ವಿಷ್ಣು ಪಂಚಕ ವ್ರತ
ವಿಷ್ಣುಪಂಚಕ ವ್ರತವು ಶ್ರೀಹರಿಯ ಪ್ರೀತಿಗಾಗಿ ಮಾಡತಕ್ಕಂತಹ ವ್ರತವು. ಇದನ್ನು ಮಾಡುವುದು ವಿಷ್ಣುಪ್ರೇರಣಯಾ, ವಿಷ್ಣು ಪ್ರೀತ್ಯರ್ಥಂ. ಈ ವ್ರತದ ನಿಯಮದ ಪ್ರಕಾದ ಪ್ರತಿ ತಿಂಗಳೂ ಐದು ಉಪವಾಸವನ್ನು ಮಾಡಬೇಕಾಗುತ್ತದೆ. ಅವುಗಳೆಂದರೆ ಪ್ರತಿ ತಿಂಗಳ ಎರಡು ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಶ್ರವಣ ನಕ್ಷತ್ರದ ದಿನ ಉಪವಾಸವನ್ನು ಶ್ರೀಹರಿ ಪ್ರೀತಿಗಾಗಿ ಮಾಡಬೇಕು. ಒಟ್ಟು ವರ್ಷದಲ್ಲಿ 60 ಉಪವಾಸಗಳನ್ನು ಮಾಡಬೇಕಾಗುತ್ತದೆ.(ಸಾಮಾನ್ಯವಾಗಿ)
ವಿಷ್ಣುಪಂಚಕ ಆರಂಭಿಸಲು ಸೂಕ್ತ ಸಮಯ : -
ವಿಷ್ಣು ಪಂಚಕ ಉಪವಾಸ ಆರಂಭಿಸುವ ಹಿಂದಿನ ದಿನ ಪುಣ್ಯಾಹವಾಚನ ಮಾಡಿಕೊಂಡು ಆರಂಭಿಸಬೇಕು.
ಅ. ಭಾದ್ರಪದ ಶುದ್ಧ ಏಕಾದಶಿ ಅಂದು ಶ್ರವಣ ನಕ್ಷತ್ರವಾಗಿದ್ದಲ್ಲಿ
ಆ. ಮಾರ್ಗಶಿರ ಶುದ್ಧ ಪಂಚಮಿ ಶ್ರವಣ ನಕ್ಷತ್ರವಾಗಿದ್ದಲ್ಲಿ
ಇ. ಮಾರ್ಗಶಿರ ಶುದ್ಧ ಏಕಾದಶಿ (ಶ್ರವಣ ನಕ್ಷತ್ರವಿರಲಿ ಅಥವಾ ಇಲ್ಲದಿರಲಿ)
ಆದರೆ, ನಾವು ಆರಂಭಿಸುವ ವಿಷ್ಣುಪಂಚಕದ ಮಾಸದಲ್ಲಿ ಎರಡು ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಶ್ರವಣ ನಕ್ಷತ್ರದ ದಿನ ಉಪವಾಸಕ್ಕೆ ಅನುವಾಗಿರಬೇಕು. ಕೆಲವು ತಿಂಗಳಲ್ಲಿ ಕೆಲವು ದಿನ ವಿಷ್ಣುಪಂಚಕದ ಉಪವಾಸವಿರುವುದಿಲ್ಲ. ಆದರೆ ನಾವು ಆರಂಭಿಸುವ ತಿಂಗಳು ಐದು ಉಪವಾಸವಿರಲೇಬೇಕು. ಯಾವುದೇ ಉಪವಾಸ ಲೋಪವಾಗಿರಕೂಡದು.
ವಿಷ್ಣು ಪಂಚಕ ವ್ರತ ಫಲ – ಬ್ರಹ್ಮಹತ್ಯಾ ದೋಷ ಪರಿಹಾರ, ಸುರಾಪಾನ ದೋಷ ಪರಿಹಾರ, ಪರಸ್ತ್ರೀಗಮನ ದೋಷ ಪರಿಹಾರ, ಗೋಹತ್ಯಾ, ಸ್ತ್ರೀವಧಾ, ಬಾಲ ಹತ್ಯಾ, ಸುವರ್ಣ ಚೌರ್ಯ ಪಾಪ ಪರಿಹಾರ ವೇ ಮೊದಲಾದ ಬಹು ಪಾತಕ ದೋಷ ನಾಶಕವಾಗಿರುತ್ತದೆ.
ವಿಷ್ಣುಪಂಚಕ ನಿಯಮಗಳು :
ವಿಷ್ಣು ಪಂಚಕ ಉಪವಾಸ ಆರಂಭಿಸುವ ಹಿಂದಿನ ದಿನ ಪುಣ್ಯಾಹವಾಚನ ಮಾಡಿಕೊಂಡು ಸಂಕಲ್ಪ ಪೂರ್ವಕ ದೃಢ ಮತಿಯಿಂದ ನಿಶ್ಚಯಿಸಬೇಕು.
ಅಂದು ವಿಷ್ಣುಪಂಚಕದ ಸಂಕಲ್ಪ ಮಾಡಬೇಕು ; ವ್ರತ ಮಾಡತಕ್ಕವನು ದೈನಂದಿನ ಪೂಜೆ, ಆಹ್ನೀಕ, ನೈವೇದ್ಯ, ವೈಶ್ವದೇವ, ಹಸ್ತೋದಕ, ಮುಂತಾದವನ್ನು ಮಾಡಿ, ಹಿರಿಯರಿಗೆ ಕೊಟ್ಟು, ತಾನೂ ಎಂದಿನಂತೆ ಮೂರು ಬಾರಿ ತೀರ್ಥ ಸ್ವೀಕರಿಸಬೇಕು. ಎಂದಿನಂತೆ ಅಂಗಾರ ಅಕ್ಷತೆಯನ್ನು ಹಚ್ಚಿಕೊಳ್ಳಬೇಕು, ಉಪವಾಸದ ಮಾರನೇ ದಿನ ಅಂದರೆ ಪಾರಣೆಯ ದಿನ ಬ್ರಾಹ್ಮಣ – ಮುತ್ತೈದೆಯರಿಗೆ, ಭೋಜನ ಮಾಡಿಸಿ ತಾನೂ ಭುಂಜಿಸುವುದು ಅತಿಶಯ ಫಲದಾಯಕವಾಗಿರುತ್ತದೆ. ವ್ರತದ ಆರಂಭದಲ್ಲಾಗಲೀ. ಮಧ್ಯದಲ್ಲಾಗಲೀ, ಅಂತ್ಯದಲ್ಲಾಗಲೀ, ಉದ್ಯಾಪನೆಯನ್ನು ಅನುಕೂಲವಿದ್ದ ದಿನ ಮಾಡಬೇಕು. ಉದ್ಯಾಪನೆಯ ಹಿಂದಿನ ದಿನ ಉಪವಾಸದ ದಿನವಾಗಿರಬೇಕು. ಉದ್ಯಾಪನೆಯ ದಿನದಂದು 5-6,12, ಅಥವಾ 60 ಬ್ರಾಹ್ಮಣ ದಂಪತಿಗಳಿಗೆ ಸಂತರ್ಪಣೆಯನ್ನು ಯಥಾಶಕ್ತಿ ನಡೆಸಬಹುದು. ಅಕಸ್ಮಾತ್ ಹುಣ್ಣಿಮೆ, ಅಮಾವಾಸ್ಯೆ, ಶ್ರವಣ ನಕ್ಷತ್ರ ಉಪವಾಸದ ದಿನ ತಂದೆ ಅಥವಾ ತಾಯಿಯ ಶ್ರಾದ್ಧವು ಬಂದಲ್ಲಿ, ಅಂದು ಶ್ರಾಧ್ಧ , ಬ್ರಾಹ್ಮಣ ಭೋಜನ ಮುಗಿಸಿ, ತಾನೂ ಭೋಜನ ಮಾಡತಕ್ಕದ್ದು. ಇಂದು ಉಪವಾಸ ವಿಘ್ನವಾಗುವ ದೋಷವಿರುವುದಿಲ್ಲ. ದಶಮಿಯಂದು, ಸಾಧನದ್ವಾದಶಿಯಂದು ಮತ್ತು ಶಿವರಾತ್ರಿಯ ದಿನ ಶ್ರವಣ ನಕ್ಷತ್ರವಿದ್ದಲ್ಲಿ ಅಂದು ಉಪವಾಸ ಮಾಡಕೂಡದು. ಹುಣ್ಣಿಮೆಯಂದೇ ಅಥವಾ ಏಕಾದಶಿಯಂದೇ ಶ್ರವಣವು ಬರುವುದೇ ಮೊದಲಾದ ಕ್ರಮದಿಂದ ಉಪವಾಸವು ತಪ್ಪಿಹೋದಲ್ಲಿ, ಯಾವುದೇ ದೋಷವಿಲ್ಲ. ಆದರೆ ಶ್ರಮದಿಂದಲೋ ಅಥವಾ ರೋಗಾದಿ ನಿಮಿತ್ತದಿಂದಲೋ ಉಪವಾಸ ತಪ್ಪಿದರೆ, ವಿಷ್ಣುಪಂಚಕ ವರ್ಷ ಕಳೆದ ಮುಂದಿನ ತಿಂಗಳು ಆಯಾ ದಿನದಲ್ಲಿ ಉಪವಾಸ ಮಾಡಿ ಪೂರ್ತಿಗೊಳಿಸತಕ್ಕದ್ದು. ವಿಷ್ಣುಪಂಚಕ ವರ್ಷವೆಂದರೆ : ಈ ವರ್ಷ ಭಾದ್ರಪದ ಮಾಸದಲ್ಲಿ ಆರಂಭಿಸಿದರೆ ಮುಂದಿನ ವರ್ಷದ ಶ್ರಾವಣ ಅಮಾವಾಸ್ಯೆಯ ತನಕ ಆಚರಿಸಬೇಕು. ಅಥವಾ ಈ ವರ್ಷ ಮಾರ್ಗಶಿರ ಮಾಸದಲ್ಲಿ ಆರಂಭಿಸಿದರೆ ಮುಂದಿನ ಕಾರ್ತೀಕ ಮಾಸದ ತನಕ ಆಚರಿಸಬೇಕು.
ವಿಷ್ಣುಪಂಚಕ ವ್ರತ ಸಂಕಲ್ಪ –
ಆಚಮನ, ಪ್ರಣವಸ್ಯ………..(ಪ್ರಾಣಾಯಾಮ) .ಸಂಕಲ್ಪ ಸಂವತ್ಸರೇ…… ಋತೌ………… ಮಾಸೇ………… ಪಕ್ಷೇ……. ತಿಥೌ…… ವಾಸರೇ…… ಯೋಗೇ….. ಕರಣೇ…… ಭಾರತೀರಮಣ ಮುಖ್ಯಪ್ರಾಣಾಂತರ್ಗತ ಅಸ್ಮತ್ ಕುಲದೇವತಾಭಿನ್ನ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಕಲ ದೋಷ ಪರಿಹಾರಾರ್ಥಂ, ಮಾನಸಿಕ , ಶಾರೀರಿಕ, ಸಾಂಸರ್ಗಿಕ ದೋಷಪರಿಹಾರಾರ್ಥಂ, ದೇಹ ತಥಾ ಮನಃ ಶುದ್ಯರ್ಥಂ ಸಂವತ್ಸರಪರ್ಯಂತಂ ವಿಷ್ಣುಪಂಚಕವ್ರತಮಹಂ ಕರಿಷ್ಯೇ.
ವಿಷ್ಣುಪಂಚಕ ಕಾಲದಲ್ಲಿ ನಿಯಮವನ್ನು ಪಾಲಿಸುವವನು ಈ ಕೆಲವು ಕರ್ತವ್ಯಗಳನ್ನು ಮಾಡಿದರೆ ಶ್ರೇಷ್ಟ. ಕೃಷ್ಣಾನದಿ ಸ್ನಾನ, ಕೃಷ್ಣದೇವರ ದರ್ಶನ, ಕೃಷ್ಣ ವಿಗ್ರಹ ದಾನ. ಈ ಕಾರ್ಯಗಳನ್ನು ಆ ಒಂದು ವರ್ಷದಲ್ಲಿ ಎಂದಾದರೂ ಮಾಡಬಹುದು.
ಅರ್ಘ್ಯ ಪ್ರಧಾನ (ಬೇರೆ ಬೇರೆ ದಿನಗಳಂದು ಬೇರೆ ಬೇರೆ ಅರ್ಘ್ಯಗಳು) ಈ ರೀತಿ ಇವೆ :
ಏಕಾದಶಿ ದಿನ ಅರ್ಘ್ಯ ಕೊಡುವಂತಿಲ್ಲ. ಆದರೆ ದ್ವಾದಶಿ ದಿನ ಕೊಡತಕ್ಕದ್ದು.
ಶುದ್ಧ ದ್ವಾದಶಿ ದಿನ – ಓಮ್ ಕೇಶವಾಯ ನಮ:ಓಮ್……ಕೇಶವಂ ತರ್ಪಯಾಮಿ; ……….. ದಾಮೋದರಾಯ (12 ನಾಮ ತರ್ಪಣ) – ದಾಮೋದರಂ ತರ್ಪಯಾಮಿ .
ಬಹುಳ ದ್ವಾದಶಿ ದಿನ – ಓಮ್ ಶ್ರೀಸಂಕರ್ಷಣಾಯ ನಮ:ಓಮ್… ಶ್ರೀಕೃಷ್ಣಾಯ ನಮ (12 ನಾಮ ತರ್ಪಣ) – ಶ್ರೀಕೃಷ್ಣಂ ತರ್ಪಯಾಮಿ |
ಪೌರ್ಣಮಿ ದಿನ – ೧) ಓಮ್ ಶ್ರೀವಿಧವೇ ನಮ: ಓಮ್ ವಿಧುಂ ತರ್ಪಯಾಮಿ ; ೨) ಓಮ್ ಶ್ರೀ ಶಶಿನೇ ನಮ:ಓಮ್ ಶಶಿಂ ತರ್ಪಯಾಮಿ., ೩) ಶಶಾಂಕಾಯ ನಮ: ಶಶಾಂಕಂ ತರ್ಪಯಾಮಿ. ೪) ಚಂದ್ರಾಯ ನಮ:ಚಂದ್ರಂ ತರ್ಪಯಾಮಿ; ೫) ಸೋಮಾಯ ನಮ: ಸೋಮಂ ತರ್ಪಯಾಮಿ; ೬) ಉಡುಪಾಯ ನಮ: ಉಡುಪಂ ತರ್ಪಯಾಮಿ; ೭) ಅಮೃತಾಯ ನಮ: ಅಮೃತಂ ತರ್ಪಯಾಮಿ; ೮) ಮನೋಹರಾಯ ನಮ: ಮನೋಹರಂ ತರ್ಪಯಾಮಿ; ೯) ಪಾವನಾಯ ನಮ: ಪಾವನಂ ತರ್ಪಯಾಮಿ ; ೧೦) ಹಿಮಕೃತೇ ನಮ: ಹಿಮಕೃತಂ ತರ್ಪಯಾಮಿ; ೧೧) ನಿಶಾಕೃತೇ ನಮ: ನಿಶಾಕೃತಂ ತರ್ಪಯಾಮಿ; ೧೨) ಓಮ್ ಶ್ರೀ ದೀಪ್ಯಮಾನಾಯ ನಮ:ಓಮ್ ದೀಪ್ಯಮಾನಂ ತರ್ಪಯಾಮಿ
ಅಮಾವಾಸ್ಯಾ ದಿನ – ೧) ಓಮ್ ಶ್ರೀ ಮಹೀಧರಾಯ ನಮ: ಓಮ್ ಮಹೀಧರಂ ತರ್ಪಯಾಮಿ; ೨) ಜಗನ್ನಾಥಾಯ ನಮ: ಜಗನ್ನಾಥಂ ತರ್ಪಯಾಮಿ; ೩) ದೇವೇಂದ್ರಾಯ ನಮ: ದೇವೇಂದ್ರಂ ತರ್ಪಯಾಮಿ; ೪) ದೇವಕೀಸುತಾಯ ನಮ: ದೇವಕೀಸುತಂ ತರ್ಪಯಾಮಿ; ೫) ಚತುರ್ಭುಜಾಯ ನಮ: ಚತುರ್ಭುಜಂ ತರ್ಪಯಾಮಿ; ೬) ಗದಾಪಾಣಯೇ ನಮ: ಗದಾಪಾಣಿಂ ತರ್ಪಯಾಮಿ; ೭) ಸುರಮೀಡಾಯ ನಮ: ಸುರಮೀಡಂ ತರ್ಪಯಾಮಿ ; ೮) ಸುಲೋಚನಾಯ ನಮ: ಸುಲೋಚನಂ ತರ್ಪಯಾಮಿ; ೯) ಚಾರ್ವಾಂಗಾಯ ನಮ: ಚಾರ್ವಾಂಗಂ ತರ್ಪಯಾಮಿ; ೧೦) ಚಕ್ರಪಾಣಯೇ ನಮ: ಚಕ್ರಪಾಣಿಂ ತರ್ಪಯಾಮಿ; ೧೧) ಸುರಮಿತ್ರಾಯ ನಮ: ಸುರಮಿತ್ರಂ ತರ್ಪಯಾಮಿ; ೧೨) ಅಸುರಾಂತಕಾಯ ನಮ: ಅಸುರಾಂತಕಂ ತರ್ಪಯಾಮಿ.
ಶ್ರವಣ ನಕ್ಷತ್ರ ದಿನ – ೧. ಓಮ್ ಶ್ರೀ ಪುರುಷೋತ್ತಮಾಯ ನಮ:ಓಮ್ ಪುರುಷೋತ್ತಮಂ ತರ್ಪಯಾಮಿ; ೨ ಶಾಂರ್ಘಧನ್ವಿನೇ ನಮ: ಶಾಂರ್ಘಧನ್ವಿನಂ ತರ್ಪಯಾಮಿ ; ೩. ಗರುಡಧ್ವಜಾಯ ನಮ: ಗರುಡಧ್ವಜಂ ತರ್ಪಯಾಮಿ ೪. ಅನಂತಾಯ ನಮ: ಅನಂತಂ ತರ್ಪಯಾಮಿ; ೫. ಗೋವರ್ಧನಾಯ ನಮ: ಗೋವರ್ಧನಂ ತರ್ಪಯಾಮಿ; ೬. ಪುಂಡರೀಕಾಕ್ಷಾಯ ನಮ: ಪುಂಡರೀಕಾಕ್ಷಂ ತರ್ಪಯಾಮಿ; ೭. ನಿತ್ಯಾಯ ನಮ: ನಿತ್ಯಂ ತರ್ಪಯಾಮಿ; ೮. ವೇದಗರ್ಭಾಯ ನಮ: ವೇದಗರ್ಭಂ ತರ್ಪಯಾಮಿ; ೯. ಯಜ್ಞಪುರುಷಾಯ ನಮ: ಯಜ್ಞಪುರುಷಂ ತರ್ಪಯಾಮಿ; ೧೦. ಸುಬ್ರಹ್ಮಣ್ಯಾಯ ನಮ: ಸುಬ್ರಹ್ಮಣ್ಯಂ ತರ್ಪಯಾಮಿ; ೧೧. ಜಯಾಯ ನಮ: ಜಯಂ ತರ್ಪಯಾಮಿ; ೧೨. ಶೌರಯೇ ನಮ: ಶೌರಿಂ ತರ್ಪಯಾಮಿ. ಹೀಗೆ ತರ್ಪಣಾದಿಗಳು ವಿಹಿತವಾಗಿವೆ.(ಹೆಚ್ಚಿನ ಮಾಹಿತಿಗಳನ್ನು ತಜ್ಞರ ಮೂಲಕ ಪಡೆದು ವ್ರತಾಚರಣೆ ಮಾಡಿರಿ.
ಶ್ರೀ ಮಧ್ವೇಶಾರ್ಪಣಮಸ್ತು
***********
No comments:
Post a Comment