SEARCH HERE

Monday, 1 April 2019

ಬಾಳೆಯ ಎಲೆ ಇಡುವ ಪದ್ಧತಿ ಬಡಿಸುವ ಕ್ರಮ ಊಟ placing banana leaf serving procedure eat




ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು? ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ.
ಅವುಗಳಲ್ಲಿ ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು.
ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ.
ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು.
ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ.
ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.
ಬಾಳೆಎಲೆ ಊಟದಿಂದ ಕೇವಲ ತುಂಬುವುದೊಂದೇ ಅಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು ಇಲ್ಲಿವೆ.

1.ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ.
ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.
2.ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ.
ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.
3.ಚೆನೈನ ಆಯುರ್ವೇದ ತಜ್ಞರ ಪ್ರಕಾರ, ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.
4.ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು.
ಆದರೆ, ಬಾಳೆಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.
5.ಬಾಳೆಎಲೆ ಊಟ ಆರೋಗ್ಯಕ್ಕೆತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.
6.ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ, ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ.
ಭವಿಷ್ಯದಲ್ಲಿ ಚರ್ಮರೋಗಗಳು ಬಾರದಮತೆ ತಡೆಯುವ ವೈದ್ಯೋದ್ದೇಶ ಇದರದ್ದು.
ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.
7.ಮಕ್ಕಳ ತ್ವಚೆಗೆ ಪರಿಹಾರ

ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.
8.ಸುಟ್ಟ ಗಾಯಗಳಿಗೆ

ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.
ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.
ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.
ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.

1 ಉಪ್ಪು (ಸೌಗಂಧಿ ಸಹಿತ ಜನಾರ್ಧನ)
2 ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)
3 ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)
4 ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಶೀಕೇಷ)
5 ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
6 ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)
7 ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)
8 ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)
9 ಹೋಳಿಗೆ (ಕಮಲಾಲಯ ಮಧುಸೂದನ)
10 ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಆಧೊಷಜ)
11 ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12 ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)
13 ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)
14 ತೊವ್ವೆ (ಧಾನ್ಯ ಸಹಿತ ಶ್ರೀಧರ)
15 ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)
16 ಅನ್ನ (ಶ್ರೀಕೇಶವ)
17 ತುಪ್ಪ (ಪದ್ಮಾ ಸಹಿತ ಗೋವಿಂದ)
18 ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)
19 ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)
20 ಮೊಸರು (ವೃಕ್ಷಾಕಪಿ ಸಹಿತ ವಾಮನ)
21 ಕುಡಿಯುವ ನೀರು (ಶ್ರೀಕೃಷ್ಣ)
22 ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)
23 ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ)
24 ವೀಳ್ಯದೆಲೆ (ಶ್ರೀಹರಿ)
25 ಪಾನಕ - ನಿಂಬೆ (ವಿಶ್ವ)

ವಿಷಯಸೂಚಿ : 
1. ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
2. ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.

ಗ್ರಂಥಋಣ:
1. ಜಗನ್ನಾಥದಾಸರ ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿಯಿಂದ ಆಯ್ದು, ಶ್ರೀ ಸಂಜೀವ ಮೂರ್ತಿದಾಸರು ಪ್ರಸ್ತುತ ಪಡಿಸಿದ ಪ್ರವಚನ.
2. ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ ಟಿಟಿಡಿ ಪ್ರಕಾಶಿಸಿದ “ಹರಿ ಭಜನೆ ಮಾಡೋ ನಿತಂತರ” ಪುಸ್ತಕ.
3. ಎಂ.ಕೃಷ್ಣರಾಯ “ಶ್ರೀ ಹರಿಕಥಾಮೃತಸಾರ ಸೌರಭ”.
4. ಶ್ರೀ ಮುರುಗೋಡು ದಾಸರ “ಭಜನ ಚಂದ್ರಿಕಾ”.
********

ಊಟ ಮಾಡುವಾಗ ನಾವು ತಿನ್ನುವ ಪ್ರತಿಯೊಂದು ತುತ್ತುಗಳು ಮುಖ್ಯಪ್ರಾಣದೇವರ ಐದು ರೂಪಗಳ ಮೂಲಕ ಭಗವಂತನ ಐದು ರೂಪಗಳಲ್ಲಿ ಸಮರ್ಪಿತ ವಾಗುತ್ತದೆ ಎಂದು ತಿಳಿಯಬೇಕು.

ಮುಖದಲ್ಲಿ ಪ್ರಾಣನು,ಕಂಠದಲ್ಲಿ ಅಪಾನನು, ಹೃದಯದಲ್ಲಿ ವ್ಯಾನನು,ಉದರದಲ್ಲಿ  ವ್ಯಾನನು,ಉದರದ ಎಡಭಾಗದಲ್ಲಿ ಉದಾನನು,ಬಲಭಾಗದಲ್ಲಿ ಸಮಾನನು,ವಾಸುದೇವ, ಪ್ರದ್ಯುಮ್ನ,ಸಂಕರ್ಷಣ, ಅನಿರುದ್ಧ,ನಾರಾಯಣ ರೂಪಗಳಲ್ಲಿ ಸಮರ್ಪಣೆ ಮಾಡುತ್ತಾರೆ.

ಐದು ಸ್ಥಳದಲ್ಲಿ ಅವಹನೀಯ,ಗಾರ್ಹಪತ್ಯ,ದಕ್ಷಿಣಾತ್ಯ,ಸಭ್ಯ,

ಅವಸಭ್ಯ,ಎಂಬುದಾಗಿ ಐದು ಅಗ್ನಿಗಳಿವೆ.

ಅದ್ದರಿಂದ ನಾವು ತಿನ್ನುವ ಪ್ರತಿಯೊಂದು ತುತ್ತುಗಳು ಐದು ಸ್ಥಳದಲ್ಲಿ ಭಗವಂತನ ಐದು ಸ್ಥಳಗಳಲ್ಲಿ ಹುತವಾಗುತ್ತದೆ.ಇದನ್ನು ಮುಖ್ಯ ಪ್ರಾಣದೇವರೇ ನಿಂತು ನಡೆಸುತ್ತಾರೆಂದು ಅನುಸಂಧಾನ ಮಾಡಬೇಕು.

ತನ್ನದ್ದೇ ಆದದ್ದನ್ನು ಸ್ವೀಕರಿಸುವ #ಸ್ವಾಹಾ

ಶ್ರೀಮದ್ವಚಾರ್ಯರು ತಿಳಿಸುತ್ತಾರೆ :- ಭಗವಂತನಿಗೆ #ಸ್ವಾಹಾ" ಎಂದು ಹೆಸರು ಹೋಮ ಮಾಡುವಾಗ ' ಆಗ್ನೇಯ ಸ್ವಾಹಾ' ' ವಾಯುವೇ ಸ್ವಾಹಾ' 'ವಿಷ್ಣುವೇ ಸ್ವಾಹಾ ' ಎಂದು ಹೇಳುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಆಹುತಿಗಳನ್ನು ಹಾಕುವಾಗ ಸ್ವಾಹಾ ಎಂಬ ಶಬ್ದವನ್ನು ಪ್ರಯೋಗಿಸುತ್ತಾರೆ. #ಸ್ವಾಹಾ ಶಬ್ದವೇ ನಮಗೆ ತಿಳಿಸುತ್ತದೆ " #ಸಮರ್ಪಿಸಲ್ಪಡುವ #ವಸ್ತುನನ್ನದಲ್ಲಭಗವಂತನ_ವಸ್ತು"#ಎಂದು

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
******


ಬಾಳೆಯ ಎಲೆಯನ್ನು ಇಡುವ ಪದ್ಧತಿ
ಊಟವನ್ನು ಮಾಡುವಾಗ ಬಾಳೆಎಲೆಯ ಅಗ್ರಭಾಗವನ್ನು ಊಟ ಮಾಡುವವನ ಬಲಬದಿಗೆ ಮಾಡಿಟ್ಟರೆ, ತುದಿಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ, ವ್ಯಕ್ತಿಯ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಆದರೆ ಎಲೆಯನ್ನು ನೇರವಾಗಿ ಇಡುವುದರಿಂದ ಶರೀರದ ಎರಡೂ ಭಾಗಕ್ಕೆ ಎಲೆಯ ತುದಿಯಿಂದ ಪ್ರಕ್ಷೇಪಿತವಾಗುವ ಲಹರಿಗಳ ಲಾಭವಾಗುವುದರಿಂದ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಶರೀರದಲ್ಲಿನ ಸೂಕ್ಷ್ಮ-ವಾಯುಗಳು ಉತ್ತಮವಾಗಿ ಸಮತೋಲನವಾಗಿ, ಶರೀರವು ಆರೋಗ್ಯವಾಗಿರುತ್ತದೆ.


ಶಕ್ತಿ ಉಪಾಸನೆಯಲ್ಲಿ ಸೂರ್ಯನಾಡಿಯು ಕಾರ್ಯನಿರತವಾಗುವುದಕ್ಕೆ ತುಂಬಾ ಮಹತ್ವವಿದೆ. ದಕ್ಷಿಣ ಭಾರತದಲ್ಲಿ ಬಹುತಾಂಶ ಜನರು ಶಕ್ತಿಯ ಉಪಾಸಕರಾಗಿರುವುದರಿಂದ ಬಾಳೆ ಎಲೆಯನ್ನು ಅಡ್ಡವಾಗಿಡುತ್ತಾರೆ. ಮಹಾರಾಷ್ಟ್ರದಲ್ಲಿ ಎಲೆಯನ್ನು ನೇರವಾಗಿ ಇಡುತ್ತಾರೆ.

ಊಟ ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದರೆ ತಟ್ಟೆಯಲ್ಲಿ ಅನ್ನವನ್ನು ಏಕೆ ಬಡಿಸಿಡಬಾರದು?

ಅನ್ನವನ್ನು ಬಡಿಸಿದ ತಟ್ಟೆಯಲ್ಲಿನ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಆಕರ್ಷಣೆಯಿಂದ ಯಾವುದಾದರೊಂದು ಕೆಟ್ಟ ಶಕ್ತಿಯ ವಾಸನೆಯು ಜಾಗೃತವಾಗಿ ಅದು ಆ ಸ್ಥಳದಲ್ಲಿ ಅನ್ನವನ್ನು ಸ್ವೀಕರಿಸಲು ಬರುವ ಸಾಧ್ಯತೆಯಿರುವುದರಿಂದ ಊಟವನ್ನು ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದಾಗ ಅವನಿಗೆ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬಾರದು.

: ಓರ್ವ ವ್ಯಕ್ತಿಯು ಊಟಕ್ಕೆ ಕುಳಿತಾಗ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಪ್ರಕ್ಷೇಪಣೆ ಆಗುವುದಿಲ್ಲವೇನು? ಓರ್ವ ವ್ಯಕ್ತಿಯು ಮಣೆಯ ಮೇಲೆ ಊಟಕ್ಕೆ ಕುಳಿತಾಗಲೂ ಕೆಟ್ಟ ಶಕ್ತಿಯು ಆಕರ್ಷಿತವಾಗಬಹುದೇನು?
: ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವುದೆಂದರೆ ಪ್ರತ್ಯಕ್ಷ ಕರ್ತಾತ್ಮಕ ಸ್ವರೂಪದಿಂದ ಉತ್ಪನ್ನವಾಗಿರುವ ಭೋಗಿಸಲು ನಿರ್ಮಾಣವಾದ ರೂಪವೇ ಆಗಿದೆ. ಆದುದರಿಂದ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳ ಪ್ರಕ್ಷೇಪಣೆಯು ಹೆಚ್ಚಿನ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿನೆಡೆಗೆ ಆಗದೇ, ಜೀವದ ಪ್ರತ್ಯಕ್ಷ ವಾಸನೆಯ ಬಲದಿಂದ ನಿರ್ಮಾಣವಾದ ಭೋಗಾಸಕ್ತ ಕೃತಿಯ ಕಡೆಗೆ ಆಗುತ್ತದೆ. ಆದುದರಿಂದ ತಟ್ಟೆಯಲ್ಲಿ ಬಡಿಸಿರುವ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳು ಅತ್ಯಲ್ಪ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿಗೆ ಹೋಗುತ್ತವೆ. ಈ ಲಹರಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಕೆಟ್ಟ ಶಕ್ತಿಗಳ ವಾಸನೆ ಜಾಗೃತವಾಗುವುದು ಹೆಚ್ಚುಕಡಿಮೆ ಅಸಾಧ್ಯವೇ ಆಗಿದೆ.
ಕೆಲವೊಮ್ಮೆ ವ್ಯಕ್ತಿಗೆ ತೊಂದರೆಗಳನ್ನು ಕೊಡಲು ದೊಡ್ಡ ಕೆಟ್ಟ ಶಕ್ತಿಗಳು ಅನ್ನದ ಮಾಧ್ಯಮದಿಂದ ವ್ಯಕ್ತಿಯ ಕಡೆಗೆ ಆಕರ್ಷಿತವಾಗುತ್ತವೆ. ಹಿಂದೂ ಸಂಸ್ಕೃತಿಯಂತೆ ತಟ್ಟೆಯ ಸುತ್ತಲೂ ನೀರಿನ ಮಂಡಲವನ್ನು ಹಾಕಿ, ಆಪತತ್ತ್ವಾತ್ಮಕ ಕವಚವನ್ನು ನಿರ್ಮಾಣ ಮಾಡಿ ಅನ್ನವನ್ನು ಸ್ವೀಕರಿಸುವ ವ್ಯಕ್ತಿಗೆ, ಇತರ ವ್ಯಕ್ತಿಗಳ ತುಲನೆಯಲ್ಲಿ ಮೈಯಲ್ಲಿ ಸೇರುವುದು ಅಥವಾ ವ್ಯಕ್ತಿಯ ಮೇಲೆ ಹಿಡಿತ ಸಾಧಿಸಲು ಕೆಟ್ಟ ಶಕ್ತಿಗಳಿಗೆ ಶೇ.೨೦ರಷ್ಟು ಹೆಚ್ಚು ಕಠಿಣವಾಗಿರುತ್ತದೆ.
*********

No comments:

Post a Comment