SEARCH HERE

Wednesday, 6 May 2020

ಭ ರಾ ವಿಜಯಕುಮಾರ್ ರವರ ಅಪಾರ್ಥ ಕೋಶ r apartha kosha by b r vijayakumar

My friend, B R Vijayakumar (+91 94487 42877) who is a writer, theater artist and singer has penned the following.  He was my colleague in Hassan during 1995 to 2001.

Prelude
ನಮಸ್ಕಾರ
ನಾನು ಭ ರಾ ವಿಜಯಕುಮಾರ್ .
ಅಕ್ಷರಗಳು ಶಬ್ಧಗಳನ್ನೊಳಗೊಂಡಿದೆ. ಅವು ನಿರ್ದಿಷ್ಟ ಗುಂಪುಗಳಾಗಿ ಪದಗಳಾಗುತ್ತವೆ. ಅವು ಅರ್ಥವನ್ನು ಕೊಡುತ್ಥವೆ ಹಾಗೂ ಪದಗಳ ಅರ್ಥವತ್ತಾದ ಸಮೂಹ ವಾಕ್ಯವಾಗುತ್ತದೆ ಮತ್ತು ಸಂವಹನಕ್ಕೆ ದಾರಿಯಾಗುತ್ತದೆ. ಹಲವೊಮ್ಮೆ ಒಂದು ಪದಕ್ಕೆ ಬೇರೆಬೇರೆ ಅರ್ಥಗಳಿರುತ್ತದೆ. ಕವಿಗಳು ಇದನ್ನು ಬಳಸಿ ಚಮತ್ಕಾರಿಕ ಅರ್ಥಗಳನ್ನು ಸೃಜಿಸುತ್ತಾರೆ.

ಆದರೆ ಈ "ಪದಾರ್ಥ"ಗಳನ್ನು ಬೇರೊಂದು ಕೋನದಿಂದಲೂ ನೋಡಬಹುದು! ಇದು ವಿಡಂಬನಾತ್ಮಕವೂ ಹಾಸ್ಯಪೂರ್ಣವೂ ಆಗಿರುತ್ತದೆ. ಪದಕ್ಕೆ ಹೊಸ ಮಗ್ಗುಲನ್ನೇ ತೋರಿಸಿ ವಾವ್ ಎನಿಸುತ್ತದೆ. ನಿಮಗೆ ಅರಿವಿಲ್ಲದೆಯೇ ಈ ರೀತಿ ಸೃಷ್ಠಿಗಳನ್ನು ನೀವೂ ಮಾಡಿರಬಹುದು! ಅಂಥಹ ಯತ್ನಗಳು ಎಲ್ಲ ಭಾಷೆಗಳಲ್ಲೂ ನಡೆದಿದೆ. ಕನ್ನಡದ ಕೆಲವು ಪುಸ್ತಕಗಳ ಆಯ್ದ ಉದಾಹರಣೆಗಳನ್ನು ಪ್ರತಿದಿನ ಕೊಡುತ್ತೇನೆ. ಮನ ಮುಖಗಳನ್ನಲ್ಲದೆ ನಿಮ್ಮಸೃಜನಶೀಲತೆಯೂ ಅರಳಬಹುದು! ನಿರೀಕ್ಷಿಸಿ..... ದಿನಕ್ಕೊಂದು ಭಾಗದ ಸರಣಿ " ಕುಚೋದ್ಯವೆಂಬ ಅಪಾರ್ಥ ಕೋಶ"
++++++++++++++

[10:27 PM, 5/9/2020] Vijaykumar B R: 

ಕುಚೋದ್ಯವೆಂಬ ಅಪಾರ್ಥ ಕೋಶ    ಭಾಗ 1

1. ಅಕ್ಕಿ— ಬತ್ತಲಾದ ಭತ್ತ
            ಬಿತ್ತಲಾರದ ಬೀಜ
            ಅನ್ನದ ಪೂರ್ವಾಶ್ರಮ
           ಆಂಗ್ಲಮಾಧ್ಯಮ—
       a. ಮಕ್ಕಳನ್ನು ಪರದೇಶಿಗಳನ್ನಾಗಿಸುವ ಉಪಕ್ರಮ
       b. ಹೆತ್ತವರಿಗೆ ಒತ್ತಾಯದ ಶಿಕ್ಷಣ ನೀಡುವ ವ್ಯವಸ್ಥೆ
2. ಇತಿಹಾಸ— a. ಸತ್ಯದ ಸಾರ ಆವಿಯಾಗಿ ಉಳಿದ ಗಸಿ
                  b. ವದಂತಿಗಳ ವೈಭವೀಕರಣ
                  c. ಅಲಂಕೃತ ಮುದಿವಧು
3. ಏಕಾಂಗಿ—  ಒಂದೇ ಅಂಗಿಯಲ್ಲಿ ಕಾಲ ತಳ್ಳುವವ
4. ಓಯಸಿಸ್ — ಹೇಳಿದ್ದಕೆಲ್ಲ ತಲೆಯಾಡಿಸುವಿಕೆ
(ಇದಕ್ಕೆ ಒಮ್ಮೊಮ್ಮೆ ಗಂಡ ಎನ್ನುತ್ತಾರೆ)
***********

ಕುಚೋದ್ಯವೆಂಬ ಅಪಾರ್ಥಕೋಶ      ಭಾಗ 2

1. ಅಗ್ನಿಗರ್ಭ— ಸಿಗರೇಟು ಲೈಟರ್  ಅಥವಾ ಬೆಂಕಿಕಡ್ಡಿ
2. ಆಶಾವಾದಿ— ಆಶಾ ಎಂಬುವಳ ಪರವಾಗಿ ವಾದಿಸುವವನು
3. ಇಬ್ಬನಿ — ಗಿಳಿಯ ಬೆವರು
4. ಉದಾರಿ— ಕಾಣದಂತೆ ಸಂಗ್ರಹಿಸಿ ಕಾಣುವಂತೆ ಕೊಡುವಾತ
5. ಕಲ್ಮಾಷಪಾದ—. ಚರಂಡಿಯ ಕೊಚ್ಚೆಗೆ ಇಳಿದವನು
6. ಗೀಚಸ್ಪತಿ— ತೋಚಿದ್ದನ್ನು ಗೀಚುವ ಸಾಹಿತಿ
7. ಚಾವುಂಡರಾಯ— ಚಾ ಕುಡಿದು ಕುಳಿತ ಮಹರಾಯ
    (ಆಯ್ಕೆ —ವಿಜಯಕುಮಾರ)
**********

ಕುಚೋದ್ಯವೆಂಬ ಅಪಾರ್ಥಕೋಶ     ಭಾಗ — 3

1. ನರಸಿಂಗ್ ಹೋಂ — ನರಸಿಂಗರಾಯರ ಮನೆ
2. ಭಾನುಪ್ರಕಾಶ — 1 ಭಾನುವಾರ ಮಾತ್ರ ಸ್ನಾನ ಮಾಡುವಾತ
2. ಭಾನುವಾರ ಮಾತ್ರ ಹೊರಗೆ ಬರುವವ
3. ಹೋಮಿಯೋಪತಿ — ಮನೆಯಲ್ಲೇ ಕುಕ್ಕರುಬಡಿದಿರುವ ಗಂಡ
4. ಗಂಧವತೀ —ಮುನಿಸಿಪಲ್ ಲಾರಿ
5. ಲಾವಣ್ಯರಸ — ಉಪ್ಪುಪ್ಪಾದ ಸಾರು
6. ಬಿಕನಾಶಿ— 1 ಬಿಕಿನಿಯನ್ನು ಆಶಿಸುವಳು
             2 ಬಿಕಿನಿ ತೊಟ್ಟವಳನ್ನು ಆಶಿಸುವವನು
7. ಅಶ್ಲೀಲ — 1 ಸಭ್ಯರು ಏಕಾಂತದಲ್ಲಿ ಆಡುವ ಮಾತು
        2. ಹೊರಗೆ ಅಸಹ್ಯವೆನ್ನುತ್ತಾ ಒಳಗೇ ಆಸ್ವಾದಿಸುವ ಸಂಗತಿ
(ಆಯ್ಕೆ—ವಿಜಯಕುಮಾರ)
**********

ಕುಚೋದ್ಯವೆಂಬ ಅನರ್ಥಕೋಶ        ಭಾಗ — 4

1. ಆದಿಶೇಷ — ಹಳೇ ಸಾಲದ ಬಾಕಿ
2. ಅನಂತಶಯನ — ಸರ್ಕಾರಿ ಫೈಲುಗಳ ಸ್ಥಿತಿ
3. ಉಪದ್ರವ — ಹೆಂಡ ಅಥವಾ ಹಾಲಿಗೆ ಸೇರಿಸುವ ನೀರು 
4. ಕರುಣ — ಸುಂದರವಾದ ತರುಣಿ ಬಸ್ಸಿನಲ್ಲಿ ಸೀಟಿಲ್ಲದೆ ನಿಂತಿರುವಾಗ ಪಕ್ಕದಲ್ಲಿ ಕುಳಿತ ತರುಣನಿಗೆ ಉಂಟಾಗುವ ಭಾವನೆ
5. ಕರ್ಕಾಟಕ ಸಂಗೀತ — ಏಡಿಯಂತೆ ಕಿವಿ ಕಚ್ಚುವ ಸಂಗೀತ
6. ಛಾಯಾಪತಿ — ವ್ಯಕ್ತಿತ್ವವಿಲ್ಲದ—ಕೇವಲ ನೆರಳಿನಂತಿರುವ—ಗಂಡ ˌ ನಕಲಿ ಗಂಡ
7. ಮಾಹಿಷ್ಮತಿ — ಎಮ್ಮೆಯ ಬುದ್ಧಿಯವನು(ಳು)
 (ಆಯ್ಕೆ — ವಿಜಯಕುಮಾರ)
**************

ಕುಚೋದ್ಯವೆಂಬ ಅಪಾರ್ಥಕೋಶ       ಭಾಗ—5

1. ಆರಾಮಾಸನ — ಆ ರಾಮನ ಆಸನ ˌ ಇನ್ನೂ ದೊರಕಿದಂತಿಲ್ಲ
2. ಕಲೋಪಾಶಕ— ಕಲೆಗೇ ಉರುಳಾದವನು
3. ಕಾಮಶಂಕೆ— ಕಣ್ಣಿನಿಂದ ಹರಡುವ ಒಂದು ಖಾಯಿಲೆ. ಇದಕ್ಕೆ ತುತ್ತಾಗುವವರಲ್ಲಿ ಸರಾಸರಿ ಗಂಡಸರೇ ಹೆಚ್ಚು.
4. ಗೋಮಟೇಶ—1  ವಸ್ತ್ರದ್ವೇಷಿ.  2. ನೇಕಾರರ ಶತ್ರು
5. ಚರ್ಮಗೀತೆ— 1 ತುರಿಸಿಕೊಳ್ಳುವಾಗ ಬರುವ ಲಯಬದ್ಧ ಸದ್ದು
                  2. ಚಪ್ಪಲಿಹಾಕಿ ನಡೆಯುವಾಗ ಬರುವ ನಾದ
6. ಚಿತ್ರಹಿಂಸೆ— 1 ಸೆನ್ಸಾರ್ ಶಿಪ್.   2 ಚಿತ್ರ ಪ್ರೇಕ್ಷಕರ ಯಾತನೆ
7. ತೇಗು— ಧನ್ಯವಾದ ಸಮರ್ಪಣೆˌ ಜಠರ ಕಾರ್ಯದರ್ಶಿಯಿಂದ
(ಆಯ್ಕೆ— ವಿಜಯಕುಮಾರ್)
*************


ಕುಚೋದ್ಯವೆಂಬ ಅಪಾರ್ಥಕೋಶ     ಭಾಗ— 6

1. ಅಮೀನ— ಮೀನು ತಿನ್ನದವ
2. ಉಚ್ಚಾಸ್ಪತ್ರೆ— ಉಪ್ಪರಿಗೆಯಲ್ಲಿರುವ ಶ್ರೀಮಂತ ಕ್ಲಿನಿಕ್
3. ಕರ್ಣಜಾತ— ಕಿವಿಯ ಗುಗ್ಗೆ
4. ಕಿಸಾಗೋತಮಿ— ಮುದ್ದಿಟ್ಟು ಗೋತಾ ಹೊಡಿಸುವವಳು
5. ಚಕ್ರಪಾಣಿ— ಡ್ರೈವರ್
6. ಚಿತ್ರಗುಪ್ತ— ಅಶ್ಲೀಲ ಚಿತ್ರಗಳನ್ನು ಗುಪ್ತವಾಗಿ ನೋಡಿ ಆನಂದಿಸುವವ
7. ಒಂದನಾರ್ಪಣೆ— ಜಲಭಾದೆಯನ್ನು ತೀರಿಸಿಕೊಳ್ಳುವುದು. (ಕಾರ್ಯಕ್ರಮದ ಮಧ್ಯದಲ್ಲೂ ನಡೆಯಬಹುದಾದ್ದು)
(ಆಯ್ಕೆ— ವಿಜಯಕುಮಾರ)
*************


ಕುಚೋದ್ಯವೆಂಬ ಅಪಾರ್ಥಕೋಶ        ಭಾಗ— 7

1 ಅಭಾವ ವೈರಾಗ್ಯ— ಭಾವನಿಲ್ಲದ ಬೇಸರˌ ವಿರಹ
2 ಕನ್ನಡಿಗ— ಕನ್ನಡಿಯ ಅಂಗಡಿಯವನು
3. ಚಪಾತಿ— ಒಂದು ಜಾತಿಯ ಹಿಟ್ಟಿನ ಬೆರಣಿ
4 ಜೈಮಿನಿ— ಮಿನಿಸ್ಕರ್ಟಿಗೆ ಜಯವಾಗಲಿ ಎಂಬ ಘೋಷ
5 ದಾರಾವಾಹಿ— ಹೆಂಡತಿಯನ್ನು ಹೊರುವವ
6 ನೀಳಕಂಠ— ಕೊಕ್ಕರೆˌ ಒಂಟೆˌ ಜಿರಾಫೆ ಜಾತಿಯ ಕೊರಳಿರುವವರು
7 ನೈಟಿ— ಒಡಲನ್ನು ತುಂಬಿಸಿಡುವ ಸಡಿಲ ಚೀಲ
(ಆಯ್ಕೆ— ವಿಜಯಕುಮಾರ)
************


ಕುಚೋದ್ಯವೆಂಬ ಅಪಾರ್ಥಕೋಶ      ಭಾಗ —8

1 ಕಾಗೆ— 1 ತಿಥಿ ಕಾಲದ ಅತಿಥಿ 2. ಶಾಪಗ್ರಸ್ತ ಗಾಯಕ  3. ನಗರ ನಿರ್ಮಲೀಕರಣದ ಸ್ವಯಂ ಸೇವಕ
2. ಚಳಿಗಾಲ— ದಾಂಪತ್ಯ ವಿರಸ ದೂರವಾಗುವ ಕಾಲ
3. ಚೆಲುವೆ— ಪರಸ್ತ್ರೀ
4. ನಕ್ಷತ್ರಿಕ— ಖಗೋಳಶಾಸ್ತ್ರದ ಬೆನ್ನು ಹತ್ತಿದಾತ
5. ಪಾದರಸ—1  ಕಾಲಲ್ಲಿ ನೀರು ತುಂಬಿಕೊಳ್ಳುವ ವ್ಯಾಧಿ
6. ಬಾಟಲೀಪುತ್ರ— ಸೆರೆಕುಡುಕ
7. ಮಂಗವಸ್ತ್ರ— ಮೈಮೇಲೆ ಸರಿಯಾಗಿ ನಿಲ್ಲದೆ ಆಗಾಗ ಜಾರುವ ವಸ್ತ್ರ
(ಆಯ್ಕೆ— ವಿಜಯಕುಮಾರ)
**************



ಕುಚೋದ್ಯವೆಂಬ ಅಪಾರ್ಥಕೋಶ        ಭಾಗ— 9

1. ಏಕಚ್ಛತ್ರಾಧಿಪತಿ— ಒಂದೇ ಕೊಡೆ ಇರುವವ
2. ಉಳಿತಾಯ— ನಮಗೆ ಸಾಲ ಕೊಡಬೇಕಾದವರು ಮಾಡಬೇಕಾದ ಕರ್ತವ್ಯ
3. ಅಕ್ರಮಾದಿತ್ಯ— ಪ್ರಜಾಹಿತಕ್ಕೆ ವಿರೋಧವಾಗಿ ಆಡಳಿತ ನಡೆಸುವ ರಾಜ
4. ಒಣಮಾಲಿ— ಒಣಗಿದ ಮಾಲೆಯನ್ನು ಧರಿಸುವವ
5. ಕವಿವೇಕಿ— ಅವಿವೇಕಿಯಾದ ಕವಿ
6. ಕಿಕ್ಕಿರಿದು— ಒದ್ದು...ಬೀಳಿಸಿ..ನಂತರˌ ಇರಿದು
7. ಖಾರಾಗೃಹ— ಖಾರವನ್ನು ಹೆಚ್ಚು ಬಳಸುವ ಹೋಟೆಲು.(ಆಂದ್ರ ಸ್ಟೈಲು?)
(ಆಯ್ಕೆ— ವಿಜಯಕುಮಾರ)
***************



ಕುಚೋದ್ಯವೆಂಬ ಅಪಾರ್ಥಕೋಶ     ಭಾಗ— 10

1 ಪಿತೃಪಕ್ಷ— ಗಂಡಹೆಂಡಿರ ಜಗಳದಲ್ಲಿ ತಂದೆಯ ಪಕ್ಷ ವಹಿಸುವ ಮಕ್ಕಳು
2 ಬೊಂಬೂಸವಾರಿ— ಕೊನೆಗೆ ಎಲ್ಲರಿಗೂ ಸಲ್ಲುವ ಮೆರವಣಿಗೆ
3 ಮದ್ಯಸ್ಥ— ಮದ್ಯದಲ್ಲೇ ಮುಳುಗಿರುವವನು
4 ಮೀನ ಮೇಷವೆಣಿಸು— ಮೀನು ತಿನ್ನಲೋ ಕುರಿ ತಿನ್ನಲೋ ಎಂಬ ಚರ್ಚೆ
5 ರೋಗಿ— ವೈದ್ಯರನ್ನು ಬದುಕಿಸುವ ಮಹಾತ್ಮ
6 ವಸಂತ— ಕವಿಗಳಿಗೆ ಹುಚ್ಚು ಹಿಡಿವ ಕಾಲ
7 ಸಕುನ್ನಿ— ನಾಯಿಯ ಸಂಗಡ ವಾಕಿಂಗ್ ಹೋಗುವವರು
(ಆಯ್ಕೆ— ವಿಜಯಕುಮಾರ)
************


ಕುಚೋದ್ಯವೆಂಬ ಅಪಾರ್ಥಕೋಶ      ಭಾಗ— 11

1 ಇಂದುಮತಿ— ಇಂದಿಗಷ್ಟೇ ಯೋಚಿಸುವ ಬುದ್ಧಿಯವಳು
2 ಕಂಬ— ಕೆಲಸವಿಲ್ಲದಾಗ ಸುತ್ತಲು ಒದಗುವ ವಸ್ತು
3 ಅಗಸ— ನಮ್ಮ ಬಟ್ಟೆಗಳಿಂದ ಕಲ್ಲನ್ನು ಒಡೆಯಲು ಯತ್ನಿಸುವ ಧೀರˌ ಅರಿವೆಯನ್ನು 'ಹರಿವೆ' ಎಂದೇ ಹೇಳುವವ
4 ಲೋಪಾಮುದ್ರೆ— ಟಸ್ಸೆ ಬೀಳದ ಸ್ಟಾಂಪುˌ ಪತ್ರ ಇತ್ಯಾದಿ
5 ವೇದನಾರವಿಂದ— ಸಂಕಟದಲ್ಲಿ ನರಳುವವನ ಮುಖ
6 ಸಮಾರಂಪ— ಸಮಾರಂಭ ಮುಗಿದ ಮೇಲೆ ಸಾಮಾನ್ಯವಾಗಿರುವ ದೃಶ್ಯ.
7 ಸುಸ್ತಾಗತ— ಕಾರ್ಯಕ್ರಮದ ಕೊನೆಗೆ ಬರುವ ಅತಿಥಿಗೆ ಸಿಗುವ ಸ್ವಾಗತ.
(ಆಯ್ಕೆ— ವಿಜಯಕುಮಾರ)
****************

ಕುಚೋದ್ಯವೆಂಬ ಅಪಾರ್ಥಕೋಶ      ಭಾಗ— 12

1 ವಾಚಸ್ಪತಿ— ಗಡಿಯಾರದಂಗಡಿಯ ಮಾಲೀಕ
2 ರಕ್ತರಾತ್ರಿ— ಸೊಳ್ಳೆ ತಿಗಣೆಗಳಿಂದ ಕಚ್ಚಿಸಿಕೊಂಡ ರಾತ್ರಿ
3 ದಧಿಮುಖ— ಮೊಸರನ್ನ ತಿನ್ನುವಾಗ ಮುಖಕ್ಕೆ ಮೆತ್ತಿಕೊಂಡವ
4 ನಿರೋಧ— ಜನ್ಮಶತ್ರು
5 ಟೆಲಿಪತಿ— ಟೆಲಿಕಾಂ ವ್ಯವಸ್ಥೆಯ ಮುಖ್ಯಸ್ಥ
6 ಪ್ರಿಯಂವಧಾ— ಗಂಡನ/ಪ್ರಿಯಕರನನ್ನು ಕೊಂದವಳು
7 ಮಗು— 1 ಇಬ್ಬರ ದುಡುಕಿನ ಫಲಿತಾಂಶˌ  2 ಬೆಳೆಯುತ್ತ ಹಾಳಾಗುವ ವಸ್ತು ˌ  3  ಮೂರ್ತಿವೆತ್ತ  ರಗಳೆ
(ಆಯ್ಕೆ— ವಿಜಯಕುಮಾರ)
**********


ಕುಚೋದ್ಯವೆಂಬ ಅಪಾರ್ಥಕೋಶ       ಭಾಗ—13

1 ಬೆಣ್ಣೆ— 1 ಹಾಲನ್ನು ಹಾಳುಮಾಡಿ ಪಡೆಯುವ ಮಡ್ಡಿ  
            2 ಕಾರ್ಯಸಾಧನೆಗೆ ಉಪಯೋಗಿಸುವ ನಯಸಾಧನ
2 ಮಿಂಚು— 1 ಆಕಾಶರಾಯನ ತುಂಟಾಟ   2 ಸುರಲೋಕದ ಸುರ್ ಸುರ್ ಬತ್ತಿ
3 ಮೇಳವಿಕಾ — ಮೇಳೈಸಿ ಬರುವವಳು
4 ರಿಕ್ಷಾಬಂಧನ— ಒಂದು ರಿಕ್ಷಾದಲ್ಲಿ ಏಳೆಂಟು ಮಂದಿಯನ್ನು ತುರುಕುವಿಕೆ
5 ಲೀಲಾಜಾಲ— ಲೀಲಾ ಎಂಬಾಕೆ ಬೀಸಿದ ಬಲೆ
6 ವಿರಕ್ತ— ರಕ್ತಹೀನತೆಯಿಂದ ಬಳಲುವವ
7 ಸೀನು— ನಾಸಿಕ ದಂಗೆ
(ಆಯ್ಕೆ— ವಿಜಯಕುಮಾರ)
*********

ಕುಚೋದ್ಯವೆಂಬ ಅಪಾರ್ಥಕೋಶ    ಭಾಗ—14

1 ಸಮೋಸ— ಮೋಸಗರ್ಭಿತ
2 ಜಲ್ಲಿಕಲ್ಲು— ತುರ್ತು ಕೈಬಾಂಬುˌ  ಸನಾತನ ಅಸ್ತ್ರ
3 ಕುಕ್ಕರಿಸು— ಕುಕ್ಕರಿನಲ್ಲಿಟ್ಟು ಬೇಯಿಸು
4 ಅಂಡಜ— ಆಮ್ಲೆಟ್
5 ಹೆಣಾನುಬಂಧ— ಅನಾಥ ಶವಕ್ಕೆ ಹೆಗಲು ಕೊಡುವ ಋಣ
6 ಸ್ಟೆತಸ್ಕೋಪು— ಹೃದಯದ ಭಾಷೆ ಬಲ್ಲ ಸಾಧನ
7 ಸಪಲ್ಯ— ಪಲ್ಯ ಸಹಿತವಾದ ಊಟ
(ಆಯ್ಕೆ— ವಿಜಯಕುಮಾರ)
**********


ಕುಚೋದ್ಯವೆಂಬ ಅಪಾರ್ಥಕೋಶ     ಭಾಗ— 15

1 ವಯಸ್ಕಾಂತ— ಆಕರ್ಶಕವಾದ ತಾರುಣ್ಯದ ಕಾಲ
2 ಪುತ್ರವ್ಯವಹಾರ— ಮಗನಿಂದ ಬರುವ ತಗಾದೆಗೆ ಪ್ರತಿಕ್ರಯಿಸುವುದು
3 ಸಹಗಮನ— ಗಂಡನೊಡನೆ ವಾಕಿಂಗ್ ಹೋಗುವದು
4 ಸ್ನೇಹಿತರು— ನಮ್ಮನ್ನು ಕಟುವಾಗಿ ಟೀಕಿಸಬಲ್ಲ ˌ ಆದರೂ ಟೀಕಿಸದೆ ಮೆಚ್ಚುವ ಮಂದಿ(ಇವರ ಅವಶ್ಯಕತೆ ಹೆಚ್ಚಿದಷ್ಟೂ ಇವರ ಸಂಖ್ಯೆ ಕಡಿಮೆಯಾಗುತ್ತದೆ!)
5 ಆರತಿತಟ್ಟೆ— ಬಂದಿರುವ ಭಕ್ತಾದಿಗಳನ್ನು ಚದುರಿಸಲು ಉಪಯೋಗಿಸುವ ವಸ್ತು.(ಸವಕಲು ಕಾಸು ಶೇಖರಿಸುವ ವಿಧಾನ)
6 ಧನದನ್ನೆ— ಹಣಕ್ಕಾಗಿ ಕೈಹಿಡಿದವಳು.(ಅಥವ ವರದಕ್ಷಿಣೆಯಿತ್ತು ಮದುವೆಯಾದವಳು)
7 ದುಶ್ಯಾಸನ— ಕೆಟ್ಟ ಕಾನೂನು
(ಆಯ್ಕೆ— ವಿಜಯಕುಮಾರ)
***********


ಕುಚೋದ್ಯವೆಂಬ ಅಪಾರ್ಥಕೋಶ    ಭಾಗ— 16

1 ಆಲಿಂಗನ— ಬಾಹುಬಲ ಪ್ರದರ್ಶನ
2 ಕನ್ನಡಿ— ಸುಳ್ಳು ಹೇಳಲರಿಯದ ಪೆದ್ದು ವಸ್ತು
3 ಘೃತಾಚಿ— ತುಪ್ಪವುಂಡು ದಪ್ಪಗಾದವಳು
4 ಚಕ್ಕುಲಿ —1 ಚಕ್ ಎಂದು ಉಲಿ  2 ಜನಪ್ರಿಯ ಚಕ್ರಖಾದ್ಯ  3 ಹಲ್ಲು ಸೆಟ್ ಗೆ ಸವಾಲು
5 ಪಾಲ್ಗುಣ— ಹಾಲಿನ ಗುಣˌ ತಾಯಿಯ ಬುದ್ಧಿ
6 ಬಕ್ರತುಂಡ— 1 ಆಡಿನ ಮೋರೆಯವನು  2 ಆಡನ್ನು ಕತ್ತರಿಸುವವ
7 ಮರ್ಮಭೇದಿ— ಕಾಲರಾ ಸ್ಧಿತಿ
(ಆಯ್ಕೆ— ವಿಜಯಕುಮಾರ)
***************

 ಕುಚೋದ್ಯವೆಂಬ ಅಪಾರ್ಥಕೋಶ        ಭಾಗ— 17

1 ಅಭಯಸಂಕಟ— ಅಭಯ ಕೋರಿ ಬಂದವರನ್ನು ಹೇಗೆ ಕಾಪಾಡುವುದೆಂಬ ಚಿಂತೆ ಅಥವಾ ತಪ್ಪಿಸಿಕೊಳ್ಳುವದು ಹೇಗೆಂಬ ಚಿಂತೆ
2 ಎದೆ— ನ್ಯುಮೋನಿಯಾ ಉಗಮ ಸ್ಥಾನˌ ಎಂಟೆದೆಯಿದೆ ಎನ್ನುವವರಿಗೆ ಹೆಚ್ಚು ಅಪಾಯ
3 ಕಡೆಯದಾಗಿ— ಸಭಿಕರಿಗೆ ಬೇಜಾರಾಗಿದೆ ಎಂದು ತಿಳಿದಾಗ ಭಾಷಣಕಾರ ಈ ಪದ ಉಪಯೋಗಿಸಿ ಮುಖವರಳಿಸುತ್ತಾನೆ
4 ಗಜದ್ಗುರು— ಮಾವುತರ ನೇತಾರ
5 ಬೀರಬಲ— ಬೀರಿನಿಂದ ಪಡೆದ ಸ್ಫೂರ್ತಿ
6 ಮೀನು— ಈಸಿದರೂ ಜೈಸದೆ ಬಲೆಗೆ ಬೀಳುವ ಪ್ರಾಣಿ
7 ಶತಪತ್ರಲೋಚನ— ನೂರಾರು ಪತ್ರಗಳ ಮೇಲೆ ಕಣ್ಣಾಡಿಸುವವˌ ಡಿಸ್ ಪ್ಯಾಚ್ ಗುಮಾಸ್ತ 
(ಆಯ್ಕೆ— ವಿಜಯಕುಮಾರ)
**************

ಕುಚೋದ್ಯವೆಂಬ ಅಪಾರ್ಥಕೋಶ     ಭಾಗ—18

1 ಶುಂಠಿ— ಶುಂಠನ ಹೆಂಡತಿ
2 ರಶೀದಿ— ರಶೀದನ ಮಡದಿ
3 ಸ್ವಯಂಪ್ರಭಾ— ಮಿಂಚುಹುಳ
4 ಹದಿಗೂಬೆ— ಹದಿಹರೆಯದಲ್ಲೇ ಮುದುಕಿಯಂತೆ ವರ್ತಿಸುವವಳು
5 ಸೀಮಾಪುರುಷ— ಗಡಿ ಕಾಯುವ ಜವಾನ
6 ಶೀತಸಮರ— ನೆಗಡಿ ಸಿಂಬಳದೊಡನೆ ಹೋರಾಟ
7 ಮುತ್ತುವರ್ಜಿ— ಮುದ್ದಿಸುವುದನ್ನು ಬಿಟ್ಟವನುˌ ಸನ್ಯಾಸಿ
(ಆಯ್ಕೆ— ವಿಜಯಕುಮಾರ)
***********

ಕುಚೋದ್ಯವೆಂಬ ಅಪಾರ್ಥಕೋಶ     ಭಾಗ—19
ಪ್ರಿಯರೇˌ
ಈ ಸರಣಿಯಿಂದ ಸ್ಫೂರ್ತಿಗೊಂಡ ಕೆಲವರು ಅವರ ಕಲ್ಪನೆಯನ್ನು ಕಳಿಸಿದ್ದಾರೆ. ಆಯ್ದ ಕೆಲವು...
1 ಅಪಾರ್ಥಕೋಶ— ಪಾರ್ಥನದಲ್ಲದ ಭಂಡಾರ
2 ವೀರಕೇಸರಿ— ತಾನು ಹಿಡಿದ ಕೇಸಿನ ವಾದವೇ ಸರಿ ಎಂದು ವಾದಿಸುವ ವಕೀಲ
3 ಮಕರಂದ— ಅಂದವಾದ ಮೊಸಳೆ
4 ಗಜವದನ— ಆನೆಯನ್ನು ಹಸು ಎಂದು ಭಾವಿಸುವವ
5 ಕಾರಗೃಹ— ಕಾರು ನಿಲ್ಲಿಸುವ ಗ್ಯಾರೇಜು
6 ಚಿತ್ರಹಿಂಸೆ — ಹಲವರಿಗೆ ತಮ್ಮ ಮದುವೆಯ ಫೋಟೋ    ನೋಡಿದಾಗಿನ ಅನುಭವ
ಪದಗಳನ್ನು ˌ 'ಅನರ್ಥ'ವನ್ನು ಕಳುಹಿಸಿದವರಿಗೆ ಅಭಿನಂದನೆಗಳು
(ಆಯ್ಕೆ— ವಿಜಯಕುಮಾರ)
******************

ಕುಚೋದ್ಯವೆಂಬ ಅಪಾರ್ಥಕೋಶ    ಭಾಗ—20

1 ದಾರಾಬಲ— ಹೆಂಡತಿಯ ಹಣದಿಂದ ಬದುಕುವವ
2 ಪ್ರತಿಭೆ— ಎಲ್ಲ ಮೂರ್ಖ ಚೇಷ್ಟೆಗಳ ಮೂಲ
3 ಮ್ಯೂಷಿಕ— ಸಂಗೀತಗಾರ
4 ರಾಧಾಂತ— ರಾಧೆಯ ದುರಂತ
5 ಲಂಗಿಣಿ— ಲಂಗದ ಲಲನೆ
6 ಶಾಲಿನೀ— ಶಾಲು ಹೊದ್ದವಳು
7 ಸಂಭಾವಿತರು— ನಾನು ಮತ್ತು ನೀವು ˌ ಅವರಲ್ಲ
(ಆಯ್ಕೆ— ವಿಜಯಕುಮಾರ)
*****************


ಕುಚೋದ್ಯವೆಂದ ಅಪಾರ್ಥಕೋಶ            ಭಾಗ—21 (ಕೊನೆಯದು)

ಆತ್ಮೀಯರೇˌ
ನನ್ನ 'ಕನ್ನಡ ಕೇಳಿ' ಸರಣಿಯಂತೆಯೇ ಇದನ್ನೂ ಪ್ರೀತಿಯಿಂದ ಸ್ವೀಕರಿಸಿˌ ಆಸ್ವಾದಿಸಿ ಪ್ರೋತ್ಸಾಹಿಸಿದ್ದೀರಿ.  

ಅನೇಕರು ಇದು ನನ್ನದೇ 'ಕು'ಚೇಷ್ಟೆ ಎಂದುಕೊಂಡಿದ್ದಾರೆ. ಕ್ಷಮಿಸಿ..ಇವು ಕನ್ನಡ ಸಾಹಿತ್ಯದಲ್ಲಿ ದಾಖಲಾಗಿರುವ ಪದಪುಂಜಗಳು. ಶ್ರೀ ಅಮೃತ ಸೋಮೇಶ್ವರ ˌ ಶ್ರೀ ನಾ ಕಸ್ತೂರಿ ಯವರ ಕೃತಿಗಳಿಂದ ನಿಮಗೆ ಚೆನ್ನವೆನಿಸಬಹುದಾದ್ದನ್ನು ಆಯ್ಕೆ ಮಾಡಿರುವದಷ್ಟೇ ನನ್ನ ಅಪರಾಧ. (ನಡುವೆ ಕೆಲವೆಡೆ ನನ್ನ ಕೈಚಳಕ ಉಂಟು.)

ಇವನ್ನು ಓದಿ ಹಲವರಾದರೂ ಸ್ವತಃ ತಮ್ಮದೇ ಅಪಾರ್ಥನಿರ್ಮಾಣದಲ್ಲಿ ತೊಡಗಿದ್ದರೆ ಇದು ಸಾರ್ಥಕ.
ಆರಂಭಿಕನಾದ ವಿಘ್ನೇಶನಿಗೆ 21 ನಮಸ್ಕಾರದಂತೆ ಈ ಕಂತು

1 ದೇವರು— ಇದುವರೆಗೂ ಯಾರಿಗೂ ಸರಿ ವಿಳಾಸ ಕೊಡದಿರುವ ಆಸಾಮಿ
2 ಧರ್ಮಪತ್ನಿ— ಪುಕ್ಕಟೆ ಸಿಕ್ಕಿದವಳು
3 ಪಿಂಚಣಿ— ಇಳಿಹರೆಯದ ಸಂಗಾತಿ
4 ಬಾಲಗಂಧರ್ವ— ಸೊಳ್ಳೆ (ಇದನ್ನು ಗಗನಸಖಿˌ ಗಾನವಿನೋದಿನಿಯೆಂದೂ ಕರೆಯುವರು)
5 ಬಹುಧಾನ್ಯ— ರೇಶನ್ ಅಕ್ಕಿ
6 ಮಾರಮ್ಮ— ಸೇಲ್ಸ ಗರ್ಲ್ 
7 ಹಿರಣ್ಯಾಕ್ಷಿ— ಅತ್ತೆಯ ಬಂಗಾರದ ಮೇಲೇ ಕಣ್ಣಿಟ್ಟ ಸೊಸೆ
ಧನ್ಯವಾದಗಳೊಂದಿಗೆ....ಆಯ್ಕೆ
   ಭ ರಾ ವಿಜಯಕುಮಾರ
*****************

ಅಪಾರ್ಥಕೋಶದಿಂದ ಸ್ಫೂರ್ತಿ ಪಡೆದು ರವಿಶಂಕರ್ ರವರು ರಚಿಸಿದ ಕೆಲವು ಪದಾರ್ಥಗಳು👇

1 ಮುಕ್ಕೋತಿ- ಮಹಾತ್ಮ ಗಾಂಧಿಯವರ ಬಳಿಯಿದ್ದ 3 ಕೋತಿಗಳ ಗುಚ್ಛ.
2 ಹೆಂಡಜ- ಹೆಂಡ ಕುಡಿಯಲು ಅಜವನ್ನು ಮಾರಿದವನು
3 ನಿರಸ್ತ್ರ- ಪತ್ನಿಯೊಡನೆ ಜಗಳದಲ್ಲಿ ಪತಿಯ ಪರಿಸ್ಥಿತಿ
4 ನೀರ್ಮೋಹಿ- ನೀರಿನ ಅಪಾರ ಮೋಹವುಳ್ಳವರು
5 ಹೆಣಗಾಹಿ- ಅನಾಥ ಶವ ಕಾಯುವ ಪೊಲೀಸ್
6 ಬಲರಮ್ಮ- ರಮ್ಮಿನಿಂದ ಬಲ ಪಡೆದವನು
7 ಅಪ್ಪರಾಧ- ರಾಧೆಯೊಡನಿರುವಾಗ ಸಿಕ್ಕಿಬಿದ್ದ ಅಪ್ಪ
8 ತುರ್ತು-  ತುರಿತವನ್ನು ಕೆರೆಯುವ ಅವಸರ
9 ಒಣಸುಮ- ಬಾಡಿದ ಹೂವು
10 ಕುಪಿತ- ಕೋಪಗೊಂಡ ತಂದೆ
11 ಗುಂಡಾಂಕ- ಪರೀಕ್ಷೆಯಲ್ಲಿ ಸೊನ್ನೆ ಸುತ್ತಿದವನು
12 ಬೀರಬಲ್ಲ- ಬೀರು ಕುಡಿಯಲು ಬಲ್ಲವನು
13 ತಿಲಕಾಷ್ಟ- ಎಂಟನೇ ಬಾರಿಗೆ ಇಟ್ಟ ತಿಲಕ
14 ಪರದೈವ- ಇತರರಿಗೆ ದೇವರು, ನಮಗಲ್ಲ.
***************

song by vijayakumar's sons





No comments:

Post a Comment