SEARCH HERE

Wednesday, 24 March 2021

ಮೋಕ್ಷಕ್ಕೆ ಎಣಿ steps to moksha


ಓಂ ಶ್ರೀ ಗುರುಭ್ಯೋಃ ನಮಃ - ಪ್ರಾಣಿ ಮಾತ್ರನಾದ ಮಾನವನನ್ನು ದೈವತ್ವಕ್ಕೆ ಏರಿಸುವ ಏಣಿ -- ಸಪ್ತ ಚಕ್ರ - ಕುಂಡಲಿನೀ ಯೋಗ
ಆಧ್ಯಾತ್ಮಿಕ ಏಣಿ ಈ ಕೆಳಗಿನಂತಿದೆ
ಸಪ್ತ ಚಕ್ರಗಳು 

ಸಪ್ತ ಲೋಕಗಳು 
ಮತ್ತು .
ಮೋಕ್ಷ..

ಹಲವಾರು ಋಷಿಗಳು , ಯೋಗ ಸಾಧಕರು ವಿಶಿಷ್ಟ ಯೋಗ ಸಂಪ್ರದಾಯದ ಆಚಾರ್ಯರುಗಳು ಆಧ್ಯಾತ್ಮಿಕ ಪಥದಲ್ಲಿ ಚಲಿಸಿ ಮಾನವನು ಪ್ರಾಣಿ ಪಕ್ಷಿಗಳಂತೆ ಬದುಕದೆ , ಸಾರ್ಥಕ ಬದುಕನ್ನು ಬದುಕಲು ಯೋಗ , ಮುದ್ರಾ , ಚಕ್ರಧ್ಯಾನ ಆದಿಗಳಿಂದ ಮೋಕ್ಷವನ್ನು ಸಾಧಿಸಬಹುದೆಂದು ಮಾರ್ಗದರ್ಶನ ಮಾಡಿದ್ದಾರೆ.
ಈ ಚಕ್ರಗಳು ಸ್ಥೂಲಶರೀರದಲ್ಲಿ ( ಭೌತಿಕ ಶರೀರ ) ಅಂತರ್ಗತವಾದ ಸೂಕ್ಷ್ಮಶರೀರ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಅದರ ವಿನ್ಯಾಸವನ್ನು , ವರ್ಣಗಳನ್ನೂ , ಮಹರ್ಷಿಗಳು ತಮ್ಮ ಧ್ಯಾನ ಅಥವಾ ಸಮಾಧಿ ಸ್ಥಿತಿಯಲ್ಲಿ ದರ್ಶಿಸಿರುವುದನ್ನು ಸಾಂಕೇತಿಕವಾಗಿ ಚಿತ್ರರೂಪವಾಗಿ ವಿವರಿಸಿದ್ದಾರೆ. ಆದರೆ ಸಾಧಕರುಗಳಿಗೆ ಈ ಚಿತ್ರಿತ ವರ್ಣನೆ ಅವರವರ ಸಾಧನೆಗಳಿಗೆ ಸಾಂಕೇತಿಕವಾಗಿ ಅತ್ಯಂತ ಉಪಯೋಗವಾಗಲಿದೆ. ಈ ವಿಶಿಷ್ಟ ಚಕ್ರಗಳ ಬಗ್ಗೆ ಧ್ಯಾನ ಮಾಡಲು ಅವುಗಳ ವಿಶಿಷ್ಟ ಶಕ್ತಿಗಳನ್ನು ಗ್ರಹಣ ಮಾಡಲು ಕಿಂಚಿತ್ ಪೂರ್ವ ಸಿದ್ಧತೆಗಳ ಅವಶ್ಯಕತೆ ಇದೆ.
ನಮ್ಮ ದೇಹದ ಶಕ್ತಿಕೇಂದ್ರಗಳಾದ ಏಳು ಚಕ್ರಗಳಲ್ಲಿನ ವೈಶಿಷ್ಟ್ಯತೆ , ವೈವಿಧ್ಯತೆಯನ್ನು ಹೀಗೆ ವಿವರಿಸಿದ್ದಾರೆ :-
1) ಮೂಲಧಾರ ಚಕ್ರವು ಕಡು ಕೆಂಪು ಬಣ್ಣದಿಂದ ಸುಗಂಧಭರಿತವಾದ ನಾಲ್ಕು ಎಳೆಗಳನ್ನು ಹೊಂದಿದೆ. 

2) ಸ್ವಾಧಿಷ್ಠಾನ ಚಕ್ರವು ಸುಗಂಧಭರಿತ ಹಳದಿ ಬಣ್ಣದ ಆರು ಕಮಲದಳವನ್ನು ಹೊಂದಿದೆ. 
3) ಮಣಿಪೂರ ಚಕ್ರವು ಸುಗಂಧಭರಿತ ಪ್ರಕಾಶಮಾನವಾದ ನಾರಂಗವರ್ಣದ ಹತ್ತು ಕಮಲದಳಗಳನ್ನು ಹೊಂದಿದೆ. 4) ಅನಾಹತ ಚಕ್ರವು ಪರಿಮಳಭರಿತ ಹಸಿರು ವರ್ಣದಿಂದ ಶೋಭಿಸುವ ಹನ್ನೆರಡು ದಳಗಳನ್ನು ಹೊಂದಿದೆ. 
5) ವಿಶುದ್ಧಿ ಚಕ್ರವು ಸುವಾಸನೆಯುಳ್ಳ ನೀಲಿ ವರ್ಣದ ಹದಿನಾರು ದಳಗಳನ್ನು ಹೊಂದಿದೆ. 
6) ಆಜ್ನಾ ಅಥವಾ ಪ್ರಜ್ನಾ ಚಕ್ರವು ಪರಿಮಳದಿಂದಿರುವ ನೀಲವರ್ಣದ ಎರಡೇ ಕಮಲ ದಳಗಳನ್ನು ಹೊಂದಿದೆ. 
7) ಕೊನೆಯ ಹಾಗೂ ಅತಿ ಮುಖ್ಯವಾದ ಸಹಸ್ರಾರ ಚಕ್ರವು ಸುಗಂಧ ಪರಿಮಳ ಭರಿತವಾದ ಸಹಸ್ರದಳಗಳುಳ್ಳ ವಿವಿಧ ವರ್ಣರಂಜಿತವಾಗಿ ಹಾಗೂ ನೇರಳೇ ವರ್ಣದಿಂದ ಶೋಭಿಸುತ್ತಿರುತ್ತದೆ.

ಈ ಎಲ್ಲಾ ಅಂಶಗಳನ್ನು ಆಳವಾಗಿ ಚಿಂತನ , ಮಂಥನ ಮಾಡಿ ಅಧ್ಯಯನ ಮಾಡಿದರೆ ಇವುಗಳ ವೈಜ್ನಾನಿಕತೆಯನ್ನು ತಿಳಿಯಬಹುದಾಗಿದೆ.
ಪ್ರಾಣಿಗಳಲ್ಲಿ "ಮೂಲಾಧಾರ ಚಕ್ರವೇ " "ಸಹಸ್ರಾರ ಚಕ್ರ" ಎನ್ನಿಸಿ ಅವುಗಳ ಯತ್ಕಿಂಚಿತ್ "ಚೈತನ್ಯಕ್ಕೆ" ಆಧಾರವಾಗಿದೆ. ಮಾನವನಲ್ಲಿರುವ ಮೂಲಾಧಾರದಿಂದ ಆರಂಭಿಸಿ ಸಹಸ್ರಾರಚಕ್ರದವರೆಗಿನ ಏಳೂ ಚಕ್ರಗಳಿಗೆ ಊರ್ಧ್ವ ಲೋಕಗಳೆಂದು ಉಲ್ಲೇಖಿಸಿ

" ಭೂಃ" 
"ಭುವಃ" 
"ಸುವಃ" 
"ಮಹಃ" 
"ಜನಃ" 
"ತಪಃ" 
"ಸತ್ಯಂ" 
ಎಂಬ ಏಳು ಉನ್ನತಸ್ತರದ ಲೋಕಗಳೆಂದು ಹೆಸರಿಸಿದ್ದಾರೆ. ಇವುಗಳನ್ನು ಸಪ್ತ "ವ್ಯಾಹೃತಿ" ಗಳೆಂದೂ ಹೆಸರಿಸಿದ್ದಾರೆ.

ಈ ಮೂಲಕ ಪ್ರಾಣಿ ಮಾತ್ರದ ಮಾನವನು ಈ ಹಂತಗಳಲ್ಲಿ ಏರಿ ದೈವತ್ವಕ್ಕೆ ಏರಬಹುದೆಂದು ಮಹರ್ಷಿಗಳು ಸ್ವಾನುಭವದಿಂದ ವಿವರಿಸಿದ್ದಾರೆ 

ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ
***

ದೇವರ ಮನೆಗೆ ಸರಿಯಾದ ದಾರಿ

ರಾಮಾಪುರ ಎನ್ನುವ ಊರಲ್ಲಿ ರೈಲಿನಿಂದ ಇಳಿಯಿರಿ

ನಂಬಿಕೆ ಎನ್ನುವ ರಿಕ್ಷಾ ಹತ್ತಿ

ಭಕ್ತಿ ಎನ್ನುವ ಬಡಾವಣೆಗೆ ಹೊರಡೀ ಎನ್ನೀ

ಪಾಪ ಎನ್ನುವ ಡೆಡ್ ಎಂಡ್ ಬೀದಿ ಬರುತ್ತೆ

ಪುಣ್ಯ ಎನ್ನುವ ರಸ್ತೆಯಲಿ ಪ್ರಯಾಣಿಸಿ

ಪ್ರಾರ್ಥನೆ ಎನ್ನುವ ಸೇತುವೆ ದಾಟಿ

ಕರ್ಮ ಎನ್ನುವ ವೃತ್ತ ಬರುತ್ತೆ

ದುಷ್ಕರ್ಮಾ ಎನ್ನುವ ಕೆಂಪು ದೀಪ ಉರಿಯುತ್ತಿರಬಹುದು

ಸುಕರ್ಮಾ ಎನ್ನುವ ಹಸಿರು ದೀಪ ಬೆಳಗಿದಾಗ ಮುಂದಕ್ಕೆ ಸಾಗಿ

ಭಜನೆ ಸಂಘ ಎನ್ನುವ ರಸ್ತೆಯಲ್ಲಿ ಬಲಬದಿಗೆ ತಿರುಗಿ

ಅಲ್ಲಿ ಮತ್ತೆ ರಸ್ತೆ ನಾಲ್ಕು ರಸ್ತೆಗಳಾಗಿ ಸೀಳುತ್ತೆ

ಮೊದಲ ಮೂರು ರಸ್ತೆಗಳ ಹೆಸರು ಅಸೂಯೆ ಬೀದಿ, ದ್ವೇಷ ಬೀದಿ ಪ್ರತೀಕಾರ ಬೀದಿ

ಅದನ್ನೆಲ್ಲ ಬಿಟ್ಟು ನಾಲ್ಕನೆ ಬೀದಿಗೆ ತಿರುಗಿ, ಅದರ ಹೆಸರು ಸತ್ಸಂಗ ಬೀದಿ

ಪಕ್ಕದಲ್ಲೇ ಕಾಣುವ ಗಾಳಿಸುದ್ದಿ ಬೀದಿ ಗೆ ಹೋಗಬೇಡಿ

ಸ್ವಲ್ಪ ಮುಂದೆ ಸಾಗಿದರೇ ಒಂದು ಜಂಕ್ಷನ್ ಬರುವುದು

ಅಲ್ಲಿ ಎಡಗಡೆಯ ರಸ್ತೆಯ ಹೆಸರು ವ್ಯಾಮೋಹ

ಬಲಗಡೆಯ ರಸ್ತೆಯ ಹೆಸರು ವೈರಾಗ್ಯ ನೀವು ವೈರಾಗ್ಯದ ಬೀದಿಯಲ್ಲಿ ಚಲಿಸಿ

ಎದುರಲ್ಲೇ ನಿಮಗೆ ಕೈವಲ್ಯ ಎನ್ನುವ ನಾಲ್ಕು ರಸ್ತೆಗಳ ವೃತ್ತ ಕಾಣುವುದು.

ದಯೆಯಿರುವ ಹೃದಯ - ಭಗವಾನ್ ನಿಲಯ ಎನ್ನುವ ಪಲಕವಿರುವ ಶ್ವೇತವರ್ಣದ ಮನೆ ಕಾಣುವುದು.

ಗೇಟ್ ಹತ್ತಿರ ಇರುವ ಮುಕ್ತೀ ಎನ್ನುವ ಬಾಗಿಲು ನಿಮ್ಮನ್ನು ಕಂಡ   ತಕ್ಷಣ ತೆರದುಕೊಳ್ಳುವುದು.

ಇದೇ ದೇವರ ಮನೆಗೆ ಸರಿಯಾದ ದಾರಿ

ಆಧ್ಯಾತ್ಮಿಕ ಮಾರ್ಗದಲ್ಲಿ ಭಕ್ತಿ, ಮಂತ್ರ, ಧ್ಯಾನ ಹೀಗೇ....ಬೇರೇ ಬೇರೇ ಸಾಧನೆಗಳು ಯಾರೇ ಆಗಲೀ ತಿಳಿದುಕೋಬೇಕಾದ ಸೂಕ್ಷ್ಮ ವಿಷಯವಿದು.

ಮಂಜುಳಾ..ಜಿ.

****

ಹೊಸ ವರ್ಷಕ್ಕೆ ಹೊಸ ಡೈರಿ ಕೊಂಡು ಹೊಸ ಹಾಳೆಯಲ್ಲಿ ಹೊಸ ಪೆನ್ನು ಹಿಡಿದು ಹತ್ತಾರು resolutions ಬರೆಯುವವರನ್ನು ನೋಡಿಯೇ ಇರುತ್ತೀರಿ. ಅಥವಾ ನೀವಾದರೂ ಒಂದಲ್ಲ ಒಂದು ವರ್ಷದಲ್ಲಿ ಹಾಗೆ ಬರೆದೇ ಇರುತ್ತೀರಿ. ಹೊಸ ವರ್ಷದ ಆರಂಭದಂದು ಹೊಸ ನಿರ್ಧಾರಗಳನ್ನು ಮಾಡುವುದೇ ಆದರೆ ಈ ಕೆಳಗಿನವನ್ನು ಮಾಡಿ:

೧. ಇಂದಿನಿಂದ ನಾನು ಕನಿಷ್ಠ ವಾರಕ್ಕೊಮ್ಮೆ ಒಂದು ಹಿಂದೂ ದೇವಸ್ಥಾನಕ್ಕೆ ಹೋಗುತ್ತೇನೆ.

೨. ದೇವಸ್ಥಾನಕ್ಕೆ ಹೋಗುವಾಗ ಭಾರತೀಯ ಸಂಸ್ಕೃತಿ ಬಿಂಬಿಸುವ ಬಟ್ಟೆಯನ್ನೇ ಧರಿಸುತ್ತೇನೆ.

೩. ವರ್ಷದಲ್ಲಿ ಕನಿಷ್ಠ ಮೂರು ಹಬ್ಬಗಳನ್ನಾದರೂ ಅರ್ಥ ಅರಿತು, ಸಂಪೂರ್ಣ ಭಾಗವಹಿಸಿ, ಆಚರಿಸುತ್ತೇನೆ.

೪. ಭಾರತೀಯ ಪಂಚಾಂಗದಲ್ಲಿ ಬಳಸುವ ಋತು, ಮಾಸ, ನಕ್ಷತ್ರಗಳ ಹೆಸರುಗಳನ್ನು ತಿಳಿದುಕೊಳ್ಳುತ್ತೇನೆ.

೫. ಪ್ರತಿ ತಿಂಗಳು ಇಂತಿಷ್ಟೆಂದು ಮೊತ್ತವನ್ನು ತೆಗೆದಿಟ್ಟು ಮಠಮಾನ್ಯರು ನಡೆಸುವ ಗೋಶಾಲೆಗಳಿಗೆ ದಾನ ಕೊಡುತ್ತೇನೆ.

೬. ಪ್ರತಿ ದಿನ ಭಗವದ್ಗೀತೆಯ ಎರಡು ಶ್ಲೋಕಗಳನ್ನು ಓದಿ, ಅರ್ಥ ಓದಿಕೊಳ್ಳುತ್ತೇನೆ.

೭. ರೇಷನ್/ತರಕಾರಿ/ಹಣ್ಣುಹಂಪಲು ಇತ್ಯಾದಿಗಳಿಗೆ ಪ್ರತಿ ತಿಂಗಳು ನಾನು ಖರ್ಚು ಮಾಡುವ ದುಡ್ಡಿನಲ್ಲಿ ಒಂದೇ ಒಂದು ರುಪಾಯಿಯೂ ದೇಶದ್ರೋಹದ ಕೆಲಸಕ್ಕೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು.

೮. ಈ ವರ್ಷ ಮನೆಯಲ್ಲಿ ನಡೆಯುವ ಎಲ್ಲ ಹುಟ್ಟುಹಬ್ಬಗಳನ್ನೂ ಭಾರತೀಯ ಕ್ರಮದಲ್ಲೇ ಆಚರಿಸುತ್ತೇನೆ. 

೯. ಡಿ-ಗ್ಯಾಂಗ್ ಬಂಡವಾಳ ಹೂಡುವ ಯಾವುದೇ ಸಿನೆಮವನ್ನು ನಾನು ಈ ಸಲ ದುಡ್ಡುಕೊಟ್ಟು ನೋಡುವುದಿಲ್ಲ.

೧೦. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕನಿಷ್ಠ ೫ ಪುಸ್ತಕಗಳನ್ನು ಈ ವರ್ಷ ಓದುತ್ತೇನೆ.

೧೧. ಈ ವರ್ಷ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕನಿಷ್ಠ ೨೦ ಶ್ಲೋಕಗಳನ್ನು ಕಂಠಪಾಠ ಮಾಡಿ, ಅರ್ಥ ತಿಳಿದು, ಪ್ರತಿ ದಿನ ಪಠಿಸುತ್ತೇನೆ; ಮನೆಮಕ್ಕಳಿಗೆ ಹೇಳಿಕೊಡುತ್ತೇನೆ.

೧೨. ಹಿಂದೂ ಧರ್ಮದ ಪರಂಪರೆ, ಇತಿಹಾಸಗಳ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನಿಸುತ್ತೇನೆ. ನಾನೊಬ್ಬ ಜಾಗೃತ ಹಿಂದೂ. ಈ ವರ್ಷದ ಒಂದಾದರೂ ಕಾರ್ಯಕ್ರಮದಲ್ಲಿ ತಿಲಕ ಧರಿಸಿ, ಸಕ್ರಿಯವಾಗಿ ಭಾಗವಹಿಸುತ್ತೇನೆ.

- ಈ ಪಟ್ಟಿಗೆ ನೀವೂ ನಿಮ್ಮ ನಿರ್ಧಾರಗಳನ್ನು ಸೇರಿಸಬಹುದು.

#ಶುಭಕೃತ್..

(received in whatsapp)

***


No comments:

Post a Comment