SEARCH HERE

Tuesday 1 January 2019

ಶ್ರಾವಣ ಮಾಸ ಮಹತ್ವ shravana masa importance




ಶ್ರಾವಣ ಮಾಸ ದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು 

ನಾಗ ಚೌತಿ (ಶುಕ್ಲ ಚೌತಿ)
ನಾಗ ಪಂಚಮಿ (ಶುಕ್ಲ ಪಂಚಮಿ)
ಪುತ್ರದಾ ಏಕಾದಶಿ(ಶುಕ್ಲ ಏಕಾದಶಿ)
ರಕ್ಷಾಬಂಧನ (ಹುಣ್ಣಿಮೆ)
ರಾಘವೇಂದ್ರ ಸ್ವಾಮಿಗಳ ಆರಾಧನೆ (ಕೃಷ್ಣ ಬಿದಿಗೆ)
ಗೋಕುಲಾಷ್ಟಮಿ (ಕೃಷ್ಣಪಕ್ಷ ಅಷ್ಟಮಿ)
ಅಜ ಏಕಾದಶಿ (ಕೃಷ್ಣ ಏಕಾದಶಿ)
ಕಲ್ಕಿ ಜಯಂತಿ
ಶ್ರೀ ವರಮಹಾಕ್ಷ್ಮೀ ಪೂಜೆ
ಮಂಗಳ ಗೌರಿ ವ್ರತ 
ಶ್ರಾವಣ ಶನಿವಾರ
ಋಗುಪಾಕರ್ಮ
ಯಜುರುಪಾಕರ್ಮ
ಶಿರಿಯಾಳ ಷಷ್ಠೀ
ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರಾವಣ ಮಾಸ ಆರಂಭ. ಈ ಅವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ.
ಪರಶಿವನಿಂದ ಬ್ರಹ್ಮ,ಬ್ರಹ್ಮನಿಂದ ದಕ್ಷ,ದಕ್ಷನಿಂದ ಮನು,ಮನುವಿನಿಂದ ರಾಜರು,ಪ್ರಜೆಗಳು,ಪ್ರಜೆಗಳಲ್ಲಿ, ಸ್ತ್ರೀ-ಪುರುಷರೆಂಬ ಎರಡು ವರ್ಗ, ಪ್ರಜೆಗಳುಸೌಖ್ಯದಿಂದ ಬಾಳಿ ಬದುಕಲೆಂದು ಇಳೆ, ಗಾಳಿ, ಮಳೆ, ನದಿ, ಬೆಟ್ಟ, ಪರ್ವತ, ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಸಕಲ ಸಂಪನ್ಮೂಲಗಳಿಂದ ಈ ಸಷ್ಟಿಯು ಸಮೃದ್ಧವಾಯಿತು.
ಬ್ರಹ್ಮನ ಮುಖದಿಂದ ಅವಿರ್ಭವಿಸಿದ ಋಗ್ವೇದ,ಸಾಮವೇದ, ಯಜುರ್ವೇದ, ಮತ್ತು ಅಥರ್ವಣವೇದ ಮುಂತಾದ ಚತುರ್ವೇದಗಳೂ, ಸಕ್ಯ, ಸಾಮೀಪ್ಯ, ಸಾರೂಪ್ಯ, ಸಾಯೂಜ್ಯವೆಂಬ ಚತುರ್ವಿಧ ಮೋಕ್ಷಗಳೂ ಹಾಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳೂ ಈ ಮಾನವನ ಸಾರ್ಥಕ ಬದುಕಿಗೆ ಅರ್ಥವನ್ನು ಕಲ್ಪಿಸಿದವು ಜನಜೀವನದ ಜೀವಾಳವೆಂದೆನಿಸಿರುವ ಭೌಗೋಳಿಕ ಪರಿಸರ,ಋತುಮಾನಗಳು, ಜೀವಿಗಳ ಬಾಹ್ಯಾಂತರ ಬದುಕಿನ ಮೇಲೆ ಆಗಾಧವಾದ ಪರಿಣಾಮ ಬೀರುತ್ತವೆಂಬುವುದು ವೈಜ್ಞಾನಿಕ ಸತ್ಯವಾದರೂ ಮಾನವ ಜೀವಿಯ ಆಂತರಿಕ ಪರಿಣಾಮಗಳಲ್ಲಿ ‘ಅಧ್ಯಾತ್ಮಿಕ’ ಪರಿಣಾಮವೂ ಒಂದಾಗಿದೆ ಎಂಬ ಮಾತು ಅಷ್ಟೇ ಸತ್ಯ. ಇದಕ್ಕೆ ವರ್ಷಾ ಋತುವಿನ ಶ್ರಾವಣ ಮಾಸವೇ ನಿದರ್ಶನವಾಗಿದ್ದು, ವರ್ಷದ ಎಲ್ಲ ಧಾರ್ಮಿಕ, ಅಧ್ಯಾತ್ಮಿಕ ವಿಧಿಗಳ, ಆಚರಣೆ ಈ ಶ್ರಾವಣ ಮಾಸವು ಮಾವು ಮೀಸಲಾಗಿರುವುದೇ ಮೂಲ ಕಾರಣವಾಗಿದೆ ಎಂದು ಹೇಳಬಹುದು. ‘ಋತುಗಳ ರಾಜ ವಸಂತ ಋತು’ ಹೇಗೋ ಹಾಗೇಯೇ ‘ಮಾಸಗಳ ರಾಜ ಶ್ರಾವಣ ಮಾಸ’ ಎನ್ನಬಹುದು. ಶ್ರಾವಣ ಮಾಸದಲ್ಲಿ ನಡೆಯುವ ಧರ್ಮಾಚರಣೆಯ ವಿಧಿ-ವಿಧಾನಗಳಾದ ಜಪ, ತಪ, ವ್ರತ, ನಿಯಮ, ಪೂಜಾನುಷ್ಠಾನ, ಪುರಾಣ ಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ್, ಪುಣ್ಯ-ಕ್ಷೇತ್ರಗಳ ದರ್ಶನ, ಯಜ್ಞ,ಯಾಗ,ಹೋಮ-ಹವನ ಮುಂತಾದವುಗಳಿಗೆ ಶ್ರಾವಣ ಮಾಸವೇ ಏಕೆ ಮೀಸಲಾಗಿದೆ ? ಈ ಮಾಸವನ್ನು ಹೊರತು ಪಡಿಸಿದ ಈ ಆಚರಣೆಗಳಿಗೆ ಸಾರ್ಥಕತೆ ಪ್ರಾಪ್ತವಾಗಲಾರದೆ ? ಎಂಬುದು ಇಂದಿಗೂ ಒಂದು ಸಾರ್ವಜನಿಕವಾದ ಪ್ರಶ್ನೆಯಾದರು ಅದನ್ನು ಬಲವಾಗಿ ಸಮರ್ಥಿಸಬಲ್ಲ ಆಧಾರ ಮತ್ತು ಸಕಾರಣಗಳಾಗಿವೆ.
ಮಾಸದ ಮಹತ್ವ
ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ 17 ನಕ್ಷತ್ರಗಳು ಮಂಗಳಕರವಾದ ಮಳೆಗೆರೆದು,ಧರೆಯ ಜನರಿಗೆ ಉನ್ನತ ಫಲಗಳನ್ನು ನೀಡುತ್ತಿದೆ. ಸಿರಿ ಸಂಪತ್ತು ವದ್ಧಿಗಾಗಿ ವರಲಕ್ಷ್ಮಿ ಮಹಾ ಪೂಜಾ ವ್ರತವಾದ ಸಂಪತ್ತು ಶುಕ್ರವಾರ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮದ್ಧಿ ನೀಡುವ ಶ್ರೀ ಸತ್ಯ ನಾರಾಯಣ ಪೂಜಾವ್ರತ,ಮಂಗಳಗೌರಿ ವ್ರತ, ವಿದ್ಯಾಬುದ್ಧಿ ವದ್ಧಿಗಾಗಿ ಶಾರದಾ(ಸರಸ್ವತಿ) ಮಹಾಪೂಜೆ, ನಾಡ ಹಬ್ಬ ನಾಗಪಂಚಮಿ (ನಾಗಚತುರ್ಥಿ) ನಾಗದೇವತೆಗೆ ಹಾಲೆರೆಯುವದು, ಸಹೋದರಿಯರ ರಕ್ಷಾಬಂಧನ, ಈ ಧರಯಲ್ಲಿ ದಶಾವತಾರಗಳನ್ನೆತ್ತಿ ದುರುಳ ದೈತ್ಯರನ್ನು ಸಂಹರಿಸಿದ ಶ್ರೀಹರಿಯು ಕಷ್ಣಾವತಾರವೆತ್ತಿದ ಪ್ರಯುಕ್ತ ಶ್ರೀಕಷ್ಣ ಜನ್ಮಾಷ್ಟಮಿ ಆಚರಣೆ ಮುಂತಾದ ವಿಧಿ ವಿಶೇಷಗಳಿಗೆ ಈ ಮಾಸವೇ ಪ್ರಧಾನವಾಗಿದೆ ಹಾಗೂ ಶ್ರವಣ ಸೋಮವಾರಕ್ಕೆ ಅಗ್ರ ಸ್ಥಾನವನ್ನು ಕಲ್ಪಿಸಲಾಗಿದ್ದು, ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ.

ಸಾರ್ಥಕ-ಶ್ರಾವಣದ ಪಾರಮಾರ್ಥ ಅರ್ಥ
ಶ್ರವ ಸವ್ರಿಸು-ಸುರಿಸು, ಶ್ರವಕ-ಸುರಿಸುವ ಈ ಶ್ರವಕವು-ಶ್ರಾವಕವಾಗಿ 27 ನಕ್ಷತ್ರಗಳು ಒಂದೇ ರೇಖೆಯಲ್ಲಿ ಬಂದು ಮಂಗಳಕರ ಫಲಗಳನ್ನು ಗರೆಯುವ ಮೂಲಕ ಶ್ರಾವಣವಾಗಿ ರೂಪಾಂತರ ಹೊಂದಿರಬಹುದು ಅಥವಾ ಶ್ರವಣ ಅಂದರೆ (ಆಲಿಸು)ಕೇಳುವುದು. ಸರ್ವಶ್ರೋತಗಳ ಶ್ರವಣೇಂದ್ರೀಯಗಳಿಗೆ ಯೋಗ್ಯವಾದ ಪಾರಮಾರ್ಥ ತತ್ತ್ವಧಾರೆಯನ್ನು ಶ್ರವಣ ಮಾಡಿಸುವ ಮಾಸವೇ ಶ್ರಾವಣ. ತತ್ತ್ವಪದ ಲಕ್ಷಣಗಳನ್ನು ಶೋಧಿಸಿದಾಗ ಅಶುದ್ಧ ಬುದ್ಧಿಯು ಶುದ್ಧವಾದ ನಂತರ ಗುರುಮುಖದಿಂದ ಉಪನಿಷತ್ ವಾಕ್ಯೆಗಳನ್ನು ಶ್ರವಣ ಮಾಡುವುದರಿಂದ ಅಪರೋಕ್ಷ ಜ್ಞಾನವಾಗುವುದು. ಆಗ ತಾನೆ ಪರಮಾತ್ಮನೆಂಬ ಭಾವವು ಸುಸ್ಥಿರವಾರವಾಗುವುದು. ಬಾನ(ಆಕಾಶದ)ಲ್ಲಿ ನೀಲಿ ಬೆರೆತಂತೆ ಸಾಗರದಲ್ಲಿ ಜಲಬಿಂದು ಸೇರಿ ಹೊದಂತೆ ಜೀವನು ಬ್ರಹ್ಮನಲ್ಲಿ ಲೀನನಾಗುತ್ತಾನೆ.
ಹೀಗೆ ಜೀವ-ಶಿವರ ಐಕ್ಯತ್ವ ಘಟಿಸುವುದು. ಮತ್ತು ಅತ್ಯಂತ ದು:ಖ ನಿವೃತ್ತಿ, ಪರಮಾನಂದ ಪ್ರಾಪ್ತಿಯಾಗುವುದು.ಇದು ಶ್ರವಣ ಮಾತ್ರದಿಂದ ಘಟಿಸುವುದು. ಅಂದರೆ ಪರೋಕ್ಷವಾಗಿ ಶ್ರಾವಣ-ಶ್ರವಣ-ಆಲಿಸು, ಆಲಿಸಿದಾಗಲೇ ಮುಕ್ತಿ ಎಂದರ್ಥ. ಆದ್ದರಿಂದ ಶ್ರಾವಣದಲ್ಲಿಯ ಶ್ರವಣ ಪದವು ಮೋಕ್ಷದಾಯಕವಾಗಿದೆ. ಶ್ರವಣ,ಮನನ, ನಿಧಿದ್ಯಾಸ, ಈ ನಿಧಿದ್ಯಾಸದ ಪ್ರತಿ ಓಲವೇ-ಸಮಾಧಿ.

ಇದೇ ಮುಕ್ತಿಯ ಸಾಮ್ರಾಜ್ಯವಾಗಿದೆ. ಆದ್ದರಿಂದ ಶ್ರಾವಣವು ಮುಕ್ತಿಯ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂಬ ಮಾತನ್ನು ಸಮರ್ಥಿಸುವಂತಿದೆ.
*****
ಮಾಸಗಳಲ್ಲೇ ಶ್ರಾವಣ ಮಾಸವು ಅತ್ಯಂತ ಪ್ರಮುಖ ಮಾಸವಾಗಿದೆ. ಈ ತಿಂಗಳಲ್ಲಿ ಶ್ರಾವಣ ಶಿವರಾತ್ರಿ ಪ್ರಮುಖವಾದುದಾಗಿದೆ. ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ನಮ್ಮದಾಗುತ್ತದೆ. ಶಿವನ ಆರಾಧನೆಯು ವ್ಯಕ್ತಿಯ ಮನಸ್ಸನ್ನು, ಇಂದ್ರೀಯವನ್ನು, ದೇಹವನ್ನು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ.
ಅನೇಕ ಧರ್ಮಗ್ರಂಥಗಳಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಹೇಳಲಾಗಿದೆ. ಶ್ರಾವಣ ತಿಂಗಳಲ್ಲಿ ಶಿವ ಭಕ್ತರು ಕಠಿಣ ಉಪವಾಸವನ್ನು ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ. ಶ್ರಾವಣ ಮಾಸ ಅತ್ಯಂತ ಪ್ರಮುಖವಾದುದ್ದು ಯಾಕೆಂದರೆ, ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು. ಮಂಥನದ ಸಮಯದಲ್ಲಿ ಸುಮಾರು 14 ವಿವಿಧ ರತ್ನಗಳು ಹೊರಹೊಮ್ಮುತ್ತದೆ ಅದರಲ್ಲಿ ಹಾಲಾಹಲ ಎನ್ನುವ ಕಾರ್ಕೋಟಕ ವಿಷವೂ ಕೂಡ ಒಂದು. ಹಾಲಾಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ ಕಲ್ಲೋಲವಾಗಲಾರಂಭಿಸಿತು ಆಗ ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನು ಸೇವಿಸುತ್ತಾನೆ. ಇದನ್ನು ಗಮನಿಸಿದ ಪಾರ್ವತಿಯು ಓಡಿ ಬಂದು ತನ್ನ ಪತಿಯ ಗಂಟಲನ್ನು ಬಿಗಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಕಂಠದಲ್ಲೇ ಉಳಿದುಕೊಳ್ಳುತ್ತದೆ ಅಂದಿನಿಂದ ಶಿವನನ್ನು ನೀಲಕಂಠ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.
ಮನೆಯಲ್ಲಾಗಿರಬಹುದು, ದೇವಾಲಯಗಳಲ್ಲಾಗಿರಬಹುದು ಪೂಜೆ, ವೃತ, ಭಜನೆಗಳಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಈ ತಿಂಗಳಲ್ಲಿ ಪ್ರತಿನಿತ್ಯವಾಗದಿದ್ದರೂ ಒಮ್ಮೆಯಾದರೂ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು. ಈ ತಿಂಗಳ ಪ್ರತಿದಿನವೂ ಧಾರ್ಮಿಕ ಮಹತ್ವವನ್ನು ಹೊಂದಿದೆ.

​ಶ್ರಾವಣದಲ್ಲಿ ಪ್ರತಿನಿತ್ಯದ ಪೂಜೆ ಹೀಗಿರಲಿ
ಸೋಮವಾರ: ಸೋಮವಾರದಂದು ಪರಶಿವನನ್ನು ತಪ್ಪದೇ ಆರಾಧಿಸಬೇಕು.
ಮಂಗಳವಾರ: ಮನೆಯಲ್ಲಿನ ಮಹಿಳೆಯರು ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಗೌರಿ ಪೂಜೆಯನ್ನು ಮಾಡಬೇಕು.
ಬುಧವಾರ: ಭಗವಾನ್‌ ವಿಷ್ಣು ಅಥವಾ ಕೃಷ್ಣನ ಇನ್ನೊಂದು ಅವತಾರವಾದ ವಿಠಲನನ್ನು ಈ ದಿನ ಆರಾಧಿಸಬೇಕು.
ಗುರುವಾರ: ಶ್ರಾವಣ ಮಾಸದ ಗುರುವಾರದಂದು ಬುಧ ಮತ್ತು ಗುರುವನ್ನು ಪೂಜಿಸಬೇಕು.
ಶುಕ್ರವಾರ: ಈ ದಿನ ಲಕ್ಷ್ಮಿ ಮತ್ತು ತುಳಸಿಯನ್ನು ಭಕ್ತಿಯಿಂದ ಪೂಜಿಸಿ.
ಶನಿವಾರ: ಶ್ರಾವಣ ಮಾಸದ ಈ ದಿನವನ್ನು ಶ್ರಾವಣ ಶನಿವಾರ ಅಥವಾ ಸಂಪತ್‌ ಶನಿವಾರವೆಂದು ಕರೆಯಲಾಗುತ್ತದೆ. ಈ ದಿನ ಸಂಪತ್ತನ್ನು ಪಡೆದುಕೊಳ್ಳಲು ಶನೇಶ್ವರನನ್ನು ಆರಾಧಿಸಬೇಕು.

​ಶ್ರಾವಣ ಮಾಸದಲ್ಲಿ ಪಠಿಸಬೇಕಾದ ಮಂತ್ರ

ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಶಿವ ಮಂತ್ರಗಳನ್ನು ಜಪಿಸಬೇಕು. 108 ಬಾರಿ ಈ ಮಂತ್ರಗಳನ್ನು ಅಥವಾ ಇದಕ್ಕೂ ಹೆಚ್ಚು ಬಾರಿ ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು. ಶ್ರಾವಣ ಮಾಸದಲ್ಲಿ ಬೆಳಗ್ಗೆ ಅಥವಾ ಸಂಜೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಅಥವಾ ದಿನನಿತ್ಯ ಕೂಡ ಮಂತ್ರವನ್ನು ಪಠಿಸಬಹುದು.

ಓಂ ನಮಃ ಶಿವಾಯ ||

ಮಹಾಮೃತ್ಯುಂಜಯ ಮಂತ್ರ:

ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ||

ರುದ್ರ ಗಾಯತ್ರಿ ಮಂತ್ರ:

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ

ತನ್ನೋ ರುದ್ರ ಪ್ರಚೋದಯಾತ್‌ ||

​ಶ್ರಾವಣ ಸೋಮವಾರದ ಉಪವಾಸ
ಶಿವ ಪುರಾಣದಲ್ಲೂ ಕೂಡ ಶ್ರಾವಣ ಮಾಸದ ಉಪವಾಸವನ್ನು ಉಲ್ಲೇಖಿಸಲಾಗಿದೆ. ಶಿವ ಪುರಾಣದ ಪ್ರಕಾರ, ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುವುದರಿಂದ ನಿಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಮತ್ತು ಶಿವನ ಆಶೀರ್ವಾದವು ನಿಮ್ಮದಾಗುತ್ತದೆ. ಶಿವ ಭಕ್ತರಿಗೆ ಶ್ರಾವಣ ಸೋಮವಾರ ಪ್ರಮುಖವಾದ ದಿನವಾಗಿದೆ. ಶ್ರಾವಣ ಸೋಮವಾರದ ಉಪವಾಸದಂದು ಶಿವ ಭಕ್ತರು ನೀರನ್ನು ಹೊರತುಪಡಿಸಿ ಬೇರಾವ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ. ಸೂರ್ಯಾಸ್ತದ ನಂತರ ಆ ವ್ಯಕ್ತಿಯು ಬೆಳ್ಳುಳ್ಳಿ ಮತ್ತು ಈರುಳ್ಳಿ ರಹಿತ ಆಹಾರವನ್ನು ಸೇವಿಸುವುದರ ಮೂಲಕ ಉಪವಾಸವನ್ನು ತೆಗೆದು ಹಾಕಲಾಗುತ್ತದೆ. ಇನ್ನು ಕೆಲವರು ಶ್ರಾವಣ ಸೋಮವಾರದ ಉಪವಾಸದಲ್ಲಿ ಹಣ್ಣುಗಳನ್ನು ಸೇವಿಸುತ್ತಾರೆ ಹಾಗೂ ರಾತ್ರಿ ಊಟವನ್ನು ಮಾಡುತ್ತಾರೆ. ಇನ್ನು ಕೆಲವರು ಉಪವಾಸದೊಂದಿಗೆ ಮೌನ ವ್ರತವನ್ನು ಕೂಡ ಮಾಡುತ್ತಾರೆ.

​ಶ್ರಾವಣ ಸೋಮವಾರದ ಉಪವಾಸದ ಉಪಯೋಗ
 
ಭಕ್ತರಿಗೆ ಆಧ್ಯಾತ್ಮಿಕ ಆಶೀರ್ವಾದವು ಲಭ್ಯವಾಗುತ್ತದೆ.
ವ್ಯಕ್ತಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಇಚ್ಛಾಶಕ್ತಿಯನ್ನು ಮತ್ತು ಸ್ಮರಣಾಶಕ್ತಿಯನ್ನು ಹೆಚ್ಚಿಸುತ್ತದೆ.
ಶ್ರಾವಣ ಸೋಮವಾರದಂದು ಮದುವೆಯಾಗದ ಕನ್ಯೆಯರು ಉಪವಾಸ ವ್ರತವನ್ನು ಕೈಗೊಂಡರೆ ಉತ್ತಮ ಪತಿಯನ್ನು ಪಡೆಯುತ್ತಾರೆ.
ಶ್ರಾವಣ ಸೋಮವಾರದ ಉಪವಾಸ ವ್ರತವು ನಕಾರಾತ್ಮಕ ಶಕ್ತಿಗಳನ್ನು ದೂರಾಗಿಸುತ್ತದೆ.
*******


ಶ್ರಾವಣ  ನಾಲ್ಕು ಶುಕ್ರವಾರದ ಕಥೆಯ ಹಾಡು.
ಶ್ರಾವಣ  ಮಾಸದಲ್ಲಿ  ಐದು ಶುಕ್ರವಾರ  ಬಂದರೆ ಶ್ರೇಷ್ಠ . ಸಂಜೆಯ  ಹೊತ್ತು  ಮಹಾಲಕ್ಷ್ಮಿಯನ್ನು  ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ  ಆನಂದಿಸುತ್ತಾರೆ  ಅದರಲ್ಲೂ ವಿಶೇಷವಾಗಿ  ಸಂಪತ್ ಶುಕ್ರವಾರ ಎಂದೇ ಪ್ರಖ್ಯಾತವಾಗಿರುವ  "ಸಂಪತ್ ಶುಕ್ರವಾರದ "ಹಾಡನ್ನು ಹೇಳಿ ಪೂಜಿಸುವರು.  ಸಂಪತ್ ಶುಕ್ರವಾರದ  ಪೂಜೆ ಸಾಮಗ್ರಿಗಳ ಪಟ್ಟಿ ಈ ರೀತಿ ಇದೆ :


ಸಂಪತ್  ಶುಕ್ರವಾರದ ಪೂಜೆ  ಸಾಮಾಗ್ರಿಗಳು :
ಹೂವು
ಹಣ್ಣುಗಳು -ನೈವೇದ್ಯಕ್ಕೆ
ವೀಳ್ಯದೆಲೆ -೫
ಅಥವಾ
ಮಾವಿನೆಲೆ -೫
ಗೆಜ್ಜೆವಸ್ತ್ರ
ಅರಸಿನ,ಕುಂಕುಮ ,ಚಂದ್ರ,ಗಂಧ ಮತ್ತು ಅಕ್ಷತೆ

 ಕಳಸದ ಪದಾರ್ಥಗಳು
ಒಂದು ಬೆಳ್ಳಿ ಚಂಬು ಅಥವಾ ತಾಮ್ರದ ಚಂಬು
ಒಂದು  ತಟ್ಟೆ
ಒಂದು ಅರಿಶಿನ ಕೊಂಬು
೨ ಬಟ್ಳಡಿಕೆ
೫ ಬಟ್ಟಲು ಅಕ್ಕಿ
ದಕ್ಷಿಣೆ
ಬಿಳಿ ಸುಣ್ಣ
ಬಳೆ  ಬಿಚ್ಚೋಲೆ
ಕರ್ಜೂರ ,ಒಣದ್ರಾಕ್ಷಿ ,ಬಾದಾಮಿ,ಕಲ್ಲುಸಕ್ಕರೆ,ಗೋಡಂಬಿ
ಅರಿಶಿನ ಕುಂಕುಮ  ಪಟ್ಟಣ

ಪಂಚಾಮೃತ ಅಭಿಷೇಕ :
ಹಾಲು, ಮೊಸರು ಸಕ್ಕರೆ,ಜೇನುತುಪ್ಪ,ತುಪ್ಪ ,ಹಣ್ಣುಗಳು


ನೈವೇದ್ಯ ಪದಾರ್ಥಗಳು :

ತಂಬಿಟ್ಟು
ಚಿಗಳಿ
ಕೋಸಂಬರಿಗಳು
ಪಲ್ಯಗಳು
ಅನ್ನ
ಹುಳಿ
ತೊವ್ವೆ
ಚಿತ್ರಾನ್ನ
ಆಂಬೋಡೆ
ಪಾಯಸ
ಸಂಡಿಗೆಗಳು
ಒಬ್ಬಟ್ಟು (ಯಥಾ ಶಕ್ತಿ ಏನಾದರೂ  ಮಾಡಬಹುದು ಆದರೆ ಈರುಳ್ಳಿ ,ಬೆಳ್ಳುಳ್ಳಿ  ಬಳಸಬಾರದು )
*******


2020 year.....

ಶ್ರಾವಣ ಮಾಸದ ಹಬ್ಬಗಳ ಆಚರಣೆ   ಕರೋನ ಮಧ್ಯೆ

 ಆಷಾಢ ಅಮಾವಾಸ್ಯೆಯ ನಂತರ ಇನ್ನೇನು ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಸಾಲು ಸಾಲು ಹಬ್ಬಗಳಿವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಶ್ರಾವಣಮಾಸದ ಹಬ್ಬಗಳಿಗೆ ವಿಶಿಷ್ಟ ಪ್ರಾಶಸ್ತ್ಯವಿದೆ. ಒಂದು ಕಡೆ ಕರೋನ ರಾಕ್ಷಸನ ರಣಕೇಕೆ, ಮತ್ತೊಂದೆಡೆ  ಹಬ್ಬಗಳು ಶುರುವಾಗಲಿವೆ.  ಈ ಸಲ ಆಡಂಬರವಿಲ್ಲದೆ ತುಂಬಾ ಸರಳವಾಗಿ ಮನೆಯಲ್ಲೇ ಹಬ್ಬಗಳನ್ನು ಆಚರಿಸೋಣ.( ಬೇರೆಯವರ ಮನೆಗೆ ಹೋಗದೆ) ಧಾಂ-ಧೂಂ ಎನ್ನದೆ ಮನೆಯಲ್ಲಿ ಏನೀರುವುದೋ  ಅದರಿಂದಲೇ ಪೂಜೆಗಳನ್ನು ಮಾಡುವುದು ಉತ್ತಮ.  

 ನಾಗರಪಂಚಮಿ, ಷಷ್ಠಿಗೆ ನಾಗರಕಟ್ಟೆ ಹುತ್ತಕ್ಕೆ ಹೋಗುವ ಬದಲು ಮನೆಯಲ್ಲಿರುವ ನಾಗಪ್ಪನ ವಿಗ್ರಹಕ್ಕೆ ಹಾಲು ಎರೆದು ಪೂಜೆ ಮಾಡಿ. ವರಮಹಾಲಕ್ಷ್ಮಿ ಹಬ್ಬಕ್ಕೆ ಪುರೋಹಿತರನ್ನು ಕರೆದರೆ ಅವರು ಇನ್ ಯಾರ ಯಾರ ಮನೆಗೆ ಹೋಗಿ ಬಂದಿರುತ್ತಾರೋ  ಏನೋ ಎಂಬ ಆತಂಕ ಬಿಟ್ಟು ಮೊಬೈಲ್ನಲ್ಲಿ ವ್ರತವನ್ನು ಡೌನ್ಲೋಡ್ ಮಾಡಿಕೊಂಡು ಮನೆಯಲ್ಲಿರುವ ಲಕ್ಷ್ಮಿ ವಿಗ್ರಹಕ್ಕೆ ಅಥವಾ ಫೋಟೋಗೆ  ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿ.   ಮುತ್ತೈದೆಯರನ್ನು ಕರೆದು  ಹರಿಶಿಣ ಕುಂಕುಮ ಕೊಡಬೇಕು ಎನ್ನುವ ಬದಲು  ಮಹಾಲಕ್ಷ್ಮಿಗೆ ತಾಂಬೂಲ ಬಳೆಯನ್ನು ನೀಡಿ ಆಶೀರ್ವಾದ ಪಡೆಯಿರಿ.
ಇನ್ನೂ ಗೌರಿ-ಗಣೇಶ ನನ್ನು ಹೊರಗಿನಿಂದ ತಂದು ಪೂಜಿಸುವವರು ಮನೆಯಲ್ಲೇ ಅರಿಶಿಣದ ಗೌರಿಯನ್ನು ಮಾಡಿ ಮನೆಯಲ್ಲೇ ಇರುವ ಗಣಪನಿಗೆ ಪೂಜೆ ಮಾಡಿ ಭಕ್ತಿಯಿಂದ ಭಜಿಸಿ. ಇನ್ನೂ ಬಾಗಿನಕ್ಕಾಗಿ ಮರ, ವಿಳೆದೆಲೆ, ಇನ್ನೊಂದು ಎನ್ನುವ ಬದಲು ಮನೆಯಲ್ಲಿ ಇರುವುದನ್ನೇ ಜೋಡಿಸಿ ಗೌರಿ ದೇವಿಗೆ ಬಾಗಿನವನ್ನು ನೀಡಿ ಗೌರಿ ಗಿಂತ ದೊಡ್ಡ ಮುತ್ತೈದೆಯೇ ? 


 ಕರೋನಾ (2020 ಮತ್ತು 2021) ಎಲ್ಲೆಡೆ ಕಬಂಧಬಾಹುವಿನ ಹಾಗೆ ಕೈಚಾಚಿ ವೇಗವಾಗಿ ಹರಡುತ್ತಿದೆ. ಇದಕ್ಕಾಗಿ ಹೂ ಹಣ್ಣು -ಹಂಪಲ ,ಮಾವಿನ ತೋರಣ ,ಬಾಳೆಕಂಬ ಎಂದೆಲ್ಲ ಹೊರ ಹೋಗುವುದರ ಬದಲು ಮನೆಯಲ್ಲಿ ಏನ್ ಇರುವುದೋ ಅದರಿಂದ ಮನಶ್ಯಾಂತಿ ಇಂದ ಪೂಜಿಸಿದರೆ ಒಳಿತು. ಏಕೆಂದರೆ ಕರೋನಾ ಯಾವ ಯಾವ ರೂಪದಲ್ಲಿ ಪ್ರವೇಶಿಸುವುದು ತಿಳಿಯದು .ದಯವಿಟ್ಟು ಎಲ್ಲರೂ ಎಚ್ಚರ ವಹಿಸಿ. ಈ ವರ್ಷ ಹೀಗೆ ಸರಳ ರೀತಿಯಲ್ಲಿ ಮಾಡಿದರೆ ಮುಂದಿನ ಬರುವ ವರ್ಷಗಳಲ್ಲಿ ವಿಜೃಂಭಣೆಯಿಂದ ಹಬ್ಬಗಳನ್ನು ಮಾಡಬಹುದು. ತಾಯಿ ವರಮಹಾಲಕ್ಷ್ಮಿಯನ್ನು ನಮ್ಮ ಭಾರತವನ್ನು ಕರೋನಾ ಮುಕ್ತವಾಗಿಸಲಿ ಎಂದು ವರ ಪ್ರಸಾದವನ್ನು ಬೇಡೋಣ .ಎಲ್ಲರಿಗೂ ಶುಭವಾಗಲಿ.
*********


ವೇದಾಚಲಹೃದ್ಭೂತಾಂ ಸುವರ್ಣಾಂ ಕೋSಸುವರ್ಣಯೇತ್/
ಅಂತಸೋದಹ್ಯಮಾನಸ್ಯ ಶ್ರಾವಯಂತೀಂ ಸ್ವನಂಜನಾನ್

ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ತಿಳಿಸಿದ ಮಾತಿನಂತೆ ಉಡುಪಿಯ ಸುವರ್ಣಾನದಿಯ ಸ್ನಾನ ಇಂದು ವಿಶೇಷದಿನವಾದ ಕೃಷ್ಣಾಂಗಾರ ಚತುರ್ದಶಿಯ ದಿನ ಹಿಂದಿನ ಕಾಲದಿಂದಲೂ ಆಚರಣೆ ಆಗ್ತಿರುವುದು ವಿಶೇಷ.  ಆದರೆ ಸಾಧ್ಯವಾಗದವರು ಸ್ನಾನದ ಸಮಯದಲಿ ಈ ಶ್ಲೋಕವನ್ನಾದರೂ ಭಕ್ತಿಯಿಂದ ತಮ್ಮ ತಮ್ಮ ಶಕ್ತ್ಯಾನುಸಾರ ಪಠಿಸಿ ಚಿಂತನೆ ಮಾಡುವಂತಾಗಲಿ.
**********

ಚೈತ್ರ ಮಾಸದ್ದೊಂದೇ ಅಲ್ಲ, ಯಾವುದೇ ಮಾಸದ ಕೃಷ್ಣ ಪಕ್ಷದ ಚತುರ್ದಶಿಯು ಮಂಗಳವಾರ ಬಂದರೆ ಅದು ಕೃಷ್ಣಾಂಗಾರ ಚತುರ್ದಶಿ ಎನಿಸುತ್ತದೆ.
ಆದಿನದ ಒಂದು ಸ್ನಾನದ ಬಗ್ಗೆ :

ವೇದಾಚಲಹೃದ್ಭೂತಾಂ ಸುವರ್ಣಾಂ ಕೋSನುವರ್ಣಯೇತ್|ಅಂಹಸೋ ದಹ್ಯಮಾನಸ್ಯ ಶ್ರಾವಯಂತೀಂ ಸ್ವನಂ ಜನಾನ್

ವೇದಾಚಲ ಎನ್ನುವ ಪರ್ವತದ ಮಧ್ಯಭಾಗದಿಂದ ಹುಟ್ಟಿ ಹರಿಯುವ,  ತನ್ನಲ್ಲಿ ಮುಳುಗಿ ಸ್ನಾನ ಮಾಡುವ ಜನರಿಗೆ ಅವರ ಪೂರ್ವಕೃತ ಪಾಪಗಳು ಸುಡುವಾಗ ಉಂಟಾಗುವ ಚಟಚಟ ಎಂಬ‌ ಧ್ವನಿಯನ್ನು ಕೇಳಿಸುವಂತೆ ಮಾಡುವ ಸುವರ್ಣಾ ನದಿಯನ್ನು ಯಾವನು ತಾನೇ ಸ್ತುತಿಸಬಲ್ಲನು? ಯಾರಿಂದಲೂ ಸುವರ್ಣಾನದಿಯ ಮಹಿಮೆಯನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಶ್ರೀವಾದಿರಾಜ ಗುರುಸಾರ್ವಭೌಮರು ತಮ್ಮ ತೀರ್ಥಪ್ರಬಂಧ ಗ್ರಂಥದಲ್ಲಿ ಉಡುಪಿಯಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿ ಹುಟ್ಟಿ ಹರಿಯುವ ನದಿಯನ್ನು ವರ್ಣಿಸುತ್ತಾರೆ. 


ವಿಶೇಷದಿನವಾದ ಕೃಷ್ಣಾಂಗಾರ ಚತುರ್ದಶಿಯ ಪರ್ವಕಾಲದಂದು ಅಂದರೆ ಯಾವ ಕೃಷ್ಣಪಕ್ಷದಲ್ಲಿ ಮಂಗಳವಾರ ಚತುರ್ದಶಿ ಬರುತ್ತದೆಯೋ ಆದಿನ  ಈ ನದಿಯಲ್ಲಿ ಸ್ನಾನ ಮಾಡಿ ಮುಳಗಿದಾಗ ನಮ್ಮ ಬೆನ್ನಿನಿಂದ ಪಾಪಗಳು ಸುಡುವ  ಚಟಚಟ ಎನ್ನುವ ಶಬ್ಧದ ಅನುಭವವಾಗುತ್ತದೆ. ಈ ಪರ್ವಕಾಲವಿದ್ದು ಸಿಗುವುದೇ ದುರ್ಲಭ.  ವರ್ಷಕ್ಕೆ ಒಂದೂ ಸಿಗುವುದಿಲ್ಲ.  ಆದರೆ ದೇಶದ ಈ ಕೊರೋನಾದ  ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋಗಿ ಸ್ನಾನ ಮಾಡುವ ಭಾಗ್ಯ ಈಸಲ ಯಾರಿಗೂ ಇಲ್ಲದಿರುವುದರಿಂದ ಶ್ರೀವಾದಿರಾಜರು ರಚಿಸಿ ವರ್ಣಿಸಿದ ಶ್ಲೋಕವನ್ನಾದರೂ ಭಕ್ತಿಯಿಂದ  ಪಠಿಸಿ, ಚಿಂತನೆ ಮಾಡಿದರೆ ಆ ಸ್ನಾನದ ಫಲ ಸಿಗುವುದರಲ್ಲಿ ಅನುಮಾನವೇ ಇಲ್ಲ. 🙏🙏
*****

ಶ್ರಾವಣಮಾಸದ ಮಹತ್ವ 🌷

               || ಭಾಗ-1 ||

ಶ್ರಾವಣಮಾಸದ ಧರ್ಮಗಳು

ಶ್ರಾವಣಮಾಸಕ್ಕೆ ಶ್ರೀಧರ ರೂಪಿ ಪರಮಾತ್ಮನು ನಿಯಾಮಕ ಶ್ರಾವಣಮಾಸದಲ್ಲಿ ಮಾಡಿದ ಭಗವನ್ಮಹಿಮೆಯು ಮಂತ್ರಸಿದ್ಧಿಯನ್ನು ಕೊಡುವುದರಿಂದಲೂ ಶ್ರಾವಣಮಾಸ ಎನಿಸಿದೆ .
ಈ ಶ್ರಾವಣ ಮಾಸದ ಯಾವ ದಿನವೂ ವ್ರತರಹಿತವಾಗಿಲ್ಲ. ಮತ್ತು ಎಲ್ಲ ತಿಥಿಗಳಲ್ಲೂ ಒಂದಿಲ್ಲೊಂದು ವ್ರತವು ಇದ್ದೇ ಇದೆ. 

ಶ್ರಾವಣಮಾಸ  ಪೂರ್ತಿಯಾಗಿ ಏಕಭುಕ್ತವ್ರತವನ್ನು ಮಾಡಬೇಕು.
ಎಂದರೆ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುವುದು. ಸಂಜೆ ಸುಮಾರು 4 ಘಂಟೆಯ ಹೊತ್ತಿಗೆ ಆಹಾರವನ್ನು  ಸ್ವಿಕರಿಸುವುದು ಮತ್ತೆ ಫಲಹಾರಾದಿ ಗಳನ್ನು ಸ್ವೀಕರಿಸಬಾರದು.

ಶ್ರಾವಣ ಮಾಸದಲ್ಲಿ ಶ್ರೀಧರರೂಪಿ ಪರಮಾತ್ಮನ ಪ್ರೀತಿಗಾಗಿ ಪ್ರತಿದಿನ ತುಪ್ಪ ,ಹಾಲು .ಹಣ್ಣುಗಳನ್ನು ಬ್ರಾಹ್ಮಣರಿಗೆ  ದಾನ ಮಾಡಬೇಕು.

  || ಶ್ರೀಕೃಷ್ಣಾರ್ಪಣಮಸ್ತು  ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ
***

ಶ್ರಾವಣಮಾಸದ ಮಹತ್ವ🌹🌷
                   || ಭಾಗ-2 ||

              || ಮಂಗಳಗೌರಿ ವ್ರತ ||

ವಿವಾಹಾ ನಂತರಂ ಪಂಚವರ್ಷಾಣಿ
ವ್ರತಮಾಚರೇತ್ |
ನಾಮಸ್ಯ ಮಂಗಳಗೌರೀ ವ್ರತಂ ಪಾಪಪ್ರಣಾಶನಮ್ ||

ಶ್ರಾವಣಮಾಸದಲ್ಲಿ ಬರುವ ನಾಲ್ಕು ಅಥವಾ ಐದು ಮಂಗಳವಾರಗಳಲ್ಲಿ ಈ ಮಂಗಳಗೌರಿವ್ರತವನ್ನು ಆಚರಿಸಬೇಕು .ನೂತನವಾಗಿ ವಿವಾಹವಾದ ಸ್ತ್ರೀಯರು ವಿವಾಹವಾದ ವರ್ಷದಿಂದಾರಂಭಿಸಿ  ಸತತವಾಗಿ ಐದು ವರ್ಷಗಳ ಕಾಲ ಈ ವ್ರತವನ್ನು ಆಚರಿಸಬೇಕು .

ಪ್ರಥಮೇ ವತ್ಸರೇ ಮಾತುಃ ಗೇಹೇ ಕರ್ತವ್ಯಮೇವ ಚ |
ತತೋ ಭರ್ತೃಗೃಹಂ ಕಾರ್ಯಮವಶ್ಯಂ ಸ್ತ್ರೀಭಿರಾದರಾತ್ ||

ವಿವಾಹವಾದ ಮೊದಲನೆಯ ವರ್ಷದಲ್ಲಿ ಈವ್ರತವನ್ನು ತಾಯಿಯ ಮನೆಯಲ್ಲಿಯೆ ಆಚರಿಸಬೇಕು .ನಂತರದ ವರ್ಷಗಳಲ್ಲಿ ಗಂಡನ ಮನೆಯಲ್ಲಿ ಆಚರಿಸಬೇಕು .

 ಶ್ರಾವಣಮಾಸದ ಶುಕ್ಲ ಪಕ್ಷದ ಮೋದಲ ಮಂಗಳವಾರದಂದು ವ್ರತವನ್ನು ಧಾರಣೆ ಮಾಡಬೇಕು .
ಪುಷ್ಪ ಮಂಡಪಿಕಾ ಕಾರ್ಯಾ ಕದಲಿ ಸ್ಥಂಭಮಂಡಿತಾ |
ನಾನಾವಿಧೈಃ ಪಲೈಶ್ಚೈವ ಪಟ್ಟ ಕೂಲೈಶ್ಚ ಭೂಷಯೇತ್ ||

ಮಂಗಳಗೌರಿಯನ್ನು ಕೂಡಿಸಲು ಬಾಳೆಯಕಂಬಗಳನ್ನು ಕಟ್ಟಿ ಹೂವಿನ ಮಂಟಪವನ್ನು ಸಿದ್ಧ ಪಡಿಸಿ  ಈ.ಮಂಟಪದ ಸುತ್ತಲೂ  ಮಾವಿನಸೂಪ್ಪಿನಿಂದ ತೋರಣವನ್ನು ಕಟ್ಟಬೇಕು. ಈ ಮಂಟಪದ ಸುತ್ತಲೂ , ಹಾಗೂ ಮಧ್ಯ ದಲ್ಲಿ ನಾನಾವಿಧವಾದ ಫಲಗಳನ್ನು ತೂಗುಬಿಟ್ಟು ರೇಷ್ಮೆ ಪರದೆಯನ್ನು ಕಟ್ಟಬೇಕು .
ಮಂಟಪದ ಮಧ್ಯೆ ಪೀಠದ ಮೇಲೆ ಬಾಳೆಯಎಲೆ ಅಥವ ಬೆಳ್ಳಿಯ ತಟ್ಟೆಯನ್ನಿಟ್ಟು ಅಕ್ಕಿಯನ್ನು ಹರಡಬೇಕು ಅದರ ಮೇಲೆ ಸುವರ್ಣ, ರಜತ ,ತಾಮ್ರಗಳಿಂದ ನಿರ್ಮಿಸಿದ ಮಂಗಳಗೌರಿಯ ಪ್ರತಿಮೆಯನ್ನಿಡಬೇಕು. ಮತ್ತುಗೋಪುರಾಕಾರ ದಲ್ಲಿ  ಅರಿಷಿಣ ದಿಂದ ತಯಾರಿಸಿದ ಮಂಗಳಗೌರಿಯನ್ನುಸ್ಥಾಪಿಸಬೇಕು ಕಲಶವನ್ನು  ಸ್ಥಾಪಿಸಿ ಕನ್ನಡಿಯನ್ನು ಮುಂದೆಇಡಬೇಕು ಐದು ಕಣಗಳನ್ನು ಇಟ್ಟು ಪೂರ್ಣಫಲವಾದ ತೆಂಗಿನಕಾಯಿಯನ್ನು ಬದಿಯಲ್ಲಿಡಬೇಕು. 

ಉಪಚಾರೈಃ ಷೋಡಶಭಿರ್ಮಂಗಲಾಗೌರಿ ಸಂಜ್ಞಿತಾಮ್ |
ದೂರ್ವಾದಲೈಃ ಷೋಡಶಭಿರಪಾಮಾರ್ಗದಲೈಸ್ತಥಾ ||
ತಾವತ್ಸಂಖ್ಯೈಸ್ತಂಡುಲೈಶ್ಚ  ಚಣಕಾನಾಂ ಶಕಲೈಸ್ತಥಾ |
ಷೋಡಶೋನ್ಮಿತವರ್ತೀಭಿಸ್ತಾವದ್ದೀಪಾಂಶ್ಚ ದೀಪಯೇತ್ ||
ದಧ್ಯೋದನಂ ಚ ನೈವೇದ್ಯಂ ತತ್ರ ಭಕ್ತ್ಯಾ ಪ್ರಕಲ್ಪಯೇತ್ |
ಸಮೀಪಂ ಸ್ಥಾಪಯೇದ್ದೇವ್ಯಾ ದೃಷದಂ ಚೋಪಲಂ ತಥಾ ||
ಏವಂ ಕೃತ್ವಾ ತು ಪಂಚಾಬ್ದಂ ತತ ಉದ್ಯಾಪನಂ    ಚರೇತ್ ||

ಮಂಗಳಗೌರಿ ಯನ್ನು ಷೋಡಶೋಪಚಾರಗಳಿಂದ
ಪೂಜಿಸಬೇಕು. ಮಂಗಳಗೌರಿಗೆ.ಪ್ರಿಯವಾದ ಆಪಮಾರ್ಗ(ಉತ್ತರಾಣಿದದಳಗಳಿಂದ )ಹಾಗೂ 16 ಗರಿಕೆಗಳಿಂದ ಹಾಗೂ ಅಷ್ಟೇಸಂಖ್ಯೆಯ  ಅಕ್ಕಿಕಾಳುಗಳಿಂದಲೂ 16ಕಡಲೆಬೇಳೆಗಳಿಂದಲೂ  ಮಂಗಳಗೌರಿಯನ್ನು  ಪೂಜಿಸಬೇಕು .  ನೈವೇದ್ಯಕ್ಕಾಗಿ ಅಕ್ಕಿ ಕಡಲೆಬೇಳೆ ಇವು ಪೂಜೆಯಲ್ಲಿರಬೇಕು ಆದ್ದರಿಂದಲೇ ಅಕ್ಕಿಯನ್ನು ಹರಡಿ ಪ್ರತಿಮೆಯನ್ನು ಕೂಡಿಸುವುದು . ದೇವಿಯ ಮುಂದೆ 
ಹದಿನಾರು ಬತ್ತಿಯಿಂದ ಒಂದು ದೀಪವಾಗಲೀ,  ಹದಿನಾರು ಪ್ರತ್ಯೇಕ ದೀಪಗಳನ್ನಾಗಲೀ ಹಚ್ಚಬೇಕು. ದೇವಿಗೆ   ಭಕ್ತಿಯಿಂದ ಮೊಸರನ್ನವನ್ನು   ನೈವೇದ್ಯ ಮಾಡಬೇಕು ಮತ್ತು ಕೊಸಂಬರಿ ನೈವೇದ್ಯ ಮಾಡುವುದು  ಪದ್ದತಿಯಲ್ಲಿದೆ .

ಮಂಗಳಗೌರಿಯ ಎರಡೂ ಬದಿಯಲ್ಲಿ ಹದಿನಾರು ಹದಿನಾರು ವಿಳೆದೆಲೆಯಲ್ಲಿ ಕೊಬ್ಬರಿಬಟ್ಟಲು ಇರಿಸಿ ಅದರಲ್ಲಿ ಹದಿನಾರು  ಬಟ್ಟಲ ಅಡಿಕೆ ಹಾಕಬೇಕು. ಹದಿನಾರು ತಂಬಿಟ್ಟಿನ ದೀಪದ ಆರತಿಮಾಡಿ  ವ್ರತಕಥೆ ಯನ್ನು ಓದಬೇಕು ಅಥವಾ ಕೇಳುತ್ತ ಕಾಡಿಗೆ ಹಿಡಿಯಬೇಕು. ಅದನ್ನು ಸುವಾಸಿನಿಯರಿಗೆ ಕೊಟ್ಟು ತಾನೂ ಹಚ್ವಿಕೊಳ್ಳಬೇಕು.

ಶ್ರಾವಣಮಾಸದ ಪ್ರತಿ ಮಂಗಳವಾರ ಬಾಗಿಣವನ್ನು ದೇವಿಗೆ ಅರ್ಪಿಸಿ ಅದನ್ನು ತನ್ನ ತಾಯಿಗೆ ಮತ್ತು ಸುವಾಸಿನಿಸ್ತ್ರಿಯರಿಗೆ ಬಾಗಿಣವನ್ನು ಕೊಡಬೇಕು . ಐದು ವರ್ಷ ಪೂಜೆ ಮುಗಿದ ಮೇಲೆ ಉದ್ಯಾಪನೆಯನ್ನು ಮಾಡಿ ಉದ್ಯಾಪನೆಯ ಕಾಲದಲ್ಲಿ ತಾಯಿಗೆ ಬಾಗಿನ ಕೊಡುವುದು ಪದ್ಧತಿ. ಸುವರ್ಣ ಅಥವಾ ಬೆಳ್ಳಿ ಪ್ರತಿಮೆಯನ್ನು ಮಾಡಿಸಿ ಪೂಜಿಸಿ, ನಂತರ  ತಮ್ಮ ಶಕ್ತ್ಯಾನುಸಾರ ಬೆಳ್ಳಿ ಬಂಗಾರ ತಾಮ್ರ ಕಂಚು ಮೊದಲಾದ ಧಾತುಗಳಿಂದ ತಯಾರಿಸಿದ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ಸೀರೆ-ಕುಪ್ಪಸ, ಬಳೆಗಳು, ಕಾಡಿಗೆ, ಗಂಗಾವನ(ಚೌರಿ), ಕಾಲುಂಗುರ, ತಾಳಿ ಇತರ ಸಾಮಗ್ರಿಗಳನ್ನು ಇಟ್ಟು ದಾನ ಮಾಡಬೇಕು. ಹದಿನಾರು ಜನಕ್ಕೆ ಕಡಿಮೆ ಆಗದಂತೆ ಸುವಾಸಿನಯರಿಗೆ ಭೋಜನ ಮಾಡಿಸಬೇಕು. ಈ ರೀತಿ ಮಂಗಳಗೌರಿ ವ್ರತವನ್ನು ಸ್ತ್ರೀ ಯರು ಆಚರಿಸುವುದರಿಂದ ಅವರ ಮನೋರಥಗಳೆಲ್ಲವೂ ಶೀಘ್ರವಾ ಗಿ ನೆರವೇರುತ್ತದೆ . ಎಂದು  ಶ್ರಾವಣಮಾಸ ಮಹಾತ್ಮೆ ಯಲ್ಲಿ  ರುದ್ರ ದೇವರು ಸನತ್ಕುಮಾರರಿಗೆ ತಿಳಿಸಿದ್ದಾರೆ.

ಸೂಚನೆ- ದಧಿವ್ರತದಲ್ಲಿ ಮೊಸರನ್ನ ನೈವೇದ್ಯ ಮಾಡಬಾರದು

         || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***

ಶ್ರಾವಣಮಾಸದ ಮಹತ್ವ🌹🌷
            || ಭಾಗ-3| |

      ಬುಧ -ಬೃಹಸ್ಪತಿ ವ್ರತ

ಶ್ರಾವಣಮಾಸದ ಬುಧವಾರ ಮತ್ತು ಗುರುವಾರಗಳಂದು ಬುಧ -ಬೃಹಸ್ಪತಿ ಗಳ ಪೂಜೆಯನ್ನು ಮಾಡಬೇಕು.

ಶ್ರಾವಣೇಮಾಸಿ ಸಂಪ್ರಾಪ್ತೇ ಶಂಕರಸ್ಯ ಮಹಾಪ್ರೀಯೇ |
ಭುಧಗುರ್ವೋರ್ವಾಸರಯೋರ್ಯೇ ಕರಿಷ್ಯಂತಿ ಪೂಜನಂ ಸತ್ಯಂ ಸತ್ಯಂ   ನ ಸಂಶಯಃ |
ನೈವೇದ್ಯಂ ದಧಿಭಕ್ತೇನ ಸಾಧನೇ ಭವೇತ್ ||

ರುದ್ರದೇವರಿಗೆ ಪ್ರೀಯವಾದ ಈ ಶ್ರಾವಣಮಾಸದಲ್ಲಿ ಬುಧ -ಬೃಹಸ್ಪತಗಳಿಬ್ಬರನ್ನು
ಒಟ್ಟಿಗೆ ಪೂಜಿಸಿ ಮೊಸರನ್ನವನ್ನು ನೈವೇದ್ಯ ಮಾಡಬೇಕು ಇದರಿಂದ ಇಷ್ಟಾರ್ಥಗಳು ಸಿಧ್ಧಿಸುತ್ತದೆ  .

ಸ್ತ್ರೀಯರು ತೂಟ್ಟಿಲ ಮೇಲ್ಭಾಗದಲ್ಲಿ  ಬುಧ-ಬೃಹಸ್ಪತಿ ಗಳ ಚಿತ್ರ ಬರೆದು ಪೂಜಿಸಿದರೆ  ಅವಳಿಗೆ ಸದ್ಗುಣಿಯಾದ ದಿರ್ಘಾಯುಷಿಯಾದ ಪುತ್ರನು ಜನಿಸುವನು ಪಾಕಶಾಲೆ.(ಅಡಿಗೆ ಮನೆ)ಯಲ್ಲಿ ಬರೆದು ಪೂಜಿಸದರೆ ಪಾಕವೃದ್ಧಿಯಾಗುವುದು ದೇವರ ಮನೆಯಲ್ಲಿ ಬರೆದು ಪೂಜಿಸಿದರೆ ದೇವತಾನುಗ್ರಹವಗುತ್ತದೆ.
ಧಾನ್ಯಾಗಾರದಲ್ಲಿ ಬರೆದು ಪೂಜಿಸದರೆ ಧಾನ್ಯಗಳ ವೃದ್ಧಿ ಯಾಗುವುದು ಕೋಶಾಗಾರದಲ್ಲಿ ಬರೆದು ಪೂಜಿಸಿದರೆ ಕೋಶವು ವರ್ಧಿಸುತ್ತದೆ ..ಈ ಪ್ರಕಾರ ಸ್ಥಾನ ಭೇದದಿಂದ ಅಲ್ಲಲ್ಲಿ ಅಭಿವೃದ್ಧಿಯಾಗಿ ಉತ್ತಮ ಫಲವು ಸಿಗುವುದು. ಬ್ರಾಹ್ಮಣರಿಗೆ ಭೋಜನಮಾಡಿಸಿ ಮೊಸರನ್ನವನ್ನು ಬಡಿಸಬೇಕು ಇದರಿಂದ ಬುಧನು ಜ್ಞಾನವನ್ನು ಗುರುವು ಗುರುತ್ವವನ್ನು (ಮತ್ತೊಬ್ಬರಿ ಗೆ ಪಾಠಹೇಳುವ ಸಾಮರ್ಥ್ಯವನ್ನು )ನೀಡುವರು
ಬುಧಸ್ತು ಬುಧತಾಂ ದಧ್ಯಾತ್ ಗುರುಸ್ತು ಗುರುತಾಂ ತಥಾ |
ಈ ಬುಧ -ಗುರು ವ್ರತವನ್ನು ಏಳು ವರ್ಷಗಳ ಕಾಲ ಆಚರಿಸಿದರೆ ಪುತ್ರ ಪೌತ್ರಾದಿ ಸಂಪತ್ತುಗಳು ವೃದ್ಧಿ ಸುವುವು .
ಸ್ವ ಸ್ರೀಯ ಮಾತುಲೌ ತೇನ ಭೋಜನೀಯೌ ಪ್ರಯತ್ನತಃ |
ಈ ದಿನ ವ್ರತಮಾಡಿ ‌‌‌ ಸೋದರಮಾವ ಮತ್ತು‌ ಸೋದರಅಳಿಯಂದಿರನ್ನು ಕರೆದು ಭೋಜನ ಮಾಡಿಸಬೇಕು. ಎಂದು ರುದ್ರ ದೇವರು ಸನತ್ಕುಮಾರರಿಗೆ ಶ್ರಾವಣಮಾಸ ಮಹಾತ್ಮೆ ಯಲ್ಲಿ ತಿಳಿಸಿದ್ದಾರೆ.

ಸೂಚನೆ-ದಧಿವ್ರತದಲ್ಲಿ ಮೊಸರನ್ನ ನೈವೇದ್ಯ. ಮಾಡಬಾರದು ಬುಧ ಬೃಹಸ್ಪತಿವ್ರತದಲ್ಲಿ  ರೊಟ್ಟಿನೈವೇದ್ದ ಮಾಡುವ ಸಂಪ್ರದಾಯವಿದೆ

         || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀ ದಶಪ್ರಮತಿ ವ್ರತಾನುಷ್ಠಾನ ಚಿಂತನ
****


ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ...!

ಶ್ರಾವಣವು ಪವಿತ್ರವಾದ ಮಾಸ, ಧಾರ್ಮಿಕ ಕಾರ್ಯಗಳಿಗೆ, ಭಗವಂತನ ಒಲುಮೆಯನ್ನು ಪಡೆಯಲು ಪ್ರಶಸ್ತವಾದ ಕಾಲವಾಗಿದೆ. ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ವರ ಮಹಾಲಕ್ಷ್ಮೀ ವ್ರತ ಹೀಗೆ ಅನೇಕ ಹಬ್ಬ ಮತ್ತು ವ್ರತಗಳನ್ನು ಆಚರಿಸುವ ಪುಣ್ಯಕಾಲ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ ಪುಣ್ಯಫಲವನ್ನು ಹೊಂದಬಹುದಾಗಿದೆ. ಈ ಶ್ರಾವಣ ಮಾಸದ ಮಹತ್ವದ ಬಗ್ಗೆ ತಿಳಿಯೋಣ.

ಹಿಂದೂ ಪಂಚಾಂಗದ ಐದನೆಯ ಮಾಸವಾದ ಶ್ರಾವಣ ಮಾಸವು ಮಾಸಗಳಲ್ಲೇ ಹೆಚ್ಚು ಪವಿತ್ರವೆಂಬ ಮಾನ್ಯತೆ ಪಡೆದಿದೆ. ಪವಿತ್ರವಾದ ಈ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದಲ್ಲದೆ, ಬೇಡಿದ್ದನ್ನು ಕೊಡುವ ಶಿವನ ಕೃಪೆ ಸಂಪೂರ್ಣ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ.

ಧಾರ್ಮಿಕ ಕಾರ್ಯಗಳು, ಹಬ್ಬಗಳು ಸಾಲು ಸಾಲಾಗಿ ಬರುವ ಮಾಸ ಶ್ರಾವಣ. ಈ ಮಾಸದ ಎಲ್ಲಾ ದಿನಗಳೂ ಶುಭವೇ ಆಗಿದೆ. ಅಷ್ಟೇ ಅಲ್ಲದೆ, ಮೊದಲನೆಯ ಬಾರಿಗೆ ಯಾವುದಾದರೂ ಕೆಲಸವನ್ನು ಆರಂಭಿಸಲು ಇದು ಪ್ರಶಸ್ತವಾದ ತಿಂಗಳು ಎಂದೇ ಹೇಳಬಹುದು.
  
ಶ್ರಾವಣ ಸೋಮವಾರ
ಈ ಮಾಸದ ಪ್ರತಿ ಸೋಮವಾರವು ಶ್ರಾವಣ ಸೋಮವಾರವೆಂದೇ ಪ್ರಸಿದ್ಧಿ. ಶ್ರಾವಣ ಸೋಮವಾರ ವ್ರತದ ಹಿಂದೆಯೂ ಅನೇಕ ಪುರಾಣ ಕಥೆಗಳಿವೆ. ಅಂದು ಎಲ್ಲಾ ಶಿವ ದೇವಾಲಯಗಳಲ್ಲಿ ಹಾಲಿನ ಅಭಿಷೇಕ ಮತ್ತು ಬಿಲ್ವಾರ್ಚನೆಗೆ ಆದ್ಯತೆ ನೀಡಲಾಗುತ್ತದೆ. ಶ್ರಾವಣ ಸೋಮವಾರದ ವ್ರತವನ್ನು ಮಾಡುವವರು, ಆ ದಿನ ಶಿವನ ಪೂಜೆ, ಧ್ಯಾನಗಳನ್ನು ಮಾಡುತ್ತಾ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ.  

ಶ್ರಾವಣದಲ್ಲಿ ಶಿವನನ್ನೇ ಆರಾಧಿಸುವುದೇಕೆ?

ಪುರಾಣ ಕಾಲದಲ್ಲಿ ಸಮುದ್ರ ಮಂಥನವಾದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುತ್ತಿದ್ದರು. ಆಗ 14 ಬೇರೆ ಬೇರೆ ರತ್ನಗಳು ಮೇಲೆದ್ದು ಬರುತ್ತವೆ. ಹದಿಮೂರು ರತ್ನಗಳನ್ನು ದೇವತೆಗಳು ದಾನವರು ಹಂಚಿಕೊಳ್ಳುತ್ತಾರೆ, ಉಳಿದ ಒಂದು ರತ್ನವೇ ಹಾಲಾಹಲ. 
ಇಡೀ ಪೃಥ್ವಿಯನ್ನೇ ನಾಶಮಾಡುವ ಶಕ್ತಿಯಿರುವ ಹಾಲಾಹಲವನ್ನು ಶಿವ ಕುಡಿಯುತ್ತಾನೆ, ಪಾರ್ವತಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಶಿವನಿಗೆ ನೀಲಕಂಠನೆಂಬ ಹೆಸರು ಬರುತ್ತದೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಶ್ರಾವಣ ಮಾಸದಲ್ಲಿ ಆದ ಕಾರಣ ಈ ಮಾಸದಲ್ಲಿ ಶಿವನನ್ನು ಆರಾಧಿಸುವುದು.  

ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಧಾರಣೆ
ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಕೃಪೆಯನ್ನು ಪಡೆಯಬಹುದು. ರುದ್ರಾಕ್ಷಿಯಿಂದ ಅನೇಕ ಲಾಭಗಳಿದ್ದು, ಅದನ್ನು ಧರಿಸುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ. ನೆಮ್ಮದಿ, ಸ್ವಾಸ್ಥ್ಯ ಮತ್ತು ಶಿವನ ಒಲುಮೆಗಾಗಿ ರುದ್ರಾಕ್ಷಿಯನ್ನು ಧರಿಸುವುದಾಗಿದೆ. ಅದರಲ್ಲೂ ಶಿವನ ಆರಾಧನೆಗೆ ಪ್ರಶಸ್ತವಾದ ಶ್ರಾವಣ ಮಾಸದಲ್ಲಿ ರುದ್ರಾಕ್ಷಿಯನ್ನು ಧರಿಸಿದರೆ ಉತ್ತಮ. ಶ್ರಾವಣ ಸೋಮವಾರವು ಶಿವನ ಪೂಜೆ ಮತ್ತು ಆರಾಧನೆಗೆ ಅತಿ ಪುಣ್ಯದಿನ. ಹಾಗಾಗಿ ಅಂದು ರುದ್ರಾಕ್ಷಿಯನ್ನು ಧರಿಸಿದರೆ ಪುಣ್ಯಫಲ ಪಡೆಯುವುದಲ್ಲದೇ, ಶಿವನನ್ನು ಪ್ರಸನ್ನಗೊಳಿಸಿಕೊಳ್ಳಬಹುದಾಗಿದೆ.

ಶ್ರಾವಣ ಮಾಸದಲ್ಲಿ ಮಾಡುವ ಆಚರಣೆಗಳು
- ಪುಣ್ಯ ಸಂಪಾದನೆಗೆ ಶ್ರಾವಣ ಮಾಸವು ತುಂಬಾ ಉತ್ತಮವಾದ ಸಮಯ. ಈ ಮಾಸದಲ್ಲಿ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಪುಣ್ಯ ಲಭಿಸುತ್ತದೆ.

- ಶ್ರಾವಣ ಮಾಸದಲ್ಲಿ ಶಿವನಿಗೆ ಹಾಲಿನಿಂದ ಅಭಿಷೇಕ ಮಾಡುವುದರಿಂದ ಪುಣ್ಯ ಲಭಿಸುವುದಾಗಿ ಪುರಾಣ ಹೇಳುತ್ತದೆ.

- ರುದ್ರಾಕ್ಷಿ  ಜಪಮಾಲೆಯಿಂದ ಶಿವನ ಜಪ ಮಾಡುವುದರಿಂದ ಉತ್ತಮ ಫಲಪ್ರಾಪ್ತಿಯಾಗುತ್ತದೆ.

- ವಿಭೂತಿಯಿಂದ ಶಿವನನ್ನು ಆರಾಧಿಸಿದರೆ ಶುಭ ಉಂಟಾಗುತ್ತದೆ.

- ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯ ಮಿಶ್ರಣದಿಂದ ಪಂಚಾಮೃತವಾಗುತ್ತದೆ. ಈ ಪಂಚಾಮೃತದಿಂದ ಹರನಿಗೆ ಅಭಿಷೇಕ ಮಾಡುವುದರ ಜೊತೆಗೆ ಬಿಲ್ವಪತ್ರೆಗಳಿಂದ ಅರ್ಚನೆ ಮಾಡಿದರೆ, ಶಿವ ಸಂತುಷ್ಟನಾಗಿ ಬೇಡಿದ್ದನ್ನು ನೀಡುತ್ತಾನೆ.

- ಶಿವ ಚಾಲೀಸವನ್ನು ಪಠಿಸಿ, ಶಿವನಿಗೆ ಆರತಿ ಮಾಡಿದರೆ ಒಳ್ಳೆಯದು.

- ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿಸುವುದರಿಂದ ಮನೆಗೆ ಒಳಿತಾಗುತ್ತದೆ. ಈ ಮಾಸದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಹೆಚ್ಚು ಶ್ರೇಯಸ್ಕರವಾಗಿದೆ.

- ವಿವಾಹಾಪೇಕ್ಷಿತ ಕನ್ಯೆಯರು ಉತ್ತಮ ವರನನ್ನು ಪಡೆಯಲು ಶ್ರದ್ಧಾ-ಭಕ್ತಿಯಿಂದ ಶ್ರಾವಣ ಸೋಮವಾರ ವ್ರತವನ್ನು ಪಾಲಿಸಿ, ನಿಯಮದಂತೆ ಉಪವಾಸವನ್ನು ಆಚರಿಸಿದರೆ ಶುಭಫಲ ದೊರೆಯುವುದರಲ್ಲಿ ಸಂಶಯವಿಲ್ಲ.

ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ
ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತಗಳು ಸಹ ಶ್ರಾವಣ ಮಾಸದಲ್ಲಿ ಶುಭಫಲ ನೀಡುವ ವ್ರತಗಳಾಗಿವೆ. ಈ ವ್ರತಗಳನ್ನು ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುವುದಾಗಿ ಪುರಾಣದಲ್ಲಿ ಹೇಳಲಾಗಿದೆ. ಸಂತಾನ ಪ್ರಾಪ್ತಿ, ಸುಖ- ಸಂಪತ್ತು, ಧನ-ಧಾನ್ಯ ಸಮೃದ್ಧಿ, ಸೌಭಾಗ್ಯ ಸ್ಥಿರವಾಗಿರಲು ಈ ವ್ರತಗಳನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿ ಮತ್ತು ಉಪಾಕರ್ಮವು ಇದೇ ಮಾಸದಲ್ಲಿ ಬರುವ ಹಬ್ಬವಾಗಿದೆ.
****


ನಾಗರ ಪಂಚಮಿ ಆ ಪ್ರಯುಕ್ತ ಈ ಮಾಹಿತಿ

ಶ್ರೀ ನಾಗರಾಜ ದೇವರ ಅಷ್ಟೋತ್ತರ ಅಥವಾ ಸರ್ಪರಾಜ ಅಷ್ಟೋತ್ತರದ ಮಹತ್ತ್ವಗಳು

ಶ್ರೀ ಸರ್ಪರಾಜ ಅಷ್ಟೋತ್ತರ ಬಲು ಅಪರೂಪ ಮತ್ತು ವಿಶೇಷವಾದದ್ದು, ಪವಿತ್ರವಾದದ್ದು, ತುಂಬಾ ಶಕ್ತಿಯುತವಾದದ್ದು..

ಪರಮ ಪವಿತ್ರವಾದ ಶ್ರೀ ಸರ್ಪರಾಜ ದೇವರ ಅಷ್ಟೋತ್ತರದಲ್ಲಿ ಮಹಾವಿಶೇಷವಾದ ಸರ್ಪರಾಜರುಗಳ ನಾಮಗಳಿವೆ..

ಅನೇಕ ಚರಿತ್ರೆಗಳಲ್ಲಿ, ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪರಾಜರ ಬಗ್ಗೆ ಮಾಹಿತಿ ಸಿಕ್ಕುತ್ತವೆ..

ಅವುಗಳಲ್ಲಿ ಮುಖ್ಯವಾಗಿ ನವನಾಗೇಂದ್ರರ ಹೆಸರುಗಳು ತುಂಬಾ ವಿಶೇಷ..

ಶ್ರೀ ಅನಂತ ವಾಸುಕಿ, ಶ್ರೀ ತಕ್ಷಕ, ಶ್ರೀ ವಿಶ್ವತೋಮುಖ, ಶ್ರೀ ಕರ್ಕೋಟಕ, ಶ್ರೀ ಮಹಾಪದ್ಮ, ಶ್ರೀ ಪದ್ಮ, ಶ್ರೀ ಶಂಖ, ಶ್ರೀ ದೃತರಾಷ್ಟ್ರ

ಶ್ರೀ ಸರ್ಪರಾಜರ ಹೆಸರುಗಳು ಹೇಗೆ ವಿಶೇಷವೋ ಅದೇ ರೀತಿ 16 ಜನ ನಾಗಮಾತೆಯರು ಬಲು ವಿಶೇಷ..

ಶ್ರೀನಾಗಮಾತೆ, ಶ್ರೀ ನಾಗಭಗಿನಿ, ಶ್ರೀ ವಿಷಹರೆ, ಶ್ರೀ ಮೃತಸಂಜೀವಿನಿ, ಶ್ರೀ ಸಿದ್ಧಯೋಗಿನಿ, ಶ್ರೀ ಯೋಗಿನಿ, ಶ್ರೀ ಪ್ರಿಯಾ, ಶ್ರೀ ಜರತ್ಕಾರು, ಶ್ರೀ ಜಗದ್ಗೌರಿ, ಶ್ರೀ ಮಾನಸಾ, ಶ್ರೀ ವೈಷ್ಣವೀ, ಶ್ರೀ ಶೈವೀ, ಶ್ರೀ ನಾಗೇಶ್ವರೀ, ಶ್ರೀ ಆಸ್ತಿಕ, ಶ್ರೀ ಮಾತಾ, ಶ್ರೀ ವಿಷಹರಾ ದೇವಿ..

ಸ್ತ್ರೀಯರು ಪ್ರತಿದಿವಸ ಈ ದೇವಿಯರ ಸ್ಮರಣೆ ಮಾಡುತ್ತಾರೋ ಅವರು ಧೀರ್ಘ ಸುಮಂಗಲಿಯಾಗಿರುತ್ತಾರೆ.., ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿರುತ್ತಾರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ..

ಅಷ್ಟೋತ್ತರ ಓದಿದರೆ ಫಲ..

೧. ಯಾರು ಪ್ರತಿದಿನವೂ ಶ್ರೀ ನವನಾಗೇಂದ್ರರ ಪ್ರಾರ್ಥನೆ ಮತ್ತು ಶ್ರೀ ನಾಗಮಾತೆಯರನ್ನು ಸ್ಮರಿಸಿ, ಸರ್ಪರಾಜ ಅಷ್ಟೋತ್ತರ ಓದಿದರೆ, ನಿಮ್ಮ ಮನೆಯ ಮೇಲೆ ಸರ್ಪದೇವರ ಆಶೀರ್ವಾದವಿದ್ದು , ಸರ್ವಭಯ, ಸರ್ಪಭಯ, ಶತೃಭಯ ನಿವಾರಣೆಯಾಗುತ್ತದೆ ..

೨. ನವನಾಗೇಂದ್ರರು ಮತ್ತು ನಾಗದೇವತೆಯರ ಸ್ಮರಣೆ ಮಾಡಿ , ಸರ್ಪರಾಜ ಅಷ್ಟೋತ್ತರ ಓದಿ, ಹುತ್ತಕ್ಕೆ ನಮಸ್ಕಾರ ಮಾಡುತ್ತಾ ಬಂದರೆ, ಮನೆಯಲ್ಲಿ ಜಗಳ ನಿವಾರಣೆಯಾಗಿ , ಸಂತೋಷದ ಜೀವನ ಮಾಡುವಿರಿ..ಎಲ್ಲರೂ ಆರೋಗ್ಯವಾಗಿರುತ್ತಾರೆ..

೩. ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ಪೂಜೆ ಮಾಡಿಸಿ, ಸರ್ಪರಾಜ ಅಷ್ಟೋತ್ತರ ಓದಿ ,ಮಂಡಲ ಪೂಜೆ ಮಾಡಿಸಿದರೆ ಸಂತಾನ ಭಾಗ್ಯವಾಗುತ್ತದೆ..

೪. ಗಂಡ ಹೆಂಡತಿ ವಿರಸ ಇರುವವರು, ವಿಚ್ಛೇದನ ಸಮಸ್ಯೆ ಇರುವವರು, ಷಷ್ಠಿ ಅಥವಾ ಅಷ್ಟಮಿಯ ದಿನ ಶ್ರೀ ಸರ್ಪರಾಜ ದೇವರ ಅಷ್ಟೋತ್ತರ ಹೇಳಿ, ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ ..

೫. ಯಾರಿಗೆ ಫಿಟ್ಸ್ ಖಾಯಿಲೆ ಇದೆಯೋ ಅಂಥವರು ಓದಿದರೆ , ಫಿಟ್ಸ್ ಬರುವುದಿಲ್ಲ..

೬. ಕಾಳಸರ್ಪದೋಷ ಇರುವವರು ಓದಿದರೆ ಕಾಲಸರ್ಪದೋಷ, ಕಾಲಸರ್ಪಯೋಗವಾಗಿ ಉತ್ತಮ ಫಲ ಕೊಡುತ್ತದೆ.

೭. ಯಾವುದೇ ತರಹ ಪಂಚಮರಾಹು, ಸಪ್ತಮ ರಾಹು, ಅಷ್ಟಮರಾಹು ದೋಷಗಳು ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ನಿವಾರಣೆಯಾಗುತ್ತದೆ ..

೮. ಯಾರು ಸರ್ಪಸಂಸ್ಕಾರ ಮಾಡಿ ನಾಗರ ಪ್ರತಿಷ್ಠೆ ಮಾಡಿಸಿದ್ದರೂ, ತೊಂದರೆ ಅನುಭವಿಸುತ್ತಿದ್ದರೆ, ಶ್ರೀ ನಾಗರಾಜ ದೇವರ ಅಷ್ಟೋತ್ತರವನ್ನು 48 ದಿವಸ ಓದಿ ಪೂಜೆ ಮಾಡಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ ..

೯. ಗರ್ಭದೋಷದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಪ್ರತಿದಿನ ಓದುತ್ತಾ ಬಂದರೆ ದೋಷ ನಿವಾರಣೆಯಾಗುತ್ತದೆ ..
ಆರೋಗ್ಯ ಭಾಗ್ಯಸಿಗುತ್ತದೆ..

೧೦. ಅಶ್ವಿನೀ ನಕ್ಷತ್ರ, ಮಖಾ ನಕ್ಷತ್ರ, ಮೂಲಾ ನಕ್ಷತ್ರ ಉಳ್ಳವರು ಮತ್ತು ಜಾತಕದಲ್ಲಿ ಸರ್ಪದೋಷ ಇರುವವರು , ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ದೋಷ ನಿವಾರಣೆಯಾಗುತ್ತದೆ ..

೧೧. ಸರ್ಪದೋಷದಿಂದ ವಿವಾಹ ಸಮಸ್ಯೆ ಇರುವವರು ಪ್ರತಿದಿನ ಶ್ರೀ ಸರ್ಪರಾಜ ಅಷ್ಟೋತ್ತರ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ .., ದಾಂಪತ್ಯ ಚೆನ್ನಾಗಿರುತ್ತದೆ..

ಸರ್ಪರಾಜ ಅಷ್ಟೋತ್ತರ..

ಓಂ ಅನಂತಾಯ ನಮಃ
ಓಂ ವಾಸುದೇವಾಯ ನಮಃ
ಓಂ ತಕ್ಷಕಾಯ ನಮಃ
ಓಂ ವಿಶ್ವತೋಮುಖಾಯ ನಮಃ
ಓಂ ಕರ್ಕೋಟಕಾಯ ನಮಃ
ಓಂ ಮಹಾಪದ್ಮಾಯ ನಮಃ
ಓಂ ಪದ್ಮಾಯ ನಮಃ
ಓಂ ಶಂಖಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಧೃತರಾಷ್ಟ್ರಾಯ ನಮಃ ||೧೦||
ಓಂ ಶಂಖಪಾಲಾಯ ನಮಃ
ಓಂ ಕುಳಿಕಾಯ ನಮಃ
ಓಂ ಸರ್ಪನಾಥಾಯ ನಮಃ
ಓಂ ಇಷ್ಠದಾಯಿನೇ ನಮಃ
ಓಂ ನಾಗರಾಜಾಯ ನಮಃ
ಓಂ ಪುರಾಣಾಯ ನಮಃ
ಓಂ ಪುರುಷಾಯ ನಮಃ
ಓಂ ಅನಘಾಯ ನಮಃ
ಓಂ ವಿಶ್ವರೂಪಾಯ ನಮಃ
ಓಂ ಮಹೀಧಾರಿಣೇ ನಮಃ
||೨೦||
ಓಂ ಕಾಮದಾಯಿನೇ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಕುಂಡಪ್ರಭಾಯ ನಮಃ
ಓಂ ಬಹುಶಿರಸೇ ನಮಃ
ಓಂ ದಕ್ಷಾಯ ನಮಃ
ಓಂ ದಾಮೋದರಾಯ ನಮಃ
ಓಂ ಅಕ್ಷರಾಯ ನಮಃ
ಓಂ ಗಣಾಧಿಪಾಯ ನಮಃ
ಓಂ ಮಹಾಸೇನಾಯ ನಮಃ
ಓಂ ಪುಣ್ಯಮೂರ್ತಯೇ ನಮಃ
ಓಂ ಗಣಪ್ರಿಯಾಯ ನಮಃ
||೩೦||
ಓಂ ವರಪ್ರದಾಯ ನಮಃ
ಓಂ ವಾಯುಭಕ್ಷಕಾಯ ನಮಃ
ಓಂ ವಿಶ್ವಧಾರಿಣೇ ನಮಃ
ಓಂ ವಿಹಂಗಮಾಯ ನಮಃ
ಓಂ ಪುತ್ರಪ್ರದಾಯ ನಮಃ
ಓಂ ಪುಣ್ಯರೂಪಾಯ ನಮಃ
ಓಂ ಬಿಲೇಶಾಯ ನಮಃ
ಓಂ ಪರಮೇಷ್ಠಿನೇ ನಮಃ
ಓಂ ಪಶುಪತಯೇ ನಮಃ
ಓಂ ಪವನಾಶಿನೇ ನಮಃ
||40||
ಓಂ ಬಲಪ್ರದಾಯ ನಮಃ
ಓಂ ದಾಮೋದರಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಯಾರೂಪಾಯ ನಮಃ
ಓಂ ಧನಪ್ರದಾಯ ನಮಃ
ಓಂ ಮತಿದಾಯಿನೇ ನಮಃ
ಓಂ ಮಹಾಮಾಯನೇ ನಮಃ
ಓಂ ಮಧುವೈರಿಣೇ ನಮಃ
ಓಂ ಮಹೋರಗಾಯ ನಮಃ
ಓಂ ಭುಜಗೇಶಾಯ ನಮಃ
ಓಂ ಭೂಮರೂಪಾಯ ನಮಃ ||೫೦||
ಓಂ ಭೀಮಕಾಮಾಯ ನಮಃ
ಓಂ ಭಯಾಪಹತೇ ನಮಃ
ಓಂ ಸಕಲರೂಪಾಯ ನಮಃ
ಓಂ ಶುದ್ಧದೇಹಾಯ ನಮಃ
ಓಂ ಶೋಕಹಾರಿಣೇ ನಮಃ
ಓಂ ಶುಭಪ್ರದಾಯ ನಮಃ
ಓಂ ಸಂತಾನದಾಯನೇ ನಮಃ
ಓಂ ಸರ್ಪೇಶಾಯ ನಮಃ
ಓಂ ಸವದಾಯನೇ ನಮಃ
ಓಂ ಸರೀಸೃಪಾಯ ನಮಃ
||೬೦||
ಓಂ ಲಕ್ಷ್ಮೀಕರಾಯ ನಮಃ
ಓಂ ಲಾಭದಾಯಿನೇ ನಮಃ
ಓಂ ಲಲಿತಾಯ ನಮಃ
ಓಂ ಲಕ್ಷ್ಮಣಾಕೃತಯೇ ನಮಃ
ಓಂ ದಯಾರಾಶಯೇ ನಮಃ
ಓಂ ದಾಶರಥಾಯ ನಮಃ
ಓಂ ದಾಶರಥಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಮಾಶ್ರಮಾಯ ನಮಃ
ಓಂ ರಮ್ಯರೂಪಾಯ ನಮಃ
ಓಂ ರಾಮಭಕ್ತಾಯ ನಮಃ
ಓಂ ರಾಮಭಕ್ತಾಯ ನಮಃ
||೭೦||
ಓಂ ರಣಧೀರಾಯ ನಮಃ
ಓಂ ರತಿಪ್ರದಾಯ ನಮಃ
ಓಂ ಸೌಮಿತ್ರಿಯೇ ನಮಃ
ಓಂ ಸೋಮಸಂಕಾಶಾಯ ನಮಃ
ಓಂ ಸರ್ಪರಾಜಾಯ ನಮಃ
ಓಂ ಸತಾಂಪ್ರಿಯಾಯ ನಮಃ
ಓಂ ಕರ್ಬುರಾಯ ನಮಃ
ಓಂ ಕಾಮಫಲಪ್ರದಾಯ ನಮಃ
ಓಂ ಕಿರೀಟಿನೇ ನಮಃ
ಓಂ ಕಿನ್ನರಾರ್ಚಿತಾಯ ನಮಃ
||೮೦||
ಓಂ ಪಾತಾಳವಾಸಿನೇ ನಮಃ
ಓಂ ಪರಾಯ ನಮಃ
ಓಂ ಫಣಿಮಂಡಲಮಂಡಿತಾಯ ನಮಃ
ಓಂ ಆಶೀವಿಷಾಯ ನಮಃ
ಓಂ ವಿಷಧರಾಯ ನಮಃ
ಓಂ ಭಕ್ತನಿಧಯೇ ನಮಃ
ಓಂ ಭೂಮಿಧಾರಿಣೇ ನಮಃ
ಓಂ ಭವಪ್ರಿಯಾಯ ನಮಃ
ಓಂ ನಾರಾಯಣಾಯ ನಮಃ
ಓಂ ನಾಗರಾಜಾಯ ನಮಃ
ಓಂ ನಾನಾರೂಪಾಯ ನಮಃ
||೯೦||
ಓಂ ಜನಪ್ರಿಯಾಯ ನಮಃ
ಓಂ ಕಾಕೋದರಾಯ ನಮಃ
ಓಂ ಕಾವ್ಯರೂಪಾಯ ನಮಃ
ಓಂ ಕಲ್ಯಾಣಾಯ ನಮಃ
ಓಂ ಕಾಮಿತಾರ್ಥದಾಯಿನೇ ನಮಃ
ಓಂ ಹತಾಸುರಾಯ ನಮಃ
ಓಂ ಹಲ್ಯಹೀನಾಯ ನಮಃ
ಓಂ ಹರ್ಷದಾಯನೇ ನಮಃ
ಓಂ ಹರಭೂಷಣಾಯ ನಮಃ
ಓಂಜಗದಾಧಾರಯೇ ನಮಃ
ಓಂ ಜರಾಹೀನಾಯ ನಮಃ
ಓಂ ಜಾತಿಶೂನ್ಯಾಯ ನಮಃ
ಓಂ ಜಗನ್ಮಯಾಯ ನಮಃ
ಓಂ ವಂಧ್ಯಾತ್ವದೋಷ ಶಮನಾಯ ನಮಃ
ಓಂ ವರಪುತ್ರಫಲಪ್ರದಾಯ ನಮಃ
ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ ||108||

ಇತಿ ಶ್ರೀ ನಾಗರಾಜ ಅಷ್ಟೋತ್ತರ ಸಂಪೂರ್ಣಂ ..
****

ಒಂದು ಚಿಂತನೆ 

ಶ್ರಾವಣ ಶನಿವಾರದಂದು ಗೋಪಾಳಕ್ಕೆ ಹೋಗುವ ಸಂಪ್ರದಾಯ ನಮ್ಮ ವಂಶದಲ್ಲಿ ನಡೆದು ಬಂದಿದೆ. 
   ಶ್ರೀನಿವಾಸ ದೇವರೇ ಗೋಪಾಳಕ್ಕೆ ಹೋಗಿರುವ ವಿಷಯ ಪುರಾಣದಲ್ಲಿ ಪ್ರಸ್ತುತವಾಗಿದೆ. 
    ನಾವು ಈ ದಿನ ದೇವರ ಪೂಜೆ ಮಾಡಿದ ನಂತರ ಬೆಳ್ಳಿಯ ಬಟ್ಟಲಲ್ಲಿ ಸ್ವಲ್ಪ ಅಕ್ಕಿಯನ್ನು ಮತ್ತು ತುಳಸಿಯನ್ನು  ಹಾಕಿ, ನಿಂತುಕೊಂಡು - 

 || ಓಂ  ಶ್ರೀ ವೆಂಕಟೇಶಾಯ ಮಂಗಳಂ ||

ಹೇಳಿ ನಮ್ಮ ತಾಯಿ ಅಥವಾ ಹೆಂಡತಿಯ ಕೈಯ್ಯಲ್ಲಿ ಮೂರು ಸಲ ಅಕ್ಕಿಯನ್ನು ಸ್ವೀಕರಿಸಿ, ನಂತರ  ಅದನ್ನು ನೈವೇದ್ಯ ಮಾಡಿ ಉಪಯೋಗಿಸ ಬೇಕು. 
     ತಿರುಪತಿಯ ಶ್ರೀನಿವಾಸನ ಮುಂದೆ ನಿಂತು ಗೋಪಾಳವನ್ನು ಕೋರಿದರೆ ಸಾರ್ಥಕ. 

ಏಕೆಂದರೇ 
“ ಬೇಡಿದರೇ ಎನ್ನ ಒಡೆಯನ ಬೇಡುವೆ” 
ಎನ್ನುವ ಮನಃ ಸ್ಥಿತಿ ಬರುತ್ತದೆ ಮತ್ತು ಲಕ್ಷ್ಮೀ ಸಾನ್ನಿಧ್ಯದಿಂದ ಧಾನ್ಯ ಪ್ರಾಪ್ತ ಆಗುತ್ತದೆ.

ಗುರುರಾಜ ಏರಿ
**


POOJA VIDHANAS BY RASHMI ADISH

MYSORE


Here is the links below of all Pooja vidhanams narrated 

By   Rashmi Adish Mysore


Just click on the link to listen pooja


🌟 Mangala gowri Pooja vidhanam

https://youtu.be/1Sx5WMD5Ep0

🌸 mangala gowri song 

https://youtu.be/HpJeHRwNCkY


 🌟 Garuda panchmi Pooja vidhanam

https://youtu.be/5AM0YkAUKP4


🌸 Garuda panchmi katha song

https://youtu.be/xGr03NP4ZUA

🐍naga Aarti song

https://youtu.be/NwCStt2Wx08


🌟Sri vara maha Lakshmi vratam

https://youtu.be/Wwq13QM7804

🌸Aarati song

https://youtu.be/sJgc1i1E1wQ


🌟Sri Krishna Janmashtami Pooja

https://youtu.be/ipH-StORX8g


🌟Phalagowri

https://youtu.be/ex01EwzHGaI


🌟Gowri Pooja vidhanam (Swarna gowri vratam)

https://youtu.be/wy-oLZGxbH4


🌟 Ganesha vratham(varasiddivinayaka vratham

https://youtu.be/VyOITGGFMeM


🌟Sri Anathapadmanabha Swamy vratham

https://youtu.be/JYfNV59mCkY

***



No comments:

Post a Comment