SEARCH HERE

Wednesday 24 April 2019

govt budget 2019-2020

 ಕೇಂದ್ರ ಬಜೆಟ್ ಮುಖ್ಯಾಂಶಗಳು


* ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್ ಏರಿಕೆ
* ಬಂಗಾರದ ಮೇಲಿನ ಆಮದು ಸುಂಕ ಶೇ. 10ರಿಂದ 12.5ಕ್ಕೆ ಏರಿಕೆ.
*  ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ, ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ, ಆಮದಾಗುವ ಪುಸ್ತಕಗಳಿಗೆ ಶೇ, 5 ರಷ್ಟು ತೆರಿಗೆ
* ಡಿಜಿಟಲ್‌ ಪೇಮೆಂಟ್‌ ಗೆ ಉತ್ತೇಜನ. ಕ್ರೆಡಿಕ್‌ ಕಾರ್ಡ್‌ ಪೇಮೆಂಟ್‌ಗಳ ಮೇಲೆ ಶುಲ್ಕ ಇಲ್ಲ.
* ಮಧ್ಯಮ ವರ್ಗದವರ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ. 7 ಲಕ್ಷದವರೆಗಿನ ಗೃಹ ಸಾಲಕ್ಕೆ 15 ವರ್ಷ ತೆರಿಗೆ ವಿನಾಯಿತಿ.
* ತೆರಿಗೆ ಪಾವತಿಗೆ ಇನ್ನು ಪ್ಯಾನ್‌ ಕಾರ್ಡ್‌ ಅಥವಾ ಆಧಾರ್‌ ಕಾರ್ಡ್‌ ಇದ್ದರೆ ಸಾಕು . ಪ್ಯಾನ್‌ ಕಾರ್ಡ್‌ ಕಡ್ಡಾಯವಲ್ಲ. ಐಟಿ ರಿಟರ್‌ನ್ಸ್‌ ಸಲ್ಲಿಸಲು ಆಧಾರ್‌ ಕಾರ್ಡ್‌ ಸಾಕು.
* ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ 1.25 ಲಕ್ಷದವರೆಗೆ ಸಬ್ಸಿಡಿ : ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಶೇ. 5 ರಷ್ಟು ಜಿಎಸ್ ಟಿ ಇಳಿಕೆ
*  5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ: ವಾರ್ಷಿಕ ಆದಾಯ 400 ಕೋಟಿ ಹೊಂದಿದ ಉದ್ಯಮಕ್ಕೆ ಶೇ. 25 ರಷ್ಟು ತೆರಿಗೆ
* ಅಟಲ್‌ ಪೆನ್ಷನ್‌, ನ್ಯಾಷನಲ್‌ ಪೆನ್ಷನ್‌ ಯೋಜನೆ ಪಿಎಫ್ಆರ್‌ಡಿಐ ಜೊತೆ ಜೋಡಿಕೆ. ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಕ್ಕೆ ನೂರು ಲಕ್ಷ ಕೋಟಿ ರೂಪಾಯಿ.
*  ನೇರ ತೆರಿಗೆ 11 ಲಕ್ಷ ಕೋಟಿಗೆ ಏರಿಕೆ, ನೇರ ತೆರಿಗೆ ಸಂಗ್ರಹದಲ್ಲಿ ಶೇ, 78 ರಷ್ಟು ಏರಿಕೆ. ಜನರ ಮೇಲೆ ತೆರಿಗೆ ಹೊರಿಸಲು ಬಯಸುವುದಿಲ್ಲ- ನಿರ್ಮಲಾ ಸೀತಾರಾಮನ್
*1. 2.5, 10, 20 ರೂಪಾಯಿ ನಾಣ್ಯಗಳ ಬಿಡುಗಡೆ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಖಾಸಗಿ ಹೂಡಿಕೆಗೆ ಆಹ್ವಾನ
* ಬ್ಯಾಂಕ್‌ಗಳ ಏಕೀಕರಣಕ್ಕೆ ಒತ್ತು. ಬ್ಯಾಂಕ್‌ಗಳ 1 ಲಕ್ಷ ಕೋಟಿ ಅನುತ್ಪಾದಕ ಆಸ್ತಿ ರಿಕವರಿ. ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ 70 ಸಾವಿರ ಕೋಟಿ ರೂಪಾಯಿ ಮರುಪೂರ್ಣ.
 * 17 ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆಗೆ ಏರಿಸಲು ನಿರ್ಧಾರ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿ ಸ್ಥಾಪನೆ.
* ಜನ್‌ಧನ್‌ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂಪಾಯಿ ಓವರ್‌ ಡ್ರಾಫ್ಟ್. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿಯಲ್ಲಿ ಸಾಲ.
* ಎನ್ ಆರ್ ಐಗಳಿಗೆ ಆಧಾರ್ ಆಧಾರಿತ ಪಾಸ್ ಪೋರ್ಟ್ ನೀಡಲು ನಿರ್ಧಾರ
* ನಾರಿ ಟು ನಾರಾಯಣಿ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು. ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಲಿಂಗ ತಾರತಮ್ಯ ನಿವಾರಣೆಗೆ ಸರ್ಕಾರದಿಂದ ಹೊಸ ಯೋಜನೆ. ಉದ್ಯಮಗಳಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿಸಲು ಕ್ರಮ.
* ಕಾಯಕವೇ ಕೈಲಾಸ ಎಂದು ಜಗಜ್ಯೋತಿ ಬಸವೇಶ್ವರರ ವಚನ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್
* ಎಲ್ ಇಡಿ ಬಳಕೆ ಉತ್ತೇಜಿಸಲು 60 ಕೋಟಿ ಬಲ್ಬ್ ವಿತರಣೆ, ಎಲ್ ಇಡಿ ಬಳಕೆಯಿಂದ ಪ್ರತಿವರ್ಷ 18 ಸಾವಿರ ಕೋಟಿ ಉಳಿತಾಯ, ಸೋಲಾರ್ ಮೂಲಕ ಎಲ್ ಇಡಿ ಬಳಕೆಗೆ ಉತ್ತೇಜನ
*  60 ವರ್ಷ ಮೇಲ್ಪ ಟ್ಟ ಕಾರ್ಮಿಕರಿಗೆ ತಿಂಗಳಿಗೆ 3 ಸಾವಿರ ರೂ. ಪೆನ್ಷನ್.
* ರೋಬೋಟಿಕ್ ತಂತ್ರಜ್ಞಾನ ಉದ್ಯಮಕ್ಕೆ ಆದ್ಯತೆ. ಸ್ಯ್ಟಾಂಡ್ ಅಪ್ ಯೋಜನೆಗಳಲ್ಲಿ 2 ವರ್ಷದಲ್ಲಿ 300 ಉದ್ಯಮ ಸ್ಥಾಪನೆ.
* ಸ್ಟ್ಯಾಂಡ್ ಅಪ್ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಣದ ನೆರವು
*  ನೂತನ 4 ಕಾರ್ಮಿಕ ಕೋರ್ಟ್ ಗಳ ಸ್ಥಾಪನೆಗೆ ನಿರ್ಧಾರ, ಸ್ಟಾರ್ಟ್ ಅಪ್ ಯೋಜನೆಗಳ ಮಾಹಿತಿಗಾಗಿ ನೂತನ ವಾಹಿನಿ,ದೂರದರ್ಶನ ಸಹಭಾಗಿತ್ವದಲ್ಲಿ ನೂತನ ವಾಹಿನಿ ಕಾರ್ಯಾರಂಭ
* ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ನಿರ್ಮಾಣ. 10 ಲಕ್ಷ ಯುವಕರಿಗೆ ಕೌಲಶ್ಯ ಅಭಿವೃದ್ಧಿ ತರಬೇತಿ. 3ಡಿ ಪ್ರಿಂಟಿಂಗ್ ಅಧ್ಯಯನಕ್ಕೆ ಯುವಕರಿಗೆ ನೆರವು.
* ಸ್ವಚ್ಛ ಭಾರತ್‌ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ. ಗ್ರಾಮೀಣ ಪ್ರದೇಶದಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ.
* ಭಾರತದ ಮೂರು ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ: ಐಐಟಿ, ಐಐಎಂ. ಐಐಎಸ್ ಸಿ ಸಂಸ್ಥೆಗಳಿಗೆ 400 ಕೋಟಿ ಅನುದಾನ, ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆಗಳನ್ನಾಗಿಸಲು ಅನುದಾನ
* ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ. ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು. 'ಗ್ಯಾನ್' ಯೋಜನೆ ಮೂಲಕ ಐಐಎಂ, ಐಐಟಿ, ಐಐಎಸ್ ಸಿ ಜಂಟಿ ಅಧ್ಯಯನ.
* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏಕ ರೀತಿಯ ಜೀವನಕ್ಕೆ ಒತ್ತು ನೀಡಲಾಗುವುದು
* ಸಬ್ ಅರ್ಬನ್ ರೈಲು ಯೋಜನೆಗಳಿಗೆ ಒತ್ತು. ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಾಣ. ಮೆಟ್ರೋ ರೈಲು ಉತ್ತೇಜಿಸಲು ಪಿಪಿಪಿ ಮಾದರಿ ಯೋಜನೆಗೆ ಒತ್ತು.
* ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 81 ಲಕ್ಷ ಮನೆಗಳ ನಿರ್ಮಾಣ ಯೋಜನೆ. 26 ಲಕ್ಷ ಮನೆಗಳು ಈಗಾಗಲೆ ನಿರ್ಮಾಣವಾಗಿದೆ. 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ. ನೂತನ ತಂತ್ರಜ್ಞಾನದಿಂದ ಆಧುನಿಕ ಮನೆ ನಿರ್ಮಾಣ.
*ಜಲಶಕ್ತಿ ಸಚಿವಾಲಯ ಸ್ಥಾಪನೆ. ಜಲಸಂವರ್ಧನೆ, ಕುಡಿಯುವ ನೀರು ಯೋಜನೆಗೆ ಮೊದಲ ಆದ್ಯತೆ. ಹರ್ ಘರ್ ಜಲ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ.

* ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಹೂತ್ತು, ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ
* ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು
*  ಶೇ .97 ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ಸೌಲಭ್ಯ, ಮುಂದಿನ ಐದು ವರ್ಷದಲ್ಲಿ 25 ಸಾವಿರ ಕಿ . ಮೀ. ರಸ್ತೆ ನಿರ್ಮಾಣ,1.25 ಲಕ್ಷ ಕಿ. ಮೀ. ರಸ್ತೆ ಮೇಲ್ದರ್ಜೆಗೇರಿಸಲು ನಿರ್ಧಾರ
*  ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ,ಪಿಎಂಜಿಎಸ್ ವೈ ಯೋಜನೆ ಗ್ರಾಮೀಣ ಜನರಲ್ಲಿ ಬದಲಾವಣೆ ತಂದಿದೆ- ಸೀತಾರಾಮನ್
*  ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ, ಪ್ರತಿ ಮನೆಗೂ ಶೌಚಾಲಯ, ವಿದ್ಯುತ್, ಎಲ್ ಪಿಜಿ ಸೌಕರ್ಯ
*  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 24 ಸಾವಿರ ಕೋಟಿ.
* ಭಾರತದಲ್ಲಿ ಎಫ್‌ಡಿಐ ಹೂಡಿಕೆದಾರರನ್ನು ಆಕರ್ಷಿಸಲು ಕ್ರಮ. ವಿಮೆ ಕ್ಷೇತ್ರದಲ್ಲಿ ಶೇ. 100ರಷ್ಟು ಎಫ್‌ಡಿಐ ಹೂಡಿಕೆಗೆ ಅನುಮತಿ. ಇಳಿತಾಯ ಯೋಜನೆಗಳಿಗೆ ಜರನ್ನು ಆಕರ್ಷಿಸಲು ಹಲವು ಯೋಜನೆ.
 * ಎಫ್‌ಡಿಐ ಹೂಡಿಕೆಗೆ ಈಗಲೂ ಭಾರತ ಪ್ರಮುಖ ಮಾರುಕಟ್ಟೆ. ಎಫ್‌ಡಿಐ 1.3 ಟ್ರಿಲಿಯನ್ ನಿಂದ 1.5 ಟ್ರಿಲಿಯನ್ ಗೆ ಏರಿಕೆ.
* ರೈಲು ಮೂಲಸೌಕರ್ಯ ಅಭಿವೃದ್ಧಿಗೆ 50 ಲಕ್ಷ ಕೋಟಿ ಅಗತ್ಯ, ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ
* ಕಾರ್ಪೋರೇಟ್ ಬಾಂಡ್ ಕುರಿತು ಹೊಸ ನೀತಿ ಜಾರಿಗೆ ನಿರ್ಧಾರ: ಎಫ್ ಟಿಐ ಉತ್ತೇಜಿಸಲು ಕೆವೈಸಿ ನೀತಿಯ ಸರಳೀಕರಣ
*  ಪ್ರಧಾನಮಂತ್ರಿ 'ಕರ್ಮಯೋಗಿ ಮಾನ್ ಸಮ್ಮಾನ್' ಯೋಜನೆಗೆ ಚಾಲನೆ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಶನ್.
* ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಅದಕ್ಕಾಗಿ 350 ಕೋಟಿ ರು. ಎಂಎಸ್ಎಂಇಗಳಿಗೆ ಸಾಲ ನೀಡಿಕೆ.
*  ಹೆಚ್ಚಿನ ಗೃಹ ನಿರ್ಮಾಣಕ್ಕೆ ಆದ್ಯತೆ , ಎಂಎಸ್ ಎಂಇಗಳಿಗೆ 350 ಕೋಟಿ ಸಾಲ ನೀಡಿಕೆ: ಎಂಸ್ ಎಂ ಇಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ
* 'ಒನ್ ನೇಶನ್ ಒನ್ ಗ್ರಿಡ್' ಮೂಲಕ ವಿದ್ಯುತ್ ಸೌಕರ್ಯ. ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್ ನಿರ್ಮಾಣಕ್ಕೆ ನಿರ್ಧಾರ.
* ಜಲಮಾರ್ಗ ಯೋಜನೆಗೆ ಒತ್ತು. ಗಂಗಾನದಿಯಲ್ಲಿ ಒಳನಾಡು ಜಲಸಾರಿಗೆಗೆ ಆಧ್ಯತೆ. ಸರಕು ಸಾಗಣೆಗೆ ಅನುಕೂಲಕಾರಿ ವಾತಾವರಣ ನಿರ್ಮಾಣ.
*   ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ಧನ ಘೋಷಣೆ ,ಮುಂದಿನ 3 ವರ್ಷಕ್ಕೆ 10 ಸಾವಿರ ಕೋಟಿ ಪ್ರೋತ್ಸಾಹ ಧನ,ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ಪ್ರೇಮಿ ವಾಹನ ವ್ಯವಸ್ಥೆ
* ಸಾಗರ್ ಮಾಲಾ, ಭಾರತ್ ಮಾಲಾ ಮೂಲಕ ಸಾರಿಗೆ ಕ್ಷೇತ್ರಕ್ಕೆ ಕೊಡುಗೆ. ಸಾರಿಗೆ ವೆಚ್ಚವನ್ನು ಕಡಿಮಗೊಳಿಸೋ ಉದ್ದೇಶದಿಂದ ಯೋಜನೆ. ಗ್ರಾಮ ಹಾಗೂ ನಗರಗಳ ಅಂತರ ಕಡಿಮೆಗೊಳಿಸುವ ನಿಟ್ಟಿನಿಂದ ಸಾರಿಗೆ ಕಾಂತ್ರಿ.
* 300 ಕಿ. ಮೀ. ಮೆಟ್ರೋ ಯೋಜನೆಗೆ ಅನುಮೋದನೆ
*  ಮುದ್ರಾ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ - ನಿರ್ಮಲಾ ಸೀತಾರಾಮನ್
*  ಉಡಾನ್ ಯೋಜನೆಯಿಂದ ಜನಸಾಮಾನ್ಯರ ಪಾಲಿಗೆ ಆಶಾಕಿರಣ
*  ಭಾರತದಲ್ಲಿ 3 ಟ್ರಿಲಿಯನ್‌ ಆರ್ಥಿಕತೆ ಇತ್ತು. ಇದೀಗ ಕೆಲ ವರ್ಷಗಳಲ್ಲೇ 5 ಟ್ರಿಲಿಯನ್‌ ಆರ್ಥಿಕತೆ ಯೋಜನೆ ರೂಪಿಸಿದೆ. ನಾವು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಿದ್ದೇವೆ.
* ಮೂಲಸೌಕರ್ಯ, ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು- ನಿರ್ಮಲಾ ಸೀತಾರಾಮನ್
*  ಬಲಿಷ್ಠ ದೇಶ, ಬಲಿಷ್ಠ ನಾಗರಿಕ ನಮ್ಮ ಗುರಿ- ನಿರ್ಮಲಾ ಸೀತಾರಾಮನ್
*  ಐದು ವರ್ಷದ ಹಿಂದೆ ಜಗತ್ತಿನಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಪ್ರಸ್ತುತ 5ನೇ ಸ್ಥಾನದಲ್ಲಿದೆ.
* ಸರ್ಕಾರಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತೇವೆ-ನಿರ್ಮಲಾ ಸೀತಾರಾಮನ್
*  ಜನರ ಭಾಗವಹಿಸುವಿಕೆಯೊಂದಿಗೆ ಟೀಂ ಇಂಡಿಯಾ
*  ಪುತ್ರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವುದನ್ನು ವೀಕ್ಷಿಸಲು ಆಗಮಿಸಿದ ಅವರ ಪೋಷಕರಾದ ಸಾವಿತ್ರಿ ಮತ್ತು ನಾರಾಯಣನ್ ಸೀತಾರಾಮನ್
*****

No comments:

Post a Comment