SEARCH HERE

Tuesday 1 January 2019

ಜ್ಯೇಷ್ಠ ಮಾಸ ಮಹತ್ವ jyeshta masa importance


ಜ್ಯೇಷ್ಠ ಮಾಸ ದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು


ನಿರ್ಜಲಾ ಏಕಾದಶಿ (ಶುಕ್ಲ ಏಕಾದಶಿ)

ವಟ ಸಾವಿತ್ರಿ ವ್ರತ (ಹುಣ್ಣಿಮೆ)

ಯೋಗಿನೀ ಏಕಾದಶಿ (ಕೃಷ್ಣ ಏಕಾದಶಿ)

ಕಾರ ಹುಣ್ಣಿಮೆ


JYESHTA MAASA - Significance & Merits - The month in which Moon would be at or nearer to the constellation (nakshathra) of Jyeshta on the full moon day is reckoned as the lunar month Jyeshta maasa.

Jyeshta is the 18th constellation (star) among the 27 constellations and it falls in the zodiac sign of Scorpio (Vrishcika raasi). Mercury (Budha) is the star Lord of Jyeshta constellation and the star deity is Devendra.

Jyeshta maasa marks the beginning of a new season (Ruthu) known as Greeshma Ruthu when summer will be very severe with scorching Sun during which time Sun will be transiting in the constellations of Krittika and Rohini.

When Sun enters into the constellation of Mrigasira it is known as Mrigasira Kaarthi when we expect the South-West monsoon to begin. It generally occurs around 7th of June every year.

During this month Sun will be transiting into Mithuna (Gemini) raasi that is known as Mithuna Sankramana.

Jyeshta means elderly, most ancient, the oldest, senior most, supreme, eldest of all beings, the first and the foremost;

who else can be Jyeshta in this universe? none other than Lord Vishnu.

In Sri Vishnu Sahasra Naama Stothram sloka number 8 we find Lord Vishnu being referred to as...

> "Jyeshhtah Sreshhtah Prajaapatih"

Lord Vishnu is the supreme Brahma who has created Chaturmukha Brahma the creator. That’s why Lord Vishnu is also referred to as Prajaapathih.

He is the best (Sreshtah) among the best.

Maasa Niyaamaka (governing Lord) of Jyeshta maasa is Lord Vishnu in the form of Trivikrama. It is a very popular name of Lord Vishnu that we come across in Vishnu related prayers and epics.

Trivikramah means the one who has conquered the three worlds. In Sri Vaamana avathara, Lord Sri Vishnu in order to suppress the pride of King Bali, assumed the cosmic form Trivikrama roopa and measured the three worlds (entire universe) with his three steps.

Jyeshta maasam is the sacred month in which Vishnu Paadodbhavi, holy river Ganga (Ganges) descended on earth due to the vigorous efforts and penance of King Bhagiratha.

Jyeshta sukla Dasami is reckoned as the day of Gangaavatharana that is commemorated as Bhaagirathi Jayanthi or Ganga Jayanthi.

An austerity known as Dasa Paapa Hara Vratha is observed during the first ten days of Jyeshta maasa starting from Sukla Prathama (Paadyami) and ending on Sukla Dasami. During this period Goddess Ganga is worshiped taking bath in the holy river Ganga early in the morning before sunrise.

Jyeshta Sukla Ekaadasi is known as Nirjala Ekaadasi. 

Full Moon day (Pournami) during Jyeshta maasa is reckoned as Manvaadi when Manvanthara had begun which is a sacred day for giving charity and for performing Pithru Thila tharpana (Shannavathi). Daana of black Thila seeds (sesame) is prescribed on this day.

If Jupiter (Bruhaspathi) and Moon are together in Jyeshta constellation and Sun is in Rohini constellation on the day of Jyeshta Pournami it is referred to as Mahaa Jyeshti which is considered as highly meritorious day for performing sacred deeds like Theertha snaana (taking bath in a holy river) and for giving Daana.

Jyeshta Pournami is reckoned as Vata Saavithri Poornima when married women perform special pooja rituals at the base of a Banyan tree (Vata Vruksha) for the good health and longevity of their spouse.

This vratha is assigned and named after Maha Pathivratha Shiromani, Savithri Devi who fought with Yama Dharmaraja the Lord of death to bring back the life of her deceased husband Satyavanta. Hence, it is known as Vata Saavithri Vratham.

At Tirumala Kshethra Sri Venkateswara Swamy temple an annual ritual known as Jyeshtaabhishekam is held during Jyeshta maasa for three days starting from Sukla Trayodasi.

During this ritual gold plating of the Utsava Vigrahas (procession idols) of Malayappa Swamy (Lord Venkateswara), Sri Devi and Bhoo Devi are removed and all the pooja rituals will be held to the original idols. Thereafter the idols are covered again with the gold plating.

During Jyeshta maasa we have Aaaraadhana festivals of Madhva Saints;

> Sri Vaadeendra Theertharu (Mantralayam), 

> Sri Sreepaada Raajaru (Mulabagalu) and 

> Sri Vijayeendra Theertharu (Kumbhakonam).

Daana of 

> Water (Udaka Kumbha daana), 
> Paada raksha (Chappals), 
> Chatthri (umbrella), 
> Vyajana (fan), 
> Thila, 
> Chandana 

are prescribed during Jyeshta maasa.

Udaka Kumbha daana is preferred to be given on the day of Dwaadasi after performing Nirjala Ekaadasi Vratha.

Third in the row of Hindu lunar months, Jyeshta maasa is no mean a month in terms of its merits and significance compared to the other months.

Sri Krushnaarpanamasthu
Hari SArvottama - Vaayu Jeevottama
Sri GuruRaajo Vijayate
Courtesy: Sri Bhargava Sarma Garu
*********


ಹಿಂದು ಪಂಚಾಂಗದಂತೆ ಜ್ಯೇಷ್ಠ ಮಾಸ ಆರಂಭ. ಜ್ಯೇಷ್ಠ ಮಾಸ ಮಾಸಗಳಲ್ಲಿ ಮೂರನೆಯ ಮಾಸವಾಗಿದ್ದು, ಈ ಮಾಸದಲ್ಲಿ ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡೋದು ವಿಶೇಷ. ಈ ಮಾಸಕ್ಕೆ ಇಂದ್ರ ಅಧಿಪತಿ. ಈ ಮಾಸದ ಹುಣ್ಣಿಮೆ ಜ್ಯೇಷ್ಠಾ ನಕ್ಷತ್ರದಲ್ಲಿ ಬರುತ್ತೆ. ಜ್ಯೇಷ್ಠಾ ನಕ್ಷತ್ರದ ಅಧಿಪತಿ ಇಂದ್ರ. ಈ ಮಾಸದಲ್ಲಿ ಇಂದ್ರನ ಪೂಜೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಇನ್ನು ಈ ಮಾಸದಲ್ಲಿ ನೀರಿಗೆ ಅಧಿಪತಿಯಾದವರನ್ನು ಪೂಜಿಸೋದು ವಿಶೇಷವಾಗಿದೆ. ಇನ್ನು ಜ್ಯೇಷ್ಠ ಮಾಸದ ಯಾವ ದಿನ ಯಾವ ದೇವರನ್ನ ಪೂಜಿಸಿದರೆ ಫಲಪ್ರಾಪ್ತಿಯಾಗುತ್ತದೆ ಎನ್ನುವ ವಿವರ ಇಲ್ಲಿದೆ ನೋಡಿ.


ಜ್ಯೇಷ್ಠ ಶುದ್ಧ ಪಾಡ್ಯಮಿ


ಈ ಮಾಸದ ಪಾಡ್ಯಮಿ ದಿನ ತ್ರಿಮೂರ್ತಿಗಳನ್ನು ಪೂಜಿಸಿದರೆ ಒಳಿತಯ ಜಾಸ್ತಿ. ಇನ್ನು ಇದೇ ದಿನ ಕರವೀರ ವ್ರತ ಮಾಡಬೇಕು. ಕರವೀರ ಅಂದ್ರೆ ಕೆಂಪು ಕಣಗಿಲೆ ಹೂವಿನ ಗಿಡ. ಈಶ್ವರನ ಪ್ರೀತಿಗಾಗಿ ಈ ಗಿಡದಲ್ಲಿ ಶಿವನನ್ನು ಆವಾಹನೆ ಮಾಡಿ ಪೂಜಿಸಿದರೆ ಶಿವನ ಸಂಪೂರ್ಣ ಕೃಪೆ ಸಿಗುತ್ತದೆ.


ಜ್ಯೇಷ್ಠ ಶುದ್ಧ ಬಿದಿಗೆ-ಆರೋಗ್ಯ ವೃದ್ಧಿಗಾಗಿ,ಸೂರ್ಯನ ಅನುಗ್ರಹಕ್ಕಾಗಿ ಈ ಮಾಸದ ಬಿದಿಗೆ ದಿನ ಸೂರ್ಯನನ್ನು ಆರಾಧನೆ ಮಾಡಬೇಕು.


ಜ್ಯೇಷ್ಠ ಶುದ್ಧ ತದಿಗೆ- ಜ್ಯೇಷ್ಠ ಮಾಸದ ತದಿಗೆಯ ದಿನ ಕದಳಿ ವ್ರತ ಮಾಡಿದರೆ ವಿವಾಹವಾಗುವವರಿಗೆ ಹೆಚ್ಚಿನ ಒಳಿತಾಗಲಿದೆ. ಸಾಕ್ಷಾತ್ ಪಾರ್ವತಿ ಶಿವನನ್ನು ವಿವಾಹವಾಗಲು ಈ ವ್ರತ ಮಾಡಿದ್ದಳು.


ಜ್ಯೇಷ್ಠ ಶುದ್ಧ ಚೌತಿ-ಈ ದಿನ ಉಮಾ ಚತುರ್ಥಿ ವಿಶೇಷವಾಗಿದ್ದು, ಉಮಾ ಚತುರ್ಥಿ ಸಾಕ್ಷಾತ್ ಪಾರ್ವತಿ ಹುಟ್ಟಿದ ದಿನ. ಆದ್ದರಿಂದ ಪಾರ್ವತಿಯನ್ನ ಪೂಜೆ ಮಾಡಿದರೆ ಹೆಚ್ಚಿನ ಫಲಪ್ರಾಪ್ತಿಯಾಗಲಿದೆ.


ಜ್ಯೇಷ್ಠ ಶುದ್ಧ ಪಂಚಮಿ-ಜ್ಯೇಷ್ಠ ಶುದ್ಧ ಪಂಚಮಿ ಗಂಗೆ ಹುಟ್ಟಿದ ದಿನ. ಹೀಗಾಗೇ ಈ ದಿನವನ್ನು ಗಂಗಾ ಜಯಂತಿ ಎಂದು ಆಚರಿಸಲಾಗುತ್ತೆ.


ಜ್ಯೇಷ್ಠ ಶುದ್ಧ ಸಪ್ತಮಿ- ಈ ದಿನ ವರುಣನಿಗೆ ಪೂಜೆ ಮಾಡಲಾಗುತ್ತದೆ. ವರುಣ ಮಳೆಗೆ ಅಧಿಪತಿ ಹೀಗಾಗೇ ವ್ಯವಸಾಯಕ್ಕೆ ಸಕಾಲದಲ್ಲಿ ಮಲೆ ಬರಲಿ ಅಂತಾ ವರುಣನನ್ನು ಪೂಜಿಸುತ್ತಾರೆ.


ಜ್ಯೇಷ್ಠ ಶುದ್ಧ ಅಷ್ಟಮಿ


ಈ ದಿನವನ್ನು ತ್ರಿಲೋಚನ ಅಷ್ಟಮಿ ಎನ್ನಲಾಗುತ್ತೆ. ಈಶ್ವರ ಪಾರ್ವತಿಯನ್ನು ಒಟ್ಟಿಗೆ ಪೂಜಿಸೋ ದಿನ ಇದಾಗಿದೆ. ಹೀಗೆ ಶಿವ ಪಾರ್ವತಿಯನ್ನು ಒಟ್ಟಿಗೆ ಪೂಜಿಸಿದರೆ ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುತ್ತವೆ.


ಜ್ಯೇಷ್ಠ ಶುದ್ಧ ದಶಮಿ


ಆಂಜನೇಯನಿಗೆ ವಿವಾಹವಾದ ದಿನವೇ ಜ್ಯೇಷ್ಠ ಶುದ್ಧ ದಶಮಿ. ಸೂರ್ಯನ ಮಗಳು ಸುವರ್ಚಲಾ ದೇವಿಯೊಡನೆ ಹನುಮ ವಿವಾಹವಾದ ದಿನವಿದು. ಇಂದು ವಿವಾಹ ನೆರವೇರಿದರೆ ವಿವಾಹ ಪ್ರತಿಬಂಧಕಗಳು ಪರಿಹಾರವಾಗುವುದರ ಜೊತೆ ವಿವಾಹ ಆಗದೆ ಇರುವವರಿಗೆ ಮದುವೆ ಆಗುವ ಯೋಗ ಲಭಿಸುತ್ತದೆ.

 

ನಿರ್ಜಲ ಏಕಾದಶಿ


ನಿರ್ಜಲ ಏಕಾದಶಿ ಈ ಮಾಸದಲ್ಲಿ ಬರುವ ಅತ್ಯಂತ ವಿಶೇಷ. ವಿಶಿಷ್ಟವಾದ ದಿನ. ವರ್ಷದ 24 ಏಕಾದಶಿಗಳನ್ನು ಆಚರಣೆ ಮಾಡಿದಷ್ಟು ಪುಣ್ಯ ಈ ಒಂದು ನಿರ್ಜಲ ಏಕಾದಶಿ ಮಾಡಿದರೆ ಸಿಗುತ್ತೆ ಅನ್ನೋ ನಂಬಿಕೆ ಇದೆ. ಈ ಏಕಾದಶಿ ಆಚರಣೆ ಮಾಡುವವರು ಒಂದು ತೊಟ್ಟು ನೀರನ್ನೂ ಸಹ ಕುಡಿಯದೆ ಏಕಾದಶಿ ಆಚರಿಸಬೇಕು. ದಶಮಿಯ ರಾತ್ರಿ ಅಂದ್ರೆ ಏಕಾದಶಿಯ ಹಿಂದಿನ ದಿನ ರಾತ್ರಿ ಉಪವಾಸವಿರಬೇಕು. ನಂತರ ಏಕಾದಶಿಯ ದಿನವೂ ಉಪವಾಸ ಇರಬೇಕು. ಕೃಷ್ಣ ಮಹಾಭಾರತದಲ್ಲಿ ಧರ್ಮರಾಯನಿಗೆ ನಿರ್ಜಲ ಏಕಾದಶಿ ಮಹತ್ವದ ಬಗ್ಗೆ ಹೇಳಿದ್ದಾನೆ. ಫಲಾಪೇಕ್ಷೆ ಇಲ್ಲದೆ ಈ ಏಕಾದಶಿಯನ್ನು ಆಚರಿಸಬೇಕು. ಮೋಕ್ಷ ಬಯಸುವವರು ಬೀಜ ಇಲ್ಲದ ಹಣ್ಣುಗಳನ್ನು ದಾನ ಮಾಡಬೇಕು.


ಜ್ಯೇಷ್ಠ ಶುದ್ಧ ದ್ವಾದಶಿ-ಜ್ಯೇಷ್ಠ ಶುದ್ಧ ದ್ವಾದಶಿಯು ಆದಿಗುರು ಶಂಕರಾಚಾರ್ಯರು ಅಶರೀರವಾಗಿ ಗುಹೆ ಪ್ರವೇಶ ಮಾಡಿದ ದಿನ.


ಜ್ಯೇಷ್ಠ ಶುದ್ಧ ಚತುರ್ದಶಿ- ಈ ದಿನದಂದು ಆಂಜನೇಯನ ತಂದೆ ವಾಯು ಪೂಜೆಗೆ ಪ್ರಶಸ್ತವಾದ ದಿನ.


ಕಾರ ಹುಣ್ಣಿಮೆ ಅಥವಾ ಭೂಮಿ ಪೌರ್ಣಮಿ


ಭೂಮಿ ಪೂಜೆ ಮಾಡಿ ವ್ಯವಸಾಯ ಆರಂಭಿಸೋಕೆ ಶುಭ ದಿನವಿದು. ಈ ಹುಣ್ಣಿಮೆ ದಿನ ಭೂಮಿ ಪೂಜೆ ಮಾಡಿ ಮಣ್ಣನ್ನು ತೆಗೆದು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಈ ದಿನ ಕಾಶ್ಯಪ ಮಹಾಮುನಿಗಳಿಂದ ಮಣ್ಣು ಅಭಿಮಂತ್ರಣ ಮಾಡಲ್ಪಟ್ಟಿರುತ್ತೆ ಅಂತಾ ಹೇಳಲಾಗುತ್ತೆ.


ಬಹುಳ ಪಂಚಮಿ-ಮಹಾಲಕ್ಷ್ಮಿ ಸಮೇತ ವಿಷ್ಣು ಪೂಜೆ ಮಾಡೋಕೆ ಈ ದಿನ ಪ್ರಶಶ್ತವಾದ ದಿನವಾಗಿದೆ.


ಬಹುಳ ಸಪ್ತಮಿ-ಸೂರ್ಯನ ಪತ್ನಿಯರಾದ ಛಾಯಾ, ಸಂಜ್ಞಾರ ಪೂಜೆಗೆ ಪ್ರಶಶ್ತವಾದ ದಿನವಿದು


ಬುಧ ಜಯಂತಿ- ಬುದ್ಧಿಗೆ ಅಧಿಪತಿ ಬುಧ. ವಿದ್ಯಾಭಿವೃದ್ಧಿಗೆ ಬುಧ ಗ್ರಹದ ಪೂಜೆ ಪ್ರಶಸ್ತವಾದುದು.ಬುಧ ಗ್ರಹದ ಜಯಂತಿ ಆಚರಿಸೋದ್ರಿಂದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ ಆಗುತ್ತೆ.


ಮಣ್ಣೆತ್ತಿನ ಅಮಾವಾಸ್ಯೆ- ಹೊಸದಾಗಿ ಬಿತ್ತನೆ, ವ್ಯವಸಾಯ ಪ್ರಾರಂಭಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಪ್ರಶಸ್ತವಾದ ದಿನ.


ಹಿರಿಯ ಮಕ್ಕಳಿಗೆ ವಿವಾಹ ಮಾಡಬಾರದು- ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜ್ಯೇಷ್ಠ ಮಾಸದಲ್ಲಿ ಮನೆಯ ಹಿರಿಯ ಮಕ್ಕಳಿಗೆ ವಿವಾಹ ಮಾಡಿದ್ರೆ ದೋಷ ಉಂಟಾಗುತ್ತೆ.


ಜೇಷ್ಠ ಮಾಸದ ಮಂಗಳವಾರಗಳು ಅತ್ಯಂತ ವಿಶೇಷ


ಹನುಮನ ಭಕ್ತರಿಗೆ ಮಂಗಳವಾರಗಳು ಅತ್ಯಂತ ವಿಶೇಷವಾದದ್ದು. ಅದರಲ್ಲೂ ಜೇಷ್ಠ ಮಾಸದಲ್ಲಿ ಬರುವ ಮಂಗಳವಾರಗಳು ಮತ್ತಷ್ಟು ವಿಶೇಷ. ಈ ದಿನ ಹನಮಂತ ಭಕ್ತರ ಎಲ್ಲಾ ಆಶಯಗಳನ್ನು ಈಡೇರುಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಅದಕ್ಕೆ ಕಾರಣವೂ ಇದೆ. ರಾಮಭಕ್ತ ಹನುಮಂತ ಜೇಷ್ಠ ಮಾಸದ ಮಂಗಳವಾರ ಮೊದಲ ಬಾರಿ ಶ್ರೀರಾಮನನ್ನು ಭೇಟಿಯಾಗಿದ್ದನಂತೆ. ಹೀಗಾಗೇ ಜೇಷ್ಠ ಮಾಸದ ಮಂಗಳವಾರವನ್ನು ವಿಶೇಷ ಮಂಗಳವಾರವೆಂದು ಪರಿಗಣಿಸಲಾಗಿದೆ‌. ಜೇಷ್ಠ ಮಾಸದ ಎಲ್ಲಾ ಮಂಗಳವಾರವನ್ನು ಭಕ್ತರು ಹನುಮಂತನಿಗೆ ಮೀಸಲಿಡಲಾಗುತ್ತೆ.ಈ‌ ದಿನದಂದು ಹನುಮನ ದೇಗುಲಗಳಲ್ಲಿ ಪೂಜೆ-ಪುನಸ್ಕಾರಗಳು ಬಹಳ ವಿಜೃಂಭಣೆಯಿಂದ ನಡೆಯುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜೇಷ್ಠ ಮಾಸದ ಒಂಭತ್ತು ಮಂಗಳವಾರವನ್ನು ವಿಶೇಷ ಎಂದು ಪರಿಗಣಿಸಲಾಗಿದೆ‌. ಮೊದಲ ಮಂಗಳವಾರದ ದಿನ ಬೆಲ್ಲ ,ಗೋಧಿ ಸಿಹಿ ತಿಂಡಿಯನ್ನು ಪ್ರಸಾದವಾಗಿ ನೀಡಬೇಕು. ಈ ದಿನ ಮಾಡಿದ ದಾನಕ್ಕೆ ವಿಶೇಷ ಫಲ ದೊರೆಯುತ್ತೆ ಅನ್ನೋ ನಂಬಿಕೆ ಇದೆ. ಹನುಮ ಶ್ರೀ ರಾಮನನ್ನು ಭೇಟಿಯಾದ ದಿನವಾದ ಇಂದು ಹನುಮಂತ ಬೇಡಿದ ವರವನ್ನು ಭಕ್ತರಿಗೆ ನೀಡುತ್ತಾನೆಂಬ ಪ್ರತೀತಿ ಇದೆ. ಹಾಗಾಗಿ ಇಂದು ಭಕ್ತರು ಏನೇ ಸಂಕಲ್ಪ ಮಾಡಿದರೂ ಅದು ಖಚಿತವಾಗಿ ಫಲಿಸುತ್ತದೆ ಅನ್ನೋ ನಂಬಿಕೆ ಇದೆ. ಈ ದಿನ ಹನುಮನ ದೇಗುಲಕ್ಕೆ ಹೋಗಿ ತುಳಸಿಯನ್ನು ಅರ್ಪಿಸಿದರೆ ಒಳಿತಾಗಲಿದೆ. ಹನುಮನ ಗುಡಿಯಲ್ಲಿ ನೀಡುವ ಕೇಸರಿಯನ್ನು ಹಣೆಗೆ ಇಟ್ಟುಕೊಂಡು ನಿಮಗಿರುವ ಸಮಸ್ಯೆಗಳು ದೂರಾಗಲೆಂದು ಸಂಕಲ್ಪ ಮಾಡಿಕೊಂಡು ಬಂದ್ರೆ ನಿಮಗಿರುವ ಸಕಲ ಸಂಕಷ್ಟಗಳು ದೂರಾಗುತ್ತವೆ ಎನ್ನಲಾಗುತ್ತದೆ.

*****


*
ಹಿಂದೂ ಪಂಚಾಗದ ಪ್ರಕಾರ, ಜೇಷ್ಠ ಭಾರತೀಯ ಕಾಲ ಗಣನೆಯ ಮೂರನೇ ಮಾಸ. ಪಾಲ್ಗುಣ ಮಾಸ ಮುಕ್ತಾಯವಾಗುತ್ತಿದ್ದಂತೆ ಸಕೆಯಾಗಲು ಪ್ರಾರಂಭವಾಗುತ್ತದೆ. ಜೇಷ್ಠ ಮಾಸವನ್ನು ಉಷ್ಣ ಮಾಸವೆಂದು ಕರೆಯುತ್ತಾರೆ. ಈ ತಿಂಗಳಲ್ಲಿ ಜಲ ಪೂಜೆ ಮಾಡಲಾಗುತ್ತದೆ. ಅಷ್ಟೆ ಅಲ್ಲದೆ ಜಲಕ್ಕೆ ಸಂಬಂಧಿಸಿದ ಎರಡು ಹಬ್ಬಗಳನ್ನೆ (ಗಂಗಾ ದಶಹರಾ, ನಿರ್ಜಲ ಏಕಾದಶಿ) ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ನೀರು ರಕ್ಷಣೆಗೆ ಮಹತ್ವ ನೀಡಲಾಗುತ್ತದೆ. ಜೇಷ್ಠ ಮಾಸದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗದರೆ ಬನ್ನಿ ಅದೇನು ಎಂದು ನೋಡೋಣ.
ಈ ರೀತಿ ಮಲಗಿದರೆ ರೋಗಕ್ಕೆ ಗುರಿಯಾಗುತ್ತಿರಿ

ಜೇಷ್ಠ ಮಾಸದಲ್ಲಿ ಹಗುಲು ಹೊತ್ತು ನಿದ್ರಿಸುವುದರಿಂದ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಅಷ್ಟೆ ಅಲ್ಲಗೆ ಮಧ್ಯಾಹ್ನದ ಸಮಯದಲ್ಲಿ ಸುತ್ತಾಡಲು ಹೋಗುವುದು ಸಹ ಸರಿಯಲ್ಲ.

ಇದರ ಸೇವನೆಯಿಂದ ದೋಷ

ಜೇಷ್ಠ ಮಾಸದಲ್ಲಿ ಬದನೆಕಾಯಿ ಸೇವಿಸುವುದರಿಂದ ದೋಷ ತಗಲುತ್ತದೆ. ಯಾರ ಜೇಷ್ಠ ಸಂತಾನ ಜೀವಂತವಾಗಿರುತ್ತದೆಯೋ ಅವರು ಈ ಮಾಸದಲ್ಲಿ ಬದನೆಕಾಯಿಯನ್ನು ತಿನ್ನಬಾರದು. ಬದನೆಕಾಯಿ ಸೇವನೆ ಸಂತಾನಕ್ಕೆ ಶುಭವಲ್ಲ ಎಂದು ನಂಬಲಾಗಿದೆ.

ಇವರ ವಿವಾಹ ಅಶುಭ

ಜೇಷ್ಠ ಮಾಸದಲ್ಲಿ ಜೇಷ್ಠ ಪುತ್ರ ಮತ್ತು ಪುತ್ರಿಯ ವಿವಾಹ ಮಾಡುವುದು ಶುಭವಲ್ಲ.
ಒಂದೇ ಹೊತ್ತಿನ ಊಟ

ಸಾಧ್ಯವಾದರೆ ಜೇಷ್ಠ ಮಾಸದಲ್ಲಿ ಒಂದೇ ಹೊತ್ತು ಭೋಜನ ಸೇವಿಸುವುದು ಒಳಿತು. ಮಹಾಭಾರತದ ಅನುಸಾರ, ಪರ್ವದಲ್ಲಿ ಬರೆದಿರುವಂತೆ, ಜೇಷ್ಠ ಮಾಸದಲ್ಲಿ ಒಂದೇ ಹೊತ್ತು ಊಟ ಮಾಡುವ ವ್ಯಕ್ತಿ ಧನವಂತನಾಗಿರುತ್ತಾನಂತೆ. ಅಷ್ಟೆ ಅಲ್ಲದೆ, ಇದರಿಂದ ವ್ಯಕ್ತಿಯ ಆರೋಗ್ಯಯೂ ಉತ್ತಮ ಸ್ಥಿತಿಯಲ್ಲಿರುತ್ತದೆ.

ಈ ಧಾನ್ಯ ಸೇವನೆಯಿಂದ ಸಾವು ದೂರ

ಜೇಷ್ಠ ಮಾಸದಲ್ಲಿ ಎಳ್ಳು ಸೇವಿಸುವುದು ಉತ್ತಮ. ಶಿವಪುರಾಣದಲ್ಲಿ ಹೇಳಿರುವಂತೆ, ಈ ಮಾಸದಲ್ಲಿ ಎಳ್ಳು ಸೇವಿಸುವುದರಿಂದ ಅಕಾಲಿಕ ಮರಣ ದೂರವಾಗುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ.

ಇವರ ಪೂಜೆಯಿಂದ ಫಲ

ಜೇಷ್ಠ ಮಾಸದಲ್ಲಿಯೇ ಹನುಮಂತ ಶ್ರೀರಾಮನನ್ನು ಭೇಟಿಯಾಗಿದ್ದು. ಹೀಗಾಗಿ ಹನುಮಂತನಿಗೆ ಜೇಷ್ಠ ಮಾಸವೆಂದರೆ ಬಲು ಇಷ್ಟ. ಈ ಮಾಸದಲ್ಲಿ ಶ್ರೀರಾಮನ ಜತೆ ಹನುಮಂತನನ್ನು ಪೂಜಿಸುವುದು ಫಲಕಾರಿಯಾಗುತ್ತದೆ.
****

ಜ್ಯೇಷ್ಠ ಮಾಸಕ್ಕೆ ಶ್ರೀತ್ರಿವಿಕ್ರಮರೂಪಿ ಪರಮಾತ್ಮನು ನಿಯಾಮಕ

🌺ಜ್ಯೇಷ್ಠಮಾಸದ ದಾನ -ಧರ್ಮಗಳು 🌺

ಜ್ಯೇಷ್ಠ ಮಾಸದಲ್ಲಿ ಕೊಡಬೇಕಾದ ದಾನಗಳು

ಉದಕುಂಬಾಂಬುದಾನಂ ಚ ತಾಲವೃಂತಂ ಸಚಂದನಂ  |
ತ್ರಿವಿಕ್ರಮಸ್ಯ  ಪ್ರೀತ್ಯರ್ಥಂ ಛತ್ರಂ ಚೋಪಾನಹಂ ತಥಾ  ದಾತವ್ಯಂ ಸರ್ವದಾ ರಾಜನ್ ||

ಜ್ಯೇಷ್ಠ ಮಾಸ ದಲ್ಲಿ ತ್ರಿವಿಕ್ರಮರೂಪಿ ಪರಮಾತ್ಮನ ಪ್ರೀತಿಗಾಗಿ  ಜಲದಾನ , ಉದಕುಂಭದಾನ, ಬೀಸಣಿಕೆ ದಾನ ,ಗಂಧದಾನ , ಪಾದರಕ್ಷ (ಚಪ್ಪಲಿ)ದಾನ, ಛತ್ರಿದಾನ, ಇವು ಗಳನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು.

ಜ್ಯೇಷ್ಠ ಮಾಸದಲ್ಲಿ ಬ್ರಾಹ್ಮಣರಿಗೆ ವಿಶೇಷವಾಗಿ ಮೊಸರು ಹಾಗೂ ಮೊಸರನ್ನವನ್ನು ದಾನ ಮಾಡಬೇಕು.  . ಇದರಿಂದ ಸಮಸ್ತ ದೇವತೆಗಳು ತೃಪ್ತರಾಗುವರು.ಶ್ರೀತ್ರಿವಿಕ್ರಮರೂಪಿ ಪರಮಾತ್ಮನು ಪ್ರೀತನಾಗುವನು. 
ಎಂದು ಜ್ಯೀಷ್ಠಮಾಸ ಮಹಾತ್ಮೆ ಯಲ್ಲಿ ಹೆಳಿದೆ.

ಜ್ಯೇಷ್ಠ ಮಾಸದಲ್ಲಿ ಅಶ್ವತ್ಥ, ವಟ, ತುಲಸಿ ಮುಂತಾದ ವೃಕ್ಷ ಗಳಿಗೆ ನೀರನ್ನು ಹಾಕಬೇಕು.

     || ಶ್ರೀಕೃಷ್ಣಾರ್ಪಾಣಮಸ್ತು ||

✍️ ಫಣೀಂದ್ರಕೌಲಗಿ

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
****

No comments:

Post a Comment