ಸಾಮಾನ್ಯ ಆಚರಣೆಯ ಹಿಂದಿರುವ ಅಸಾಮಾನ್ಯ ಆಧ್ಯಾತ್ಮ. ಸನಾತನ ಧರ್ಮದ ಜಾಡು ಹಿಡಿದು ಹೊರಟರೆ ದೇವರನ್ನು ಬಿಟ್ಟು ಯಾವ ಆಚರಣೆಯೂ ಇಲ್ಲ ಅನ್ನುವುದಕ್ಕೆ ಇದೊಂದು ನಿದರ್ಶನ.
ಮನುಷ್ಯನ ದೇಹದಲ್ಲಿ ಏಳು ಸಮುದ್ರಗಳಿವೆ.
ಕ್ರಮವಾಗಿ...
1. ಉಪ್ಪು ನೀರಿನ ಸಮುದ್ರ (ಮೂತ್ರಕೋಶ)
2. ಕಬ್ಬಿನ ಹಾಲಿನ ಸಮುದ್ರ (ಜನನಾಂಗ)
3.ಕಳ್ಳು (ಮದ್ಯದ) ಸಮುದ್ರ- ಹೊಟ್ಟೆ
4. ಬೆಣ್ಣೆಯ ಸಮುದ್ರ (ಹೃದಯ-ಕೃಷ್ಣ ಕದ್ದ ನಿಜವಾದ ಭಕ್ತಿಯೆಂಬ ಬೆಣ್ಣೆ)
5. ಮೊಸರಿನ ಸಮುದ್ರ (ಗಂಟಲು)
6. ಹಾಲಿನ ಸಮುದ್ರ - (ಹುಬ್ಬುಗಳ ಮಧ್ಯೆ ಇರುವ ಜಾಗ)
7. ಅಮೃತದ ಸಮುದ್ರ - (ಮೆದುಳಿನೊಳಗೆ-ನೆತ್ತಿಯ ಹತ್ತಿರ)
ತೆಂಗಿನಕಾಯಿಗೂ ಈ ಸಮುದ್ರಗಳಿಗೂ...ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನುವ ಹಾಗಿದೆ ಅಲ್ಲವೇ.
ನಮ್ಮ ದೇಹದಲ್ಲಿನ ಇಡಾ, ಪಿಂಗಳಾ ಹಾಗೂ ಸುಷುಮ್ನಾ ನಾಡಿಗಳು ಸಂಧಿಸುವ ಸ್ಥಳಗಳಿವು. ಅಲ್ಲೇ ನಿರ್ನಾಳ ಗ್ರಂಥಿಗಳೂ ಇವೆ.
ಉದಾ:
ಥೈಮಸ್ ಗ್ಲಾಂಡ್-ಹೃದಯದಲ್ಲಿ
ಪಿಟ್ಯುಟರಿ ಗ್ಲಾಂಡ್-ಮೆದುಳಿನ ಮಧ್ಯಭಾಗದಲ್ಲಿ (ಅಮೃತದ ಸಮುದ್ರ)
ವಿಷಯಕ್ಕೆ ಬರೋಣ.
ದೇವರನ್ನೇ ಸೇರುವುದನ್ನು ಜೀವನದ ಗುರಿಯಾಗಿಟ್ಟುಕೊಂಡಿದ್ದ ನಮ್ಮ ಪೂರ್ವಜರು ಇಂತಹ ಸಾಮಾನ್ಯವಾದ ಆಚರಣೆಯಲ್ಲೂ ಅಸಾಮಾನ್ಯ ಆಧ್ಯಾತ್ಮವನ್ನು ಹುದುಗಿಸಿಟ್ಟರು.
ತೆಂಗಿನಕಾಯಿ ಮನುಷ್ಯನ ತಲೆಯ ಭಾಗಕ್ಕೆ ಹೋಲುತ್ತದೆ.
ಮನುಷ್ಯ ಸಾಯುವಾಗ (ಹೌದು, ಸಾವಿಗೂ ತೆಂಗಿನಕಾಯಿಗೂ ಅವಿನಾಭಾವ ಸಂಬಂಧವಿದೆ.) ಪ್ರಾಣ ಶರೀರದ ಯಾವ ಭಾಗದಿಂದ ಬೇಕಾದರೂ ಹೋಗಬಹುದು.
ಉದಾ::ಕಣ್ಣು ಬಿಟ್ಟು, ಬಾಯಿ ತೆಗೆದು ಅಥವಾ ಮಲಮೂತ್ರ ದ್ವಾರಗಳಿಂದಲೂ ಸಹ.
ಪ್ರಾಣ ಊರ್ಧ್ವಮುಖವಾಗಿ ಹೋಗಿ ಬ್ರಹ್ಮರಂದ್ರದ (ನೆತ್ತಿಯ ಭಾಗ) ಮೂಲಕ ಹೋದರೆ ಅವನಿಗೆ ಪುನಃ ಹುಟ್ಟಿಲ್ಲ. ಅದೇ ಅಮೃತದ ಸಮುದ್ರ.! ಅಂತಹ ಜೀವ ಶಾಶ್ವತವಾಗಿ ಪರಮಾತ್ಮನನ್ನು ಸೇರುತ್ತದೆ.
ಒಮ್ಮೆ ಒಡೆದ ತೆಂಗಿನಕಾಯಿ ಮತ್ತೆ ಹುಟ್ಟಿದ್ದುಂಟೇ.
ತೆಂಗಿನ ಕಾಯಿ ಒಡೆಯುವಾಗ."ನನ್ನ ಪ್ರಾಣ ಅದರಂತೆಯೇ ಬ್ರಹ್ಮರಂಧ್ರದಿಂದ ಊರ್ಧ್ವಮುಖವಾಗಿ ಹೋಗಲಿ ಎನ್ನುವುದೇ ತೆಂಗನ್ನು ಒಡೆಯುವುದರ ಹಿಂದಿನ ಮರ್ಮ. ಇಷ್ಟು ಬೇಡಿಕೊಂಡೇ ಒಡೆಯಬೇಕು."
ಇಲ್ಲದಿದ್ದರೆ ಚಟ್ನಿಗೋ... ವಡೆಗೋ...ಪಾಯಸಕ್ಕೋ... ಕೆಟ್ಟರೆ ದೇವರಿಗೋ.
ಇನ್ನೂ ಒಂದು ಅನುಸಂಧಾನವಿದೆ.
ನಮಗೆ ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಲಿಂಗ ಶರೀರಗಳಿವೆ.
ತೆಂಗಿನಕಾಯಿಯ ಹೊರಭಾಗ (ಸಿಪ್ಪೆ, ನಾರು ಇತ್ಯಾದಿ) ಸ್ಥೂಲ ಶರೀರದಂತೆ..ಬಿದ್ದು ಹೋಗುವುದು.
ಸೂಕ್ಷ್ಮ ಶರೀರ(ಎಲೆಕ್ಟ್ರಿಕಲ್ ಶರೀರ ಅನ್ನಬಹುದು)
ಇದು ಅದರ ಚರಟ, ಪೊರಟೆ-ಪ್ರಯತ್ನದಿಂದ ಒಡೆಯಬೇಕು.
ಮೂರನೆಯದು ಲಿಂಗ ಶರೀರ...ಒಂಥರ ಕೊಬ್ಬರಿ ಇದ್ದ ಹಾಗೆ.
ಒಳಗಿರುವುದೇ ಅಮೃತತ್ವ.
ಒಂದು ಜೀವಿ ಮೋಕ್ಷ ಸಾಧಿಸುವುದೆಂದರೆ ಈ ಮೂರೂ ಶರೀರಗಳನ್ನು ನಾಶಪಡಿಸಿಕೊಳ್ಳಬೇಕು.
ಇಷ್ಟು ಅನುಸಂಧಾನವಿಟ್ಟುಕೊಂಡೇ ತೆಂಗಿನಕಾಯಿಯನ್ನು ಒಡೆಯಬೇಕು.
*******
No comments:
Post a Comment