SEARCH HERE

Monday 1 April 2019

ನದಿಗಳಲ್ಲಿ ನಾಣ್ಯ ಎಸೆಯುವ ನಂಬಿಕೆ throwing coin in rivers


ನದಿಗಳಲ್ಲಿ ನಾಣ್ಯ ಎಸೆಯುವ ನಂಬಿಕೆ ಮತ್ತು ಅಪನಂಬಿಕೆ..! 

ನಿಮಗೆ ಗೊತ್ತಿರಬಹುದು ನದಿಗಳಲ್ಲಿ.. ಬಾವಿಗಳಲ್ಲಿ ... ಕೊಳ ಸರೋವರದಲ್ಲಿ ( ಸಮುದ್ರದಲ್ಲಿ ನಾಣ್ಯ ಎಸೆಯುವ ಪದ್ಧತಿ ಇಲ್ಲಾ. ಗಮನಿಸಿ.) ಕೆಲವರು ನಾಣ್ಯ ಎಸೆಯುತ್ತಾರೆ.. 

ಯಾಕಿರಬಹುದು? ಯಾರಿಗಾದರೂ ಗೊತ್ತಾ.. ಸರಿ ಓದಿ.. 

ಬಹಳ ಹಿಂದಿನಿಂದಿಲೂ ಗೊತ್ತಿದ್ದೋ ಗೊತ್ತಿಲ್ಲದ ಮಾಡಿದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಯಾತ್ರೆ ದೇವಸ್ಥಾನಕ್ಕೆ ಹೋಗಿ ಬರುವ ಪ್ರತೀತಿ ಇದ್ದೆ ಇತ್ತು..

ಆ ಥರ ಯಾತ್ರೆ ದೇವಸ್ಥಾನಕ್ಕೆ ಹೋದಾಗ ಅಲ್ಲಿರುವ ಕೊಳ .. ನದಿ . ಸರೋವರಗಳಲ್ಲಿ ಬೆಳ್ಳಿಯ.. ತಾಮ್ರದ ನಾಣ್ಯಗಳನ್ನು ಎಸೆಯುತ್ತಿದ್ದರು.. 

ಹಣವೆಂದರೆ ವ್ಯಾಲ್ಯುವೇಬಲ್ ! ಅಲ್ವಾ  ಬೆಳ್ಳಿಯ ತಾಮ್ರದ ನಾಣ್ಯಗಳನ್ನು ಎಸೆಯುವಾಗ ಎಷ್ಟು ನೋವಾಗುತ್ತದೋ ನಾವು ಪಾಪ ಮಾಡುವಾಗ ಅಂಥದೇ "ಪಾಪಪ್ರಜ್ಞೆ" ಹೊಂದಿರಬೇಕು ಎಂಬುದು ಈ ನಾಣ್ಯ ಎಸೆಯುವ ಹಿಂದಿರುವ ಘನ ಉದ್ಧೇಶ..! 

ಈಗ ವೈಜ್ಞಾನಿಕವಾಗಿ ನೋಡೋಣ.. ಬೆಳ್ಳಿ ಹಾಗು ತಾಮ್ರ ನೀರಿನ್ನು ಶೋಧಿಸುತ್ತವೆ.. ಅಲ್ಲಿರುವ ಕಲ್ಮಶಗಳನ್ನು ಹೀರಿಕೊಂಡು ತಾವು ತುಕ್ಕು ಹಿಡಿದು ನೀರಿನ ಪಿ ಹೆಚ್ ಮಟ್ಟವನ್ನು ಕಾಪಾಡುತ್ತಿರುತ್ತವೆ.. ( ಚಿನ್ನ ಈ ಕೆಲಸ ಮಾಡಲಾರದು..!) 

ಆದರೆ ಕಾಲ ಬದಲಾದಂತೆಲ್ಲಾ ಈ ಬೆಳ್ಳಿ ತಾಮ್ರದ ನಾಣ್ಯಗಳು ಚಲಾವಣೆ ನಿಂತು "ಸ್ಟೇನ್ಲೆಸ್" ನಾಣ್ಯಗಳನ್ನು ಎಸೆಯುತ್ತಿದ್ದೇವೆ..! 

ಮೊದಲೇ ಕಲ್ಮಶಗೊಂಡಿರುವ  ನದಿ ಸರೋವರ ಕೊಳಗಳಲ್ಲಿ ಮತ್ತಷ್ಟು ಕೊಳೆಯನ್ನು ನಾವು ತುಂಬುತ್ತಿದ್ದೇವೆ.. 

ಯಾಕಂದರೆ ಈ ಸ್ಟೇನ್ಲೆಸ್ ಎನ್ನುವದು ಕಬ್ಬಿಣದ ಉತ್ಪಾದನೆ.. ಅದಕ್ಕೆ ಈ ನೀರಿನಲ್ಲಿರುವ  ಆಮ್ಲಜನಕವೆಂದರೆ  ಬಹಳ  ಇಷ್ಟ.. ಆಕ್ಸೈಡುಗಳನ್ನು (ಜಂಗು.. ತುಕ್ಕು..)  ಅಂದರೆ ವಿಷವನ್ನು ಉತ್ಪಾದಿಸತೊಡಗುತ್ತದೆ..! 

 ಇಂಥಾ   ನಂಬಿಕೆಯೊಂದರ ಹಿಂದಿರುವ ಉದ್ಧೇಶ ತಿಳಿಯದೆ ಮತ್ತೊಂದು ಅಪನಂಬಿಕೆಯನ್ನು  ಗಟ್ಟಿಯಾಗಿ ನಂಬಿ ಬಿಟ್ಟಿದ್ದೇವೆ ...!

********


No comments:

Post a Comment