ಶ್ರೀಮದಾಚಾರ್ಯರು ತಂತ್ರಸಾರ ಸಂಗ್ರಹದಲ್ಲಿ ಯಾವ ಕೈಯಲ್ಲಿ ಶಂಖ ಧರಿಸಿದ್ದಾನೆ ಅನ್ನೋ ಆಧಾರದ ಮೇಲೆ ಈ 24 ರೂಪಗಳನ್ನು 6 ರೂಪಗಳ ಒಂದು ಗುಂಪು ಮಾಡಿದರು.
ಅದರಲ್ಲಿ ಮೊದಲ್ನೇ ಗುಂಪು
ಕೇಶವೋ ಮಧುಸೂದನ: ಸಂಕರ್ಷಣ ದಾಮೋದರೌ
ಸ ವಾಸುದೇವ ಪ್ರದ್ಯುಮ್ನ ದಕ್ಷೋಚ್ಚ ಕರ ಶಂಖಿನ:
( ಕೇಶವ, ಮಧುಸೂದನ ಸಂಕರ್ಷಣ, ದಾಮೋದರ ವಾಸುದೇವ, ಪ್ರದ್ಯುಮ್ನ ರೂಪಗಳಲ್ಲಿ ದಕ್ಷ -ಅವನ ಬಲಗಡೆ ಇರುವ ಉಚ್ಚ ಮೇಲಿನ ಕೈಯಲ್ಲಿ ಶಂಖ ಇದೆ. *ಮೇಲಿನ ಬಲಗೈಯಲ್ಲಿ ಶಂಖ ಧರಿಸಿದ್ದಾನೆ
ಇದರಲ್ಲಿ ಹೇಳಿದ ರೂಪಗಳ ಲಕ್ಷಣ ಹೇಗೆ ತಿಳಿಯಬೇಕು ಅಂದ್ರೆ ಅದರ ಕ್ರಮವನ್ನೂ ಹೇಳಿದರು-
ಕ್ರಮ ವ್ಯುತ್ಕ್ರಮ ಪದ್ಮಾದಿ ಗದಾದಿ ವ್ಯುತ್ಕ್ರಮ: ತಥಾ
ಅರ್ಧ ಕ್ರಮ: ಸಾಂತರಶ್ಚ ಷಟ್ಸು ಷಟ್ ಸ್ವರಿ ಪೂರ್ವಿಣಾಮ್
ಈ ಪ್ರಕಾರ ಕೇಶವ ಹಾಗೂ ಮಧುಸೂದನ (ಕ್ರಮ & ವ್ಯುತ್ಕ್ರಮ) ಇದು ನೋಡೀವಿ.
ಈಗ ಮುಂದಿನದು ಈ ಗುಂಪಿನಲ್ಲಿ
ಸಂಕರ್ಷಣ
ಮೇಲಿನ ಬಲಗೈಯಲ್ಲಿ ಶಂಖ
ಇದು fix ಆಯಿತು,
ಮೂರನೇ ರೂಪ ಗುಂಪಿನಲ್ಲಿ ಕ್ರಮವಾಗಿ,, ಈ ರೂಪದ ಲಕ್ಷಣ ಹೇಗೆ ತಿಳಿಯಬೇಕು ಈಗ?? ಕ್ರಮಗಳನ್ನು ತಿಳಿಸಿಕೊಡುವ ಶ್ಲೋಕದಲ್ಲಿ ಮೂರನೇದ್ದು - ಪದ್ಮಾದಿ ವ್ಯುತ್ಕ್ರಮ -
ಕ್ರಮ ಅಂದ್ರೆ ಶಂಖ -ಚಕ್ರ ಗದಾ- ಪದ್ಮ
ಮೇಲಿನ ಬಲಗೈಯಲ್ಲಿ ಶಂಖ,
ಪದ್ಮಾದಿ ವ್ಯುತ್ಕ್ರಮ ಅಂದ್ರೆ
ಶಂಖ ಆಮೇಲೆ ಪದ್ಮ, ಆಮೇಲೆ ವ್ಯುತ್ಕ್ರಮ, so ಚಕ್ರ ಗದಾ, - ಶಂಖ -ಪದ್ಮ- ಚಕ್ರ -ಗದಾ
So ಸಂಕರ್ಷಣ ರೂಪದಲ್ಲಿ ಆಯುಧ ಕ್ರಮ
ಏನಾಯ್ತು ಈಗ? -
ಮೇಲಿನ ಬಲಗೈಯಲ್ಲಿ ಶಂಖ, ಮೇಲಿನ ಎಡಗೈಯಲ್ಲಿ ಪದ್ಮ, ಕೆಳಗಿನ ಎಡಗೈಯಲ್ಲಿ ಚಕ್ರ
ಕೆಳಗಿನ ಬಲಗೈಯಲ್ಲಿ ಗದಾ
ಮುಂದಿನ ರೂಪ ಈ ಗುಂಪಿನಲ್ಲಿ ದಾಮೋದರ
ಮೇಲಿನ ಬಲಗೈಯಲ್ಲಿ ಶಂಖ fix ಆಗಿದೆ, ಮುಂದಿನ ಕ್ರಮ ಏನು ನಾಲ್ಕನೇದ್ದಾಗಿ
ಗದಾದಿ ವ್ಯುತ್ಕ್ರಮ
ಶಂಖ ಆಮೇಲೆ ಗದಾ, ಆಮೇಲೆ ವ್ಯುತ್ಕ್ರಮ
ಶಂಖ -ಗದಾ -ಚಕ್ರ -ಪದ್ಮ
So ದಾಮೋದರ ರೂಪದಲ್ಲಿ
ಮೇಲಿನ ಬಲಗೈಯಲ್ಲಿ ಶಂಖ, ಮೇಲಿನ ಎಡಗೈಯಲ್ಲಿ ಗದಾ,
ಕೆಳಗಿನ ಎಡಗೈಯಲ್ಲಿ ಚಕ್ರ
ಕೆಳಗಿನ ಬಲಗೈಯಲ್ಲಿ ಪದ್ಮ
ಮುಂದಿನ ರೂಪ ಈ ಗುಂಪಿನಲ್ಲಿ ವಾಸುದೇವ
5ನೇದ್ದು, 5 ನೇಯ ಕ್ರಮ ಯಾವುದು?? - ಅರ್ಧಕ್ರಮ
ಕ್ರಮ ಅಂದ್ರೆ ಶಂಖ -ಚಕ್ರ -ಗದಾ -ಪದ್ಮ
ಅರ್ಧಕ್ರಮ ಅಂದ್ರೆ ಮೊದಲಿನ ಎರಡು ಕ್ರಮ - ಶಂಖ ಚಕ್ರ, ಆಮೇಲೆ ಉಲ್ಟಾ ಕ್ರಮ - ಪದ್ಮ -ಗದಾ (ಗದಾ ಪದ್ಮ ಕ್ರಮದ order, ಇದರ ಉಲ್ಟಾ -ಪದ್ಮ -ಗದಾ ),
So ವಾಸುದೇವ ರೂಪದಲ್ಲಿ
ಮೇಲಿನ ಬಲಗೈಯಲ್ಲಿ ಶಂಖ, ಮೇಲಿನ ಎಡಗೈಯಲ್ಲಿ ಚಕ್ರ
ಕೆಳಗಿನ ಎಡಗೈಯಲ್ಲಿ ಪದ್ಮ ಕೆಳಗಿನ ಬಲಗೈಯಲ್ಲಿ ಗದಾ
ಮುಂದಿನ ರೂಪ ಈ ಗುಂಪಿನಲ್ಲಿ 6 ನೇಯ ದಾಗಿ ಪ್ರದ್ಯುಮ್ನ
ಇದರ ಕ್ರಮ ಏನು ಆರನೇದ್ದು ಸಾಂತರ ಕ್ರಮ
ಅಂದ್ರೆ ಏನು?? ಮೊದಲೇ ನೋಡೀವಿ - ಶಂಖ ಚಕ್ರಗಳ ನಡುವೆ ಗದಾ ಪದ್ಮಗಳನ್ನು ನಿಯೋಜಿಸುವುದು,
so ಪ್ರದ್ಯುಮ್ನ ರೂಪದಲ್ಲಿ
ಮೇಲಿನ ಬಲಗೈಯಲ್ಲಿ ಶಂಖ,ಮೇಲಿನ ಎಡಗೈಯಲ್ಲಿ ಗದಾ,ಕೆಳಗಿನ ಎಡಗೈಯಲ್ಲಿ ಪದ್ಮ,ಕೆಳಗಿನ ಬಲಗೈಯಲ್ಲಿ ಚಕ್ರ
ಇಷ್ಟೇ.
ಹೀಗೆ ಇದೇ ರೀತಿಯಾಗಿ, ಮುಂದಿನ ಗುಂಪಿನಲ್ಲಿ ಬರುವ ಯಾವ ಕೈಯಲ್ಲಿ ಶಂಖ ಧರಿಸಿದ್ದಾನೆ, ಅದರ ಅನುಸಾರ ಒಂದನೇ ರೂಪಕ್ಕೆ ಕ್ರಮ, ಎರಡನೇ ರೂಪಕ್ಕೆ ವ್ಯುತ್ಕ್ರಮ, ಮೂರನೇ ರೂಪಕ್ಕೆ ಪದ್ಮಾದಿ ವ್ಯುತ್ಕ್ರಮ, ನಾಲ್ಕನೇ ರೂಪಕ್ಕೆ ಗದಾದಿ ವ್ಯುತ್ಕ್ರಮ, 5 ನೇ ರೂಪಕ್ಕೆ ಅರ್ಧಕ್ರಮ, 6ನೇ ರೂಪಕ್ಕೆ ಸಾರ್ಧ ಕ್ರಮ. ಈ ರೀತಿಯಾಗಿ ಮಾಡಿಕೊಂಡರೆ ಈ ಕೇಶವಾದಿ 24 ರೂಪಗಳ ಆಯುಧ ಧಾರಣ ಕ್ರಮವನ್ನು ಯಾವುದೇ photo /ಪುಸ್ತಕದ ಸಹಾಯ ಇಲ್ಲದೇ ಸುಲಭವಾಗಿ ಗುರುತಿಸ ಬಹುದು.
ಮೊದಲಿಗೆ ಎಲ್ಲಾ ವಿಷಯಳಿಗೆ ಇದ್ದಂತೆ ಸ್ವಲ್ಪ ಕಷ್ಟ ಅನ್ನಿಸಬಹುದು. ಆದ್ರೆ ಸ್ವಲ್ಪ patience ಇಟ್ಟುಕೊಂಡು 4-5 ದಿನಗಳು practice ಮಾಡಿದರೆ ನೆನಪು ಇಡಲಿಕ್ಕೆ ಸಾಧ್ಯ.
ಶ್ರೀ ಕೃಷ್ಣಾರ್ಪಣಮಸ್ತು.
*****
ಶ್ರೀ ಯಾದವಾರ್ಯ ಕೃತ ವ್ಯಾಸಗದ್ಯಂ
ಕೇಶವಾದಿ ಚತುರ್ವಿಂಶತಿ ವ್ಯೂಹಾಯ
ಕೇಶವ ನಾರಾಯಣಾದಿ 24 ರೂಪಗಳ ವ್ಯೂಹ ಉಳ್ಳ ವೇದವ್ಯಾಸ ದೇವರೇ ನಿಮಗೆ ನಮಸ್ಕಾರ ಅಂತ ಹೇಳ್ತಾ ಇದ್ದಾರೆ. ಈ 24ರ ವ್ಯೂಹದಲ್ಲಿ 23ನೇಯ ದಾಗಿ ಹರಿ
ವಾಮನ:ಸ ನಾರಾಯಣ: ಪದ್ಮನಾಭ ಉಪೇಂದ್ರಕ:
ಹರಿ: ಕೃಷ್ಣಶ್ಚ ದಕ್ಷಾಧ:ಕರೇ ಶಂಖ ಧರಾ ಮತಾ:, ಅಂತ.
ಹರಿ ರೂಪದಲ್ಲಿ ಕೆಳಗಿನ ಬಲಗೈಯಲ್ಲಿ ಶಂಖ ಧರಿಸಿದ್ದಾನೆ.
ಇಲ್ಲಿ ವ್ಯಾಖ್ಯಾನ ಮಾಡ್ತಾ ಶ್ರೀ ಶೇಷ ಚಂದ್ರಿಕಾಚಾರ್ಯರು
ಹರಿ ರೂಪದ ಲಕ್ಷಣಗಳನ್ನು ಹೇಳ್ತಾರೆ.
ಅದರ ತಾತ್ಪರ್ಯ.
ಹರಿ ರೂಪದಲ್ಲಿ
ಕೆಳಗಿನ ಬಲಗೈಯಲ್ಲಿ ಶಂಖ
ಮೇಲಿನ ಬಲಗೈಯಲ್ಲಿ ಚಕ್ರ
ಮೇಲಿನ ಎಡಗೈಯಲ್ಲಿ ಗದಾ
ಕೆಳಗಿನ ಎಡಗೈಯಲ್ಲಿ ಪದ್ಮ
ಇದು ಹರಿ ರೂಪದ ಲಕ್ಷಣ.
ಅರ್ಧಕ್ರಮ ಅಂತಾರೆ ಈ ರೀತಿಯ ಆಯುಧ ಧಾರಣ ಕ್ರಮಕ್ಕೆ.
ಈ ರೀತಿಯಾಗಿ ಚಕ್ರ ಗದಾ ಪದ್ಮ ಶಂಖಗಳನ್ನು ಧರಿಸಿ ಪರಿಶೋಭಿಸುವ ರೂಪ ಹರಿ
ಪಾಪಾನಿ ಹರತಿ ಇತಿ ಹರಿ: , ಅವನ ನಾಮಸ್ಮರಣೆ ಮಾಡಿದವರ ಪಾಪಗಳನ್ನು ಹರಣ ಮಾಡುತ್ತಾನೆ, ಪರಿಹಾರ ಮಾಡುತ್ತಾನೆ ಆದ್ದರಿಂದ ಹರಿ
ಶ್ರೀ ಕನಕದಾಸರು ಹೇಳ್ತಾರೆ,
ಮೊರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ ಇರಿಸಿ ಭಕ್ತರೊಳು ಪರಮಪುರುಷ ಶ್ರೀ ಹರೇ
ಪಾಪಗಳು ನಾಶವಾಗದೆ ಸಂಸಾರದ ಸೆರೆ- ಬಂಧದಿಂದ ಮೋಚನೆ ಇಲ್ಲ, ಪಾಪವನ್ನು ಹರಣ ಮಾಡ್ತೀಯ ಆದ್ದರಿಂದ ನಿನಗೆ ಹರಿ ಅಂತ ಹೆಸರು, ಪರಮಪುರುಷ -ಸರ್ವೋತ್ತಮ ಚೇತನ ನೀನು,ಹೇ ಇಂಥಾ ಶ್ರೀ ಹರೇ ನನ್ನ ಪಾಪಗಳನ್ನು ಹರಣ ಮಾಡಿ ನನ್ನ ಸೆರೆಯನ್ನು ಬಿಡಿಸು. ಹೇಗೆ?? ಅಥವ ಏನು ಮಾಡು ಇದಕ್ಕೋಸ್ಕರ ಅಂದ್ರೆ, ಇರಿಸಿ ಭಕ್ತರೊಳು
ಭಕ್ತರ ಅರ್ಥಾತ್ ಸಜ್ಜನರ ಸಂಗ ಕೊಟ್ಟು -ಕೊಡುವುದರ ಮೂಲಕ ಅರ್ಥಾತ್ ನಿನ್ನ ಭಕ್ತರ ಹತ್ತಿರ ನನ್ನನ್ನು ಇರಿಸಿ ನನ್ನ ಪಾಪಗಳನ್ನು ನಾಶ ಮಾಡು ಅಂತ ಪ್ರಾರ್ಥನೆ. ಯಾಕೆ ಹೀಗೆ ಯಾಕೆ?? ಅಂತ ಮುಂದಿನ ಪ್ರಶ್ನೆ ಈಗ.
ಅನೇಕ ಜ್ಞಾನಿಗಳು, ದಾಸವರೇಣ್ಯರು ಈ ಮಾತನ್ನು ಮತ್ತೆ ಮತ್ತೆ ಹೇಳ್ತಾರೆ, ಸಜ್ಜನರ ಸಂಗ ಕೊಡು etc etc, ಅಂತ.
ಉನ್ನತ ಪ್ರಾರ್ಥಿತಾ ಅಶೇಷ ಸಂಸಾಧಕಂ,.... ದೊಡ್ಡವರು, ಜ್ಞಾನಿಗಳು,ಶ್ರೇಷ್ಠ ಭಾಗವದ್ಭಕ್ತರು ಅರ್ಥಾತ್ ಸಜ್ಜನರು ಇವನು ನನ್ನವ ಅಂತ ಹೇಳಿದಾಗ ಆಗ ಪರಮಾತ್ನ ಅಂಥವರ ಮೇಲೆ ದೃಷ್ಟಿ ಹಾಕಿ ಪಾಪಗಳನ್ನು ಹರಣ ಮಾಡಿ ಉದ್ಧಾರ ಮಾಡ್ತಾನೆ. ಇದರ ಬಗ್ಗೆ ಬೇಕಾದಷ್ಟು ನೋಡೀವಿ already. ಹೌದು, ಖರೇ ಇದನ್ನು, ಈ ಪ್ರಾರ್ಥನೆಯನ್ನು ಹರಿ ಯಲ್ಲಿ ಮಾಡಿದ್ದು ಹೇಗೆ ಸಮನ್ವಯ ಅಂದ್ರೆ?
ಇದಕ್ಕೂ ಉತ್ತರ ಈ ಹರಿ ನಾಮದ ಅರ್ಥವೇ. ಅದು ಏನು ಅಂದ್ರೆ - ಹರತಿ ದುಷ್ಟೇಭ್ಯ: (ದುರ್ಜನೇಭ್ಯ:) ಭಕ್ತಾನ್ ಶಿಷ್ಟೇಷು -ಸಜ್ಜನೇಷು ಆಹಾರತಿ ಇತಿ ಹರಿ:
ದುಷ್ಟರ ಸಂಗದಿಂದ ನಮ್ಮನ್ನು ಹರಣ ಮಾಡಿ ಭಕ್ತರನ್ನು ಸಜ್ಜನರ ಸಂಗದಲ್ಲಿ ಇರಿಸುತ್ತಾನೆ ಆದ್ದರಿಂದಲೂ ಅವನು ಹರಿ
ಮುಖ್ಯವಾಗಿ ಶ್ರೀ ಕನಕದಾಸರು ಇಲ್ಲಿ ಶ್ರೀಮದ್ಭಾಗವತದ ಒಂದು ವಾಕ್ಯದ ಅನುವಾದವನ್ನೇ ಇಲ್ಲಿ ಈ ನುಡಿಯಲ್ಲಿ ಮಾಡಿದ್ದಾರೆ,
ಪುಂಸಾನ್ ಕಲಿಕೃತಾನ್ ದೋಷಾನ್ ದ್ರವ್ಯ ದೇಶಾತ್ಮ ಸಂಭವಾನ
ಸರ್ವಾನ್ ಹರತಿ ಚಿತ್ತಸ್ಥ:ಭಗವಾನ್ ಪುರುಷೋತ್ತಮ:
ಭಕ್ತರಲ್ಲಿ, ಭಕ್ತರ ಮನಸ್ಸಿನಲ್ಲಿ ನೆಲೆಸಿ - ನೆಲೆಸಿದ ಆ -ಪುರುಷೋತ್ತಮ ನಾದ ಭಗವಂತ ಏನು ಮಾಡ್ತಾನೆ ಅಂದ್ರೆ - ದ್ರವ್ಯ,ದೇಶ,ದೇಹ, ಸ್ವಭಾವಗಳಿಗೆ ಕಲಿ ಪ್ರಭಾವದಿಂದ ಬಂದ ದೋಷಗಳನ್ನು ಹರತಿ - ಹರಣ ಮಾಡುತ್ತಾನೆ ಆದ್ದರಿಂದ ನೀನು ಶ್ರೀಹರಿ
ಇಂಥಾ ನೀನು, ನನ್ನ ಹೃದಯದಲ್ಲಿಯೂ ನೆಲೆಸಿ ನನ್ನ ಪಾಪಗಳನ್ನು ಹರಣ ಮಾಡಿ ಈ ಸಂಸಾರಬಂಧದಿಂದ ಬಿಡಿಸು.
ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ
"ಮೊರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ ಇರಿಸಿ ಭಕ್ತರೊಳು ಪರಮಪುರುಷ ಶ್ರೀ ಹರೇ"
ಗಾಯತ್ರಿ ಮಂತ್ರದ ದ ಅಕ್ಷರದಿಂದ ಪ್ರತಿಪಾದ್ಯ ರೂಪ ಶ್ರೀಹರಿ, ಆಪ್ - ನೀರು ಈ ತತ್ವಕ್ಕೆ ನಿಯಾಮಕ ಭಗವದ್ರೂಪ ಅದು ಹರಿ
"ಅಪೋ ಯಾಚಾಮಿ ಭೇಷಜಂ" ಅಂತ ವೇದಗಳು ಹೇಳ್ತಾವೆ. ಕರ್ಮಗಳನ್ನು ನೀರು ಅಂತ ಹೇಳಿದೆ ವೇದ. ನಮ್ಮ ಸುಖ ದುಃಖಗಳಿಗೆ ನಮ್ಮ ನಮ್ಮ ಕರ್ಮಗಳಿಗೆಯೇ ಮೊರೆ ಹೋಗಬೇಕು, ಇವುಗಳಲ್ಲಿನ ಪಾಪಗಳನ್ನು ಹರಣ ಮಾಡಿ ನನ್ನ ಸಂಸಾರಸಾಗರವನ್ನು ಹರಣ ಮಾಡಪ್ಪ ಶ್ರೀಹರಿ ಅಂತ ಪ್ರಾರ್ಥಿಸ್ತಾ ಇದ್ದಾರೆ.
ಇಂಥಾ ಶ್ರೀಹರಿ ಅಭಿನ್ನ ಶ್ರೀ ವೇದವ್ಯಾಸ ದೇವರೇ ನಿಮಗೆ ನಮಸ್ಕಾರ ಅಂತ ಹೇಳ್ತಾ ಇದ್ದಾರೆ ಶ್ರೀ ಯಾದವಾರ್ಯರು
******
No comments:
Post a Comment