ಬಹಳ ಅಪರೂದ ವಿಷ್ಣವಿನ ಷೋಡಶ ನಾಮವಳಿಗಳ ಕುರಿತು ಅವಲೋಕಿಸೋಣ. ಯಾವ ಯಾವ ಸಂಧರ್ಭದಲ್ಲಿ ವಿಷ್ಣುವಿನ ಯಾವ ನಾಮದ ಸ್ಮರಣೆ ಮಾಡಬೇಕೆಂಬ ವಿಷಯ ಕೆಳಗಿನ ಶ್ಲೋಕಗಳ ಮೂಲಕ ತಿಳಿಯೋಣ
ಔಷಧೇ ಚಿಂತಯೇದ್ವಿಷ್ಣುಂ ಭೋಜನೇಚ ಜನಾರ್ಧನಮ್ |
ಶಯನೇ ಪದ್ಮನಾಭಂಚ ವಿವಾಹೇ ಚ ಪ್ರಜಾಪತಿಮ್ ||೧||
ಔಷಧಿಯನ್ನು ಸ್ವೀಕರಿಸುವ ಕಾಲದಲ್ಲಿ ವಿಷ್ಣುವನ್ನು, ಆಹಾರವನ್ನು ಸ್ವೀಕರಿಸುವಾಗ ಜನಾರ್ಧನನನ್ನು, ಮಲಗುವ ಸಮಯದಲ್ಲಿ ಪದ್ಮನಾಭನನ್ನು, ವಿವಾಹದ ಸಮಯದಲ್ಲಿ ಪ್ರಜಾಪತಿಯನ್ನು ಸ್ಮರಿಸಬೇಕು.
ಯುದ್ಧೇ ಚಕ್ರಧರಂದೇವಂ ಪ್ರವಾಸೇ ಚ ತ್ರಿವಿಕ್ರಮಮ್ |
ನಾರಾಯಣಂ ತನು ತ್ಯಾಗೇ ಶ್ರೀಧರಂ ಪ್ರಿಯಸಂಗಮೇ ||೨||
ಯುದ್ಧ ಕಾಲದಲ್ಲಿ ಚಕ್ರಧರ ದೇವನನ್ನು,ಪ್ರವಾಸ ಸಮಯದಲ್ಲಿ ತ್ರಿವಿಕ್ರಮನನ್ನು, ಶರೀರ ತ್ಯಾಗ ಮಾಡುವಾಗ ನಾರಾಯಣನನ್ನು, ಪ್ರೀತಿಯ ವ್ಯಕ್ತಿಗಳು ಸೇರುವಾಗ ಶ್ರೀಧರನನ್ನು ಸ್ಮರಿಸಬೇಕು.
ದು:ಸ್ವಪ್ನೇ ಸ್ಮರ ಗೋವಿಂದಂ ಸಂಕಟೇ ಮಧುಸೂಧನಮ್ |
ಕಾನನೇ ನಾರಸಿಂಹಂ ಚ ಪಾವಕೇ ಜಲಶಾಯಿನಮ್ ||೩||
ಘೋರ ಕನಸ್ಸುಗಳನ್ನು ಕಂಡಾಗ ಗೋವಿಂದನನ್ನು,ಸಂಕಷ್ಟದ ಸಮಯದಲ್ಲಿ ಮಧುಸೂಧನನನ್ನು, ಘೋರಾರಣ್ಯದಲ್ಲಿ ನಾರಸಿಂಹನನ್ನು, ಅಗ್ನಿ ದುರಿತದಲ್ಲಿ ಜಲಶಾಯಿಯನ್ನು ಸ್ಮರಿಸಬೇಕು.
ಜಲಮಧ್ಯೇ ವರಾಹಂ ಚ ಪರ್ವತೇ ರಘುನಂದನಮ್ |
ಗಮನೇ ವಾಮನಂ ಚೈವ ಸರ್ವ ಕಾರ್ಯೇಷು ಮಾಧವಮ್ ||೪||
ನೀರಿನ ನಡುವೆ ಸಿಲುಕಿದಾಗ ವರಾಹರೂಪಿಯನ್ನು, ಪರ್ವತ ಪ್ರದೇಶದಲ್ಲಿ ರಘುನಂದನನನ್ನು, ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ವಾಮನನನ್ನು, ಮತ್ತು ಸಮಸ್ತ ಕಾರ್ಯಗಳಲ್ಲಿ ಮಾಧವನನ್ನು ಸ್ಮರಿಸಬೇಕು.
ಷೋಡಶೈತಾನಿ ನಾಮಾನಿ ಪ್ರಾತರುತ್ತಾಯ ಯ: ಪಠೇತ್ |
ಸರ್ವ ಪಾಪವಿನಿರ್ಮುಕ್ತೋ ವಿಷ್ಣು ಲೋಕೇ ಮಹೀಯತೇ ||೫||
ಉಷ: ಕಾಲದೊಳೆದ್ದು ಈ ಹದಿನಾರು ನಾಮಗಳನ್ನು ಯಾರು ಪಠಿಸುವರೋ ಅವರು ತಮ್ಮ ಎಲ್ಲ ಪಾಪಗಳಿಂದ ವಿಮುಕ್ತಿ ಹೊಂದಿ ವಿಷ್ಣು ಲೋಕದಲ್ಲಿ ಉನ್ನತ ಪದವಿಯನ್ನು ಹೊಂದುವರು. ಈ ಭುವಿಯಲಿ ಇರುವಷ್ಟು ಸಮಯ ಸುಖ-ಶಾಂತಿಯನ್ನು ಅನುಭವಿಸುವರು.
||ಇತಿ ಶ್ರೀ ವಿಷ್ಣೋ: ಷೋಡಶನಾಮ ಸ್ತೋತ್ರಮ್||
ಸರ್ವರಿಗೂ ಒಳಿತಾಗಲಿ ಎಂದು ಮಹಾವಿಷ್ಣವನ್ನು ಪ್ರಾರ್ಥಿಸೋಣ.
*********
#ವಿಷ್ಣುಸಹಸ್ರನಾಮ
ಅಪಾಯ ಕೋಟಿಗಳಿಗೆ ಉಪಾಯ ಒಂದೇ - ಹರಿನಾಮ - ಶ್ರೀ. ವಿಷ್ಣು ಸಹಸ್ರ ನಾಮ.
(ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು)
ಉದ್ಯೋಗ ಪ್ರಾಪ್ತಿಗಾಗಿ:
ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ಧಿ: ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ || (೪೨ನೇ ಶ್ಲೋಕ)
ದಾರಿದ್ರ್ಯನಾಶನ, ಧನಪ್ರಾಪ್ತಿಗೆ:
ವಿಸ್ತಾರಃ ಸ್ಥಾವರಃ ಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ | ಅರ್ಥೋಅನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ ||
(೪೬ನೇ ಶ್ಲೋಕ)
ಐಶ್ವರ್ಯ ಪ್ರಾಪ್ತಿಗೆ:
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ | ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || (೬೫ನೇ ಶ್ಲೋಕ)
ವಿದ್ಯಾ ಪ್ರಾಪ್ತಿಗೆ:
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃತ್ | ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || (೮೦ನೇ ಶ್ಲೋಕ)
ಸಂತಾನ ಪ್ರಾಪ್ತಿಗೆ:
ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ | ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || (೯೦ನೇ ಶ್ಲೋಕ)
ಸರ್ವ ರೋಗ ನಿವಾರಣೆಗೆ:
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ | ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮ ಮೃತ್ಯುಜರಾತಿಗಃ || (೧೦೩ನೇ ಶ್ಲೋಕ)
ಪಾಪ ನಾಶನಕ್ಕೆ:
ಆತ್ಮ ಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ | ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || (೧೦೬ನೇ ಶ್ಲೋಕ)
ಸುಖ ಪ್ರಸವಕ್ಕೆ:
ಶಂಖಭೃನ್ನಂದಕೀ ಚಕ್ರೀ ಶಾಙ್ಗ೯ಧನ್ವಾ ಗದಾಧರಃ | ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || (೧೦೭ನೇ ಶ್ಲೋಕ)
ಈ ಮೇಲಿನವು ಕೆಲವು ಉದಾಹರಣೆ ಮಾತ್ರ. ಇನ್ನು ಅನುಸಂಧಾನದಿಂದ ಪ್ರತಿನಿತ್ಯವೂ, ಸಂಸಾರದ ಎಲ್ಲರೂ ದಿನಕ್ಕೋಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಣಮಾಡುವುದರಿಂದ ಬಹಳ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
*********
No comments:
Post a Comment