು ಎಳ್ಳು ದಾನ ಮಾಡುವುದರಿಂದ ಸಾಡೇಸಾತಿ ಶನಿ ದೋಷ ಸೇರಿದಂತೆ ಶನಿಗೆ ಸಂಬಂಧಿಸಿದ ಎಲ್ಲಾ ದೋಷಗಳು ದೂರಾಗುತ್ತದೆ.
*****
ಶಿಂಶುಮಾರನ ರಂಗೋಲಿ. ಒಂದು ತಿಂಗಳು ಪುಷ್ಯ ಮಾಸ ಪೂರ್ತಿ ಹಾಕಬೇಕು. ರಂಗೋಲಿ ಅದರಲ್ಲಿರುವ ರೂಪಗಳ ಪರಿಚಯ ಕೆಳಗೆ ಕೊಟ್ಟಿದೆ
ಶಿಂಶುಮಾರನ ರಂಗೋಲಿ ಪರಿಚಯ
ಈ ಬಾರಿ ಪುಷ್ಯ ಮಾಸವು 2021 ರ ಜನವರಿ 14 ರಂದು ಗುರುವಾರದಿಂದ ಆರಂಭವಾಗಿದ್ದು, 2021 ರ ಫೆಬ್ರವರಿ 11 ರಂದು ಗುರುವಾರ ಮುಕ್ತಾಯಗೊಂಡು.
No comments:
Post a Comment