ಕ್ಷೌರ ಮಾಡಿಸುವುದು
ಏಕಾದಶ ಉಪಯತಿ ಕ್ಷಿತಿಜಸ್ತು ಮಾಸಾನ್ ಸಪ್ತ ಅರ್ಕಜಃ
ಏಕಂ ಮಹಿಮದ್ಯುತಿ : ಆಯುಷ್ಯಸ್ತು - ಜ್ಞ ಪಂಚ - ಸಪ್ತ ವಿಧುಃ
ಇಂದ್ರ ಗುರುಃ ಶ್ರೀಮಾಸಾನ್ - ಏಕಾದಶೋ ಸುರಗುರುಶ್ಚ ||*
1 ಮಂಗಳವಾರ ಕ್ಷೌರ ಮಾಡಿಸಿದರೆ 11 ತಿಂಗಳು ಆಯಸ್ಸು ಕಡಿಮೆ ಆಗುತ್ತದೆ ,
2 ಶನಿವಾರ ಮಾಡಿಸಿದರೆ 7 ತಿಂಗಳು ಆಯಸ್ಸು ಕಡಿಮೆ ಆಗುತ್ತದೆ .
3 ಭಾನುವಾರ ಮಾಡಿಸಿದರೆ ಒಂದು ತಿಂಗಳು ಆಯಸ್ಸು ಕಡಿಮೆ ಆಗುತ್ತದೆ .
4 ಬುಧವಾರ ಮಾಡಿಸಿದರೆ 5 ತಿಂಗಳು ಆಯಸ್ಸು ಹೆಚ್ಚುತ್ತದೆ .
5 ಸೋಮವಾರ ಮಾಡಿಸಿದರೆ 7 ತಿಂಗಳು ಆಯಸ್ಸು ಹೆಚ್ಚುತ್ತದೆ .
6 ಗುರುವಾರ ಮಾಡಿಸಿದರೆ 3 ತಿಂಗಳು ಆಯಸ್ಸು ಹೆಚ್ಚುತ್ತದೆ .
7 ಶುಕ್ರವಾರ ಮಾಡಿಸಿದರೆ 11 ತಿಂಗಳು ಆಯಸ್ಸು ಜಾಸ್ತಿಯಾಗುತ್ತದೆ .
ಆದ್ದರಿಂದ
ಮಂಗಳವಾರ , ಶನಿವಾರ , ಭಾನುವಾರ ವರ್ಜ್ಯ
ಸೋಮವಾರ , ಬುಧವಾರ , ಗುರುವಾರ , ಶುಕ್ರವಾರ ವಿಹಿತ
****
೧) " ಸ್ವಾಮಿ ಕ್ಶೌರಕ್ಕೆ ವಿಹಿತ ಮತ್ತು ನಿಷಿದ್ಧ ವಾರಗಳು ಯಾವವು".
ಮಂಗಳವಾರ ಕ್ಷೌರದ ಅಂಗಡಿಗೆ ರಜ"
ನಮ್ಮ ಮಕ್ಕಳು ಮನಸೋ ಇಚ್ಛೆ ಚೌರ ಮಾಡಿಸಿಕೊಳ್ಳಲು ಹೋಗುವರು"
೧) ಏಕಾದಶ ಕ್ಷಪಯತಿ ಕ್ಷಿತಿಜಸ್ತು- ಮಾಸಾನ್ ಸಪ್ತ ಅರ್ಕಜಃ
ಏಕಂ ಮಹಿಮದ್ಯುತಿಃ ಆಯುಷಸ್ತು- ಜ್ಞಃ ಪಂಚ-ಸಪ್ತ ವಿಧುಃ
ಇಂದ್ರ ಗುರುಃ ತ್ರಿಮಾಸಾನ್- ಏಕಾದಶ್ಠೋಸುರಗುರುಶ್ಚ!!
ಅಂದರೆ
ಅ) ಏಕಾದಶ ಕ್ಷಪಯತಿ ಕ್ಷಿತಿಜಸ್ತು= ಮಂಗಳವಾರ ಕ್ಷೌರ ಮಾಡಿಸಿದರೆ
೧೧ ತಿಂಗಳು ಆಯುಸ್ಸು ಕಡಿಮೆ ಆಗುತ್ತದೆ
ಆ) ಮಾಸಾನ್ ಸಪ್ತ ಆರ್ಕಜಃ= ಶನಿವಾರ ಕ್ಷೌರ ಮಾಡಿಸಿದರೆ
೭ ತಿಂಗಳು ಆಯುಸ್ಸು ಕಡಿಮೆ ಆಗುತ್ತದೆ
ಇ) ಏಕಂ ಮಹಿಮದ್ಯುತಿಃ = ಭಾನು ವಾರ ಕ್ಷೌರ ಮಾಡಿಸಿದರೆ
೧ ತಿಂಗಳು ಆಯುಸ್ಸು ಕಡಿಮೆ ಆಗುತ್ತದೆ
ಈ) ಜ್ಞಃ ಪಂಚ = ಬುಧವಾರ ಕ್ಷೌರ ಮಾಡಿಸಿದರೆ
೫ ತಿಂಗಳು ಆಯುಸ್ಸು ಜಾಸ್ತಿ ಆಗುತ್ತದೆ
ಉ) ಸಪ್ತ ವಿಧುಃ = ಸೋಮವಾರ ಕ್ಷೌರ ಮಾಡಿಸಿದರೆ
೭ ತಿಂಗಳು ಆಯುಸ್ಸು ಜಾಸ್ತಿ ಆಗುತ್ತದೆ
ಊ) ಇಂದ್ರ ಗುರುಃ ತ್ರಿಮಾಸಾನ್= ಗುರುವಾರ ಕ್ಷೌರ ಮಾಡಿಸಿ ಕೊಂಡರೆ
೩ ತಿಂಗಳು ಆಯಸ್ಸು ಜಾಸ್ತಿ ಆಗುತ್ತದೆ
ಋ) ಏಕಾದಶಶೋ ಸುರಗುರಶ್ಚ = ಶುಕ್ರವಾರ ಕ್ಷೌರ ಮಾಡಿಸಿದರೆ
೧೧ ತಿಂಗಳು ಆಯುಸ್ಸು ಜಾಸ್ತಿ ಆಗುತ್ತದೆ
ಇದು ಆಯಸ್ಸು ಕಡಿಮೆ-ಜಾಸ್ತಿಯ ಪಟ್ಟಿ
೭ ದಿನಗಳಲ್ಲಿ ಕ್ಷೌರಕ್ಕೆ
ಮಂಗಳವಾರ-ಶನಿವಾರ ಮತ್ತು ಭಾನುವಾರ - ನಿಷಿದ್ಧ ದಿವಸಗಳು.
ಬುಧವಾರ. ಸೋಮವಾರ, ಗುರುವಾರ. ಮತ್ತು ಶುಕ್ರವಾರ
ಈ ನಾಲಕ್ಕು ದಿನಗಳು ವಿಹಿತವಾದುವು.
ಚೌಲೇ ಭಯಂ ದಿನಕೃತೋ ದಿವಸಾಂಶುಕೇಷು
ಚಂದ್ರಸ್ಯ ಕಾತಿರವನೀತನಯಸ್ಯ ಮೃತ್ಯುಃ
ಚಾಂದ್ರೇಸ್ತು ರಾಜ್ಯ ವಿಭವೋ ವಿಜಯೋ ಗುರೋಶ್ಚ
ವ್ಯಾಧಿಃ ಶನೇರುಶನಸೋ ಭುವನಪ್ರಿಯತ್ವಂ
- ಎಂಬುದು ಮಾಧವೀಯ ವಚನ.
ಭಾನುವಾರ ಭಯ
ಸೋಮವಾರ ಕಾಂತಿ
ಮಂಗಳವಾರ ಮೃತ್ಯು
ಬುಧವಾರ ರಾಜ್ಯ ಸಂಪತ್ತು
ಗುರುವಾರ ವಿಜಯ
ಶುಕ್ರವಾರ ಲೋಕಪ್ರಿಯತೆ
ಶನಿವಾರ ವ್ಯಾಧಿ.
ಭಾನುವಾರವೂ ಕ್ಷೌರ ಮಾಡಿಸಬಹುದೆಂಬ ಶಾಸ್ತ್ರಕಾರರ ಅಭಿಪ್ರಾಯವೂ ಇದೆ:
ಪ್ರಯೋಗ ಪಾರಿಜಾತವನ್ನು ನೋಡಿದರೆ ಅಲ್ಲಿ ಹೇಳಿದೆ:
ಪಾಪಗ್ರಹಾಣಾಮ್ ವಾರೇಪಿ ವಿಪ್ರಾಣಾಂ ತು ಶುಭೋ ರವಿಃ!
ದೇವಕಾರ್ಯೇ ಪಿತುಃ ಶ್ರಾದ್ಧೇ ರವೇರಂಶಪರೀಕ್ಷಯೇ
ಕ್ಷೌರಕರ್ಮ ನ ಕುರ್ವೀತ್ ಜನ್ಮ ಮಾಸೆ ನ ಜನ್ಮಭೇ!
ನಿಷಿದ್ಧ ತಿಥಿವಾರದೌ ಭೋಜನಾಂತರಂ ಚ ಯಃ
ಕ್ಷೌರಂ ಕರೋತಿ ತದ್ಗೇಹೇ ನಾಶ್ಯಂತಿ ಪಿತರಃ ಸುರಾಃ!!
ದಶಮೀ ಏಕಾದಶಿ ದ್ವಾದಶೀ ಈ ದಿನತ್ರಯದಲ್ಲಿ ಸಂಕ್ರಾದಿ ಪರ್ವಕಾಲದಲ್ಲಿ
ಹುಣ್ಣಿಮೆ ಅಮವಾಸ್ಯಾದಿ ತಿಥಿಗಳು ಮತ್ತು ಊಟವಾದಮೇಲೆ,ಆಸನದಲ್ಲಿ ಕುಳಿತುಕೊಳ್ಳದೆ ಪ್ರಯಾಣಕ್ಕೆ ಹೊರಡುವ ಕಾಲದಲ್ಲಿ.
ಒಮ್ಮೆ ಸ್ನಾನ ಮಾಡಿದ ನಂತರ,
ಅಭ್ಯಂಗ ಸ್ನಾನದ ನಂತರ ಬಂಗಾರಾದಿ ಒಡವೆ ಧರಿಸಿಕೊಂಡು ಕ್ಷೌರವನ್ನು
ಮಾಡಿಸುವವನ ಮನೆಗೆ ದೇವತೆಗಳು ಪಿತೃಗಳು ಪ್ರವೇಶಿಸುವುದಿಲ್ಲ.
ಕ್ಷೌರಕ್ಕೆ ನಿಷಿದ್ಧವಾದ ತಿಥಿಗಳು ಯಾವುವು?"
ಷಷ್ಠಮಾ ಪೂರ್‍ಣಿಮಾಪಾತಾಚತುರ್ದರ್ಶ್ಯಷ್ಟಮೀ ತಥಾ
ಆಸು ಸನಿಹಿತಂ ಪಾಪಂ ತೈಲೇಷು-ಸ್ತ್ರೀ ಭಗೇ-ಕ್ಷುರೇ!!
ಷಷ್ಠಿ
ಅಮವಾಸ್ಯೆ
ಹುಣ್ಣಿಮೆ
ವ್ಯತಿಪಾತ ಎಂಬ ಯೋಗವಿರುವ ತಿಥಿ
ಚತುರ್ದರ್ಶೀ
ಅಷ್ಟಮಿ
ಈ ದಿವಸಗಳಲ್ಲಿ ತೈಲಾಭಂಗ-ಸ್ತ್ರೀ ಸಂಪರ್ಕ ಹಾಗೂ ಕ್ಷೌರ
ಈ ಮೂರು ನಿಷಿದ್ಧ,ಆದ್ದರಿಂದ ಈ ತಿಥಿಗಳಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳಬಾರದು.
ಕ್ಷೌರ ಮಾಡ್ಸಿ ಕೊಳ್ಳಲಿಕ್ಕೂ ದಿಕ್ಕೇನ್ನು ನೋಡ್ಸಿ ಮಾಡ್ಸಿ ಕೊಳ್ಳ ಬೇಕೇನ್ರಿ.
ಉದಜ್ಞ್ಮುಖ ಪಾಜ್ಞ್ಮುಖೋ ವಾ ವಪನಂ ಕಾರಯೇತ್ ಸುಧೀಃ
ಉತ್ತರದಿಕ್ಕಿಗೆ ಅಭಿಮುಖವಾಗಿ ಅಥವಾ
ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಂಡು ಕ್ಷೌರವನ್ನು
ಮಾಡಿಸಿ ಕೊಳ್ಳಬೇಕು.
ಕೈಕಾಲು ಉಗುರುಗಳನ್ನು ತೆಗೆಯ ಬೇಕು.
ಕಂಕುಳಿನ ಕೂದಲೂ ಸಹ ತೆಗೆಯಬೇಕು
ಮೂಗು, ಹುಬ್ಬು, ಕಿವಿಯಲ್ಲಿ ಚಾಚಿಕೊಂಡಿರುವ ಉದ್ದನೆಯ
ಕೂದಲುಗಳನ್ನೂ ಸಹ ನಿಧಾನವಾಗಿ ತೆಗೆಯ ಬೇಕು.
ಬಿದ್ದ ಕೂದಲೂಗಳನ್ನು ಸರಿಯಾಗಿ ತೆಗೆದು ದೂರ
ಬಿಸಾಡಬೇಕು.
"ಸ್ವಾಮಿ"ಹಾಗೇನೆ ಈ ಕ್ಷೌರ ವಿಧಿಗೂ ಯಾವುದಾದ್ರು ದೇವರನ್ನು ಸ್ಮರಿಸಬೆಕೆಂದು ಇದೆಯಾ.
ಸರಿಯಾದ ಪ್ರಶ್ನೇನ್ನ ಯೋಚಿಸಿ ಕೇಳಿದಿರಿ.
ಕೇಶವಮಾನರ್ತಪುರಂ ಪಾಟಲೀಪುತ್ರಂ ಪುರಿಮಹಿಚ್ಛತಾಮ್
ದಿತಿಮದಿತಿಂ ಚ ಸ್ಮರತಾಂ ಕ್ಷೌರವಿಧೌ ಭವತಿ ಕಲ್ಯಾಣಮ್
ಕ್ಷೌರೇ ಸ್ಮರಣೇ ದೇಶಾಂ ದೋಷಾ ನಶ್ಯಂತಿ ನಿಶ್ಯೇಷಾಃ !!
ಕ್ಷೌರದವನು ತನ್ನ ಕೆಲಸ ತಾನು ಮಾಡುತ್ತಿದ್ದಾನೆ.
ಅವನು ತಲೆಮೇಲೆ ಕತ್ತರಿಯಾಡಿಸುತ್ತಿರುವಾಗ ನೀವು
ಸುಮ್ಮನೆ ಇರಬಾರದು.ನಿದ್ದೆ ಹೋಗಬಾರದು.
ಕೇಶವ ದಿತಿ-ಅದಿತಿ-ಆನರ್ತ ದೇಶ-ಪಾಟಲೀಪುತ್ರ-
ಅಹಿಚ್ಛತ್ರ ಇವುಗಳನ್ನು ಸ್ಮರಿಸಿದರೆ ಕ್ಷೌರ ಕಾಲದ
ದೋಷಗಳು ನಾಶವಾಗಿ ಮಂಗಳವು
ಪ್ರಾಪ್ತಿಯಾಗುತ್ತದೆ.ಸರ್ಪವನ್ನು
ಛತ್ರಿಯಾಗಿಸಿ ಕೊಂಡಿರುವ ಶ್ರೀ ನೃಸಿಂಹ ದೇವರು.
ಇವರುಗಳನ್ನು ಸ್ಮರಣೆ ಮಾಡುತ್ತಿರಿ.ನಿಮಗೂ ಕ್ಷೇಮ.
ಎಷ್ಟು ದಿನಗಳಿಗೊಮ್ಮೆ ಕ್ಷೌರವನ್ನು ಮಾಡಿಸಿಕೊಳ್ಳಬೇಕು?
ದಶಾಹಾತ್-ದ್ವಾದಶಾಹಾದ್ವಾ-ಮಾಸಾದ್ವಾ ಕ್ಷೌರಮಿಷ್ಯತೇ
ಊರ್ಧ್ವಂ ಮಾಸಾತ್ ಅನಾಯುಷ್ಯಂ ಅಧಃ ಪಕ್ಷಾತ್ತು ಸಂಪದೇ!!
ಹತ್ತು ದಿನ ಅಥವಾ ಹನ್ನೆರೆಡು ದಿನ ಅಥವಾ ಹೆಚ್ಚೆಂದರೆ
ಒಂದು ತಿಂಗಳಿಗೊಮ್ಮೆ ಯಾದರೂ ಕ್ಷೌರವನ್ನು ಮಾಡಿಸಿಕೊಳ್ಳಲೇಬೇಕು.
ಅದಕ್ಕಿಂತ ಹೆಚ್ಚು ದಿನಗಳಾದರೆ ಆಯುಷ್ಯಕ್ಕೆ ಹಾನಿ,
೧೫ ದಿನದ ಒಳಗೆ ಕ್ಷೌರವನ್ನು ಮಾಡ್ಸಿಕೊಂಡ್ರೆ ಸಂಪತ್ತು ಉಂಟಾಗುತ್ತದೆ,
ಈ ವಿಷಯವು ಗೃಹಸ್ಥಾಶ್ರಮಿಗಳಿಗೆ ಸಂಬಂಧಪಡುತ್ತದೆ.
ಮುಖ ಕ್ಷೌರಕ್ಕೂ ಏನಾದರು "ಅಬ್ಜಕ್ಶನ್" ಉಂಟೋ"ನೋಡಿ,
ಬ್ರಾಹ್ಮಣರಿಗೆ ಮುಖ ಕ್ಷೌರ ನಿಷಿದ್ಧ.
ಹಿಂದಿನ ಕಾಲದಲಿ ಮುಖ ಕ್ಷೌರಕ್ಕೆ ’ಶ್ಮಶ್ರು ಕರ್ಮ’ವೆಂದು ಕರಿತ್ತಿದ್ದರು
ಆಗಿನ ಕಾಲದಲ್ಲಿ ಕ್ಷತ್ರಿಯರು ಮಾತ್ರ ಪ್ರತಿ ೫ ದಿನಗಳಿಗೊಮ್ಮೆ ಮುಖ ಕ್ಷೌರ
ಮಾಡಿಸಿಕೊಳ್ಳುತ್ತಿದ್ದರು ಇದರಲ್ಲೆ ಮೀಸೆಯನ್ನು "ಕಟ್"-"ಟ್ರಿಂ" ಮಾಡೋದು
ಸೇರಿದೆಯಂತೆ . ಬ್ರಾಹ್ಮಣರಿಗೆ ಮುಖ ಕ್ಷೌರ ನಿಷಿದ್ಧ.
ಆದಕಾರಣ ಅವರನ್ನು " ಅಲಂಕಾರ ಪಂಕ್ತಿ" ಗೆ ಕೂಡಿಸುವುದೇ ಇಲ್ಲ.
ಈಗ ಅವೆಲ್ಲಾ ನೋಡೋಲ್ಲ ಇದು ಮಾಧ್ವರ ಶಿಷ್ಟಾಚಾರ.
ಮೇಲೆ ಹೇಳಿದ ವಿಷಯಗಳಿಗೆ ಇಲ್ಲಿ ಪ್ರಮಾಣ ಸ್ಪಷ್ಟ ಪಡಿಸಿದೆ:
ಪಂಚಮೇ ಪಂಚಮೇ ರಾಜ್ಞಾಂ ಕ್ಷರಭೇಸ್ಯೂರಭೇ ಸೂರ್ಯಯೇಥವಾ
ಶ್ಮಶ್ರು ಕರ್ಮ ಪ್ರಕುರ್ವೀತ ನವಮೇ ದಿವಸೇ ತು ನ!!
ಪ್ರಶ್ನೆ- ಸ್ವಾಮಿ- ಜನ್ಮ ಮಾಸ-ಜನ್ಮ ನಕ್ಷತ್ರದಲ್ಲಿ
ಕ್ಷೌರವನ್ನು ನೋಡದೆ ಮಾಡದೆ ಮಾಡಿಸಿಕೊಂಡು
ಬಿಡುತ್ತಾರೆ ಕಂಪನಿಗೆ ಸ್ಕೂಲ್ಗೆ ರಜಾ ಇದೆಂತ. ಇದಕ್ಕೇನು ನಿಷಿದ್ಧ ಇದೆಯಾ?
ಕ್ಶೌರಕರ್ಮ ನ ಕುರ್ವೀತ ಜನ್ಮಮಾಸೇ ಚ ಜನ್ಮಭೇ!
ಜನ್ಮ ಮಾಸ ಮತ್ತು ಜನ್ಮ ನಕ್ಷತ್ರದಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳಬಾರದು.
ನಾನು ನೋಡಿದ್ದೀನಿ
ಕೆಲವರು ಶ್ರಾದ್ಧಗಳ ದಿನ ಕ್ಷೌರವನ್ನು ಮಾಡಿಸಿಕೊಂಡು ಬಿಡುತ್ತಾರೆ.
ಇ) ಕೆಲವೊಂದು ದಿನಗಳಲ್ಲಿ ಕ್ಷೌರವನ್ನು ಮಾಡಿಸಿ ಕೊಂಡರೆ ಅದು
ಸುರಾಪಾನಕ್ಕೆ ಸಮಾನಾಂತ
ಇಲ್ಲಿ ಮೂರು ಕೊಶ್ಚನ್ ಗಳಿವೆ
ಇವುಗಳು ಸರಿಯಾ,
ಪಿತೃದಿನೇ ದಶಮ್ಯಾದಿದಿನತ್ರಯೇ
ಕ್ಷೌರಾಭ್ಯಂಗಂ ನ ಕುರ್ವೀತ ಸುರಾಪಾನಸಮಂ ಭವೇತ್!!
-ಮಾತಾ ಪಿತೃಗಳ ಶ್ರಾದ್ಧದ ದಿನದಲ್ಲಿ, ದಶಮೀ-ಏಕಾದಶಿ ಮತ್ತು ದ್ವಾದಶೀ
ಈ ಮೂರು ದಿನಗಳಲ್ಲಿ (ತಿಥಿತ್ರಯದಲ್ಲಿ) ಕ್ಷೌರವನ್ನು ಮಾಡಿಸಿಕೊಳ್ಳಬಾರದು
ಮತ್ತು
ತೈಲಾಭ್ಯಂಗವನ್ನೂ ಮಾಡಿಸಿ ಕೊಳ್ಳಬಾರದು
ಒಂದು ವೇಳೇ ಈ ಮೇಲೆ ಕಾಣಿಸಿದ ತಿಥ್ಯಾದಿಗಳಲ್ಲಿ ಕ್ಷೌರವನ್ನು
ಮಾಡಿಸಿಕೊಂಡರೆ ಅಥವಾ ತೈಲಾಭ್ಯಂಗ
ಮಾಡಿಕೊಂಡರೆ ಅದು ಸುರಾಪಾನಕ್ಕೆ ಸಮನಾದುದು ಆಗುತ್ತದೆ.
ಕ್ಷೌರವನ್ನು ಮಾಡಿಸಿಕೊಂಡಮೇಲೆ ದೇವರಪೂಜೆ ಮಾಡುವುದು ಶಿಷ್ಟ ಸಂಪ್ರದಾಯವಲ್ಲ.
ಇದರಂತೆ ಬೆಳಗ್ಗೆ ಎದ್ದೋಡನೆ ನೀರು ನಿಂತು ಹೋಗುತ್ತೇಂತ ತೈಲಾಂಭ್ಯಂಗಮನವೂ
ನಿಷಿದ್ಧವಾಗಿದೆ. ಆದ್ದರಿಂದ ಪ್ರಾತಃ ಕಾಲದಲ್ಲಿ ತೈಲಾಭ್ಯಂಗವನ್ನು ಮಾಡಿಕೊಳ್ಳಬಾರದು.
ಆದರೆ ಉಗಾದಿ ಪಾಡ್ಯ-ಬಲಿ ಪಾಡ್ಯ ದಿನಗಳಲ್ಲಿ ಪ್ರಾತಃ ಕಾಲದಲ್ಲಿ ತೈಲಾಭ್ಯಂಗ
ಮಾಡಿಕೊಳ್ಳಬೇಕೆಂದು ವಿಶೇಷವಾದ ವಿಧಿಯು ಇರುವುದರಿಂದ ಅಂತಹ ದಿನಗಳಲ್ಲಿ
ಪ್ರಾತಃ ಕಾಲದಲ್ಲಿ ತೈಲಾಭ್ಯಂಗವನ್ನು ಮಾಡಿಕೊಳ್ಳುವುದು ವಿಹಿತ. ಆದರೆ ವಿಶೇಷವಿಧಿ
ಇಲ್ಲದಿರುವ ದಿನಗಳಲ್ಲಿ ಪ್ರಾತಃಕಾಲದಲ್ಲಿ ತೈಲಾಭ್ಯಂಗವನ್ನು
ಮಾಡಿಕೊಳ್ಳುವುದು ನಿಷಿದ್ಧವೆಂದು ತಿಳಿಯತಕ್ಕದ್ದು.
೯) ಮತ್ತೆಲ್ಲೋ ಕೇಳಿದ್ದೆ
ರಂಗ ಭೂಮಿ ನಟರು, ರಾಜರು,ಕಲಾವಿದರು ಬ್ಯೂಟಿ ಷೋದವರು ಯಾವಾಗ ಬೇಕಾದರು
ಕತ್ತರಿಸಿಕೊಳ್ಳಬಹುದು ಎಂದು ಇದಕ್ಕೆ ಆಧಾರಗಳಿವೆಯಾ?
-
" ಹೌದು. ರಾಜಕಾರ್ಯದಲ್ಲಿ ನಿಯುಕ್ತರು- ನಟರು-ಸೌಂದರ್ಯದಿಂದ
ಬದುಕುವವರು ಇವರಿಗೆ ಮೀಸೆ, ಕೂದಲು ಉಗುರು ಕತ್ತರಿಸಲು ನಿಬಂಧನೆಯೇ. ಇಲ್ಲ
ಯಾವಾಗಲಾದರೂ ಕತ್ತರಿಸಬಹುದು
ರಾಜಕಾರ್ಯನಿಯುಕ್ತಾನಾಂ ನಟಾನಾಂ ರೂಪಜೀವಿನಾಂ
ಶ್ಮಶ್ರುಲೋಮನಖಚ್ಛೇದೇ ನಾಸ್ತಿ ಕಾಲವಿಧಿನೃರ್ಣಾಮ್!!
ಅರ್ಥ ಸುಲಭವಾಗಿದೆ ಇಲ್ಲಿ
ತೀರ್ಥಾದಿ ಕ್ಷೇತ್ರ ನಿಮಿತ್ತವಾದ ಕ್ಷೌರವನ್ನು ನಿಷಿದ್ಧ ದಿನಗಳಲ್ಲೂ ಮಾಡ ಬಹುದು
ಕ್ಶೌರಂ ನೈಮಿತ್ತಿಕಂ ಕುರ್ಯಾತ್ ನಿಷೇಧೇ ಸತ್ಯಪ್ ಧ್ರುವಂ- ಎಂಬುದಾಗಿ ಶಾಸ್ತ್ರಗಳಲ್ಲಿ
ಉಲ್ಲೇಖವಾಗಿವೆ.
ಹೀಗೆ ಕ್ಷೌರಕ್ಕೂ, ಆಯುಷ್ಯಕ್ಕು ಸಮಬಂಧವಿದೆ.
ಅದಕ್ಕೋಸ್ಕರವಾಗಿಯೇ ಕ್ಷೌರಕ್ಕೆ " ಆಯುಷ್ಕರ್ಮ" ಎಂಬ ಶಬ್ದ ಪ್ರಸಿದ್ಧವಾಗಿತ್ತು.
ನಮ್ಮ ಕಾಲದಲ್ಲಿ ಸೆಲೂನ್ ಬೋರ್ಡ್ " ಇಲ್ಲಿ ಆಯುಷ್ಕರ್ಮ ಮಾಡುತ್ತದೆ " ಎಂಬುದಾಗಿ ಇತ್ತು.
ಚೌಲೇನವಾಯುಷೋವೃದ್ಧಿಃ ಚೌಲೇನೈವಾಯುಶ್ಃಅಃ ಕ್ಷಯಃ--
ಆದ್ದರಿಂದ ಅಶುಭ ವಾರಗಳಲ್ಲಿ ಕ್ಷೌರವನ್ನು ಮಾಡಿಸಿದರೆ
ಆಯುಷ್ಯ ಕ್ಷೀಣಿಸುತ್ತದೆ. ಶುಭ ವಾರಗಳಲ್ಲಿ ಕ್ಷೌರವನ್ನು ಮಾಡಿಸುತ್ತಾ
ದೀರ್ಘಾಯುಷ್ಯವನ್ನು ಹೊಂದಬಹುದು.
ಆದ್ದರಿಂದಲೇ ಕ್ಷೌರವನ್ನು "ಆಯುಷ್ಕರ್ಮ" ಎನ್ನಲಾಗಿದೆ.
೧೦) ಅಶೌಚದಲ್ಲಿ ಕ್ಷೌರದ ಬಗ್ಗೆ ಹೇಗೆ? ತಿಳಿಸುತ್ತಿರಾ
ಅಥ ಅಶೌಚ ಕ್ಷೌರ ವಿಷಯೇಹ್-
ಸನ್ನಿಧಾನೇ ಸಪಿಂಡಾನಾಂ ವಪನಂ ತದ್ವಿಧೀಯತೇ
ಅಸನ್ನಿಧಾನೇ ಸರ್ವತ್ರ ವಪನಂ ನೈವ ಕಾರಯೇತ್!!
ಒಬ್ಬ ಮೃತನಾದರೆ ಅಲ್ಲಿಯೆ ಸನ್ನಿಹಿತರಾದ ಸಪಿಂಡರಿಗೆ
( ೧೦ ದಿನದ ದಾಯಾದಿಗಳಿಗೆ) ಕ್ಷೌರವು ವಿಹಿತವಾದುದು
ಮೃತನ ಸನ್ನಿಧಿಯಲ್ಲಿ ಸಪಿಂಡರು ಇಲ್ಲದಿದ್ದರೆ ಅವರು ಯಾವಾಗಲೂ
ಮರಣ ನಿಮಿತ್ತವಾದ ಕ್ಷೌರವನ್ನು ಮಾಡಿಸ್ಬೇಕಾಗಿಲ್ಲ.
೧೦) ಕಡೆ ಕೊಶ್ಚನ್" ಹುಟ್ಟಿದ ಗಂಡು ಮಗುವಿಗೆ ಎಷ್ಟು
ವರ್ಷದೊಳಗೆ ಕ್ಷೌರ ಸಂಸ್ಕಾರ ಮಾಡಬೇಕು?"
ಪಂಚಮಾಬ್ದಾತ್ ಊರ್ದ್ವಂ ಕೇಶಧಾರಣಂ ಅನಾಯುಷ್ಯಮ್!
ಹುಟ್ಟಿದ ಗಂಡು ಮಗುವಿಗೆ ಐದು ವರುಷದೊಳಗೆ ಕ್ಷೌರ
ಸಂಸ್ಕಾರವನ್ನು ಮಾಡಿಸಬೇಕು.
ಇಲ್ಲದಿದ್ದರೆ ಆಯುಷ್ಯಕ್ಕೆ ತೊಂದರೆ ಇದೆ.
ಐದು ವರ್ಷದ ಮೇಲೆ ಕೇಶಧಾರಣೆಯು ಆಯುಸ್ಸನ್ನು ಕಡಿಮೆ ಮಾಡುತ್ತದೆ.
****
No comments:
Post a Comment