ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಮಾಡಬೇಕಾದ ಪ್ರಾರ್ಥನೆ
ಭೋಜನಕ್ಕೆ ಕುಳಿತುಕೊಂಡ ಮೇಲೆ ಮುಂದಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಬೇಕು
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ
ಈ ಶ್ಲೋಕದಲ್ಲಿ ಪಾರ್ವತಿದೇವಿಯ ಅವತಾರವಾದ ಅನ್ನಪೂರ್ಣಾ ಮಾತೆಯನ್ನು ಸಂಬೋಧಿಸಿ, ತಟ್ಟೆಯಲ್ಲಿರುವ ಅನ್ನವನ್ನು ಅವಳು ದಯಪಾಲಿಸಿದ ಭಿಕ್ಷೆಯೆಂದು ಸ್ವೀಕರಿಸಲಾಗುತ್ತದೆ. ಇದರಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ.
ಮೊದಲ ತುತ್ತು ಗ್ರಹಿಸುವ ಮುಂಚೆ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು
ಹೇ ಪರಮೇಶ್ವರಾ, ಈ ಅನ್ನವು ನಿನ್ನ ಚರಣಗಳಲ್ಲಿ ಅರ್ಪಿಸಿ, ನಿನ್ನ ಚರಣಗಳ ಪ್ರಸಾದವೆಂದು ಗ್ರಹಿಸುತ್ತಿದ್ದೇನೆ. ಈ ಪ್ರಸಾದದಿಂದ ನನಗೆ ಶಕ್ತಿ ಮತ್ತು ಚೈತನ್ಯ ಲಭಿಸಲಿ.
ಅನ್ನ ಗ್ರಹಿಸುವಾಗ (ಊಟ ಮಾಡುವಾಗ) ಅನಾವಶ್ಯಕವಾಗಿ ಮಾತನಾಡುವುದಕ್ಕಿಂತ, ಇತರ ವಿಷಯಗಳನ್ನು ಮಾಡುವುದಕ್ಕಿಂತ ದೇವರ ನಾಮವನ್ನು ಜಪಿಸುತ್ತ ಅನ್ನ ಗ್ರಹಿಸಿ.
*******
No comments:
Post a Comment