ನಮ್ಮದೇಹದ ಎಡ ಬಲ ನಾಡಿಗಳಲ್ಲಿ ದೇವತೆಗಳ ಸನ್ನಿಧಾನದ ಚಿಂತನೆ.
ದಿವಿಜರು - ದೇವತೆಗಳಾದ,
ಬಲಭಾಗದ ನಾಡಿಗಳಲ್ಲಿ ಜಲಜಸಂಭವ ಅಂದ್ರೆ ಬ್ರಹ್ಮದೇವ,ವಾಯುದೇವರು,ಸರಸ್ವತಿದೇವಿ ಮೊದಲಾದ ದೇವತೆಗಳು ಇರುತ್ತಾರೆ.
ಎಡಭಾಗದ ನಾಡಿಗಳಲ್ಲಿ..ಎಲರುಣಿಪ ಅಂದ್ರೆ ಗಾಳಿಯನ್ನು ನುಂಗುವವನಾದ ಶೇಷದೇವರು,ವಿಹಗೇಂದ್ರ ಅಂದ್ರೆ ಪಕ್ಷಿರಾಜನಾದ ಗರುಡದೇವ,
ಛಳಿ ಬೆಟ್ಟಳಿಯ ಅಂದರೆ ಹಿಮಾಲಯ ಪರ್ವತರಾಜನ ಅಳಿಯನಾದ ರುದ್ರದೇವರು,
ಷಣ್ಮಹಿಷಿಯರು ಶ್ರೀಕೃಷ್ಣನ ಪತ್ನಿಗಳಾದ ಜಾಂಬುವತಿ,ಮಿತ್ರವಿಂದಾ, ಕಾಳಿಂದೀ,ನೀಲಾ,ಭದ್ರಾ, & ಲಕ್ಷಣಾ 6 ದೇವತೆಗಳು,
ವಾರುಣಿ ಶೇಷದೇವರ ಪತ್ನಿ, ಕುಲೀಶಧರ ಅಂದರೆ ವಜ್ರವನ್ನು ಧರಿಸಿದ ದೇವೇಂದ್ರ,ಕಾಮಾದಿಗಳು ಅಂದರೆ ಮನ್ಮಥ ಮೊದಲಾದ ದೇವತೆಗಳ ಸನ್ನಿಧಾನವಿರುತ್ತದೆ.
ಹೆಚ್ಚಿನ ಮಾಹಿತಿ.ಶಾಂಡಿಲ್ಯತತ್ವದಲ್ಲಿ ಇದ್ದಂತೆ......
ನಮ್ಮ ದೇಹದಲ್ಲಿ ಹಗಲು ನಾಡಿಗಳು ( ಬಲದ) 36000,
ರಾತ್ರಿ (ಎಡಭಾಗದ) 36000 ಇರುತ್ತವೆ
ಬಲದನಾಡಿಗಳು ಪುರುಷ ನಾಡಿಗಳು & ಎಡದ ನಾಡಿಗಳು ಸ್ತ್ರೀ ನಾಡಿಗಳು ಅಂತಾ ಕರೆಸಿಕೊಳ್ಳುತ್ತವೆ.
ಈ ಎಡಬಲದ ಪ್ರತಿ 500 -500 ನಾಡಿಗಳಿಗೆ ದಕ್ಷಿಣಾಯಣ ನಾಡಿ & ಉತ್ತರಾಯಣ ನಾಡಿ ಅಂತಾ ಕರೆಯುತ್ತಾರೆ.
[8:25 AM, 3/27/2019] Roopa Admin Adhyatmkika Gr: ನಮ್ಮ ದೇಹದಲ್ಲಿ ಪ್ರಧಾನ ನಾಡಿಗಳು 3.
1.ಸುಷುಮ್ನಾ (ದೇಹದ ಮಧ್ಯದಲ್ಲಿ)
2.ಪಿಂಗಳಾ (ದೇಹದ ಬಲಭಾಗದಲ್ಲಿ)
3.ಇಡಾ (ದೇಹದ ಎಡಭಾಗದಲ್ಲಿ )..
ದೇಹದ ಬಲಭಾಗದಲ್ಲಿ ಬರುವ ಪಿಂಗಳಾ ನಾಡಿಯಿಂದ ಹುಟ್ಟಿದ 500 ನಾಡಿಗಳಿಗೆ ದಕ್ಷಿಣಾಯಣ ನಾಡಿಗಳು ಅಂತಾ, ಎಡಭಾಗದಲ್ಲಿ ಬರುವ ಇಡಾನಾಡಿಯಿಂದ ಜನಿತ 500 ನಾಡಿಗಳಿಗೆ ಉತ್ತರಾಯಣ ನಾಡಿಗಳೆಂದು ಕರೆಯುತ್ತಾರೆ.
ಮೇಲೆ ಹೇಳಿದಂತೆ ನಾಡಿಗಳಲ್ಲಿ ದೇವತೆಗಳ ಸನ್ನಿಧಾನದ ಚಿಂತನೆಯನ್ನು ಮಾಡಬೇಕು.
ಹರೇ ಶ್ರೀನಿವಾಸ..ಹರಿ ಸರ್ವೋತ್ತಮ ವಾಯುಃ ಜೀವೋತ್ತಮ..
ನಮ್ಮ ಶರೀರದೊಳಗಿನ ಇಕ್ಕೆಲ ನಾಡಿಗಳೊಳಗೆ ದೇವಕ್ಕಳಿಂದ ಒಡನಾಡುತಲಿ ಅಂದ್ರೆ ದೇವತೆಗಳಿಂದೊಡಗೂಡಿ ವಿಹಾರಮಾಡುತ್ತ,
ಪೊಂಬಕ್ಕಿದೇರನು ಅಂದ್ರೆ ಗರುಡವನ್ನೆ ತನ್ನ ರಥವನ್ನಾಗಿ ಮಾಡಿಕೊಂಡ ಪರಮಾತ್ಮ.
ಜೀವರ ಅಧಿಕಾರಾನುಸಾರದಲಿ ಅಂದರೆ ಸಾತ್ವಿಕ,ರಾಜಸ & ತಾಮಸ ತ್ರಿವಿಧ ಜೀವರ ಯೋಗ್ಯತೆಗೆ ತಕ್ಕಂತೆ ಸಾಧನವಮಾಡಿ ಅವರಿಂದ ಮಾಡಿಸಿ ತನ್ನ ಭಕ್ತರನ್ನು ಅಕ್ಕರೆಯಿಂದ ಸಂತೈಸುತ್ತಾನೆ.ಅಸುರರ್ಗೆ ಅಂದರೆ ರಾಕ್ಷಸರಿಗೆ ಸತ್ಪುಣ್ಯದಫಲಗಳನ್ನು ದಕ್ಕಗೊಡದೆ ಅವರಿಂದ ಅವರಲ್ಲಿದ್ದು ಮಾಡಿಸಿದ ಅಲ್ಪ ಪುಣ್ಯವನ್ನು ಸಹ ಅಪಹರಿಸಿ ತನ್ನ ಭಕ್ತರಿಗೆ ಪುಣ್ಯಫಲಗಳನ್ನು ಕೊಟ್ಟು ಉದ್ಧರಿಸುತ್ತಾನೆ.
ತುಂದಿವಿಡಿದು -ಹೊಕ್ಕಳದ ಕೆಳಭಾಗದ ಹೊಟ್ಟೆಯಿಂದ ಶಿರದ ಪರ್ಯಂತ ಬ್ರಹ್ಮನಾಡಿಯೊಂದೆ ವ್ಯಪಿಸಿಕೊಂಡಿದೆ.ಅದರೊಳಗೆ ತಾವರೆಕಂದ ಅಂದರೆ ಕಮಲದ ಪುಷ್ಪದಿಂದ(ಪರಮಾತ್ಮನ ನಾಭಿಕಮಲದಿಂದ) ಜನಿಸಿದವನಾದ ಬ್ರಹ್ಮದೇವರಿರುತ್ತಾರೆ.ವಾಯು ದೇವರು ಕಲ್ಪಾನುಸಾರವಾಗಿ ಬ್ರಹ್ಮಪದವಿಗೆ ಬರುವದರಿಂದ ವಾಯುದೇವರನ್ನು ಬ್ರಹ್ಮನಾಮವೆಂಬ ವಾಯುದೇವ ಅಂತಾ ತಿಳಿದುಕೊಳ್ಳಬೇಕು.
ಈ ಬ್ರಹ್ಮನಾಡಿಗೆ ಈರೈದು ಶಾಖೆಗಳು 5×2 =10 + ಬಹ್ಮನಾಡಿ = 11ಶಾಖೆಗಳು ಈ 11 ಶಾಖೆಗಳಲ್ಲಿ 5 ಜ್ಞಾನೇಂದ್ರಿಯ,5ಕರ್ಮೇಂದ್ರಿಯ & ಒಂದು ಮನಸ್ಸು 11 ಸಂಬಂಧಪಟ್ಟಿರುತ್ತವೆ.
ಈ 11 ನಾಡಿಗಳಲ್ಲಿ ಸೂರ್ಯ,ಚಂದ್ರ,ವರುಣ,ಅಶ್ವನಿದೇವತೆಗಳು ಮೊದಲಾದವರು ವಾಸವಾಗಿರುತ್ತಾರೆ.
ಹರೇ ಶ್ರೀನಿವಾಸ
*****
No comments:
Post a Comment