SEARCH HERE

Tuesday 1 January 2019

ಮೊದಲು ಗಣಪತಿ ಪೂಜೆ ಯಾಕೆ why ganapati pooja first


ಮಂಗಳಕಾರ್ಯಗಳಲ್ಲಿ ಮೊದಲು ಗಣಪತಿ ಪೂಜೆ ಮಾಡುತ್ತಾರೆ ಯಾಕೆ?

ಪ್ರಥಮ ವಂದ್ಯ ಗಣೇಶ

ಗಣಪತಿಯ ಅನುಮತಿಯಿಲ್ಲದೇ ಯಾವುದೇ ದಿಕ್ಕಿನಿಂದ ಇತರ ದೇವತೆಗಳು ಪೂಜಾಸ್ಥಳಕ್ಕೆ ಬರಲಾರರು;

ಆದುದರಿಂದ ಎಲ್ಲ ಮಂಗಲಕಾರ್ಯಗಳಲ್ಲಿ ಅಥವಾ ಇತರ ಯಾವುದೇ ದೇವತೆಯ ಪೂಜೆ ಮಾಡುವಾಗ ಮೊದಲು ಗಣಪತಿಯ ಪೂಜೆ ಮಾಡುತ್ತಾರೆ. 

ಒಮ್ಮೆ ಗಣಪತಿಯು ದಿಕ್ಕುಗಳನ್ನು ಮುಕ್ತಗೊಳಿಸಿದರೆ ಯಾವ ದೇವತೆಯ ಪೂಜೆ ಮಾಡುವುದಿರುತ್ತದೆಯೋ, ಆ ದೇವತೆಯು ಪೂಜಾಸ್ಥಳಕ್ಕೆ ಬರಬಹುದು. 

ಇದನ್ನೇ ಮಹಾದ್ವಾರದ ಅಥವಾ ಮಹಾಗಣಪತಿಯ ಪೂಜೆ ಎನ್ನುತ್ತಾರೆ.

ಬಲಗಡೆಯ ಸೊಂಡಿಲು
ಸೊಂಡಿಲಿನ ಪ್ರಾರಂಭದ ತಿರುವು ಬಲಗಡೆಗೆ ಇರುವ ಮೂರ್ತಿ ಎಂದರೆ ದಕ್ಷಿಣಮೂರ್ತಿ ಅಂದರೆ ದಕ್ಷಿಣಾಭಿಮುಖಿ ಮೂರ್ತಿ. 

ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ.
ಬಲಬದಿಯು ಸೂರ್ಯನಾಡಿಗೆ ಸಂಬಂಧಪಟ್ಟಿದೆ ಹಾಗೂ ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ. 

ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. 
ಅಂತೆಯೇ ಸೂರ್ಯನಾಡಿಯು ಚಲನೆಯಲ್ಲಿರುವವನು ತೇಜಸ್ವಿಯಾಗಿರುತ್ತಾನೆ. 

ಇವೆರಡೂ ಅರ್ಥದಲ್ಲಿ ಬಲಗಡೆಗೆ ಸೊಂಡಿಲಿರುವ (ಬಲಮುರಿ) ಶ್ರೀಗಣಪತಿಗೆ 'ಜಾಗೃತ' ಗಣಪತಿ ಎಂದು ಹೇಳಲಾಗುತ್ತದೆ. 
ದಕ್ಷಿಣದಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳ ಪರೀಕ್ಷೆಯಾಗುವುದರಿಂದ ಆ ದಿಕ್ಕು ಬೇಡವೆನಿಸುತ್ತದೆ. 

ಮೃತ್ಯುವಿನ ನಂತರ ದಕ್ಷಿಣ ದಿಕ್ಕಿಗೆ ಹೋದಾಗ (ಯಮಲೋಕಕ್ಕೆ) ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಅದೇ ರೀತಿಯ ಪರೀಕ್ಷೆಯು ಮೃತ್ಯುವಿನ ಮೊದಲು ದಕ್ಷಿಣಕ್ಕೆ ಮುಖ ಮಾಡಿ ಕುಳಿತರೆ ಅಥವಾ ಕಾಲು ಚಾಚಿ ಮಲಗಿದರೆ ಆಗುತ್ತದೆ; 
ದಕ್ಷಿಣಾಭಿಮುಖಿ ಮೂರ್ತಿಯ ಪೂಜೆಯನ್ನು ನಿತ್ಯದ ಪದ್ಧತಿಯಂತೆ ಮಾಡಲಾಗುವುದಿಲ್ಲ; 
ಏಕೆಂದರೆ, ದಕ್ಷಿಣದಿಂದ 'ತಿರ್ಯಕ್‌' (ರಜ-ತಮ) ಲಹರಿಗಳು ಬರುತ್ತವೆ. 

ಇಂತಹ ಮೂರ್ತಿಗೆ ಕರ್ಮಕಾಂಡದಲ್ಲಿನ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಿ, ಪೂಜಾವಿಧಿಯನ್ನು ಮಾಡಲಾಗುತ್ತದೆ. 
ಅದರಿಂದ ಸಾತ್ವಿಕತೆಯು ಹೆಚ್ಚುತ್ತದೆ ಮತ್ತು ದಕ್ಷಿಣ ದಿಕ್ಕಿನಿಂದ ಬರುವ ರಜ-ತಮ ಲಹರಿಗಳಿಂದ ತೊಂದರೆಯಾಗುವುದಿಲ್ಲ.

ಎಡಗಡೆಯ ಸೊಂಡಿಲು
ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿ. 
ವಾಮ ಎಂದರೆ ಎಡಬದಿಯ ದಿಶೆ ಅಥವಾ ಉತ್ತರ ದಿಕ್ಕು. 
ಎಡಬದಿಗೆ ಚಂದ್ರನಾಡಿ ಇದ್ದು ಅದು ಶೀತಲತೆಯನ್ನು ಕೊಡುತ್ತದೆ;

ಉತ್ತರ ದಿಕ್ಕು ಅಧ್ಯಾತ್ಮಕ್ಕೆ ಪೂರಕ ಹಾಗೂ ಆನಂದ ದಾಯಕವಾಗಿದೆ; 
ಆದ್ದರಿಂದಲೇ ವಾಮಮುಖಿ (ಎಡಮುರಿ) ಶ್ರೀಗಣಪತಿಯನ್ನು ಪೂಜೆಯಲ್ಲಿಡುತ್ತಾರೆ.

ಕೆಂಪು ಹೂವುಗಳು
ಶ್ರೀಗಣಪತಿಯ ಬಣ್ಣವು ಕೆಂಪಾಗಿರುತ್ತದೆ. 
ಅವನ ಪೂಜೆಯಲ್ಲಿ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನವನ್ನು ಬಳಸುತ್ತಾರೆ. 
ಅವುಗಳ ಕೆಂಪು ಬಣ್ಣದಿಂದ ವಾತಾವರಣದಲ್ಲಿರುವ ಶ್ರೀಗಣಪತಿಯ ಪವಿತ್ರಕಗಳು ಮೂರ್ತಿಯ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ಮೂರ್ತಿಯನ್ನು ಜಾಗೃತಗೊಳಿಸಲು ಸಹಾಯವಾಗುತ್ತದೆ.

ಮೋದಕ
'ಮೋದ' ಎಂದರೆ ಆನಂದ ಮತ್ತು 'ಕ' ಎಂದರೆ ಚಿಕ್ಕ ಭಾಗ. ಮೋದಕವೆಂದರೆ ಆನಂದದ ಚಿಕ್ಕ ಭಾಗ. 
ಮೋದಕದ ಆಕಾರವು ತೆಂಗಿನಕಾಯಿಯಂತೆ, ಎಂದರೆ 'ಖ' ಈ ಬ್ರಹ್ಮರಂಧ್ರದಲ್ಲಿನ ಟೊಳ್ಳಿನಂತಿರುತ್ತದೆ. 
ಕುಂಡಲಿನಿಯು 'ಖ'ದವರೆಗೆ ತಲುಪಿದಾಗ ಆನಂದದ ಅನುಭೂತಿಯು ಬರುತ್ತದೆ. 
ಕೈಯಲ್ಲಿ ಹಿಡಿದ ಮೋದಕವೆಂದರೆ, ಆನಂದವನ್ನು ಪ್ರದಾನಿಸುವ ಶಕ್ತಿ.

ಮೋದಕವು ಜ್ಞಾನದ ಪ್ರತೀಕವಾಗಿದೆ; 
ಆದುದರಿಂದ ಅದನ್ನು ಜ್ಞಾನಮೋದಕವೆಂದೂ ಕರೆಯುತ್ತಾರೆ. 
ಮೊದಲು, ಜ್ಞಾನವು ಸ್ವಲ್ಪವೇ ಇದೆ ಎಂದೆನಿಸುತ್ತದೆ 
(ಮೋದಕದ ತುದಿಯು ಇದರ ಪ್ರತೀಕವಾಗಿದೆ); 
ಆದರೆ ಅಧ್ಯಯನ ಮಾಡತೊಡಗಿದಾಗ ಜ್ಞಾನವು ಬಹಳ ವಿಶಾಲವಾಗಿದೆ ಎಂಬುದು ತಿಳಿಯುತ್ತದೆ. 
(ಮೋದಕದ ಕೆಳಭಾಗವು ಇದರ ಪ್ರತೀಕವಾಗಿದೆ) ಮೋದಕವು ಸಿಹಿಯಾಗಿರುತ್ತದೆ ಅದೇ ರೀತಿ ಜ್ಞಾನದ ಆನಂದವೂ 

ಸುದ್ದಿ :-ವಿಜಯ ಕರ್ನಾಟಕ
*****

No comments:

Post a Comment