ganga jayanti vaishakha shukla saptami or jyeshta shukla dashami
Vaishakha shukla saptami
ಗಂಗಾದೇವಿಯ ಉದ್ಭವ ದಿನ - ಶ್ರೀ ಜಹ್ನು ಋಷಿಯ ಬಲಗಿವಿಯಿಂದ ಗಂಗಾವತಾರಣವಾದ ದಿನ
|ಪಿಬತ ಭಾಗವತಂ ರಸಮಾಲಯಂ|
ಇಂದು ಶ್ರೀಗಂಗಾದೇವಿಯು ಭೂಲೋಕಕ್ಕೆ ಬಂದ ದಿನ.
ಅದರ ಬಗ್ಗೆ ತಿಳಿಸುವ ಚರಿತ್ರೆ..
✍ಪರಿಕ್ಷೀತ ಮಹಾರಾಜ ಮಗನಿಗೆ ರಾಜ್ಯ ಒಪ್ಪಿಸಿ ಮಂತ್ರಿ ಗಳನ್ನು ಕರೆದು ಸರಿಯಾಗಿ ನೋಡಿಕೊಳ್ಳಲು ಹೇಳಿ
ತನ್ನ ರಾಜ್ಯ, ಕೋಶ,ಹೆಂಡತಿ, ಮಕ್ಕಳು, ಪ್ರಜೆಗಳು, ಎಲ್ಲಾ ರನ್ನು ಹಾಗು ಅವರ ಮೇಲಿನ ಅಭಿಮಾನ ತ್ಯಾಗ ಮಾಡಿ ಗಂಗಾ ತೀರಕ್ಕೆ ಬಂದಿದ್ದಾನೆ.
ಪರಿಕ್ಷೀತ ರಾಜ ಅಲ್ಲಿ ಬರುವ ಕಾರಣವೇನೆಂದರೆ
ಮರಣ ಆಗುವ ವಾದರೆ ಗಂಗಾತೀರದಲ್ಲಿ ಆಗಬೇಕು.. ಇದಕ್ಕಿಂತ ಪ್ರಾಶಸ್ತ್ಯ ಸ್ಥಳ ಬೇರೆ ಇಲ್ಲ.
ಗಂಗಾ ನದಿ ಅಂದರೆ ಪರಮಾತ್ಮನ ಪಾದವನ್ನು ತೊಳೆದ ನೀರು.ತುಳಸಿ ಸಹಿತವಾಗಿ ಹರಿದುಕೊಂಡು ಬರುವಂತಹ ಪಾದೋದಕವೇ ಗಂಗಾನದಿ.
ಯಾಕೆ ಗಂಗಾನದಿಗೆ ಇಷ್ಟು ಮಹತ್ವ ಅಂದರೆ
ಭಗವಂತ ಶ್ರೀವಾಮನರೂಪಿ ಅವತಾರ ತಾಳಿದಾಗ ಬಲಿ ಚಕ್ರವರ್ತಿ ಮಾಡುವ ಯಾಗಕ್ಕೆ ಹೋಗಿದ್ದಾನೆ.
ಅವನ ಬಳಿ ಮೂರು ಪಾದದಷ್ಟು ಭೂಮಿಯನ್ನು ಬೇಡಿ ತ್ರಿವಿಕ್ರಮ ನಾಗಿ ಬೆಳೆದು ನಿಂತಿದ್ದಾನೆ.
ಅವಾಗ ಶ್ರೀತ್ರಿವಿಕ್ರಮ ರೂಪಿ ಪರಮಾತ್ಮನ ಅಂಗುಷ್ಟದ ನಖ ಬ್ರಹ್ಮಾಂಡದ ಕಟಾಹಕ್ಕೆ ತಗುಲಿತು..ಆ ಬ್ರಹ್ಮಾಂಡದ ಕಟಾಹ ದಪ್ಪ ಎಷ್ಟು ಇತ್ತು ಅಂದರೆ ನೂರು ಕೋಟಿ ಯೋಜನೆ ದಪ್ಪ ಇತ್ತು.
ಅಂತಹ ಬ್ರಹ್ಮಾಂಡದ ಕಟಾಹ ದೊಳಗಿಂದ ನೀರು ಬಂದಿದ್ದು ನೋಡಿ ಬ್ರಹ್ಮ ದೇವರು ಅದನ್ನು ಕಮಂಡಲುವಿನಲ್ಲಿ ಹಿಡಿದು ತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದಿದ್ದಾರೆ.
ಅದೇ ಗಂಗಾ ನದಿ..
ಆಮೇಲೆ ಗಂಗೆ
ಸಾವಿರಾರು ವರ್ಷಗಳ ಕಾಲ ಸತ್ಯಲೋಕದಲ್ಲಿ ಇದ್ದು ನಂತರ ಶಿಂಶುಮಾರ ಲೋಕಕ್ಕೆ ಬರುತ್ತಾಳೆ.
ಅಲ್ಲಿ ಪರಮಾತ್ಮ ಚೇಳಿನ ಆಕಾರದಲ್ಲಿ ಇದ್ದಾನೆ.
ಅಲ್ಲಿ ಚೇಳಿನ ಬಾಲದ ಕೊಂಡಿಯ ತುದಿ ಭಾಗದಲ್ಲಿ ಇರುವ ಧ್ರುವಮಹಾರಾಜರು ಅದನ್ನು ಕೈಯಲ್ಲಿ ತೆಗೆದುಕೊಂಡು ಪರಮಾತ್ಮನ ಪಾದೋದಕ, ತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದದ್ದು ಅಂತ ಹೇಳಿ ಭಕ್ತಿ ಇಂದ ಅದನ್ನು ಪ್ರೋಕ್ಷಣೆ ಮಾಡಿಕೊಳ್ಳುವರು.
ಆ ನಂತರ ಅಲ್ಲಿ ಇಂದ ಸಪ್ತರ್ಷಿಗಳ ಲೋಕಕ್ಕೆ ಗಂಗಾದೇವಿ ಬರುತ್ತಾಳೆ... ಅಲ್ಲಿ ಸಹ ಸಪ್ತರ್ಷಿಗಳು ಪ್ರೋಕ್ಷಣೆ ಮಾಡಿಕೊಂಡು ಧರಿಸಿದ್ದಾರೆ.
ಆ ನಂತರ ಚಂದ್ರ ಮಂಡಲಕ್ಕೆ ಬಂದು ಆ ನಂತರ ಮೇರು ಪರ್ವತಕ್ಕೆ ಬರುತ್ತಾಳೆ...
ಅಲ್ಲಿ ನಾಲ್ಕು ದಿಕ್ಕಿನಲ್ಲಿ ಇಳಿಯುತ್ತಾಳೆ.
ಪೂರ್ವ ದಿಕ್ಕಿನಲ್ಲಿ ಸೀತಾ ಎಂದು
ದಕ್ಷಿಣ ದಿಕ್ಕಿನಲ್ಲಿ ಅಲಕಾನಂದ ಎಂದು
ಪಶ್ಚಿಮ ದಿಕ್ಕಿನಲ್ಲಿ ಚಕ್ಷು
ಮತ್ತು ಉತ್ತರದಲ್ಲಿ ಭದ್ರ ಅಂತ ನಾಮದಿಂದ ಕರೆಸಿಕೊಂಡು ಹರಿದು ಹೋಗುತ್ತಾಳೆ.
ಅಲಕನಂದಾ
ನದಿಯಾಗಿ ಹರಿದು ಗಂಧಮಾದನ ಪರ್ವತಕ್ಕೆ ಬಂದು ಅಲ್ಲಿಂದ ಮಾನಸ ಸರೋವರ ಕ್ಕೆಬರುತ್ತಾಳೆ..
ಅಲ್ಲಿ ತುಂಬಿ ಹರಿದಾಗ ಸರಯೂ ನದಿ ಅಂತ ಕರೆಸಿಕೊಂಡು ಹಿಮಾಲಯ ಪರ್ವತಕ್ಕೆ ಬರುತ್ತಾಳೆ.
ಅಲ್ಲಿ ಸಹ ಹರಿದಾಗ ಅವಳನ್ನು ಹಿಮವಂತನ ಪುತ್ರಿ ಅಂತ ಸಹ ಕರೆಯುತ್ತಾರೆ.
ಆ ನಂತರ ದೇವತೆಗಳು ಬಂದು ನಮಗೆಲ್ಲ ಬೇಕು ನೀನು ಅಂತ ಹೇಳಿ ನಮ್ಮ ಲೋಕಕ್ಕೆ ಬಾ ಅಂತ ಕರೆದುಕೊಂಡು ಹೋಗುತ್ತಾರೆ...
ಆ ನಂತರ ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು .ಕಪಿಲ ರೂಪಿ ಪರಮಾತ್ಮ ನಿಗೆ ಅಪಹಾಸ್ಯ, ಮಾಡಿದ ಪರಿಣಾಮವಾಗಿ ಸುಟ್ಟು ಭಸ್ಮ ವಾಗಿದ್ದರು.
ಅವರಿಗೆ ಸದ್ಗತಿ ಆಗಲು ಗಂಗೆ ಭೂಲೋಕಕ್ಕೆ ಹರಿದು ಬರಬೇಕು ಅದಕ್ಕೆ ಭಗೀರಥ ಮಹಾರಾಜ ತಪಸ್ಸು ಮಾಡಿ ಗಂಗಾದೇವಿ ಯನ್ನು ಭೂಲೋಕಕ್ಕೆ ಕರೆಸಿಕೊಂಡ.
ಜೇಷ್ಠ ಶುದ್ದ ದಶಮಿ, ಮಂಗಳವಾರ, ದಿನ ಹಸ್ತ ನಕ್ಷತ್ರ ,ದಲ್ಲಿ ಗಂಗಾದೇವಿಯು ಸ್ವರ್ಗದಿಂದ ಭೂಲೋಕಕ್ಕೆ ಇಳಿದು ಬಂದಳು.
ಗಂಗೆಯು ಬರುವ ರಭಸವನ್ನು ನೋಡಿ ತನ್ನ ಜಟೆಯಲ್ಲಿ ಬಂಧಿಸಿ ದವರು ರುದ್ರ ದೇವರು...
ಆ ನಂತರ ಭಗೀರಥ ಅವರ ಬಳಿ ಪ್ರಾರ್ಥನೆ ಮಾಡಿದಾಗ ರುದ್ರ ದೇವರ ಜಟೆಇಂದ ಗಂಗಾದೇವಿ ಭೂಲೋಕಕ್ಕೆ ಬರುತ್ತಾಳೆ...
ಬರುವಾಗ ಜಹ್ನು ಋಷಿಗಳ ಆಶ್ರಮ ವನ್ನು ಕೊಚ್ಚಿ ಕೊಂಡು ಹೋಗುವುದನ್ನು ಕಂಡು ಋಷಿಗಳು ಸಂಪೂರ್ಣ ಪಾನ ಮಾಡುತ್ತಾರೆ...
ಮತ್ತೆ ಭಗೀರಥ ಅವರನ್ನು ಒಲಿಸಿಕೊಂಡು ಅವರ ಕಿವಿಯಿಂದ ಗಂಗಾದೇವಿ ಹೊರಬರುತ್ತಾಳೆ.
ಹಾಗೆ ಬಂದ ಕಾರಣದಿಂದ ಭಾಗೀರಥಿ, ಜಾಹ್ನವಿ ಅಂತ ಹೆಸರು ಬಂತು.
ಸಮುದ್ರ ದ್ವಾರ ಪಾತಾಳ ಲೋಕವನ್ನು ಹೋಗಿ ಸಗರ ಮಹಾರಾಜನ ಮಕ್ಕಳಿಗೆ ಉದ್ದಾರ ಮಾಡಿದಳು...
ಹೀಗೆ ಗಂಗೆಗೆ ತ್ರಿಪಥಗಾ ಅಂತ ಹೆಸರು ಬಂದಿತು...
ದೇವಲೋಕದಿಂದ ಭೂಲೋಕಕ್ಕೆ,
ಭೂಲೋಕದಿಂದ ಪಾತಾಳ ಲೋಕಕ್ಕೆ ಹರಿದು ಕೊಂಡು ಬಂದಳು.
ಹೀಗೆ ಅಂತರಿಕ್ಷ, ಭೂಮಿ ಮತ್ತು ಪಾತಾಳ ಲೋಕವನ್ನು ಹರಿದು ಬಂದ ಕಾರಣ ತ್ರಿಪಥಗಾ ಅಂತ ಹೆಸರಿನಲ್ಲಿ ಕರೆಯಲ್ಪಟ್ಟಳು...
ದೇವಲೋಕದಲ್ಲಿ ಹರಿಯುವಾಗ ಮಂದಾಕಿನಿ,
ಭೂಮಿಯಲ್ಲಿ ಹರಿಯುವಾಗ ಭಾಗೀರಥಿ,
ಪಾತಾಳ ಲೋಕಕ್ಕೆ ಹರಿದು ಹೋದಾಗ ಅದೇ ಗಂಗಾದೇವಿ ಗೆ ಭೋಗವತಿ ಅಂತ ಹೆಸರು ಬಂತು.
ಅಂದರೆ ಗಂಗಾದೇವಿಯು
ಮೇಲಿನ ಲೋಕದಲ್ಲಿ ಇದ್ದರು ಕೆಳಗೆ ಕೆಳಗೆ ಇಳಿಯುತ್ತಾ ಬಂದು ಪಾತಾಳ ಲೋಕವನ್ನು ಸೇರಿ ಯಾರು ಎಷ್ಟು ಕೆಳಮಟ್ಟದಲ್ಲಿ ಇದ್ದರು ಸಹ ಉದ್ದಾರ ಮಾಡುತ್ತೀ ತಾಯಿ ನೀನು ಅಂತ ವರ್ಣನೆಯನ್ನು ಮಾಡುತ್ತಾರೆ..
ಸ್ನಾನ ಮಾಡುವಾಗ ನಿತ್ಯ ಗಂಗಾದೇವಿಯ ಸ್ಮರಣೆ, ನಿತ್ಯ ಗಂಗಾಪೂಜೆ ಮಾಡುವದರಿಂದ ಒಳ್ಳೆಯ ದು.
ಇಂದು ವಿಶೇಷ ವಾಗಿ ಗಂಗಾದೇವಿಯ ಪೂಜೆ ಮಾಡುವದರಿಂದ, ನಮ್ಮ ದಶವಿಧ ಪಾಪಗಳನ್ನು ಕಳೆಯುವವಳು.
ದಶವಿಧ ಪುಷ್ಪಗಳಿಂದ ದಶಬಗೆಯ ಭಕ್ಷ್ಯ ಗಳಿಂದ ದಶ ದೀಪಗಳಿಂದ ಅರ್ಚನೆ ಮಾಡಬೇಕು ಎಂದು ಬಲ್ಲವರು ಹೇಳುತ್ತಾರೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಶ್ರೀ ಭಾಗೀರತಿತಾಯೆ ಶೃಂಗಾರ ಶುಭಕಾಯೆ
..
ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ|
ಹಾರಿ ಹೋಗುವದು ಸಿದ್ದ|
ಶ್ರೀ ರಮಣ ವಿಜಯವಿಠ್ಠಲ ರೇಯನ|
ಪಾದ ವಾರಿಜ ಪೊಗಳುವಂತೆ ಬುದ್ದಿ ಪಾಲಿಸುವದು||
🙏ಶ್ರೀ ಭೂರಮಣನ ತನಯೆ ನಿನಗೆ ಅನಂತ ನಮನಗಳು🙏
**********
ಗಂಗೋತ್ಪತ್ತಿ BHAGIRATHI jayanthi ನಿಮಿತ್ತ ವಿಶೇಷ ಲೇಖನ..
🌺🌺🌺🌺🌺🌺🌺
☀ ಗಂಗಾ ಮಹಾತ್ಮೆ☀
🌺🌺🌺🌺🌺🌺🌺
ಪುಣ್ಯಪ್ರದ ಗಂಗಾ ನದಿಯ ಮಹತ್ವವು ಅದ್ವಿತೀಯವಾಗಿದೆ ! ಭೌಗೋಳಿಕ ದೃಷ್ಟಿಯಿಂದ ಗಂಗಾ ನದಿಯು ಭಾರತವರ್ಷದ ಹೃದಯರೇಖೆ ! ಇತಿಹಾಸದ ದೃಷ್ಟಿಯಿಂದ ಪ್ರಾಚೀನ ಕಾಲದಿಂದ ಆಧುನಿಕ ಕಾಲದ ವರೆಗೆ ಮತ್ತು ಗಂಗೋತ್ರಿಯಿಂದ ಗಂಗಾಸಾಗರದ ವರೆಗಿನ ಗಂಗೆಯ ಕಥೆ ಎಂದರೆ ಹಿಂದೂಗಳ ಸಭ್ಯತೆ ಮತ್ತು ಸಂಸ್ಕೃತಿಯ ಅಮೃತಗಾಥೆಯಾಗಿದೆ. ಗಂಗಾ ನದಿಯು ಹಿಂದೂ ಸ್ಥಾನದ ರಾಷ್ಟ್ರ- ಪ್ರತೀಕವೇ ಆಗಿದೆ. ಧಾರ್ಮಿಕ ದೃಷ್ಟಿಯಿಂದ ಇತಿಹಾಸದ ಉಷಃಕಾಲದಿಂದ ಕೋಟಿ ಕೋಟಿ ಹಿಂದೂ ಭಕ್ತರಿಗೆ ಮೋಕ್ಷವನ್ನು ಪ್ರಧಾನಿಸುವ ಗಂಗಾ ವಿಶ್ವದ ಸರ್ವಶ್ರೇಷ್ಠ ತೀರ್ಥವಾಗಿದೆ.
ಬನ್ನಿ ಪುಣ್ಯ ನದಿ ಗಂಗಾ ಮಹಾತ್ಮೆಯ ಬಗ್ಗೆ ತಿಳಿದುಕೊಂಡು ಪುನೀತರಾಗೋಣ.
ಪುಣ್ಯಸಲಿಲಾ ಗಂಗಾ ನದಿಯ ಮಹತ್ವವು ಅದ್ವಿತೀಯವಾಗಿದೆ ! ಭೌಗೋಳಿಕ ದೃಷ್ಟಿಯಿಂದ ಗಂಗಾ ನದಿಯು ಭಾರತವರ್ಷದ ಹೃದಯರೇಖೆ ! ಇತಿಹಾಸದ ದೃಷ್ಟಿಯಿಂದ ಪ್ರಾಚೀನ ಕಾಲದಿಂದ ಆಧುನಿಕ ಕಾಲದ ವರೆಗೆ ಮತ್ತು ಗಂಗೋತ್ರಿಯಿಂದ ಗಂಗಾಸಾಗರದ ವರೆಗಿನ ಗಂಗೆಯ ಕಥೆ ಎಂದರೆ ಹಿಂದೂಗಳ ಸಭ್ಯತೆ ಮತ್ತು ಸಂಸ್ಕೃತಿಯ ಅಮೃತಗಾಥೆಯಾಗಿದೆ. ರಾಷ್ಟ್ರದ ದೃಷ್ಟಿಯಿಂದ ಆಚಾರ-ವಿಚಾರ, ವೇಷಭೂಷಣ, ಜೀವನಪದ್ಧತಿ ಮತ್ತು ವಿಭಿನ್ನ ಜಾತಿಯವರನ್ನು ಒಂದಾಗಿಸುವ ಗಂಗಾ ನದಿಯು ಹಿಂದೂ ಸ್ಥಾನದ ರಾಷ್ಟ್ರ-ಪ್ರತೀಕವೇ ಆಗಿದೆ. ಧಾರ್ಮಿಕ ದೃಷ್ಟಿಯಿಂದ ಇತಿಹಾಸದ ಉಷಃಕಾಲದಿಂದ ಕೋಟಿಕೋಟಿ ಹಿಂದೂ ಭಕ್ತರಿಗೆ ಮೋಕ್ಷವನ್ನು ಪ್ರದಾನಿಸುವ ಗಂಗಾ ವಿಶ್ವದ ಸರ್ವಶ್ರೇಷ್ಠ ತೀರ್ಥವಾಗಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗೀತೆಗಿರುವ ಸ್ಥಾನವೇ ಗಂಗೆಗೆ ಧಾರ್ಮಿಕ ಕ್ಷೇತ್ರದಲ್ಲಿದೆ.
ಗಂಗಾ ಸರ್ವದೇವಮಯಿ, ಸರ್ವತೀರ್ಥಮಯಿ, ಸರಿತ್‌ಶ್ರೇಷ್ಠಾ ಮತ್ತು ಮಹಾನದಿಯಂತೂ ಆಗಿದ್ದಾಳೆ; ಆದರೆ ‘ಸರ್ವಪಾತಕನಾಶಿನಿ’ (ಎಲ್ಲ ಪಾಪಗಳನ್ನು ನಾಶ ಮಾಡುವವಳು) ಯು ಅವಳ ಮುಖ್ಯ ಪರಿಚಯವಾಗಿದೆ. ಜಗನ್ನಾಥ ಪಂಡಿತರು ಗಂಗೆಗೆ ಪ್ರಾರ್ಥನೆ ಮಾಡುವಾಗ ಹೀಗೆ ಹೇಳುತ್ತಾರೆ, ‘ಜಲಂ ತೆ ಜಂಬಾಲಂ ಮಮ ಜನನಜಾಲಂ ಜರ- ಯತು |’ ಅಂದರೆ ‘ಗಂಗಾಮಾತೆ ! ಪಾಚಿ ಮತ್ತು ಕೆಸರಿರುವ ನಿನ್ನ ನೀರು ನನ್ನ ಪಾಪಗಳನ್ನು ದೂರಗೊಳಿಸಲಿ ! (ಗಂಗಾಲಹರಿ, ಶ್ಲೋಕ ೨೦). ಪ್ರತಿಯೊಬ್ಬ ಹಿಂದೂವೂ ಆಯುಷ್ಯದಲ್ಲಿ ಒಮ್ಮೆಯಾದರೂ ಪತಿತಪಾವನ ಗಂಗೆಯಲ್ಲಿ ಸ್ನಾನ ಮಾಡುವ ಅಭಿಲಾಷೆಯನ್ನಿಡುತ್ತಾನೆ. ಹಿಂದೂ ಧರ್ಮವು ‘ಗಂಗಾಸ್ನಾನ’ವನ್ನು ಒಂದು ಧಾರ್ಮಿಕ ವಿಧಿ ಎಂದು ಪರಿಗಣಿಸಿದೆ.
ಗಂಗಾ ನದಿಯ ತೀರವು ತೀರ್ಥಕ್ಷೇತ್ರವಾಗಿದ್ದು ಅದು ಹಿಂದೂಗಳಿಗೆ ಅತಿ ವಂದನೀಯ ಮತ್ತು ಉಪಾಸನೆಗಾಗಿ ಪವಿತ್ರ ಸಿದ್ಧಿಕ್ಷೇತ್ರವೇ ಆಗಿದೆ. ಗಂಗಾದರ್ಶನ, ಗಂಗಾಸ್ನಾನ ಮತ್ತು ಪಿತೃ ತರ್ಪಣ ಈ ಮಾರ್ಗಗಳಿಂದ ಮೋಕ್ಷವನ್ನು ಸಾಧ್ಯಗೊಳಿಸಬಹುದು ಎಂಬ ಸತ್ಯವನ್ನು ಧರ್ಮಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.
೧. ‘ಗಂಗಾ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ
ಅ. ಗಮಯತಿ ಭಗವತ್ಪದಮ್ ಇತಿ ಗಂಗಾ |
ಅರ್ಥ : (ಸ್ನಾನ ಮಾಡುವ ಜೀವಕ್ಕೆ) ಭಗವಂತನ ಚರಣಗಳವರೆಗೆ ತಲುಪಿಸುವವಳೇ ಗಂಗಾ.
ಆ. ಗಮ್ಯತೇ ಪ್ರಾಪ್ಯತೇ ಮೋಕ್ಷಾರ್ಥಿಭಿಃ ಇತಿ ಗಂಗಾ |
ಅರ್ಥ : ಮೋಕ್ಷಾರ್ಥಿಗಳು, ಅಂದರೆ ಮುಮುಕ್ಷುಗಳು ಯಾರ ಕಡೆಗೆ ಹೋಗುತ್ತಾರೆಯೋ, ಅವಳೇ ಗಂಗಾ.
೨. ಬ್ರಹ್ಮಾಂಡದಲ್ಲಿ ಗಂಗಾ ನದಿಯ ಉತ್ಪತ್ತಿ ಮತ್ತು ಭೂಲೋಕದಲ್ಲಿ ಅವಳ ಅವತರಣ
೨ ಅ. ಬ್ರಹ್ಮಾಂಡದಲ್ಲಿನ ಉತ್ಪತ್ತಿ : ವಾಮನ ಅವತಾರದಲ್ಲಿ ವಿಷ್ಣುವು ದಾನಶೂರ ಬಲಿರಾಜನಲ್ಲಿ ಭಿಕ್ಷೆ ಎಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಬೇಡಿದನು. ವಾಮನನೆಂದರೆ ವಿಷ್ಣುವೆಂಬುದನ್ನು ತಿಳಿಯದ ಕಾರಣ ಬಲಿರಾಜನು ಆ ಕ್ಷಣವೇ ವಾಮನನಿಗೆ ಮೂರು ಹೆಜ್ಜೆ ಭೂಮಿಯನ್ನು ದಾನ ಮಾಡಿದನು. ವಾಮನನು ವಿರಾಟ ರೂಪವನ್ನು ಧರಿಸಿ ಒಂದು ಹೆಜ್ಜೆಯಿಂದ ಸಂಪೂರ್ಣ ಪೃಥ್ವಿ ಮತ್ತು ಇನ್ನೊಂದು ಹೆಜ್ಜೆಯಿಂದ ಅಂತರಿಕ್ಷವನ್ನು ವ್ಯಾಪಿಸಿದನು. ಅವುಗಳ ಪೈಕಿ ಎರಡನೇ ಹೆಜ್ಜೆಯನ್ನು ಎತ್ತುವಾಗ ವಾಮನನ (ವಿಷ್ಣುವಿನ) ಎಡಗಾಲಿನ ಹೆಬ್ಬೆರಳು ತಾಗಿ ಬ್ರಹ್ಮಾಂಡದ ಸೂಕ್ಷ -ಜಲದ ಕವಚ (ಟಿಪ್ಪಣಿ ೧) ಒಡೆಯಿತು. ಅದರಿಂದ ಗರ್ಭೋದಕದಂತೆ ಬ್ರಹ್ಮಾಂಡದ ಹೊರಗಿನ ಸೂಕ್ಷ -ಜಲವು ಬ್ರಹ್ಮಾಂಡದೊಳಗೆ ನುಗ್ಗಿತು. ಈ ಸೂಕ್ಷ -ಜಲವೆಂದರೆ ಗಂಗಾ !
ಈ ಗಂಗೆಯ ಪ್ರವಾಹವು ಮೊದಲು ಸತ್ಯಲೋಕಕ್ಕೆ ಹೋಯಿತು. ಬ್ರಹ್ಮದೇವನು ಅವಳನ್ನು ತನ್ನ ಕಮಂಡಲುವಿನಲ್ಲಿ ಧರಿಸಿದನು. ನಂತರ ಅವನು ತನ್ನ ಕಮಂಡಲುವಿನಲ್ಲಿನ ನೀರಿನಿಂದ ಶ್ರೀವಿಷ್ಣುವಿನ ಚರಣಗಳನ್ನು ತೊಳೆದನು. ಆ ಜಲದಿಂದ ಗಂಗೆ ಉತ್ಪನ್ನಳಾದಳು. ನಂತರ ಅವಳು ಸತ್ಯಲೋಕದಿಂದ ಕ್ರಮವಾಗಿ ತಪೋಲೋಕ, ಜನಲೋಕ, ಮಹರ್ಲೋಕ ಈ ಮಾರ್ಗದಿಂದ ಸ್ವರ್ಗಲೋಕಕ್ಕೆ ಬಂದಳು.
ಟಿಪ್ಪಣಿ ೧ – ಹಿಂದೂ ಧರ್ಮಶಾಸ್ತ್ರಕ್ಕನುಸಾರ ಬ್ರಹ್ಮಾಂಡವು ಭೂಲೋಕಾದಿ ಸಪ್ತಲೋಕ ಮತ್ತು ಸಪ್ತಪಾತಾಳ ಎಂಬ ೧೪ ಭುವನಗಳಿಂದ ನಿರ್ಮಾಣವಾಗಿದೆ. ಬ್ರಹ್ಮಾಂಡವು ಲಂಬವರ್ತುಲಾ ಕಾರವಾಗಿದ್ದು ಅದರ ಹೊರಗೆ ನಾಲ್ಕೂ ದಿಕ್ಕುಗಳಲ್ಲಿ ಕ್ರಮವಾಗಿ ಸೂಕ್ಷ -ಪೃಥ್ವಿಯ, ಸೂಕ್ಷ – ಜಲದ, ಸೂಕ್ಷ -ತೇಜ, ಸೂಕ್ಷ -ವಾಯು, ಸೂಕ್ಷ -ಆಕಾಶ, ಅಹಂತತ್ತ್ವ, ಮಹತ್ತತತ್ತ್ವ ಮತ್ತು ಪ್ರಕೃತಿ ಎಂಬ ೮ ಕವಚಗಳಿರುತ್ತವೆ. ಈ ಕವಚದಲ್ಲಿನ ‘ಸೂಕ್ಷ -ಜಲದ ಕವಚ’ವೆಂದರೆ ಗಂಗಾ. ಆದುದರಿಂದಲೇ ಆಯುರ್ವೇದದಲ್ಲಿ ಗಂಗಾಜಲಕ್ಕೆ ‘ಅಂತರಿಕ್ಷಜಲ’ ಎಂದು ಹೇಳಲಾಗಿದೆ. (೧)
೩. ಗಂಗೆಯು ಭೂಲೋಕದಲ್ಲಿ ಅವತರಿಸಿದ ದಿನ !
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠೇ ಮಾಸಿ ಕುಜೇಹನಿ |
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ || – ವರಾಹಪುರಾಣ
ಅರ್ಥ : ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಭೌಮವಾರ (ಮಂಗಳವಾರ) ಮತ್ತು ಹಸ್ತ ನಕ್ಷತ್ರ ಎಂಬ ಯೋಗದಲ್ಲಿ ಗಂಗೆಯು ಸ್ವರ್ಗದಿಂದ ಧರಣಿಯ ಮೇಲೆ ಅವತರಿಸಿದಳು.
ಗಂಗಾವತರಣದ ತಿಥಿಯನ್ನು ಕೆಲವು ಪುರಾಣಗಳಲ್ಲಿ ವೈಶಾಖ ಶುಕ್ಲ ಪಕ್ಷ ತೃತೀಯವಾದರೆ, ಕೆಲವು ಪುರಾಣಗಳಲ್ಲಿ ಕಾರ್ತಿಕ ಹುಣ್ಣಿಮೆಯೆಂದು ಹೇಳಲಾಗಿದ್ದರೂ, ಹೆಚ್ಚಿನ ಪುರಾಣಗಳಲ್ಲಿ ‘ಜ್ಯೇಷ್ಠ ಶುಕ್ಲ ಪಕ್ಷ ದಶಮಿ’ಯನ್ನೇ ಗಂಗಾವತರಣದ ತಿಥಿ ಎಂದು ಹೇಳಲಾಗಿದೆ ಮತ್ತು ಅದೇ ಸರ್ವಮಾನ್ಯವಾಗಿದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)
***********
🌹🌹ಗಂಗಾದೇವಿ ಹಾಡು🌹🌹
ಗಂಗಾದೇವಿಯೆ ನಿನಗೆ ಒಂದೇ ಮನದಲಿ ನೆನೆವೆ
ಸಿಂಧುರಾಜನ ರಾಣಿ ನೀ ಕರುಣಿಸೆ
ಮಂಗಳಾಂಗಿಯೆ ನಿನಗೆ ಮುಂದಲೆ ಬಾಗುವೆ
ಮಂದಗಮನಿಯೆ ನೀ ಸುಂದರಾಂಗಿ||ಪಲ್ಲ||
ಎತ್ತ ನೋಡಿದರತ್ತ ಬಳಕುತ ಬರುವಿಯೆ
ಸುತ್ತಿ ಸುತ್ತಿ ನೀನು ಪ್ರವಹಿಸುತ
ಹತ್ತಿ ಇಳಿದು ಗಿರಿ ಶಿಖರದೊಳುರುಳುತ್ತ
ಶಿಸ್ತಾಗಿ ನೀನು ಹರಿದು ಹೋಗುವಿ||೧||
ಹರಿ ಪಾದೋದಕವಾಗಿ ಹರಿದು ಬಂದಿಯೆ ನೀನು
ಹರಿಯ ಗಿರಿಯ ಸುತ್ತ ಸುಳಿದಾಡುವಿ
ಸ್ಥಿರವಾಗಿ ಅಳಕನಂದನ ಜೊತೆಗೂಡಿ
ಭರದಿ ಬರುವಿ ವಯ್ಯಾರದಿಂದ||೨||
ಅಳಕನಂದನ ಕೂಡಿ ಬಳುಕುತ್ತ ಬರುವೀಯೆ
ಇಳೆಯೊಳು ಮಿಗಿಲಾಗಿ ಪ್ರವಹಿಸುತ
ಚಳಿ ಬಿಸಿಲೆನ್ನದೆ ಬಳ ಬಳ ಹರಿಯುವಿ
ಕಳಿಯ ಸುರಿಯುವಿಯೆ ಕೋಮಲಾಂಗಿ||೩||
ಅರಿಷಿಣ ಕುಂಕುಮ ಹಚ್ಚಿ ಬೆರಸಿದ ಮಲ್ಲಿಗೇರಿಸಿ
ಪರಿ ಪರಿ ಪೂಜೆಯ ಮಾಡಿ
ಮರದ ಬಾಗಿಣವನ್ನ ಮುತೈದೆಯರು ತಂದು
ಸರಸದಿ ನೀಡುವರೆ ತಾಯೆ||೪||
ಮುಕ್ತ ಕಂಠದಿಂದ ನಿನ್ನ ಹಾಡಿ ಹೊಗಳುತ್ತ
ಭಕ್ತಿಯಿಂದಾರುತಿಯನೆ ಮಾಡುತ
ಶ್ರಧ್ಧೆಯಿಂದಲಿ ಮನೆಗೆ ಗಂಗೆ ತುಂಬಿಸಿಕೊಂಡು
ಮಧ್ವೇಶಕೃಷ್ಣನ ಬೇಡುತ||೫||
~~~ಹರೇ ಶ್ರೀನಿವಾಸ.
********
ಗಂಗೋತ್ಪತ್ತಿ BHAGIRATHI jayanthi ನಿಮಿತ್ತ ವಿಶೇಷ ಲೇಖನ..
🌺🌺🌺🌺🌺🌺🌺
☀ ಗಂಗಾ ಮಹಾತ್ಮೆ☀
🌺🌺🌺🌺🌺🌺🌺
ಪುಣ್ಯಪ್ರದ ಗಂಗಾ ನದಿಯ ಮಹತ್ವವು ಅದ್ವಿತೀಯವಾಗಿದೆ ! ಭೌಗೋಳಿಕ ದೃಷ್ಟಿಯಿಂದ ಗಂಗಾ ನದಿಯು ಭಾರತವರ್ಷದ ಹೃದಯರೇಖೆ ! ಇತಿಹಾಸದ ದೃಷ್ಟಿಯಿಂದ ಪ್ರಾಚೀನ ಕಾಲದಿಂದ ಆಧುನಿಕ ಕಾಲದ ವರೆಗೆ ಮತ್ತು ಗಂಗೋತ್ರಿಯಿಂದ ಗಂಗಾಸಾಗರದ ವರೆಗಿನ ಗಂಗೆಯ ಕಥೆ ಎಂದರೆ ಹಿಂದೂಗಳ ಸಭ್ಯತೆ ಮತ್ತು ಸಂಸ್ಕೃತಿಯ ಅಮೃತಗಾಥೆಯಾಗಿದೆ. ಗಂಗಾ ನದಿಯು ಹಿಂದೂ ಸ್ಥಾನದ ರಾಷ್ಟ್ರ- ಪ್ರತೀಕವೇ ಆಗಿದೆ. ಧಾರ್ಮಿಕ ದೃಷ್ಟಿಯಿಂದ ಇತಿಹಾಸದ ಉಷಃಕಾಲದಿಂದ ಕೋಟಿ ಕೋಟಿ ಹಿಂದೂ ಭಕ್ತರಿಗೆ ಮೋಕ್ಷವನ್ನು ಪ್ರಧಾನಿಸುವ ಗಂಗಾ ವಿಶ್ವದ ಸರ್ವಶ್ರೇಷ್ಠ ತೀರ್ಥವಾಗಿದೆ.
ಬನ್ನಿ ಪುಣ್ಯ ನದಿ ಗಂಗಾ ಮಹಾತ್ಮೆಯ ಬಗ್ಗೆ ತಿಳಿದುಕೊಂಡು ಪುನೀತರಾಗೋಣ.
ಪುಣ್ಯಸಲಿಲಾ ಗಂಗಾ ನದಿಯ ಮಹತ್ವವು ಅದ್ವಿತೀಯವಾಗಿದೆ ! ಭೌಗೋಳಿಕ ದೃಷ್ಟಿಯಿಂದ ಗಂಗಾ ನದಿಯು ಭಾರತವರ್ಷದ ಹೃದಯರೇಖೆ ! ಇತಿಹಾಸದ ದೃಷ್ಟಿಯಿಂದ ಪ್ರಾಚೀನ ಕಾಲದಿಂದ ಆಧುನಿಕ ಕಾಲದ ವರೆಗೆ ಮತ್ತು ಗಂಗೋತ್ರಿಯಿಂದ ಗಂಗಾಸಾಗರದ ವರೆಗಿನ ಗಂಗೆಯ ಕಥೆ ಎಂದರೆ ಹಿಂದೂಗಳ ಸಭ್ಯತೆ ಮತ್ತು ಸಂಸ್ಕೃತಿಯ ಅಮೃತಗಾಥೆಯಾಗಿದೆ. ರಾಷ್ಟ್ರದ ದೃಷ್ಟಿಯಿಂದ ಆಚಾರ-ವಿಚಾರ, ವೇಷಭೂಷಣ, ಜೀವನಪದ್ಧತಿ ಮತ್ತು ವಿಭಿನ್ನ ಜಾತಿಯವರನ್ನು ಒಂದಾಗಿಸುವ ಗಂಗಾ ನದಿಯು ಹಿಂದೂ ಸ್ಥಾನದ ರಾಷ್ಟ್ರ-ಪ್ರತೀಕವೇ ಆಗಿದೆ. ಧಾರ್ಮಿಕ ದೃಷ್ಟಿಯಿಂದ ಇತಿಹಾಸದ ಉಷಃಕಾಲದಿಂದ ಕೋಟಿಕೋಟಿ ಹಿಂದೂ ಭಕ್ತರಿಗೆ ಮೋಕ್ಷವನ್ನು ಪ್ರದಾನಿಸುವ ಗಂಗಾ ವಿಶ್ವದ ಸರ್ವಶ್ರೇಷ್ಠ ತೀರ್ಥವಾಗಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗೀತೆಗಿರುವ ಸ್ಥಾನವೇ ಗಂಗೆಗೆ ಧಾರ್ಮಿಕ ಕ್ಷೇತ್ರದಲ್ಲಿದೆ.
ಗಂಗಾ ಸರ್ವದೇವಮಯಿ, ಸರ್ವತೀರ್ಥಮಯಿ, ಸರಿತ್‌ಶ್ರೇಷ್ಠಾ ಮತ್ತು ಮಹಾನದಿಯಂತೂ ಆಗಿದ್ದಾಳೆ; ಆದರೆ ‘ಸರ್ವಪಾತಕನಾಶಿನಿ’ (ಎಲ್ಲ ಪಾಪಗಳನ್ನು ನಾಶ ಮಾಡುವವಳು) ಯು ಅವಳ ಮುಖ್ಯ ಪರಿಚಯವಾಗಿದೆ. ಜಗನ್ನಾಥ ಪಂಡಿತರು ಗಂಗೆಗೆ ಪ್ರಾರ್ಥನೆ ಮಾಡುವಾಗ ಹೀಗೆ ಹೇಳುತ್ತಾರೆ, ‘ಜಲಂ ತೆ ಜಂಬಾಲಂ ಮಮ ಜನನಜಾಲಂ ಜರ- ಯತು |’ ಅಂದರೆ ‘ಗಂಗಾಮಾತೆ ! ಪಾಚಿ ಮತ್ತು ಕೆಸರಿರುವ ನಿನ್ನ ನೀರು ನನ್ನ ಪಾಪಗಳನ್ನು ದೂರಗೊಳಿಸಲಿ ! (ಗಂಗಾಲಹರಿ, ಶ್ಲೋಕ ೨೦). ಪ್ರತಿಯೊಬ್ಬ ಹಿಂದೂವೂ ಆಯುಷ್ಯದಲ್ಲಿ ಒಮ್ಮೆಯಾದರೂ ಪತಿತಪಾವನ ಗಂಗೆಯಲ್ಲಿ ಸ್ನಾನ ಮಾಡುವ ಅಭಿಲಾಷೆಯನ್ನಿಡುತ್ತಾನೆ. ಹಿಂದೂ ಧರ್ಮವು ‘ಗಂಗಾಸ್ನಾನ’ವನ್ನು ಒಂದು ಧಾರ್ಮಿಕ ವಿಧಿ ಎಂದು ಪರಿಗಣಿಸಿದೆ.
ಗಂಗಾ ನದಿಯ ತೀರವು ತೀರ್ಥಕ್ಷೇತ್ರವಾಗಿದ್ದು ಅದು ಹಿಂದೂಗಳಿಗೆ ಅತಿ ವಂದನೀಯ ಮತ್ತು ಉಪಾಸನೆಗಾಗಿ ಪವಿತ್ರ ಸಿದ್ಧಿಕ್ಷೇತ್ರವೇ ಆಗಿದೆ. ಗಂಗಾದರ್ಶನ, ಗಂಗಾಸ್ನಾನ ಮತ್ತು ಪಿತೃ ತರ್ಪಣ ಈ ಮಾರ್ಗಗಳಿಂದ ಮೋಕ್ಷವನ್ನು ಸಾಧ್ಯಗೊಳಿಸಬಹುದು ಎಂಬ ಸತ್ಯವನ್ನು ಧರ್ಮಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.
೧. ‘ಗಂಗಾ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ
ಅ. ಗಮಯತಿ ಭಗವತ್ಪದಮ್ ಇತಿ ಗಂಗಾ |
ಅರ್ಥ : (ಸ್ನಾನ ಮಾಡುವ ಜೀವಕ್ಕೆ) ಭಗವಂತನ ಚರಣಗಳವರೆಗೆ ತಲುಪಿಸುವವಳೇ ಗಂಗಾ.
ಆ. ಗಮ್ಯತೇ ಪ್ರಾಪ್ಯತೇ ಮೋಕ್ಷಾರ್ಥಿಭಿಃ ಇತಿ ಗಂಗಾ |
ಅರ್ಥ : ಮೋಕ್ಷಾರ್ಥಿಗಳು, ಅಂದರೆ ಮುಮುಕ್ಷುಗಳು ಯಾರ ಕಡೆಗೆ ಹೋಗುತ್ತಾರೆಯೋ, ಅವಳೇ ಗಂಗಾ.
೨. ಬ್ರಹ್ಮಾಂಡದಲ್ಲಿ ಗಂಗಾ ನದಿಯ ಉತ್ಪತ್ತಿ ಮತ್ತು ಭೂಲೋಕದಲ್ಲಿ ಅವಳ ಅವತರಣ
೨ ಅ. ಬ್ರಹ್ಮಾಂಡದಲ್ಲಿನ ಉತ್ಪತ್ತಿ : ವಾಮನ ಅವತಾರದಲ್ಲಿ ವಿಷ್ಣುವು ದಾನಶೂರ ಬಲಿರಾಜನಲ್ಲಿ ಭಿಕ್ಷೆ ಎಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಬೇಡಿದನು. ವಾಮನನೆಂದರೆ ವಿಷ್ಣುವೆಂಬುದನ್ನು ತಿಳಿಯದ ಕಾರಣ ಬಲಿರಾಜನು ಆ ಕ್ಷಣವೇ ವಾಮನನಿಗೆ ಮೂರು ಹೆಜ್ಜೆ ಭೂಮಿಯನ್ನು ದಾನ ಮಾಡಿದನು. ವಾಮನನು ವಿರಾಟ ರೂಪವನ್ನು ಧರಿಸಿ ಒಂದು ಹೆಜ್ಜೆಯಿಂದ ಸಂಪೂರ್ಣ ಪೃಥ್ವಿ ಮತ್ತು ಇನ್ನೊಂದು ಹೆಜ್ಜೆಯಿಂದ ಅಂತರಿಕ್ಷವನ್ನು ವ್ಯಾಪಿಸಿದನು. ಅವುಗಳ ಪೈಕಿ ಎರಡನೇ ಹೆಜ್ಜೆಯನ್ನು ಎತ್ತುವಾಗ ವಾಮನನ (ವಿಷ್ಣುವಿನ) ಎಡಗಾಲಿನ ಹೆಬ್ಬೆರಳು ತಾಗಿ ಬ್ರಹ್ಮಾಂಡದ ಸೂಕ್ಷ -ಜಲದ ಕವಚ (ಟಿಪ್ಪಣಿ ೧) ಒಡೆಯಿತು. ಅದರಿಂದ ಗರ್ಭೋದಕದಂತೆ ಬ್ರಹ್ಮಾಂಡದ ಹೊರಗಿನ ಸೂಕ್ಷ -ಜಲವು ಬ್ರಹ್ಮಾಂಡದೊಳಗೆ ನುಗ್ಗಿತು. ಈ ಸೂಕ್ಷ -ಜಲವೆಂದರೆ ಗಂಗಾ !
ಈ ಗಂಗೆಯ ಪ್ರವಾಹವು ಮೊದಲು ಸತ್ಯಲೋಕಕ್ಕೆ ಹೋಯಿತು. ಬ್ರಹ್ಮದೇವನು ಅವಳನ್ನು ತನ್ನ ಕಮಂಡಲುವಿನಲ್ಲಿ ಧರಿಸಿದನು. ನಂತರ ಅವನು ತನ್ನ ಕಮಂಡಲುವಿನಲ್ಲಿನ ನೀರಿನಿಂದ ಶ್ರೀವಿಷ್ಣುವಿನ ಚರಣಗಳನ್ನು ತೊಳೆದನು. ಆ ಜಲದಿಂದ ಗಂಗೆ ಉತ್ಪನ್ನಳಾದಳು. ನಂತರ ಅವಳು ಸತ್ಯಲೋಕದಿಂದ ಕ್ರಮವಾಗಿ ತಪೋಲೋಕ, ಜನಲೋಕ, ಮಹರ್ಲೋಕ ಈ ಮಾರ್ಗದಿಂದ ಸ್ವರ್ಗಲೋಕಕ್ಕೆ ಬಂದಳು.
ಟಿಪ್ಪಣಿ ೧ – ಹಿಂದೂ ಧರ್ಮಶಾಸ್ತ್ರಕ್ಕನುಸಾರ ಬ್ರಹ್ಮಾಂಡವು ಭೂಲೋಕಾದಿ ಸಪ್ತಲೋಕ ಮತ್ತು ಸಪ್ತಪಾತಾಳ ಎಂಬ ೧೪ ಭುವನಗಳಿಂದ ನಿರ್ಮಾಣವಾಗಿದೆ. ಬ್ರಹ್ಮಾಂಡವು ಲಂಬವರ್ತುಲಾ ಕಾರವಾಗಿದ್ದು ಅದರ ಹೊರಗೆ ನಾಲ್ಕೂ ದಿಕ್ಕುಗಳಲ್ಲಿ ಕ್ರಮವಾಗಿ ಸೂಕ್ಷ -ಪೃಥ್ವಿಯ, ಸೂಕ್ಷ – ಜಲದ, ಸೂಕ್ಷ -ತೇಜ, ಸೂಕ್ಷ -ವಾಯು, ಸೂಕ್ಷ -ಆಕಾಶ, ಅಹಂತತ್ತ್ವ, ಮಹತ್ತತತ್ತ್ವ ಮತ್ತು ಪ್ರಕೃತಿ ಎಂಬ ೮ ಕವಚಗಳಿರುತ್ತವೆ. ಈ ಕವಚದಲ್ಲಿನ ‘ಸೂಕ್ಷ -ಜಲದ ಕವಚ’ವೆಂದರೆ ಗಂಗಾ. ಆದುದರಿಂದಲೇ ಆಯುರ್ವೇದದಲ್ಲಿ ಗಂಗಾಜಲಕ್ಕೆ ‘ಅಂತರಿಕ್ಷಜಲ’ ಎಂದು ಹೇಳಲಾಗಿದೆ. (೧)
೩. ಗಂಗೆಯು ಭೂಲೋಕದಲ್ಲಿ ಅವತರಿಸಿದ ದಿನ !
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠೇ ಮಾಸಿ ಕುಜೇಹನಿ |
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ || – ವರಾಹಪುರಾಣ
ಅರ್ಥ : ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಭೌಮವಾರ (ಮಂಗಳವಾರ) ಮತ್ತು ಹಸ್ತ ನಕ್ಷತ್ರ ಎಂಬ ಯೋಗದಲ್ಲಿ ಗಂಗೆಯು ಸ್ವರ್ಗದಿಂದ ಧರಣಿಯ ಮೇಲೆ ಅವತರಿಸಿದಳು.
ಗಂಗಾವತರಣದ ತಿಥಿಯನ್ನು ಕೆಲವು ಪುರಾಣಗಳಲ್ಲಿ ವೈಶಾಖ ಶುಕ್ಲ ಪಕ್ಷ ತೃತೀಯವಾದರೆ, ಕೆಲವು ಪುರಾಣಗಳಲ್ಲಿ ಕಾರ್ತಿಕ ಹುಣ್ಣಿಮೆಯೆಂದು ಹೇಳಲಾಗಿದ್ದರೂ, ಹೆಚ್ಚಿನ ಪುರಾಣಗಳಲ್ಲಿ ‘ಜ್ಯೇಷ್ಠ ಶುಕ್ಲ ಪಕ್ಷ ದಶಮಿ’ಯನ್ನೇ ಗಂಗಾವತರಣದ ತಿಥಿ ಎಂದು ಹೇಳಲಾಗಿದೆ ಮತ್ತು ಅದೇ ಸರ್ವಮಾನ್ಯವಾಗಿದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)
***********
🌹🌹ಗಂಗಾದೇವಿ ಹಾಡು🌹🌹
ಗಂಗಾದೇವಿಯೆ ನಿನಗೆ ಒಂದೇ ಮನದಲಿ ನೆನೆವೆ
ಸಿಂಧುರಾಜನ ರಾಣಿ ನೀ ಕರುಣಿಸೆ
ಮಂಗಳಾಂಗಿಯೆ ನಿನಗೆ ಮುಂದಲೆ ಬಾಗುವೆ
ಮಂದಗಮನಿಯೆ ನೀ ಸುಂದರಾಂಗಿ||ಪಲ್ಲ||
ಎತ್ತ ನೋಡಿದರತ್ತ ಬಳಕುತ ಬರುವಿಯೆ
ಸುತ್ತಿ ಸುತ್ತಿ ನೀನು ಪ್ರವಹಿಸುತ
ಹತ್ತಿ ಇಳಿದು ಗಿರಿ ಶಿಖರದೊಳುರುಳುತ್ತ
ಶಿಸ್ತಾಗಿ ನೀನು ಹರಿದು ಹೋಗುವಿ||೧||
ಹರಿ ಪಾದೋದಕವಾಗಿ ಹರಿದು ಬಂದಿಯೆ ನೀನು
ಹರಿಯ ಗಿರಿಯ ಸುತ್ತ ಸುಳಿದಾಡುವಿ
ಸ್ಥಿರವಾಗಿ ಅಳಕನಂದನ ಜೊತೆಗೂಡಿ
ಭರದಿ ಬರುವಿ ವಯ್ಯಾರದಿಂದ||೨||
ಅಳಕನಂದನ ಕೂಡಿ ಬಳುಕುತ್ತ ಬರುವೀಯೆ
ಇಳೆಯೊಳು ಮಿಗಿಲಾಗಿ ಪ್ರವಹಿಸುತ
ಚಳಿ ಬಿಸಿಲೆನ್ನದೆ ಬಳ ಬಳ ಹರಿಯುವಿ
ಕಳಿಯ ಸುರಿಯುವಿಯೆ ಕೋಮಲಾಂಗಿ||೩||
ಅರಿಷಿಣ ಕುಂಕುಮ ಹಚ್ಚಿ ಬೆರಸಿದ ಮಲ್ಲಿಗೇರಿಸಿ
ಪರಿ ಪರಿ ಪೂಜೆಯ ಮಾಡಿ
ಮರದ ಬಾಗಿಣವನ್ನ ಮುತೈದೆಯರು ತಂದು
ಸರಸದಿ ನೀಡುವರೆ ತಾಯೆ||೪||
ಮುಕ್ತ ಕಂಠದಿಂದ ನಿನ್ನ ಹಾಡಿ ಹೊಗಳುತ್ತ
ಭಕ್ತಿಯಿಂದಾರುತಿಯನೆ ಮಾಡುತ
ಶ್ರಧ್ಧೆಯಿಂದಲಿ ಮನೆಗೆ ಗಂಗೆ ತುಂಬಿಸಿಕೊಂಡು
ಮಧ್ವೇಶಕೃಷ್ಣನ ಬೇಡುತ||೫||
~~~ಹರೇ ಶ್ರೀನಿವಾಸ.
********
from [4:59 PM, 5/21/2020] by prasad acharya +919535837843) Prasad Karpara Group:
ಇತಿಹಾಸ ಪುರಾಣಗಳಲ್ಲಿ ಗಂಗಾಮಹಿಮೆ ವರ್ಣನೆ ಮಾಡೋವಾಗ ಪದೇಪದೆ ಹೇಳೋದು ಗಂಗೆಯಲ್ಲಿ ಸ್ನಾನ ಮಾಡಿದವರ ಪಾಪ ನಾಶ ಆಗತ್ತೆ ಆಸ್ತಿ ವಿಸರ್ಜನ ಮಾಡಿದರೆ ಎಲ್ಲಿಯವರೆಗೆ ಗಂಗಾನದಿಯಲ್ಲಿ ಅಸ್ತಿಗಳು ಇರತ್ತೊ ಅಲ್ಲಿಯವರೆಗೆ ಸ್ವರ್ಗಾದಿ ಭೋಗಗಳು ಸಿಗತ್ತೆ ಅಂತ ಉಲ್ಲೇಖವಿದೆ ಎಲ್ಲರೂ ಗಂಗಾನದಿಗೆ ಹೋಗಿ ಅಲ್ಲಿ ಸ್ನಾನ ಮಾಡಿ ತಮ್ಮ ಪಾಪವನ್ನು ಕಳೆದುಕೊಳ್ಳುತ್ತಾರೆ ಕಲುಷಿತಳಾದ ಗಂಗೆಯನ್ನು ಪವಿತ್ರ ಹೇಗೆ ಆಗತ್ತೆ ? ತಿಳಿಸಬೇಕಾಗಿ ವಿನಂತಿ
👍 ಅಕ್ಷರಶಃ ಪರಮಸತ್ಯವಾದ ಮಾತು ಆಚಾರ್ಯರೇ...
ಪರಮ ಜ್ಞಾನಿಗಳೂ ಆದ ಶ್ರೇಷ್ಠ
ಭಗವದ್ಭಕ್ತರು ನಿನ್ನಲ್ಲಿ ಬಂದು ಮಿಂದಾಗ ಪಾಪಗಳಿಂದ ಕಲುಷಿತಳಾದ ನಿನ್ನನ್ನು ತಮ್ಮ ತಪ: ಶಕ್ತಿಯಿಂದ ಪವಿತ್ರಗೊಳಿಸುವುದರಲ್ಲಿ ಸಂದೇಹ ಬೇಡ ನೀನು ವ್ಯಥೆ ಪಡುವ ಅಗತ್ಯವಿಲ್ಲ ಜ್ಞಾನಿಗಳು ನಿನ್ನನ್ನು ಉದ್ಧಾರ ಮಾಡೇ ಮಾಡ್ತಾರೆ ಎಂದು ಭಗವಂತ ಸಮಾಧಾನ ಹೇಳಿದನಂತೆ...
ಆ ಕಾರಣದಿಂದಲೇ
ಗಂಗೆಯು ಯಾವಾಗಲೂ ಪವಿತ್ರಳು ಪರಮ ಪವಿತ್ರಳೇ ಎಂದು ಹೇಳುವುದುಂಟು
ಕೇವಲ ನಾಮಸ್ಮರಣೆಯಿಂದಲೇ
( ಗಂಗಾ ಗಂಗೇತಿ ಯೋ ಭ್ರೂಯಾತ್)
ನಮ್ಮ ಪಾಪಗಳನ್ನು ಯದ್ಯಪಿ ಮನೆಯಲ್ಲಿಯೇ ಸ್ನಾನ ಮಾಡುವಾಗ ಅವಳ ಸ್ಮರಣೆ ಮಾತ್ರದಿಂದಲೇ ಪಾಪಗಳ ಪರಿಹಾರ ಆಗುವಾಗ ಇನ್ನು ಸಾಕ್ಷಾತ್ತಾಗಿ ಗಂಗಾ ಸನ್ನಿಧಾನದಲ್ಲೇ ಅರ್ಥಾನುಸಂಧಾನ ಪೂರ್ವಕ ಸ್ನಾನ ಮಾಡಿದಾಗ ಪಾಪಗಳ
ಪರಿಹಾರವಾಗುವುದರಲ್ಲಿ
ಕಿಂಚಿತ್ತೂ ಸಂದೇಹವಿಲ್ಲ
ದೃಷ್ಟಾಂತ ಕ್ಕೆ ಒಂದು ಸಣ್ಣ ಕಥೆಯನ್ನೂ ಕೂಡ ಹೇಳಿದ್ದಾರೆ
ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮಿಗಳವರ ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನ ಕಾಲದಲ್ಲಿ ಕೇಳಿದ ಸ್ಮರಣೆ ಅಷ್ಟೇ...
ಯಥಾಸ್ಮೃತಿ ಪ್ರಯತ್ನ ಆಚಾರ್ಯರೇ...
🙏🙇♀ ಶ್ರೀನಿವಾಸ ದಯಾನಿಧೇ 🙇♀🙏
ಹಿಂದಕ್ಕೆ ಪಂಢರಾಪುರದಲ್ಲಿ ಪುಂಡರೀಕ ಎಂಬ ಒಬ್ಬ ಬ್ರಾಹ್ಮಣನಿದ್ದ , ಅತ ಪರಮ ಅಯೋಗ್ಯ , ಕಠಿಣ ಚಿತ್ತವೃತ್ತಿಉಳ್ಳವ , ಮಾತಾಪಿತೃಗಳ ದ್ರೋಹಿ ಆಗಿದ್ದ . ಒಂದು ದಿವಸ ಆ ಊರಿನ ಆಸ್ತಿಕ ಜನರೆಲ್ಲರೂ ಕೂಡಿ ಕಾಶೀಕ್ಷೇತ್ರದ, ಗಂಗಾನದಿಯ ಮಹಿಮೆಯನ್ನು ಕೇಳಬೇಕೆಂದು ನಿಶ್ಚಯಿಸಿ ಒಬ್ಬ ಶ್ರೇಷ್ಠ ಪುರಾಣಿಕರನ್ನು ಆಮಂತ್ರಿಸಿ ಪುರಾಣ ಕೇಳಲು ಸಿದ್ಧರಾದರು . ಪುಂಡರೀಕನ ಮಡದಿಯೂ ಕಾಶೀಕ್ಷೇತ್ರದ ಹಾಗೂ ಗಂಗಾನದಿಯ ಮಹಿಮೆಯನ್ನು ಕೇಳಿ ಅದರಿಂದ ಪ್ರಭಾವಿತಳಾಗಿ ತನ್ನ ಪತಿಯನ್ನು ಒತ್ತಾಯಪೂರ್ವಕ ಒಪ್ಪಿಸಿ ಕಾಶಿಕ್ಷೇತ್ರಕ್ಕೆ ದಂಪತಿಗಳಿಬ್ಬರೂ ಹೊರಡಲು ತಯಾರಾದಾಗ ಆತನ ಮಾತಾಪಿತೃಗಳೂ ತಾವೂ ಬರ್ತೀವಿ ಅಂದ್ರೂ ಸಹ ಅವರನ್ನು ಧಿಕ್ಕರಿಸಿ ತನ್ನ ಪತ್ನಿಯೊಡನೆ ಕಾಶಿಕ್ಷೇತ್ರಕ್ಕೆ ಹೊರಟುಬಿಟ್ಟ . ಆದರೂ ಸಹ ತಾಯಿತಂದೆಗಳು ತಮ್ಮ ಮಗನ ಮೇಲಿನ ವಾತ್ಸಲ್ಯದಿಂದ ಹಿಂದೆ ಹಿಂದೆ ತಾವೂ ಪ್ರಯಾಣ ಬೆಳೆಸಿದರು . ಅವನು ದಾರಿಯಲ್ಲಿ ಇಳಿದುಕೊಂಡ ಸ್ಥಳದಲ್ಲಿಯೇ ತಾವೂ ವಾಸ್ತವ್ಯ ಮಾಡುತ್ತಾ ತಾವು ತಂದ ಸ್ವಲ್ಪ ಆಹಾರದಲ್ಲೇ ಸ್ವಲ್ಪ ಸ್ವಲ್ಪ ತಿನ್ನುತ್ತಾ ಸಾಗ್ತಾಯಿದ್ರು , ಆದರೆ ಪುಂಡರೀಕ ಮಾತ್ರ ತನ್ನ ಪತ್ನಿಯ ಸಮೇತ ಮೃಷ್ಟಾನ್ನ ತಿಂದು ಪ್ರಯಾಣ ಮಾಡ್ತಿದ್ದ . ಕೆಲವು ದಿವಸಗಳಾದನಂತರ ಕಾಶಿಗೆ ಸಮೀಪದಲ್ಲಿದ್ದ ಒಂದು ಗ್ರಾಮಕ್ಕೆ ಬಂದು ರಾತ್ರಿ ಒಂದು ಛತ್ರದಲ್ಲಿ ಇಳಿದಿದ್ದನು . ಅಲ್ಲಿ ಸಮೀಪದಲ್ಲೇ ಕುಕ್ಕೂಟ ಮಹರ್ಷಿಗಳ ಆಶ್ರಮ ಇದ್ದುದರಿಂದ ಯಾವಾಗ ಬೆಳಗಾದೀತೋ ಯಾವಾಗ ಅವರ ಆಶ್ರಮಕ್ಕೆ ಹೋದೀನೋ ಅಂತ ಅಲ್ಲೇ ಕಟ್ಟಯಮೇಲೆ ಕುಳಿತು ದಾರಿ ನೋಡ್ತಾಯಿದ್ದ . ಬರೊಬ್ಬರಿ ಅರುಣೋದಯ ಕಾಲಕ್ಕೆ ಅತ್ಯಂತ ಕಪ್ಪಾದ , ಕುರೂಪಿಗಳಾದ ಸ್ತ್ರೀಯರು ಆ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸಿ , ಕಸಗುಡಿಸಿ , ಸಾರಿಸಿ ರಂಗವಲ್ಯಾದಿಗಳಿಂದ ಅಲಂಕಾರಮಾಡಿ ಹೊರಗಡೆ ಬರುವಾಗ ಆ ಸ್ತ್ರೀಯರು ದಿವ್ಯವಾದ ದೇವತಾಸ್ತ್ರೀರೂಪವುಳ್ಳವರಾಗಿ ಹೊರಬರುತ್ತಿರುವದನ್ನು ನೋಡಿ ಈ ಪುಂಡರೀಕ ಆಶ್ಚರ್ಯಚಕಿತನಾಗಿ ಕುಕ್ಕೂಟ ಮಹರ್ಷಿಗಳು ಎಲ್ಲಿದ್ದಾರೆ ಎಂದು ಕೇಳಿದಾಗ , ಇಲ್ಲೇ ಆಶ್ರಮದಲ್ಲೇ ಇದ್ದಾರೆ ನೋಡು ಎಂದಾಗ ಆ ಮಹರ್ಷಿಗಳು ಕಾಣದಾದಾಗ ಮತ್ತೆ ಆ ಸ್ತ್ರೀಯರನ್ನು ಕುರಿತು ಎಲ್ಲಿ ಮಹರ್ಷಿಗಳು ಕಾಣಸ್ತಿಲ್ಲವಲ್ಲಾ ಎಂದು ಪ್ರಶ್ನಿಸಿದಾಗ , ಹೇ ಪಾಪಿಯೇ ನಿನ್ನ ಕಣ್ಣಿಗೆ ಅವರು ಗೋಚರರಾಗುವದಿಲ್ಲ , ಅಲ್ಲೇ ತಮ್ಮ ಮಾತಾಪಿತೃಗಳ ಸೇವೆ ಮಾಡುತ್ತಿದ್ದಾರೆ ನೋಡು ಸರಿಯಾಗಿ ಎಂದು ಹೇಳಿದಾಗ , ಮತ್ತೆ ನೋಡಲಾಗಿ ಆಗಲೂ ಕಾಣಿಸಲೇಯಿಲ್ಲ . ಮತ್ತೆ ಆ ಸ್ತ್ರೀಯರನ್ನು ಕೇಳಿದಾಗ ಹೇ ಪಾಪಿ ನಿನ್ನ ಮಾತಾಪಿತೃಗಳು ನಿನಗಾಗಿ ಇಷ್ಟುವರ್ಷ ಸಾಕಷ್ಟು ಕಷ್ಟ ಅನುಭವಿಸಿ ಸಮಾಜದಲ್ಲಿ ನಿನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ಬೆಳೆಸಿ , ಇವತ್ತು ಅವರು ನಿನ್ನಿಂದ ತುಂಬಾ ಕಷ್ಟಪಡುತ್ತಿದ್ದಾರೆ , ನೀನು ನಿನ್ನ ಮಾತಾಪಿತೃಗಳನ್ನು ತಿರಸ್ಕರಿಸಿ ಮಹಾಪಾಪವನ್ನು ಕಟ್ಟಿಕೊಂಡಿರುವೆ . ನಿನ್ನ ಜೊತೆ ಮಾತಾಡಿದರೆ ನಮಗೂ ಸಹ ಆ ಪಾಪ ಅಂಟಿಕೊಳ್ಳುವದು ಇನ್ನು ನಾವು ಹೊರಡುತ್ತೇವೆ ಎಂದು ಹೊರಡಲು ತಯಾರಾದಾಗ ಆ ಪುಂಡರೀಕನು " ಅಮ್ಮಾ ತಾಯಂದಿರಾ ! ನೀವು ಯಾರು ? ನೋಡಿದರೆ ದೇವತಾಸ್ತ್ರೀಯರಂತೆ ಕಾಣಿಸುತ್ತಿದ್ದೀರಿ , ಆದರೆ ಈ ಆಶ್ರಮವನ್ನು ಶುದ್ಧಿ ಮಾಡಲು ಕಾರಣವೇನು ? ಎಂದು ನಾನಾವಿಧವಾದ ಪ್ರಶ್ನೆಗಳನ್ನು ಕೇಳಿದಾಗ , ಆ ಸ್ತ್ರೀಯರು ಇವನ ಜೊತೆ ಮಾತನಾಡಲು ಇಷ್ಟವಿಲ್ಲದಿದ್ದರೂ ಸಹ ಇವನನ್ನು ಉದ್ಧಾರಮಾಡಬೇಕೆಂದು ಯೋಚಿಸಿ " ಹೇ ಪಾಪಿಯೇ ಕೇಳು , ನಾವು ಗಂಗೆ ಗೋದಾವರಿ ಮೊದಲಾದ ಸಪ್ತಗಂಗೆಯರು , ನಮ್ಮಲ್ಲಿ ಅನೇಕ ಪಾಪಿಗಳು ಸ್ನಾನವನ್ನು ಮಾಡಿ ಅವರ ಪಾಪಗಳನ್ನೆಲ್ಲಾ ನಮ್ಮಲ್ಲಿ ಬಿಟ್ಟು ಹೋಗುತ್ತಾರೆ , ಆ ಪಾಪಗಳನ್ನು ಕಳೆದುಕೊಳ್ಳುವದಕ್ಕಾಗಿ ಮಾತಾಪಿತೃಗಳ ಸೇವಾನಿರತರಾದ ಜ್ಞಾನಿಗಳಾದ ತಮ್ಮ ಜ್ಞಾನಗಂಗೆಯಲ್ಲಿ ಸಮಸ್ತ ಸದ್ಭಕ್ತರನ್ನು ಸ್ನಾನಮಾಡಿಸಿ ಪವಿತ್ರಗೊಳಿಸುವ ಆ ಮಹಾನುಭಾವರ ಸೇವಾ ಮಾಡಿ ನಮ್ಮಲ್ಲಿರುವ ಸಮಸ್ತ ಜನರ ಪಾಪದಿಂದ ಮುಕ್ತರಾಗಿ ಹೊರಟು ಹೋಗುತ್ತೇವೆ , ಪ್ರತಿನಿತ್ಯ ನಾವು ಪಾಪದಿಂದ ಕೂಡಿ ಇಲ್ಲಿ ಬರುವಾಗ ಕುರೂಪಿಗಳಾಗಿ ಬರುವೆವು , ಆ ಜ್ಞಾನಿಗಳ ಸೇವಾ ಮಾಡಿದ್ದರಿಂದ ನಮ್ಮ ನಿಜಸ್ವರೂಪವು ನಮಗೆ ಬರುವದು ಈ ಮಹರ್ಷಿಗಳಿಗೆವ ತಮ್ಮಮಾತಾಪಿತೃಗಳ ಸೇವಾದಿಂದಲೇ ಭಗವದ್ವಿಷಯಕ ಜ್ಞಾನ ಬಂದಿರುವದು. ಕೀರ್ತಿಯೂ ಬಂದಿರುವದು . ನೀನು ನಿನ್ನ ಮಾತಾಪಿತೃಗಳ ಸೇವಾ ಎಂಬ ಮುಖ್ಯವಾದ ಧರ್ಮವನ್ನೇ ಬಿಟ್ಟು ಯಾವ ಕಾಶಿಗಾಗಲೀ ಬದರಿಗಾಗಲಿ , ಯಾವುದೇ ತೀರ್ಥಕ್ಷೇತ್ರಗಳಿಗೆ ಹೋದರೂ ಏನೂ ಪ್ರಯೋಜನವಿಲ್ಲ . ಎಂದು ಹೇಳಿದಾಗ ಆಗಿಂದಾಗಲೇ ತನ್ನ ತಪ್ಪಿನ ಅರಿವಾಗಿ ಅಲ್ಲಿಯೇ ಇರುವ ತನ್ನ ಮಾತಾಪಿತೃಗಳನ್ನ ತನ್ನ ಊರಿಗೆ ಕರದುಕೊಂಡು ಬಂದು ನಿರಂತರ ಅವರ ಸೇವೆಯಲ್ಲೇ ನಿರತನಾಗಿ ವಿಠ್ಠಲನನ್ನು ಪ್ರತ್ಯಕ್ಷೀಕರಿಸಿಕೊಂಡು ಭಕ್ತಪುಂಡರೀಕ ಎಂದು ಪ್ರಸಿದ್ಧಿಯಾದ .
ಇದನ್ನೇ ನಮ್ಮ ಮಾನವೀ ಪ್ರಭುಗಳು -
ಇಟ್ಡಕಲ್ಲನು ಭಕುತಿಯಿಂದಲಿ
ಕೊಟ್ಟ ಭಕುತಗೆ ಮೆಚ್ಚಿ ತನ್ನನು ಕೊಟ್ಟ ಎಂಬುದಾಗಿ ತುಂಬಾ ಮಾರ್ಮಿಕವಾಗಿ ಸ್ಪಷ್ಟಪಡಿಸಿದ್ದಾರೆ .
ಆದ್ದರಿಂದ ಗಂಗಾದಿನದ್ಯಾಭಿಮಾನಿ ದೇವತೆಗಳು ತಮ್ಮ ಪಾವಿತ್ರ್ಯವನ್ನು ಎಲ್ಲಿ ಹೆಚ್ಚಿಸಿಕೊಳ್ತಾವು ಅಂದ್ರ , ಎಲ್ಲಿ ವರ್ಣಾಶ್ರಮೋಚಿತ ಧರ್ಮಗಳು ಸರಿಯಾಗಿ ನಡೆದಿವೆಯೋ , ಎಲ್ಲಿ ಭಕ್ತಿಭರಿತವಾದ ಜ್ಞಾನ ಯಜ್ಞ ನಡೆದಿರುತ್ತದೋ ಅಲ್ಲಿ ತಾವಾಗಿಯೇ ಬಂದು ಪಾವಿತ್ರ್ಯವನ್ನು ಪಡೆದುಕೊಂಡು ಹೋಗುತ್ತಾರೆ . ಇದನ್ನೇ ವಿಷ್ಣುಸಹಸ್ರನಾಮದಲ್ಲಿ ಪವಿತ್ರಾಣಾಂ ಪವಿತ್ರಂ ಯೋ ಮಂಗಲನಾಂ ಚ ಮಂಗಲಂ ಎಂಬುದಾಗಿ ತಿಳಿಸುತ್ತಾ , ಎಲ್ಲಪವಿತ್ರ ವಸ್ತುಗಳಿಗೂ ಪಾವಿತ್ರ್ಯವನ್ನು ಕರುಣಿಸುವವನು ಭಗವಂತ , ಆ ಭಗವಂತ ನಮಗೆ ಅನುಶಾಸನ ರೂಪದಲ್ಲಿ ಹೇಳಿದ ನಮ್ಮ ನಮ್ಮ ವಿಹಿತ ಧರ್ಮಗಳನ್ನು , ಅದಕ್ಕೂ ಪೂರ್ವದಲ್ಲಿ ನಮ್ಮ ನಮ್ಮ ತಾಯಿತಂದೆಗಳ ಸೇವೆಯನ್ನು ಅತ್ಯಂತ ಭಕ್ತಿಪ್ರೀತ್ಯಾದರಗಳಿಂದ ಮಾಡುವದೇ ಭಗವಂತನಿಗೆ ಹೆಚ್ಚುಪ್ರೀತಿ ಅದರಿಂದಲೇ ನಮಗೆ ಜ್ಞಾನ ಪ್ರಾಪ್ತಿ , ಆ ಜ್ಞಾನಯುಕ್ತ ಭಕ್ತಿಯಿಂದಲೇ ಭಗವಂತನ ಪ್ರಸಾದ ಪ್ರಾಪ್ತಿ 🙏🏼 ಹರೇ ಶ್ರೀನಿವಾಸಾ 🙏🏼
************
ಗಂಗೆಯಕಾಲುಷ್ಯವನ್ನು ವಿಮೋಚನೆ ಗೊಳಿಸುವವರು ಯಾರು ?
ಸಾಮಾನ್ಯವಾಗಿ ಎಲ್ಲ ಭಕ್ತರೂ ಗಂಗಾನದಿಗೆ ಹೋಗಿ ಅಲ್ಲಿ ಸ್ನಾನಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡು ಪವಿತ್ರರಾಗುತ್ತಾರೆ ಆದರೆ ಗಂಗೆಯನ್ನು ಪವಿತ್ರಮಾಡುವವರು ಯಾರು ? ಉತ್ತರ ಇಲ್ಲಿದೆ -
ತೀರ್ಥಿಕುರ್ವಂತಿ ತೀರ್ಥಾನಿ ಸ್ವಾತ್ಮಸ್ಥೇನ ಗದಾಭೃತಾ ||
ತಮ್ಮ ಹೃದಯಕಮಲದಲ್ಲಿರುವ. ಗದಾಧರನಾದ ಶ್ರೀಹರಿಯಿಂದ ತಾವಾಗಿಯೇ ಪವಿತ್ರರಾದ ಭಗವದ್ಭಕ್ತರು ಗಂಗಾದಿ ತೀರ್ಥಾಭಿಮಾನಿಗಳನ್ನು ತಮ್ಮ ಸ್ನಾನದಿಂದ ಪವಿತ್ರಗೊಳಿಸುತ್ತಾರೆ .
-ಶ್ರೀಮದ್ ಭಾಗವತಪುರಾಣ 1-12-10
ಜಗದ್ಗುರು ಶ್ರೀಮಧ್ವಾಚಾರ್ಯರು ಬದರಿಯಾತ್ರೆಯ ಸಂಧರ್ಭದಲ್ಲಿ ಗಂಗಾನದಿಯಲ್ಲಿ ಸ್ನಾನಮಾಡಿಗಂಗಾನದಿಯನ್ನು ಪವಿತ್ರಗೊಳಿಸಿದರು ಎಂದು ಸುಮಧ್ವವಿಜಯದಲ್ಲಿ ನಾರಾಯಣಾಪಂಡಿತಾಚಾರ್ಯರು ವರ್ಣಿಸಿದ್ದಾರೆ .
ಬುದ್ಧಿಶುದ್ಧಿಕರಗೋನಿಕರಾಡ್ಯಂ ತೀರ್ಥಜಾತಮುಭಯಂ ಚ ಧರಣ್ಯಾಮ್ |
ಆತ್ಮಮಜ್ಜನತ ಏವ ನಿಕಾಮಂ ಪರ್ಯಶೋಧಯದಮಂದಮನೀಷಃ |
ಪೂರ್ಣಭೋಧರಾದ ಶ್ರೀಮಧ್ವಾಚಾರ್ಯರು ಬುದ್ದಿಗೆ ಶುದ್ಧಿಯನ್ನು ತಂದುಕೊಡುವಂತಹ ಭೂಮಿಯಲ್ಲಿನ ಎರಡುವಿಧವಾದ ತೀರ್ಥಗಳ ಸಮುದಾಯವನ್ನು ತಾವು ಸ್ನಾನ ಮಾಡುವ ಮೂಲಕ ಚೆನ್ನಾಗಿ ಪರಿಶುದ್ಧಗೊಳಿಸಿದರು .
-ಸುಮಧ್ವವಿಜಯ 6-35
ಗಂಗಾದಿ ತೀರ್ಥಗಳು ಮತ್ತು ಭಾಗವತಾದಿಶಾಸ್ತಗಳೇ ಈ ಎರಡುವಿಧವಾದ ತೀರ್ಥಗಳು ಅವರು ಗಂಗಾದಿತೀರ್ಥಗಳಲ್ಲಿ ಮಿಂದದ್ದರಿಂದ ಅವು ನಿರ್ಮಲವಾದವು . ಶ್ರೀಮಧ್ವಾಚಾರ್ಯರ (ಅವಗಾಹನ)ಸ್ನಾನದಿಂದ ತೀರ್ಥಗಳು ಪರಿಶುದ್ಧಿ ಹೊಂದಿದ್ದರಲ್ಲಿ ಆಶ್ಚರ್ಯವೇನಿದೆ !ಭಗವದ್ಭಕ್ತರ ಸ್ನಾನದಿಂದ ಗಂಗಾದಿತೀರ್ಥಗಳು ಶುದ್ಧವಾಗುವ ವಿವರ ಭಾಗವತ ಪುರಾಣದಲ್ಲೂ ಬಂದಿದೆ .
ಸಾಧವೋ ನ್ಯಾಸಿನಃ ಶಾಂತ ಬ್ರಹ್ಮೀಷ್ಠಾ ಲೋಕಪಾವನಾಃ |
ಹರಂತ್ಯಘಂ ತೇSಂಗಸಂಗಾತ್ ತೇಷ್ವಾಸ್ತೇ ಹ್ಯಘಭಿದ್ಧರಿಃ ||
ಮಡದಿ ಮಕ್ಕಳನ್ನೂ ಮನೆ ಮಠಗಳನ್ನೂ ,ಐಶ್ವರ್ಯ ಸುಖೋಪಭೋಗಗಳನ್ನು ,ಕಾಭಕ್ರೋಧಾದಿಗಳನ್ನೂ ಪರಿತ್ಯಜಿಸಿರುವ ಶಾಂತರಾದ (ಭಗವಂತನಲ್ಲಿ ಮನಸ್ಸಿಟ್ಟ) ಬ್ರಹ್ಮನಿಷ್ಠರಾದ ಲೋಕವನ್ನು ಪಾವನಮಾಡುವ ಸಾಧುಗಳು ತಮ್ಮ ಅಂಗಸ್ಪರ್ಶದಿಂದ ಇನ್ನೊಬ್ಬರ ಪಾಪಗಳನ್ನು ತೊಳೆದು ಬಿಡುವರು ಏಕೆಂದರೆ ಅವರ ಹೃದಯದಲ್ಲಿ ಪಾಪನಾಶಕನಾದ ಶ್ರೀಹರಿಯು ಯಾವಾಗಲೂ ಇರುತ್ತಾನೆ .
||ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
********
🌷ಗಂಗಾ ಮಹಿಮೆ 🌷
🌹ಸಂಚಿಕೆ-1🌹
|| ಗಂಗಾ - ಪರಿಚಯ ||
ವರುಣದೇವರ ಪತ್ನಿ ಗಂಗಾ ಇವಳು ತಾರತಮ್ಯದ 20ನೆಯ ಕಕ್ಷೆಯಲ್ಲಿ ಬರುವ ದೇವತೆಯಾಗಿದ್ದಾಳೆ.
ಮಂದಾಕಿನಿ ವಿಯದ್ಗಂಗಾ ಸ್ವರ್ನದೀ ಸುರದೀರ್ಘೀಕಾ ||
ಮಂದಾಕಿನಿ ವಿಯದ್ಗಂಗಾ ಸ್ವರ್ನದೀ ಸುರದೀರ್ಘೀಕಾ ಇವು ಅಮರಕೋಶದಲ್ಲಿ.ತಿಳಿಸಿರುವ ಗಂಗೆಯ ಹೆಸರುಗಳು .
ನಂದಿನೀ ನಲಿನೀ ಸೀತಾ ಮಾಲತಿ ಚ ಮಲಾಪಹಾ |
ವಿಷ್ಣುಪಾದಾಬ್ಜ ಸಂಭೂತ ಗಂಗಾ ತ್ರಿಪಥಗಾಮಿನಿ ಭಾಗಿರಥಿ ಭೋಗವತೀ ಜಾಹ್ನವೀ ತ್ರಿದಶೇಶ್ವರೀ ||
ನಂದಿನೀ , ನಲಿನೀ ,ಸೀತಾ ,ಮಾಲತಿ ,ಮಲಾಪಹಾ ,ವಿಷ್ಣುಪಾದಾಬ್ಜಸಂಭೂತ ,ಗಂಗೆ ,
ತ್ರಿಪಥಗಾಮಿನಿ ,ಭಾಗಿರಥಿ , ಭೋಗವತೀ ಜಾಹ್ನವೀ , ತ್ರಿದಶೇಶ್ವರೀ ಇವು ಶ್ರೀವರಾಹಪಃರಾಣ ತಿಳಿಸಿದ ಗಂಗೆಯ ಹನ್ನೆರಡು ಹೆಸರುಗಳು .
ವಿಷ್ಣುಪಾದಾಭ್ಜಸಂಭೂತ ಗಂಗಾ ಸರ್ವಾಧಿಕಾ ಮತಾ ||
ಗಂಗಾ ನದಿಯು ಜಗತ್ತಿನ ಪವಿತ್ರವಾದ ನದಿಯಾಗಿದೆ. ಶ್ರೀವಿಷ್ಣುವಿನ ಪಾದದಿಂದ ಹುಟ್ಟಿದ ಗಂಗಾನದಿಯು ಎಲ್ಲನದಿಗಳಿಗಿಂತ ಶ್ರೇಷ್ಠ ವೆಂದು ಶ್ರೀರಾಘವೇಂಂದ್ರಸ್ವಾಮಿಗಳು ನದಿತಾರತಮ್ಯಸ್ತೋತ್ರದಲ್ಲಿ ತಿಳಿಸಿದ್ದಾರೆ .
ನಾಸ್ಯ ತೀರ್ಥಸಲಿಲಸ್ಯ ಸಮಂ ವಾಃ |
ಗಂಗೆಗೆ ಸಮನಾದ ತೀರ್ಥ ಇನ್ನೊಂದಿಲ್ಲ ಎಂಬುದಾಗಿ ಜಗದ್ಗುರು ಶ್ರೀಮಧ್ವಾಚಾರ್ಯರು ಇದನ್ನು ಕೊಂಡಾಡಿದ್ದಾರೆ .
ಗಂಗಾನದಿಯ ಸ್ಮರಣೆ ಸ್ನಾನಕಾಲದಲ್ಲಿ ಪ್ರತಿನಿತ್ಯ ವಿಹಿತವಾಗಿದೆ .ಗಂಗಾ ಸ್ಮರಣೆ ಪಾಪನಾಶಕವಾಗಿದೆ ಈ ಗಂಗೆಯಲ್ಲಿ ಸ್ನಾನ ಮಾಡುವಾಗ ಶಂಖ ,ಚಕ್ರ ,ಗದಾ ,ಪದ್ಮಧರನಾದ ಶ್ರೀಹರಿಯ ಮಾಧವರೂಪವನ್ನು ಸ್ಮರಣೆ ಮಾಡಬೇಕು .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
🌷ಗಂಗಾ ಮಹಿಮೆ 🌷
🌹ಸಂಚಿಕೆ- 2🌹
|| ಗಂಗಾ - ಪರಿಚಯ ||
ಯಾವದಸ್ಥಿ ಮನುಷ್ಯಸ್ಯ ಗಂಗಾಯಾಃ ಸ್ಪ್ರಶತೇಜಲಂ |
ತಾವತ್ ಸ ಪುರುಷೋ ರಾಜನ್ ಸ್ವರ್ಗಲೋಕೇ ಮಹಿಯತೇ ||
ಗಂಗಾನದಿಯು ಕಲಿಯುಗದಲ್ಲಿ ಪವಿತ್ರವಾದ ನದಿಯಾಗಿದೆ ಮನುಷ್ಯನ ಅಸ್ಥಿಗೆ ಎಲ್ಲಿಯವರೆಗೂ ಗಂಗಾಜಲದ ಸ್ಪರ್ಶ (ಸಂಪರ್ಕ)ವಿರುವುದೋ ಅಲ್ಲಿಯವರೆಗೂ ಆ ಮನುಷ್ಯನು ಸ್ವರ್ಗಲೋಕದಲ್ಲಿ ಮಾನ್ಯನಾಗುವನು
-ಶ್ರೀಮನ್ ಮಹಾಭಾರತ
ಕಪಿಲರೂಪಿಯಾದ ಶ್ರೀಹರಿಗೆ ದ್ರೋಹಮಾಡಿ ಭಸ್ಮರಾದ ಸಗರಪುತ್ರರನ್ನು. ಗಂಗೆಯು ಭಗೀರಥನ ಪ್ರಾರ್ಥನೆಯಂತೆ ಅವರ ಭಸ್ಮದ ಮೇಲೆ ಹರಿದು ಆ ಮೂಲಕ ಅವರೆಲ್ಲವರನ್ನೂ.ಉದ್ಧರಿಸಿದ ವಿಷಯವು ಶ್ರೀಮದ್ ಭಾಗವತದಲ್ಲಿ ಉಕ್ತವಾಗಿದೆ .
ವಿಷ್ಣುಪಾದಾಬ್ಜ ಸಂಭೂತೇ ಗಂಗೇ ತ್ರಿಪಥಗಾಮಿನಿ |
ಗೃಹಾಣಾರ್ಘ್ಯಂ ಮಯದತ್ತಂ ಜಲೇ ಸನ್ನಿಹಿತಾಭವ ||
ಈ ಮಂತ್ರವನ್ನು ಹೇಳುತ್ತಾ ಗಂಗೆಗೆ ( ಗಂಗಾನದಿಯಲ್ಲಿ ಸ್ನಾನಮಾಡಿದಾಗ ) ಅರ್ಘ್ಯವನ್ನು ಕೊಡಬೇಕು )
ಗಂಗಾತೀರದಲ್ಲಿ ಪಿತೃಶ್ರಾದ್ಧಮಾಡಿದರೆ. ಪಿತೃಗಳು ಸಂತುಷ್ಟರಾಗುತ್ತಾರೆ ಗಂಗಾತೀರದಲ್ಲಿ ಮಾಡಿದ ಸ್ನಾನ ,ದಾನ ದಾನ ,ಪೂಜೆ ಮುಂತಾದ ಧರ್ಮಕಾರ್ಯಗಳನ್ನು ಭಗವಂತನಿಗೆ ಸಮರ್ಪಿಸುಬೇಕು ಇದರಿಂದ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
*******
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 3 ||
🌷ಶ್ರೀಮದ್ ಭಾಗವತದಲ್ಲಿ - ಗಂಗಾವತರಣ🌷
|| ಭಾಗೀರಥೀ ಗದ್ಯ ||
ಯಜ್ಞಮೂರ್ತಿಯಾದ ಸಾಕ್ಷಾದ್ ಭಗವಾನ್ ವಿಷ್ಣುವು ಬಲಿಚಕ್ರವರ್ತಿಯ ಯಜ್ಞ ದಲ್ಲಿ ವಾಮನರೂಪದಿಂದ ಕಾಣಿಸಿಕೊಂಡು ತ್ರಿವಿಕ್ರಮನಾಗಿ ಬಲಪಾದದಿಂದ ಭೂಮಿಯನ್ನಳೆದು ನಿಂತು ಎಡಗಾಲನ್ನು ಎತ್ತಿದಾಗ ಹೆಬ್ಬೆರಳಿನ ಉಗುರು ಬ್ರಹ್ಮಾಂಡ ಕಟಾಹಕ್ಕೆ ತಗುಲಿತು .ಕಟಾಹದಲ್ಲಿ ಬಿರುಕು ಉಂಟಾಯಿತು ಬಾಹ್ಯ ಜಲಾವರಣದ ನೀರು ಒಳಗೆ ನುಗ್ಗಿ ತ್ರಿವಿಕ್ರಮರೂಪಿ ಪರಮಾತ್ಮನ ಪಾದ ತೊಳೆಯಿತು ಕೆಂಪಾದ ಪಾದಕಮಲ ಪರಾಗಧೂಳಿಯ ಸಂಪರ್ಕದಿಂದ ನೀರು ಕೆಂಪಾಗಿ ಅದನ್ನು ಆಚಮನ ಮಾಡುವವರ ಒಳಗಿನ ಪಾಪವನ್ನು ,ಹೊರಗಿನ ಮಲವನ್ನು ಕಳೆಯಲು ಸಮರ್ಥವಾಯಿತು .ಪರರ ಮಲವನ್ನು ತೊಳೆದರೂ ತಾನು ನಿರ್ಮಲವೇ ಆಯಿತು .ಮುಂದೆ ಮುಂದೆ ಹರಿಯುತ್ತಿದ್ದಂತೆ ಜಹ್ನುಮುನಿ ಭಗಿರಥರಾಜ ಮುಂತಾದವರ ಸಂಭಂಧದಿಂದ ಜಾಹ್ನವಿ ,ಭಾಗಿರಥೀ ಮುಂತಾದ ಹೆಸರುಗಳು ಬಂದರೂ ,ಇದೀಗ ಅಂಥ ಯಾವ ನಿಮಿತ್ತವೂ ಇಲ್ಲದೆ ಸಾಕ್ಷಾದ್ ಭಗವಂತನ ಪಾದತೀರ್ಥವೆಂಬ ಕಾರಣದಿಂದ ಭಗವತ್ಪದೀ ವಿಷ್ಣುಪದೀ ಎಂದೇ ಕರಸಿಕೊಂಡೀತು ಹೊರತು ಭಗವಂತನ ಪ್ರತಿಮೆಯ ಗೌಣ ನಿಮಿತ್ತದಿಂದ ಅಲ್ಲ ಸಾವಿರಾರು. ಯುಗಗಳಷ್ಟೂ ದೀರ್ಘಕಾಲದ ಬಳಿಕ ವಿಷ್ಣುಪದಿಯು ಅಂತರಿಕ್ಷದ ತುತ್ತತುದಿಯಲ್ಲಿರುವ ಶಿಂಶುಮಾರಲೋಕದಲ್ಲಿ ಪ್ರಕಟವಾಯಿತು . ಈ ಲೋಕವು ಶಿಂಶುಮಾರಮೂರ್ತಿಯಾದ ವಿಷ್ಣುವಿನ ನಿವಾಸ ಸ್ಥಾನದಿಂದ ಇದನ್ನು ವಿಷ್ಣುಪದ ವೆಂದು ಕರೆಯುತ್ತಾರೆ .
-ಶ್ರೀಮದ್ ಭಾಗವತ 5-17-1
ತ್ರಿವಿಕ್ರಮರೂಪಿ ಪರಮಾತ್ಮನು ಭೂಮಿಯನ್ನು ಅಳೆಯುವಾಗ ಎಡಗಾಲನ್ನು ಎತ್ತಿದ್ದು ವರಾಹಕಲ್ಪದಲ್ಲಿ ಮಾತ್ರ ,ಬೇರೆ ಕಲ್ಪಗಳಲ್ಲಿ ಬಲಗಾಲನ್ನೇ ಎತ್ತುತ್ತಾನೆ ಎಂದು ಬ್ರಹ್ಮಾಂಡಪುರಾಣದಲ್ಲಿ ಹೇಳಿದೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 4 ||
🌷ಶ್ರೀಮದ್ ಭಾಗವತದಲ್ಲಿ - ಗಂಗಾವತರಣ🌷
|| ಭಾಗೀರಥೀ ಗದ್ಯ ||
ಆ ಶಿಂಶುಮಾರ ಲೋಕದಲ್ಲಿ ಧೃಢವ್ರತನೂ, ಪರಮಭಗವದ್ಭಕ್ತನೂ ಆದ ಧ್ರುವರಾಜನು ವೀಷ್ಣುಪದೀಜಲವನ್ನು ನಮ್ಮ ಕುಲದೇವತೆಯಾದ ವಿಷ್ಣುವಿನ ಪಾದಕಮಲತೀರ್ಥವೆಂದು ಪ್ರತಿದಿನ ಹೆಚ್ಚುತ್ತಿರುವ ಭಗವದ್ಭಕ್ತಿಯೋಗದಿಂಧ ಒಳಗಿನ ಹೃದಯ ಪೂರ್ಣವಾಗಿ ಕರಗುತ್ತಿದ್ದಂತೆ ಇಂದಿಗೂ ಮೂರು ಹೊತ್ತು ಪರಮಾದರದಿಂದ. ತಲೆಯಲ್ಲಿ ಧರಿಸುತ್ತಾನೆ . ಉತ್ಕಂಠತೆಯಿಂದ ಪರವಶನಾಗಿ ಅರೆಮುಚ್ಚಿದ ಕಮಲದ ಮೊಗ್ಗಿನಂಥ ಕಣ್ಣುಗಳಿಂದ ನಿರ್ಮಲವಾದ ಆನಂಧಭಾಷ್ಪ ಸುರಿಸುತ್ತಾನೆ ಮೈಯೆಲ್ಲಾ ರೋಮಂಚನ ಗೊಳ್ಳುತ್ತಾನೆ . || 2 ||
ಧ್ರುವಲೋಕದಿಂದ ವಿಷ್ಣುಪದೀ(ಗಂಗೆಯು) ಕೆಳಗೆ ಹರಿಯುವಾಗ ಸಪ್ತರ್ಷಿಲೋಕದಲ್ಲಿ ಆ ಜಲದ ಮಹಿಮೆಯನ್ನರೀತಿರುವ ಸಪ್ತರ್ಷಿಗಳು ಹರಿಪಾದತೀರ್ಥವನ್ನು ತಲೆಯಲ್ಲಿ ಧರಿಸುವುದೇ ಎಲ್ಲಾ ತಪಸ್ಸುಗಳ ಪರಮಸಿದ್ಧಿ ಎಂದು ಭಕ್ತಿಯಿಂದ ಇಂದಿಗೂ ತಮ್ಮ ಜಟಾಜೂಟಗಳಲ್ಲಿ ಧರಿಸುತಿದ್ದಾರೆ . ಏಕೆಂದರೆ ಸರ್ವೇಶ್ವರನಾದ ಭಗವಾನ್ ವಾಸುದೇವನಲ್ಲಿ ನಿರಂತರ ಭಕ್ತಿಯೋಗ ಲಭಿಸಿದರೆ ಸಾಕು ನಮ್ಮ ಪ್ರವೃತ್ತಿಗೆ ಬೇರೇನೂ ಫಲ ಬೇಡವೆನ್ನುವವರು ಆದರಿಂದ ಅವರಿಗೆ ವಿಷ್ಣುಪದೀಜಲ ಲಭಿಸಿದಾಗ ಮುಮುಕ್ಷುಗಳಿಗೆ ಮುಕ್ತಿ ಲಭಿಸಿದಷ್ಟೇ ಆನಂದ ಉಂಟಾಯಿತು . || 3 ||
-ಶ್ರೀಮದ್ ಭಾಗವತಪುರಾಣ 5- 17 -2, 3
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
*************
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 5 ||
🌷ಶ್ರೀಮದ್ ಭಾಗವತದಲ್ಲಿ - ಗಂಗಾವತರಣ🌷
|| ಭಾಗೀರಥೀ ಗದ್ಯ ||
ಬಳಿಕ ಸಪ್ತರ್ಷಿಲೋಕದಿಂದಲೂ.ಕೆಳಗಿಳಿದು ,ಅನೇಕ ಸಾವಿರ ಕೋಟಿ ವಿಮಾನ ಸಮೂಹಗಳಿಂದ ದೇವತೆಗಳು ಬಂದು ಸೇವಿಸುತ್ತಿದ್ದಂತೆ ,ಆಕಾಶ ಮಾರ್ಗವಾಗಿ ಚಂದ್ರಮಂಡಲಕ್ಕೆ ಬಂದು ತೊಯಿಸುವುದು . ಅಲ್ಲಿಂದ ಮೇರು ಪರ್ವತದ ಶಿಖರದಲ್ಲಿರುವ ಶತಕೋಟಿ ಎಂಬ ಬ್ರಹ್ಮದೇವರ ನಗರದಲ್ಲಿ ಬಿಳುತ್ತದೆ . || 4 ||
ಅಲ್ಲಿ ಅದು ಸೀತಾ, ಅಲಕಾನಂದಾ, ಚಕ್ಷು ಭದ್ರಾ ಎಂದು ನಾಲ್ಕು ಹೆಸರುಗಳಿಂದ ನಾಲ್ಕು ಧಾರೆಗಳಾಗಿ ಕವಲೊಡೆದು ನಾಲ್ಕು ದಿಕ್ಕುಗಳಲ್ಲಿ ಹರಿಯುತ್ತ ಕಡೆಗೆ ನದನದಿಗಳಿಗೆ ಅಧಿಪತಿಯಾದ ಸಾಗರವನ್ನು ಸೇರುತ್ತದೆ . || 5 ||
ಸೀತಾ ಎಂಬ ಶಾಖೆ ಶತಕೋಟಿಯಿಂದ ಪೂರ್ವದಿಕ್ಕಿಗೆ ಹೊರಟು ಮೇರುವಿನ ಸುತ್ತ ಕಮಲಕೇಸರದಂತಿರುವ ಕುರಂಗ ,ಕುರರ ,ಕುಸುಂಭ ಮುಂತಾದ ಕೇಸರ ಪರ್ವತಗಳ ಶಿಖರಗಳಿಗೆ ಇಳಿದು ಅಲ್ಲಿಂದ ಕೆಳಕೆಳಗೆ ಹರಿಯುತ್ತ ಗಂಧಮಾದನ ಶಿಖರದಲ್ಲಿ ಬಿದ್ದು ಭದ್ರಾಶ್ವಖಂಡದ ಮಾರ್ಗವಾಗಿ ಪೂರ್ವದಿಕ್ಕಿನಲ್ಲಿ ಲವಣಸಮುದ್ರ ಸೇರುತ್ತದೆ . || 6 ||
-ಶ್ರೀಮದ್ ಭಾಗವತಪುರಾಣ 5- 17 - 4 ,5 , 6
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
*******
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 6 ||
🌷ಶ್ರೀಮದ್ ಭಾಗವತದಲ್ಲಿ - ಗಂಗಾವತರಣ🌷
|| ಭಾಗೀರಥೀ ಗದ್ಯ ||
|| ಕೊನೆಯಸಂಚಿಕೆ ||
ಚಕ್ಷು ಎಂಬ ಶಾಖೆ ಶತಕೋಟಿಯಿಂದ ಪಶ್ಚಿಮಕ್ಕೆ ಹೊರಟು ಕೇಸರ ಪರ್ವತಗಳನ್ನೂ ದಾಟಿ ಮಾಲ್ಯವತ್ ಪರ್ವತದ ಶಿಖರದಿಂದಲೂ ಇಳಿದು ಕೇತುಮಾಲ ಖಂಡದ ಮಾರ್ಗವಾಗಿ ಪಶ್ಚಿಮದಿಕ್ಕಿನಲ್ಲಿ ಲವಣಸಮುದ್ರವನ್ನು ಸೇರುತ್ತದೆ . || 7 ||
ಭದ್ರಾ ಎಂಬ ಶಾಖೆ ಮೇರುಶಿಖರದಿಂದ ಉತ್ತರದಿಕ್ಕಿಗೆ ಹರಿದು ಕೇಸರ ಪರ್ವತಗಳ ಶಿಖರದಿಂದ ನೀಲ ಪರ್ವತ ಶಿಖರವನ್ನು ಅಲ್ಲಿಂದ ಶ್ವೇತಪರ್ವತ ಶಿಖರವನ್ನು ,ಅಲ್ಲಿಂದ ಶೃಂಗವತ್ ಪರ್ವತ ಶಿಖರವನ್ನೂ ತಲುಪುತ್ತದೆ .ಅದನ್ನೂ ದಾಟಿ ಹರಿಯುತ್ತ ಉತ್ತರಖಂಡವನ್ನು ದಾಟಿ ಹರಿಯುತ್ತಾ ಉತ್ತರದಿಕ್ಕಿನಲ್ಲಿ ಲವಣ ಸಮುದ್ರವನ್ನು ಸೇರುತ್ತದೆ . || 8 ||
ಹಾಗೆಯೇ ಅಲಕಾನಂದಾ ಶಾಖೆಯು ಶತಕೋಟಿಯಿಂದ ದಕ್ಷಿಣಕ್ಕೆ ಹರಿದು ಅನೇಕ ಕೇಸರ ಪರ್ವತ ಶಿಖರಗಳನ್ನು ದಾಟಿ ಕ್ರಮವಾಗಿ ನಿಷಧ , ಹೇಮಕೂಟ , ಹಿಮಾಲಯ ಶಿಖರಗಳನ್ನು ಅತಿರಭಸದಿಂದ ಭೇಧಿಸುತ್ತ ಭರತಖಂಡದ …
(missing some content.. sorry)
**********
|| 🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 7 ||
ಶ್ರೀಮನ್ ಮಹಾಭಾರತದಲ್ಲಿ ಗಂಗಾ ಮಹಿಮೆ
ಸ್ಪೃಷ್ಟಾನಿ ಯೇಷಾಂ ಗಾಂಗೇಯೈಸ್ತೋಯೈರ್ಗಾತ್ರಾಣಿ ದೇಹಿನಾಮ್ |
ನ್ಯಸ್ತಾನಿ ನ ಪುನಸ್ತೇಷಾಂ ತ್ಯಾಗಃ ಸ್ವರ್ಗಾದ್ವಿಧೀಯತೆ ||
ಗಂಗಾನದಿಯ ನೀರಿನಲ್ಲಿ ದೇಹಧಾರಿಗಳ ಅವಯವ ಸ್ಪರ್ಶವಾದರೂ ಸಾಕೂ .ಮರಣನಂತರದಲ್ಲಾದರೂ ದೇಹಧಾರಿಗಳ ದೇಹವನ್ನು ಗಂಗೆಯಲ್ಲಿ ಹಾಕಿದರೂ ಸಾಕೂ .ಅಂತಹವರು ಸ್ವರ್ಗದಿಂದ ಭೃಷ್ಟರಾಗುವುದಿಲ್ಲ .
ಸರ್ವಾಣಿ ಯೇಷಾಂ ಗಾಂಗೇಯೈಸ್ತೋಯೈಃ ಕಾರ್ಯಾಣಿ ದೇಹಿನಾಮ್ |
ಗಾಂ ತ್ಯಕ್ತಾಮಾನವಾ ವಿಪ್ರಾ ದಿವಿ ತಿಷ್ಠಂತಿ ತೇ ಜನಾಃ ||
ಎಲ್ಲ ಕಾರ್ಯಗಳನ್ನು ಗಂಗಾಜಲದಿಂದಲೇ ಆಚರಿಸುವ ದೇಹಧಾರಿಗಳಾದ ಮನುಷ್ಯರು ಅವಸಾನಾನಂತರದಲ್ಲಿ ಭೂಮಿಯನ್ನು ತ್ಯಜಿಸಿ ಸ್ವರ್ಗದಲ್ಲಿ ಶಾಶ್ವತವಾದ ನಿವಾಸವನ್ನು ಹೊಂದುತ್ತಾರೆ .
ಯಾವದಸ್ಥಿ ಮನುಷ್ಯಸ್ಯ ಗಂಗಾತೋಯೇಷು ತಿಷ್ಠತಿ |
ತಾವದ್ವರ್ಷಸಹಸ್ರಾಣಿ ಸರ್ಗಲೋಕೇ ಮಹಿಯತೇ ||
ಮನುಷ್ಯನ ಮೂಳೆಗಳು ಗಂಗಾನದಿಯಲ್ಲಿ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ಅಂದರೆ ಅನೇಕ ಸಹಸ್ರವರ್ಷಗಳವರೆಗೆ ಆ ಮನುಷ್ಯನು ಸ್ವರ್ಗದಲ್ಲಿ ವಿರಾಜಮಾನನಾಗಿರುತ್ತಾನೆ .
ತ್ರಿಷು ಲೋಕೇಷು ಯೇ ಕೇಚಿತ್ ಪ್ರಾಣಿನಃ ಸರ್ವ ಏವ ತೇ |
ತರ್ಪ್ಯಮಾಣಾಃ ಪರಾಂ ತೃಪ್ತಿಂ ಯಾಂತಿ ಗಂಗಾಜಲೈಃ ಶುಭೈಃ ||
ಮೂರುಲೋಕಗಳಲ್ಲಿರುವ ಯಾವುದೇ ಪ್ರಾಣಿಗಳಾಗಲಿ ಅವಸಾನ ಹೊಂದಿದ ನಂತರದಲ್ಲಿ ಗಂಗೆಯ ಶುಭಜಲದಲ್ಲಿ ಅವುಗಳ ಸಲುವಾಗಿ ತರ್ಪಣ ಮಾಡಿದರೆ ಆ ಪ್ರಾಣಿಗಳು. ಯಾವುದೆ ಅವಸ್ಥೆಯಲ್ಲಿದ್ದರೂ ಮಹಾತೃಪ್ತಿಯನ್ನು ಹೊಂದುತ್ತವೆ .
-ಶ್ರೀಮನ್ ಮಹಾಭಾರತ ಅನುಶಾಸನಪರ್ವ
|| ಶ್ರೀಕೃಷ್ಣಾರ್ಪಣಮಸ್ತು ||
**********
|| 🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 8 ||
ಶ್ರೀಮನ್ ಮಹಾಭಾರತದಲ್ಲಿ ಗಂಗಾ ಮಹಿಮೆ
ಅಗ್ನೌ ಪ್ರಾಸ್ತಂ ಪ್ರಧೂಯೇತ ಯಥಾ ತೂಲಂ ದ್ವಿಜೋತ್ತಮ |
ತಥಾ ಗಂಗಾವಗಾಢಸ್ಯ ಸರ್ವಪಾಪಂ ಪ್ರಧೂಯತೇ ||
ಅಗ್ನಿಯಲ್ಲಿ ಹಾಕಿದ ಹತ್ತಿಯರಾಶಿಯು ಯಾವ ರೀತಿಯಲ್ಲಿ ಕ್ಷಣಮಾತ್ರದಲ್ಲಿ ಭಸ್ಮವಾಗಿ ಹೊಗುವುದೋ ,ಅದೇ ರೀತಿಯಲ್ಲಿ ಗಂಗಾನದಿಯ ಶುಭಜಲದಲ್ಲಿ ಸ್ನಾನ ಮಾಡಿದವನ ಸಕಲ ಪಾಪಗಳು ಭಸ್ಮವಾಗಿ ಹೊಗುತ್ತವೆ .
ತೇ ಸಂವಿಭಕ್ತಾ ಮುನಿಭಿರ್ನೂನಂ ದೇವೈಃ ಸವಾಸವೈಃ |
ಯೇsಭಿಗಚ್ಛಂತಿ ಸತತಂ ಗಂಗಾಂ ಮತಿಮತಾಂ ವರಃ ||
ಯಾರು ಗಂಗಾದರ್ಶನಕ್ಕೆ ಸತತವಾಗಿ ಸತತವಾಗಿ ಹೊಗುತ್ತಲೇ ಇರುವರೋ ಅಂತಹವರು ನಿಶ್ಚಯವಾಗಿಯೂ ಮುನಿಗಳೊಡನೆಯೂ , ಇಂದ್ರ ಸಹಿತರಾದ ದೇವತೆಗಳೋಡನೆಯೂ ಸ್ವರ್ಗಸುಖಕ್ಕೆ ಪಾಲುದಾರರಾಗುತ್ತಾರೆ .
-ಶ್ರೀಮನ್ ಮಹಾಭಾರತ ಅನುಶಾಸನ ಪರ್ವ
|| ಶ್ರೀಕೃಷ್ಣಾರ್ಪಣಮಸ್ತು ||
*******
||🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 9 ||
ಶ್ರೀಮನ್ ಮಹಾಭಾರತದಲ್ಲಿ ಗಂಗಾ ಮಹಿಮೆ
ಉಪಾಸತೇ ಯಥಾ ಬಾಲಾ ಮಾತರಂ ಕ್ಷುಧಯಾರ್ದಿತಾಃ |
ಶ್ರೇಯಸ್ಕಾಮಾಸ್ತಥಾ ಗಂಗಾಮುಪಾಸಂತೀಹ ದೇಹಿನಃ ||
ಹಸಿವಿನಿಂದ ಪೀಡಿತರಾದ ಬಾಲಕರು ಯಾವ ರೀತಿಯಲ್ಲಿ ತಾಯಿಯ ಬಳಿಗೆ ಹೋಗುವರೋ ,ಹಾಗೆಯೇ ಈ ಲೋಕದಲ್ಲಿ ಶ್ರೇಯಸ್ಕಾಮರಾದ ಮನುಷ್ಯರು ಗಂಗಾಮಾತೆಯ ಬಳಿಗೆ ಹೋಗುತ್ತಾರೆ .
ಜಾಹ್ನವೀ ಪುಲೀನೋತ್ಥಾಭಿಃ ಸಿಕತಾಭಿಃ ಸಮುಕ್ಷಿತಮ್ |
ಆತ್ಮಾನಂ ಮನ್ಯತೇ ಲೋಕೋ ದಿವಿಷ್ಯಮಿವ ಶೋಭಿತಮ್ ||
ಗಂಗಾನದಿಯ ತೀರಪ್ರದೇಶದಲ್ಲಿ ಗಾಳಿಯಿಂದ ಮೇಲೇಳುವ ಮರಳಿನಿಂದ(ಉಸುಕಿನಿಂದ) ಅಭಿಷಿಕ್ತವಾದ ಶರೀರದಿಂದ ಕೂಡಿದ ಜ್ಞಾನಿಗಳು ತಾವು ಸ್ವರ್ಗಲೋಕದಲ್ಲಿ ಇರುವುದಾಗಿಯೂ ,ಗಂಗಾತೀರದ ಮರಳಿನಿಂದ ಅಭಿಷಿಕ್ತವಾದ. ತಮ್ಮ ಶರೀರವು ಅತ್ಯಂತ ಶೋಭಾಯಮಾನವಾಗಿಯೂ ಇರುವುದಾಗಿ ತಿಳಿಯುತ್ತಾರೆ .
-ಶ್ರೀಮನ್ ಮಹಾಭಾರತ ಅನುಶಾಸನ ಪರ್ವ
**********
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ- 10 ||
ಶ್ರೀಮನ್ ಮಹಾಭಾರತದಲ್ಲಿ ಗಂಗಾ ಮಹಿಮೆ
ಖ್ಯಾತಿರ್ಯಾಸ್ಯಾಃ ಖಂ ದಿವಂ ಗಾವಂ ಚ ನಿತ್ಯಂ
ಪುರಾದಿಶೋವಿದಿಶಶ್ಚಾವತಾಸ್ಥೇ |
ತಸ್ಯಾಜಲಂ ಸೇವ್ಯ ಸರಿದ್ವರಯಾ
ಮರ್ತ್ಯಾಃ ಸರ್ವೇ ಕೃತಕೃತ್ಯಾ ಭವಂತಿ ||
ಯಾವ ನದಿಯು ಖ್ಯಾತಿಯ ಆಕಾಶ ,ಸ್ವರ್ಗ ಭೂಮಿಗಳಲ್ಲಿಯೂ ,ದಿಕ್ಕುಗಳಲ್ಲಿಯೂ ಉಪದಿಕ್ಕುಗಳಲ್ಲಿಯೂ ಹರಡಿರುವುದೋ ,ನದಿಗಳಲ್ಲಿ ಶ್ರೇಷ್ಠಳಾದ ಅಂತಹ ಗಂಗಾನದಿಯು ನೀರನ್ನು ಸೇವಿಸಿ ಸಕಲಮಾನವರೂ ಕೃತಾರ್ಥರಾಗುತ್ತಾರೆ .
ಲೋಕಾನವೇಕ್ಷ್ಯ ಜನನೀವ ಪುತ್ರಾನ್
ಸರ್ವಾತ್ಮನಾ ಸರ್ವಗುಣೋಪಪನ್ನಾನ್ |
ತತ್ ಸ್ಥಾನಕಂ ಬ್ರಾಹ್ಮಮಭೀಪ್ಸಮಾನೈ
ರ್ಗಂಗಾಂ ಸದೈವಾತ್ಮವತೈರುಪಾಸ್ಯಾ ||
ತಾಯಿಯು ಯಾವ ರೀತಿಯಲ್ಲಿ ತನ್ನ ಮಕ್ಕಳನ್ನು ಸ್ನೇಹಧೃಷ್ಟಿಯಿಂದ ನೋಡುತ್ತಾ ಸಂರಕ್ಷಿಸುವಳೋ ,ಹಾಗೇಯೇ ಗಂಗಾ ಮಾತೆಯು ತನ್ನನ್ನು ಆಶ್ರಯಿಸುವ ಸರ್ವಗುಣಸಂಪನ್ನರಾದ ಜನರನ್ನು ಸರ್ವಪ್ರಕಾರದಿಂದಲೂ ಕೃಪಾಪೂರ್ಣವಾದ ದೃಷ್ಟಿಯಿಂದ ನೋಡುತ್ತಾ ರಕ್ಷಿಸುತ್ತಾಳೆ ಆದ್ದರಿಂದ ಬ್ರಹ್ಮನ ಶ್ರೇಷ್ಠವಾದ ಆ ಸ್ಥಾನವನ್ನು ಅಭಿಲಾಷಿಸುವವರು ಜೀತೇಂದ್ರಿಯರಾಗಿ ಗಂಗಾಮಾತೆಯನ್ನು ಸರ್ವಕಾಲದಲ್ಲಿಯೂ ಉಪಾಸನೆ ಮಾಡುತ್ತಲೇ ಇರಬೇಕು .
|
ಉದಾಹೃತಂ ಸರ್ವಥಾ ತೇ ಗುಣಾನಾಂ
ಮಯೈಕದೇಶಃ ಪ್ರಸಮೀಕ್ಷ್ಯ ಬುದ್ಧ್ಯಾ |
ಶಕ್ತಿರ್ನ ಮೇ ಕಾಚಿದಿಹಾಸ್ತಿ ವಕ್ತುಂ
ಗುಣಾನ್ ಸರ್ವಾನ್ ಪರಿಮಾತುಂ ತಥೈವ ||
ನಾನು ನನ್ನ ಬುದ್ಧಿಯಿಂದ ಸಂಪೂರ್ಣವಾಗಿ ವಿಚಾರ ಮಾಡಿ ಗಂಗಾಮಾತೆಯ ಅಪಾರ ಗುಣಗಳಲ್ಲಿ ವಿಚಾರ ಮಾಡಿ ಗಂಗಾಮಾತೆಯ ಅಪಾರಗುಣಗಳಲ್ಲಿ ಒಂದಂಶವನ್ನು ಮಾತ್ರವೇ ಹೇಳಿರುತ್ತೇನೆ
(ಸಿದ್ಧಪುರುಷರು ಹೇಳುವ ಮಾತಿದು )
ಅವಳ ಸಮಗ್ರವಾದ ಗುಣಗಳನ್ನು ಹೇಳುವ ಶಕ್ತಿಯಾಗಲೀ ,ಅಳೆಯುವ ಶಕ್ತಿಯಾಗಲೀ ನನಗಿರುವುದಿಲ್ಲ .
ಮೇರೋಃ ಸಮುದ್ರಸ್ಯ ಚ ಸರ್ವಯತ್ನೇಃ
ಸಂಖ್ಯೋಪಲಾನಾಮುದಕಸ್ಯಪಿ |
ಶಕ್ಯಂ ವಕ್ತುಂ ನೇಹ ಗಂಗಾ ಜಲನಾಂ
ಗುಣಖ್ಯಾನಾಂ ಪರಿಮಾತುಂ ತಥೈವ ||
ಒಂದು ವೇಳೆ ಸಂಪೂರ್ಣವಾಗಿ ಪ್ರಯತ್ನಮಾಡಿ ಮೇರು ಪರ್ವತದಲ್ಲಿರುವ ಕಲ್ಲುಗಳನ್ನಾದರೂ ಎಣಿಕೆ ಮಾಡಬಹುದು .ಸಮುದ್ರದಲ್ಲಿರುವ ಜಲಬಿಂದುಗಳನ್ನಾದರೂ ಎಣಿಕೆಮಾಡಬಹುದು . ಆದರೆ ಗಂಗಾಜಲದ ಅಪಾರವಾದ ಗುಣಗಳನ್ನು ವರ್ಣಿಸುವುದಕ್ಕಾಗಲಿ ಅಳೆಯುವುದಕ್ಕಾಗಲಿ ಸಾಧ್ಯವಾಗುವುದಿಲ್ಲ .
ಇತಿಹಾಸಮಿಮಂ ಪುಣ್ಯಂ ಶೃಣುಯಾದ್ಯಃ ಪಠೇತ ವಾ |
ಗಂಗಾಯಾಃ ಸ್ತವಸಂಯುಕ್ತಂ ಸ ಮುಚ್ಯೇತ್ ಸರ್ವಕಿಲ್ಫಿಷೈಃ ||
ಗಂಗಾದೇವಿಯ ಸ್ತೋತ್ರದಿಂದ ಯುಕ್ತವಾದ ಪುಣ್ಯದಾಯಕವಾದ ಈ ಇತಿಹಾಸವನ್ನು ಯಾರು ಕೇಳುವರೋ ಅವರು ಸರ್ವಪಾಪಗಳಿಂದ ಮುಕ್ತರಾಗುತ್ತಾರೆ .
-ಶ್ರೀಮನ್ ಮಹಾಭಾರತ ಅನುಶಾಸನ ಪರ್ವ
( ಶ್ರೀಮನ್ ಮಹಾಭಾರತದ ಗಂಗಾಮಹಿಮೆಯು ಮುಗಿಯಿತು ಮುಂದಿನ ಸಂಚಿಕೆಯಿಂದ ಪುರಾಣಗಳಲ್ಲಿ ತಿಳಿಸಿರುವ ಗಂಗಾಮಹಿಮೆಯನ್ನು ತಿಳಿದುಕೊಳ್ಳೋಣ )
******
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ-11 ||
🌷ಶ್ರೀಆದಿತ್ಯಪುರಾಣದಲ್ಲಿ ಗಂಗಾ ಮಹಿಮೆ 🌷
ಯತ್ರ ಗಂಗಾ ಸರಿತ್ ಶ್ರೇಷ್ಠಾ ಸ ದೇಶಸ್ತೂತ್ತಮೋ ವನಂ |
ಸಿದ್ಧಕ್ಷೇತ್ರಂ ಚ ತತ್ ಜ್ಞೇಯಂ ಗಂಗಾತೀರಸಮಾಶ್ರೀತಮ್ ||
ಎಲ್ಲಿ ನದಿಗಳಲ್ಲಿ ಶ್ರೇಷ್ಠವಾದ ಗಂಗಾನದಿಯು ಹರಿಯುವುದೋ ಆ ದೇಶವು ಗಂಗಾನದಿಯ ತೀರದಲ್ಲಿರುವ ಅಂತಹ ದೇಶವು ಸಿದ್ಧಿಪ್ರದವಾದ ಸಿದ್ಧಕ್ಷೇತ್ರವೆಂದು ತಿಳಿಯಬೇಕು .
ಕಲೌ ಗಂಗಾಂ ಸಮಾಶ್ರಯೇತ್ |
ಕಲಿಯುಗದಲ್ಲಿ ಗಂಗೆಯನ್ನು ಆಶ್ರಯಿಸಬೇಕು ಗಂಗಾಯಾತ್ರೆಯನ್ನು ಮಾಡಬೇಕು .
************
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ-12 ||
🌷ಶ್ರೀಪದ್ಮಮಹಾಪುರಾಣದಲ್ಲಿ ಗಂಗಾಮಹಿಮೆ🌷
ದೇವಾನಾಂ ಪ್ರವರೋ ವಿಷ್ಣುಃ ಯಜ್ಞಾನಾಂ ಚಾಶ್ವಮೇಧತಃ |
ಅಶ್ವತ್ಥಃ ಸರ್ವ ವೃಕ್ಷಾಣಾಂ ನದೀ ಭಾಗಿರಥೀ ವರಾ ||
ದೇವತೆಗಳಲ್ಲಿ ವಿಷ್ಣುಶ್ರೇಷ್ಠ ಯಜ್ಞಗಳಲ್ಲಿ ಅಶ್ವಮೇಧಶ್ರೇಷ್ಠ ಸಕಲ ವೃಕ್ಷಗಳಲ್ಲಿ ಅಶ್ವತ್ಥವೃಕ್ಷವು ಶ್ರೇಷ್ಠ ನದಿಗಳಲ್ಲಿ ಗಂಗಾನದಿಯ ಶ್ರೇಷ್ಠವಾಗಿದೆ .
ಗಂಗೇತಿ ಸ್ಮರಣಾದೇವ ಕ್ಷಯಂ ಯಾತಿ ಚ ಪಾತಕಂ |
ಕೀರ್ತನಾದತಿ ಪಾಪಾನಿ ದರ್ಶನಾದ್ಗುರು ಕಲ್ಮಷಮ್ ||
ಸ್ನಾನಾತ್ ಪಾನಚ್ಚ ಜಾಹ್ನವ್ಯಾಂ ಪಿತೃಣಾಂ ತರ್ಪಣತ್ತಥಾ |
ಮಹಾಪಾಕವೃಂದಾನಿ ಕ್ಷಯಂ ಯಾಂತಿ ದಿನೇ ದಿನೇ ||
ಗಂಗಾ ,ಗಂಗಾ ಎಂದು ನೆನೆದ ಮಾತ್ರಕ್ಕೆ ನೆನೆದವರ ಪಾಪಗಳೆಲ್ಲ ಪರಿಹೃತವಾಗುತ್ತದೆ . ಗಂಗೆಯ ನಾಮಕೀರ್ತನೆಯನ್ನು ಮೇಲಿಂದ
ಮೇಲೆ ಮಾಡಿದರೆ ಗುರುತರವಾದ ಪಾಪಗಳು ಪರಿಹಾರವಾಗುತ್ತವೆ . ಗಂಗಾಜಲದಲ್ಲಿ ಸ್ನಾನ ಗಂಗಾಜಲದಲ್ಲಿ ಪಾನ ,ಪಿತೃತರ್ಪಣ ಮುಂತಾದುವುಗಳನ್ನು ಮಾಡಿದರೆ . ಸಮಸ್ತಪಾಪಗಳ ಪರಿಹಾರ ಆಗುವುದು . ಬೆಂಕಿಯಿಂದ ಹತ್ತಿಯು ಸುಟ್ಟುಹೋಗುವಂತೆ ಕಾಡ್ಗಿಚ್ಚಿನಿಂದ ಒಣಗಿದ ಹುಲ್ಲು ಭಸ್ಮವಾಗುವಂತೆ ಗಂಗಾಜಲದ ಸ್ಪರ್ಶವು ಪಾಪರಾಶಿಯನ್ನು ಒಂದು ಕ್ಷಣದಲ್ಲಿ ಸುಟ್ಟುಹಾಕುತ್ತದೆ . ಗಂಗಾ ಸ್ನಾನದಿಂದ ಮನುಷ್ಯನಿಗೆ ಅಕ್ಷಯ ಸ್ವರ್ಗ ಪ್ರಾಪ್ತಿಯಾಗುತ್ತದೆ . ಇಲ್ಲಿ ಇರುವವರೆಗೆ ಐಶ್ವರ್ಯ , ಸುಖಗಳುಲಭಿಸುತ್ತವೆ . ಮರಣೋತ್ತರದಲ್ಲಿ ವಿಶೇಷ ಪುಣ್ಯ ದೊರೆಯುವದು .ಶ್ರೀಹರಿಯ ಕೃಪೆ ಸದ್ಗತಿ ಲಭಿಸುತ್ತದೆ .
ಏಕೋ ಗಚ್ಛತಿ ಗಂಗಾಂ ಯ ಸ ಪುನಾತಿಚ ಪೂರ್ವಜಾನ್ |
ಏತದೇವ ಮಹಾಪುಣ್ಯಂ ತರತೇ ತಾರಯತ್ಯಪಿ ||
ಮನೆತನದಲ್ಲಿ ಒಬ್ಬರು ಗಂಗೆಗೆ.ಹೋಗಿ ಸ್ನಾನಮಾಡಿದರೂ ಅವರ ಕುಟುಂಬದ ರೆಲ್ಲರೂ ಪವಿತ್ರರಾಗುವರು .ಗಂಗಾಸ್ನಾನದ ಮಹಾಪುಣ್ಯದಿಂದ ತಾನು ಭವಸಾಗರ ದಾಟುವುದಲ್ಲದೇ ತನ್ನ ಬಂಧುಗಳನ್ನು ದಾಟಿಸುವರು .
. || ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
***********
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ-13 ||
ಶ್ರೀಸತ್ಯಸಂಧತೀರ್ಥ ವಿರಚಿತ ವಿಷ್ಣುಸ್ತುತಿಯಲ್ಲಿ ಗಂಗಾಮಹಿಮೆ
ಭಾಗೀರಥೀಗುಣಾನ್ ವಕ್ತುಂ ಭೋಗೀಶೋ ಬಹುಲಾನನಃ |
ವಾಗೀಶೋsಪಿ ಕ್ಷಮೋ ನೈವ ಹೇ ಗೀರ್ವಾಣತರಂಗಿಣಿಃ || 45 ||
ದೇವನದಿಯಾದ ಭಾಗೀರಥಿಯೇ !ನಿನ್ನ ಗುಣಗಳನ್ನು ಹೇಳಲು ಅನೇಕ ಮಖಗಳುಳ್ಳ ಶೇಷನೂ , ಬೃಹಸ್ಪತಿಯು ಸಮರ್ಥರಲ್ಲ .
ಅಂಗೀಕೃತಾನಂಗರಿಪೂತ್ತಮಾಂಗಾಂ
ಸಂಗೀತಚರ್ಯಾಮಘರಾಶಿ ಭಂಗಾಂ |
ಭಂಗಾಗ್ರ್ಯದೂರೀಕೃತಸತ್ತುರಂಗಾಂ
ಗಂಗಾಮಹಂ ನೌಮಿ ಲಸತ್ತರಂಗಾಮ್ ||46 ||
ಕಾಮನ ಶತೃವಾದ ಶೀವನ ಶೀರೋಧಿರೂಢಳೂ ,ಶ್ರೇಷ್ಠ ತರಂಗಗಳಿಂದ ಸಜ್ಜನ ರಿಪು (ಕಾಮಾದಿ) ದೂರಮಾಡುವವಳೂ ,ಪಾಪರಾಶಿಯನ್ನು ನಾಶಮಾಡುವವಳೆಂದು ಹೊಗಳಲ್ಪಟ್ಟವಳೂ ,ಉತ್ತಮ ತರಂಗಗಳುಳ್ಳವಳೂ ಆದ ಭಾಗೀರಥಿಯನ್ನು ನಾನು ಸೇವಿಸುತ್ತೇನೆ .
||ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ...
********
🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ-14 ||
🌷ಶ್ರೀಪದ್ಮಮಹಾಪುರಾಣದಲ್ಲಿ ಗಂಗಾಮಹಿಮೆ🌷
|| ಮುಂದುವರಿದ ಭಾಗ ||
ಸ್ಮೃತಾರ್ತಿಹಂತ್ರೀ ಯೈರ್ಧ್ಯಾತಾ ಸಂಸ್ತುತಾ ಸಾಧುಮೊಧಿತಾ |
ಗಂಗಾ ತಾರಯತೇ ನೃಣಾಮುಭೌ ವಂಶೌ ಭವಾರ್ಣವಾತ್ ||
ಗಂಗೆಯ ಸ್ಮರಣದಿಂದ ದುಃಖ ಪರಿಹಾರವಾಗುತ್ತದೆ .ಧ್ಯಾನಮಾಡಿ ಅವಳ ಸ್ತೋತ್ರ ಮಾಡಿದರೆ ಆ ಗಂಗೆಯು ಮಾನವರನ್ನು ಅವರ ತಂದೆ ತಾಯಿಗಳ ಅವರ ವಂಶದವರನ್ನು ಭವಸಾಗರದಿಂದ ಪಾರು ಮಾಡುತ್ತಾಳೆ .
ಗಂಗೆಯಲ್ಲಿ ಪಿತೃಗಳನ್ನು ಉದ್ದೇಶಿಸಿ ಪಿಂಡಪ್ರಧಾನ ,ಹಾಗೂ ತಿಲಾಂಜಲಿ ನೀಡಿದರೆ ನರಕದಲ್ಲಿ ಇರುವವರೂ ಸ್ವರ್ಗಾದಿಗಳನ್ನು ಪಡೆಯುವರು ಗ್ರಹಣಕಾಲದಲ್ಲಿ ಸಾವಿರ ಹಸುಗಳ. ದಾನ ನೀಡಿದರೆ ಬರು ಬರುವ ಫಲವು ಒಂದು ದಿನ ಗಂಗಾಸ್ನಾನದಿಂದ ಬರುತ್ತದೆ .
ಅಕಸ್ಮಾತ್ ಗಂಗೆಯನ್ನು ನೋಡಿದರೆ ಪಾಪನಾಶ ಅವಳನ್ನು. ಮುಟ್ಟಿದರೆ ಸ್ವರ್ಗ ,ಸ್ನಾನಮಾಡಿದರೆ ಪಾಪಗಳಿಂದ. ಮೋಕ್ಷ ಪಡೆಯುತ್ತಾರೆ .
ಕ್ಷಿತೌ ಭಾವಯತೇ ಮರ್ತ್ಯಾನ್ ಗಾಂಸ್ತಾರಯತೇsಪ್ಯಧಃ |
ದಿವಿ ತಾರಯತೇ ದೇವಾನ್ ಗಂಗಾ ತ್ರಿಪಥಗಾ ಸ್ಮೃತಾಃ ||
ಭೂಮಿಯಲ್ಲಿ ಮನುಷ್ಯರನ್ನೂ ಪಾತಳದಲ್ಲಿ ಸರ್ಪಗಳನ್ನು ಅಂತರಿಕ್ಷದಲ್ಲಿ ದೇವತೆಗಳನ್ನೂ ಉದ್ಧಾರ ಮಾಡುವುದರಿಂದ ಗಂಗೆಗೆ ತ್ರಿಪಥಗಾ ಎಂದು ಹೆಸರು ಬಂದಿದೆ .
ಗಂಗೇತಿ ನಾಮ ಸಂಸ್ಕೃತ್ಯ ಯಸ್ತು ಕೂಪ ಜಲೇಪಿ ಚ |
ಕರೋತಿ ಮಾನವಃ ಸ್ನಾನಂ ಗಂಗಾಸ್ನಾನಫಲಂ ಲಭೇತ್ ||
ಗಂಗಾ ಎಂಬ ನಾಮವನ್ನು ಉಚ್ಚರಿಸುತ್ತ ಗಂಗೆಯನ್ನು ಸ್ಮರಿಸುತ್ತ ಭಾವಿಯ ನೀರಿನ ಸ್ನಾನವನ್ನು ಮಾಡಿದರೂ ಗಂಗಾ ಸ್ನಾನ ಮಾಡಿದ ಪುಣ್ಯವು ಬರುತ್ತದೆ .
. || ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
************🌷🌺ಗಂಗಾ ಮಹಿಮೆ🌺 🌷
|| ಸಂಚಿಕೆ-15 ||
🌷ಶ್ರೀಪದ್ಮಮಹಾಪುರಾಣದಲ್ಲಿ ಗಂಗಾಮಹಿಮೆ🌷
|| ಮುಂದುವರಿದ ಭಾಗ ||
ಗಂಗಾ ನಾಮಾನಿ ಸಂಸ್ಕೃತ್ಯ ಪಾಪೀ ಮುಚ್ಯೇತ್ ಪಾತಕಾತ್ |
ಸಾಕ್ಷಾತ್ ತತ್ಸಲಿಲಂ ಸ್ಪೃಷ್ಟ್ವಾ ಮುಚ್ಯತೇsತ್ರ ಕಿಮದ್ಭುತಮ್ ||
ಗಂಗೆಯನಾಮಗಳನ್ನು ಸ್ಮರಣ ಮಾಡಿದ ಮಾತ್ರದಿಂದ ಪಾಪಿಯು ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ .ಸಾಕ್ಷತ್ ಗಂಗೆಯ ನೀರನ್ನು ಮುಟ್ಟಿ ಸ್ನಾನಮಾಡಿದರೆ ಅವನು ಮುಕ್ತನಾಗುತ್ತಾನೆ .ಇದರಲ್ಲಿ ಆಶ್ಚರ್ಯವೇನು ?
ಮರಣಕಾಲದಲ್ಲಿ ಒಂದು ಸಾಸಿವೆ ಕಾಳಿನಷ್ಟಾದರೂ ಗಂಗಾಜಲವು ಬಾಯಲ್ಲಿ ಹೋದರೆ ಅವನ ಪಾಪಗಳೆಲ್ಲ ಪರಿಹಾರವಾಗಿ ಅವನು ಪರಮಪದವನ್ನು ಹೊಂದುತ್ತಾನೆ .
ಅನ್ಯತೀರ್ಥೇ ಕೃತಂ ಪಾಪಂ ಗಂಗಾಯಾಂ ಚ ವಿನಶ್ಯತಿ |
ಗಂಗಾಯಾಂ ಯತ್ಕೃತಂ ಪಾಪಂ ತತ್ಕುತ್ರಾಪಿ ನ ಶಾಮ್ಯತಿ ||
ಬೇರೆ ತೀರ್ಥಗಳಲ್ಲಿ ಮಾಡಿದ ಪಾಪವು ಗಂಗೆಯಲ್ಲಿ ಸ್ನಾನ ಮಾಡುವುದರಿಂದ ನಷ್ಟವಾಗುತ್ತದೆ ಆದರೆ ಗಂಗೆಯಲ್ಲಿ
ಪಾಪ ಮಾಡಿದರೆ ಮಾತ್ರ ಅದು ಎಲ್ಲಿ ಹೋದರು ಶಾಂತ ವಾಗದು .
ಆದ್ದರಿಂದ ವಿವೇಕಿಗಳಾದವರು ಗಂಗಾತೀರದಲ್ಲಿ ಪಾಪಕೃತ್ಯ ಮಾಡಬಾರದು ಸಾಧ್ಯವಾದಷ್ಟು ಪುಣ್ಯಕಾರ್ಯವನ್ನೇ ಮಾಡಬೇಕು .
ಗಂಗಾ ತೀರದವರೆಗೆ ಪಾದಯಾತ್ರೆ ಬೆಳೆಸಿದ ಕಾಲುಗಳು ನಿಜವಾಗಿಯೂ ಸಫಲ ಗಂಗೆಯ ತರಂಗ ಮಾಲೆಗಳ ಧ್ವನಿ ಕೇಳಿದ ಕಿವಿಧನ್ಯ ಗಂಗೋದಕದ ಸವಿ ಆಸ್ವಾದಿಸಿದ ನಾಲಿಗೆಯೇ ನಿಜವಾದ ನಾಲಿಗೆ .
( ಶ್ರೀಪದ್ಮಪುರಾಣದಲ್ಲಿ ಗಂಗಾಮಹಿಮೆಯು ಮುಗಿಯಿತು )
. || ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
**************
🌷🌺ಗಂಗಾ ಮಹಿಮೆ🌺 🌷
|| ಕೊನೆಯ ಸಂಚಿಕೆ ||
|| ಸಂಚಿಕೆ-16 ||
ಶ್ರೀಸ್ಕಂಧಮಹಾಪುರಾಣದಲ್ಲಿ ಗಂಗಾಮಹಿಮೆ
ಗಂಗೆಯ ಮಹಿಮೆಯನ್ನು ತಿಳಿದು ಗೋವಿಂದನಲ್ಲಿ ಭಕ್ತಿಮಾಡುವ ಮಾಡುವ ಮಾನವರ ಮೇಲೆ ಗಂಗೆಯು ಪ್ರಸನ್ನಳಾಗುತ್ತಾಳೆ .
ಗಚ್ಛಂಸ್ತಿಷ್ಠನ್ ಜಪನ್ ಧ್ಯಾಯನ್ ಭುಂಜನ್ ಜಾಗ್ರನ್ ಸ್ವಪನ್ ವದನ್ |
ಯಃ ಸ್ಮರೇತ್ ಸತತಂ ಗಂಗಾಂ ಸ ಹಿ ಮುಚ್ಯೇತ ಭಂಧನಾತ್ ||
ನಡೆಯುವಾಗ ,ನಿಂತಾಗ ,ಜಪಮಾಡುವಾಗ ಊಟಮಾಡುವಾಗ , ಧ್ಯಾನಮಾಡುವಾಗ ಎಚ್ಚರವಿದ್ದಾಗ , ಮಾತನಾಡುವಾಗ ಯಾರು ಗಂಗೆಯನ್ನು ಸ್ಮರಿಸುವರೋ ಅವರು ಸಂಸಾರ ಬಂಧನದಿಂದ ಮುಕ್ತನಾಗುವರು
ಇಚ್ಚೆಯಿಲ್ಲದೆ ಮುಟ್ಟಿದರೆ ಬೆಂಕಿಯು ಸುಡದೇ ಬಿಡುವದೇ ? ಹಾಗೆಯೇ. ಇಚ್ಛೆಯಿಲ್ಲದೆ ಗಂಗೆಯಲ್ಲಿ ಗಂಗೆಯಲ್ಲಿ ಮಿಂದುಬಂದರೂ ಆ ಗಂಗೆಯು ಸ್ನಾನಮಾಡಿದವರ ಪಾಪಗಳನ್ನೆಲ್ಲ ಸುಟ್ಟುಹಾಕುತ್ತಾಳೆ .
ಗ್ರಹಣ, ವ್ಯತಿಪಾತ ,ಸಂಕ್ರಮಣಕಾಲದಲ್ಲಿ ಗಂಗಾಸ್ನಾನಮಾಡಿದರೆ ಸ್ವರ್ಗ ಪ್ರಾಪ್ತಿ ,ಸೋಮವಾರ ಚಂದ್ರಗ್ರಹಣಗಳು ಬಂದರೆ ಅದಕ್ಕೆ ಚೂಡಮಣಿ ಪರ್ವಕಾಲವೆಂದು ಹೆಸರು .ಆ ಕಾಲದಲ್ಲಿ ಮಾಡಿದ ಗಂಗಾಸ್ನಾನಕ್ಕೆ ಅನಂತ ಪುಣ್ಯಫಲಪ್ರಾಪ್ತಿಯಾಗುತ್ತದೆ
*******
|| ಗಂಗಾನದಿಯಲ್ಲಿ ಭಗವದ್ರೂಪ ||
ಗಂಗಾಯಾಂ ಮಾಧವೋದೇವಃ ಶಂಖಚಕ್ರಗಧಾಧರಃ |
ಲಸತ್ಪದ್ಮಕರೋ ಧ್ಯೇಯಸ್ತತ್ರಸ್ನಾಯೀ ನರೇಶ್ವರ ||
ಹೇ ರಾಜನೇ !ಗಂಗೆಯಲ್ಲಿ ಸ್ನಾನಮಾಡುವವರು ಶಂಖ ,ಚಕ್ರ ,ಗದೆ ,ಮತ್ತು ಪದ್ಮಗಳನ್ನು ಧರಿಸಿದ ಮಾಧವ ಎಂಬ ಭಗವದ್ರೂಪವನ್ನು ಧ್ಯಾನಿಸಬೇಕು .
-ಶ್ರೀರಾಮಾಮೃತಮಹಾರ್ಣವ
( ಗಂಗಾ ಮಹಿಮೆ ಲೇಖನಮಾಲಿಕೆ ಮುಗಿಯಿತು )
( ಗಂಗಾಮಹಿಮೆ ಲೇಖನಮಾಲಿಕೆಯನ್ನು ಅಸ್ಮದ್ಗುರ್ವಂತರ್ಗತ ಶ್ರೀಭಾರತಿರಮಣಮುಖ್ಯಪ್ರಾಣಾಂತರ್ಗತ ಕುಲದೇವತ ಶ್ರೀಲಕ್ಷ್ಮೀ ವೇಂಕಟೇಶ್ವರನಿಗೆ ಸಮರ್ಪಿಸುತಿದ್ದೇನೆ - prasad acharya +919535837843)
. || ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
***********
🌷ಶ್ರೀನರಸಿಂಹ ಪುರಾಣದಲ್ಲಿ ಗಂಗಾಮಹಿಮೆ🌷
ಸರ್ವತೀರ್ಥಮಯೀ ಗಂಗಾ ಸರ್ವದೇವಮಯೋ ಹರಿಃ |
ಗಂಗೆಯು ಎಲ್ಲ ತೀರ್ಥಗಳ ಸನ್ನಿಧಾನವುಳ್ಳದ್ದು ಶ್ರೀಹರಿಯು ಸಕಲದೇವತೆಗಳ ಸನ್ನಿಧಾನವುಳ್ಳವನು.
*********
ಈದಿನ ವೈಶಾಖ ಶುಕ್ಲ ಸಪ್ತಮಿ - ದಿನಾಂಕ : 19.05.2021 ಗಂಗಾದೇವಿಯ ಉದ್ಭವ ದಿನ - ಶ್ರೀ ಜಹ್ನು ಋಷಿಯ ಬಲಗಿವಿಯಿಂದ ಗಂಗಾವತಾರಣವಾದ ದಿನ "
" ಶ್ರೀ ಗಣೇಶಾಂಶ ಗೋಪಾಲದಾಸರ ವದನಾರವಿಂದದಲ್ಲಿ ಹೊರ ಹೊಮ್ಮಿದ ಗಂಗಾದೇವಿಯ ಮಹಿಮೆ "
ರಾಗ : ಭೈರವಿ ತಾಳ : ಝ೦ಪೆ
ಏನು ಪೇಳಲಿ ನಿನ್ನ ಆಗಮನವನು ।
ಆನಂದಮಯ ಭುವನ -
ಪಾವನ ದಿವಿಜ ಗಂಗೆ ।। ಪಲ್ಲವಿ ।।
ಮೊದಲು ನೀ ಹಿರಣ್ಯ -
ಹರಣಂಘ್ರಿಯಿಂ ।
ದುದುಭವಿಸಿ ತದನಂತರದಿ -
ಸುರರಾದಿ ತನ್ನ ।
ಉದಕ ಪಾತ್ರೆಯಲಿದ್ದು -
ಆತ ಕರೆ ಜರಿದು ।
ಮುದದಿಂದ ಬ್ರಹ್ಮ ಘಾತಕನ -
ಶಿರಕಿಳಿದೆ ।। ಚರಣ ।।
ಗುರುತಲ್ಪಕನ್ನ -
ಸಂಯೋಗವನು ಮಾಡಿ ನೀ ।
ಗರಳ ಕಂಧರನ -
ಜಡೆಯಿಂದಲಿಳಿದು ।
ಧರೆಯೊಳಗೆ ಕಪಿಲ ದ್ರೋಹಿಗಳ
ಸ್ಪರುಷವ ಮಾಡಿ ।
ಹರುಷದಲಿ ಜಢದಿ ಸಂಗವ -
ಮಾಡಿದೆಲೆ ದೇವಿ ।। ಚರಣ ।।
ಪತಿತ ಜಡಮತಿ ಕುಗತಿಗಳ -
ನೋಡಿದದರಿಂದ ನೀ ।
ಪತಿತಳಾದೆ ಜಡ ಕುಗತಿಯೈದಿದೆ ।
ಕ್ಷಿತಿಯೊಳಗೆ ಅವರು -
ನಿನ್ನನು ನೋಡಿದಾಕ್ಷಣಕೆ ।
ಅತಿ ಪಾವನತ್ವ ಸುಮತಿ -
ಸುಗತಿಯ ಪಡೆದರು ।। ಚರಣ ।।
ಈ ಪರಿಯು ನಾ ನಿನ್ನ -
ತುತಿಸೆನ್ನ ಪಂಚ ಮಹಾ ।
ಪಾಪ ಪತಿತತ್ವ -
ಜಡಮತಿ ಕುಗತಿಯು ।
ಅಪಾರ ದೋಷಗಳು -
ಕಳೆದು ನಿನ್ನೊಲಿಮೆಯಲಿ ।
ಶ್ರೀಪತಿಯ ವೊಲಿಸುವುದಕ್ಕೆ -
ಅಧಿಕಾರಿ ನಾನಾದೆ ।। ಚರಣ ।।
ಭಾಗೀರಥಿಯಂದು -
ನಾ ನಿನ್ನ ಸ್ಮರಿಸಿದರೆ ।
ಈಗ ಭವನಾಶಿಯು -
ಎನಗಾದೆ ನೀ ।
ಯೋಗ ಪ್ರಭಾವಕ್ಕೆ -
ಎಣೆಗಾಣೆ ನಮೋ ನಮೋ ।
ಶ್ರೀ ಗೋಪಾಲವಿಠಲನ್ನ -
ಪ್ರಿಯ ಸುತೆ ।। ಚರಣ ।।
" ವಿವರಣೆ "
1. ಸ್ವರ್ಣಸ್ತೇಯ
2. ಸುರಾಪಾನ
3. ಬ್ರಹ್ಮಹತ್ಯಾ
4. ಗುರುದಾರಾಗಮನ
5. ಈ ಪಾಪಗಳನ್ನು ಮಾಡಿದವರ ಸಹವಾಸ ಇವೆ ಪಂಚ ಮಹಾ ಪಾತಕಗಳು.
ಶ್ರೀ ಹರಿಯ ಪಾದ ಜನಿತಳಾದ " ಪಂಚ ಮಹಾ ಪಾತಕಗಳನ್ನೂ ತನ್ನ ಸೇವನ ಮಾತ್ರದಿಂದ ಪುನೀತಗೈವ ಗಂಗೆಯ ಮಹಾ ಮಹಾತ್ಮ್ಯೇಯನ್ನು ನಿರೂಪಿಸುವ ಶ್ರೀ ಗೋಪಾಲದಾಸರ ಶೈಲಿ ಮನಮೋಹಕ ಮತ್ತು ಪ್ರಮೇಯ ಪ್ರತಿಪಾದಕ!!
" ಗಂಗೆ ಊದುಭವಿಸಿದ್ದು.....
ಶ್ರೀ ವಾಮನ ಬಲಿ ಚಕ್ರವರ್ತಿಯಿಂದ ದಾನ ಪಡೆದ ಜಗನ್ನಾಥನಾದ ಶ್ರೀಹರಿ ಮೂರು ಪಾದ ಭೂಮಿಯನ್ನು ಅಳೆಯಲು ತ್ರಿವಿಕ್ರಮನಾದಾಗ - ಆತನ ಪಾದ ನಖ ಬ್ರಹ್ಮಾಂಡ ಖರ್ಪರವನ್ನು ಸೀಳಿ ಬಾಹ್ಯ ಜಲಾವರಣದಿಂದ ಬ್ರಹ್ಮಾಂಡದೊಳಗೆ ಬಂದಾಗ ಆ ನೀರು ತ್ರಿವಿಕ್ರಮ ರೂಪಿ ಶ್ರೀ ಹರಿಯ ಪಾದವನ್ನು ಸೋಂಕಿತು.
ಈ ತ್ರಿವಿಕ್ರಮ ರೂಪಿ ಶ್ರೀ ಹರಿಯೇ ಹಿರಣ್ಯಾಕ್ಷ - ಹಿರಣ್ಯಕಶಿಪುಗಳನ್ನು ಸಂಹರಿಸಿದ್ದು - ಹಿರಣ್ಯ ಹರಣವೆಂಬ ಪದಕ್ಕೆ " ಸ್ವರ್ಣಸ್ತೇಯ " ನೆಂಬ ತಾತ್ಪರ್ಯ!!
ಗಂಗೆ ಶ್ರೀ ಚತುರ್ಮುಖ ಬ್ರಹ್ಮದೇವರ ಕಮಂಡಲುವಿನಲ್ಲಿ ಸಂಗ್ರಹಿಸಲ್ಪಟ್ಟು - ಅವರು ಶ್ರೀ ಹರಿ ಪ್ರಕ್ಷಾಲನೆ ಮಾಡಿದರು ಶ್ರೀ ಚತುರ್ಮುಖ ಬ್ರಹ್ಮದೇವರು
ಸೋಮಪಾನಾರ್ಹರಾದುದರಿಂದ " ಸುರರಾದಿ " ಎಂಬ ಪದದಿಂದ " ಸುರಾಪಾನ " ಮಾಡಿದರೆಂಬ ತಾತ್ಪರ್ಯ!!
ಅನಂತರ ಶ್ರೀ ಮಹಾರುದ್ರದೇವರ ತಲೆಯನ್ನು ಸೇರಿದಳು ಗಂಗೆ.
ಇಲ್ಲಿ ಶ್ರೀ ಮಹಾರುದ್ರದೇವರು ತನ್ನ ತಂದೆಯರಾದ ಶ್ರೀ ಬ್ರಹ್ಮದೇವರ ಐದನೇ ಶಿರವನ್ನು ಕಡೆದಿದ್ದರಿಂದ ಆವರಿಗೆ ಬ್ರಹ್ಮಹತ್ಯಾಗಾರರೆಂಬ ಈ ಪದದಲ್ಲಿನ ಧ್ವನಿ!!
ಮೇರು ಪರ್ವತದಲ್ಲಿ ಇಳಿಯುವ ಮೊದಲು ಚಂದ್ರ ಲೋಕಕ್ಕೆ ಬಂದಳು ಗಂಗೆ.
ಚಂದ್ರ ಗುರುಗಳಾದ ಶ್ರೀ ಬೃಹಸ್ಪತ್ಯಾಚಾರ್ಯರ ಪತ್ನಿಯಾದ ತಾರಾದೇವಿಯನ್ನು ಸಂಗ ಮಾಡಿದವನಾದ್ದರಿಂದ " ಆತ ಗುರುತಲ್ಪಗ " ನೆಂಬ ತಾತ್ಪರ್ಯ!!
ಕಪಿಲ ಋಷಿಗಳನ್ನು ತನ್ನ ಯಜ್ಞಾಶ್ವ ಅಪಹಾರ ಮಾಡಿದ ಚೋರನೆಂದು ಭಾವಿಸಿ ಅವರ ಮೇಲೆ ಯುದ್ಧ ಮಾಡಲು ಪ್ರಯತ್ನಿಸಿದ ಸಗರಪುತ್ರರು ಭಸ್ಮೀಭೂತರಾಗಿದ್ದು - ಮುಂದೆ ಭಗೀರಥನ ಪ್ರಯತ್ನದಿಂದ ಗಂಗೆ ಅವರ ಭಸ್ಮದ ಮೇಲೆ ಹರಿದಾಗ ಅವರು ಪುನೀತರಾದರು.
ಕೊನೆಯಲ್ಲಿ ದಕ್ಷಿಣ ಸಮುದ್ರವನ್ನು ಸೇರಿದಳು.
ಇದಕ್ಕಾಗಿ ಗಂಗೆ ಸ್ವರ್ಗದಿಂದ ಭೂಮಿಗೆ - ಅಲ್ಲಿಂದ ಪಾತಾಳಕ್ಕೆ ಬರಬೇಕಾಯಿತು.
ಪಂಚ ಮಹಾಪಾತಕಿಗಳ ಸಂಸರ್ಗ - ಪತಿತ - ಜಡ- ಕುಗತಿ ಹೊಂದಿದ ಶ್ರೀ ಹರಿ ಭಕ್ತರು ನಿನ್ನ ದರ್ಶನ ಮಾಡಿದರೆ ಸಾಕು ಹರಿ ಭಕ್ತರ ಪಂಚ ಮಹಾಪಾತಕಗಳೂ - ಪತಿತತ್ವ - ಜಡತ್ವ - ಕುಗತಿ ನಿವಾರಣೆ ಮಾಡುವ ಕರುಣೆ ಮತ್ತು ಸಾಮರ್ಥ್ಯಶಾಲಿನಿ ನೀನು.
ಹೆಚ್ಚೇನು " ಭಾಗೀರಥಿ " ಎಂದು ಸ್ಮರಿಸಿದ ನನಗೆ ನೀನು " ಭವನಾಶಿ ".
ಜನನ ಮರಣ ಪ್ರವಾಹ ರೂಪ ಸಂಸಾರವನ್ನು ಬಿಡಿಸಿ ಮೋಕ್ಷವನ್ನು ನಿನ್ನ ತಂದೆಯಾದ ಶ್ರೀ ಮುಕುಂದನಿಗೆ ಬಿನ್ನೈಸಿ ಕೊಡಿಸುವಿ.
ಹೀಗಿದೆ ನಿನ್ನ ಅಪಾರವಾದ ಮಹಿಮೆ ಶ್ರೀ ಹರಿಯ ಸುತೆಯಾದ ನಿನ್ನಲ್ಲಿ ಎಂದು ಗಂಗಾದೇವಿಯನ್ನು ದಾಸರು ಕೊಂಡಾಡಿದ್ದಾರೆ.
" ಶ್ರೀ ಗಂಗಾದೇವಿ "
ಆಸ್ತಿಕರಾದ ಭಾರತೀಯರಿಗೆಲ್ಲರಿಗೂ ಪರಮ ಪವಿತ್ರವಾದ ಗಂಗಾನದಿಯು " ಗಂಗೋತ್ರಿ " ಯೆಂಬಲ್ಲಿ ಉದ್ಭವಿಸಿ - ಸುಮಾರು 1500 ಮೈಲು ಹರಿದು ಸಮುದ್ರವನ್ನು ಸೇರುತ್ತದೆ.
ದೇವ ಪ್ರಯಾಗದಿಂದ ಉತ್ತರಕಾಶೀ ಎಂಬಲ್ಲಿಗೆ ಹೋಗಿ - ಅಲ್ಲಿಂದ ಸುಮಾರು 50 ಮೈಲು ದೂರ ಹೋದರೆ " ಗಂಗೋತ್ರಿ " ಎಂಬ " ಗಂಗೋದ್ಗಮ ಸ್ಥಾನ " ವು ಸಿಗುತ್ತದೆ.
ಇದು ಸಮುದ್ರ ಮಟ್ಟದಿಂದ 10120 ಅಡಿ ಎತ್ತರದಲ್ಲಿದೆ.
ಗಂಗೋತ್ರಿಯಿಂದ 18 ಮೈಲು ದೂರದಲ್ಲಿ " ಗೋಮುಖ " ಯೆಂಬಲ್ಲಿ ಗಂಗೆಯ ನಿಜವಾದ ಉದ್ಗಮವಿದೆ.
ಆದರೆ ಅಲ್ಲಿಗೆ ಎಲ್ಲರಿಗೂ ಹೋಗಲು ಸಾಧ್ಯವಾಗುವುದಿಲ್ಲ.
ಶ್ರೀಮನ್ನಾರಾಯಣನ ಚರಣ ಕಮಲದಿಂದ ಗಂಗೆಯು ಹುಟ್ಟಿ - ಈಶ್ವರನ ತಲೆಯ ಮೇಲೆ ಬಿದ್ದು - ಅನಂತರ ಭೂಮಿಗೆ ಬಂದಳುಯೆಂಬ ಮಾತೂ ಸಹ - ಪರ್ವತದ ಪಾದದ ಬಳಿಯಲ್ಲಿ ಗಂಗೆಯು ಹುಟ್ಟಿದ್ದರಿಂದ ನಮಗೆ ಒಂದು ವಿಧದಲ್ಲಿ ಅನ್ವರ್ಥವಾಗಿ ತೋರುತ್ತದೆ.
ಯೇಕೆಂದರೆ......
ಗಂಗೆಯು ಬದರಿಗಿಂತಲೂ ಎತ್ತರವಾಗಿರುವ ಪರ್ವತದ ಪಾದದ ಬಳಿಯಲ್ಲಿ ಹುಟ್ಟಿ " ನರನಾರಾಯಣ ಶಿವಲಿಂಗೀ ಪರ್ವತ ಶಿಖರದ ಮೇಲೆ ಹರಿದು ಗೋಮುಖದಲ್ಲಿ ಭೂಮಿಯನ್ನು ಸೇರುತ್ತಾಳೆ.
ಇಂಥಹಾ ಪರಮ ಪವಿತ್ರಳಾದ ಗಂಗಾನದಿಯಲ್ಲಿ " ಉಡ್ಗಮದಿಂದ ಸಂಗಮದವರೆಗೆ ಎಲ್ಲಿ ಬೇಕಾದರೂ ಸ್ನಾನ ಮಾಡಬಹುದು.
ಗಂಗೆಯ ಸ್ಮರಣೆಯೇ ಮಾನವನ ಪಾತಕವನ್ನು ನಾಶ ಪಡಿಸುತ್ತದೆ.
ಗಂಗಾ ಗಂಗೇತಿ ಯೋ ಬ್ರೂಯಾತ್
ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವ ಪಾಪೇಭ್ಯಃ
ವಿಷ್ಣು ಲೋಕಂ ಸ ಗಚ್ಛತಿ ।।
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು.....
ತ್ವಂ ದಿನೇಷು ದಯಾವತೀತಿ
ವಿದಿತಂ ಯದ್ಬ್ರಹ್ಮಹಸ್ತಾಶ್ರಯಂ
ಪ್ರಾಪ್ತಾsಥಾಚ್ಯುತ ಪಾದಸಂಗ
ಮಹಿತಾಪಶ್ಚಾಚ್ಛ ನಾಕಂ ಗತಾ ।
ಸೌವರ್ಣ್ಯಾಚಲಶೃಂಗಮೇತ್ಯ
ಮುದಿತಾ ಶಂಭೋ: ಶಿರಃ ಸಂಗತಾ-
ಪ್ಯಾಸ್ಮಾಕಕ್ಷಿತಿಮಂಡಲೇ
ತ್ರಿಪಥಗೇ ತುಷ್ಟಾಸ್ಯಭೀಷ್ಟಪ್ರದಾ ।।
ಎಲೈ ಭಾಗೀರಥಿಯೇ !
ನೀನು ದೀನರಾದ ಭಕ್ತರಲ್ಲಿ ದಯಾಳುವಾಗಿದ್ದೀ ಎಂಬ ವಿಷಯವು ಸುಪ್ರಸಿದ್ಧವಾಗಿದೆ.
ಏಕೆಂದರೆ.....
ನೀನು ಮೊದಲುಬ್ರಹ್ಮಾಂಡವನ್ನು ಭೇದಿಸಿ ಬಂದಾಗ ಶ್ರೀ ಚತುರ್ಮುಖ ಬ್ರಹ್ಮದೇವರ ಕಮಂಡಲುವಿನಲ್ಲಿ ಸೇರಿಕೊಂಡು - ಶ್ರೀ ಬ್ರಹ್ಮದೇವರ ಕೈಯನ್ನು ಆಶ್ರಯಿಸಿದಿ.
ಅನಂತರ ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ಹರಿಯ ಕಾಲುಗಳನ್ನು ನಿನ್ನ ಜಲದಿಂದ ತೊಳಿದುದರಿಂದ ಮತ್ತಷ್ಟು ಪವಿತ್ರಳಾದೆ.
ನಿನಗೆ " ವಿಷ್ಣುಪದೀ " ಯೆಂಬ ಹೆಸರೂ ಉಂಟಾಯಿತು.
ಅನಂತರ ನೀನು ಸ್ವರ್ಗವನ್ನು ಆಶ್ರಯಿಸಿದೆ - ಅಲ್ಲಿಂದ ಸುವರ್ಣಮಯವಾದ ಮೇರು ಪರ್ವತದ ಶಿಖರವನ್ನು ತಲುಪಿ ಸಂತೋಷ ಪಟ್ಟೆ.
ಅನಂತರ ಈಶ್ವರನ ಜಟಾಜೂಟದಲ್ಲಿ ಬಂದು ನೆಲೆಸಿದರೂ ಕೂಡಾ - ನಮ್ಮ ಈ ಭಾರತ ಖಂಡದಲ್ಲಿ ಬಂದು ಸಂತುಷ್ಟಳಾಗಿ ಎಲ್ಲರಿಗೂ ಅಭೀಷ್ಟವನ್ನೂ ಕೊಡುತ್ತಿದ್ದೀಯೀ.
ಹೀಗೆ ಉತ್ತಮ ಸ್ಥಾನದಲ್ಲಿದ್ದ ನೀನುಸ್ಥಳಕ್ಕೆ ಹೋಗಬೇಕಾದರೆ ದೀನರ ಮೇಲಿನ ದಯೆಯೇ ಕಾರಣವಲ್ಲದೆ ಬೇರೊಂದಿಲ್ಲ!!
" ಆದೌ ಪಾದತಲೋ "
ಯೆಂಬ ಶ್ಲೋಕದ ತಾತ್ಪರ್ಯ ಹೀಗಿದೆ.
ಗಂಗೆಯು ಮೊದಲು ಶ್ರೀ ನಾರಾಯಣನ ಪಾದ ತಳದ ಕಾಂತಿಯಿಂದ ಕೆಂಪಾಗಿಯೂ - ಕಾಲಿನ ಮೇಲ್ಭಾಗದ ಕಾಂತಿಯಿಂದ ಕಪ್ಪಾಗಿಯೂ ಕಾಣಿಸುತ್ತಾ ತಾನು ಸ್ವತಃ ಬಿಳಿಯಾದುದರಿಂದ ಅಲ್ಲಿಯೇ ಒಂದು ತ್ರಿವೇಣೀ ಸಂಗಮವನ್ನು ಉಂಟು ಮಾಡಿದಳು.
ಮಧ್ಯದಲ್ಲಿ ಸ್ವರ್ಗದಲ್ಲಿ ಹರಿದು ಬರುವಾಗ ದೇವ ಸ್ತ್ರೀಯರು ಸ್ನಾನ ಮಾಡಿದುದರಿಂದ ಅವರ ಸ್ತನಗಳ ಕೇಸರಿಯ ಲೇಪವು ತೊಳೆದು ಹೋದುದರಿಂದ ಕೆಂಪಾಗಿಯೂ - ಕಪ್ಪಾಗಿರುವ ಕಡೆ ಕಣ್ಣುಗಳಿಂದ ಅವರು ಗಂಗೆಯನ್ನು ನೋಡುವಾಗ ಕಪ್ಪಾಗಿಯೂ - ಸ್ವತಃ ಬಿಳಿಯಾದ ಗಂಗೆಯು ಶೋಭಿಸುತ್ತಾ ಅಲ್ಲಿಯೂ ಒಂದು ತ್ರಿವೇಣೀ ಸಮಾಗಮವಾದಂತೆ ತೋರುತ್ತಿದ್ದಾಳೆ.
ಕೊನೆಗೆ ಈಶ್ವರನ ಜಡೆಯಲ್ಲಿರುವಾಗ ಕೆಂಪಾದ ಈಶ್ವರನ ಜಟಾಕಾಂತಿಯಿಂದ ಕೆಂಪಾಗಿಯೂ - ಈಶ್ವರಿಗೆ ಅಲಂಕಾರವಾಗಿರುವ ಸರ್ಪಗಳ ಕಾಂತಿಯಿಂದ ಕಪ್ಪಾಗಿಯೂ ಕಾಣಿಸುತ್ತಾ ಅಲ್ಲಿಯೂ ತ್ರಿವೇಣೀ ಸಂಗಮದಂತೆ ತೋರುತ್ತಾಳೆ.
ಹೀಗೆ ಉತ್ಪತ್ತಿ ಸ್ಥಳ - ಮಧ್ಯ ಮತ್ತು ಈಶ್ವರನ ಜಾತಾ ಪ್ರದೇಶವೆಂಬ ಮೂರು ಸ್ಥಳಗಳಲ್ಲಿಯೂ ಗಂಗೆಯು ತ್ರಿವೇಣೀ ಸಂಗಮದಂತಿದ್ದಾಳೆ.
ಪ್ರಯಾಗದಲ್ಲಿ ಮಾತ್ರವೇ ಅಲ್ಲ ಎಂದು ಗಂಗಾದೇಯಿಯ ಅದ್ಭುತ ಸ್ವರೂಪವನ್ನು ವರ್ಣಿಸಿದ್ದಾರೆ.
ಶ್ರೀ ವಾದಿರಾಜ ಗುರುಸಾರ್ವಭೌಮರು ೮ ಪದ್ಯಗಳಿಂದ ಶ್ರೀ ಗಂಗಾದೇವಿಯ ಮಹಿಮಾ ವರ್ಣನೆ ಮಾಡಿದ್ದಾರೆ.
" ಹರಿದಾಸ ಸಾಹಿತ್ಯದಲ್ಲಿ ಸ್ತೋತ್ರ ಪದಗಳು "
ಶ್ರೀ ಗಂಗಾದೇವಿಯ ಕುರಿರು ಶ್ರೀ ಪುರಂದರದಾಸರು ಸ್ತೋತ್ರ ಸುಳಾದಿಗಳು.
ಶ್ರೀ ವಿಜಯರಾಯರು...
1. ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ
2.ಜಯ ಜಾನ್ಹವಿ ದೇವಿ ಜಯ ಭಕುತ ಸಂಜೀವಿ
3. ಜಯ ಜಯ ಜಾನ್ಹವಿಯೇ ಭಕ್ತ ಸಂಜೀವಿ ಜಯ ಮಂಗಳಾವನಿಯೇ ಜಯ ನಮ್ಮ ಕಾಯೆ
4. ಗಂಗೆ ಶೋಭನ ತರಂಗೆ ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ
5. ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ ಶ್ರೀ ಭೂರಮಣನ ತನಯೇ
6. ಗಂಗಾವತರಣ ಆರತಿ - ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ
7. ಮಂಗಳಂ ಮಹಾ ಗಂಗೆ ಭಕುತ ಮನೋಹಾರಿಗೆ
ಶ್ರೀ ಜಗನ್ನಾಥದಾಸರು...
1. ಜನನಿ ಜಾನ್ಹವಿ ಜಗತ್ರಯ ಪಾವನಿ
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಹರಿಪಾದೋದ್ಭವಿಯಾಗಿ ನಮಗೆಲ್ಲರಿಗೂ ಪಾವಿತ್ರ್ಯತೆಯನ್ನು ಹಂಚುವುದಕ್ಕೆ ಧರೆಗಿಳಿದು ಬಂದು, ಮಹಾತ್ಮರು ಕರೆದಲ್ಲಿ ಬಂದು ಮಧ್ವಸರೋವರದಲ್ಲಿ, ನರಸಿಂಹ ತೀರ್ಥದಲ್ಲಿ, ಧವಳಗಂಗೆಯಲ್ಲಿ, ಇನ್ನಿತರ ತೀರ್ಥಗಳಲ್ಲಿ ನೆಲಸಿ ಹಾಗೂ ಎಲ್ಲಾ ನದಿಗಳಲ್ಲಿ ಪುಷ್ಕರಕಾಲದಲ್ಲಿ ಸನ್ನಿಹಿತಳಾಗುವುದರಿಂದ ನಾವಿದ್ದಲ್ಲೇ ಬಂದು ನಮ್ಮನ್ನು ಪುನೀತಳನ್ನಾಗಿ ಮಾಡುತ್ತಿರುವ ತಾಯಿ ಗಂಗೆಗೆ ಗಂಗೋತ್ಪತ್ತಿಯ ಶುಭಸಂದರ್ಭದಲ್ಲಿ ಕೋಟಿ ನಮನಗಳು.....
ತಾತ್ಪರ್ಯಚಂದ್ರಿಕಾಯುಕ್ತಂ ನ್ಯಾಯಾಮೃತಕಲಾನಿಧಿಮ್/
ತರ್ಕೋಡುತಾಂಡವಕೃತಂ ವ್ಯಾಸತೀರ್ಥವಿಧುಂ ಭಜೇ//
- ಶ್ರೀವಿಜಯೀಂದ್ರತೀರ್ಥರು...
ಪ್ರಲ್ಹಾದರಾಜರೇ ಹುಟ್ಟಿಬಂದು ದ್ವೈತಮತದ ಹಿರಿಮೆಯನ್ನು ದಶದೆಸೆಗಳಲ್ಲಿ ಪಸರಿಸಿ, ವಿದ್ಯಾಕರ್ಣಾಟಕ ಸಾಮ್ರಾಜ್ಯವನ್ನೇ ಅಲ್ಲದೇ ವಿಜಯನಗರ ಸಿಂಹಾಸನವನ್ನೇರಿ ರಾಜನನ್ನು ಸಲಹಿದ, ಹನುಮಪ್ಪನ ಪ್ರತಿಮೆಗಳನ್ನು ಎಲ್ಲೆಡೆ ಪ್ರತಿಷ್ಠಿಸಿ ಬ್ರಾಹ್ಮಣರನ್ನು ಸಲಹಿದ, ವ್ಯಾಸ -ದಾಸ ಕೂಟಗಳ ಸ್ಥಾಪನೆ ಮಾಡಿ ಹರಿದಾಸ ಸಾಹಿತ್ಯದ ಔನ್ನತ್ಯವನ್ನು ಸಾರಿದ, ಶ್ರೀಮದ್ ಬ್ರಹ್ಮಣ್ಯತೀರ್ಥರ,ಶ್ರೀ ಶ್ರೀಪಾದರಾಜರ ಮುದ್ದು ಕಂದರಾದ, ಕೃಷ್ಣನನ್ನೇ ಕುಣಿಸಿ ಪರವಶರಾದ, ಶ್ರೀಮದ್ವಾದಿರಾಜ, ಶ್ರೀ ವಿಜಯೀಂದ್ರತೀರ್ಥರ, ಶ್ರೀಮತ್ಪುರಂದರ, ಕನಕಾದಿಗಳ ಮಹಾನ್ ಗುರುಗಳಾದ, ವಾದಿಗಳಿಗೆ ಸಿಂಹಸ್ವಪ್ನರಾದ ವ್ಯಾಸತ್ರಯಗಳೆಂಬ ವಜ್ರಗಳನ್ನು ನೀಡಿ ನಮ್ಮನ್ನು ಉದ್ಧರಿಸಲು ಬಂದ ಶ್ರೀಮಚ್ಚಂದ್ರಿಕಾಚಾರ್ಯರು ನಮಗಾಗಿಯೆ ಅವತಾರ ಮಾಡಿದ ಪರಮಸುದಿನವಿದು...
ಗುರುವ್ಯಾಸರಾಯರ ಚರಣವೆನಗೆ ಗತಿ/
ಪುರಂದರವಿಠಲನ ಅರಿತೆ ಇವರಿಂದ ಎನ್ನುವ ಶ್ರೀಮತ್ಪುರಂದರದಾಸಾರ್ಯರ ವಾಕ್ಯಗಳನ್ನು ಶಿರದಲ್ಲಿ ಧರಿಸೋಣ..
ಮತ್ತೆ...
ಶ್ರೀಶಾಂಘ್ರಿ ಸೇವಕಮ್ ನಿತ್ಯಂ
ಭೂಸುರಾಗ್ರ ಕುಲೋದ್ಭವಮ್ /
ವಾಸಮಾದಿ ಶಿಲಾಕ್ಷೇತ್ರಂ ಶೇಷದಾಸ ಗುರುಮ್ ಭಜೇ//
ಹರಿ ದಾಸ ಸಾಹಿತ್ಯದ ಎರಡನೇ ಘಟ್ಟದ ನೇತಾರರಾದ ಶ್ರೀ ವಿಜಯದಾಸಾರ್ಯರ ಪರಮ ಕೃಪಾ ಪಾತ್ರರಾದ, ಅವರಿಂದಲೆ ಗುರುವಿಜಯವಿಠಲ ಎನ್ನುವ ಸ್ವಪ್ನಾಂಕಿತವನ್ನು ಪಡೆದು ಅನೇಕ ಪದ ಪದ್ಯ ಸುಳಾದಿಗಳನ್ನು ರಚಿಸಿ ಸಜ್ಜನರ ಸಾಧನೆಗಾಗಿ ನೀಡಿದ, ರುದ್ರದೇವರ, ಮುಖ್ಯಪ್ರಾಣದೇವರನ್ನು ಜೀವದ ಭಕ್ತಿಯಿಂದ ಆರಾಧಿಸಿದಂತಹಾ, ತಮ್ಮ ಸ್ವರೂಪೋದ್ಧಾರಕರಾದ ಶ್ರೀ ವಿಜಯದಾಸಾರ್ಯರನ್ನೇ ಮತ್ತೆ ತಮ್ಮ ಮೊಮ್ಮಕ್ಕಳನ್ನಾಗಿ ಪಡೆದಂತಹಾ ಗುರುಭಕ್ತಿ ಪರಾಯಣರಾದ ಶ್ರೀ ಮೊದಲಕಲ್ಲು ಶೇಷದಾಸಾರ್ಯರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ....
ಕುಷ್ಟುರೋಗ ವ್ಯಾಧಿಜ್ವರ ಚತುರ್ಥಿ ಭಯಭೀತಿಗಳನೆಲ್ಲ
ಬಿಟ್ಟೋಡಿಸಿ ತೀರ್ಥ ಅಂಗಾರದಲ್ಲಿ ಸಮಸ್ತರ ಮಹಿಮೆ ನೋಡಿ
ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳ
ಅಂತ ಹರಿದಾಸಿ ಹರಪನಹಳ್ಳಿ ಭೀಮವ್ವನವರು ಶ್ರೀ ಶೇಷದಾಸಾರ್ಯರು ಜನರ ವ್ಯಾಧಿ,ರೋಗಗಳನ್ನು ದೂರ ಮಾಡಿದಂತಹಾ ಮಹಿಮೆಗಳನ್ನು ಭಕ್ತಿಯಿಂದ ಸ್ಮರಣೆ ಮಾಡಿದ್ದಾರೆ..
ಹರಿಕೇತು ಹರಿಸುತ ಹರಿಣಾಂಕಕುಲಜಾತ ಎಂದು
ಶ್ರಿ ಶೇಷದಾಸಾರ್ಯರು ಇಂದ್ರಾಂಶಜರೆಂದು ಶ್ರೀ ಶ್ಯಾಮಸುಂದರದಾಸರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ..
ಸಟಿಯನಾಡುವನಲ್ಲ ಧಿಟ ಪಾರ್ಥಸಾರಥಿ-
-ವಿಠಲನೇ ಇವರಲ್ಲಿ ಸ್ಪುಟವಾಗಿ ಇರುವ
ಕುಟಿಲ ಮನುಜರಿವರ ನಟನೇನು ಬಲ್ಲರು
ತೃಟಿಯೊಳು ಜನರ ಮಹತು ಪಟಲ ಬಿಡಿಸುವರೆಂದು
ಎಂದು ಶ್ರೀ ದಾಸಾರ್ಯರ ಶಿಷ್ಯರಾದ ಪಾರ್ಥಸಾರಥಿವಿಠಲರು ತಮ್ಮ ಗುರುಗಳ ಸ್ತುತಿಯಲ್ಲಿ ತಿಳಿಸಿ ಹೇಳಿದ್ದಾರೆ..
ಹಾಗೆಯೆ ಶ್ರೀ ರಘುಧಾಂತತೀರ್ಥರಿಂದ ರಚಿತವಾದಂತಹಾ ಶೇಷದಾಸರ ಅಷ್ಟಕ ನಮ್ಮ ದಿನನಿತ್ಯದ ಪಾರಾಯಣದ ಅವಿಭಾಜ್ಯ ಅಂಗವಾಗಬೇಕೂ ಸರಿ..
ಹೀಗೆ ಎಲ್ಲ ಶಿಷ್ಯರ, ಹರಿದಾಸರ, ಜನರ ಆರಾಧ್ಯ ದಾಸಾರ್ಯರಾದ ಶ್ರೀ ಮೊದಲಕಲ್ಲು ಶೇಷದಾಸಾರ್ಯರ ಆರಾಧನೆಯನ್ನು ಇಂದಿನಿಂದ ಮೂರುದಿನ ನಾವೂ ಸಹ ಪರಮಭಕ್ತಿಯಿಂದ ಆಚರಣೆ ಮಾಡಿ ದಾಸಾರ್ಯರ ಕೃಪೆಗೆ ಪಾತ್ರರಾಗೋಣ.. (ನಿನ್ನೆಯ ದಿನ ಪೂರ್ವಾರಾಧನೆ ಅಂತ ಹಾಕಿದೆ , ತಿಥಿಗಳ ಗದ್ದಲ, ನನ್ನ ಅಜ್ಞಾನದಿಂದ ಆದ ತಪ್ಪನ್ನು ಮನ್ನಿಸಿ )
ಹಾಗೆಯೇ...
ಜಗನ್ನಾಥ ಗುರೋರ್ದಾಸಂ ಜಗದಾನಂದಕಾರಕಂ/
ಶ್ಯಾಮಸುಂದರ ದಾಸಾರ್ಯಂ ವಂದೇ ಸುಜ್ಞಾನದಾಯಕಮ್//
ಆಶುಕವಿಗಳು, ಶ್ರೀಮದ್ರಾಘವೇಂದ್ರತೀರ್ಥರನ್ನು ಜೀವದ ಭಕ್ತಿಯಿಂದ ಮಾಡಿದವರಾದ, ಶ್ರೀ ಮಾನವಿ ಪ್ರಭುಗಳ ಪರಮಾನುಗ್ರಹ ಪಾತ್ರರು, ಶ್ರೀ ಗುರುಜಗನ್ನಾಥವಿಠಲರ ಅನುಗ್ರಹ ಪಡೆದವರು, ಶ್ರೀ ಅಸ್ಕಿಹಾಳ ಗೋವಿಂದದಾಸಾರ್ಯರ ಪ್ರೀತಿಪಾತ್ರರೂ, ತಮ್ಮ ಜೀವನವನ್ನು ಹರಿದಾಸ ಸಾಹಿತ್ಯಕ್ಕೆ ಸಮರ್ಪಣೆ ಮಾಡಿದ, ಅನೇಕ ಜನ ಶಿಷ್ಯರಿಗೆ ಸಾಧನೆಯ ಮಾರ್ಗವನ್ನು ಕರುಣಿಸಿದ ಶ್ರೀ ಮಾನವಿ ಗುಂಡಾಚಾರ್ಯರ (ಶ್ರೀ ಶ್ಯಾಮಸುಂದರದಾಸರ) ಆರಾಧನೆಯೂ ಇಂದಿನಿಂದ ಮೂರು ದಿನ...
ತಾಯಿಗಂಗೆಯ, ಶ್ರೀಮಚ್ಚಂದ್ರಿಕಾಚಾರ್ಯರ, ಶ್ರೀ ಶೇಷದಾಸಾರ್ಯರ, ಶ್ರೀ ಶ್ಯಾಮಸುಂದರದಾಸಾರ್ಯರ ಪರಮಾನುಗ್ರಹ ನಮ್ಮ ಎಲ್ಲರಮೇಲೆ ಸದಾಕಾಲದಲ್ಲಿ ಇರಲಿ ಎಂದು ಬೇಡಿಕೊಳ್ಳುತ್ತಾ.....
ನಾದನೀರಾಜನದಿಂ ದಾಸಸುರಭಿ 🙏🏽
***
ಗಂಗೋತ್ಪತ್ತಿ ವೈಶಾಖ ಶುದ್ಧ ಸಪ್ತಮಿ.
ಭಗೀರಥ ಮಹಾರಾಜ ತನ್ನ ಪೂರ್ವಜರ ಮುಕ್ತಿಗಾಗಿ ಭಾಗೀರಥಿಯನ್ನು ಕುರಿತು ತಪಸ್ಸು ಮಾಡಿದನು. ಗಂಗೆ ಅವನಿಗೆ ಒಲಿದು ತನ್ನ ರಭಸಕ್ಕೆ ಶಕ್ತಿಗೆ ಭೂಮಿಗೆ ತಾಳಿಕೊಳ್ಳುವ ಶಕ್ತಿ ಇಲ್ಲ. ಅದಕ್ಕೆ ರುದ್ರದೇವರು ತಡೆದುಕೊಳ್ಳುವ ಸಾಮರ್ಥ್ಯ ಇದ್ದವರು ಎಂದೂ ತಿಳಿದು ರುದ್ರದೇವರನ್ನು ಕುರಿತು ತಪಸ್ಸು ಮಾಡಿದನು. ದೇವಗಂಗೆ ಆಕಾಶದಿಂದ ಧ್ರುವಲೋಕ, ಸತ್ಯಲೋಕ, ಸ್ವರ್ಗದಲ್ಲಿ ಹರಿದು ಭೂಲೋಕದೆಡೆಗೆ ಬಂದು ಹರನ ಜಡೆಯಲ್ಲಿ ಕುಳಿತುಕೊಳ್ಳಲು ಒಂದು ವರ್ಷ ಸಮಯ ಬೆಕ್ಕಾಯಿತು. ಅಕ್ಷಯ ತೃತೀಯ ದಿನ ಹರನ ಜಡೆಯಿಂದ ಭೂಮಿಗೆ ಹರಿದು ಬರುವಾಗ ಅವಳಿಗೆ ತನ್ನ ರಭಸದ ಬಗ್ಗೆ ಕಿಂಚಿತ್ ಅಭಿಮಾನ ಹುಟ್ಟಿತು. ಆಗ ಜ ಹ್ನು ಋಷಿಯ ಆಶ್ರಮದ ಸಮೀಪ ಬಂದು, ಆಶ್ರಮವನ್ನು ದ್ವೀಪವನ್ನಾಗಿ ಮಾಡಿದಳು. ಇದನ್ನು ಕಂಡ ಜಹ್ನು ಋಷಿ ಗಂಗೆಯನ್ನು ಪೂರ್ಣ ಆಪೋಶನ ತೆಗೆದುಕೊಂಡನು. ಇದರಿಂದಾಗಿ ಗಂಗೆಯ ಅಭಿಮಾನ ಅಹಂಕಾರ ತುಸು ಕಡಿಮೆಯಾಗಿ, ಭಗೀರಥ ಮಹಾರಾಜ ಮತ್ತೆ ಜಹ್ನು ಋಷಿಯನ್ನು ಕುರಿತು ಪ್ರಾರ್ಥನೆ ಮಾಡಿದಾಗ ಋಷಿಯು ತನ್ನ ಬಲ ಕಿವಿಯ ಮುಖಾಂತರ ಗಂಗೆಯನ್ನು ಹರಿಬಿಟ್ಟನು. ಇದರಿಂದಾಗಿ ಗಂಗೆಗೆ ಜಾಹ್ನವಿ ಎಂಬ ಹೆಸರು ಬಂದಿದ್ದು ಋಷಿಯ ಕಿವಿಯಿಂದ ಬಂದ ದಿನವನ್ನು ಗಂಗೋತ್ಪತ್ತಿ ದಿನವೆಂದು ಆಚರಿಸುತ್ತೇವೆ. ಇಂದಿನಿಂದ ದೇವಗಂಗೆ ಭಾರತ ಭೂಮಿಯಲ್ಲಿ ಗಂಗೆಯಾದಳು. ಸುಮಂಗಲಿಯರಿಗೆ ಮರದ ಬಾಗಿನ ಅರಿಷಣ ಕುಂಕುಮ ಕೊಟ್ಟು ನಮಸ್ಕರಿಸಿ ವಿಶೇಷವಾಗಿ ಸ್ತ್ರೀಯರು ಸೌಭಾಗ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಾರೆ. ಗಂಗೆಯ ಅಂತರ್ಗತ ವರುಣನ ಅಂತರ್ಗತ ಭಾ. ಮು. ಅಂ. ಹಯಗ್ರೀವ ದೇವರು ಎಲ್ಲರಿಗೂ ಸುಜ್ಞಾನ ಕೊಟ್ಟು ಕಾಪಾಡಲೆಂದು ಬೇಡಿಕೊಳ್ಳುವ.
-by ಮಧುಸೂದನ ಕಲಿಭಟ್
*********
ಧಶಾಹರ
ಜೇಷ್ಠ ಶುದ್ಧ ದಶಮೀಯು ಗಂಗಾವತಾರದ ದಿನವು . ಇದಕ್ಕೆ "ದಶಾಹರ" ಎನ್ನುವರು. ಇದರಲ್ಲಿ ಹತ್ತು ಯೋಗಗಳು ಹೇಳಲ್ಪಟ್ಟಿವೆ.
೧ - ಜೇಷ್ಠ ಮಾಸ,
೨ - ಶುಕ್ಲ ಪಕ್ಷ
೩ - ದಶಮೀ
೪ - ಬುಧವಾರ
೫ - ಹಸ್ತಾ ನಕ್ಷತ್ರ
೬ - ವ್ಯತಿಪಾತ
೭ - ಗರಜಕರಣ
೮ - ನಂದಾತಿಥಿ
೯ - ಕನ್ಯಾ ಚಂದ್ರ
೧೦ - ವೃಷಭ ರವಿ
ಬುಧವಾರ ಹಸ್ತಾ ಯೋಗವಾದರೆ ಅದಕ್ಕೆ "ಆನಂದಯೋಗ" ವೆನ್ನುವರು. ಇದರಲ್ಲಿ ದಶಮೀ , ವ್ಯತಿಪಾತಗಳು ಮುಖ್ಯಗಳು. ಆದ್ದರಿಂದ ಕೆಲ ವಿಷ್ಟಯೋಗದಿಂದ ಕೂಡಿದ ದಶಮಿಯು ಪೂರ್ವಾಹ್ಣದಲ್ಲಿದ್ದಾಗ ಆ ದಿನ "ದಶಾಹರ" ವೃತವನ್ನಾಚರಿಸತಕ್ಕದ್ದು. ಎರಡೂ ದಿನ ಇಂಥ ದಶಮೀಯುದ್ದರೆ ಯಾವ ದಿನ ಹೆಚ್ಚಿನ ಯೋಗವಾಗಿದೆಯೋ ಆ ದಿನ ಮಾಡತಕ್ಕದ್ದು. ಕಾಶೀಕ್ಷೇತ್ರದಲ್ಲಿರುವವರು ದಶಾಶ್ವಮೇಧ ತೀರ್ಥದಲ್ಲಿ ಸ್ನಾನಮಾಡಿ ಗಂಗಾಪೂಜೆಯನ್ನು ಮಾಡತಕ್ಕದ್ದು. ಬೇರೆ ಕಡೆಯಲ್ಲಿರುವವರು ತಮಗೆ ಸಮೀಪದಲ್ಲಿರುವ ನದಿಯಲ್ಲಿ ಸ್ನಾನ ಮಾಡಿ ಗಂಗಾಪೂಜಾದಿಗಳನ್ನು ಮಾಡತಕ್ಕದ್ದು.
ವೃತ ವಿಧಾನ ~
ದೇಶಕಾಲಗಳನ್ನುಚ್ಛರಿಸಿ "ಮಮೇತಜ್ಜನ್ಮ ಜನ್ಮಾಂತರ ಸಮುದ್ಭೂತ ತ್ರಿವಿಧಕಾಯಿಕ ಚತುರ್ವಿಧ ವಾಚಿಕ ತ್ರಿವಿಧ ಮನಸೇತಿ ಸ್ಕಾಂದೋಕ್ತ ದಶವಿಧ ಪಾಪನಿರಾಸ ತ್ರಯಸ್ತ್ರೀಂಶಚ್ಛತ ಪಿತ್ರುದ್ಧಾರ ಬ್ರಹ್ಮಲೋಕವಾಪ್ತ್ಯಾದಿ ಫಲಪ್ರಾಪ್ತ್ಯರ್ಥಂ ಜೇಷ್ಠಮಾಸ ಸಿತಪಕ್ಷ ದಶಮೀ ಬುಧವಾರಹಸ್ತ ತಾರಕಾಗರಕರಣ ವ್ಯತಿಪಾತ ಆನಂದಯೋಗ ಕನ್ಯಾಸ್ಥಚಂದ್ರ ವೃಷಸ್ಥ ಸೂರ್ಯೇತಿದಶಯೋಗ ಪರ್ವಣ್ಯಂಸ್ಯಾಂ ಮಹಾನಂದ್ಯಾಂಸ್ನಾನಂ ತೀರ್ಥ ಪೂಜನಂ ಪ್ರತಿಮಾಯಾಂ ಜಾಹ್ನವೀ ಪೂಜಾಂ ತಿಲಾದಿದಾನಂ ಮೂಲಮಂತ್ರ ಜಪಂ ಆಜ್ಯಹೋಮಂ ಚ ಯಥಾಶಕ್ತಿ ಕರಿಷ್ಯೇ" ಹೀಗೆ ಸಂಕಲ್ಪಿಸಿ ಯಥಾವಿಧಿ ದಶಸ್ನಾನವನ್ನು (ಹತ್ತಾವರ್ತಿ) ಮಾಡಿ ಜಲದಲ್ಲಿ ನಿಂತು ಹತ್ತಾವರ್ತಿ ಅಥವಾ ಒಂದಾವರ್ತಿ ಮುಂದೆ ಹೇಳಿದ ಸ್ತೋತ್ರವನ್ನು ಪಠಿಸಿ ವಸ್ತ್ರಗಳನ್ನುಟ್ಟು ಪಿತೃತರ್ಪಣಾಂತವಾಗಿ ನಿತ್ಯಕರ್ಮವನ್ನು ಮುಗಿಸಿ , ತೀರ್ಥಪೂಜೆಯನ್ನು ಮಾಡತಕ್ಕದ್ದು. ತುಪ್ಪದಿಂದ ಯುಕ್ತವಾದ ಹತ್ತು ಮುಷ್ಟಿ ಕರಿಎಳ್ಳುಗಳನ್ನು ಅಂಜಲಿಯಿಂದ ತೀರ್ಥದಲ್ಲಿ ಚೆಲ್ಲತಕ್ಕದ್ದು. ಮತ್ತು ಬೆಲ್ಲದಿದಂದ ಕಲಿಸಿದ ಹತ್ತು ಹಿಟ್ಟಿನಪಿಂಡಗಳನ್ನೂ ತೀರ್ಥದಲ್ಲಿ ಹಾಕತಕ್ಕದ್ದು. ಆಮೇಲೆ ಗಂಗಾತೀರದಲ್ಲಿ ತಾಮ್ರ ಅಥವಾ ಮಣ್ಣಿನ ಪಾತ್ರದಲ್ಲಿ ಸ್ಥಾಪಿತವಾದ ಕಲಶದಲ್ಲಿ ಸುವರ್ಣಾದಿಗಳಿಂದ ನಿರ್ಮಿಸಿದ ಪ್ರತಿಮೆಯಲ್ಲಿ ಗಂಗಾದೇವಿಯನ್ನಾವಾಹಿಸತಕ್ಕದ್ದು.
ಆವಾಹನ ಮಂತ್ರ ~
"ನಮೋಭಗವತ್ಯೈ ದಶಪಾಪಹರಾಯ್ಯೆ ಗಂಗಾಯಯ್ಯೆ ನಾರಾಯಣ್ಯೈ ರೇವತ್ಯೈ ಶಿವಾಯ್ಯೆ ದಕ್ಷಾಯ್ಯೆ ಅಮೃತಾಯ್ಯೆ ವಿಶ್ವರೂಪಿಣ್ಯೈ ನಂದಿನ್ಯೈತೇ ನಮೋನಮಃ" ಈ ಮಂತ್ರವು ಸ್ತ್ರೀ ಶೂದ್ರಾದಿಗಳಿಗೂ ಉಪಯುಕ್ತವು. "ಓಂನಮಃ ಶವಾಯೈ ನಾರಾಯಣ್ಯೈ ದಶಾಹರಾಯೈ ಗಂಗಾಯ್ಯೈ ಸ್ವಾಹಾಃ |" ಎಂಬ ಇಪ್ಪತ್ತು ಅಕ್ಷರಗಳ ಮಂತ್ರ ಮಾತ್ರ ಬ್ರಾಹ್ಮಣರಿಗೆ ಮಿಸಲಾದದ್ದು. ಈ ಮಂತ್ರದಿಂದ ಗಂಗೆಯನ್ನಾವಾಹಿಸಿ ಅದರಲ್ಲಿ ಯೇ ನಾರಾಯಣ , ರುದ್ರ , ಬ್ರಹ್ಮ , ಸೂರ್ಯ , ಭಗೀರಥ ಮತ್ತು ಹಿಮಾಚಲ ಇವುಗಳನ್ನು ನಾಮ ಮಂತ್ರದಿಂದ ಆವಾಹನ ಮಾಡಿ ಹಿಂದೆ ಹೇಳಿದಂತೆ ಮೂಲ ಮಂತ್ರವನ್ನುಚ್ಛರಿಸಿ "ಶ್ರೀಗಂಗಾಯ್ಯೈ, ನಾರಾಯಣ , ರುದ್ರ , ಬ್ರಹ್ಮ , ಸೂರ್ಯ , ಭಗೀರಥ , ಹಿಮವತ್ಸಹಿತಾಯ್ಯೈ , ಆಸನಂ ಸಮರ್ಪಯಾಮಿ" ಇತ್ಯಾದಿ ಉಪಚಾರಗಳಿಂದ ಪೂಜಿಸತಕ್ಕದ್ದು. ಹತ್ತು ವಿಧವಾದ ಪುಷ್ಪಗಳಿಂದ ಪೂಜಿಸಿ ದಶಾಂಗಧೂಪವನ್ನು ಕೊಟ್ಟು ದಶವಿಧ ನೈವೇದ್ಯವನ್ನು ಸಮರ್ಪಿಸಿ ತಾಂಬೂಲ ದಕ್ಷಿಣೆಗಳನ್ನು ಕೊಟ್ಟು ಹತ್ತುಫಲಗಳನ್ನು ಸಮರ್ಪಿಸತಕ್ಕದ್ದು. ಹತ್ತು ದೀಪಗಳನ್ನು ಹಚ್ಚಿ ಪೂಜೆಯನ್ನು ಮುಗಿಸತಕ್ಕದ್ದು. ಹತ್ತು ಬ್ರಾಹ್ಮಣರಿಗೆ ಪ್ರತ್ಯಕವಾಗಿ ಹದಿನಾರು ಮುಷ್ಟಿ ಎಳ್ಳು ಹಾಗೂ ಗೋದಿಯನ್ನು ದಕ್ಷಿಣೆಸಹಿತವಾಗಿ ಕೊಡತಕ್ಕದ್ದು. ಆಮೇಲೆ ಹತ್ತು ಅಥವಾ ಒಂದಾದರೂ ಗೋ ದಾನ ಮಾಡಿ ಬಂಗಾರದ ಅಥವಾ ಬೆಳ್ಳಿಯ ಇಲ್ಲವೇ ಹಿಟ್ಟಿನ ಮೀನ , ಕೂರ್ಮ , ಕಪ್ಪೆಗಳ ಪ್ರತಿಮೆ ಮಾಡಿ ಪೂಜಿಸಿ ತೀರ್ಥದಲ್ಲಿ ಬಿಡತಕ್ಕದ್ದು. .....
...ಮುಂದುವರೆಯುವದು.
ದಶಾಹರ 🌹
ಮುಂದುವರೆದದ್ದು.......
ಜಪ - ಹೋಮಗಳನ್ನು ಮಾಡುವದಿದ್ದಲ್ಲಿ ಪೂರ್ವೋಕ್ತ ಮಂತ್ರಗಳ ಐದುಸಾವಿರ ಜಪಮಾಡಿ ಅದರ ದಶಾಂಶದಿಂದ ಹೋಮ ಮಾಡತಕ್ಕದ್ದು . ಅಥವಾ ಯಥಾಶಕ್ತಿ ಜಪ ಹೋಮಗಳನ್ನು ಮಾಡತಕ್ಕದ್ದು. "ದಶಹರಾವ್ರತಾಂಗತ್ವೇನ ಹೋಮಂ ಕರಿಷ್ಯೇ" ಹೀಗೆ ಸಂಕಲ್ಪಿಸಿ ಅಗ್ನಿಪ್ರತಿಷ್ಟೆ ಮಾಡಿ ಅನ್ವಾಧಾನದಲ್ಲಿ "ಚಕ್ಷುಷೀ ಆಜ್ಯೇನ" "ಶ್ರೀ ಗಂಗಾಂ ಅಮುಖ ಸಂಖ್ಯಯಾ ಆಜ್ಯೇನ ನಾರಾಯಣಾದಿ ಷಡ್ ದೇವತಾ ಏಕೈಕಯಾಜ್ಯೇಹುತ್ಯಾ ಶೇಷೇಣ ಶ್ವಿಷ್ಟಕೃತ್ಯಾದಿ" ಪ್ರೋಕ್ಷಿಣಿ - ಮೊದಲಾದ ಆರು ಪಾತ್ರೆಗಳ ಆಸಾದನ ಮಾಡಿ ಆಜ್ಯವನ್ನು ಸಂಸ್ಕರಿಸಿ ಅನ್ವಾದಾನಕ್ರಮದಿಂದ ಹೋಮಿಸತಕ್ಕದ್ದು. ಹತ್ತು ಬ್ರಾಹ್ಮಣರನ್ನೂ ಸುವಾಸಿನಿಯರನ್ನೂ ಸಂತರ್ಪಣಮಾಡಿಸುವದು. ಪ್ರತಿಪದೆಯನ್ನಾರಂಭಿಸಿ ದಶಮಿಯ ವರೆಗೆ ಸ್ನಾನಾದಿ ಪೂಜಾಂತವಿಧಿಯನ್ನಾಚರಿಸತಕ್ಕದ್ದೆಂದು ಕೆಲವರ ಮತವಿದೆ. ಸ್ಕಾಂದ ಪುರಾಣದಲ್ಲಿ ಇದರ ಸ್ತೋತ್ರವು ಹೀಗಿದೆ. "ಬ್ರಹ್ಮೋವಾಚ ನಮಃ ಶಿವಾಯ್ಯೆ ಗಂಗಾಯ್ಯೆ ಶಿವದಾಯ್ಯೆ ನಮೋನಮಃ |
"ನಮಸ್ತೇ ರುದ್ರ ರೂಪಿಣ್ಯೆ ಶಾಂಕೈರ್ಯ್ಯೆತೇ ನಮೋ ನಮಃ ||೧||
ನಮಸ್ತೇ ವಿಶ್ವರೂಪಿಶ್ಯೈ ಬ್ರಹ್ಮಮೂರ್ತ್ಯೈನಮೋನಮಃ ಸರ್ವ ದೇವ ಸ್ವರೂಪಿಣ್ಯೆ ನಮೋಭೇಷಜಮೂರ್ತಯೇ ||೨||
ಸರ್ವಸ್ಯಸರ್ವ ವ್ಯಾದಿನಾಂ ಭಿಷಕ್ ಶ್ರೇಷ್ಟ್ಯೆ ನಮೋಸ್ತುತೆ |
ಸ್ಥಾಣುಜಂಗಮಸಂಭೂತ ವಿಷಹಂತ್ರ್ಯೈ ನಮೋನಮಃ ||೩||
ಭೋಗೋಪಭೋಗದಾಯಿನ್ಯೈ ಭೋಗವತ್ಯೈ ನಮೋನಮಃ |
ಮಂದಾಕಿನ್ಯೈ ನಮಸ್ತೇಸ್ತು ಸ್ವರ್ಗದಾಯೈ ನಮಃ ಸದಾ ||೪||
ನ ಸ್ತ್ರೈಲೋಕ್ಯಭೂಷಾಯೈ ಜಗದ್ಧಾತ್ರಯ್ಯೈ ನಮೋನಮಃ |
ನಮಸ್ತ್ರಿ ಶುಕ್ಲಸಂಸ್ಥಾಯೈ ತೇಜೋವತ್ಯೈ ನಮೋನಮಃ ||೫||
ನಂದಾಯೈ ಲಿಂಗಧಾರಿಣ್ಯೈ ನಾರಾಯಣ್ಯೈ ನಮೋನಮಃ ||
ನಮಸ್ತೇ ವಿಶ್ವಮುಖ್ಯಾಯೈ ರೇವತ್ಯೈತೆ ನಮೋನಮಃ ||೬||
ಬೃಹತ್ಯೈತೇ ನಮಸ್ತೇಸ್ತು ಲೋಕಧಾತ್ಯೈ ನಮೋನಮಃ |
ನಮಸ್ತೇವಿಶ್ವಮಿತ್ರಾಯೈ ನಂದಿನ್ಯೈತೇ ನಮೋನಮಃ ||೭||
ಪೃಥ್ವ್ಯೈ ಶಿವಾಮೃತಾಯೈ ಚ ಸುವೃಷಾಯೈ ನಮೋನಮಃ |
ಶಾಂತಾಯೈ ಚ ವರಿಷ್ಠಾಯೈ ವರದಾಯೈ ನಮೋನಮಃ ||೮||
ಉಸ್ರಾಯೈ ಸುಖದೋಗ್ಧ್ರ್ಯೈ ಚ ಸಂಜೀವಿನ್ಯೈ ನಮೋನಮಃ |
ಬ್ರಹ್ಮಿಷ್ಠಾಯೈ ಬ್ರಹ್ಮದಾಯೈ ದುರಿತಘ್ಯೈ ನಮೋನಮಃ ||೯||
ಪ್ರಣತಾರ್ತಿ ಪ್ರಭಂಜನ್ಯೈ ಜಗನ್ಮಾತ್ರೇ ನಮೋಸ್ತುತೇ |
ಸರ್ವಾಪತ್ಪ್ರತಿಪಕ್ಷಾಯೈ ಮಂಗಲಾಯೈ ನಮೋ ನಮಃ ||೧೦||
ಶರಣಾಗತ ದೀನಾರ್ತ ಪರಿತ್ರಾಣಪರಾಯಣೇ |
ಸರ್ವಸ್ಯಾರ್ತಿಹರೇದೇವಿ ನಾರಾಯಣಿ ನಮೋಸ್ತುತೇ ||೧೧||
ನಿರ್ಲೇಪಾಯೈ ದುರ್ಗಹಂತ್ರ್ಯೈ ದಕ್ಷಾಯೈ ತೇ ನಮೋ ನಮಃ |
ಪರಾತ್ಪರತರೇ ತುಭ್ಯಂ ನಮಸ್ತೇ ಮೋಕ್ಷದೇ ಸದಾ ||೧೨||
ಗಂಗೇಮಮಾಗ್ರತೋಭೂಯಾ ಗಂಗೇ ಮೇದೇವಿಪೃಷ್ಠತಃ |
ಗಂಗೇ ಮೇ ಪಾರ್ಶ್ವಯೋರೇಹಿ ತ್ವಯಿಗಂಗೇಸ್ತು ಮೇ ಸ್ಥಿತಿಃ ||೧೩||
ಆದೌ ತ್ವಮಂತೇ ಮದ್ಯೇ ಚ ಸರ್ವಂ ತ್ವಂ ಗಂಗಾತೇ ಶಿವೇ |
ತ್ವಮೇವ ಮೂಲ ಪ್ರಕೃತಿಃ ತ್ವಂಹಿ ನಾರಾಯಣಃ ಪರಃ ||೧೪||
ಗಂಗೇತ್ವಂ ಪರಮಾತ್ಮಾ ಚ ಶಿವಸ್ತುಭ್ಯಂ ನಮಃ ಶವೇ ||೧೫||
ಯ ಇದಂ ಪಠತೇ ಸ್ತೋತ್ರಂ ಭಕ್ತ್ಯಾನಿತ್ಯಂ ನರೋಪಿ ಯಃ |
ಶೃಣಯಾಚ್ಛ್ರದ್ಧಯಾಯುಕ್ತಃ ಕಾಯವಾಕ್ ಚಿತ್ತ ಸಂಭವೈಃ ||೧೬||
ದಶಧಾಸಂಸ್ಥಿತೈರ್ದೋಷೈಃ ಸರ್ವೈರೇವ ಪ್ರಮುಚ್ಯತೇ |
ಸರ್ವಾನ್ ಕಾಮಾನವಾಪ್ನೋತಿ ಪ್ರೇತ್ಯ ಬ್ರಹ್ಮಣಿಲೀಐತೇ ||೧೭||
ಜ್ಯೈಷ್ಠೇಮಾಸಿ ಸೀತೇಪಕ್ಷೇ ದಶಮೀ ಹಸ್ತ ಸಂಯುತಾ |
ತಸ್ಯಾಂ ದಶಮ್ಯಾಂಮೇತಚ್ಚ ಸ್ತೋತ್ರಂ ಗಂಗಾಜಲೇಸ್ಥಿತಃ ||೧೮||
ಯಃ ಪಠೇಧ್ದಶಕೃತ್ವಸ್ತು ದರಿದ್ರೋವಾಪಿ ಚಾಕ್ಷಮಃ |
ಸೋಪಿ ತತ್ಫಲಮಾಪ್ನೋತಿ ಗಂಗಾಸಂಪೂಜ್ಯ ಯತ್ನತಃ ||೧೯||
ಅದತ್ತಾನಾಮುಪಾದಾನಂ ಹಿಂಸಾಚೈವಾ ವಿಧಾನತಃ |
ಪರದಾರೋಪಸೇವಾಚಕಾಯಿಕಂ ತ್ರಿವಿಧಂಸ್ಮತಂ ||೨೦||
{ಕಾಯಿಕವಾದ ಮೂರು ಪಾಪಗಳೆಂದರೆ - ತಾನು ಕೊಡದೇ ತಕ್ಕೊಳ್ಳುವದು , ವಿಧಿರಹಿತವಾದ ಹಿಂಸೆಮಾಡುವದು , ಪರಸ್ತ್ರೀ ಸೇವನ ಮಾಡುವದು. )
ಪಾರುಷ್ಯಮನೃತಂಚೈವ ಪೈಶೂನ್ಯಂ ಚಾಪಿ ಸರ್ವಶಃ |
ಅಸಂಬದ್ಧ ಪ್ರಲಾಪಶ್ಚ ವಾಙ್ಮಯಂಸ್ಯಾಚ್ಚತುರ್ವಿದಂ ||೨೧||
( ವಾಚಿಕವಾದ ನಾಲ್ಕು ಪಾಪಗಳೆಂದರೆ -- ಕ್ರೂರವಾಗಿ ನುಡಿಯುವದು , ಸುಳ್ಳು ಹೇಳುವದು , ಚಾಡಿಹೇಳುವದು , ಅಸಂಬದ್ಧವಾಗಿ ಮಾತಾಡುವದು. )
ಪರದ್ರವ್ಯೇಷ್ಟಭಿದ್ಯಾನಂ ಮನಸಾನಿಷ್ಟ ಚಿಂತನಂ |
ವಿತಥಾಭಿವೇಶಶ್ಚ ಮಾನಸಂ ತ್ರಿವಿಧಂಸ್ಮೃತಂ ||೨೨||
( ಮಾನಸಿಕ ಮೂರು ಪಾಪಗಳೆಂದರೆ - ಪರದ್ರವ್ಯಾಪಹಾರದಲ್ಲಿ ಮನಸ್ಸು ಹಾಕುವದು , ಮನಸ್ಸಿನಲ್ಲಿ ಅನ್ಯರಿಗೆ ಕೇಡುಬಯಸುವದು , ವ್ಯರ್ಥವಾಗಿ ಮನಸ್ಸಿನ ಆವೇಶಹೊಂದುವದು . ಹೀಗೆ ದಶವಿಧ ಪಾಪಗಳು .)
ಏತಾನಿ ದಶಪಾಪಾ ನಿಹರತ್ವಂ ಮಮಜಾಹ್ನವಿ |
ದಶಪಾಪಹರಾಯಸ್ಮಾತ್ ತಸ್ಮಾದ್ದಶಹರಾಸ್ಮೃತಾ ||೨೩||
ತ್ರಯಸ್ತ್ರಿಂಶಚ್ಛತಂ ಪೂರ್ವಾನ್ ಪಿತ್ರೂನಥ ಪಿತಾಮಹಾನ್ |
ಉದ್ಧರತ್ಯೇವ ಸಂಸಾರಾತ್ ಮಂತ್ರಾಣಾನೇನ ಪೂಜಿತಾ ||||೨೪||
ನಮೋ ಭಗವತ್ಯೈ ದಶಪಾಪಹರಾಯೈ ಗಂಗಾಯೈ ನಾರಾಯಣ್ಯೈ ರೇವತ್ಯೈ ಶಿವಾಯೈ ದಕ್ಷಾಯೈ ಅಮೃತಾಯೈ ವಿಶ್ವರೂಪಿಣ್ಯೈ ನಂದಿನ್ಯೈತೆ ನಮೋನಮಃ |
ಸಿತಮಕರನಿಷಂಣಾಂ ಶುಭ್ರವರ್ಣಾಂ ತ್ರಿಣೇತ್ರಾಂ ಕರಧೃತ ಕಲಶೋದ್ಯತ್ಸೋತ್ಪಲಾಮತ್ಯಭಿಷ್ಟಾಂ |
ವಿಧಿಹರಿಹರರೂಪಾಂ ಸೇಂದುಕೋಟಿರಜುಷ್ಟಾಂ ಕಲಿತಸಿತದುಕೋಲಾಂಜಾಹ್ನವೀಂತಾಂ ನಮಾಮೀ ||||೨೫||
ಆದಾವಾದಿ ಪಿತಾಮಹಸ್ಯ ನಿಗಮವ್ಯಾಪಾರ ಪಾತ್ರೇಜಲಂ ಪಶ್ಚಾತ್ ಪನ್ನಗಶಾಯಿನೋ ಭಗವತಃ ಪಾದೋದಕಂ ಪಾವನಂ |
ಭೂಯಃ ಶಂಭು ಜಟಾವಿಭೀಷಣಮಣಿಃ ಜಹ್ನೋರ್ಮಹರ್ಷೇರಿಯಂ ದೇವೀ ಕಲ್ಮಷ ನಾಶಿನೀ ಭಗವತೀ ಭಾಗೀರಥೀ ದೃಶ್ಯತೇ ||೨೬||
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ |
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸಗಚ್ಛತಿ ||೨೭||
ಇತ್ಯಾದಿ ಸ್ತುತಿಸಿ ಹೋಮಾಂತ್ಯದಲ್ಲಿ ಪ್ರತಿಮೆಗೆ ಉತ್ತರ ಪೂಜೆಯನ್ನು ಮಾಡಿ , ವಿಸರ್ಜಿಸಿ ಮೂಲಮಂತ್ತದಿಂದ ಆಚಾರ್ಯರಿಗೆ ದಾನ ಮಾಡತಕ್ಕದ್ದು.
ಸಂಗ್ರಹ ~
ಗುರುರಾಜಾಚಾರ್ಯ ಕೃ. ಪುಣ್ಯವಂತ
***
ದಶಹರ
ಜ್ಯೇಷ್ಠ ಶು ದಶಮಿ
ಗಂಗಾಸ್ತೋತ್ರ
ತ್ವಂ ದೀನೇಷು ದಯಾವತೀತಿ ವಿದಿತಂ ಯದ್ಬ್ರಹ್ಮ ಹಸ್ತಾಶ್ರಯಂ
ಪ್ರಾಪ್ರ್ತಾ ಥಾಚ್ಯುತ ಪಾದಸಂಗಮಹಿತಾ ಪಶ್ಚಾಚ್ಚ ನಾಕಂಶ್ರಿತಾ|
ಸೌವರ್ಣಾಚಲಶೃಂಗಮೇತ್ಯ ಮುದಿತಾಶಂಭೋಃ ಶಿರಃ ಸಂಗತಾ
ಪ್ಯಾಸ್ಮಾಕ ಕ್ಷಿತಿಮಂಡಲೇ ತ್ರಿಪಥಗೇ ತುಷ್ಟಾಸ್ಯ ಭೀಷ್ಟಪ್ರದಾ ||೧||
ಆದೌಪಾದತಲೋರ್ಧ್ವ ಭಾಗಮಹಸಾ ಯಾ ರಕ್ತ ನೀಲಾ ಹರೇಃ
ಸ್ವರ್ಗಸ್ತ್ರೀ ಕುಚಕುಂಕುಮಾಂಕ ನಯನೋ ಪಾಂತಶ್ರಿಯಾ ಅಭ್ಯಂತರೇ |
ಅಂತೇ ಶಂಭುಕಪರ್ದ ಪನ್ನಗಗಲ ಶ್ರೇಣಿಜ್ವಲ ಜೋತಿಷಾ|
ಜನ್ಮಾರಭ್ಯ ಸರಸ್ವತಿನ ತನಯಾ ಸಂಗೇನ ಗಂಗಾ ಅಸ್ತಿಸಾ ||೨||
ಅಜ್ಞಾನಾದ್ಯದಿ ಸಜ್ಜನೇಷು ರಚಿತದ್ರೋಹ್ ನ್ಮ ಯಿ ಸ್ವರ್ಧುನಿ
ಸ್ವಸ್ಫೂರ್ತ್ಯಾ ಸುಜನೇಷು ದೂಷಣಗಣಾರೋಪಾದ ಪಜ್ಞಾ ತವ|
ತರ್ಹಿ ತ್ವಾಂ ಸಗರಾತ್ಮ ಜಾಸ್ಥಿನಿಕರಾಜಾನಂತಿಕಿಂತೈಃ ಪ್ರಭೋಃ
ದ್ರೋಹಃ ಕಿಂ ನ ಕೃತಂಕಿಮಂಬ ನ ಹರಾವರೋಪಿತಾ ಚೋರತಾ ||೩||
ಆರಭ್ಯಾಬ್ಜಜಲೋಕಮಾಕ್ಷಿತಿ ತಲಾದಾಯಾತಯಾ ಕಿಂ ತ್ವಯಾ
ಮಚ್ಚಿತ್ತಂ ಬಹುದೂರಮಿತ್ಯ ಬಲಯಾತ್ಯಕ್ತಂಭಿಯಾಜಾಹ್ನವಿ
ಅಕ್ಷಯ್ಯಾಚಲ ತುಂಗಶೃಂಗ ನಿಕರಾನ್ನಿರ್ಭಿದ್ಯ ಯಾಂತೀಮಮ
ಸ್ವಲ್ಪಂ ಕಿಂ ಬಹೂಮನ್ಯಸೇ ಶುಭಕುಲಂಗಂಗೇಂ ತರಂಗೇಚಲಮ್ ||೪||
ಅಸ್ಥಿಸ್ಪರ್ಶನ ಮಾತ್ರತಃ ಕಿಲ ತವ ಶ್ರೇಯಃ ಪ್ರದತ್ವಂ ಗತಂ
ವಿಸ್ತೀರ್ಣಾನಕಿಮಚ್ಯುತಸ್ಯ ನಗರೀಮನ್ಮಾತ್ರ ದೇಶೋಜ್ಜಿತಾ|
ತದ್ವರ್ತ್ಮ್ಯಾಅಪಿ ಸಕಂಟಕಂ ಕಿಮು ಸತಾಂ ಸಂತಾಸಜೋ ಹಂನ ಕಿಂ
ಕಸ್ಮಾದಂಬ ನಮೇ ಪ್ರದಾಸ್ಯಸಿ ಪದಂ ಗಂಗೇ ಅಖಿಲಾರ್ಥ ಪ್ರದಮ್ ||೫||
ಹೇಗಂಗೇ ತವ ಕೋಮಲಾಂಘ್ರಿನಲಿನಂ ರಂಭೋರುನೀ ವಿಲಸತ್
ಕಾಂಚೀದಾಮತನೂದರಂ ಘನಕುಚವ್ಯಾಕೀರ್ಣಹ್ ರಂ ವಪೂಃ
ಸನ್ಮುದ್ರಾಂಗದ ಕಂಕಣಾದತಕರಂ ಸ್ಮೇರಂ ಸ್ಫೂರತ್ಕುಂಡಲಮ್
ಸಾರಂಗಾಕ್ಷಿ ಜಲಾನ್ಯದಿಂದುರುಚಿಯೇ ಜಾನಂತಿ ತೇನ್ಯೇ ಜಲಾತ್ ||೬||
ಶ್ರೀನಾರಾಯನರಾಮಗೋಪತಿ ಹೃಷಿಕೇಶಾದಿ ರೂಪೋ ಕ್ಷಮ-
ಸ್ತ್ವಾಂಹತುಂ ಹರಿಸೂಕರಾಕೃತಿರಥ ಶ್ರೀದೇವಹೂತ್ಯತ್ಮಜಃ
ವೇಣಿಮಾಧವ ಬಿಂದುಮಾಧವ ತನುಸ್ತೀರೇವ್ಯಧತ್ತ ಸ್ಥಿತಿಂ
ಗಂಗೇಕಿಂಬಹು ನಾಅಧುನಾಪಿ ವಸತಿ ತ್ವದ್ಭರ್ತೃಗೇ ಹೇ ಅಪ್ಯಸೌ ||೭||
ಗಂಗೇ ತ್ವಂ ಶುಭಸಂಚಯಸ್ಯ ಜಯದಾ ದೋಷಾತ್ಮನಾಂ ನತ್ವಿತಿ
ಜ್ಞಾತಂ ಯತ್ ಕ್ರತುಕೋಟಿಲಭ್ಯ ಸುಕೃತಸ್ಯಾ ಭ್ಯುನ್ನತಿಂ ಯಚ್ಚಸಿ
ದುಷ್ಕರ್ಮಾಣ್ಯಮಿತಾನಿ ದೂರಯಸಿ ಯತ್ ತ್ವದ್ಗೇಯತೋ ಯೇಕ್ಷಯಾ|
ಪಾನೇನಾಪ್ಯ ವಗಾಹನೇನ ಮನಸಾಧ್ಯಾನೇನ ವಾ ||೮||
||ಇತಿ ಶ್ರೀವಾದಿರಾಜ ಪೂಜ್ಯಚರಣ ವಿರಚಿತ (ತೀರ್ಥಪ್ರಬಂಧಸ್ಥಂ) ಗಂಗಾಸ್ತೋತ್ರಮ್ ||
**
|ಪಿಬತ ಭಾಗವತಂ ರಸಮಾಲಯಂ|
ಇಂದು ಶ್ರೀಗಂಗಾದೇವಿಯು ಭೂಲೋಕಕ್ಕೆ ಬಂದ ದಿನ.
ಅದರ ಬಗ್ಗೆ ತಿಳಿಸುವ ಚರಿತ್ರೆ..
✍ಪರಿಕ್ಷೀತ ಮಹಾರಾಜ ಮಗನಿಗೆ ರಾಜ್ಯ ಒಪ್ಪಿಸಿ ಮಂತ್ರಿ ಗಳನ್ನು ಕರೆದು ಸರಿಯಾಗಿ ನೋಡಿಕೊಳ್ಳಲು ಹೇಳಿ
ತನ್ನ ರಾಜ್ಯ, ಕೋಶ,ಹೆಂಡತಿ, ಮಕ್ಕಳು, ಪ್ರಜೆಗಳು, ಎಲ್ಲಾ ರನ್ನು ಹಾಗು ಅವರ ಮೇಲಿನ ಅಭಿಮಾನ ತ್ಯಾಗ ಮಾಡಿ ಗಂಗಾ ತೀರಕ್ಕೆ ಬಂದಿದ್ದಾನೆ.
ಪರಿಕ್ಷೀತ ರಾಜ ಅಲ್ಲಿ ಬರುವ ಕಾರಣವೇನೆಂದರೆ
ಮರಣ ಆಗುವ ವಾದರೆ ಗಂಗಾತೀರದಲ್ಲಿ ಆಗಬೇಕು.. ಇದಕ್ಕಿಂತ ಪ್ರಾಶಸ್ತ್ಯ ಸ್ಥಳ ಬೇರೆ ಇಲ್ಲ.
ಗಂಗಾ ನದಿ ಅಂದರೆ ಪರಮಾತ್ಮನ ಪಾದವನ್ನು ತೊಳೆದ ನೀರು.ತುಳಸಿ ಸಹಿತವಾಗಿ ಹರಿದುಕೊಂಡು ಬರುವಂತಹ ಪಾದೋದಕವೇ ಗಂಗಾನದಿ.
ಯಾಕೆ ಗಂಗಾನದಿಗೆ ಇಷ್ಟು ಮಹತ್ವ ಅಂದರೆ
ಭಗವಂತ ಶ್ರೀವಾಮನರೂಪ ಅವತಾರ ತಾಳಿದಾಗ ಬಲಿ ಚಕ್ರವರ್ತಿ ಮಾಡುವ ಯಾಗಕ್ಕೆ ಹೋಗಿದ್ದಾನೆ.
ಅವನ ಬಳಿ ಮೂರು ಪಾದದಷ್ಟು ಭೂಮಿಯನ್ನು ಬೇಡಿ ಶ್ರೀ ತ್ರಿವಿಕ್ರಮರೂಪಿ
ಯಾಗಿ ಬೆಳೆದು ನಿಂತಿದ್ದಾನೆ
ಅವಾಗ ಶ್ರೀತ್ರಿವಿಕ್ರಮ ರೂಪಿ ಪರಮಾತ್ಮನ ಅಂಗುಷ್ಟದ ನಖ ಬ್ರಹ್ಮಾಂಡದ ಕಟಾಹಕ್ಕೆ ತಗುಲಿತು..ಆ ಬ್ರಹ್ಮಾಂಡದ ಕಟಾಹ ದಪ್ಪ ಎಷ್ಟು ಇತ್ತು ಅಂದರೆ ನೂರು ಕೋಟಿ ಯೋಜನೆ ದಪ್ಪ ಇತ್ತು.
ಅಂತಹ ಬ್ರಹ್ಮಾಂಡದ ಕಟಾಹ ದೊಳಗಿಂದ ನೀರು ಬಂದಿದ್ದು ನೋಡಿ ಶ್ರೀಬ್ರಹ್ಮ ದೇವರು ಅದನ್ನು ಕಮಂಡಲುವಿನಲ್ಲಿ ಹಿಡಿದು ತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದಿದ್ದಾರೆ.
ಅದೇ ಗಂಗಾ ನದಿ..
ಆಮೇಲೆ ಗಂಗೆ
ಸಾವಿರಾರು ವರ್ಷಗಳ ಕಾಲ ಸತ್ಯಲೋಕದಲ್ಲಿ ಇದ್ದು ನಂತರ ಶ್ರೀ ಶಿಂಶುಮಾರ ಲೋಕಕ್ಕೆ ಬರುತ್ತಾಳೆ.
ಅಲ್ಲಿ ಪರಮಾತ್ಮ ಚೇಳಿನ ಆಕಾರದಲ್ಲಿ ಇದ್ದಾನೆ.
ಅಲ್ಲಿ ಚೇಳಿನ ಬಾಲದ ಕೊಂಡಿಯ ತುದಿ ಭಾಗದಲ್ಲಿ ಇರುವ ಧ್ರುವ ಮಹಾರಾಜರು ಅದನ್ನು ಕೈಯಲ್ಲಿ ತೆಗೆದುಕೊಂಡು ಪರಮಾತ್ಮನ ಪಾದೋದಕ, ಶ್ರೀತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದದ್ದು ಅಂತ ಹೇಳಿ ಭಕ್ತಿ ಇಂದ ಅದನ್ನು ಪ್ರೋಕ್ಷಣೆ ಮಾಡಿಕೊಳ್ಳುವರು.
ಆ ನಂತರ ಅಲ್ಲಿ ಇಂದ ಸಪ್ತರ್ಷಿಗಳ ಲೋಕಕ್ಕೆ ಶ್ರೀಗಂಗಾದೇವಿಯು ಬರುತ್ತಾಳೆ. ಅಲ್ಲಿ ಸಹ ಸಪ್ತರ್ಷಿಗಳು ಪ್ರೋಕ್ಷಣೆ ಮಾಡಿಕೊಂಡು ಧರಿಸಿದ್ದಾರೆ.
ಆ ನಂತರ ಚಂದ್ರ ಮಂಡಲಕ್ಕೆ ಬಂದು ಆ ನಂತರ ಮೇರು ಪರ್ವತಕ್ಕೆ ಬರುತ್ತಾಳೆ...
ಅಲ್ಲಿ ನಾಲ್ಕು ದಿಕ್ಕಿನಲ್ಲಿ ಇಳಿಯುತ್ತಾಳೆ.
ಪೂರ್ವ ದಿಕ್ಕಿನಲ್ಲಿ ಸೀತಾ ಎಂದು
ದಕ್ಷಿಣ ದಿಕ್ಕಿನಲ್ಲಿ ಅಲಕಾನಂದ ಎಂದು
ಪಶ್ಚಿಮ ದಿಕ್ಕಿನಲ್ಲಿ ಚಕ್ಷು
ಮತ್ತು ಉತ್ತರದಲ್ಲಿ ಭದ್ರ ಅಂತ ನಾಮದಿಂದ ಕರೆಸಿಕೊಂಡು ಹರಿದು ಹೋಗುತ್ತಾಳೆ.
ಅಲಕನಂದಾ
ನದಿಯಾಗಿ ಹರಿದು ಗಂಧಮಾದನ ಪರ್ವತಕ್ಕೆ ಬಂದು ಅಲ್ಲಿಂದ ಮಾನಸ ಸರೋವರ ಕ್ಕೆಬರುತ್ತಾಳೆ..
ಅಲ್ಲಿ ತುಂಬಿ ಹರಿದಾಗ ಸರಯೂ ನದಿ ಅಂತ ಕರೆಸಿಕೊಂಡು ಹಿಮಾಲಯ ಪರ್ವತಕ್ಕೆ ಬರುತ್ತಾಳೆ.
ಅಲ್ಲಿ ಸಹ ಹರಿದಾಗ ಅವಳನ್ನು ಹಿಮವಂತನ ಪುತ್ರಿ ಅಂತ ಸಹ ಕರೆಯುತ್ತಾರೆ.
ಆ ನಂತರ ದೇವತೆಗಳು ಬಂದು ನಮಗೆಲ್ಲ ಬೇಕು ನೀನು ಅಂತ ಹೇಳಿ ನಮ್ಮ ಲೋಕಕ್ಕೆ ಬಾ ಅಂತ ಕರೆದುಕೊಂಡು ಹೋಗುತ್ತಾರೆ...
ಆ ನಂತರ
ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು .ಶ್ರೀಕಪಿಲ ರೂಪಿ ಪರಮಾತ್ಮ ನಿಗೆ ಅಪಹಾಸ್ಯ, ಮಾಡಿದ ಪರಿಣಾಮವಾಗಿ ಸುಟ್ಟು ಭಸ್ಮ ವಾಗಿದ್ದರು.
ಅವರಿಗೆ ಸದ್ಗತಿ ಆಗಲು ಗಂಗೆ ಭೂಲೋಕಕ್ಕೆ ಹರಿದು ಬರಬೇಕು. ಅದಕ್ಕೆ ಭಗೀರಥ ಮಹಾರಾಜ ತಪಸ್ಸು ಮಾಡಿ ಗಂಗಾದೇವಿ ಯನ್ನು ಭೂಲೋಕಕ್ಕೆ ಕರೆಸಿಕೊಂಡ.*
ಜೇಷ್ಠ ಶುದ್ದ ದಶಮಿ, ಮಂಗಳವಾರ, ದಿನ ಹಸ್ತ ನಕ್ಷತ್ರ ,ದಲ್ಲಿ ಶ್ರೀಗಂಗಾದೇವಿಯು ಸ್ವರ್ಗದಿಂದ ಭೂಲೋಕಕ್ಕೆ ಇಳಿದು ಬಂದಳು.
ಗಂಗೆಯು ಬರುವ ರಭಸವನ್ನು ನೋಡಿ ತನ್ನ ಜಟೆಯಲ್ಲಿ ಬಂಧಿಸಿ ದವರು ಶ್ರೀರುದ್ರ ದೇವರು...
ಆ ನಂತರ ಭಗೀರಥ ಅವರ ಬಳಿ ಪ್ರಾರ್ಥನೆ ಮಾಡಿದಾಗ ರುದ್ರ ದೇವರ ಜಟೆ ಇಂದ ಶ್ರೀಗಂಗಾದೇವಿಯು ಭೂಲೋಕಕ್ಕೆ ಬರುತ್ತಾಳೆ...
ಬರುವಾಗ ಜಹ್ನು ಋಷಿಗಳ ಆಶ್ರಮ ವನ್ನು ಕೊಚ್ಚಿ ಕೊಂಡು ಹೋಗುವುದನ್ನು ಕಂಡು ಋಷಿಗಳು ಸಂಪೂರ್ಣ ಪಾನ ಮಾಡುತ್ತಾರೆ...
ಮತ್ತೆ ಭಗೀರಥ ಅವರನ್ನು ಒಲಿಸಿಕೊಂಡು ಅವರ ಕಿವಿಯಿಂದ ಶ್ರೀಗಂಗಾದೇವಿ ಹೊರಬರುತ್ತಾಳೆ.
ಹಾಗೆ ಬಂದ ಕಾರಣದಿಂದ ಭಾಗೀರಥಿ, ಜಾಹ್ನವಿ ಅಂತ ಹೆಸರು ಬಂತು.
ಸಮುದ್ರ ದ್ವಾರ ಪಾತಾಳ ಲೋಕವನ್ನು ಹೋಗಿ ಸಗರ ಮಹಾರಾಜನ ಮಕ್ಕಳಿಗೆ ಉದ್ದಾರ ಮಾಡಿದಳು...
ಹೀಗೆ ಗಂಗೆಗೆ ತ್ರಿಪಥಗಾ ಅಂತ ಹೆಸರು ಬಂದಿತು...
ದೇವಲೋಕದಿಂದ ಭೂಲೋಕಕ್ಕೆ,
ಭೂಲೋಕದಿಂದ ಪಾತಾಳ ಲೋಕಕ್ಕೆ ಹರಿದು ಕೊಂಡು ಬಂದಳು.
ಹೀಗೆ ಅಂತರಿಕ್ಷ, ಭೂಮಿ ಮತ್ತು ಪಾತಾಳ ಲೋಕವನ್ನು ಹರಿದು ಬಂದ ಕಾರಣ ತ್ರಿಪಥಗಾ ಅಂತ ಹೆಸರಿನಲ್ಲಿ ಕರೆಯಲ್ಪಟ್ಟಳು...
ದೇವಲೋಕದಲ್ಲಿ ಹರಿಯುವಾಗ ಮಂದಾಕಿನಿ,
ಭೂಮಿಯಲ್ಲಿ ಹರಿಯುವಾಗ ಭಾಗೀರಥಿ,
ಪಾತಾಳ ಲೋಕಕ್ಕೆ ಹರಿದು ಹೋದಾಗ ಅದೇ ಗಂಗಾದೇವಿ ಗೆ ಭೋಗವತಿ ಅಂತ ಹೆಸರು ಬಂತು.
ಅಂದರೆ ಶ್ರೀಗಂಗಾದೇವಿಯು
ಮೇಲಿನ ಲೋಕದಲ್ಲಿ ಇದ್ದರು ಕೆಳಗೆ ಕೆಳಗೆ ಇಳಿಯುತ್ತಾ ಬಂದು ಪಾತಾಳ ಲೋಕವನ್ನು ಸೇರಿ ಯಾರು ಎಷ್ಟು ಕೆಳಮಟ್ಟದಲ್ಲಿ ಇದ್ದರು ಸಹ ಉದ್ದಾರ ಮಾಡುತ್ತೀ ತಾಯಿ ನೀನು ಅಂತ ವರ್ಣನೆಯನ್ನು ಮಾಡುತ್ತಾರೆ..
ಸ್ನಾನ ಮಾಡುವಾಗ ನಿತ್ಯ ಶ್ರೀಗಂಗಾದೇವಿಯ ಸ್ಮರಣೆ, ನಿತ್ಯ ಗಂಗಾಪೂಜೆ ಮಾಡುವದರಿಂದ ಒಳ್ಳೆಯ ದು.
ಇಂದು ವಿಶೇಷ ವಾಗಿ ಶ್ರೀಗಂಗಾದೇವಿಯ ಪೂಜೆ ಮಾಡುವದರಿಂದ, ನಮ್ಮ ದಶವಿಧ ಪಾಪಗಳನ್ನು ಕಳೆಯುವವಳು.
ದಶವಿಧ ಪುಷ್ಪಗಳಿಂದ ದಶಬಗೆಯ ಭಕ್ಷ್ಯ ಗಳಿಂದ ದಶ ದೀಪಗಳಿಂದ ಅರ್ಚನೆ ಮಾಡಬೇಕು ಎಂದು ಬಲ್ಲವರು ಹೇಳುತ್ತಾರೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಶ್ರೀ ಭಾಗೀರತಿತಾಯೆ ಶೃಂಗಾರ ಶುಭಕಾಯೆ
..
ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ|
ಹಾರಿ ಹೋಗುವದು ಸಿದ್ದ|
ಶ್ರೀ ರಮಣ ವಿಜಯವಿಠ್ಠಲ ರೇಯನ|
ಪಾದ ವಾರಿಜ ಪೊಗಳುವಂತೆ ಬುದ್ದಿ ಪಾಲಿಸುವದು||
🙏ಶ್ರೀ ಭೂರಮಣನ ತನಯೆ ನಿನಗೆ ಅನಂತ ನಮನಗಳು🙏
***
ಗಂಗಾ ಸಪ್ತಮಿ. vaishakha shukla saptami
ಗಂಗಾ ಸಪ್ತಮಿ ಯ ಮಹತ್ವವನ್ನು 'ಪದ್ಮ ಪುರಾಣ', 'ಬ್ರಹ್ಮ ಪುರಾಣ' ಹಾಗೂ 'ನಾರದ ಪುರಾಣ' ಗಳಲ್ಲಿ ನೋಡಬಹುದು.
ಭಗೀರಥ ಮಹಾರಾಜನ ಪೂರ್ವಜರು ಶ್ರೀಕಪಿಲ ಮಹರ್ಷಿಯ ಶಾಪಕ್ಕೆ ತುತ್ತಾಗಿದ್ದರು. ಇವರ ಮುಕ್ತಿಗಾಗಿ ಭಗೀರಥ ತಪಸ್ಸು ಮಾಡಿ ಗಂಗೆ ಯನ್ನು ಪ್ರಾರ್ಥಿಸಿ, ಜೇಷ್ಠಮಾಸ ದಶಮಿಯಂದು ಭೂಲೋಕಕ್ಕೆ ಕರೆತಂದ. ಈ ದಿನವನ್ನು ಗಂಗಾವತರಣ ದಿನ ಎಂದು ಕರೆಯಲಾಗುತ್ತದೆ.
ಭುವಿಗಿಳಿದ ಗಂಗೆ ತಾನು ಮೋಕ್ಷದಾಯಕಳು ಎಂಬ ಅಹಂ ನಿಂದ ಭೋರ್ಗರೆದು ಹರಿಯಲಾರಂಭಿಸುತ್ತಾಳೆ. ಈ ವೇಳೆ ಶ್ರೀಜಹ್ನು ಮಹರ್ಷಿಯ ಆಶ್ರಮ ನೀರಿನಲ್ಲಿ ಕೊಚ್ಚಿ ಹೋಯಿತು. ಇದರಿಂದ ಕುಪಿತರಾದ ಜಹ್ನು ಮಹರ್ಷಿಗಳು ಗಂಗೆಯನ್ನು ಆಪೋಶಿಸಿದರು(ಕುಡಿದರು).
ಇದನ್ನು ನೋಡಿ ದೇವತೆಗಳು ಹಾಗೂ ಗಂಗೆಯನ್ನು ಭುವಿಗೆ ಕರೆ ತಂದಿದ್ದ ಭಗೀರಥ ಗಾಭರಿಗೊಂಡರು. ಎಲ್ಲರೂ ಸೇರಿ ಜಹ್ನು ಮಹರ್ಷಿಯನ್ನು ಪರಿಪರಿಯಾಗಿ ಪ್ರಾರ್ಥಿಸಿದರು.
ಕೋಪದಿಂದ ಇದ್ದ ಜಹ್ನು ಮಹರ್ಷಿ, ಇವರ ಮನವಿಗೆ ಮನಸೋತು, ಗಂಗೆಗೆ ಅಹಂಕಾರ ತೊಲಗಬೇಕು. ಹಾಗಾಗಿ ಹನ್ನೊಂದು ತಿಂಗಳ ನಂತರ ಗಂಗೆಯನ್ನು ಹೊರಹಾಕುವುದಾಗಿ ಭರವಸೆ ನೀಡಿದರು.
ಕೊಟ್ಟ ಮಾತಿನಂತೆ ಗಂಗೆಯನ್ನು ತನ್ನ ಬಲ ಕಿವಿಯಿಂದ ವೈಶಾಖ ಶುಕ್ಲ ಪಕ್ಷ ಸಪ್ತಮಿ ಯಂದು ಹೊರಗೆ ಹರಿಯ ಬಿಟ್ಟರು. ಈ ದಿನ ಗಂಗೆಯು ಪುನರ್ಜನ್ಮವನ್ನು ಪಡೆದದ್ದರಿಂದ ಗಂಗೋತ್ಪತ್ತಿ ದಿನ ಎನ್ನಲಾಗುತ್ತದೆ.
ಗಂಗೆಯು ಜಹ್ನು ಋಷಿಯ ಕಿವಿಯಿಂದ ಹೊರಬಂದ ಕಾರಣ, ಋಷಿಯ ಮಗಳೆಂದು ಭಾವಿಸಿ ಜಾಹ್ನವಿ ಎಂದು ಕರೆಯಲಾಗುತ್ತದೆ.
ಗಂಗೆ ಪವಿತ್ರ ನದಿಯಾಗಿರುವುದರಿಂದ ದೇಶದಲ್ಲಿನ ಎಲ್ಲ ಸರೋವರ, ನದಿ, ಕೆರೆ, ಕಲ್ಯಾಣಿ, ಕುಂಟೆ, ಬಾವಿಗಳಲ್ಲಿನ ನೀರನ್ನು ಗಂಗಾಜಲ ವೆಂದೇ ಭಾವಿಸಲಾಗುತ್ತದೆ. ನಾವು ಸ್ನಾನ ಮಾಡುವ, ಪೂಜೆಗೆ ಬಳಸುವ ಹಾಗೂ ಕುಡಿಯುವ ನೀರನ್ನು ಗಂಗೆ ಯೆಂದೇ ಪೂಜ್ಯ ಭಾವನೆಯಿಂದ ಬಳಸುತ್ತೇವೆ.
ಇಂತಹ ಪವಿತ್ರ ನದಿ ಎರಡನೇ ಬಾರಿ ಮರುಹುಟ್ಟು ಪಡೆದ ದಿನ. ಆ ಗಂಗಾದೇವಿ ಯನ್ನು ಸ್ಮರಿಸೋಣ, ಪೂಜಿಸೋಣ.
ಈ ದಿನ, ಸ್ನಾನ ಮಾಡುವಾಗ ನದಿ, ತೊರೆ, ಬಾವಿ, ನಲ್ಲಿ ಈ ರೀತಿ ಯಾವುದೇ ನೀರಿರಲಿ. ಆ ನೀರಿನಲ್ಲಿ ಗಂಗೆಯನ್ನು ಮನಃಪೂರ್ತಿ ಪ್ರಾರ್ಥಿಸಿ, ಗಂಗಾದಿ ಸಪ್ತ ನದಿಗಳ ಸನ್ನಿಧಾನ ಪ್ರಾಪ್ತಿಯಾಗಲಿ ಎಂದು ಅನುಸಂಧಾನ ಮಾಡಿ, ನಂತರ ಸ್ನಾನ ಮಾಡಿ.
ಈ ದಿನ ಮತ್ತೊಂದು ವಿಶೇಷ ಭಗೀರಥ ಜಯಂತಿ. ಶ್ರೀಹರಿಯ ಚರಣದಲ್ಲಿ ಉದಿಸಿದ ಗಂಗೆಯನ್ನು ತಮ್ಮ ತಪಸ್ಸಿನ ಮೂಲಕ ಭೂಲೋಕಕ್ಕೆ ತಂದಂತಹ ಮಹಾನುಭಾವರು ಭಗೀರಥ ಋಷಿ. ಇಂತಹ ಶ್ರೇಷ್ಠ ಋಷಿ ಭುವಿಯಲ್ಲಿ ಜನ್ಮತಾಳಿದ ದಿನ. ನಮ್ಮ ಪಾಪಗಳನ್ನು ತೊಳೆಯುವ ದೇವ ಗಂಗೆಯನ್ನು ಭೂಲೋಕಕ್ಕೆ ಕರೆತಂದು ಉಪಕರಿಸಿದ ಮಹರ್ಷಿಗಳನ್ನು ಸ್ಮರಿಸೋಣ, ನಮಿಸೋಣ...
ಇದರ ಜತೆ ಪುಷ್ಯಾರ್ಕಯೋಗ ಮತ್ತೊಂದು ವಿಶೇಷ.
ಭಾನುವಾರದಂದು ಪುಷ್ಯಾನಕ್ಷತ್ರ ಇದ್ದರೆ, ಆ ದಿನ ಪುಷ್ಯಾರ್ಕಯೋಗ ಎನ್ನಲಾಗುತ್ತದೆ. ಪುಷ್ಯಾ ನಕ್ಷತ್ರ, ದೇವ ಗುರು ಬೃಹಸ್ಪತಿ ಗೆ ಮೀಸಲು. ಈ ದಿನ ಗುರುಗಳನ್ನು ದರ್ಶಿಸೋಣ, ಸ್ತುತಿಸೋಣ, ಸ್ಮರಿಸೋಣ.
ಗುರುವಿನ ಮಹತ್ವ
ಚಿಕ್ಕ ಇರುವೆಯೊಂದು ಹರಿದ್ವಾರ ಕ್ಷೇತ್ರದಿಂದ ಹೃಷಿಕೇಶಕ್ಕೆ ಪಯಣಿಸಬೇಕಾದರೆ 2-3 ಜನ್ಮಗಳಾದರೂ ಬೇಕು.
ಅದೇ ಇರುವೆ ಹರಿದ್ವಾರದಿಂದ ಹೃಷಿಕೇಶಕ್ಕೆ ಹೋಗುವವರ ವಸ್ತ್ರದ ಮೇಲೆ ಕುಳಿತರೆ 3ರಿಂದ 4ಗಂಟೆಗಳಲ್ಲಿ ಸುಲಭವಾಗಿ ತಲುಪಬಹುದು.
ಹಾಗೆಯೇ ನಮ್ಮ ಸ್ವಂತ ಪ್ರಯತ್ನದಿಂದ ಈ ಭವಸಾಗರವನ್ನು ದಾಟುವುದು ಬಹು ಕಷ್ಟ. ಸುಲಭ ಸಾಧನಕ್ಕಾಗಿ ಗುರುವಿನ ಕೈ ಹಿಡಿದು, ಅವರು ತೋರಿದ ಮಾರ್ಗದಲ್ಲಿ ಭಕ್ತಿಯಿಂದ ಸಾಗಿದರೆ ಸುಲಭವಾಗಿ ಈ ಭವಸಾಗರವನ್ನು ದಾಟಬಹುದು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಗಂಗಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕ ಶ್ರೀತ್ರಿವಿಕ್ರಮ ದೇವರ ಅನುಗ್ರಹ ಎಲ್ಲರಿಗೂ ಪ್ರಾಪ್ತಿಯಾಗಲಿ.
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ
ಆನೇಕಲ್.
ಇಂದು, ಗಂಗಾವತರಣ. ದೇವಲೋಕದ ಗಂಗೆ ಧರೆಗೆ ಇಳಿದ ದಿನ.
ಹಿಂದೆ ಶ್ರೀಹರಿ ತ್ರಿವಿಕ್ರಮ ರೂಪ ತಾಳಿದಾಗ, ಒಂದು ಪಾದವನ್ನು ದೇವಲೋಕಕ್ಕೆ ಚಾಚಿದ. ಆಗ ಸಂತಸಗೊಂಡ ಬ್ರಹ್ಮದೇವರು ಪರಮಾತ್ಮನ ಪಾದವನ್ನು ಜಲದಿಂದ ತೊಳೆದಿದ್ದ. ನಂತರ ಶ್ರೀಹರಿಯ ಪಾದೋದಕವನ್ನು ತನ್ನ ಕಮಂಡಲದಲ್ಲಿ ಸಂಗ್ರಹಿಸಿದ. ಆ ಜಲವೇ ಪರಮ ಪಾವನಕರವಾದ ಗಂಗಾಜಲ.
ಇಂತಹ ಪರಮ ಪಾವನಕರವಾದ, ಮಾನವನ ಪಾಪಗಳನ್ನು ತೊಳೆದು, ಪುಣ್ಯ ಕರುಣಿಸುವ ತಾಯಿ ಗಂಗೆ ದೇವನದಿಯಾಗಿ ಭೂಮಿಯಲ್ಲಿ ಹರಿದ ದಿನ.
ಭಗೀರಥ ಮಹಾರಾಜನ ಪೂರ್ವಜರು ಶ್ರೀಕಪಿಲ ಮಹರ್ಷಿಯ ಶಾಪಕ್ಕೆ ತುತ್ತಾಗಿದ್ದರು. ಇವರ ಮುಕ್ತಿಗಾಗಿ ಭಗೀರಥ ತಪಸ್ಸು ಮಾಡಿ ಗಂಗೆ ಯನ್ನು ಪ್ರಾರ್ಥಿಸಿ, ಜೇಷ್ಠಮಾಸ ದಶಮಿಯಂದು ಭೂಲೋಕಕ್ಕೆ ಕರೆತಂದ. ಈ ದಿನವನ್ನು ಗಂಗಾವತರಣ ದಿನ ಎಂದು ಕರೆಯಲಾಗುತ್ತದೆ.
ಹಿಂದೆ ಇಕ್ಷ್ವಾಕು ವಂಶದ ಸಗರ ಎಂಬ ಮಹಾರಾಜನಿದ್ದ. ಈತ ನೂರೊಂದು ಅಶ್ವಮೇಧ ಯಾಗ ಮಾಡಿ, ಸಾಕಷ್ಟು ಕೀರ್ತಿ ಗಳಿಸಿದ್ದ. ಒಮ್ಮೆ ಈ ರಾಜ ಕೊನೆಯ ಯಾಗ ಮಾಡುತ್ತಿದ್ದ. ಈ ಯಾಗ ಮಾಡಿದರೆ, ಆತನಿಗೆ ಇಂದ್ರ ಪದವಿ ದೊರಕುತ್ತದೆಂದು ಗಾಭರಿಗೊಂಡ ಇಂದ್ರ, ಅಸೂಯೆಯಿಂದ ಅಲಂಕರಿಸಿದ್ದ ಯಾಗದ ಕುದುರೆಯನ್ನು ಕದ್ದೊಯ್ದು ಶ್ರೀಕಪಿಲಮಹರ್ಷಿಗಳ ಆಶ್ರಮದಲ್ಲಿ ಕಟ್ಟಿಹಾಕಿದ. ಯಾಗದ ಕುದುರೆ ಕಾಣದೆ ಸಗರ ಮಹಾರಾಜ ತಲ್ಲಣಿಸಿ ಹೋದ. ಕೂಡಲೇ ಯಜ್ಞಾಶ್ವವನ್ನು ಹುಡುಕಿ ತರುವಂತೆ ತನ್ನ ಮಕ್ಕಳಿಗೆ ಆಜ್ಞಾಪಿಸಿದ. ರಾಜನ ಮಕ್ಕಳು ಕುದುರೆಯನ್ನು ಹುಡುತ್ತಾ ಬರುತ್ತಿದ್ದಾಗ, ಕಪಿಲ ಮಹರ್ಷಿಯ ಆಶ್ರಮದಲ್ಲಿ ಕುದುರೆ ಇರುವುದು ಕಂಡುಬಂತು. ಹುಂಬರಾಗಿದ್ದ ರಾಜಕುಮಾರರರು, ಕುದುರೆಯನ್ನು ಕಪಿಲ ಮಹರ್ಷಿಯೇ ಕದ್ದು ತಂದು ಕಟ್ಟಿರುವನೆಂದು ತಿಳಿದು, ಅಹಂಕಾರದಿಂದ ತಪೋಮಗ್ನರಾಗಿದ್ದ ಋಷಿಯ ತಪಸ್ಸನ್ನು ಭಂಗ ಪಡಿಸಿದರು. ತಪಸ್ಸಿಗೆ ಭಂಗ ಉಂಟಾದ ಕಾರಣ, ಕುಪಿತಗೊಂಡ ಕಪಿಲ ಮುನಿ ಸಗರನ ಅಸಂಖ್ಯ ಮಕ್ಕಳನ್ನು ಸುಟ್ಟು ಬೂದಿ ಮಾಡುತ್ತಾರೆ.
ತನ್ನೆಲ್ಲ ರಾಜಕುಮಾರರನ್ನು ಕಳೆದುಕೊಂಡ ಸಗರ ಮಹಾರಾಜ ಚಿಂತಿತನಾಗುತ್ತಾನೆ. ಇದಾದ ಮೇಲೆ ಈತನ ಮೊಮ್ಮಗ ಅಂಶುಮಂತ, ತಾತನು ಕೈಗೊಂಡ ಯಾಗ ಪೂರೈಸುವ ಉದ್ದೇಶದಿಂದ ಯಜ್ಞಾಶ್ವವನ್ನು ಹುಡುಕುತ್ತಾ ಹೊರಟ. ಕಪಿಲ ಆಶ್ರಮದ ಬಳಿ ಬಂದಾಗ, ಅಲ್ಲಿ ಯಜ್ಞಾಶ್ವದ ಜತೆ ಆವರಣದಲ್ಲಿ ಭಸ್ಮರಾಶಿಯನ್ನು ಕಾಣುತ್ತಾನೆ. ಆಶ್ಚರ್ಯಚಕಿತನಾಗಿ ಕಪಿಲ ಮುನಿಗಳ ಪಾದಕ್ಕೆರಗಿ, ನಡೆದ ಸಂಗತಿಯನ್ನು ತಿಳಿದುಕೊಳ್ಳುತ್ತಾನೆ.
ನಂತರ ಋಷಿಗಳಲ್ಲಿ ಕ್ಷಮೆಯಾಚಿಸಿ ತನ್ನ ಪಿತೃಗಳಿಗೆ ಸದ್ಗತಿ ದೊರಕಿಸುವಂತೆ ಬೇಡುತ್ತಾನೆ.
ಸಂಪ್ರೀತರಾದ ಕಪಿಲ ಋಷಿ, ದೇವಲೋಕದ ಗಂಗೆ ಈ ಭಸ್ಮದ ರಾಶಿ ಮೇಲೆ ಹರಿದರೆ, ರಾಜಕುಮಾರರು ಬದುಕುತ್ತಾರೆ ಎಂದು ಹೇಳಿದರು.
ಇದನ್ನು ಕೇಳಿದ ಅಂಶುಮಂತ ಆನಂದದಿಂದ ಪುಳಕಿತಗೊಂಡ. ಆದರೆ ತಪಸ್ಸು ಹೇಗೆ ಆಚರಿಸಬೇಕೆಂದು ತಿಳಿಯದೇ ಸುಮ್ಮನಾದ. ನಂತರ ಈತನ ಮಗ ದಿಲೀಪನಿಂದಲೂ ಸಾಧ್ಯವಾಗಲಿಲ್ಲ. ಕೊನೆಗೆ ದಿಲೀಪನ ಮಗನಾದ ಭಗೀರಥ ಮಹಾರಾಜ ತಪಸ್ಸು ಆಚರಿಸಿ ಗಂಗೆಯನ್ನು ಮೆಚ್ಚಿಸಿದ. ಈತನ ಭಕ್ತಿಗೆ ಒಲಿದ ಶ್ರೀಹರಿಯ ಚರಣದಿಂದ ಉದಿಸಿ ಬ್ರಹ್ಮನ ಕಮಂಡಲದಲ್ಲಿ ಸಂಗ್ರಹಗೊಂಡ ಗಂಗೆ, ಭೂಮಿಗೆ ಧುಮ್ಮಿಕ್ಕುವ ಮೂಲಕ ಧರೆಗೆ ಬರುತ್ತಾಳೆ.
ಹಾಗಾಗಿ ಭಕ್ತನ ಕೋರಿಕೆ ಮೇರೆಗೆ ದೇವಲೋಕದಿಂದ ಭೂಲೋಕಕ್ಕೆ ಆಗಮಿಸಿದ ಈ ದಿನವನ್ನು ಗಂಗಾವತರಣ ದಿನ ಎನ್ನಲಾಗುತ್ತದೆ.
ಗಂಗಾವತರಣ ಜೇಷ್ಠಮಾಸ ದಶಮಿಯಂದು ನಡೆಯಿತು. ಆ ದಿನ ಈ ಶ್ಲೋಕದಲ್ಲಿರುವಂತೆ
ಜೇಷ್ಠಮಾಸೇ ಸಿತೇ ಪಕ್ಷೇ ದಶಮ್ಯಾಂ ಬುಧಹಸ್ತಯೋಃ|
ವ್ಯತೀಪಾತೇ ಗರಾನಂದೇ ಕನ್ಯಾಚಂದ್ರೇ ವೃಷೇ ರವೌ ||
ಎನ್ನುವಂತೆ ಗಂಗಾವತರಣದ ದಿನ ಹತ್ತು ಯೋಗಗಳು ಇದ್ದವಂತೆ.
: ಈ ವರ್ಷ ಗಂಗಾವತರಣದ ದಿನವಾದ ಇಂದು 7 ಯೋಗಗಳಿವೆ. 1.ಜೇಷ್ಠ ಮಾಸ, 2.ಶುಕ್ಲಪಕ್ಷ, 3.ದಶಮಿ ತಿಥಿ, 4.ಹಸ್ತಾ ನಕ್ಷತ್ರ, 5.ಗರ ಕರಣ, 6.ಕನ್ಯಾ ರಾಶಿಯಲ್ಲಿ ಚಂದ್ರ, 7. ವೃಷಭದಲ್ಲಿ ಸೂರ್ಯನಿದ್ದಾನೆ.(ಇವು 7 ಯೋಗಗಳು)
ಈ ದಿನ ಸಾಧ್ಯವಾದರೆ ಗಂಗಾನದಿಯಲ್ಲಿ, ಇಲ್ಲವಾದರೆ ಸಮೀಪದ ನದಿಯಲ್ಲಿ ಸ್ನಾನ ಮಾಡಿ. ಸಾಧ್ಯವಿಲ್ಲದವರು, ಮನೆಯಲ್ಲೇ ಗಂಗಾದೇವಿಯನ್ನು ಸ್ಮರಿಸಿ ಗಂಗಾ ಸ್ನಾನ ಮಾಡಿ. ಗಂಗಾಪೂಜೆ ಮಾಡಿ.
ಶ್ರೀಮದ್ರಾಘವೇಂದ್ರತೀರ್ಥ ಗುರ್ವಾಂತರ್ಗತ ಭಾರತಿರಮಣ ಶ್ರೀಮುಖ್ಯಪ್ರಾಣಾಂತರ್ಗತನಾದ
ಗಂಗಾಜನಕನಾದ ವಾಸುದೇವ ನಾಮಕ ಶ್ರೀಕಪಿಲಮುನಿಗಳು ನಮ್ಮನ್ನು ಸಲಹಲಿ.
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
***
ಗಂಗೆಯಲ್ಲಿ ಮೀಯುವುದರಿಂದ ಮನುಷ್ಯ ಹಿಂದಿನಿಂದ ವಯಸ್ಸುಗಳಲ್ಲಿ ಮಾಡಿದ ಪಾಪಗಳನ್ನು ಪರಿಹರಿಸಿಕೊಂಡು ಉತ್ತಮ ಗತಿಯನ್ನು ಪಡೆಯುವನು...
"ಪೂರ್ವೇ ವಯಸಿ ಕರ್ಮಾಣಿ ಕೃತ್ವಾ ಪಾಪಾನಿ ಯೇ ನರಾಃ..ಪಶ್ಚಾದ್ ಗಂಗಾ ನಿಷೇವಂತೇ ತೇಽಪಿ ಯಾಂತ್ಯುತ್ತಮಾಂ ಗತಿಮ್"
ಸೂರ್ಯ ಉದಯಿಸುವಾಗ ಹೇಗೆ ಕತ್ತಲನ್ನು ದೂರಮಾಡುವನೋ ಹಾಗೆಯೇ ಗಂಗೆಯಲ್ಲಿ ಮುಳುಗುವವ ಪಾಪಗಳನ್ನು ಕಳೆದುಕೊಳ್ಳುವ..
"ಅಪಹತ್ಯ ತಮಸ್ತೀವ್ರಂ ಯಥಾ ಭಾತ್ಯುದಯೇ ರವಿಃ..ತಥಾಪಹತ್ಯ ಪಾಪ್ಮಾನಂ ಭಾತಿ ಗಂಗಾಜಲೋಕ್ಷಿತಃ"
ಸಾವಿರಾರು ಯುಗಗಳ ತನಕ ಒಂಟಿಕಾಲಲ್ಲಿ ನಿಂತು ಗಂಗೆಯಲ್ಲಿ ತಪಸ್ಸಾಚರಿಸುವುದೂ ಒಂದೆ..ಒಂದು ತಿಂಗಳುಗಳ ಕಾಲ ಗಂಗೆಯ ತಡಿಯಲ್ಲಿ ಬದುಕುವುದೂ ಒಂದೇ...
"ತಿಷ್ಠೇತ್ ಯುಗಸಹಸ್ರಂ ತು ಪದೇನೈಕೇನ ಯಃ ಪುಮಾನ್..ಮಾಸಮೇಕಂ ತು ಗಂಗಾಯಾ ಸಮೌ ಸ್ಯಾತಾಂ ನ ವಾ ಸಮೌ"
ಬೆಂಕಿಗೆ ಬಿದ್ದ ಹತ್ತಿ ಹೇಗೆ ಭಗ್ಗನೆ ಉರುದು ಭಸ್ಮವಾಗುವುದೋ ಹಾಗೆಯೇ ಗಂಗೆಯಲ್ಲಿ ಮುಳುಗಿದವನ ಪಾಪವೂ ಆಗುವುದು..
"ಅಗ್ನೌ ಪ್ರಾಸ್ತಂ ಪ್ರಧೂಯೇತ ಯಥಾ ತೂಲಂ ದ್ವಿಜೋತ್ತಮ..ತಥಾ ಗಂಗಾವಗಾಢಸ್ಯ ಸರ್ವಪಾಪಂ ಪ್ರಧೂಯತೇ"
ದುಃಖದಿಂದ ಪಾರಾಗಬಯಸುವವರಿಗೆ ಗಂಗೆಗಿಂತ ಬೇರೆ ಗತಿಯಿಲ್ಲ..
"ಭೂತಾನಾಮಿಹ ಸರ್ವೇಷಾಂ ದುಃಖೋಪಹತಚೇತಸಾಮ್..ಗತಿಮನ್ವೇಷಮಾಣಾನಾಂ ನ ಗಂಗಾಸದೃಶೀ ಗತಿಃ"
ಸರ್ಪವು ಹೇಗೆ ಗರುಡನ ದರ್ಶನದಿಂದ ವಿಷವನ್ನು ಕಳೆದುಕೊಳ್ಳುವುದೋ ಹಾಗೆಯೇ ಗಂಗೆಯ ದರುಶನದಿಂದ ಪಾಪಗಳೂ ಕೂಡ...
"ಆಚಾರಬಿಟ್ಟು ಪರಮ ಮೈಲಿಗೆಯಾದ ಪಾಪಿಯೂ ಪಶ್ಚಾತ್ತಾಪಪಟ್ಟು ಗಂಗೆಯಲ್ಲಿ ಮಿಂದನಾದರೆ ಮಡಿಯಾಗುವನು
"ವಿನಯಾಚಾರಹೀನಾಶ್ಚ ಅಶಿವಾಶ್ಚ ನರಾಧಮಾಃ..ತೇ ಭವಂತಿ ಶಿವಾ ವಿಪ್ರ ಯೇ ವೈ ಗಂಗಾಮುಪಾಶ್ರಿತಾಃ"
ಮೈಮಾತುಮನಸ್ಸಿನಿಂದಾದ ಪಾಪಗಳು ಗಂಗೆಯ ದರ್ಶನದಿಂದ ಇಲ್ಲವಾಗುವುದು...ಈ ವಿಷಯದಲ್ಲಿ ಸಂಶಯವಿಲ್ಲ...
"ವಾಙ್ಮನಃಕರ್ಮಜೈರ್ಗ್ರಸ್ಥಃ ಪಾಪೈರಪಿ ಪುಮಾನಿಹ..ವೀಕ್ಷ್ಯ ಗಂಗಾಂ ಭವೇತ್ ಪೂತೋ ಅತ್ರ ಮೇ ನಾಸ್ತಿ ಸಂಶಯಃ"
ಗಂಗಾತೀರದ ಮಣ್ಣನ್ನು ಧರಿಸಿದವ ಪಾಪಗಳನ್ನೆಲ್ಲವನ್ನೂ ಕಳೆದುಕೊಂಡು ನಿರ್ಮಲನಾಗಿ ಬೆಳಗುವನು..ಸೂರ್ಯನಂತೆ
"ಜಾಹ್ನವೀತೀರಸಂಭೂತಾಂ ಮೃದಂ ಮೂರ್ಧ್ನಾ ಬಿಭರ್ತಿ ಯಃ..ಬಿಭರ್ತಿ ರೂಪಂ ಸೋಽರ್ಕಸ್ಯ ತಮೋನಾಶಾಯ ನಿರ್ಮಲಮ್"
ಗಂಗೆಯ ದರ್ಶನ..ಸ್ಪರ್ಶನ..ಅವಗಾಹನ(ಮುಳುಗುವಿಕೆಯು)ಪಿತೃಗಳ ತೃಪ್ತಿಗೆ ಕಾರಣವು
"ಸಪ್ತಾವರಾನ್ ಸಪ್ತಪರಾನ್ ಪಿತೃಂಸ್ತೇಭ್ಯಶ್ಚ ಯೇ ಪರೇ..ಪುಮಾಂಸ್ತಾರಯತೇ ಗಂಗಾಂ ವೀಕ್ಷ್ಯ ಸ್ಪೃಷ್ಟ್ವಾವಗಾಹ್ಯ ಚ"
ಬದುಕು ಸಾರ್ಥಕ ಎನಿಸಬೇಕಾದರೆ..ವೇದಾಧ್ಯಯನ ಸಾರ್ಥಕವಾಗಬೇಕಾದರೆ ಗಂಗೆಗೆ ಬಂದು ದೇವತೆಗಳಿಗೆ ಋಷಿಗಳಿಗೆ ಪಿತೃಗಳಿಗೆ ತರ್ಪಣ ನೀಡಬೇಕು..
"ಯ ಇಚ್ಛೇತ್ ಸಫಲಂ ಜನ್ಮ ಜೀವಿತಂ ಶ್ರುತಮೇವ ಚ..ಸ ಪಿತೃಂಸ್ತರ್ಪಯೇದ್ ಗಂಗಾಮಭಿಗಮ್ಯ ಸುರಾಂಸ್ತದಾ"
ದೇಹದಲ್ಲಿ ಬಲವಿದ್ದು ಎಲ್ಲವನ್ನು ಮಡಿಗೊಳಿಸುವ ಗಂಗೆಯನ್ನೊಮ್ಮೆಯೂ ನೋಡದವನ..ಗಂಗೆಯೆಡೆಗೆ ಹೆಜ್ಜೆಯಿಡದವನ ಜನ್ಮ ಕುರುಡನಂತೆ ಕುಂಠನಂತೆಯೇ ಸರಿ
"ಜಾತ್ಯಂಧೈರಿಹ ತುಲ್ಯಾಸ್ತೇ ಮೃತೈಃ ಪಂಗುಭಿರೇವ ಚ..ಸಮರ್ಥಾ ಯೇ ನ ಪಶ್ಯಂತಿ ಗಂಗಾಂ ಪುಣ್ಯಜಲಾಂ ಶಿವಾಮ್"
ಪೂರ್ಣಚಂದ್ರನನ್ನು ನೋಡಿ ಕಣ್ಣುಗಳು ಹೇಗೆ ತಂಪಾಗುವುದೋ ಆ ಅನುಭವವು ಝುಳುಝುಳು ಹರಿಯುವ ಗಂಗೆಯನ್ನು ನೋಡುತ್ತಿದ್ದರೂ ಆಗುವುದು
"ಪೂರ್ಣಮಿಂದುಂ ಯಥಾ ದೃಷ್ಟ್ವಾ ನೃಣಾಂ ದೃಷ್ಟಿಃ ಪ್ರಸೀದತಿ..ತಥಾ ತ್ರಿಪಥಗಾಂ ದೃಷ್ಟ್ವಾ ನೃಣಾಂ ದೃಷ್ಟಿಃ ಪ್ರಸೀದತಿ"
ಹಿರಿಯರಿಗೆ ಗಂಗೆಯ ಬಗೆಗಿನ ಗೌರವ ಈ ಬಗೆಯದ್ದು...
ಈ ಮಾತುಗಳೆಲ್ಲ ಮಹಾಭಾರತದಲ್ಲಿ ಗಂಗಾತನುಜನಾದ ಗಾಂಗೇಯ(ಭೀಷ್ಮ)ನ ಬಾಯಿಯಿಂದ ಬಂದವುಗಳೇ ಆಗಿವೆ...
ಕೇಳಿಕೊಂಡವರು ಧರ್ಮಜನನ್ನು ಎದುರು ಮಾಡಿಕೊಂಡ ಪಾಂಡವರು...ಇಂತಹ ನೂರಾರು ಮಾತುಗಳು ಭಾರತದಲ್ಲಿದೆ..ಇಲ್ಲಿ ಕೆಲವೊಂದನ್ನು ಮಾತ್ರವೇ ಹೆಕ್ಕಲಾಗಿದೆ...
ಮಧ್ವಗುರುಗಳು ಈ ಎಲ್ಲದರ ಹಿನ್ನಲೆಯಲ್ಲೆ ಶಿಷ್ಯರಿಗೆ ಉಪದೇಶಿಸಿದ್ದು ಗಂಗೆಗೆ ಸಾಟಿಯಾದ ತೀರ್ಥ ಇನ್ನೊಂದಿಲ್ಲ ಎಂದು...
".....ನಾಸ್ತಿ ತೀರ್ಥಸಲಿಲಸ್ಯ ಸಮಂ ವಾಃ.."ಎನ್ನುವುದಾಗಿ
ಗಂಗೆಗೂ ಊರಿನ ಕಾರ್ಪೋರೇಶನ್ನವರು ಕಳುಹಿಸುವ ನಳ್ಳಿ ನೀರಿಗೂ ಏನೂ ವ್ಯತ್ಯಾಸವಿಲ್ಲ..ಎರಡು H2O ವೇ ಆಗಿದೆ ಎನ್ನುವವರಿಗೆ ಈ ಮಾತು ಪ್ರಾಯಃ ಈ ಜನ್ಮದಲ್ಲಿ ಅರ್ಥವಾಗುವುದು ತುಸು ಕಷ್ಟವೇ...
ಹಿರಿಯರು ನೀಡಿದ ಮಹತ್ವವನ್ನು ನಮ್ಮ ಚೌಕಟ್ಟಿನೊಳಗಿನ ಬುದ್ಧಿಯಿಂದ ತಿರಸ್ಕರಿಸಲು ಹೋಗದೆ ಬದುಕಿನಲ್ಲೊಮ್ಮೆಯಾದರೂ ಗಂಗೆಗೆಯಲ್ಲಿ ಮುಳುಗುವ ಸಂಕಲ್ಪವನ್ನು ಭಾರತೀಯರಾದ ನಾವು ಪ್ರಾಮಾಣಿಕವಾಗಿ ಮಾಡೋಣ....
ದೊಡ್ಡದಾದರೂ ಸಂಕಲ್ಪ ಪ್ರಾಮಾಣಿಕವಾಗಿದ್ದರೆ ಗಂಗಾಜನಕನು ಗಂಗೆಯಲ್ಲಿ ಮುಳುಗುವ ಭಾಗ್ಯ ನೀಡದಿರನು...
"ಗಂಗೇ ಗಂಗೇ ಮಾಂ ಪುನೀಹಿ(ಓ ಗಂಗೆಯೇ ನನ್ನನ್ನು ಮಡಿಮಾಡು)ಎನ್ನುವ ಮೂಲಕ ದಿನ ನಿತ್ಯ ಮೀಯುವ ಸಣ್ಣ ಸಂಕಲ್ಪ ನಾಳೆ ಬೆಳಗ್ಗೆಯಿಂದಲೇ ನಡೆಸಿ...ದೊಡ್ಡ ಸಂಕಲ್ಪವನ್ನು ಈಡೇರುವಂತೆ ದೇವರು ಅನುಗ್ರಹಿಸಿಯೇ ಅನುಗ್ರಹಿಸುವನು...ಈಗಾಗಲೇ ಹೋದವರಿಗೆ ಮತ್ತೆಮತ್ತೆ ತನ್ನ ಪಾದೋದಕದಲ್ಲಿ ಮುಳುಗುವ ಭಾಗ್ಯ ನೀಡುವನು..ಗಂಗೆಯಲ್ಲಿ ಮುಳುಗಿದಷ್ಟು ಮುಳುಗಿದಷ್ಟು ಮತ್ತಷ್ಟು ಮುಳುಗುವ ಹಸಿವೆ ಹೆಚ್ಚಾಗುವುದೇ ಹೊರತು ಕಡಿಮೆಯಾಗದು ಅಲ್ಲವೇ!!?
(ಸುಮ್ಮನೆ ಗಂಗೆಯ ಸನಿಹದ ಪಲಿಮಾರು ಮಠದ ದೊಡ್ಡ ಹನುಮನ ಸನ್ನಿಧಾನದಲ್ಲಿ ಕೂತು ಮಹಾಭಾರತದ ಅನುಶಾಸನ ಪರ್ವದಲ್ಲಿ ಕಣ್ಣನ್ನು ಹಾಯಿಸುತ್ತಿದ್ದಾಗ ಕಣ್ಣಿಗೆ ಗಂಗೆಯ ಮಹಿಮೆಯನ್ನು ತಿಳಿಸುವ ಈ ಮಾತುಗಳೇ ಬಿದ್ದವು....ತುಂಬ ಖುಷಿಕೊಟ್ಟವು...
ಓದುವ ತಮಗೂ ಖುಷಿ ಕೊಡಬಹುದೆಂದು ತಿಳಿಯುವೆ)
ಕೃಷ್ಣಸಖ,ಮುದರಂಗಡಿ
***
|| #ದಶಹರಾ #ವ್ರತ ||
🌺🌺🌺🌺🌺🌺
ಗಂಗಾಗಂಗೇತಿ ಯೋ ಬ್ರೂಯಾತ್ ಯೋಜನಾನಾಮ್ ಶತೈರಪಿ
ಮುಚ್ಯತೇ ಸರ್ವ ಪಾಪೇಭ್ಯೋ ವಿಷ್ಣುಲೋಕಂ ಸಗಚ್ಛತಿ ||
ದೇವಲೋಕದಲ್ಲಿ ಒಮ್ಮೆ ಬ್ರಹ್ಮ, ಇಂದ್ರ, ಅಗ್ನಿ ಮೊದಲಾದ ಎಲ್ಲ ದೇವತೆಗಳೂ ಸೇರಿದ್ದಾಗ ನದಿಯ ಅಭಿಮಾನಿ ದೇವತೆಯಾದ ಗಂಗೆಯೂ ತನ್ನ ದಿವ್ಯ ರೂಪದಿಂದ ಅಲ್ಲಿಗೆ ಬಂದಳು.
ಆಗ ಗಂಗೆಯ ಸೆರಗು ಗಾಳಿಯ ರಭಸಕ್ಕೆ ಹಾರಿತು ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತಿದ್ದ ಇಕ್ಷ್ವಾಕು ವಂಶದ ರಾಜ ಮಹಾಭಿಷ ಗಂಗೆಯನ್ನು ಕುತೂಹಲದಿಂದ ನೋಡಿದ, ರಾಜನನ್ನು ನೋಡಿದ ಗಂಗೆಯೂ ಮೋಹಗೊಂಡಳು.
ದೇವತೆಗಳಾದ ಗಂಗಾ-ಮಹಾಭಿಷರು ಪರಸ್ಪರ ಮೋಹಗೊಂಡಿದ್ದನ್ನು ಕಂಡ ಚತುರ್ಮುಖ ಬ್ರಹ್ಮ ನೀವಿಬ್ಬರೂ ಭೂಲೋಕದಲ್ಲಿ ಜನ್ಮತಾಳಿರಿ ಎಂದು ಶಾಪಕೊಟ್ಟನು.
ನಂತರ ಅದೇ ಶಾಪಗ್ರಸ್ತ ಮಹಾಭಿಷ ರಾಜ ಶಂತನು ಆಗಿ ಚಂದ್ರವಂಶದ ಪ್ರತೀಪನ ಮಗನಾಗಿ ಜನಿಸಿದ. ಗಂಗೆಯೂ ದುಃಖದಿಂದ ಕೂಡಿ ಭೂಮಿಯ ಕಡೆಗೆ ಹೊರಟಾಗ ಅಷ್ಟವಸುಗಳು ಅವಳನ್ನು ಸಂಧಿಸಿದರು.
ಆ ವಸುದೇವತೆಗಳೆಲ್ಲ ವಶಿಷ್ಟ ಋಷಿಗಳ ಶಾಪಕ್ಕೆ ಗುರಿಯಾಗಿ ಭೂಮಿಯಲ್ಲಿ ಜನಿಸ ಬೇಕಾಗಿತ್ತು. ಹೇ ಗಂಗೆ ನೀನು ಭೂಲೋಕದಲ್ಲಿ ನಮ್ಮ ತಾಯಿಯಾಗಿ, ನಮಗೆ ಜನ್ಮವಿತ್ತು ನಮ್ಮನ್ನು ಉದ್ಧರಿಸು ಎಂದು ಬೇಡಿಕೊಂಡರು. ಅದಕ್ಕೆ ಗಂಗಾದೇವಿಯೂ ಸಮ್ಮತಿಸಿದಳು.
ಇತ್ತ ಶಾಪಗ್ರಸ್ತನಾಗಿದ್ದ ಮಹಾಭಿಷ ಈಗ ಶಂತನು ರಾಜನಾಗಿದ್ದ. ಒಮ್ಮೆ ಶಂತನು ಗಂಗಾತಟದಲ್ಲಿ ಸಂಚರಿಸುತ್ತಿರುವಾಗ ಗಂಗೆಯು ಅತ್ಯಂತ ದಿವ್ಯಸುಂದರ ಕನ್ಯಾರೂಪದಿಂದ ಕಾಣಿಸಿಕೊಂಡಳು. ಶಂತನು ಗಂಗಾದೇವಿಗೆ ತನ್ನನ್ನು ಮದುವೆಯಾಗಲು ಕೇಳಿಕೊಂಡನು.
ಆಗ ಗಂಗಾದೇವಿಯು "ನಾನು ಏನೇ ಮಾಡಿದರೂ ನನಗೆ ಪ್ರಶ್ನಿಸಬಾರದು, ಕಾರಣಗಳನ್ನು ಕೇಳಬಾರದು, ನನ್ನನ್ನು ತಡೆಯಬಾರದು ಅಂದರೆ ಮಾತ್ರ ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದಳು" ಶಾಪಗ್ರಸ್ತನಾಗಿ ಮೋಹಕ್ಕೆ ಒಳಗಾಗಿದ್ದ ಶಂತನು ಒಪ್ಪಿಕೊಂಡ.
ಗಂಗೆಯು ಶಂತನು ಮಹಾರಾಜನ ಪತ್ನಿಯಾಗಿ ಅರಮನೆಯಲ್ಲಿ ವಾಸವಾಗಿದ್ದಳು, ಆ ದಂಪತಿಗೆ ಮೊದಲ ಮಗು ಜನಿಸಿತು, ಗಂಗೆಯು ಆಗತಾನೇ ಜನಿಸಿದ ತನ್ನದೇ ಮಗುವನ್ನು ತನ್ನದೇ ಆದ ನದಿಯಲ್ಲಿ ಹಾಕಿ ಉದ್ದರಿಸಿದಳು, ವಸುದೇವತೆಗಳಿಗೆ ಕೊಟ್ಟ ವಚನವನ್ನು ಪಾಲಿಸಿದಳು, ಅದರಂತೆ ನಂತರ ಜನಿಸಿದ ಏಳು ಮಕ್ಕಳನ್ನು ಪ್ರವಾಹಕ್ಕೆ ಹಾಕಿದಳು.
ಮಹಾರಾಜ ಶಂತನು ತನ್ನ ಮಕ್ಕಳು ಹೀಗೆ ನದಿಯಪಾಲಾಗುವದನ್ನು ನೋಡಿ ದುಃಖಭರಿತನಾಗಿದ್ದ, ಗಂಗೆಯು ಎಂಟನೇ ಮಗುವಿನ ಗರ್ಭಿಣಿಯಾಗಿ ಪ್ರಸವ ಕಾಲ ಸಮೀಪಿಸಿದಾಗ ರಾಜ ಶಂತನು ಗರ್ಭರಕ್ಷಣೆ ಮಾಡಲು ಮುಂದಾದ, ಈ ಬಾರಿ ನಾನು ನನ್ನ ಮಗನನ್ನು ನಿನಗೆ ಕೊಡುವದಿಲ್ಲ, ನದಿಗೆ ಹಾಕಲು ಬಿಡುವದಿಲ್ಲ ಎಂದ.
ಆಗ ಗಂಗೆಯು ಇಲ್ಲಿ ನಮ್ಮ ಒಪ್ಪಂದ ಮುಗಿಯಿತು ನಾನು ಇನ್ನು ಒಂದುಕ್ಷಣವೂ ಇಲ್ಲಿ ಇರುವದಿಲ್ಲ ಎಂದಳು. ತನ್ನ ಮೂಲ ರೂಪದಿಂದ ಪ್ರತ್ಯಕ್ಷಳಾಗಿ ಅಷ್ಟವಸುಗಳ ಶಾಪವಿಮೋಚನೆಯ ವಿಷಯವನ್ನೂ ತಾವುಗಳು ಬ್ರಹ್ಮದೇವರಿಂದ ಶಾಪಗ್ರಸ್ತರಾಗಿ ಜನಿಸಿದ ವಿಷಯವನ್ನೂ ತಿಳಿಸಿಳು. ಸೂಕ್ತಕಾಲದಲ್ಲಿ ಆ ಎಂಟನೇ ಮಗುವನ್ನು ಶಂತನುವಿಗೆ ಒಪ್ಪಿಸುವದಾಗಿ ಹೇಳಿ. ತನ್ನ ಮೊದಲಿನ ದಿವ್ಯರೂಪದಿಂದ ಅಂತರ್ದಾನಳಾದಳು. ಗಂಗೆಯ ಎಂಟನೆ ಮಗನಾಗಿ ಜನಿಸಿದ ವಸುದೇವತೆಯೇ ಚಿರಂಜೀವಿಯಾದ ಭೀಷ್ಮಾಚಾರ್ಯರು.
ಕಪಿಲ ಋಷಿಗಳ ಕೋಪಾಗ್ನಿಯಲ್ಲಿ ಸಗರ ರಾಜನ ಅರವತ್ತು ಸಾವಿರ ಮಕ್ಕಳು ಸುಟ್ಟು ಬೂದಿಯಾಗಿದ್ದರು. ಅದೇ ಇಕ್ಷ್ವಾಕು ವಂಶದಲ್ಲಿ ಜನಿಸಿದವರು ದಿಲೀಪರಾಜರ ಮಗ ಭಗೀರಥರಾಜರು.
ಭಗೀರಥ ರಾಜರು ಅಗ್ನಿಗೆ ಆಹುತಿಯಾಗಿದ್ದ ತನ್ನ ಎಲ್ಲ ಅರವತ್ತು ಸಾವಿರ ಮುತ್ತಜ್ಜರ ಸದ್ಗತಿಗಾಗಿ ದೇವಗಂಗೆಯನ್ನು ಭೂಲೋಕಕ್ಕೆ ಕರೆದು ತರಬೇಕೆಂಬ ಪ್ರತಿಜ್ಞೆಮಾಡಿ ಕಠಿಣ ತಪಸ್ಸನ್ನು ಆಚರಿಸಿದರು. ಭಗೀರಥ ರಾಜರ ತಪಸ್ಸಿಗೆ ಮೆಚ್ಚಿ ಗಂಗಾದೇವಿಯು ಪ್ರತ್ಯಕ್ಷಳಾಗಿ "ಭಗೀರಥನೇ, ನಾನು ನಿನ್ನ ಪಿತೃಭಕ್ತಿಯಿಂದ ಸಂತೋಷಗೊಂಡಿದ್ದೇನೆ. ನಿನ್ನ ಆಶೆಗೆ ತಕ್ಕಂತೆ ಭೂಲೋಕಕ್ಕೆ ಹರಿದು ಬರುವೆ ಆದರೆ ನನ್ನ ವೇಗವನ್ನು ತಡೆಯುವವರು ಯಾರು?" ಎಂದು ಪ್ರಶ್ನಿಸಿದಳು.
ಭಗೀರಥರಾಜರು ಮತ್ತೆ ರುದ್ರದೇವರನ್ನು ಕುರಿತು ತಪಸ್ಸನ್ನು ಆಚರಿಸಿ ಗಂಗಾಪ್ರವಾಹವನ್ನು ತಡೆಯಲು ಕೋರಿಕೊಂಡರು. ಗಂಗೆಯು ಭಗೀರಥರ ತಪೋನಿಷ್ಠೆಯ ಫಲವಾಗಿ ಮೊದಲು ಮಹಾದೇವರ ಜಟೆಯಲ್ಲಿ ಬಿದ್ದು, ತನ್ನ ಅಗಾಧವಾದ, ತಡೆಯಲು ಅಸಾಧ್ಯವಾದ ತನ್ನ ಪ್ರವಾಹವನ್ನು ಕಡಿಮೆ ಮಾಡಿಕೊಂಡರೂ ರಭಸವಾಗಿಯೇ ಭೂಮಿಗೆ ಹರಿದು ಬಂದಳು ಆದ್ದರಿಂದ ಗಂಗೆಗೆ "ಭಾಗೀರಥಿ" ಎಂಬ ಹೆಸರಿದೆ.
ಆ ಗಂಗಾಪ್ರವಾಹದಲ್ಲಿ ಜಹ್ನುಋಷಿಗಳ ಯಜ್ಞಶಾಲೆಯು ಕೊಚ್ಚಿಕೊಂಡು ಹೋಯಿತು. ಇದರಿಂದ ಕೋಪಗೊಂಡ ಜಹ್ನು ಋಷಿಗಳು ಗಂಗಾಜಲವನ್ನೆಲ್ಲ ತಮ್ಮ ತಪೋಬಲದಿಂದ ಒಣಗಿಸಿಬಿಟ್ಟರು.
ಭಗೀರಥರಾಜರು ಮತ್ತೆ ಜಹ್ನುಋಷಿಗಳನ್ನು ಪ್ರಾರ್ಥಸಿ, ತಮ್ಮ ಪಿತೃಗಳ ಸದ್ಗತಿಗಾಗಿ ಗಂಗೆಯನ್ನು ಮೊದಲಿನಂತೆ ಪೂರ್ಣಪ್ರವಾಹದಿಂದ ಹರಿಯುವಂತೆ ಮಾಡಬೇಕೆಂದು ಕೇಳಿಕೊಂಡರು. ಜಹ್ನುಋಷಿಗಳ ಕೋಪ ಶಾಂತವಾಗಿ ಗಂಗೆಯು ಮತ್ತೆ 8 ಗಂಗಾದೇವಿಯನ್ನು ಪ್ರಾರ್ಥಿಸಿ, ಗಂಗಾಪೂಜೆಯನ್ನು ಮಾಡಿ ಯಾರು ಹತ್ತು ಹಣ್ಣುಗಳನ್ನು ದಾನಮಾಡುವರೋ ಅವರ ಹತ್ತುತರಹದ ಪಾಪಗಳು ನಾಶವಾಗುತ್ತವೆ. ಗಂಗಾಸ್ನಾನ ಫಲ ದೊರೆಯುತ್ತದೆ. ಮಹಾಪುಣ್ಯ ಪ್ರಾಪ್ತವಾಗುತ್ತದೆ. ಆದ್ದರಿಂದ ಇಂದಿನ ವ್ರತಕ್ಕೆ "ಗಂಗಾದಶಹರಾ" ಎಂದು ಕರೆಯುತ್ತಾರೆ.
ಕೃಪೆ :Whatsapp
***
ಗಂಗಾ ದಶಹರಾ ವ್ರತ ಮತ್ತು ಗಂಗಾ ಸ್ನಾನದ ಮಹತ್ವ
ಗಂಗೆಯು ತ್ರಿವಿಕ್ರಮರೂಪಿಯಾದ ಸಾಕ್ಷಾತ್ ಮಹಾವಿಷ್ಣುವಿನ ಪಾದಮೂಲದಿಂದ ಜನಿಸಿ, ಚತುರ್ಮುಖನ ಕಮಂಡಲುವಿನಲ್ಲಿ ನೆಲೆಸಿ, ದೇವಲೋಕದಲ್ಲಿ ಸಂಚರಿಸಿ, ರುದ್ರದೇವರ ಜಟೆಯ ಮೂಲಕ ಭಗೀರಥನ ತಪಸ್ಸಿನ ಫಲವಾಗಿ ಭೂಮಿಗೆ ಬಂದ ದೇವನದಿ. ದರ್ಶನ-ಸ್ಪರ್ಶ-ಸ್ಮರಣ ಮಾತ್ರದಿಂದ ಪಾಪಗಳನ್ನು ದಹಿಸಬಲ್ಲ ಮಹಾ ಮಹಿಮೆವುಳ್ಳ ನದಿ.
ಕಾಶಿಯಲ್ಲಿ ಗಂಗಾಸ್ನಾನ ಮಾಡಿ ದೇಹ ತ್ಯಜಿಸಿದವರನ್ನು ಸಾಕ್ಷಾತ್ ರುದ್ರದೇವರೇ ತಾರಕ ಮಂತ್ರೋಪದೇಶ ಮಾಡಿ ಮೋಕ್ಷ ಮಾರ್ಗಕ್ಕೆ ಕೊಂಡೊಯ್ಯುತ್ತಾರೆಂದು ನಮ್ಮ ಪುರಾಣಗಳು ಸಾರುತ್ತವೆ.
ಪ್ರತ್ಯಕ್ಷವಾಗಿ ಗಂಗೆಯ ಸಾನ್ನಿಧ್ಯ ದೊರಕದಿದ್ದರೂ, ಕೇವಲ ಗಂಗಾ-ಗಂಗಾ ಎಂದು ನಾಮಸ್ಮರಣೆಯನ್ನು ಮಾಡಿದರೂ ಗಂಗಾಸ್ನಾನ ಫಲ ದೊರಕುತ್ತದೆ.
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ।। (ಪದ್ಮಪುರಾಣ)
ನೂರಾರು ಯೋಜನಗಳಷ್ಟು ದೂರದಿಂದಲೂ, ಯಾರು ಗಂಗಾ-ಗಂಗಾ ಎಂದು ಸ್ಮರಣೆ ಮಾಡುತ್ತಾರೋ, ಅವನು ಸರ್ವಪಾಪಗಳಿಂದಲೂ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.
ಗಂಗೆಯನ್ನು "ಸರ್ವತೀರ್ಥಮಯೀ", ಎಲ್ಲ ಪವಿತ್ರ ತೀರ್ಥಗಳನ್ನು ತನ್ನಲ್ಲಿ ಸಮಾವಾಹಿಸಿಕೊಂಡವಳು ಎಂದು ಕರೆಯಲಾಗಿದೆ. ಗಂಗಾಸ್ನಾನ ದರ್ಶನ ಸ್ಮರಣೆಯಿಂದ ಎಲ್ಲ ತೀರ್ಥಗಳಲ್ಲಿ ಮಿಂದ ಫಲ ಬರುತ್ತದೆ. ಗಂಗಾನದಿಯ ಜಲವನ್ನು ಶಾಸ್ತ್ರಗಳಲ್ಲಿ ಬ್ರಹ್ಮದ್ರವ, ಧರ್ಮದ್ರವವೆಂದು ಕೊಂಡಾಡಲಾಗಿದೆ. ಆದ್ದರಿಂದ ಗಂಗಾನದಿಯು ಬ್ರಹ್ಮವಸ್ತುವಿನ ವಿಭೂತಿರೂಪಳೇ ಆಗಿರುತ್ತಾಳೆ.
ವಿಷ್ಣುಪಾದಾಬ್ಜ ಸಂಭೂತೇ
ಗಂಗೇ ತ್ರಿಪಥಗಾಮಿನಿ ।
ಬ್ರಹ್ಮದ್ರವೇತಿ ವಿಖ್ಯಾತಾ ಪಾಪಂ ಮೇ ಹರ ಜಾಹ್ನವಿ ।।
ಮಹಾವಿಷ್ಣುವಿನ ಪಾದಪದ್ಮಗಳಿಂದ ಹುಟ್ಟಿ, ಬ್ರಹ್ಮದೇವನ ಕಮಂಡಲುವಿನಲ್ಲಿ ನೆಲೆಸಿರುವ ಕಾರಣ ಬ್ರಹ್ಮದ್ರವವೆಂದು ವಿಖ್ಯಾತಳಾದ, ಸ್ವರ್ಗ-ಭೂಮಿ-ಪಾತಾಳ ಹೀಗೆ ಮೂರು ಲೋಕಗಳಲ್ಲಿ ಸಂಚರಿಸುವ, ಜುಹ್ನು ಮಹರ್ಷಿಯ ಪುತ್ರಿಯಾದ ಗಂಗಾದೇವಿಯೇ ನನ್ನ ಸಮಸ್ತ ಪಾಪಗಳನ್ನು ನಾಶಮಾಡು.
ಸಮಸ್ತ ಲೊಕ ಕಲ್ಯಾಣಕ್ಕಾಗಿ, ಸಜ್ಜನರ ಉದ್ಧಾರಕ್ಕಾಗಿ, ಪಾಪಗಳನ್ನು ಪರಿಹರಿಸುವದಕ್ಕಾಗಿ ಗಂಗಾದೇವಿಯು ಸ್ವರ್ಗದಿಂದ ಭೂಮಿಗೆ ಅವತರಿಸಿದ ಪುಣ್ಯದಿನ ಜ್ಯೇಷ್ಠ ಶುಕ್ಲ ದಶಮಿ. ಇದನ್ನು ಗಂಗಾ ದಶಹರಾ, ಭಾಗೀರಥಿ ಜಯಂತೀ, ದಶಹರ ದಶಮೀ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಜ್ಯೇಷ್ಠಮಾಸ ಶುಕ್ಲಪಕ್ಷ ದಶಮೀ ತಿಥಿಯಂದು ಗಂಗಾ ದಶಹರಾ ಆಚರಿಸಲಾಗುತ್ತದೆ.
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠಮಾಸೇ ಬುಧೇಽಹನಿ ।
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ ।। (ವರಾಹ ಪುರಾಣ)
ಜ್ಯೇಷ್ಠಮಾಸ, ಶುಕ್ಲಮಾಸ, ದಶಮೀ ತಿಥಿ, ಬುಧವಾರ, ಹಸ್ತಾ ನಕ್ಷತ್ರವಿರುವ ದಿನ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು.
ಈ ದಿವಸ ಗಂಗಾಪೂಜೆ, ಗಂಗಾವತರಣ ಕಥೆ ಮತ್ತು ಗಂಗಾ ಮಹಾತ್ಮೆಯನ್ನು ಶ್ರವಣ ಮಾಡುವುದರಿಂದ ಹತ್ತು ವಿಧವಾದ ಪಾಪಗಳು ನಾಶವಾಗುವುದರಿಂದ ಈ ದಶಮೀ ತಿಥಿಯನ್ನು "ದಶಹರಾ" ಎಂದು ಕರೆಯಲಾಗುತ್ತದೆ.
ಜ್ಯೆಷ್ಠೇ ಮಾಸಿ ಸಿತೇ ಪಕ್ಷೇ ದಶಮೀ ಹಸ್ತಸಂಯುತಾ ।
ಹರತೇ ದಶ ಪಾಪಾನಿ ತಸ್ಮಾತ್ ದಶಹರಾ ಸ್ಮೃತಾ ।। (ಬ್ರಹ್ಮಪುರಾಣ)
ಜ್ಯೇಷ್ಠಮಾಸ ಶುಕ್ಲಪಕ್ಷ ಹಸ್ತ ನಕ್ಷತ್ರದಿಂದ ಕೂಡಿದ ದಶಮೀ ತಿಥಿಯು ಹತ್ತು ವಿಧವಾದ ಪಾಪಗಳನ್ನು ಪರಿಹರಿಸುವುದರಿಂದ ಅದನ್ನು ದಶಹರಾ ಎಂದು ಕರೆಯಲಾಗುತ್ತದೆ.
ಹತ್ತುವಿಧವಾದ ಪಾಪಗಳು ಯಾವುವು- ಇವು ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಮೂರು ಪ್ರಕಾರದ್ದಾಗಿವೆ.
ಆದತ್ತಾನಾಮುಪಾದಾನಂ ಹಿಂಸಾ ಚೈವಾವಿಧಾನತಃ ।
ಪರದಾರೋಪಸೇವಾ ಚ ಶಾರೀರಂ ತ್ರಿವಿಧಂ ಸ್ಮೃತಮ್ ।।
ಪಾರುಷ್ಯಮನೃತಮ್ ಚೈವ ಪೈಶುನ್ಯಂ ಚಾಪಿ ಸರ್ವಶಃ ।
ಅಸಂಬದ್ಧ ಪ್ರಲಾಪಶ್ಚ ವಾಙ್ಮಯಂ ಸ್ಯಾತ್ ಚತುರ್ವಿಧಮ್ ।।
ಪರದ್ರವ್ಯೇಷ್ವಭಿಧ್ಯಾನಂ ಮನಸಾಽನಿಷ್ಟಚಿಂತನಂ ।
ವಿತಥಾಭಿನಿವೇಶಶ್ಚ ತ್ರಿವಿಧಂ ಕರ್ಮ ಮಾನಸಮ್ ।।
ತಾನು ಕೊಡದೇ ಇರುವ ದ್ರವ್ಯವನ್ನು ಕಿತ್ತುಕೊಳ್ಳುವುದು (ಮೋಸದಿಂದ ಪರರ ಸ್ವತ್ತನ್ನು ದೋಚುವುದು), ವಿನಾಕಾರಣ ಪರರಿಗೆ ಹಿಂಸೆಯನ್ನು ಮಾಡುವುದು, ಪರಸ್ತ್ರೀಯರನ್ನು ಭೋಗಿಸುವುದು - ಇವು ಮೂರು ಕಾಯಿಕ (ಶಾರೀರಿಕ) ಪಾಪಗಳು.
ಕೆಟ್ಟದಾಗಿ ಮಾತನಾಡುವುದು, ಸುಳ್ಳು ಹೇಳುವುದು, ಚಾಡೀಖೋರತನ, ನಿಷ್ಪ್ರಯೋಜಕವಾದ ಅಸಂಬದ್ಧ ಮಾತುಗಳನ್ನಾಡುವುದು - ಇವು ನಾಲ್ಕು ವಾಚಿಕ ಪಾಪಗಳು.
ಪರದ್ರವ್ಯವನ್ನು ದೋಚುವ ಸಂಚು ಹಾಕುವುದು, ಇನ್ನೊಬ್ಬರ ಬಗ್ಗೆ ಮನಸ್ಸಿನಲ್ಲಿ ಅನಿಷ್ಟ-ಕೇಡು ಬಯಸುವುದು, ತನ್ನನ್ನು ಇತರರಿಗಿಂತ ಶ್ರೇಷ್ಠನೆಂದು ತಿಳಿದುಕೊಳ್ಳುವುದು - ಇವು ಮೂರು ಮಾನಸಿಕ ಪಾಪಗಳಾಗಿವೆ.
ಈ ನೀಚ ಕೃತ್ಯಗಳನ್ನು ಸರ್ವಥಾ ಮಾಡಬಾರದು, ಪ್ರಮಾದವಶಾತ್ ಇಂತಹ ಕೃತ್ಯ ನಡೆದದ್ದೇ ಆದರೆ ಪ್ರಾಯಶ್ಚಿತ್ತ ಮಾಡಿಕೊಂಡು ಮುಂದೆಂದು ಮತ್ತೆ ಈ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಮೇಲ್ಕಂಡ ಇಂತಹ ಅತ್ಯಂತ ಹೇಯ ಮಹಾಪಾತಕಗಳನ್ನು ಶ್ರೀಹರಿಪಾದಾಬ್ಜಸಂಭೂತೆಯಾದ ಗಂಗೆಯು ಪರಿಹಾರಮಾಡುತ್ತಾಳೆ. ಗಂಗಾ ಸೇವೆಯು ಪ್ರಾಯಶ್ಚಿತ್ತಕ್ಕೆ ಪರಮ ಸಾಧನ, ಸನ್ಮಾರ್ಗಕ್ಕೆ ಪರಮ ಸೋಪಾನ.
ಈ ದಿನಗಳಲ್ಲಿ ಗಂಗಾಸ್ನಾನವನ್ನು ವಿಧಿಸಲಾಗಿದೆ. ಗಂಗಾಸ್ನಾನ ಪ್ರತ್ಯಕ್ಷ ಸಾಧ್ಯವಿರದಿದ್ದಾಗ ಯಥಾ ಉಪಲಬ್ಧವಾದ ನೀರಿನಲ್ಲಿಯೆ ಗಂಗಾದೇವಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಗಂಗಾಸ್ಮರಣಪೂರ್ವಕ ಸ್ನಾನವನ್ನು ಮಾಡಬಹುದು.
ಗಂಗಾಕಲಶವನ್ನು ಯಥಾಶಕ್ತಿ (ಪುರೋಹಿತರ ಮುಖಾಂತರ ವಿಧಾನೋಕ್ತ-ಶಾಸ್ತ್ರೋಕ್ತವಾಗಿ) ಷೋಡಶೋಪಚಾರಗಳಿಂದ ಪೂಜಿಸಬೇಕು. ಗಂಗಾ ದಶಹರಾದಂದು ವಿಶೇಷವಾಗಿ ಪಠಿಸಲಾಗುವ "ಗಂಗಾ ದಶಹರಾ ಸ್ತೋತ್ರ"ವನ್ನು ಪಠಿಸಬೇಕು. ಗಂಗಾವತರಣದ ಕಥೆಯನ್ನು ಶ್ರವಣ ಮಾಡಬೇಕು. ಗಂಗಾದೇವಿಗೆ ಹಾಲಿನಿಂದ ಅರ್ಘ್ಯವನ್ನು ಸಮರ್ಪಿಸಬೆಕು. ಪ್ರವಹಿಸುವ ಜಲದಲ್ಲಿ ದೀಪದಾನವನ್ನು ಮಾಡಬೇಕು.
ಈ ಉತ್ಸವವನ್ನು ಉತ್ತರ ಭಾರತದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಗಂಗಾತೀರದ ಪುಣ್ಯಕ್ಷೇತ್ರಗಳಲ್ಲಿ ವಿಶೇಷವಾಗಿ ಗಂಗಾ ಆರತಿಯನ್ನು ಮಾಡಲಾಗುತ್ತದೆ.
ಕೆಳಗಿನ ಮಂತ್ರತುಲ್ಯ ಶ್ಲೋಕವನ್ನು ಭಕ್ತಿ ಇಂದ ಪಠಿಸಬೇಕು
ನಮೋ ಭಗವತ್ಯೈ ದಶಪಾಪಹರಾಯೈ ಗಂಗಾಯೈ ನಾರಾಯಣ್ಯೈ ರೇವತ್ಯೈ ಶಿವಾಯೈ ದಕ್ಷಾಯೈ ಅಮೃತಾಯೈ ವಿಶ್ವರೂಪಿಣ್ಯೈ ನಂದಿನ್ಯೈತೇ ನಮೋ ನಮಃ
ಜ್ಯೇಷ್ಠ ಶುಕ್ಲ ಪ್ರತಿಪದೆಯಿಂದ ದಶಮಿಯವರೆಗೂ ಗಂಗಾ ಭಾಗೀರಥೀ ಪ್ರೀತ್ಯರ್ಥವಾಗಿ ದಶಹರಾ ವ್ರತವನ್ನು ಆಚರಿಸಬೇಕು. ಈ ಮಂತ್ರ ಪಠಿಸುವುದರಿಂದ ಹತ್ತು ವಿಧದ ಪಾಪಗಳು ( ಕಾಯದಿಂದ ಮಾಡುವ ಮೂರು, ಮಾತಿನಿಂದ ಮಾಡುವ ನಾಲ್ಕು ಹಾಗೂ ಮನಸ್ಸಿನಿಂದ ಮಾಡುವ ಮೂರು ವಿಧದ ಪಾಪಗಳು ) ಪರಿಹಾರವಾಗುತ್ತವೆ.
ನಂತರ ಗಂಗೆಯ ಪ್ರೀತ್ಯರ್ಥವಾಗಿ ಹತ್ತು ಬಾರಿ ಅರ್ಘ್ಯವಿತ್ತು, ಹತ್ತು ದೀಪಗಳಿಂದ ಆರತಿ ಮಾಡಿ ಹತ್ತು ಫಲಗಳನ್ನು ಸಮರ್ಪಿಸಿ ಹತ್ತು ನಮಸ್ಕಾರ ಮಾಡಬೇಕು.
ಗಂಗಾ ಪ್ರಾರ್ಥನೆ
ನಮಾಮಿ ಗಂಗೇ ತವ ಪಾದಪಂಕಜಂ
ಸುರಾಸುರೈರ್ವಂದಿತ ದಿವ್ಯರೂಪಮ್ ।
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ
ಭಾವಾನುಸಾರೇಣ ಸದಾ ನರಾಣಾಮ್ ।।
ನಮಸ್ತೇ ಪಾಪಸಂಹತ್ರೇ ಹರಮೌಲಿವಿರಾಜಿತೇ
ನಮಸ್ತೇ ಸರ್ವಲೋಕಾನಾಂ ಹಿತಾಯ ಧರಣೀಗತೇ ।
ಸ್ವರ್ಗಾಪವರ್ಗದೇ ದೇವಿ ಗಂಗೇ ಪತಿತಪಾವನಿ
ತ್ವಾಮಹಂ ಶರಣಂ ಯಾತಃ ಪ್ರಸನ್ನಾ ಮಾಂ ಸಮುದ್ಧರ ।।
ವಿಷ್ಣುಪಾದಾಬ್ಜಸಂಭೂತೇ ಗಂಗೇ ತ್ರಿಪಥಗಾಮಿನಿ ।
ದರ್ಮದ್ರವೇತಿ ವಿಖ್ಯಾತೇ ಪಾಪಂ ಮೇ ಹರ ಜಾಹ್ನವಿ ।।
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ।।
ಪ್ರೀತೋಸ್ತು ಕೃಷ್ಣ ಪ್ರಭೋ
ಫಣೀಂದ್ರ ಕೆ
ಮಾಹಿತಿ ಸಂಗ್ರಹ: ಮಹಾಲಕ್ಷ್ಮಿ ನಮೋಸ್ತುತೇ ಬಳಗ
***
ಗಂಗೆಯ ಮಹಿಮೆಯನ್ನು ಅಗಾಧತೆಯನ್ನೂ ಬ್ರಹ್ಮನೂ ಹೇಳಲಾರ. ಗಂಗೆ ಇರವು ಭಾರತ ದೇಶದವರಾದ ನಾವೇ ಧನ್ಯರು
೧ ಬ್ರಾಹ್ಮಣರು ಹೇಳಿದರು.
ಎಲ್ಲಿ ಸ್ನಾನ ಮಾಡಿದರೆ ಮಹಾಪಾಪಗಳೂ, ಉಳಿದ ಪಾಪಗಳೂ ಹೋಗುತ್ತವೆಯೋ ಆ ಜಾಗವನ್ನು ನಮಗೆ ಹೇಳು.
೨. ಪಾಪದಿಂದ ಮುಕ್ತನಾಗಿ ಸ್ವರ್ಗದಲ್ಲಿ ಇಂದ್ರನಂತಿರುತ್ತಾ, ಆ ಸ್ವರ್ಗದಿಂದ ಚ್ಯುತನಾಗದ ರೀತಿಯ ಒಂದು ಉಪದೇಶವನ್ನು ಕೊಡು.
೩ ಇಲ್ಲಿಯೂ ಸುಖವನ್ನನುಭವಿಸಿ ಸತ್ತಮೇಲೂ ಸ್ವರ್ಗದಲ್ಲಿ ಸುಖವನ್ನನು ಭವಿಸಬೇಕು. ಆ ರೀತಿಯಾಗಿ ಕಲಿಯುಗದಲ್ಲಿ ಪಾಪ ಮಾಡಿದವರಿಗೆ ಸ್ವರ್ಗಸೋಪಾನವಾಗಿರುವುದು ಯಾವುದು?
೪. ವ್ಯಾಸನು ಹೇಳಿದನು-
ಸಾಮಾನ್ಯವಾಗಿ ಹುಟ್ಟಿ ಉತ್ತಮ ಗತಿಯು ಬೇಕಂದೆನ್ನುವ ಗಂಡಸರು ಹೆಂಗಸರಿಗೆ ದರ್ಶನ ಮಾತ್ರದಿಂದಲೇ ಗಂಗೆಯು ಪಾಪಗಳನ್ನು ನಾಶಮಾಡುತ್ತದೆ.
೫-೬. ಗಂಗೆ ಎಂದು ಸ್ಮರಿಸಿದರೇನೆ ಪಾತಕಗಳು ಹೋಗುತ್ತವೆ. ನಾಮಗಳನ್ನು ಕೀರ್ತಿಸಿದರೆ ಅತಿ ಪಾಪಗಳು ಹೋಗುತ್ತವೆ. ದರ್ಶನಮಾಡಿದರೆ ಇನ್ನೂ ಗುರುವಾದ ಪಾಪಗಳು ಹೋಗುತ್ತವೆ. ಜಾಹ್ನವಿಯಲ್ಲಿ ಸ್ನಾನ, ಪಾನ, ಪಿತೃತರ್ಪಣಗಳನ್ನು ಮಾಡಿದರೆ ಮಹಾಪಾಪಗಳ ಗುಂಪೆಲ್ಲವೂ ನಾಶವಾಗುತ್ತವೆ.
೭. ಹತ್ತಿಯೂ ಒಣಗಿದ ಹುಲ್ಲ ಬೆಂಕಿಯು ತಗುಲಿದ ಕೂಡಲೇ ಸುಟ್ಟು ಹೋಗುವಂತೆ ಗಂಗೆಯ ಜಲದ ಸ್ಪರ್ಶನದಿಂದಲೇ ಪಾಪಗಳೆಲ್ಲವೂ ಕ್ಷಣಕಾಲದಲ್ಲಿ ನಾಶವಾಗುತ್ತವೆ.
೮. ಅದರಲ್ಲಿ ಸ್ನಾನಮಾಡಿದವನು ವೈಕುಂಠವನ್ನು ಹೊಂದುತ್ತಾನೆ. ಈ ಲೋಕದಲ್ಲಿ ಮತ್ತೆ ಹುಟ್ಟಿದಾಗ ಯಶಸ್ಸು, ರಾಜ್ಯ, ಪುಣ್ಯಗಳನ್ನು ಹೊಂದುತ್ತಾನೆ. ಸತ್ತನಂತರ ಮತ್ತೆ ಸ್ವರ್ಗವು ಸಿಕ್ಕುತ್ತದೆ.
೯. ಗಂಗೆಯಲ್ಲಿ ಪಿತೃಗಳಿಗೆ ಪಿಂಡವನ್ನು ವಿಧಿಪೂರ್ವಕವಾಗಿ ಕೊಟ್ಟರೆ ಅದರ ಪುಣ್ಯಫಲವನ್ನು ಹೇಳುತ್ತೇನೆ ಕೇಳು.
೧೦. ಅನ್ನದಿಂದ ಪಿಂಡವನ್ನು ಕೊಟ್ಟರೆ ಸಹಸ್ರವರ್ಷಗಳು ಸ್ವರ್ಗದಲ್ಲಿ ಸುಖಿಸುತ್ತಾನೆ. ಎಳ್ಳನ್ನು ಕುಟ್ಟಿ ಅದರಲ್ಲಿ ಉಂಡೆಕಟ್ಟಿ ಪಿಂಡವನ್ನು ಹಾಕಿದರೆ ಅದರ ಎರಡರಷ್ಟು ಪುಣ್ಯವು ಬರುವುದು, ಒಳ್ಳೆಯ ಹಣ್ಣುಗಳಿಂದ ಕೊಟ್ಟರೂ ಕೂಡ ಎಳ್ಳಿನಿಂದ ಕೊಟ್ಟಂತೆಯೇ ಪುಣ್ಯವು ಲಭಿಸುತ್ತದೆ.
೧೧. ಹಾಲು, ಮೊಸರು, ತುಪ್ಪಗಳನ್ನು ಸೇರಿಸಿ ಪಿಂಡವನ್ನು ಕೊಟ್ಟರೆ ಆಗ ಅಕ್ಷಯ ಸ್ವರ್ಗವು ಬರುತ್ತದೆ. ಈ ರೀತಿಯಾಗಿ ಪಿಂಡಗಳನ್ನು ಕೊಡುತ್ತಿದ್ದರೆ ದಿನವೂ ನೂರು ಯಾಗಗಳನ್ನು ಮಾಡಿದಂತೆ ಆಗುತ್ತದೆ.
೧೨. ನರಕದಲ್ಲಿರುವ ಪಿತೃಗಳು ಸ್ವರ್ಗವನ್ನು ಹೊಂದುತ್ತಾರೆ. ಅವರು ಮರ್ತಲೋಕದಲ್ಲಿ ಹುಟ್ಟಿದರೆ ಹಣ, ಮಕ್ಕಳು, ಆರೋಗ್ಯ, ಸುಖ, ಮಾನಗಳುಳ್ಳವರಾಗುತ್ತಾರೆ.
೧೩. ಆ ಪಿತೃಗಳೂ ರಸಾತಳದಲ್ಲಿದ್ದರೂ, ಭೂಮಿಯಲ್ಲಿ ಕೀಟಾದಿಗಳಲ್ಲಿ ಹುಟ್ಟಿದ್ದರೂ, ಪಕ್ಷಿ ಸಂಘದಲ್ಲಿ ಹುಟ್ಟಿದ್ದರೂ ಅವರೆಲ್ಲರೂ ಧನ್ಯರಾಗುತ್ತಾರೆ.
೧೪-೧೫. ಸ್ವರ್ಗಸ್ಥರಾದವರ ಮಕ್ಕಳು, ಮೊಮ್ಮಕ್ಕಳು, ದೌಹಿತ್ರರು, ಗೋತ್ರದವರು, ಅಳಿಯಂದಿರು, ಸೋದರಿಯ ಮಕ್ಕಳು, ಸ್ನೇಹಿತರು, ಪ್ರಿಯರು, ಅಪ್ರಿಯರು, ಯಾರಾದರೂ ಆಗಲಿ ಅವರು ಉಪಕರಣಗಳಿಂದ ಗಂಗಾನದಿಯಲ್ಲಾಗಲಿ ಅದರ ತೀರದಲ್ಲಿಯಾಗಲೀ ಪಿಂಡವನ್ನು ಕೊಟ್ಟರೆ ಸ್ವರ್ಗವನ್ನೂ, ಮೋಕ್ಷವನ್ನೂ ಹೊಂದುತ್ತಾರೆ. ಅವು ಅಕ್ಷಯವಾಗುತ್ತವೆ.
೧೬. ಪಿಂಡಕ್ಕೆ ಮೀರಿದ ಪಿತೃಗಳೂ, ತಾಯಿಯ ಕಡೆಯವರೂ, ಗೋತ್ರದವರೂ, ಆದವರೆಲ್ಲರೂ ನೂರಾರು ಜನರು ಸುಖಿಗಳಾಗಿ ಆಗುತ್ತಾರೆ.
೧೭. ಪ್ರಾಣಿಗಳು ಸ್ವರ್ಗದಲ್ಲಿರಲಿ, ಮರ್ತ್ಯದಲ್ಲಿರಲಿ, ನರಕದಲ್ಲಿರಲಿ, ಅವರೆಲ್ಲರೂ ಗಂಗೆಯನ್ನು ಯಾವಾಗಲೂ ಅಪೇಕ್ಷಿಸುತ್ತಾರೆ.
೧೮. ಒಬ್ಬನು ಗಂಗೆಗೆ ಹೋದರೂ ಅವನ ಕಡೆಯವರೆಲ್ಲರೂ ಪವಿತ್ರರಾಗುತ್ತಾರೆ. ಇದೇ ಮಹಾಪುಣ್ಯವು, ತಾನೂ ನರಕವನ್ನು ದಾಟಿ ಉಳಿದವರೆಲ್ಲರನ್ನೂ ದಾಟಿಸುತ್ತಾನೆ.
೧೯. ಗಂಗೆಯ ಗುಣಗಳೆಲ್ಲವನ್ನೂ ಹೇಳಲು ಬ್ರಹ್ಮನಿಗೇ ಆಗುವುದಿಲ್ಲ. ಆದ್ದರಿಂದ ನಾನು ಅದರ ಸ್ವಲ್ಪ ಗುಣಗಳನ್ನು ಹೇಳುತ್ತೇನೆ.
೨೦. ಮುನಿಗಳೂ, ಸಿದ್ಧರೂ, ಗಂಧರ್ವರೂ, ಉಳಿದ ದೇವತೆಗಳೂ, ಗಂಗಾತೀರದಲ್ಲಿ ತಪಸ್ಸನ್ನು ಮಾಡಿ ಉತ್ತಮವಾದ ಸ್ವರ್ಗವನ್ನು ಹೊಂದಿದರು.
೨೧. ಅವರೆಲ್ಲರೂ ದಿವ್ಯವಾದ ದೇಹವನ್ನು ಹೊಂದಿ ಉತ್ತಮವಾದ ವಿಮಾನದಿಂದ ಹೋದರು. ಆ ಸ್ವರ್ಗದಿಂದ ಇನ್ನೂ ಹಿಂದಿರುಗದೆ ಉತ್ತಮವಾದ ಮನೆಗಳಲ್ಲಿರುತ್ತಾರೆ.
೨೨-೨೩, ಅವರು ಹೋದ ಆ ಸ್ಥಳಗಳಲ್ಲಿ ಚಿನ್ನದ ಮಹಡಿಮನೆಗಳು ಎತ್ತರ ವಾಗಿಯೂ, ಚೆನ್ನಾಗಿಯೂ ಇವೆ. ಅದರಲ್ಲಿ ಬೇಕಾದ ಪದಾರ್ಥಗಳೆಲ್ಲವೂ ತುಂಬಿವೆ ಅದರಲ್ಲಿ ಮನೋಹರವಾದ ಸ್ತ್ರೀಯರಿರುವರು. ಅಲ್ಲಿರುವ ಮರಗಳು ಪಾರಿಜಾತಕ್ಕೆ ಸಮವಾಗಿ ಹೂಗಳಿಂದ ಕೂಡಿವೆ. ಗಂಗೆಯ ತೀರದಲ್ಲಿ ತಪಸ್ಸು ಮಾಡಿದರೆ ಈ ರೀತಿ ಯಾದ ಐಶ್ವಶ್ಯವನ್ನು ಹೊಂದುತ್ತಾರೆ.
೨೪. ಬಹುವಾದ ತಪಸ್ಸುಗಳಿಂದಲೂ, ಯಜ್ಞಗಳಿಂದಲೂ, ವ್ರತಗಳಿಂದಲೂ, ಬಹುವಾದ ದಾನಗಳಿಂದಲೂ ಹೊಂದುವ ಗತಿಯನ್ನು ಗಂಗೆಯ ಸೇವೆಯಿಂದ ಹೊಂದುತ್ತಾರೆ.
೨೫-೨೬. ಹಾದರಕ್ಕೆ ಹುಟ್ಟಿದವನು, ಜಾತಿಗೆಟ್ಟವನು, ದುಷ್ಟ, ಅಂತ್ಯ ಜಾತಿಯವನು, ಗುರುಹತ್ಯೆ ಮಾಡಿದವನು, ಎಲ್ಲಾ ದ್ರೋಹದಿಂದಲೂ ಕೂಡಿದವನು, ಎಲ್ಲಾ ಪಾಪಗಳಿಂದ ಕೂಡಿದವನು, ಇವರನ್ನು ಗಂಗೆಯು ಬಿಡುವುದಿಲ್ಲ. ಶುದ್ಧ ಮಾಡುತ್ತಾಳೆ. ಮಕ್ಕಳನ್ನು ತಂದೆಯರೂ, ಪ್ರಿಯನನ್ನು ಪತ್ನಿಯರೂ ಸ್ನೇಹಿತರೂ ಬಾಂಧವರೂ ಬಿಟ್ಟುಬಿಡುವರು. ಗಂಗೆಯು ಮಾತ್ರ ಯಾರನ್ನೂ ಬಿಡುವುದಿಲ್ಲ.
೨೭. ತಾಯಿಯು ಮಕ್ಕಳಿಗೆ ಜನ್ಮವನ್ನು ಕೊಟ್ಟು ಮಲಮೂತ್ರಗಳನ್ನು ತೊಳಯುವಂತೆ, ಗಂಗೆಯೂ ಅವರ ಮಲವನ್ನು ತೊಳೆದು ಉತ್ತಮಗತಿಯನ್ನು ಕೊಡುತ್ತಾಳೆ.
೨೮. ಗಂಗೆಯು ಅವರಿಗೆ ಭುಕ್ತಿಯನ್ನೂ, ಮುಕ್ತಿಯನ್ನೂ ಕೊಟ್ಟು ಭೋಗ ಅಲಂಕಾರಗಳಿಂದ ಪ್ರಕಾಶಿಸುವಂತೆ ಮಾಡುತ್ತಾಳೆ. ಅವರು ಪ್ರಸಿದ್ಧರಾಗುವಂತೆಯೂ ಮಾಡುತ್ತಾಳೆ.
೨೯. ಸಾವಿರ ವರ್ಷಗಳವರೆಗೆ ಒಂದೇ ಕಾಲಿನಲ್ಲಿ ನಿಂತು ತಪಸ್ಸು ಮಾಡಿದರೆ, ಅವನೂ, ಗಂಗೆಯಲ್ಲಿ ಒಂದು ತಿಂಗಳು ಸ್ನಾನಮಾಡಿದರೆ ಅವನೂ ಸಮವಾಗುತಾರೆಯೋ ಇಲ್ಲವೋ ಹೇಳಲಾಗುವುದಿಲ್ಲ.
೩೦. ಭಕ್ತಿಯಿಂದ ಒಂದು ಸಾರಿಯಾದರೂ ಯಾರು ಆ ಗಂಗೆಯಲ್ಲಿ ಸ್ನಾನ ಮಾಡುವರೋ ಅವರ ಲಕ್ಷಕುಲಗಳನ್ನೂ ಆ ಗಂಗೆಯು ಸಂಸಾರದಿಂದ ಉದ್ಧರಿಸುತ್ತಾಳೆ.
೩೧. ಗಂಗೆಯನ್ನು ಸ್ಮರಿಸಿದರೆ ದುಃಖವು ಹೋಗುತ್ತದೆ. ಧ್ಯಾನಮಾಡಿದರೂ ಹೊಗಳಿದರೂ ಎರಡು ಕಡೆಯ ವಂಶಗಳನ್ನೂ ಈ ಸಂಸಾರವೆಂಬ ಸಾಗರದಿಂದ ಉದ್ಧರಿಸುತ್ತಾಳೆ.
೩೨. ಸಂಕ್ರಾಂತಿ, ವ್ಯತೀಪಾತ, ಸೂರ್ಯ ಚಂದ್ರರ ಗ್ರಹಣಗಳು, ಪುಷ್ಯಮಾಸ ಇವುಗಳಲ್ಲಿ ಗಂಗೆಯಲ್ಲಿ ಸ್ನಾನಮಾಡಿದರೆ ತನ್ನ ಕುಲದಲ್ಲಿ ಕೋಟಿ ಜನರನ್ನು ಉದ್ಧರಿಸುತ್ತಾನೆ.
೩೩. ಶುಕ್ಲ ಪಕ್ಷದ ಹಗಲಿನಲ್ಲಿ ಉತ್ತರಾಯಣದಲ್ಲಿ ಜನಾರ್ದನನನ್ನು ಸ್ಮರಿಸುತ್ತಾ ಧನ್ಯರಾದವರು ಈ ಗಂಗೆಯಲ್ಲಿ ಪ್ರಾಣಿಬಿಡುವರು.
೩೪. ಮೇಲೆ ಹೇಳಿದ ರೀತಿಯಲ್ಲಿ ಯಾವನು ಭಾಗೀರಥಿಯ ನೀರಿನಲ್ಲಿ ಪ್ರಾಣಿಗಳನ್ನು ಬಿಡುತ್ತಾನೋ ಅವನಿಗೆ ಮತ್ತೆ ಹಿಂತಿರುಗಿ ಬಾರದ ಸ್ವರ್ಗವು ಸಿಕ್ಕುತ್ತದೆ.
೩೫. ವಿಷ್ಣುವು ಸರ್ವದೇವತೆಗಳ ಸ್ವರೂಪನು. ಗಂಗೆಯು ವಿಷ್ಣುವಿನ ರೂಪವಾದುದು. ಆದ್ದರಿಂದ ಗಂಗೆಯನ್ನು ಅನುಸರಿಸಿದವನು ಸರ್ವದೇವತೆಗಳಿಂದಲೂ ಅನುಸರಿಸಲ್ಪಟ್ಟವನಾಗುತ್ತಾನೆ.
೩೬. ಗಂಗೆಯಲ್ಲಿ ಪಿಂಡದಾನವನ್ನೂ, ತಿಲೋದಕವನ್ನೂ ಕೊಟ್ಟರೆ, ಅವರ ಸಂಬಂಧಿಗಳು ನರಕದಲ್ಲಿದ್ದರೆ ಅವರು ಸ್ವರ್ಗಕ್ಕೂ, ಸ್ವರ್ಗದಲ್ಲಿರುವವರು ಮೋಕ್ಷಕ್ಕೂ ಹೋಗುವರು.
೩೭. ಪರರ ಹಂಡಿರು, ಪರರ ದ್ರವ್ಯ, ಪರಬಾಧೆ, ಪರದ್ರೋಹಗಳಲ್ಲಿ ಆಸಕ್ತನಾದ ದುಷ್ಟನಿಗೆ ಗಂಗೆಯೊಬ್ಬಳೇ ಉತ್ತಮವಾದ ಗತಿಯು.
೩೮. ವೇದಗಳನ್ನೂ, ಶಾಸ್ತ್ರಗಳನ್ನೂ ಓದದ, ಗುರುನಿಂದೆ ಮಾಡುವ ಆಚಾರಗಳೂ, ವ್ಯವಹಾರಗಳೂ ಗೊತ್ತಿಲ್ಲದವನಿಗೆ ಗಂಗೆಗಿಂತಲೂ ಉತ್ತಮಗತಿಯು ಮತ್ತೊಂದಿಲ್ಲ.
೩೯. ಗಂಗೆಯನ್ನು ಸೇವಿಸಿದರೆ ಸ್ವರ್ಗ ಮೋಕ್ಷಗಳೂ, ಸುಖಸೌಭಾಗ್ಯಗಳೂ ಸಿಕ್ಕುವಾಗ ಬಹುದ್ರವ್ಯದಿಂದ ಸಾಧ್ಯವಾದ ಯಜ್ಞಗಳೂ, ದುಷ್ಕರವಾದ ತಪಸ್ಸು ಗಳೂ ಏತಕ್ಕೆ ?
೪೦. ಭುಕ್ತಿಮುಕ್ತಿಗಳನ್ನು ಕೊಡುವ ಗಂಗೆಯು ಎದುರಿಗಿರುವಾಗ ನಿಯಮಗಳಿಂದಲೂ, ಯೋಗಗಳಿಂದಲೂ ಏತಕ್ಕೆ ಕಷ್ಟವನ್ನು ಪಡಬೇಕು ?
೪೧. ಗಂಗೆಯಲ್ಲಿ ಸ್ನಾನಮಾತ್ರದಿಂದ ಅನೇಕ ಜನ್ಮಗಳ ಪಾಪಗಳೆಲ್ಲವನ್ನೂ ಕಳೆದುಕೊಂಡು ಪುಣ್ಯವನ್ನು ಸಂಪಾದಿಸಿಕೊಳ್ಳುತ್ತಾನೆ.
೪೨. ಸೂರ್ಯಗ್ರಹಣದಲ್ಲಿ ಪ್ರಭಾಸಕ್ಷೇತ್ರದಲ್ಲಿ ಸಾವಿರ ಗೋವನ್ನು ದಾನ ಮಾಡಿದರೆ ಬರುವ ಫಲವು ಗಂಗಾಸ್ನಾನದಿಂದ ದಿನದಿನವೂ ಬರುತ್ತದೆ.
೪೩, ಉದ್ದೇಶಪೂರ್ವಕವಾಗಿ ಅಲ್ಲದೆ ಅಕಸ್ಮತ್ತಾಗಿ ಗಂಗೆಯನ್ನು ನೋಡಿದರೂ ಪಾಪವು ಹೋಗುತ್ತದೆ. ಮುಟ್ಟಿದರೆ ಸ್ವರ್ಗವನ್ನು ಹೊಂದುತ್ತಾನೆ. ಸ್ನಾನ ಮಾಡಿದರೆ ಮೋಕ್ಷವು ಸಿಕ್ಕುತ್ತದೆ.
೪೪. ಸರ್ವೆಂದ್ರಿಯಗಳ ಚಪಲತೆಯೂ, ಪೂರ್ವಜನ್ಮದ ವಾಸನೆಯಿಂದ ಬರುವ ಚಾಪಲ್ಯಗಳೂ, ದಯಾಹೀನತೆಯೂ ಇವೆಲ್ಲವೂ ಗಂಗೆಯ ದರ್ಶನದಿಂದ ಹೋಗುತ್ತವೆ.
೪೫. ಪರರ ದ್ರವ್ಯದಲ್ಲಿ ಆಸೆ, ಪರರ ಹೆಂಡಿರಲ್ಲಿ ಆಸೆ, ಪರರ ಧರ್ಮದಲ್ಲಿ ಆಸೆ, ಇವೆಲ್ಲವೂ ಗಂಗೆಯನ್ನು ನೋಡುವುದರಿಂದ ಹೋಗುತ್ತವೆ.
೪೬ ಸಿಕ್ಕಿದಷ್ಟಕ್ಕೇ ಸಂತೋಷಪಡುವುದು, ತಮ್ಮ ಧರ್ಮದಲ್ಲಿ ನಡೆಯುವಿಕ, ಎಲ್ಲಾ ಪ್ರಾಣಿಗಳಲ್ಲಿಯೂ ಸಮನಾಗಿರುವಿಕೆ, ಇವೆಲ್ಲವೂ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಬರುತ್ತವೆ.
೪೭. ಯಾವನು ಗಂಗೆಯನ್ನು ಆಶ್ರಯಿಸಿ ಸುಖವಾಗಿರುವನೋ ಆತನೇ ಜೀವನ್ಮುಕ್ತನು. ಎಲ್ಲರಲ್ಲಿಯೂ ಉತ್ತಮನು.
೪೮. ಗಂಗೆಯನ್ನು ಆಶ್ರಯಿಸಿದವನು ಬೇರೆ ಪುಣ್ಯ ಕೆಲಸವನ್ನು ಮಾಡಬೇಕಾಗಿಯೇ ಇರುವುದಿಲ್ಲ. ಅವನೇ ಕೃತಕೃತ್ಯನು, ಜೀವನ್ಮುಕ್ತನು.
೪೯. ಗಂಗೆಯಲ್ಲಿ ಮಾಡಿದ ಯಜ್ಞ, ದಾನ, ತಪಸ್ಸು, ಜಪ, ಶ್ರಾದ್ಧ, ದೇವಪೂಜೆಗಳು ಕೋಟಿಕೋಟಿಯಲ್ಲಿ ಹೆಚ್ಚುತ್ತವೆ.
೫೦. ಬೇರೆಯ ಜಾಗದಲ್ಲಿ ಮಾಡಿದ ಪಾಪವು ಗಂಗಾತೀರದಲ್ಲಿ ನಾಶವಾಗುತ್ತದೆ. ಗಂಗಾತೀರದಲ್ಲಿ ಮಾಡಿದ ಪಾಪವು ಗಂಗಾಸ್ನಾನದಿಂದ ನಾಶವಾಗುತ್ತದೆ.
೫೧. ತನ್ನ ಜನ್ಮನಕ್ಷತ್ರದ ದಿವಸ ಗಂಗೆಯಲ್ಲಿ ಸ್ನಾನಮಾಡಿದರೆ ತನ್ನ ವಂಶವನ್ನೇ ಉದ್ಧಾರಮಾಡಿಕೊಳ್ಳುತ್ತಾನೆ.
೫೨. ಧನವುಳ್ಳವನನ್ನು ನರರು ಸ್ತೋತ್ರಮಾಡುವಂತೆ ಗಂಗೆಯನ್ನು ಸ್ತುತಿಸಿದರೆ ಸ್ವರ್ಗವನ್ನು ಹೊಂದುತ್ತಾರೆ.
೫೩, ಮನಸ್ಸಿಲ್ಲದೆ ಇದ್ದರೂ ಗಂಗೆಯ ಹೆಸರನ್ನು ಹೇಳಿದರೆ ಅವನು ಸ್ವರ್ಗಭಾಗಿಯಾಗುವನು.
೫೪. ಭೂಮಿಯಲ್ಲಿ ಮನುಷ್ಯರನ್ನೂ, ಪಾತಾಳದಲ್ಲಿ ಸರ್ಪಗಳನ್ನೂ, ಅಂತರಿಕ್ಷದಲ್ಲಿ ದೇವತೆಗಳನ್ನೂ ಉದ್ಧಾರಮಾಡುವುದರಿಂದ ಗಂಗೆಗೆ ತ್ರಿಪಥೆಗೆ (ಮೂರುಲೋಕದಲ್ಲಿ ಹೋಗುವವಳು) ಎಂದು ಹೆಸರು ಬಂದಿದೆ.
೫೫. ತಿಳಿದಾಗಲಿ, ತಿಳಿಯದೆ ಆಗಲಿ, ಇಷ್ಟವಿದ್ದಾಗಲಿ, ಇಷ್ಟವಿಲ್ಲದೆಯಾಗಲಿ ಗಂಗೆಯಲ್ಲಿ ಸತ್ತವನು ಸ್ವರ್ಗವನ್ನೂ, ಮೋಕ್ಷವನ್ನೂ ಹೊಂದುತ್ತಾನೆ.
೫೬. ಸಾತ್ವಿಕವೃತ್ತಿಯಲ್ಲಿದ್ದು ಕೊಂಡು ಯೋಗಿಯಾಗಿರುವವನಿಗೆ ಯಾವ ಗತಿಯು ಬರುತ್ತದೆಯೋ, ಗಂಗೆಯಲ್ಲಿ ಪ್ರಾಣಬಿಟ್ಟವನಿಗೆ ಆ ಗತಿಯು ಬರುತ್ತದೆ.
೫೭. ಸಾವಿರ ಚಾಂದ್ರಾಯಣಗಳನ್ನು ಮಾಡಿ ಈ ದೇಹವನ್ನು ಶುದ್ದಿ ಮಾಡಿಕೊಂಡವನಿಗಿಂತಲೂ, ಈ ಗಂಗೆಯ ನೀರನ್ನು ಯಥೇಚ್ಛವಾಗಿ ಕುಡಿದವನೇ ಮೇಲಾಗಿರುತ್ತಾನೆ.
೫೮. ಗಂಗಾನದಿಯನ್ನು ಹೊಂದಿ ಸ್ನಾನಮಾಡುವವರೆವಿಗೂ ತೀರ್ಥಗಳ ದೇವತೆಗಳ ವೇದಗಳ ಪ್ರಭಾವವು ಹೆಚ್ಚಾಗಿರುತ್ತದೆ.
೫೯. ಅಂತರಿಕ್ಷ, ಭೂಮಿ, ದೇವಲೋಕಗಳಲ್ಲಿ ಒಟ್ಟು ಮೂರೂವರೆ ಕೋಟಿ ತೀರ್ಥಗಳಿವೆ ಎಂದು ವಾಯುವು ಹೇಳಿರುವನು. ಅವೆಲ್ಲವೂ ಜಾಹ್ನವಿಯಲ್ಲಿವೆ.
೬೦ ವಿಷ್ಣುವಿನ ಕಾಲಿನ ನೀರಿನಿಂದ ಪವಿತ್ರಳಾದ, ಆಕಾಶದಲ್ಲಿ ಹರಿಯುವ, ಧರ್ಮದ ದ್ರವವನ್ನು ಹರಿಸುವ ಜಾಹ್ನವಿಯೇ ! ನನ್ನ ಪಾಪವನ್ನು ನಾಶಮಾಡು.
೬೧. ಎಲೆ ಜಾಹ್ನವಿಯೇ ! ನೀನು ವಿಷ್ಣುವಿನ ಪಾದದಿಂದ ಹುಟ್ಟಿದ್ದೀಯೆ. ವಿಷ್ಣುವಿನಿಂದ ಗೌರವಿತಳಾಗಿದ್ದೀಯೆ. ಹುಟ್ಟಿದ ಮೊದಲು ಸಾಯುವವರೆಗೂ ಮಾಡಿದ ಪಾಪವನ್ನು ಪರಿಹರಿಸಿ ಕಾಪಾಡು.
೬೨. ಧರ್ಮಿಷ್ಠಳಾದ ಗಂಗೆಯೇ! ಶ್ರದ್ಧೆಯಿಂದಲೂ ರಜೋಗುಣದಿಂದಲೂ ಕೂಡಿರುವ ನಿನ್ನ ನೀರಿನಿಂದ ನನ್ನನ್ನು ಪವಿತ್ರಳನ್ನಾಗಿ ಮಾಡು.
೬೩. ಈ ಮೂರು ಶ್ಲೋಕಗಳನ್ನು ಹೇಳಿಕೊಂಡು ಸ್ನಾನಮಾಡಿದರೆ ಕೋಟ ಜನ್ಮಗಳ ಪಾಪಗಳೂ ನಾಶವಾಗುತ್ತವೆ. ಸಂಶಯವಿಲ್ಲ.
೬೪. ಹರಿಯು ಹೇಳಿರುವ ಜಾಹ್ನವಿಯ ಮೂಲಮಂತ್ರವನ್ನು ಹೇಳುತ್ತೇನೆ. ಒಂದು ಬಾರಿ ಹೇಳಿದ ಮಾತ್ರದಿಂದಲೇ ಮನುಷ್ಯನು ಪವಿತ್ರನಾಗಿ ವಿಷ್ಣು ದೇಹದಲ್ಲಿ ಸೇರುತ್ತಾನೆ.
೬೫. ಇದು ಆ ಮಂತ್ರವು, ಓಂ ! ವಿಶ್ವರೂಪಿಣಿಯಾದ ನಾರಾಯಣಿಯಾದ ಗಂಗೆಗೆ ನಮಸ್ಕಾರವು.
೬೩. ಗಂಗೆಯ ದಡದಲ್ಲಿರುವ ಮಣ್ಣನ್ನು ತಲೆಯಲ್ಲಿ ಧರಿಸಿಕೊಂಡರೆ, ಗಂಗೆಯ ಸ್ನಾನವನ್ನು ಮಾಡದೇನೇ ಎಲ್ಲಾ ಪಾಪಗಳನ್ನು ಕಳೆದುಕೊಳ್ಳುತ್ತಾನೆ.
೬೭. ಗಂಗೆಯ-ನೀರಿನ ಅಲೆಯ-ಮೇಲಿನ ಗಾಳಿಯು ಮುಟ್ಟಿದರೆ ಅವನ ಪಾಪಗಳೆಲ್ಲವೂ ಹೋಗಿ ಅಕ್ಷಯವಾದ ಸ್ವರ್ಗವನ್ನು ಹೊಂದುತ್ತಾನೆ.
೬೮. ಮನುಷ್ಯನ ಮೂಳೆಯು ಎಲ್ಲಿಯವರೆಗೂ ಗಂಗೆಯಲ್ಲಿರುತ್ತದೆಯೋ ಅಷ್ಟು ಸಾವಿರ ವರ್ಷಗಳು ಸ್ವರ್ಗಲೋಕದಲ್ಲಿ ಸುಖಿಸುತ್ತಾನೆ
೬೯ ಪಿತೃಗಳು, ಬಂಧುಗಳು, ಅನಾಥರು, ಗುರುಗಳು ಇವರ ಮೂಳೆಗಳನ್ನು ಗಂಗೆಯಲ್ಲಿ ಹಾಕುವುದರಿಂದ ಅವರು ಸ್ವರ್ಗದಲ್ಲಿ ವಾಸಿಸುತ್ತಾರೆ.
೭೦. ಯಾವನು ಗಂಗೆಯಲ್ಲಿ ಹಾಕಲು ತಾಯಿತಂದೆಗಳ ಮೂಳೆಗಳನ್ನು ಹೊತ್ತು ಕೊಂಡು ಹೋಗುತ್ತಾನೆಯೋ, ಅವನು ಹೆಜ್ಜೆ ಹೆಜ್ಜೆಗೂ ಅಶ್ವಮೇಧದ ಫಲವನ್ನು ಹೊಂದುತ್ತಾನೆ.
೭೧. ಗಂಗಾತೀರದಲ್ಲಿರುವ ದೇಶಗಳೂ, ಪಶುಗಳೂ, ಪಕ್ಷಿಗಳೂ, ಹುಳುಗಳೂ, ಚರಾಚರಗಳೂ ಧನ್ಯವಾದುವು.
೬೨. ಗಂಗೆಗಿಂತಲೂ ಮೂರು ಮೈಲಿಯ ದೂರದಲ್ಲಿ ಸತ್ತವರು ದೇವತೆಗಳಾಗುತ್ತಾರೆ. ಮಿಕ್ಕವರು ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟುತ್ತಾರೆ.
೭೩. ಗಂಗೆಯ ಸ್ನಾನಕ್ಕೆಂದು ಹೋಗುತ್ತಾ ದಾರಿಯಲ್ಲಿ ಸತ್ತರೆ ಅವನು ಗಂಗಾಸ್ನಾನದ ಫಲವನ್ನು ಹೊಂದುತ್ತಾನೆ. ಮತ್ತು ಸ್ವರ್ಗವನ್ನೂ ಹೊಂದುತ್ತಾನೆ.
೭೪. ಗಂಗೆಗೆ ಹೋಗುತ್ತಿರುವವರ ಕಾಲಿನ ತುಳಿತದಿಂದ ಸತ್ತ ಸಣ್ಣ ಪ್ರಾಣಿಗಳ ಜೀವವು ಗಂಗೆಗೆ ಹೋಗುತ್ತದೆ, ದಾರಿಯಲ್ಲಿ ಸತ್ತವರ ಜೀವಗಳೂ ಗಂಗೆಗೆ ಹೋಗುತ್ತವೆ.
೭೫. ಗಂಗೆಯ ವಿಷಯದಲ್ಲಿ ಒಳ್ಳೆಯ ವಿಷಯವನ್ನು ಯಾರು ಹೇಳುತಾರೆಯೋ, ಅವರು ಗಂಗಾ ಸ್ನಾನದ ಪುಣ್ಯವನ್ನು ಹೊಂದುತ್ತಾರೆ.
೭೬. ನಾಸ್ತಿಕರಾದವರ ಮಾತನ್ನು ಕೇಳಿಕೊಂಡು ಜಾಹ್ನವಿಯನ್ನು ನಿಂದಿಸುವವರು ಶಾಶ್ವತವಾದ ನರಕವನ್ನು ಹೊಂದುತ್ತಾರೆ.
೭೭. ಕಷ್ಟದಲ್ಲಿರುವವನು ಗಂಗೆ ಎಂಬುದಾಗಿ ಸ್ಮರಿಸಿದರೆ ಸ್ವರ್ಗವನ್ನು ಹೊಂದುತ್ತಾನೆ. ಬಹಳ ಮಾತಿನಿಂದೇನು ?
೬೮. ನೂರು ಯೋಜನಗಳ ದೂರದಲ್ಲಿರುವವನೂ ಗಂಗೆ ಗಂಗೆ ಎಂದು ಹೇಳಿದರೆ ಪಾಪವನ್ನು ಕಳೆದುಕೊಂಡು ವಿಷ್ಣು ಲೋಕವನ್ನು ಹೊಂದುವನು.
೭೯. ಗಂಗೆಗೆ ಹೋಗದವರು ಕುರುಡರು, ಕುಂಟರು, ಇವರು ವ್ಯರ್ಥವಾಗಿ ಹುಟ್ಟಿದವರು. ಅನ್ಯಾಯವಾಗಿ ಗರ್ಭದಿಂದ ಬಿದ್ದವರೆಂದು ತಿಳಿ
೮೦. ಗಂಗೆಯನ್ನು ಸ್ಮರಿಸದವನು ಸೋಮಾರಿಯು, ಅಧಮನು. ಪರರಿಗೆ ಹೇಳದವನು ಹುಚ್ಚನು, ಉಪಯೋಗವಿಲ್ಲದ ಮಾತಿನವನು.
೮೧. ಗಂಗೆಯ ನಾಮವನ್ನು ಹೇಳದವನಿಗೆ ಶಾಸ್ತ್ರವು ಫಲವಿಲ್ಲ. ಅವನು ಕೆಟ್ಟ ಬುದ್ಧಿಯುಳ್ಳವನು. ಪತಿತರಲ್ಲಿಯೂ ಅಧಮನು.
೮೨. ಈ ಸ್ತೋತ್ರವನ್ನು ಹೇಳಿಕೊಡುವವರೂ, ಹೇಳುವವರೂ ತನ್ನ ಪಿತೃ ಗಳನ್ನೂ, ಗುರುಗಳನ್ನೂ, ಉದ್ಧಾರಮಾಡುತ್ತಾರೆ. ತಾವೂ ಉದ್ಧಾರವಾಗುತ್ತಾರೆ.
೮೩. ಗಂಗೆಗೆ ಹೋಗುವವರಿಗೆ ಹಣವನ್ನೂ, ನೀರನ್ನೂ, ಕೊಡುವವನು ಭಾಗೀರಥಿಯ ಸ್ನಾನವನ್ನು ಹೊಂದುತ್ತಾನೆ. ಪರರ ಅನ್ನದಿಂದಲೇ ಹೋಗುವವನೂ ಆ ಗಂಗಾ ಸ್ನಾನವನ್ನು ಅತ್ಯಂತವಾಗಿ ಹೊಂದುತ್ತಾನೆ.
೮೪. ಸ್ನಾನಮಾಡುವವನಿಗೆ ಸ್ನಾನದ ಫಲವೂ, ಅದನ್ನು ಮಾಡುವಂತೆ ಪ್ರೇರಿಸಿದನಿಗೆ ಅದರ ಎರಡರಷ್ಟ ಬರುತ್ತದೆ. ಇಚ್ಚೆಯಿದ್ದಾಗಲೀ, ಇಲ್ಲದಾಗಲಿ, ಪ್ರೇರಿಸಿದರೂ, ಇನ್ನೊಬ್ಬರ ಸೇವೆಯಿಂದ ಗಂಗೆಗೆ ಹೋದವನು ಸ್ವರ್ಗವನ್ನು ಹೊಂದುತ್ತಾನೆ.
೮೫. ದ್ವಿಜರು ಹೇಳಿದರು- ಎಲೈ ವ್ಯಾಸನೇ ನಿರ್ಮಲವಾದ ಕೀರ್ತನೆಯನ್ನು ನಿನ್ನಿಂದ ಕೇಳಿದೆನು. ಆ ಗಂಗೆಯು ಎಲ್ಲಿ ಹುಟ್ಟಿದಳು ? ಅವಳ ಆಕಾರವೇನು ? ಅವಳು ಇಷ್ಟೊಂದು ಪರಿಶುದ್ಧಳಾಗಿರಲು ಕಾರಣವೇನು ?
೮೬. ವ್ಯಾಸನು ಹೇಳಿದನು.
ಈ ಪುರಾತನವಾದ ಕಥೆಯನ್ನು ಕೇಳಿರಿ ಇದನ್ನು ಕೇಳಿದರೆ ಜನರು ಮೋಕ್ಷಕ್ಕೆ ಹೋಗುತ್ತಾರೆ.
೮೭. ಪೂರ್ವದಲ್ಲಿ ನಾರದನು ಬ್ರಹ್ಮಲೋಕಕ್ಕೆ ಹೋಗಿದ್ದನು. ಆಗ ಬ್ರಹ್ಮ ನಿಗೆ ನಮಸ್ಕರಿಸಿ ಪವಿತ್ರವೂ, ಮೂರುಲೋಕಕ್ಕೆ ಪಾವನವೂ ಆದುದನ್ನು ಕೇಳಿದನು.
೮೮. ಎಲೈ ತಂದೆಯೇ ? ಶಿವನಾರಾಯಣರಿಗೆ ಇಷ್ಟವಾದ ಲೋಕಹಿತವಾದ ಯಾವುದನ್ನು ಪ್ರಪಂಚದಲ್ಲಿ ಸೃಷ್ಟಿಸಿದ್ದೀಯೆ ?
೮೯-೯೦. ಅಂತಹ ಉತ್ತಮವಾದ ದೇವಿಯನ್ನಾಗಲಿ, ದೇವತೆಯನ್ನಾಗಲೀ ಯಾರನ್ನು ಸೃಷ್ಟಿಮಾಡಿದ್ದೀಯೆ ? ದೇವತೆಗಳು, ದೈತ್ಯರು, ಮನುಷ್ಯರು, ನಾಗರು, ಅಂಡಜರು, ಸ್ವೇದಜಗಳು, ಮರಗಳು, ಉದ್ಬಿಜಗಳು ಎಲ್ಲವೂ ಯಾರನ್ನು ಸೇವಿಸಿ ಉತ್ತಮಗತಿಯನ್ನು ಹೊಂದುವುವೋ ಅಂತಹುದು ಯಾವುದು ?
೯೧. ಬ್ರಹ್ಮನು ಹೇಳಿದನು-
ನಾನು ಪ್ರಕೃತಿಯನ್ನು ಸೃಷ್ಟಿಮಾಡುತ್ತಿದ್ದಾಗಲೇ ಆಕೆಯನ್ನು ಕುರಿತು ನೀನು ಲೋಕಗಳಿಗೆ ಮೊದಲನೆಯವಳಾಗು, ನಿನ್ನಿಂದಲೇ ಸಂಸಾರವನ್ನು ಸೃಷ್ಟಿಸುತ್ತೇನೆ ಎಂದು ಹೇಳಿದೆನು.
೯೨-೯೩. ಇದನ್ನು ಕೇಳಿ ಆಕೆಯು ಗಾಯತ್ರಿ, ಸ್ವರ್ಗದ ಲಕ್ಷ್ಮಿ, ಸಸ್ಯ ಹಣಗಳನ್ನು ಕೊಡುವ ಲಕ್ಷ್ಮಿ, ಜ್ಞಾನವಿದ್ಯೆ, ಶಕ್ತಿಯಾದ ವಿದ್ಯೆ, ಉಮಾದೇವಿ, ಧರ್ಮದ್ರವಳಾದ ಗಂಗೆ, ಈ ರೀತಿ ಏಳು ಭಾಗವಾದಳು.
೯೪. ಗಾಯತ್ರಿಯಿಂದ ವೇದಗಳು ಹುಟ್ಟಿದುವು. ಜಗತ್ತೆಲ್ಲವೂ ಅದರಲ್ಲಿಯೇ ಇದೆ. ಸ್ವಸ್ತಿ, ಸ್ವಾಹ, ಸ್ವಧಾ, ದೀಕ್ಷೆ ಇವರು ಗಾಯತ್ರಿಯಿಂದ ಹುಟ್ಟಿದವರು.
೯೫. ಯಜ್ಞದಲ್ಲಿ ಗಾಯತ್ರಿಯನ್ನು ಮಾತೃಕಾವರ್ಣದೊಡನೆ ಉಚ್ಚರಿಸಬೇಕು. ದೇವತೆಗಳು ಯಜ್ಞದಲ್ಲಿ ಸುಧೆಯನ್ನು ಹೊಂದಿ ಮುಪ್ಯೂ, ಸಾವೂ, ಇಲ್ಲದವರಾದರು.
೯೬-೧೦೩. ಅನಂತರ ದೇವತೆಗಳು ಸುಧೆಯನ್ನು ಭೂಮಿಯಲ್ಲಿ ಬಿಟ್ಟರು. ಆಗ ಭೂಮಿಯು ಸಸ್ಯವನ್ನುಳ್ಳದ್ದಾಗಿಯೂ, ಓಷಧಿಯನ್ನುಳ್ಳದಾಗಿಯೂ ಆಯಿತು. ಆಗ ಜನರು ಫಲಗಳು ಮೂಲಗಳನ್ನು ತಿಂದು ಸುಖವನ್ನು ಹೊಂದಿದರು. ಭಾರತಿಯು (ವಾಕ್ಕು) ಎಲ್ಲಾ ಜನಮುಖದಲ್ಲಿ ಕುಳಿತಿದೆ. ಅದೇ ರೀತಿಯಲ್ಲಿ ಸರ್ವಶಾಸ್ತ್ರದಲ್ಲಿಯೂ ಇದ್ದುಕೊಂಡು ಧರ್ಮವನ್ನು ಉಪದೇಶಿಸುತ್ತಿರುವಳು. ವಿಜ್ಞಾನ, ಕಲಹ, ಶೋಕ, ಮೋಹ, ಮೋಹವನ್ನು ಬಿಡುವಿಕೆ, ಮಂಗಳ, ಅಮಂಗಳ, ಎಲ್ಲವೂ ಅವಳನ್ನು ಆಶ್ರಯಿಸಿವೆ. ಆಕೆಯಿಲ್ಲದಿದ್ದರೆ ಪ್ರಪಂಚವೇ ನಿಜಸ್ಥಿತಿಯನ್ನು ತಿಳಿಯುವುದಿಲ್ಲ. ಲಕ್ಷ್ಮೀಯಿಂದಲೇ ವಸ್ತ್ರ, ಒಡವೆ, ಸುಖ ರಾಜ್ಯಗಳೆಲ್ಲವೂ ಸಿಕ್ಕುತ್ತವೆಂದು ಮೂರು ಲೋಕದಲ್ಲಿಯೂ ಪ್ರಸಿದ್ಧವಾಗಿದೆ. ಆದ್ದರಿಂದಲೇ ಆಕೆಯು ಹರಿವಲ್ಲಭಳು. ಉಮೆಯ ಸಂಬಂಧದಿಂದಲೇ ಶಂಭುವು ಸರ್ವಜ್ಞನಾಗಿರುವುದು. ಆ ಉಮೆಯು ಜ್ಞಾನದ ತಾಯಿಯೆಂದು ತಿಳಿ. ಆಕೆಯು ಶಂಭುವಿನ ಅರ್ಧಾಂಗಿಯೂ ಆಗಿರುವಳು, ವರ್ಣಿಕೆಯೆಂಬ ದೇವಿಯು ಬಹು ಉಗ್ರಳಾದವಳು. ಸರ್ವಲೋಕವನ್ನು ಮೋಹಿಸುವಂತೆ ಮಾಡುವವಳು, ಲೋಕದ ಸ್ಥಿತಿ ಪರಿಹಾರಗಳನ್ನು ಮಾಡುವವಳು, ಈಕೆಯೇ ಪೂರ್ವದಲ್ಲಿ ಮಧುಕೈಟಭರನ್ನು ಕೊಂದಳು. ಪ್ರಸಿದ್ಧನಾದ ರುರುವನ್ನು ಈಕೆಯೇ ಕೊಂದಳು. ಮಹಿಷಾಸುರನನ್ನು ಈಕೆಯೇ ಸಂಹರಿಸಿದವಳು.
೧೦೪-೧೦೬. ಯುದ್ಧದಲ್ಲಿ ರಕ್ತಬೀಜಾಸುರ, ಶುಂಭ ನಿಶುಂಭ, ಇವರೆಲ್ಲರನ್ನೂ ಲೀಲೆಯಿಂದಲೇ ಕೊಂದಳು. ಈ ರೀತಿ ದೈತ್ಯಶ್ರೇಷ್ಠರೆಲ್ಲರನ್ನೂ ಮೋಹಿಸುವಂತೆ ಮಾಡುತ್ತಾ, ಕೊಂದು, ಈ ಮೂರು ಲೋಕವನ್ನೂ ಕಾಪಾಡುವಳು.
೧೦೭. ಧರ್ಮದ್ರವಳಾದ ಆ ಗಂಗೆಯು ಸರ್ವಧರ್ಮಗಳುಳ್ಳವಳು. ಆಕೆಯ ಆ ದೊಡ್ಡಸ್ತಿಕೆಯನ್ನು ನೋಡಿ ನಾನು ಕಮಂಡಲುವಿನಲ್ಲಿ ಧರಿಸಿದೆನು.
೧೦೮. ಅವಳ ಅನುಗ್ರಹದಿಂದಲೇ ದೇವತೆಗಳೆಲ್ಲರೂ ವಿಸ್ತರಿಸಿಕೊಂಡಿರುವರು ತ್ರಿಮೂರ್ತಿಗಳಾದ ನಾವೂ ಅವಳನ್ನೇ ಆಶ್ರಯಿಸಿಕೊಂಡಿದ್ದೇವೆ.
೧೦೯-೧೧೦. ನನ್ನ ಕಮಂಡಲುವಿನಲ್ಲಿ ಸೇರಿಕೊಂಡು ಧರ್ಮದ್ರವಳೆಂದು ಪ್ರಸಿದ್ಧಳಾಗಿರುವಳು. ಬಲಿಯು ಯಾಗಮಾಡಿದಾಗ ವಿಷ್ಣುವಿನಿಂದ ಹುಟ್ಟಿರುವಳು, ಯಾಗ ಮಾಡುವಾಗ ಬಲಿಷ್ಠನಾದ ಬಲಿಯನ್ನು ವಿಷ್ಣುವು ವಂಚಿಸಿದನು ಆಗ ಎರಡು ಕಾಲಿನಿಂದ ವಿಷ್ಣುವು ಭೂಮಿಯನ್ನೆಲ್ಲಾ ಆವರಿಸಿಕೊಂಡನು.
೧೧೧. ಮತ್ತೊಂದು ಕಾಲು ಬ್ರಹ್ಮಾಂಡವನ್ನು ಭೇದಿಸಿಕೊಂಡು ನನ್ನ ಮುಂದೆ ಬಂದಿತು. ಆಗ ನಾನು ಆ ಕಮಂಡಲುವಿನ ನೀರಿನಿಂದ ಆ ಪಾದವನ್ನು ತೊಳೆದು ಪೂಜಿಸಿದೆನು.
೧೧೨-೧೧೩. ಕಾಲನ್ನು ತೊಳೆದು ಪೂಜಿಸಿದ ಆ ನೀರು ಹೇಮಕೂಟದಲ್ಲಿ ಬಿದ್ದಿತು. ಆ ಹೇಮಕೂಟದ ಶಿಖರದಿಂದ ಶಂಕರನ ತಲೆಯಮೇಲೆ ಬಿದ್ದು ಒಳಗೆ ಸುತ್ತುತ್ತಿದ್ದಿತು. ಅನಂತರ ಭಗೀರಥನು ಶಿವನನ್ನು ಆರಾಧಿಸಿದರು. ಅದನ್ನು ಬಿಡಲು ಅನಂತರ ಆನೆಗಳಲ್ಲಿ ಶ್ರೇಷ್ಠವಾದ ಐರಾವತವನ್ನು ಭಗೀರಥನು ಅರಾಧಿಸಿದನು.
೧೧೪. ಆಗ ಆ ಐರಾವತವು ಮೂರು ದಂತಗಳಿಂದ ತಿವಿದು ಮೂರು ಬಿಲಗಳನ್ನು ಮಾಡಿತು. ಆಗ ಆ ನದಿಯು ಮೂರು ಬಿಲಗಳಿಂದ ಹೊರಟು ತ್ರಿಸ್ರೋತಸಗಳೆಂದು ಹೆಸರು ಪಡೆದಳು.
೧೧೫. ಹರ, ಬ್ರಹ್ಮ, ಹರಿಯರ ಸಂಬಂಧದಿಂದ ಪವಿತ್ರವಾಗಿರುವ ಆ ನದಿಯನ್ನು ಹೊಂದಿ ಸೇವಿಸಿದರೆ ಎಲ್ಲಾ ಧರ್ಮಗಳನ್ನು ಹೊಂದುವರು.
೧೧೬. ಜನಗಳು ಗಂಗಾಸೇವೆಯಿಂದ ಹೊಂದಿದ ಸೇವೆಯ ಫಲವನ್ನು ಪಾಠ ಹೇಳುವದು, ಯಜ್ಞಮಾಡುವುದು, ಮಂತ್ರ ಜಪಿಸುವುದು, ಹೋಮ ಮಾಡುವುದು ದೇವತಾರ್ಚನೆ ಮಾಡುವುದು, ಇವುಗಳಿಂದ ಹೊಂದಲಾರರು.
೧೧೭. ಧರ್ಮವನ್ನು ಹೊಂದುವುದಕ್ಕೆ ಇದಕ್ಕಿಂತಲೂ ಸುಲಭವಾದ ಬೇರೆ ವಿಧಾನವು ಇಲ್ಲ. ಎಲೈ ನಾರದನೆ ! ಆದ್ದರಿಂದ ನೀನು ಗಂಗೆಯನ್ನು ಸೇವಿಸು.
೧೧೮ ಗಂಗೆಯ ನೀರಿನಲ್ಲಿ ಆ ಸಗರನ ಮಕ್ಕಳು ತಮ್ಮ ಹಿಂದಿನವರೊಡನೆ ಸ್ವರ್ಗವನ್ನು ಹೊಂದಿದರು.
೧೧೯. ವ್ಯಾಸನು ಹೇಳಿದನು-
ನಾರದನು ಬ್ರಹ್ಮನ ಮುಖದಿಂದ ಈ ಮಾತನ್ನು ಕೇಳಿ ಆ ಗಂಗೆಯ ದ್ವಾರದಲ್ಲಿ ತಪಸ್ಸನ್ನು ಮಾಡಿ ಬ್ರಹ್ಮನಿಗೆ ಸಮನಾದನು.
೧೨೦. ಗಂಗೆಯು ಎಲ್ಲಾ ಕಡೆಯಲ್ಲಿಯೂ ಸುಲಭವಾಗಿ ಸಿಕ್ಕಿದರೂ ಗಂಗಾದ್ವಾರ, ಪ್ರಯಾಗ, ಸಾಗರ ಸಂಗಮಗಳಲ್ಲಿ ಅದನ್ನು ಹೊಂದಲು ಕಷ್ಟವು.
೧೨೧. ಅಲ್ಲಿದ್ದರೆ ಒಂದು ರಾತ್ರಿ ಅಥವಾ ಮೂರು ರಾತ್ರಿಯೊಳಗೆ ಮುಕ್ತಿಯನ್ನು ಹೊಂದುತ್ತಾನೆ. ಆದ್ದರಿಂದ ಸರ್ವಪ್ರಯತ್ನದಿಂದಲೂ ಮುಕ್ತಿಯನ್ನು ಆಪೇಕ್ಷಿಸು.
೧೨. ಆದ್ದರಿಂದ ಎಲೈ ಧರ್ಮವನ್ನು ಬಲ್ಲವರಿರಾ ! ನೀವು ಭಾಗೀರಥಿಗೆ ಹೋಗಿರಿ. ಅಲ್ಲಿ ಸ್ವಲ್ಪಕಾಲದಿಂದಲೇ ಸ್ವರ್ಗ ಮೋಕ್ಷಗಳನ್ನು ಹೊಂದುತ್ತೀರಿ.
೧೨೩, ಜನರಿಗೆ ಮೋಕ್ಷಕ್ಕೆ ಅನುಕೂಲವಾದ ಮಾರ್ಗವು, ಬಲಹೀನರಿಗೂ ಬಹು ಸುಲಭವಾಗಿಯೇ ಪುಣ್ಯವು ಸಿಕ್ಕುತ್ತದೆ.
೧೨೪. ಪುಲಸ್ತನು ಹೇಳಿದನು-
ಆಗ ವ್ಯಾಸನಿಂದ ಅವರೆಲ್ಲರೂ ಈ ಮಾತನ್ನು ಕೇಳಿ ಗಂಗೆಯಲ್ಲಿ ತಪಸ್ಸು ಮಾಡಿ ಮೋಕ್ಷವನ್ನು ಹೊಂದಿದರು.
೧೨೫ ಈ ಪುಣ್ಯ ಕಥೆಯನ್ನು ಕೇಳಿದವನು ದುಃಖವನ್ನು ಕಳೆದುಕೊಂಡು ಗಂಗಾಸ್ನಾನದ ಫಲವನ್ನು ಹೊಂದುತ್ತಾನೆ.
೧೨೬-೧೨೭. ಒಂದು ಬಾರಿ ಈ ಕಥೆಯನ್ನು ಹೇಳಿದುದರಿಂದಲೇ ಸರ್ವಯಜ್ಞದ ಫಲವನ್ನು ಹೊಂದುತ್ತಾನೆ. ದಾನ, ಜಪ, ಧ್ಯಾನ, ಸ್ತೋತ್ರ, ಮಂತ್ರ, ದೇವತಾರ್ಚನೆಗಳನ್ನು ಆ ಗಂಗೆಯ ಸಮೀಪದಲ್ಲಿ ಮಾಡಿದರೆ ಅನಂತವಾದ ಫಲವು ಬರುತ್ತದೆ. ಆದ್ದರಿಂದ ಜನರು ಆ ಗಂಗೆಯ ದಡದಲ್ಲಿಯೇ ಜಪಾದಿಗಳನ್ನು ಮಾಡಬೇಕು. ಅದರಿಂದ ಅನಂತವಾದ ಫಲವನ್ನು ಹೊಂದಿ ಅದನ್ನು ಜನ್ಮಜನ್ಮದಲ್ಲಿಯೂ ಅನುಭವಿಸುತ್ತಾನೆ.
***
jyeshta shukla dashami
ಗಂಗೆಯು ಭೂಲೋಕದಲ್ಲಿ ಅವತರಿಸಿದ ದಿನ !
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠೇ ಮಾಸಿ ಕುಜೇಹನಿ |
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ || – ವರಾಹಪುರಾಣ
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠೇ ಮಾಸಿ ಕುಜೇಹನಿ |
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ || – ವರಾಹಪುರಾಣ
ಗಂಗಾವತರಣದ ತಿಥಿಯನ್ನು ಕೆಲವು ಪುರಾಣಗಳಲ್ಲಿ ವೈಶಾಖ ಶುಕ್ಲ ಪಕ್ಷ ತೃತೀಯವಾದರೆ, ಕೆಲವು ಪುರಾಣಗಳಲ್ಲಿ ಕಾರ್ತಿಕ ಹುಣ್ಣಿಮೆಯೆಂದು ಹೇಳಲಾಗಿದ್ದರೂ, ಹೆಚ್ಚಿನ ಪುರಾಣಗಳಲ್ಲಿ ‘ಜ್ಯೇಷ್ಠ ಶುಕ್ಲ ಪಕ್ಷ ದಶಮಿ’ಯನ್ನೇ ಗಂಗಾವತರಣದ ತಿಥಿ ಎಂದು ಹೇಳಲಾಗಿದೆ.
***
ರಘುಕುಲದಲ್ಲಿ, ಸತ್ಯ ಹರಿಶ್ಚಂದ್ರನ ಅನಂತರ ಬಂದ ಅರಸರಲ್ಲಿ ಪ್ರಮುಖನಾದವನು ಸಗರ. ಸಂಸ್ಕೃತದಲ್ಲಿ ‘ಸಗರ’ ಎಂದರೆ ವಿಷಸಹಿತ ಎಂದರ್ಥ. ಅವನಿಗೆ ಆ ಹೆಸರು ಬಂದ ಸಂದರ್ಭವನ್ನು ಆದಿಕವಿ ವಾಲ್ಮೀಕಿ ಬಣ್ಣಿಸುವುದು ಹೀಗೆ:
ಹರಿಶ್ಚಂದ್ರನ ಮಗ ರೋಹಿತ, ಅವನ ಪುತ್ರ ಹರಿತ, ಅವನ ಸಂತಾನ ಚಂಪ. ಅನಂತರ ಬಂದವನು ಸುದೇವ ಮತ್ತು ಅವನ ಕುವರ ವಿಜಯ. ಈ ಪರಂಪರೆಯ ಮುಂದಿನವರು ಭರುಕ, ವೃಕ ಹಗೂ ಬಾಹುಕ. ಇಲ್ಲಿಯವರೆವಿಗೂ ಬಲಶಾಲಿಗಳಾಗಿದ್ದ ಅರಸು ಮನೆತನಕ್ಕೆ ವಿಘ್ನ ಬಂದದ್ದು ಬಾಹುಕನ ಕಾಲದಲ್ಲಿಯೇ. ಅವನ ರಾಜ್ಯಭಾರದ ಸಮಯದಲ್ಲಿ ಶತ್ರುಗಳು ದಂಡೆತ್ತಿ ಬಂದು ಬಾಹುಕನನ್ನು ಸೋಲಿಸಿ ಪದಚ್ಯುತಗೊಳಿಸುತ್ತಾರೆ. ಸೋತು ಹಣ್ಣಾದ ಬಾಹುಕ ವೃದ್ಧಾಪ್ಯದಲ್ಲಿ ತನ್ನ ಹಿರಿಯ ಪತ್ನಿಯೊಂದಿಗೆ ಅರಣ್ಯಕ್ಕೆ ತೆರಳುತ್ತಾನೆ. ಅವನು ಅಲ್ಪಕಾಲದಲ್ಲಿಯೇ ಮೃತನಾದಾಗ ಅವನ ಪತ್ನಿ ಸಹಗಮನಕ್ಕೆ ಮುಂದಾಗುತ್ತಾಳೆ.
ಆಗ ಆ ಕಾಡಿನಲ್ಲಿದ್ದ ಜೌರ್ವನೆಮಬ ಮಹರ್ಷಿ, ಆಕೆ ಗರ್ಭಿಣಿ ಎಂದು ತಿಳಿದಿದ್ದರಿಂದ, ಸಹಗಮನದಿಂದ ಅವಳನ್ನು ತಡೆಯುತ್ತಾಕೆ. ತುಂಬು ಗರ್ಭಿಣಿಯಾದ ಅವಳ ಏಳಿಗೆಯನ್ನು ಸಹಿಸದ ಆಕೆಯ ಸವತಿಯರು ಅವಳಿಗೆ ಊಟದೊಂದಿಗೆ ‘ಗರ’ ಅಥವಾ ‘ವಿಷ’ವನ್ನು ತಿನ್ನಿಸುತ್ತಾರೆ. ಆದರೆ ಆ ವಿಷವು ಅವಳ ಗರ್ಭದ ಮೇಲೆ ಏನೊಂದು ಪ್ರಭಾವವನ್ನು ಮಾಡದೆ, ಮಗುವಿನ ‘ಸಗರ’ ಎಂದು ನಾಮಕರಣ ಮಾಡಲಾಗುತ್ತದೆ.
ಹೀಗೆ ಹುಟ್ಟಿನಿಂದಲೇ ಬಂದ ಯಶೋವಂತ ‘ಸಗರ’ ಚಕ್ರವರ್ತಿ ಪಟ್ಟ ಏರಲು ಬಹಳ ಸಾಹಸಪಡಬೇಕಾಗುತ್ತದೆ. ತನ್ನ ತಂದೆಯ ಶತ್ರುಗಳಾದ ತಾಲ, ಜಂಘ, ಯವನ, ಶಕ, ಹೈದಯ, ಬರ್ಬರ ಮುಂತಾದ ಜಾತಿಯವರನ್ನೆಲ್ಲ ಗೆದ್ದು ಮರಳಿ ರಾಜ್ಯವನ್ನು –ಕೋಸಲ ಸಾಮ್ರಾಜ್ಯವನ್ನು ಪಡೆಯುತ್ತಾನೆ. ಅವನಿಗೆ ಇಬ್ಬರು ಧರ್ಮಪತ್ನಿಯರು. ಹಿರಿಯವಳು ಕೇಶಿನಿ. ಅವಳ ಒಬ್ಬನೇ ಮಗ ಅಸಮಂಜ.
ಅವನು ತನ್ನ ಹಿಂದಿನ ಜನ್ಮದಲ್ಲಿ ಯೋಗಿಯಾಗಿದ್ದವನು. ತಪಶ್ಚರ್ಯೆಯಲ್ಲಿ ನಿರತನಾಗಿದ್ದ ಅವನು ಮಾನಿನಿಯರ ಸಂಗದಿಂದ ವಿಚಲಿತನಾಗಿ, ಅರ್ಧದಲ್ಲಿಯೇ ಅದನ್ನು ಬಿಟ್ಟು ಭೋಗ ಜೀವನಕ್ಕೆ ತೊಡಗಿದವನು. ವೃದ್ಧಾಪ್ಯದಲ್ಲಿ ತನ್ನ ತಪ್ಪಿನ ಅರಿವಾದರೂ ಜೀವನದಲ್ಲಿ ಬಹಳ ದೂರ ಬಂದಿದ್ದರಿಂದ ಪಶ್ಚಾತ್ತಾಪಪಟ್ಟು ಮೂಢನಾದವನು. ಅಸಮಂಜನಿಗೆ ತನ್ನ ಪೂರ್ವಜನ್ಮದ ವಾಸನೆ ಪದೇ ಪದೇ ಕಾಡಿ, ಈ ಜನ್ಮದಲ್ಲಿ ಅರೆಹುಚ್ಚನಾಗಿ, ಹೆಸರಿಗೆ ತಕ್ಕಂತೆ ಅಸಮಂಜಸ ಕಾರ್ಯಗಳನ್ನು ಮಾಡುತ್ತಿದ್ದ. ಅವನ ಮಗನೆ ಅಂಶುಮಂತ. ತುಂಬ ಸಂಭಾವಿತ ಬಾಲಕ.
ಈ ಅಸಮಂಜ ಕೋಸಲದ ಪ್ರಜೆಗಳ ಪುತ್ರರನ್ನು ವಿನಾಕಾರಣ ನೀರಿಗೆಸೆಯುವುದು, ಸರಯೂ ನದಿ ತೀರದಲ್ಲಿ ಕುಕಾರ್ಯಗಳನ್ನು ಮಾಡುವುದು, ಸುಮ್ಮಸುಮ್ಮನೆ ನಗುವುದು- ಹೀಗೆಲ್ಲ ಮಾಡಿ ರಾಜಗಾಂಭಿರ್ಯವನ್ನು ಕಳೆದುಕೊಂಡು ತಂದೆಗೆ ಬೇಡವಾದ ಮಗನಾಗಿ ಅರಣ್ಯ ಸೇರುತ್ತಾನೆ. ಅಲ್ಲಿ ತನ್ನ ಪೂರ್ವಜನ್ಮದ ತಪಸ್ಸನ್ನು ಮುಂದುವರಿದಿ ಸಂನ್ಯಾಸಿಯಾಗುತ್ತಾನೆ. ಇಂತಹ ಮಗನ ವಿಯೋಗದಿಂದ ನೊಂದ ಸಗರ ದೈವ ಪ್ರಾರ್ಥನೆ ಮಾಡಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂಬ ಬಯಕೆಯಿಂದ, ಮಂತ್ರಶಕ್ತಿಯಿದೆ. ಕಿರಿಯ ಪತ್ನಿ ಸುಮತಿಯ ಮೂಲಕ ಅರವತ್ತು ಸಾವಿರ ಮಕ್ಕಳನ್ನು ಪಡೆಯುತ್ತಾನೆ.
ಸಾಮ್ರಾಜ್ಯ ವಿಸ್ತರಿಸಿದ ಹಾಗೆ ಸಗರನ ಬಯಕೆಯೂ ಹೆಚ್ಚಾಗಿ, ಅವನ ಕಣ್ಣು ಇಂದ್ರ ಪದವಿಯ ಮೇಲೆ ಬೀಳುತ್ತದೆ. ತನ್ನ ಕುಲಗುರು ಚೌರ್ವ ಮಹರ್ಷಿಗಳ ಸಲಹೆಯಂತೆ ‘ಅಶ್ವಮೇಧ’ ಯಜ್ಞದ ಮೂಲಕ ಸರ್ವಶಕ್ತಿವಂತನಾದ ಶ್ರೀಹರಿಯ ಆರಾಧನೆಗೆ ತೊಡಗುತ್ತಾನೆ. ಆ ಯಜ್ಞದ ನಿಯಮದಂತೆ, ಭೂಮಂಡಲದಲ್ಲಿ ತನ್ನ ಸಾರ್ವಭೌಮತ್ವವನ್ನು ಸಾರಲು ಯಜ್ಞಾಶ್ವವನ್ನು ಕೋಸಲ ಸಾಮ್ಯಾಜ್ಯದಲ್ಲಿ ಸಂಚರಿಸಲು ಬಿಡುತ್ತಾನೆ. ಅದನ್ನು ಕಟ್ಟಿದವರೊಂದಿಗೆ ಹೋರಾಡಿ ಗೆಲ್ಲುವುದು ನಿಯಮ. ಸೋತರೆ ಶರಣಾಗತಿ.
ಸಗರನ ಯಜ್ಞದ ವಿಷಯ ದೇವೇಂದ್ರನಿಗೆ ತಿಳಿಯದೇ ಹೋದಿತೆ? ತನ್ನ ಪದವಿಗೆ ಚ್ಯುತಿ ಬರುತ್ತಿದೆಯೆಂಬ ಸುಳಿವು ಸಿಕ್ಕ ಕೂಡಲೆ ಅವನು ಕಾರ್ಯ ಸನ್ನದ್ಧನಾಗುತ್ತಾನೆ. ಏನೇ ಆಗಲಿ ಸಗರನ ಯಜ್ಞ ವಿಫಲವಾಗಲೇಬೇಕು. ಅಂದರೆ ಆ ಯಜ್ಞಾಶ್ವವನ್ನು ಯಾರಾದರೂ ಜಯಿಸಬೇಕು ಅಥವಾ ಬಚ್ಚಿಡಬೇಕು. ಸಗರನನ್ನು ಗೆಲ್ಲುವ ಧೀರ ಯಾರಿದ್ದಾನೆ, ಅದು ಅಸಾಧ್ಯ ಕುದುರೆಯನ್ನು ಬಚ್ಚಿಡುವುದೇ ಲೇಸು ಎಂದರಿತ ಇಂದ್ರ ಅದನ್ನು ಅಪಹರಿಸಿ ಅತ್ಯಂತ ಸುರಕ್ಷಿತ ಸ್ಥಳವಾದ ಕಪಿಲ ಮುನಿಗಳ ಕುಟೀರದ ಬಳಿ-ಪಾತಾಳ ಲೋಕದ ಈಶಾನ್ಯ ಭಾಗದಂಚಿನಲ್ಲಿ ಕಟ್ಟಿ ಹಾಕುತ್ತಾನೆ. ತಪೋನಿರತರಾದ ಮುನಿಗಳು, ಇಂದ್ರನ ಈ ಕಾರ್ಯಕ್ಕೆ ಸಹಕರಿಸುತ್ತಾರೆ.
ಕುದುರೆಯ ಹಿಂದಿರುಗುವಿಕೆಗಾಗಿ ಕಾತರದಿಂದ ಕಾಯುತ್ತಿದ್ದ ಸಗರ ಅದರ ಸುಳಿವು ಸಿಗದೆ, ಯಜ್ಞವನ್ನು ಅರ್ಧಕ್ಕೆ ನಿಲ್ಲಿಸಿ, ಅದರ ಶೋಧಕ್ಕಾಗಿ ತನ್ನ ಅರವತ್ತು ಸಹಸ್ರ ಪುತ್ರರನ್ನು ಕಳುಹಿಸುತ್ತಾನೆ. ಇಡೀ ಭೂಮಂಡಲವನ್ನೆಲ್ಲ ಶೋಧಿಸಿದರೂ ಅಶ್ವ ಕಾಣದಿರಲಿ ಆ ಪಿತೃ ವಾಕ್ಯ ಪರಿಪಾಲಕರು ಭೂಮಿಯ ಈಶಾನ್ಯ ಭಾಗದಲ್ಲಿ ರಂಧ್ರವೊಂದನ್ನು ಕಂಡು ಅಲ್ಲಿಯೇನೋ ಮರ್ಮವಿರಬೇಕೆಂದು ಊಹಿಸಿ ನೆಲವನ್ನು ಅಗೆದು ಪಾತಾಳಕ್ಕೆ ಬರುತ್ತಾರೆ. ಮೊದಲೆ ಸಗರ ಪುತ್ರ ವೀರರು ತಾವೆಂಬ ಗರ್ವದಿಂದಿದ್ದ ಅವರು ಅಶ್ವವನ್ನು ಮುನಿ ಕುಟೀರದ ಸಮೀಪ ಕಂಡ ಕೂಡಲೇ ಮತಿಗೆಡುತ್ತಾರೆ. ಅವಿವೇಕದಿಂದ, ಕಪಿಲ ಮುನಿಯೇ ತಮ್ಮ ತಂದೆಯ ಯಜ್ಞಕ್ಕೆ ಆಪತ್ತು ತಂದ ಕಳ್ಳ ಸಂನ್ಯಾಸಿಯೆಂದು ಭಾವಿಸಿ, ಆತನನ್ನು ವಧೀಸಬೇಕೆಂಬ ಹಠದಿಂದ ಆಯುಧಗಳನ್ನು ಸಜ್ಜು ಮಾಡಿಕೊಂಡು, “ಇವನು ಕಳ್ಳ, ಕಣ್ಣುಮುಚ್ಚಿ ಮುನಿಯಂತೆ ನಾಟಕ ಮಾಡುತ್ತಿದ್ದಾನೆ. ಪಾಪಿಯನ್ನು ಕೊಂದು ಬಿಡಿ” ಎಂದು ಅವನ ಮೇಲೆ ಎರಗಿ ಬರುತ್ತಾರೆ.
ಇವರ ಗದ್ದಲದಿಂದ ಎಚ್ಚೆತ್ತ ಕಪಿಲ ಮುನಿಯ ದೃಷ್ಟಿ ಈ ಗುಂಪಿನ ಮೇಲೆ ಬೀಳುತ್ತದೆ. ಕಪಿಲ ಮುನಿ ಸಾಮಾನ್ಯ ಋಷಿಯೇ? ಅವನ ತಪಶ್ಯಕ್ತಿಯಾದರೂ ಎಂತಹುದು? ಅವನ ಒಂದು ಕಣ್ಣು ನೋಟ ಆ ಸಗರ ಪುತ್ರರನ್ನು ಸುಟ್ಟು ಭಸ್ಮವನ್ನಾಗಿಸುತ್ತದೆ. ಈ ಪ್ರಸಂಗವನ್ನು ವಿವರಿಸುತ್ತಾ ವಾಲ್ಮೀಕಿ ಉದ್ಗರಿಸುವುದು- “ಇಂದ್ರನು ಕೇವಲ ಯಜ್ಞಾಶ್ವವನ್ನಷ್ಟೇ ಅಲ್ಲ ಆ ರಾಜಕುಮಾರರ ಚಿತ್ತವನ್ನೂ ಅಪಹರಿಸಿದ್ದನು”. ಸುಮಾರು ಸಮಯ ಕಳೆದರೂ ಯಜ್ಞದ ಅಶ್ವವಾಗಲಿ ಅಥವಾ ಅದನ್ನು ಹುಡುಕಲು ಹೊರಟ ಸಹಸ್ರಾರು ಪುತ್ರರಾಗಲಿ ಹಿಂದಿರುಗದಿರಲು, ಚಿಂತಾಕ್ರಾಂತನಾದ ಸಗರನು ತನ್ನ ಮೊಮ್ಮಗ ಅಂಶುಮಾನನನ್ನು ತಪಾಸಣೆಗೆ ಕಳುಹಿಸುತ್ತಾನೆ.
ಸಗರನ ಕಿರಿಯ ಪತ್ರನಿಯ ಮಕ್ಕಳು ಅವನಿಗೆ ಚಿಕ್ಕಪ್ಪಂದಿರಷ್ಟೆ. ಅವರು ಮುನಿಯ ಕುಟೀರವನ್ನು ತಲುಪುತ್ತಾನೆ. ವಿವೇಕಿಯಾದ ಈ ಯುವಕ ಚಿಕ್ಕಪ್ಪಂದಿರಂತೆ ದುಡುಕದೆ ಕಪಿಲ ಮುನಿಯ ಆಶೀರ್ವಾದ ಪಡೆಯಲು ಮುನಿಯ ಸ್ತುತಿಗೆ ತೊಡಗುತ್ತಾನೆ. ಆ ಋಷಿಯ ಹಿರಿಮೆಯನ್ನು ಕೊಂಡಾಡುತ್ತಾನೆ. ಇವನ ಆರಾಧನೆಯಿಂದ ಸುಪ್ರೀತಗೊಂಡ ಮುನಿ ಯಜ್ಞಾಶ್ವವನ್ನು ಬಿಡುಗಡೆ ಮಾಡುವುದಲ್ಲದೆ ಅವನ ಚಿಕ್ಕಪ್ಪಂದಿರ ಮೋಕ್ಷಕ್ಕೆ ಪರಿಹಾರವನ್ನೂ ತಿಳಿಸುತ್ತಾನೆ. ಆ ಪರಿಹಾರವೆಂದರೆ “ದೇವಲೋಕದ ಪವಿತ್ರ ಗಂಗೆಯ ಜಲ ಆ ಭಸ್ಮಗಳ ಮೇಲೆ ಹರಿಯಬೇಕು.” ಇದರ ಹೊರತು ಅನ್ಯ ಮಾರ್ಗವಿಲ್ಲವೆಂದರಿತ ಅಂಶುಮಾನ ಕುದುರೆಯೊಂದಿಗೆ ರಾಜಧಾನಿಗೆ ಹಿಂದಿರುಗುತ್ತಾನೆ. ಸಗರನ ಯಜ್ಞ ಪರಿಪೂರ್ಣವಾಗುತ್ತದೆ.
ಪುತ್ರ ಶೋಕದಲ್ಲಿ ಮಿಂದ ಸಗರನಿಗೆ ಯಜ್ಞ ಮಧ್ಯದಲ್ಲಿ ವಿಘ್ನವಾಗಿ ಸಕಾಲಕ್ಕೆ ಪೂರ್ಣಾಹುತಿ ಕೊಡಲಾಗದೆ ಇಂದ್ರ ಪದವಿ ದೊರೆಯದೆ ವಾರ್ಧಕ್ಯದಿಂದ ಇಹಲೋಕ ತ್ಯಜಿಸುವಂತಾಗುತ್ತದೆ. ಯನ್ನ ಪುತ್ರರಿಗೆ ಅಕಾಲ ಮೃತ್ಯು ಸಂಭವಿಸಿದುದನ್ನು ನೆನೆಯುತ್ತಿದ್ದ ವನ ಹತಾಶೆ ಮೊಮ್ಮಗ ಅಂಶುಮಾನನನ್ನು ಧೃತಿಗೆಡುವಂತೆ ಮಾಡುತ್ತದೆ. ಅಂಶುಮಾನ ಘೋರ ತಪಸ್ಸು ಮಾಡಿದರೂ ಅವನು ಗಂಗೆಯ ಮೂಲವನ್ನು ಪತ್ತೆ ಮಾಡುವುದರಲ್ಲಿಯೇ ವಿಫಲನಾಗುತ್ತಾನೆ. ಅವನಂತೆಯೇ ಅವನ ಮಗ ದಿಲೀಪನ ‘ಗಂಗಾ ಶೋಧನೆ’ಯ ಪ್ರಯತ್ನವೂ ಅಸಫಲವಾಗುತ್ತದೆ.
ದಿಲೀಪ ಮಹಾರಾಜನ ಮಗನೇ ಭಗೀರಥ. ತನ್ನ ತಂದೆ-ತಾತರ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಭಾಗಗೊಳ್ಳುತ್ತಿದ್ದ ಭಗೀರಥನಿಗೆ ಗಂಗೆ ದೇವಲೋಕದಲ್ಲಿ ಬ್ರಹ್ಮನ ಸಮೀಪ ಕಮಂಡಲವೊಂದರಲ್ಲಿ ವಿಹರಿಸುತ್ತಿರುವ ಸಂಗತಿ ತಿಳಿಯುತ್ತದೆ. ಆಗ ಭಗೀರಥನು ಚತುರ್ಮುಖನನ್ನು ಕುರಿತು ತಪೋನಿರತನಾಗುತ್ತಾನೆ. ಚತುರ್ಮುಖನ ಸಲಹೆಯಂತೆ ವಿಷ್ಣುವಿನ ವಾಮನವತಾರಕ್ಕಾಗಿ ತಾಳ್ಮೆಯಿಂದ ಕಾದ ಭಗೀರಥನಿಗೆ, ಆ ಮಹಾತಾಯಿ ವಾಮನನ ಪಾದ ಸ್ಪರ್ಶ ಮಾಡುವುದನ್ನು ಕಾಣುವ ಸುಯೋಗ ದೊರಕುತ್ತದೆ. ಆಕೆಯ ಪಾದ ಸ್ಪರ್ಶದಿಂದ ಪುನೀತನಾದ ಭಗೀರಥ ಬ್ರಹ್ಮ ಮತ್ತು ಗಂಗೆಯನ್ನು ಪುನಃ ಪುನಃ ಪ್ರಾರ್ಥಿಸಿದರೂ ಗಂಗೆ ಭೂಲೋಕಕ್ಕೆ ಬರಲು ಇಚ್ಚಿಸುವುದಿಲ್ಲ. ದೇವಲೋಕದಿಂದ ಭೂಲೋಕಕ್ಕೆ ಬಂದರೆ ನಾನು ಮಲಿನಳಾಗುತ್ತೇನೆ. ನನ್ನ ಮಲಿನತೆಯನ್ನು ಕಳೆಯುವುದಾದರೂ ಎಂತು ಎಂಬುದು ಆಕೆಯ ಚಿಂತನೆ.
ಆದರೆ ಪಿತನಾದ ಬ್ರಹ್ಮ ಉಸುರುತ್ತಾನೆ. “ಗಂಗಾ, ನಿನ್ನ ಸೃಷ್ಟಿಯ ಮೂಲ ಉದ್ದೇಶವೇ ಅದು. ನಿನಗೆಲ್ಲಿಯ ಮಲಿನತೆ?” ಭಗೀರಥನು ನಮ್ರ ಭಾವದಿಂದ, “ತಾಯಿ, ನೀನು ಭೂಲೋಕಕ್ಕೆ ಆಗಮಿಸಿ, ರಸಾತಳದಲ್ಲಿ ಕಪಿಲ ಮುನಿಯ ಕುಟೀರದ ಬಳಿ ಬೂದಿಯ ಗುಡೆಯಾಗಿರುವ ನನ್ನ ಪಿತೃಕುಲವನ್ನು ಉದ್ಧರಿಸು. ಭೂಲೋಕದಲ್ಲಿರುವ ಸಾಧು ಸಂತರು ಲೋಕ ಪಾವನರು, ಶಾಂತರೂ ಬ್ರಹ್ಮ ನಿಷ್ಠರೂ ಆದ ಆ ಮುನಿಗಳ ಅಂಗ ಸ್ಪರ್ಶವೇ ಸಾಕು ನಿನ್ನ ಮಲಿನತೆಯನ್ನು ತೊಳೆಯಲು. ಆ ಸಾಧುಗಳಲ್ಲಿ ನಿನ್ನಲ್ಲಿಯಂತೆಯೇ ಪಾಪನಾಶಕ ಶ್ರೀಹರಿಯೂ ಸರ್ವದಾ ನೆಲಸಿರುತ್ತಾನೆ” ಎಂದಾಗ ನಿರುತ್ತರಳಾದ ಗಂಗೆ ಮತ್ತೊಂದು ಕಾರಣವನ್ನು ಮುಂದಿಡುತ್ತಾಳೆ.
“ವತ್ಸ, ಭಗೀರಥ, ನಾನು ಸ್ವರ್ಗದಿಂದ ಭೂಮಿಗೆ ರಭಸದಿಂದ ಧುಮುಕುವಾಗ, ಭೂಮಿ ಛಿದ್ರ ಛಿದ್ರವಾದೀತು. ನನ್ನ ವೇಗದ ನಿಯಂತ್ರಣವಿಲ್ಲದಿದ್ದರೆ ಅನಾಹುತ ಖಂಡಿತ” ಎನ್ನಲು ಭಗೀರಥನು,ಅರ್ಥಾತ್, “ಸಕಲ ಪ್ರಾಣಿಗಳ ಆತ್ಮರೂಪಿಯಾದ ರುದ್ರನು ನಿನ್ನ ವೇಗವನ್ನು ಧರಿಸಲು ಶಕ್ತನಾಗಿದ್ದಾನೆ. ಬಟ್ಟೆಯಲ್ಲಿ ದಾರವು ವ್ಯಾಪಿಸಿರುವ ಹಾಗೆ ಈ ಜಗತ್ತು ಆ ದೇವನಲ್ಲಿ ಅಡಕವಾಗಿದೆ” ಎಂದು ಪ್ರಾರ್ಥಿಸುತ್ತಾನೆ. ಕೊನೆಗೆ ಬ್ರಹ್ಮದೇವನು ತನ್ನ ಪುತ್ರಿಗೆ, “ಗಂಗಾ, ನೀನು ಕರ್ತವ್ಯದಿಂದ ವಿಮುಖಳಾಗಬೇಡ. ಜಗತ್ತಿನ ಜನರ ಪಾಪಗಳನ್ನು ತೊಳೆಯಲು ನೀನು ನಿಯಾಮಕಳಾಗಿದ್ದೆ. ಭಗೀರಥನನ್ನು ಹರಸು” ಎನ್ನಲು ಆಕೆ ಸಮ್ಮತಿಸುತ್ತಾಳೆ.
ಆದರೆ ಪರಶಿವನನ್ನು ಗಂಗೆಯನ್ನು ತಡೆಯುವಂತೆ ಪ್ರೇರೇಪಿಸುವುದು ಅಷ್ಟು ಸುಲಭವೆ? ಭಗೀರಥ ಗಂಗೆಯನ್ನು ಸ್ತುತಿಸಿ, ಶಿವನನ್ನು ಕುರಿತು ಉಗ್ರ ತಪಸ್ಸಿಗೆ ತೊಡಗುತ್ತಾನೆ. ಮಹಾದೇವ ಎಷ್ಟಾದರೂ ಭಕ್ತ ವತ್ಸಲನಲ್ಲವೆ? ಭಗೀರಥನ ಕಾರ್ಯ ಶ್ರದ್ಧೆಯನ್ನು, ಛಲವನ್ನು ತಿಳಿಯದವನಲ್ಲ ಅವನು. ಅವನು, “ಅಸ್ತು” ಎಂದು ಆಶ್ವಾಸನೆ ನೀಡಿದ ಮೇಲೆ ದೇವ ಗಂಗೆ ಸುರಲೋಕದಿಂದ, ಶ್ರೀಹರಿಯ ಪದತಲದಿಂದ ಭುವಿಗೆ ಧುಮುಕಿದಳು. ಆ ರಭಸಮತಿಯನ್ನು ಪರಮೇಶ್ವರ ತನ್ನ ಜಟೆಯಲ್ಲಿ ಹಿಡಿದಿಟ್ಟನು. ಆ ಜಟಾಜೂಟಧಾರಿಯನ್ನು ತನ್ನ ಜಟೆ ಸಡಿಲಿಸುವಂತೆ ಬೇಡಿ ಭಗೀರಥ ಅವಳ ಹರಿಯುವಿಕೆಗೆ ಪಥ ತೋರಿಸುತ್ತಾ ನಡೆದನು.
ರಥದಲ್ಲಿ ಭಗೀರಥ ಭಾನಿನಿಂದ, ಗಂಗೋತ್ರಿಯಿಂದ ಮುಂದೆ ಮುಂದೆ ಸಾಗುತ್ತಾ ನಡೆದ ಹಾಗೆಲ್ಲ ಆ ದೇವ ಜಲ ಅವನನ್ನು ಹಿಂಬಾಲಿಸಿ ಹರಿಯತೊಡಗಿತು. ಭೂಲೋಕ ಪಂಚಭೂತ ನಿರ್ಮಿತವಷ್ಟೆ. ಭುವಿಯಲ್ಲಿ ಆಕೆ ಇಲ್ಲಿಯ ನಿಯಮಗಳಿಗೆ ಬದ್ಧಳಷ್ಟೆ. ಉಷ್ಣಾಂಶ ತೀರ ಕಡಿಮೆಯಾದಾಗ ಮಂಜಾಗುವುದು. ಸೂರ್ಯ ರಶ್ಮಿ ಪ್ರಖರವಾದಾಗ ಜಲವಾಗಿ ಮುಂದುವರಿಯುವುದು. ಹೀಗೆ ಭಗೀರಥ ಮುಂದೆ, ಅವನ ಹಿಂದೆ ಭಾಗೀರಥಿ ನಡೆದಾಡುವಾಗ, ಅನುಕ್ಷಣವೂ ಎಚ್ಚರ. ಆ ಅರಸನಿಗೆ ನಿದ್ರೆಯಲ್ಲಿಯದು?
ಹಾಗಿರುವಾಗ, ಒಮ್ಮೆ ಭಗೀರಥ ಹಿಂದುರುಗಿ ನೋಡುತ್ತಾನೆ. ಭಾಗೀರಥಿ ನಾಪತ್ತೆ. ಮಂಜಿನ ರೂಪವೂ ಕಾಣದು. ಚಿಂತಾಕ್ರಾಂತನಾದ ಅವನು ಹಿಂದೆ ಬಂದಂತೆ ಆ ಗುಡ್ಡದ ಸಮತಲ ಪ್ರದೇಶದಲ್ಲಿ ಮುನಿಯೊಬ್ಬ ಆದಿತ್ಯನಿಗೆ ಅರ್ಘ್ಯ ಕೊಡುತ್ತಿರುವುದು ಕಂಡುಬರುತ್ತದೆ. ಅಲ್ಲಿದ್ದ ಶಿಷ್ಯವೃಂದದಿಂದ ಆ ಮುನಿ ಜುಹ್ನುವೆಂದು ಆ ಪ್ರದೇಶ ಅವನ ತಪೋವನವೆಂದು ತಿಳಿದುಬರುತ್ತದೆ. ಆ ಶಿಷ್ಯರಿಂದಲೆ ಗಂಗೆ ಅಲ್ಲಿಗೆ ರಭಸವಾಗಿ ಬಂದು ಅವರ ತಪೋಭೂಮಿಯ ಮೇಲೆ ಹರಿದು ಧ್ವಂಸವಾದಾಗ, ಆಕೆಯ ಅಬ್ಬರವನ್ನು, ಅಟ್ಟಹಾಸವನ್ನು ತಡೆಯಲು ಜುಹ್ನು ಮುನಿ ಆಕೆಯನ್ನು ಆಪೋಶನ ತೆಗೆದುಕೊಂಡು ಉದರದಲ್ಲಿ ಅಟಗಿಸಿಟ್ಟಿರುವ ಸಂಗತಿ ತಿಳಿದುಬರುತ್ತದೆ.
ವಿಷಯವನ್ನು ತಿಳಿದ ಭಗೀರಥನು ಆಶ್ರಮಕ್ಕೆ ಬಂದು, ಜುಹ್ನು ಮುನಿಗೆ ಸಾಷ್ಟಾಂಗ ನಮಸ್ಕರಿಸಿ, ತಾನು ಸುರ ಗಂಗೆಯನ್ನು ಕರೆತರಲು ಮಾಡಿದ ಸಾಹಸವನ್ನೆಲ್ಲ ಬಣ್ಣಿಸಿ, ಆಕೆಯ ಅಟ್ಟಹಾಸವನ್ನು ಮನ್ನಿಸಿ ಬಿಡುಗಡೆ ಮಾಡಿ ತನ್ನೊಂದಿಗೆ ಕಳುಹಿಸಿಕೊಡಬೇಕೆಂದು ವಿನಂತಿಸುತ್ತಾನೆ. ಇದರಿಂದ ಸುಪ್ರೀತನಾದ ಆ ಚಂದ್ರವಂಶಿ ತನ್ನ ಕರ್ಣಗಳ ಮೂಲಕ ಆಕೆಯನ್ನು ಬಿಡುಗಡೆ ಮಾಡುತ್ತಾರೆ. ಆ ದೇವ ಗಂಗೆ, ಭಗೀರಥನಿಂದಾಗಿ ಭಾಗೀರಥಿ ಎನಿಸಿಕೊಂಡವಳು, ಈಗ ‘ಜಾಹ್ನವಿ’ಯೂ ಆಗುತ್ತಾಳೆ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ,
ಸಂಸ್ಕೃತಿ ಚಿಂತಕರು, 9739369621
****
ದಶಾಹರ
ಜೇಷ್ಠ ಶುದ್ಧ ದಶಮೀಯು ಗಂಗಾವತಾರದ ದಿನವು . ಇದಕ್ಕೆ "ದಶಾಹರ" ಎನ್ನುವರು. ಇದರಲ್ಲಿ ಹತ್ತು ಯೋಗಗಳು ಹೇಳಲ್ಪಟ್ಟಿವೆ.
***
No comments:
Post a Comment