SEARCH HERE

Friday, 1 February 2019

ಶುಂಠಿ ginger for good health


ವಾವ್ ಒಂದು ಲೋಟ ನೀರಿಗೆ ಒಂದು ಚೂರು ಶುಂಠಿ ಹಾಕಿಕೊಂಡು ಕುಡಿದ್ರೆ ಸಕ್ಕರೆ ಕಾಯಿಲೆ ಜೊತೆಗೆ ಇಷ್ಟೊಂದು ಲಾಭನ ಆರೋಗ್ಯಕ್ಕೆ..!

ಚರ್ಮ ಮತ್ತು ಕೂದಲುಗಳಿಗೆ:ಶುಂಠಿಯಲ್ಲಿರುವ ಪೋಷಕ ಸತ್ವಗಳು ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಗುಣವು ಕೂದಲುಗಳು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ.

ಮಧುಮೇಹ:ಶುಂಠಿ ಮತ್ತು ನಿಂಬೆ ರಸ ಹಾಕಿದ ನೀರು ಕುಡಿಯುವುದರಿಂದ ಮೂತ್ರಪಿಂಡದ ಸಮಸ್ಯೆ ಮತ್ತು ಮಧುಮೇಹವನ್ನು ದೂರ ಮಾಡಬಹುದು.

ಜೀರ್ಣಕ್ರಿಯೆ:ಪ್ರತಿದಿನ ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗಿಸುವುದಲ್ಲದೆ, ತಲೆ ಸುತ್ತುವುದು, ಎದೆಯುರಿ ಮುಂತಾದ ಸಮಸ್ಯೆ ನಿವಾರಣೆಯಾಗಬಹುದು. ಅಷ್ಟೇ ಅಲ್ಲದೆ, ಶುಂಠಿ ನೀರಿಗೆ ಸ್ವಲ್ಪ ಪುದಿನಾ ಸೊಪ್ಪು, ಜೇನು ತುಪ್ಪ ಹಾಕಿ ಸೇವಿಸುವುದರಿಂದ ಗರ್ಭಿಣಿಯರಿಗೆ ಬೆಳಗಿನ ಸಂಕಟದಿಂದ ಪಾರಾಗಬಹುದು.

ತೂಕ ಇಳಿಸಲು:ಶುಂಠಿ ಹಾಕಿದ ನೀರು ಸಕ್ಕರೆ ಅಂಶ ನಿಯಂತ್ರಿಸುವುದರಿಂದ ಅತಿಯಾಗಿ ಆಹಾರ ಸೇವಿಸುವ ಮೋಹವೂ ಕಡಿಮೆಯಾಗುವುದು. ಇದು ಕೊಬ್ಬು ಹೀರಿಕೊಳ್ಳುವ ಶಕ್ತಿ ವೃದ್ಧಿಸುವುದರಿಂದ ತೂಕ ಇಳಿಕೆಗೆ ಸಹಕಾರಿ.

********


No comments:

Post a Comment