ಶ್ರೀವಿಷ್ಣುಪುರಾಣ
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
441 ತೃತೀಯಾಂಶ: ಪ್ರಥಮೋಧ್ಯಾಯ:
ಶ್ರೀಮೈತ್ರೇಯ ಉವಾಚ:
ಕಥಿತಾ ಗುರುಣಾ ಸಮ್ಯಗ್ ಭೂಸಮುದ್ರಾದಿಸಂಸ್ಥಿತಿ:|
ಸೂರ್ಯಾದೀನಾಂ ಚ ಸಂಸ್ಥಾನಂ ಜ್ಯೋತಿಷಾಂ ಚಾತಿವಿಸ್ತರಾತ್||1||
ದೇವಾದೀನಾಂ ಚಥಾ ಸೃಷ್ಟಿರ್ಋಷೀಣಾಂ ಚಾಪಿ ವರ್ಣಿತಾ|
ಚಾತುರ್ವರ್ಣಸ್ಯ ಚೋತ್ಪತ್ತಿಸ್ತಿರ್ಯಗ್ಯೋನಿಗತಸ್ಯ ಚ||2||
ಧ್ರುವಪ್ರಹ್ಲಾದಚರಿತಂ ವಿಸ್ತರಾಚ್ಚ ತ್ವಯೋದಿತಮ್|
ಮನ್ವಂತರಾಣ್ಯಶೇಷಾಣಿ ಶ್ರೋತುಮಿಚ್ಛಾಮ್ಯನುಕ್ರಮಾತ್||3||
ಮನ್ವಂತರಾಧಿಪಾಂಶ್ಚೈವ ಶಕ್ರದೇವಪುರೋಗಮಾನ್|
ಭವತಾ ಕಥಿತಾನೇತಾನ್ ಶ್ರೋತುಮಿಚ್ಛಾಮ್ಯಹಂ ಗುರೋ||4||
ಶ್ರೀಪರಾಶರ ಉವಾಚ:
ಅತೀತಾನಾಗತಾನೀಹ ಯಾನಿ ಮನ್ವಂತರಾಣಿ ವೈ|
ತಾನ್ಯಹಂ ಭವತ: ಸಮ್ಯಕ್ಕಥಯಾಮಿ ಯಥಾಕ್ರಮಮ್||5||
ಮೈತ್ರೇಯರು ಪರಾಶರ ಮುನಿಗಳನ್ನು ಕುರಿತು "ಗುರುಗಳೇ, ಇದುವರೆಗೆ ಭೂಮಿ ಸಮುದ್ರಾದಿಗಳ ಸ್ಥಿತಿಯನ್ನೂ ಸೂರ್ಯಾದಿ ಜ್ಯೋತಿಗಳ ಸಂಸ್ಥಾನವನ್ನೂ ವಿಸ್ತಾರವಾಗಿ ಹೇಳಿದ್ದೀರಿ.
ಅಲ್ಲದೆ ದೇವಗಂಧರ್ವಾದಿಗಳ ಮತ್ತು ಋಷಿಗಳ ಸೃಷ್ಟಿಯನ್ನೂ ಚಾತುರ್ವಣ್ಯದ ವಿಚಾರವನ್ನೂ ತಿರ್ಯಗ್ ಜಂತುಗಳ ಉತ್ಪತ್ತಿ ಕ್ರಮವನ್ನೂ ಧ್ರುವ ಪ್ರಹ್ಲಾದರ ಚರಿತ್ರೆಯನ್ನೂ ಸಹ ವಿಸ್ತಾರವಾಗಿಯೇ ವರ್ಣಿಸಿದ್ದೀರಿ.
ಈಗ ಎಲ್ಲ ಮನ್ವಂತರಗಳ ವಿಷಯವನ್ನೂ ಕೇಳಿ ತಿಳಿದುಕೊಳ್ಳಲು ಬಯಸುತ್ತೇನೆ.
ಹಾಗೆಯೇ ಆಯಾ ಮನ್ವಂತರಾಧಿಪತಿಗಳನ್ನೂ ಆ ಸಮಯದಲ್ಲಿರುವ ಇಂದ್ರ ದೇವತಾದಿಗಳನ್ನೂ ನೀವು ಹೇಳಬೇಕೆಂದು ಅದೆಲ್ಲವನ್ನೂ ನಾನು ಕೇಳಬೇಕೆಂದೂ ಅಪೇಕ್ಷೆಯಾಗಿದೆ" ಎಂದರು.
ಆಗ ಪರಾಶರರು:
"ಮೈತ್ರೇಯ, ಹಿಂದೆ ಕಳೆದು ಹೋದ ಮನ್ವಂತರಗಳನ್ನೂ ಮುಂದೆ ಬರತಕ್ಕವನ್ನೂ ಕ್ರಮವರಿತು ಸರಿಯಾಗಿ ಹೇಳುತ್ತೇನೆ" ಎಂದರು.
********
ಸ್ವಾಯಂಭುವೋ ಮನು: ಪೂರ್ವಂ ಪರ: ಸ್ವಾರೋಚಿಷಸ್ತಥಾ|
ಉತ್ತಮಸ್ತಾಮಸಶ್ಚೈವ ರೈವತಶ್ಚಾಕ್ಷುಷಸ್ತಥಾ||6||
ಷಡೇತೇ ಮನವೋತೀತಾಸ್ಸಾಂಪ್ರತಂ ತು ರವೇಸ್ಸುತ:|
ವೈವಸ್ವತೋಯಂ ಯಸ್ಯೈತತ್ಸಪ್ತಮಂ ವರ್ತತೇಂತರಮ್||7||
ಸ್ವಾಯಂಭುವಂ ತು ಕಥಿತಂ ಕಲ್ಪಾದಾವಂತರಂ ಮಯಾ|
ದೇವಾಸ್ಸಪ್ತರ್ಷಯಶ್ಚೈವ ಯಥಾವತ್ಕಥಿತಾ ಮಯಾ||8||
ಅತ ಊರ್ಧ್ವಂ ಪ್ರವಕ್ಷಾಮಿ ಮನೋಸ್ಸ್ವಾರೋಚಿಷಸ್ಯ ತು|
ಮನ್ವಂತರಾಧಿಪಾನ್ ಸಮ್ಯಗ್ದೇವರ್ಷಿಸ್ತತ್ಸುತಾಂಸ್ತಥಾ||9||
ಮೊದಲನೆಯ ಮನು ಸ್ವಾಯಂಭುವ.
ಆಮೇಲೆ ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ - ಎಂಬ ಆರು ಮನುಗಳು ಕಳೆದುಹೋದರು.
ಈಗ ಏಳನೆಯದಾದ ವೈವಸ್ವತ ಮನ್ವಂತರವು ನಡೆಯುತ್ತಿದೆ.
ವೈವಸ್ವತನು ಸೂರ್ಯನ ಮಗ.
ಸ್ವಾಯಂಭುವ ಮನ್ವಂತರದಲ್ಲಿ ದೇವತೆಗಳು ಯಾಮರು; ಋಷಿಗಳು ಮರೀಚಿ, ಅಂಗಿರಸ್ - ಮೊದಲಾದವರು. ಮನುಪುತ್ರರು ಪ್ರಿಯವ್ರತ ಮತ್ತು ಉತ್ತಾನಪಾದ.
(ಹೆಚ್ಚಿನ ವಿವರಣೆ ಅಂಶ 1, ಅಧ್ಯಾಯ 7 ರಲ್ಲಿ ಹೇಳಿರುತ್ತದೆ.)
ಇದಾದ ಮೇಲೆ ಸ್ವಾರೋಚಿಷ ಮನ್ವಂತರದ ಮನ್ವಂತರಾಧಿಪತಿ, ದೇವತೆಗಳು, ಋಷಿಗಳು ಮತ್ತು ಮನುಪುತ್ರರ ವಿಷಯವನ್ನು ಹೇಳುತ್ತೇನೆ.
********
ಪಾರಾವತಾಸ್ಸತುಷಿತಾ ದೇವಸ್ಸ್ವಾರೋಚಿಷೇಂತರೇ|
ವಿಪ್ರಶ್ಚಿತ್ತತ್ರ ದೇವೇಂದ್ರೋ ಮೈತ್ರೇಯಾಸೀನ್ಮಹಾಬಲ:||10||
ಊರ್ಜ್ವ:ಸ್ತಂಭಸ್ತಥಾ ಪ್ರಾಣೋ ವಾತೋಥ ಪೃಷಭಸ್ತಥಾ|
ನಿರಯಶ್ಚ ಪರೀವಾಂಶ್ಚ ತತ್ರ ಸಪ್ತರ್ಷಯೋಭವನ್||11||
ಚೈತ್ರಕಿಂಪುರುಷಾದ್ಯಾಶ್ಚ ಸುತಾಸ್ಸ್ವಾರೋಚಿಷಸ್ಯ ತು|
ದ್ವಿತೀಯಮೇತದ್ವ್ಯಾಖ್ಯಾತಮಂತರಂ ಶೃಣು ಚೋತ್ತಮಮ್||12||
ತೃತೀಯೇಪ್ಯಂತರೇ ಬ್ರಹ್ಮನ್ನುತ್ತಮೋ ನಾಮ ಯೋ ಮನ:|
ಸುಶಾಂತಿರ್ನಾಮ ದೇವೇಂದ್ರೋ ಮೈತ್ರೇಯಾಸೀತ್ಸುರೇಶ್ವರ:||13||
ಸುಧಾಮಾನಸ್ತಥಾ ಸತ್ಯಾ ಜಪಾಶ್ಚಾಥ ಪ್ರತರ್ದನಾ:|
ವಶವರ್ತಿನಶ್ಚ ಪಂಚೈತೇ ಗಣಾ ದ್ವಾದಶಕಾಸ್ಸ್ಮೃತಾ:||14||
ವಸಿಷ್ಠತನಯಾ ಹ್ಯೇತೇ ಸಪ್ತ ಸಪ್ತರ್ಷಯೋಭವನ್|
ಅಜ: ಪರಶುದೀಪ್ತಾದ್ಯಾಸ್ತಥೋತ್ತಮಮನೋಸ್ಸುತಾ:||15||
ಸ್ವಾರೋಚಿಷಮನ್ವಂತರದಲ್ಲಿ ಪಾರಾವತರು ಮತ್ತು ತುಷಿತರು ದೇವತೆಗಳು.
ವಿಪಶ್ಚಿತ್ ಎಂಬುವನು ಬಲಾಢ್ಯನಾದ ಇಂದ್ರ.
ಊರ್ಜ, ಸ್ತಂಭ, ಪ್ರಾಣ, ವಾತ, ಪೃಷಭ, ನಿರಯ, ಪರೀವಾನ್ - ಎಂಬುವರು ಸಪ್ತರ್ಷಿಗಳು.
ಚೈತ್ರ, ಕಿಂಪುರುಷ - ಮುಂತಾದವರು ಸ್ವಾರೋಚಿಷ ಮನುವಿನ ಪುತ್ರರು.
ಹೀಗೆ ಎರಡನೆಯ ಮನ್ವಂತರದ ವಿಷಯವನ್ನು ಹೇಳಿದ್ದಾಯಿತು.
ಇನ್ನು ಉತ್ತಮ ಎಂಬ ಮನ್ವಂತರದ ವಿಷಯವನ್ನು ಆಲಿಸು.
ಮೂರನೆಯ ಈ ಉತ್ತಮ ಮನ್ವಂತರದಲ್ಲಿ ಉತ್ತಮನೆಂಬುವನು ಮನು.
ಸುಶಾಂತಿ ಎಂಬುವನು ದೇವೇಂದ್ರ.
ಸುಧಾಮ, ಸತ್ಯ, ಜಪ, ಪ್ರತರ್ದನ, ವಶವರ್ತಿ - ಎಂಬ ದೇವತಾಗಣಗಳು ದೇವತೆಗಳು.
ಈ ಹೆಸರಿನ ಒಂದೊಂದು ಗಣದಲ್ಲಿ ಹನ್ನೆರಡು ದೇವತೆಗಳಿರುತ್ತಾರೆ.
ವಸಿಷ್ಠ ತನಯರಾದ ಏಳು ಮಂದಿ ಸಪ್ತರ್ಷಿಗಳಾಗಿದ್ದರು.
ಅಜ, ಪರಶು, ದೀಪ್ತ ಮೊದಲಾದವರು ಉತ್ತಮಮನುವಿನ ಮಕ್ಕಳು.
********
ತಾಮಸಸ್ಯಾಂತರೇ ದೇವಾಸ್ಸುಪರಾ ಹರಯಸ್ತಥಾ|
ಸತ್ಯಾಶ್ಚ ಸುಧಿಯಶ್ಚೈವ ಸಪ್ತವಿಂಶತಿಕಾ ಗಣಾ:||16||
ಶಿಭಿರಿಂದ್ರಸ್ತಥಾ ಚಾಸೀತ್ ಶತಯಜ್ಞೋಪಲಕ್ಷಣ:|
ಸಪ್ತರ್ಷಯಶ್ಚ ಯೇ ತೇಷಾಂ ತೇಷಾಂ ನಾಮಾನಿ ಮೇ ಶೃಣು||17||
ಜ್ಯೋತಿರ್ಧಾಮಾ ಪೃಥು: ಕಾವ್ಯಶ್ಚೈತ್ರೋಗ್ನಿರ್ವನಕಸ್ತಥಾ|
ಪೀವರಶ್ಚರ್ಷಯೋ ಹ್ಯೇತೇ ಸಪ್ತ ತತ್ರಾಪಿ ಚಾಂತರೇ||18||
ನರ: ಖ್ಯಾತಿ: ಕೇತುರೂಪೋ ಜಾನುಜಂಘಾದಯಸ್ತಥಾ|
ಪುತ್ರಾಸ್ತು ತಾಮಸಸ್ಯಾಸನ್ ರಾಜಾನಸ್ಸುಮಹಾಬಲಾ:||19||
ತಾಮಸ ಮನ್ವಂತರದಲ್ಲಿ ಸುಪಾರ, ಹರಿ, ಸತ್ಯ, ಸುಧೀ ಎಂಬ ನಾಲ್ಕು ದೇವತಾಗಣಗಳು.
ಒಂದೊಂದು ಗಣದಲ್ಲಿ ಇಪ್ಪತ್ತೇಳು ದೇವತೆಗಳು.
ನೂರು ಯಜ್ಞಗಳನ್ನು ಮಾಡಿದ ಶಿಬಿ ಎಂಬವನು ದೇವೇಂದ್ರ.
ಇನ್ನು ಸಪ್ತರ್ಷಿಗಳ ಹೆಸರುಗಳನ್ನು ಕೇಳು:-
ಜ್ಯೋತಿರ್ಧಾಮ, ಪೃಥು, ಕಾವ್ಯ, ಚೈತ್ರ, ಅಗ್ನಿ, ವನಕ, ಪೀವರ - ಎಂಬವರು ತಾಮಸಮನ್ವಂತರದ ಸಪ್ತರ್ಷಿಗಳು.
ನರ, ಖ್ಯಾತಿ, ಕೇತುರೂಪ, ಜಾನುಜಂಘ - ಮುಂತಾದ ಬಲಿಷ್ಠರಾದ ರಾಜರು ತಾಮಸಮನುವಿನ ಪುತ್ರರು.
********
ಪಂಚಮೇ ವಾಪಿ ಮೈತ್ರೇಯ ರೈವತೋ ನಾಮ ನಾಮತ:|
ಮನುರ್ವಿಭುಶ್ಚ ತತ್ರೇಂದ್ರೋ ದೇವಾಂಶ್ಚಾತ್ರಾಂತರೇ ಶೃಣು||20||
ಅಮಿತಾಭಾ ಭೂತರಯಾ ವೈಕುಂಠಾಸ್ಸಸುಮೇಧಸ:|
ಏತೇ ದೇವಗಣಾಸ್ತತ್ರ ಚತುರ್ದಶ ಚತುರ್ದಶ||21||
ಹಿರಣ್ಯರೋಮಾ ವೇದಶ್ರೀರೂರ್ಧ್ವಬಾಹುಸ್ತಥಾಪರ:|
ವೇದಬಾಹುಸ್ಸುಧಾಮಾ ಚ ಪರ್ಜನ್ಯಶ್ಚ ಮಹಾಮುನಿ:|
ಏತೇ ಸಪ್ತರ್ಷಯೋ ವಿಪ್ರ ತತ್ರಾಸನ್ ರೈವತೇಂತರೇ||22||
ಬಲಬಂಧುಶ್ಚ ಸಂಭಾವ್ಯಸ್ಸತ್ಯಕಾದ್ಯಾಶ್ಚ ತತ್ಸುತಾ:|
ನರೇಂದ್ರಾಶ್ಚ ಮಹಾವೀರ್ಯಾ ಬಭೂವುರ್ಮುನಿಸತ್ತಮ||23||
ಸ್ವಾರೋಚಿಷಶ್ಚೋತ್ತಮಶ್ಚ ತಾಮಸೋ ರೈವತಸ್ತಥಾ|
ಪ್ರಿಯವ್ರತಾನ್ವಯಾ ಹ್ಯೇತೇ ಚತ್ವಾರೋ ಮನವಸ್ಸ್ಮೃತಾ:||24||
ವಿಷ್ಣುಮಾರಾಧ್ಯ ತಪಸಾ ಸ ರಾಜರ್ಷಿ: ಪ್ರಿಯವ್ರತ:|
ಮನ್ವಂತರಾಧಿಪಾನೇತಾನ್ ಲಬ್ಧವಾನಾತ್ಮ ವಂಶಜಾನ್||25||
ಇನ್ನು ಐದನೆಯ ಮನ್ವಂತರದಲ್ಲಿ ರೈವತ ಎಂಬುವನು ಮನು.
ವಿಭು ಎಂಬುವನು ಇಂದ್ರ.
ಆಗಿನ ದೇವತೆಗಳನ್ನು ಕೇಳು:-
ಆಗ ಅಮಿತಾಭ, ಭೂತರಯ, ವೈಕುಂಠ, ಸುಮೇಧಸ್ - ಎಂಬ ದೇವತಾ ಗಣಗಳಿದ್ದವು.
ಒಂದೊಂದು ಗಣದಲ್ಲಿ ಹದಿನಾಲ್ಕು ಹದಿನಾಲ್ಕು ದೇವತೆಗಳು.
ರೈವತಮನ್ವಂತರದಲ್ಲಿ ಹಿರಣ್ಯರೋಮ, ವೇದಶ್ರೀ, ಊರ್ಧ್ವಬಾಹು, ವೇದಬಾಹು, ಸುಧಾಮ, ಪರ್ಜನ್ಯ, ಮಹಾಮುನಿ - ಎಂಬವರು ಸಪ್ತರ್ಷಿಗಳು.
ಮೈತ್ರೇಯ, ಆಗ ಬಲಬಂಧು, ಸಂಭಾವ್ಯ, ಸತ್ಯಕ - ಮೊದಲಾದ ಬಲಶಾಲಿಗಳಾದ ರಾಜರು ರೈವತಮನುವಿನ ಪುತ್ರರಾಗಿದ್ದರು.
ಸ್ವಾರೋಚಿಷ, ಉತ್ತಮ, ತಾಮಸ, ರೈವತ - ಈ ನಾಲ್ವರು ಪ್ರಿಯವ್ರತನ ವಂಶದಲ್ಲಿ ಹುಟ್ಟಿದ ಮನುಗಳು.
ರಾಜರ್ಷಿಯಾದ ಪ್ರಿಯವ್ರತನು ತಪಸ್ಸಿನಿಂದ ವಿಷ್ಣುವನ್ನು ಆರಾಧಿಸಿ ತನ್ನ ವಂಶದಲ್ಲಿ ಮನ್ವಂತರಾಧಿಪತಿಗಳಾದ ಇವರನ್ನು ಪಡೆದಿದ್ದನು.
********
ಷಷ್ಠೇ ಮನ್ವಂತರೇ ಚಾಸೀಚ್ಚಾಕ್ಷುಷಾಖ್ಯಸ್ತಥಾ ಮನು:|
ಮನೋಜವಸ್ತಥೈವೇಂದ್ರೋ ದೇವಾನಪಿ ನಿಬೋಧ ಮೇ||26||
ಆಪ್ಯಾ: ಪ್ರಸೂತಾ ಭವ್ಯಾಶ್ಚ ಪೃಥುಕಾಶ್ಚ ದಿವೌಕಸ:|
ಮಹಾನುಭಾವಾ ಲೇಖಾಶ್ಚ ಪಂಚೈತೇ ಹ್ಯಷ್ಟಕಾ ಗಣಾ:||27||
ಸುಮೇಧಾ ವಿರಜಾಶ್ಚೈವ ಹವಿಷ್ಮಾನುತ್ತಮೋ ಮಧು:|
ಅತಿನಾಮಾ ಸಹಿಷ್ಣುಶ್ಚ ಸಪ್ತಾಸನ್ನಿತಿ ಚರ್ಷಯ:||28||
ಊರು: ಪೂರುಶ್ಯತದ್ಯುಮ್ನಪ್ರಮುಖಾಸ್ಸುಮಹಾಬಲಾ:|
ಚಾಕ್ಷುಷಸ್ಯ ಮನೋ: ಪುತ್ರಾ: ಪೃಥಿವೀಪತಯೋಭವನ್||29||
ಆರನೆಯ ಮನ್ವಂತರದಲ್ಲಿ ಚಾಕ್ಷುಷನು ಮನುವಾಗಿದ್ದನು.
ಆಗ ಮನೋಜವನು ದೇವೇಂದ್ರ.
ಆಗಿನ ದೇವತೆಗಳನ್ನು ಕೇಳು:-
ಆಪ್ಯ, ಪ್ರಸೂತ, ಭವ್ಯ, ಪೃಥುಕ್, ಲೇಖ ಎಂಬ ಮಹಾನುಭಾವರಾದ ದೇವತೆಗಳು ಇದ್ದರು.
ಆ ಹೆಸರಿನ ಐದು ಗಣಗಳಲ್ಲಿ ಒಂದೊಂದರಲ್ಲಿಯೂ ಎಂಟು ದೇವತೆಗಳು.
ಸುಮೇಧ, ವಿರಜ, ಹವಿಷ್ಮಾನ್, ಉತ್ತಮ, ಮಧು, ಅತಿನಾಮ, ಸಹಿಷ್ಣು - ಎಂಬ ಸಪ್ತರ್ಷಿಗಳಿದ್ದರು.
ಊರು, ಪೂರು, ಶತದ್ಯುಮ್ನ - ಮೊದಲಾದವರು ಚಾಕ್ಷುಷ ಮನುವಿನ ಪುತ್ರರಾಗಿ ಬಲಾಢ್ಯರಾದ ಪೃಥಿವೀಪತಿಗಳಾಗಿದ್ದರು.
********
ವಿವಸ್ವತಸ್ಸುತೋ ವಿಪ್ರ ಶ್ರಾದ್ಧದೇವೋ ಮಹಾದ್ಯುತಿ:|
ಮನುಸ್ಸಂವರ್ತತೇ ಧೀಮಾನ್ ಸಾಂಪ್ರತಂ ಸಪ್ತಮೇಂತರೇ||30||
ಆದಿತ್ಯವಸುರುದ್ರಾದ್ಯಾ ದೇವಶ್ಚಾತ್ರ ಮಹಾಮುನೇ|
ಪುರಂದರಸ್ತಥೈವಾತ್ರ ಮೈತ್ರೇಯ ತ್ರಿದಶೇಶ್ವರ:||31||
ವಸಿಷ್ಠ: ಕಾಶ್ಯಪೋಥಾತ್ರಿರ್ಜಮದಗ್ನಿಸಿಸಗೌತಮ:|
ವಿಶ್ವಾಮಿತ್ರಭರದ್ವಾಜೌ ಸಪ್ತ ಸಪ್ತರ್ಷಯೋಭವನ್||32||
ಇಕ್ಷ್ವಾಕುಶ್ಚ ನೃಗಶ್ಚೈವ ಧೃಷ್ಟ: ಶರ್ಯಾತಿರೇವ ಚ|
ನರಿಷ್ಯಂತಶ್ಚ ವಿಖ್ಯಾತೋ ನಾಭಾಗೋರಿಷ್ಟ ಏವ ಚ||33||
ಕರೂಷಶ್ಚ ಪೃಷಧ್ರಶ್ಚ ಸುಮಹಾನ್ ಲೋಕವಿಶ್ರುತ:|
ಮನೋರ್ವೈವಸ್ವತಸ್ಯೈತೇ ನವಪುತ್ರಾ: ಸುಧಾರ್ಮಿಕಾ:||34||
ವಿಷ್ಣುಶಕ್ತಿರನೌಪಮ್ಯಾ ಸತ್ತ್ವೋದ್ರಿಕ್ತಾ ಸ್ಥಿತೌ ಸ್ಥಿತಾ|
ಮನ್ವಂತರೇಷ್ವಶೇಷೇಷು ದೇವತ್ವೇನಾಧಿತಿಷ್ಠತಿ||35||
ಮೈತ್ರೇಯ, ಪ್ರಕೃತ ನಡೆಯುತ್ತಿರುವ ಮನ್ವಂತರದಲ್ಲಿ ವಿವಸ್ವಂತನ (ಸೂರ್ಯನ) ಪುತ್ರನಾದ ಶಾದ್ಧದೇವನೆಂಬ ತೇಜಸ್ವಿಯಾದ ಧೀಮಂತನು ಮನುವಾಗಿದ್ದಾನೆ.
ಆದಿತ್ಯ, ವಸು, ರುದ್ರ - ಮೊದಲಾದವರು ದೇವತೆಗಳು.
ಈ ಮನ್ವಂತರದಲ್ಲಿ ಪುರಂದರ ಎಂಬವನು ದೇವೇಂದ್ರ.
ವಸಿಷ್ಠ, ಕಾಶ್ಯಪ, ಅತ್ರಿ, ಜಮದಗ್ನಿ, ಗೌತಮ, ವಿಶ್ವಾಮಿತ್ರ, ಭರದ್ವಾಜ ಎಂಬವರು ಸಪ್ತರ್ಷಿಗಳು.
ಈ ವೈವಸ್ವತ ಮನುವಿಗೆ ಇಕ್ಷ್ವಾಕು, ನೃಗ, ಧೃಷ್ಟ, ಶರ್ಯಾತಿ, ನರಿಷ್ಯಂತ, ನಾಭಾಗ, ಅರಿಷ್ಟ, ಕರೂಷ, ಪೃಷಧ್ರ - ಎಂಬ ಲೋಕವಿಖ್ಯಾತರಾದ ಒಂಬತ್ತು ಧಾರ್ಮಿಕರಾದ ಪುತ್ರರು.
ಈ ಸಮಸ್ತ ಮನ್ವಂತರಗಳಲ್ಲಿಯೂ ಸತ್ತ್ವಪ್ರಧಾನವೂ ಅಸದೃಶ್ಯವೂ ಆದ ವಿಷ್ಣು ಶಕ್ತಿಯು ಅಧಿಷ್ಠಾತೃದೇವತೆಯಾಗಿ ಜಗತ್ತಿನ ರಕ್ಷಣೆಗೋಸ್ಕರ ನಿಂತಿರುತ್ತದೆ.
*****
ಅಂಶೇನ ತಸ್ಯಾ ಜಜ್ಞೇಸೌ ಯಜ್ಞಸ್ಯ್ವಾಯಂಭುವೇಂತರೇ|
ಆಕೂಂತ್ಯಾಂ ಮಾನಸೋ ದೇವ ಉತ್ಪನ್ನ: ಪ್ರಥಮೇಂತರೇ||36||
ತತ: ಪುನ: ಸ ವೈ ದೇವ: ಪ್ರಾಪ್ತೇ ಸ್ವಾರೋಚಿಷೇಂತರೇ|
ತುಷಿತಾಯಾಂ ಸಮುತ್ಪನ್ನೋ ಹ್ಯಜಿತಸ್ತುಷಿತೈ: ಸಹ||37||
ಔತ್ತಮೇಪ್ಯಂತರೇ ದೇವಸ್ತುಷಿತಸ್ತು ಪುನಸ್ಸ ವೈ|
ಸತ್ಯಾಯಾಮಭವತ್ಸತ್ಯ: ಸತ್ಯೈಸ್ಸಹ ಸುರೋತ್ತಮೈ:||38||
ತಾಮಸಸ್ಯಾಂತರೇ ಚೈವ ಸಂಪ್ರಾಪ್ತೇ ಪುನರೇವ ಹಿ|
ಹರ್ಯಾಯಾಂ ಹರಿಭಿಸ್ಸಾರ್ಧಂ ಹರಿರೇವ ಬಭೂವ ಹ||39||
ರೈವತೇಪ್ಯಂತರೇ ದೇವಸ್ಸಂಭೂತ್ಯಾಂ ಮಾನಸೋ ಹರಿ:|
ಸಂಭೂತೋ ರೈವತೈಸ್ಸಾರ್ಧಂ ದೇವೈರ್ದೇವವರೋ ಹರಿ:||40||
ಚಾಕ್ಷುಷೇ ಚಾಂತರೇ ದೇವೋ ವೈಕುಂಠ: ಪುರುಷೋತ್ತಮ:|
ವಿಕುಂಠಾಯಾಮಸೌ ಜಜ್ಞೇ ವೈಕುಂಠೈರ್ದೈವತೈ: ಸಹ||41||
ಮೊದಲನೆಯ ಸ್ವಾಯಂಭುವ ಮನ್ವಂತರದಲ್ಲಿ ಯಜ್ಞನೆಂಬ ದೇವನು ಆಕೂತಿಯಲ್ಲಿ ಮಾನಸಪುತ್ರನಾಗಿ ಜನಿಸಿದನು.
ಆಮೇಲೆ ಸ್ವಾರೋಚಿಷ ಮನ್ವಂತರವು ಬಂದಾಗ ಆ ಯಜ್ಞದೇವನೇ ತುಷಿತೆಯಲ್ಲಿ ತುಷಿತದೇವತೆಗಳೊಡನೆ ಅಜಿತ ಎಂಬ ಹೆಸರಿನಿಂದ ಹುಟ್ಟಿದನು.
ಉತ್ತಮ ಮನ್ವಂತರದಲ್ಲಿ ಆ ಅಜಿತನು ಸತ್ಯೆಯಲ್ಲಿ ಸತ್ಯರೆಂಬ ದೇವತೆಗಳೊಡನೆ ಸತ್ಯ ಎಂಬ ಹೆಸರಿನಿಂದ ಉದ್ಭವಿಸಿದನು.
ತಾಮಸ ಮನ್ವಂತರದಲ್ಲಿ ಮತ್ತೆ ಆತನು ಹರ್ಯೆಯಲ್ಲಿ ಹರಿ ಎಂಬ ದೇವತೆಗಳೊಡನೆ ಹರಿಯಾಗಿ ಅವತರಿಸಿದನು.
ಅನಂತರ ರೈವತ ಮನ್ವಂತರದಲ್ಲಿ ಆ ಹರಿಯು ಸಂಭೂತಿಯಲ್ಲಿ ಆ ಕಾಲದ ದೇವತೆಗಳೊಡನೆ ಮಾನಸ ಎಂಬ ಹೆಸರಿನಿಂದ ಅವತರಿಸಿದನು.
ಚಾಕ್ಷುಷ ಮನ್ವಂತರದಲ್ಲಿ ಪುರುಷೋತ್ತಮನಾದ ಹರಿಯು ವಿಕುಂಠೆಯ ಗರ್ಭದಲ್ಲಿ ವೈಕುಂಠ ದೇವತೆಗಳೊಡನೆ ವೈಕುಂಠನೆಂಬ ನಾಮದಿಂದ ಆವಿರ್ಭವಿಸಿದನು.
********
ಮನ್ವಂತರೇತ್ರ ಸಂಪ್ರಾಪ್ತೇ ತಥಾ ವೈವಸ್ವತೇ ದ್ವಿಜ|
ವಾಮನ: ಕಶ್ಯಪಾದ್ವಿಷ್ಣುರದಿತ್ಯಾಂ ಸಂಬಭೂವ ಹ||42||
ತ್ರಿಭಿ: ಕ್ರಮೈರಿಮಾನ್ ಲೋಕಾಂಚಿತ್ವಾ ಯೇನ ಮಹಾತ್ಮನಾ|
ಪುರಂದರಾಯ ತ್ರೈಲೋಕ್ಯಂ ದತ್ತಂ ನಿಹತಕಂಟಕಮ್||43||
ಇತ್ಯೇತಾಸ್ತನವಸ್ತಸ್ಯ ಸಪ್ತಮನ್ವಂತರೇಷು ವೈ|
ಸಪ್ತಸ್ವೇವಾಭವನ್ ವಿಪ್ರ ಯಾಭಿ: ಸಂವರ್ದ್ಧಿತಾ: ಪ್ರಜಾ:||44||
ಯಸ್ಮಾದ್ವಿಷ್ಟಮಿದಂ ವಿಶ್ವಂ ತಸ್ಯ ಶಕ್ತ್ಯಾ ಮಹಾತ್ಮನ:|
ತಸ್ಮಾತ್ಸಾ ಪ್ರೋಚ್ಯತೇ ವಿಷ್ಣುರ್ವಿಶೇರ್ಧಾತೋ: ಪ್ರವೇಶನಾತ್||45||
ಸರ್ವೇ ಚ ದೇವಾ ಮನವಸ್ಸಮಸ್ತಾಸ್ಸಪ್ತರ್ಷಯೋ ಯೇ ಮನುಸೂನವಶ್ಚ|
ಇಂದ್ರಶ್ಚ ಯೋಯಂ ತ್ರಿದಶೇಶಭೂತೋ ವಿಷ್ಣೋರಶೇಷಾಸ್ತು ವಿಭೂತಯಸ್ತಾ:||46||
ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಪ್ರಥಮೋಧ್ಯಾಯ:||
ಮೈತ್ರೇಯ, ಈಗ ನಡೆಯುತ್ತಿರುವ ವೈವಸ್ವತ ಮನ್ವಂತರವು ಪ್ರಾಪ್ತವಾಗಲಾಗಿ ವಿಷ್ಣುವು ಅದಿತಿಯ ಗರ್ಭದಲ್ಲಿ ಕಶ್ಯಪನಿಂದ ವಾಮನ ಎಂಬ ಹೆಸರಿನಿಂದ ಅವತರಿಸಿದನು.
ಈ ಮಹಾತ್ಮನು ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನು ಜಯಿಸಿ ನಿಷ್ಕಂಟಕವಾದ ಲೋಕತ್ರಯವನ್ನು ಪುರಂದರನೆಂಬ ದೇವೇಂದ್ರನಿಗೆ ವಹಿಸಿಕೊಟ್ಟನು.
ಮೈತ್ರೇಯ, ಈ ಪ್ರಕಾರವಾಗಿ ಸಪ್ತಮನ್ವಂತರಗಳಲ್ಲಿ ವಿಷ್ಣುವು ಸಪ್ತ ಶರೀರಗಳನ್ನು ಧರಿಸಿ ಅವತರಿಸಿದ್ದಾನೆ. ಅದರಿಂದ ಪ್ರಜೆಗಳ ಅಭಿವೃದ್ಧಿಯಾಯಿತು.
ಮೈತ್ರೇಯ, 'ವಿಶ್' ಧಾತುವಿಗೆ ಪ್ರವೇಶ ಎಂದು ಅರ್ಥ. ಆ ಮಹಾತ್ಮನ ವೈಷ್ಣವೀ ಶಕ್ತಿಯು ವಿಶ್ವವನ್ನೇ ಪ್ರವೇಶ ಮಾಡಿರುವ ಕಾರಣ 'ವಿಶ್' ಧಾತುವಿನಿಂದಾದ ವಿಷ್ಣು ಎಂಬುದು ಆತನ ಹೆಸರಾಗಿದೆ.
ಸಮಸ್ತ ದೇವತೆಗಳೂ ಮನುಗಳೂ ಸಪ್ತರ್ಷಿಗಳೂ ಮನುಪುತ್ರರೂ ದೇವೇಶ್ವರನಾದ ಇಂದ್ರನೂ - ಎಲ್ಲರೂ ವಿಷ್ಣುವಿನ ವಿಭೂತಿಗಳು.
ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ಒಂದನೆಯ ಅಧ್ಯಾಯ ಮುಗಿಯಿತು.
ಮನ್ವಂತರೇತ್ರ ಸಂಪ್ರಾಪ್ತೇ ತಥಾ ವೈವಸ್ವತೇ ದ್ವಿಜ|
ವಾಮನ: ಕಶ್ಯಪಾದ್ವಿಷ್ಣುರದಿತ್ಯಾಂ ಸಂಬಭೂವ ಹ||42||
ತ್ರಿಭಿ: ಕ್ರಮೈರಿಮಾನ್ ಲೋಕಾಂಚಿತ್ವಾ ಯೇನ ಮಹಾತ್ಮನಾ|
ಪುರಂದರಾಯ ತ್ರೈಲೋಕ್ಯಂ ದತ್ತಂ ನಿಹತಕಂಟಕಮ್||43||
ಇತ್ಯೇತಾಸ್ತನವಸ್ತಸ್ಯ ಸಪ್ತಮನ್ವಂತರೇಷು ವೈ|
ಸಪ್ತಸ್ವೇವಾಭವನ್ ವಿಪ್ರ ಯಾಭಿ: ಸಂವರ್ದ್ಧಿತಾ: ಪ್ರಜಾ:||44||
ಯಸ್ಮಾದ್ವಿಷ್ಟಮಿದಂ ವಿಶ್ವಂ ತಸ್ಯ ಶಕ್ತ್ಯಾ ಮಹಾತ್ಮನ:|
ತಸ್ಮಾತ್ಸಾ ಪ್ರೋಚ್ಯತೇ ವಿಷ್ಣುರ್ವಿಶೇರ್ಧಾತೋ: ಪ್ರವೇಶನಾತ್||45||
ಸರ್ವೇ ಚ ದೇವಾ ಮನವಸ್ಸಮಸ್ತಾಸ್ಸಪ್ತರ್ಷಯೋ ಯೇ ಮನುಸೂನವಶ್ಚ|
ಇಂದ್ರಶ್ಚ ಯೋಯಂ ತ್ರಿದಶೇಶಭೂತೋ ವಿಷ್ಣೋರಶೇಷಾಸ್ತು ವಿಭೂತಯಸ್ತಾ:||46||
ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಪ್ರಥಮೋಧ್ಯಾಯ:||
ಮೈತ್ರೇಯ, ಈಗ ನಡೆಯುತ್ತಿರುವ ವೈವಸ್ವತ ಮನ್ವಂತರವು ಪ್ರಾಪ್ತವಾಗಲಾಗಿ ವಿಷ್ಣುವು ಅದಿತಿಯ ಗರ್ಭದಲ್ಲಿ ಕಶ್ಯಪನಿಂದ ವಾಮನ ಎಂಬ ಹೆಸರಿನಿಂದ ಅವತರಿಸಿದನು.
ಈ ಮಹಾತ್ಮನು ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನು ಜಯಿಸಿ ನಿಷ್ಕಂಟಕವಾದ ಲೋಕತ್ರಯವನ್ನು ಪುರಂದರನೆಂಬ ದೇವೇಂದ್ರನಿಗೆ ವಹಿಸಿಕೊಟ್ಟನು.
ಮೈತ್ರೇಯ, ಈ ಪ್ರಕಾರವಾಗಿ ಸಪ್ತಮನ್ವಂತರಗಳಲ್ಲಿ ವಿಷ್ಣುವು ಸಪ್ತ ಶರೀರಗಳನ್ನು ಧರಿಸಿ ಅವತರಿಸಿದ್ದಾನೆ. ಅದರಿಂದ ಪ್ರಜೆಗಳ ಅಭಿವೃದ್ಧಿಯಾಯಿತು.
ಮೈತ್ರೇಯ, 'ವಿಶ್' ಧಾತುವಿಗೆ ಪ್ರವೇಶ ಎಂದು ಅರ್ಥ. ಆ ಮಹಾತ್ಮನ ವೈಷ್ಣವೀ ಶಕ್ತಿಯು ವಿಶ್ವವನ್ನೇ ಪ್ರವೇಶ ಮಾಡಿರುವ ಕಾರಣ 'ವಿಶ್' ಧಾತುವಿನಿಂದಾದ ವಿಷ್ಣು ಎಂಬುದು ಆತನ ಹೆಸರಾಗಿದೆ.
ಸಮಸ್ತ ದೇವತೆಗಳೂ ಮನುಗಳೂ ಸಪ್ತರ್ಷಿಗಳೂ ಮನುಪುತ್ರರೂ ದೇವೇಶ್ವರನಾದ ಇಂದ್ರನೂ - ಎಲ್ಲರೂ ವಿಷ್ಣುವಿನ ವಿಭೂತಿಗಳು.
ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ಒಂದನೆಯ ಅಧ್ಯಾಯ ಮುಗಿಯಿತು.
******
extract from vishnu purana
ತೃತೀಯಾಂಶ: ದ್ವಿತೀಯೋಧ್ಯಾಯ: 450
ತೃತೀಯಾಂಶ: ದ್ವಿತೀಯೋಧ್ಯಾಯ: 450
ಶ್ರೀಮೈತ್ರೇಯ ಉವಾಚ:
ಪ್ರೋಕ್ತಾನ್ಯೇತಾನಿ ಭವತಾ ಸಪ್ತಮನ್ವಂತರಾಣಿ ವೈ|
ಭವಿಷ್ಯಾಣ್ಯಪಿ ವಿಪ್ರರ್ಷೇ ಮಮಾಖ್ಯಾತುಂ ತ್ವಮರ್ಹಸಿ||1||
ಶ್ರೀಪರಾಶರ ಉವಾಚ:
ಸೂರ್ಯಸ್ಯ ಪತ್ನೀ ಸಂಜ್ಞಾಭೂತ್ತನಯಾ ವಿಶ್ವಕರ್ಮಣ:|
ಮನುರ್ಯಮೋ ಯಮೀ ಚೈವ ತದಪತ್ಯಾನಿ ವೈ ಮುನೇ||2||
ಅಸಹಂತೀ ತು ಸಾ ಭರ್ತುಸ್ತೇಜಶ್ಛಾಯಾಂ ಯುಯೋಜ ವೈ|
ಭರ್ತೃಶುಷ್ರೂಣೇರಣ್ಯಂ ಸ್ವಯಂ ಚ ತಪಸೇ ಯಯೌ||3||
ಸಂಜ್ಞೇಯಮಿತ್ಯಥಾರ್ಕಶ್ಚ ಛಾಯಾಯಾಮಾತ್ಮಜತ್ರಯಮ್|
ಶನೈಶ್ವರಂ ಮನುಂ ಚಾನ್ಯಂ ತಪತೀಂ ಚಾಪ್ಯಜೀಜನತ್||4||
ಛಾಯಾಸಂಜ್ಞಾ ದದೌ ಶಾಪಂ ಯಮಾಯ ಕುಪಿತಾ ಯದಾ|
ತದಾನ್ಯೇಯಮಸೌ ಬುದ್ಧಿರಿತ್ಯಾಸೀದ್ಯಮಸೂರ್ಯಯೋ:||5||
ತತೋ ವಿವಸ್ವಾನಾಖ್ಯಾತೇ ತಯೈವಾರಣ್ಯಸಂಸ್ಥಿತಾಮ್|
ಸಮಾಧಿದೃಷ್ಟ್ಯಾ ದದೃಶೇ ತಾಮಶ್ವಾಂ ತಪಸಿ ಸ್ಥಿತಾಮ್||6||
ಮೈತ್ರೇಯರು, "ಬ್ರಹ್ಮರ್ಷಿಗಳೇ, ಹೀಗೆ ಏಳು ಮನ್ವಂತರಗಳ ವಿಚಾರವನ್ನು ಹೇಳಿದಿರಿ. ಮುಂದೆ ಬರಲಿರುವ ಏಳು ಮನ್ವಂತರಗಳ ವಿಷಯವನ್ನೂ ಹೇಳಿರಿ" ಎಂದು ಕೇಳಿದರು.
ಪರಾಶರರು ಹೇಳಿದರು:
ವಿಶ್ವಕರ್ಮನ ಮಗಳಾದ ಸಂಜ್ಞೇಯು ಸೂರ್ಯನ ಪತ್ನಿ. ಅವಳಿಗೆ ಮನು (ಈತನೇ ಶ್ರಾದ್ಧದೇವನೆಂಬ ವೈವಸ್ವತಮನು), ಯಮ, ಯಮಿ ಎಂಬ ಮೂವರು ಮಕ್ಕಳು ಹುಟ್ಟಿದರು.
ಸಂಜ್ಞೆಯು ತನ್ನ ಪತಿಯಾದ ಸೂರ್ಯನ ತೇಜಸ್ಸನ್ನು ತಡೆದುಕೊಳ್ಳಲಾರದೆ ಛಾಯೆಯನ್ನು ಪತಿಯ ಸೇವೆಗೆ ನಿಯಮಿಸಿ, ತಪಸ್ಸಿಗಾಗಿ ಅರಣ್ಯಕ್ಕೆ ಹೊರಟುಹೋದಳು.
ಸೂರ್ಯನು ಛಾಯೆಯನ್ನೇ (ಒಂದೇ ರೂಪವಿದ್ದುದರಿಂದ) ಸಂಜ್ಞೆಯೆಂದು ತಿಳಿದು, ಅವಳಲ್ಲಿ ಶನೈಶ್ವರ, ಇನ್ನೊಬ್ಬ ಮನು ಮತ್ತು ತಪತೀ ಎಂಬ ಕನ್ಯೆ - ಇವರನ್ನು ಮಕ್ಕಳಾಗಿ ಪಡೆದನು.
ಒಂದು ಸಲ ಸಂಜ್ಞಾರೂಪದಲ್ಲಿದ್ದ ಛಾಯೆಯು ಕುಪಿತಳಾಗಿ ಯಮನನ್ನು ಶಪಿಸಿದಳು. ಆಗ ಯಮನಿಗೂ ಸೂರ್ಯನಿಗೂ ಅವಳು ಸಂಜ್ಞೆಯಲ್ಲವೆಂದೂ ಬೇರೊಬ್ಬಳೆಂದೂ ಗೊತ್ತಾಯಿತು.
ಆಗ ಸಂಜ್ಞೆಯು ಅರಣ್ಯಕ್ಕೆ ಹೋಗಿದ್ದಾಳೆಂದು ಛಾಯೆಯೇ ಸೂರ್ಯನಿಗೆ ತಿಳಿಸಲಾಗಿ ಸೂರ್ಯನು ಸಮಾಧಿದೃಷ್ಟಿಯಿಂದ ನೋಡಿ ಸಂಜ್ಞೆಯು ಹೆಣ್ಣುಕುದುರೆಯ ರೂಪದಲ್ಲಿ ತಪೋನಿರತಳಾಗಿದ್ದಾಳೆಂದು ತಿಳಿದುಕೊಂಡನು.
********
ವಾಜಿರೂಪಧರ: ಸೋಥ ತಸ್ಯಾಂ ದೇವಾವಥಾಶ್ವಿನೌ|
ಜನಯಾಮಾಸ ರೇವಂತಂ ರೇತಸೋಂತೇ ಚ ಭಾಸ್ಕರ:||7||
ಆನಿನ್ಯೇ ಚ ಪುನ: ಸಂಜ್ಞಾಂ ಸ್ವಸ್ಥಾನಂ ಭಗವಾನ್ ರವಿ:|
ತೇಜಸಶ್ಯಮನಂ ಚಾಸ್ಯ ವಿಶ್ವಕರ್ಮಾ ಚಕಾರ ಹ||8||
ಭ್ರಮಮಾರೋಪ್ಯ ಸೂರ್ಯಂ ತು ತಸ್ಯ ತೇಜೋನಿಶಾತನಮ್|
ಕೃತವಾನಷ್ಟಮಂ ಭಾಗಂ ಸ ವ್ಯಶಾತಯದವ್ಯಯಮ್||9||
ಯತ್ರಸ್ಮಾದ್ವೈಷ್ಣವಂ ತೇಜಶ್ಯಾತಿತಂ ವಿಶ್ವಕರ್ಮಣಾ|
ಜಾಜ್ವಲ್ಯಮಾನಮಪತತ್ ತದ್ಭೂಮೌ ಮುನಿಸತ್ತಮ||10||
ತ್ವಷ್ಣೈವ ತೇಜಸಾ ತೇನ ವಿಷ್ಣೋಶ್ಚಕ್ರಮಕಲ್ಪಯತ್|
ತ್ರಿಶೂಲಂ ಚೈವ ಶರ್ವಸ್ಯ ಶಿಬಿಕಾಂ ಧನದಸ್ಯ ಚ||11||
ಶಕ್ತಿಂ ಗುಹಸ್ಯ ದೇವಾನಾಮನ್ಯೇಷಾಂ ಚ ಯದಾಯುಧಮ್|
ತತ್ಸರ್ವಂ ತೇಜಸಾ ತೇನ ವಿಶ್ವಕರ್ಮಾ ವ್ಯವರ್ಧಯತ್||12||
ಭಾಸ್ಕರನು ಸ್ವಯಂ ಗಂಡುಕುದುರೆಯ ರೂಪವನ್ನು ಧರಿಸಿ ಸಂಜ್ಞೆಯನ್ನು ಭೋಗಿಸಿ ಇಬ್ಬರು ಅಶ್ವಿನೀದೇವತೆಗಳನ್ನೂ ರೇವಂತನೆಂಬ ಇನ್ನೊಬ್ಬ ಪುತ್ರನನ್ನೂ ಪಡೆದನು.
ಅನಂತರ ಭಗವಾನ್ ಭಾಸ್ಕರನು ಸಂಜ್ಞೆಯನ್ನು ಪುನ: ತನ್ನ ಬಳಿಗೆ ಕರೆತಂದನು. ಆ ಮೇಲೆ ವಿಶ್ವಕರ್ಮನು ಸೂರ್ಯನ ತೇಜಸ್ಸನ್ನು ಕಡಿಮೆ ಮಾಡಿದನು.
ಆತನು ಸೂರ್ಯನನ್ನು ಸಾಣೆಯ ಕಲ್ಲಿನ ಯಂತ್ರದ ಮೇಲಿಟ್ಟು ಸವೆಸಿ, ಅಕ್ಷುಣ್ಣವಾದ ಆತನ ತೇಜಸ್ಸಿನಲ್ಲಿ ಎಂಟನೆಯ ಒಂದು ಭಾಗವನ್ನು ಮಾತ್ರ ಶಮನ ಮಾಡಿದನು.
ವಿಶ್ವಕರ್ಮನು ಸೂರ್ಯನ ವೈಷ್ಣವ ತೇಜಸ್ಸಿನ ಒಂದಂಶವನ್ನು ಹೀಗೆ ಕತ್ತರಿಸಲು, ಅದು ಜಾಜ್ವಲ್ಯಮಾನವಾಗಿ ಬೆಳಗುತ್ತ ಭೂಮಿಯ ಮೇಲೆ ಬಿದ್ದಿತು.
ವಿಶ್ವಕರ್ಮನು ಆ ತೇಜೋಂಶದಿಂದ ವಿಷ್ಣುವಿಗೆ ಸುದರ್ಶನ ಚಕ್ರವನ್ನೂ ಶಿವನಿಗೆ ತ್ರಿಶೂಲವನ್ನೂ ಷಣ್ಮುಖನಿಗೆ ಶಕ್ತ್ಯಾಯುಧವನ್ನೂ ಹಾಗೆಯೇ ಇತರ ದೇವತೆಗಳಿಗೆ ಬೇರೆ ಬೇರೆ ಆಯುಧಗಳನ್ನೂ ನಿರ್ಮಿಸಿಕೊಟ್ಟನು.
*******
ಛಾಯಾಸಂಜ್ಞಾಸುತೋ ಯೋಸೌ ದ್ವಿತೀಯ: ಕಥಿತೋ ಮನು:|
ಪೂರ್ವಜಸ್ಯ ಸುವರ್ಣೋಸೌ ಸಾವರ್ಣಿಸ್ತೇನ ಕಥ್ಯತೇ||13||
ತಸ್ಯ ಮನ್ವಂತರಂ ಹ್ಯೇತತ್ಸಾವರ್ಣೀಕಮಥಾಷ್ಟಮಮ್|
ತಚ್ಛೃಣುಷ್ವ ಮಹಾಭಾಗ ಭವಿಷ್ಯತ್ಕಥಯಾಮಿ ತೇ||14||
ಸಾವರ್ಣಿಸ್ತು ಮನುರ್ಯೋಸೌ ಮೈತ್ರೇಯ ಭವಿತಾ ತತ:|
ಸುತಪಾಶ್ಚಾಮಿತಾಭಾಶ್ಚ ಮುಖ್ಯಾಶ್ಚಾಪಿ ತಥಾ ಸುರಾ:||15||
ತೇಷಾಂ ಗಣಶ್ಚ ದೇವಾನಾಮೇಕೈಕೋ ವಿಂಶಕ: ಸ್ಮೃತ:|
ಸಪ್ತರ್ಷೀನಪಿ ವಕ್ಷ್ಯಾಮಿ ಭವಿಷ್ಯಾನ್ಮುನಿಸತ್ತಮ||16||
ದೀಪ್ತಮಾನ್ ಗಾಲವೋ ರಾಮ: ಕೃಪೋ ದ್ರೌಣಿಸ್ತಥಾ ಪರ:|
ಮತ್ಪುತ್ರಶ್ಚ ತಥಾ ವ್ಯಾಸ ಋಷ್ಯಶೃಂಗಶ್ಚ ಸಪ್ತಮ:||17||
ವಿಷ್ಣುಪ್ರಸಾದಾದನಘ: ಪಾತಾಲಾಂತರಗೋಚರ:|
ವಿರೋಚನಸುತಸ್ತೇಷಾಂ ಬಲಿರಿಂದ್ರೋ ಭವಿಷ್ಯತಿ||18||
ವಿರಜಾಶ್ಚೋರ್ವರೀವಾಂಶ್ಚ ನಿರ್ಮೋಕಾದ್ಯಾಸ್ತಥಾಪರೇ|
ಸಾವರ್ಣೇಸ್ತು ಮನೋ: ಪುತ್ರಾ ಭವಿಷ್ಯಂತಿ ನರೇಶ್ವರಾ:||19||
ಮೈತ್ರೇಯ, ಸಂಜ್ಞೆಯಂತೆಯೇ ಇದ್ದ ಛಾಯೆಗೆ ಇನ್ನೊಬ್ಬ 'ಮನು' ಪುತ್ರನಾಗಿ ಜನಿಸಿದನೆಂದು ಹೇಳಿದೆನಷ್ಟೆ. ಆತನು ತನ್ನ ಅಗ್ರಜನಾದ ಮನುವಿಗೆ ಸವರ್ಣ (ಸಮಾನರೂಪ) ನಾದ್ದರಿಂದ ಸಾವರ್ಣಿ ಎಂದು ಹೆಸರಾಯಿತು.
ಆತನ ಅಧಿಪತ್ಯಕ್ಕೆ ಒಳಪಟ್ಟ ಎಂಟನೆಯ ಮನ್ವಂತರವು ಸಾವರ್ಣಿ ಎನಿಸಿಕೊಂಡಿದೆ. ಮುಂದೆ ನಡೆಯಲಿರುವ ಈ ಸಾವರ್ಣಿ ಮನ್ವಂತರದ ವಿಷಯವನ್ನು ನಿನಗೆ ಹೇಳುತ್ತೇನೆ, ಕೇಳು.
ಮೈತ್ರೇಯ, ಈ ಸಾವರ್ಣಿಯು ಆ ಸಮಯದಲ್ಲಿ ಮನುವಾಗುವನು.
ಸುತಪ, ಅಮಿತಾಭ, ಮುಖ್ಯ - ಎಂಬ ದೇವತಾಗಣಗಳು ದೇವತೆಗಳಾಗುತ್ತಾರೆ.
ಒಂದೊಂದು ದೇವತಾಗಣವು ಇಪ್ಪತ್ತು ದೇವತೆಗಳಿಂದ ಯುಕ್ತವಾದುದು.
ಮುಂದೆ ಬರುವ ಸಪ್ತರ್ಷಿಗಳನ್ನೂ ಹೇಳುವೆನು.
ದೀಪ್ತಿಮಾನ, ಗಾಲವ, ರಾಮ (ಜಮದಗ್ನ್ಯ), ಕೃಪ, ದ್ರೋಣಪುತ್ರನಾದ ಅಶ್ವತ್ಥಾಮ, ನನ್ನ ಪುತ್ರನಾದ ವ್ಯಾಸ, ಋಷ್ಯಶೃಂಗ - ಇವರು ಸಪ್ತರ್ಷಿಗಳೆನಿಸುವರು.
ಪಾತಾಳಲೋಕವಾಸಿಯೂ ವಿರೋಚನಪುತ್ರನೂ ಆದ ಬಲಿಚಕ್ರವರ್ತಿಯು ವಿಷ್ಣುಪ್ರಸಾದದಿಂದ ಆ ಮನ್ವಂತರದಲ್ಲಿ ದೇವೇಂದ್ರನಾಗುವನು.
ವಿರಜ, ಉರ್ವರೀವಾನ್, ನಿರ್ಮೋಕ - ಮೊದಲಾದ ಮನುಪುತ್ರರು ರಾಜರಾಗುವರು.
********
ನವಮೋ ದಕ್ಷಸಾವರ್ಣಿರ್ಭವಿಷ್ಯತಿ ಮುನೇ ಮನು:|
ಪಾರಾ ಮರೀಚಿಗರ್ಭಶ್ಚ ಸುಧರ್ಮಾಣಸ್ತಥಾ ತ್ರಿಧಾ||20||
ಭವಿಷ್ಯಂತಿ ತಥಾ ದೇವಾ ಹ್ಯೇಕೈಕೋ ದ್ವಾದಶೋ ಗಣ:|
ತೇಷಾಮಿಂದ್ರೋ ಮಹಾವೀರ್ಯೋ ಭವಿಷ್ಯತ್ಯದ್ಭುತೋ ದ್ವಿಜ||21||
ಸವನೋ ದ್ಯುತಿಮಾನ್ ಭವ್ಯೋ ವಸುರ್ಮೇಧಾತಿಥಿಸ್ತಥಾ|
ಜ್ಯೋತಿಷ್ಮಾನ್ ಸಪ್ತಮ: ಸತ್ಯಸ್ತತ್ರೈತೇ ಚ ಮಹರ್ಷಯ:||22||
ಧೃತಕೇತುರ್ದೀಪ್ತಿಕೇತು: ಪಂಚಹಸ್ತನಿರಾಮಯೌ|
ಪೃಥುಶ್ರವಾದ್ಯಾಶ್ಚ ತಥಾ ದಕ್ಷಸಾವರ್ಣಿಕಾತ್ಮಜಾ:||23||
ದಕ್ಷಸಾವರ್ಣಿಯು ಒಂಬತ್ತನೆಯ ಮನುವಾಗುವನು.
ಪಾರಾ, ಮರೀಚಿಗರ್ಭ, ಸುಧರ್ಮ - ಎಂಬ ಹನ್ನೆರಡು ಹನ್ನೆರಡು ದೇವತೆಗಳುಳ್ಳ ಮೂರು ದೇವಗಣಗಳು ಆ ಕಾಲದ ದೇವತೆಗಳು.
ಮಹಾವೀರನಾದ ಅದ್ಭುತ ಎಂಬುವನು ಇಂದ್ರನಾಗುವನು.
ಸವನ, ದ್ಯುತಿಮಾನ್, ಭವ್ಯ, ವಸು, ಮೇಥಾತಿಥಿ, ಜ್ಯೋತಿಷ್ಮಾನ್, ಸತ್ಯ - ಎಂಬುವರು ಆ ಕಾಲದ ಸಪ್ತರ್ಷಿಗಳು.
ಧೃತಕೇತು, ದೀಪ್ತಿಕೇತು, ಪಂಚಹಸ್ತ, ನಿರಾಮಯ, ಪೃಥುಶ್ರವ ಮೊದಲಾದವರು ದಕ್ಷಸಾವರ್ಣಿಯ ಪುತ್ರರು. ಅವರು ನರಪತಿಗಳಾಗುವರು.
********
ದಶಮೋ ಬ್ರಹ್ಮಸಾವರ್ಣಿರ್ಭವಿಷ್ಯತಿ ಮುನೇ ಮನು:|
ಸುಧಾಮಾನೋ ವಿಶುದ್ಧಾಶ್ಚ ಶತಸಂಖ್ಯಾಸ್ತಥಾ ಸುರಾ:||24||
ತೇಷಾಮಿಂದ್ರಶ್ಚ ಭವಿತಾ ಶಾಂತಿರ್ನಾಮ ಮಹಾಬಲ:|
ಸಪ್ತರ್ಷಯೋ ಭವಿಷ್ಯಂತಿ ಯೇ ತಥಾ ತಾನ್ ಶೃಣುಷ್ವ ಹ||25||
ಹವಿಷ್ಮಾನ್ ಸುಕೃತಸ್ಸತ್ಯಸ್ತಪೋಮೂರ್ತಿಸ್ತಥಾ ಪರ:|
ನಾಭಾಗೋಪ್ರತಿಮೌಜಾಶ್ಚ ಸತ್ಯಕೇತುಸ್ತಥೈವ ಚ||26||
ಸುಕ್ಷೇತ್ರಶ್ಚೋತ್ತಮೌಜಾಶ್ಚ ಭೂರಿಷೇಣಾದಯೋ ದಶ|
ಬ್ರಹ್ಮಸಾವರ್ಣಿಪುತ್ರಾಸ್ತು ರಕ್ಷಿಷ್ಯಂತಿ ವಸುಂಧರಾಮ್||27||
ಮೈತ್ರೇಯ, ಬ್ರಹ್ಮಸಾವರ್ಣಿಯು ಹತ್ತನೆಯ ಮನು.
ಸುಧಾಮ, ವಿಶುದ್ಧ ಎಂಬ ನೂರು ನೂರು ಸಂಖ್ಯೆಯುಳ್ಳ ದೇವಗಣಗಳು ಆ ಕಾಲದ ದೇವತೆಗಳು.
ಶಾಂತಿ ಎಂಬ ಬಲಾಢ್ಯನು ದೇವೇಂದ್ರನಾಗುವನು.
ಇನ್ನು ಯಾರು ಸಪ್ತರ್ಷಿಗಳಾಗುವರು ಎಂಬುದನ್ನು ಹೇಳುತ್ತೇನೆ, ಕೇಳು.
ಹವಿಷ್ಮಾನ್, ಸುಕೃತ, ಸತ್ಯ, ತಪೋಮೂರ್ತಿ, ನಾಭಾಗ, ಅಪ್ರತಿಮೌಜ, ಸತ್ಯಕೇತು - ಎಂಬವರು ಸಪ್ತರ್ಷಿಗಳು.
ಸುಕ್ಷೇತ್ರ, ಉತ್ತಮೌಜ, ಭೂರಿಷೇಣ - ಮೊದಲಾದ ಹತ್ತು ಮಂದಿ ಬ್ರಹ್ಮಸಾವರ್ಣಿಪುತ್ರರು ರಾಜರಾಗಿ ಭೂಮಿಯನ್ನು ಪಾಲಿಸುವರು.
********
ಏಕಾದಶಶ್ಚ ಭವಿತಾ ಧರ್ಮಸಾವರ್ಣಿಕೋ ಮನು:|
ವಿಹಂಗಮಾ ಕಾಮಗಮಾ ನಿರ್ವಾಣರತಯಸ್ತಥಾ||28||
ಗಣಾಸ್ತ್ವೇತೇ ತದಾ ಮುಖ್ಯಾ ದೇವಾನಾಂ ಚ ಭವಿಷ್ಯತಾಮ್|
ಏಕೈಕಸ್ತ್ರಿಂಶಕಸ್ತೇಷಾಂ ಗಣಶ್ಚೇಂದ್ರಶ್ಚ ವೈ ವೃಷ:||29||
ನಿ:ಸ್ವರಶ್ಚಾಗ್ನಿ ತೇಜಾಶ್ಚ ವಪುಷ್ಮಾನ್ ಘೃಣಿರಾರುಣಿ:|
ಹವಿಷ್ಮಾನನಘಶ್ಚೈವ ಭಾವ್ಯಾ: ಸಪ್ತರ್ಷಯಸ್ತಥಾ||30||
ಸರ್ವತ್ರಗಸ್ಸುಧರ್ಮಾ ಚ ದೇವಾನೀಕಾದಯಸ್ತಥಾ|
ಭವಿಷ್ಯಂತಿ ಮನೋಸ್ತಸ್ಯ ತನಯಾ: ಪೃಥಿವೀಶ್ವರಾ:||31||
ಹನ್ನೊಂದನೆಯ ಮನು ಧರ್ಮಸಾವರ್ಣಿ.
ದೇವತೆಗಳಲ್ಲಿ ವಿಹಂಗಮ, ಕಾಮಗಮ, ನಿರ್ವಾಣರತಿ - ಎಂಬ ಮುಖ್ಯವಾದ ದೇವಗಣಗಳು ಇರುತ್ತವೆ.
ಒಂದೊಂದು ಗಣದಲ್ಲಿ ಮೂವತ್ತು ದೇವತೆಗಳು.
ವೃಷ ಎಂಬವನು ಆಗ ದೇವೇಂದ್ರನಾಗುವನು.
ನಿ:ಸ್ವರ, ಅಗ್ನಿತೇಜ, ವಪುಷ್ಮಾನ್, ಘೃಣಿ, ಆರುಣಿ, ಹವಿಷ್ಮಾನ್, ಅನಘ - ಎಂಬವರು ಆ ಸಮಯದಲ್ಲಿ ಆಗುವ ಸಪ್ತರ್ಷಿಗಳು.
ಸರ್ವತ್ರಗ, ಸುಧರ್ಮ, ದೇವಾನೀಕ - ಮೊದಲಾದ ಮನುಪುತ್ರರು ಆಗಿನ ಭೂಪಾಲರು.
********
ರುದ್ರಪುತ್ರಸ್ತು ಸಾವರ್ಣಿರ್ಭವಿತಾ ದ್ವಾದಶೋ ಮನು:|
ಋತುಧಾಮಾ ಚ ತತ್ತೇಂದ್ರೋ ಭವಿತಾ ಶೃಣು ಮೇ ಸುರಾನ್||32||
ಹರಿತಾ ರೋಹಿತಾ ದೇವಾಸ್ತಥಾ ಸುಮನಸೋ ದ್ವಿಜ|
ಸುಕರ್ಮಾಣ: ಸುರಾಪಾಶ್ಚ ದಶಕಾ: ಪಂಚ ವೈ ಗಣಾ:||33||
ತಪಸ್ವೀ ಸುತಪಾಶ್ಚೈವ ತಪೋಮೂರ್ತಿಸ್ತಪೋರತಿ:|
ತಪೋಧೃತಿರ್ದ್ಯುತಿಶ್ಚಾನ್ಯ: ಸಪ್ತಮಸ್ತು ತಪೋಧನ:||34||
ಸಪ್ತರ್ಷಯಸ್ತ್ವಿಮೇ ತಸ್ಯ ಪುತ್ರಾನಪಿ ನಿಬೋಧ ಮೇ|
ದೇವವಾನುಪದೇವಶ್ಚ ದೇವಶ್ರೇಷ್ಠಾದಯಸ್ತಥಾ||35||
ಮನೋಸ್ತಸ್ಯ ಮಹಾವೀರ್ಯಾ ಭವಿಷ್ಯಂತಿ ಮಹಾನೃಪಾ:|
ತ್ರಯೋದಶೋ ರುಚಿರ್ನಾಮಾ ಭವಿಷ್ಯತಿ ಮುನೇ ಮನು:||36||
ರುದ್ರಪುತ್ರನಾದ ಸಾವರ್ಣಿಯು ಹನ್ನೆರಡನೆಯ ಮನುವಾಗುವನು. ಋತುಧಾಮ ಎಂಬವನು ಆ ಕಾಲದ ದೇವೇಂದ್ರನಾಗುವನು.
ಇನ್ನು ದೇವತೆಗಳನ್ನು ಕೇಳು:
ಆಗ ಹತ್ತು ಹತ್ತು ದೇವತೆಗಳುಳ್ಳ ಹರಿತ, ರೋಹಿತ, ಸುಮನ, ಸುಕರ್ಮ, ಸುರಾಪ - ಎಂಬ ಐದು ದೇವಗಣಗಳು ಇರುತ್ತವೆ.
ತಪಸ್ವಿ, ಸುತಪ, ತಪೋಮೂರ್ತಿ, ತಪೋರತಿ, ತಪೋಧೃತಿ, ದ್ಯುತಿ, ತಪೋಧನ - ಎಂಬವರು ಆಗ ಸಪ್ತರ್ಷಿಗಳು.
ರುದ್ರಸಾವರ್ಣಿಯ ಪುತ್ರರ ಹೆಸರನ್ನು ಕೇಳು:
ದೇವವಾನ್, ಉಪದೇವ, ದೇವಶ್ರೇಷ್ಠ - ಮೊದಲಾದವರು ಮನುಪುತ್ರರಾಗಿ ರಾಜರಾಗುವರು.
ಅನಂತರ ರುಚಿ ಎಂಬುವನು ಹದಿಮೂರನೆಯ ಮನುವಾಗುವನು.
********
ಸುತ್ರಾಮಾಣ: ಸುಕರ್ಮಾಣ: ಸುಧರ್ಮಾಣಸ್ತಥಾಮರಾ:|
ತ್ರಯಸ್ತ್ರಿಂಶದ್ವಿಭೇದಾಸ್ತೇ ದೇವಾನಾಂ ಯತ್ರ ವೈ ಗಣಾ:||37||
ದಿವಸ್ಪತಿರ್ಮಹಾವೀರ್ಯಸ್ತೇಷಾಮಿಂದ್ರೋ ಭವಿಷ್ಯತಿ|
ನಿರ್ಮೋಹಸ್ತತ್ತ್ವದರ್ಶೀ ಚ ನಿಷ್ಪ್ರಕಂಪ್ಯೋ ನಿರುತ್ಸಕ:||38||
ಧತಿಮಾನವ್ಯಯಶ್ಚಾನ್ಯಸ್ಸಪ್ತಮಸ್ಸುತಪಾ ಮುನಿ:|
ಸಪ್ತರ್ಷಯಸ್ತ್ವಮೀ ತಸ್ಯ ಪುತ್ರಾನಪಿ ನಿಬೋಧ ಮೇ||39||
ಚಿತ್ರಸೇನವಿಚಿತ್ರಾದ್ಯಾ ಭವಿಷ್ಯಂತಿ ಮಹೀಕ್ಷಿತ:|
ಭೌಮಶ್ಚತುರ್ದಶಶ್ಚಾತ್ರ ಮೈತ್ರೇಯ ಭವಿತಾ ಮನು:||40||
ಶುಚಿರಿಂದ್ರಸ್ಸುರಗಣಾಸ್ತತ್ರ ಪಂಚ ಶೃಣುಷ್ವ ತಾನ್|
ಚಾಕ್ಷುಷಾಶ್ಚ ಪವಿತ್ರಾಶ್ಚ ಕನಿಷ್ಠಾ ಭ್ರಾಜಿಕಾಸ್ತಥಾ||41||
ವಾಚಾವೃದ್ಧಾಶ್ಚ ವೈ ದೇವಾಸ್ಸಪ್ತರ್ಷೀನಪಿ ಮೇ ಶೃಣು|
ಅಗ್ನಿಬಾಹು: ಶುಚಿ: ಶುಕ್ರೋ ಮಾಗಧೋಗ್ನಿಧ್ರ ಏವ ಚ||42||
ಯುಕ್ತಸ್ತಥಾ ಜಿತಶ್ಚಾನ್ಯೋ ಮನುಪುತ್ರಾನತ: ಶೃಣು|
ಊರುಗಂಭೀರಬುದ್ಧ್ಯಾದ್ಯಾ ಮನೋಸ್ತಸ್ಯ ಸುತಾ ನೃಪಾ:||43||
ಕಥಿತಾ ಮುನಿಶಾರ್ದೂಲ ಪಾಲಯಿಷ್ಯಂತಿ ಯೇ ಮಹಿಮ್||44||
ರುಚಿ ಎಂಬುವನು ಹದಿಮೂರನೆಯ ಮನುವಾದಾಗ:
ಸುತ್ರಾಮ, ಸುಕರ್ಮ, ಸುಧರ್ಮ - ಎಂಬ ದೇವಗಣಗಳಿರುತ್ತವೆ. ಒಂದೊಂದು ಗಣದಲ್ಲಿ ಮುವತ್ತಮೂರು ದೇವತೆಗಳು.
ಮಹಾವೀರನಾದ ದಿವಸ್ಪತಿಯು ಆಗ ದೇವೇಂದ್ರನಾಗುವನು.
ನಿರ್ಮೋಹ, ತತ್ತ್ವದರ್ಶಿ, ನಿಷ್ಟ್ರಕಂಪ್ಯ, ನಿರುತ್ಸಕ, ಧೃತಿಮಾನ್, ಅವ್ಯಯ, ಸುತಪ - ಎಂಬುವರು ಸಪ್ತರ್ಷಿಗಳಾಗುವರು.
ರುಚಿಮನುವಿನ ಪುತ್ರರು ಯಾರೆಂಬುದನ್ನು ಕೇಳು:
ಚಿತ್ರಸೇನ, ವಿಚಿತ್ರ - ಮೊದಲಾದವರು ಆತನ ಪುತ್ರರು
ಅವರು ಮಹೀಪತಿಗಳಾಗುವರು.
ಮೈತ್ರೇಯ, ಭೌಮನು ಹದಿನಾಲ್ಕನೆಯ ಮನುವಾಗುವನು.
ಶುಚಿ ಎಂಬುವನು ದೇವೇಂದ್ರ.
ಆಗ ಐದು ದೇವಗಣಗಳಿರುತ್ತವೆ.
ಚಾಕ್ಷುಷ, ಪವಿತ್ರ, ಕನಿಷ್ಠ, ಭ್ರಾಜಿಕ, ವಾಚಾವೃದ್ಧ, - ಎಂದು ಆ ದೇವಗಣಗಳ ಹೆಸರುಗಳು.
ಸಪ್ತರ್ಷಿಗಳು ಯಾರೆಂದರೆ:-
ಅಗ್ನಿಬಾಹು, ಶುಚಿ, ಶುಕ್ರ, ಮಾಗಧ, ಅಗ್ನಿಧ್ರ, ಯುಕ್ತ, ಜಿತ - ಎಂಬುವರು.
ಊರು, ಗಂಭೀರ, ಬುದ್ಧಿ - ಮುಂತಾದ ಮನುಪುತ್ರರು ಆಗ ಭೂಮಿಯನ್ನು ಪಾಲಿಸುವರು.
********
ಚತುರ್ಯುಗಾಂತೇ ವೇದಾನಾಂ ಜಾಯತೇ ಕಿಲ ವಿಪ್ಲವ:|
ಪ್ರವರ್ತಯಂತಿ ತಾನೇತ್ಯ ಭುವಂ ಸಪ್ತರ್ಷಯೋ ದಿವ:||45||
ಕೃತೇ ಕೃತೇ ಸ್ಮೃತೇರ್ವಿಪ್ರ ಪ್ರಣೇತಾ ಜಾಯತೇ ಮನು:|
ದೇವ ಯಜ್ಞಭುಜಸ್ತೇ ತು ಯಾವನ್ಮನ್ವಂತರಂ ತು ತತ್||46||
ಭವಂತಿ ಯೇ ಮನೋ: ಪುತ್ರಾ ಯಾವನ್ಮನ್ವಂತರಂ ತು ತೈ:|
ತದನ್ವಯೋದ್ಭವೈಶ್ಚೈವ ತಾವದ್ಭೂ: ಪರಿಪಾಲ್ಯತೇ||47||
ಮನುಸ್ಸಪ್ತರ್ಷಯೋ ದೇವಾ ಭೂಪಾಲಾಶ್ಚ ಮನೋ: ಸುತಾ:|
ಮನ್ವಂತರೇ ಭವಂತ್ಯೇತೇ ಶಕ್ರಶ್ಚೈವಾಧಿಕಾರಿಣ:||48||
ಮೈತ್ರೇಯ, ಪ್ರತಿಯೊಂದು ಚತುರ್ಯುಗದ ಕೊನೆಯಲ್ಲಿ ವೇದಗಳಿಗೆ ಲೋಪವಾಗುತ್ತದೆ. ಆಗ ಸಪ್ತರ್ಷಿಗಳು ದೇವಲೋಕದಿಂದ ಭೂಲೋಕಕ್ಕೆ ಬಂದು ವೇದಗಳನ್ನು ಪ್ರವರ್ತಿಸುವರು.
ಪ್ರತಿಯೊಂದು ಕೃತಯುಗದಲ್ಲಿಯೂ ಧರ್ಮಶಾಸ್ತ್ರವನ್ನು ರಚಿಸತಕ್ಕ ಮನುವಿನ ಪ್ರಾದುರ್ಭಾವವಾಗುತ್ತದೆ. ಒಂದು ಮನ್ವಂತರವು ಕಳೆಯುವವರೆಗೂ ಆಯಾ ದೇವತೆಗಳು ಯಜ್ಞದ ಹವಿರ್ಭಾಗವನ್ನು ಭುಂಜಿಸುತ್ತಾರೆ.
ಇನ್ನು ಮನುಪುತ್ರರು ಯಾರಿದ್ದಾರೋ ಅವರೂ ಅವರ ವಂಶಜರೂ ಆ ಮನ್ವಂತರವು ಕಳೆಯುವವರೆಗೆ ಭೂಮಿಯನ್ನು ಪರಿಪಾಲಿಸುತ್ತಾರೆ.
ಹೀಗೆ ಒಂದೊಂದು ಮನ್ವಂತರಕ್ಕೆ ಮನು, ಸಪ್ತರ್ಷಿಗಳು, ದೇವತೆಗಳು, ಮನುಪುತ್ರರು ಮತ್ತು ದೇವೇಂದ್ರ - ಇವರು ಅಧಿಕಾರ ಪುರುಷರಾಗಿ ಇರುತ್ತಾರೆ.
********
ಚತುರ್ದಶಭಿರೇತೈಸ್ತು ಗತೈರ್ಮನ್ವಂತರೈರ್ದ್ವಿಜ|
ಸಹಸ್ರಯುಗಪರ್ಯಂತ: ಕಲ್ಪೋ ನಿಶ್ಯೇಷ ಉಚ್ಯತೇ||49||
ಚಾವತ್ಪ್ರಮಾಣಾ ಚ ನಿಶಾ ತತೋ ಭವತಿ ಸತ್ತಮ|
ಬ್ರಹ್ಮರೂಪಧರಶ್ಯೇತೇ ಶೇಷಾಹಾವಂಭುಸಂಪ್ಲವೇ||50||
ತ್ರೈಲೋಕ್ಯಮಖಿಲಂ ಗಸ್ತ್ವಾ ಭಗವಾನಾದಿಕೃದ್ವಿಭು:|
ಸ್ವಮಾಯಾಸಂಸ್ಥಿತೋ ವಿಪ್ರ ಸರ್ವಭೂತೋ ಜನಾರ್ದನ:||51||
ತತ: ಪ್ರಬುದ್ಧೋ ಭಗವಾನ್ ಯಥಾ ಪೂರ್ವಂ ತಥಾ ಪುನ:|
ಸೃಷ್ಟಿಂ ಕರೋತ್ಯವ್ಯಯಾತ್ಮಾ ಕಲ್ಪೇ ಕಲ್ಪೇ ರಜೋಗುಣ:||52||
ಮೈತ್ರೇಯ, ಹೀಗೆ ಹದಿನಾಲ್ಕು ಮನ್ವಂತರಗಳು ಕೂಡಿ ಒಂದು ಸಾವಿರ ಚತುರ್ಯುಗ ಪರ್ಯವಾದ ಕಾಲವು ಸಂಪೂರ್ಣವಾಗಿ ಒಂದು ಕಲ್ಪವೆನಿಸುತ್ತದೆ.
ಇದು ಬ್ರಹ್ಮನ ಹಗಲು.
ಅನಂತರ ಅಷ್ಟೇ ಕಾಲ ಪರಿಣಾಮವುಳ್ಳ ರಾತ್ರಿಯಾಗುತ್ತದೆ.
ಬ್ರಹ್ಮರೂಪವನ್ನು ಧರಿಸಿದ್ದ ವಿಷ್ಣುವು ಆಗ ಪ್ರಳಯಕಾಲದಲ್ಲಿ ಆದಿಶೇಷನ ಮೇಲೆ ಜಲದಲ್ಲಿ ಪವಡಿಸುತ್ತಾನೆ.
ಆದಿಕರ್ತನೂ ಸರ್ವವ್ಯಾಪಿಯೂ ಭಗವಂತನೂ ಆದ ಜನಾರ್ದನನು ಹೀಗೆ ಮೂರು ಲೋಕಗಳನ್ನೂ ನುಂಗಿ ತನ್ನ ಮಾಯೆಯಲ್ಲಿ ಸೇರಿಕೊಂಡಿರುತ್ತಾನೆ.
ಪ್ರಳಯ ರಾತ್ರಿಯು ಕಳೆದ ಮೇಲೆ ಪುನ: ಎಚ್ಚೆತ್ತು ರಜೋಗುಣವನ್ನು ಆಶ್ರಯಿಸಿ ಅವ್ಯಯನಾದ ಆ ಭಗವಂತನು ಸೃಷ್ಟಿಯನ್ನು ಮಾಡುತ್ತಾನೆ.
********
ಮನವೋ ಭೂಭುಜಸ್ಸೇಂದ್ರಾ ದೇವಾಸ್ಸಪ್ತರ್ಷಯಸ್ತಥಾ|
ಸಾತ್ಚಿಕೋಂಶ: ಸ್ಥಿತಿರಕರೋ ಜಗತೋ ದ್ವಿಜಸತ್ತಮ||53||
ಚತುರ್ಯುಗೇಪ್ಯಸೌ ವಿಷ್ಣು: ಸ್ಥಿತಿವ್ಯಾಪಾರಲಕ್ಷಣ:|
ಯುಗವ್ಯವಸ್ಥಾಂ ಕುರುತೇ ಯಥಾ ಮೈತ್ರೇಯ ತಚ್ಛೃಣು||54||
ಕೃತೇ ಯುಗೇ ಪರಂ ಜ್ಞಾನಂ ಕಪಿಲಾದಿಸ್ವರೂಪಧೃಕ್|
ದದಾತಿ ಸರ್ವಭೂತಾತ್ಮಾ ಸರ್ವಭೂತಹಿತೇ ರತ:||55||
ಚಕ್ರವರ್ತಿಸ್ವರೂಪೇಣ ತ್ರೇತಾಯಾಮಪಿ ಸ ಪ್ರಭು:|
ದುಷ್ಟಾನಾಂ ನಿಗ್ರಹಂ ಕುರ್ವನ್ ಪರಿಪಾತಿ ಜಗತ್ಪ್ರಯಮ್||56||
ವೇದಮೇಕಂ ಚತುರ್ಭೇದಂ ಕೃತ್ವಾ ಶಾಖಾಶತೈರ್ವಿಭು:|
ಕರೋತಿ ಬಹುಲಂ ಭೂಯೋ ವೇದವ್ಯಾಸಸ್ವರೂಪಧೃಕ್||57||
ಎಲೈ ಮೈತ್ರೇಯ, ಮನುಗಳೂ ರಾಜರೂ ಇಂದ್ರರೂ ದೇವತೆಗಳೂ ಸಪ್ತರ್ಷಿಗಳೂ ಸಹ ಜಗತ್ತಿನ ಸ್ಥಿತಿಯನ್ನು ನೋಡಿಕೊಳ್ಳತಕ್ಕ ಭಗವಂತನ ಸಾತ್ವಿಕಾಂಶವಾಗಿರುತ್ತಾರೆ.
ಸ್ಥಿತಿಯನ್ನು ಮಾಡತಕ್ಕ ವಿಷ್ಣುವು ನಾಲ್ಕು ಯುಗಗಳಲ್ಲಿ ಹೇಗೆ ವ್ಯವಸ್ಥೆ ಮಾಡುತ್ತಾನೆಂಬುದನ್ನು ಕೇಳು.
ಸರ್ವಭೂತಗಳ ಹಿತದಲ್ಲಿ ನಿರತನಾದ ಆ ಸರ್ವಭೂತಾತ್ಮನು ಕೃತಯುಗದಲ್ಲಿ ಕಪಿಲಾದಿ ಜ್ಞಾನಿಗಳ ಸ್ವರೂಪವನ್ನು ಧರಿಸಿ ಪರಮಾರ್ಥ ಜ್ಞಾನವನ್ನು ಉಪದೇಶಿಸುತ್ತಾನೆ.
ತ್ರೇತಾಯುಗದಲ್ಲಿ ಚಕ್ರವರ್ತಿ ರೂಪವನ್ನು ಧರಿಸಿ ದುಷ್ಟರನ್ನು ನಿಗ್ರಹಿಸುತ್ತ ಮೂರು ಲೋಕಗಳನ್ನು ಪಾಲಿಸುತ್ತಾನೆ.
ದ್ವಾಪರಯುಗದಲ್ಲಿ ವೇದವ್ಯಾಸನಾಗಿ ಅವತರಿಸಿ ಒಂದೇ ಆದ ವೇದವನ್ನು ನಾಲ್ಕು ಭೇದಗಳನ್ನಾಗಿ ವಿಂಗಡಿಸಿ ಮತ್ತೆ ನೂರಾರು ಶಾಖೆಗಳನ್ನಾಗಿ ವಿಭಜಿಸಿ ಬೆಳೆಸುತ್ತಾನೆ.
********
ವೇದಾಂಸ್ತು ದ್ವಾಪರೇ ವ್ಯಸ್ಯ ಕಲೇರಂತೇ ಪುನರ್ಹರಿ:|
ಕಲ್ಕಿಸ್ವರೂಪೇ ದುರ್ವೃತ್ತಾನ್ಮಾರ್ಗೇ ಸ್ಥಾಪಯತಿ ಪ್ರಭು:||58||
ಏವಮೇತಜ್ಜಗತ್ಸರ್ವಂ ಶಶ್ವತ್ ಪಾತಿ ಕರೋತಿ ಚ|
ಹಂತಿ ಚಾಂತೇಷ್ವನಂತಾತ್ಮಾ ನಾಸ್ತ್ಯಸ್ಮಾದ್ ವ್ಯತಿರೇಕಿ ಯತ್||59||
ಭೂತಂ ಭವ್ಯಂ ಭವಿಷ್ಯಂ ಚ ಸರ್ವಭೂತಾನ್ಮಹಾತ್ಮನ:|
ತದತ್ರಾನ್ಯತ್ರ ವಾ ವಿಪ್ರ ಸದ್ಭಾವ: ಕಥಿತಸ್ತವ||60||
ಮನ್ವಂತರಾಣ್ಯಶೇಷಾಣಿ ಕಥಿತಾನಿ ಮಯಾ ತವ|
ಮನ್ವಂತರಾಧಿಪಾಂಶ್ಚೈವ ಕಿಮನ್ಯತ್ಕಥಯಾಮಿ ತೇ||61||
ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ದ್ವಿತೀಯೋಧ್ಯಾಯ:||
ಹೀಗೆ ದ್ವಾಪರದಲ್ಲಿ ವೇದಗಳನ್ನು ವಿಭಜಿಸಿ ಕಲಿಯುಗದ ಕಡೆಯಲ್ಲಿ ಕಲ್ಕಿರೂಪಧರನಾಗಿ ದುಷ್ಟರನ್ನು ದಂಡಿಸಿ ಸನ್ಮಾರ್ಗದಲ್ಲಿ ನಿಯಮಿಸುತ್ತಾನೆ.
ಹೀಗೆ ಅನಂತಾತ್ಮನಾದ ಶ್ರೀಹರಿಯು ಸರ್ವಜಗತ್ತನ್ನು ಪಾಲಿಸುತ್ತಾನೆ. ನಿರ್ಮಿಸುತ್ತಾನೆ.
ಪ್ರಳಯಕಾಲದಲ್ಲಿ ನಾಶಮಾಡುತ್ತಾನೆ.
ಆತನಿಗಿಂತ ಬೇರೆಯಾದ ಯಾವ ವಸ್ತುವೂ ಇಲ್ಲ.
ಮೈತ್ರೇಯ, ಈ ಲೋಕದಲ್ಲಾಗಲಿ ಪರಲೋಕದಲ್ಲಾಗಲಿ, ಸರ್ವಸ್ವರೂಪನೂ ಮಹಾತ್ಮನೂ ಆದ ವಿಷ್ಣುವಿಗಿಂತ ಭಿನ್ನವಾದ ಭೂತ, ವರ್ತಮಾನ, ಭವಿಷ್ಯತ್ತಿನ ಯಾವ ವಸ್ತುವೂ ಇಲ್ಲ.
ನಿನಗೆ ಈ ಪರಮಾರ್ಥವನ್ನು ಹೇಳಿದ್ದೇನೆ.
ನೀನು ಕೇಳಿದಂತೆ ಸಮಸ್ತ ಮನ್ವಂತರಗಳನ್ನೂ ಮನ್ವಂತರಾಧಿಪರನ್ನೂ ನಿನಗೆ ತಿಳಿಸಿದ್ದಾಯಿತು.
ಇನ್ನು ಯಾವುದನ್ನು ನಿನಗೆ ಹೇಳಲಿ?
ಇಲ್ಲಿಗೆ ಶ್ರೀವಿಷ್ಣುಪುರಾಣದ ದ್ವಿತೀಯಾಂಶದಲ್ಲಿ ಎರಡನೆಯ ಅಧ್ಯಾಯ ಮುಗಿಯಿತು.
********
No comments:
Post a Comment