ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.
ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಎಲ್ಲಾ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.
ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು
ತುಳಸೀದರ್ಶನ (ಪೂಜೆ)ಗೋದಾನಕ್ಕೆ ಸಮ
ಮುಂಜಾನೆ ಸ್ನಾನವಾದ ನಂತರ ಕಲಶದಲ್ಲಿ ಶುದ್ದ ನೀರು ತೆಗೆದುಕೊಂಡು ಕ್ರಮ ಪ್ರಕಾರ ಹೊಸ್ತಿಲು ಪೂಜೆಯನ್ನು ರಂಗೋಲಿಯನ್ನು ಮುಗಿಸಿ ತುಳಸೀ ವೃಂದಾವನದ ಸನ್ನಿಧಿಗೆ ಬರಬೇಕು. ವೃಂದಾವನವು ಒದ್ದೆಯಾಗುವಂತೆ ಹೊಸ್ತಿಲಿನ ಮೇಲಿಟ್ಟಿದ್ದ ತಂಬಿಗೆಯಿಂದ ನೀರೆರೆದು ,ತುಳಸೀ ಮೂಲದಲ್ಲಿ ಇರುವ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು,ತುಳಸೀ ಮೂಲಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿ, ಪ್ರದಕ್ಷಿಣೆ ಬಂದು ನಮಸ್ಕರಿಸಬೇಕು
ತುಳಸೀ ಮಹತ್ವವನ್ನು ತಿಳಿಸುವ ಶ್ಲೋಕಗಳು
ಯನ್ಮೂಲೇ ಸರ್ವತೀರ್ಥಾನಿ ಯನ್ಮ ಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್ ||
ತುಳಸಿಯ ಬುಡದಲ್ಲಿ ಗಂಗಾದಿ ಸರ್ವತೀರ್ಥಗಳು.ಮಧ್ಯದಲ್ಲಿ ವಿಷ್ಣುವೇ ಮೊದಲಾದ ಎಲ್ಲಾ ಸರ್ವದೇವತೆಗಳು.ತುದಿಯಲ್ಲಿ ಋಗ್ವಾದಿ ಚತುರ್ವೇದಗಳು ನೆಲೆಸಿರುತ್ತವೆ. ಅಂತಹ ತುಳಸಿ ದೇವಿಯೇ, ನಿನಗೆ ನನ್ನ ನಮಸ್ಕಾರಗಳು.
ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||
ಪಾಲ್ಗಡಲನ್ನು ಕಡೆದಾಗ ಭಗವಂತ ಧನ್ವಂತರಿಯ ಆನಂದಾಶ್ರುವಿನಿಂದ ಅಮೃತ ಕಲಶದಲ್ಲಿ ಆವಿರ್ಭವಿಸಿದ ಹರಿಪ್ರಿಯಳಾದ ಓ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.
ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿ ಗೋಬ್ರಹ್ಮಬಾಲಾಪಿತೃಮಾತೃ ವಧಾದಿಕಾನಿ |
ನಶ್ಯಂತಿ ತಾನಿ ತುಳಸೀವನದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||
ತುಳಸೀವೃಂದಾವನವನ್ನು ದರ್ಶನ ಮಾಡುವುದರಿಂದ ಕೋಟಿ ಗೋವುಗಳನ್ನು ದಾನವಿತ್ತ ಫಲ ಲಭಿಸುತ್ತದೆ.ರವಿಸುತನಾದ ಯಮನು ಉಲ್ಲೇಖಿಸಿರುವ ಗೋಹತ್ಯೆ,ಬ್ರಹ್ಮಹತ್ಯೆ, ಬಾಲಹತ್ಯೆ,ಮಾತೃವಧ, ಪಿತೃವಧೆಯಂತಹ ಪಾತಕಗಳು ತುಳಸೀವೃಂದಾವನ ದರ್ಶನದಿಂದ ನಾಶವಾಗುತ್ತವೆ.
ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||
ತುಳಸೀಗಿಡದ ಬುಡದಲ್ಲಿರುವ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿದವರ ಮುಖವನ್ನು ಯಮನೇ ಕತ್ತೆತ್ತಿ ನೋಡಲಾಗದು.ಇನ್ನು ಯಮನ ದೂತರು ನೋಡಬಲ್ಲರೇ?ತುಳಸೀ ಮೃತ್ತಿಕೆಯ ಧಾರಣೆಯಿಂದ ಅಪಮೃತ್ಯುವಿರುವುದಿಲ್ಲ.
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ|
ವಾಸುದೇವಾದಯೋ ದೇವಾ: ವಸಂತಿ ತುಳಸೀವನೇ ||
ತುಳಸೀವನದಲ್ಲಿ ಪುಷ್ಕರಾದಿ ಸರೋವರ ತೀರ್ಥಗಳು, ಗಂಗೆಯೇ ಮೊದಲಾದ ನದಿತೀರ್ಥಗಳು, ವಾಸುದೇವಾದಿ ದೇವತೆಗಳೆಲ್ಲಾ ನೆಲೆಸಿರುತ್ತಾರೆ..
ಬೆಳಕಿನ ಮಾಸ ಕಾರ್ತಿಕ ಶುದ್ಧ ದ್ವಾದಶಿ ಬೃಂದಾವನದಿ ಪವಡಿಸಿದ ಶ್ರೀಮನ್ನಾರಾಯಣನ ಎಚ್ಚರಿಸುವ ದಿನ. ಅಂದೇ ಚಾತುರ್ಮಾಸ್ಯದ ಅಂತ್ಯ. ಅಂದು ತುಳಸಿಗೂ, ಶ್ರೀಮನ್ನಾರಾಯಣನಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುತ್ತಾರೆ. ಈ ದೇವೋತ್ಥಾನದ ದಿನ ಮಾನಿನಿಯರು ಸಿಂಧೂರಾದಿಯಿಂದ ಮನೆಯನ್ನೂ ತುಳಿಸಿ ಕಟ್ಟೆಯನ್ನು ಸಿಂಗರಿಸಿ, ಮಂಟಪ ನಿರ್ಮಿಸಿ, ಅಗಸೆ ಹಾಗೂ ಫಲಸಹಿತವಾದ ಬೆಟ್ಟನೆಲ್ಲಿಯ ಕೊನೆಯನ್ನು ತುಳಸಿ ಕಟ್ಟೆಯಲ್ಲಿ ಸ್ಥಾಪಿಸಿ, ನೆಲ್ಲಿಕಾಯಿಯ ಕೊರೆದು ಬತ್ತಿ ಹಾಕಿ ದೀಪಾರತಿ ಮಾಡುತ್ತಾರೆ.
ಉತ್ಥಾನ ದ್ವಾದಶಿಗೆ ಕಿರು ದೀಪಾವಳಿ ಎಂಬ ಹೆಸರೂ ಇದೆ. ಅಂದೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಆನಂದಿಸುತ್ತಾರೆ. ಕಾರ್ತಿಕ ಶುದ್ಧ ದ್ವಾದಶಿಯ ದಿನ ತುಳಸಿಯ ದರ್ಶನದಿಂದ, ತುಳಸಿ ಪೂಜಿಸುವುದರಿಂದ ಸಪ್ತಜನ್ಮಕೃತ ಪಾಪಗಳು ಕಳೆಯುತ್ತವೆ ಎಂಬುದು ಹಿರಿಯರ ನಂಬಿಕೆ. ತುಳಸಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ತುಳಸಿ, ಪೂಜೆಗೂ ಶ್ರೇಷ್ಠ.
ತುಳಸಿ ಹಬ್ಬ, ಉತ್ಥಾನ ದ್ವಾದಶಿಅಂದು ತುಳಸಿಯ ದರ್ಶನ ಮಾತ್ರದಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ.
ತುಳಸಿಯ ಹಿರಿಮೆ: ತುಳಸಿ ಹುಲುಸಾಗಿ ಬೆಳೆದೆಡೆ ಸೊಳ್ಳೆಗಳು ಇರುವುದಿಲ್ಲ. ತುಳಸಿ ಒಂದು ಔಷಧೀಯ ಸಸ್ಯ. ಮಕ್ಕಳಿಗೆ ಕೆಮ್ಮು -ನೆಗಡಿ ಆದರೆ, ತುಳಸಿ ರಸ ಕುಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ.
ಶ್ರೀಕೃಷ್ಣ ತುಲಾಭಾರದ ಸಮಯದಲ್ಲಿ ಸತ್ಯಭಾಮಾದೇವಿಯು ಖಜಾನೆಯಲ್ಲಿದ್ದ ನಗ ನಾಣ್ಯವನ್ನೇಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿಹೊಂದುವುದಿಲ್ಲ. ಆದರೆ, ರುಕ್ಮಿಣಿ ಮಾತೆ, ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಶ್ರೀಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದೃಷ್ಟಾಂತ.
ಸನಾತನ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. " ಪವಿತ್ರ ತುಳಸಿ" ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.
ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ
1. ಓಂ ಹ್ರೀಂ ತುಲಸೀದೇವ್ಯೈ ನಮಃ
2. ಓಂ ಸಖ್ಯೈ ನಮಃ
3. ಓಂ ಭದ್ರಾಯೈ ನಮಃ
4. ಓಂ ಮನೋಜ್ಞಾನ ಪಲ್ಲವಾಯೈ ನಮಃ
5. ಓಂ ಪುರಂದರ ಸತೀಪೂಜ್ಯಾಯೈ ನಮಃ
6. ಓಂ ಪುಣ್ಯದಾಯೈ ನಮಃ
7. ಓಂ ಪುಣ್ಯರೂಪಿಣ್ಯೈ ನಮಃ
8. ಓಂ ಜ್ಞಾನವಿಜ್ಞಾನಜನನ್ಯೈ ನಮಃ
9. ಓಂ ತತ್ವಜ್ಞಾನ ಸ್ವರೂಪಿಣ್ಯೈ ನಮಃ
10. ಓಂ ಜಾನಕೀ ದುಃಖಶಮನ್ಯೈ ನಮಃ
11. ಓಂ ಜನಾರ್ಧನಪ್ರಿಯಾಯೈ ನಮಃ
12. ಓಂ ಸರ್ವಕಲ್ಮಷ ಸಚಿಹರ್ತ್ಯೈ ನಮಃ
13. ಓಂ ಸರ್ವಕೋಟಿ ಸಮಪ್ರಭಾಯೈ ನಮಃ
14. ಓಂ ಗೌರೀ ಶಾರದಾ ಸಂಸೇವಿತಾಯೈ ನಮಃ
15. ಓಂ ವಂದಾರುಜನಮಂದಾರಾಯೈ ನಮಃ
16. ಓಂ ನಿಲಿಂಪಾಭರಣಾಸಕ್ತಾಯೈ ನಮಃ
17. ಓಂ ಲಕ್ಷ್ಮೀಚಂದ್ರ ಸಹೋದರ್ಯೈ ನಮಃ
18. ಓಂ ಸನಕಾದಿ ಮುನಿಧ್ಯೇಯಾಯೈ ನಮಃ
19. ಓಂ ಕೃಷ್ಣಾನಂದ ಜನೀತ್ಯೈ ನಮಃ
20. ಓಂ ಚಿದಾನಂದ ಸ್ವರೂಪಿಣ್ಯೈ ನಮಃ
21. ಓಂ ನಾರಾಯಣ್ಯೈ ನಮಃ
22. ಓಂ ಸತ್ಯರೂಪಾಯೈ ನಮಃ
23. ಓಂ ಮಾಯಾತೀತಾಯೈ ನಮಃ
24. ಓಂ ಮಹೇಶ್ವರ್ಯೈ ನಮಃ
25. ಓಂ ಶುಭಪ್ರದಾಯೈ ನಮಃ
26. ಓಂ ವದನಚ್ಚವಿನಿರ್ಧೂತರಾಕಾಪೂರ್ಣನಿಶಾಕರಾಯೈ ನಮಃ
27. ಓಂ ರೋಚನಾಪಂಕ ತಿಲಕಲಸನ್ನಿಟಲಭಾಸುರಾಯೈ ನಮಃ
28. ಓಂ ಶುದ್ಧಾಯೈ ನಮಃ
29. ಓಂ ಪಲ್ಲವೋಷ್ಟ್ಯೈ ನಮಃ
30. ಓಂ ಪದ್ಮಮುಖ್ಯೈ ನಮಃ
31. ಓಂ ಪುಲ್ಲಪದ್ಮದಳೇಕ್ಷಣಾಯೈ ನಮಃ
32. ಓಂ ಚಾಂಪೇಯಕಲಿಕಾಕಾರನಾಸಾದಮ್ಡವಿರಾಜಿತಾಯೈ ನಮಃ
33. ಓಂ ಮಂದಸ್ಮಿತಾಯೈ ನಮಃ
34. ಓಂ ಮಂಜುಲಾಂಗ್ಯೈ ನಮಃ
35. ಓಂ ಮಾಧವಪ್ರಿಯ ಭಾವಿನ್ಯೈ ನಮಃ
36. ಓಂ ಮಾಣಿಕ್ಯಕಂಕಣಾರಾಯೈ ನಮಃ
37. ಓಂ ಮನಿಕುಂಡಲ ಮಂಡಿತಾಯೈ ನಮಃ
38. ಓಂ ಇಂದ್ರಸಂಪತ್ಕರ್ಯೈ ನಮಃ
39. ಓಂ ಶಕ್ತ್ಯೈ ನಮಃ
40. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
41. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
42. ಓಂ ಕ್ಷೀರಸಾಗರ ಸಂಭವಾಯೈ ನಮಃ
43. ಓಂ ಶಾಂತಿಕಾಂತಿಗುಣೋಪೇತಾಯೈ ನಮಃ
44. ಓಂ ಬೃಂದಾಮರಗುಣ ಸಂಪತ್ಯೈ ನಮಃ
45. ಓಂ ಪೂತಾತ್ಮನಾಯೈ ನಮಃ
46. ಓಂ ಪೂತನಾದಿ ಸ್ವರೂಪಿಣ್ಯೈ ನಮಃ
47. ಓಂ ಯೋಗಧ್ಯೇಯಾಯೈ ನಮಃ
48. ಓಂ ಯೋಗಾನಂದ ವಿದಾಯೈ ನಮಃ
49. ಓಂ ಚತುರ್ವರ್ಗ ಪ್ರದಾರಾಮಾಯೈ ನಮಃ
50. ಓಂ ತ್ರಿಲೋಕ ಜನನ್ಯೈ ನಮಃ
51. ಓಂ ಗೃಹಮೇಧಿಸಮಾರಾಧ್ಯಾಯೈ ನಮಃ
52. ಓಂ ಸದನಾಂಗಣಪಾವನಾಯೈ ನಮಃ
53. ಓಂ ಮುನೀಂದ್ರ ಹೃದಯವಾಸಾಯೈ ನಮಃ
54. ಓಂ ಮೂಲಪ್ರಕೃತಿ ಸಂಜ್ಞಿಕಾಯೈ ನಮಃ
55. ಓಂ ಬ್ರಹ್ಮರೂಪಿಣ್ಯೈ ನಮಃ
56. ಓಂ ಪರಂಜ್ಯೋತಿಷೇ ನಮಃ
57. ಓಂ ಅವಾಜ್ಞಾನಸಗೋಚರಾಯೈ ನಮಃ
58. ಓಂ ಪಂಚಭೂತಾತ್ಮಿಕಾಯೈ ನಮಃ
59. ಓಂ ಯೋಗಾಚ್ಯುತಾಯೈ ನಮಃ
60. ಓಂ ಯಜ್ಞರೂಪಿಣ್ಯೈ ನಮಃ
61. ಓಂ ಸಂಸಾರದುಃಖಶಮನ್ಯೈ ನಮಃ
62. ಓಂ ಸೃಷ್ಟಿಸ್ಥಿತ್ಯಂತರಕಾರಿಣ್ಯೈ ನಮಃ
63. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
64. ಓಂ ವೈಷ್ಣವ್ಯೈ ನಮಃ
65. ಓಂ ಮಧುರಸ್ವರಾಯೈ ನಮಃ
66. ಓಂ ನಿರೀಶ್ವರಾಯೈ ನಮಃ
67. ಓಂ ನಿರ್ಗುಣಾಯೈ ನಮಃ
68. ಓಂ ನಿತ್ಯಾಯೈ ನಮಃ
69. ಓಂ ನಿರಾತಂಕಾಯೈ ನಮಃ
70. ಓಂ ದೀನಜನಪಾಲನತತ್ಪರಾಯೈ ನಮಃ
71. ಓಂ ಕ್ವಣತ್ಮಿಂಕಿಣಿಕಾಜಾಲರತ್ನಕಾಂಚೀಲಸತ್ಕಜ್ಯೈ ನಮಃ
72. ಓಂ ಚಲನ್ಮಂಜೀರಚರಣಾಯೈ ನಮಃ
73. ಓಂ ಚತುರಾವಲಿಸೇವಿತಾಯ್ತೈ ನಮಃ
74. ಓಂ ಅಹೋರಾತ್ರಕಾರಿಣ್ಯೈ ನಮಃ
75. ಓಂ ಯುಕ್ತಾಹಾರಭರಾಕ್ರಾಂತಾಯೈ ನಮಃ
76. ಓಂ ಮುದ್ರಿಕಾರತ್ನಭಾಸುರಾಯೈ ನಮಃ
77. ಓಂ ಸಿದ್ಧಪ್ರದಾಯೈ ನಮಃ
78. ಓಂ ಅಮಲಾಯೈ ನಮಃ
79. ಓಂ ಕಮಲಾಯೈ ನಮಃ
80. ಓಂ ಲೋಕಸುಂದರ್ಯೈ ನಮಃ
81. ಓಂ ಹೇಮಕುಂಭಕುಚಧ್ವಯಾಯೈ ನಮಃ
82. ಓಂ ಲಸಿತಕುಂಭಕುಚದ್ವಯೈ ನಮಃ
83. ಓಂ ಚಂಚಲಾಯೈ ನಮಃ
84. ಓಂ ಲಕ್ಷ್ಮ್ಯೈ ನಮಃ
85. ಓಂ ಶಂಕರ್ಯೈ ನಮಃ
86. ಓಂ ಶಂಕರ್ಯೈ ನಮಃ
87. ಓಂ ಶಿವಶಂಕರ್ಯೈ ನಮಃ
88. ಓಂ ತುಲಸ್ಯೈ ನಮಃ
89. ಕುಂದಲಕುಟ್ಮಿಲರದನಾಯೈ ನಮಃ
90. ಓಂ ಪಕ್ವಬಿಂಬೋಷ್ಟ್ಯೈ ನಮಃ
91. ಓಂ ಶರಶ್ಚಂದ್ರಿಕಾಯೈ ನಮಃ
92. ಓಂ ಚಾಂಪೇಯನಾಸಿಕಾಯೈ ನಮಃ
93. ಓಂ ಕಂಬುಸುಂದರಗಳಾಯೈ ನಮಃ
94. ಓಂ ತಟಿಲ್ಲತಾಂಗ್ಯೈ ನಮಃ
95. ಓಂ ಮತ್ತಬಂಭರಕುಂತಲಾಯೈ ನಮಃ
96. ಓಂ ನಕ್ಷತ್ರನಿಭನಖಾಯೈ ನಮಃ
97. ಓಂ ರಂಭಾನಿಭೋರುಯುಗ್ಮಾಯೈ ನಮಃ
98. ಓಂ ಸೈಕತಶ್ರೋಣ್ಯೈ ನಮಃ
99. ಓಂ ಮಂದಕಂಠೀರವಮಧ್ಯೈ ನಮಃ
100 ಓಂ ಕೀರವಾಣ್ಯೈ ನಮಃ
101. ಓಂ ಶ್ರೀ ಮಹಾತುಲಸ್ಯೈ ನಮಃ
ಇತಿ ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು.
***
#ಅಷ್ಟೋತ್ತರಶತನಾಮಾವಳಿ
ll ಶ್ರೀ ತುಳಸಿದೇವಿ ಅಷ್ಟೋತ್ತರ ಶತನಾಮಾವಳಿ ll
ಓಂ ತುಲಸ್ಯೈ ನಮಃ
ಓಂ ತುಲಸೀವರ್ಯಾಯೈ ನಮಃ
ಓಂ ತುಮುಲ್ಯೈ ನಮಃ
ಓಂ ತುಮುಲಪ್ರಾಜ್ಞ್ಯೈ ನಮಃ
ಓಂ ತುರಗ್ಯೈ ನಮಃ
ಓಂ ತುರಗಾರೂಢಾಯೈ ನಮಃ
ಓಂ ತುಮುಲಾಸುರಘಾತಿನ್ಯೈ ನಮಃ
ಓಂ ತುಮುಲಕ್ಷತಜಪ್ರೀತಾಯೈ ನಮಃ
ಓಂ ತುಮುಲಾಂಗಣನರ್ತಕ್ಯೈ ನಮಃ
ಓಂ ತುರಂಗಪೃಷ್ಠಗಾಮಿನ್ಯೈ ನಮಃ 10
ಓಂ ತುರಂಗಗಮನಾಹ್ಲಾದಾಯೈ ನಮಃ
ಓಂ ತುರಂಗವೇಗಗಾಮಿನ್ಯೈ ನಮಃ
ಓಂ ತುರೀಯಾಯೈ ನಮಃ
ಓಂ ತುಲನಾಯೈ ನಮಃ
ಓಂ ತುಲ್ಯಾಯೈ ನಮಃ
ಓಂ ತುಲ್ಯವೃತ್ಯೈ ನಮಃ
ಓಂ ತುಲ್ಯಕೃತ್ಯೈ ನಮಃ
ಓಂ ತುಲನೇಶ್ಯೈ ನಮಃ
ಓಂ ತುಲಾರಾಜ್ಞ್ಯೈ ನಮಃ
ಓಂ ತುಲಾರಾಜ್ಞೀತ್ವಸೂಕ್ಷ್ಮವಿದಯೈ ನಮಃ 20
ಓಂ ತುಮ್ಬಿಕಾಯೈ ನಮಃ
ಓಂ ತುಮ್ಬಿಕಾಪಾತ್ರಭೋಜನಾಯೈ ನಮಃ
ಓಂ ತುಮ್ಬಿಕಾರ್ಥಿನ್ಯೈ ನಮಃ
ಓಂ ತುಲಜಾಯೈ ನಮಃ
ಓಂ ತುಲಜೇಶ್ವರ್ಯೈ ನಮಃ
ಓಂ ತುಷಾಗ್ನಿವ್ರತಸನ್ತುಷ್ಟಾಯೈ ನಮಃ
ಓಂ ತುಷಾಗ್ನೆಯೈ ನಮಃ
ಓಂ ತುಷರಾಶಿಕೃತ್ಯೈ ನಮಃ
ಓಂ ತುಷಾರಕರಶೀತಾಂಗ್ಯೈ ನಮಃ
ಓಂ ತುಷಾರಕರಪೂರ್ತಿಕೃತ್ಯೈ 30
ಓಂ ತುಷಾರಾದ್ರ್ಯೈ ನಮಃ
ಓಂ ತುಷಾರಾದ್ರಿಸುತಾಯೈ ನಮಃ
ಓಂ ತುಹಿನದೀಧಿತಯ್ಯೈ ನಮಃ
ಓಂ ತುಹಿನಾಚಲಕನ್ಯಾಯೈ ನಮಃ
ಓಂ ತುಹಿನಾಚಲವಾಸಿನ್ಯೈ ನಮಃ
ಓಂ ತುರ್ಯವರ್ಗೇಶ್ವರ್ಯೈ ನಮಃ
ಓಂ ತುರ್ಯವರ್ಗದಾಯೈ ನಮಃ
ಓಂ ತುರ್ಯವೇದದಾಯೈ ನಮಃ
ಓಂ ತುರ್ಯವರ್ಯಾತ್ಮಿಕಾಯೈ ನಮಃ
ಓಂ ತುರ್ಯಾಯೈ ನಮಃ 40
ಓಂ ತುರ್ಯೇಶ್ವರಸ್ವರೂಪಿಣ್ಯೈ ನಮಃ
ಓಂ ತುಷ್ಟಿದಾಯೈ ನಮಃ
ಓಂ ತುಷ್ಟಿಕೃತ್ಯೈ ನಮಃ
ಓಂ ತುಷ್ಟ್ಯೈ ನಮಃ
ಓಂ ತೂಣೀರದ್ವಯಪೃಷ್ಠಧೃಷ್ಯೈ ನಮಃ
ಓಂ ತುಮ್ಬುರಾಜ್ಞಾನಸನ್ತುಷ್ಟಾಯೈ ನಮಃ
ಓಂ ತುಷ್ಟಸಂಸಿದ್ಧಿದಾಯಿನ್ಯೈ ನಮಃ
ಓಂ ತೂರ್ಣರಾಜ್ಯಪ್ರದಾಯೈ ನಮಃ
ಓಂ ತೂರ್ಣಗದ್ಗದಾಯೈ ನಮಃ
ಓಂ ತೂರ್ಣಪದ್ಯದಾಯೈ ನಮಃ 50
ಓಂ ತೂರ್ಣಪಾಂಡಿತ್ಯಸನ್ದಾತ್ರ್ಯೈ ನಮಃ
ಓಂ ತೂರ್ಣಾಯೈ ನಮಃ
ಓಂ ತೂರ್ಣಬಲಪ್ರದಾಯೈ ನಮಃ
ಓಂ ತೃತೀಯಾಯೈ ನಮಃ
ಓಂ ತೃತೀಯೇಶ್ಯೈ ನಮಃ
ಓಂ ತೃತೀಯಾತಿಥಿಪೂಜಿತಾಯೈ ನಮಃ
ಓಂ ತೃತೀಯಾಚನ್ದ್ರಚೂಡೇಶ್ಯೈ ನಮಃ
ಓಂ ತೃತೀಯಾಚನ್ದ್ರಭೂಷಣಾಯೈ ನಮಃ
ಓಂ ತೃಪ್ತ್ಯೈ ನಮಃ
ಓಂ ತೃಪ್ತಿಕರ್ಯೈ ನಮಃ 60
ಓಂ ತೃಪ್ತಾಯೈ ನಮಃ
ಓಂ ತೃಷ್ಣಾಯೈ ನಮಃ
ಓಂ ತೃಷ್ಣಾವಿವರ್ಧಿನ್ಯೈ ನಮಃ
ಓಂ ತೃಷ್ಣಾಪೂರ್ಣಕರ್ಯೈ ನಮಃ
ಓಂ ತೃಷ್ಣಾನಾಶಿನ್ಯೈ ನಮಃ
ಓಂ ತೃಷಿತಾಯೈ ನಮಃ
ಓಂ ತೃಷಾಯೈ ನಮಃ
ಓಂ ತ್ರೇತಾಸಂಸಾಧಿತಾಯೈ ನಮಃ
ಓಂ ತ್ರೇತಾಯೈ ನಮಃ
ಓಂ ತ್ರೇತಾಯುಗಫಲಪ್ರದಾಯೈ ನಮಃ 70
ಓಂ ತ್ರೈಲೋಕ್ಯಪೂಜ್ಯಾಯೈ ನಮಃ
ಓಂ ತ್ರೈಲೋಕ್ಯದಾತ್ರ್ಯೈ ನಮಃ
ಓಂ ತ್ರೈಲೋಕ್ಯಸಿದ್ಧಿದಾಯೈ ನಮಃ
ಓಂ ತ್ರೈಲೋಕ್ಯೇಶ್ವರತಾದಾತ್ರ್ಯೈ ನಮಃ
ಓಂ ತ್ರೈಲೋಕ್ಯಪರಮೇಶ್ವರ್ಯೈ ನಮಃ
ಓಂ ತ್ರೈಲೋಕ್ಯಮೋಹನೇಶಾನ್ಯೈ ನಮಃ
ಓಂ ತ್ರೈಲೋಕ್ಯರಾಜ್ಯದಾಯಿನ್ಯೈ ನಮಃ
ಓಂ ತೈತ್ರಿಶಾಖೇಶ್ವರ್ಯೈ ನಮಃ
ಓಂ ತೈತ್ರಿಶಾಖಾಯೈ ನಮಃ
ಓಂ ತೈತ್ರವಿವೇಕವಿದಯೈ ನಮಃ 80
ಓಂ ತೋರಣಾನ್ವಿತಗೇಹಸ್ಥಾಯೈ ನಮಃ
ಓಂ ತೋರಣಾಸಕ್ತಮಾನಸಾಯೈ ನಮಃ
ಓಂ ತೋಲಕಾಸ್ವರ್ಣಸನ್ದಾತ್ರ್ಯೈ ನಮಃ
ಓಂ ತೋಲಕಾಸ್ವರ್ಣಕಂಕಣಾಯೈ ನಮಃ
ಓಂ ತೋಮರಾಯುಧರೂಪಾಯೈ ನಮಃ
ಓಂ ತೋಮರಾಯುಧಧಾರಿಣ್ಯೈ ನಮಃ
ಓಂ ತೌರ್ಯತ್ರಿಕೇಶ್ವರ್ಯೈ ನಮಃ
ಓಂ ತೌರ್ಯತ್ರಿಕ್ಯೈ ನಮಃ
ಓಂ ತೌರ್ಯತ್ರಿಕೋತ್ಸುಕ್ಯೈ ನಮಃ
ಓಂ ತಮೋನುದಾಯೈ ನಮಃ 90
ಓಂ ತಾರಿಣ್ಯೈ ನಮಃ
ಓಂ ತಾರಾಯೈ ನಮಃ
ಓಂ ತಾರಯನ್ತ್ಯೈ ನಮಃ
ಓಂ ತುಷ್ಟ್ಯೈ ನಮಃ
ಓಂ ತ್ರಿವಿಧಾಯೈ ನಮಃ
ಓಂ ತ್ರಿಗುಣಾಯೈ ನಮಃ
ಓಂ ತ್ರಿಗುಣಾಲಯಾಯೈ ನಮಃ
ಓಂ ತ್ರಿವರ್ತ್ಮಗಾಯೈ ನಮಃ
ಓಂ ತ್ರಿಲೋಕಸ್ಥಾಯೈ ನಮಃ
ಓಂ ತ್ರಿವಿಕ್ರಮಪದೋದ್ಭವಾಯೈ ನಮಃ 100
ಓಂ ತ್ರಿಧಾಸೂಕ್ಷ್ಮಾಯೈ ನಮಃ
ಓಂ ತ್ರಿರಾಮೇಶ್ಯೈ ನಮಃ
ಓಂ ತ್ರಿರಾಮಾರ್ಚ್ಯಾಯೈ ನಮಃ
ಓಂ ತ್ರಿರಾಮವರದಾಯಿನ್ಯೈ ನಮಃ
ಓಂ ತ್ರಿದಶಾಶ್ರಿತಪಾದಾಬ್ಜಾಯೈ ನಮಃ
ಓಂ ತ್ರಿದಶಾಲಯಚಂಚಲಾಯೈ ನಮಃ
ಓಂ ತ್ರಿದಶಪ್ರಾರ್ಥ್ಯಾಯೈ ನಮಃ
ಓಂ ತ್ರಿದಶಾಶುವರಪ್ರದಾಯೈ ನಮಃ 108
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ತುಳಸಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
***
ತುಳಸೀ ಅಷ್ಟೋತ್ತರಶತ ನಾಮಾವಳಿಃ
ಓಂ ಶ್ರೀ ತುಲಸ್ಯೈ ನಮಃ
ಓಂ ನಂದಿನ್ಯೈ ನಮಃ
ಓಂ ದೇವ್ಯೈ ನಮಃ
ಓಂ ಶಿಖಿನ್ಯೈ ನಮಃ
ಓಂ ಧಾರಿಣ್ಯೈ ನಮಃ
ಓಂ ಧಾತ್ರ್ಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸತ್ಯಸಂಧಾಯೈ ನಮಃ
ಓಂ ಕಾಲಹಾರಿಣ್ಯೈ ನಮಃ
ಓಂ ಗೌರ್ಯೈ ನಮಃ || ೧೦ ||
ಓಂ ದೇವಗೀತಾಯೈ ನಮಃ
ಓಂ ದ್ರವೀಯಸ್ಯೈ ನಮಃ
ಓಂ ಪದ್ಮಿನ್ಯೈ ನಮಃ
ಓಂ ಸೀತಾಯೈ ನಮಃ
ಓಂ ರುಕ್ಮಿಣ್ಯೈ ನಮಃ
ಓಂ ಪ್ರಿಯಭೂಷಣಾಯೈ ನಮಃ
ಓಂ ಶ್ರೇಯಸ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಮಾನ್ಯಾಯೈ ನಮಃ
ಓಂ ಗೌತಮಾರ್ಚಿತಾಯೈ ನಮಃ || ೨೦ ||
ಓಂ ತ್ರೇತಾಯೈ ನಮಃ
ಓಂ ತ್ರಿಪಥಗಾಯೈ ನಮಃ
ಓಂ ತ್ರಿಪಾದಾಯೈ ನಮಃ
ಓಂ ತ್ರೈಮೂರ್ತ್ಯೈ ನಮಃ
ಓಂ ಜಗತ್ರಯಾಯೈ ನಮಃ
ಓಂ ತ್ರಾಸಿನ್ಯೈ ನಮಃ
ಓಂ ಗಾತ್ರಾಯೈ ನಮಃ
ಓಂ ಗಾತ್ರಿಯಾಯೈ ನಮಃ
ಓಂ ಗರ್ಭವಾರಿಣ್ಯೈ ನಮಃ
ಓಂ ಶೋಭನಾಯೈ ನಮಃ || ೩೦ ||
ಓಂ ಸಮಾಯೈ ನಮಃ
ಓಂ ದ್ವಿರದಾಯೈ ನಮಃ
ಓಂ ಆರಾಧ್ಯೈ ನಮಃ
ಓಂ ಯಜ್ಞವಿದ್ಯಾಯೈ ನಮಃ
ಓಂ ಮಹಾವಿದ್ಯಾಯೈ ನಮಃ
ಓಂ ಗುಹ್ಯವಿದ್ಯಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕುಲಾಯೈ ನಮಃ
ಓಂ ಶ್ರೀಯೈ ನಮಃ
ಓಂ ಭೂಮ್ಯೈ ನಮಃ || ೪೦ ||
ಓಂ ಭವಿತ್ರ್ಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವವೇದವಿದಾಂವರಾಯೈ ನಮಃ
ಓಂ ಶಂಖಿನ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಾರಿಣ್ಯೈ ನಮಃ
ಓಂ ಚಪಲೇಕ್ಷಣಾಯೈ ನಮಃ
ಓಂ ಪೀತಾಂಬರಾಯೈ ನಮಃ
ಓಂ ಪ್ರೋತ ಸೋಮಾಯೈ ನಮಃ
ಓಂ ಸೌರಸಾಯೈ ನಮಃ || ೫೦ ||
ಓಂ ಅಕ್ಷಿಣ್ಯೈ ನಮಃ
ಓಂ ಅಂಬಾಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸಂಶ್ರಯಾಯೈ ನಮಃ
ಓಂ ಸರ್ವ ದೇವತ್ಯೈ ನಮಃ
ಓಂ ವಿಶ್ವಾಶ್ರಯಾಯೈ ನಮಃ
ಓಂ ಸುಗಂಧಿನ್ಯೈ ನಮಃ
ಓಂ ಸುವಾಸನಾಯೈ ನಮಃ
ಓಂ ವರದಾಯೈ ನಮಃ
ಓಂ ಸುಶ್ರೋಣ್ಯೈ ನಮಃ || ೬೦ ||
ಓಂ ಚಂದ್ರಭಾಗಾಯೈ ನಮಃ
ಓಂ ಯಮುನಾಪ್ರಿಯಾಯೈ ನಮಃ
ಓಂ ಕಾವೇರ್ಯೈ ನಮಃ
ಓಂ ಮಣಿಕರ್ಣಿಕಾಯೈ ನಮಃ
ಓಂ ಅರ್ಚಿನ್ಯೈ ನಮಃ
ಓಂ ಸ್ಥಾಯಿನ್ಯೈ ನಮಃ
ಓಂ ದಾನಪ್ರದಾಯೈ ನಮಃ
ಓಂ ಧನವತ್ಯೈ ನಮಃ
ಓಂ ಶೋಚಮನಸ್ಯಾಯೈ ನಮಃ
ಓಂ ಶುಚಿನ್ಯೈ ನಮಃ || ೭೦ ||
ಓಂ ಶ್ರೇಯಸ್ಯೈ ನಮಃ
ಓಂ ಪ್ರೀತಿಚಿಂತೇಕ್ಷಣಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಆಕೃತ್ಯೈ ನಮಃ
ಓಂ ಆವಿರ್ಭೂತ್ಯೈ ನಮಃ
ಓಂ ಪ್ರಭಾವಿನ್ಯೈ ನಮಃ
ಓಂ ಗಂಧಿನ್ಯೈ ನಮಃ
ಓಂ ಸ್ವರ್ಗಿನ್ಯೈ ನಮಃ
ಓಂ ಗದಾಯೈ ನಮಃ
ಓಂ ವೇದ್ಯಾಯೈ ನಮಃ || ೮೦ ||
ಓಂ ಪ್ರಭಾಯೈ ನಮಃ
ಓಂ ಸಾರಸ್ಯೈ ನಮಃ
ಓಂ ಸರಸಿವಾಸಾಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಶರಾವತ್ಯೈ ನಮಃ
ಓಂ ರಸಿನ್ಯೈ ನಮಃ
ಓಂ ಕಾಳಿನ್ಯೈ ನಮಃ
ಓಂ ಶ್ರೇಯೋವತ್ಯೈ ನಮಃ
ಓಂ ಯಾಮಾಯೈ ನಮಃ
ಓಂ ಬ್ರಹ್ಮಪ್ರಿಯಾಯೈ ನಮಃ || ೯೦ ||
ಓಂ ಶ್ಯಾಮಸುಂದರಾಯೈ ನಮಃ
ಓಂ ರತ್ನರೂಪಿಣ್ಯೈ ನಮಃ
ಓಂ ಶಮನಿಧಿನ್ಯೈ ನಮಃ
ಓಂ ಶತಾನಂದಾಯೈ ನಮಃ
ಓಂ ಶತದ್ಯುತಯೇ ನಮಃ
ಓಂ ಶಿತಿಕಂಠಾಯೈ ನಮಃ
ಓಂ ಪ್ರಯಾಯೈ ನಮಃ
ಓಂ ಧಾತ್ರ್ಯೈ ನಮಃ
ಓಂ ಶ್ರೀವೃಂದಾವನ್ಯೈ ನಮಃ
ಓಂ ಕೃಷ್ಣಾಯೈ ನಮಃ || ೧೦೦ ||
ಓಂ ಭಕ್ತವತ್ಸಲಾಯೈ ನಮಃ
ಓಂ ಗೋಪಿಕಾಕ್ರೀಡಾಯೈ ನಮಃ
ಓಂ ಹರಾಯೈ ನಮಃ
ಓಂ ಅಮೃತರೂಪಿಣ್ಯೈ ನಮಃ
ಓಂ ಭೂಮ್ಯೈ ನಮಃ
ಓಂ ಶ್ರೀಕೃಷ್ಣಕಾಂತಾಯೈ ನಮಃ
ಓಂ ಶ್ಯಾಮಸುಂದರಾಯೈ ನಮಃ
ಓಂ ಭೂಲೋಕಾಮೃತರೂಪಾಯೈ ನಮಃ
ಇತಿ ಶ್ರೀ ತುಳಸೀ ಅಷ್ಟೋತ್ತರಶತನಾಮಾವಳಿಃ ಸಂಪೂರ್ಣಂ
***
ತುಳಸಿ...🍃
ತುಳಸೀ ದಳಗಳನ್ನು ಹೇಗೆ ಉಪಯೋಗಿಸಬೇಕು...?
ದೇವರ ಪೂಜೆ ಅಥವ ಆರಾಧನೆಯ ಸಮಯದಲ್ಲಿ ತುಳಸಿ ಗಿಡದ ಎಲೆಗಳನ್ನು ಬಳಸುವುದು ಸಾಮಾನ್ಯ ಮತ್ತು ಪ್ರಮುಖವಾದುದು. ಇದರ ಪರಿಮಳ ಇನ್ನಿತರೆ ಸುವಾಸನೆ ಯುಕ್ತ ಹೂವುಗಳಿಗಿಂತಲೂ ವಿಭಿನ್ನವಾಗಿದ್ದು ಶ್ರೇಷ್ಠವಾಗಿದೆ. ಸುಗಂಧ ಹೂವು ಅರಳಿದಾಗ ಮಾತ್ರ ಪರಿಮಳವನ್ನು ಬೀರುತ್ತವೆ, ಆದರೆ ತುಳಸಿ ಸಸ್ಯದ ಪ್ರತಿ ಭಾಗವೂ ಪರಿಮಳವನ್ನು ಹೊಂದಿರುತ್ತದೆ. ಇದರ ಬೀಜಗಳು, ಕಾಂಡ, ಬೇರು ಎಲ್ಲವೂ ವಿಶೇಷ ಪರಿಮಳವನ್ನು ಹೊಂದಿದ್ದು ಹಲವಾರು ಗುಣಗಳಿಂದ ಕೂಡಿದೆ. ಅಷ್ಟೆ ಅಲ್ಲದೆ ತುಳಸಿಯನ್ನು ಬೆಳೆಸುವ ಮಣ್ಣು ಮತ್ತು ಸುತ್ತಲಿನ ಪರಿಸರ ಸಹ ಅದರ ಪರಿಮಳವನ್ನು ಹೊಂದಿರುತ್ತದೆ. ನಾವು ಮಾಡಬೇಕಾದುದು, ಪ್ರತಿನಿತ್ಯದಲ್ಲೂ ಕೇವಲ 18 ತುಳಸಿ ದಳಗಳನ್ನು ಉಪಯೋಗಿಸಿದರೆ ಸಾಕು, ನಮ್ಮ ಬದುಕು ಹಸನಾಗುತ್ತದೆ. ಅಷ್ಟೇ ಅಲ್ಲದೆ ಒಂದು ಪ್ರತೀತಿಯ ಪ್ರಕಾರ ಒಂದು ತುಳಸಿ ದಳವನ್ನು ಭಗವಂತನಾದ ಶ್ರೀಮನ್ ನಾರಾಯಣನಿಗೆ ಅರ್ಪಿಸಿದರೆ ಸಾಕು, ಸಂತೃಪ್ತನಾಗುತ್ತಾನೆ ಎಂಬ ನಂಬಿಕೆ ಭಕ್ತರದು.
ಚತುಃ ಕರ್ಣೇ, ಮುಖೇ ಚೈಕಂ, ನಾಭಾವೇಕಂ, ತಥೈವ ಚ |
ಶಿರಸ್ಯೇಕಂ, ತಥಾ ಪ್ರೋಕ್ತಂ, ತೀರ್ಥೇ ತ್ರಯಮುದಾಹೃತಮ್ ||
ಅನ್ನೋಪರಿ ತಥಾ ಪಂಚ, ಭೋಜನಾಂತೇ ದಲತ್ರಯಮ್ |
ಏವಂ ಶ್ರೀತುಳಸೀ ಗ್ರಾಹ್ಯಾ, ಅಷ್ಟಾದಶದಲಾ ಸದಾ ||
ಒಂದೊಂದು ಕಿವಿಯಲ್ಲಿ ಎರಡರಂತೆ ಎರಡು ಕಿವಿಗಳಲ್ಲಿ ನಾಲ್ಕು ದಳಗಳನ್ನು, ಬಾಯಿಯಲ್ಲಿ ಒಂದು ದಳವನ್ನು, ನಾಭಿಯಲ್ಲಿ ಒಂದು ದಳವನ್ನು, ಶಿರಸ್ಸಿನಲ್ಲಿ ಒಂದು ದಳವನ್ನು ಧರಿಸಿ, ಮೂರು ದಳಗಳನ್ನು ತೀರ್ಥಪಾನ ಮಾಡುವಾಗ, ಪಂಚಪ್ರಾಣಾಹುತಿಯ ಸಮಯದಲ್ಲಿ ಐದು ದಳಗಳನ್ನು, ಭೋಜನದ ತರುವಾಯ ಎರಡು ದಳಗಳನ್ನು ಉಪಯೋಗಿಸಬೇಕು, ಹೀಗೆ ಪ್ರತಿನಿತ್ಯದಲ್ಲೂ 18 ತುಳಸೀ ದಳಗಳನ್ನು ಉಪಯೋಗಿಸಬೇಕು.
ಓಂ ನಮೋ ಭಗವತೇ ವಾಸುದೇವಾಯ
ಕೃಷ್ಣ...ಕೃಷ್ಣ..ಕೃಷ್ಣ
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
***
Mysterious Weight Changing Garuda in nachiyar kovil TN
No comments:
Post a Comment