SEARCH HERE

Wednesday, 14 April 2021

ಸಮುದ್ರ ಮಂಥನ samudra manthana mathana

ದೇವೇಂದ್ರನು ಒಂದು ದಿನ ಐರಾವತವನ್ನೇರಿ ರಾಜಧಾನಿಯ ಬೀದಿಯಲ್ಲಿ ಹೋಗುತ್ತಿದ್ದ . ಆಗ ಅಲ್ಲಿಗೆ ದೂರ್ವಾಸ ಋಷಿಗಳು ಬಂದರು. ಋಷಿಗಳು ನಿಂತು ಇಂದ್ರನಿಗೆ ಆಶೀರ್ವಾದ ಮಾಡಿ ತಮ್ಮ ಕೊರಳಲ್ಲಿದ್ದ ಹಾರವನ್ನು ಪ್ರಸಾದವಾಗಿ ಕೊಟ್ಟರು. ಅವನು ಅಹಂಕಾರದಿಂದ ಅದನ್ನು ಆನೆಯ ಕಡೆಗೆ ಎಸೆದನು. ಅದು ಹಾರವನ್ನು ಕಾಲಕೆಳಗೆ ಹೊದಕಿಹಾಕಿತು. ಇಂದ್ರನ ಸೊಕ್ಕಿನಿಂದ ಋಷಿಗಳಿಗೆ ಕೋಪ ಬಂದಿತು. " ನಿನ್ನ ಐಶ್ವರ್ಯ ಹಾಳಾಗಿ ಹೋಗಲಿ " ಎಂದು ಶಾಪಕೊಟ್ಟರು. ಇಂದ್ರನನ್ನು ರಾಕ್ಷಸರು ಸೋಲಿಸಿದರು. ಇಂದ್ರನ ಅಧಿಕಾರ , ಸಂಪತ್ತು ಎಲ್ಲ ಹೋಯಿತು. ದೇವತೆಗಳೆಲ್ಲ ಬ್ರಹ್ಮನ ಮೊರೆಹೊಕ್ಕರು . ಅವನು ಅವರೆಲ್ಲರನ್ನೂ ಶ್ರೀ ವಿಷ್ಣುವಿನ ಬಳಿಗೆ ಕರೆದುಕೊಂಡು ಹೋದ ದೃವತೆಗಳು ಅವನಿಗೆ ಮೊರೆ ಇಟ್ಟರು. ಮಹಾವಿಷ್ಣುವಿವು , " ನೀವು ಸಧ್ಯಕ್ಕೆ ದಾನವರೊಡನೆ ಸಂಧಿ ಮಾಡಿಕೊಳ್ಳಿ . ಅವರ ಮಾತಿಗೆಲ್ಲ ಒಪ್ಪಿಕೊಳ್ಳಿ ಅನಂತರ ನೀವೂ ಅವರೂ ಸೇರಿ ಎಲ್ಲ ಮೂಲಿಕೆಗಳನ್ನು ಸಮುದ್ರದಲ್ಲಿ ಹಾಕಿ ಅದನ್ನು ಕಡೆಯಿರಿ. ಮಂದರ ಪರ್ವತವನ್ನೇ  ಕಡೆಗೋಲು ಮಾಡಿಕೊಳ್ಳಿ . ವಾಸುಕಿಯನ್ನು ಹಗ್ಗವಾಗಿ ಮಾಡಿಕೊಳ್ಳಿ . ಸಮುದ್ರವನ್ನು ಕಡೆಯುವಾಗ ಮೊದಲು ಅನೇಕ ದಿವ್ಯ ವಸ್ತುಗಳು ಲಭ್ಯವಾಗುತ್ತವೆ. ಅವು ನೀವು ಬಯಸಬೇಡಿ ಕಡೆಯಲ್ಲಿ ಅಮೃತವು ಹುಟ್ಟುತ್ತದೆ. ಅದನ್ನು  ಕುಡಿದವರಿಗೆ ಮುಪ್ಪಿಲ್ಲ. ಸಾವಿಲ್ಲ. ಅದು ನಿಮ್ಮ ವಶವಾಗುವುದಕ್ಕೆ ನಾನು ನೆರವಾಗುತ್ತೇನೆ. ಎಂದು ಹೇಳಿ ಅಂತರ್ಧಾನನಾದನು.

ದೇವತೆಗಳು ದಾನವರ ಚಕ್ರವರ್ತಿ ಬಲಿಯ ಆಸ್ಥಾನಕ್ಕೆ ಹೋದರು‌ . ಅವರು ಅಮೃತದ ವಿಷಯವನ್ನು ಹೇಳಿದಾಗ ರಾಕ್ಷಸರು ಆಸೆಯಿಂದ ಒಪ್ಪಿದರು. ಎಲ್ಲರೂ ಮಂದರ ಪರ್ವತಕ್ಕೆ ಹೋದರು. ಅದನ್ನು ಕಿತ್ತು ಹಾಲಿನ ಸಮುದ್ರದತ್ತ ನಡೆದರು. ಆದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವರ ಶಕ್ತಿ ಕುಂದಿ. ಪರ್ವತವನ್ನು ಎತ್ತಿ ಹಾಕಿದರು. ವಿಷ್ಣುವು ಬಂದು ಒಂದೇ ಕೈಯಿಂದ ಅದನ್ನು ಎತ್ತಿ ಗರುಡನ ಮೇಲಿಟ್ಟು ತಂದು ಹಾಲಿನ ಸಮುದ್ರದ ಮಧ್ಯೆ ಇಟ್ಟನು.

ದೇವತೆಗಳು ವಾಸುಕಿಯ ಬಳಿಗೆ ಹೋಗಿ ಹಾಲಿನ ಸಮುದ್ರವನ್ನು ಕಡೆಯಲು ಹಗ್ಗವಾಗುವಂತೆ ಬೇಡಿದರು. ಅವನು ಮೊದಲು ಒಪ್ಪಲಿಲ್ಲ . ಆದರೆ ಅವರು ಅಮೃತದಲ್ಲಿ ಅವನಿಗೂ ಒಂದು ಪಾಲು ಕೊಡುವುದಾಗಿ ಹೇಳಿ ಒಪ್ಪಿಸಿದರು. ವಿಷ್ಣುವು ಸಮುದ್ರ ಮಥನಕ್ಕೆ ಹಿಡಿಯಲು ವಾಸುಕಿಯ ತಲೆಯ ಬಳಿ ನಿಂತ : ದೇವತೆಗಳು ಅವನ ಪಕ್ಕದಲ್ಲಿ ಸಾಲು ನಿಂತರು . ದಾನವರು ತಾವು ಹಿರಿಯರ, ತಮ್ಮ ಸ್ಥಾನ ವಾಸುಕಿಯ ತಲೆಯ ಬಳಿ ಎಂದು ವಾದಿಸಿದರು , ವಿಷ್ಣುವು ನಗುತ್ತಾ ತಾನು ಬಾಲದ ಕಡೆ ಹಿಡಿದರು. ಎಲ್ಲರೂ ಉತ್ಸಾಹದಿಂದ ಮಥನವನ್ನು ಪ್ರಾರಂಭಿಸಿದರು. ಆದರೆ ಕಡೆಗೋಲಿಗೆ ಆಧಾರವಿಲ್ಲದೆ ಅದು ಮುಳುಗಿಹೋಯಿತು. ದಾನವರಿಗೂ ದೇವತೆಗಳಿಗೂ ಏನು ಮಾಡಬೇಕೆಂದು ತೋರಲಿಲ್ಲ . ವಿಷ್ಣುವು ಕೂರ್ಮಾವತಾರವನ್ನು ಎತ್ತಿದ. ಆ ಬೃಹತ್  ಆಮೆಯ ಮುಳಗಿದ್ದ ಪರ್ವತವನ್ನು ತನ್ನ ಬೆನ್ನಿನ ಮೇಲೆ ಧರಿಸಿತು. ವಿಷ್ಣುವು ಸಹಸ್ರ ಬಾಹುಗಳ ದಿವ್ಯ ಪುರುಷನಾಗಿ ಆಕಾಶದಲ್ಲಿ ನಿಂತು ಒಂದು ತೋಳಿನಿಂದ ಪರ್ವತವು ಮತ್ತೆ ಉರುಳದಂತೆ ಹಿಡಿದುಕೊಂಡನು. ರಾಕ್ಷಸರು ದೇವತೆಗಳಿಗೂ ಸಮುದ್ರ ಮಥನವನ್ನು ಮುಂದುವರಿಸಿದರು.

ಆದರೆ ಸ್ವಲ್ಪ ಹೊತ್ತು  ಕಳೆಯುವುದರಲ್ಲಿ  ವಾಸುಕಿಗೆ ಬಹಳ ಆಯಾಸವಾಗಿ ನಿಟ್ಟುಸಿರು ಬಿಡಲು ಪ್ರಾರಂಭಿಸಿದ . ಅವನ ನಿಟ್ಟುಸಿರು ಬೆಂಕಿಯಾಗಿ ಎಲ್ಲವನ್ನು ಕಾಡಲಾರಂಭಿಸಿತು .ವಿಷ್ಣುವು ಮಳೆಯನ್ನು ಬರಸಿ ಮತ್ತು ತಂಗಾಳಿ ಬೀಸುವಂತೆ ಮಾಡಿ ವಾಸುಕಿಯ ಆಯಾಸವನ್ನು ಶಮನಗೊಳಿಸಿದ. ಕಡೆಯುವ ಮಹಾ ಕಾರ್ಯವು ಮುಂದುವರೆಯಿತು. ಮೊದಲು ಹಾಲಾಹಲವು ಹುಟ್ಟಿತು. ಅದು ಭಯಂಕರ ವಿಷ. ಜಗತ್ತಿಗೆಲ್ಲ ಹಬ್ಬಿತು. ಮೂರು ಲೋಕಗಳ ನಿವಾಸಿಗಳೂ ಭಯದಿಂದ ಕೂಡಿ ಪರಶಿವನ ಧ್ಯಾನ ಮಾಡಿ ಕಾಪಾಡಬೇಕೆಂದು ಬೇಡಿಕೊಂಡರು. ಪರಿ ಪರಿಯಾಗಿ ಅವನನ್ನು ಸ್ತುತಿಸಿದರು. ಶಿವನು ಹಾಲಾಹಲವನ್ನುಅಂಗೈಗೆ ಸೆಳೆದುಕೊಂಡು ಕುಡಿದ. ಆತನ ಕಪ್ಪಾಯಿತು. ಅವನಿಗೆ ' ವಿಷಕಂಠ' 'ನೀಲಕಂಠ' 'ನಂಜುಂಡ' ಎಂದೆಲ್ಲ ಹೆಸರುಗಳು ಬಂದವು.

ಸಮುದ್ರಮಥನದ ಕಾರ್ಯವು ಮುಂದುವರೆಯಿತು ಆಗ ಹಾಲ್ಗಡಲಿನಿಂದ ಕಾಮಧೇನು ಹುಟ್ಟಿತು . ಅದನ್ನು ಋಷಿಗಳು ತೆಗೆದುಕೊಂಡರು.ಉಚ್ಛೈಶ್ರವಸ್ಸು ಎನ್ನುವ ಸುಂದರವಾದ ಕುದುರೆಯು ಬಂದಿತು . ಅದನ್ನು ಬಲಿಯು ತೆಗೆದುಕೊಂಡು . ಐರಾವತ ಎನ್ನುವ ಆನೆ , ಎಂಟು ದಿಗ್ಗಜಗಳು ಮೂಡಿಬಂದವು . ಕೌಸ್ತುಭ ಎಂಬ ರತ್ನ ಬಂದಿತು ಅದು ವಿಷ್ಣುವಿನ ಕೊರಳಿಗೆ ಆಭರಣವಾಯಿತು. ಕಡೆಗೆ ಮಹಾಲಕ್ಷ್ಮಿಯು ಮೂಡಿಬಂದಳು. ತೇಜಸ್ಸೇ ರೂಪ ಧರಿಸಿ ಬಂದಂತಿದ್ದ ಆ ದಿವ್ಯ ‌ಲಾವಣ್ಯವತಿಯನ್ನು ಮದುವೆಯಾಗಲು ಹಲವರು ಬಯಸಿದರು . ಮಹಾಲಕ್ಷ್ಮಿಯು ವಿಷ್ಣುವನ್ನು ವರಿಸಿದಳು ಸುರಾದೇವಿ ಮೂಡಿಬಂದಳು . ಅವಳು ದಾನವರನ್ನು ಸೇರಿದಳು ಆಯುರ್ವೇದದ ಆಚಾರ್ಯ ಧನ್ವಂತರಿಯು ಅಮೃತಕಲಶವನ್ನು ಹಿಡಿದುಕೊಂಡು ಮೂಡಿಬಂದರು. ಕೂಡಲೇ ದಾನವರು ಅಮೃತ ಕಲಶವನ್ನು ಕಿತ್ತುಕೊಂಡು ಬಿಟ್ಟರು. ದೇವತೆಗಳು ಶ್ರೀಹರಿಯ ಮೊರೆ ಹೊಕ್ಕರು.

ದೈತ್ಯರು ಅಮೃತ ಕಲಶವನ್ನು ಕಿತ್ತುಕೊಂಡಿದ್ದರಲ್ಲ ' ನಾನು ಮೊದಲು' ' ತಾನು ಮೊದಲು' ಎಂದು ಅವರಲ್ಲಿಯೇ ಜಗಳವು ಪ್ರಾರಂಭವಾಯಿತು . ಆ ಹೊತ್ತಿಗೆ ಮಾತು ವರ್ಣಿಸಲಾರದ ಲಾವಣ್ಯವತಿಯಾಗಿ ಮೋಹಿನಿಯ ರೂಪದಿಂದ ವಿಷ್ಣುವು ಆಕಾಶದಲ್ಲಿ ಕಾಣಿಸಿಕೊಂಡ . ಕಣ್ಣುಗಳಿಗೆ ಹಬ್ಬವೆನಿಸುವ  ಸ್ತ್ರೀ ರೂಪ ಮೋಹಿನಿಯದು . ರಾಕ್ಷಸರೆಲ್ಲ ಮರುಳಾದರು . ಅವಳ ಕಡೆಗಣ್ಣಿಗೆ ನೋಟ ಲಭ್ಯವಾಗಬಾರದೆ ಎಂದು ಬೇಡಿದರು ಅವಳು ತನಗೆ ಅದು ಹಂಚುವುದಕ್ಕೆ ನೀವು ಒಪ್ಪಬೇಕು . ಆಕ್ಷೇಪಣೆ ಮಾಡಬಾರದು. ಎಂದಳು ಅವರು ಒಪ್ಪಿದರು " ನೀವೆಲ್ಲರೂ ಸ್ನಾನ ಮಾಡಿ ಬನ್ನಿ. ದೇವತೆಗಳು ಒಂದು ಸಾಲಿನಲ್ಲಿ ದಾನವರು ಒಂದು ಸಾಲಿನಲ್ಲಿ ಕುಳಿತುಕೊಳ್ಳಿ " ಎಂದಳು . ಅವರು ಹಾಗೆಯೇ ಮಾಡಿದರು.

ಮೋಹಿನಿಯು ಅಮೃತವನ್ನು ಹಂಚುತ್ತಾ ನಡೆದಳು . ದಾನವರು ಒಂದು ಸಾಲಿನಲ್ಲಿ ಕುಳಿತುಕೊಳ್ಳಿ " ಎಂದಳು ಅವರು ಹಾಗೆಯೇ ಮಾಡಿದರು.

ಮೋಹಿನಿಯು ಅಮೃತವನ್ನು ಹಂಚುತ್ತಾ ನಡೆದಳು . ದಾನವರನ್ನು ತನ್ನ ಮಂದಹಾಸದಿಂದ ಕಣ್ಣಿನ ನೋಟದಿಂದ ಮಂಕುಮಾಡುತ್ತಾ ಸಾಗಿದಳು . ದೇವತೆಗಳಿಗೆ ಅಮೃತವನ್ನು ನೀಡಿದಳು . ಇದನ್ನು ಕಂಡೂ ರಾಕ್ಷಸರು ಅವಳ ಷರತ್ತನ್ನು ನೆನೆದು ಮತ್ತು ಅಂತಹ ದಿವ್ಯ ಲಾವಣ್ಯವತಿಗೆ ಆಕ್ಷೇಪಣೆ ಮಾಡಲಾಗದೆ ಸುಮ್ಮನೆ ಕುಳಿತರು.

ಸ್ವರ್ಭಾನು ಎನ್ನುವ ರಾಕ್ಷಸರು ಹೇಗೋ ದೇವತೆಗಳ ಮಧ್ಯೆ ಕುಳಿತು  ಅಮೃತವನ್ನು  ಪಡೆದು ಕುಡಿಯುತ್ತಿದ್ದ. ಅವನ ಎರಡು ಬದಿಗಳಲ್ಲಿ ಕುಳಿತಿದ್ದ ಸೂರ್ಯ ಚಂದ್ರರು ಇದನ್ನು ಗುರುತಿಸಿ ವಿಷ್ಣುವಿಗೆ ತಿಳಿಸಿದರು . ಆದರೆ ಅವನ ತಲೆ ಅಮೃತತ್ವವನ್ನು ಪಡೆಯಿತು . ಅದೇ ರಾಹುಗ್ರಹವಾಯಿತು.

ಮುಂದುವರೆಯುವುದು✍
*****

No comments:

Post a Comment