SEARCH HERE

Wednesday, 2 September 2020

ಶ್ರೀಮದ್ ಭಾಗವತ srimad bhagavata


writeup from prasadacharya +91 95358 37843

||ಶ್ರೀ ಮದ್ ಭಾಗವತ||
🙏🙏🙏day 1
ಶ್ರೀ ಹರಿ ವಾಯು ಗುರುಗಳ ಹಾಗು  ಸಮಸ್ತ ಹರಿದಾಸರ ಚರಣಾರವಿಂದಗಳಲ್ಲಿ ಭಕ್ತಿ ಪೂರ್ವಕವಾಗಿ  ಪ್ರಾರ್ಥಿಸಿ  ನಮಸ್ಕರಿಸಿ,
ಶ್ರೀ ಮದ್ಭಾಗವತವನ್ನು ತಿಳಿಸುವ ದೊಡ್ಡ ಕಾರ್ಯವನ್ನು ಮಾಡುವ  ಪುಟ್ಟಪ್ರಯತ್ನವನ್ನು
ಶ್ರೀ ಹರಿ ವಾಯು ಗುರುಗಳು ಇದನ್ನು ನಿರ್ವಿಘ್ನವಾಗಿ ನೆರವೇರಿಸಲು ಅವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾ ಇದ್ದೀನಿ.
✍️ಪ್ರೋಷ್ಟಪದಿಯ ಇನ್ನೊಂದು ಹೆಸರು ಭಾದ್ರಪದಮಾಸ... 
ಈಭಾದ್ರಪದಮಾಸದಲ್ಲಿಯೇ ಪರೀಕ್ಷಿತರಾಜನು ಭಾಗವತ ಕೇಳಿದ್ದರಿಂದಲೇ ಇದಕ್ಕೆ ಪ್ರೋಷ್ಟಪದಿ ಭಾಗವತ ಅಂತ ಕರೆಯಲಾಗಿದೆ.
ಶ್ರೀ ಮದ್ಭಾಗವತ ಎಂದರೆ  ಶ್ರೀಹರಿಯ ಮಹಿಮೆಯನ್ನು ತಿಳಿಸುವ ಚರಿತ್ರೆ. 
ಭಾದ್ರಪದ ಮಾಸವನ್ನು ಪ್ರೋಷ್ಠಪದ ಮಾಸ ಅನ್ನುತ್ತಾರೆ.
ಭಾದ್ರಪದ ಮಾಸದಲ್ಲಿ ಶ್ರೀಶುಕಾಚಾರ್ಯರು ಪರಿಕ್ಷಿತ್ ಮಹಾರಾಜರಿಗೆ ಭಾಗವತ ಪುರಾಣವನ್ನು ಭೋಧಿಸಿದರು ಎನ್ನಲಾಗುತ್ತದೆ.
ಆದ್ದರಿಂದ ಈ ಮಾಸದಲ್ಲಿ ಶ್ರೀ ಮದ್ಭಾಗವತ ಪ್ರವಚನಗಳಿಗೆ ವಿಶೇಷ ಮಹತ್ವ ಇದೆ.
ಈ  ಶ್ರೀ ಮದ್ಭಾಗವತ ಪುರಾಣವನ್ನು ಕಲಿಯುಗದ ಪ್ರಾರಂಭದಲ್ಲಿ ಶ್ರೀ ವೇದವ್ಯಾಸ ದೇವರ ಪುತ್ರ ರಾದ ರುದ್ರಾಂಶರಾದ ಶ್ರೀ ಶುಕಮುನಿಗಳು ಗಂಗಾತೀರದಲ್ಲಿ ಹೇಳಲು ಪ್ರಾರಂಭ ಮಾಡಿದ್ದಾರೆ..
ಸಮಸ್ತ ಹರಿ ಭಕ್ತರು,ಸಕಲ ಋಷಿಸಮೂಹ ಅಲ್ಲಿ ನೆರೆದಿದೆ.
ಆಗ ಇಂದ್ರಾದಿ ದೇವತೆಗಳು ಸಹ ಅಲ್ಲಿಗೆ ಬಂದಿದ್ದಾರೆ
ಬಂದವರು ಶ್ರೀಶುಕಮುನಿಗಳಿಗೆ ನಮಸ್ಕರಿಸಿ, 
"ನೀವು ಭಾಗವತವನ್ನು ಪರೀಕ್ಷಿತ ಮಹಾರಾಜ ನಿಗೆ ಯಾಕೆ ಹೇಳುತ್ತಾ ಇದ್ದೀರಿ.!!ಯಾಕೆಂದರೆ ಇವನಿಗೆ ಶಾಪ ಬಂದಿದೆ.ಸತ್ತ ಹಾವನ್ನು ಶಮೀಕ ಋಷಿಗಳ ಕೊರಳಿಗೆ ಹಾಕಿದ್ದ ಕಾರಣದಿಂದ ಅವರ ಪುತ್ರನಿಂದ ಶಾಪ ಇದೆ. ಹೇಗೊ ಅವನಿಗೆ ಏಳು ದಿನದಲ್ಲಿ ಮೃತ್ಯು ಬರುತ್ತದೆ..
ಅದಕ್ಕೆ ನಾವು ಈ ಅಮೃತ ಕಲಶವನ್ನು ತಂದಿದ್ದೇವೆ.ಇದನ್ನು ಕುಡಿದು ಅವನು ಅಜರಾಮರನಾಗಲಿ...
ನೀವು ಇದನ್ನು ಸ್ವೀಕರಿಸಿ ನಮಗೆ ನಿಮ್ಮ ಹತ್ತಿರ ಇರುವ ಭಾಗವತಾಮೃತವನ್ನು ಕೊಡಿ. ಪರಿಕ್ಷೀತ ಮಹರಾಜ ಈ ಅಮೃತವನ್ನು ಪಾನ ಮಾಡಲಿ.ಈ ಭಾಗವತಾಮೃತವನ್ನು ನಮಗೆ ಕೊಡಿ. ನಾವು ಪಾನ ಮಾಡುತ್ತೇವೆ.ಈ ರೀತಿಯಲ್ಲಿ ವಿನಿಮಯವನ್ನು ಮಾಡಿಕೊಳ್ಳೋಣ ಎಂದು ಹೇಳುತ್ತಾರೆ.
ಅವಾಗ್ಗೆ ಶ್ರೀಶುಕಮುನಿಗಳು ಹೇಳುತ್ತಾರೆ.
"ಈ ಭಾಗವತ ಎಲ್ಲಿ?? ನೀವು ತಂದಿರತಕ್ಕಂತಹ ಅಮೃತ ಎಲ್ಲಿ?? ಯಾವುದಾದರು ವಸ್ತು ವಿನಿಮಯ ಮಾಡಿಕೊಳ್ಳುವ ಹಾಗಿದ್ದರೆ ಎರಡು ವಸ್ತುಗಳ ಸಮಾನ ವಾಗಿರಬೇಕು.
ಈ ಭಾಗವತಕ್ಕು ಅಮೃತಕ್ಕು ಹೋಲಿಕೆ ಇದೆಯೇ??ಇದನ್ನು ಕುಡಿದರೆ ಮುಪ್ಪು ಬಾರದೆ ಇರಬಹುದು.ಆದರೆ ಈ ಭಾಗವತ ಮುಕ್ತಿ ಲೋಕವನ್ನು ತಂದು ಕೊಡುವಂತಹುದು...
ಪರೀಕ್ಷಿತ ಮಹರಾಜ ತಾನು ಮಾಡಿದ ಪಾಪ ಪರಿಹಾರಕ್ಕಾಗಿ ಇದನ್ನು ಶ್ರವಣ ಮಾಡುತ್ತಾ ಇದ್ದಾನೆ.ಅವನು ಮೃತ್ಯುವಿಗೆ ಹೆದರಿಲ್ಲ.ಅದು ಇಂದಲ್ಲ ನಾಳೆ ಬರುವಂತವುದು...
ನಿಮಗೆ ಇದರಲ್ಲಿ ಭಕ್ತಿ ಇಲ್ಲ. ಮುಕ್ತಿ ಲೋಕವನ್ನು  ತಂದು ಕೊಡುವಂತಹ ಈ ಭಾಗವತವನ್ನು ಹಣ, ಮುಂತಾದ ದ್ರವ್ಯಗಳಿಂದ ಕೊಂಡು ಕೊಳ್ಳುವ ವಸ್ತು ಅಲ್ಲ.ನೀವಿನ್ನು ಹೋಗಬಹುದು ಅಂತ ಹೇಳುತ್ತಾರೆ.
ಅವಾಗ ಇಂದ್ರಾದಿ ದೇವತೆಗಳು ಅವರಲ್ಲಿ ಕ್ಷಮೆ ಯಾಚಿಸಿ ಏಳುದಿನಗಳ ಕಾಲ ಭಾಗವತ ಶ್ರವಣವನ್ನು ಮಾಡುತ್ತಾರೆ.
 ಏಳುದಿನವಾದ ಮೇಲೆ ಪರಿಕ್ಷೀತರಾಜನಿಗೆ ತಕ್ಷಕ ಸರ್ಪ ಕಚ್ಚಿ ಗರುಡವಾಹನ ನಾದ ಶ್ರೀ ಲಕ್ಷ್ಮೀ ನಾರಾಯಣನ ಪಾದವನ್ನು ಸೇರಿದ್ದಾನೆ..
ಲಿಂಗ ದೇಹ ಸಹಿತ ನಾಗಿ ಭಗವಂತನ ಪಾದ ಮೂಲ ಸೇರಿದ್ದಾನೆ...
ಈ ಭಾಗ್ಯ ಅಮೃತ ಕುಡಿದರೆ ಬರುತಿತ್ತೋ??
ಈ ಭಾಗವತ ಕಾಲಾಂತರದಲ್ಲಿ ಮುಕ್ತಿ ಯನ್ನು ಕೊಡುವಂತಹುದು...
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಆಗದೆನೆಗೆ ಅಬುಜನಾಭ| ಭಾಗವತವ ಕೇಳೆ ನಾನು|
ಹ್ಯಾಂಗ  ನಾ ನಿನ್ನ ದಾಸ ನಾಗುವೆನು|
ಭವ ನೀಗುವೆನು||
🙏🙏 
ಇಂದಿನಿಂದ ಹದಿನೈದು ದಿನಗಳ ಕಾಲ ಶ್ರೀ ಮದ್ ಭಾಗವತ ವನ್ನು ನನ್ನ ಯೋಗ್ಯತೆ ಅನುಸಾರವಾಗಿ ತಿಳಿಸುವ ಪ್ರಯತ್ನ  ಎನ್ನಸ್ವಾಮಿಯಾದ ಆ ಶ್ರೀ ಹರಿಯು ಮಾಡಿಸಲಿ.
ನಿಮ್ಮ ಎಲ್ಲರ ಆಶೀರ್ವಾದ ಸದಾ  ನನ್ನ ಮೇಲೆ ಇರಲಿ.

🙏🙏🙏🙏

day 2

||ಶ್ರೀ ಮದ್ ಭಾಗವತ||

day2.
ಶ್ರೀ ಹರಿ ವಾಯು ಗುರುಗಳ ಹಾಗುಸಮಸ್ತ ಹರಿದಾಸರ ಚರಣಾರವಿಂದಗಳಲ್ಲಿ ಭಕ್ತಿ ಪೂರ್ವಕವಾಗಿ  ಪ್ರಾರ್ಥಿಸಿ  ನಮಸ್ಕರಿಸಿ,🙏
✍️ಶ್ರೀ ಮದ್ಭಾಗವತ ಎಂದರೆ  ಶ್ರೀಹರಿಯ ಮಹಿಮೆಯನ್ನು ತಿಳಿಸುವ ಚರಿತ್ರೆ. 
ಭಾದ್ರಪದ ಮಾಸವನ್ನು ಪ್ರೋಷ್ಠಪದ ಮಾಸ ಅನ್ನುತ್ತಾರೆ.
ಭಾದ್ರಪದ ಮಾಸದಲ್ಲಿ ಶ್ರೀಶುಕಾಚಾರ್ಯರು ಪರಿಕ್ಷಿತ್ ಮಹಾರಾಜರಿಗೆ ಭಾಗವತ ಪುರಾಣವನ್ನು ಭೋಧಿಸಿದರು. ಎನ್ನಲಾಗುತ್ತದೆ.
ಆದ್ದರಿಂದ ಈ ಮಾಸದಲ್ಲಿ ಭಾಗವತ ಪ್ರವಚನಗಳಿಗೆ ವಿಶೇಷ ಮಹತ್ವ ಇದೆ.
ಈ ಭಾಗವತ ಪುರಾಣವನ್ನು ಕಲಿಯುಗದಲ್ಲಿ ಒಟ್ಟು ಮೂರು ಬಾರಿ ಪ್ರವಚನ ನಡೆದಿರುವುದನ್ನುಉಲ್ಲೇಖ ಮಾಡುತ್ತಾರೆ.

ಶ್ರೀ ಕೃಷ್ಣ ಪರಮಾತ್ಮ ಪರಂಧಾಮಕ್ಕೆ ಹೋಗಿ ೩೦ವರುಷಗಳಾದ ಮೇಲೆ ಪರಿಕ್ಷೀತ ಮಹಾರಾಜ ಶುಕ ಮಹರ್ಷಿಗಳಿಂದ ಭಾಗವತವನ್ನು ಕೇಳಿದ್ದಾನೆ.

ಇದು ಮೊದಲನೆಯ ಸಲ..
ಭಾದ್ರಪದ ಮಾಸ ನವಮಿ ಇಂದ ಹುಣ್ಣುಮೆ ವರೆಗೆ ನಡೆಯಿತು.

ಎರಡನೆಯ ಸಲ ಇನ್ನೂರು ವರುಷಗಳ ನಂತರ ಗೋಕರ್ಣ ಎನ್ನುವ ಬ್ರಾಹ್ಮಣ ಕುಮಾರನ ಮನೆಯಲ್ಲಿ ಭಾಗವತ ಸಪ್ತಾಹ ನಡೆದಿದೆ.

ಇದು ಆಷಾಢ ಮಾಸ ನವಮಿ ಇಂದ ಭಾಗವತ ಸಪ್ತಾಹ ನಡೆದಿದೆ..
ಬ್ರಾಹ್ಮಣ ಕುಮಾರನ ಮನೆಯಲ್ಲಿ ಪ್ರೇತ ಭಾದೆ ಆಗಿದೆ.
ಪ್ರೇತ ಅಂದರೆ ಅವನ ಅಣ್ಣನೇ ಪ್ರೇತವಾಗಿ ಗೋಕರ್ಣನಿಗೆ ಭಾದೆ ಆಗಿತ್ತು.
ಈ ಪ್ರೇತ ಪೀಡಾ ಪರಿಹಾರಕ್ಕಾಗಿ ತನ್ನ ಮನೆಯಲ್ಲಿ ಭಾಗವತ ಸಪ್ತಾಹ ವನ್ನು ಮಾಡಿದ್ದಾನೆ.

ಇದಾದ ನಂತರ ನಾರದ ಋಷಿಗಳು ಭೂಲೋಕಕ್ಕೆ ಬಂದು ಮೂರನೆಯ ಸಲ ಭಾಗವತ ಪ್ರವಚನ ನಡೆಸಿದ್ದಾರೆ.

ಆಗ ಕಲಿಯುಗ ಪ್ರಾರಂಭವಾಗಿ ೨೬೦ ವರುಷಗಳ ಆಗಿತ್ತು.
ಇದು ಕಾರ್ತಿಕ ಮಾಸದಲ್ಲಿ ನಡೆದಿದೆ.
ಇದರ ಫಲ👇👇
ಎಲ್ಲಿ ಭಾಗವತ ಶ್ರವಣ,ಪಠಣ ನಡೆಯುತ್ತದೆಯೋ, ಅಲ್ಲಿ ಎಲ್ಲಾ ಮಹರ್ಷಿ ಗಳ ಸನ್ನಿಧಾನ,ಗಂಗಾದಿ ನದಿ ತೀರ್ಥಗಳ ಸನ್ನಿಧಾನ ಅವರ ಅಭಿಮಾನಿ ದೇವತೆಗಳ ಸನ್ನಿಧಾನ ಸದಾ ಇರುತ್ತದೆ.
 ಇವರೆಲ್ಲರೂ ಒಡನಾಟವು ಇರುತ್ತದೆ ಆದ್ದರಿಂದ ಪದೇ ಪದೇ ಭಾಗವತ ವನ್ನು ಕೇಳಲು ಅವರೆಲ್ಲರೂ ಬರುತ್ತಾರೆ..
ಅವರೆಲ್ಲರ ದೃಷ್ಟಿ ನಮ್ಮ ಮೇಲೆ ಬೀಳುತ್ತದೆ.
ಇನ್ನೂ ಮುಖ್ಯ ಪ್ರಾಣನಾದ ಶ್ರೀಹನುಮಂತ ದೇವರು ಸಹ ಇದ್ದೇ ಇರುತ್ತಾರೆ..
ಮುಖ್ಯ ಪ್ರಾಣ ಇದ್ದ ಕಡೆ ದುಷ್ಟ ಶಕ್ತಿಗಳ ಆಟ ನಡೆಯದು..
ಇದು ಶ್ರೀ ಮದ್ ಭಾಗವತದ ಮಹಿಮೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಹಾಳು ಹರಟೆಯಾಡಿ ಮನವ|
ಬೀಳು ಮಾಡಿ ಕೊಳ್ಳಲು ಬೇಡಿ|
ಏಳುದಿನದ ಕಥೆಯು ಕೇಳಿ|
ಏಳಿರೋ ವೈಕುಂಠಕ್ಕೆ||

🙏ಅ.ವಿಜಯ ವಿಠ್ಠಲ🙏

day 3
||ಪಿಬತ ಭಾಗವತಂ ರಸಮಾಲಯಂ||
day3

ಶ್ರೀಹರಿ ವಾಯು ಗುರುಗಳ ಹಾಗು ಎಲ್ಲಾ ಹರಿದಾಸರ ಮತ್ತು ನಮ್ಮ ಹಿರಿಯರ ಚರಣಾರವಿಂದಗಳಲ್ಲಿ ಭಕ್ತಿ ಪೂರ್ವಕವಾಗಿ  ಪ್ರಾರ್ಥಿಸಿ  ನಮಸ್ಕರಿಸಿ, 🙏🙇‍♂
✍️ಪೂರ್ವ ದಲ್ಲಿ ತುಂಗಾತೀರದಲ್ಲಿ ಒಂದು ಪಟ್ಟಣ.ಅಲ್ಲಿ ವೇದ ಶಾಸ್ತ್ರ ಪಂಡಿತನಾದ  ಆತ್ಮದೇವ ಎನ್ನುವ ಬ್ರಾಹ್ಮಣ ಇದ್ದನು.ಬಹಳಷ್ಟು ಸಂಪತ್ತು ಇದ್ದರು ಸಂತಾನ ಇದ್ದಿಲ್ಲ ಅವನಿಗೆ.
ಒಂದು ದಿನ ಅವರಿಗೆ ಅಡವಿಗೆ ಹೋದಾಗ ಅಲ್ಲಿ ಒಬ್ಬ ಯತಿಗಳ ಭೇಟಿ ಆಗುತ್ತದೆ. ಅವರ ಕಾಲಿಗೆ ಬಿದ್ದು ತನ್ನ ಚಿಂತೆಯನ್ನು ಹೇಳಿ ಗೋಳಾಡುತ್ತಾನೆ.ಅವರಿಗೆ ಅವನ ಹಣೆ ಬರಹ ನೋಡಿ ಹೇಳುತ್ತಾರೆ.
ನಿನಗೆ ಸಂತಾನ ಭಾಗ್ಯ ಏಳು ಜನ್ಮಕಳೆದರು ಸಹ ಇಲ್ಲ ಅಂತ..
ಅವನ ದುಃಖ ನೋಡಲಾಗದೇ ಅವರು ಒಂದು ಹಣ್ಣು ಮಂತ್ರಿಸಿಕೊಟ್ಟು ನಿನ್ನ ಪತ್ನಿಗೆ ಇದನ್ನು ಕೊಡು,ಇದನ್ನು ಸೇವಿಸಲು ನಿಮಗೆ ಒಳ್ಳೆಯ ಪುತ್ರ ಜನನವಾಗುವದು ಅಂತ ಹೇಳುತ್ತಾರೆ.
ಆ ಬ್ರಾಹ್ಮಣ ಅದನ್ನು ತಂದು ತನ್ನ ಪತ್ನಿ ಗೆ ಕೊಟ್ಟು ತಾನು ಬೇರೆ  ಕಾರ್ಯ ನಿಮಿತ್ತ ಬೇರೆ ಊರಿಗೆ ಹೋಗುವ.
ಅವಾಗ ಅವಳು ಅದರ ಮೇಲೆ ನಂಬಿಕೆ ಇಲ್ಲದೇ ಆ ಹಣ್ಣನ್ನು ತನ್ನ ಮನೆಯಲ್ಲಿ ಇದ್ದ ಹಸುವಿಗೆ ಹಾಕುತ್ತಾಳೆ.
ಮತ್ತು ತನ್ನ ತಂಗಿ ಗರ್ಭಿಣಿ ಆಗಿದ್ದು ಕಂಡು ಅವಳ ಮಗುವನ್ನು ತನಗೆ ಕೊಡಲು ಒಪ್ಪಂದ ಮಾಡಿಕೊಂಡು ದೂರದ ಊರಿಗೆ ಹೋಗಿದ್ದ ಗಂಡನಿಗೆ ಗರ್ಭಿಣಿ ಎಂದು ಸುಳ್ಳು ಹೇಳುತ್ತಾಳೆ.
ಕಾಲಕ್ರಮೇಣ ತನ್ನ ತಂಗಿಗೆ ಜನನವಾದ ಗಂಡು ಮಗುವನ್ನು ತನ್ನ ಮಗುವೆಂದು ಹೇಳಿ ಎಲ್ಲಾ ರಿಗು ನಂಬಿಕೆ ಬರುವ ಹಾಗೆ ಮಾಡುತ್ತಾಳೆ.ಮತ್ತು ಆ ಮಗುವಿಗೆ ದುಂದುಕಾರಿ ಅಂತ ಹೆಸರನ್ನು ಇಡುತ್ತಾರೆ.
ಇತ್ತ ಕೊಟ್ಟಿಗೆಯಲ್ಲಿ ಇದ್ದ ಹಸು ಆ ಹಣ್ಣು ತಿಂದು ಒಂದು ಗಂಡು ಮಗುವಿಗೆ ಜನ್ಮ ನೀಡುತ್ತದೆ. ಅದರ ಕಿವಿ ಆಕಳ ಹಾಗೇ ಇದ್ದ ಕಾರಣ ಅವನಿಗೆ ಗೋಕರ್ಣ ಅಂತ ನಾಮಕರಣ ಮಾಡುತ್ತಾರೆ.
ಕಾಲ ಕ್ರಮೇಣ ಇಬ್ಬರು ಬೆಳೆದು,ದೊಡ್ಡವರಾಗಿ ದುಂದುಕಾರಿ ದುಷ್ಟ ಪ್ರವೃತ್ತಿ ಉಳ್ಳವನಾಗಿ ಲೋಕ ಕಂಟಕನಾಗುತ್ತಾನೆ.
ಗೋಕರ್ಣ ಒಳ್ಳೆಯ ಪಂಡಿತ ನಾಗುತ್ತಾನೆ.
ತನ್ನ ಮಗನ ದುಷ್ಟ ಕಾರ್ಯಗಳನ್ನು ನೋಡಿ  ಮನಸ್ಸು ಬೇಸರವಾಗಿ 
ಆ ಬ್ರಾಹ್ಮಣ ವಾನಪ್ರಸ್ಥಶ್ರಾಮ ಹೋಗಿ ಶ್ರೀ ಮದ್ಭಾಗವತ ದಶಮ ಸ್ಕಂದ ಪಾರಾಯಣ ಮಾಡುತ್ತಾ ದೇಹತ್ಯಾಗ ಮಾಡಿ ಸದ್ಗತಿ ಪಡೆಯುತ್ತಾನೆ..
ಇವನ ದುಷ್ಟ ಕೃತ್ಯಗಳನ್ನು ಕಂಡು ಅವನ ತಾಯಿಯು  ಸಹ ಪ್ರಾಣತ್ಯಾಗ ಮಾಡುವಳು.
ನಂತರ ಅವನು  ೫ ಜನ ವೇಶ್ಯೆ ಯರ ಸಹವಾಸ ಮಾಡಿ ಅವರಿಗೆ ನಿತ್ಯ ಪೋಷಣೆ ಮಾಡಲು ಕಳ್ಳತನ ಮಾಡುತ್ತಾ ಇದ್ದನು.
ಇದನ್ನು ಕಂಡ ಅವರು ನಮ್ಮ ಮೇಲೆ ಅಪವಾದ ಬರುತ್ತದೆ ಅಂತ ವಿಚಾರಿಸಿ ಅವನನ್ನು ಕೊಂದು ಅವನ ಬಳಿ ಇದ್ದ ಸಂಪತ್ತು ತೆಗೆದುಕೊಂಡು ಅವನನ್ನು ಒಂದು ಕಡೆ ಹೂತು ಹಾಕುತ್ತಾರೆ. 
ಆ ನಂತರ ಅವನಿಗೆ ಪ್ರೇತ ಜನ್ಮ ಬರುತ್ತದೆ.
ಅದರಿಂದ ಬಹಳ ಭಾದಿತನಾಗಿ ತನ್ನ ಮನೆಗೆ ಬಂದು ತನ್ನ ಸಹೋದರ ನಾದ ಗೋಕರ್ಣನ ಮುಂದೆ ಕಾಣಿಸಿಕೊಂಡು "ಹಿಂದೆ ಮಾಡಿದ ಪಾಪ ಕೃತ್ಯಗಳಿಂದ ಈ ಜನ್ಮ ಬಂದಿದೆ.ಬಹಳ ಕಷ್ಟ ವಾಗಿದೆ. ನನಗೆ ಇದರಿಂದ ಮುಕ್ತಿ ಕೊಡಿಸು" ಎಂದು ಕೇಳಿಕೊಂಡ.

ಅದಕ್ಕೆ ಗೋಕರ್ಣ 
"ನಿನ್ನ ಶ್ರಾದ್ಧ ಕರ್ಮಗಳು ಎಲ್ಲಾ ಮಾಡಿದ್ದೇನೆ.ಗಯಾ ಶ್ರಾದ್ಧ ಸಹ ಆಗಿದೆ ಆದರು ನಿಮಗೆ ಈ ಜನುಮ ಹೋಗಿಲ್ಲ ಅಂದರೆ ವಿಚಾರ ಮಾಡಿ ಹೇಳುವೆ" ಅಂತ ಹೇಳಿ ಬಲ್ಲವರನ್ನು ಕೇಳಲು
ಎಲ್ಲರು ಸೂರ್ಯದೇವನನ್ನು ಕೇಳು ಅಂತ ಹೇಳುತ್ತಾರೆ.ಆಗ ಸೂರ್ಯದೇವನ ಕುರಿತು ಗೋಕರ್ಣ ಪ್ರಾರ್ಥನೆ ಮಾಡಿ 'ನನ್ನ ಅಣ್ಣ ನ ಪ್ರೇತ ಜನ್ಮ ನಿವಾರಣೆ ಬಗ್ಗೆ ಹೇಳಬೇಕು.." ಅಂತ ಕೇಳಿದಾಗ ಶ್ರೀ ಮದ್ ಭಾಗವತ ಸಪ್ತಾಹ ಮಾಡಲು ಸೂರ್ಯದೇವನ  ಆಜ್ಞೆ ಆಗುತ್ತದೆ.
ಅದರಂತೆ ತನ್ನ ಮನೆಯ ಹತ್ತಿರ ತುಂಗಭದ್ರಾ ತೀರದಲ್ಲಿ ಸಪ್ತಾಹ ಮಾಡುತ್ತಾನೆ. ಎಲ್ಲಾ ಜನರು, ಭಾಗವತ ಕೇಳುವುದಕ್ಕೆ ಬರುತ್ತಾರೆ.
ದುಂದುಕಾರಿ ಪ್ರೇತ ಜನ್ಮ ಇದ್ದ ಕಾರಣ ಕೂಡಲು ಆಗದೇ ಗಾಳಿಯ ರೂಪದಲ್ಲಿ ಬಂದು ಅಲ್ಲಿ ಇದ್ದ ಬಿದಿರುನ ಕೋಲಿನಲ್ಲಿ ಕುಳಿತು ನಿತ್ಯ ಭಾಗವತ ಕೇಳುತ್ತಾ ಇತ್ತು.

ಆ ಬಿದಿರಿಗೆ ಏಳು ಗಂಟುಗಳು ಇದ್ದವು.
ಒಂದೊಂದು ದಿನ ಭಾಗವತ ಕೇಳಿದಾಗ ಅದರಲ್ಲಿ ಇದ್ದ ಪ್ರತಿ ಗಂಟು ಆ ದಿನ ದೊಡ್ಡ ಶಬ್ದ ಮಾಡಿ ಒಡೆಯುತ್ತಾ ಇತ್ತು.
ಏಳನೆಯ ದಿನ ಸಪ್ತಾಹ ಮುಗಿದಾಗ ಏಳನೆಯ ಗಂಟು ಒಡೆದು  ತನ್ನ ಪ್ರೇತ ಜನ್ಮವನ್ನು ಕಳೆದುಕೊಂಡು ಸುಂದರವಾದ ದಿವ್ಯ ರೂಪದಿಂದ, ತುಳಸಿ ಮಾಲೆಯನ್ನು ಧರಿಸಿ, ಪೀತಾಂಬರದಾರಿಯಾಗಿ ಆಭರಣಗಳನ್ನು ಧರಿಸಿದ ದುಂದುಕಾರಿ ಹೊರಬಂದುಎಲ್ಲಾ ರಿಗು ನಮಸ್ಕರಿಸಿ 🙏
ಶ್ರೀ ಮದ್ಭಾಗವತ ಶ್ರವಣದಿಂದ ನನ್ನ ಎಲ್ಲಾ ಪಾಪಗಳು, ಪ್ರೇತ ಜನ್ಮ ಹೋಯಿತು ಅಂತ ಹೇಳಿ ಇದರ ಮಹಿಮೆಯನ್ನು ವರ್ಣಿಸುತ್ತಾನೆ..
ಮತ್ತು ವಿಷ್ಣು ಲೋಕವನ್ನು ಸೇರುತ್ತಾನೆ.

ಈ ರೀತಿ ಶ್ರೀ ಮದ್ಭಾಗವತ ಶ್ರವಣದಿಂದ ಅಜ್ಞಾನ ದ ಗಂಟು ಒಡೆದು ಹೃದಯದ ಸಂಶಯ ಪರಿಹಾರವಾಗಿ ಸಕಲ ಪಾಪಕರ್ಮಗಳು ಛೇದನ ವಾಗಿ ಹೋಗುತ್ತದೆ.
ಇದೇ ಶ್ರೀ ಮದ್ಭಾಗವತದ ಮಹಿಮೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ|


🙏ಸಕಲರಿಗು ಶ್ರೀ ಗೌರಿ ಗಣೇಶ ಹಬ್ಬದ ನಮಸ್ಕಾರ ಗಳು🙏

day 4
ಪಿಬತ ಭಾಗವತಂ ರಸಮಾಲಯಂ||
day 4
🙏🙏
ಭಗವಂತನಾದ ಶ್ರೀ ವೇದವ್ಯಾಸ ರೂಪಿ ಪರಮಾತ್ಮನು ತಾನೇ ಸ್ವತಃ ರಚಿಸಿದ ಮಹಾನ್ ಗ್ರಂಥ.
ಇದು ದೇವಲೋಕದ ಅಮೃತಕ್ಕಿಂತಲು ಮಿಗಿಲು.
ಇದಕ್ಕೆ ಸಮನಾದದು ಯಾವುದು ಇಲ್ಲ.
ಸಿಹಿಯುಳ್ಳ ಪಾನೀಯ,ಕುಡಿದಾಗ ಮನಸ್ಸು ಆನಂದ ಗೊಳ್ಳಬಹುದು.
ಆದರೆ 
ಅತಿಯಾಗಿ ಕುಡಿದಾಗ ಅದರಿಂದ ಏನಾದರು ಒಂದು side effect ಆಗಿ ಚೂರು ಆರೋಗ್ಯ ವ್ಯತ್ಯಾಸವನ್ನು ಕಾಣಬಹುದು.
ಆದರೆ 
ಈ ಭಾಗವತ ಅಮೃತ ಎಂಬ ಸಿಹಿಯಾದ ಪಾನೀಯ ಎಷ್ಟು ಬಾರಿಯಾದರು ದಿನಕ್ಕೆ ಪಾನ ಮಾಡಿರಿ.ಇದರಿಂದ ಯಾವುದೇ side effect ಇಲ್ಲ.
ಇದರಿಂದ ಲಾಭವೇ ಹೊರತು ನಷ್ಟ ಇಲ್ಲ.

ಈ ಗ್ರಂಥ ಪಾರಾಯಣ ಫಲ.

೧. 
ಕಾಲ ದೇಶ ಗಳಿಂದ ಮಾಡಿದ ಪಾಪಗಳನ್ನು ಸಹ ಇದು ಭಕ್ತಿಯಿಂದ ಶ್ರವಣ,ಪಠಣ  ಮನನ ಮಾಡಿದರೆ ಕಳೆದು ಹಾಕುತ್ತದೆ.
ಇದಕ್ಕೆ ಪರಿಕ್ಷೀತ ರಾಜ ಸಾಕ್ಷಿ.

೨.ನಮ್ಮ ಮನೆಯಲ್ಲಿ ಹಿರಿಯರು ಹಿಂದೆ ಯಾರಾದರು ಸತ್ತು ಹೋದಾಗ,ಅವರಿಗೆ ಸರಿಯಾದ ರೀತಿಯಲ್ಲಿ ಕರ್ಮ ಸಂಸ್ಕಾರ ನಡೆಯದೇ ಹೋದಾಗ,ಅವರು ಪ್ರೇತವಾಗಿ ಉಳಿದರೆ,ಅದರ ನಿವಾರಣೆ ಗೋಸ್ಕರ ವಾಗಿ ಸಹ ಶ್ರೀ ಮದ್ ಭಾಗವತ ಪಾರಾಯಣ,ಶ್ರವಣವನ್ನು ಮಾಡಲು ಹೇಳುತ್ತಾರೆ.

ಇದಕ್ಕೆ  
ಇದರಲ್ಲಿ ಬರುವ ಗೋಕರ್ಣ ಹಾಗು ಅವನ ಸಹೋದರನ ನ ಕತೆಯೇ ಸಾಕ್ಷಿ.

೩.ಮೋಕ್ಷ ಸಾಧನೆಗಾಗಿ ಈ ಭಾಗವತ ಶ್ರವಣ.

ಇದಕ್ಕೆ ಪರಿಕ್ಷೀತ ರಾಜ ಪ್ರತ್ಯಕ್ಷವಾಗಿ ಉದಾಹರಣೆ.

ಶ್ರೀ ಮದ್ ಭಾಗವತ ದಲ್ಲಿ ೧೮,೦೦೦ ಗ್ರಂಥ ಶ್ಲೋಕ ಗಳಿವೆ..

ಶ್ರೀ ಮದ್ ಭಾಗವತವು ಹನ್ನೆರಡು ಸ್ಕಂಧಗಳಿಂದ ಕೂಡಿದೆ.
ಪರೀಕ್ಷಿತ ಮಹಾರಾಜ ಹಾಗು ಶುಕ ಮುನಿಗಳನಡುವಿನ ಸಂವಾದ ರೂಪವಾಗಿದೆ.
ಪ್ರತಿ ಒಂದು ಸಾವಿರ ಗ್ರಂಥಗಳಿಗು ಒಂದೊಂದು ಭಗವದ್ ರೂಪ ಇದೆ.
ಈ ರೀತಿಯಲ್ಲಿ ೧೮,೦೦೦ ಗ್ರಂಥ ಶ್ಲೋಕಗಳಿಗೆ ೧೮ ಭಗವದ್ ರೂಪ ಗಳಿವೆ.
ಹನ್ನೆರಡು ಸ್ಕಂಧಗಳಿಗೆ ಹನ್ನೆರಡು ಭಗವಂತನ ರೂಪಗಳು ಇವೆ.

ಕೇಶವ, ನಾರಾಯಣ,ಮಾಧವ,

ಗೋವಿಂದ,ವಿಷ್ಣು, ಮಧುಸೂಧನ,ತ್ರಿವಿಕ್ರಮ, ವಾಮನ,ಶ್ರೀಧರ, ಹೃಷಿಕೇಶ, ಪದ್ಮನಾಭ, ಮತ್ತು ದಾಮೋದರ,ಇವೇ ಭಗವಂತನ ಆ ಹನ್ನೆರಡು ರೂಪಗಳು..

ಈ ಭಾಗವತ ಶ್ರವಣ,ಪಾರಾಯಣದ ಫಲ ಗಂಗಾ ನದಿ ಸ್ನಾನಕ್ಕಿಂತಲು ಮಿಗಿಲು.

ಗಂಗಾನದಿಯ ಸ್ನಾನ ಮಿಂದವರ ಪಾಪವನ್ನು ತೊಳೆದರೆ,
ಶ್ರೀ ಮದ್ ಭಾಗವತ ಸಂಸಾರದ ಜಿಡ್ಡು ನಾಶಪಡಿಸಿ ನಮಗೆಲ್ಲ ಪಾಪವನ್ನು ಲೇಪನ ವಿಲ್ಲದಂತೆ ಮಾಡುವದು..
ಗಂಗಾನದಿಯನ್ನು  ನಮ್ಮ ಅವಶ್ಯಕತೆ ಬೇಕಾದಷ್ಟು ಶೇಖರಣೆ ಮಾಡಲು ಒಂದು ಪಾತ್ರೆ ಬೇಕು.
ಆದರೆ 
ಈ ಭಾಗವತಕ್ಕೆ ಸಂಗ್ರಹ ಮಾಡಲು ನಮ್ಮ ತಲೆ ಎನ್ನುವ ಪಾತ್ರೆ ಮಾತ್ರ ಸಾಕು.
ಗಂಗಾ ನದಿಯಲ್ಲಿ  ಇಡೀ ದೇಹವನ್ನು ಮುಳುಗಿದಾಗ ಮಾತ್ರ ಸ್ನಾನ ಮಾಡಿದ ಫಲ ಬರುತ್ತದೆ.
ಆದರೆ 
ನಿತ್ಯದಲ್ಲಿ ಈ ಭಾಗವತ ಇಡೀ ಗ್ರಂಥದ,ಎಲ್ಲಾ ಶ್ಲೋಕಗಳನ್ನು ಪಾರಾಯಣ ಮಾಡಲು ಆಗದಿದ್ದರೆ,ಕೊನೆಗೆ ಒಂದು ಶ್ಲೋಕವಾದರು ಹೇಳುವದು.ಅದು ಸಹ ಆಗದಿದ್ದರೆ
ಕೊನೆಯಲ್ಲಿ 
ಶ್ಲೋಕದ ಕಾಲುಭಾಗ ವಾದರು ಸರಿ,ಕಿವಿಗೊಟ್ಟು ಭಕ್ತಿ ಇಂದ ಕೇಳಿದರೆ,ಸಾವಿರ ಗೋದಾನದ ಫಲ ಬರುತ್ತದೆ.
ಶ್ರೀಹರಿಯ ಪ್ರೀತಿ ಎಂಬ ಉಡುಗೊರೆ ನಮಗೆ ಸಿಗುತ್ತದೆ..

ಬರಿಯ ಕಾಲುಭಾಗದಷ್ಟು ಶ್ರವಣ ಮಾಡಿದರೆ ನಮಗೆ ಕಾವಲು ಕಾಯುವ, ನಮ್ಮನ್ನು ರಕ್ಷಣೆ ಮಾಡುವ,ನಮ್ಮ ಕುಲವನ್ನು ಉದ್ದಾರ ಮಾಡುವ ಈ ಭಾಗವತಕ್ಕೆ ಎಣೆಯುಂಟೆ??..


ಗಂಗಾ ಸ್ನಾನ ಸಂಕಲ್ಪ ಪೂರ್ವಕವಾಗಿ ಮಾಡಿದರೆ ಮಾತ್ರ ಫಲ.

ಅದಕ್ಕೆ ಮೋಕ್ಷ ನೀಡಲು ಸಾಧ್ಯವಿಲ್ಲ..

ಆದರೆ ಭಾಗವತ ಹಾಗಲ್ಲ ನಮಗೆ ಮೋಕ್ಷವನ್ನು ಸಹ ಕೊಡುತ್ತದೆ..

ಶ್ರೀ ಮದ್ ಭಾಗವತ ವನ್ನು ರಚಿಸಿದವರು ಶ್ರೀ ವೇದವ್ಯಾಸರು.
ರಚನೆಯನ್ನು ಮಾಡಿದ ಸ್ಥಳ ಶಮ್ಯಾಪ್ರಾಸ.
(ಸರಸ್ವತಿ  ಮತ್ತು ಅಲಕನಂದಾ(ಗಂಗಾದೇವಿ ಇನ್ನೊಂದು ಹೆಸರು) ನದೀ ಸಂಗಮದ ಸ್ಥಳ.)
ಇದನ್ನು ಶ್ರೀವೇದವ್ಯಾಸ ರಿಂದ ಕೇಳಿದವರು ಗಂಗಾಧರ ನಾದ ಶ್ರೀಶುಕ ಮುನಿಗಳು...
ಅವರು ಉಪದೇಶ ಮಾಡಿದ್ದು ಪರೀಕ್ಷಿತ ರಾಜನಿಗೆ ಗಂಗಾನದಿಯ ತಟದಲ್ಲಿ.
ಹಾಗಾಗಿ ಪರಮ ಪವಿತ್ರ ವಾದುದು ಈ ಭಾಗವತ ಪುರಾಣ..
ಇದನ್ನು ಯಾರು ಹೇಳುವರೊ, ಮತ್ತು 
ಯಾರು ಕೇಳುವರೊ,
ಮತ್ತು 
ಯಾರು ಹೇಳಿಸುವರೊ, ಈ ಮೂವರನ್ನು ಪಾವನಗೊಳಿಸಿ ಉದ್ದಾರ ಮಾಡುತ್ತದೆ.
ಇಂತಹ ಪರಮ ಮಂಗಳಕರವಾದ ಭಾಗವತ ವನ್ನು ವಿಶೇಷವಾಗಿ ಪಾರಾಯಣ , ಮತ್ತು ಶ್ರವಣವನ್ನು ಮಾಡೋಣ.
ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನ ಪಡೋಣ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ|
🙇‍♂🙇‍♂🙏🙏
🙏ಅ.ವಿಜಯವಿಠ್ಠಲ🙏
ಪಿಬತ ಭಾಗವತಂ ರಸಮಾಲಯಂ||


Day5
🙏
 ಶ್ರೀ ಕೃಷ್ಣ ಪರಮಾತ್ಮ ಪರಂಧಾಮಕ್ಕೆ ಹೋದ ಮೇಲೆ 30 ವರ್ಷಗಳ ಕಾಲದ ಮೇಲೆ ಪರೀಕ್ಷಿತ ಮಹಾರಾಜ  ಶುಕ ಮಹರ್ಷಿಗಳಿಂದಈ ಭಾಗವತ ಶ್ರವಣವನ್ನುಮಾಡಿರುವದು.
ಪರೀಕ್ಷೀತ ಮಹಾರಾಜ ಪಾಂಡವರ ಮೊಮ್ಮಗ.ಅಭಿಮನ್ಯು ಮತ್ತು ಉತ್ತರಾದೇವಿಯ ಪುತ್ರ.
ಇವನ ಆಳ್ವಿಕೆ ಕಾಲದಲ್ಲಿ ಕಲಿ ಪ್ರವೇಶ ಆಗಿರಲಿಲ್ಲ.
ಗರ್ಭದಲ್ಲಿ ಇದ್ದಾಗಲೇ ಭಗವಂತನನ್ನು ಕಂಡ ಪುಣ್ಯಾತ್ಮ.
ಇಂತಹ ರಾಜ ಏಕೆ ಅಧರ್ಮಕಾರ್ಯವನ್ನು ಮಾಡಿದ??
ಏಕೆಂದರೆ ಒಂದು ತಪ್ಪು ಮಾಡಿದ್ದ.
ಒಂದು ಸಾರಿ ಅವನು ಬೇಟೆ ಆಡಲು ಕಾಡಿಗೆ ಹೋಗಿದ್ದಾಗ ಬಾಯಾರಿಕೆ ಆಗಿ ಒಂದು ಆಶ್ರಮಕ್ಕೆ ಹೋಗಿದ್ದಾನೆ.ಅದು ಶಮೀಕ ಋಷಿಗಳ ಆಶ್ರಮ. ಕುಡಿಯಲು ನೀರನ್ನು ಕೇಳಿದ. ಅವರು ಕೊಡಲಿಲ್ಲ. ಅವರು ಧ್ಯಾನಮಗ್ನರಾಗಿ ಕುಳಿತಿದ್ದರು..
ನಾನು ನೀರು ಕೇಳಿದರು ಋಷಿಗಳು ಕೊಡಲಿಲ್ಲ ಎಂದು ಕೋಪದಿಂದ ಅಲ್ಲಿ  ಸತ್ತು ಬಿದ್ದಿದ್ದ ಒಂದು ಹಾವನ್ನು ತೆಗೆದು ಅವರ ಕೊರಳಿಗೆ ಹಾಕಿ  ಹೋಗಿ ಬಿಟ್ಟ.ಶಮೀಕ ಮಹರ್ಷಿಗಳು ಧರ್ಮದ ಪ್ರತೀಕ.ಅವರು ಭಗವಂತನ ಧ್ಯಾನಾವಸ್ಥೆಯಲ್ಲಿ ಇದ್ದ ಕಾರಣ ಅವನಿಗೆ ನೀರು ಕೊಡಲಿಲ್ಲ. ರಾಜನು ಇನ್ನೊಂದು ಬಾರಿ ಕೇಳಲಿಲ್ಲ.
ರಾಜನಾದ ತನಗೆ ಕುಡಿಯಲು ನೀರನ್ನು ಶಮೀಕ ಋಷಿಗಳು ಕೊಡಲಿಲ್ಲ ಎನ್ನುವ ಕೋಪದಿಂದ ಸತ್ತ ಹಾವನ್ನು ಅವರ ಕೊರಳಿಗೆ ಹಾಕಿ ಹೋಗುತ್ತಾನೆ.
(ಅಂದು ಬೇಟೆಯಾಡಲು ಪರೀಕ್ಷೀತ ಮಹಾರಾಜ ಹೊರಟಾಗ ತನ್ನ ಅಲಂಕಾರ ಗೃಹದಲ್ಲಿ ಇದ್ದ ಜರಾಸಂಧನ ಕಿರೀಟವನ್ನು ಧರಿಸಿ ಬೇಟೆ ಗಾಗಿ ಹೊರಟಿದ್ದ.}
{ದುಷ್ಟ ನಾದ ಜರಾಸಂದನ ಕಿರೀಟ ಧರಿಸಿದ ಕಾರಣದಿಂದಾಗಿ ಒಂದು ಕ್ಷಣ ವಿಪ್ರರ ಮೇಲೆ ದ್ವೇಷ, ಸಿಟ್ಟು ಬಂದು ಮಾಡಬಾರದ ಕೆಲಸ ಮಾಡಿ ಮುಂದೆ ಅದು ಅವನ ಅವನತಿಗೆ ಕಾರಣವಾಯಿತು.}
ದುಷ್ಟ ಜನರ ವಸ್ತುಗಳ ಬಳಕೆ ನಮ್ಮ ಅವನತಿಗೆ ಕಾರಣವಾಗುತ್ತದೆ ಅಂದರೆ ಇನ್ನೂ ಅವರ ಸಂಗ..
ಯೋಚಿಸಲು ಸಾಧ್ಯವಿಲ್ಲ.
ಹಾಗಾಗಾದಿರಲಿ ನಮ್ಮ ಬದುಕು...
 ರಾಜನು ಹೊರಟು ಹೋದ ಮೇಲೆ ಅವರ ಮಗನಾದ ಶೃಂಗಿ ಅಲ್ಲಿಗೆ ಬಂದ.ಬಾಲ್ಯದಲ್ಲಿ ಗಾಯತ್ರಿ ಮಂತ್ರ ಸಿದ್ಧಿಯನ್ನು ಪಡೆದ ಋಷಿ ಪುತ್ರ.
ತನ್ನ ತಂದೆಯ ಕೊರಳ ಮೇಲೆ ಸತ್ತ ಹಾವು ಹಾಕಿರುವದನ್ನು ಕಂಡು ಕೋಪದಿಂದ ಶಪಿಸಿದ.
"ಯಾವ ಸತ್ತ ಹಾವನ್ನು ನನ್ನ ತಂದೆಗೆ ಹಾಕಿದವನು ಯಾರೇ ಆಗಿರಲಿ. ಏಳುದಿನದ ನಂತರ ಅದೇ ಹಾವಿನ ರಾಜನಾದ ತಕ್ಷಕ ನಿಂದಲೇ ಸಾಯಲಿ" ಅಂತ.. .
ಋಷಿ ಮುನಿಗಳಂತಹ  ಹರಿಯ ಭಕ್ತರಿಗೆ ,ಜ್ಞಾನಿ ಶ್ರೇಷ್ಠ ರಿಗೆ ಮಾಡುವ ಅವಮಾನ ನಮ್ಮ ಮರಣಕ್ಕೆ ಕಾರಣ ಅಂತ ಇಲ್ಲಿ ತೋರಿಸಿಕೊಡುತ್ತದೆ.
ತನ್ನ ತಪ್ಪನ್ನು ತಿಳಿದುಕೊಂಡ ರಾಜನು ತಾನು ಪ್ರಾಣಾಹುತಿ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾನೆ.ಶೃಂಗಿಯ ಶಾಪದ ವಿಚಾರದ ವಿಷಯವನ್ನು ಪರಿಕ್ಷೀತ ಮಹಾರಾಜ ತಿಳಿದು  ಪಶ್ಚಾತಾಪ ಪಟ್ಟು!! 
ನಾನು ಪಾಂಡವರ ಮೊಮ್ಮಗನಾಗಿ ಚಕ್ರವರ್ತಿ ಆಗಿ ಮಾಡಿದ ಕಾರ್ಯವೇನು??
ನಮ್ಮ ಹಿರಿಯರು ಅರಣ್ಯ ವಾಸದಲ್ಲಿ ಇದ್ದರು ಸಹ ನಿತ್ಯ ಸಾವಿರಾರು ಋಷಿ ಗಳಿಗೆ ಪ್ರತಿದಿನ ಭಿಕ್ಷೆ ನೀಡುತ್ತಾ ಇದ್ದರು.
ಧ್ಯಾನ ಮಗ್ನರಾದ ಋಷಿಗಳ ಕೊರಳಿಗೆ ಹಾವನ್ನು ಹಾಕಿ ಎಂತಹ ತಪ್ಪು ಮಾಡಿದೆ??.ಒಂದು ವೇಳೆ ಅವರು ಧ್ಯಾನ ಮಗ್ನರಾಗಿಲ್ಲ ದಿದ್ದರೆ ಹೌಹಾರಿ ಬಿಡುತ್ತಾ ಇದ್ದರು..
ಅದಕ್ಕೆ ಸರಿಯಾದ ಶಿಕ್ಷೆ ಆಗಿದೆ ಅಂತ ಯೋಚಿಸಿ ರಾಜ್ಯವನ್ನು ತನ್ನ ಮಗನಾದ ಜನಮೇಜರಾಯನಿಗೆ ಒಪ್ಪಿಸಿ  ಗಂಗಾ ನದೀ ತೀರದಲ್ಲಿ ಪ್ರಾಯೋಪವೇಶಕ್ಕೆ ಕುಳಿತ...
ಅವನ ಬಳಿಗೆ ಸಕಲ ಋಷಿ ಸಮೂಹವೇ ಬಂದಿತು..
ತನ್ನ ಜೀವನದ ಉದ್ದಕ್ಕೂ ಋಷಿ ಮುನಿಗಳನ್ನು ಯಜ್ಞ ಗಳಿಂದ ಆಧರಿಸಿದ್ದ. ಹಾಗಾಗಿ ಅಂತ್ಯ ಕಾಲಕ್ಕೆ ಅವರ ಸಮಾಗಮವಾಯಿತು ಅವನಿಗೆ...
"ಬದುಕಿರುವವರೆಗು ಎಂತಹ ಧರ್ಮ ಕಾರ್ಯಗಳನ್ನು ಮಾಡುವೆವೋ ಅಂತ್ಯಕಾಲದಲ್ಲಿ ಅದೇ ನಮಗೆ ಕಾಪಾಡುವುದು ಅನ್ನುವದು ಇಲ್ಲಿ ತೋರಿಸುತ್ತದೆ."
ಹೀಗೆ ಶ್ರೀ ಮದ್ ಭಾಗವತ ಧರ್ಮದ ಸೂಕ್ಷ್ಮ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಅದೇ ಸಮಯದಲ್ಲಿ ಸದಾ ಸರ್ಪಭೂಷಣನಾದ ರುದ್ರಾಂಶ ಸಂಭೂತರಾದ ಶ್ರೀಶುಕ ಮುನಿಗಳು ಶ್ರೀ ವೇದವ್ಯಾಸ ದೇವರ ಅಪ್ಪಣೆಯಂತೆ ಅಲ್ಲಿಗೆ ಬಂದು ಭಾಗವತ ವನ್ನು ಉಪದೇಶಿಸಿದರು.
ಎಂತಹ ವಿಚಿತ್ರ.!!
ಹಾವಿನಿಂದಲೇ ಮರಣ ಅಂತಹ ಶಾಪ ರಾಜನಿಗೆ.
ಅದೇ ನಾಗಾಭರಣ ನಾದ ರುದ್ರಾಂಶ ಸಂಭೂತರಾದ ಶ್ರೀಶುಕ ಮುನಿಗಳಿಂದ ಭಗವಂತನ ಮಹಿಮೆ ತಿಳಿಯುವ ಭಾಗ್ಯ..
ನೋಡಿ ಇಲ್ಲಿ ಶಾಪ ಪರಿಕ್ಷೀತ ಮಹಾರಾಜನಿಗೆ ವರವಾಯಿತು...
ಶ್ರೀ ಮದ್ಭಾಗವತವನ್ನು ಕೇಳಿ ಅಲ್ಪಾಯುವಾದ ರಾಜ ಅನಾಯಾಸವಾದ ಮರಣವನ್ನು ಪಡೆದ.
ತಕ್ಷಕ ಕಚ್ಚಿದ್ದು ಗೊತ್ತಿಲ್ಲ ಅವನಿಗೆ.ಶುಕ ಮುನಿಗಳಿಗೆ ನಮಸ್ಕಾರ ಮಾಡಿ ಅವರನ್ನು ಕೊಟ್ಟು ಕಳುಹಿಸಿದ್ದು ಮಾತ್ರ ನೆನಪು.
ಆಮೇಲೆ ಎಚ್ಚರಿಕೆಆಗಿದ್ದು  ಪರಮಾತ್ಮನ ಪಾದ ಮೂಲ ವನ್ನು ಸೇರಿದಾಗ.
ಇದು ಶ್ರೀ ಮದ್ಭಾಗವತ ಶ್ರವಣದಿಂದ ಬಂದ ಫಲ.
ಇಂತಹ  ಶ್ರೀ ಮದ್ಭಾಗವತವನ್ನು ನಿತ್ಯ ವು ಕೇಳಬೇಕು.
ಈ ಶ್ರೀ ಮದ್ಭಾಗವತವನ್ನು ಪ್ರತಿದಿನ ಎಷ್ಟು ಆದರೆ ಅಷ್ಟು..ಒಂದು ಶ್ಲೋಕ ವಾದರೆ ಒಂದು ಶ್ಲೋಕ. 
ಅರ್ಧ ಆದರೆ ಅರ್ಧ..
ಕೊನೆಗೆ ಒಂದು ಪಾದವಾದರೆ ಒಂದು ಪಾದ ನಿತ್ಯ ಭಾಗವತವನ್ನು ಪಾರಾಯಣ ಮಾಡಬೇಕು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ|

🙏ಅ.ವಿಜಯವಿಠ್ಠಲ🙏

ಪಿಬತ ಭಾಗವತಂ ರಸಮಾಲಯಂ||
day 6
✍ಒಂದು ಸಲ ಶ್ರೀನಾರದ ಮಹರ್ಷಿಗಳು ಸಂಚಾರ ಮಾಡುತ್ತಾ ಭೂಲೋಕಕ್ಕೆ ಬರುತ್ತಾರೆ. ಅನೇಕ ಪುಣ್ಯ ಕ್ಷೇತ್ರದ ದರುಶನ ಮಾಡಿ ಎಲ್ಲಾ ಕಡೆ ಕಲಿಯ ಪ್ರಭಾವ ಇರುವುದು ಅವರಿಗೆ ಕಾಣುತ್ತದೆ.
ಎಲ್ಲಾ ಕಡೆ ಸತ್ಯ, ಶೌಚ,ದಯೆ ಯಾವುದು ಇಲ್ಲ. ಜನರು ತಮ್ಮ ಉದರ ಪೋಷಣೆಗೆ ಸುಳ್ಳು ಮೋಸದ ಹಾದಿಯನ್ನು ಹಿಡಿದು ದುಷ್ಟ ಕಾರ್ಯಗಳನ್ನು ಮಾಡುವ ದೃಶ್ಯಗಳನ್ನು ಎಲ್ಲಾ ಕಡೆ ನೋಡಿ ಬಹಳ ವ್ಯಥೆ ಪಡುತ್ತಾರೆ.
ಇನ್ನೂ ಕಲಿಯುಗ ಆರಂಭವಾಗಿ 260 ವರ್ಷಕ್ಕೆ ಕಲಿಯ ಪ್ರಾಬಲ್ಯವನ್ನು ನೋಡಿ ಬೇಸರವಾಗುತ್ತದೆ.
ಕಲಿಯುಗ ಒಟ್ಟು 4,,32,000ವರ್ಷ.
ನಂತರ ಸಂಚಾರ ಮಾಡುತ್ತಾ ಶ್ರೀ ಕೃಷ್ಣ ಪರಮಾತ್ಮ ತಿರುಗಾಡಿದ ಭೂಮಿ ಯಾದ ಬೃಂದಾವನ ಕ್ಕೆ ಬರುತ್ತಾರೆ.
ಅಲ್ಲಿ ಒಬ್ಬ ತರುಣಿ ಅಳುತ್ತಿದ್ದಳು.
ಅವಳ ಎದುರುಗಡೆ ಇಬ್ಬರು ವೃದ್ದರು ದೀರ್ಘಶ್ವಾಸವನ್ನು ಬಿಡುತ್ತಾ ಮಲಗಿದ್ದರು.
ಆ ಯುವತಿಯು ಅವರನ್ನು ಶುಶ್ರೂಷಾ ಮಾಡಿ ಎಬ್ಬಿಸುವ ಪ್ರಯತ್ನ ಮಾಡುತ್ತಾ ಇದ್ದಳು.ಆದರೆ ಅವರುಏಳಲಿಲ್ಲ.ಅವಾಗ ಆ ಸ್ತ್ರೀಯು ನಾರದರ ಬಳಿ ಬಂದು 
ಮಹರ್ಷಿಗಳೆ!! ಒಂದು ಕ್ಷಣ ನಿಲ್ಲಿರಿ.ನನ್ನ ದುಃಖ ವನ್ನು ಶಾಂತಮಾಡಿರಿ ಅಂತ ಕೇಳುತ್ತಾಳೆ.
ಅದನ್ನು ಕೇಳಿ ಶ್ರೀನಾರದರು ಯಾರು ನೀನು? ಇಲ್ಲಿ ಮಲಗಿದ್ದವರು ಯಾರು?ಎಂದು ಕೇಳಿದಾಗ
ಅವಾಗ ಆ ಸ್ತ್ರೀಯು ನನ್ನ ಹೆಸರು ಭಕ್ತಿ ಅಂತ.ಇವರು ನನ್ನ ಮಕ್ಕಳು, ಜ್ಞಾನ, ವೈರಾಗ್ಯ ಅಂತ ಅವರಿಬ್ಬರ ಹೆಸರು..ದ್ರಾವಿಡ ದೇಶ ದಲ್ಲಿ ಹುಟ್ಟಿದ ನಾನು ಕರ್ನಾಟಕದಲ್ಲಿ ಬೆಳೆದೆ.ಸ್ವಲ್ಪ ಮಹಾರಾಷ್ಟ್ರ ದಲ್ಲಿ ಬೆಳೆದೆ.ನಂತರ ಗುಜ್ಜರ್ ದೇಶ ಹೋದಾಗಮುದುಕಿಯಾದೆ.ಕಾಲಯೋಗದಿಂದ ನನ್ನ ಮಕ್ಕಳು ಜೀರ್ಣರಾಗಿರುವರು.ನಾನು ಸಹ ಕಲಿಯ ಪ್ರಭಾವದಿಂದಾಗಿ ಮುದುಕಿಯಾದೆ.ಆದರೆಈಬೃಂದಾವನ ಯಮುನಾ ತೀರಕ್ಕೆ ಬಂದ ತಕ್ಷಣ ಯುವತಿ ಆದೆ.ನನ್ನ ಮಕ್ಕಳು ಮಾತ್ರ ಮುದುಕರಾಗಿಯೇಇರುವರು.ಲೋಕದಲ್ಲಿ ತಾಯಿಯು ಮುದುಕಿಯಾಗಿ ಮಕ್ಕಳು ಯೌವ್ವನಭರಿತ ರಾಗಿ ಇರುವದು ನೀತಿ.ಇಲ್ಲಿ ಅದು ವಿರುದ್ಧ ವಾಗಿದೆ. ಇದರಿಂದ ಬಹುದುಃಖಿತಳಾಗಿದ್ದೇನೆ.ದಯವಿಟ್ಟು ನನ್ನ ಮಕ್ಕಳ ವೃದ್ದರಾಗಿರುವದನ್ನು ಹೋಗಲಾಡಿಸಿ ಮತ್ತು ಇದಕ್ಕೆ ಪರಿಹಾರವನ್ನು ಸೂಚಿಸಿ ಅಂತ ಕೇಳಿಕೊಳ್ಳುವಳು.
ಅದಕ್ಕೆ ನಾರದರು 
"ಇದು ಭಯಂಕರವಾದ ಕಲಿಯುಗ.ಸತ್ಯ ,ತಪಸ್ಸು,ಶೌಚ,ದಯೆ,ದಾನ ಎಲ್ಲಾ ಕಲಿಯ ಪ್ರಾಬಲ್ಯ ದಿಂದ ನಷ್ಟ ವಾಗಿದೆ.ಹಾಗಾಗಿ ನಿಮಗೆ ಈ ಮುದಿತನ ಬಂದಿದೆ".ಮತ್ತು 
"ಈ ಬೃಂದಾವನ ಬಂದ ಕಾರಣ ನಿನಗೆ ತಾರುಣ್ಯಬಂದಿತು" ಅಂತ ಹೇಳುತ್ತಾರೆ
ಅದಕ್ಕೆ ಭಕ್ತಿ ಎಂಬ ಹೆಸರಿನ
ತರುಣಿಯು 
ನನ್ನ ಮಕ್ಕಳನ್ನು ಎಬ್ಬಿಸಿ ಅಂತ ಕೇಳಿದಾಗ
ಶ್ರೀನಾರದರು ಜ್ಞಾನ, ವೈರಾಗ್ಯ, ಅಂತ ಕೂಗಿದರು.ವೇದ,ವೇದಾಂತ ಗೀತೆಗಳ ಪಾರಾಯಣ ಮಾಡಿದರು.ಆಗ ಅವರಿಬ್ಬರು ಬಹಳ ಕಷ್ಟ ಪಟ್ಟು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗಿ ಮಲಗಿದರು.ಏಳಲು ಸಾಧ್ಯ ವಾಗಲಿಲ್ಲ...
ಈ ವಿಚಿತ್ರ ವನ್ನು ಕಂಡು ಶ್ರೀನಾರದರು ಆಶ್ಚರ್ಯಕರವಾಗಿ ಭಗವಂತನ ಧ್ಯಾನ ಮಾಡಲುಅವಾಗ್ಗೆ ಅಶರೀರವಾಣಿಯಾಗಿ
ನಿನ್ನ ಈ ಪ್ರಯತ್ನ ಸಫಲವಾಗುವದು.ಅದಕ್ಕೆ ಒಂದು ಸತ್ಕರ್ಮವನ್ನ ಮಾಡು ಅಂತ  ಅವರಿಗೆ ಅಜ್ಞಾಪಿಸಲು,
 ಸತ್ಕರ್ಮ ಅಂದರೆ ಏನು ಮಾಡಬೇಕು?? ಅಂತ ಯೋಚಿಸಿ ಬದರಿಕಾಶ್ರಮಕ್ಕೆ ಹೋಗಲು ಅಲ್ಲಿ ಸನಕಾದಿ ಮುನಿಗಳನ್ನು ನೋಡುತ್ತಾರೆ. ಅವರು ಸಹ ಬ್ರಹ್ಮದೇವರ ಮಕ್ಕಳು. ಅವರಿಗೆ ನಮಸ್ಕರಿಸಿ ನಡೆದ ವಿಷಯ ಎಲ್ಲಾ ತಿಳಿಸಿದಾಗ, ಅದಕ್ಕೆ ಮುನಿಗಳು ಚಿಂತಿಸುವದು ಬೇಡ.ಅವರಿಗೆ ಮೊದಲಿನ ರೂಪ ತಾರುಣ್ಯ ಬರುತ್ತದೆ.ಶ್ರೀ ಮದ್ಭಾಗವತ ಸಪ್ತಾಹ ಮಾಡಿಸಿದರೆ ಅವರಿಗೆ ಅಭಿವೃದ್ಧಿ ಆಗುವದು ಅಂತ ಹೇಳುತ್ತಾರೆ..
ಸತ್ಕರ್ಮ ಅಂದರೆ ಜ್ಞಾನ ಯಜ್ಞ.ಶ್ರೀಶುಕ ಮಹರ್ಷಿಗಳು ಪಾನ ಮಾಡಿರುವ ಭಗವಂತನ ಚರಿತ್ರೆ ಗುಣವನ್ನು ಸಾರುವ ಶ್ರೀ ಮದ್ಭಾಗವತ ಪ್ರವಚನ ಮಾಡಬೇಕು..ಶ್ರೀ ಮದ್ ಭಾಗವತದಲ್ಲಿ ವೇದ,ಉಪನಿಷತ್ತು, ಮಹಾಭಾರತ ಎಲ್ಲಾದರ ಸಾರ,ಬ್ರಹ್ಮ ಸೂತ್ರದ ಸಮಗ್ರ ಅರ್ಥ ಅದರಲ್ಲಿ ಅಡಗಿದೆ...
ಇದು ವಿಶೇಷ ವಾದ ಹಣ್ಣಿನಿಂದ ಸಿದ್ದ ಪಡಿಸಿದ ರಸಾಯನ. ಆದ್ದರಿಂದ ಇದನ್ನು ಪಾನ ಮಾಡಿರಿ.. ಅಂತ ಹೇಳಿ ತಾವು ಶ್ರೀನಾರದರ ಜೊತೆಯಲ್ಲಿ ಗಂಗಾನದಿಯ ತಟದಲ್ಲಿ ಬಂದು 
ಯಾರಿಗೆ ಆಸಕ್ತಿ ಇದೆ ಅವರೆಲ್ಲರೂ ಇಂತಹ ಕಡೆ ಬರಬೇಕು ಅಂತ ಘೋಷಿಸಿದರು.
ಭೂಲೋಕ,ದೇವಲೋಕ,ಸತ್ಯಲೋಕ,ದಲ್ಲಿ ಇರುವಎಲ್ಲಾ,ವಿಷ್ಣು ಭಕ್ತರು,ಸಕಲ. ಋಷಿಗಳು,ಮುಖ್ಯವಾಗಿ
ಭೃಗು, ವಸಿಷ್ಠ, ಚ್ಯವನರು,ಮೇಧಾ,ದೇವಲ,ಪರುಶುರಾಮ,ವಿಶ್ವಾಮಿತ್ರ, ಮಾರ್ಕಂಡೇಯ ಅತ್ರಿ,ಪಿಪ್ಪಲರು ಅಲ್ಲದೇ ಅನೇಕ ಋಷಿಗಳು ಮತ್ತು ಶ್ರೀ ವೇದವ್ಯಾಸರು ಸಹ ತಮ್ಮ ಪರಿವಾರ ಸಮೇತವಾಗಿ ಬಂದಿದ್ದರು.
ಇವಾಗ ನಾವು ಸಹ ಮನೆಯಲ್ಲಿ ಅಥವಾ ಬೇರೆ ಕಡೆ ಶ್ರೀ ಮದ್ ಭಾಗವತವನ್ನು ಪ್ರವಚನ ಮಾಡಿದಾಗ ಇವರೆಲ್ಲರೂ ಬಂದಿರುತ್ತಾರೆ. 
ನಮ್ಮ ಕಣ್ಣಿಗೆ ಕಾಣುವದಿಲ್ಲ.ಅವರ ಕಣ್ಣಿಗೆ ನಾವು ಕಾಣುತ್ತೇವೆ.
ಶ್ರೀ ಮದ್ ಭಾಗವತ ಹೇಳುವ ಸಮಯದಲ್ಲಿ ಒಂದು ಮಣೆಯನ್ನು ಹಾಕಿರುತ್ತಾರೆ.ಅಲ್ಲಿ ಶ್ರೀಮುಖ್ಯ ಪ್ರಾಣದೇವರು ಬಂದು ಕುಳಿತು ಭಾಗವತವನ್ನು ಕೇಳುವರು ಅಂತ ನಂಬಿಕೆ.
ಮುಖ್ಯ ಪ್ರಾಣ ದೇವರು ಇದ್ದ ಕಡೆ ದುಷ್ಟ ಶಕ್ತಿಗಳ ಆಟ ಎಲ್ಲಿ??
 ಅವರವರ ಪರಿವಾರ ದೊಡನೆ ಅವರೆಲ್ಲರೂ ಬಂದಿದ್ದರು.
ಶ್ರೀ ಮದ್ ಭಾಗವತ ಪ್ರವಚನ ನಡೆದಿದ್ದು ಹರಿದ್ವಾರ ಕ್ಷೇತ್ರದಲ್ಲಿ...
ಏತಕ್ಕೆ ಎಂದರೆ,ಯಮುನಾ ತೀರದ ಬೃಂದಾವನ ಕ್ಷೇತ್ರದಲ್ಲಿ ಭಕ್ತಿ ಎಂಬುವ ತರುಣಿ,ಜ್ಞಾನ ಮತ್ತು ವೈರಾಗ್ಯ ಎನ್ನುವ ತನ್ನ ಇಬ್ಬರು ಮಕ್ಕಳು ಮುದುಕರಾಗಿ ಬಿದ್ದಿದ್ದರು..ಅವರಿಗೆ ಚೈತನ್ಯ ಬರಲಿ ಅಂತ ಶ್ರೀ ಮದ್ಭಾಗವತ ವನ್ನು ಹರಿದ್ವಾರದಲ್ಲಿ ಸಪ್ತಾಹಮಾಡಿ ಅದರಮಹಿಮೆಯನ್ನು ತಿಳಿಸುತ್ತಾರೆ.
ಇತ್ತ ಯಮುನಾ ನದಿ ತಟದಲ್ಲಿ ಮಲಗಿದ್ದ ಜ್ಞಾನ, ಮತ್ತು ವೈರಾಗ್ಯ ಇವರಿಬ್ಬರಿಗೂ ಎಚ್ಚರಿಕೆ ಆಗಿದೆ.
ನವ ಚೈತನ್ಯ ಬಂದಿದೆ.ಆಮೇಲೆ ಆ ಮೂರು ಜನರು ತಾರುಣ್ಯವನ್ನು ಹೊಂದಿ ಶ್ರೀ ಕೃಷ್ಣ, ಮುರಾರಿ ಗೋವಿಂದ,ನಾರಾಯಣ,ಮಧುಸೂಧನ ಅಂತ ಭಜನೆ ಮಾಡುತ್ತಾ ನರ್ತನ ಮಾಡುತ್ತಾ, ಕುಣಿಯುತ್ತಾ ಕುಣಿಯುತ್ತಾ ಗಂಗಾತೀರಕ್ಕೆ ಬರುತ್ತಾರೆ....ಬಂದು ಅಲ್ಲಿ ಇದ್ದ ಎಲ್ಲಾರಿಗು ನಮಸ್ಕಾರಮಾಡುತ್ತಾರೆ.ಎಲ್ರಿಗು ಆಶ್ಚರ್ಯಕರ. ಮತ್ತು ಆನಂದವಾಗಿದೆ.
ಶ್ರೀ ಮದ್ಭಾಗವತ ಸಪ್ತಾಹ ಮುಗಿದ ಮೇಲೆ 
*ಭಕ್ತಿ ಅನ್ನುವ ತರುಣಿ  ಕೇಳುತ್ತಾಳೆ.
"ನಾನು ಎಲ್ಲಿ ವಾಸ ಮಾಡಬೇಕು?ಅಂತ.
ಅದಕ್ಕೆ ಅಲ್ಲಿ ನೆರೆದ ಮಹರ್ಷಿಗಳು ಹೇಳುತ್ತಾರೆ.
"ನೀನು ಯಾರು ಯಾರು ವಿಷ್ಣು ಭಕ್ತರು ಇದ್ದಾರೋ ಅವರ ಮನಸ್ಸಿನ ಒಳಗೆ ಶಾಶ್ವತವಾಗಿ ನೆಲೆಸು" ಎಂದು ಹೇಳುತ್ತಾರೆ.
ಈ ರೀತಿ ಅಶಕ್ತತೆ ಇಂದ ಮಲಗಿದ್ದವರನ್ನು ಸಹ ಭಾಗವತ ಎಬ್ಬಿಸಿ ಅವರಿಗೆ ಶಕ್ತಿಯನ್ನು ಕೊಟ್ಟಂತಹುದು ಇದು..ಇದನ್ನು ಶ್ರವಣ ಪಾರಾಯಣ ಮಾಡಿದರೆ ನಮಗೆ ಸಹ ಉತ್ತಮ ವಾದ ಚೈತನ್ಯ, ಉಂಟಾಗುತ್ತದೆ. ಜ್ಞಾನ ಭಕ್ತಿ, ವೈರಾಗ್ಯ ಬರುತ್ತದೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏


||ಪಿಬತ ಭಾಗವತಂ ರಸಮಾಲಯಂ||day 7
  ✍ಪರೀಕ್ಷಿತ ಮಹಾರಾಜ ಮಗನಿಗೆ ರಾಜ್ಯ ಒಪ್ಪಿಸಿ ಮಂತ್ರಿ ಗಳನ್ನು ಕರೆದು ಸರಿಯಾಗಿ ನೋಡಿಕೊಳ್ಳಲು ಹೇಳಿ ತನ್ನ ರಾಜ್ಯ,ಕೋಶ,ಹೆಂಡತಿ,ಮಕ್ಕಳು, ಪ್ರಜೆಗಳು,ಎಲ್ಲಾ ರನ್ನು ಹಾಗು ಅವರ ಮೇಲಿನ ಅಭಿಮಾನ ತ್ಯಾಗ ಮಾಡಿಗಂಗಾ ತೀರಕ್ಕೆ ಬಂದಿದ್ದಾನೆ.ಪರೀಕ್ಷಿತ ರಾಜ ಅಲ್ಲಿ ಬರುವ ಕಾರಣವೇನೆಂದರೆ 
ಮರಣ ಆಗುವ ವಾದರೆ ಗಂಗಾತೀರದಲ್ಲಿ ಆಗಬೇಕು ಇದಕ್ಕಿಂತ ಪ್ರಾಶಸ್ತ್ಯ ಸ್ಥಳ ಬೇರೆ ಇಲ್ಲ.ಗಂಗಾ ನದಿ ಅಂದರೆ ಪರಮಾತ್ಮನ ಪಾದವನ್ನು ತೊಳೆದ ನೀರು.
ತುಳಸಿ ಸಹಿತವಾಗಿ ಹರಿದುಕೊಂಡು ಬರುವಂತಹ ಪಾದೋದಕವೇ ಗಂಗಾನದಿ.
ಯಾಕೆ ಗಂಗಾನದಿಗೆ ಇಷ್ಟು ಮಹತ್ವ ಅಂದರೆ
ಭಗವಂತ ವಾಮನ ರೂಪಿ ಯಾಗಿ ಅವತಾರ ತಾಳಿ ಬಲಿ ಚಕ್ರವರ್ತಿ ಮಾಡುವ ಯಾಗಕ್ಕೆ ಹೋಗಿದ್ದಾನೆ.ಅವನ ಬಳಿ ಮೂರು ಪಾದ ದಷ್ಟು ಭೂಮಿಯನ್ನು ಬೇಡಿ ತ್ರಿವಿಕ್ರಮ ನಾಗಿ ಬೆಳೆದು ನಿಂತಿದ್ದಾನೆ.
ಅವಾಗ ತ್ರಿವಿಕ್ರಮ ರೂಪಿ ಪರಮಾತ್ಮನ ಅಂಗುಷ್ಟದ ನಖ ಬ್ರಹ್ಮಾಂಡದ ಕಟಾಹಕ್ಕೆ ತಗುಲಿತು.ಆ ಬ್ರಹ್ಮಾಂಡದ ಕಟಾಹ ದಪ್ಪ ಎಷ್ಟು ಇತ್ತು ಅಂದರೆ ನೂರು ಕೋಟಿ ಯೋಜನೆ ದಪ್ಪ ಇತ್ತು.ಅಂತಹ ಬ್ರಹ್ಮಾಂಡದ ಕಟಾಹ ದೊಳಗಿಂದ ನೀರು ಬಂದಿದ್ದು ನೋಡಿ ಬ್ರಹ್ಮ ದೇವರು ಅದನ್ನು ಕಮಂಡಲುವಿನಲ್ಲಿ ಹಿಡಿದು ತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದಿದ್ದಾರೆ.ಅದೇ ಗಂಗಾ ನದಿ.
ಆಮೇಲೆ ಗಂಗೆ ಸಾವಿರಾರು ವರ್ಷಗಳ ಕಾಲ ಸತ್ಯಲೋಕದಲ್ಲಿ ಇದ್ದು ನಂತರ ಶಿಂಶುಮಾರ ಲೋಕಕ್ಕೆ ಬರುತ್ತಾಳೆ.
ಅಲ್ಲಿ ಪರಮಾತ್ಮ ಚೇಳಿನ ಆಕಾರದಲ್ಲಿ ಇದ್ದಾನೆ.ಅಲ್ಲಿ ಚೇಳಿನ ಬಾಲದ ಕೊನೆಯಲ್ಲಿ ಇರುವ ಧ್ರುವಮಹಾರಾಜರು ಅದನ್ನು ತೆಗೆದುಕೊಂಡು ಪರಮಾತ್ಮನ ಪಾದೋದಕ, ತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದದ್ದು ಅಂತ ಹೇಳಿ ಭಕ್ತಿ ಇಂದ ಅದನ್ನು ಪ್ರೋಕ್ಷಣೆ ಮಾಡಿಕೊಳ್ಳುವರು.
ಆ ನಂತರ ಅಲ್ಲಿ ಇಂದ ಸಪ್ತರ್ಷಿಗಳ ಲೋಕಕ್ಕೆ ಗಂಗಾದೇವಿ ಬರುತ್ತಾಳೆ... ಅಲ್ಲಿ ಸಹ ಸಪ್ತರ್ಷಿಗಳು ಪ್ರೋಕ್ಷಣೆ ಮಾಡಿಕೊಂಡು ಧರಿಸಿದ್ದಾರೆ.ಆ ನಂತರ ಚಂದ್ರ ಮಂಡಲಕ್ಕೆ ಬಂದು ಆ ನಂತರ ಮೇರು ಪರ್ವತಕ್ಕೆ ಬರುತ್ತಾಳೆ...
ಅಲ್ಲಿ ನಾಲ್ಕು ದಿಕ್ಕಿನಲ್ಲಿ ಇಳಿಯುತ್ತಾಳೆ.
ಪೂರ್ವ ದಿಕ್ಕಿನಲ್ಲಿ ಸೀತಾ,ದಕ್ಷಿಣ ದಿಕ್ಕಿನಲ್ಲಿ ಅಲಕಾನಂದ,ಪಶ್ಚಿಮ ದಿಕ್ಕಿನಲ್ಲಿ ಚಕ್ಷು ಮತ್ತು ಉತ್ತರದಲ್ಲಿ ಭದ್ರ ಅಂತ ನಾಮದಿಂದ ಕರೆಸಿಕೊಂಡು ಹರಿದು ಹೋಗುತ್ತಾಳೆ.
ಅಲಕನಂದಾ ನದಿಯಾಗಿ ಹರಿದು ಗಂಧಮಾದನ ಪರ್ವತಕ್ಕೆ ಬಂದು ಅಲ್ಲಿಂದ ಮಾನಸ ಸರೋವರ ಕ್ಕೆಬರುತ್ತಾಳೆ.ಅಲ್ಲಿ ತುಂಬಿ ಹರಿದಾಗ ಸರಯೂ ನದಿ ಅಂತ ಕರೆಸಿಕೊಂಡು ಹಿಮಾಲಯ ಪರ್ವತಕ್ಕೆ ಬರುತ್ತಾಳೆ.ಅಲ್ಲಿ ಸಹ ಹರಿದಾಗ ಅವಳನ್ನು ಹಿಮವಂತನ ಪುತ್ರಿ ಅಂತ ಸಹ ಕರೆಯುತ್ತಾರೆ.ಆ ನಂತರ ದೇವತೆಗಳು ಬಂದು ನಮಗೆಲ್ಲ ಬೇಕು ನೀನು ಅಂತ ಹೇಳಿ ನಮ್ಮ ಲೋಕಕ್ಕೆ ಬಾ ಅಂತ ಕರೆದುಕೊಂಡು ಹೋಗುತ್ತಾರೆ.
ಆ ನಂತರ ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು .ಕಪಿಲ ರೂಪಿ ಪರಮಾತ್ಮನಿಗೆ ಅಪಹಾಸ್ಯ, ಮಾಡಿದ ಪರಿಣಾಮವಾಗಿ ಸುಟ್ಟು ಭಸ್ಮ ವಾಗಿದ್ದರು.
ಅವರಿಗೆ ಸದ್ಗತಿ  ಆಗಲು ಗಂಗೆ ಭೂಲೋಕಕ್ಕೆ ಹರಿದು ಬರಬೇಕು ಅದಕ್ಕೆ ಭಗೀರಥ ಮಹಾರಾಜ ತಪಸ್ಸು ಮಾಡಿ ಗಂಗಾದೇವಿ ಯನ್ನು ಭೂಲೋಕಕ್ಕೆ ಕರೆಸಿಕೊಂಡ.
ಜೇಷ್ಠ ಶುದ್ದ ದಶಮಿ ಮಂಗಳವಾರ ದಿನ ಹಸ್ತ ನಕ್ಷತ್ರ ದಲ್ಲಿ ಗಂಗಾದೇವಿಯು ಸ್ವರ್ಗದಿಂದ ಭೂಲೋಕಕ್ಕೆ ಇಳಿದು ಬಂದಳು.ಗಂಗೆಯು ಬರುವ ರಭಸವನ್ನು ನೋಡಿ ತನ್ನ ಜಟೆಯಲ್ಲಿ ಬಂಧಿಸಿ ದವರು ರುದ್ರ ದೇವರು..ನಂತರ  ಭಗೀರಥ ಅವರ ಬಳಿ ಪ್ರಾರ್ಥನೆ ಮಾಡಿದಾಗ ರುದ್ರ ದೇವರ ಜಟೆಇಂದ ಗಂಗಾದೇವಿ ಭೂಲೋಕಕ್ಕೆ ಬರುತ್ತಾಳೆ..ಬರುವಾಗ ಜಹ್ನು ಋಷಿಗಳ ಆಶ್ರಮ ವನ್ನು ಕೊಚ್ಚಿ ಕೊಂಡು ಹೋಗುವುದನ್ನು ಕಂಡು ಋಷಿಗಳು ಸಂಪೂರ್ಣ ಪಾನ ಮಾಡುತ್ತಾರೆ...
ಮತ್ತೆ ಭಗೀರಥ ಅವರನ್ನು ಒಲಿಸಿಕೊಂಡು ಅವರ ಕಿವಿಯಿಂದ ಗಂಗಾದೇವಿ ಹೊರಬರುತ್ತಾಳೆ.
ಹಾಗೆ ಬಂದ ಕಾರಣದಿಂದ ಭಾಗೀರಥಿ, ಜಾಹ್ನವಿ ಅಂತ ಹೆಸರು ಬಂತು.
ಸಮುದ್ರ ದ್ವಾರ ಪಾತಾಳ ಲೋಕವನ್ನು ಹೋಗಿ ಸಗರ ಮಹಾರಾಜನ ಮಕ್ಕಳಿಗೆ ಉದ್ದಾರ ಮಾಡಿದಳು.ಹೀಗೆ ಗಂಗೆಗೆ ತ್ರಿಪಥಗಾ ಅಂತ ಹೆಸರು ಬಂದಿತು.ದೇವಲೋಕದಿಂದಭೂಲೋಕಕ್ಕೆ,ಭೂಲೋಕದಿಂದ ಪಾತಾಳ ಲೋಕಕ್ಕೆ ಹರಿದು ಕೊಂಡು ಬಂದಳು.ಹೀಗೆ ಅಂತರಿಕ್ಷ, ಭೂಮಿ ಮತ್ತು ಪಾತಾಳ ಲೋಕವನ್ನು ಹರಿದು ಬಂದ ಕಾರಣ ತ್ರಿಪಥಗಾ ಅಂತ ಹೆಸರಿನಲ್ಲಿಕರೆಯಲ್ಪಟ್ಟಳು...
ದೇವಲೋಕದಲ್ಲಿ ಹರಿಯುವಾಗ ಮಂದಾಕಿನಿ,ಭೂಮಿಯಲ್ಲಿ ಹರಿಯುವಾಗ ಭಾಗೀರಥಿ,ಪಾತಾಳ ಲೋಕಕ್ಕೆ ಹರಿದು ಹೋದಾಗ ಅದೇ ಗಂಗಾದೇವಿ ಗೆ ಭೋಗವತಿ ಅಂತ ಹೆಸರು ಬಂತು.ಅಂದರೆ ಗಂಗಾದೇವಿಯು 
ಮೇಲಿನ ಲೋಕದಲ್ಲಿ ಇದ್ದರು ಕೆಳಗೆ ಕೆಳಗೆ ಇಳಿಯುತ್ತಾ ಬಂದು ಪಾತಾಳ ಲೋಕವನ್ನು ಸೇರಿ ಯಾರು ಎಷ್ಟು ಕೆಳಮಟ್ಟದಲ್ಲಿ ಇದ್ದರು ಸಹ ಉದ್ದಾರ ಮಾಡುತ್ತೀ ತಾಯಿ ನೀನು ಅಂತ ವರ್ಣನೆಯನ್ನು ಮಾಡುತ್ತಾರೆ.ಸ್ನಾನ ಮಾಡುವಾಗ ನಿತ್ಯ ಗಂಗಾದೇವಿಯ ಸ್ಮರಣೆ, ನಿತ್ಯ ಗಂಗಾಪೂಜೆ ಮಾಡುವದರಿಂದ ಒಳ್ಳೆದು.
 ಗಂಗಾದೇವಿಯ ಜನನ,ಮತ್ತು ಗಂಗೆಯ ಮಹತ್ವ ತಿಳಿದ ಪರಿಕ್ಷೀತ ರಾಜ ಆ ತಟದಲ್ಲಿ ಒಂದು ಕಂಭ ನೆಡಸಿ ಅದರ ಮೇಲೆ ಕೂಡಲಿಕ್ಕೆ ಭವನವನ್ನು ನಿರ್ಮಿಸಿ ಕೊಂಡು ಕುಳಿತಿದ್ದಾನೆ.
ರಾಜನಿಗೆ ಶಾಪ ಬಂದ ವಿಷಯ ಸಕಲರಿಗು ತಿಳಿಯಿತು.
ಸಾವಿರಾರು ಋಷಿಗಳು ರಾಜನನ್ನು ಮಾತನಾಡಿಸಲು ಬರುತ್ತಾರೆ. ಎಲ್ಲಾ ಋಷಿಗಳ ಸಮೂಹವೇ ಅಲ್ಲಿ ಬಂದಿದೆ.
ಅತ್ರಿ ಋಷಿಗಳು, ಚ್ಯವನರು,ವಸಿಷ್ಠ ರು ಪರಾಶರರು,ಹೀಗೆ ಇನ್ನೂ ಅನೇಕ ಋಷಿಗಳು ಆಗಮನ ವಾಗಿದೆ.
ಬಂದಂತಹ ಜ್ಞಾನಿಗಳಿಗೆ ರಾಜನು ಕೈಜೋಡಿಸಿ "ಬರುವುದು ಬಂದೀದ್ದೀರಿ.ಇನ್ನೂ ಏಳು ದಿವಸ ಇಲ್ಲಿ ಇದ್ದು ತತ್ವ ವಿಚಾರ ಮಾಡುತ್ತಾ ಇರಿ.ತಕ್ಷಕ ಸರ್ಪ ಬಂದು ಕಚ್ಚಿದಾಗ ಕೂಡಲೆ ನೀವೆಲ್ಲರು ವಿಷ್ಣುವಿನ ನಾಮವನ್ನು ಹೇಳುತ್ತಾ ನನ್ನ ಕಿವಿಗೆ ಭಗವಂತನ ನಾಮ ಕೇಳುವ ಹಾಗೇ ಮಾಡಿ.. ಎಂದು ವಿನೀತನಾಗಿ ಕೇಳಿಕೊಂಡಾಗ ಸಕಲರು ಆಗಲಿ ಅಂತ ಒಪ್ಪಿಕೊಂಡರು.
ಆ ಸಮಯಕ್ಕೆ ಸರಿಯಾಗಿ ಚಿಕ್ಕ ವಯಸ್ಸಿನ ತರಹ ಕಾಣುವ ಒಬ್ಬ ಋಷಿಗಳು ಬಂದರು. ಮೈಮೇಲೆ ವಸ್ತ್ರ ಇಲ್ಲ.ತಲೆ ಕೂದಲು ಎಲ್ಲಾ ಕೆದರಿ ಹೋಗಿದೆ. ನೋಡಲು ಹುಚ್ಚರ ತರಹ ಕಾಣಿಸುತ್ತಾ ಇದ್ದಾರೆ ಜನ ಸಾಮಾನ್ಯರಿಗೆ.
ಈ ವೇಷದಲ್ಲಿ ಬಂದಂತವರು ಶುಕ ಮುನಿಗಳು. ಸಾಕ್ಷಾತ್ ಶ್ರೀ ವೇದವ್ಯಾಸ ದೇವರ ಮಕ್ಕಳು.
ಯಾವಾಗಲೂ ಭಗವಂತನ ಚಿಂತನೆ ಯಲ್ಲಿ ಇರುತ್ತಿದ್ದ ಕಾರಣ ಅವಧೂತರಂತೆ ಕಾಣಿಸುತ್ತಾ ಇದ್ದಾರೆ.ಶುಕ ಮುನಿಗಳು ಅಲ್ಲಿ ಬಂದ ತಕ್ಷಣ ಅವರಿಗೆ ಉನ್ನತ ಆಸನವನ್ನು ಕೊಟ್ಟು, ರಾಜನು ನಮಸ್ಕರಿಸಿ ಅವರಿಗೆ ಕೈ ಮುಗಿದು ಹೇಳುತ್ತಾನೆ.
ಸ್ವಾಮಿ!! ಶ್ರೀ ಕೃಷ್ಣ ಪರಮಾತ್ಮ ಪಾಂಡವರ ಮೇಲೆ ಇರುವ ಪ್ರೀತಿ ಇಂದ ಪಾಂಡವರ ವಂಶದ ಕುಡಿಯಾದ ನನ್ನ ಮೇಲೆ ಅನುಗ್ರಹ ವಿಶೇಷವಾಗಿ ಮಾಡಿದ್ದಾನೆ.ಯಾಕೆಂದರೆ 
ಸಾಮಾನ್ಯ ಜನರಿಗೆ ಸಹ ನಿಮ್ಮ ದರುಶನ ಭಾಗ್ಯ ಸಿಗದು.
ಅಂತಹುದರಲ್ಲಿ ಇನ್ನೂ ಏಳು ದಿನಗಳಲ್ಲಿ ಸಾಯಲು ಹೊರಟಿರುವ ನನಗೆ ನಿಮ್ಮ ದರುಶನ ಯಾವುದೊ ಪುಣ್ಯ ದಿಂದ ಲಭಿಸಿದೆ ಅಂತ ಹೇಳಿ ಅವರ ಪಾದಕ್ಕೆ ಎರಗಿ
ಮಹರ್ಷಿಗಳೇ!! ಮರಣ ಸಮೀಪಿಸಿದಾಗ ಮನುಷ್ಯ ಏನು ಮಾಡಬೇಕು??
ಏನು ಜಪ ಮಾಡಬೇಕು?? ಅಂತ ಅವರ ಬಳಿ ಕೇಳುತ್ತಾನೆ.
ಅದಕ್ಕೆ ಉತ್ತರ ವಾಗಿ ಶುಕಮುನಿಗಳು ಹೇಳುತ್ತಾರೆ.
"ಹೇ!! ರಾಜನೆ !!ನಾನು ನಿನಗೆ ಭಾಗವತವನ್ನು ಹೇಳುತ್ತೇನೆ.ಅದನ್ನು ಕೇಳು".
ನಂತರ ಮರಣವನ್ನು ಸಮೀಪಿಸಿದಾಗ ಭಗವಂತನ ವಿರಾಟ್ ರೂಪವನ್ನು ಧ್ಯಾನ ಮಾಡು ಅಂತ ಹೇಳಿದ್ದಾರೆ.
ಅದಕ್ಕೆ ರಾಜ ಹೇಳುವ..
ಸ್ವಾಮಿ!! ನನಗೆ ಇರುವ ಆಯುಸ್ಸು ಏಳುದಿನ ಮಾತ್ರ.ನೀವು ಈ ಅಲ್ಪ ಸಮಯದಲ್ಲಿ ಭಾಗವತವನ್ನು ಹೇಳಿದರೆ ಹೇಗೆ??
ಅಂತ ಕೇಳುತ್ತಾನೆ..
ಅದಕ್ಕೆ ಶುಕ ಮುನಿಗಳು
ರಾಜನೇ! ಕೇಳು ಮನುಷ್ಯ ನಿಗೆ ತನ್ನ ಮೈಮೇಲೆ ಎಚ್ಚರಿಕೆ ಇಲ್ಲದಿದ್ದರೆ,ಅಥವಾ 
ನನಗೆ ಮರಣ ಬರುತ್ತದೆ ಅನ್ನುವ ಜ್ಞಾನ ವೇ ಇಲ್ಲ ದಿದ್ದರೆ ಸದಾ ಭೋಗ ಜೀವನವನ್ನು ನಡೆಸುವವನಿಗೆ ಈ ಭೂಮಿಯ ಮೇಲೆ ಎಷ್ಟು ದಿವಸ ಇದ್ದರೆ ಏನು??ಮನುಷ್ಯರು,ಒಂದಲ್ಲ ಒಂದಿನ ದೇಹವನ್ನು,ಮತ್ತು ಈ ಲೋಕವನ್ನು ಬಿಟ್ಟು ಹೋಗಲೇಬೇಕು.ಸಾಧನೆ ಗಾಗಿ ಬಂದಿರತಕ್ಕಂತಹ ಈ ದೇಹ ಶಾಶ್ವತ ವಲ್ಲ ಎಂದು ಗೊತ್ತಿದ್ದವರಿಗೆ ಒಂದು ಮುಹೂರ್ತ ಇದ್ದರು ಸಾಕು.
ಖಟ್ವಾಂಗ ಎಂಬಂತಹ ರಾಜ ಒಂದೇ ಒಂದು ಮುಹೂರ್ತ ಆಯುಸ್ಸು ಇದೆ ಎಂದು ತಿಳಿದುಕೊಂಡು ಪರಮಾತ್ಮನಲ್ಲಿ ಮನಸ್ಸಿಟ್ಟು ಮುಕ್ತಿ ಯನ್ನು ಪಡೆದಿದ್ದಾನೆ.
ಹೇ !!ರಾಜ ನಿನಗೆ ಆದರು ಏಳು ದಿನಗಳ ಸಮಯವಿದೆ.ಏನು ಚಿಂತೆಯನ್ನುಮಾಡಬೇಡ.ನಾನು ನಿನಗೆ ಭಾಗವತವನ್ನು ಹೇಳುತ್ತೇನೆ ಅಂತ ಹೇಳಿ
ಅದನ್ನು ಹೇಳಲು ಪ್ರಾರಂಭಿಸಿದರು.
ಇಲ್ಲಿ ಗೆ ಭಾಗವತದ ಪ್ರಥಮ ಸ್ಕಂದ ಮುಗಿಯಿತು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏


||ಪಿಬತ ಭಾಗವತಂ ರಸಮಾಲಯಂ||
Day8
✍ನಿನ್ನೆಯ ದಿನ ಪರಿಕ್ಷೀತ ಮಹಾರಾಜ ಗಂಗಾ ನದಿ ತಟದಲ್ಲಿ ಕುಳಿತಾಗ ಸಮಸ್ತ ಋಷಿಗಳು,ಅತ್ರಿ,ವಸಿಷ್ಠ ವಾಮದೇವ,ವೇದವ್ಯಾಸರು, ನಾರದರು ಮೊದಲಾದ ದೇವರ್ಷಿಗಳು,ಬ್ರಹ್ಮರ್ಷಿಗಳ,ರಾಜರ್ಷಿಗಳು,ಅವರ ಜೊತೆಯಲ್ಲಿ ಅವರ ಪರಿವಾರ,ಶಿಷ್ಯರು ಮತ್ತು ಅವರ ಪರಿವಾರ.. ಹೀಗೆ ಸಮಸ್ತರು ಬಂದಿದ್ದಾರೆ.
ಬಂದಂತಹ ಸಕಲರಿಗು ಪರಿಕ್ಷೀತ ಮಹಾರಾಜ ಸತ್ಕಾರ ಮಾಡುತ್ತಾನೆ.
ನಂತರ ಅವರಲ್ಲಿ ಕರ ಜೋಡಿಸಿ ಬಿನ್ನಹ ಮಾಡಿಕೊಳ್ಳುತ್ತಾನೆ.
ಮಹಾನುಭಾವರಾದಂತಹ ಸಕಲ ಋಷಿಗಳ ಸಮೂಹಕ್ಕೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ ಗಳು.
ನಿಜವಾಗಿಯೂ ನಾನು ಪುಣ್ಯ ವಂತ.ಇಷ್ಟು ಜನ  ಬಂದು ಇಲ್ಲಿ ನೆರೆದಿದ್ದೀರಿ.ನಾನು ಧನ್ಯ.ಮತ್ತು ಇದೆಲ್ಲಾ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಇರಬೇಕು.
ನನಗೆ ಬಂದ ಋಷಿಪುತ್ರನ ಶಾಪ ಲೌಕಿಕದ ಕಡೆ ವಿಮುಖನನ್ನಾಗಿ ಮಾಡಿ ವೈರಾಗ್ಯದ ಕಡೆ ಮುಖವನ್ನು ಮಾಡಿದೆ.ಅದರ ನಿಮಿತ್ತ ವಾಗಿ ಶ್ರೀ ಹರಿಯಲ್ಲಿ ನನ್ನ ಮನಸ್ಸು ಹೋಗಿದೆ.
ಈಗ ನೀವುಗಳು ಯಾರು ನನ್ನ ಬಿಟ್ಟು ಹೋಗಬೇಡಿ.ವಿಪ್ರರ ಶಾಪದಂತೆ ಏಳುದಿನಗಳಲ್ಲಿ ನನಗೆ ಮರಣವಿದೆ.ಆದರೆ ನನದೊಂದು ವಿನಂತಿ.ಇಷ್ಟು ದಿನ ರಾಜ್ಯದ ಆಳ್ವಿಕೆಯ ಕಡೆ ಗಮನಕೊಟ್ಟು ಭಗವಂತನಿಗೆ ಪ್ರೀತಿಪಾತ್ರವಾದ ಯಾವುದೇ ಸಾಧನೆ ಮಾಡಿಲ್ಲ.
ನೀವು ಈ ಏಳುದಿನಗಳ ಕಾಲ ಸದಾ ಹರಿನಾಮ ಸ್ಮರಣೆ, ಅವನ‌ಕೀರ್ತನೆ ಮಾಡಿ.ಅದನ್ನು ಕೇಳುತ್ತಾ ನಾನು ಪ್ರಾಣಬಿಡುವೆನು.
ಮುಂದೆ ಯಾವುದೇ ಜನ್ಮ ಬರಲಿ.ಆ ಜನ್ಮದಲ್ಲಿ ಭಗವಂತನ ಭಕ್ತರಿಗೆ ನನ್ನ ಇಂದ ಯಾವುದೇ ತರಹದ ದುಷ್ಟ ಕಾರ್ಯಗಳನ್ನು ಮಾಡದೇ ಇರುವ ಹಾಗೇ ಬುದ್ದಿ ಬರಲಿ.ಸದಾ ಭಗವಂತನ ನಾಮ ಸ್ಮರಣೆ, ಶ್ರವಣ ಮಾಡುವ ಬುದ್ದಿ ಬರಲಿ.ನಿಮಗೆಲ್ಲರಿಗು ನನ್ನ ನಮಸ್ಕಾರ. ಆಶೀರ್ವಾದ ಮಾಡಿ ಎಂದು ಕೇಳಿಕೊಂಡು
ತನ್ನ ರಾಜ ವಸ್ತ್ರಗಳನ್ನು ಪರಿತ್ಯಾಗ ಮಾಡಿ ಕೃಷ್ಣಾಜಿನ ವಸ್ತ್ರಗಳನ್ನು ಧರಿಸಿ ಧರ್ಬೆಯ ಆಸನದ ಮೇಲೆ ಕುಳಿತಾಗ
ಅದನ್ನು ನೋಡಿದ ಆಗಸದಲ್ಲಿ ನೆರೆದಿದ್ದ ಸಮಸ್ತ ದೇವತೆಗಳು ಪುಷ್ಪ ವೃಷ್ಟಿಯನ್ನು ಮಾಡುತ್ತಾರೆ.
ನೆರೆದಿದ್ದ ಸಮಸ್ತ ಋಷಿಗಳು ರಾಜನಿಗೆ ಹೇ ರಾಜನ್! ನಿನ್ನ ಈ ವೈರಾಗ್ಯ ಹರಿಯ ಇಚ್ಛೆ ಇಂದ ಬಂದಿದೆ.ಎಲ್ಲವು ಅವನಿಗೆಪ್ರೀತಿಯಾಗಿದೆ.ನೀನು ಈ ದೇಹವನ್ನು ಬಿಟ್ಟು ಹೋಗುವವರೆಗು ನಾವಿಲ್ಲಿ ಇದ್ದು ನಿನ್ನ ಆಶಯದಂತೆ ಭಗವಂತನ ನಾಮ ಸ್ಮರಣೆ ಮಾಡುವೆವು ಎಂದು ಹೇಳುತ್ತಾರೆ.
ಆ ಸಮಯದಲ್ಲಿ ಭಗವಂತನ ಆಜ್ಞೆಯಂತೆರುದ್ರಾಂಶರಾದ ಶ್ರೀ ಶುಕ ಮಹರ್ಷಿಗಳು ಅಲ್ಲಿ ಬರುತ್ತಾರೆ. 
ನೋಡಲು ಹದಿನಾರು ವರ್ಷದ ಬಾಲಕನಂತೆ ಕಾಣುತ್ತಾ ಇದ್ದಾರೆ.ತಲೆ ಕೂದಲುಕೆದರಿಹೋಗಿದೆ.ನೋಡುವ ಜನರಿಗೆ ಹುಚ್ಚ ರಂತೆ ಕಾಣಿಸುತ್ತಾ ಇದ್ದಾರೆ.
ಬಂದಂತಹ ಶುಕಮುನಿಗಳ ಪಾದಕ್ಕೆ ತನ್ನ ಶಿರಸ್ಸನ್ನು ಅವರ ಪಾದಕ್ಕೆ ಇಟ್ಟು ಅವರಿಗೆ ನಮಸ್ಕಾರ ಮಾಡುತ್ತಾನೆ.
ಇಷ್ಟು ದಿನ ರಾಜ್ಯ ಆಳುವಾಗ ನಿಮ್ಮ ದರುಶನವಾಗಲಿಲ್ಲ.ಇಂದು ಎಲ್ಲವನ್ನೂ ಪರಿತ್ಯಾಗ ಮಾಡಿ ಬಂದು ಕುಳಿತಾಗ ನಿಮ್ಮಂತಹ ಜ್ಞಾನಿಗಳ ಸಂಗಮ ದರುಶನ ವಾಗಿದೆ.ದಯವಿಟ್ಟು ಏಳುದಿನಗಳ ಕಾಲ ತಾವು ಇಲ್ಲಿಯೇ ಇದ್ದು ಭಗವಂತನ ನಾಮಸ್ಮರಣೆ,ಕೀರ್ತನೆಗಳನ್ನು ಅವನ ಕತೆಯನ್ನು ಹೇಳಬೇಕು ಎಂದು ಪ್ರಾರ್ಥನೆ ಮಾಡುತ್ತಾನೆ.ನಿಶ್ಚಿತವಾಗಿಯು ಸಾಯುವ ಮನುಷ್ಯ ಸಾಯುವುದಕ್ಕೆ ಮುಂಚೆಯೇ, ಏನನ್ನೂ ಕೇಳಬೇಕು, ಜಪಿಸಲೇ ಬೇಕು, ಇದನ್ನು ತಿಳಿಸಿ ಅಂತ ಪರಿಕ್ಷೀತರಾಜ ಶುಕ ಮುನಿಗಳ ಬಳಿ ಕೇಳಿದಾಗ 
ಅವರು ಕೊಟ್ಟ ಉತ್ತರ.
"ಶ್ರೀ ಮದ್ ಭಾಗವತ ಶ್ರವಣ.ಇದು ಪ್ರತಿಯೊಬ್ಬ ಜೀವನಿಗೆ ಸಹ ಅವಶ್ಯಕ ಬೇಕು.ಯಾಕೆಂದರೆ ಎಲ್ಲರು ಸಾಯುವವರೇ.ಆದ್ದರಿಂದ ಶ್ರೀ ಮದ್ ಭಾಗವತ ಪ್ರತಿಯೊಬ್ಬ ರಿಗು ಕಡ್ಡಾಯ.
ಎಂದು ಹೇಳುತ್ತಾರೆ.
ಹಾಗಾದರೆ ಈ ಕಲಿಯುಗದಲ್ಲಿ ಮುಕ್ತಿಗೆ ಹೋಗತಕ್ಕಂತಹ ಅಪೇಕ್ಷಿತ ಉಳ್ಳ ಜೀವಿಯು ಮಾಡಬೇಕಾದ ಕರ್ತವ್ಯ ಏನು?? ಮತ್ತು ಯಾವ ಸಾಧನೆ ಮಾಡಬೇಕು??
ಎಂದು ಕೇಳುತ್ತಾನೆ.
ಅದಕ್ಕೆ ಶುಕ ಮುನಿಗಳು ರಾಜನೇ ಭಗವಂತನ ನಾಮ ಸ್ಮರಣೆ ಮಾಡಲೇಬೇಕು.
ಮೊದಲು ಅವನ ಬಗ್ಗೆ ನಮಗೆ ತಿಳಿಯದೇ ಇದ್ದರು ಅಥವಾ ತಿಳಿದರು ಸಹ ಹರಿಕಥಾ ಶ್ರವಣ ಮಾಡಬೇಕು.ಸದಾ ಹರಿನಾಮ ಸ್ಮರಣೆ, ಕೀರ್ತನೆ ಮಾಡಬೇಕು. ಅವನ ಗುಣಗಳನ್ನು ಕೊಂಡಾಡಬೇಕು.
ಇಂತಹ ಭಗವಂತನ ಮಹಿಮೆಯನ್ನು ಕೇಳುತ್ತಾ ಸದಾ ಮನನ ಮಾಡುತ್ತ ಇರಬೇಕು. ನಮ್ಮ ಅಂತ್ಯಕಾಲದಲ್ಲಿ ಅವನ ನಾಮ ಸ್ಮರಣೆ ಮಾಡುತ್ತಾ ಪ್ರಾಣವನ್ನು ಬಿಡಬೇಕು ಎಂದು ಹೇಳುತ್ತಾರೆ.
ಮತ್ತೆ ರಾಜ ಕೇಳುತ್ತಾನೆ.
ಇವಾಗ ನನಗೆ ಇರುವ ಸಮಯ ಬಹಳ ಕಡಿಮೆ. ಇಷ್ಟು ದಿನ ರಾಜ್ಯಭಾರ,ಸತಿ ಸುತಮಿತ್ರಭಾಂದವ,ಇವರನ್ನು ಹೊಂದಿ ವ್ಯರ್ಥವಾಗಿ ಕಾಲಕಳೆದುಹೋಗಿದೆ.ಮುಂದಿನ ದಾರಿ ಏನು?ಎಂದಾಗ
ಅದಕ್ಕೆ ಶುಕಮುನಿಗಳು
ರಾಜ ನಿನಗೆ ಶಾಪ ಬಂದಿದ್ದು ಏಳು ದಿನಗಳ ನಂತರ ಹೊರತಾಗಿ ಈ ಕ್ಷಣವಲ್ಲ ತಾನೇ.ಇನ್ನೂ ಸಮಯವಿದೆ.
ಖಟ್ವಾಂಗ ಎಂಬ ರಾಜ ದೇವತೆಗಳ ಪರವಾಗಿ ದಾನವರ ಜೊತೆಯಲ್ಲಿ ಹೋರಾಟ ಮಾಡಿ ಅವರಿಗೆ ಜಯವನ್ನು ತಂದಾಗ ಅವರು ವರವನ್ನು  ಕೊಡುವೆವು  ಕೇಳು ಎಂದಾಗ ಅದಕ್ಕೆ ರಾಜನು ತನ್ನ ಆಯಸ್ಸು ಎಷ್ಟು ಇದೇ ಎಂದು ಕೇಳಿದಾಗ ಅದಕ್ಕೆ ಅವರು ಒಂದು ಮಹೂರ್ತ ಇದೆ ಅಂತ ಹೇಳುತ್ತಾರೆ. ಒಂದು ಮಹೂರ್ತ ಎಂದರೆ 48ನಿಮಿಷಗಳ ಕಾಲ.
ಆಗ ಖಟ್ವಾಂಗ ರಾಜ ಮರುಮಾತನಾಡದೇ ರಾಜ್ಯ ತ್ಯಾಗ ಮಾಡಿ ಹಿಮಾಲಯ ಪರ್ವತಕ್ಕೆ ಹೋಗಿ ಉಳಿದ ಕಾಲದಲ್ಲಿ ಭಗವಂತನ ನಾಮ ಸ್ಮರಣೆ ಮಾಡುತ್ತಾ ದೇಹವನ್ನು ತ್ಯಾಗ ಮಾಡಿದ್ದಾನೆ.
ಅದರಂತೆ ನಿನಗೆ ಸಮಯ ಬಹಳ ಇದೆ.ಅದಕ್ಕೆ ಸಂತೋಷಪಡು. ಚಿಂತಿಸುವ ಅಗತ್ಯವಿಲ್ಲ. ಪರಮ ಮಂಗಳಕರವಾದ ಭಾಗವತ ವನ್ನು ಕೇಳು.ಇದು ಅಂತ್ಯಕಾಲದಲ್ಲಿ ನಿನಗೆ ಹರಿಯನಾಮ ಸ್ಮರಣೆ ಬರುವದು ಎಂದು ಹೇಳುತ್ತಾರೆ.
ಶ್ರೀ ಕೃಷ್ಣಾರ್ಪಣ ಮಸ್ತು🙏
 ಈ ಭಾಗವತಕ್ಕೆ ಪ್ರತಿಪಾದ್ಯನಾಗಿರ ತಕ್ಕಂತಹವನು ವಾಸುದೇವ ರೂಪಿ ಪರಮಾತ್ಮ...
ಅವನು ಸರ್ವಜ್ಞ ನಾಗಿದ್ದಾನೆ.ಬ್ರಹ್ಮ ದೇವರಿಗೆ ವೇದವನ್ನು ಉಪದೇಶ ಮಾಡಿದ್ದಾನೆ.
ನಮಗೆ ಬರುವ ತಾಪಗಳನ್ನು ಪರಿಹಾರ ಮಾಡತಕ್ಕವನು ಒಬ್ಬನೇ ಅವನೇ ಭಗವಂತ.
ಅವನು ಮಂಗಳಪ್ರದ...
ಅಂತಹ ಭಾಗವತ ವನ್ನು ನಿತ್ಯ ಶ್ರವಣ ಪಠಣ ಮಾಡೋಣ..
ಪ್ರಥಮ ಸ್ಕಂದ ಮುಗಿದಿದು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏





|ಪಿಬತ ಭಾಗವತಂ ರಸಮಾಲಯಂ||
Day9
ಶ್ರೀಪರೀಕ್ಷಿತ ಮಹಾರಾಜ ಶ್ರೀಶುಕಮುನಿಗಳ ಬಳಿ
ನಿಶ್ಚಿತ ವಾಗಿಯು ಸಾಯುವ ಮನುಷ್ಯ ಸಾಯುವುದಕ್ಕೆ ಮುಂಚೆಯೇ, ಏನನ್ನೂ ಕೇಳಬೇಕು, ಜಪಿಸಲೇ ಬೇಕು,ಇದನ್ನು ತಿಳಿಸಿ ಅಂತಕೇಳಿದಾಗ 
ಅವರು ಕೊಟ್ಟ ಉತ್ತರ.
"ಶ್ರೀ ಮದ್ ಭಾಗವತ ಶ್ರವಣ.ಇದು ಪ್ರತಿಯೊಬ್ಬ ಜೀವನಿಗೆ ಸಹ ಅವಶ್ಯಕ ಬೇಕು.ಯಾಕೆಂದರೆ ಎಲ್ಲರು ಸಾಯುವವರೇ..ಆದ್ದರಿಂದ ಶ್ರೀ ಮದ್ ಭಾಗವತ ಪ್ರತಿಯೊಬ್ಬ ರಿಗು ಕಡ್ಡಾಯ.
ಎಂದಾಗ ಮತ್ತೆ ರಾಜ ಕೇಳುತ್ತಾನೆ.
ಶ್ರೀ ಹರಿಯ ರೂಪವನ್ನು ಹೇಗೆ ಸ್ಮರಿಸಬೇಕು??
ಅದಕ್ಕೆ ಶ್ರೀಶುಕಮುನಿಗಳ ಉತ್ತರ. 
ಎಂತಹ ಉತ್ತಮವಾದ ಹಾಗು ಬಹಳ ದೊಡ್ಡ ಪ್ರಶ್ನೆ ಕೇಳಿದ್ದೀಯಾ..ಅದಕ್ಕೆ ಉತ್ತರ ಕೊಡುತ್ತೇನೆ ಕೇಳು ಎಂದು ಹೇಳುತ್ತಾರೆ.
(ಈ ಪ್ರಪಂಚದಲ್ಲಿ ಯಾರು ಎಷ್ಟೇ ಆಳವಾಗಿ ಚಿಂತನೆ ನಡೆಸಿದರು ತಿಳಿಯಲು ಆಗದವ ಯಾರು ಎಂದರೆ ಭಗವಂತ.) 
(ಅವನ ವ್ಯಾಪ್ತಿ, ವ್ಯಾಪಾರ, ನಮಗೆ ಎಷ್ಟು ಯೋಚನೆ ಮಾಡಿದರು ಅರ್ಥವಾಗುವದಿಲ್ಲ.ಆದರು ನಮಗೆ ತಿಳಿಯಬೇಕೆಂದು ಆಸೆ.ತಿಳಿಯಲು ಸಮಯವಿಲ್ಲ.ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ನಮ್ಮ ದಿನಚರಿಯಲ್ಲಿ ನೂರೆಂಟು ಕೆಲಸಗಳ ಪಟ್ಟಿ ಇರುತ್ತದೆ. ಅಲ್ಲಿ ಹೋಗಬೇಕು, ಅದು ತರಬೇಕು..ಹೀಗೆ..)
(ಆದರೆ ಭಗವಂತನ ಬಗ್ಗೆ ತಿಳಿಯಲು ಸಮಯವಿಲ್ಲ.ಎಷ್ಟು ನಾವು ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ ಎಂದರೆ ಯಾವುದರ ಬಗ್ಗೆ ಯೋಚನೆ ಇರುವುದಿಲ್ಲ. ಕೆಲವೊಮ್ಮೆ ಊಟಮತ್ತು ನಿದ್ರೆಇವನ್ನು ಸಹ ಮಾಡದೇ ಹಾಗೇ ಕೆಲಸದಲ್ಲಿ ಮಗ್ನರಾಗಿರುತ್ತೇವೆ.)
ಬಹುಶಃ ನಮ್ಮ ಇಂದಿನ ಈ ಪರಿಸ್ಥಿತಿ ಯನ್ನು ನೋಡಿ ಅಂದು ಶ್ರೀಶುಕಮುನಿಗಳು ಹೇಳಿರಬಹುದು.
ಹೇ!! ರಾಜನ್!! ಪ್ರತಿಯೊಂದು ಜೀವಿಯು ಬಾಲ್ಯದಲ್ಲಿ ಆಟ ಪಾಠ ಗಳಿಂದ ಯೌವನದ ಸಮಯದಲ್ಲಿ ದ್ರವ್ಯ ಗಳಿಕೆ,ಮೋಜು,ಮತ್ತು ಸಂಸಾರ ಸುಖದಲ್ಲಿ ಆಸಕ್ತಿ ಈ ರೀತಿಯಲ್ಲಿ ಕಾಲ ವ್ಯರ್ಥವಾಗಿ ಕಳೆಯುತ್ತೇವೆ.
ನಂತರ ವೃದ್ಯಾಪ್ಯದಲ್ಲಿ ಭಗವಂತನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬರುತ್ತದೆ. ಆದರೆ ಏನು ಮಾಡುವದು ನಮ್ಮ ದೇಹದ ಇಂದ್ರಿಯಗಳು ನಮ್ಮ ಅಧೀನದಲ್ಲಿ ಇರುವದಿಲ್ಲ.
ವಯೋ ಸಹಜವಾದ ಕಾಯಿಲೆ, ಮತ್ತು ಇಂದ್ರಿಯಗಳ ದುರ್ಬಲತೆ,ತಿರುಗಾಟ ಮಾಡಲು ಆಗದು.ಏನನ್ನು ನೋಡಲು, ಕೇಳಲು ಆಗದು.ಸಂಪೂರ್ಣ ಮರೆವು ಬಂದಿರುತ್ತದೆ. ಯಾವುದು ನೆನಪಿಗೆ ಇರುವುದಿಲ್ಲ. 
ಬಾಲ್ಯದಲ್ಲೇ ಆಟ ಪಾಠದಲ್ಲಿ ಭಗವಂತನ ಬಗ್ಗೆ ಮರೆವು.ಯೌವನದ ಸಮಯದಲ್ಲಿ ಸಂಸಾರದಲ್ಲಿ ಬಿದ್ದು ಭಗವಂತನ ಬಗ್ಗೆ ಮರೆವು. ವೃದ್ಧಾಪ್ಯದ ಸಮಯದಲ್ಲಿ ವಯೋ ಧರ್ಮದಿಂದ ಭಗವಂತನ ಬಗ್ಗೆ ಮರೆವು.
ಹೀಗೆ ನಮ್ಮ ಜೀವನ‌ದ ಅವಧಿಯಲ್ಲಿ ಭಗವಂತನ ಬಗ್ಗೆ ಮರೆವಿನ ಕೆಲಸ ನಮಗೆ.
ನಮ್ಮ ಆತ್ಮೀಯರು ಅಥವಾ ನಮಗೆ ಬೇಕಾದವರು ಮೃತ ಹೊಂದಿದರೆ ಗೋಳಾಡುತ್ತೇವೆ.ನಾಳೆ ನಾವು ಸಹ ಅಲ್ಲಿ ಹೋಗಬೇಕು ಅನ್ನುವ ಜ್ಞಾನ ನಮಗೆ ಬರುವುದಿಲ್ಲ. 
ಹುಟ್ಟಿದ ಪ್ರತಿ ಜೀವಿ ಮೃತ್ಯು ವಿನ ಬಾಯಿಒಳಗಡೆ ಹೋಗಬೇಕು ಎನ್ನುವ ಜ್ಞಾನ ನಮಗಿಲ್ಲ.ಇನ್ನೂ ಇರುತ್ತೇವೆ ಚಿರಂಜೀವಿ ಹಾಗೇ ಅಂದುಕೊಂಡಿರುತ್ತೇವೆ.
ಈ ಕಲಿಯುಗದಲ್ಲಿ ಪ್ರತಿಯೊಂದು ಜೀವಿಗೆ ತಮ್ಮ ಆಯುಸ್ಸು ಎಷ್ಟು ಇದೆ ಎನ್ನುವ ಬಗ್ಗೆ ತಿಳಿಯಲು ಸಾಧ್ಯವಿಲ್ಲ. 
ಯಾವಾಗ ಮರಣ ಬರುವದೋ ಅದು ಸಹ ಗೊತ್ತಿಲ್ಲ. ಆದ್ದರಿಂದ ಪ್ರತಿಕ್ಷಣ ಭಗವಂತನ ಧ್ಯಾನ ಮಾಡುತ್ತಾ ಇದ್ದರೆ ಅಂತ್ಯ ಕಾಲದಲ್ಲಿ ಹರಿಯ ನಾಮ ಸ್ಮರಣೆ ಬರಲು ಸಾಧ್ಯ.
ಇಲ್ಲಿನಮಗೆ ಒಂದು ಸಂದೇಹ ಬರಬಹುದು ಅದು ಹೇಗೆ?? ಅಂತ್ಯಕಾಲದಲ್ಲಿ ಶ್ರೀ ಹರಿಯ ನಾಮ ಸ್ಮರಣೆ ಬರಲು ಸಾಧ್ಯ ಅಂತ..??
ಅದಕ್ಕೆ ಒಂದು ಉದಾಹರಣೆ.
ಇವಾಗ ನಾವೆಲ್ಲರೂ ಒಂದು ಲೌಕಿಕದ ವಿದ್ಯೆಯನ್ನು ಕಲಿಯಬೇಕಾದರೆ,ಅಥವಾ ಪಾಠಗಳನ್ನು ಕಲಿಯಲು ಹೋದಾಗ ಅಲ್ಲಿ ಅವರು ನಮಗೆ ಒಂದು ವಿಷಯಗಳ ಬಗ್ಗೆ ಮಾಹಿತಿ ಮತ್ತು ಪುಸ್ತಕಗಳನ್ನು ಕೊಡುತ್ತಾರೆ. ತಂದು ಅದನ್ನು ಅಭ್ಯಾಸ ಮಾಡುತ್ತೇವೆ.ಕೆಲ ದಿನಗಳ ಅಥವಾ ತಿಂಗಳು ನಂತರ ಅವರು ಪರೀಕ್ಷೆ ಏರ್ಪಾಡು ಮಾಡುತ್ತೇವೆ ಎಂದಾಗ ರಾತ್ರಿ ಹಗಲು ಬಿಡದೇ ಓದಿ ಅವರು ಕೊಟ್ಟ ಪರೀಕ್ಷೆ ಸಮಯದಲ್ಲಿ ಎಲ್ಲವನ್ನೂ ಬರೆದು ಪಾಸ್ ಆಗಿ ಒಂದು ಕೆಲಸವಾಯಿತು ಅಂತ ಸಂತೋಷಪಡುತ್ತೇವೆ.
ಇವಾಗ ಏನನ್ನು ಓದದೇ ಸೀದಾ ಪರೀಕ್ಷೆ ಬರೆಯಲು ಹೋದರೆ ಪಾಸ್ ಆಗಲು ಸಾಧ್ಯವೇ??ತಲೆಗೆ ಏನಾದರು ನೆನಪಿಗೆ ಬರಲು ಸಾಧ್ಯವೇ?
ಕೆಲವೊಮ್ಮೆ ಎಷ್ಟು ಓದಿದರು ಉತ್ತರ ಬರೆಯುವಾಗ ನೆನಪಿಗೆ ಬರುವುದಿಲ್ಲ. ಅಂತಹುದರಲ್ಲಿ ಓದದೇ,ಕೇಳದೇ ಬರೆಯುತ್ತೇನೆ ಎನ್ನುವದು ನಮ್ಮ ಮೂರ್ಖತನದ ಪರಮಾವಧಿ.
ಅದರಂತೆ ಭಗವಂತನ ಬಗ್ಗೆ ತಿಳಿಯದೇ,ಕೇಳದೇ ಅಂತ್ಯಕಾಲದಲ್ಲಿ ಸ್ಮರಣೆ ಮಾಡುತ್ತೇವೆ.ಇವಾಗ ಇದೆಲ್ಲಾ ಬೇಡ ಎಂದುಕೊಂಡು ಕಾಲ ಹರಣ ಮಾಡಿದರೆ ನಮಗೆ ಅದರಿಂದ ಹಾನಿ ಹೊರತು ಬೇರೆ ಏನು ಇಲ್ಲ.
ನಮಗೆ ಸಮಯ ಸಿಕ್ಕ ಹಾಗೆಲ್ಲ ಭಗವಂತನ ಸ್ಮರಣೆ, ಅವನ ಕಥೆ ಶ್ರವಣ ಮಾಡುತ್ತಾ ಇದ್ದಾಗ ಅಂತ್ಯಕಾಲದಲ್ಲಿ ಅವನ ನಾಮ ಸ್ಮರಣೆ ಕಿಂಚಿತ್ತೂ ಬರಲು ಸಾಧ್ಯ.
ಹೀಗೆ ಭಗವಂತನ ಬಗ್ಗೆ ತಿಳಿಯಲು,ಅವನ ನಾಮ ಸ್ಮರಣೆ ಯನ್ನು ಮಾಡಲು ಪ್ರಯತ್ನ ಪಡದೇ ವಿಷಯ ಆಸಕ್ತಿಯನ್ನು ಹೊಂದಿದವ ಎಷ್ಟು ದಿನ ಬದುಕಿದ್ದರು ವ್ಯರ್ಥ.
ಭಗವಂತನ ಬಗ್ಗೆ ತಿಳಿದು ಅಥವಾ ತಿಳಿಯದೇ ಉಪಾಸನೆ ಮಾಡಿದರು ಫಲ ಇದೆ.
ಒಟ್ಟಾರೆ ಹರಿ ಸ್ಮರಣೆ ಮಾತ್ರ ಬಿಡಬಾರದು ಅಂತ ಹೇಳುತ್ತಾರೆ.
ಇಲ್ಲಿ ಭಗವಂತನ ಧ್ಯಾನ ಮಾಡು,ಅವನ ಸೇವೆ ಮಾಡು ಎಂದರೆ ದಿನವೀಡಿ ನಮ್ಮ ಲೌಕಿಕದ ಕೆಲಸ,ಕರ್ತವ್ಯಗಳನ್ನು ಬಿಟ್ಟು ಕೂಡುವದಲ್ಲ.
ನಮ್ಮ ಕೆಲಸದ ಜೊತೆಯಲ್ಲಿಭಗವಂತನ ಪೂಜೆ,ಮಾಡುತ್ತಾ
ಚಿಂತನೆ ಮಾಡಬೇಕು..
ಈ  ಜಗತ್ತು ಹಾಗುಜಗತ್ತಿನಲ್ಲಿ ಇರುವ ಎಲ್ಲಾ ವಸ್ತುಗಳ ಸೃಷ್ಟಿ ಮಾಡಿದವ ಆ ಭಗವಂತ. ಶ್ರೀರಮಾದೇವಿ ಮೊದಲು ಗೊಂಡು ಬ್ರಹ್ಮಾದಿದೇವತೆಗಳು ಮೊದಲುಗೊಂಡು ಸಹ
ಮತ್ತು 
ಎಂಬತ್ತು ನಾಲ್ಕು ಲಕ್ಷ ಕೋಟಿ ಜೀವರಾಶಿಗಳ ನಿಯಾಮಕ ಆ ಪರಮಾತ್ಮನಾದ ಶ್ರೀ ಹರಿ ಒಬ್ಬನೇ.
ನಾವು ಮಾಡುವ ಪ್ರತಿ ಕೆಲಸ ಅವನಿಗೆ ಪ್ರೀತಿ ಕರವಾಗಲಿ.ಪ್ರತಿಯೊಂದು ಕೆಲಸವನ್ನು ಅವನ ಪ್ರೇರಣೆ ಯಂತೆ ಮಾಡುತ್ತಾ ಇದ್ದೀನಿ.ನಾನು ಅಸ್ವತಂತ್ರ.ಭಗವಂತ ಸ್ವತಂತ್ರ. ನಾ ಅಹಂ ಕರ್ತಾಃ ಹರಿ ಕರ್ತಾಃ ಎನ್ನುವ ಜ್ಞಾನ ಸದಾ ಇರಬೇಕು.
ಎನ್ನುವ ಈ ಅನುಸಂಧಾನ ಬಂದರೆ ಕ್ರಮೇಣ  ನಮ್ಮಲ್ಲಿಅವನ ಮೇಲೆ  ಭಕ್ತಿ ಪ್ರೇಮವಾಗಿ ಮಾರ್ಪಾಡು ಆಗುತ್ತದೆ. 
ಪ್ರೇಮದಿಂದ ಭಕ್ತಿ.
ಭಕ್ತಿ ಇಂದ ಧ್ಯಾನ.ಧ್ಯಾನದಿಂದ ಮುಕ್ತಿ.
ಮೊದಲು ನಮ್ಮ ಮನಸ್ಸು ನಮ್ಮ ಹತ್ತಿರ ಇಟ್ಟುಕೊಂಡು ಬೇರೆ ಕಡೆ ಹಾಯಿಸದೇ ಶ್ರೀ ಹರಿಯ ಸರ್ವ ಅಂಗಗಳನ್ನು,ಅವನ ಅವಯವಗಳ ಬಗ್ಗೆ ಚಿಂತನೆ ಮಾಡಬೇಕು. 
ಈ ನಿರಂತರ ಧ್ಯಾನ ದಿಂದ ನಮ್ಮ ಮನಸ್ಸಿನ ಒಳಗೆ ಇರುವ ಕೊಳೆಯನ್ನು ತೊಳೆದುಕೊಳ್ಳಬೇಕು.
ಇದು ಒಂದು ಸಾರಿ ಬರುವುದಿಲ್ಲ. ನಿರಂತರ ನಿತ್ಯ ಪ್ರಯತ್ನ ಮಾಡಬೇಕು. ಒಮ್ಮೆ ನಮ್ಮ ಮನಸ್ಸಿನ ಒಳಗೆ ಅದು ಬಂತು ಅಂದರೆ ನಮ್ಮ ಮನಸ್ಸು ದುಷ್ಟ ಕಾರ್ಯ,ದುಷ್ಟ ಚಿಂತನೆ ಬಿಟ್ಟು ಭಗವಂತನ ಚಿಂತನೆ ಮಾಡಲು ಆರಂಭ ಮಾಡುತ್ತದೆ.
ಹೀಗೆ ಭಗವಂತನ ನಾಮ ಸ್ಮರಣೆ ಮಹತ್ವ ಬಗ್ಗೆ ಹೇಳಿ ಮುಂದೆ ಭಗವಂತನ ವಿರಾಟ ರೂಪದ ಬಗ್ಗೆ ಹೇಳುತ್ತಾರೆ. ಅದನ್ನು ನಾಳೆ ನೋಡೋಣ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
 ಈ ಭಾಗವತಕ್ಕೆ ಪ್ರತಿಪಾದ್ಯನಾಗಿರ ತಕ್ಕಂತಹವನು ಶ್ರೀವಾಸುದೇವ ರೂಪಿ ಪರಮಾತ್ಮ...
ಅವನು ಸರ್ವಜ್ಞ ನಾಗಿದ್ದಾನೆ.ಶ್ರೀಬ್ರಹ್ಮ ದೇವರಿಗೆ ವೇದವನ್ನು ಉಪದೇಶ ಮಾಡಿದ್ದಾನೆ.
ನಮಗೆ ಬರುವ ತಾಪಗಳನ್ನು ಪರಿಹಾರ ಮಾಡತಕ್ಕವನು ಒಬ್ಬನೇ ಅವನೇ ಭಗವಂತ.
ಅವನು ಮಂಗಳಪ್ರದ..
ಅಂತಹ ಶ್ರೀ ಮದ್ಭಾಗವತ ವನ್ನು ನಿತ್ಯ ಶ್ರವಣ ಪಠಣ ಮಾಡೋಣ
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏


||ಪಿಬತ ಭಾಗವತಂ ರಸಮಾಲಯಂ||
Day 10.
✍ನಿನ್ನೆಯ ದಿನ ಭಗವಂತನ ಉಪಾಸನೆ ಹೇಗೆ ಮಾಡಬೇಕೆಂದು ಶುಕಮುನಿಗಳು ಪರೀಕ್ಷಿತ ರಾಜನಿಗೆ ವಿವರವಾಗಿ ಹೇಳುತ್ತಾರೆ. ಅದರ ಮುಂದಿನ ಭಾಗ.
ಈ ದ್ವಿತೀಯ ಸ್ಕಂಧದಲ್ಲಿ ಯಾವುದೇಕಥೆಗಳಿಲ್ಲ.
ಭಗವಂತನ ಬಗ್ಗೆ ತಿಳಿಯುವ ಮಾರ್ಗವನ್ನು ಮಾತ್ರ ಇದರಲ್ಲಿ ಹೇಳಿದ್ದಾರೆ.
ಪರೀಕ್ಷಿತ ರಾಜ ಶುಕಮುನಿಗಳ ಬಳಿ ಕೇಳುತ್ತಾನೆ.
ಭಗವಂತನ ಕುರಿತಾದ ಧ್ಯಾನ ಯಾವ ರೀತಿ ಮಾಡಬೇಕು?? ಎಂದಾಗ
ಅದಕ್ಕೆ ಶುಕಮುನಿಗಳು ಹೇಳುತ್ತಾರೆ.
"ಮೊದಲು ಶುದ್ದವಾದ ಪರಿಸರದಲ್ಲಿ ಉತ್ತಮವಾದ ಆಸನವನ್ನು ಹಾಕಿಕೊಂಡು ಕುಳಿತುಕೊಳ್ಳಲು ಬೇಕು.ಪ್ರಾಣಾಯಾಮದಿಂದ ಮತ್ತು ನಮ್ಮ ಒಳಗಡೆ ಇದ್ದು ಶ್ವಾಸ,ಕಾರ್ಯವನ್ನು ಮಾಡುತ್ತಾ ಇರುವ ಮುಖ್ಯ ಪ್ರಾಣದೇವರಲ್ಲಿ ಪ್ರಾರ್ಥನೆ ಮಾಡುತ್ತಾ ನಮ್ಮ ಶ್ವಾಸವನ್ನು ಬಿಗಿ ಹಿಡಿಯಬೇಕು.
ಉಸಿರಿನ ಬಿಗಿ ಹಿಡಿತದಿಂದ ನಮ್ಮ ಮನಸ್ಸು ನಿಗ್ರಹ ವಾಗುತ್ತದೆ.
(ಅದಕ್ಕೆ  ನೋಡಿ ನಮ್ಮ ಹಿರಿಯರು ಸಂಧ್ಯಾವಂದನೆ ದೇವರ ಪೂಜೆ ಸಮಯದಲ್ಲಿ ಪ್ರಾಣಾಯಾಮ ಮಾಡಲು ಹೇಳಿದ್ದಾರೆ.)
ಒಂದು ಕ್ಷಣ ಉಸಿರು ಹಿಡಿದಾಗ ನಮ್ಮ ಮನಸ್ಸಿನ ಒಳಗಡೆ ಯಾವುದೇ ಲೌಕಿಕ ಚಿಂತನೆ ಗಳು ಬರುವುದಿಲ್ಲ. ಆ ಸಮಯದಲ್ಲಿ ಭಗವಂತನ ರೂಪವನ್ನು ಚಿಂತನೆ ಮಾಡಿದಾಗ ಅದು ನಮ್ಮ ಮನಸ್ಸಿನ ಒಳಗಡೆ ಹಾಗೇ ಇರುತ್ತದೆ.
ಇದು ಒಂದು ದಿನಕ್ಕೆ ಬರುವ ದಿಲ್ಲ.ನಿರಂತರವಾಗಿ ಅಭ್ಯಾಸ ಮಾಡಬೇಕು.
ಉದಾಹರಣೆಗೆ 
ನಾವು ನಮ್ಮ ಮೊಬೈಲ್ ಇಂದ ಪೋಟೋ ತೆಗೆದಾಗ ಹೇಗೆ ಬೆಳಕು ಬಂದು ಆ ಚಿತ್ರ ನಮ್ಮ ಮೊಬೈಲ್ ಒಳಗಡೆ ಬರುವದೋ ಹಾಗೇ ಮನಸ್ಸಿನ ಒಳಗಡೆ ಭಗವಂತನ ರೂಪ ಚಿಂತನೆ ಮಾಡಿದಾಗ ಅದು ನಮ್ಮ ಒಳಗಡೆ ಬರುತ್ತದೆ. 
ಇದಕ್ಕೆ ಇನ್ನೊಂದು ಉದಾಹರಣೆ ಧ್ರುವರಾಯರ ಚರಿತ್ರೆ. 
ಪುಟ್ಟ ಬಾಲಕ ಕಠಿಣ ವಾದ ತಪಸ್ಸು ಆಚರಿಸುವ ಸಮಯದಲ್ಲಿ ಸಾಕ್ಷಾತ್ ಭಗವಂತ ಮುಂದೆ ಬಂದು ನಿಂತರು ಸಹ ಅವರು ಕಣ್ಣು ತೆರೆಯುವದಿಲ್ಲ.ಯಾಕೆಂದರೆ ಅವರ ಹೃದಯದ ಒಳಗಡೆ ಭಗವಂತನ ಒಂದು ರೂಪವನ್ನು ಚಿಂತನೆ ಮಾಡಿಕೊಂಡು ಅದರಲ್ಲಿ ಪರಮಾತ್ಮನ ಸನ್ನಿಹಿತ ನಾಗಿದ್ದಾನೆ ಅಂತ ತಿಳಿದು ಕೊಂಡು ಉಪಾಸನೆ ಮಾಡುತ್ತಾ ಇದ್ದಾರೆ. 
ಒಳಗಡೆ ಭಗವಂತನ ರೂಪ ಇದೆ.ತಕ್ಷಣ ಭಗವಂತ ಆ ರೂಪವನ್ನು ಅದೃಶ್ಯ ಮಾಡಿದಾಗ ಅವಾಗ ಅವರು ಕಣ್ಣು ತೆಗೆದು ನೋಡುವರು ಅಂತ ಇದೇ ಶ್ರೀ ಮದ್ ಭಾಗವತ ದಲ್ಲಿ ಮುಂದೆ ಕೇಳುತ್ತೇವೆ.

ಈ ಕಲಿಯುಗದಲ್ಲಿ ಭಗವಂತನ ನಾಮ ಸ್ಮರಣೆ ಮಾಡಲು ನೂರೆಂಟು ಅಡ್ಡಿ ಆತಂಕಗಳು.ಅನೇಕ ವಿಘ್ನಗಳು.
ಸಮಯವಿದ್ದಾಗ ಭಗವಂತನ ಸ್ಮರಣೆ ಮಾಡಲು ಮನಸ್ಸು ಇಲ್ಲ.
ಮನಸ್ಸು ಇದೆ ಆದರೆ ಸ್ಮರಣೆ ಮಾಡಲು ಸಮಯ ಇಲ್ಲ. ಏನೋ ಒಂದು ಕಾರಣ ಮುಂದೂಡಲು.

ನಮಗೆ ಸದಾ ಭಗವಂತನ ಧ್ಯಾನ ಮಾಡಬೇಕು ಅಂದರೆ ಮೊದಲು ಪರಮಾತ್ಮನ ಪಾದದಿಂದ ಆರಂಭವಾಗಿ ಅವನ ಶಿರ ಪರ್ಯಂತರವಾಗಿ ಧ್ಯಾನ ಮಾಡಬೇಕು. 
ಇದು ನಿತ್ಯ ಆಗಬೇಕು.. ಹೊರತಾಗಿ ಅಂತ್ಯಕಾಲದಲ್ಲಿ ಮಾಡುತ್ತೇವೆ ಅಂದರೆ ಕೈಲಾಗದ ಕೆಲಸ.
ಇದಕ್ಕೆ ಮೊದಲ ಹೆಜ್ಜೆ ಶ್ರವಣ.ಸಾಧ್ಯ ವಾದಷ್ಟು ಸಮಯ ಸಿಕ್ಕಿತು ಅಂದರೆ ಭಗವಂತನ ಕತೆ ಗಳನ್ನು ಅವನ ಮಹಿಮೆಯನ್ನು ಕೇಳಿ.ನಂತರ ಮನನ ಮಾಡಿಕೊಂಡು ಅವನ ಗುಣ ಕೀರ್ತನೆ ಮಾಡಬೇಕು. ನಂತರ ಸ್ಮರಣೆ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಭಗವಂತನ ಸ್ಮರಣೆ, ಧ್ಯಾನ ನಮಗೆ  ಅಂತ್ಯಕಾಲದಲ್ಲಿ ಬರಲು ಸಾಧ್ಯ.ಇಲ್ಲವೆಂದರೆ ಇಲ್ಲ.

ಮನುಷ್ಯ ಜನ್ಮ ಬಂದಾಗ ಪ್ರಮುಖವಾಗಿ ಮಾಡುವ ಕೆಲಸದಲ್ಲಿ ಭಗವಂತನ ನಾಮ ಸ್ಮರಣೆ ಕೂಡ ಬಹು ಮುಖ್ಯವಾದ ಕೆಲಸ.
"ನಾರಾಯಣನ ನೆನೆ ಮನವೆ ನಾರಾಯಣನ ನೆನೆ"
ಈ ಮಾತು ಹೇಳಿದ್ದು ಶ್ರೀ ವಾದಿರಾಜತೀರ್ಥ ಗುರುಗಳು.

ಯಾವತ್ತಿಗೂ ಜ್ಞಾನ ದಿಂದ ಕರ್ಮಗಳನ್ನು ಆಚರಣೆ ಮಾಡಬೇಕು.
ಮೊದಲು ಅವನ ಕುರಿತಾದ ಮಹಿಮೆ ಶ್ರವಣ,ನಂತರ ಮನನ,ನಂತರ ನಿರಂತರವಾಗಿ ಅವನ ಧ್ಯಾನ ಮಾಡಬೇಕು.
ಅಂತ್ಯಕಾಲದಲ್ಲಿ ಭಗವಂತನ ನಾಮ ಸ್ಮರಣೆ ಮಾಡುವದು ಈ ಜನ್ಮದ ಪರಮ ಲಾಭ.

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಭಗವಂತನ ನಾಮವನ್ನು ಉಳ್ಳ ಹೆಸರನ್ನು ಇಡುತ್ತಾ ಇದ್ದರು.
ಈ ನೆವದಿಂದ ಆದರು ಅವನ ಸ್ಮರಣೆ ಆಗಲಿ ಎಂದು.
ಅಂತ್ಯಕಾಲದಲ್ಲಿ ಆ ಹೆಸರನ್ನು ಕರೆದಾಗ ಭಗವಂತನ ನಾಮ ಸ್ಮರಣೆ ಆಗಲಿ ಅನ್ನುವುದು ಅದರ ಹಿಂದಿನ ಉದ್ದೇಶ. ಇವಾಗ ಭಗವಂತನ ಕುರಿತಾದ ಹೆಸರು ಇಡುವದು ಬಹಳ ಕಡಿಮೆ. ಇಟ್ಟರು ಸಹ ಕರೆಯುವ ಸಾಧ್ಯತೆ ಕಡಿಮೆ. 

ಮರಣ ಕಾಲ ಸಮೀಪ ವಾದಾಗ ಭಗವಂತನ ವಿರಾಟ್ ರೂಪವನ್ನು ಮಾಡಬೇಕು.
ಅದರ ಚಿಂತನೆ👇👇
ಸಂಪುಟಾಕಾರವಾಗಿರ ತಕ್ಕಂತಹ ಐವತ್ತು ಕೋಟಿ ಯೋಜನ ವಿಸ್ತೀರ್ಣದ ಇಡೀ ಬ್ರಹ್ಮಾಂಡದಲ್ಲಿ ಪರಮಾತ್ಮನು ವ್ಯಾಪಿಸಿದ್ದಾನೆ..

ಅವನ ಪಾದದ ಬುಡದಲ್ಲಿ (೧)ಪಾತಾಳವು,
೨)ಅಗ್ರಭಾಗಗಳಲ್ಲಿ ರಸಾತಲವು,
೩)ಕಾಲಿನ ಗಂಟಿನಲ್ಲಿ ಮಹಾತಲವೂ,
೪),ಕಣ ಕಾಲಿನಲ್ಲಿ ತಲಾತಲವು, ೫)ಮೊಣಕಾಲಿನಲ್ಲಿ ಸುತಲವು, 
೬)ತೊಡೆಗಳಲ್ಲಿ ವಿತಲವು, ೭)ಅತಲವು, ೮)ಕಟಿಪ್ರದೇಶದಲ್ಲಿ ಭೂಲೋಕವು,
೯)ನಾಭಿಯಲ್ಲಿ ಅಂತರಿಕ್ಷ ಲೋಕವು,
೧೦)ಎದೆ ಯಲ್ಲಿ ಜ್ಯೋತಿ ಲೋಕವು, 
೧೧)ಕುತ್ತಿಗೆ ಯಲ್ಲಿ ಮಹರ್ಲೋಕವು,
೧೨)ಮುಖದಲ್ಲಿ ಜನಲೋಕವು,
೧೩)ಹಣೆಯಲ್ಲಿ ತಪೋಲೋಕವು ೧೪)ಶಿರಸ್ಸಿನಲ್ಲಿ ಸತ್ಯಲೋಕವು.

ಹೀಗೆ ಪಾದ ಮೂಲದಿಂದ ಹಿಡಿದು ತಲೆಯ ತನಕ ಎಲ್ಲಾ ಹದಿನಾಲ್ಕು ಲೋಕಗಳು ಭಗವಂತನ ಅವಯವದಲ್ಲಿ ಆಶ್ರಯಿಸಿ ಕೊಂಡಿದೆ.ಇದೇ ಪರಮಾತ್ಮನ ವಿರಾಡ್ರೂಪ.

ಇದು ಎಲ್ಲಾ ದೇವತೆಗಳಿಗೆ,ಸಪ್ತ ದ್ವೀಪ, ಸಮುದ್ರ, ನದಿ,ಮತ್ತು ಹದಿನಾಲ್ಕು ಲೋಕಗಳಿಗೆ ಆಶ್ರಯ ಸ್ಥಾನ ವಾಗಿದೆ.
ಮರಣಕಾಲದಲ್ಲಿ ಇದರ ಚಿಂತನೆ ಮಾಡಬೇಕು. ಸಕಲ ಚೇತನಾಚೇತನ ಪ್ರಪಂಚಕ್ಕೆ ಆಶ್ರಯನಾದ ಆ ಪರಮಾತ್ಮನ ವಿರಾಡ್ರೂಪವನ್ನು ಧ್ಯಾನ ಮಾಡಬೇಕು.
ಮುಂದೆ ವೈರಾಗ್ಯ ಬಗ್ಗೆ ಹೇಳುತ್ತಾರೆ. ನಂತರ ನೋಡೋಣ.
 ಈ ಭಾಗವತಕ್ಕೆ ಪ್ರತಿಪಾದ್ಯನಾಗಿರ ತಕ್ಕಂತಹವನು ವಾಸುದೇವ ರೂಪಿ ಪರಮಾತ್ಮ..ಅವನು ಸರ್ವಜ್ಞ ನಾಗಿದ್ದಾನೆ.ಬ್ರಹ್ಮ ದೇವರಿಗೆ ವೇದವನ್ನು ಉಪದೇಶ ಮಾಡಿದ್ದಾನೆ.
ನಮಗೆ ಬರುವ ತಾಪಗಳನ್ನು ಪರಿಹಾರ ಮಾಡತಕ್ಕವನು ಒಬ್ಬನೇ ಅವನೇ ಭಗವಂತ.
ಅವನು ಮಂಗಳಪ್ರದ.
ಅಂತಹ ಭಾಗವತ ವನ್ನು ನಿತ್ಯ ಶ್ರವಣ, ಪಠಣ ಮಾಡೋಣ
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏


||ಪಿಬತ ಭಾಗವತಂ ರಸಮಾಲಯಂ||
Day11
✍ನಿನ್ನೆಯ ದಿನ ಭಗವಂತನ ದೇಹದಲ್ಲಿ ಆಶ್ರಯಗೊಂಡಂತಹ ಹದಿನಾಲ್ಕು ಲೋಕಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ.
ಅವನ ಪಾದದಿಂದ ಆರಂಭ ಮಾಡಿ ಶಿರಸ್ಸುವರೆಗೆ ಹದಿನಾಲ್ಕು ಲೋಕಗಳನ್ನು ಪರಮಾತ್ಮನು ಹೊಂದಿದ್ದಾನೆ..
ಭಗವಂತನ ವಿರಾಟ್ ರೂಪದ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು, ಅವನ ದೇಹದಿಂದ ಹುಟ್ಟಿದ ದೇವತೆಗಳ ಬಗ್ಗೆ, ಅವನ ದೇಹದ ವರ್ಣನೆ ,ಅಲ್ಲಿ ಯಾವ ದಿಕ್ಕಿನಲ್ಲಿ ಯಾವ ಯಾವ ದೇವತೆಗಳು ಅವನ ಉಪಾಸನೆ ಹೇಗೆ ಮಾಡುವರು ಅನ್ನುವದರ ಬಗ್ಗೆ ವಿಸ್ತಾರವಾದ ವಿವರಣೆ ಮುಂದೆ  ತಿಳಿಸುವ ಪ್ರಯತ್ನ ಮಾಡುವೆ.
ನಾವು ಮನೆಯಲ್ಲಿ  ಭಗವಂತನ‌ ಮೂರ್ತಿಯನ್ನು ಪೂಜಿಸುವಾಗ ಅಥವಾ ದೇವಸ್ಥಾನ ಕ್ಕೆ ಹೋದಾಗ ಅಲ್ಲಿ ಅಭಿಷೇಕ ಮಾಡುವ ಮುಂಚೆ ಭಗವಂತನ ಈ ವಿರಾಟ್ ರೂಪದ ಚಿಂತನೆ ಅವಶ್ಯ ಮಾಡಲೇಬೇಕು.
ಮುಂದೆ ವೈರಾಗ್ಯದ ಬಗ್ಗೆ ಶ್ರೀಶುಕಮುನಿಗಳು ಹೇಳುತ್ತಾರೆ.
ರಾಜನೇ !ಕೇಳು.ವೈರಾಗ್ಯ ಸ್ಥಿರವಾಗಿರಲಿ.ಶಾಪ ನಿಮಿತ್ತವಾಗಿ ಇಲ್ಲಿ ಬಂದಿದ್ದೀಯಾ.ಎಲ್ಲವನ್ನೂ ಮರೆತುಬಿಡು.ಏತಕ್ಕೋಸ್ಕರ ಲೌಕಿಕದ ವಸ್ತುಗಳ,ಪದಾರ್ಥಗಳ ಮೇಲೆ ಆಸೆಪಡಬೇಕು??
"ಭಗವಂತ ನಮಗೆ ಸ್ನೇಹಿತ ನಾಗಿಲ್ಲವೇ.ಗೆಳೆಯನಂದದಿ ಅರ್ಧ ಘಳಿಗೆ ಕ್ಷಣ ಬಿಡದಲೇ ಸಲಹುವ ಸ್ವಾಮಿಯನ್ನು ಮರೆಯಬೇಡ.ಸದಾ ನಮಗೆ ಅವನೇ ರಕ್ಷಣಾ ಮಾಡುವವ ಅನ್ನುವ ಜ್ಞಾನ ಇರಲಿ.ಅಜ್ಞಾನ ಬಾರದಿರಲಿ".
ಮನುಷ್ಯನು ಬದುಕುವಾಗ ಹೇಗೆ ಬದುಕಬೇಕೆಂದು ಹೇಳುತ್ತಾರೆ.
ಹಾಸಿಗೆಗಾಗಿ ಶ್ರಮ ಪಡಬೇಕಾಗಿಲ್ಲ. ನೆಲವೇ ಹಾಸಿಗೆ.ಮೆತ್ತನೆಯ ತಲೆದಿಂಬು ಬದಲಿಗೆ ನಮ್ಮ ತೋಳು ತಲೆದಿಂಬು.ನೀರನ್ನು ಕುಡಿಯಲು ಬಂಗಾರದ,ಬೆಳ್ಳಿಯ ಪಾತ್ರೆ ಬೇಕಿಲ್ಲ.ನಮ್ಮ ಬೊಗಸೆಯೆ ಪಾತ್ರೆ.ಆಹಾರಕ್ಕಾಗಿ ಅನ್ಯರ ಮನೆ ದ್ವಾರಕ್ಕೆ ಹೋಗಿ ಅವರನ್ನು ಆಶ್ರಯವನ್ನು ಹೊಂದದೆ ತನ್ನ ಪಾಲಿಗೆ ಬಂದ ಆಹಾರವನ್ನು ಸ್ವೀಕರಿಸಿ ಸಂತೋಷ ದಿಂದ ಉಣ್ಣಬೇಕು.
"ಇಟ್ಟಾಂಗೆ ಇರುವೆನು ಹರಿಯೇ.".ನದಿ ನೀರನ್ನು ಕುಡಿದುಕೊಂಡು,ಹಣ್ಣು ಹಂಪಲುಗಳನ್ನು ತಿಂದುಕೊಂಡು,ಗುಹೆಗಳಲ್ಲಿ ಮಲಗಿಕೊಂಡಾದರು ಸರಿ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಕಡಿಮೆ ವಸ್ತುಗಳಿಂದ ನಡೆಸಬೇಕು. ಮತ್ತು 
ಸದಾ ಪರಮಾತ್ಮನ ಧ್ಯಾನವನ್ನು ಮಾಡಬೇಕು.
ಭಗವಂತ ನಮ್ಮ ರಕ್ಷಣೆ ಮಾಡಬೇಕಾದಾಗ ಕ್ರೂರಪ್ರಾಣಿಗಳಿಂದ,ದುಷ್ಟಜನರಿಂದ ನಮಗೆ ಏತರ ಭಯ??
ಹೆಚ್ಚಿನ ವಸ್ತುಗಳ ಬಗ್ಗೆ ಮೋಹ ಬೇಡ ಎಂದು ಹೇಳುತ್ತಾರೆ.
🙏🙇‍♂️🙇‍♂️🙇‍♂️🙇‍♂️🙇‍♂️
ಶ್ರೀ ಮದ್ ಭಾಗವತವನ್ನು ಕೇಳುವದೇ ಬಾಳಿನ ಫಲ.ಹೇಳುವದು ಇನ್ನೂ ಮಿಗಿಲು.ಹೇಳಿಸುವದು ಸಹ.ಒಂದೆರಡು ಬಾರಿ ಅವುಗಳ ಪಠಣೆಗೆ,ಶ್ರವಣಗಳಿಗೆ ವಿಶೇಷ ಮಹತ್ವ ವನ್ನು ಪುರಾಣಗಳು ಸಾರಿವೆ.
 ಭಕ್ತಿ,ಶ್ರದ್ದೆ,ನಂಬಿಕೆಯಿಂದ, 
ಶ್ರೀ ಮದ್ ಭಾಗವತದ ಸ್ಕಂಧಗಳ ಅಧ್ಯಾಯದ ಶ್ಲೋಕಗಳು ಮತ್ತು ಆ ಶ್ಲೋಕಾರ್ಧ,ಶ್ಲೋಕಪಾದಗಳ ಶ್ರವಣ ಪಠಣಗಳಿಗು ಸಾವಿರಾರು ಗೋದಾನಗಳ ಫಲ ನಿರೂಪಿತವಾಗಿದೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏


day 12
||ಪಿಬತ ಭಾಗವತಂ ರಸಮಾಲಯಂ||
Day 12.
ದ್ವೀತಿಯ ಸ್ಕಂದ ದಲ್ಲಿ ಬರುವ ಭಗವಂತನ ವಿರಾಟ್ ರೂಪದ ವರ್ಣನೆಯನ್ನು ಶ್ರೀ ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಹೇಳುತ್ತಾರೆ.

ನಿನ್ನೆಯ ದಿನ ಭಗವಂತನ ದೇಹದಲ್ಲಿ ಆಶ್ರಯಗೊಂಡಂತಹ ಹದಿನಾಲ್ಕು ಲೋಕಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ.
ಅವನ ಪಾದದಿಂದ ಆರಂಭ ಮಾಡಿ ಶಿರಸ್ಸುವರೆಗೆ ಹದಿನಾಲ್ಕು ಲೋಕಗಳನ್ನು ಪರಮಾತ್ಮನು ಹೊಂದಿದ್ದಾನೆ..
ಭಗವಂತನ ವಿರಾಟ್ ರೂಪದ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು, ಅವನ ದೇಹದಿಂದ ಹುಟ್ಟಿದ ದೇವತೆಗಳ ಬಗ್ಗೆ, ಅವನ ದೇಹದ ವರ್ಣನೆ ,ಅಲ್ಲಿ ಯಾವ ದಿಕ್ಕಿನಲ್ಲಿ ಯಾವ ಯಾವ ದೇವತೆಗಳು ಅವನ ಉಪಾಸನೆ ಹೇಗೆ ಮಾಡುವರು ಅನ್ನುವದರ ಬಗ್ಗೆ ವಿಸ್ತಾರವಾದ ವಿವರಣೆ ತಿಳಿಸುವ ಪ್ರಯತ್ನ..
ಅದನ್ನು
ಶ್ರೀಮೊದಲಕಲ್ಲು ಶೇಷದಾಸರು ತಮ್ಮ  ಜ್ಞಾನ ಯಜ್ಞ ಸುಳಾದಿ ಯಲ್ಲಿ ಪರಮಾತ್ಮನ ರೂಪಚಿಂತನೆ ಬಗ್ಗೆ ಹೇಳಿದ್ದಾರೆ.
ಇದರ ಬಗ್ಗೆ ಸ್ವಲ್ಪ ತಿಳಿಯೋಣ. 
||ತ್ರಿವಿಡಿ ತಾಳ.||
ಮೇಲು ಭಾಗದಲ್ಲಿ ಶಿರಸ್ಸಿನಲ್ಲಿಗೆ
ದ್ವಿದಶಾಂ|ಗುಲಿ ಮೇಲೆ ದ್ವಿದಶ ದಳಯುಕ್ತ|
ಕೀಲಾಜಲವುಂಟು ಚಂದ್ರಪ್ರಕಾಶದಂತೆ| ಮೂಲರೂಪನಾದ ವಾಸು
ದೇವನ|ಆಲಯವೆನಿಪುದು ಮುಕ್ತಾ ಮುಕ್ತಾರಿಂದ| ವಾಲಗ ಗೊಳುತಿಪ್ಪ ಸರ್ವ ಸಾಕ್ಷಿಯಾಗಿ|||
✍️ಪರಮಾತ್ಮನ ಶಿರಸ್ಸಿನ ಮೇಲೆ ಕಿರೀಟ ಇರುವಲ್ಲಿ ೧೨ ದಳದ ಕಮಲವಿದೆ..
ಅಂದರೆ ನಮ್ಮ ತಲೆಯ ಮೇಲೆ ನಮ್ಮ ಹಸ್ತವನ್ನು ನೇರವಾಗಿ ಇಟ್ಟುಕೊಂಡಾಗ ಕಿರುಬೆರಳಿನ ಮೇಲಿನದು. ಅಲ್ಲಿ ಹನ್ನೆರಡು ದಳದ ಕಮಲವಿದೆ.
ಇದೆ ವೈಕುಂಠಲೋಕ. ಶ್ರೀವಾಸುದೇವ ನಾಮಕ ಭಗವಂತ ಮುಕ್ತಾಮುಕ್ತರಿಗೆ ನಿಯಾಮಕನಾಗಿದ್ದಾನೆ. 
********
||ಅಟ್ಟತಾಳ||
ಸತ್ಯಲೋಕವು ಶೀರ್ಷದಲ್ಲಿ ಇಪ್ಪದು ಕೇಳಿ|
ಸತ್ಯಲೋಕಾಧಿಪನು ಸಹಸ್ರ ರೂಪನ್ನ|
ಭಕ್ತಿಯಿಂದಲಿ ಭಜಿಪ ಸಾಸಿರ| 
ಕೇಸರ ಯುಕ್ತವಾದ ಕಮಲ ಮಧ್ಯದಿ ಪೊಳೆವನ್ನ|
ಕೃತ್ತಿವಾಸನು ಮೊದಲಾದ ಗೀರ್ವಾಣರು| ಭೃತ್ಯರಾಗಿ ಸೇವೆ ಮಾಳ್ಪರು ಕ್ರಮದಿಂದ||
......
✍️ಪರಮಾತ್ಮನ ಶಿರಸ್ಸಿನಲ್ಲಿ ಸಾವಿರದಳದ ಕಮಲವಿದೆ. 
ಇದೆ ಸತ್ಯಲೋಕ. ಶ್ರೀಪುರುಷನಾಮಕ ಭಗವಂತ ಇಲ್ಲಿ ನಿಯಾಮಕ. ಈ ಪರಮಾತ್ಮನನ್ನು ಬ್ರಹ್ಮಾದಿ, ಋಜುಗಳು ಪೂಜೆ ಮಾಡುತ್ತಾರೆ. ಪ್ರತಿಯೊಂದು ದಳಕ್ಕೂ ಭಗವಂತನ ಒಂದೊಂದು ವಿಶ್ವಾದಿ ರೂಪಗಳಿವೆ.
ಹುಬ್ಬಿನ ಮದ್ಯದಲ್ಲಿ 2 ದಳದ ಕಮಲ ಇದೆ. 
ಇದೇ ತಪೋಲೋಕ.. 
ಇಲ್ಲಿ ಶ್ರೀಬ್ರಹ್ಮ ಮತ್ತು ಶ್ರೀ ವಾಯು ದೇವರುಗಳು ಮತ್ತು ಶ್ರೀ ಗರುಡ ದೇವರು ನಿಯಾಮಕರು. ಶ್ರೀ ಕೃಷ್ಣ ಪರಮಾತ್ಮನು ಇಲ್ಲಿ ಸಜ್ಜನರಿಂದ ಪೂಜೆಗೊಳ್ಳುತ್ತಾನೆ.
ಪರಮಾತ್ಮನ ಕಿರುನಾಲಿಗೆಯಲ್ಲಿ 16 ದಳದ ಕಮಲ ಇದೆ.
ಇದೇ ಜನಾಲೋಕ. 
ಇಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮಿ ನಾರಾಯಣರನ್ನು ಪೂಜೆ ಮಾಡುತ್ತಾರೆ.
ಪರಮಾತ್ಮನ ಉರುಸ್ಸು(ವಕ್ಷಸ್ಥಳ ,ಎದೆ)ದಲ್ಲಿ 12 ದಳದ ಕಮಲ ಇದೆ. ಇದೇಮಹರ್ಲೋಕ. ಇಲ್ಲಿ ಶ್ರೀ ಮಹರುದ್ರದೇವರು ವಿಶೇಷವಾಗಿ ಶ್ರೀನರಸಿಂಹದೇವರನ್ನು ವಿಶೇಷವಾಗಿ ಪೂಜಿಸುತ್ತಾರೆ.
ಪರಮಾತ್ಮನ ಹೃದಯದಲ್ಲಿ ಇರುವುದೇ ಸ್ವರ್ಗ ಲೋಕ. 
ಇಲ್ಲಿ 8 ದಳದ ಕಮಲಗಳು ಇವೆ. ಇಲ್ಲಿ ಮೂಲೇಶ ನಾಮಕ ಶ್ರೀನಾರಾಯಣ, ಆತನ ಪಾದಮೂಲದಲ್ಲಿ ಮುಖ್ಯಪ್ರಾಣ ದೇವರು ನಿರಂತರ ಪೂಜೆ ಮಾಡುತ್ತಿರುತ್ತಾರೆ.
 ಪೂರ್ವದಿಕ್ಕಿನಲ್ಲಿ ಪುಷ್ಕರಾಧ್ಯರು, ದಕ್ಷಿಣದಿಕ್ಕಿನಲ್ಲಿ ಋಷಿಗಳು, ಪಶ್ಚಿಮದಿಕ್ಕಿನಲ್ಲಿ ಪಿತೃಗಳು ಮತ್ತು ಉತ್ತರದ ದಿಕ್ಕಿನಲ್ಲಿ ಗಂಧರ್ವರು, ಊರ್ಧ್ವದಿಕ್ಕಿನಲ್ಲಿ ರುದ್ರಾದಿಗಳು ಬಂದು ಪರಮಾತ್ಮನನ್ನು ಸೇವಿಸುತ್ತಾರೆ. 
ಇಲ್ಲೇ ಚಂದ್ರಮಂಡಲ. ಸೂರ್ಯಮಂಡಲ, ಇಲ್ಲಿ ಶ್ರೀಭೂದುರ್ಗಾ ಸಮೇತನಾದ ಶ್ರೀ ಪ್ರಾಜ್ನ್ಯನಾಮಕ ಪರಮಾತ್ಮ ಆಗ್ರೆಶ ಎಂಬ ನಾಮದಿಂದ ಇದ್ದಾನೆ ಎಂದು ಚಿಂತಿಸಬೇಕು. 
ನಾವು ಬಿಂಬ ಮೂರ್ತಿ ಚಿಂತನೆ ಮಾಡುವಾಗ ಇದನ್ನೇ ಮಾಡಬೇಕು.
ಪರಮಾತ್ಮನ ನಾಭಿಯಲ್ಲಿ 6 ದಳದ ಕಮಲ ಇದೆ. ಭುವರ್ಲೋಕ ನಿಯಾಮಕ ಶ್ರೀಗಣಪತಿ ಅಂತರ್ಗತ ಶ್ರೀವಿಶ್ವಂಭರ.ಮತ್ತು ಶ್ರೀವರಾಹರೂಪ ದಿಂದ ಈ ಭೂಮಂಡಲವನ್ನೇ ತಂದ ಪರಮಾತ್ಮ. 
ಇಲ್ಲಿ ವಿಶ್ವಂಭರ, ಶ್ರೀ ಕೃಷ್ಣನ ಷಣ್ಮಹಿಶಿಯರು ಇದ್ದಾರೆ. ಶ್ರೀಪ್ರದ್ಯುಮ್ನ ರೂಪ ಇಲ್ಲಿ ನಿಂತಿದೆ. 
ನಾಭಿಯಕೆಳಗೆ 4 ದಳದ ಕಮಲ.ಇಲ್ಲಿ ಭೂಲೋಕ. ಇಲ್ಲಿ ವೇದಾಭಿಮಾನಿಗಳು ಬೃಹಸ್ಪತಿ, ಬುಧ, ಚಂದ್ರ, ಶನೀಶ್ವರ, ಸಪ್ತಮರುತ್ತುಗಳು ಇಲ್ಲಿ ಇದ್ದಾರೆ. ಇವರಿಗೆಲ್ಲ ಶ್ರೀಅನಿರುದ್ಧರೂಪದಿಂದ ಪರಮಾತ್ಮ ದರ್ಶನ ಕೊಡುತ್ತಾನೆ. 
ಪರಮಾತ್ಮನ ತೊಡೆಗಳಿಂದ ಹಿಡಿದು ಪಾದದವರೆಗಿನ ಲೋಕಗಳಲ್ಲಿ ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸತಾಳ, ಪಾತಾಳ,ಲೋಕಗಳು 
ಇಲ್ಲಿ 
ಪರಮಾತ್ಮನ ವಿಶೇಷವಾದ ಶ್ರೀಅನಿರುದ್ಧ, ಶ್ರೀಪ್ರದ್ಯುಮ್ನ, ಶ್ರೀಸಂಕರ್ಷಣ, ಶ್ರೀವಾಸುದೇವ, ಶ್ರೀನಾರಾಯಣ, ಹಾಗು ಶ್ರೀವಾಮನ ರೂಪಗಳು. 
ಹೀಗೆ ಪರಮಾತ್ಮನ 14 ಲೋಕಗಳಿಗೆ ಆಧಾರವಾದ ವಿರಾಟ್ ರೂಪ   ಚಿಂತನೆ ನಮಗೆ ಅನಂತ ಪುಣ್ಯಗಳನ್ನು ಕೊಡುತ್ತದೆ. 
ಪ್ರಾತಃ ಕಾಲದಲ್ಲಿ ಅವಶ್ಯಕ ಚಿಂತನೆ ಇದನ್ನು ಮಾಡಲೇಬೇಕು.
ಇಡೀ ಬ್ರಹ್ಮಾಂಡವನ್ನು ಶ್ರೀಶೇಷದೇವರು ಧರಿಸಿದ್ದಾರೆ.ಅವರನ್ನು ಕೂರ್ಮರೂಪದ ಶ್ರೀವಾಯುದೇವರು ಹೊತ್ತಿರುವರು. 
ಶ್ರೀ ಮುಖ್ಯಪ್ರಾಣದೇವರನ್ನು ಶ್ರೀಲಕ್ಷ್ಮೀದೇವಿಯು. , ಶ್ರೀಲಕ್ಷ್ಮಿದೇವಿಯನ್ನು ಕೂರ್ಮರೂಪದಿಂದ ಶ್ರೀವಿಷ್ಣುಪರಮಾತ್ಮ ಹೊತ್ತಿದ್ದಾನೆ.
ಪ್ರತಿಯೊಬ್ಬ ಜೀವಿಯನ್ನು ಪರಮಾತ್ಮ ಹೀಗೆ  ಜಗತ್ತನ್ನು ಹೊತ್ತಿದ್ದಾನೆ ಎಂದು ಚಿಂತನೆ ಮಾಡಬೇಕು. ಮತ್ತು ಪ್ರತಿಯೊಬ್ಬ ಮನುಷ್ಯರು ಈ ವಿರಾಟ್ರೂಪವನ್ನು ಚಿಂತಿಸಬೇಕು. 
ಮುಂದೆ ಹೇಳುತ್ತಾರೆ.
ಧಾರಿತ್ರಿಯೊಳಗೆ ಇದ ತಿಳಿದ ಮನುಜನು|
ಮೃತ್ಯು ರೂಪವಾದ ಸಂಸಾರ ದೂರನು|
ಪಾರತ್ರಿಕವಾದ ಸುಖದಿ ನಿತ್ಯನು ಕಾಣೋ||
....
ಕರ್ತೃನೆನಿಪ ಗುರು ವಿಜಯವಿಠ್ಠಲ ರೇಯಾ| ಸತ್ಯವಾದ ಪದವಿ ಐದಿಪ ಶೀಘ್ರದಿ||
***"
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಆಗದೆನೆಗೆ ಅಬುಜನಾಭ| ಭಾಗವತವ ಕೇಳೆ ನಾನು|
ಹ್ಯಾಗೆ ನಾ ನಿನ್ನ ದಾಸನಾಗುವೆನು| ಭವ ನೀಗುವೆನು||

🙏ಶ್ರೀಕಪಿಲಾಯ ನಮಃ

[1:08 PM, 9/3/2020] Prasad Karpara Group: ||ಪಿಬತ ಭಾಗವತಂ ರಸಮಾಲಯಂ||
Day 13
✍ನಿನ್ನೆಯ ದಿನ ಶ್ರೀಶುಕಮುನಿಗಳು ಪರಿಕ್ಷೀತ ರಾಜನಿಗೆ ಭಗವಂತನ ರೂಪವನ್ನು ವರ್ಣನೆ ಮಾಡುತ್ತಾ ಆ ನಂತರ ವೈರಾಗ್ಯ ವೆಂದರೇನು??ಹೇಗಿರಬೇಕು ಅಂತ ಹೇಳಿದ್ದಾರೆ.
ಮುಂದೆ ಹೇಳುತ್ತಾರೆ.
ಎಷ್ಟು ದಿನ ನಮ್ಮ ಆಯಸ್ಸು ಕಳೆದಿದ್ದೇವೆ ಎನ್ನುವುದಕ್ಕಿಂತ ಎಷ್ಟು ದಿನ ನಾವು ಭಗವಂತನ ನಾಮ ಸ್ಮರಣೆ, ಮತ್ತು ಅವನ ಹಾಗು ಅವನ ಭಕುತರ ಸೇವೆಗೆ ಆ ಆಯುಸ್ಸು ಮತ್ತು ಕಳೆದ ದಿನಗಳು ಮತ್ತು ಸಮಯ ಉಪಯೋಗ ಮಾಡಿಕೊಂಡು ಇದ್ದೇವೆ ಎನ್ನುವದು ನಿಜವಾದ ಸಾಧನೆ.
ಅನೇಕ ವರ್ಷಗಳು ಹದ್ದು ಬದುಕಿದಂತೆ ಬದುಕಿ ಭಗವಂತನ ನಾಮ ಸ್ಮರಣೆ,ಅವನ ಸೇವೆ ಮಾಡದೇ ದಿನ, ವಾರ, ತಿಂಗಳು,  ವರ್ಷಗಳನ್ನು ಕಳೆಯುತ್ತಾ ಇದ್ದರೆ ಬದುಕಿದ್ದು ಪ್ರಯೋಜನ ಇಲ್ಲ.
ಆದರು ಸಹ ಯಾವಾಗಲಾದರು ಒಮ್ಮೆ ನಮ್ಮ ಮನಸ್ಸಿನ ಒಳಗಡೆ ಭಗವಂತನ ಬಗ್ಗೆ ಕಿಂಚಿತ್ತೂ ಎಚ್ಚರಿಕೆ ಬಂದಾಗ ಅವನ ಸೇವೆ ಅವನ ಸ್ಮರಣೆ ಬಂದಾಗ ಸಮಯ ಅತಿ ಕಡಿಮೆ ಇದ್ದರು ಸಹ ಉತ್ತಮ ಕಾರ್ಯಗಳನ್ನು ಮಾಡಲು ವಿನಿಯೋಗ ಮಾಡಿಕೊಳ್ಳಲು ಬಹುದು ಎಂದು ಹೇಳುತ್ತಾರೆ.

ಒಂದು ದೃಷ್ಟಾಂತ ಇಲ್ಲಿ ನೆನಪಿಗೆ ಕೊಡಬಹುದು..
 ಒಮ್ಮೆ ಶ್ರೀಮಾರ್ಕಂಡೇಯ ಮುನಿಗಳ ಆಶ್ರಮಕ್ಕೆ ಶ್ರೀಪರಾಶರ ಮುನಿಗಳು ಬಂದಿದ್ದಾರೆ.ಏಳು ವರುಷದ ಬಾಲಕರು ಅವರು.ಶ್ರೀಮಾರ್ಕಂಡೇಯ ಮುನಿಗಳು ಅವಾಗಲೇವೃದ್ದರು.ಭಗವಂತನ ಅನುಗ್ರಹ ದಿಂದ ಅವರಿಗೆ ಇದ್ದ ಅಲ್ಪ ಆಯುಸ್ಸು ಕಳೆದು ಸಪ್ತಕಲ್ಪಗಳ ಕಾಲ ಆಯುಸ್ಸು ಪಡೆದವರು.ಅಲ್ಲದೇ ಭಗವಂತನ ಅನುಗ್ರಹದಿಂದ ಪ್ರಳಯ ಕಾಲದಲ್ಲಿ ಅವನ ದಿವ್ಯವಾದ ರೂಪ ವೈಭವವನ್ನು ನೋಡಿ ಆನಂದಪಟ್ಟವರು.
ಇಂತಹವರು ಶ್ರೀಪರಾಶರ ಮುನಿಗಳಿಗೆ ಸಾಷ್ಟಾಂಗ ನಮಸ್ಕಾರಮಾಡುತ್ತಾರೆ..ನೋಡುವವರಿಗೆ ವಿಚಿತ್ರ ಎನಿಸುವದು.ವಯೋವೃದ್ದರಾದ ಶ್ರೀಮಾರ್ಕಂಡೇಯ ಮುನಿಗಳು ಬಾಲಕ ಪರಾಶರ ಮುನಿಗಳಿಗೆ ಎರಗಿ ಸಾಷ್ಟಾಂಗ ನಮಸ್ಕಾರ ಮಾಡುವದು ವಿಚಿತ್ರ ವಾಗಿ ತೋರುವುದು.
ಆಗ ಅವರು ಹೇಳುತ್ತಾರೆ. "ಅರಿಯದವರಿಗೆ ನಾನು ಹಿರಿಯನೆಂದು ತೋರಬಹುದು.ಜ್ಞಾನಿಗಳ ದೃಷ್ಟಿ ಯಲ್ಲಿ ನಾನು ಹಿರಿಯನಲ್ಲ.ಪರಾಶರರು ಹಿರಿಯರು".
ಕ್ಷಣ, ದಿನ ಕಳೆದರೆ ಸಾಕು ಆಯುಸ್ಸು ಬೆಳೆಯುತ್ತದೆ ಅಂತ ನಮ್ಮ ಭಾವನೆ. ಅದು ಎಷ್ಟು ನಿಜ.??
ಎಷ್ಟು ಕ್ಷಣಗಳು,ದಿನಗಳು, ನಾವು ಶ್ರೀಹರಿಯ ಸ್ಮರಣೆ ಯನ್ನು ಮಾಡುತ್ತಾ ಕಳೆದಿದ್ದೇವೆಯೋ ಆ ಕ್ಷಣ ಮತ್ತು ದಿನಗಳು ಅದನ್ನು ಜ್ಞಾನಿಗಳು ಕಲೆಹಾಕಿ ನಮ್ಮ ಆಯುಸ್ಸುಪರಿಗಣನೆಗೆ ತೆಗೆದುಕೊಳ್ಳುವರು.
ಶ್ರೀಹರಿಯ ಸ್ಮರಣೆ ಇಲ್ಲದ ಕ್ಷಣಗಳು ದಿನಗಳು ಬರಡು ಕ್ಷಣಗಳು.ಅಗಮ್ಯ ಮಹಿಮನಾದ ಭಗವಂತನ ನಾಮ ಮಹಿಮೆ ಮತ್ತು ಅವನ ಕುರಿತಾದ ಅತೀ ಅಲ್ಪ ಜ್ಞಾನ ಮುಂದೆ ಈ ದೀರ್ಘವಾದ ಆಯುಸ್ಸು ಏನೇನು ಬೆಲೆ ಇಲ್ಲ.
ಶ್ರೀಹರಿಯ ಸ್ಮರಣೆ ಇಂದ ಕಳೆದ ಕ್ಷಣಗಳು ಮಾತ್ರ ಸರ್ವಾರ್ಥಪ್ರದವಾಗುತ್ತವೆ.ಇದರಲ್ಲಿ ಯಾವುದೇ ಸಂದೇಹ ಇಲ್ಲ.ಬರಡಾದ ಕ್ಷಣಗಳನ್ನು ಜ್ಞಾನಿಗಳು ನಮ್ಮ ಆಯುಸ್ಸು ನಲ್ಲಿ ಪರಿಗಣನೆಗೆ ತೆಗೆದುಕೊಳ್ಳುವದಿಲ್ಲ.
ಈ ಅನುಸಂಧಾನ ಇಟ್ಟು ಕೊಂಡು ಬದುಕುವವನ ಬದುಕು ಬಂಗಾರದ ಬದುಕು.ಅವನೇ ವಯಸ್ಸಿನಲ್ಲಿ ಅಧಿಕ.ಅವನೇ ಎಲ್ಲರಿಗೂ ಹಿರಿಯ.ಶ್ರೀಹರಿಯ ಸೇವಕನಾದ ಅವನು ಸ್ವಯಂ ಹಿರಿಯ.ಅವನು ಗೌರವಕ್ಕೆ ಅರ್ಹನಾಗುತ್ತಾನೆ.
ಅಂತಹವರ ಅವಮಾನ,ನಿಂದನೆ,ನಮಗೆ ನೂರಾರು,ನೀಚ ಯೋನಿ ಗಳಿಗೆ,ಸಾವಿರಾರು ಬೇನೆಗಳಿಗೆ ಕಾರಣವಾಗುತ್ತದೆ.
(ಇದಕ್ಕೆ ನಾವು ಅನೇಕ ಹರಿದಾಸರ ಜೀವನ ಚರಿತ್ರೆಯನ್ನು ನೋಡಬಹುದು)
"ಪ್ರಕೃತ ಏಳು ವರ್ಷದ ನಿಮ್ಮ ಆಯುಸ್ಸು ನಲ್ಲಿ ನೀವು ಪ್ರತಿ ಕ್ಷಣವು ಬರಡಾಗಿಲ್ಲ.ಭಗವಂತನ ನಾಮ ಸ್ಮರಣೆ ಮಾಡುತ್ತಾ ಇದ್ದೀರಿ.ನಿಮ್ಮ ಆಯುಸ್ಸು ಸಫಲವಾಗಿದೆ.ಜ್ಞಾನಿಗಳು ದೃಷ್ಟಿ ಯಲ್ಲಿ ನೀವು ಹಿರಿಯರು.ನಾವು ಆಲಸಿಗಳು.ಸಾವಿರಾರು ವರ್ಷ ಬಾಳಿದರು ಹರಿಯನ್ನು ನೆನೆಯದೇ ಬಹಳ ವ್ಯರ್ಥವಾಗಿ ಕಾಲವನ್ನು ಕಳೆದಿದ್ದೇವೆ. ನಾವು ಭಗವಂತನ ನಾಮ ಸ್ಮರಣೆ ಅವನ ಸೇವೆ ಮಾಡಿದ ಕ್ಷಣಗಳ ಎಣಿಕೆಯನ್ನು ಮಾಡಿದರೆ ಐದು ವರ್ಷವಾದರು ತುಂಬುತ್ತದೆ ಇಲ್ಲವೋ ಗೊತ್ತಿಲ್ಲ. ಹೀಗಾಗಿ ನೀವೇ ಹಿರಿಯರು. ಹಾಗಾಗಿ ಭಕ್ತಿ ಯಿಂದ ನಿಮಗೆ ನಮಸ್ಕಾರ ಮಾಡಿದ್ದು ಹೊರತಾಗಿ ವ್ಯವಹಾರ ಕ್ಕಾಗಿ ಅಲ್ಲ" ಅಂತ ಶ್ರೀಮಾರ್ಕಂಡೇಯ ಮುನಿಗಳು ಶ್ರೀಪರಾಶರ ಮುನಿಗಳ ಬಳಿ ಅರಿಕೆ ಮಾಡಿಕೊಳ್ಳುವ ರು.
  ಶ್ರೀಮಾರ್ಕಂಡೇಯರು ಸ್ವತಃ  ಪ್ರತ್ಯಕ್ಷ್ಯವಾಗಿ ಭಗವಂತನ ರೂಪವನ್ನು ಕಂಡವರು.ಅವನಿಂದ ಸಪ್ತ ಕಲ್ಪಗಳ ಆಯುಸ್ಸು ಪಡೆದ ಅವರೇ ಹಾಗೇ ಹೇಳಿರಬೇಕಾದರೆ...
ಆ ಮಾತನ್ನು ಪರಿಗಣನೆಗೆ ತೆಗೆದುಕೊಂಡರೆ ನಮ್ಮ ಆಯುಸ್ಸು ಒಂದು ಗಂಟೆ ಅಥವಾ ಒಂದು ದಿನವು ಆಗಿರಲು ಸಾಧ್ಯ ವಿಲ್ಲ.ಇದು ಸ್ಪಷ್ಟವಾಗಿ ಕಾಣುತ್ತದೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ||
🙏ಶ್ರೀ ಕಪಿಲಾಯ ನಮಃ🙏


||ಪಿಬತ ಭಾಗವತಂ ರಸಮಾಲಯಂ|||
Day14
ಶ್ರೀಶುಕಮುನಿಗಳು ಮುಂದುವರೆಸುತ್ತ ಪರೀಕ್ಷಿತ್ ರಾಜನಿಗೆ ಹೇಳುತ್ತಾರೆ. 
ಯಾವ ದಿನ ಸಜ್ಜನರು ಸೇರುತ್ತಾರೋ ಆಗ ಅವರಿಂದ ಬರುವ ಭಗವಂತನ ಕುರಿತಾದ ಮಾತುಗಳೇ ಅದೇ ಶ್ರೀಹರಿಯಕಥೆ. 
ಪರಮಾತ್ಮನ ಕಥೆಯನ್ನು ಬಿಟ್ಟು ಒಂದೊಂದು ಕ್ಷಣ ಕಳೆಯುವುದೇ ವ್ಯರ್ಥ. ಹೀಗೆ ಬಹುಕಾಲ ಬದುಕಿದ್ದರು ವ್ಯರ್ಥ. 
ಮರಗಿಡಗಳು ಬದುಕುತ್ತವೆ. ನಾಯಿ ನರಿ ಹಂದಿಗಳು ಆಹಾರ ತಿಂದು ಮಲ ವಿಸರ್ಜನೆ ಮಾಡುವುದ್ದಿಲ್ಲವೇ..ನಾವು ಮಾನವರು ಹೀಗೆ ಬದುಕಿದ್ದರೆ ಮಾನವ ಜನ್ಮದ ಬೆಲೆಯೇನು.?? 
ಶ್ರೀಹರಿಯ ಚರಿತ್ರೆ ಕೇಳದವನು ಪ್ರಾಣಿಗಳಿಗೆ ಸಮ.
ಶ್ರೀಹರಿಯ ಕತೆ ಕೇಳದ ಕಿವಿಗಳು ಬೆಟ್ಟದ ಮೇಲಿನ ಗುಹೆಗಳಿಗೆ ಸಮ. 
ಭಗವಂತನ ಕುರಿತಾದ ಕೀರ್ತನೆ ಮಹಿಮೆಯನ್ನು ಹಾಡದ ನಾಲಿಗೆ ಕಪ್ಪೆಗಳಿಗೆ ಸಮ.
ಶ್ರೀಹರಿಗೆ ಎರಗದ ತಲೆ ಕಲ್ಲು ಬಂಡೆ. ಶ್ರೀಹರಿಯ ಪೂಜಿಸದ ಕೈಗಳು ಹೆಣದಕೈಗಳು. ಶ್ರೀಹರಿಯ ಪ್ರತಿಮೆ ನೋಡದ ಕಣ್ಣು ನವಿಲುಗರಿಯಲ್ಲಿರುವ ಕಣ್ಣು. 
ಶ್ರೀಹರಿಯ ಕ್ಷೇತ್ರ ಗಳ ಯಾತ್ರೆಗಳನ್ನು ಮಾಡದ ಕಾಲು ಮರದ ಕಾಲುಗಳು. ಶ್ರೀಹರಿಯ ಮತ್ತು ಅವನ ಭಕ್ತರ ಪಾದ ಧೂಳಿಯನ್ನು ಬಯಸದವನು,ಮತ್ತು ಅದನ್ನು ಧರಿಸದವನು ಉಸಿರಾಡುವ ಹೆಣ. ಶ್ರೀಹರಿಯ ಕಥೆಯನ್ನು ಕೇಳುವಾಗ ಅಥವಾ ಓದುವಾಗ ಏಕಾಗ್ರತೆ ಇಲ್ಲದ ಮನಸ್ಸು ಕಲ್ಲು ಎಂದು ಶ್ರೀಪರೀಕ್ಷಿತ್ ರಾಜರಿಗೆ ಶ್ರೀಶುಕಮುನಿಗಳು ವಿವರಿಸಿ ಹೇಳುತ್ತಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀ ಕಪಿಲಾಯ ನಮಃ

 |ಪಿಬತ ಭಾಗವತಂ ರಸಮಾಲಯಂ||
Day 15
ನಿನ್ನೆಯ ದಿನ ಶ್ರೀಶುಕಮುನಿಗಳು ಪರೀಕ್ಷಿತ ರಾಜನಿಗೆ ಶ್ರೀಹರಿಯ ನಾಮ ಸ್ಮರಣೆಯ ಮಹತ್ವದ ಬಗ್ಗೆ ಹೇಳಿದ್ದಾರೆ. ನಂತರ ಮುಂದುವರಿಸುತ್ತಾರೆ.
ಭಗವಂತನ ಅವಯವಗಳ ಬಗ್ಗೆ ಚಿಂತನೆ ಮಾಡುವದರಿಂದ ನಮ್ಮ ಒಳಗಡೆಇರುವ ತಮೋ ಗುಣ ಕಳೆಯುತ್ತದೆ.
ದೇವರಿಗೆ ನೈವೇದ್ಯ ಮಾಡುವ ಸಮಯದಲ್ಲಿ ನಾವು ದ್ವಾದಶ ಸ್ತೋತ್ರವನ್ನು ಪಾರಾಯಣ ಮಾಡುತ್ತೇವೆ.ಅದರಲ್ಲಿ ಮೊದಲನೆಯ ಅಧ್ಯಾಯ ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ ಎಂದು ಶ್ರೀ ಮಧ್ವಾಚಾರ್ಯರು ಭಗವಂತನ ರೂಪ ಚಿಂತನೆ ಅದರಲ್ಲಿ ಹೇಳಿದ್ದಾರೆ.ಅದನ್ನು ಬಲ್ಲವರಿಂದ ತಿಳಿಯಬಹುದು.
 ಆನಂತರ ಶ್ರೀಶುಕಮುನಿಗಳು ಭಗವಂತನ ಗುಣಗಳನ್ನು ಹೇಳಿದ್ದಾರೆ.
ಶ್ರೀ ಹರಿಯ ಗುಣಗಳು ಅನಂತ.ಅವನ ರೂಪಗಳು ಅನಂತ.ಅವನ ಮಹಿಮೆಯನ್ನು ತಿಳಿಯಲು ಶ್ರೀರಮಾ ದೇವಿಗು ಸಾಧ್ಯವಿಲ್ಲ.
ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ ತ್ರಿಗುಣಮಾನಿನಿ ಮಹಾಲಕುಮಿ  ಸಂತೈಸಲು ಅನುದಿನವು.
ಮತ್ತು 
ಎನ್ನಮ್ಮ ಸಿರಿದೇವಿ ಇನ್ನೂ ಅರಿಯಲು ನಿನ್ನ ಮಹಿಮೆ.ಕುನ್ನಿ ಮಾನವ ನಾನೇನು ಬಲ್ಲೆನೋ ಎನ್ನುವ ದಾಸರ ವಾಕ್ಯ..
ಹೀಗೆ ಮಹಾಲಕ್ಷ್ಮಿ ದೇವಿಯು ನಿತ್ಯವೂ ಭಗವಂತನ ರೂಪ ಗುಣಗಳನ್ನು ಎಣಿಸುತ್ತಾ ಇರುವಳು ಎಂಬುದು ಹಿರಿಯರವಚನ.
ತದನಂತರ ನಾಲ್ಕು ಮುಖದ ಶ್ರೀಬ್ರಹ್ಮದೇವರು, ಸಾವಿರ ಮುಖ, ಸಾವಿರ ನಾಲಿಗೆಯುಳ್ಳ ಶ್ರೀಶೇಷದೇವ,ಪಂಚ ಮುಖದ ಶ್ರೀ ರುದ್ರ ದೇವರು,ಸಾವಿರ ಕಣ್ಣಿನ ಶ್ರೀಇಂದ್ರದೇವ,ಆರು ಮುಖದ ಶ್ರೀಸ್ಕಂಧದೇವ,ದೇವಗುರುವಾದ,ವಾಚಸ್ಪತಿ ಎನಿಸಿದ ಶ್ರೀಬೃಹಸ್ಪತಿ ಆಚಾರ್ಯ ಇವರೆಲ್ಲರೂ ಒಟ್ಟಾಗಿ ಸರ್ವಕಾಲ ಗುಣಿಸಿದರು,ಎಣಿಸಿದರು ಶ್ರೀ ಹರಿಯ ಮಹಿಮೆ ಗುಣಗಳನ್ನು ತಿಳಿಯಲು ಅಸಾಧ್ಯ.
ನಂತರ ಮುಂದೆ ಹೇಳುತ್ತಾರೆ.
ಪ್ರಳಯಕಾಲದಲ್ಲಿ ಪರಮಾತ್ಮನು ಯೋಗ ನಿದ್ರೆ ಯಲ್ಲಿ ಇರುತ್ತಾನೆ. ಅದರಲ್ಲಿ ಬ್ರಹ್ಮ ದೇವರ 87.5ವರ್ಷ ಪ್ರಳಯ ಕಾಲ,೧೨.೫ವರ್ಷಗಳ ಕಾಲ ಸೃಷ್ಟಿ ಕಾರ್ಯ.
ಪ್ರಳಯ ಕಾಲ ಮುಗಿದ ಮೇಲೆ ಮಹಾಲಕ್ಷ್ಮಿ ದೇವಿ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾಳೆ.ಸೃಷ್ಟಿ ಕಾರ್ಯ ಆರಂಭಿಸು ಎಂದು.ಅದರಿಂದ ಪರಮಾತ್ಮನು ಎಚ್ಚೆತ್ತಗೊಂಡವನಂತೆ ನಟಿಸಿ ಸೃಷ್ಟಿ ಕಾರ್ಯಪ್ರಾರಂಭ ಮಾಡುತ್ತಾನೆ.
ನಾನು ಅನೇಕ ರೂಪಗಳನ್ನು ಧಾರಣೆ ಮಾಡಬೇಕು.
 ಮತ್ತು ಚೇತನಪ್ರಪಂಚ ಸೃಷ್ಟಿ ಮಾಡಿ ಅದರೊಳಗೆ ಅದೇನಾಮದಿಂದ ಪ್ರವೇಶ ಮಾಡಬೇಕು. ಅದರದ್ದೇ ಆಕಾರ,ಅದೇ ಹೆಸರಿನಿಂದ ಒಳಗಡೆ ಪ್ರವೇಶ ಮಾಡಬೇಕು. 
ಬ್ರಹ್ಮ ದೇವರ ಸೃಷ್ಟಿ ಮಾಡಿ ಅವರೊಳಗಡೆ ಅದೇ ಹೆಸರಿನಿಂದ ಪ್ರವೇಶಮಾಡಿ ಸೃಷ್ಟಿ ಕಾರ್ಯಗಳನ್ನು ಆರಂಭಿಸಬೇಕು..
ಆನಂತರದಲ್ಲಿ ಭಗವಂತ ೨೪ತತ್ವಗಳನ್ನು ಸೃಷ್ಟಿ ಮಾಡುತ್ತಾನೆ.ಅದಕ್ಕೆ ಅಭಿಮಾನಿ ದೇವತೆಗಳ ಸೃಷ್ಟಿ ಸಹ ಆಗಿದೆ.ನಂತರದಲ್ಲಿ ಭಗವಂತನ ನಾಭಿಯಲ್ಲಿ ಕಮಲ ಸೃಷ್ಟಿ ಯಾಗಿದೆ.ಆ ಕಮಲದಲ್ಲಿ ಬ್ರಹ್ಮ ದೇವರು ಸೃಷ್ಟಿ ಯಾಗಿದ್ದಾರೆ.ಆ ಹದಿನಾಲ್ಕು ದಳದ ಕಮಲದಲ್ಲಿ ಬ್ರಹ್ಮ ದೇವರನ್ನು ಹುಟ್ಟಿಸಿದ ಭಗವಂತ.ಅವಾಗ ಬ್ರಹ್ಮ ದೇವರು ಸುತ್ತಲೂ ನೋಡಿದರು ಯಾರು ಕಾಣಲಿಲ್ಲ. 
ನಾನೊಬ್ಬನೇ ಇದ್ದೀನಲ್ಲ ಎಂದು ಗಾಭರಿಗೊಂಡಂತೆ ನಟಿಸಿದರು. ಪರಮಾತ್ಮನ ದರುಶನ ಆಗಲಿಲ್ಲ. ನಾಲ್ಕು ಮುಖ ಮಾಡಿಕೊಂಡು ಎಲ್ಲಾ ಕಡೆ ಹುಡುಕಿದರು ಭಗವಂತ ಕಾಣಲಿಲ್ಲ. ಆಗ ಅಶರೀರವಾಣಿ ಆಗಿದೆ.ತಪ ತಪ ಅಂತ ಕೇಳಿಸಿದೆ..
ಪರಮಾತ್ಮನ ಕಾಣಬೇಕಾದರೆ ತಪಸ್ಸು ಮಾಡಬೇಕು ಎಂದು ಸೂಚನೆ ಆಗಿದೆ.ನಂತರ ತಮ್ಮ ಆಯಸ್ಸು ಅರ್ಧಭಾಗ ೫೦ವರುಷಗಳ ಕಾಲ ತಪಸ್ಸು ಆಚರಣೆ ಮಾಡುತ್ತಾರೆ.ನಂತರ ಭಗವಂತನ ದರುಶನ ವಾಗಿ ಅವನಿಂದ ಉಪದೇಶ ಪಡೆಯುತ್ತಾರೆ.ಸೃಷ್ಟಿ ಕಾರ್ಯಮಾಡಲು ಭಗವಂತ ಆಜ್ಞೆಯನ್ನು ಮಾಡುತ್ತಾನೆ. ನನಗೆ ಬಂಧಕವಾಗುತ್ತದೆ ಈ ಕಾರ್ಯ ಅಂತ ಬ್ರಹ್ಮ ದೇವರು ಅಂದಾಗ ಭಗವಂತ ಅವರಿಗೆ ನಾಲ್ಕು ಶ್ಲೋಕಗಳನ್ನು ಉಪದೇಶ ಮಾಡಿದ.ಅದೇ ಚತುಃಶ್ಲೋಕಿ ಭಾಗವತ ಅಥವಾ ಮೂಲ ಭಾಗವತ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ವಾಸುದೇವಾಯ 
ನಮಃ🙏

||ಪಿಬತ ಭಾಗವತಂ ರಸಮಾಲಯಂ||
Day16
ನಿನ್ನೆಯ ದಿನ ಚತುಃಶ್ಲೋಕಿ  ಭಾಗವತದ ಬಗ್ಗೆ ಕೇಳಿದ್ದೇವೆ.
ಇದರಲ್ಲಿ ಅನೇಕ ಪ್ರಮೇಯಗಳು ಇದ್ದಾವೆ.
ಅದರಲ್ಲಿ ಭಗವಂತ ಶ್ರೀ ಬ್ರಹ್ಮ ದೇವರಿಗೆ ಹೇಳಿದ್ದಾನೆ.
ಸೃಷ್ಟಿ ಮೊದಲಿಗೆ,ನಂತರ ಪ್ರಳಯ ಕಾಲದಲ್ಲಿ ಉಳಿದು ಕೊಳ್ಳುವ ನಾನೊಬ್ಬನೇ.ಎಲ್ಲಾ ಕಾಲದಲ್ಲಿ ನಾನು ಶಾಶ್ವತ ವಾಗಿ ಇರುವವನು.ನನಗೆ ಯಾರಿಂದಲು ಪ್ರಯೋಜನವಾಗಲಿ ಬಾಧೆಆಗಲಿ ಇಲ್ಲ.ಎಲ್ಲವು ನನ್ನ ಅಧೀನ.
ನಂತರ ಒಂದು ಪ್ರಮೇಯ ಕೊಡುತ್ತಾನೆ. ಗಡಿಗೆ ಮಾಡುವಾಗ ಬಳಸುವ ಮಣ್ಣು ಗಡಿಗೆ ಒಳಗಡೆ ಇದೆ.ಮತ್ತು ಗಡಿಗೆ ಹೊರಗಡೆ ಸಹ ಇದೆ.ಅದರಂತೆ ನಾನು ಎಲ್ಲರ ಒಳಗಡೆ ಹೊರಗಡೆ ಸೇರಿಕೊಂಡಿದ್ದೇನೆ.ದಾರ ಅಥವಾ ನೂಲು ಹೇಗೆ ಬಟ್ಟೆಯ ಒಳಗಡೆ ಮತ್ತು ಹೊರಗಡೆ ಇದೆಯೋ ಅದರಂತೆ ನಾನು ಸಹ ಎಲ್ಲರ ಒಳಗಡೆ ಮತ್ತು ಹೊರಗಡೆ ಸೇರಿರುತ್ತೇನೆ.ಪ್ರತಿಯೊಂದು ಚೇತನಾಚೇತನ ಪ್ರಪಂಚದಲ್ಲಿ ಒಳಗೆ ಮತ್ತು ಹೊರಗಡೆ ಇದ್ದೀನಿ ಅಂತ ಹೇಳುತ್ತಾ
ಮುಂದೆ ನಾಲ್ಕನೇ ಶ್ಲೋಕದಲ್ಲಿ ಪರಮಾತ್ಮನಿಂದ ಈ ಜಗತ್ತು ಹೊರತಾಗಿ ಅವನಿಲ್ಲದೇ ಇಲ್ಲ.ಎನ್ನುವ ಚಿಂತನೆ ಸದಾ ಮಾಡಬೇಕು.
ಇದೇ ಚತುಃಶ್ಲೋಕಿ ಭಾಗವತ ಅಥವಾ ಮೂಲ ಭಾಗವತದ ಸಾರಾಂಶ.ಹೆಚ್ಚಿನ ಮಾಹಿತಿಯನ್ನು ಬಲ್ಲವರಿಂದ ತಿಳಿಯಬಹುದು.
ನಂತರದಲ್ಲಿ ಶ್ರೀಬ್ರಹ್ಮ ದೇವರು ತಪಸ್ಸು ಮಾಡುವಾಗ ನಾರದರು ಬಂದು ಕೇಳುತ್ತಾರೆ. ಯಾರಿಗೊಸ್ಕರ ಈ ತಪಸ್ಸು ಎಂದು ಕೇಳಲು ಅದಕ್ಕೆ ಶ್ರೀಬ್ರಹ್ಮ ದೇವರು 
ನಾನು ಪರಮಾತ್ಮನ ಕುರಿತು ತಪಸ್ಸು ಮಾಡುತ್ತಾ ಇದ್ದೀನಿ.ಅದರಿಂದ ನನಗೆ ಆದ ಲಾಭವೇನು ಎಂದರೆ ನನ್ನ ಮನಸ್ಸು ಎಂದು ದುರ್ಮಾರ್ಗದ ಕಡೆ ಹೋಗಿಲ್ಲ. ನನ್ನ ಮನಸ್ಸು, ವಾಕ್,ಹಾಗು ದೇಹ ಸಹ ಶುದ್ದವಾಗಿದೆ.ಇದೆಲ್ಲಾ ಆ ಪರಮಾತ್ಮನ ಕುರಿತು ತಪಸ್ಸು ಮಾಡುತ್ತಾ ಇರುವುದರಿಂದ ಅಂತ ಹೇಳಿದ್ದಾರೆ.

ಈ ಶ್ರೀ ಮದ್ ಭಾಗವತ ವೇದಕ್ಕೆ ಸಮ. ಮೊದಲು ಯಾವುದೇ ಗ್ರಂಥವನ್ನು ಓದಲು ಆರಂಭಿಸಬೇಕಾದರೆ ಆ ಗ್ರಂಥ ಕರ್ತೃ ಋಷಿ  ದೇವತೆ ಎಲ್ಲವನ್ನು ಸ್ಮರಣೆ ಮಾಡಬೇಕು. ನಾವು ಗಾಯತ್ರಿ ಜಪ ಮಾಡುವಾಗ ಹೇಗೆ ಋಷಿ ದೇವತೆ ಎಲ್ಲವನ್ನು ಸ್ಮರಣೆ ಮಾಡುತ್ತೇವೆಯೋ ಹಾಗೆ ಈ ವೇಧಸಮಾನವಾದ ಶ್ರೀ ಭಾಗವತವನ್ನು ಹಾಗೆ ಸ್ಮರಣೆ ಮಾಡಬೇಕು. ಈ ಭಾಗವಕ್ಕೆ ಮೊದಲ ಋಷಿ ಶ್ರೀನಾರಾಯಣ . ಮೂಲ ಭಾಗವತ ಇದ್ದದ್ದು ನಾಲ್ಕು ಶ್ಲೋಕಗಳ  ಭಾಗವತ.
ಈ ಚತುಶ್ಲೋಕೀ ಭಾಗವತವನ್ನು ಶ್ರೀಮನ್ ನಾರಾಯಣದೇವರು ಬ್ರಹ್ಮ ದೇವರಿಗೆ ಉಪದೇಶ ಮಾಡಿದನು. ಆನಂತರ ಶ್ರೀಬ್ರಹ್ಮ ದೇವರು ಐವತ್ತು ಶ್ಲೋಕಗಳ ಶ್ರೀ ಮದ್ಭಾಗವತವನ್ನು ರಚಿಸಿ ಶ್ರೀನಾರದರಿಗೆ ಉಪದೇಶ ಮಾಡಿದರು. ಮುಂದೆ ಶ್ರೀನಾರದರು ಶ್ರೀವೇದವ್ಯಾಸ ದೇವರಿಗೆ ಈ ಐವತ್ತು ಶ್ಲೋಕಗಳ ಭಾಗವತವನ್ನು ಒಪ್ಪಿಸಿ ಇದನ್ನು ಇನ್ನು ವಿಸ್ತಾರ ಮಾಡಿ ಎಂದು ಭಿನ್ನವಿಸಿದರು. ಮುಂದೆ ಶ್ರೀವೇದವ್ಯಾಸರು 12 ಸ್ಕಂದ 18,000 ಗ್ರಂಥಾತ್ಮಕ ಶ್ಲೋಕಗಳನ್ನು ಮಾಡಿದರು. ಮುಂದೆ ಶ್ರೀವೇದವ್ಯಾಸ ದೇವರು ತಮ್ಮ ಮಗನಾದ ಶ್ರೀಶುಕಮುನಿಗಳಿಗೆ ಉಪದೇಶಿಸಿದರು. ಶ್ರೀಶುಕಮುನಿಗಳು ಮುಂದೆ ಪರೀಕ್ಷಿತ್ ರಾಜನಿಗೆ ಉಪದೇಶಿಸಿದರು.
 ಶ್ರೀಶುಕಾಚಾರ್ಯರು ಪರೀಕ್ಷಿತ್ ರಾಜನಿಗೆ ಶ್ರೀ ಮದ್ ಭಾಗವತ ಉಪದೇಶದ ಸಂದರ್ಭದಲ್ಲಿ ಸೂತಪುರಾಣಿಕರು ಅಲ್ಲಿ ತಾವು ಕೂಡ ಭಾಗವತ ಶ್ರವಣ ಮಾಡಿದ್ದನ್ನು ಶೌನಕಾದಿಗಳಿಗೆ ಹೇಳಿದ್ದು ಈ  ಶ್ರೀ ಮದ್ ಭಾಗವತ ಇದು ಒಂದು ಪರಂಪರೆ.

ಇನ್ನೊಂದು ಪರಂಪರೆಯಲ್ಲಿ ಶ್ರೀಮನ್ನಾರಾಯಣದೇವರಿಂದ - ಶ್ರೀಶೇಷದೇವರಿಗೆ ಉಪದೇಶ - ಶ್ರೀಶೇಷದೇವರಿಂದ ಶ್ರೀಸನತ್ಕುಮಾರರಿಗೆ - ಶ್ರೀಸನತ್ಕುಮಾರರಿಂದ ಶ್ರೀಸಾ೦ಖ್ಯಾಯನರಿಗೆ, ಶ್ರೀಸಾಂಖ್ಯಾಯನರಿ೦ದ - ಶ್ರೀಪರಾಶರರಿಗೆ , ಶ್ರುಇಪರಾಶರರಿಂದ - ಮೈತ್ರೇಯರಿಗೆ, ಮೈತ್ರೆಯರಿಂದ ವಿದುರನಿಗೆ ಹೇಳಿದ್ದಾರೆ. 
ಶ್ರೀ ಮದ್ಭಾಗವತಕ್ಕೆ  "ಜಯ" ಎಂಬ ಹೆಸರಿದೆ. ಕಾರಣ ಶ್ರೀ ಮದ್ಭಾಗವತದ ನಾಯಕ "ಶ್ರೀ ಮನ್ ನಾರಾಯಣ ದೇವರು" ಅವನಿಗೆ ನಮಸ್ಕಾರ. ಆನಂತರ ಅವನ ಪತ್ನಿಯಾದ ಶ್ರೀಲಕ್ಷ್ಮಿದೇವಿಯರಿಗೆ ನಮಸ್ಕಾರ. ಅವಳು ಸಕಲ ವಾಗ್ಮಯ ಗಳಿಗೆ ಅಭಿಮಾನಿ ದೇವತೆಯು. ನಂತರ ನರೋತ್ತಮರಾದ ಶ್ರೀ ಮುಖ್ಯಪ್ರಾಣ ದೇವರಿಗೆ ನಮಸ್ಕಾರ. ಎಲ್ಲ ಜ್ಞಾನ ಕಾರ್ಯಗಳಿಗೆ ಮುಖ್ಯ ಪ್ರಾಣ ದೇವರು ಅಧ್ಯಕ್ಷರು. ಆನಂತರ ಸರಸ್ವತಿ ಭಾರತೀ ದೇವಿಯರಿಗೆ ನಮಸ್ಕಾರ. ಕಾರಣ ಇವರು ವಾಗ್ದೇವತೆಗಳು. ಶ್ರೀಶೇಷದೇವರಿಗೆ ನಮಸ್ಕಾರ ಕಾರಣ ಇವರು ಈ ಜ್ಞಾನ ಕಾರ್ಯಕ್ಕೆ ಉಪಾಧ್ಯಕ್ಷರು. 
ಶ್ರೀ ಮದ್ ಭಾಗವತದ ಮೊದಲ ಅಕ್ಷರ "ಜ" ಕಾರಣ ಜನ್ಮಾಧ್ಯಸ್ಯ.. ಕೊನೆಯ ಅಕ್ಷರ "ಯ" ಕಾರಣ 
ನಮಃ ಸನಾತನಯ ಆದ್ದರಿಂದ ಈ ಗ್ರಂಥಕ್ಕೆ "ಜಯ"  ಹೆಸರು. ಇದನ್ನು ಹೇಳಿದ್ದು ಶ್ರೀವೇದವ್ಯಾಸದೇವರು.
ಮುಂದೆ ಈ ಭಾಗವತದಲ್ಲಿ ಏನೇನು ಬರುತ್ತದೆ ಅಂತ ಶ್ರೀಶುಕಮುನಿಗಳು ರಾಜನಿಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ.
ಹೇಗೆ ತನ್ನ ಭಕ್ತರು ಯಾರು ಇದ್ದಾರೋ ಅವರ ರಕ್ಷಣಾ,ಅನುಗ್ರಹ ಮಾಡಿದ ಬಗ್ಗೆ ಮುಂದಿನ ಸ್ಕಂಧದಲ್ಲಿ,ಮತ್ತು ಮನ್ವಂತರ ಹಾಗು ಬ್ರಹ್ಮಾಂಡದ ವರ್ಣನೆ ಇದಲ್ಲದೇ ತನ್ನ ಅವತಾರ ಕತೆ ಸಹ ಅದರಲ್ಲಿ ಬರುತ್ತದೆ ಅಂತ ಹೇಳಿದ್ದಾರೆ.
ಇಲ್ಲಿಗೆ ಶ್ರೀ ಮದ್ ಭಾಗವತ ದಲ್ಲಿ ಬರುವ ಎರಡನೆಯ ಅಧ್ಯಾಯ ಮುಗಿದಿದೆ.
ನನ್ನ ಯೋಗ್ಯತೆ ಅನುಸಾರವಾಗಿ ತಿಳಿಸುವ ಪ್ರಯತ್ನ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ

🙏ಶ್ರೀ ಕಪಿಲಾಯ ನಮಃ

||ಪಿಬತ ಭಾಗವತಂ ರಸಮಾಲಯಂ||
Day17
✍ನಿನ್ನೆಯ ದಿನ  ಪರಮಾತ್ಮನು ಸೃಷ್ಟಿ ಕಾರ್ಯ ಆರಂಭ ಮಾಡಿದ ಬಗ್ಗೆ ಮತ್ತು ಚತುರ್ಮುಖ ಬ್ರಹ್ಮ ದೇವರಿಗೆ ಉಪದೇಶ ಮಾಡಿದ ಮೂಲ ಭಾಗವತ ಅಥವಾ ಚತುಃಶ್ಲೋಕಿ ಭಾಗವತದ ವಿವರಣೆ ಯನ್ನು ಮತ್ತು ಭಾಗವತ ಯಾರಿಂದ ಹೇಗೆ ಪ್ರಚಾರಕ್ಕೆ ಬಂತು ಅಂತ ದ್ವೀತಿಯ ಸ್ಕಂದ ದಲ್ಲಿ  ತಿಳಿದು ಕೊಂಡೆವು.
ಮುಂದೆ ಶ್ರೀಶುಕಮುನಿಗಳು ತೃತೀಯ ಸ್ಕಂದ ವನ್ನು ಶ್ರೀಪರೀಕ್ಷಿತ ಮಹಾರಾಜನಿಗೆ ಹೇಳುತ್ತಾರೆ.
ದುರುಳನಾದ ದುರ್ಯೋಧನನ ದುರ್ನಡೆತೆಗೆ ಬೇಸರವಾಗಿ,ಎಷ್ಟು ಉಪದೇಶ ಮಾಡಿದರು ತನ್ನ ದುರ್ಗುಣವನ್ನು ಬಿಡದ ಅವನ ವರ್ತನೆಯನ್ನು ನೋಡಿ ವಿದುರರು ಹಸ್ತಿನಾಪುರ ಬಿಟ್ಟು ತೀರ್ಥ ಯಾತ್ರೆ ಕೈಗೊಂಡರು. *ಪ್ರಭಾಸ ಕ್ಷೇತ್ರದಲ್ಲಿ ಉದ್ದವನ ಭೇಟಿ ಆಗುತ್ತದೆ. ಉದ್ದವನು ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತ.ಅವನು‌ ಹೇಳುತ್ತಾನೆ.
ಹೇ! ವಿದುರ ನೀನು ಮೈತ್ರೇಯರ ಬಳಿ ಹೋಗು.ನಿನಗೆ ಅವರು ಶ್ರೀ ಮದ್ ಭಾಗವತ ಉಪದೇಶ ಮಾಡುತ್ತಾರೆ. ಎಂದು ಅವರಿಗೆ ಕಳುಹಿಸಿ ಕೊಡುತ್ತಾರೆ.. ನಂತರ 
ವಿದುರ ಹರಿದ್ವಾರದಲ್ಲಿ ಮೈತ್ರೇಯರ ಭೇಟಿ ಯಾಗಿ ಈ ಶ್ರೀ ಮದ್ ಭಾಗವತ ಬಂದ ಬಗೆ ಮತ್ತು ಅದರ ಮಹಿಮೆಯನ್ನು ಕೇಳುತ್ತಾರೆ.
ಅದಕ್ಕೆ ಮೈತ್ರೇಯರು ಹೇಳುತ್ತಾರೆ. 
ಸ್ವಯಂ ಹಾಸಿಗೆಯಾಗಿ ಶೇಷ ದೇವರು ಭಗವಂತನ ಸೇವೆ ಮಾಡುತ್ತಾ ಇದ್ದಾರೆ.ಅಂತಹವರಿಗೆ ಒಮ್ಮೆ ಶ್ರೀ ಮನ್ ನಾರಾಯಣದೇವರು ಶ್ರೀ ಮದ್ ಭಾಗವತವನ್ನು ಉಪದೇಶ ಮಾಡಿದ್ದಾನೆ. ಆ ನಂತರ ಶ್ರೀಶೇಷದೇವರಿಂದ ಸನತ್ಕುಮಾರರಿಗೆ ಉಪದೇಶ ವಾಗಿದೆ.ಸನತ್ಕುಮಾರರಿಂದ ಸಾಂಖ್ಯಾಯನರಿಗೆ,ಸಾಂಖ್ಯಾಯನರಿಂದ ಪರಾಶರರಿಗೆ, ಪರಾಶರರಿಂದ ಮೈತ್ರೇಯರಿಗೆ,ಬಂದ ಬಗೆ ಹೇಳುತ್ತಾರೆ.
ನಂತರ ಮೈತ್ರೇಯರಿಂದ ವಿದುರನಿಗೆ ಹೀಗೆ ಭಾಗವತ ಇಷ್ಟು ಕವಲಾಗಿ ಒಬ್ಬರಿಂದ ಒಬ್ಬರಿಗೆ ಉಪದೇಶ ವಾಗುತ್ತಾ ಬಂದಿತು.
ಹರಿದ್ವಾರದಲ್ಲಿ ಮೈತ್ರೇಯರು ವಿದುರನಿಗೆ ಶ್ರೀ ಮದ್ ಭಾಗವತವನ್ನು ಉಪದೇಶ ಮಾಡಿದ್ದು. 
ಅದಕ್ಕೆ ಮುಂಚೆ ಬಹು ಹಿಂದೆ
 ಶ್ರೀನಾರದರು ಸಹ ಅಲ್ಲಿ ಶ್ರೀ ಮದ್ ಭಾಗವತ ಸಪ್ತಾಹ ಮಾಡಿದ ಬಗ್ಗೆ ಹಿಂದೆ ಕೇಳಿದ್ದೇವೆ.
ಅಂತಹ ಪರಮ ಪಾವನ ವಾದ ಪುಣ್ಯ ಕ್ಷೇತ್ರ ಸ್ಥಳ ಅದು ಹರಿದ್ವಾರ.
ಜೀವಮಾನದಲ್ಲಿ ಒಮ್ಮೆ ಯಾದರು ಅಂತಹ ಪುಣ್ಯ ಕ್ಷೇತ್ರ ಗಳಲ್ಲಿ ಶ್ರೀ ಮದ್ ಭಾಗವತ ಶ್ರವಣ,ಪಠಣ ಮಾಡುವದು ಶ್ರೇಯಸ್ಕರ ಮತ್ತು ಹೆಚ್ಚು ಪುಣ್ಯ ಕರವಾದದ್ದು.
ಜ್ಞಾನಿಗಳು, ಮಹಾತ್ಮರ ಚರ್ಯೆ ನಮಗೆ ತಿಳಿಯದು. ನಮಗೆ ದುಃಖದ ಮೂಲ ಯಾವುದು ಎಂದರೆ ಧರ್ಮದ ಆಚರಣೆ ಇಂದ ವಿಮುಖರಾದ ಕಾರಣ‌ ದುಃಖ ಬರುತ್ತದೆ. 
ಅಧರ್ಮದ ಹಾದಿಯಲ್ಲಿ ನಡೆಯುವ ಕಾರಣವೇನೆಂದರೆ ಶ್ರೀ ಹರಿಯ ನಾಮ ವಿಸ್ಮರಣೆ.
ಯಾವಾಗ ಇಂತಹ ಜ್ಞಾನ ಕಾರ್ಯದಲ್ಲಿ ನಾವು ಭಾಗವಹಿಸಿ ದಾಗ ನಮ್ಮ ಒಳಗಡೆ ಶ್ರೀಹರಿಯ ಸ್ಮರಣೆ ಕಿಂಚಿತ್ತೂ ಬರುತ್ತದೆ.  ಶ್ರೀಹರಿಯ ಸ್ಮರಣೆಇಂದ ಅಧರ್ಮದ ಹಾದಿಯಿಂದ ವಿಮುಖರಾಗಿ ಧರ್ಮದ ಹಾದಿಯಲ್ಲಿ ನಡೆಯಲು ಪ್ರಯತ್ನ ಮಾಡುತ್ತೇವೆ. ಅದರಿಂದ ನಮ್ಮ ಕಷ್ಟ ಪರಿಹಾರ.
ಅಂತಹ ಶ್ರೀಹರಿಯ ತತ್ವ ತಿಳಿಸಲು ಮಹಾತ್ಮರ, ಭಗವಂತನ ಭಕ್ತರ ಸಂಚಾರ.ಅಂತಹವರ ದರುಶನ ವಾದಾಗ,ಅಂತಹವರ ಬಳಿ ಶ್ರೀ ಹರಿಯ ನಾಮವೆಂಬ ರಸಾಮೃತ ಪಾನ ಮಾಡಿದಾಗ,ಅದರ ಪ್ರಯೋಜನ ಪಡೆದಾಗಲೇ ಆ ಜೀವಿಯ ಉದ್ದಾರವಾಗಲು ಸಾಧ್ಯ.
ಭಗವಂತನ ಲೀಲೆ ಎಷ್ಟು ವಿಚಿತ್ರ. ಶ್ರೀವೇದವ್ಯಾಸ ರೂಪದಿಂದ ತಮ್ಮ ಮಗನಾದ ಶ್ರೀಶುಕಮುನಿಗಳಿಗೆ ಶ್ರೀ ಮದ್ ಭಾಗವತವನ್ನು ಉಪದೇಶ ಮಾಡಿದರು.
ಮತ್ತೆ ಮುಂದೆ ತಮ್ಮ ಪುತ್ರನಾದ ನಿಯೋಗ ಪದ್ದತಿಯಿಂದ ದಾಸಿಯಲ್ಲಿ ಹುಟ್ಟಿದ ವಿದುರನಿಗೆ ಮೈತ್ರೇಯರಿಂದ ಶ್ರೀ ಮದ್  ಭಾಗವತವನ್ನು ಉಪದೇಶ ಮಾಡಿಸುತ್ತಾರೆ."
ಇಲ್ಲಿ ಒಂದು ಸ್ಪಷ್ಟವಾಗಿ ತಿಳಿಯಬಹುದು. 
ಶ್ರೀ ಮದ್ ಭಾಗವತವನ್ನು ಹೇಳುವದಕ್ಕೆ,ಕೇಳುವದಕ್ಕೆ ಆ ಶ್ರೀವೇದವ್ಯಾಸ ರೂಪಿ ಪರಮಾತ್ಮನ ಅನುಗ್ರಹ, ಅತ್ಯಗತ್ಯ ಎಂಬುದು ಇಲ್ಲಿ ನೋಡ ಬಹುದು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ

🙏ಶ್ರೀ ಕಪಿಲಾಯ ನಮಃ

||ಪಿಬತ ಭಾಗವತಂ ರಸಮಾಲಯಂ||
Day 18
🙏🙏
ನಿನ್ನೆಯ ದಿನ ವಿದುರರು ಮೈತ್ರೇಯರ ಭೇಟಿಯಾಗಿ ಅವರಿಂದ ಶ್ರೀ ಮದ್ ಭಾಗವತ ವನ್ನು ಶ್ರವಣಮಾಡಿದ ಬಗ್ಗೆ ಕೇಳಿದ್ದೇವೆ.
ಶ್ರೀಬ್ರಹ್ಮ ದೇವರು ಭಗವಂತನ ಆದೇಶದಂತೆ ಸೃಷ್ಟಿ ಕಾರ್ಯವನ್ನು ಆರಂಭ ಮಾಡುತ್ತಾರೆ. 
ಮೊದಲಿಗೆ ಐದು ಅಜ್ಞಾನ ವನ್ನು ಸೃಷ್ಟಿ ಮಾಡುತ್ತಾರೆ. ಅವು ಯಾವುವೆಂದರೆ
೧)ತಮಸ್ಸು.ಅಂದರೆ ತಿಳುವಳಿಕೆ ಇಲ್ಲದೇ ಇರುವದು.
೨)ಮೋಹ ಅಂದರೆ ತಪ್ಪು ತಿಳುವಳಿಕೆ. 
೩)ಮಹಾಮೋಹ ಅಂದರೆ ತನ್ನ ತಪ್ಪು ತಿಳುವಳಿಕೆ ಮೇಲೆ ಆಗ್ರಹ.
೪)ತಾಮಿಸ್ರ ಅಂದರೆ ಯಾರಾದರು ಬುದ್ದಿ ವಾದ ಅಥವಾ ಸರಿ ಹೇಳಲು ಬಂದಾಗ ಅವರ ಮೇಲೆ ಸಿಟ್ಟಾಗುವದು.
೫)ಅಂಧತಾಮಿಸ್ರ ಎಂದರೆ ಪ್ರಾಣಾಂತಿಕ ದ್ವೇಷ.
ಇದನ್ನು ಮೊಟ್ಟಮೊದಲ ಬಾರಿಗೆ ಭಗವಂತನ ಇಚ್ಛೆ ಯಂತೆ ಸೃಷ್ಟಿ ಮಾಡಿದರು.ಆಮೇಲೆ ಭಗವಂತನ ಧ್ಯಾನ ಮಾಡಿ ಮನಸ್ಸಿನಿಂದ ಮತ್ತೊಂದು ಸೃಷ್ಟಿ ಮಾಡಿದರು.. 
ಅವರೇ ಸನಕ ಸನಂದನ,ಸನಾತನ ಸನತ್ಕುಮಾರರು ಎಂದು ನಾಲ್ಕು ಜನರು.ಅವರೆಲ್ಲರೂ ಯತಿಧರ್ಮವನ್ನು ಸ್ವೀಕರಿಸಿ ತಪಸ್ಸು ಮಾಡಲು ತೆರಳಿದರು.ಅದನ್ನು ನೋಡಿ ಆನಂತರ ಶ್ರೀಬ್ರಹ್ಮ ದೇವರು ತಮ್ಮ ಭ್ರೂಮದ್ಯದಿಂದ ಅಂದರೆ ಹುಬ್ಬಿನ‌ ನಡುವಿನಿಂದ ಒಬ್ಬರು ಜನ್ಮ ತಾಳುತ್ತಾರೆ.
ಸದ್ಯದಲ್ಲೆ ಹುಟ್ಟಿದ್ದರಿಂದ ಸದ್ಯೋಜಾತ ಎಂದು ಅವರಿಗೆ ಹೆಸರಿಟ್ಟರು. ಅವರೇ ಶ್ರೀರುದ್ರ ದೇವರು.ಅವರಿಗೆ ಸೃಷ್ಟಿ ಕಾರ್ಯಮಾಡಿ ಎಂದಾಗ ಬರಿಯ ಭೂತಗಣಗಳನ್ನು ಸೃಷ್ಟಿ ಮಾಡಿದರು.ಈ ರೀತಿಯಲ್ಲಿ ಭೂತಗಣಗಳು ಸೃಷ್ಟಿ ಆಗಿದ್ದು ನೋಡಿ ಇನ್ನೂ ಕೈಲಾಸಕ್ಕೆ ಹೋಗಿ ತಪಸ್ಸನ್ನು ಆಚರಿಸಿ ಎಂದು ಆ ಭೂತ ಗಣಗಳೊಡನೆ ಕೈಲಾಸಕ್ಕೆ ಕಳುಹಿಸುವರು..ನಂತರ ಶ್ರೀರುದ್ರ ದೇವರು ಭೂತ ಗಣಾಧಿಪತಿಯಾಗಿ ಕೈಲಾಸಕ್ಕೆ ಹೋದರು.
ಬಳಿಕ ತಮ್ಮ ಅಂಗಾಂಗಳಿಂದ ಮರೀಚಿ,ಅತ್ರಿ,ಅಂಗೀರಸರು,ಪುಲಸ್ತ್ಯ ಪುಲಹ, ಕ್ರತು ,ವಸಿಷ್ಠ ಭೃಗು, ದಕ್ಷ ,ನಾರದ,ಎಂದು ಹತ್ತು ಮಂದಿ ಮಕ್ಕಳನ್ನು ಸೃಷ್ಟಿ ಮಾಡಿದರು...
ಮರೀಚಿ ಋಷಿಗಳು ಮನಸ್ಸಿನಿಂದ,ಭೃಗು ಋಷಿಗಳು ಚರ್ಮದಿಂದ, ಅಂಗೀರಸ ಋಷಿಗಳು ಬಾಯಿಯಿಂದ, ಪುಲಸ್ತ್ಯರು ಕಿವಿಯಿಂದ,ಪುಲಹರು ನಾಭಿಯಿಂದ,ಕ್ರತು ಋಷಿಗಳು ಕೈಯಿಂದ,ದಕ್ಷ ಪ್ರಜಾಪತಿ ಹೆಬ್ಬೆಟ್ಟುನಿಂದ ಈ ರೀತಿ ಬ್ರಹ್ಮ ದೇವರು ಸೃಷ್ಟಿ ಮಾಡಿದರು.
ಶ್ರೀ ಮದ್ ಭಾಗವತ ಸಪ್ತಾಹ ಗಳು ಅಸಂಖ್ಯ ವಾಗಿ ನಡೆದಿವೆ.ಇಂದಿಗು ನಡೆಯುತ್ತಾ ಇವೆ.
*ಆದರೆ
ಶ್ರೀಶುಕಮುನಿಗಳು ಪರೀಕ್ಷಿತ ಮಹಾ ರಾಜನಿಗೆ ಉಪದೇಶಿಸಿದ ಸಪ್ತಾಹ ನಿಜವಾದ ಅರ್ಥದಲ್ಲಿ ಸಪ್ತಾಹ.
"ಏಳು ದಿನಗಳ ಕಾಲ ನಿರಂತರ ಊಟ ನಿದ್ರೆ ಗಳಿಗು ಅವಕಾಶವಿಲ್ಲ ದಂತೆ ನಡೆದ ಅಪೂರ್ವ ಸಪ್ತಾಹ ಅದು."
ಆ ತರಹ  ಏಳು ದಿನ ಬಿಡದೇ ಹೇಳುವವರು ಮತ್ತು ಕೇಳುವವರು ಸಿಗುವುದು ಕಠಿಣ.
 ಈಶ್ರೀ ಮದ್ ಭಾಗವತದ ಮಹಿಮೆಯನ್ನು ಹೇಳಲು ನಾನುಶಕ್ಯನಲ್ಲ.
ಈ ಶ್ರೀ ಮದ್ ಭಾಗವತ ಶ್ರವಣ ಮಾಡಿದವರು ಆಯುಷ್ಯ ತೀರಿದ್ದರೆ ಸುಖ ಮರಣವನ್ನು ಹೊಂದಿ ವೈಕುಂಠಕ್ಕೆ ತೆರಳುವರು.
ಆಯುಷ್ಯ ಇನ್ನೂ ಉಳಿದಿದ್ದರೆ ಪುನಃ ಪುನಃ ಭಾಗವತ ಕೇಳುವ ಅವಕಾಶವನ್ನು ಹೊಂದಿ ಅಂತ್ಯಕಾಲದ ನಂತರ ಅವರು ವೈಕುಂಠಕ್ಕೆ ತೆರಳುವರು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಹರೇ ಶ್ರೀನಿವಾಸ


||ಪಿಬತ ಭಾಗವತಂ ರಸಮಾಲಯಂ||
Day 18
🙏🙏
ನಿನ್ನೆಯ ದಿನ ವಿದುರರು ಮೈತ್ರೇಯರ ಭೇಟಿಯಾಗಿ ಅವರಿಂದ ಶ್ರೀ ಮದ್ ಭಾಗವತ ವನ್ನು ಶ್ರವಣಮಾಡಿದ ಬಗ್ಗೆ ಕೇಳಿದ್ದೇವೆ.
ಶ್ರೀಬ್ರಹ್ಮ ದೇವರು ಭಗವಂತನ ಆದೇಶದಂತೆ ಸೃಷ್ಟಿ ಕಾರ್ಯವನ್ನು ಆರಂಭ ಮಾಡುತ್ತಾರೆ. 
ಮೊದಲಿಗೆ ಐದು ಅಜ್ಞಾನ ವನ್ನು ಸೃಷ್ಟಿ ಮಾಡುತ್ತಾರೆ. ಅವು ಯಾವುವೆಂದರೆ
೧)ತಮಸ್ಸು.ಅಂದರೆ ತಿಳುವಳಿಕೆ ಇಲ್ಲದೇ ಇರುವದು.
೨)ಮೋಹ ಅಂದರೆ ತಪ್ಪು ತಿಳುವಳಿಕೆ. 
೩)ಮಹಾಮೋಹ ಅಂದರೆ ತನ್ನ ತಪ್ಪು ತಿಳುವಳಿಕೆ ಮೇಲೆ ಆಗ್ರಹ.
೪)ತಾಮಿಸ್ರ ಅಂದರೆ ಯಾರಾದರು ಬುದ್ದಿ ವಾದ ಅಥವಾ ಸರಿ ಹೇಳಲು ಬಂದಾಗ ಅವರ ಮೇಲೆ ಸಿಟ್ಟಾಗುವದು.
೫)ಅಂಧತಾಮಿಸ್ರ ಎಂದರೆ ಪ್ರಾಣಾಂತಿಕ ದ್ವೇಷ.
ಇದನ್ನು ಮೊಟ್ಟಮೊದಲ ಬಾರಿಗೆ ಭಗವಂತನ ಇಚ್ಛೆ ಯಂತೆ ಸೃಷ್ಟಿ ಮಾಡಿದರು.ಆಮೇಲೆ ಭಗವಂತನ ಧ್ಯಾನ ಮಾಡಿ ಮನಸ್ಸಿನಿಂದ ಮತ್ತೊಂದು ಸೃಷ್ಟಿ ಮಾಡಿದರು.. 
ಅವರೇ ಸನಕ ಸನಂದನ,ಸನಾತನ ಸನತ್ಕುಮಾರರು ಎಂದು ನಾಲ್ಕು ಜನರು.ಅವರೆಲ್ಲರೂ ಯತಿಧರ್ಮವನ್ನು ಸ್ವೀಕರಿಸಿ ತಪಸ್ಸು ಮಾಡಲು ತೆರಳಿದರು.ಅದನ್ನು ನೋಡಿ ಆನಂತರ ಶ್ರೀಬ್ರಹ್ಮ ದೇವರು ತಮ್ಮ ಭ್ರೂಮದ್ಯದಿಂದ ಅಂದರೆ ಹುಬ್ಬಿನ‌ ನಡುವಿನಿಂದ ಒಬ್ಬರು ಜನ್ಮ ತಾಳುತ್ತಾರೆ.
ಸದ್ಯದಲ್ಲೆ ಹುಟ್ಟಿದ್ದರಿಂದ ಸದ್ಯೋಜಾತ ಎಂದು ಅವರಿಗೆ ಹೆಸರಿಟ್ಟರು. ಅವರೇ ಶ್ರೀರುದ್ರ ದೇವರು.ಅವರಿಗೆ ಸೃಷ್ಟಿ ಕಾರ್ಯಮಾಡಿ ಎಂದಾಗ ಬರಿಯ ಭೂತಗಣಗಳನ್ನು ಸೃಷ್ಟಿ ಮಾಡಿದರು.ಈ ರೀತಿಯಲ್ಲಿ ಭೂತಗಣಗಳು ಸೃಷ್ಟಿ ಆಗಿದ್ದು ನೋಡಿ ಇನ್ನೂ ಕೈಲಾಸಕ್ಕೆ ಹೋಗಿ ತಪಸ್ಸನ್ನು ಆಚರಿಸಿ ಎಂದು ಆ ಭೂತ ಗಣಗಳೊಡನೆ ಕೈಲಾಸಕ್ಕೆ ಕಳುಹಿಸುವರು..ನಂತರ ಶ್ರೀರುದ್ರ ದೇವರು ಭೂತ ಗಣಾಧಿಪತಿಯಾಗಿ ಕೈಲಾಸಕ್ಕೆ ಹೋದರು.
ಬಳಿಕ ತಮ್ಮ ಅಂಗಾಂಗಳಿಂದ ಮರೀಚಿ,ಅತ್ರಿ,ಅಂಗೀರಸರು,ಪುಲಸ್ತ್ಯ ಪುಲಹ, ಕ್ರತು ,ವಸಿಷ್ಠ ಭೃಗು, ದಕ್ಷ ,ನಾರದ,ಎಂದು ಹತ್ತು ಮಂದಿ ಮಕ್ಕಳನ್ನು ಸೃಷ್ಟಿ ಮಾಡಿದರು...
ಮರೀಚಿ ಋಷಿಗಳು ಮನಸ್ಸಿನಿಂದ,ಭೃಗು ಋಷಿಗಳು ಚರ್ಮದಿಂದ, ಅಂಗೀರಸ ಋಷಿಗಳು ಬಾಯಿಯಿಂದ, ಪುಲಸ್ತ್ಯರು ಕಿವಿಯಿಂದ,ಪುಲಹರು ನಾಭಿಯಿಂದ,ಕ್ರತು ಋಷಿಗಳು ಕೈಯಿಂದ,ದಕ್ಷ ಪ್ರಜಾಪತಿ ಹೆಬ್ಬೆಟ್ಟುನಿಂದ ಈ ರೀತಿ ಬ್ರಹ್ಮ ದೇವರು ಸೃಷ್ಟಿ ಮಾಡಿದರು.
ಶ್ರೀ ಮದ್ ಭಾಗವತ ಸಪ್ತಾಹ ಗಳು ಅಸಂಖ್ಯ ವಾಗಿ ನಡೆದಿವೆ.ಇಂದಿಗು ನಡೆಯುತ್ತಾ ಇವೆ.
*ಆದರೆ
ಶ್ರೀಶುಕಮುನಿಗಳು ಪರೀಕ್ಷಿತ ಮಹಾ ರಾಜನಿಗೆ ಉಪದೇಶಿಸಿದ ಸಪ್ತಾಹ ನಿಜವಾದ ಅರ್ಥದಲ್ಲಿ ಸಪ್ತಾಹ.
"ಏಳು ದಿನಗಳ ಕಾಲ ನಿರಂತರ ಊಟ ನಿದ್ರೆ ಗಳಿಗು ಅವಕಾಶವಿಲ್ಲ ದಂತೆ ನಡೆದ ಅಪೂರ್ವ ಸಪ್ತಾಹ ಅದು."
ಆ ತರಹ  ಏಳು ದಿನ ಬಿಡದೇ ಹೇಳುವವರು ಮತ್ತು ಕೇಳುವವರು ಸಿಗುವುದು ಕಠಿಣ.
 ಈಶ್ರೀ ಮದ್ ಭಾಗವತದ ಮಹಿಮೆಯನ್ನು ಹೇಳಲು ನಾನುಶಕ್ಯನಲ್ಲ.
ಈ ಶ್ರೀ ಮದ್ ಭಾಗವತ ಶ್ರವಣ ಮಾಡಿದವರು ಆಯುಷ್ಯ ತೀರಿದ್ದರೆ ಸುಖ ಮರಣವನ್ನು ಹೊಂದಿ ವೈಕುಂಠಕ್ಕೆ ತೆರಳುವರು.
ಆಯುಷ್ಯ ಇನ್ನೂ ಉಳಿದಿದ್ದರೆ ಪುನಃ ಪುನಃ ಭಾಗವತ ಕೇಳುವ ಅವಕಾಶವನ್ನು ಹೊಂದಿ ಅಂತ್ಯಕಾಲದ ನಂತರ ಅವರು ವೈಕುಂಠಕ್ಕೆ ತೆರಳುವರು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ

🙏ಹರೇ ಶ್ರೀನಿವಾಸ


||ಪಿಬತ ಭಾಗವತಂ ರಸಮಾಲಯಂ||
Day 19
  ✍ನಿನ್ನೆಯ ದಿನ ಶ್ರೀಬ್ರಹ್ಮ ದೇವರ ಸೃಷ್ಟಿ ಕಾರ್ಯವನ್ನು ತಿಳಿದೆವು.
ಮುಂದೆ ಶ್ರೀಶುಕಮುನಿಗಳು ಹೇಳುತ್ತಾರೆ.
ನಂತರ ಶ್ರೀಬ್ರಹ್ಮ ದೇವರ ದೇಹದಿಂದ ಮತ್ತೆ ಒಂದು ಸೃಷ್ಟಿ ಆಗಿದೆ.ಅವರೇ ಸ್ವಾಯಂಭುವ ಮನು ಮತ್ತು ಶತರೂಪಾದೇವಿ.
ಸ್ವಾಯಂಭುವ ಮನುವು ಸತ್ಯಕ್ಕೆ ಅಭಿಮಾನಿ. ಶತರೂಪಾದೇವಿ ದೀಕ್ಷೆ ಗೆ ಅಭಿಮಾನಿ.
"ನೀವಿಬ್ಬರು ವಿವಾಹ ಮಾಡಿಕೊಂಡು ಪ್ರಜಾ ಸೃಷ್ಟಿ ಕಾರ್ಯವನ್ನು ಮುಂದುವರೆಸಿ" ಎಂದು ಶ್ರೀಬ್ರಹ್ಮ ದೇವರ ಆಜ್ಞೆ ಆಗಿದೆ.ಆಗಲೇ ಮಾನವ ಸೃಷ್ಟಿ ಆಗಿದ್ದು.
ಅವಾಗ ಸ್ವಾಯಂಭುವ ಮನು ಕೇಳುತ್ತಾನೆ. 
"ಈ ಭೂಮಿ ಘನೋದಕದಲ್ಲಿ ಮುಳುಗಿ ಹೋಗಿದೆ. ಭೂಮಿ ಮೇಲೆ ಬಂದ ಮೇಲೆ ಸೃಷ್ಟಿ ಕಾರ್ಯ ಮಾಡಬಹುದು" ಎಂದು.
ಈ ಭೂಮಿಯ ವರ್ಣನೆ.
*ಇದು ಏಳು ಕೋಟಿ ಹದಿನಾಲ್ಕು ಲಕ್ಷ ವಿಸ್ತೀರ್ಣ ಉಳ್ಳದ್ದು.ಅದರಲ್ಲಿ ಸಪ್ತ ದ್ವೀಪಗಳು, ಸಪ್ತ ಸಮುದ್ರ, ಮೇರು ಪರ್ವತ,ಲೋಕಾ ಪರ್ವತ, ಸುವರ್ಣ ಭೂಮಿ,ವಜ್ರ ಭೂಮಿ ಎಲ್ಲಾ ಸೇರಿವೆ ಅದರಲ್ಲಿ.ಈ ರೀತಿಯಲ್ಲಿ ಇರುವ ಭೂಮಿ ಸಂಪೂರ್ಣವಾಗಿ ಮುಳುಗಿ ಹೋಗಿದೆ. 
ತಕ್ಷಣ ಶ್ರೀಬ್ರಹ್ಮ ದೇವರು ಭಗವಂತನ ಬಳಿ ಪ್ರಾರ್ಥನೆ ಮಾಡುತ್ತಾರೆ. ತಕ್ಷಣ ಶ್ರೀವರಾಹ ರೂಪಿ ಪರಮಾತ್ಮನ ಅವತಾರ ವಾಗಿದೆ.
ಸಮುದ್ರ ದಲ್ಲಿ ಮುಳುಗಿ ಹೋದ ಭೂಮಿಯನ್ನು ವರಾಹ ದೇವರು ಮೇಲಕ್ಕೆ ಎತ್ತುವಾಗ ಆ  ಸಮಯದಲ್ಲಿ  ಆದಿ ಹಿರಣ್ಯಾಕ್ಷನು ಯುದ್ದಕ್ಕೆ ಬಂದಿದ್ದಾನೆ.ಅವಾಗ ಪರಮಾತ್ಮನು ತನ್ನ ಕೋರೆ ಹಲ್ಲುಗಳಿಂದ ಅವನನ್ನು ಸಂಹಾರ ಮಾಡಿದ.
ಪರಮಾತ್ಮನು ಮುಂದೆ ಮತ್ತೆ ಒಮ್ಮೆ ಶ್ರೀವರಾಹ ರೂಪಿಯಾಗಿ ಏಳನೆಯ ಮನ್ವಂತರದಲ್ಲಿ ಅವತಾರ ಮಾಡಿ ದಿತಿಪುತ್ರನಾದ ಹಿರಣ್ಯಾಕ್ಷನನ್ನು ಸಂಹಾರ ಮಾಡಿದ್ದಾನೆ.
ಆ ಹಿರಣ್ಯಾಕ್ಷನಲ್ಲಿ ಭಗವಂತನ ದ್ವಾರಪಾಲಕ ನಾದ ವಿಜಯನ ಆವೇಶ.
ಇದರ ಬಗ್ಗೆ ಮುಂದೆ ತಿಳಿಯೋಣ.
ಶ್ರೀ ಮದ್ ಭಾಗವತವನ್ನು ಕೇಳಿಯೂ ಆಸ್ತಿಕ ನಾಗದವನು ಮಾತ್ರ ನಿಜವಾಗಿಯೂ ನಾಸ್ತಿಕನೇ ಸರಿ.ಅವನಿಗೆ ಉದ್ದಾರ ವಾಗುವ ಬಾಗಿಲು ಶಾಶ್ವತವಾಗಿ ಮುಚ್ಚಿ ದಂತೆಯೆ..
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ

🙏ಶ್ರೀ ಕಪಿಲಾಯ ನಮಃ

||ಪಿಬತ ಭಾಗವತಂ ರಸಮಾಲಯಂ||
Day 20.
✍️ನಿನ್ನೆಯ ದಿನ ಆದಿ ವರಾಹ ದೇವನು ಆದಿ  ಹಿರಣ್ಯಾಕ್ಷನ ಸಂಹಾರ ಮಾಡಿದ ಬಗ್ಗೆ ತಿಳಿದೆವು..ಅದರ ಬಗ್ಗೆ  ಹೆಚ್ಚಿನ‌ ವಿವರಣೆ.
ಶ್ರೀ ಬ್ರಹ್ಮ ದೇವರು ಸ್ವಾಯಂಭುವ ಮನುವಿಗೆ ಸೃಷ್ಟಿ ಕಾರ್ಯವನ್ನು ಮಾಡಲು ಆಜ್ಞೆಯನ್ನು ಮಾಡುತ್ತಾರೆ. ಆದರೆ ಅವಾಗ ಸ್ವಾಯಂಭುವ ಮನುವು "ಭೂಮಿಯು ನೀರಿನಲ್ಲಿ ಮುಳುಗಿ ಹೋಗಿದೆ ಹೇಗೆ ಸೃಷ್ಟಿ ಕಾರ್ಯವನ್ನು ಮಾಡಲು ಸಾಧ್ಯ?? ಎಂದು ಕೇಳಿದಾಗ
ಅವಾಗ ಶ್ರೀ ಬ್ರಹ್ಮ ದೇವರು 
ಆ ನಾರಾಯಣ ದೇವನೇ ಈ ಭೂಮಿಯನ್ನು ಮೇಲಕ್ಕೆ ತರಲು ಸಮರ್ಥ ಎಂದು ಯೋಚಿಸಿ ಭಗವಂತನ ಕುರಿತಾಗಿ ಧ್ಯಾನ ಮಾಡುತ್ತಾರೆ. ಅವಾಗ ಅವರ ಮೂಗಿನ ಹೊಳ್ಳೆಯಿಂದ ಅಂಗುಷ್ಟ ಗಾತ್ರದ ವರಾಹ ಹೊರಗಡೆ ಬಂದು ನಿಂದು ತತ್‍ಕ್ಷಣ ಆನೆಯಷ್ಟು ಗಾತ್ರದಷ್ಟು ದೊಡ್ಡದಾಗಿದೆ... 
ಅವಾಗ ಪುತ್ರ ಸಹಿತರಾಗಿ ಶ್ರೀ ಬ್ರಹ್ಮ ದೇವರು ಇದನ್ನು ಕಂಡು ತನ್ನ ಪಿತನಾದ ಆ ಶ್ರೀ ಹರಿಯನ್ನು ಕಂಡು ಸ್ತೋತ್ರ ಮಾಡುತ್ತಾರೆ... 
ಭಗವಂತ ತಾನು ಪ್ರಸನ್ನ ನಾದೆನೆಂದು ತಿಳಿಸಲು ಜೋರಾಗಿ ಒಮ್ಮೆ ಗರ್ಜನೆ ಮಾಡಿ ಸಮುದ್ರವನ್ನು ಹೊಕ್ಕು ,ಬಾಲವನ್ನು ಮೇಲಕ್ಕೆ ಎತ್ತಿ ನೀರೊಳಗೆ ಹೋಗಿ ರಸಾತಳದಲ್ಲಿ ಸೆರೆ ಸಿಕ್ಕಿದ್ದ ಭೂಮಿಯನ್ನು ತನ್ನ ದಾಡೆಯ ಕೋರೆಯಿಂದ ಮೇಲಕ್ಕೆ ಎತ್ತಿ ತರುತ್ತಾ ಇರುವ ಸಮಯದಲ್ಲಿ ಆಗ ಶ್ರೀಬ್ರಹ್ಮ ದೇವನಿಂದ ಜನಿಸಿದ್ದ ಆದಿ ಹಿರಣ್ಯಾಕ್ಷ ಎಂಬುವ ದೈತ್ಯ ಗದಾಪಾಣಿಯಾಗಿ ಶ್ರೀ ವರಾಹ ದೇವರ ಮೇಲೆ ಯುದ್ದಕ್ಕೆ ಹೋದನು.ಶ್ರೀ ವರಾಹ ದೇವನು ತನ್ನ ದಾಡೆ ಯಿಂದ ಅವನನ್ನು ಸಂಹಾರ ಮಾಡಿದನು.
ಈ ಶ್ರೀ ಮದ್ ಭಾಗವತದಲ್ಲಿ ಇಬ್ಬರು ಹಿರಣ್ಯಾಕ್ಷ ರು ಬರುತ್ತಾರೆ.
ಮೊದಲನೆಯವನು ಆದಿ ಹಿರಣ್ಯಾಕ್ಷ. ಇವನು ಬ್ರಹ್ಮ ದೇವನ ಪುತ್ರ. ಆದರೆ ಇವನು ಭೂಮಿಯನ್ನು ಅಪಹಾರ ಮಾಡಲಿಲ್ಲ. ಅಲ್ಲಿ ಭೂಮಿ ತಾನಾಗಿಯೇ ಮುಳುಗಿತ್ತು.
ಅವಾಗ ಭಗವಂತ ಶ್ವೇತ ವರಾಹ ರೂಪ ದಿಂದ ತನ್ನ ಕೋರೆದಾಡೆಇಂದ ಅವನ ಸಂಹಾರ ಮಾಡುತ್ತಾನೆ.

ಎರಡನೇ ಹಿರಣ್ಯಾಕ್ಷ ಮೊದಲನೆಯ ಹಿರಣ್ಯಾಕ್ಷ ನ ಆವೇಶದಿಂದ ಕಶ್ಯಪ ದಿತಿಯ ಗರ್ಭದಲ್ಲಿ ಹುಟ್ಟಿದವನು. ಅವನು ಭೂಮಿಯನ್ನು ಕದ್ದು ನೀರೊಳಗೆ ಅಡಗಿದ್ದಾಗ ಭಗವಂತ ನೀಲ ವರಾಹರೂಪಿ ದೇವನಾಗಿ ಅವನ ಕಿವಿಯ ಬುಡದಲ್ಲಿ ಹಸ್ತದಿಂದ ಹೊಡೆದು ಕೊಂದನು.
ನಂತರ ದೇವತೆಗಳು  ಶ್ರೀಯಜ್ಞ ವರಾಹ ದೇವರ ರೂಪಿ ಪರಮಾತ್ಮನ ಸ್ತೋತ್ರ ಮಾಡುತ್ತಾರೆ.
"ಅಜಿತನೇ! ನೀನು ಸದಾ ಜಯಾಶೀಲನು.ಯಜ್ಞ ಕ್ಜೆ ಉಪಯೋಗ ವಾದ ಸಾಮಗ್ರಿಗಳನ್ನು ಉತ್ತ್ಪಾದನೆ ಮಾಡಿದ ನಿನಗೆ ನಮಸ್ಕಾರ🙏.. ಈ ರೂಪವು ಸಾಮಾನ್ಯವಾಗಿ ಜನರಿಗೆ ಗೋಚರವಾಗದು.ಭೂಮಿಯು ನಮ್ಮ ತಾಯಿ.ನೀನೆ ತಂದೆ. ಭೂಮಿಯ ಉದ್ದರಾ ಕಾರ್ಯ ನಿನಗೆ ಹೊಸದೇನಲ್ಲ..ನಿನ್ನ ನಾಮ ಸ್ಮರಣೆ ಇಂದ ನಮ್ಮ ಮನಸ್ಸು ನಿನ್ನ ಕೀರ್ತನೆ ಇಂದ ನಾಲಗೆ ಮತ್ತು ನಿನ್ನ ರೋಮಗತವಾದ ಜಲಬಿಂದುವಿನ ಸೇಚನೆಇಂದ ನಮ್ಮ ದೇಹವು ಪರಮ ಪವಿತ್ರ ವಾಯಿತು... ನಿನ್ನ ಈ ಕಾರ್ಯ ವನ್ನು ಪರಿಮಿತವೆಂದು ಯೋಚನೆ ಮಾಡುವವ ಪರಮ ಅವಿವೇಕಿ.ನಮಗೆ ಇಂತಹ ಅಜ್ಞಾನ ವನ್ನು ಕೊಡದೆ ಸಮೀಚಿನ ಜ್ಞಾನ ದಿಂದ ದೊರೆಯುವ ಲೋಕವನ್ನು ಕೊಡು" ಎಂದು
ಹೀಗೆ ಪ್ರಾರ್ಥನೆ ಮಾಡಿದ ದೇವತೆಗಳಿಗೆ ಭಗವಂತ ಅನುಗ್ರಹ ಮಾಡಿ ಭೂಮಿಯನ್ನು ನೀರಿನ ಮೇಲೆ ಸ್ಥಾಪಿಸಿ ವೈಕುಂಠ ಕ್ಕೆ ಹೊರಟು ಹೋದನು
ಫಲ ಶ್ರುತಿ.👇
ಭಕ್ತಿ, ಶ್ರದ್ಧೆ ,ವಿಶ್ವಾಸದಿಂದ ಈ ವರಾಹ ಚರಿತ್ರೆ ಯನ್ನು ಕೇಳಿದವರ ಹೃದಯದಲ್ಲಿ ಭಗವಂತ ಪ್ರಕಟವಾಗುವನು.ಅದರಿಂದ ದೊರೆಯದೇ ಇರುವದು ಏನಿದೆ?? ಆದರು ತುಚ್ಚ ವಿಷಯಗಳನ್ನು ಬೇಡದೇ ಭಕ್ತಿ ಇಂದ ಅವನಿಗೆ ಶರಣು ಹೋದವನಿಗೆ ಸರಿಭಾಗವಾಗಿ ತನ್ನ ಲೋಕವನ್ನು ಕೊಟ್ಟು ಬಿಡುವವ ಆ ಭಗವಂತ.
ಶ್ರೀ ಹರಿಕಥಾಮೃತ ವು ಸಾರವಾದುದು..ಉತ್ತಮ ಗತಿ ಹೊಂದುವದಕ್ಕೆ ಆಪೇಕ್ಷಿತ ಪಡುವವನು ಇದನ್ನು ಪಾನ ಮಾಡಲು ಅಪೇಕ್ಷಿತ ಪಡುವನು.ಇದನ್ನು ಕೇಳದೇ ಬಿಡುವವನು ನಿಜಕ್ಕೂ  ದ್ಹಿಪಾದ ಪಶುವೇ ಸರಿ..
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀಭೂವರಾಹಾಯ ನಮಃ


||ಪಿಬತ ಭಾಗವತಂ ರಸಮಾಲಯಂ||
Day 21
ನಿನ್ನೆಯ ದಿನ ಶ್ರೀ ಆದಿ ವರಾಹ ರೂಪಿ ಪರಮಾತ್ಮನು ಬ್ರಹ್ಮ ದೇವನ ಪುತ್ರನಾದ ಆದಿ ಹಿರಣ್ಯಾಕ್ಷ್ಯನನ್ನು ಸಂಹಾರ ಮಾಡಿದ ಬಗ್ಗೆ ತಿಳಿದುಕೊಂಡೆವು.
ನಂತರ ಶ್ರೀಶುಕಮುನಿಗಳು ಹೇಳುತ್ತಾರೆ.
"ರಾಜನೇ ಕೇಳು.ಒಂದು ದಿನ ಸಂಧ್ಯಾಕಾಲದಲ್ಲಿ ಸೂರ್ಯಾಸ್ತವಾಗುವ ಸಮಯ.ಕಶ್ಯಪ ಋಷಿಗಳು ತಮ್ಮ ಆಹ್ನಿಕವನ್ನೆಲ್ಲ ಮುಗಿಸಿ ಅಗ್ನಿಹೋತ್ರ ಹೋಮವನ್ನು ಮಾಡಿ ಭಗವಂತನ ಧ್ಯಾನ ಮಾಡುತ್ತಾ ಕುಳಿತಿದ್ದಾರೆ.ಅವಾಗ ಅವರ ಪತ್ನಿಯಾದ ದಿತಿದೇವಿಯು ಅವರ ಬಳಿ ಬಂದು ಪ್ರಾರ್ಥನೆ ಮಾಡಿಕೊಳ್ಳುವಳು.
ಈ ಸಮಯದಲ್ಲಿ ನಿಮ್ಮ ಜೊತೆಯಲ್ಲಿ ಏಕಾಂತ ವಾಗಿರಬೇಕೆಂದು ಆಸೆಯಾಗಿದೆ.ಅದನ್ನು ಪೂರೈಕೆ ಮಾಡಿ ಎನ್ನಲು
ಅದಕ್ಕೆ ಕಶ್ಯಪರು 
ದಿತಿದೇವಿ!ಇದು ಸಂಧ್ಯಾಕಾಲ,ಇದನ್ನು ಘೋರತಮಾ ವೇಳಾ ಎಂದು ಕರೆಯುತ್ತಾರೆ.ರುದ್ರ ದೇವರು ವೃಷಭಾರೂಡರಾಗಿ ತಮ್ಮ ಭೂತಗಣಗಳೊಡನೆ ಸಂಚಾರ ಮಾಡುತ್ತಾ ಇರುತ್ತಾರೆ.ನೀನು ಏನು ಈ ಸಮಯದಲ್ಲಿ ಪತಿಯ ಸಂಗವನ್ನು ಬಯಸುವ ಈ ಕೋರಿಕೆ ತಪ್ಪು. ಬೇಡವೆಂದು ಹೇಳುತ್ತಾರೆ. 
ನಂತರ ದಿತಿದೇವಿಯು ಅವರ ಉಪದೇಶವನ್ನು ಕೇಳದೇ ಹಠಮಾಡಲು ದೈವೇಚ್ಚೇ ಹೇಗಿದೆಯೋ ಹಾಗೇ ಆಗಲಿ ಎಂದು ಕಶ್ಯಪರು ಅವಳ ಆಶೆಯನ್ನು ಪೂರೈಕೆ ಮಾಡಿದ್ದಾರೆ.
ಆ ನಂತರ ತಮ್ಮ ಮುಂದಿನ ಕಾರ್ಯದಲ್ಲಿ ಅವರು ಮಗ್ನರಾಗಿದ್ದಾರೆ.
ನಂತರ ದಿತಿದೇವಿಗೆ ನಾಚಿಕೆ ಆಗಿದೆ.ಕಶ್ಯಪ ರ ಬಳಿ ಬಂದು ತಲೆ ತಗ್ಗಿಸಿ ನಿಂತು ಕೊಂಡು ಹೇಳುವಳು.
"ನೀವು ಅವಾಗ ಏನು ಉಪದೇಶ ಮಾಡಿದಿರಿ.ಸಂಧ್ಯಾ ಸಮಯದಲ್ಲಿ ಪತಿಯ ಸಂಗವನ್ನು ಮಾಡಬಾರದು ಎಂದು.ಒಂದು ವೇಳೆ ಮಾಡಿದರೆ,ಗರ್ಭವನ್ನು ಧರಿಸಿದರೆ ಅದನ್ನು ಸಂಹಾರ ಮಾಡುತ್ತಾರಂತೆ ರುದ್ರ ದೇವರು.ಇದು ಭಗವಂತನ ಆಜ್ಞೆ ಅವರಿಗೆ*. ಇವಾಗ ನನಗೆ ಗರ್ಭಧಾರಣೆ ಆಗಿ ಹೋದರೆ ನನ್ನ ಗತಿ ಏನು ಎಂದು ಪೇಚಾಡಿ ರುದ್ರ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುವಳು.
ಅವಾಗ ಕಶ್ಯಪಮುನಿಗಳು ಹೇಳುತ್ತಾರೆ. 
"ನೀನು ರುದ್ರದೇವರನ್ನು ಪ್ರಾರ್ಥನೆ ಮಾಡಿದ್ದರಿಂದ ನಿನ್ನನ್ನು ಆಗಲಿ ,ಮುಂದೆ ನಿನ್ನ ಗರ್ಭದಲ್ಲಿ ಬರುವ ಶಿಶುವಿಗೆ ಆಗಲಿ ಅವರು ಸಂಹಾರ ಮಾಡುವದಿಲ್ಲ. ಆದರೆ ಸಂಧ್ಯಾ ಕಾಲದಲ್ಲಿ ಈ ತರಹದ ಕಾರ್ಯವನ್ನು ಮಾಡಿದ್ದರ ಫಲವಾಗಿ ನಿನಗೆ ಆಗುವ ಪರಿಣಾಮ ವನ್ನು ಕೇಳು.ನಿನಗೆ ಮನೋನಿಗ್ರಹ,ಇಂದ್ರಿಯ ನಿಗ್ರಹ ಎರಡು ಇರಲಿಲ್ಲ. ಮತ್ತು ನಿನಗೆ ಗರ್ಭದಲ್ಲಿ ಎರಡು ಅವಳಿ ಜವಳಿ ಮಕ್ಕಳು ಜನಿಸುವರು.ಅವರು ಮೂರು ಲೋಕಕ್ಕೆ ಕಂಟಕ ರಾಗಿರುವಂತಹವರು.ಮತ್ತು ಅವರು ಪರಮಾತ್ಮನ ಕೈಯಲ್ಲಿ ಮರಣ ಹೊಂದುವರು.ಇದು ಸಂಧ್ಯಾಕಾಲದಲ್ಲಿ ನೀನು ಅಪೇಕ್ಷಿತ ಮಾಡಿದ ಫಲ" ಎಂದು ಹೇಳುತ್ತಾರೆ. ಆಗ ದಿತಿದೇವಿ ಪಶ್ಚಾತ್ತಾಪ ಪಡುತ್ತಾಳೆ.ಮತ್ತೆ ಕಶ್ಯಪ ಮುನಿಗಳು ಹೇಳುತ್ತಾರೆ. ದೇವಿ!!ಚಿಂತಿಸುವ ಅಗತ್ಯವಿಲ್ಲ.ಇಬ್ಬರು ಮಕ್ಕಳು ನೀಚರು ಮತ್ತು ಲೋಕ ಕಂಟಕರ ಜನನವಾದರು ಕೂಡ ಇಡೀ ಲೋಕವು ಅವರನ್ನು ನಿಂದನೆ ಮಾಡಿದರು ಸಹ ಅವರಲ್ಲಿ ಒಬ್ಬ ಮಗನಿಗೆ ಪರಮ ಭಾಗವತನಾದ ಭಗವದ್ಭಕ್ತನಾದ ಮೊಮ್ಮಗ ನಿನಗೆ ಹುಟ್ಟುತ್ತಾನೆ.ಅವನಿಗೆ ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬರೂ  ,ಎಲ್ಲಾ ಲೋಕದವರು ಅವನ ಗುಣಗಾನವನ್ನು ನಿರಂತರವಾಗಿ ಮಾಡುತ್ತಾರೆ." ಎಂದು ಸಮಾಧಾನ ಪಡಿಸಿದರು.
ನಂತರ ದಿತಿದೇವಿ ಗರ್ಭಿಣಿ ಆಗಿದ್ದಾಳೆ.ಬಹಳ ವರ್ಷವಾದರು ಇನ್ನೂ ಪ್ರಸವವಾಗಿಲ್ಲ.ನಂತರದಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತಾಳೆ.ಅವರೇ ಹಿರಣ್ಯ ಕಶ್ಯಿಪು,ಮತ್ತು ಹಿರಣ್ಯಾಕ್ಷ. ಅಣ್ಣ ತಮ್ಮಂದಿರು.
ಅವರಿಬ್ಬರೂ ಹೇಗೆ ದಿತಿದೇವಿ ಯಲ್ಲಿ ಜನಿಸಿದರು ಎನ್ನುವದರ ಬಗ್ಗೆ ಮುಂದೆ ನೋಡೋಣ.
 ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ

🙏ಶ್ರೀ ಕಪಿಲಾಯ ನಮಃ
****************

[4:17 PM, 9/11/2020] Prasad Karpara Group: ||ಪಿಬತ ಭಾಗವತಂ ರಸಮಾಲಯಂ||
Day22
ನಿನ್ನೆಯ ದಿನ ದಿತಿದೇವಿಯು ತನ್ನ ತಪ್ಪು ತಿಳಿದು ಪತಿ ಯಾದ ಕಶ್ಯಪ ಮುನಿಗಳ ಬಳಿ ಕ್ಷಮೆ ಯಾಚಿಸಿ ದಾಗ
ಅದಕ್ಕೆ ಮುನಿಗಳು ಹೇಳುತ್ತಾರೆ.
"ದಿತಿದೇವಿಯೇ ಕೇಳು.ನೀನು ನಿನ್ನ ದೋಷವನ್ನು ವಿಮರ್ಶಿಸಿ ತಿಳಿದೆ.ಶ್ರೀ ಹರಿಯಲ್ಲಿ ಶ್ರೀ ರುದ್ರ ದೇವರಲ್ಲಿ ಮತ್ತು ಪತಿಯಾದ ನನ್ನಲ್ಲಿ ಯಥಾಯೋಗ್ಯ ಭಕ್ತಿ ಯನ್ನು ತೋರಿಸಿದ ಕಾರಣದಿಂದಾಗಿ ನಿನ್ನ ಮಗನ ಮಕ್ಕಳಲ್ಲಿ ಒಬ್ಬನು ಮಾತ್ರ ಸಜ್ಜನ ಸಮ್ಮತನಾದವನು ಹುಟ್ಟುವನು.ಅವನು ಶ್ರೀಹರಿಯ ಕೀರ್ತಿ ಯನ್ನು ಜಗತ್ತಿನ ಎಲ್ಲ ಕಡೆ ಪ್ರಚಾರ ಮಾಡುವನು.ಸಜ್ಜನರು ಅವನ‌ಜೊತೆಯಲ್ಲಿ ಶ್ರೀಹರಿಯ ಕೀರ್ತನೆ ಯನ್ನು ಜಗತ್ತಿನಲ್ಲಿ ಎಲ್ಲಾ ಕಡೆ ಮಾಡುವರು.ನಿನ್ನ ಮಗನಾಗಿ ಹುಟ್ಟುವವ ಒಬ್ಬ ಸುಜೀವಿ.ಆದರು ದುಷ್ಟ ಜೀವಿಯ ಸಹವಾಸದಿಂದ ಬಣ್ಣವು ಕೆಟ್ಟ ಚಿನ್ನದ ಹಾಗೆ ದುಷ್ಟ ನಾಗುವನು.
ಆದರು ಸ್ವರೂಪ ದಿಂದ ಯೋಗ್ಯನಾದ ಜೀವಿಯು ನಿನ್ನ ಮೊಮ್ಮಗನ ಪ್ರಭಾವದಿಂದಾಗಿ ಸದ್ಗತಿಯನ್ನು ಹೊಂದುವನು.ಅಯೊಗ್ಯ ಜೀವಿಯು ನಿತ್ಯ ನರಕದಲ್ಲಿ ಬಿದ್ದು ಹೊರಳುವನು.ನಿನ್ನ ಮೊಮ್ಮಗನು ಭಗವಂತನ ಭಕ್ತರಲ್ಲಿ ದ್ವೇಷ ಮತ್ಸರ ಇಲ್ಲದವನು,ಮೊದಲಾದ ಸದ್ಗುಣಗಳನ್ನು ಹೊಂದಿರುವ ವನು. ಸಜ್ಜನರು ಸಹ ಅವನಂತೆ ತಾವು ಬಾಳಬೇಕೆಂದು,ಅವನಂತೆ ಸಜ್ಜನ ಗುಣಗಳನ್ನು ಹೊಂದಬೇಕೆಂದು ಆಶಿಸುವರು.
ನಿನ್ನ ಮೊಮ್ಮಗನು ಶ್ರೀ ಹರಿಯಲ್ಲಿ ವಿಶ್ವಾಸವನ್ನು  ಇಡುವವನು ಮತ್ತು ಅವನ ಸರ್ವೋತ್ತಮ ವನ್ನು ಎಲ್ಲಾ ಕಡೆ ಸಾರುವವನು ಆಗುವನು.
ಸಜ್ಜನರ ತಾಪವನ್ನು ಪರಿಹಾರ ಮಾಡುವಂತವನು ಮತ್ತು ಸಾಕ್ಷಾತ್ಆಗಿ ಭಗವಂತನ ದರುಶನ ಮಾಡತಕ್ಕವನು ಮತ್ತು ಅವನಿಂದ ಪ್ರೀಯನಾದವನು ಆಗುವನು.ಇಂತಹ ನಿನ್ನ ಮೊಮ್ಮಗ ಪರಮ ಧನ್ಯನು..
ಎಂದು ಸಮಾಧಾನ ಮಾಡಿ ಹೇಳುತ್ತಾರೆ.
ಇಂತಹ ಪರಮ ಭಾಗವತರಾದ  ಶ್ರೀಪ್ರಹ್ಲಾದ ರಾಜರು ಮುಂದೆ ಶ್ರೀ ವ್ಯಾಸರಾಯ ಗುರುಗಳು ಮತ್ತು ಮಂಚಾಲೆ ಪ್ರಭುಗಳಾಗಿ ನಮ್ಮೆಲ್ಲರ ಉದ್ದಾರಕ್ಕೆ ಅವತಾರ ಮಾಡಿದರು.
ಭಗವಂತನಿಂದ ಸಕಲ ದೇವತೆಗಳಿಂದ ಕಶ್ಯಪರಿಂದ,ಮುಂತಾದ ದೊಡ್ಡ ಜ್ಞಾನಿಗಳಿಂದ ಹೊಗಳಿಸಿಕೊಂಡ ಶ್ರೀ ಪ್ರಹ್ಲಾದ ರಾಜರಂತಹ ಜ್ಞಾನಿಗಳ ಕುರಿತು ನಿಂದನೆ ಮತ್ತು ತುಚ್ಚವಾಗಿ ಮಾತನಾಡುವವರು ಮತ್ತು ನೋಡುವವರು ಅವರು ವೈಷ್ಣವರೇ ಅಲ್ಲ..ಮತ್ತು ಅಂತಹವರಿಗೆ ನಿತ್ಯ ನರಕ ತಪ್ಪಿದ್ದಲ್ಲ..
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಅ.ವಿಜಯ ವಿಠ್ಠಲ🙏
*************


||ಪಿಬತ ಭಾಗವತಂ ರಸಮಾಲಯಂ||
Day23
✍ನಿನ್ನೆಯ ದಿನ ಲೋಕ ಕಂಟಕರಾದ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪು ಜನನವಾದ ಬಗ್ಗೆ ತಿಳಿದು ಕೊಂಡೆವು.ಅವರ ಜನನವಾಗಲು ಆದ ಕಾರಣವೇನು ಎಂಬುದನ್ನು ಶ್ರೀಶುಕಮುನಿಗಳು ಪರೀಕ್ಷಿತ ರಾಜನಿಗೆ ಹೇಳುತ್ತಾರೆ.
ಒಮ್ಮೆ ವೈಕುಂಠ ಲೋಕಕ್ಕೆ ಬ್ರಹ್ಮ ದೇವರ ಮಾನಸ ಪುತ್ರರಾದ,ಸದಾ ಭಗವಂತನ ಧ್ಯಾನದಲ್ಲಿ ,ಅವನ ಚಿಂತನೆಯಲ್ಲಿ ಇರುವ, ಅವನ ಭಕ್ತರಾದ ಸನಕಾದಿ ಮುನಿಗಳು ಪರಮಾತ್ಮನ ದರುಶನ ಮಾಡಲು ಹೋಗಿದ್ದಾರೆ.ನೋಡಲು ಐದು ವರುಷದ ಬಾಲಕರಂತೆ ರೂಪ ಅವರದ್ದು. ವಸ್ತ್ರ ಇಲ್ಲ ಮೈಮೇಲೆ. ವೈಕುಂಠ ದಲ್ಲಿ ಇರುವ ಆರು ಪ್ರಾಕಾರ ಗಳನ್ನು ದಾಟಿದ್ದಾರೆ.ಏಳನೆಯ ಪ್ರಾಕಾರಕ್ಕೆ ಬಂದಿದ್ದಾರೆ.ಅಲ್ಲಿ ಜಯ ವಿಜಯರೆಂಬುವರು ಇಬ್ಬರು ದ್ವಾರಪಾಲಕರು. ಅವರಿಗೆ ಒಳಗಡೆ ಬಿಡದೆ ಅಡ್ಡಿಯನ್ನು ಉಂಟು ಮಾಡುತ್ತಾರೆ.ಒಳಗಡೆ ಹೋಗಬೇಕು ಎನ್ನುವ ಋಷಿಗಳ ಮಾತನ್ನು ಕೇಳದೆ ಬಂಗಾರದ ಬೆತ್ತವನ್ನು ಅಡ್ಡ ಹಿಡಿದು ತಡೆ ಹಾಕುತ್ತಾರೆ..
ಇದರಿಂದಾಗಿ  ಸನಕಾದಿ ಋಷಿಗಳಿಗೆ ಕೋಪಬರುತ್ತದೆ.
"ಪರಮಾತ್ಮನ ಲೋಕದಲ್ಲಿ ಇದ್ದುಕೊಂಡು ದೈತ್ಯರಂತೆ ವರ್ತನೆ ಮಾಡುವ ನೀವು ಭೂಲೋಕದಲ್ಲಿ ಜನಿಸಿ.ಮತ್ತುಸದಾ ಕಾಲ ಪರಮಾತ್ಮನ ದ್ವೇಷ ಮಾಡುತ್ತಾ ಮೂರು ಯೋನಿಗಳಲ್ಲಿ ಅಸುರ ಯೋನಿಯಲ್ಲಿ ಹುಟ್ಟಿ ಅಂತ ಶಾಪ ಕೊಡುತ್ತಾರೆ."
ಆ ಶಾಪವನ್ನು ಜಯ ವಿಜಯರು ಸ್ವೀಕಾರ ಮಾಡುತ್ತಾರೆ.
ಸನಕಾದಿ ಮುನಿಗಳು ಮೊದಲನೆಯ ಬಾರಿಗೆ ವೈಕುಂಠಕ್ಕೆ ಬಂದದ್ದು ಅಲ್ಲ.ಹಿಂದೆ ಅನೇಕ ಬಾರಿ ಬಂದದ್ದು ಉಂಟು.ಅವಾಗ ಏನು ಪ್ರತಿರೋಧ ತೋರದೆ ಅವರಿಗೆ ಒಳಗೆ ಬಿಟ್ಟವರಿಗೆ ಆ ದಿನ ಅವರು ತೋರಿದ ವರ್ತನೆ ಬಲು ವಿಚಿತ್ರ. ಭಗವಂತನ ಸಂಕಲ್ಪಕ್ಕೆ ವಿರುದ್ಧ ಹೋಗುವವರು ಯಾರು ಇಲ್ಲ.
"ದೇವರ ದರುಶನ ಮಾಡಲು ಬಂದಂತಹವರಿಗೆ ಅವರಿಗೆ ಮಾಡುವ ಅವಮಾನ ಹೇಗೆ ವಿನಾಶಕ್ಕೆ ಕಾರಣ ಎನ್ನುವುದು" ಇಲ್ಲಿ ನೋಡಬಹುದು.
ಜಯ ವಿಜಯರಿಗೆ ಅವರ ಪರಿಚಯ ಇದ್ದಿಲ್ಲವೇ?ಇತ್ತು.
ಎಲ್ಲರಿಗಿಂತ ಮೊದಲು ಹುಟ್ಟಿದವರು ಸನಕಾದಿ ಮುನಿಗಳು.ಯಾವಾಗಲೂ ಅವರಿಗೆ ನಮಸ್ಕರಿಸಿ ಒಳಗಡೆ ಬಿಡುತ್ತಾ ಇದ್ದ ಜಯ ವಿಜಯರು ಆದಿನ ಒಳಗಡೆ ಬಿಡಲಿಲ್ಲ. ಇದನ್ನು ನೋಡಿದ ಸನಕಾದಿಗಳು ಶಾಪ ಕೊಡುತ್ತಾರೆ. "ಅಸುರಾವೇಶದಿಂದ ವರ್ತಿಸುವ ನೀವು ಅಸುರರಾಗಿ ಭೂಲೋಕದಲ್ಲಿ ಜನ್ಮ ತಾಳಿ ಎಂದು".
ಜಯ ವಿಜಯರು ಸಾಮಾನ್ಯರಲ್ಲ.ದೇವತೆಗಳು.ಜ್ಞಾನಿಗಳು. ಅಂತಹವರಿಗೆ ಅಸುರಾವೇಶ ಬಂದು ಭಗವಂತನ ದರುಶನಕ್ಕೆ ಬಂದ ಸನಕಾದಿಗಳನ್ನು ತಡೆದು ಘೋರವಾದ ತಪ್ಪು ಮಾಡಿದರು.ದೇವತೆಗಳಿಗೆ ನಿಜವಾಗಿಯೂ ಬರುವ ಪ್ರಾರಬ್ಧ ಕರ್ಮವೆಂದರೆ ಅಸುರಾವೇಶ.ಹೀಗಾಗಿ ಅವರು ಮಹಾನು ಭಾವರಾದ,ಮಹಾನ್ ಜ್ಞಾನಿಗಳಾದ ಸನಕಾದಿಗಳನ್ನು ಸಣ್ಣವರು ಇವರು ಎಂದು ತಡೆದು,ಅವರ ರೂಪವನ್ನು ನೋಡಿ ಅಪಹಾಸ್ಯ ಮಾಡುತ್ತಾರೆ.
"ದೈತ್ಯರಂತೆ ವರ್ತನೆಯನ್ನು ಮಾಡಿದ್ದಕ್ಕಾಗಿ ದೈತ್ಯ ಯೋನಿಗಳಲ್ಲಿ ಜನನವಾಗುವಂತೆ ಶಾಪ ಋಷಿಗಳಿಂದ.
"ಯಾರು ಯಾವ ವರ್ತನೆ ತೋರುವರೋ ಅದಕ್ಕೆ ತಕ್ಕಂತೆ ಫಲ ಭಗವಂತ ಕೊಡುವನು.
ತನ್ನ ದ್ವಾರಪಾಲಕರು ಇವರು ಅವರ ಶಾಪವನ್ನು ತಾನು ಉಪಸಂಹಾರ ಮಾಡಬಹುದಿತ್ತು. ಆದರೆ ಭಗವಂತ ಹಾಗೇ ಮಾಡಲಿಲ್ಲ.ಭಗವಂತ ದೇವತೆಗಳ ಪಕ್ಷವೆಂದು ದೈತ್ಯ ರು ಸಕಲರು ಹೇಳುತ್ತಾರೆ.
 "ತನ್ನ ಭಕ್ತರಿಗೆ ಅವಮಾನ ಯಾರೇ ಮಾಡಲಿ ಅವರಿಗೆ ಶಿಕ್ಷೆ ತಪ್ಪದು ಎನ್ನುವುದು ಅವನ ರೀತಿ ಮತ್ತು ನೀತಿ".
ಭಕ್ತರಾಧೀನ ಅವನು.
ಹೊರಗಡೆ ನಡೆದ ಗದ್ದಲ ಕೇಳಿ ಭಗವಂತ ಶೇಷನ ಮೇಲೆ ಮಲಗಿದ್ದ. ಎಲ್ಲಾ ಗೊತ್ತು. ಸತ್ಯ ಸಂಕಲ್ಪ ಅವನು.ಅವನ ಇಚ್ಛೆ ಯಂತೆ ಪ್ರತಿಯೊಂದು ಕಾರ್ಯ ನಡೆಯುತ್ತದೆ.
ಹೊರಗಡೆಬಂದು ನೋಡುತ್ತಾನೆ. ಶಾಪಗ್ರಸ್ತರಾಗಿ ಜಯ ವಿಜಯರು ತಲೆ ತಗ್ಗಿಸಿಕೊಂಡು ನಿಂತಿದ್ದಾರೆ.ತಕ್ಷಣ ಭಗವಂತ ಸನಕಾದಿಗಳ ಬಳಿ ಸಾರಿ ಕ್ಷಮೆ ಕೇಳುತ್ತಾ ಇದ್ದಾನೆ.
ಅವನ ಲೀಲೆ ಬಹು ವಿಚಿತ್ರ.
"ಇವರು ಮಾಡಿದಂತಹ ತಪ್ಪಿಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ.ಏಕೆಂದರೆ ನೀವು ಬ್ರಾಹ್ಮಣರು,ಋಷಿಗಳು.ಪರಮಾತ್ಮನ ಕಥೆಯನ್ನು ಕೇಳಿದರೆ ಸಕಲ ಪಾಪಗಳು ಸಹ ಪರಿಹಾರ ಮಾಡುತ್ತದೆ ಅಂತ ಬಲ್ಲವರು ಹೇಳುತ್ತಾರೆ. ಎಂತಹವರಾದರು ಭಗವಂತನ ಕಥೆ ಯನ್ನು ಕೇಳಿದರೆಪಾವನರಾಗುವರು.
ಅಂತಹ ಭಗವಂತನ ಕಥೆ ಯನ್ನು ಹೇಳುವ ನಿಮಗೆ ನನ್ನ ಕಡೆಯವರಿಂದ ಅವಮಾನ ವಾಗಿದೆ ಕ್ಷಮಿಸಿ. 
ನಿಮ್ಮಿಂದಲೇ ನನಗೆ ಕೀರ್ತಿ. ನನ್ನ ಕೀರ್ತಿಯನ್ನು ಜಗತ್ತಿನ ಎಲ್ಲ ಕಡೆ ಸಾರುವಂತಹವರು ನೀವು.ನಿಮ್ಮ ಶಾಪವನ್ನು ನಾನು ಅನುಮೋದನೆ ಮಾಡಿದ್ದೇನೆ.ಹಿಂದೆ ಭೃಗು ಋಷಿಗಳು ಬಂದು ಸುಮ್ಮನೆ ಮಲಗಿದ್ದ ನನ್ನ ಎದೆಗೆ ಒದ್ದಾಗಲು ಅವರ ಪಾದವನ್ನು ತೊಳೆದು ಆದರ ಮಾಡಿದ್ದೇನೆ.
ಜಯ ವಿಜಯರು ಇದನ್ನು ತಿಳಿಯದೇ ನನ್ನ ಭಕ್ತರಾದ ನಿಮಗೆ ಈ ತಪ್ಪನ್ನು ಮಾಡಿದ್ದಾರೆ. ಅವರಿಗೆ ಕ್ಷಮೆ ಮಾಡಿ ಎಂದು ಕೇಳಿ ಅವರಿಗೆ ಸತ್ಕಾರ ಮಾಡಿ ಕಳುಹಿಸಿ ಕೊಡುವ.
ನಂತರದಲ್ಲಿ ಅವರಿಗೆ ಹೇಳುತ್ತಾನೆ.
"ಈಗ ಈ ಶಾಪವನ್ನು ನಾನು ಅನುಮೋದನೆ ಮಾಡುತ್ತೇನೆ. ನೀವು ಏಳು ಜನ್ಮ ನನ್ನ ಭಕ್ತ ರಾಗಿ ಅವತಾರ ಮಾಡುವಿರಾ??ಅಥವಾ ಮೂರು ಜನ್ಮಗಳಲ್ಲಿ ಅಸುರ ಕುಲದಲ್ಲಿ ಹುಟ್ಟಿ ನನ್ನ ದ್ವೇಷ ಮಾಡಿ ನನ್ನ ಕೈಯಲ್ಲಿ ಹತರಾಗಿ ಇಲ್ಲಿ ಬಂದು ಸೇರುವಿರಿ.ಯಾವುದು ಬೇಕು?? ಎಂದಾಗ 
ಅವರು ಅಸುರರಾಗಿ ಮೂರು ಜನ್ಮ ತಾಳುತ್ತೇವೆ ಎಂದು ಹೇಳುತ್ತಾರೆ.
ಅವಾಗ ಅವರು ಭಗವಂತನಿಗೆ ಕ್ಷಮೆ ಯನ್ನು ಕೇಳಿ ಎಲ್ಲಿ ಹುಟ್ಟಬೇಕು ಎಂದಾಗ "ಸಂಧ್ಯಾಕಾಲದಲ್ಲಿ ಗರ್ಭಧಾರಣೆ ಮಾಡಿದ ದಿತಿಯ ಗರ್ಭದಲ್ಲಿ ಜನನವಾಗಲಿ" ಎಂದು ಹೇಳಿದ್ದಾನೆ.
ಹೀಗೆ ಅವರಿಬ್ಬರ ಜನನ ವಾಗಿದೆ..
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ
|ಏಳಿರೋ ವೈಕುಂಠಕೆ

🙏ಶ್ರೀ ಕಪಿಲಾಯ ನಮಃ
*********************

24
||ಪಿಬತ ಭಾಗವತಂ ರಸಮಾಲಯಂ||
Day 24.
 ✍️ ಬ್ರಹ್ಮ ದೇವರ ಮಾನಸ ಪುತ್ರ ರಾದ ಸನಕಾದಿಗಳು ಭಗವಂತನ ದರುಶನ ಮಾಡಲು ವೈಕುಂಠಕ್ಕೆ ಬರುತ್ತಾರೆ.
ಆರು ದ್ವಾರಗಳನ್ನು ಮತ್ತು ಅಲ್ಲಿ ಇರುವ ದ್ವಾರಪಾಲಕರಿಂದ ತಡೆ ಹಿಡಿಯಲ್ಪಡದೆ,ಅವರಿಂದ ವಂದಿತರಾಗಿ ಸನಕಾದಿಗಳು ಏಳನೇ ಬಾಗಿಲಿನ ಹತ್ತಿರ ಬರುತ್ತಾರೆ. ಅಲ್ಲಿ ಅವರನ್ನು ಇಬ್ಬರು ತಡೆ ಹಿಡಿಯುವರು.
ನೋಡಲು ಚತುರ್ಭುಜ ದಾರಿಯಾಗಿ,ಸಕಲ ಆಭರಣಗಳು ಇಂದ ಒಪ್ಪುತ ಕೈಯಲ್ಲಿ ಗದಾಪಾಣಿಗಳಾಗಿ ನಿಂತ ಜಯ ವಿಜಯ ರೆಂಬ ದ್ವಾರಪಾಲಕರು  ಆ ಮುನಿಬಾಲರನ್ನು ಕಂಡು ಮುನಿದು,ಕೋಪದಿಂದ ಹುಬ್ಬನ್ನು ದೊಡ್ಡದು ಮಾಡಿ ಕಣ್ಣಿಂದ ಕಿಡಿಗಳನ್ನು ಸುರಿಸಿ ,ಬಿರು ಮಾತುಗಳನ್ನಾಡಿ ಅವರನ್ನು ತಡೆ ಹಿಡಿಯುವರು.
ಭಗವಂತನ ಅನುಗ್ರಹ ದಿಂದ ಯಾರಿಂದಲೂ ತಡೆ ಹಿಡಿಯಲು ಆಗದ ಬೇಕಾದ ಕಡೆ ಸಂಚರಿಸುವ ಆ ಪರಮ ಭಾಗವತ ಶಿರೋಮಣಿಗಳು ತಮ್ಮ ನೋಟದಿಂದ ಅವರನ್ನು ನೋಡುತ್ತಾರೆ.
ದಿಗಂಬರರು,ಐದು ವರುಷದ ಬಾಲಕರಂತೆ ಕಾಣುವ ಅವರ ಶರೀರ,ಪರಮಾತ್ಮನ ಗುಣವನ್ನು ಸದಾಕಾಲವೂ ಕೊಂಡಾಡುವ
 ಅವರನ್ನು ನೋಡಿ ಪರಿ ಹಾಸ್ಯ ಮಾಡಿ ನಗುವ ಜಯ ವಿಜಯರ ಈ ಪರಿಯನ್ನು ಸಕಲ ದೇವತೆಗಳು ನೋಡುತ್ತಾ ಇರಲು..
ತಕ್ಷಣ ಮುನಿಗಳು
"ಎಷ್ಟೋ ಜನುಮಗಳಲ್ಲಿ ಶ್ರೀಶನ ಪಾದ ಸೇವೆ ಮಾಡಿದ ಫಲ ಇಲ್ಲಿ ಇರುವ ಭಾಗ್ಯ ನಿಮಗೆ ಸಿಕ್ಕಿದೆ.ವಾಸುದೇವನ ಮಂದಿರದಲ್ಲಿ ಇದ್ದುಕೊಂಡು ಅವನ ಭಕ್ತರಲ್ಲಿ,ಸಜ್ಜನರಲ್ಲಿ ಸಮವಾಗಿ ವರ್ತಿಸದೇ ಇರುವದುಂಟೇ??ನಿಮ್ಮಂತೆ ಭಗವಂತ ಇರುವುದುಂಟೆ?? ಸರ್ವಗುಣಪೂರ್ಣನು,ಆದ ಭಗವಂತ ನಲ್ಲಿ ದೋಷಗಳನ್ನು ಹುಡುಕುವದು ಅಸಾಧ್ಯ.ಭಗವಂತನ ರೂಪಗಳಿಗೆ ಭೇದವಿಲ್ಲ..ನೀವು ಸುರವೇಷಿಗಳಾಗಿದ್ದರು ಭಗವಂತನ ರೂಪಗಳಿಗೆ ಭೇದವನ್ನು ಕಾಣುತ್ತಾ ಇರುವಿರಿ.
ನಿರ್ದೋಷನಾದ ,ಸರ್ವಗುಣ ಪೂರ್ಣ ನಾದ ಭಗವಂತನ ರೂಪಗಳಿಗೆ ಭೇದವನ್ನು ಕಾಣುವವನು‌ ನಿತ್ಯ ದುಃಖವನ್ನು ಹೊಂದುವನು.ಅಂಧತಮಸ್ಸಿಗೆ ಬೀಳುವನು.
ನಮ್ಮ ಅಂತರ್ಯಾಮಿಯಾದ ಶ್ರೀ ಹರಿಗೆ ಪರಿಹಾಸ್ಯವನ್ನು ಮಾಡಿದಿರಿ.ದಂಡದಿಂದ ನಮ್ಮನ್ನು ತಡೆದ ಕಾರಣವೇನು?? ಶ್ರೀ ಹರಿಗೆ ನಾವು ಆಗದವರು??
ಹರಿದ್ವೇಷಿಗಳೆಂದು ತಡೆದಿರಾ??ಅಥವಾ ನಮ್ಮ ಇಂದ ಶ್ರೀ ಹರಿಗೆ ಏನಾದರೂ ತೊಂದರೆ ಆಗುವದೆಂದು ತಡೆದಿರಾ??
*ಎರಡುತಪ್ಪು..
ಶಾಂತಸ್ವರೂಪನಾದ ಶ್ರೀ ಹರಿಗೆ ಯಾರ ಮೇಲೆ ಸಹ ದ್ವೇಷ ಕೋಪ ಅಸೂಯೆ ಗಳಿಲ್ಲ.ಅವನಿಗೆ ಪ್ರತಿಸ್ಪರ್ಧಿ ಗಳಿಲ್ಲ..ಅಪ್ರಾಕೃತನಾದ ಶ್ರೀ ಹರಿಗೆ ತೊಂದರೆ ಯನ್ನು ಕೊಡುವವರು ಯಾರು ಹಿಂದೆ ಮುಂದೆ ಮತ್ತು ಇಂದು ಸಹ ಹುಟ್ಟಿಲ್ಲ..ನಾವೇನು ಶ್ರೀ ಹರಿ ದ್ವೇಷ ಮಾಡುವವರಲ್ಲ..ನಮ್ಮ ಒಳಗಿನ ಹರಿ ನಿಮ್ಮ ವೈಕುಂಠ ದೊಳಗೆ ಇರುವ ಶ್ರೀ ಹರಿಗೆ ತೊಂದರೆ ಉಂಟುಮಾಡುವ ಎಂದು ತಡೆದಿರಾ??
ಈ ಭೇದ ಜ್ಞಾನ ನಿಮಗೆ ಬಂದಿರುವುದರಿಂದ ಅನರ್ಥ ತಪ್ಪದು..ನಮ್ಮ ಒಳಗೆ ಇರುವ ಹರಿಯು ಮತ್ತು ವೈಕುಂಠ ದ ಹರಿಯು ಬೇರೆ ಬೇರೆ ಮತ್ತು ಭೇದ ವೆಂದು ತಿಳಿದ ಪಾಪದ ಫಲವಾಗಿ ನೀವಿಬ್ಬರು ಅಸುರ ವರ್ತನೆ ತೋರಿದ ಫಲವಾಗಿ ಇಲ್ಲಿ ಸೇವೆ ಮಾಡುವದು ಸೂಕ್ತ ವಲ್ಲ.. ಭೂಲೋಕದಲ್ಲಿ ಅಸುರರಾಗಿ ಮೂರು ಬಾರಿ ಜನಿಸಿ ಎಂದು ಶಾಪವನ್ನು ಕೊಟ್ಟಿದ್ದಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏

25
||ಪಿಬತ ಭಾಗವತಂ ರಸಮಾಲಯಂ||
Day24
ನಿನ್ನೆಯ ದಿನ ಶ್ರೀ ಸನಕಾದಿ ಮುನಿಗಳು ವೈಕುಂಠದಲ್ಲಿ ದ್ವಾರಪಾಲಕರಾದ ಜಯ ವಿಜಯರ ಅಸುರಿ ವರ್ತನೆಯ ಪರಿಯನ್ನು ನೋಡಿ ಶಾಪ ಕೊಟ್ಟ ಬಗ್ಗೆ ತಿಳಿದುಕೊಂಡೆವು..
ಸನಕಾದಿಗಳು ಕೊಟ್ಟ ಶಾಪವನ್ನು ಅರಿತು ಉಭಯ ರು ಋಷಿಗಳ ಪಾದಕ್ಕೆ ಬಿದ್ದು ಕೇಳುತ್ತಾರೆ.
ತಮ್ಮ ತಪ್ಪನ್ನು ಕ್ಷಮಿಸಿ .ತಮ್ಮ ಶಾಪವನ್ನು ಉಪಸಂಹಾರ ಮಾಡಲು ತಮಗೆ ಶಕ್ಯವಿದೆ.ಆದರು ತಮ್ಮ ಬಳಿ ಕೇಳಿಕೊಳ್ಳುವದು ಇಷ್ಟೇ..ಮುಂದೆ ಈ ದೇವತಾ ದೇಹ ಬಂದಾಗ ಮತ್ತೆ ಯಾವತ್ತೂ ಈ ತರಹ ವರ್ತನೆ ನಮ್ಮ ಇಂದ ಇಲ್ಲಿ ಆಗದಿರಲಿ ಎಂದು ಅನುಗ್ರಹ ಮಾಡಿ
ಹಿಂದೆ ಮಾಡಿದ ತಪ್ಪಿಗೆ ಇದು ಪ್ರಾಯಶ್ಚಿತ್ತ ವಾಗಲಿ.ಮುಂದೆ ಮೂಲ ರೂಪಿಗಳಾಗಿ ಇಲ್ಲಿ ಬಂದಾಗ ಎಂದು ಈ ತರಹ ಅಜ್ಞಾನ ಅಹಂಕಾರ ಬಾರದೇ ಇರಲಿ..ಎಂದು ಬೇಡಿಕೊಂಡರು.
ಇದೆಲ್ಲವನ್ನೂ ಕೇಳಿದ ನೋಡಿದ
ಶ್ರೀ ಮನ್ ನಾರಾಯಣ ದೇವರು ಪತ್ನಿ ಸಮೇತವಾಗಿ ಮುಕ್ತ ಸ್ಥಾನ ದಿಂದ ಹೊರಟು ಏಳನೇ ಬಾಗಿಲಿನ ವರೆಗೆ ನಡೆದು ಕೊಂಡು ಬಂದಿದ್ದಾನೆ.
ಭಗವಂತ ಬರುವ ವರ್ಣನೆ.
ಇಂದಿರೆಯ ಒಡಗೂಡಿ ದ್ವಾರದೇಶದಲ್ಲಿ ನಿಂತ ಭಗವಂತನ ಹಿಂದೆ ಅವನ ಸೇವಕರು ಅರ್ಘ್ಯ ಪಾದ್ಯಾದಿಗಳನ್ನು ಮಾಡಲು ಪರಿಕರಗಳನ್ನು ಹೊತ್ತು ತರುತ್ತಾ ಇದ್ದಾರೆ.
ಚಾಮರಗಳಿಂದ ಭಗವಂತನಿಗೆ ಬೀಸುತ್ತಾ ಇದ್ದಾರೆ.ಚಂದ್ರ ನಂತೆ ಪೋಲುವ ಶ್ವೇತ ಚ್ಛತ್ರ.ಮುತ್ತುಗಳಿಂದ ಅಲಂಕೃತ ಗೊಂಡಿದೆ.
ಪುನಃ ಪುನಃ ನೋಡಬೇಕು ಎನ್ನುವ ರೂಪ..
ಶ್ರೀ ಹರಿಯ ವಕ್ಷ ಸ್ಥಳದಿ ರಮಾದೇವಿಯು,ಕಂಠದಿ ಕೌಸ್ತುಭ ಮಣಿಯಲ್ಲಿ ಬ್ರಹ್ಮ ದೇವರು,ಚೂಡಾಮಣಿಯಾಗಿ ವಾಯುದೇವರು ಶೋಭಿಸುತ್ತಾ ಇದ್ದಾರೆ..
ಪೀತಾಂಬರ ಧಾರಿಯಾಗಿ,ಮಿಂಚಿನಂತೆ ಹೊಳೆಯುವ ಮಕರ ಕುಂಡಲ‌,ನವರತ್ನ ವಜ್ರ ವೈಡೂರ್ಯದ ಕಿರೀಟ ಧಾರಿಯಾಗಿ, ಸರ್ವಾಭರಣಗಳಿಂದ ಒಪ್ಪುತ, ಮತ್ತು ವನಮಾಲ ತುಲಸಿ ಹಾರಗಳಿಂದ ಭೂಷಿತನಾಗಿ, ಅಭಯವನೀವ ಕರಗಳಿಂದ ಶೋಭಿಸುತ್ತಾ ,ಉನ್ನತವಾದ ನಾಸಿಕ,ಮಣಿಖಚಿತ ಕಿರೀಟ, ಭುಜ ಮಧ್ಯದಲ್ಲಿ ಶೋಭಿಸುವ ಹಾರ ಕೊರಳಲ್ಲಿ ಕೌಸ್ತುಭಮಣಿ..
ಇಂತಹ  ಸುಂದರ ವಾದ ಭಗವಂತನ ರೂಪವನ್ನು  ಇಂದಿರೆಯುನೋಡುತ್ತಾ ಇನ್ನೂ  ಅವನ ರೂಪ ಅಲಂಕಾರವನ್ನು ಎಣಿಸಲು ಮತ್ತು ವರ್ಣಿಸಲು ಆಗದು ಎಂದು ಒಂದು ರೂಪದಿಂದ ಅವನ ಅವಯವಗಳನ್ನು ಆಶ್ರಯ ಮಾಡಿದ್ದಾಳೆ.
ಬ್ರಹ್ಮಾದಿ ದೇವತೆಗಳಿಗೆ ಸಹ ಅವರ ಯಥಾನುಶಕ್ಯವಾಗಿ,ಗೋಚರಿಸುವ ಭಗವಂತನ ರೂಪವನ್ನು ಕಂಡು ಸನಕಾದಿ ಮುನಿಗಳು ಆನಂದ ಭರಿತರಾಗಿ ಶಿರಸಾಷ್ಟಾಂಗವನ್ನು ಭಗವಂತನಿಗೆ ಮಾಡುತ್ತಾ ಆ ರೂಪವನ್ನು ಪುನಃ ಪುನಃ ನೋಡುತ್ತಾ ಆನಂದವನ್ನು ಪಡುತ್ತಾ ನಿಂತಿದ್ದಾರೆ..
ಶ್ರೀ ಹರಿಯ ಪ್ರಸನ್ನ ವಾದ ರೂಪವನ್ನು ಕಂಡು ಸನಕಾದಿಗಳು ಪ್ರಸನ್ನ ರಾಗಿ ನಮಸ್ಕಾರ🙏 ಮಾಡಿದ್ದಾರೆ..
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಅ.ವಿಜಯ ವಿಠ್ಠಲ🙏

26
|ಪಿಬತ ಭಾಗವತಂ ರಸಮಾಲಯಂ||
Day26.
(yesterday's day 25)
✍️ಶ್ರೀ ಸನಕಾದಿಗಳು ಕೊಟ್ಟ ಶಾಪವನ್ನು ಕೇಳಿ ಭಗವಂತ ಇಂದಿರೆಯ ಒಡಗೂಡಿ ಸಕಲ ದೇವತಾ ಪರಿವಾರದ ಜೊತೆಯಲ್ಲಿ ಏಳನೆಯ ಪ್ರಾಕಾರ ಕ್ಕೆ ನಡೆದು ಬಂದಿದ್ದಾನೆ.
ಭಗವಂತನ ದಿವ್ಯ ರೂಪವನ್ನು ಕಂಡು ಸನಕಾದಿಗಳು ಆನಂದ ಭರಿತರಾಗಿದ್ದಾರೆ.
ಶ್ರೀ ಹರಿಯನ್ನು ಸ್ತೋತ್ರ ಮಾಡುತ್ತಾ ಇದ್ದಾರೆ.
"ಅನಂತಮಹಿಮನೆ,ಅನಂತ ಗುಣ ಪೂರ್ಣ, ಅನಂತ ರೂಪಿಯೇ,ಅನಂತ ಚೆಲುವಿನ ಖಣಿಯೇ,ಅನಂತ ನಾಮಕನಾಗಿ ಅನೇಕ ಜೀವರಾಶಿಗಳನ್ನು ಆಳುವ ದೊರೆಯೇ..ಜೀವಿಗಳ ಹೃದಯ ದಲ್ಲಿ ಇದ್ದು ದುರಾತ್ಮರಿಗೆ ಗೋಚರನಾಗದವ ನೀನು..ಇಂದು ನಮ್ಮ ನಯನಾನಂದಕರವಾಗಿ ಸಿರಿಯ ಒಡಗೂಡಿ ಬಂದು ನಿಂದಿರುವೆ.
ನಿನ್ನ ಸುತನಾದ ನಮ್ಮ ತಂದೆ ಯಾದ ಆ ಬ್ರಹ್ಮ ದೇವರು ನಮಗೆ ಗೋಪ್ಯವಾಗಿ ಉಪದೇಶಿಸಿದ ನಿನ್ನ ಗುಣ,ರೂಪ, ಇವುಗಳನ್ನು ನಮ್ಮ ಕರ್ಣದಿಂದ ಕೇಳಿ ನಮ್ಮ ಹೃದಯ ಕಮಲದಲ್ಲಿ ಇದ್ದ ನಿನ್ನನ್ನು ಇಂದು ಕಂಡು ಧನ್ಯರಾದೆವು..ನೀನು ಸುಜನರ ಪರ..ದುರ್ಜನರ ಸೇವೆಯನೊಲ್ಲದವ ,ಅಪ್ರತಿಮ ಮಲ್ಲ ನೀನು..ನಿನಗೆ ಹಿಂದೆ ಮುಂದೆ ಮತ್ತು ಇಂದು ಯಾರು ಪ್ರತಿಸ್ಪರ್ಧಿ ಗಳು ಇಲ್ಲ..ಕರುಣಾಸಾಗರ ನೀನು..ಶರಣೆಂದವರ ಪೊರೆವವ ಕರುಣಾ ಸಮುದ್ರ ನೀನು..
ನಿನ್ನ ಗುಣ ರೂಪಗಳನ್ನು ಎಣಿಸಲು ರಮಾ ಬ್ರಹ್ಮ ಆದಿ ದೇವತೆಗಳಿಗೆ ಸಹ ಶಕ್ಯವಿಲ್ಲ.
ನಿನ್ನ ಮಹಿಮೆಯನ್ನು ಕೇಳಿ ಅರಿಷಡ್ವರ್ಗ ಗಳನ್ನು ಬಿಟ್ಟು ನಿನ್ನ ಪಾದಕಮಲವನ್ನು ಚಿಂತೆ ಮಾಡುವವರೇ ಸುಜನರು..ನಿನ್ನ ನೋಡುವದೇ ಅವರ ಅಭಿಲಾಷೆ. ಯಾವ ಸಂಪತ್ತು ಪದವಿ ಸಹ ಬೇಡ ಅವರಿಗೆ.
ಹೇ ಅನಂತನೇ!ಮುಕುಂದನೇ ..ನಿನ್ನ ಆಳುಗಳನ್ನು ನಾವು ಗಳು ಶಪಿಸಿದ್ದೇವೆ.
ಅದರಿಂದ ಪಾಪವು ಬಂದಿದ್ದರೆ ಅದಕ್ಕೆ ನರಕ ಸದೃಶವಾದ ದುಃಖ ನಮಗೆ ಬರುವದು.
ಇಂತಹ ದುಃಖ ವನ್ನು ನೀನು ಕೊಡುವವನಾಗಿದ್ದರೆ ಅದನ್ನು ಅನುಭವಿಸಲು ನಾವುಗಳು ಸಿದ್ದ.ಆವ ಯೋನಿಯಲ್ಲಿ ಇರಿಸು.ಆವ ಲೋಕದಲ್ಲಿ ಇರಿಸು..ಆವಾಗ ನಿನ್ನ ಕ್ಷಣ ಬಿಡದಂತೆ ನಿನ್ನ ನಾಮವು ಸದಾ ನಮ್ಮ ನಾಲಗೆ ಯಲ್ಲಿ ಬರುತ್ತಾ ಇರಲಿ.ನಮ್ಮ ಕರ್ಣಗಳು ನಿನ್ನ ನಾಮ ವನ್ನು ಕ್ಷಣ ಬಿಡದೇ ಸಹ ಕೇಳುತ್ತಾ ಇರಲಿ.ಮನಸ್ಸು ನಿನ್ನ ಪಾದ ಮತ್ತು ರೂಪವನ್ನು ಸ್ಮರಿಸುತ್ತಾ ಇರಲಿ.ಕಣ್ಣು ಗಳು ನಿನ್ನ ರೂಪವನ್ನು ನೋಡುತ್ತಾ ಇರಲಿ.ನಾಸಿಕವು ನಿನ್ನ ನಿರ್ಮಾಲ್ಯವನ್ನು ಅಘ್ರಾಣಿಸುತ್ತಾ ಇರಲಿ.
ಹೀಗಿದ್ದರೆ ಯಾವ ದುಃಖ ವನ್ನು ಸಹ ಅನುಭವಿಸಲು ನಾವು ಸಿದ್ದ.
ನಿನ್ನ ಈ ರೂಪವನ್ನು ನೋಡಿ ನಮ್ಮ ನೇತ್ರ, ಮನಸ್ಸು ಬಹಳ ಆನಂದ ಉಂಟಾಗಿದೆ.ಈ ಉಪಕಾರ ಕ್ಕೆ ನಾವು ಏನು ಸಹ ಕೊಡಲು ಸಾಧ್ಯವಿಲ್ಲ. ಪ್ರತಿಯಾಗಿ ಬಾರಿ ಬಾರಿಗೆ ನಿನಗೆ ನಮಸ್ಕಾರ ಮಾಡುವೆವು..ನಿನ್ನ ಈ ಸುಂದರ ರೂಪ ದುಷ್ಟ ಜನರಿಗೆ ದೊರಕದು.ಶಿಷ್ಟ ಜನರಿಗೆ ದೊರಕುವುದು..
ಎಂದು ಹೇಳಿ ಅವನ ಪಾದಕಮಲಗಳಿಗೆ ಶಿರ ಸಾಷ್ಟಾಂಗ ನಮಸ್ಕಾರ🙏 ಮಾಡಿದ್ದಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀ ವಿಷ್ಣುವೇ ನಮಃ🙏
27
||ಪಿಬತ ಭಾಗವತಂ ರಸಮಾಲಯಂ||
Day 27
✍️ತಮ್ಮ ಮುಂದೆ ಬಂದು ನಿಂತ ಭಗವಂತ ನನ್ನು ಶ್ರೀ ಸನಕಾದಿಗಳು ಬಹುವಾಗಿ ಸ್ತೋತ್ರ ಮಾಡಿದ್ದಾರೆ.
ಭಗವಂತ ಅವರ ಸ್ತೋತ್ರ ದಿಂದ ಪ್ರೀತನಾದನು..(ಅದು ಸಹ ಅವನ ಲೀಲೆ)
"ಸನಕಾದಿ ಮುನಿವರ್ಯರೇ! ನನ್ನ ಮನೆಯ ದ್ವಾರಪಾಲಕರಾದ ಜಯ ವಿಜಯರು ಅಹಂಕಾರ ಮತ್ತು ಅಜ್ಞಾನದ ವರ್ತನೆ ತೋರಿ ನಿಮಗೆ ಅಪರಾಧ ಮಾಡಿದ್ದಾರೆ.ಪರಿವಾರದವರು ಅಥವಾ ಸೇವಕರು ತಪ್ಪು ಮಾಡಿದರೆ ಅದು ಮನೆಯ ಯಜಮಾನ ಮಾಡಿದಂತೆ.ಅದು ಅವನ ಕೀರ್ತಿ ನಾಶಕ.
ನನ್ನ ವೈಕುಂಠ ದ್ವಾರದ ಪ್ರಮುಖ್ಯರಾದ ಜಯ ವಿಜಯರು ನನ್ನನ್ನು ಲೆಕ್ಕಿಸದೇ ನಿಮಗೆ ಬಹುವಾಗಿ ಅಪರಾಧ ಮಾಡಿದ್ದಾರೆ.ಇವರಿಗೆ ನೀವಿತ್ತ ಶಾಪವನ್ನು ನಾನು ಅನುಮೋದನೆ ಮಾಡಿದ್ದೇನೆ.ಬ್ರಾಹ್ಮಣ ರೆಂದರೆ ಸರ್ವರಿಗು ದೈವ ಸ್ವರೂಪ ಎಂದೆನಿಸುವರು.ಅದರಲ್ಲೂ ಸಹ ನನ್ನ ಭಕ್ತರು ಸಹ ವಿಶೇಷ ಪೂಜನೀಯರು.ಆದಾಗ್ಯೂ ಸ್ವಕಿಂಕರು ಮಾಡಿದ ತಪ್ಪು ಯಜಮಾನನಿಗೆ ಅಪವಾದ ತರುವಂತೆ ನನ್ನ ಕಿಂಕರರು ಮಾಡಿದ ಅಪರಾಧದ ದಿಂದ ನೀವು ಪ್ರಸನ್ನ ರಾಗಬೇಕೆಂದು ಕೇಳಿಕೊಳ್ಳುವೆನು.
ಲೋಕದಲ್ಲಿ ಭೃತ್ಯನು ಮಾಡಿದ ಅಪರಾಧಕ್ಕೆ ಯಜಮಾನನ ಹೆಸರೆತ್ತಿ ನಿಂದಿಸುವರು.ಆ ಅಪವಾದವು ಆ ಯಜಮಾನನ ಕೀರ್ತಿ ಚಂದ್ರಿಕೆಯನ್ನು ಹೇಗೆ ಕುಷ್ಠರೋಗ ಚರ್ಮದ ಅಂದವನ್ನು ಕೆಡಿಸುವದೋ ಅದರಂತೆ ಆಗುವದು.
ನಾನು ಬ್ರಹ್ಮಣ್ಯ ದೇವನು.ಗೋ ಬ್ರಾಹ್ಮಣ ಹಿತಾಯಚ ಎಂದು ಬಲ್ಲವರು ಹೇಳುತ್ತಾರೆ. ಬ್ರಾಹ್ಮಣ ರಾದ ನಿಮಗೆ ಮಾಡಿದ ಅಪರಾಧವು ನನಗೆ ಮಾಡಿದಂತೆಯೆ ಆಯಿತು.
ಆಚಾರಶೀಲರಾದ ಬ್ರಾಹ್ಮಣ ರಲ್ಲಿ ಸಕಲ ದೇವತೆಗಳ ಸನ್ನಿಧಾನವು ಇರುವುದರಿಂದ ಬ್ರಹ್ಮಾದಿ ದೇವತೆಗಳಿಗೆ ಸಹ ಇವರು ಅಪರಾಧಿ ಗಳಾದರು.
ಸೇವಕರ ಆಯೋಗ್ಯ ನಡತೆಯು ಅವರ ಯಜಮಾನನ ಕೀರ್ತಿ ಯನ್ನು ನಾಶ ಮಾಡುತ್ತದೆ. 
ಹರಿಕಥಾಮೃತ ಶ್ರವಣ ಮಾಡುವವರಿಗೆಲ್ಲ ಅವರನ್ನು ಪಾವನ ಮಾಡುವವನು  ಶ್ರೀ ಮನ್ ನಾರಾಯಣನು  ಎಂಬ ನನ್ನ ಈ ಕೀರ್ತಿಗೆ ಬ್ರಾಹ್ಮಣರೇ ಕಾರಣರು.ಆದ್ದರಿಂದಲೇ ನಾನು ಬ್ರಹ್ಮ ಜ್ಞಾನಿಗಳ ವಾಣಿ ಗೆ ಪ್ರತಿಕೂಲವಾಗಿ ಅಂದರೆ ವಿರುದ್ಧ ವಾಗಿ ವ್ಯಾಪಾರ ವನ್ನು ಮಾಡುವದೇ ಇಲ್ಲ..
ಹಾಗೇನಾದರು  ನನ್ನ ಬಾಹುಗಳು ಮಾಡಿದರೆ ಅದನ್ನು ಕತ್ತರಿಸಲು ಸಹ ಸಿದ್ದನಿರುವೆನು.ವಿಪ್ರರ ಪಾದ ಸೇವನೆಯಿಂದ ನಾನು ಐಶ್ವರ್ಯ ವಂತನಾದೆನು.ನಾನು ಸ್ವರಮಣ ನಾದರು ನನಗೆ ಪತ್ನಿ ವಿಯೋಗ ಎನ್ನುವದು ಇಲ್ಲದಂತಾಯಿತು.ವಿಪ್ರರಿಗೆ ಭೋಜನ ಮಾಡಿಸಿದರೆ ನಾನು ತೃಪ್ತನಾಗುವ ಹಾಗೆ ಯಜ್ಞ ದಲ್ಲಿ ಮಾಡಿದ ಹವಿರ್ಧಾನದಿಂದ ತೃಪ್ತನಾಗುವದಿಲ್ಲ.
ವಿಪ್ರರು ಕವಳ ಸಮಯದಲ್ಲಿ ಗೋವಿಂದ  ಎಂದು ನನ್ನ ನಾಮವನ್ನು ಸ್ಮರಣೆ ಮಾಡಿ,ಅದನ್ನು ನನಗೆ ಅರ್ಪಿಸಿ ಭುಂಜಿಸುವಾಗ ,ಪ್ರೀತ ನಾದಂತೆ,ಆ ಯಜಮಾನ ಮಾಡಿದ ಉತ್ತಮ ಯಜ್ಞ ದಿಂದಲು ಸಹ ನಾನು ಪ್ರೀತ ನಾಗುವದಿಲ್ಲ.
ನಾನು ಪಾವನ ತಮ ಮಂಗಳಕರನಾದರು ನಿಮ್ಮಂತಹ ವಿಪ್ರರ ಪಾದ ಧೂಳಿಯನ್ನು  ನನ್ನ ಕಿರೀಟ ದಲ್ಲಿ ಧರಿಸುವೆನೆಂದ ಬಳಿಕ ಯಾವನು ತಾನೇ  ನನ್ನ ಭಕ್ತರಾದ ವಿಪ್ರರನ್ನು ಒಲಿಸಿಕೊಳ್ಳಲು ಪ್ರಯತ್ನ ಪಡದೇ ಅವರನ್ನು ಪೂಜಿಸದೇ ಅಂತಹ ಅಪರಾಧವನ್ನು ಮಾಡದೇ ಇರುವವನು..??
ಹೀಗೆ ಬಹುವಾಗಿ ಅನೇಕ ಆನಂದವನ್ನು ಉಂಟು ಮಾಡುವ ಮಾತುಗಳನ್ನು ಭಗವಂತ ಸನಕಾದಿಗಳಿಗೆ ಹೇಳುತ್ತಾನೆ.
ಮುಂದೆ ಭಗವಂತ ಏನು ಹೇಳಿದ. ಅದನ್ನು ನೋಡೋಣ.
ಮುಂದಿನ ಭಾಗ ನಂತರ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀ ಕಪಿಲಾಯ ನಮಃ🙏
************

28
ಪಿಬತ ಭಾಗವತಂ ರಸಮಾಲಯಂ||
Day 28
ಭಗವಂತ ಮುಂದೆ ಹೇಳುತ್ತಾನೆ. ವಿಪ್ರರ ಹಿಂಸಕರನ್ನು, ಮತ್ತು ಅವರನ್ನು ಕೆಟ್ಟಗಣ್ಣಿನಿಂದ ನೋಡಿದವರ ಕಣ್ಣುಗಳನ್ನು ಯಮಲೋಕದ ಹದ್ದುಗಳು ತಿಂದುತೇಗುವವು.
ವಿಪ್ರರ ಪಾದೋದಕವು ಚಂದ್ರ ಮೊದಲಾದ ಸಕಲ ದೇವ ಮಾನವರನ್ನು ಪಾವನ ಮಾಡುವದು.ನನ್ನ ಭಕ್ತರು ಆದ ದ್ವಿಜರನ್ನು ವಿರೋಧ ಮಾಡಿ ದ್ರೋಹ ವೆಸಗಿದ ಪಾಪಾತ್ಮರು ನರಕವಂ ಸೇರಿ ರವಿಸುತನ ದಂಡಕ್ಕೆ ಚಂಡಶಾಸನಕ್ಕೆ ಗುರಿಯಾಗುವರು.
ನನ್ನ ಭಕ್ತರು ನನ್ನ ಚಲ ಪ್ರತಿಮೆ ಗಳು.ಸಜ್ಜನರು ಅಂತಹ ಭಕ್ತರನ್ನು ಕಂಡು ನಾನೇ ರೂಪದಿಂದ ಬಂದನೆಂದು ತಿಳಿದು ಸಂತುಷ್ಟ ಹೃದಯದಿಂದ  ಪ್ರೇಮದಿಂದ ಮನೆಗೆ ಬಂದ ಅಳಿಯನಂತೆ ಸಂತೈಸಿ ಸತ್ಕರಿಸುವ  ವಿವೇಕಿಗಳಿಗೆ ಅವರು ಮಾಡುವ ಭಕ್ತಿ ಗೆ ಮೆಚ್ಚಿ ಅವರ ವಶನಾಗಿ ನಿಲ್ಲುವೆನು.
ಆದ್ದರಿಂದ ನನ್ನ ಸ್ವಭಾವ ಅರಿಯದೇ ನಿಮಗೆ ವಿರೋಧವೆಸಗಿದ ಜಯ ವಿಜಯರು ಮೂರು ಜನುಮಗಳಲ್ಲಿ ಸುರಕುಲದಿಂದ ವಿಮುಖರಾಗಿ ತತ್ಕ್ಷಣವೇ ಮರಳಿ ನನ್ನ ಲೋಕವನ್ನು ಪೊಂದುವಂತೆ ಅನುಗ್ರಹ ಮಾಡುವೆನು
ನನ್ನ ಹಾಗೇ ಪ್ರೇಮದಿಂದ ಬ್ರಾಹ್ಮಣ ರನ್ನು ಪೂಜಿಸುವವರಿಗೆ ನಾನು ವಶನಾಗುವೆನು.ಬ್ರಾಹ್ಮಣ ವಿರೋಧಿಗಳೇ ನನ್ನ ವಿರೋಧಿಗಳು.ಆದ್ದರಿಂದ ನಿಮ್ಮಲ್ಲಿ ಅಪರಾಧ ಮಾಡಿದ ಜಯವಿಜಯರು ಈಗಲೇ ಅಸುರರಾಗಿ ಹುಟ್ಟಲಿ.ಆದರೆ ಅವರು ಬೇಗ ನನ್ನ ಬಳಿಗೆ ಬರಲಿ..
ಇದು ನಿಮಗೆ ಒಪ್ಪಿಗೆಯೆಂದೆ ಭಾವಿಸುವೆನು.
ಶ್ರೀ ಹರಿಯ ಮಧುರಭರಿತವಾದ ಮೃದು ನುಡಿಗಳನ್ನು ಕೇಳಿ ಸನಕಾದಿಗಳು ಶಾಂತರಾದರು..
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಅ.ವಿಜಯ ವಿಠ್ಠಲ🙏

29
 ||ಪಿಬತ ಭಾಗವತಂ ರಸಮಾಲಯಂ||
Day29
✍️ಶ್ರೀ ಹರಿಯ ಮಾತುಗಳಿಂದ ಸನಕಾದಿಗಳು ಶಾಂತ ರಾದರು. ಆನಂದ ವನ್ನು ಹೊಂದಿದರು.
ನಂತರ ದೇವ ದೇವನಿಗೆ ನಮಸ್ಕರಿಸಿ ಹೇಳುತ್ತಾರೆ.
ದೇವಾ! ವಿಪ್ರರ ಕುಲಸ್ವಾಮಿಯು ನೀನು.ಅವರಿಂದ ಅರ್ಚಿತಗೊಳ್ಳುವ ನಿನಗೆ ಅವರು ಪರ ದೇವತೆಯೇ?ಅವರ ಅನುಗ್ರಹ ವನ್ನು ನೀನು ಪಡೆಯಬೇಕೆ??
 ಇತರರು ವಿಪ್ರರ ನ್ನು ಗೌರವಿಸುವ ಉದ್ದೇಶದಿಂದ ಹೀಗೆ ಅವರನ್ನು ಪ್ರಶಂಸೆಯನ್ನು ಮಾಡಿದಿ.
ವಿಪ್ರರ ರಕ್ಷಣಾ ಗಾಗಿ ಅನೇಕ ಅವತಾರಗಳನ್ನು ತಾಳುವಿ.
ನಿನ್ನ ಅನುಗ್ರಹ ಕೃಪೆಯಿಂದ ವಿಪ್ರರು ಜ್ಞಾನಿಗಳು ಆಗುವರು.ಸಂಸಾರ ಸಾಗರವನ್ನು ದಾಟುವರು.
 ಹೀಗಿರುವಾಗ ವಿಪ್ರರಿಂದ ನೀನೆಂತು ಅನುಗ್ರಹ ಪಡೆಯುವೆ??  ಸಕಲ ಜೀವಿಗಳಿಗೆ ಮಾತೆಯಾದ ಆ ರಮಾದೇವಿಯು ನಿನ್ನ ಭಕ್ತಗಣದಲ್ಲಿ ಅಗ್ರಳು.ಮತ್ತು ಸರ್ವೋತ್ತಮಳು.ಮತ್ತು ಕ್ಷಣ ಬಿಡದೇ ನಿನ್ನನ್ನು ಸೇವೆ ಮಾಡುತ್ತಾ ಸದಾ ಕಾಲ ಇರುವಂತಹವಳು.ಪ್ರಳಯ ಕಾಲದಲ್ಲಿ ಸಹ ಆಭರಣಗಳಾಗಿ ಜಲವು ಆಗಿ ಜೊತೆಯಲ್ಲಿ ಇರುವಂತಹಳು.ಕೋಟಿ ಕೋಟಿ ಭೃತ್ಯರಿದ್ದರು ಸಹ ನಿನ್ನ ಸೇವೆಯನ್ನು ತಾನೇ ಛತ್ರ ಚಾಮರ,ಇನ್ನೂ ಮುಂತಾದ ರೂಪದಿಂದ ನಿನ್ನ ಸೇವೆಯನ್ನು ಸದಾ ಮಾಡುತ್ತಾ ಇರುವ ಆ ಲಕ್ಷ್ಮೀ ದೇವಿಯು ನಿನ್ನ ಭಕ್ತರ ಪಾದಧೂಳಿಯಿಂದ ನಿನ್ನನ್ನು ಅಗಲದೇ ಇರುವಳೆ??ನೀನು ಮಹಾ ಭಾಗ್ಯವಂತ ನಾದೆಯಾ??ಇತರರು ನಿನ್ನ ಭಕುತರನ್ನು ಪೂಜಿಸಿ ಗೌರವಿಸಲಿ ಎಂದು ತೋರಿಸಲೋಸುಗ ಈ ರೀತಿಯಲ್ಲಿ ನಡೆದು ತೋರಿಸುವ ನಿನ್ನ ಲೀಲೆ ಬಹು ಸೋಜಿಗ ಮತ್ತು ವಿಚಿತ್ರ.
ಅಸುರಿ ಜನ ಮೋಹನಕ್ಕಾಗಿ ಮತ್ತು ನಿನ್ನ ಭಕ್ತಜನ ಸಂತೋಷ ಪಡಲು ನೀನು ಮಾಡುವ ನಟನೆ ಇದು.
ನಾವು ಗಳು ನಿನ್ನ ಆಳುಗಳಿಗೆ ಕೊಟ್ಟ ಶಾಪವನ್ನು ಬೇಕಾದರೆ ಅದನ್ನು ರದ್ದು ಪಡಿಸಿ ನಿನ್ನ ಲೋಕದಲ್ಲಿ ಅವರನ್ನು ಇಟ್ಟುಕೊಳ್ಳುವ ಅಧಿಕಾರ ನಿನಗುಂಟು.ನೀನು ಮಾಡಿದ್ದು ನಮಗೆ ಸಮ್ಮತ.. ಒಂದು ವೇಳೆ ನಿರಪರಾಧಿಗಳಾದ ನಿನ್ನ ದ್ವಾರಪಾಲಕರನ್ನು ದೋಷಿಗಳೆಂದು ಭಾವಿಸಿ ಶಾಪವನ್ನು ಕೊಟ್ಟ ನಮಗೆ ನೀನು ಶಿಕ್ಷೆಯನ್ನು ಕೊಟ್ಟರು ನಮಗೆ ಸಮ್ಮತವೇ.ಅದನ್ನು ಅನುಭವಿಸಲು ನಾವು ಸಿದ್ದ.
ಎಂದು ಹೇಳುತ್ತಾರೆ.
ಅದಕ್ಕೆ ಶ್ರೀ ಮನ್ ನಾರಾಯಣ ದೇವನು 
ವಿಪ್ರರೇ! ನಿಮ್ಮ ಮಾತಿನಂತೆ ಜಯ ವಿಜಯರು ಈ ತಕ್ಷಣವೇ ಭೂಲೋಕದಲ್ಲಿ ಅಸುರರಾಗಿ ಜನಿಸಲಿ.ಅಲ್ಲಿ ಅವರು ನನ್ನ ಸದಾ ದ್ವೇಷವನ್ನು ಮಾಡುವ ಜೀವರ ಜೊತೆಯಲ್ಲಿ ಇದ್ದರು ನನ್ನಲ್ಲಿ ಮಾಡಿದ ಭಕುತಿ ಇಂದ ಪುನಃ ನನ್ನ ಲೋಕ ಕ್ಕೆ ಬರುವರು.
ವಿಪ್ರರ ವಾಕ್ಯ ವಿಷ್ಣುವಿನ ವಾಕ್ಯ.ನಿಮ್ಮ ಮಾತಿಗೆ ಎದುರಿಲ್ಲ.ಶಾಪವನ್ನು ನೀವು ಕೊಟ್ಟಿದ್ದರು ಅದು ನಾನು ಕೊಟ್ಟಂತಯೇ ಸರಿ..
ಸನಕಾದಿಗಳು ಭಗವಂತನ ದರುಶನ ದಿಂದ ಅವನ ಮಾತುಗಳಿಂದ ಸಂತೃಪ್ತಿ ಹೊಂದಿ ಅವನ ಗುಣಗಳನ್ನು ಕೊಂಡಾಡುತ್ತಾ ಹೊರಟಿದ್ದಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀ ವರಾಹಾಯ ನಮಃ*
*******

||ಪಿಬತ ಭಾಗವತಂ ರಸಮಾಲಯಂ||
Day 30
✍️ಇಲ್ಲಿ ಒಂದು ಸೂಕ್ಷ್ಮ ವಿಷಯ. 
ಶ್ರೀ ಹರಿಯು ಸಕಲ ಗುಣ ಪೂರ್ಣ ನು.ಅವನಿಗೆ ಎಂದು ವಿಪ್ರರ ಸೇವನೆಯಿಂದ ಯಾವ ಲಾಭವು ಆಗಬೇಕಾದ್ದು ಇಲ್ಲ.ಸ್ವತಃ ಶ್ರೀ ರಮಾದೇವಿ ಬ್ರಹ್ಮಾದಿಗಳಿಂದ ಅವನಿಗೆ ಲಾಭವಿಲ್ಲ ಎಂದ ಮೇಲೆ ಈ ವಿಪ್ರರಿಂದೇನು ಆಗಬೇಕು ಅವನಿಗೆ..
ಅಜ್ಞಾನ ಉಳ್ಳ ಜನರಿಗೆ ಭ್ರಾಂತಿಯನ್ನು ಉಂಟು ಮಾಡಲು ಮತ್ತು ತನ್ನ ಭಕ್ತರು ಈ ಲೀಲೆ ಯನ್ನು ನೋಡಿ ಆನಂದ ಪಡಲಿ ಎಂದು ಮಾಡಿದನು ಎಂದು ತಿಳಿಯಬೇಕು ಹೊರತು ಬೇರೆ ರೀತಿಯಲ್ಲಿ ಅಲ್ಲ.
ಆ ತರಹ ಭಗವಂತನ ಬಗ್ಗೆ ಅಜ್ಞಾನ ದಿಂದ ತಿಳಿದರೆ ದೋಷವೇ ಹೊರತು ಬೇರೆ ಏನು ಇಲ್ಲ. ಸದಾಚಾರವುಳ್ಳ ವಿಪ್ರರ ಸೇವೆ ಯನ್ನು ಮಾಡಿದರೆ ಭಗವಂತ ಅನುಗ್ರಹ ಮಾಡುವನು ಎಂಬುದನ್ನು ತಿಳಿಸಲೋಸುಗ ಶ್ರೀ ಹರಿಯು ಈ ತರಹ ಲೀಲಾ ವಿಡಂಬನೆ ಮಾಡಿದನೆಂದು ತಿಳಿಯುವದೇ ಯಥಾರ್ಥ ಜ್ಞಾನ ಎನಿಸುತ್ತದೆ.
ಇತ್ತ ಭಗವಂತ 
ಜಯ ವಿಜಯರಿಗೆ ಭೂಲೋಕದಲ್ಲಿ ಜನಿಸಲು ಆಜ್ಞೆ ಮಾಡುತ್ತಾನೆ.
ನಡೆಯಿರಿ! ಇಲ್ಲಿಂದ.
ಭಯಪಡಬೇಡಿ.ಬ್ರಹ್ಮನ ಶಾಪವನ್ನು ಸಹ ಪರಿಹರಿಸಲು ನಾನು ಸಮರ್ಥನಾಗಿದ್ದರು  ಸಹ ಇದು ನನ್ನ ಇಚ್ಛೆ ಯಂತೆ ಆಗಿದೆ.ಹಿಂದೆ ಒಮ್ಮೆ ನೀವು  ಒಳಗೆ ನನ್ನ ಬಳಿ ಬರುತ್ತಿದ್ದ  ರಮೆಯನ್ನು ಸಹ ತಡೆದು ಪಾಪವನ್ನು ಎಸಗಿದಿರಿ.ಕ್ರುದ್ದಳಾದ ಇಂದಿರೆಯು ಕೊಟ್ಟ ಶಾಪ ಇಂದು ವಿಪ್ರರ ವಾಣಿಯಿಂದ ನಿಜವಾಯಿತು.  ಈ ಕ್ಷಣವೇ ದಿತಿಯ ಗರ್ಭವನ್ನು ಸೇರಿರಿ.ಕಾಲಾನಂತರದಲ್ಲಿ ನನ್ನ ಲೋಕಕ್ಕೆ ಶೀಘ್ರವಾಗಿ ಹಿಂತಿರುಗಿ ಬರುವಿರಿ.ನಡೆ ಯಿರಿ ಎಂದು ಹೇಳಿ 
ಪತ್ನಿ ಸಮೇತನಾಗಿ ಭಗವಂತ ತನ್ನ ಸ್ಥಾನಕ್ಕೆ ಹಿಂತಿರುಗಿದ್ದಾನೆ.
ತಕ್ಷಣವೇ ಕಾಂತಿಹೀನ ರಾಗಿ ದೇವಲೋಕದಿಂದ ಉಭಯರು ಭೂಲೋಕದ ಕಡೆ ಬೀಳುವದನ್ನು ಕಂಡು ಆಗಸದಲ್ಲಿ ಸಂಚಾರ ವನ್ನು ಮಾಡುತ್ತಿದ್ದ ದೇವತೆಗಳು ಕಂಡು ಹಾಹಾಕಾರವನ್ನು ಮಾಡಿದ್ದಾರೆ.ಜಯ ವಿಜಯರು ದಿತಿಯ ಗರ್ಭವನ್ನು ಸೇರಿದ್ದಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀ ವರಾಹಾಯ ನಮಃ🙏

******************


||ಪಿಬತ ಭಾಗವತಂ ರಸಮಾಲಯಂ||
Day31
✍️ಇತ್ತ ದಿತಿಯು ಗರ್ಭವನ್ನು ಧರಿಸಿ ಅವಳಿ ಮಕ್ಕಳನ್ನು ಹೆತ್ತಳು.ಆಗ ತ್ರಿಲೋಕಗಳಲ್ಲಿ ಭಯ ಉಂಟಾಗಿ ಉತ್ಪಾತ ಗಳು ಉಂಟಾದವು.ಆ ದೈತ್ಯರು ಹುಟ್ಟಿದ ಕೂಡಲೆ ವಜ್ರ ಶರೀರಗಳಾಗಿ ಬೆಟ್ಟದಂತೆ ಬೆಳೆದು ನಿಂತರು.ಅವರಿಗೆ ಕಶ್ಯಪರು ಹಿರಣ್ಯ ಕಶಿಪು,ಹಿರಣ್ಯಾಕ್ಷ ಎಂದು ಹೆಸರಿಟ್ಟರು.
ಇತ್ತ ಇವರಿಬ್ಬರ ಉಪಟಳ ಹೆಚ್ಚಾಗಿ ತ್ರಿಲೋಕದಲ್ಲಿ ಇವರನ್ನು ಕಂಡರೆ ಭಯ ಪಡುವಂತಾಯಿತು.
ಇತ್ತ ಹಿರಣ್ಯಾಕ್ಷ ತನ್ನ ಅಣ್ಣನಿಗೆ ಹಿತ ಮಾಡಬೇಕು ಎಂದು ಯುದ್ಧ ಮಾಡಲು ಬಯಸಿ ಗದೆಯನ್ನು ಹಿಡಿದು ವೀರರನ್ನು ಹುಡುಕುತಾ ದೇವಲೋಕಕ್ಕೆ ಹೋದನು. ಇವನನ್ನು ಕಂಡ ದೇವತೆಗಳು ಅಡಗಿ ನಿಂತರು.ನಂತರ ಹಿರಣ್ಯಾಕ್ಷ ಅವರನ್ನು ನೋಡಿ ನಕ್ಕು ಸಮುದ್ರ ದಲ್ಲಿ ವಿಹರಿಸಿ ವಿಭಾವರೀ ಎಂಬ ಪಟ್ಟಣ ಅದು ವರುಣ ದೇವನ ರಾಜಧಾನಿ ಅಲ್ಲಿ ಹೋಗಿ ಯುದ್ದಕ್ಕೆ ಆಹ್ವಾನವನ್ನು ಮಾಡುತ್ತಾನೆ.
ವರುಣದೇವನು ಅವನನ್ನು ನೋಡಿ 
ನಾನೀಗ ಯುದ್ದದ ಸುದ್ದಿಗೆ ಹೋಗದಷ್ಟು ಶಕ್ತಿ ಗುಂದಿದ್ದೇನೆ. ನಿನ್ನ ಜೊತೆಯಲ್ಲಿ ಯುದ್ಧ ಮಾಡಲು ವರಾಹನು ಸಮರ್ಥ ನೀನು ಅವನನ್ನು ಇದಿರಿಸಿ ಅವನಿಂದ ಸಂಹಾರ ಗೊಂಡು ನಾಯಿ ನರಿಗಳ ಪಾಲಾಗುವೆ.
ಎಂದು ಹೇಳಿ ಕಳುಹಿಸುವ.
ಇತ್ತ ಹಿರಣ್ಯಾಕ್ಷ ನಾರದರಿಂದ ಶ್ರೀಹರಿಯು ರಸಾತಳ ಲೋಕದಲ್ಲಿ ಇರುವನೆಂದು ತಿಳಿದು ಅಲ್ಲಿ ಗೆ ಹೋದನು.
ಅಲ್ಲಿ ದಾಡೆಯಿಂದ ಭೂಮಿಯನ್ನು ಎತ್ತುತ್ತಾ ಇದ್ದ ವರಾಹ ದೇವರನ್ನು ನೋಡಿ *ಇದು ಕಾಡುಹಂದಿ.ನಾರದರು ಹೇಳಿದ ನನಗೆ ಪ್ರತಿವೀರ ಇದು ಎಂದು ಹಾಸ್ಯ ಮಾಡಿ ನಕ್ಕನು.
ಎಲವೋ !ಅವಿವೇಕಿಯೇ ಬಿಡು ಭೂಮಂಡಲವನ್ನು.ಇದು ನಮಗಾಗಿ ಬ್ರಹ್ಮ ದೇವನು ಸೃಷ್ಟಿ ಮಾಡಿದ ಲೋಕ.ಸೂಕರ ಮುಂತಾದ ಮಾಯಾ ರೂಪದಿಂದ ದೈತ್ಯ ರನ್ನು ಕೊಲ್ಲುವ ನಿನಗೆ ಇಂದು ನನ್ನ ಕೈಯಲ್ಲಿ ಹತನಾಗುವ ಯೋಗ..
ನನ್ನ ಕೈಯಲ್ಲಿ ಹತನಾದ ನಿನ್ನನ್ನು ನೋಡಿ ನನ್ನ ವೈರಿ ಗಳಾದ ದೇವತೆಗಳು ಋಷಿಗಳು ಇವರೆಲ್ಲರು ಬೇರಿಲ್ಲದ ಗಿಡದಂತೆ ಒಣಗಿ ನಷ್ಟ ರಾಗಿ ಹೋಗುವರು.
ಬಾ ಯುದ್ದಕ್ಕೆ ಎಂದು ಪರಿಪರಿಯಾಗಿ ಶ್ರೀ ಹರಿಯನ್ನು ನಿಂದನೆ ಮಾಡುತ್ತಾ ಇದ್ದಾನೆ.
ಆಗ ಶ್ರೀ ವರಾಹದೇವನು
ತನ್ನ ಕೋರೆದಾಡೆಯಲ್ಲಿ ಭಯಪಡುತ್ತಾ ಇದ್ದ ಭೂದೇವಿಯನ್ನು ಸಾಂತ್ವನಗೊಳಿಸಿ ನೀರಿನಿಂದ ಮೇಲಕ್ಕೆ ಬಂದನು.
ಇತ್ತ ಹಿರಣ್ಯಾಕ್ಷ ಶ್ರೀ ಹರಿಯ ಬೆನ್ನು ಹತ್ತಿ 
ಎಲಾ
ಕಾಡು ಮೃಗವೇ !ಹೀಗೆ ಹೆದರಿ ಓಡಿಹೋಗುವದು ಸರಿಯಲ್ಲ. ಎಂದು ನಿಂದನೆ ಮಾಡುವನು.
ನಂತರ ಭೂಮಿಯನ್ನು ಸ್ಥಿರವಾದ ಸ್ಥಳದಲ್ಲಿ ಶ್ರೀ ಹರಿಯು ಸ್ಥಾಪಿಸಿದ ಮತ್ತು ಅದರಲ್ಲಿ ತನ್ನ ಶಕ್ತಿಯನ್ನು ತುಂಬಿದ್ದಾನೆ.
ನಂತರ ನಸುನಗುತ್ತಾ 
ಎಲಾ ದುಷ್ಟ !ನಾವು ವನಗೋಚರ ಮೃಗಗಳು.ನಿನ್ನಂಥಹ ನಾಯಿಗಳನ್ನು ನಾವು ಬೇಟೆ ಆಡುವೆವು.ಎಂದು ಹೇಳಿ ಯುದ್ದಕ್ಕೆ ಆಹ್ವಾನವನ್ನು ಕೊಡುತ್ತಾನೆ.
ಇಬ್ಬರ ಮಧ್ಯೆ ಘನಘೋರ ಯುದ್ಧ ನಡೆಯುತ್ತದೆ.
ಅವಾಗ ಬ್ರಹ್ಮ ದೇವನು ಸಕಲ ದೇವತಾ ಪರಿವಾರದ ಒಡನೆ ಬಂದು ಭಗವಂತನ ಹತ್ತಿರ ಪ್ರಾರ್ಥನೆ ಮಾಡುತ್ತಾನೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಅ.ವಿಜಯ ವಿಠ್ಠಲ🙏
***************


||ಪಿಬತ ಭಾಗವತಂ ರಸಮಾಲಯಂ||
Day 32
ಶ್ರೀ ವರಾಹ ದೇವರ ಜೊತೆಯಲ್ಲಿ ಹಿರಣ್ಯಾಕ್ಷ ಯುದ್ದ ಮಾಡುತ್ತಾ ಇದ್ದಾನೆ.ಭಯಂಕರ ಯುದ್ಧ ಪ್ರಾರಂಭವಾಗಿದೆ.
ಶ್ರೀ ಬ್ರಹ್ಮ ದೇವರು ಸಕಲ ದೇವತಾ ಪರಿವಾರದೊಡನೆ ಭಗವಂತನ ಬಳಿ ತೆರಳಿ 
ಹೇ! ದೇವ ದೇವನೆ! ಈ ಅಸುರನು ನಮ್ಮಿಂದ ತನ್ನಸಾವು ಯಾರಿಂದಲೂ ಬರಬಾರದು ಎಂದು ವರ ಪಡೆದು ಕೊಂಡಿದ್ದಾನೆ.ಅದರ ಬಲದಿಂದ ಸುರ, ವಿಪ್ರ, ಗೋವುಗಳು, ಇವುಗಳಿಗೆ ತೊಂದರೆ ಕೊಟ್ಟಿದ್ದಾನೆ. ಇವನು ಯಜ್ಞ ವಿನಾಶಕ. ಭೂಮಿಗೆ ಕಂಟಕನು.ಅತೀ ಭಯಂಕರ ಮತ್ತು ದುಷ್ಟ.
ಇಂತಹವನ ಜೊತೆಯಲ್ಲಿ ಹುಡುಗಾಟದ ತರಹ ಯುದ್ದವನ್ನು ಮಾಡಿದ್ದು ಸಾಕು.
ಇವನಿಗೆ ಅನುಕೂಲ ಕಾಲವು ಸಮೀಪದಲ್ಲಿ ಇದೆ.ಆ ಕಾಲ ಹತ್ತಿರ ಬಂದರೆ ಅವನು ಇನ್ನೂ ಪ್ರಬಲನಾಗುತ್ತಾನೆ.ಇವಾಗ ನಡು ಹಗಲು ಆದ್ದರಿಂದ ಅಭಿಜಿತ್ ಯೋಗವೆಂಬ ಮುಹೂರ್ತ ಇದೆ.ಇವನನ್ನು ಈಗಲೇ ಕೊಂದು ಲೋಕಕ್ಕೆ ಸಜ್ಜನರಿಗೆ ಸುಖವನ್ನು ಉಂಟುಮಾಡು ಎಂದು ಪ್ರಾರ್ಥನೆ ಮಾಡುವರು.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ವರಾಹಾಯ ನಮಃ🙏

||ಪಿಬತ ಭಾಗವತಂ ರಸಮಾಲಯಂ||
Day33.
ಶ್ರೀಬ್ರಹ್ಮ ದೇವರ ಪ್ರಾರ್ಥನೆ ಯಂತೆ ಶ್ರೀ ಹರಿಯು ಅಸುರನ ಸಂಹಾರಕ್ಕೆ ಸಿದ್ದನಾದನು.ತಾನು ಎಸೆದ ಗದೆಯನ್ನು ಅಸುರನ್ನು ಕೈಯಲ್ಲಿ ಹಿಡಿದುಕೊಂಡು ಇರುವುದನ್ನು ನೋಡಿ ತಕ್ಷಣವೇ ತನ್ನ ಚಕ್ರ ವನ್ನು ಸ್ಮರಿಸಿದನು.ಇತ್ತ ಅಸುರನು ಶ್ರೀ ಹರಿಯ ಮೇಲೆ ತನ್ನ ಗದೆಯನ್ನು ಬೀಸಿ ಎಸೆದನು.
ಶ್ರೀ ಹರಿಯ  ಅವನ ಗದೆಯನ್ನು ಕೈಯಲ್ಲಿ ಹಿಡಿದು ಬಿಸುಡಿದನು.ದೈತ್ಯನ ಮುಖವು ಸಪ್ಪೆಯಾಯಿತು.ತನ್ನ ಬಳಿ ಇದ್ದ ಶೂಲವನ್ನು ಎಸೆದನು.ಶ್ರೀ ಹರಿಯ ಚಕ್ರ ಅದನ್ನು ಪುಡಿ ಪುಡಿ ಮಾಡಿತು. ಇತ್ತ ದೈತ್ಯ ಕೋಪದಿಂದ ವರಾಹ ದೇವರ ಎದೆಗೆ ಗುದ್ದಿ ಮಾಯವಾದನು.ಮತ್ತು ತನ್ನ ರಾಕ್ಷಸ ಮಾಯೆಯಿಂದ ಅನೇಕ ದೈತ್ಯ ರನ್ನು ಸೃಷ್ಟಿ ಸಿದನು.ಅವೆಲ್ಲವೂ ಶ್ರೀ ಹರಿಯ ಚಕ್ರ ಕ್ಕೆ ನಾಶವಾಯಿತು.
ಇತ್ತ ಕಡೆ ದಿತಿಯ ಎದೆ ನಡುಗಿತು.ಮನಸ್ಸಿನ ಒಳಗೆ ಆತಂಕ ಕಳವಳ.ತನ್ನ ಪತಿಯ ಮಾತು ನೆನಪಿಗೆ ಬಂತು.
ಇತ್ತ ದೈತ್ಯ ಕೋಪದಿಂದ ಶ್ರೀ ಹರಿಯ ಮೇಲೆ ಆಕ್ರಮಣ ಮಾಡಲು ಬಂದಾಗ  ವರಾಹ ದೇವನು ತನ್ನ ಕೈಯಿಂದ ದೈತ್ಯ ನ  ಕಿವಿಯ ಬುಡದಲ್ಲಿ ಹೊಡೆದನು.ಆ ಪೆಟ್ಟಿಗೆ ದೈತ್ಯ ಬುಡಕಡಿದ ಬಾಳೆ ಗಿಡದಂತೆ ಕೆಳಗೆ ಬಿದ್ದು ಮೃತ ಹೊಂದಿದನು.
ಸಕಲ ದೇವತೆಗಳು 
ಆಹಾ! ಎಂತಹ ಸಾವು!!.ಶ್ರೀ ಹರಿಯನ್ನು ನೋಡುತ್ತಾ ಪ್ರಾಣ ಬಿಟ್ಟನಲ್ಲ.
 ಇಂತಹ ದುರ್ಲಭ ವಾದ ಸಾವು ಯಾರಿಗೂ ಸಿಗಲು ಸಾಧ್ಯವಿಲ್ಲ. ಶ್ರೀ ಹರಿಯ ತಾಡನದಿಂದ ಮೃತನಾದ ವಿಜಯನು ಪುನಃ ಭೂಲೋಕದಲ್ಲಿ ಅವತಾರ ಮಾಡಿ  ಶ್ರೀ ಹರಿಯ ಕೈಯಲ್ಲಿ ಮೃತನಾಗಿ ಪುನಃ ವೈಕುಂಠ ಸೇರುವನು.ಎಂದು ಕೊಂಡಾಡಿದ್ದಾರೆ.
ಇತ್ತ ಬ್ರಹ್ಮ ದೇವರೆ ಮೊದಲಾದ ಸಕಲ ದೇವತೆಗಳು 
ಶ್ರೀ ಹರಿ! ಯಜ್ಞ ರಕ್ಷಕ, ಭಕ್ತವತ್ಸಲನೇ, ಆನಂದಮಯನೇ, ಈ ವರಾಹ ಅವತಾರದಿಂದ ಈ ಲೋಕವನ್ನು ಸಜ್ಜನರನ್ನು ರಕ್ಷಣೆ ಮಾಡಿದ್ದೀಯಾ ಎಂದು ಸ್ತೋತ್ರ ಮಾಡಿ ನಮಸ್ಕಾರ🙏 ಮಾಡಿದ್ದಾರೆ.
ಭಗವಂತ ಅವರಿಗೆಲ್ಲ ಅನುಗ್ರಹ ಮಾಡಿ ತನ್ನ ಲೋಕಕ್ಕೆ ತೆರಳಿದ್ದಾನೆ.
ಮಹಾವೀರನಾದ ಹಿರಣ್ಯಾಕ್ಷ ನನ್ನು ಗೊಂಬೆಯ ಆಟದಂತೆ ಅವನನ್ನು ಸಂಹಾರ ಮಾಡಿದ ಶ್ರೀ ವರಾಹ ದೇವರ ಕತೆಯನ್ನು ಮೈತ್ರೆಯನು ವಿದುರನಿಗೆ ಹೇಳಿದ್ದು ನಿನಗೆ ಹೇಳಿದ್ದೇನೆ ಎಂದು ಶುಕಮುನಿಗಳು ಪರೀಕ್ಷಿತ ರಾಜನಿಗೆ ಹೇಳುತ್ತಾರೆ.
ಭೂಮಿಯ ಉದ್ದಾರಕ್ಕೆ ಶ್ರೀ ಹರಿಯ ಈ ವರಾಹ ರೂಪವನ್ನು ಧರಿಸಿ ದೈತ್ಯ ಸಂಹಾರ ಮಾಡಿದ ಕತೆಯನ್ನು ಯಾರು ಭಕುತಿ ಶ್ರದ್ಧೆ ವಿಶ್ವಾಸದಿಂದ ಕೇಳುವರೋ,ಹೇಳುವರೋ ಅವರು ಸಕಲ ಪಾಪಾದಿ ಕರ್ಮಗಳಿಂದಲು ಮುಕ್ತ ರಾಗಿ ಅನಾಯಾಸವಾಗಿ ಸಂಸಾರ ಸಾಗರವನ್ನು ದಾಟುವರು. ಈ ಕಥೆಯು ಬಹು ಪುಣ್ಯ ಪ್ರದವು.ಪವಿತ್ರವು.ಧನವನ್ನು ಯಶಸ್ಸನ್ನು ತಂದು ಕೊಡುವಂತಹದ್ದು.
ಇದರ ಶ್ರವಣ ಅಭ್ಯಾಸದಿಂದ ಶ್ರೀ ಹರಿಯ ಕೃಪೆ ಗೆ ಪಾತ್ರರಾಗುವರು.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀ ವರಾಹಾಯ ನಮಃ🙏
*************

[4:35 PM, 10/6/2020] Prasad Karpara Group: ||ಪಿಬತ ಭಾಗವತಂ ರಸಮಾಲಯಂ||
Day34
ನಿನ್ನೆಯ ದಿನ ಭಗವಂತ ಶ್ರೀವರಾಹ ರೂಪವನ್ನು ಧರಿಸಿ ಹಿರಣ್ಯಾಕ್ಷ ನ ಸಂಹಾರ ಮಾಡಿದ ಬಗ್ಗೆ ತಿಳಿದೆವು.
ಮುಂದೆ ಬರುವ ಸಪ್ತಮ ಸ್ಕಂಧದಲ್ಲಿ ಬರುವ ಶ್ರೀಪ್ರಹ್ಲಾದ ಚರಿತ್ರೆ ಯಲ್ಲಿ ಹಿರಣ್ಯ ಕಶಿಪು ವಿನ ಬಗ್ಗೆ ತಿಳಿಯೋಣ.

ಹಿರಣ್ಯಾಕ್ಷ ವಧೆ ಬಹಳ ಅರ್ಥ ಗರ್ಭಿತವಾಗಿದೆ.
ಅವನ ಸ್ವಭಾವ ಪರರ ವಸ್ತುವಿನ ಮೇಲೆ ಕಣ್ಣು ಹಾಕುವದು. ಅಂತಹ ಬುದ್ದಿಯಿಂದ ಅವನು ಹೊರ  ಬರಲಿಲ್ಲ .ಅದೇ ಅವನ ವಿನಾಶಕ್ಕೆ ಕಾರಣವಾಯಿತು.

ಭೂಮಿಯ ಮೇಲೆ ಕಣ್ಣು ಹಾಕಿದ.ಭೂಮಿ ಭಗವಂತನ ಸೃಷ್ಟಿ. ಅವನ ಸಂಪತ್ತು..ಭಗವಂತನ ಸಂಪತ್ತು ನನ್ನದು,ನನಗೆ ಸೇರಬೇಕು ಎಂದುಕೊಂಡ.ಭಗವಂತನ ವಿರೋಧ ಮಾಡಿ ಅವನಿಂದ ಹತನಾದ.
ಇಲ್ಲಿ ವಿಷಯ ಇಷ್ಟೇ.
 ಅಹಂಕಾರ ಮದದಿಂದ ಭಗವಂತನಿಗೆ ಸಂಬಂಧಿಸಿದ ವಸ್ತುಗಳ ಮೇಲೆ ಕಣ್ಣು ಹಾಕಿದರೆ ಅದು ನಮ್ಮ ವಿನಾಶಕ್ಕೆ ಕಾರಣ.
ಅಂತಹ ರಕ್ಕಸನ ಸಂಹಾರ ಭಗವಂತ ನಿಂದ ಆದಂತೆ ನಮ್ಮ ಒಳಗಡೆ ಇರುವ ಪರರ ವಸ್ತುಗಳನ್ನು ಅಪೇಕ್ಷಿತ ಪಡುವ ಆ ಹಿರಣ್ಯಾಕ್ಷ ಎಂಬ ದೈತ್ಯ ನ ಸಂಹಾರ ಭಗವಂತ ನಿಂದ ಆಗಲಿ.
ಅದು ಆಗಬೇಕು ಎಂದರೆ ಭಗವಂತನ ಕುರಿತಾದ ಜ್ಞಾನ ಬರಬೇಕು.ಎಲ್ಲವು ಅವನ ಅಧೀನ ಎನ್ನುವ ಜ್ಞಾನ ಬಂದಾಗ ಪರರ ವಸ್ತುಗಳ ಮೇಲೆ ಕಣ್ಣು ಹಾಕುವದು ತಪ್ಪು ತ್ತದೆ.ಅಂತಹ ತತ್ವ ವನ್ನು ತಿಳಿದಾಗ ಮನಸ್ಸು ಭಗವಂತನ ಕಡೆ ಚಲಿಸುತ್ತದೆ.
ನಮ್ಮ ಒಳಗಡೆ ಇರುವ ಹಿರಣ್ಯಾಕ್ಷ ಎನ್ನುವ ಅಸುರ ನಾಶವಾಗಿ ನಮಗೆ ಭಗವಂತನ ಅನುಗ್ರಹ ಪ್ರಾಪ್ತಿ ಯಾಗುವದು.ಹಾಗಾಗಿ ಭಗವಂತನ ಬಗ್ಗೆ ತಿಳಿಯಲು ಈ ಶ್ರೀ ಮದ್ ಭಾಗವತ ಬಹಳ ಅತ್ಯುತ್ತಮ ಸಾಧನೆ.

ನಿತ್ಯ ವು ಈ ಶ್ರೀ ಮದ್ ಭಾಗವತ ಪಾರಾಯಣ ಮಾಡಲು ಪ್ರಯತ್ನ ಮಾಡೋಣ.ನಮ್ಮ ಒಳಗಡೆ ಇರುವ ದುಷ್ಟ ಶಕ್ತಿಗಳ ನ್ನು ನಾಶ ಪಡಿಸಲು ಆ ಭಗವಂತನ ಬಳಿ ಪ್ರಾರ್ಥನೆ ಮಾಡೋಣ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ||ಏಳಿರೋ ವೈಕುಂಠಕೆ||
🙏ಶ್ರೀ ವರಾಹಾಯ ನಮಃ🙏
*********

||ಪಿಬತ ಭಾಗವತಂ ರಸಮಾಲಯಂ||
Day35.
ಶ್ರೀ ಬ್ರಹ್ಮ ದೇವರು ಸೃಷ್ಟಿ ಮಾಡಿದ ವರ್ಣನೆ.
ಶ್ರೀ ಬ್ರಹ್ಮ ದೇವರು ಹದಿನಾಲ್ಕು ಲೋಕಗಳನ್ನು ಸೃಷ್ಟಿ ಮಾಡಿದರು.ತಾವು ಸೃಷ್ಟಿಸುವ ಪದಾರ್ಥಗಳ ಸ್ವಭಾವಗಳನ್ನು ವ್ಯಕ್ತಮಾಡಲು ಅವುಗಳನ್ನು ಸೃಷ್ಟಿ ಸುವಾಗ ಅವುಗಳಿಗೆ ತಕ್ಕಂತೆ ಬಾಹ್ಯ ದೇಹಗಳನ್ನು ಪಡೆದು ಅದನ್ನು ಅವರವರಿಗೆ ಕೊಟ್ಟಿದ್ದಾರೆ.
ಅವರು 
ಛಾಯೆ ಎಂಬ ದೇಹವನ್ನು ಪಡೆದರು.ಅದರಿಂದ ತಾಮಿಸ್ರ ಮೊದಲಾದ ಐದು ಭಾಗಗಳುಳ್ಳ ಅವಿದ್ಯೆಯನ್ನು ಸೃಷ್ಟಿ ಸಿದರು.ಆ ಛಾಯಾ ದೇಹವು ಕೇವಲ ಕತ್ತಲೆ ಆಗಿತ್ತು. ಅದಕ್ಕೆ ರಾತ್ರಿ ಎಂದು ಹೆಸರು. ಆ ಛಾಯಾ ದೇಹದಿಂದ ದೈತ್ಯ ರನ್ನು ಸೃಷ್ಟಿ ಮಾಡಿ ಆ ದೇಹವನ್ನು ಬಿಟ್ಟು ಬಿಟ್ಟರು.
ಅದು ಹಸಿವು ನೀರಡಿಕೆಗಳಿಗೆ ಕಾರಣವಾಗಿದೆ. ಅದರಿಂದ ಸೃಷ್ಟಿ ಗೊಂಡ ದೈತ್ಯ ರು ಆ ರಾತ್ರಿ ಯನ್ನು ತಮಗಾಗಿ ತೆಗೆದುಕೊಂಡರು.
ನಂತರ  ಪ್ರಭೆ ಎಂಬ ಪ್ರಕಾಶಮಾನವಾದ ದೇಹವನ್ನು ತೆಗೆದುಕೊಂಡು ಅದರಿಂದ ದೇವತೆಗಳನ್ನು ಪಡೆದರು.ವಿದ್ಯೆ ಎಂಬ ಇನ್ನೊಂದು ದೇಹವನ್ನು ಸೃಷ್ಟಿಸಲು ಅದನ್ನು ದೇವತೆಗಳು ತೆಗೆದುಕೊಂಡರು.ದೇವತೆಗಳು ತೆಗೆದುಕೊಂಡು ಕಾರಣದಿಂದಾಗಿ ಅದು ಹಗಲು ಎಂದು ಹೆಸರಾಯಿತು.
ಆದ್ದರಿಂದ ಹಗಲಿನಲ್ಲಿ ದೇವತಾಕಾರ್ಯಗಳು ಮತ್ತು ರಾತ್ರಿ ಯಲ್ಲಿ ರಾಕ್ಷಸರ ಕಾರ್ಯಗಳು ನಡೆಯುವಂತೆ ಆಯಿತು.ನಂತರ 
ಸಾಧನೆಗೆ ವಿರುದ್ಧ ವಾದ ಜಘನವೆಂಬ ಸ್ತ್ರೀ ದೇವತೆಯನ್ನು ಪಡೆದರು. ಅದರಿಂದ ವಿಷಯಾಸಕ್ತರಾದ ಅಸುರರನ್ನು ಪಡೆದರು.ಆ ಅಸುರರು ಅವರನ್ನು ಅಪೇಕ್ಷಿತ ಪಡಲಾಗಿ ಆ ದೇಹವನ್ನು ಬಿಟ್ಟರು.ಆ ಸುಂದರವಾದ ಸ್ತ್ರೀ ದೇಹವನ್ನು ನೋಡಿ ಅಸುರರು ಮೋಹಿತರಾಗಿ ಆ ಸಾಯಂ ಸಂಧ್ಯೆಯನ್ನು ಸ್ವೀಕಾರ ಮಾಡಿದರು.
ನಂತರ ಕಾಂತಿಯೆಂಬ ದೇಹವನ್ನು ಬ್ರಹ್ಮ ದೇವರು ಪಡೆದರು.ಆ ದೇಹದಿಂದ ಗಂಧರ್ವರು ಅಪ್ಸರ ಸ್ತ್ರೀಯರು ಸೃಷ್ಟಿಸಿದ ರು.
 ಕಾಂತಿಯುಕ್ತವಾದ ಆ ದೇಹವನ್ನು ವಿಶ್ವಾವಸು ಗಂಧರ್ವರು ಪ್ರೀತಿ ಯಿಂದ ತಮಗೆ ಸ್ವೀಕಾರ ಮಾಡಿದ್ದಾರೆ.
ನಂತರ ಜೃಂಭಣವೆಂಬ ಇನ್ನೊಂದು ದೇಹವನ್ನು ಬ್ರಹ್ಮ ದೇವರು ಪಡೆದಿದ್ದಾರೆ.
ಜೃಂಭಣವೆಂದರೆ ಆಕಳಿಕೆ,ತೂಕಡಿಕೆ,ಆಲಸ್ಯ,ಹುಚ್ಚು ಇವುಗಳನ್ನು ವ್ಯಕ್ತ ಪಡಿಸುವ ದೇಹದಿಂದ ಭೂತ ಪಿಶಾಚಿ ಗಳನ್ನು ಸೃಷ್ಟಿ ಮಾಡಿದರು. ಆ ಭೂತ ಪಿಶಾಚಿ ಗಳು ಆ ದೇಹವನ್ನು ತಮ್ಮದನ್ನಾಗಿ ಮಾಡಿಕೊಂಡವು. ಹೀಗೆಯೆ *ಪರೋಕ್ಷ ಎಂಬ ದೇಹದಿಂದ ಸಾಧ್ಯ ಮತ್ತು ಪಿತೃ ದೇವತೆಗಳ ನ್ನು ಪಡೆದಿದ್ದಾರೆ.ಆ ದೇಹವನ್ನು ಅವರುಗಳು ಸ್ವೀಕಾರ ಮಾಡಿದ್ದಾರೆ.ನಂತರ *ತಿರೋಧಾನ ಎಂಬ ದೇಹದಿಂದ ಸಿದ್ದರು,ವಿಧ್ಯಾಧರರು,ಕೂಪ ಎನ್ನುವ ದೇಹದಿಂದ ಕಿನ್ನರರು ಕಿಂಪುರುಷರು ಸೃಷ್ಟಿ ಮಾಡಿದ್ದಾರೆ. ಅವರೆಲ್ಲರೂ ಆಯಾ ದೇಹವನ್ನು ಆಶ್ರಯ ಮಾಡಿದ್ದಾರೆ.
ನಂತರ ಹಾವಿನ ದೇಹದಿಂದ ನಾನಾ ಸರ್ಪ ಗಳನ್ನು ಸೃಷ್ಟಿ ಮಾಡಿದರು ಮತ್ತು ಪ್ರಜೆಗಳನ್ನು ಸೃಷ್ಟಿಸಲು ಮನುಗಳನ್ನು ಸೃಷ್ಟಿ ಮಾಡಿದ್ದಾರೆ.
ನಂತರ ಯೋಗವೆಂಬ ದೇಹದಿಂದ ಋಷಿಗಳನ್ನು ಸೃಷ್ಟಿ ಮಾಡಿ ತಪಸ್ಸು, ವಿದ್ಯೆ ,ವೈರಾಗ್ಯ, ಏಕಾಗ್ರತೆ,ಮುಂತಾದವುಗಳನ್ನು ಅವರಿಗೆ ಕೊಟ್ಟು ಆ ಋಷಿಗಳನ್ನು ಅನುಗ್ರಹ ಮಾಡಿದ್ದಾರೆ.
ಈ ಎಲ್ಲಾ ಸೃಷ್ಟಿ ಗು ಶ್ರೀ ಬ್ರಹ್ಮ ದೇವರ ಅಂತರ್ಯಾಮಿಯಾದ ಶ್ರೀ ಹರಿಯೇ ಆ ನಾಮದಿಂದ ಸೃಷ್ಟಿ ಕಾರ್ಯ ಮಾಡಿದನು ಎಂದು ತಿಳಿಯಬೇಕು.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|

🙏ಶ್ರೀ ವಿಷ್ಣುವೇ ನಮಃ🙏
**********


|ಪಿಬತ ಭಾಗವತಂ ರಸಮಾಲಯಂ||
Day 36
ನಿನ್ನೆಯ ದಿನ ಶ್ರೀ ಬ್ರಹ್ಮ ದೇವರು ಜಗತ್ತು ಸೃಷ್ಟಿ ಮಾಡಿದ ಪರಿಯನ್ನು ತಿಳಿದೆವು.
ಮುಂದೆ ವಿದುರನು ಮೈತ್ರೇಯರನ್ನು  ಕೇಳುತ್ತಾರೆ..
ಮೈತ್ರೇಯರೇ! ಮನುರಾಜನ ಮಗಳಾದ ದೇವಹೂತಿಯಲ್ಲಿ ಮತ್ತು ಅವರ ಪತಿಯಾದ ಕರ್ದಮ ಋಷಿ ದಂಪತಿಗಳಿಗೆ ಭಗವಂತ ಕಪಿಲನಾಮಕ ಪರಮಾತ್ಮನಾಗಿ ಅವತಾರ ಮಾಡಿದ ಬಗ್ಗೆ ಕೇಳಿದ್ದೇನೆ.ಅದೆಷ್ಟು ಪುಣ್ಯ ವಂತರು!! ಆ ಮುನಿ ದಂಪತಿಗಳು. ದಯವಿಟ್ಟು ಅದರ ಬಗ್ಗೆ ತಿಳಿಸಿ ಎಂದು ಪ್ರಾರ್ಥನೆ ಮಾಡುತ್ತಾರೆ.
ಮೈತ್ರೇಯರು ಹೇಳುತ್ತಾರೆ.
ಪ್ರಜೆಗಳ ಸೃಷ್ಟಿ ಕಾರ್ಯಮಾಡೆಂದು ಶ್ರೀ ಬ್ರಹ್ಮ ದೇವರಿಂದ ಆಜ್ಞೆಯನ್ನು ಪಡೆದ ಕರ್ದಮ ಋಷಿಗಳು ಸರಸ್ವತಿ ನದಿ ತೀರದಲ್ಲಿ ಇರುವ ತಮ್ಮ ಆಶ್ರಮದಲ್ಲಿ ಹತ್ತು ಸಾವಿರ ವರುಷಗಳ ಭಗವಂತನ ಕುರಿತಾದ ತಪಸ್ಸು ಮಾಡುತ್ತಾರೆ.
ಸಕಲ ವೈದಿಕ ಕರ್ಮವನ್ನು ಚೆನ್ನಾಗಿ ಆಚರಿಸಿ ಅದರ ಫಲವನ್ನು ಶ್ರೀ ಹರಿಯ ಪಾದಕ್ಕೆ ಸಮರ್ಪಣೆ ಮಾಡಿ ಭಗವಂತನ ಧ್ಯಾನ ವನ್ನು ಕ್ಷಣಬಿಡದೇ ಮಾಡುತ್ತಾ ಅಷ್ಟು ಹತ್ತು ಸಾವಿರ ವರುಷಗಳ ಕಾಲವನ್ನು ಕಳೆಯಲು ಪುಂಡರೀಕಾಕ್ಷನಾದ ಶ್ರೀ ಹರಿಯು ಪ್ರಸನ್ನ ನಾಗಿ 
ವೇದ ವೇದ್ಯವಾದ ಗುಣ ಪೂರ್ಣಕನಾಗಿ ಶುಕ್ಲ ನಾಮಕ ರೂಪದಿಂದ ಪ್ರತ್ಯಕ್ಷನಾಗುವ.

ತನ್ನ ನಿಜ ಭಕ್ತರಿಗೆ ಘೋರವಾದ ಸಂಸಾರದ ದುಃಖವನ್ನು ನಾಶ ಪಡಿಸಿ ಅವರಿಗೆ ಸುಖಪ್ರದನಾದ್ದರಿಂದ ಭಗವಂತನಿಗೆ ಶುಕ್ಲ ಎಂದು ಹೆಸರು.
ಶ್ರೀ ಹರಿಯ ಪ್ರಸನ್ನ ವಾದ ರೂಪದ ವರ್ಣನೆ.
ಇಂದಿರೆಯ ಒಡಗೂಡಿ ಗರುಡ ರೂಢನಾಗಿ ಆಗಸದಲ್ಲಿ  ನಿಂತ ಭಗವಂತನಿಗೆ ದೇವತಾ ಗಣವು ಛತ್ರ ಚಾಮರ ಗಳಿಂದ ಭಗವಂತನಿಗೆ ಸೇವೆ ಮಾಡುತ್ತಾ ಬೀಸುತ್ತಾ ಇದ್ದಾರೆ.ಚಂದ್ರ ನಂತೆ ಪೋಲುವ ಶ್ವೇತ ಚ್ಛತ್ರ.ಮುತ್ತುಗಳಿಂದ ಅವುಗಳು ಅಲಂಕೃತ ಗೊಂಡಿದೆ.
ಪುನಃ ಪುನಃ ನೋಡಬೇಕು ಎನ್ನುವ ರೂಪ..
ಶ್ರೀ ಹರಿಯ ವಕ್ಷ ಸ್ಥಳದಿ ರಮಾದೇವಿಯು,ಕಂಠದಿ ಕೌಸ್ತುಭ ಮಣಿಯಲ್ಲಿ ಬ್ರಹ್ಮ ದೇವರು,ಚೂಡಾಮಣಿಯಾಗಿ ವಾಯುದೇವರು ಶೋಭಿಸುತ್ತಾ ಇದ್ದರು.
ನಿರ್ಮಲನು ,ಕೋಟಿ ಸೂರ್ಯತೇಜ ಪ್ರಕಾಶನು, ಪದ್ಮ ವನಮಾಲ ಭೂಷಿತನು,ಪೀತಾಂಬರ ಧಾರಿಯು,ಕಿರೀಟ ಕುಂಡಲಾದಿ ಸಕಲ ಆಭರಣ ಗಳಿಂದ ಭೂಷಿತನು,ಮಂದಹಾಸನು,
ಕರುಣಾ ಕಟಾಕ್ಷನು,ಕೌಸ್ತುಭ ಕಂಧರನು,ಶ್ರೀವತ್ಸ ವಕ್ಷ ಧಾರಿಯು,ಚತುರ್ಭುಜಧಾರಿಯು,ಗದೆ,ಶಂಖ ಚಕ್ರ ಪದ್ಮಭೂಷಿತನು.
ಪೀತಾಂಬರಧಾರಿಯಾಗಿ,
ಮಿಂಚಿನಂತೆ ಹೊಳೆಯುವ ಮಕರ ಕುಂಡಲ‌ ಕಿರೀಟ ಧಾರಿಯಾಗಿ, ಸರ್ವಾಭರಣಗಳಿಂದ ಒಪ್ಪುತ, ಮತ್ತು ವನಮಾಲ ತುಲಸಿ ಹಾರಗಳಿಂದ ಭೂಷಿತನಾಗಿ, ಅಭಯವನೀವ ಕರಗಳಿಂದ
 ಶೋಭಿಸುತ್ತಾ ,ಉನ್ನತವಾದ ನಾಸಿಕ,ಮಣಿಖಚಿತ ಕಿರೀಟ, ಭುಜ ಮಧ್ಯದಲ್ಲಿ ಶೋಭಿಸುವ ಹಾರ ಕೊರಳಲ್ಲಿ ಕೌಸ್ತುಭಮಣಿ,,ಇಂತಹ ರೂಪವನ್ನು ನೋಡುತ್ತಾ ಇಂದಿರೆಯು ಇನ್ನೂ ಎಣಿಸಲಾಗದು ಎಂದು ಒಂದು ರೂಪದಿಂದ ಅವನ ಅವಯವಗಳನ್ನು ಆಶ್ರಯ ಮಾಡಿದಳು.

ಬ್ರಹ್ಮಾದಿ ದೇವತೆಗಳಿಗೆ ಸಹ ಅವರ ಯಥಾನುಶಕ್ಯವಾಗಿ,ಗೋಚರಿಸುವ ಭಗವಂತನ ರೂಪವನ್ನು ಕಂಡು ಕರ್ದಮ ಮುನಿಗಳು ಆನಂದ ಭರಿತರಾಗಿ ಶಿರಸಾಷ್ಟಾಂಗವನ್ನು ಭಗವಂತನಿಗೆ ಮಾಡುತ್ತಾ ಆ ರೂಪವನ್ನು ಪುನಃ ಪುನಃ ನೋಡುತ್ತಾ ಆನಂದವನ್ನು ಪಡುತ್ತಾ ನಿಂತಿದ್ದಾರೆ..
ಹೀಗೆಂದು ಸ್ತೋತ್ರ ಮಾಡುತ್ತಾರೆ.
ಆ ಸಮಯದಲ್ಲಿ ಕೃತಯುಗವು ನಡೆಯುತ್ತಾ ಇತ್ತು.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀಕಪಿಲಾಯನಮಃ🙏
******

|ಪಿಬತ ಭಾಗವತಂ ರಸಮಾಲಯಂ||
Day37
 ✍️ನಿನ್ನೆಯ ದಿನ ಕರ್ದಮ ಋಷಿಗಳ ತಪಸ್ಸಿಗೆ ಮೆಚ್ಚಿ ಭಗವಂತ ದರುಶನ ಕೊಟ್ಟಿದ್ದಾನೆ.ಭಗವಂತನ ರೂಪ ಲಾವಣ್ಯ ವನ್ನು ಗುಣಗಳನ್ನು ಋಷಿಗಳು ಕೊಂಡಾಡಿದ್ದಾರೆ.
 "ವೇದಗಳಿಂದ ಸದಾ ಸ್ತುತ್ಯನಾಗುವ ಶ್ರೀ ಹರಿಯೇ! ನಿನ್ನ ದರುಶನ ವು ಯೋಗಿಗಳಿಗೆ ಬಹು ಕಾಲದ ಮೇಲೆ ಆಗುವದು.ಆದರೆ ನನಗೆ ಅಲ್ಪ ಕಾಲದಲ್ಲಿ ಆಯಿತು. ಇದು ನಿನ್ನ ಕಾರುಣ್ಯವನ್ನು ತೋರಿಸುತ್ತದೆ. ಮರೀಚ್ಯಾದಿಗಳು ಮತ್ತು ನಾನು ಸೃಷ್ಟಿ ಕಾರ್ಯವನ್ನು ಮಾಡಬೇಕು ಎಂದು ಹಿರಿಯರಾದ ಶ್ರೀ ಬ್ರಹ್ಮ ದೇವರ ಆಜ್ಞೆ ಆಗಿದೆ.ಆದ್ದರಿಂದ ನನಗೆ ಯೋಗ್ಯಳಾದ ಭಾರ್ಯೆಯನ್ನು ಕರುಣಿಸು.ತುಚ್ಚವಾದ ಕಾಮಿತವನ್ನು ಬಯಸಿದನೆಂದು ಬಹುವಾಗಿ ಕೋಪಿಸಬೇಡ.ನಿಷ್ಕಾಮರಾಗಿ ನಿನ್ನ ಭಜಿಪರಿಗೆ ಎಂದಿಗೂ ಕೇಡಿಲ್ಲ.ಕಾಮುಕರಿಗೆ ಕೇಡು ತಪ್ಪಿಸಲು ಸಾಧ್ಯವಿಲ್ಲ. ಮದುವೆಯಾದ ಮೇಲೆ ಸಂಸಾರದಿಂದ ಮುಕ್ತ ನಾಗಲು ಬಯಸಿ ನಿವೃತ್ತಿ ಮಾರ್ಗವನ್ನು ಹಿಡಿಯುವೆನು. ನೀನು ನಿನ್ನ ಅಲ್ಪ ಭಕ್ತ ಯಾರಾದರೂ ಸರಿಯೇ ಅವರಿಗೆ ಅನುಗ್ರಹ ಮತ್ತು ದಯೆ ಕಾರುಣ್ಯವನ್ನು ತೋರದೇ ಇರುವುದಿಲ್ಲ. ಅದಕ್ಕೆ ನಾನೇ ಸಾಕ್ಷಿ..
ಬಾಲಕನ ಕಲುಭಾಷೆಯನ್ನು ಕೇಳಿ ಜನನಿ ಹೇಗೆ ಸುಖವನ್ನು ಪಡುವಳೋ
ಅದರಂತೆ ಶ್ರೀ ಹರಿಯು ತನ್ನ ಭಕುತನ ಮಾತಿಗೆ ಸಂತಸಪಟ್ಟು ಆಜ್ಞೆಯನ್ನು ಮಾಡುತ್ತಾನೆ.
"ಕರ್ದಮನೇ! ಕೇಳು. 
ನಿನ್ನ ಮನಸ್ಸು ನನಗೆ ಗೊತ್ತು. ನನ್ನ ಪ್ರೇರಣೆ ಅನುಸಾರವಾಗಿ ನಿಯಮ ಅನುಷ್ಠಾನ ಕರ್ಮವನ್ನು ಮಾಡಿ ನನ್ನನ್ನು ಸಂತೋಷ ಪಡಿಸಿದೆ.
ನನ್ನ ಭಕ್ತನಾದವನು ನನ್ನಲ್ಲಿ ಭಕ್ತಿ ಇಟ್ಟು ಮಾಡಿದ ಅಲ್ಪ ಪೂಜೆಯಾದರು ಸರಿಯೇ ಅದು ಎಂದೆಂದಿಗೂ ವ್ಯರ್ಥ ವಾಗಲಾರದು.
ಭೂಮಂಡಲದಲ್ಲಿ ಪ್ರಖ್ಯಾತ ನಾದ ಮನು ಚಕ್ರವರ್ತಿ ತನ್ನ ಪತ್ನಿಯಾದ ಶತರೂಪೆ ಸಹಿತ ನಾಗಿ ನನ್ನ ಆಜ್ಞೆಯನ್ನು ಪಾಲಿಸಲೋಸುಗ ನನ್ನ ಪ್ರೇರಣೆ ಯಿಂದ ಸ್ವಾಯಂಭುವ ಮನು ನಿನ್ನನ್ನು ನೋಡಲು ನಾಡಿದ್ದು ಬರುವನು.ಅವನು ತನ್ನ ಮಗಳಾದ ದೇವಹೂತಿಯನ್ನು ನಿನಗೆ ಕೊಟ್ಟು ವಿವಾಹ ಮಾಡುವನು.ಅವಳು ನಿನ್ನ ಇಂದ ಒಂಭತ್ತು ಜನ ಹೆಣ್ಣು ಮಕ್ಕಳನ್ನು ಪಡೆಯುವಳು.
ಅವರನ್ನು ಮರೀಚ್ಯಾದಿ ನವವ್ರಜೇಶರಿಗೆ ಕೊಡು.ಅದರಿಂದ ಜಗತ್ತಿನ ಸೃಷ್ಟಿ ವೃದ್ಧಿ ಯಾಗುವದು.
ಬಳಿಕ‌ ನಾನು ನನ್ನ ಒಂದಂಶದಿಂದ ನಿನ್ನ ಮುಖಾಂತರ ವಾಗಿ ದೇವಹೂತಿಯ ಗರ್ಭದಲ್ಲ ಸೇರಿ ಕಪಿಲ ನಾಮಕನಾಗಿ ಅವತಾರ ಮಾಡಿ ತತ್ವ ಸಂಖ್ಯಾನವೆಂಬ ಶಾಸ್ತ್ರ ವನ್ನು ರಚಿಸುವೆನು.
ಎಂದು ಹೇಳಿ 
ಶ್ರೀಹರಿಯು ಪತ್ನಿ ಸಮೇತವಾಗಿ ಗರುಡನ ಹೆಗಲೇರಿ ಅವರಿಂದ ಮೃದುವಾಗಿ ಉಚ್ಚರಿತವಾಗುವ  ಹೊರಬರುವ   ಸಾಮಗಾನವನ್ನು ಕೇಳುತ್ತಾ ಬ್ರಹ್ಮಾದಿ ಸಕಲ ದೇವತೆಗಳಿಂದ ಸ್ತುತಿಗೊಳ್ಳುತ್ತಾ ಸನಕಾದಿ ಸಕಲ ಋಷಿಗಳಿಂದ ಪ್ರಾರ್ಥನೆ ಗೊಳ್ಳುತ್ತಾ ಶುಕ್ಲ ನಾಮಕನಾದ ಭಗವಂತನು ಕರ್ದಮರು ನೋಡ ನೋಡುತ್ತಾ ಇದ್ದಂತೆ ಅಂತರ್ಧಾನ ಹೊಂದಿದನು.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಅ.ವಿಜಯ ವಿಠ್ಠಲ🙏
***********


||ಪಿಬತ ಭಾಗವತಂ ರಸಮಾಲಯಂ||
Day38
ಸ್ವಾಯಂಭುವ ಮನು  ಮತ್ತು ಶತರೂಪಾ ದೇವಿಯರು ಪ್ರಜಾ ಸೃಷ್ಟಿಯನ್ನು ಆರಂಭಿಸಿದರು. ಮೊದಲು ಅವರಿಗೆ ಐದು ಜನ ಮಕ್ಕಳು ಹುಟ್ಟಿದ್ದಾರೆ.
ಪ್ರಿಯ ವ್ರತ ಮತ್ತು ಉತ್ಥಾನ ಪಾದ ಎನ್ನುವ ಇಬ್ಬರು ಗಂಡು ಮಕ್ಕಳು,ದೇವಹೂತಿ,ಅಕೂತಿ,ಮತ್ತು ಪ್ರಸೂತಿ ಎನ್ನುವ ಮೂರು ಜನ ಹೆಣ್ಣು ಮಕ್ಕಳು ಜನಿಸಿದ್ದಾರೆ.
ಕರ್ದಮ ಋಷಿಗಳು ಒಮ್ಮೆ ಸರಸ್ವತಿ ನದಿ ತೀರದಲ್ಲಿ ತಪಸ್ಸು ಮಾಡುವಾಗ ಭಗವಂತನ ದರುಶನ ವಾಗಿದೆ.
"ನೀವು ಹೋಗಿ ದೇವಹೂತಿಯನ್ನು ವಿವಾಹವಾಗಿ. ನಾನು ನಿಮಗೆ ಮಗನಾಗಿ,ಅವತಾರ ಮಾಡುತ್ತೇನೆಎಂದು ಹೇಳಿದ್ದಾನೆ.
ನಂತರದಲ್ಲಿ ದೇವಹೂತಿಯನ್ನು ಸ್ವಾಯಂಭುವ ಮನುವು ಕರ್ದಮರಿಗೆ ಭಗವಂತನ ಆಜ್ಞೆ ಯಂತೆ ಕೊಟ್ಟು ವಿವಾಹ ಮಾಡಿದ್ದಾರೆ.
 ದೇವಹೂತಿಯು ಪತಿಯ ಸೇವೆಯನ್ನು ಬಹು ವಿಶೇಷವಾಗಿ ಮಾಡಿದ್ದಾಳೆ.
ಅದರಿಂದ ಸಂತೃಪ್ತ ರಾದ ಕರ್ದಮರು ತಮ್ಮ ತಪಃಶಕ್ತಿಯಿಂದ ಚಿನ್ನದ ಸೌಧಗಳನ್ನು ನಿರ್ಮಾಣ ಮಾಡಿದ್ದಾರೆ.ಅವಳಿಗೆ ತಾರುಣ್ಯವನ್ನು ಕರುಣಿಸಿದ್ದಾರೆ.ತಾವು ಸಹ ಯೌವನ ಭರಿತರಾಗಿ ಇದ್ದಾರೆ.ಒಂದು ದೊಡ್ಡದಾದ  ವಿಮಾನವನ್ನು ಸೃಷ್ಟಿ ಮಾಡಿ ಅದರಲ್ಲಿ ಕುಳಿತು ಕೊಂಡು ಎಲ್ಲಾ ಕಡೆ  ಸಕಲ ಲೋಕಗಳನ್ನು ಸಂಚಾರ ಮಾಡಿದ್ದಾರೆ. ನವ ರೂಪಗಳನ್ನು ತಾವು ಧರಿಸಿ,ದೇವಹೂತಿಗು ತಮ್ಮ ತಪೋಬಲದಿಂದ ಒಂಭತ್ತು ದೇಹವನ್ನು ಕೊಟ್ಟಿದ್ದಾರೆ.   ಹೀಗೆ ನವರೂಪಗಳನ್ನು ಇಬ್ಬರು ಧರಿಸಿ ನೂರಾರು ವರ್ಷ ಎಲ್ಲಾ ಕಡೆ ವಿಹಾರ ಮಾಡಿದ್ದಾರೆ.
ಒಂಭತ್ತು ಜನ‌ಪುತ್ರಿಯರ ಜನನವಾಗಿದೆ.
ಇಲ್ಲಿ ಒಂದು ವಿಷಯ ವನ್ನು ಗಮನಿಸಿ. 
ಶ್ರೀಬ್ರಹ್ಮ ದೇವರ ಪುತ್ರ ರಾದ ಕರ್ದಮರಿಗೆ ಅಷ್ಟು ತಪೋಬಲ ಇತ್ತು .ಅಷ್ಟು ಕಾರ್ಯಗಳನ್ನು ಮಾಡಿದರು, ಅಂದರೆ ಅವರ ತಂದೆಯಾದ ಶ್ರೀಬ್ರಹ್ಮ ದೇವರ ಹಿರಿಮೆ ಎಷ್ಟು ಇರಬೇಡ.
ಮತ್ತು ಆ ಶ್ರೀಬ್ರಹ್ಮ ದೇವರ ತಂದೆಯಾದ ಲಕ್ಷ್ಮೀ ಪತಿಯಾದ ಆ ಶ್ರೀ ಹರಿಯ ಮಹಿಮೆ, ಅವನ ವ್ಯಾಪಾರ, ಅವನ ಶಕ್ತಿ ಎಷ್ಟು ಇರಬೇಡ.ಅವನ ಭಕ್ತರಿಗೆ ಅಷ್ಟು ಶಕ್ತಿ ಇರಬೇಕಾದರೆ ಭಗವಂತ ನಲ್ಲಿ ಇನ್ನೆಷ್ಟು ಶಕ್ತಿ ಇರಬಹುದು. ಒಮ್ಮೆ ಯೋಚನೆ ಮಾಡಬೇಕಾದ ವಿಷಯ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ||ಏಳಿರೋ ವೈಕುಂಠಕೆ||
🙏ಶ್ರೀ ಕಪಿಲಾಯ ನಮಃ🙏
***************

||ಪಿಬತ ಭಾಗವತಂ ರಸಮಾಲಯಂ||
Day 39
 ✍️ದೇವಹೂತಿಯು ತನ್ನ ಒಂಭತ್ತು ದೇಹಗಳಿಂದ ಗರ್ಭವನ್ನು ಧರಿಸಿ ಒಂಭತ್ತು ಜನ ಪುತ್ರಿಯರನ್ನು ಪಡೆದಿದ್ದಾಳೆ.
ನಂತರ ಪುತ್ರ ಜನನವಾಗ ಬೇಕೆಂದು ಕರ್ದಮ ಋಷಿಗಳ ಬಳಿ ಪ್ರಾರ್ಥನೆ ಮಾಡಿಕೊಳ್ಳುವಳು.
"ಪ್ರಭು! ಇದುವರೆಗೆ ದೇವ ದೇವನನ್ನು‌ ಮರೆತು ಕಾಲ‌ಕಳೆದಿದ್ದು ಸಾಕು.ತಮ್ಮ ಸಂಗದಿಂದ ನನಗೆ ಮೋಕ್ಷ ಹೊಂದುವಂತೆ ಅನುಗ್ರಹ ಮಾಡಿ.ಮೋಕ್ಷ ಪ್ರದವಾದ ತಮ್ಮ ಸಹವಾಸವನ್ನು ಮಾಡಿದರು ಸಹ ಸಂಸಾರದ ಬಂಧನದಿಂದ ಬಿಡುಗಡೆ ಬಯಸದೇ ಹೋದೆನಲ್ಲ.ನಿಜಕ್ಕೂ ಇದೆಲ್ಲವೂ ಶ್ರೀ ಹರಿಯ ಬಂಧಕ ಶಕ್ತಿಯ ಮಹಿಮೆಯೆ ಸರಿ.
ತಾವು ಮೋಕ್ಷ ಕ್ಕೆ‌ಕಾರಣನಾದ ಪುತ್ರನನ್ನು ಕರುಣಿಸಿ ಅನುಗ್ರಹ ಮಾಡಬೇಕು."
ಕರ್ದಮ ಋಷಿಗಳು ಹೇಳುತ್ತಾರೆ.
"ದೇವಿ!ಸ್ವಲ್ಪ ಕಾಲದಲ್ಲಿ ಶ್ರೀ ಶುಕ್ಲ ನಾಮಕ ಪರಮಾತ್ಮ ನಿನ್ನ ಗರ್ಭದಲ್ಲಿ ಮಗನಾಗಿ ಅವತಾರ ಮಾಡುವನು. ನೀನು ಜಿತೇಂದ್ರಿಯಳಾಗಿ ಶೌಚ,ತಪಸ್ಸು, ಮತ್ತು ದಾನ ಇನ್ನೂ ಮುಂತಾದ ವ್ರತಗಳನ್ನು ಆಚರಿಸಿ ಬಹು ಶ್ರದ್ಧೆ ಭಕ್ತಿ ಯಿಂದ ಶ್ರೀ ಹರಿಯನ್ನು ಸೇವಿಸು.ಜಗದೊಡೆಯನಾದ ಆ ರಮಾಪತಿಯು ನಿನ್ನ ಉದರದಲ್ಲಿ ಅವತರಿಸಿ ನನಗೆ ಕೀರ್ತಿ ಯನ್ನು ಕೊಟ್ಟು, ನಿನಗೆ ಶಾಸ್ತ್ರ ಉಪದೇಶವನ್ನು ಮಾಡಿ ನಿನ್ನ ಸಂಸಾರದಿಂದ ಮುಕ್ತ ಗೊಳಿಸುವನು.
 ದೇವಹೂತಿಯು ಪತಿಯ ಆಜ್ಞೆಯನ್ನು ಪರಿಪಾಲಿಸುತ್ತಾ ವ್ರತದ ನಿಯಮವನ್ನು ಆಚರಣೆ ಮಾಡುತ್ತಾ ಭಕ್ತಿ ಶ್ರದ್ಧೆ ಯಿಂದ ಶ್ರೀ ಹರಿಯನ್ನು ಸೇವೆ ಮಾಡಿದ್ದಾಳೆ.
ಕಟ್ಟಿಗೆಯಲ್ಲಿ ಬೆಂಕಿಯು ವ್ಯಕ್ತ ವಾಗುವಂತೆ ಶ್ರೀ ಹರಿಯು ಮನುಪುತ್ರಿಯ ಉದರದಲ್ಲಿ ಪ್ರವೇಶ ಮಾಡಿ ಅವತಾರ ಮಾಡಿದ್ದಾನೆ.ಆಗ ದುಂಧುಬಿಗಳು ಮೊಳಗಿದವು.ಸುರರು ಪುಷ್ಪ ವೃಷ್ಟಿಯನ್ನು ಕರೆದಿದ್ದಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
*********

||ಪಿಬತ ಭಾಗವತಂ ರಸಮಾಲಯಂ||
Day 40
ದೇವಹೂತಿ ಗರ್ಭದಲ್ಲಿ ಪರಮಾತ್ಮನು ಕಪಿಲನಾಮಕನಾಗಿ ಅವತಾರ ಮಾಡಿದ್ದಾನೆ.
ಭಗವಂತನ ಅವತಾರವಾದ ಕೂಡಲೇ ಋಷಿಗಳು ತಪಸ್ಸಿಗೆ ಅಂತ ಹೊರಟಿದ್ದಾರೆ.
ಆ ನಂತರದಲ್ಲಿ ದೇವಹೂತಿ ಕಪಿಲನಾಮಕ ಪರಮಾತ್ಮನಿಂದ ಉಪದೇಶವನ್ನು ಪಡೆದಿದ್ದಾಳೆ.ಅದೇ ಕಪಿಲ ಗೀತೆ ಎಂದು ಪ್ರಸಿದ್ಧ ವಾಗಿದೆ.ಅದಕ್ಕೆ ಸಾಂಖ್ಯ ಶಾಸ್ತ್ರ ಎಂದು ಹೆಸರು.
ದೇವಹೂತಿ ಕೆಲವೊಂದು ಸಂದೇಹ ಕಪಿಲ ನಾಮಕ ಪರಮಾತ್ಮನ ಬಳಿ ಕೇಳುತ್ತಾಳೆ.
"ನಾವು ಪುನಃ ಪುನಃ ಜನ್ಮ ಪಡೆದು ಈ ಸಂಸಾರಕ್ಕೆ ಬೀಳುತ್ತೇವೆ ಅಲ್ಲವೇ!!.ಇದಕ್ಕೆ ಕಾರಣವೇನು??ಇದರಿಂದ ಮೋಕ್ಷ ಹೇಗೆ?? ಅಂತ ಕೇಳಿದಾಗ
ಶ್ರೀಕಪಿಲ ನಾಮಕ ಪರಮಾತ್ಮನು ಹೇಳುತ್ತಾನೆ. 
"ಅಮ್ಮ !ಕೇಳು.ಸಂಸಾರ ಬಂಧನ ಕ್ಕೊಂದು ಮತ್ತು ಮೋಕ್ಷ ಕ್ಕೆ ಒಂದು ಕಾರಣ ಅಂತ ಏನಿಲ್ಲ.ಎರಡಕ್ಕೂ ಒಂದೇ ಕಾರಣ.
ಯಾವ ರೀತಿಯಲ್ಲಿ ಬೀಗ ಹಾಕಲಿಕ್ಕು,ತೆಗೆಯಲು ಒಂದೇ ಬೀಗದ ಕೈ ಇರುವದೋ ಅದೇ ರೀತಿಯಲ್ಲಿ ಸಂಸಾರದ ಬಂಧನಕ್ಕೆ ಮತ್ತು ಮೋಕ್ಷ ಕ್ಕೆ ಒಂದು ಕಾರಣವಿದೆ.ಅದೇ ಮನಸ್ಸು.
ಈ ಮನಸ್ಸನ್ನು ಲೌಕಿಕದ ಕಡೆ,ಸಂಸಾರದ ಕಡೆ ಹಾಕಿದರೆ ಪುನಃ ಪುನಃ ಸಂಸಾರದ ಚಕ್ರ ದಲ್ಲಿ ಬೀಳಬೇಕು. ಮನಸ್ಸು ಪರಮಾತ್ಮನ ಕಡೆ ಹಾಕಿದರೆ ಅವರು ಮೋಕ್ಷ ವನ್ನು ಪಡೆಯುತ್ತಾರೆ.
ನೀರಿನಲ್ಲಿ ಬೆಣ್ಣೆ ಇದ್ದ ಹಾಗೆ ಸಂಸಾರದಲ್ಲಿ ಇರಬೇಕು. ಮನಸ್ಸು ಎಂಬ ದೋಣಿಯನ್ನು ಹಗ್ಗ ಕಟ್ಟಿ ಪ್ರಪಂಚವೆಂಬ ಗೂಟಕ್ಕೆ ಕಟ್ಟಿ ಹಾಕಿ ಬಿಡಬಾರದು.
ಸಜ್ಜನರ ಜೊತೆಗೆ ಹಾಲು ನೀರಿನಂತೆ ಬೆರೆಯಬೇಕು.
ಸದಾ ಸಜ್ಜನರ ಸಹವಾಸ ಮಾಡಬೇಕು. ಏಕೆಂದರೆ ಸಜ್ಜನರು ಸದಾ ಭಗವಂತನ ಕುರಿತಾದ ಅವನ ಚರಿತ್ರೆ ಮಹಿಮೆಯನ್ನು ಹೇಳುತ್ತಾ ಇರುತ್ತಾರೆ.ಅಂತಹವರ ಸಂಗವನ್ನು ಮಾಡಬೇಕು. ಮತ್ತು ಅದನ್ನು ಸದಾ ಕೇಳುತ್ತಾ ಇರಬೇಕು. ಒಂದು ಸಲ ಕೇಳಿದರೆ ಅಲ್ಲ.ಅನೇಕ ಬಾರಿ ಕೇಳಬೇಕು. ಆಗ ಭಗವಂತ ನಲ್ಲಿ ಶ್ರದ್ಧೆ ,ಭಕ್ತಿ ಬರುತ್ತದೆ. ಅದು ನಮ್ಮ ಉದ್ದಾರಕ್ಕೆ ಕಾರಣವಾಗುತ್ತದೆ.

ಹೀಗೆ ಇನ್ನೂ ಅನೇಕ ಉದಾಹರಣೆ ಗಳನ್ನು ಕೊಟ್ಟು ತನ್ನ ತಾಯಿಯಾದ ದೇವಹೂತಿಗೆ ಬಂದಂತಹ ಸಂದೇಹ ನಿವಾರಣೆಯನ್ನು ಕಪಿಲ ನಾಮಕ ಪರಮಾತ್ಮನು ನಿವಾರಣೆ ಮಾಡುತ್ತಾನೆ.

ನಂತರದಲ್ಲಿ ದೇವಹೂತಿಗೆ ಸದ್ಗತಿಯನ್ನು ಕರುಣಿಸುತ್ತಾನೆ.
ಆ ಸ್ಥಳವೇ ಸಿದ್ದಪುರ,ಅಥವಾ ಮಾತೃಗಯೆ ಎಂದು ಪ್ರಸಿದ್ಧಿ ವಾಗಿದೆ.
ಇಂದಿಗು ತಾಯಿಯ ಸದ್ಗತಿಗೆ ಮಾತೃಗಯಾ  ಅಥವಾ ಸಿದ್ದಿಕ್ಷೇತ್ರವು ಸಿದ್ದಿ ಕ್ಷೇತ್ರ.
ಪ್ರತಿಯೊಬ್ಬ ರು ತಮ್ಮ ತಾಯಿಯ ಋಣವನ್ನು ಕಿಂಚಿತ್ತೂ ಕಳೆದುಕೊಳ್ಳಲು ಅಲ್ಲಿ ಹೋಗಿ ತಾಯಿಯ ಶ್ರಾದ್ದಾದಿಗಳನ್ನು ಮಾಡಿ ಬರುತ್ತಾರೆ.
ತಾಯಿಯ ಋಣವನ್ನು ಕಳೆದುಕೊಳ್ಳಲು ಎಂದಿಗು ಯಾರಿಂದಲೂ ಸಾಧ್ಯವಿಲ್ಲ.
ಸನ್ಯಾಸಿಗಳು ಮೊದಲು ಭಗವಂತ,ನಂತರ ಅವರ ಗುರುಗಳು,ಮತ್ತು ಅವರ ಆಶ್ರಮಜೇಷ್ಟ ಯತಿಗಳಿಗೆ  ಮತ್ತು  ಅವರಿಗೆ ಜನ್ಮಕೊಟ್ಟ ತಾಯಿಗೆ ಮಾತ್ರ ನಮಸ್ಕಾರ ಮಾಡುವರು.
ಬೆಳಗಿನ ಜಾವದಲ್ಲಿ ಕಪಿಲನಾಮಕ ಪರಮಾತ್ಮನ ನಾಮವನ್ನು ಸ್ಮರಣೆ ಮಾಡಿದವರಿಗೆ ಅಪಜಯವೇ ಮೊದಲಾದದುಃಖವಿಲ್ಲ.ಅಪರಿಮಿತವಾದ ಸೌಖ್ಯ ಅವನ ಕುಲಕೋಟಿಗೆ.
ಕಪಿಲ ಪರಮಾತ್ಮನ ನಂಬಿದ ಮೂಢ ಮನುಜನಿಗೆ ಮಹಾ ಪದವಿ ಬರುವದು.
ಈ ಧ್ಧರೆಯೊಳಗೆ ನಿನ್ನ ನಂಬಿದ ಮಾನವಗೆ
ಹೃದ್ರೋಗ ವೇ ಇಲ್ಲ ಎಂದು ನಮ್ಮ ಶ್ರೀ ವಿಜಯಪ್ರಭುಗಳ ವಾಣಿ.

ಇಂತಹ ಕಪಿಲನಾಮಕ ಪರಮಾತ್ಮನ ಸ್ಮರಣೆ ಕಪಿಲಗೀತೆಯ ಶ್ರವಣ, ಪಾರಾಯಣ, ಯಾರು ಮಾಡುವರೋ ಅಂತಹ ವರು ಗರುಡವಾಹನನಾದ,ವೈಕುಂಠ ಪತಿಯಾದ ಆ ಪರಮಾತ್ಮನ ಪಾದಾರವಿಂದದಲ್ಲಿ ಭಕ್ತಿ ಯನ್ನು ಪಡೆದು ಅಂತ್ಯಕಾಲದ ನಂತರ ಮುಕ್ತಿ ಯನ್ನು ಪಡೆಯತ್ತಾರೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ||
🙏ಶ್ರೀ ಕಪಿಲಾಯ ನಮಃ🙏
***************

||ಪಿಬತ ಭಾಗವತಂ ರಸಮಾಲಯಂ||
Day 41
ಶ್ರೀಕಪಿಲ ನಾಮಕ ಪರಮಾತ್ಮನು ಮಾಡಿದ ಉಪದೇಶ ವನ್ನು ಕೇಳಿದ ಮೇಲೆ  ದೇವಹೂತಿಯು ಭಗವಂತನಿಗೆ ನಮಸ್ಕರಿಸಿ ಅವನನ್ನು ಸ್ತೋತ್ರ ಮಾಡಲು ಆರಂಭ ಮಾಡುತ್ತಾಳೆ.
ಸ್ವಾಮಿ !ಸತ್ಯ ಸಂಕಲ್ಪ ನೀನು. ನಿನ್ನ ಆಜ್ಞೆ ಅನುಸಾರವಾಗಿ ಸಕಲ ಜೀವಿಗಳು ನಡೆಯುವದು.ನಿನ್ನ ಆಜ್ಞೆ ಯಂತೆ ರಮಾ ಬ್ರಹ್ಮಾದಿ ದೇವತೆಗಳು ಕಾರ್ಯವನ್ನು ನಿರ್ವಹಿಸುವರು.ಸಕಲ ಜೀವರ ಒಡೆಯನಾದ ನೀನು,ಸಕಲ ಬ್ರಹ್ಮಾಂಡವನ್ನು ಉದರದಲ್ಲಿ ಇಟ್ಟು ಕೊಂಡವ ನೀನು ನನ್ನ ಹೊಟ್ಟೆ ಯಲ್ಲಿ ಹೇಗಿದ್ದೆ??
ಪ್ರಳಯ ಕಾಲದಲ್ಲಿ ಬಾಲ ಶಿಶುವಾಗಿ ಬೆರಳು ಚೀಪುತ್ತಾ ಆಲದೆಲೆಯ ಮಲಗಿದ್ದವ ನೀನು .ನಿನ್ನ ಪ್ರೇರಣೆ ಇಲ್ಲದೆ ಒಂದು ಸಾಸಿವೆ ಯಷ್ಟು ಭಾರವನ್ನು ಸಹ ನಾನು ಹೊರಲಾರೆನು?? ಅಂತಹ ನಿನ್ನನ್ನು ನಾನು ಹೇಗೆ ಹೊತ್ತು ಹೆತ್ತು ಧನ್ಯನಾದೇ??ನೀನಾಗಿ ನಿನ್ನ ಇಂದ ನನ್ನ ಗರ್ಭದಲ್ಲಿ ಪ್ರಕಟವಾದೆ.
ನಿನ್ನ ನಾಮ ಶ್ರವಣ,ನಿನ್ನ ಸಂಕೀರ್ತಣ,ನಿತ್ಯ ನಿನ್ನ ಸ್ತುತಿಗಳನ್ನು ಮಾಡುವ ಯಾವುದೇ ಜೀವಿಯಾದರು ಉದ್ದಾರವಾಗುವದು ಎಂದ ಮೇಲೆ ಸಾಕ್ಷಾತ್ ನೀನು ನನಗೆ ಮಗನಾಗಿ ಅವತರಿಸಿ ಜ್ಞಾನ ಉಪದೇಶ ಮಾಡಿದ ಮೇಲೆ ನನಗೆ ಇನ್ನೂ ಯಾವ ಭಯ??
ಪೂರ್ವ ಜನ್ಮದ ಸುಕೃತ ಫಲವಿದ್ದರೆ ಮಾತ್ರ ನಿತ್ಯ ನಿನ್ನ ನಾಮ ಸ್ಮರಣೆ ನಾಲಿಗೆಯ ಮೇಲೆ ಬರಲು ಸಾಧ್ಯ. ಅಂತಹ ನಾಮ ಸ್ಮರಣೆ ಬರಬೇಕಾದರೆ ತಪಸ್ಸು ಮಾಡಿರಬೇಕು.ನಿನ್ನ ಪ್ರೀತಿಗಾಗಿ ಯಜ್ಞ ಯಾಗಾದಿಗಳನ್ನು ದಾನ ಧರ್ಮಾದಿಗಳನ್ನು ಮಾಡಿದಾಗ ಮಾತ್ರ ನಿನ್ನ ನಾಮ ಸ್ಮರಣೆ ಬರಲು ಸಾಧ್ಯ. ಇಲ್ಲ ವಾದರೆ ಇಲ್ಲ.
ಹೀಗೆ ಸ್ತೋತ್ರ ಮಾಡಿದ ದೇವಹೂತಿ ಗೆ ಪರಮಾತ್ಮನು ಹೇಳುತ್ತಾನೆ. 
ಅಮ್ಮ! ನಾನು ಹೇಳಿದ ಭಕ್ತಿ ಮಾರ್ಗ ಕ್ಷೇಮಕರ.ಅದನ್ನು ಅನುಸರಿಸಿ ನಡೆ.ಶೀಘ್ರವಾಗಿ ನನ್ನ ಲೋಕವನ್ನು ಹೊಂದುವೆ.ಜ್ಞಾನಿಗಳು ಇದನ್ನು ಹೊಂದಿ ಮುಕ್ತಿ ಪಡೆಯುವರು.ಈ ಮಾರ್ಗವನ್ನು ಬಿಟ್ಟವರು ನರಕವನ್ನು ಅಥವಾ ಅಂಧ ತಮಸ್ಸು ಹೊಂದುವರು ಎಂದು ಹೇಳಿ ತಾಯಿಯ ಅಪ್ಪಣೆ ಪಡೆದು ಹೊರಟು ಹೋಗುವನು.
ದೇವಹೂತಿಯು ಶ್ರೀಕಪಿಲನಾಮಕ ಪರಮಾತ್ಮನ ವಾಣಿಯನ್ನು ಸ್ಮರಣೆ ತಂದುಕೊಂಡು ಎಲ್ಲವನ್ನೂ ತೊರೆದು ಸರಸ್ವತಿ ನದಿಯ ತೀರದಲ್ಲಿ ಇರುವ ಕರ್ದಮಾಶ್ರಮದಲ್ಲಿ ತಪಸ್ಸಿಗೆ ಕುಳಿತಳು.ತ್ರಿಕಾಲ ಸ್ನಾನದಿಂದ,ಉಪವಾಸವಿದ್ದು ಪರಮಾತ್ಮನ ಸ್ಮರಣೆ ಮಾಡುತ್ತಾ ತಪಸ್ಸಿಗೆ ಕುಳಿತಳು.ನಂತರದಲ್ಲಿ ಬಿಂಬಾಪರೋಕ್ಷವಾಯಿತು.
ಯೋಗ ಪ್ರಭಾವ ದಿಂದ ದೇಹವನ್ನು ತ್ಯಾಗ ಮಾಡಿ ಭಗವಂತನ ಪಾದಗಳನ್ನು ಹೊಂದಿದಳು.ಆ ನಂತರ ಅವಳ ದೇಹ ನದಿರೂಪವಾಗಿ ಹರಿದು ಹೋಗಿದೆ.ಆ ನದಿ ಶ್ರೇಷ್ಠ ವನ್ನು ಸಿದ್ದಿದಾ ಎಂಬುವರು.ಅದನ್ನು ಈವಾಗಲು ಸಿದ್ದರು ಅಲ್ಲಿ ಸೇವಿಸುತ್ತಾರೆ. ಅದೇ ಸಿದ್ದಿ ಸರೋವರ.
ಇತ್ತ ಶ್ರೀಕಪಿಲದೇವರು ಈಶಾನ್ಯ ದಿಕ್ಕಿಗೆ ಸಂಚಾರ ಹೊರಟರು.ಸಕಲರು ಅವನನ್ನು ಹಿಂಬಾಲಿಸಿ ದರು.ಸಮುದ್ರ ಬಳಿ ಬಂದಾಗ ಸಮುದ್ರ ರಾಜನು ಸ್ವಾಮಿ ಇರಲು ಸ್ಥಳ ವನ್ನು ಕೊಟ್ಟನು.
ಶ್ರೀಕಪಿಲನಾಮಕ ಪರಮಾತ್ಮನು ಇಂದಿಗೂ ಅಲ್ಲಿ ತಪಸ್ಸು ಆಚರಿಸುತ್ತಾ ಸಕಲದೇವತೆ,ಸಿದ್ದರು ಇನ್ನೂ ಮುಂತಾದವರು ಇಂದ ಸೇವೆ ಕೈಗೊಳ್ಳುತ್ತಾಇರುವ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಬಿಡದೆ ಸ್ಮರಿಸು ಕಪಿಲ ಪರಮಾತ್ಮನ|
ಗೆಲವುಂಟು ನಿನಗೆಲವೋ ಸಂಸಾರದಿಂದ ವೇಗ|
ಕಲಿಯುಗದೊಳಗಿದೆ ಕೊಂಡಾಡೊ ನರರಿಗೆ|
ಖಳರ ಅಂಜಿಕೆ ಇಲ್ಲ ನಿಂದಲ್ಲಿ ಶುಭಯೋಗ|
ಬಲವೈರಿನುತ ನಮ್ಮ ವಿಜಯವಿಠ್ಠಲ ರೇಯ|
ಇಳೆಯೊಳಗೆ ಕಪಿಲನಾಗಿ ನಮ್ಮ ಭಾರ ವಹಿಸುವ|
🙏ಶ್ರೀ ಕಪಿಲಾಯ ನಮಃ🙏
***********

||ಪಿಬತ ಭಾಗವತಂ ರಸಮಾಲಯಂ||
Day42
ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಕಿಂಚಿತ್ತೂ ಶ್ರೀ ಮದ್ ಭಾಗವತ ಪಾರಾಯಣ ಕಪಿಲನಾಮಕ ಪರಮಾತ್ಮನ ಅವತಾರ,ದೇವಹೂತಿಗೆ ಉಪದೇಶ,ನಂತರ ದೇವಹೂತಿಯು ಮೋಕ್ಷ ವನ್ನು ಪಡೆದ ವಿವರಣೆ ತೃತೀಯ ಸ್ಕಂದದವರೆಗೆ ಮೊನ್ನೆ ಮುಗಿದಿದೆ.
ಇಂದಿನಿಂದ ಚತುರ್ಥ ಸ್ಕಂದ ಆರಂಭ.
 ಕರ್ದಮರು ತಮ್ಮ ಒಂಭತ್ತು ಜನ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದ ಬಗ್ಗೆ ಹಿಂದೆ ಕೇಳಿದ್ದೇವೆ.
ಕಲಾದೇವಿಯನ್ನು ಮರೀಚಿ ಮುನಿಗಳಿಗು,ಅನಸೂಯಾ ಯನ್ನು ಅತ್ರಿಋಷಿಗೂ,ಶ್ರದ್ಧೆಯನ್ನು ಅಂಗೀರಸರಿಗು,ಹವಿರ್ಭೂವಳನ್ನು ಪುಲಸ್ತ್ಯರಿಗು,ಗತಿಯನ್ನು ಪುಲಹ ಋಷಿಗಳಿಗೆ, ಕ್ರಿಯೆಯನ್ನು ಕ್ರತುಮುನಿಗಳಿಗು,ಖ್ಯಾತಿಯನ್ನು ಭೃಗುಮುನಿಗಳಿಗು,ಅರುಂಧತಿಯನ್ನು ವಸಿಷ್ಠ ರಿಗು, ಶಾಂತಿಯನ್ನು ಅಥರ್ವಣರಿಗು, ಕೊಟ್ಟು ಮದುವೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ.
ನಂತರ ಶುಕಮುನಿಗಳು ಹೇಳುತ್ತಾರೆ. 
ರಾಜನೇ !ಕೇಳು.. 
ಸ್ವಾಯಂಭುವ ಮನು ತನ್ನ ಮಗಳಾದ ದೇವಹೂತಿಯನ್ನು ಕರ್ದಮರಿಗೆ,ಮತ್ತು ಇನ್ನೊಬ್ಬ ಮಗಳಾದ  ಅಕೂತಿಯನ್ನು ರುಚಿ ಪ್ರಜಾಪತಿಗೆ,ಮತ್ತು ಮತ್ತೊಬ್ಬ ಮಗಳಾದ ಪ್ರಸೂತಿ ದೇವಿಯನ್ನು ದಕ್ಷ ಪ್ರಜಾಪತಿಗೆ ಕೊಟ್ಟು ವಿವಾಹ ಮಾಡಿದ್ದಾನೆ.

 ಇಲ್ಲಿ ಅಕೂತಿಯನ್ನು ರುಚಿ ಪ್ರಜಾಪತಿಗೆ,ಕೊಟ್ಟು ವಿವಾಹ ಮಾಡುವಾಗ  ಪುತ್ರಿಕಾ ಪುತ್ರ ಧರ್ಮದ ಪ್ರಕಾರವಾಗಿ ವಿವಾಹ ಮಾಡಿದ್ದಾನೆ.
ಪುತ್ರಿಕಾ ಪುತ್ರ ಧರ್ಮ ಎಂದರೆ ಹಿಂದಿನ ಕಾಲದಲ್ಲಿ ಪುತ್ರ ಸಂತಾನ ಇಲ್ಲದೇ ಬರಿಯ ಹೆಣ್ಣು ಮಕ್ಕಳು ಇದ್ದವರು ಮಗಳನ್ನು ವಿವಾಹ ಮಾಡಿಕೊಡುವಾಗ ಇವರಲ್ಲಿ ಹುಟ್ಟಿದ ಗಂಡು ಮಗುವನ್ನು ನನಗೆ ಕೊಡಬೇಕು ಎಂದು ಒಪ್ಪಂದ ಮಾಡಿಕೊಂಡು ವಿವಾಹ ಮಾಡಿಕೊಳ್ಳುವದು.
ಆದರೆ ಇಲ್ಲಿ 
ಸ್ವಾಯಂಭುವ ಮನುವಿಗೆ ಇಬ್ಬರು ಗಂಡು ಮಕ್ಕಳು ಇದ್ದರು.ಪ್ರಿಯವ್ರತ ಮತ್ತು ಉತ್ತಾನ ಪಾದ ಎಂದು.
ಮತ್ತೆ ಗಂಡು ಮಕ್ಕಳು ಇದ್ದರು ಸಹ ಏಕೆ ಆ ಒಪ್ಪಂದ ಮಾಡಿಕೊಂಡರು?? 
ಅಂದರೆ
ಅದಕ್ಕೆ ಉತ್ತರ.
ಸ್ವಾಯಂಭುವ ಮನುವಿಗೆ ಮೊದಲೇ ಗೊತ್ತಿತ್ತು. ಅಕೂತಿಯಲ್ಲಿ ಸಾಕ್ಷಾತ್ ಭಗವಂತ ಯಜ್ಞ ನಾಮಕ ಪರಮಾತ್ಮನಾಗಿ ಅವತಾರ ಮಾಡುತ್ತಾನೆ ಎಂದು.
ಅದರಂತೆ ಅಕೂತಿ ದಂಪತಿಗಳಿಗೆ ಪರಮಾತ್ಮನು ಯಜ್ಞ ನಾಮಕನಾಗಿ ಅವತಾರ ಮಾಡಿದ್ದಾನೆ.
ಯಜ್ಞ, ಯಾಗ ಇವುಗಳನ್ನು ನಾವುಗಳು ಏನು ಮಾಡುತ್ತೇವೆ ಯೋ ಅದಕ್ಕೆ ಎಲ್ಲಾ ನಿಯಾಮಕನಾಗಿ,ಆರಾಧ್ಯನಾಗಿರ ತಕ್ಕಂತಹ ವನೇ ಯಜ್ಞ ನಾಮಕ ಪರಮಾತ್ಮ.ಅವನ ಹೆಂಡತಿ ಯಾಗಿ ದಕ್ಷಿಣಾ ಎಂಬ ನಾಮದಿಂದ ಲಕ್ಷ್ಮೀ ದೇವಿಯು ಸಹ ಅವರಲ್ಲಿ ಅವತಾರ ಮಾಡಿದ್ದಾಳೆ.
ಈ ರೀತಿಯಲ್ಲಿ ರುಚಿ ಪ್ರಜಾಪತಿ ಮತ್ತು ಅಕೂತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಯಜ್ಞ ಮತ್ತು ದಕ್ಷಿಣ. ಸಾಕ್ಷಾತ್ ಲಕ್ಷ್ಮೀ ನಾರಾಯಣರೇ ಅವರ ಗರ್ಭದಲ್ಲಿ ಅವತಾರ ಮಾಡಿದ್ದಾರೆ.ಮೊದಲೇ ಒಪ್ಪಂದ ಮಾಡಿಕೊಂಡಂತೆ ಸ್ವಾಯಂಭುವ ಮನುವು ಯಜ್ಞ ನಾಮಕ ಪರಮಾತ್ಮನ ನ್ನು ಕರೆದುಕೊಂಡು ಹೋಗಿದ್ದಾನೆ.
ದಕ್ಷಿಣಾ ದೇವಿಯು ರುಚಿ ದಂಪತಿಗಳ ಬಳಿ ಉಳಿದುಕೊಂಡಳು.
ನಂತರ ಮುಂದೆ ತನಗೆ ಅನಾದಿ ಪತ್ನಿಯಾದ ದಕ್ಷಿಣಾ ದೇವಿಯನ್ನು ಯಜ್ಞ ನಾಮಕ ಪರಮಾತ್ಮನು ವಿವಾಹ ವಾಗಿದ್ದಾನೆ.ಇವರಲ್ಲಿ ಹನ್ನೆರಡು ಜನ ಮಕ್ಕಳು ಹುಟ್ಟಿದರು. 
ಇವರೆಲ್ಲರಿಗು ತುಷಿತರು ಎಂದು ಹೆಸರು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಶ್ರೀ ಯಜ್ಞ ನಾಮಕ ಪರಮಾತ್ಮನಿಗೆ ನಮನಗಳು🙏
*********
43 
CC
||ಪಿಬತ ಭಾಗವತಂ ರಸಮಾಲಯಂ||
Day43
🙏🙏
✍️ಅಕೂತಿ ದಂಪತಿಗಳಿಗೆ ಭಗವಂತ ಯಜ್ಞ ನಾಮಕನಾಗಿ, ಶ್ರೀಲಕ್ಷ್ಮೀ ದೇವಿಯು ದಕ್ಷಿಣಾ ನಾಮಕಳಾಗಿ ಅವತರಿಸಿದ ಬಗ್ಗೆ ಕೇಳಿದೆವು.
ಆ ನಂತರ ಅವರು ವಿವಾಹವಾಗಿ ಅವರಿಗೆ ಹನ್ನೆರಡು ಜನ ಮಕ್ಕಳು ಹುಟ್ಟು ತ್ತಾರೆ.
ಮುಂದೆ ಶ್ರೀಶುಕಮುನಿಗಳು ಪರಿಕ್ಷೀತ ರಾಜನಿಗೆ ಭಗವಂತನ ಇನ್ನೊಂದು ಅವತಾರವಾದ ಶ್ರೀದತ್ತನಾಮಕ ಪರಮಾತ್ಮನ ಅವತಾರದ ಬಗ್ಗೆ ಹೇಳುತ್ತಾರೆ.
  ರಾಜನೇ! ಕೇಳು.ಕರ್ದಮ ದೇವಹೂತಿ ದಂಪತಿಗಳು ತಮ್ಮ ಮಗಳಾದ ಅನುಸೂಯಾದೇವಿಯನ್ನು ಅತ್ರಿ ಋಷಿಗಳಿಗೆ ಕೊಟ್ಟು ವಿವಾಹವನ್ನು ಮಾಡಿದ್ದಾರೆ.
ಅನುಸೂಯಾ ದೇವಿ ಕಪಿಲನಾಮಕ ಪರಮಾತ್ಮನಿಗೆ ಅಕ್ಕ ಆಗಬೇಕು.
ಸಂತಾನಕ್ಕೋಸ್ಕರವಾಗಿ ಅತ್ರಿ ಋಷಿಗಳು ಅನಸೂಯಾ ದೇವಿಯೊಂದಿಗೆ ಕಠಿಣ ತಪಸ್ಸು ಆಚರಣೆ ಮಾಡುತ್ತಾರೆ. ಅವರ ತಪಸ್ಸಿಗೆ ಮೆಚ್ಚಿ ತ್ರಿಮೂರ್ತಿಗಳು ಪ್ರತ್ಯಕ್ಷವಾಗಿ ದ್ದಾರೆ.ಋಷಿಗಳು ಕೇಳುತ್ತಾರೆ. 
"ನಾನು ತಪಸ್ಸು ಮಾಡಿದ್ದು ಪರಮಾತ್ಮನ ನ್ನು ಕುರಿತು ಎಂದಾಗ ಅದಕ್ಕೆ ಭಗವಂತ ಹೇಳುತ್ತಾನೆ. 
"ನೀವು ತಪಸ್ಸು ಮಾಡುವಾಗ ಬ್ರಹ್ಮ ಹಾಗು ರುದ್ರದೇವರ ಅಂತರ್ಯಾಮಿಯಾದ ವಿಷ್ಣು ವಿನ ಸ್ಮರಣೆ ಮಾಡಿದ್ದೀರಿ.ಹಾಗಾಗಿ ನಾವು ಮೂರು ಜನ ಬಂದಿದ್ದೇವೆ .
ನಿಮಗೆ ಮಗನಾಗಿ ನಾನೇ ಸ್ವತಃ ಅವತಾರ ಮಾಡುತ್ತೇನೆ ಎಂದು ಹೇಳಿ ಶ್ರೀದತ್ತನಾಮಕನಾಗಿ ಅವರಲ್ಲಿ ಭಗವಂತ ಅವತಾರ ಮಾಡುತ್ತಾನೆ. 
ದತ್ತ ಎಂದರೆ ಋಷಿ ಅವತಾರ.
ಶ್ರೀರುದ್ರ ದೇವರು ದುರ್ವಾಸ ಋಷಿಗಳಾಗಿ ಅವತಾರ ಮಾಡಿದ್ದಾರೆ.
ಶ್ರೀಬ್ರಹ್ಮ ದೇವರಿಗೆ ಅವತಾರ ಇಲ್ಲ. ಹಾಗಾಗಿ ಅವರ ಸನ್ನಿಧಾನದಿಂದ ಚಂದ್ರ ಹುಟ್ಟಿದ. 
ಹೀಗೆ ಪರಮಾತ್ಮನ ಸಹಿತವಾಗಿ ಮೂರು ಜನರ ಅವತಾರವಾಗಿದೆ.
ಅತ್ರಿ ಅನಸೂಯಾ ದಂಪತಿಗಳಿಗೆ ಭಗವಂತ ಏಕೆ ದತ್ತನಾಮಕ ರೂಪದಿಂದ ಅವತಾರ ಮಾಡಿದ?? 
ಎಂದರೆ
ಅತ್ರಿ ಋಷಿಗಳು ಕಾಮ ಕ್ರೋಧ ಲೋಭ ಮೂರು ಬಿಟ್ಟವರು.
ಇನ್ನೂ ಅನಸೂಯಾ ದೇವಿಯು ಮಾತ್ಸರ್ಯ ರಹಿತಳು.ಹೀಗಾಗಿ ಅವರಲ್ಲಿ ಭಗವಂತನ ಅವತಾರವಾಗಿದೆ.
ಕಾಮ, ಕ್ರೋಧ ,ಲೋಭ ಇವು ಮೂರನ್ನು ತೊರೆದಾಗ ಆ ಜೀವ ಅತ್ರಿ ಎಂದು ಎನ್ನಿಸುವನು.
ಮಾತ್ಸರ್ಯವನ್ನು ತೊರೆದ ಅಂದರೆ ಅಸೂಯಾ ರಹಿತಳು ಅವನ ಬುದ್ದಿಯೇ ಅನಸೂಯಾ.
ಆಗ ಉದಿಸುವ ಸಂತತಿಯೇ ಮೂರು ಜ್ಞಾನ ,ಭಕ್ತಿ ,ವೈರಾಗ್ಯ,ಅಥವಾ ವಿರಕ್ತಿ.
ಇಂತಹ ಮೂರು ಮಕ್ಕಳಿಂದನೇ ಸಕಲರಿಗು ಸದ್ಗತಿ ಎನ್ನುವದು ಇಲ್ಲಿ ಕಾಣಬಹುದು.
ಭಗವಂತನ ಇನ್ನೊಂದು ಅವತಾರವಾದ ದತ್ತ ನಾಮಕ ಬಗ್ಗೆ ತಿಳಿದು ಕೊಂಡೆವು.
ಮುಂದೆ ಮನುವಿನ ಮೂರನೆಯ ಮಗಳಾದ ಪ್ರಸೂತಿ ದೇವಿಯನ್ನು ದಕ್ಷ ಪ್ರಜಾಪತಿ ವಿವಾಹವಾದರು. ಅವರಿಗೆ ಹದಿನಾರು ಜನ ಹೆಣ್ಣು ಮಕ್ಕಳು. ಅದರಲ್ಲಿ ಹದಿಮೂರು ಜನರನ್ನು ಯಮಧರ್ಮರಾಜನಿಗೆ ಕೊಟ್ಟು ವಿವಾಹ ಮಾಡಿದ್ದಾನೆ..
ಆ ಹದಿಮೂರು ಜನರ ಬಗ್ಗೆ ಮುಂದೆ ತಿಳಿಯೋಣ.
ಆ ಹದಿಮೂರು ಜನರಲ್ಲಿ ಮೂರ್ತಿದೇವಿ ಎಂಬುವಳಲ್ಲಿ ಭಗವಂತ ಮತ್ತೆ ಅವತಾರ ಮಾಡಿದ್ದಾನೆ.ಅವರಿಗೆ ನಾಲ್ಕು ಜನ ಮಕ್ಕಳು.
"ಹರಿ,ಕೃಷ್ಣ, ನರ,ನಾರಾಯಣ" ಎಂದು.
ಹರಿ ,ಕೃಷ್ಣ ,ನಾರಾಯಣ ಇವು ಮೂರು ಭಗವಂತನ ಅವತಾರ.
ನರ ಎನ್ನುವವನು ಶೇಷನ ಅವತಾರ.
ಇನ್ನೂ ಶ್ರೀನಾರಾಯಣನು ಋಷಿ.. ಸಾಕ್ಷಾತ್ ಭಗವಂತ.
ಅವರಿಬ್ಬರು ಇಂದಿಗು ಬದರಿಕಾಶ್ರಮದಲ್ಲಿ ಇದ್ದಾರೆ.ಶ್ರೀನಾರಾಯಣ ಋಷಿ ಅವತಾರದಲ್ಲಿ ಬದರಿಕಾಶ್ರಮದಲ್ಲಿ ತಪಸ್ಸು ಮಾಡುತ್ತಾ ಕುಳಿತಿರುವದು.
ಉಳಿದ ಮೂವರು ಪುತ್ರಿಯರು ಆದ ಸತಿ,ಸ್ವಾಹಾ,
 ಸ್ವಧಾ ದೇವಿಯರ ಬಗ್ಗೆ ತಿಳಿಯೋಣ.
ಸತಿದೇವಿಯನ್ನು ರುದ್ರ ದೇವರಿಗೆ,
ಸ್ವಾಹಾದೇವಿಯನ್ನು ಅಗ್ನಿದೇವರಿಗೆ,
ಸ್ವಧಾ ದೇವಿಯನ್ನು ಪಿತೃದೇವತೆಗಳಿಗೆ,  ವಿವಾಹ ಮಾಡಿಕೊಟ್ಟಿದ್ದಾರೆ.
ಇಂದು ಭಗವಂತನ ಅವತಾರಗಳಾದ ದತ್ತನಾಮಕ,ಕೃಷ್ಣ, ಹರಿ,ನಾರಾಯಣ ಬಗ್ಗೆ ತಿಳಿದುಕೊಂಡೆವು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏
ಶ್ರೀ ದತ್ತ,ನಾರಾಯಣ ಕೃಷ್ಣ,ಹರಿ,ನಾಮಕ ಭಗವಂತನ ರೂಪಗಳಿಗೆ ನಮಸ್ಕಾರಗಳು.
******
||ಪಿಬತ ಭಾಗವತಂ ರಸಮಾಲಯಂ||
day 44
ನಿನ್ನೆಯ ದಿನ ಭಗವಂತ ಯಜ್ಞ ನಾಮಕ,ದತ್ತನಾಮಕ,ಹರಿ,ಕೃಷ್ಣನಾರಾಯಣ ರೂಪದಿಂದ ಅವತಾರ ಮಾಡಿದ ಬಗ್ಗೆ ತಿಳಿದುಕೊಂಡೆವು.

ನಂತರ ಶುಕಮುನಿಗಳು ಪರಿಕ್ಷೀತ ರಾಜನಿಗೆ ಹೇಳುತ್ತಾರೆ.
ರಾಜನೇ!!ಕೇಳು. ಕರ್ದಮ ಸುತೆಯರ ಸಂತಾನವನ್ನು ವಿವರಿಸುವೆನು ಕೇಳು..ಆ ಒಂಭತ್ತು ಕನ್ಯೆ ಯರು ಬ್ರಹ್ಮರ್ಷಿಗಳ ಪತ್ನಿ ಯರಾಗಿ ಅವರ ವಂಶಾವಳಿಯನ್ನು ಹೇಳುವೆನು ಕೇಳು.
ಈ ಕರ್ದಮ ದೌಹಿತ್ರ ಸಂತಾನವನ್ನು ಶ್ರದ್ಧೆ ಯಿಂದ ಕೇಳಿದವರು ಪಾಪ ಮುಕ್ತರಾಗುವರು.

(೧) ಕಲಾದೇವಿಯು ಮರೀಚರನ್ನು ವಿವಾಹವಾಗಿ ಅವರಿಂದ ಕಶ್ಯಪ ಮತ್ತು ಪೂರ್ಣಿಮ ನೆಂಬ ಗಂಡು ಮಕ್ಕಳನ್ನು ಪಡೆದಳು.
ಅದರಲ್ಲಿ ಪೂರ್ಣಿಮನಿಗೆ ವಿರಜ ಎಂಬ ಪುತ್ರ ಮತ್ತು ವಿಶ್ವಗೆ ಎಂಬ ಪುತ್ರಿ ಜನಿಸಿದರು.
ಈ ವಿಶ್ವಗೆಯೇ ಮುಂದೆ ಭಗವಂತನನ್ನು ಆರಾಧಿಸಿ ತ್ರಿವಿಕ್ರಮ ಅವತಾರದಲ್ಲಿ ಶ್ರೀ ಹರಿಪಾದದಿಂದ ಗಂಗಾ ಎಂಬ ನಾಮದಿಂದ ಹುಟ್ಟಿದಳು.

(೨)ಅನಸೂಯಾ ದೇವಿಯು ಅತ್ರಿ ಋಷಿಗಳನ್ನು ವಿವಾಹವಾಗಿ ಭಗವಂತನ ಕುರಿತು ತಪಸ್ಸು ಮಾಡಿದಾಗ ತ್ರಿಮೂರ್ತಿಗಳು ಬಂದು ವರವನ್ನು ಕೊಟ್ಟು  ದತ್ತನಾಮಕನಾದ ಭಗವಂತ ನನ್ನು ,ಬ್ರಹ್ಮದೇವರ ಸನ್ನಿಧಾನವುಳ್ಳ ಚಂದ್ರ,ಮತ್ತು ರುದ್ರದೇವರನ್ನು ದೂರ್ವಾಸರನ್ನಾಗಿ ಪಡೆದಳು.

(೩)ಶ್ರದ್ದಾದೇವಿಯು ಅಂಗೀರಸ ಋಷಿಗಳನ್ನು ವಿವಾಹವಾಗಿ ಅವರಿಂದ ಕೃಷ್ಣ ಪಕ್ಷ ಚತುರ್ದಶಿ ತಿಥಿಗೆ ಅಭಿಮಾನಿನಿ ಸಿನೀವಾಲೀ,ಅಮವಾಸ್ಯೆ ಗೆ ಅಭಿಮಾನಿನಿ ಕುಹೂ,ಶುಕ್ಲ ಪಕ್ಷದ ಚತುರ್ದಶಿ ತಿಥಿ ಗೆ ಅಭಿಮಾನಿನಿ ಅನುಮತಿ ಮತ್ತು ಹುಣ್ಣುಮೆ ಗೆ ಅಭಿಮಾನಿನೀ ರಾಕಾ ಎಂಬುವ ನಾಲ್ಕು ಹೆಣ್ಣು ಮಕ್ಕಳು, ಮತ್ತು ಉಚಥ್ಯೆ,ಬೃಹಸ್ಪತಿ ಎಂಬ ಪುತ್ರ ರನ್ನು ಪಡೆದಳು.

(೪)ಹವಿರ್ಭುವಿಯು ಪುಲಸ್ತ್ಯರನ್ನು ವಿವಾಹವಾಗಿ ಇಬ್ಬರು ಗಂಡುಮಕ್ಕಳು ಹುಟ್ಟಿದರು.ಅವರ ಹೆಸರು ಅಗಸ್ತ್ಯ ಮತ್ತು ವಿಶ್ರವಸ್ಸು.
ವಿಶ್ರವಸ್ಸುವಿಗೆ ಇಬ್ಬರು ಪತ್ನಿ ಯರು.ಮೊದಲನೆಯ ಪತ್ನಿ ಇಡಿಬಿಲೆ ಎಂಬ ಹೆಂಡತಿಯಲ್ಲಿ ಕುಬೇರನನ್ನು ಮತ್ತೊಬ್ಬ ಪತ್ನಿ ಯಲ್ಲಿ ಕೇಶಿನಿ ಎಂಬುವಳಲ್ಲಿ ರಾವಣ,ಕುಂಭ ಕರ್ಣ, ವಿಭೀಷಣ ಎಂಬ ಮೂರು ಜನ ಪುತ್ರರು ಜನಿಸಿದರು.

(೫)ಗತೀದೆವಿಯಯ ಪುಲಹ ಮಹರ್ಷಿಗಳನ್ನು ವಿವಾಹವಾಗಿ ಕರ್ಮಶ್ರೇಷ್ಟ,ವರೀಯಸ್ಸು ಮತ್ತು ಸಹಿಷ್ಣು ಎಂಬ ಮೂವರು ಪುತ್ರ ರನ್ನು ಪಡೆದರು.

(೬)ಕ್ರಿಯಾದೇವಿಯರು ಕ್ರತುವೆಂಬ ಪ್ರಜೇಶ್ವರನ ವಿವಾಹವಾಗಿ  ಅರವತ್ತು ಸಾವಿರ ಮಂದಿ ವಾಲಖಿಲ್ಯರೆಂಬುವರನ್ನು ಪಡೆದಳು.
ಇವರ ಬಗ್ಗೆ ನಂತರ ತಿಳಿಯೋಣ.

(೭)ಊರ್ಜಾದೇವಿಯು(ಅರುಂಧತಿ) ವಸಿಷ್ಠರನ್ನು ವಿವಾಹವಾಗಿ ಚಿತ್ರ ಕೇತು ಮೊದಲಾದ ಏಳು ಮಂದಿ ಪುತ್ರರನ್ನು ಪಡೆದಳು.

(೮)ಶಾಂತಿಯು ಅಥರ್ವಣರನ್ನು ವಿವಾಹವಾಗಿ ಧೃತವ್ರತ, ದಧ್ಯಂಚ, ಮತ್ತು ಅಶ್ವ ಶಿರಸ್ಸು ಎಂಬ ಮೂವರು ಪುತ್ರ ರನ್ನು ಪಡೆದಳು.

(೯)ಖ್ಯಾತಿದೇವಿಯು ಭೃಗು ಋಷಿಗಳ ವಿವಾಹವಾಗಿ ಧಾತೃ ಮತ್ತು ವಿಧಾತೃ ಎಂಬ ಪುತ್ರರು ಮತ್ತು ಸಾಕ್ಷಾತ್ ಲಕ್ಷ್ಮೀ ದೇವಿಯೇ ಅವರಲ್ಲಿ ಭಾರ್ಗವಿ ನಾಮಕಳಾಗಿ ಅವತಾರ ಮಾಡಿ ಅವರಿಗೆ ಪುತ್ರಿ ಎಂದು ಕರೆಸಿಕೊಂಡಳು.

ನಂತರ ಭೃಗು ಋಷಿಗಳ ಮಗನಾದ ಧಾತೃವಿಗೆ ಆಯತಿ ಎಂಬ ಪತ್ನಿಯಲ್ಲಿ ಮೃಕಂಡು ಎಂಬ ಮಗನು ಹುಟ್ಟಿದನು. ಮೃಕಂಡು ಋಷಿಗಳ ಮಗನಾಗಿ ಅವತಾರ ಮಾಡಿದವರೇ ಮಾರ್ಕಂಡೇಯ ಮುನಿಗಳು.
ನಂತರ ವಿಧಾತೃವಿಗೆ ನಿಯತಿ ಎಂಬ ಪತ್ನಿ ಯಲ್ಲಿ ಪ್ರಾಣ ಎಂಬ ಮಗನ ಜನನ.ಅವನಿಗೆ ವೇದಶಿರಸ್ಸು, ಕವಿ ಎಂಬ ಇಬ್ಬರು ಪುತ್ರರು. ಕವಿಯ ಮಗನೇ ಶುಕ್ರ.

ಫಲಶೃತಿ.👇
ಕರ್ದಮ ಪುತ್ರಿಯರ ಸಂತಾನ ಕಥಾ ಶ್ರವಣವು ಪಾಪ ಪರಿಹಾರವನ್ನು ಮಾಡುತ್ತದೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ
|ಏಳಿರೋ ವೈಕುಂಠಕೆ
🙏ಅ.ವಿಜಯ ವಿಠ್ಠಲ🙏
********

||ಪಿಬತ ಭಾಗವತಂ ರಸಮಾಲಯಂ||
Day45
ನಿನ್ನೆಯ ದಿನ ಕರ್ದಮ ಋಷಿಗಳ ೯ಜನ ಹೆಣ್ಣು ಮಕ್ಕಳ ವಂಶಾವಳಿಯ ಬಗ್ಗೆ ತಿಳಿದು ಕೊಂಡೆವು.
ನಂತರ ಶುಕಮುನಿಗಳು ಪರಿಕ್ಷೀತರಾಜ ನಿಗೆ ಹೇಳುತ್ತಾರೆ.
"ರಾಜನೇ! ಕೇಳು.ಹಿಂದೆ ಸ್ವಾಯಂಭುವ ಮನುವು ತನ್ನ ಮೂರು ಜನ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದ್ದು ಬಗ್ಗೆ ತಿಳಿದು ಕೊಂಡೆವು. ಅದರಲ್ಲಿ ಕೊನೆಯ ಮಗಳಾದ ಪ್ರಸೂತಿಯನ್ನು ದಕ್ಷ ಪ್ರಜಾಪತಿ ಕೊಟ್ಟು ವಿವಾಹ ಮಾಡುವರು.ಆ ದಕ್ಷ ಪ್ರಜಾಪತಿ ಗೆ ಹದಿನಾರು ಜನ ಹೆಣ್ಣು ಮಕ್ಕಳು.
ಅವರಲ್ಲಿ ಹದಿಮೂರು ಜನರನ್ನು ಯಮಧರ್ಮರಾಜರಿಗೆ, ನಂತರ ಪಿತೃದೇವತೆಗಳಿಗೆ ಸ್ವಧಾದೇವಿ, ಮತ್ತು ಅಗ್ನಿ ದೇವರಿಗೆ ಸ್ವಾಹಾದೇವಿಯನ್ನು, ನಂತರ ರುದ್ರ ದೇವರಿಗೆ ಸತಿದೇವಿಯನ್ನು ಕೊಟ್ಟು ವಿವಾಹ ಮಾಡುತ್ತಾನೆ.
ಸ್ವಾಹಾದೇವಿಯನ್ನು ಅಗ್ನಿ ದೇವರು ವಿವಾಹ ವಾದ ಮೇಲೆ ಮೂರು ಜನ ಪುತ್ರರು ಜನಿಸಿದ್ದಾರೆ. ಪಾವಕ,ಪಾವಮಾನ,ಶುಚಿ ಎಂದು ಅವರು ಗಳ ಹೆಸರು.
ಆ ಮೂವರು ಅಗ್ನಿಪುತ್ರರಿಂದ 45 ಮಂದಿ ಅಗ್ನಿಗಳು ಹುಟ್ಟಿದರು.
ಒಟ್ಟು 49 ಅಗ್ನಿಗಳಿಂದಲೇ(ತಾತ,ಮಕ್ಕಳು, ಮೊಮ್ಮಕ್ಕಳು ಸೇರಿ) ವೈದಿಕ ಯಜ್ಞ ಕರ್ಮಗಳು ನಡೆಸಲ್ಪಡುತ್ತದೆ.

  ಪಿತೃದೇವತೆಗಳಿಗೆ ದಕ್ಷ ಪುತ್ರಿ ಸ್ವಧಾದೇವಿ ಪತ್ನಿಯು.ಇವರಲ್ಲಿ ಮೇನಾ ಮತ್ತು ವೈತರಣಿ ಎಂಬ ಇಬ್ಬರು ಹೆಣ್ಣು ಮಕ್ಕಳ ಜನನ ವಾಗುತ್ತದೆ.

ಸತಿದೇವಿಯು ರುದ್ರ ದೇವರನ್ನು ವಿವಾಹವಾದಳು.ಇವಳಿಗೆ ಸಂತಾನವಾಗಲಿಲ್ಲ.ತನ್ನ ತಂದೆಯಾದ ದಕ್ಷ ನು ನಿರಪರಾಧಿಯಾದ ತನ್ನ ಪತಿಯಾದ ರುದ್ರ ದೇವರನ್ನು ನಿಷ್ಕಾರಣವಾಗಿ ವಿರೋಧಿಸಿ,ರೋಷ, ದ್ವೇಷವನ್ನು ಮಾಡುವುದನ್ನು  ನೋಡಿದ ಸತಿ ದೇವಿಯು ಅದನ್ನು ಸಹಿಸದೆ ಯೋಗ ನಿರತಳಾಗಿ ಹರಿಧ್ಯಾನ ಮಾಡುತ್ತಾ ದೇಹವನ್ನು ತ್ಯಜಿಸಿ ಬಿಟ್ಟಳು.

ಅವಾಗ ವಿದುರರು ಮೈತ್ರೇಯರ ಬಳಿ ಕೇಳುತ್ತಾರೆ. 
ಯಾತಕ್ಕಾಗಿ ಸತಿದೇವಿಯು ದೇಹತ್ಯಾಗ ಮಾಡಿದಳು?? ಅದರ ಬಗ್ಗೆ ಹೇಳಬೇಕು ಎನ್ನಲು
ಅದಕ್ಕೆ ಮೈತ್ರೇಯರು ಹೇಳುತ್ತಾರೆ.
ಮುಂದಿನ ಭಾಗ ನಂತರ
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಹರೇ ಶ್ರೀನಿವಾಸ🙏
********

||ಪಿಬತ ಭಾಗವತಂ ರಸಮಾಲಯಂ||
Day46
ಸತಿದೇವಿಯ ದೇಹತ್ಯಾಗ ಹಿನ್ನೆಲೆ.
ಹಿಂದೆ ಪ್ರಜಾಪತಿ ಗಳೆಲ್ಲಾ ಸೇರಿ ಒಂದು ದೊಡ್ಡ ಯಜ್ಞ ವನ್ನು ಮಾಡುತ್ತಾ ಇದ್ದಾರೆ. ಅಲ್ಲಿ ಸಕಲ ದೇವತೆಗಳು, ಋಷಿ ಮುನಿಗಳು, ಅಲ್ಲದೇ ಶ್ರೀಬ್ರಹ್ಮ,ರುದ್ರ ದೇವರುಅಲ್ಲಿ ಸೇರಿದ್ದಾರೆ. ದಕ್ಷ ಪ್ರಜಾಪತಿಯು ಸ್ವಲ್ಪ ತಡವಾಗಿ ಅಲ್ಲಿಗೆ ಆಗಮಿಸಿದ. ಅವಾಗ ಸಭೆಯಲ್ಲಿ ಇದ್ದ ಸಕಲರು  (ಶ್ರೀಬ್ರಹ್ಮ ದೇವರು ಮತ್ತು  ಶ್ರೀರುದ್ರರು) ಇವರಿಬ್ಬರನ್ನು ಬಿಟ್ಟು ಅವರಿಗೆ ಎದ್ದು ನಿಂತು, ನಮಸ್ಕರಿಸಿ ಗೌರವ ವನ್ನು ಸೂಚಿಸಿ ಆಸನದಲ್ಲಿ ಕೂಡಿಸುವರು.
ದಕ್ಷನು ತನ್ನ ತಂದೆಯಾದ ಶ್ರೀಬ್ರಹ್ಮ ದೇವರಿಗೆ ನಮಸ್ಕರಿಸಿ ಉಚಿತವಾದ ಆಸನದಲ್ಲಿ ಕೂಡುವನು.
ಎಷ್ಟು ಮಂದಿ ನಮಸ್ಕಾರ ಮಾಡಿದರು ದಕ್ಷ ಪ್ರಜಾಪತಿ ಗೆ ಸಮಾಧಾನ ವಾಗಲಿಲ್ಲ.
ತನ್ನ ಎದುರಿಗೆ ಕುಳಿತಿದ್ದ ಶ್ರೀರುದ್ರದೇವರು ತನಗೆ ಅಳಿಯ.ಮೇಲಾಗಿ ನಾನು ಹೆಣ್ಣು ಕೊಟ್ಟ ಮಾವ.ನನಗೆ ನಮಸ್ಕಾರ ಮಾಡಲಿಲ್ಲ ಎನ್ನುವ ಕೋಪದಿಂದ,ಬಹಳ ವಾಗಿ ಬಾಯಿಗೆ ಬಂದಂತೆ  ಮಾತನಾಡುತ್ತಾನೆ.
"ಸಭಿಕರೇ! ಕೇಳಿ.ನಾನು ನನ್ನ ಪುತ್ರಿಯಾದ ಸತಿದೇವಿಯನ್ನು ಈ ರುದ್ರ ನಿಗೆ ಕೊಟ್ಟು ವಿವಾಹವನ್ನು ಮಾಡಿ ತಪ್ಪು ಮಾಡಿದೆನು.
ಈ ರುದ್ರನು ಇದಕ್ಕೆ ಅರ್ಹನಲ್ಲವಾದರು ಬ್ರಹ್ಮ ದೇವರ ಮಾತಿನಂತೆ ಮಗಳನ್ನುಕೊಟ್ಟೆ.ಅಳಿಯ ನಾಗಿ ಮಾವನಿಗೆ ಸಭೆ ಯೊಳಗೆ ಗೌರವ ಕೊಡಲಿಲ್ಲ. ಇವನು ಭೂತಗಳನ್ನು ಕಟ್ಟಿಕೊಂಡು ಸ್ಮಶಾನದಲ್ಲಿ ವಾಸಮಾಡುತ್ತಾನೆ.ಇವನು ಮೈಲಿಗೆಯವನು.ಸದಾ ವಿಭೂತಿಧರಿಸಿ,ದಿಗಂಬರನಾಗಿ ತಿರುಗಾಡುವ ಇವನಿಗೆ ಮಗಳನ್ನುಕೊಡಬಾರ ದಾಗಿತ್ತು.ಹೆಸರಿಗೆ ಮಾತ್ರ ಶಿವನು.ಅಮಂಗಳನು.ಇಂಥವನ ಕೈ ಹಿಡಿದದ್ದು ನನ್ನ ಮಗಳ ಹಣೆಯಲ್ಲಿ ವಿಧಿ ಬರೆದ ಬರಹವೇ ಕಾರಣ.ಅಗ್ನಿ ಸಾಕ್ಷಿಯಾಗಿ ಎಲ್ಲರ ಎದುರಿಗೆ ನನ್ನ ಮಗಳನ್ನು ವಿವಾಹವಾಗಿ ಅಳಿಯ ನಾದ ಇವನು ನನಗೆ ಬನ್ನಿ ಎಂದು ಸಹ ಮಾತನಾಡಲಿಲ್ಲ.ಪ್ರತಿ ಅಭಿನಂದನೆಗಳನ್ನು ಸಹ ಹೇಳಲಿಲ್ಲ. ಇಂತಹವನಿಗೆ ಕನ್ಯೆಯನ್ನು ಯಾರು ಕೊಡುತ್ತಾ ಇದ್ದರು??ಎಂದು ಬಹುವಾಗಿ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಸಹ ರುದ್ರ ದೇವರು ಪ್ರತಿ ಮಾತನಾಡದೇ ಸುಮ್ಮನೆ ಧ್ಯಾನದಲ್ಲಿ ಕುಳಿತಿದ್ದಾರೆ.
ಇದನ್ನು ಕಂಡು ಇನ್ನೂ ಕೋಪದಿಂದ  ದಕ್ಷನು ಸಭಿಕರು ಬೇಡವೆಂದು ಹೇಳಿದರು ಕೈಯಲ್ಲಿ ನೀರು ತೆಗೆದುಕೊಂಡು ಅಭಿಮಂತ್ರಿಸಿ ಶಾಪವನ್ನು ಕೊಡುತ್ತಾನೆ.
"ಮುಂದೆ ಯಾವ ಯಜ್ಞ ದಲ್ಲಿ ಆಗಲಿ,ಎಲ್ಲಾ ದೇವತೆಗಳಿಗೆ ಆಹುತಿಯನ್ನು ಕೊಡಲಿ. ಆದರೆ ರುದ್ರ ದೇವರಿಗೆ ಮಾತ್ರ ಆಹುತಿಯನ್ನು ಕೊಡುವದು ಬೇಡವೆಂದು ಹೇಳಿ" ಶಾಪವನ್ನು ಕೊಟ್ಟು ಆ ಸಭೆ ಯಿಂದ ಹೊರಗಡೆ ಹೋಗಿದ್ದಾನೆ.
ಆದರು ಶ್ರೀರುದ್ರ ದೇವರು ಸುಮ್ಮನೆ ಇದ್ದಾರೆ. ನಂತರ ರುದ್ರ ದೇವರ ಅನುಚರರಾದ ನಂದೀಶ್ವರನು  "ನಿನಗೆ ತತ್ವಜ್ಞಾನ ಎಲ್ಲಾ ನಾಶವಾಗಲಿ,ನಿನಗೆ ಮೇಕೆ ಮುಖ ಬರಲಿ.ಇತ್ಯಾದಿ ಯಾಗಿ ಪ್ರತಿ ಶಾಪವನ್ನು ದಕ್ಷ ನಿಗೆ ಕೊಟ್ಟಿದ್ದಾನೆ."
ಮತ್ತೆ ದಕ್ಷನ ಕಡೆಯವರು ಇವರಿಗೆ ಶಾಪವನ್ನು ಕೊಟ್ಟಿದ್ದಾರೆ.ಹೀಗೆ ಶಾಪ ಪ್ರತಿಶಾಪಗಳ ಜಗಳದಲ್ಲಿ ಕೊನೆಗೆ ರುದ್ರ ದೇವರಿಗೆ ಎಚ್ಚರಿಕೆ ಆಗಿದೆ.ಪರಮಾತ್ಮನ ಧ್ಯಾನದಲ್ಲಿ ತಲ್ಲೀನರಾಗಿದ್ದರಿಂದ ಅವರಿಗೆ ನಡೆದ ಘಟನೆ ಬಗ್ಗೆ ಒಂದು ಗೊತ್ತಿಲ್ಲ. ಇಷ್ಟೇ ಎಲ್ಲಾ ಘಟನೆ ನಡೆದ ಬಗ್ಗೆ ತಿಳಿದುಕೊಂಡು ವ್ಯಥೆಗೊಂಡವರಂತೆ ನಟಿಸಿ ಮನೋಭಿಮಾನಿಯಾದ ಶ್ರೀರುದ್ರ ದೇವರು ಅಲ್ಲಿ ಇಂದ ಸಭಾತ್ಯಾಗ ಮಾಡಿ ಕೈಲಾಸಕ್ಕೆ ಹೊರಟರು. ಆ ಮೇಲೆ ಯಜ್ಞ ಮುಂದುವರೆದಿದೆ.ಅವಭೃತ ಸ್ನಾನವಾಗಿದೆ.ಬಂದವರೆಲ್ಲರು ಹೊರಟು ಹೋಗಿದ್ದಾರೆ.ಆದರೆ ಎಲ್ಲಾ ಮುಗಿದು ಹೋದರು ಮಾವನಾದ ದಕ್ಷ ನಿಗೆ ಅಳಿಯ ನಾದ ರುದ್ರ ದೇವರ ಮೇಲೆ ಸಿಟ್ಟು ಹಾಗೇ ಉಳಿದು ಕೊಂಡಿದೆ.
ನಂತರ ಒಬ್ಬರಿಗೊಬ್ಬರು ಮಾತನಾಡದೇ ಸಂಪೂರ್ಣ ವಾಗಿ ನಿಂತು ಹೋಗಿದೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಹರಿಭಕುತರ ಅವಮಾನ
ನಮ್ಮ ವಿನಾಶಕ್ಕೆ ಕಾರಣ🙏
*******

||ಪಿಬತ ಭಾಗವತಂ ರಸಮಾಲಯಂ||
Day47
ನಿನ್ನೆಯ ದಿನ ತನಗೆ ಮರ್ಯಾದೆ ಕೊಡಲಿಲ್ಲ ವೆಂದು ದಕ್ಷನು ರುದ್ರ ದೇವರಿಗೆ ಶಾಪವನ್ನು ಕೊಟ್ಟ ಬಗ್ಗೆ ತಿಳಿದೆವು.ಅನಂತರದಲ್ಲಿ ಅವರಿಬ್ಬರ ಮಧ್ಯೆ ಮಾತು ಕತೆ ಸಂಪೂರ್ಣವಾಗಿ ನಿಂತು ಹೋಯಿತು.
ನಂತರ ಶುಕಮುನಿಗಳು ಹೇಳುತ್ತಾರೆ.
ರಾಜನೇ! ಕೇಳು.
ಮುಂದೆ ಶ್ರೀಬ್ರಹ್ಮ ದೇವರು ದಕ್ಷನನ್ನು ಎಲ್ಲಾ ಪ್ರಜಾಪತಿ ಗಳಿಗೆ ಪ್ರಧಾನನ್ನಾಗಿ ಮಾಡಿ ಉನ್ನತ ಸ್ಥಾನ ವನ್ನು ಕೊಡುತ್ತಾರೆ.ಇದರಿಂದಾಗಿ ಅವನಿಗೆ ಗರ್ವ ಉಂಟಾಯಿತು. ಅವನು ರುದ್ರ ದೇವರಿಗೆ ಭಾಗವಿಲ್ಲದ ಬೃಹಸ್ಪತಿಸವ ಎನ್ನುವ ಯಾಗವನ್ನು ಆರಂಭ ಮಾಡುವ. ಅದಕ್ಕೆ ಎಲ್ಲಾ ರಿಗು ಆಹ್ವಾನ ಹೋಗಿದೆ.
ತನ್ನ ಹದಿನೈದು ಜನ ಹೆಣ್ಣುಮಕ್ಕಳು, ಅಳಿಯಂದಿರು ,ಮೊಮ್ಮಕ್ಕಳು,ಬಂಧು ಬಳಗ.
ಸತಿದೇವಿ, ರುದ್ರ ದೇವರು ಮತ್ತು ಅವರ ಪರಿವಾರ ದವರಿಗೆ  ಮಾತ್ರ ಆಹ್ವಾನವನ್ನು ಕೊಟ್ಟಿಲ್ಲ.
ಇತ್ತ ಕೈಲಾಸದಲ್ಲಿ ಸತಿದೇವಿಯು ಕುಳಿತಾಗ ಗಗನದಲ್ಲಿ ಎಲ್ಲಾ ದೇವತೆಗಳು ತಮ್ಮ ಪರಿವಾರದ ಸಮೇತ ದಕ್ಷನ ಯಜ್ಞ ಕ್ಕೆ ಹೋಗುವ ಹಾಗು ಮಾತನಾಡುವ ದೃಶ್ಯ ನೋಡುತ್ತಾಳೆ.ಆ ಜನರನ್ನು ನೋಡಿ ತಾನು ಹೋಗಬೇಕೆಂಬ ಆಸೆ .ತಕ್ಷಣ ಪತಿಯಾದ ಶ್ರೀರುದ್ರ ದೇವರ ಬಳಿ ಬಂದು ಪ್ರಾರ್ಥನೆ ಮಾಡಿಕೊಳ್ಳುವಳು.
"ಪರಮ ಮಂಗಳನೆ!ನಿಮ್ಮ ಮಾವ ಒಂದು ಯಜ್ಞ ವನ್ನು ಮಾಡಲು ಆರಂಭಿಸಿದ್ದಾನೆ.ಎಲ್ಲಾ ದೇವತೆಗಳು ಋಷಿಗಳ ಸಮೂಹ ಅಲ್ಲಿ ಗೆ ಹೋಗುತ್ತಾ ಇದ್ದಾರೆ.ನಿಮಗೆ ಇಚ್ಛೆ ಇದ್ದರೆ ಅಲ್ಲಿ ಹೋಗೋಣ.ಅಲ್ಲಿ ನನ್ನ ಕುಟುಂಬದ ಸದಸ್ಯರು ಬಂಧು ಬಳಗ ಎಲ್ಲಾ ಬಂದಿರುತ್ತಾರೆ. 
ತವರುಮನೆಯವರನ್ನು ನೋಡಬೇಕೆಂಬ ಹಂಬಲ ಬಹಳವಾಗಿದೆ.ನೀವು ಏನು ಸಾಮಾನ್ಯರಲ್ಲ.ಪರಮ ಮಂಗಳ ಸ್ವರೂಪಿಯಾದ ಶ್ರೀ ಹರಿಯನ್ನು ನಿತ್ಯವೂ ತಮ್ಮ ಅಂತರಂಗದಲ್ಲಿ ಕಾಣುತ್ತಾ ಇರುವ ನಿಮ್ಮನ್ನು ನೋಡುವ ನನಗೆ ಬೇರೆ ಯಾವುದು ಬೇಡ.ಆದಾಗ್ಯೂ ನಾನು ಹೆಂಗಸು.ಪ್ರತಿಯೊಬ್ಬ ಸ್ತ್ರೀಗು ತವರುಮನೆಯ ಹಂಬಲ ಇದ್ದೇ ಇರುತ್ತದೆ. ಯಾವ ಸಂಬಂಧವೂ ಇಲ್ಲದ ಇಷ್ಟು ಜನ ಅಲ್ಲಿಗೆ ಹೋಗುತ್ತಾ ಇರುವಾಗ ಮಗಳಾದ ನಾನು ಅಲ್ಲಿ ಗೆ ಹೋಗದೇ ಇದ್ದರೆ ಏನು ಚೆನ್ನ??
ಆಮಂತ್ರಣ ಬಂದಿಲ್ಲವೆಂದು ಹೋಗದೇ ಇರುವದು ಚೆನ್ನಾಗಿ ಇರುವದೇ??ಇದರ ಮೇಲೆ ಒಂದು ಮಾತಿದೆ.ತಂದೆ,ಗಂಡ, ಗುರುಗಳು,ಮಿತ್ರರ ಮನೆಗೆ ಕರೆಯದೇ ಇದ್ದರು ಸಹ ಉತ್ಸವದಲ್ಲಿ ಭಾಗಿಯಾಗಬಹುದು ಅಂತ. ದಯವಿಟ್ಟು ಏನನ್ನು ಚಿಂತೆ ಮಾಡದೇ ನನ್ನನ್ನು ಕರೆದುಕೊಂಡು ಹೋಗಿ.. ಎಂದು ಕೇಳಿಕೊಳ್ಳುವಳು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಹರಿಭಕುತರ ಅವಮಾನ
ನಮ್ಮ ವಿನಾಶಕ್ಕೆ ಕಾರಣ🙏
*********

||ಪಿಬತ ಭಾಗವತಂ ರಸಮಾಲಯಂ||
Day 48
ಸತಿ ದೇವಿಯು ತನ್ನ ತಂದೆಯಾದ ದಕ್ಷನು ಮಾಡುವ ಯಜ್ಞದ ಕಾರ್ಯಕ್ರಮ ಕ್ಕೆ ಹೋಗಲು ಆಪೇಕ್ಷೆ ವ್ಯಕ್ತಪಡಿಸಿ
ತಂದೆ,ಗಂಡ ಗುರುಗಳು ಮತ್ತು ಮಿತ್ರರು ಮನೆಗೆ ಕರೆಯದೇ ಇದ್ದರು ಸಹ ಉತ್ಸವದಲ್ಲಿ ಭಾಗಿಯಾಗಬಹುದು ಎನ್ನುವ ಲೋಕದ ಮಾತನ್ನು ಹೇಳುತ್ತಾರೆ.
ಅದಕ್ಕೆ ರುದ್ರ ದೇವರು ಹೇಳುತ್ತಾರೆ.
"ಮಂಗಳೆ! ಕೇಳು.ತಂದೆ, ಪತಿ,ಬಂಧುಗಳು, ಗುರುಗಳು ಇವರು ಕರೆಯದೇ ಇದ್ದರು ಅವರ ಮನೆಗೆ ಹೋಗಬಹುದು ಎನ್ನುವ ನಿನ್ನ ಮಾತು ನಿಜ.ಆದರೆ ಯಾವಾಗ ಎಂದರೆ
ನಮ್ಮ ಬಗ್ಗೆ ಅವರಿಗೆ ದುರಭಿಮಾನ,ಕೋಪ,
ದೋಷದೃಷ್ಟಿಯಿಂದ ನೋಡುವ ಬುದ್ದಿ ಅವರಿಗೆ ಇರಬಾರದು.
 ಮನೆಗೆ ಬಂದವರನ್ನು ನೋಡಿ ಸಹಿಸದೇ ಇರುವವನು ಬಂಧು, ತಂದೆ,ಸ್ನೇಹಿತ ಯಾರಾದರು ಸರಿಯೇ??ಅಂತಹವರಲ್ಲಿ ಖಂಡಿತವಾಗಿ ಹೋಗಕೂಡದು.
ಎಂತಹ ಕಷ್ಟ ವನ್ನಾದರು ಸಹಿಸಬಹುದು.ಬಂಧು ಬಳಗದ,ಹೆತ್ತವರ,ಸ್ನೇಹಿತರ ತಿರಸ್ಕಾರ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. 
ನಮ್ಮವರೆನಿಸಿಕೊಂಡವರು ಹುಬ್ಬು ಗಂಟು ಹಾಕಿ, ಕಣ್ಣು ಕೆಂಪಾಗಿಸಿ ವಕ್ರ ಬುದ್ದಿ ಯಿಂದ ಮನೆಗೆ ಬಂದವರನ್ನು ನೋಡುವ ದುರಾತ್ಮರಲ್ಲಿ ನಮಗೇನು ಕೆಲಸ??
ಕೊಂಕು ಮಾತುಗಳಿಂದ ಮರ್ಮಛೇದನ ಮಾಡಿದಾಗ ಆಗುವ ನೋವು ಯುದ್ಧದಲ್ಲಿ ವಿಷಬಾಣದಿಂದ ಆಗುವ ನೋವಿಗಿಂತ ಹೆಚ್ಚಾಗಿ ಆಗುವದು.
ನಿಮ್ಮ ತಂದೆಗೆ ನೀನು ಮಗಳಾಗಿ ಇರಬಹುದು. ಅದು ಮುಂಚೆ.ಇವಾಗ ನೀನು ನನ್ನ ಪತ್ನಿ. ಹೀಗಾಗಿ ನಿನಗೆ ಅವರಿಂದ ತಿರಸ್ಕಾರ ಹೊರತಾಗಿ ಗೌರವ ಅಲ್ಲಿ ಸಿಗುವುದಿಲ್ಲ.
ನಿಮ್ಮ ತಂದೆಗೆ ಅಸುರಾವೇಶ ಬಡಿದುಕೊಂಡಿದೆ.ನಾನು ನಮಸ್ಕಾರ ಮಾಡಲಿಲ್ಲ ವೆಂದು ನಿಮ್ಮ ಅಪ್ಪನಿಗೆ ಕೋಪ..
ತಾರತಮ್ಯ ದಲ್ಲಿ ಹಿರಿಯರು ಕಿರಿಯರಿಗೆ ನಮಸ್ಕಾರ ಮಾಡಬಾರದು.ಮರ್ಯಾದೆ ಕೊಡಬೇಕಾದ ಸಮಯ ಬಂದಾಗ ಅವರ ಅಂತರ್ಯಾಮಿಯಾದ ಆ ಭಗವಂತನಿಗೆ ಮನಸ್ಸಿನಿಂದಲೇ ನಮಸ್ಕಾರ ಮಾಡಬೇಕು.
ನಮ್ಮ ತಂದೆಯಾದ ದಕ್ಷ ಬಂದಾಗ ಯಾಕೆ ನಮಸ್ಕಾರ ಮಾಡಲಿಲ್ಲ?? ಎಂದು ನೀನು ಕೇಳಬಹುದು. 
ಅದಕ್ಕೆ ಉತ್ತರ.
ದಕ್ಷನು ಸಭೆಗೆ ಬಂದಾಗ ನನ್ನ ಎದುರಿಗೆ ಭಗವಂತನ ಪುತ್ರರು, ಪರಮ ಭಾಗವತರು ಆದ ಶ್ರೀಬ್ರಹ್ಮ ದೇವರು ಕುಳಿತಿದ್ದರು. ಅವರ ಅಂತಃಕರುಣ ಪರಮ ಶುದ್ದವಾದದ್ದು.ಅಲ್ಲಿ ಪರಮಾತ್ಮನು ಸದಾ ಸನ್ನಿಹಿತ ನಾಗಿರುತ್ತಾನೆ.ಭಗವಂತನ ಸನ್ನಿಧಾನಕ್ಕೆ ಚ್ಯುತಿಯೇ ಇಲ್ಲ.ನಿತ್ಯ ಸನ್ನಿಹಿತ ನಾಗಿರುತ್ತಾನೆ. 
ನಾನು ಆ ಕ್ಷಣದಲ್ಲಿ ಅವರ ಒಳಗಡೆ ಪ್ರಕಾಶಿಸುತ್ತಾ ಇದ್ದ ಶ್ರೀ ಹರಿಯ ಧ್ಯಾನದಲ್ಲಿ ಮುಳುಗಿದ್ದೆ.ಆಗ ಮತ್ತೇನನ್ನು ಮಾಡುವ ಹಾಗಿದ್ದಿಲ್ಲ.
ದಕ್ಷ ನಿಗಿಂತ ಉತ್ತಮ ಅಧಿಷ್ಟಾನ ಅಲ್ಲಿ ಇತ್ತು.
(ತಾರತಮ್ಯ ಪ್ರಕಾರವಾಗಿ ರುದ್ರ ದೇವರು ಐದನೇ ಕಕ್ಷೆಯಲ್ಲಿ, ದಕ್ಷ ಪ್ರಜಾಪತಿ ಹತ್ತನೆಯ ಕಕ್ಷೆಯಲ್ಲಿ ಬರುತ್ತಾರೆ.)
ನಿನ್ನ ತಂದೆ ಬಂದಾಗ ಅವರ ಅಂತರ್ಯಾಮಿಯಾದ ಭಗವಂತನಿಗೆ ನಮಸ್ಕರಿಸಿ ದೆ.ಇದುವಿಹಿತ.ಮೂರ್ಖನಾದ ನಿನ್ನ ತಂದೆ ಅದನ್ನು ತಿಳಿಯದೇ ಹೋದ.ಶಾಪವನ್ನು ಕೊಟ್ಟ. ನನ್ನಲ್ಲಿ ದ್ವೇಷ ಮಾಡಲು ಯಾವ ಕಾರಣವು ಇಲ್ಲ. ಇಷ್ಟು ಹೇಳಿದರು ನನ್ನ ಮಾತನ್ನು ಮೀರಿ ಹೋದರೆ ನಿನಗೆ ಮಂಗಳವಾಗದು.
ಮಾನ ಉಳ್ಳವರಿಗೆ ಸ್ವಜನರಿಂದ ಆಗುವ ಅವಮಾನ ಅವರಿಗೆ ಮರಣಕ್ಕೆ ಸಮಾನ.ಹೋಗಬೇಡ ಎಂದು ಹೇಳುತ್ತಾರೆ.
ಸತಿದೇವಿಯು ಪತಿಯಾದ ಶ್ರೀ ರುದ್ರ ದೇವರ ಮಾತನ್ನು ಕೇಳಲಿಲ್ಲ.
ಕೋಪದಿಂದ ಪತಿಯನ್ನು ಬಿಟ್ಟು ದಕ್ಷನ ಮನೆಗೆ ಬರುವಳು.
ಶ್ರೀರುದ್ರ ದೇವರ ಅನುಚರರು  ಸಕಲ ಮರ್ಯಾದೆಯಿಂದ ನಂದಿಯ ಮೇಲೆ ಸತಿಯನ್ನು ಕೂಡಿಸಿಕೊಂಡು ,ಸಕಲ ವಾಧ್ಯ ವೈಭವದಿಂದ ಯಜ್ಞ ನಡೆಯುವ ಮಂಟಪಕ್ಕೆ ಕರೆತರುತ್ತಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಹರಿಭಕುತರ ಅವಮಾನ ವಿನಾಶಕ್ಕೆ ಕಾರಣ🙏
**********

||ಪಿಬತ ಭಾಗವತಂ ರಸಮಾಲಯಂ||
Day 49
|ಸತಿ ದೇವಿಯ ದೇಹತ್ಯಾಗ
ನಿನ್ನೆಯ ದಿನ ಶ್ರೀರುದ್ರ ದೇವರು ಸತಿದೇವಿಗೆ ಯಜ್ಞ ಕಾರ್ಯಕ್ರಮಕ್ಕೆ ಆಹ್ವಾನವನ್ನು .
ನಿನ್ನ ತಂದೆಯು ಕೊಟ್ಟಿಲ್ಲ ಹೋಗಬೇಡ ಎಂದು ಹೇಳಿದರು ಸಹ ಸತಿದೇವಿಯು ತನ್ನ ತಂದೆ ನಡೆಸುವ ಯಜ್ಞ ಮಂಟಪಕ್ಕೆ ತನ್ನ ಸೇವಕ ಪರಿವಾರ ಸಮೇತವಾಗಿ ಬರುತ್ತಾಳೆ.
ನಂತರ ಶುಕಮುನಿಗಳು ಹೇಳುತ್ತಾರೆ. 
ರಾಜನೇ! ಕೇಳು.ಸತಿದೇವಿಯು ತನ್ನ ಪರಿವಾರ ಸಮೇತವಾಗಿ ಯಜ್ಞ ಮಂಟಪದ ಮುಖ್ಯ ದ್ವಾರದಿ ಬಂದು ನಿಲ್ಲು ತ್ತಾಳೆ.ಎಲ್ಲಾ ಕಡೆ ವೇದಘೋಷ ಕೇಳುತ್ತಾ ಇದೆ.ಬಂದು ನಿಂತ ಸತಿದೇವಿಯನ್ನು ಯಾರು ದಕ್ಷನ ಭಯದಿಂದ ಆದರಿಸಲಿಲ್ಲ.ದಕ್ಷ ನು ಸಹ ಸತಿದೇವಿಯ ಕಡೆ ಕಣ್ಣೆತ್ತಿ ಸಹ ನೋಡಲಿಲ್ಲ.
ಆ ಯಾಗಶಾಲೆಯಲ್ಲಿ ಶ್ರೀರುದ್ರ ದೇವರಿಗೆ ಆಹುತಿಯನ್ನು ಕೊಡದೇ ಇರುವದು ಮತ್ತು ತನ್ನ ತಿರಸ್ಕಾರ ವನ್ನು ಕಂಡು ಸಹಿಸದೇ ಕುಪಿತಳಾದಳು. ಚಂಡಕೋಪದಿಂದ ಚಂಡಿಕೆಯಾದಳು. ಜಗದೀಶ್ವರಿಯಾದ ಅವಳಿಗೆ ಯಾರ ಅಂಜಿಕೆ ಅಲ್ಲಿ.!!
ಸತಿದೇವಿಯ ಅನುಚರರು ದಕ್ಷ ನನ್ನ ಕೊಲ್ಲಲು ಹೊರಟಾಗ ತಡೆದಳು.
ತನ್ನ ತಂದೆಗೆ  ಹಾಗು ಅಲ್ಲಿ ಇದ್ದ ಸಭಿಕರಿಗೆ ಸತಿದೇವಿಯು ಹೇಳುತ್ತಾಳೆ.
ಇಂದ್ರಾದಿ ದೇವತೆಗಳಿಗೆ ಸ್ವಾಮಿಯಾದ ರುದ್ರದೇವನನ್ನು ನೀನೊಬ್ಬ ಮಾತ್ರ ದ್ವೇಷ ಮಾಡುತ್ತಾ ಇರುವೆ.ಸಜ್ಜನರು ಯಾವಾಗಲೂ ಎಲ್ಲರಲ್ಲಿಯು ಗುಣಗಳನ್ನು ಮಾತ್ರ ಎಣಿಸುವರು.ದುರ್ಜನರು ಹಾಗಲ್ಲ ಪ್ರತಿಯೊಬ್ಬ ರಲ್ಲಿ ದೋಷ ಹುಡುಕುವದೇ ಅವರ ಕೆಲಸ.ನೀನು ಈ ಕೆಲಸವನ್ನು ಮಾಡಿ ಪಾಪವನ್ನು ಗಳಿಸಿಕೊಂಡೆ..
ಒಂದು ಬಾರಿ ಭಕ್ತಿ ಯಿಂದ "ಶಿವ ಶಿವ"" ಎಂದು ಭಕ್ತಿಯಿಂದ ಸ್ಮರಿಸಿದರೆ ಸರ್ವದುಃಖ ನಾಶವಾಗುತ್ತದೆ. 
ಇಂತಹ ಪಾವನ ಮೂರ್ತಿಗೆ ನೀನು ಅಮಂಗಲ, ಅಶುಚಿ,ಕರ್ಮಭ್ರಷ್ಟ ,ದುರಭಿಮಾನಿಯೆಂದು ಬೊಗಳುತ್ತಿರು ವಿಯಲ್ಲಾ.ನೀನೇ ಅಮಂಗಳ,ದುರಭಿಮಾನಿ ಅಶುಚಿ,ಕರ್ಮಭ್ರಷ್ಟ.
ಶ್ರೀ ರುದ್ರ ದೇವಗೆ ಯಾರ ಮೇಲೆ ದ್ವೇಷ, ಪ್ರೀತಿ ಇಲ್ಲ.ಭಗವಂತನ ಆಜ್ಞೆ ಯಂತೆ ಶಿವನ ಕಾರ್ಯ.
ನಿನ್ನ ಮಾತಿನಂತೆ ಶಿವನು ಸ್ಮಶಾನ ವಾಸಿ, ಅಮಂಗಳನು ಆಗಿದ್ದರೆ ಯತಿಗಳಾದ ಸನಕಾದಿಗಳು ಮತ್ತು  ದೇವತೆಗಳು ಅವನ ಪಾದ ಧೂಳಿಯನ್ನು ತಲೆಯಲ್ಲಿ ಧರಿಸುತ್ತಾ ಇದ್ದರೇನು??(ಭಗವಂತನ ಆಜ್ಞೆ ಪ್ರಕಾರ ಅವರು ಸ್ಮಶಾನ ವಾಸ. ಅವರು ಸರ್ವತ್ರ ಪರಿಶುದ್ದ.)
ಧಣಿಯ ಭಕ್ತರು ತಮ್ಮ ಸ್ವಾಮಿ ಯನ್ನು ನಿಂದಿಸಿದವರನ್ನು ಸಮರ್ಥರಾದರೆ ದಂಡಿಸಬೇಕು.
ಅಸಮರ್ಥರಾದರೆ ಧಣಿಯ ನಿಂದೆಯನ್ನು ಕೇಳದೇ ಕಿವಿ ಮುಚ್ಚಿ ಕೊಂಡು ಹೋಗಬೇಕು. 
ಇವೆರಡಕ್ಕೂ ಅವಕಾಶ ಇಲ್ಲದೇ ಹೋದರೆ ಪ್ರಾಣವನ್ನು ಬಿಡಬೇಕು.
ನನ್ನ ಒಡೆಯನ ನಿಂದನೆಯನ್ನು ಕೇಳಿ ನಾನು ತಿರುಗಿ ಕೈಲಾಸಕ್ಕೆ ಹೋಗಲಾರೆ.ನನಗೆ  ಮರಣವೊಂದೆ  ಮಾರ್ಗವಿರುವದು. ಅಜ್ಞಾನದಿಂದ ಉಂಡ ಮೈಲಿಗೆಯ ಅನ್ನವನ್ನು ತಿಂದವನು ಹೇಗೆ ಅದನೆಲ್ಲ ಕಕ್ಕಿ ವಾಂತಿ ಮಾಡಿಕೊಂಡು ಶುದ್ದನಾಗುವಂತೆ
ಶಿವನ ದ್ವೇಷವನ್ನು ಮಾಡುವ, ಶಿವನ ನಿಂದಕನಾದ ನಿನ್ನಿಂದ ಉತ್ಪನ್ನ ವಾದಂತಹ ಈ ಅಪವಿತ್ರ ವಾದ ದೇಹವನ್ನು
ಬಿಟ್ಟು ಶುದ್ದಳಾಗುವೆನು.
ನನ್ನ ಪತಿ ನಿಮಗೆ ನಮಸ್ಕಾರ ಮಾಡಲಿಲ್ಲ ವೆಂದು ದ್ವೇಷವನ್ನು ಮಾಡುತ್ತಾ ಇರುವೆ.ಅವರು ದೇವ ಶ್ರೇಷ್ಟರು.ಸಾಮಾನ್ಯ ಜನರಂತೆ ಅವರಿಗೆ ವಿಧಿ ನಿಷೇಧಗಳಿಲ್ಲ.
ದೇವತೆಗಳಿಗೆ ಮಾನವರಿಗೆ ಮಾರ್ಗ ನಿಯಮಗಳು ಭಿನ್ನ.
ಮಹಾನಿಯಮ ಅಂದರೆ ಭಗವಂತನ ಆಜ್ಞೆಯನ್ನು ಪಾಲಿಸುವ ಅಧಿಕಾರ ಉಳ್ಳ ಕರ್ಮನಿರತನು.ಸದಾ ತನ್ನ ಹೃದಯದಲ್ಲಿ ಭಗವಂತನ ಬಿಂಬರೂಪಿ ಯನ್ನು ಕಾಣುತ್ತಾ ಇರುವ ಶಿವನಿಗೆ ಕರ್ಮಭ್ರಷ್ಟ ಎಂದೆಯಲ್ಲವೇ??ಇದರಿಂದಾಗಿ ನೀನು ಅಜ್ಞಾನ ಉಳ್ಳವ ಎಂದು ತಿಳಿಯಿತು.
ಇಂತಹ ಪಾಪಿಯಿಂದ ಹುಟ್ಟಿದ ದೇಹ...
ಸಾಕಪ್ಪ!! ಸಾಕು.ನಿನ್ನ ಮಗಳು ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ.
ಹಿಂತಿರುಗಿ ಹೋದರೆ ಶಿವನು ಪ್ರೀತಿಯಿಂದ ಹೇ! ದಕ್ಷಪುತ್ರಿ! ದಾಕ್ಷಾಯಿಣಿ !ಎಂದು ನಿನ್ನ ಗೋತ್ರ ವನ್ನು ಉಚ್ಚರಿಸಿ ಕರೆದರೆ ನನಗೆ ಅದು ಅಭಾಸವಾಗುತ್ತದೆ.
ಪತಿಯ ಮನಸ್ಸು ನೊಂದಿದೆ.ಪತಿಯ ಮಾತನ್ನು ಕೇಳದೇ ಇಲ್ಲಿ ಬಂದೆ.
ಆದ್ದರಿಂದ ಈ ದೇಹವನ್ನು ಬಿಡುವೆನು.
ಎಂದು ಹೇಳಿ 
ಯಜ್ಞ ಶಾಲೆಯಲ್ಲಿ ಧ್ಯಾನ ನಿರತಳಾದಳು.ದೇಹ ಬಿಟ್ಟಾಗ ಅದನ್ನು ಸುಡುವ ಹಂಗು ತಂದೆಗೆ ಇರಬಾರದೆಂದು ದೇಹದೊಳಗಿರುವ  ಅಗ್ನಿ ವಾಯು ಗಳಲ್ಲಿ ಇರುವ ಅಂತರ್ಯಾಮಿಯಾದ ಶ್ರೀ ಹರಿ ಯನ್ನು ಧ್ಯಾನಿಸಿದಳು.
ಸಕಲದೇವತೆಗಳಿಗೆ ಗುರುವಾದ, ತನ್ನ ಒಡೆಯನಾದ ರುದ್ರ ದೇವರನ್ನು  ಮನದಲ್ಲಿ ಧ್ಯಾನಿಸಿ ,ಅವನ ಪಾದಗಳಿಗೆ ನಮಸ್ಕರಿಸಿ, ಅವನ ದರುಶನ ವನ್ನು ಮಾಡಿ, ಅವನ ಗುರುಗಳಾದ ಪರಶುಕ್ಲತ್ರಯರನ್ನು ಮತ್ತು ಶ್ರೀ ಹರಿಯನ್ನು ಧ್ಯಾನಿಸಿದಳು. ಭಗವಂತನನ್ನು ನೋಡುತ್ತಾ  ಪತಿನಿಂದಾ ಶ್ರವಣ ಜನಿತ ಪಾಪವನ್ನು ಕಳೆದುಕೊಂಡು ತನ್ನ ದೇಹವನ್ನು ಯೋಗದಿಂದ ಬಿಟ್ಟಳು.ಸುಷುಮ್ನಾ ನಾಡಿಯಿಂದ ಆ ದೇಹದಿಂದ ಸತಿದೇವಿಯು ಹೊರಟು ಹೋದ ಮೇಲೆ ಅವಳ ಧ್ಯಾನ ದಿಂದ ಹುಟ್ಟಿದ ಅಗ್ನಿಯು ಆ ದೇಹವನ್ನು ಸುಟ್ಟು ಬೂದಿ ಮಾಡಿದನು.
ನೆರೆದ ಜನರೆಲ್ಲರು ಹಾಹಾಕಾರ ಮಾಡಿದರು.ದಕ್ಷ ನಿಗೆ ಎಲ್ಲರು ನಿಂದನೆ ಮಾಡಲು  ಆರಂಭಿಸಿದರು.
ಮುಂದಿನ ಭಾಗ ನಂತರ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏 ಎಂದಿಗು ಭಗವಂತನ, ಭಗವದ್ಭಕ್ತರ ನಿಂದನೆ ಸರ್ವತ್ರಾ ಸಲ್ಲದು🙏
********

||ಪಿಬತ ಭಾಗವತಂ ರಸಮಾಲಯಂ||
Day 50
 ಸತಿದೇವಿಯು ತನ್ನ ತಂದೆಯಾದ ದಕ್ಷ ಪ್ರಜಾಪತಿ ನಡೆಸುವ ಯಾಗ ಶಾಲೆಗೆ ಬರುತ್ತಾಳೆ.ಅಲ್ಲಿ ರುದ್ರ ದೇವರನ್ನು ಬಿಟ್ಟು ಉಳಿದ ದೇವತೆಗಳಿಗೆ ಯಾಗದ ಹವಿಸ್ಸು ಹಾಕುವುದನ್ನು ನೋಡಿ ,ಮತ್ತು ರುದ್ರ ದೇವರಿಗೆ ಹಿಂದೆ ನಡೆದ ನಿಂದನೆ ಮಾತುಗಳನ್ನು ತನ್ನ ತಂದೆಗೆ ರುದ್ರ ದೇವರ ಬಗ್ಗೆ ಹೇಳುತ್ತಾ ಪತಿಯ ದ್ವೇಷಿ ಮತ್ತು ಪತಿನಿಂದಕ ನಾದ ಮಗಳು ಎಂಬ ಹೆಸರಿನಿಂದ ಕರೆಸಿಕೊಳ್ಳುವ ಬದಲು ದೇಹತ್ಯಾಗವನ್ನು ಮಾಡುವ ನಿರ್ಧಾರ ತೆಗೆದುಕೊಳ್ಳಲು
ಅದರಂತೆ ಧ್ಯಾನಾಸಕ್ತಳಾಗಿ ಪತಿಯನ್ನು ಸ್ಮರಿಸಿ,ಪತಿಯ ಅಂತರ್ಯಾಮಿಯಾದ ಪರಶುಕ್ಲತ್ರಯರನ್ನು ಸ್ಮರಿಸಿ ಅವರ ಅಂತರ್ಯಾಮಿಯಾದ ಶ್ರೀ ಹರಿಯನ್ನು ಧ್ಯಾನ ಮಾಡುತ್ತಾ ಯೋಗ ಬಲದಿಂದ ದೇಹತ್ಯಾಗ ಮಾಡಿದ ಕೂಡಲೇ ಆ ದೇಹವನ್ನು ಅವಳ ಧ್ಯಾನದಿಂದ ಹುಟ್ಟಿದ ಅಗ್ನಿ ಸುಟ್ಟು ಬೂದಿ ಮಾಡಿದನು.
ನಂತರದಲ್ಲಿ ಯಜ್ಞ ಶಾಲೆಯಲ್ಲಿ ಹಾಹಾಕಾರ ವಾಗಿದೆ.ಎಲ್ಲರು ದಕ್ಷ ನನ್ನ ನಿಂದನೆ ಮಾಡಲು ಆರಂಭಿಸಿದರು.
ಶಿವನ ದ್ವೇಷವನ್ನು ಮಾಡಿದ್ದು ಅಲ್ಲದೇ ಅವನ ಅಂತರ್ಯಾಮಿಯಾದ ಭಗವಂತನ ದ್ವೇಷವನ್ನು ಮಾಡಿದೆ ಮತ್ತು ನಿನಗೆ ಜನಿಸಿದ ಮಗಳ ಮರಣಕ್ಕೆ ಕಾರಣನಾದೇ ನೀನು ಎಂದು ದೂಷಣೆ ಮಾಡಲು ಆರಂಭಿಸಿದರು.
ಇತ್ತ ದಕ್ಷನಿಗೆ ತನ್ನ ಮಗಳು ತನ್ನ ಕಣ್ಣಿನ ಎದುರಿನಲ್ಲಿ ಅಗ್ನಿಗೆ ಆಹುತಿಯಾಗಿದ್ದನ್ನು ಕಂಡು ದುಃಖ ದಿಂದ ಬಹು ರೋಧಿಸಿದನು.
ಅವನಿಗೆ ಬಂದಿದ್ದ ಅಸುರಾವೇಶವು ಸರಿಯುತ್ತಾ ಬಂದ ಹಾಗೇ ಜ್ಞಾನ ಉದಯವಾಗಿದೆ.ಪಶ್ಚಾತ್ತಾಪ ವಾಗಿದೆ.ಶಿವನ ದ್ವೇಷವನ್ನು ಮಾಡಿ ಮಗಳಾದ ಸತಿದೇವಿಯನ್ನು ಕಳೆದುಕೊಂಡೆ ಎಂದು ಬಹಳ ವಾಗಿ ರೋದಿಸಿದ್ದಾನೆ.
ಇತ್ತ ನಾರದರಿಂದ ಸತಿದೇವಿಯು ದೇಹತ್ಯಾಗ ಮಾಡಿದಳೆಂಬ ವಾರ್ತೆ ರುದ್ರ ದೇವರಿಗೆ ತಲುಪಿದೆ.
ಕಿಡಿಕಿಡಿಯಾಗಿ
ಮಧ್ಯಾಹ್ನದ ಸೂರ್ಯನಂತೆ ಉರಿಯುತ್ತಾ ಅಗ್ನಿ ಜ್ವಾಲೆಯಂತೆ ಹೊಳೆಯುವ ತನ್ನ ಜಟೆಯನ್ನು ಬಿಚ್ಚಿ ನೆಲದ ಮೇಲೆ ಒಂದು ಜಟೆಯನ್ನು ಕಿತ್ತು ಹಾಕುತ್ತಾನೆ.ಆಗ ವೀರಭದ್ರನು ಹುಟ್ಟುತ್ತಾನೆ.
ನನ್ನ ಅಂಶದಿಂದ ಹುಟ್ಟಿದ ನೀನು ಹೋಗಿ ದಕ್ಷ ನನ್ನು ಮತ್ತು ಅವನ ಯಜ್ಞ ವನ್ನು ನಾಶ ಮಾಡು ಎಂದು ಆಜ್ಞೆಯನ್ನು ಮಾಡುತ್ತಾನೆ.
ಅದರಂತೆ ವೀರಭದ್ರ ಪರಿವಾರ ಸಮೇತವಾಗಿ ಯಜ್ಞ ಶಾಲೆಗೆ ಬಂದು ಯಜ್ಞ ವನ್ನು ಮಾಡುತ್ತಾ ಇರುವ ದಕ್ಷನನ್ನು ಕಂಡು ಸಂಹಾರ ಮಾಡಲು ಹೋಗುತ್ತಾನೆ. ಯಜ್ಞ ನಾಶವಾಗಿದೆ.
ದಕ್ಷನ ಶಿರವನ್ನು ಕತ್ತರಿಸಲು ವೀರಭದ್ರ ನಿಗೆ ಆಗಲಿಲ್ಲ. ತಕ್ಷಣ ರುದ್ರ ದೇವರನ್ನು ಧ್ಯಾನ ಮಾಡಲು ರುದ್ರ ದೇವರು ಅಲ್ಲಿ ಬಂದು ಆ ದಕ್ಷ ನ ಸಂಹಾರವೇ ಯಜ್ಞ ವೆಂದು  ಅನುಸಂಧಾನ ಮಾಡಿ,ದಕ್ಷನನ್ನು ಪಶುವನ್ನಾಗಿ ಚಿಂತಿಸಿ ಅವನ ಮುಂಡದಿಂದ ರುಂಡವನ್ನು ಕತ್ತರಿಸಿ ಅಹಂಕಾರದಿಂದ ಕಲುಷಿತ ವಾದ  ಅದನ್ನು ಹೋಮಾಗ್ನಿಯಲ್ಲಿ ಹಾಕಿ ಹೋಮ ಮಾಡಿ ಅಲ್ಲಿಂದ ಕೈಲಾಸಕ್ಕೆ ಹೊರಟು ಹೋದರು.
ದಕ್ಷನ ಯಾಗವು ಹೀಗೆ ಅನಾಹುತ ವಾಗುವದೆಂದು  ಮೊದಲೇ ತಿಳಿದಿದ್ದ ಬ್ರಹ್ಮ ದೇವರು ಹಾಗು ಭಗವಂತ  ಅಲ್ಲಿ ಹೋಗಿರಲಿಲ್ಲ.*
ನಂತರ ದೇವತೆಗಳು ಎಲ್ಲರು ತಮ್ಮ ತಪ್ಪನ್ನು ತಿಳಿದು ಬ್ರಹ್ಮ ದೇವರ ಬಳಿ ಬಂದು ಪ್ರಾರ್ಥನೆ ಮಾಡುತ್ತಾರೆ.
ಅದಕ್ಕೆ ಬ್ರಹ್ಮ ದೇವರು ದೇವತೆಗಳಿರಾ! ಶ್ರೇಷ್ಠ ಪುರುಷನಾದ ರುದ್ರ ದೇವರನ್ನು ಕಡೆಗಣಿಸಿ ಅವನಿಗೆ ಯಾಗದಲ್ಲಿ ಹವಿರ್ಭಾಗವನ್ನು ಕೊಡದೇ ಮಹಾಪರಾಧ ಮಾಡಿರುವಿರಿ.ಹೋಗಿ ಅವನಲ್ಲಿ ಶರಣಾಗಿ.ಶರಣಾದವರಿಗೆ ಬೇಗ ಪ್ರಸನ್ನ ಆಗುವದು ರುದ್ರ ನ ಸ್ವಭಾವ. ಅಂತಹ ರುದ್ರ ನಿಗೆ ಜ್ಞಾನಿಗಳು ಆದವರು ಸರ್ವತ್ರ ಅಪರಾಧ ವನ್ನು ಎಸಗಲಾರರು.
ಎಂದು ಹೇಳಿ ಅವರನ್ನು ಕರೆದುಕೊಂಡು ಕೈಲಾಸ ಪರ್ವತಕ್ಕೆ ಹೋಗುತ್ತಾರೆ.ಅಲ್ಲಿ ಹೋಗಿ ರುದ್ರ ದೇವರನ್ನು ಸಮಾಧಾನ ಪಡಿಸಿದರು. ಯಜ್ಞ ಪೂರ್ಣ ವಾಗಬೇಕು ಎಂದು ಹೇಳುತ್ತಾರೆ. 
ರುದ್ರ ದೇವರು ಬಂದರು.ಯಜ್ಞ ಪೂರ್ಣ ವಾಗಬೇಕು ಎಂದರೆ ಯಜ್ಞ ಮಾಡುವ ಯಜಮಾನ ನಿಗೆ ತಲೆಯೆ ಇಲ್ಲ. ತಕ್ಷಣ ದಲ್ಲಿ ಮೇಕೆ ಮುಖವನ್ನು ತಂದು ಜೋಡಿಸಿ ಎಂದು ಆಜ್ಞೆಯನ್ನು ಮಾಡುತ್ತಾರೆ.ಅದರಂತೆ ಜೋಡಿಸಿದಾಗ ದಕ್ಷ ನು ಮಲಗಿದ್ದವರು ಹೇಗೆ ಎದ್ದು ಕೂಡುವರೋ ಹಾಗೇ ಕುಳಿತು ಕೊಂಡ.ಹಳೆಯ ತಲೆ ಹೋಗಿ ಹೊಸ ತಲೆ ಬಂದಿದೆ.ಅಹಂಕಾರ ನಾಶವಾಗಿದೆ.
ನಂತರದಲ್ಲಿ ದಕ್ಷ ಪ್ರಾರ್ಥನೆ ಮಾಡುತ್ತಾನೆ ರುದ್ರ ದೇವರಿಗೆ.
"ದೇವಾ! ಅಪರಾಧ ಸಹಿಷ್ಣು ವಾದ ನೀನು ನನ್ನನ್ನು ಶಿಕ್ಷೆ ಮಾಡದೇ ಹೋಗಿದ್ದರೆ ಶಿವ ದ್ವೇಷ ದಿಂದ ತಮಸ್ಸಾಗುತಿತ್ತು.ಶಿಕ್ಷೆ ಮಾಡಿದೆ ಅದರಿಂದ ಪರಮಾನುಗ್ರಹ ವಾಗಿದೆ.ಅಜ್ಞಾನ ಉಳ್ಳವನಾದ ನಾನು ನಿನ್ನನ್ನು ನಿಂದಿಸಿ ನರಕದಲ್ಲಿ ಬೀಳುತ್ತಾ ಇದ್ದೆ.ಕರುಣಾಳುವಾದ ನೀನು ಎನ್ನ ಉದ್ದಾರ ಮಾಡಿದೆ.ಒಳ್ಳೆಯ ಪಾಠ ಕಲಿಸಿದ್ದೀರಿ.ಇನ್ನೂ ಮುಂದೆ ಹೀಗೆ ಅಹಂಕಾರದ ವರ್ತನೆ ತೋರುವುದಿಲ್ಲ ಎಂದು ಹೇಳಿ ಕ್ಷಮೆ ಬೇಡಿ ಯಜ್ಞ ವನ್ನು ಪುನಃ ಆರಂಭ ಮಾಡುತ್ತಾನೆ.
ಅಲ್ಲಿ ಭಗವಂತ ಗರುಡಾರೂಡನಾಗಿ ಪ್ರಕಟವಾಗುತ್ತಾನೆ.
ಭಗವಂತನನ್ನು ಕಂಡು ಸಕಲರು ತಮ್ಮ ತಮ್ಮ ಯೋಗ್ಯತೆ ಅನುಸಾರವಾಗಿ ಪ್ರಾರ್ಥನೆ ಮಾಡುತ್ತಾರೆ. ನಂತರ ಭಗವಂತನು ಆ ಯಜ್ಞ ದಲ್ಲಿ ಅರ್ಪಿಸಿದ ಹವಿಸ್ಸುನಿಂದ ಪ್ರೀತಿ ಯಾಗಿ  ಹೀಗೆ ಹೇಳುತ್ತಾನೆ.
"ನಾನು ವಿಷ್ಣು. ಬ್ರಹ್ಮ ಮತ್ತು ರುದ್ರ ರೊಳಗೆ ಅವರ ನಾಮಕನಾಗಿ ಅವರಲ್ಲಿ ನಿಂತು ಸಕಲ ಕಾರ್ಯ ವನ್ನು ಮಾಡಿಸುವೆನು.ಜ್ಞಾನಿಗಳು ಆದವರು ರಮೆ ಮೊದಲುಗೊಂಡು ಸಕಲರು ನನ್ನ ಅಧೀನವೆಂದು ತಿಳಿಯುವರು.ಸ್ವತಂತ್ರ ನಾದ ನನಗು ಬ್ರಹ್ಮ ,ಶಿವರಲ್ಲಿ ಇರುವ ಬ್ರಹ್ಮ, ಶಿವನಾಮಕ ನನ್ನ ರೂಪಗಳಿಗು,ವಿಷ್ಣು ರೂಪಕ್ಕೂ,ಸೂರ್ಯನ ಅಂತರ್ಯಾಮಿಯಾದ ನಾರಾಯಣನ ರೂಪಕ್ಕೆ ಕಿಂಚಿತ್ತೂ, ಮತ್ತು ಸಾಸುವೆ ಕಾಳಿನಷ್ಟು ಭೇದವಿಲ್ಲ ಎಂದು ತಿಳಿಯುವವನೇ ಮುಕ್ತನಾಗುವನು.
ಹೀಗೆ ಶ್ರೀಹರಿಯು ದಕ್ಷ ನಿಗೆ ಉಪದೇಶ ಮಾಡಿದ ಬಳಿಕ ದಕ್ಷ ಶ್ರೀಹರಿ ಮೊದಲುಗೊಂಡು ಬಂದಂತಹ ಬ್ರಹ್ಮ ರುದ್ರಾದಿಗಳಿಗೆ ಪೂಜೆ ಗೌರವ ವನ್ನು ಸಮರ್ಪಣೆ ಮಾಡುತ್ತಾನೆ.
ಆ ಯಜ್ಞ ದ ಕೊನೆಯಲ್ಲಿ ರುದ್ರ ದೇವರಿಗು ಸಹ ಆಹುತಿಯನ್ನು ಮನಃಪೂರ್ವಕವಾಗಿ ಕೊಟ್ಟು ಪುನೀತನಾಗಿದ್ದಾನೆ.
ನಂತರ ಎಲ್ಲರು ಅವನಿಗೆ ಧರ್ಮವಂತನಾಗು ಎಂದು ಆಶೀರ್ವಾದ ಮಾಡಿ ಹೊರಟಿದ್ದಾರೆ.
ಇತ್ತ ದೇಹಬಿಟ್ಟ ಸತಿದೇವಿಯು ಹಿಮವಂತ ಮತ್ತು ಮೇನಕೆಯ ಮಗಳಾಗಿ  ಗಿರಿಜಾ ಅಥವಾ ಪಾರ್ವತಿ ಎಂಬ ನಾಮದಿಂದ ಅವತಾರ ಮಾಡಿ ಶಿವನನ್ನು ಕುರಿತು ತಪಸ್ಸು ಆಚರಿಸಿ ರುದ್ರ ದೇವನನ್ನು ಒಲಿಸಿಕೊಂಡು ವಿವಾಹವಾಗಿ ಪುನಃ ಕೈಲಾಸಕ್ಕೆ ತೆರಳಿದ್ದಾಳೆ.
ನಂತರ ಮೈತ್ರೇಯರು ವಿದುರನಿಗೆ ಹೇಳುತ್ತಾರೆ.
||ಫಲಶೃತಿ||👇👇
ಶ್ರೇಷ್ಠ ವಾದ ಈ ಕಥಾವನ್ನು ದಕ್ಷನ ಅಹಂಕಾರ ವನ್ನು ಧ್ವಂಸ ಮಾಡಿದ ಶಂಭುವಿನ ಈ ಕಥೆಯನ್ನು ಯಾರು ಕೇಳುವರೋ ಅವರಿಗೆ ಯಶಸ್ಸು, ಆಯುರ್ವೃದ್ದಿಯು,ಪಾಪ ನಿವಾರಣೆ ಆಗುವದು.ನಿತ್ಯವೂ ಇದನ್ನು ಶ್ರದ್ಧೆ ಇಂದ ಕೇಳಲು ಭಕ್ತಿ ಹೆಚ್ಚಾಗಿ ಅವರ ಅಹಂಕಾರ ನಾಶವಾಗುತ್ತದೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಸ್ವೋತ್ತಮ ದ್ರೋಹ ಎಂದಿಗು ಒಳಿತಲ್ಲ.ಅದು ನಮಗೆ ಭಾದಕ.🙏
*******

||ಪಿಬತ ಭಾಗವತಂ ರಸಮಾಲಯಂ||
Day 51
ನಿನ್ನೆಯ ದಿನ ಮಹಾದೇವನು ದಕ್ಷ ನ ಅಹಂಕಾರ ಕಳೆದ ಬಗ್ಗೆ ತಿಳಿದು ಕೊಂಡೆವು.
ನಂತರ ಶುಕಮುನಿಗಳು ಪರಿಕ್ಷೀತ ರಾಜನಿಗೆ  ಧ್ರುವರಾಜರ ಚರಿತ್ರೆ ಹೇಳುತ್ತಾರೆ.
ರಾಜನ್! ಕೇಳು.. ಹಿಂದೆ ನಿನಗೆ ಸ್ವಾಯಂಭುವ ಮನುವಿನ ಹೆಣ್ಣು ಮಕ್ಕಳ ಮತ್ತು ಅವರ ಮಕ್ಕಳ ಬಗ್ಗೆ ವೃತ್ತಾಂತ ವನ್ನು ತಿಳಿಸಿದ್ದೇನೆ.
ಇವಾಗ ಸ್ವಾಯಂಭುವ ಮನುವಿನ ಗಂಡುಮಕ್ಕಳ ವೃತ್ತಾಂತ ವನ್ನು ತಿಳಿಸುವೆ.
ಸ್ವಾಯಂಭುವ ಮನುವಿಗೆ ಇಬ್ಬರು ಗಂಡುಮಕ್ಕಳು. ಪ್ರಿಯವ್ರತ ಮತ್ತು ಉತ್ತಾನಪಾದ.
ಉತ್ತಾನಪಾದನಿಗೆ ಇಬ್ಬರು ಪತ್ನಿ ಯರು.ಸುರುಚಿ ಮತ್ತು ಸುನೀತಿ.ಸುರುಚಿಯಲ್ಲಿ ಉತ್ತಮ ಮತ್ತು ಸುನೀತಿಯಲ್ಲಿ ಧೃವರಾಜರು ಎಂಬ ಪುತ್ರರು ಜನಿಸಿದ್ದಾರೆ. ಸುರುಚಿ ಮೇಲೆ ಬಹಳ ಪ್ರೀತಿ.ಸುನೀತಿಯ ಮೇಲೆ ಇಲ್ಲ.
ಒಮ್ಮೆ ಉತ್ತಾನಪಾದ ರಾಜ ಸಭೆಯೊಂದರಲ್ಲಿ ಸುರುಚಿಗೆ ಹುಟ್ಟಿದಂತಹ ಉತ್ತಮನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಲಾಲನೆ ಮಾಡುತ್ತಾ ಇದ್ದಾನೆ.
ಅಲ್ಲಿಯೇ ಆಟವಾಡುತ್ತಾ ಇದ್ದ ಧ್ರುವ ನಿಗೆ ಅದನ್ನು ನೋಡಿ ಸಹಜವಾಗಿ ತಂದೆಯ ತೊಡೆಯ ಮೇಲೆ ಕುಳಿತು ಕೊಳ್ಳಲು ಆಸೆಯಾಗಿದೆ.ತಂದೆಯ ತೊಡೆಯ ಮೇಲೆ ಕುಳಿತು ಕೊಳ್ಳಲು ಹೋದ. ಅದಕ್ಕೆ ತಂದೆಯು ಅವಕಾಶ ಕೊಡಲಿಲ್ಲ. ಮತ್ತು ಮಗನ ಕಡೆ ಕಣ್ಣೆತ್ತಿ ಸಹ ನೋಡಲಿಲ್ಲ.
ಇಷ್ಟಾದರೂ ಧ್ರುವ ತನ್ನ ಪ್ರಯತ್ನ ಬಿಡಲಿಲ್ಲ. ಇದನ್ನು ಕಂಡು ಸುರುಚಿಯು
ಅಸೂಯೆ ಇಂದ 
"ಧೃವ! ಹೋಗು ಹೋಗು. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ ವನಲ್ಲ.ಬೇರೆಯವಳ ಮಗನೆಂಬುದು ನಿನಗೆ ಗೊತ್ತಾಗಲಿಲ್ಲ.ಹೀಗಿರುವಾಗ ನೀನು ನನ್ನ ಮಗನಲ್ಲ.ಆದ್ದರಿಂದ ನಿನಗೆ ನಿನ್ನ ತಂದೆಯ ತೊಡೆಯ ಮೇಲೆ ಕುಳಿತು ಕೊಳ್ಳುವ ಅಧಿಕಾರ ಇಲ್ಲ.ನಿಮ್ಮ ತಂದೆ ಈ ಸಭೆಯಲ್ಲಿ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಆದ್ದರಿಂದ ನಿನಗೆ ಸಿಂಹಾಸನವನ್ನು ಏರುವ ಅಧಿಕಾರ ಇಲ್ಲ.ಅದನ್ನು ಪಡೆಯಲು ನೀನು ಕಾಡಿಗೆ ಹೋಗಿ ತಪಸ್ಸಿಗೆ ಕುಳಿತು ಶ್ರೀ ಹರಿಯನ್ನು ಒಲಿಸಿಕೊಂಡು ಇನ್ನೊಂದು ಬಾರಿ ನನ್ನ ಹೊಟ್ಟೆ ಯಲ್ಲಿ ಹುಟ್ಟು.
ಇನ್ನೊಂದು ಬಾರಿ ನನ್ನ ಹೊಟ್ಟೆ ಯಲ್ಲಿ ಹುಟ್ಟಿದಾಗ ಅವಾಗ ನೀನು ಬೇಕಾದರೆ ಅಪ್ಪನ ತೊಡೆಯ ಮೇಲೆ ಕುಳಿತು ಕೊಳ್ಳಲು ಬಹುದು.ಅಲ್ಲಿಯವರೆಗೆ ನಿನಗೆ ಅಧಿಕಾರ ಇಲ್ಲ."
ಹೀಗೆ ಸುರುಚಿಯು ಗರ್ವದಿಂದ ಇಂತಹ ಮಾತುಗಳನ್ನು ಆಡುತ್ತಾ ಇದ್ದರು ಉತ್ತಾನಪಾದ ರಾಜನು ಸುಮ್ಮನೆ ಮಾತನಾಡದೇ ಕುಳಿತಿದ್ದಾನೆ.ಧ್ರುವನಿಗೆ ಅವಮಾನ, ಸಂಕಟ,ವಾಗಿದೆ.ತನ್ನ ತಂದೆ ಏನಾದರು ಸಮಾಧಾನ ಪಡಿಸುವನೋ ಏನೋ ಎಂದು ತಂದೆಯ ಕಡೆ ನೋಡಿದ್ದಾನೆ.ಮಗನ ಹಾಗು ಪತ್ನಿಯ ಮೋಹದಲ್ಲಿ ಏನನ್ನು ಮಾತನಾಡದೆ ಉತ್ತಾನಪಾದ ಸುಮ್ಮನೆ ಕುಳಿತಿದ್ದಾನೆ.
ಅವಾಗ ಧೃವನಿಗೆ ಎಷ್ಟು ಸಿಟ್ಟು ಬಂದಿದೆ ಅಂದರೆ ಎಳೆಯ ಹಾವಿನ ಮರಿಗೆ ದಂಡದಿಂದ ಹೊಡೆದರೆ ಎಷ್ಟು ಸಿಟ್ಟು ಬರುತ್ತದೆಯೋ ಅಷ್ಟು ಸಿಟ್ಟು ಅವನಿಗೆ ಬಂದಿದೆ..
ಅಳುತ್ತಾ ತನ್ನ ತಾಯಿಯ ಮನೆಗೆ ಬಂದಿದ್ದಾನೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಅ.ವಿಜಯ ವಿಠ್ಠಲ🙏
*******


||ಪಿಬತ ಭಾಗವತಂ ರಸಮಾಲಯಂ||
Day 52
ಧ್ರುವ ಅಳುತ್ತಾ ತನ್ನ ತಾಯಿಯ ಮನೆಗೆ ಬಂದಿದ್ದಾನೆ..
ಅಷ್ಟರಲ್ಲಿ ಊರಿನ ಜನರು ಬಂದು ಸುನೀತಿಗೆ ನಡೆದ ವಿಷಯವನ್ನು ತಿಳಿಸಿದ್ದಾರೆ.ಬಹಳ ದುಃಖ ವಾಗಿದೆ ಅವಳಿಗೆ.ಆದರು ಅವರ ಬಗ್ಗೆ ಕ್ರೋಧದಿಂದ ಬಿರುಮಾತನ್ನು ಆಡಲಿಲ್ಲ.
ಅಯ್ಯೋ! ನನ್ನ ಹಣೆಬರಹವೇ ಎಂದು ಮನದಲ್ಲಿ ನೊಂದುಕೊಂಡು ಎಳೆಯ ಹಾವಿನ ಮರಿಯಂತೆ ಬುಸುಗುಡುತ್ತಾ ಬಂದ ಧ್ರುವ ನನ್ನು ತೊಡೆಯ ಮೇಲೆ ಕೂಡಿಸಿಕೊಂಡು,ಅವನ ಕಣ್ಣೀರು ಒರೆಸಿ ಅವನ ಶಿರಸ್ಸನು ಅಘ್ರಾಣಿಸಿ ಅವನಿಗೆ ಮುತ್ತನ್ನು ಕೊಟ್ಟು ಸಮಾಧಾನ ಪಡಿಸುವಳು.
"ವತ್ಸ!ಧ್ರುವ ಇನ್ನೊಬ್ಬರಿಗೆ ಅಮಂಗಳವನ್ನು,ಕೆಟ್ಟ ಮಾತುಗಳನ್ನು ಎಂದಿಗು ಎಣಿಸಬೇಡ.ಹಿಂದೆ ಮಾಡಿದ ಪಾಪದ ಫಲವನ್ನು ಇಂದು ಉಣ್ಣುತ್ತಾ ಇರುವೆವು.ಮತ್ತೆ ಅದಕ್ಕೆ ಪಾಪದ ರಾಶಿಯನ್ನು ಸೇರಿಸಬೇಡ.ಪರರಿಗೆ ದುಃಖ ವಾಗಲಿ ಎಂದು ಅಪೇಕ್ಷಿತ ಪಟ್ಟರೆ ನಾಳೆ ನಮಗೆ ದುಃಖ ಬಂದು ತಗುಲುವದು.
ನಿನ್ನ ತಾಯಿಯಾದ ಸುರುಚಿಯ ಮಾತಿನಲ್ಲಿ ಸುಳ್ಳು ಏನಿದೆ??
ಸತ್ಯವನ್ನು ಹೇಳಿದ್ದಾಳೆ.
(ಇಲ್ಲಿ ಪದ ಪ್ರಯೋಗ ನೋಡಿ.ತನ್ನ ಸವತಿಯಾದರು ಅವಳನ್ನು ನಿನ್ನ ತಾಯಿ ಯೆಂದು ಧ್ರುವನಿಗೆ ಸುನೀತಿ ಹೇಳುತ್ತಾಳೆ)
ದೌರ್ಭಾಗ್ಯಳಾದ ನನ್ನ ಹೊಟ್ಟೆಯ ಒಳಗಡೆ ನೀನು ಹುಟ್ಟಿದೆ.ಕೈ ಹಿಡಿದ ಪತಿಯು ಎಲ್ಲರ ಮುಂದೆ ನನ್ನ ಕೈ ಹಿಡಿದ ಸುನೀತಿಯ ಮಗನೆಂದು ಹೇಳುವ ದಕ್ಕೆ ನಾಚುವಂತಹ ನನ್ನಂತಹ ಪಾಪಿಷ್ಟೆಯಲ್ಲಿ ನೀನು ಹುಟ್ಟಿದೆ.ಇಂತಹ ತಾಯಿಯ ಹಾಲನ್ನು ಕುಡಿದು ಬೆಳೆದೆ.ಮಗನೇ ಆಗಲಿ ಬಿಡು.ಆದುದು ಅಯಿತು.ಚಿಂತಿಸುವ ಅಗತ್ಯ ಇಲ್ಲ.ನಿನ್ನ ತಾಯಿಯಾದ ಸುರುಚಿಯ ಮಾತನ್ನು ಪಾಲಿಸುವದು ನಿನ್ನ ಕರ್ತವ್ಯ ಹಾಗು ಧರ್ಮ.
ಉತ್ತಮನಂತೆ ತಂದೆಯ ಲಾಲನೆಯನ್ನು ಪಡೆಯಲು ಸರ್ವೋತ್ತಮನಾದ ಆ ಭಗವಂತನ ಪಾದವನ್ನು ಆಶ್ರಯ ಮಾಡು.ಅವನನ್ನು ಕುರಿತು ತಪಸ್ಸು ಮಾಡು.
ಅವನು ರಮಾ ದೇವಿ ಮೊದಲುಗೊಂಡು ಸಕಲರಿಗೆ ಅಧಿನಾಯಕ.ಜಗತ್ತಿನ ಒಡೆಯ.
ನಿನ್ನ ತಾತನಾದ ಸ್ವಾಯಂಭುವ ಮನುವು ಸಹ ಅವನನ್ನು ಆರಾಧಿಸಿ ಬಹು ದುರ್ಲಭವಾದ ಮೋಕ್ಷ ವನ್ನು ಪಡೆದಿರುವನು.
ಆ ಲಕ್ಷ್ಮೀ ಕಾಂತನು ನಮ್ಮ ಕುಲದೈವ.ಅವನು ಭಕ್ತವತ್ಸಲ,ಕರುಣಾಕರ,ಕರುಣಾನಿಧಿ. ಅಂತಹ ಕರುಣಾನಿಧಿ ಯ ಪಾದಪದ್ಮವನ್ನು ಬಿಡದೇ ಆರಾಧಿಸು.ಅವನ ಹೊರತುಪಡಿಸಿ ನಮಗೆ ಯಾರು ಗತಿಯಿಲ್ಲ.
ಯಾವ ಭಗವಂತನ ಪಾದ ಪದ್ಮಗಳನ್ನು  ಬ್ರಹ್ಮಾದಿ ದೇವತೆಗಳು ಆರಾಧಿಸುವರೋ,ಯಾವಾತನ ಸೇವೆ ಆರಾಧನೆ ಮಾಡಲು,ಅವನ ಚರಣ ಸೇವಕಿಯಾದ ಸಕಲ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯು ಕೈಯಲ್ಲಿ ಕಮಲವನ್ನು ಹಿಡಿದು ಹುಡುಕಿಕೊಂಡು ಅವರಿಗೆ ಅನುಗ್ರಹ ಮಾಡಲು ಬರುವಳು.
ಇಂತಹ ಶ್ರೀ ಮನ್ನಾರಾಯಣನ ಹೊರತಾಗಿ ನಿನಗೆ ಯಾರು ರಕ್ಷಣೆ ಮಾಡುವರಿಲ್ಲ.ಅವನೇ ನಿನಗೆ ಬಂದಂತಹ ಈ ದುಃಖ ವನ್ನು, ಅವಮಾನ ವನ್ನು ಕಳೆಯತಕ್ಕಂತಹವನು.ಅವನ ಹೊರತು ಮತ್ತಾರು ಇಲ್ಲ.
ನಿನಗೆ ಮಾತೃಸಮಾನಳಾದ ಸುರುಚಿಯ ಮಾತನ್ನು ಪರಿಪಾಲನೆ ಮಾಡುವದೋಸ್ಕರವಾಗಿ ನೀನು ಕಾಡಿಗೆ ಹೋಗಿ ತಪಸ್ಸನ್ನು ಆಚರಿಸಿ ಆ ಯೋಗಿಗಳಿಗೆ,ಮುಮಕ್ಷುರಿಗೆ ಒಡೆಯನಾದ ಆ ಶ್ರೀಹರಿಯನ್ನು ಸೇವಿಸಿ ಅವನ ಅನುಗ್ರಹ ಪಡೆದುಕೊ.
ಎಂತಹ ಮಾತು.
ಮಗನಿಗೆ ಅವಮಾನವಾದರು,ಅವಮಾನ ಮಾಡಿದವರ ಮೇಲೆ ಬಿರುಮಾತುಗಳನ್ನು,ದ್ವೇಷದ ಮಾತುಗಳನ್ನು ಆಡದೇ,
ಭಗವಂತನ ಕಡೆ ಮನಸ್ಸು ತಿರುಗುವ ಹಾಗೆಮಾಡಿದ ಸುನೀತಿ ನಿಜಕ್ಕೂ ಪುಣ್ಯವಂತೆ.. 
ತಾಯಿಯ ಮಾತಿ ನಂತೆ ಧ್ರುವ ರಾಯನು ಅವಳಿಗೆ ನಮಸ್ಕರಿಸಿ ಅವಳ ಅಪ್ಪಣೆ ಪಡೆದು ಐದು ವರುಷದ ಬಾಲಕ ತಪಸ್ಸಿಗೆ ಕಾಡಿಗೆ ಹೊರಡುವನು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಶ್ರೀ ಕಪಿಲಾಯ ನಮಃ🙏
********


||ಪಿಬತ ಭಾಗವತಂ ರಸಮಾಲಯಂ||
Day 53
ನಿನ್ನೆಯ ದಿನ‌ ತನಗಾದ  ಅವಮಾನ, ಅದಕ್ಕೆ ಅವನ ತಾಯಿಯಾದ ಸುನೀತಿ ಹೇಳಿದಂತೆ  ಐದು ವರುಷದ ಬಾಲಕ ಧ್ರುವ ತಪಸ್ಸಿಗೆ ಹೊರಡುವನು.
ಶುಕಮುನಿಗಳು ಪರಿಕ್ಷೀತನಿಗೆ ಹೇಳುತ್ತಾರೆ.
ಪರಿಕ್ಷೀತ! ಕೇಳು.ತಾಯಿಯ ಅಪ್ಪಣೆಯಂತೆ ಧ್ರುವ ಕಾಡಿಗೆ ಪಯಣ ಬೆಳೆಸಿದ್ದಾನೆ.ದಾರಿಯಲ್ಲಿ ನಾರದರ ಭೇಟಿ ಯಾಗಿದೆ.ಕಾಡಿಗೆ ಬರುವ ಕಾರಣವೇನು?? ಎಂದು ಧ್ರುವ ನಿಂದ ತಿಳಿದು
ವತ್ಸ !ಧ್ರುವ!! ಆಟವಾಡುವ ಈ ವಯಸ್ಸಿನಲ್ಲಿ ನಿನಗೆ ಮಾನ, ಅಪಮಾನದ ಬಗ್ಗೆ ಚಿಂತೆಯೆ?
ಯಾರಿಗೆ ಯಾರು ಶತ್ರು ,ಮಿತ್ರ ರು??ಅಭಿಮಾನ ಗ್ರಸ್ತ ಈ ಮನದಿಂದ ಶತೃ ಮಿತ್ರ ಭಾವನೆ ಹುಟ್ಟು ತ್ತದೆ.ಅಂತಹ ಮೋಹವನ್ನು ಬಿಟ್ಟವರಿಗೆ ಯಾವುದೇ ದುಃಖ ಇಲ್ಲ.
ಉತ್ತಮ, ಮಧ್ಯಮ, ನೀಚ ರೆಂದು ಮೂರು ವಿಧ ಬಗೆಯ ಜೀವರು.ಅವರವರ ಯೋಗ್ಯತೆ ಅನುಸಾರವಾಗಿ ಕರ್ಮಗಳನ್ನು ಅವರು ಮಾಡುವರು. ಇದನ್ನು ಅರಿತುಕೊಂಡ ಜ್ಞಾನಿಗಳು ಅವರಾರು ಸ್ವತಂತ್ರ ರಲ್ಲ.ಭಗವಂತ ನೊಬ್ಬನೇ ಸ್ವತಂತ್ರ. ಈ ಜೀವರು ನಮಗೆ ಸುಖವನ್ನು ಅಥವಾ ದುಃಖ ವನ್ನು ಕೊಡಲು ಕಾರಣರಲ್ಲ.ದೈವ ವಶದಿಂದ,ನಮ್ಮ ಕರ್ಮನುಸಾರವಾಗಿ ನಮಗೆ ಸುಖ, ದುಃಖ ಬರುತ್ತದೆ ಅಂತ ತಿಳಿದುಕೊಂಡ ವನೇ ಜ್ಞಾನಿ.
ತಾಯಿಯಾದ ಸುರುಚಿಯ ಮಾತನ್ನು ಕೇಳಿ ಕಾನನಕ್ಕೆ ತಪಸ್ಸಿಗೆ ಬಂದು ಹರಿಯ ಅನುಗ್ರಹದಿಂದ ಉನ್ನತ ಪದವಿಯನ್ನು ಏರಿ ಅವಳ ಮೇಲೆ ಸೇಡನ್ನು ತೀರಿಸಿಕೊಳ್ಳಲು ಎಣಿಸಿದ್ದೀಯಾ??
ಆ ಶ್ರೀ ಹರಿಯು ಮನುಜರಿಗೆ ಬಹು ದುರ್ಲಭನೆಂದು ನನ್ನ ಅಭಿಪ್ರಾಯ. ಬಹುಜನ್ಮಗಳಲ್ಲಿ ,ಬಹು ವಿಧವಾಗಿ ಕಠಿಣ ತಪವನ್ನು ಮಾಡಿದ ಮುನಿಗಳಿಗೆ ಅವನು ಗೋಚರನಾಗಲಾರ.ಇನ್ನೂ ನೀನು ಹಸುಗೂಸು.ಐದು ವರುಷದ ಬಾಲಕ.ಆ ಕಂತುಪಿತನ ದರುಶನ ನಿನಗೆ ಹೇಗೆ ಸಿಗುವದು??ನಡೆ ಅರಮನೆಗೆ.
ಯಾರೇ ಆಗಲಿ ದೇವರು ಏನು ಕೊಡುತ್ತಾನೆ ಅದು ಸುಖ, ದುಃಖ ಯಾವುದೇ ಇರಲಿ ಸಂತೋಷ ದಿಂದ ಸ್ವೀಕರಿಸಿದವರು ಅವರೇ ಸುಖಿಗಳು.
ನೀನು ಮನೆಗೆ ಹೋಗಿ ಆಟವಾಡಲು ಹೇಳುತ್ತಾರೆ.
ಅದಕ್ಕೆ ಧ್ರುವ ಹೇಳುವ.
"ಮಹಾತ್ಮರೇ! ತಾಯಿಯಾದ ಸುರುಚಿಯ ಬಿರುನುಡಿಗಳನ್ನು ಕೇಳಿದ ನನ್ನ ಮನ ಘಾಸಿಗೊಂಡಿದೆ.ಬ್ರಹ್ಮ ಪುತ್ರರಾದ ತಾವು ಭಗವಂತನ ಕಾಣುವಿಕೆ ಬಗ್ಗೆ ದಯವಿಟ್ಟು ತಿಳಿಸಿ.ಅವನನ್ನು ಕಾಣದೇ ನಾನು ಹಿಂತಿರುಗಲಾರೆ" ಎಂದು ಹೇಳಿದ್ದಾರೆ.
ನಾರದರು ಧೃವನ ಧೃಡ ವಿಶ್ವಾಸ ವನ್ನು ಮೆಚ್ಚಿ ಅವನಿಗೆ ಉಪದೇಶ ಮಾಡುತ್ತಾರೆ.
(ಮೊದಲು ಯಾಕೆ ಹಾಗೇ ಹೇಳಿದ್ದು ಅಂದರೆ ಧ್ರುವನನ್ನು ಪರೀಕ್ಷೆ ಮಾಡಲು ಹಾಗೇ ಹೇಳಿದ್ದು ಹೊರತಾಗಿ ಬೇರೆ ಕಾರಣವಲ್ಲ.)
"ವತ್ಸ !ಧ್ರುವ! ನಿನ್ನ ತಾಯಿಯ ಮಾತಿನಂತೆ ಭಗವಂತನ ಕಾಣುವ ನಿನ್ನ ಧೃಡ ವಿಶ್ವಾಸಕ್ಕೆ ನನಗೆ ಮೆಚ್ಚುಗೆ ಆಗಿದೆ.
ಭಗವಂತನಾದ ಆ ಶ್ರೀ ವಾಸುದೇವನನ್ನು ಭಜಿಸು.ಧರ್ಮ, ಅರ್ಥ, ಕಾಮ,ಮೋಕ್ಷ ,ಯಾವುದೇ ಆಗಲಿ,ಬೇಡುವ ಮನುಜನಿಗೆ ಶ್ರೀಹರಿಯ ಚರಣವೇ ಗತಿಯು.ಅವನನ್ನು ಬಿಟ್ಟರೆ ಮತ್ತೆ ಯಾರು ಅದನ್ನು ಕೊಡುವುದು ಇಲ್ಲ.
ನೀನು ಈ ಕ್ಷಣದಲ್ಲಿ ಯಮುನಾ ನದಿ ತಟದಲ್ಲಿ ಇರುವ ಮಧುವನವನ್ನು ಸೇರು.ಅಲ್ಲಿ ಶ್ರೀ ಹರಿಯ ಸಾನಿಧ್ಯವು ನಿತ್ಯ ವಾಗಿದೆ.ಕಾಳಿಂದಿಯ ಆ ಪವಿತ್ರ ಜಲದಿ ತ್ರಿಕಾಲ ಸ್ನಾನ ಮಾಡುತ್ತಾ ಉಚಿತ ಕರ್ಮಗಳನ್ನುಆಚರಿಸು.
ಉತ್ತಮ ಆಸನರೂಢಾನಾಗಿ ಸಕಲ ಗುಣ ಪೂರ್ಣನಾದ ಆ ಲಕ್ಷ್ಮೀ ಪತಿಯಾದ ನಾರಾಯಣ ನನ್ನ ಧ್ಯಾನಿಸು.ಮನವನ್ನು ನಿಗ್ರಹಿಸು.ಇಂದ್ರಿಯಂಗಳನ್ನು ಜಯಿಸು.ಮಾಧವನಲ್ಲಿ ಮಾತ್ರ ನಿನ್ನ ಮನವಿರಲಿ.
ಆ ಹರಿಯ ರೂಪವನ್ನು ಚಿಂತನೆ ಮಾಡು.
ಪ್ರಸನ್ನವದನನು, ದಯಾವೀಕ್ಷಣನು, ಅಪ್ರತಿಮಸುಂದರನು,ಚಂಪಕ ನಾಶಿಕನು,ಚಾರು ಕಪೋಲನು,ರಮಣೀಯ ವಾದ ಅಂಗವುಳ್ಳವನು,ತರುಣನು,ಶರಣಾಗತ ರಕ್ಷಕನು,ಶ್ರೀವತ್ಸ ಕೌಸ್ತುಭ ಧಾರಿಯು,ವನಮಾಲನು,ಶಂಖ ಚಕ್ರ ,ಗದಾ, ಪದ್ಮಧಾರಿಯು,ಚತುರ್ಭುಜನು,ಹಾರ, ಕಿರೀಟ , ಪದಕ,ಕುಂಡಲ, ಕೇಯೂರ ,ಸಕಲ ಸ್ವರ್ಣ,ವಜ್ರ,ರತ್ನ ಬಗೆಬಗೆಯ ಆಭರಣಗಳನ್ನು ಧರಿಸಿದವನು,
ಕೈಯಲ್ಲಿ ಬಂಗಾರದ ಕಂಕಣವನ್ನು,ಬಂಗಾರದ ಕಡಗಗಳನ್ನು ಕಾಲಿನಲ್ಲಿ ಧರಿಸಿದವನು,ಪೀತಾಂಬರ ಧಾರಿಯು,ಪರಮಶಾಂತನು,ಮಂದಸ್ಮಿತನು,ತರುಣಿಯಾದ ಲಕ್ಷ್ಮೀ ದೇವಿಯಿಂದ ಸದಾ ಸೇವೆಗೊಳ್ಳುವವನು,ಅಂತಹ ವಾಸುದೇವನನ್ನು,ಶ್ರೀನಿವಾಸ ನನ್ನು,ಜಗನ್ನಾಥ ನನ್ನು ನಿಯಮದಿಂದ ಧ್ಯಾನಿಸು.
ಪರಮ ಮಂಗಳಕರವಾದ ಆ ರೂಪವನ್ನು ಧ್ಯಾನಿಸುತ್ತಾ ಅವನನ್ನು ಚಿಂತಿಸು.
ಪರಮಾನಂದಮಯನಾದ ಸ್ವಾಮಿಯ ದರುಶನ ನಿನಗಾಗಲಿ.
ಪರಮ ರಹಸ್ಯ ವಾದ ಮಂತ್ರವನ್ನು ನಿನಗೆ ಉಪದೇಶ ಮಾಡುವೆನು.ಇದನ್ನು ಚೆನ್ನಾಗಿ ಶ್ರದ್ಧೆ ಯಿಂದಜಪಿಸು ಎಂದು ಹೇಳಿ ವಾಸುದೇವ ಮಂತ್ರವನ್ನು ಉಪದೇಶ ಮಾಡಿದ್ದಾರೆ.
ಕಾಯೇನ, ವಾಚಾ, ಮನಸಾ ಭಗವಂತನ ಪೂಜೆ ಮಾಡು.ತನ್ನನ್ನು ಯಾರು ಭಕ್ತಿ ಯಿಂದ ಸೇವಿಸುವರೋ ಅವರಿಗೆ ತನ್ನ ಅರಮನೆಯಲ್ಲಿ ಸರಿಭಾಗ ಕೊಡುವ ಪರಮ ಕರುಣಾನಿಧಿ ಆ ಶ್ರೀ ಹರಿ.ಭಕ್ತಿ ಇಂದ ಭಜಿಪರಿಗೆ ದುರ್ಲಭವಾದ ಮೋಕ್ಷ ವನ್ನು ಕೊಡುವ.
ಹೀಗೆಂದು ಉಪದೇಶವನ್ನು ಮಾಡಿ,ಬಾಲಕನಿಗೆ ಆಶೀರ್ವಾದ ಮಾಡಿ ನಾರದರು ಅಲ್ಲಿಂದ ಹೊರಟಿದ್ದಾರೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ
|ಏಳಿರೋ ವೈಕುಂಠಕೆ|
🙏ಅ.ವಿಜಯ ವಿಠ್ಠಲ🙏
**********


||ಪಿಬತ ಭಾಗವತಂ ರಸಮಾಲಯಂ||
Day 53
ನಾರದರ ಮಾತಿನಂತೆ ಧ್ರುವನು ಮಧುವನಕ್ಕೆ ಹೊರಟು
ತ್ರಿಕಾಲ ಸ್ನಾನ ಮಾಡುತ್ತಾ ಕುಶಾಸನದ ಮೇಲೆ ಕುಳಿತು ಪ್ರಾಣಾಯಾಮ ದಿಂದ ಧ್ಯಾನ ವನ್ನು ಮಾಡುತ್ತಾ,ಇಂದ್ರಿಯಗಳ ನ್ನು ನಿಗ್ರಹಿಸಿ,ಮನಸ್ಸನ್ನು ಧೃಡಮಾಡಿ,ಶ್ರೀ ಹರಿಯ ಪಾದ ಪದ್ಮಗಳನ್ನು ಚಿಂತಿಸುತ್ತಾ 
ಹಾರ,ಪದಕ, ಕಿರೀಟ, ಕೇಯೂರ, ಮುಂತಾದ ಆಭರಣಗಳಿಂದ ಅಲಂಕೃತ ನಾಗಿರುವ ಆ ಶ್ರೀ ಹರಿಯನ್ನು ಧ್ಯಾನಿಸುತ್ತಾ ತನಗೆ ನಾರದರು ಉಪದೇಶವನ್ನು ಮಾಡಿದ ವಾಸುದೇವ ಮಂತ್ರವನ್ನು ಜಪಿಸುತ್ತಾ,ಅವನ ಮಹಿಮೆಯನ್ನು ರೂಪವನ್ನು ಚಿಂತಿಸುತ್ತಾ ತಪಸ್ಸು ಆಚರಣೆ ಮಾಡಲು ಆರಂಭಿಸಿದನು.
ನಾರದರ ಉಪದೇಶ ದಂತೆ ಧ್ರುವರಾಯರು ತಪಸ್ಸು ಆಚರಿಸಲು ಪ್ರಾರಂಭಿಸಿದರು.
ಇತ್ತ ನಾರದರು ಸಂಚಾರ ಮಾಡುತ್ತಾ ಉತ್ತಾನಪಾದನ ಅರಮನೆಗೆ ಬರುತ್ತಾರೆ.
ಬಂದಂತಹ ಮುನಿಗಳಿಗೆ ಉಪಚಾರ ಮಾಡಿ ಅವರಿಗೆ ಉನ್ನತ ಆಸನದಲ್ಲಿ ಕುಳ್ಳಿರಿಸಿ ರಾಜನು ಸುಮ್ಮನೆ ನಿಂತಿದ್ದಾನೆ.
ಇದನ್ನು ಕಂಡು ನಾರದರು ಕೇಳುತ್ತಾರೆ.
ರಾಜನ್! ಏನೋ ದೀರ್ಘಕಾಲದ ಯೋಚನೆಯನ್ನು ಮಾಡುತ್ತಾ ಇದ್ದೀಯಲ್ಲ.??ನಿನ್ನ ಮುಖವೇಕೆ ಬಾಡಿದೆ??ನಿನ್ನ ರಾಜ್ಯ ದಲ್ಲಿ ಧರ್ಮ ಆಚರಣೆಗೆ ಏನಾದರು ತೊಂದರೆಯೇ??
ಎಂದು ಕೇಳುತ್ತಾರೆ. ಅದಕ್ಕೆ ರಾಜನು
ಬ್ರಹ್ಮಪುತ್ರರಾದ ನಾರದರೇ ಏನೆಂದು ಹೇಳಲಿ?? ಪತ್ನಿ ಯ ಮೇಲಿನ ಮೋಹದಿಂದ ಹಸುಳೆಯಾದ ನನ್ನ ಮಗನಾದ ಧ್ರುವನಿಗೆ ಆದರಿಸದೇ ದೂರ ಸರಿಸಿದೆ.ಮೋಹದ ಸುಳಿಯಲ್ಲಿ ಎಂತಹ ತಪ್ಪು ಮಾಡಿದೆನೆಂದು ಈಗ ಅರಿವಾಗುತ್ತಿದೆ.ನನ್ನ ಮಗನು ತಾಯಿಯ ಮಾತಿನಂತೆ ತಪಸ್ಸು ಮಾಡಲು ಕಾನನಕ್ಕೆ ಹೋದ ವಿಷಯ ಕೇಳಿ ಮನಸ್ಸಿಗೆ ಬಹಳ ವ್ಯಥೆಯಾಗಿದೆ.ನನ್ನ ಮಗು ಅನಾಥ ನಾಗಿ ಅರಣ್ಯದ ಮಧ್ಯೆ ಮಲಗಿದ್ದಾಗ ಯಾವ ಕ್ರೂರಪ್ರಾಣಿಗಳಿಗೆ ಆಹಾರವಾದನೋ ಏನೋ??ಹಸಿವೆ,ಬಾಯಾರಿಕೆ ತಾಳಲಾರದೇ ನನ್ನ ಮಗುವಿನ ಸುಂದರವಾದ ಕಮಲದಂತ ಮುಖವು ಬಾಡಿ ಎಷ್ಟು ಕಷ್ಟ ಪಡುತ್ತಾ ಇರುವನೋ ಏನೋ??
ಎಂತಹ ದುರ್ಮಾರ್ಗನಾದೆ.ಸತಿಯ ಮೋಹದಿಂದ ನಾನು ಪ್ರೀತಿಯಿಂದ  ನನ್ನ ತೊಡೆಯ ಮೇಲೆ ಕೂಡಲು ಬಂದ ಪುಟ್ಟ ಮಗುವನ್ನು ದೂರ ಮಾಡಿದೆನಲ್ಲ.ನನ್ನಂತಹ ಪಾಪಿ ಇನ್ನೊಬ್ಬರಿಲ್ಲ..
ಎಂದು ಶೋಕಿಸುತ್ತಾನೆ.
ಅದಕ್ಕೆ ನಾರದರು ಹೇಳುತ್ತಾರೆ.
ರಾಜನೇ! ಶೋಕವನ್ನು ಬಿಡು.
ತಂದೆಯಾದ ನೀನು ಆ ಮಗುವಿನ ರಕ್ಷಣೆ ಮಾಡದೇ ನೂಕಿದರು,
ಜಗತ್ತಿನ ತಂದೆಯಾದ ಆ ಜಗನ್ನಾಥ ನಿನ್ನ ಮಗುವನ್ನು ತನ್ನ ಮಗನೆಂದು ರಕ್ಷಣೆ ಮಾಡುತ್ತಾ ಇರುವನು.
ಅವನ ಮಹಿಮೆಯನ್ನು ನೀನು ತಿಳಿದಿಲ್ಲ. ಅವನ ಯಶಸ್ಸು ಈ ಜಗವನ್ನು ಬೆಳಗುವದು.ಇತರರಿಗೆ ಅಸಾಧ್ಯ ವಾದ ತಪಸ್ಸನ್ನು ಮಾಡಿ ಆ ಶ್ರೀ ಹರಿಯ ಅನುಗ್ರಹದಿಂದ ಉನ್ನತವಾದ ಪದವಿಯನ್ನು ಪಡೆದುಕೊಂಡು ನಿನ್ನ ಮಗನಾದ  ಧ್ರುವನು ಶೀಘ್ರದಲ್ಲೇ ಬರುವನು.ಅವನ ಸ್ವಾಗತಕ್ಕಾಗಿ ಸಿದ್ದನಾಗು.
ಅಂತಹ ಮಗನನ್ನು ಪಡೆದ ನಿನ್ನ ಕುಲ ಉದ್ದಾರವಾಯಿತು ಎಂದು ಹೇಳಿ ಅಲ್ಲಿಂದ ಹೊರಟರು.
ಇತ್ತ ಉತ್ತಾನಪಾದ ಮಗನ ಬರುವಿಕೆಯ ಹಾದಿಯನ್ನು ನೋಡುತ್ತಾ ಪುತ್ರ ಚಿಂತೆಯಿಂದ ರಾಜಭೋಗಗಳಲ್ಲಿ ಆಸಕ್ತಿ ತೋರದೇ ಆ ದೇವದೇವನ ಸ್ಮರಣೆ ಮಾಡುತ್ತಾ ಇದ್ದಾನೆ.

ಇತ್ತ ಧ್ರುವನು ನಾರದರ ಉಪದೇಶದಂತೆ ಭಗವಂತನ ಧ್ಯಾನದಲ್ಲಿ ನಿರತನಾಗಿದ್ದಾನೆ.
 ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ
|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
*******

||ಪಿಬತ ಭಾಗವತಂ ರಸಮಾಲಯಂ||
Day 54
ನಾರದರ ಮಾತಿನಂತೆ ಧ್ರುವರಾಯನು ಮಧುವನಕ್ಕೆ ಹೊರಟು ತ್ರಿಕಾಲ ಸ್ನಾನ ಮಾಡುತ್ತಾ ಕುಶಾಸನದ ಮೇಲೆ ಕುಳಿತು ಪ್ರಾಣಾಯಾಮ ದಿಂದ ಧ್ಯಾನ ವನ್ನು ಮಾಡುತ್ತಾ,ಇಂದ್ರಿಯಗಳ ನ್ನು ನಿಗ್ರಹಿಸಿ,ಮನಸ್ಸನ್ನು ಧೃಡಮಾಡಿ,ಶ್ರೀ ಹರಿಯ ಪಾದ ಪದ್ಮಗಳನ್ನು ಚಿಂತಿಸುತ್ತಾ 
ಹಾರ,ಪದಕ, ಕಿರೀಟ, ಕೇಯೂರ, ಮುಂತಾದ ಆಭರಣಗಳಿಂದ ಅಲಂಕೃತ ನಾಗಿರುವ ಆ ಶ್ರೀ ಹರಿಯನ್ನು ಧ್ಯಾನಿಸುತ್ತಾ ತನಗೆ ನಾರದರು ಉಪದೇಶವನ್ನು ಮಾಡಿದ ವಾಸುದೇವ ಮಂತ್ರವನ್ನು ಜಪಿಸುತ್ತಾ,ಅವನ ಮಹಿಮೆಯನ್ನು ರೂಪವನ್ನು ಚಿಂತಿಸುತ್ತಾ ತಪಸ್ಸು ಆಚರಣೆ ಮಾಡಲು ಆರಂಭಿಸಿದನು.
ನಾರದರ ಮಾತಿನಂತೆ ಶ್ರೀ ಹರಿಯ ಅರ್ಚನೆಯನ್ನು ಮಾಡುತ್ತಾ*
 ಮೊದಲನೆಯ ತಿಂಗಳಲ್ಲಿ ಮೂರು ದಿನಗಳಿಗೆ ಒಮ್ಮೆ ಕಪಿತ್ಥ ಬದರೀ ಫಲವನ್ನು ಭಕ್ಷಣೆ ಮಾಡುತ್ತಾ ಇದ್ದಾರೆ.
ಆದರು ಭಗವಂತನ ದರುಶನ ವಾಗಲಿಲ್ಲ.ಅಂದರೆ ತಿಂಗಳಲ್ಲಿ ಬರಿಯ ಹತ್ತು ದಿನ  ಮಾತ್ರ ಫಲ ಸೇವನೆ.

ಎರಡನೇಯ ತಿಂಗಳಲ್ಲಿ ಆರು ದಿನಕ್ಕೆ ಒಂದು ಬಾರಿ ಕೆಳಗಡೆ ಬಿದ್ದ ಹುಲ್ಲು, ಸೊಪ್ಪು ತಿಂದು ತಪಸ್ಸು ಆಚರಣೆ ಮಾಡಿದ್ದಾನೆ.
ಈ ಸಾರಿ ಫಲ ಭಕ್ಷಣೆ ಇಲ್ಲ.
(ಬರಿಯ ಏಳು ದಿನ ಮಾತ್ರ)
ಆದರು ಭಗವಂತನ ಸಾಕ್ಷಾತ್ಕಾರ ಆಗಲಿಲ್ಲ.

ಮೂರನೆಯ ತಿಂಗಳಲ್ಲಿ ಒಂಭತ್ತು ದಿನಕ್ಕೆ ಒಂದು ಬಾರಿ
ಬರಿಯ ಜಲವನ್ನು ಕುಡಿದು ತಪಸ್ಸು ಆಚರಣೆ ಮಾಡಿದ್ದಾನೆ.
ಈ ಸಾರಿ ಫಲ,ಹುಲ್ಲು, ಸೊಪ್ಪು  ಯಾವುದು ಇಲ್ಲ.
ಆದರು ಭಗವಂತನ ದರುಶನ ವಾಗಲಿಲ್ಲ.

ನಾಲ್ಕನೇ ತಿಂಗಳಲ್ಲಿ ಹನ್ನೆರಡು ದಿನಕ್ಕೆ ಒಂದು ವಾಯು ಭಕ್ಷಕನಾಗಿ ಅಂದರೆ ಬರಿಯ ಗಾಳಿ ಯನ್ನು ಕುಡಿದು ತಪಸ್ಸು ಆಚರಿಸಿ ಇದ್ದಾನೆ. ಆದರು ಶ್ರೀ ಹರಿಯ ದರುಶನ ವಾಗಲಿಲ್ಲ.

ಐದನೆಯ ತಿಂಗಳಲ್ಲಿ ಸಂಪೂರ್ಣ ಪ್ರಾಣಾಯಾಮ ಮಾಡಿ ಸ್ವಲ್ಪವು ಸಹ ಉಸಿರಾಡದಂತೆ ಒಂದು ಪಾದದ ಮೇಲೆ ನಿಂತು ಅಚಲನಾಗಿ ಸಂಪೂರ್ಣ ಗುಣಪೂರ್ಣನಾದ ಭಗವಂತನ ಧ್ಯಾನ ಮಾಡುತ್ತಾ ನಿಂತಿದ್ದಾರೆ.

ಈ ರೀತಿಯಲ್ಲಿ ಐದನೆಯ ತಿಂಗಳಿನಲ್ಲಿ
ಎಲ್ಲಾ ಸಮಸ್ತ ಲೋಕಗಳನ್ನು ತನ್ನ ಉದರದಲ್ಲಿ ಇಟ್ಟುಕೊಂಡಂತಹ,ಸರ್ವ ಲೋಕಗಳಿಗೆ ಆಧಾರನಾಗಿರತಕ್ಕಂತಹ ಭಗವಂತ ನನ್ನು ತನ್ನ ಹೃದಯ ದಲ್ಲಿ ಇಟ್ಟು ಕೊಂಡು,ಆ ಪರಮಾತ್ಮನ ವಿಶೇಷ ಸನ್ನಿಧಾನ ಇವರಲ್ಲಿ ಇರಲಾಗಿ ಧೃವರಾಯರು ತಪಸ್ಸು ಮಾಡುವಾಗ,ಭೂದೇವಿಯು ಇವರ ಭಾರವನ್ನು ಹೊರಲಿಲ್ಲವಂತೆ.

ಒಂದು ಪಾದದಿಂದ ತಪವನ್ನು ಮಾಡುತ್ತಾ ಇರುವಾಗ ಬಲಗಾಲನ್ನು ಊರಿ ಮಾಡಿದಾಗ ಭೂಮಿ ಆ ಕಡೆ ವಾಲುತ್ತಾ ಇತ್ತು.ಎಡಗಾಲನ್ನು ಊರಿ ತಪಸ್ಸು ಮಾಡುವಾಗ ಸಂಪೂರ್ಣ ಭೂಮಿ ಎಡಗಡೆ ವಾಲುತ್ತಾ ಇತ್ತಂತೆ.

ಎಲ್ಲಾ ದೇವತೆಗಳು ಇವರಿಗೆ ಪರೀಕ್ಷೆ ಮಾಡಲೋಸುಗ ಕ್ರೂರ ಪ್ರಾಣಿಗಳ, ಪ್ರೇತ ಪಿಶಾದಿಗಳ ರೂಪದಲ್ಲಿ ಬಂದು ಹೆದರಿಸುತ್ತಾ ಇದ್ದಾರೆ.ಆದರು ಇವರಿಗೆ ಅದರ ಪರಿವೆಯೇ ಇಲ್ಲ.ಯಾವುದಕ್ಕೂ ಇವರು ಹೆದರಲಿಲ್ಲ.ತಪಸ್ಸು ಮಾತ್ರ ಬಿಡಲಿಲ್ಲ.

 ಭಗವಂತನ ಕುರಿತಾಗಿ ಧ್ರುವ ತಪಸ್ಸು ಮಾಡುವಾಗ ದೇವತೆಗಳು  ಈ ರೀತಿಯಲ್ಲಿ ಮಾಡಿದ್ದು ಸರಿಯೇ ಅಂತ ಯೋಚನೆ ಬರಬಹುದು.

ಅದಕ್ಕೆ ಉತ್ತರ ಇಷ್ಟೇ.
ತಾವು ವಿಘ್ನವನ್ನು ಉಂಟು ಮಾಡಿದರು ಸಹ ಧ್ರುವನು ತಪಸ್ಸು ಬಿಡಲಿಲ್ಲ ಎಂದರೆ ಅವರಿಗೆ ಕೀರ್ತಿ ಬರಲೋಸುಗವಾಗಿ ಅವರು ಮಾಡಿದ ಪರೀಕ್ಷೆ ಹೊರತಾಗಿ ಬೇರೆ ಯಾವ ಅರ್ಥ ಇಲ್ಲ.

ಈ ರೀತಿಯಲ್ಲಿ ಧ್ರುವ ರಾಯರು ಕೊನೆಯಲ್ಲಿ ಉಸಿರು ಬಿಗಿಯಾಗಿ ಹಿಡಿದು ತಪಸ್ಸು ಆಚರಣೆ ಮಾಡುವ ಸಮಯದಲ್ಲಿ ಸಕಲರಿಗು ಶ್ವಾಸೋಚ್ಚ್ವಾಸ ನಿಂತು ಹೋಗಿದೆಯಂತೆ.
ಎಲ್ಲಾ ದೇವತೆಗಳು ಪರಮಾತ್ಮನ ಬಳಿ ಹೋಗಿ ಪ್ರಾರ್ಥನೆ ಮಾಡಿದ್ದಾರೆ.  ಸ್ವಾಮಿ!ಚರಾಚರ ಪ್ರಾಣಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.ನೀನು ತಕ್ಷಣ ಹೋಗಿ ಎಲ್ಲರನ್ನೂ ಈ ಉಸಿರಾಟದ ಸಮಸ್ಯೆ ಯಿಂದ ಕಾಪಾಡು.ಧ್ರುವನಿಗೆ ಅನುಗ್ರಹ ಮಾಡು ಎಂದು ಕೇಳಿಕೊಂಡಾಗ
ಅದಕ್ಕೆ ಭಗವಂತ ಹೇಳುತ್ತಾನೆ.
ದೇವತೆಗಳೇ! ಭಯಪಡಬೇಡಿ.ಉತ್ತಾನಪಾದನ ಪುತ್ರನು ನನ್ನಲ್ಲಿ ವಿಶೇಷವಾಗಿ ಆಸಕ್ತಿಯನ್ನು ಇಟ್ಟು,ಭಕ್ತಿ ಯನ್ನು ಇಟ್ಟು ತಪಸ್ಸನ್ನು ಮಾಡುತ್ತಾ ಇರುವದರಿಂದ ಪ್ರಾಣ ನಿರೋಧ ಮಾಡಿದದುರಿಂದ ಎಲ್ಲರಿಗು ಶ್ವಾಸೋಶ್ವಾಸ ನಿಂತು ಹೋಗಿದೆ.ನಾನೇ ಹೋಗಿ ಆ ಐದು ವರುಷದ ಬಾಲಕನಾದ ಧ್ರುವನಿಗೆ ಅನುಗ್ರಹ ಮಾಡಿ ಈ ಘೋರವಾದ ತಪಸ್ಸು ಇಂದ ನಿವೃತ್ತಿ ಯಾಗುವಂತೆ ಪ್ರತ್ಯಕ್ಷವಾಗಿ ಅವನಿಗೆ ಏನು ವರಬೇಕು ಆ ವರವನ್ನು ಕೊಡುತ್ತೇನೆ ಅವನ ತಪಸ್ಸು ನಿಲ್ಲಿಸುತ್ತೇನೆ ಎಂದು ಹೇಳಿ ಅವರನ್ನು ಕಳುಹಿಸುವ.
ಐದು ತಿಂಗಳ ಕಠಿಣ ತಪಸ್ಸು ಮುಗಿದಿದೆ.

ತಕ್ಷಣ  ಭಗವಂತನು ತನ್ನ ಭಕ್ತನಾದ ಧ್ರುವನ ರಕ್ಷಣಾ ಮತ್ತು ಅನುಗ್ರಹ ಮಾಡಲೋಸ್ಕರವಾಗಿ ಆತುರದಿಂದ ಗರುಡಾರೂಢನಾಗಿ,ಶಂಖ,ಚಕ್ರ ಗದಾ,ಪದ್ಮಧಾರಿಯಾಗಿ ಮಧುವನದ ಕಡೆ ಪಯಣ ಬೆಳೆಸಿದ್ದಾನೆ.
 ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ
|ಏಳಿರೋ ವೈಕುಂಠಕೆ|
ಒಂದು ಏಕಾದಶಿ ಮಾಡಲು ಕಷ್ಟ ಪಡುವ ನಾವು ಧ್ರುವ ರಾಯರನ್ನು ನೋಡಿ ಕಲಿಯಬೇಕು.
🙏ಶ್ರೀ ಕಪಿಲಾಯ ನಮಃ🙏
*******


||ಪಿಬತ ಭಾಗವತಂ ರಸಮಾಲಯಂ||
ಹರಿದಿನದ ನಮಸ್ಕಾರ🙏 ಗಳು ತಮಗೆಲ್ಲಾ🙇‍♂️
Day 55
✍️ಶುಕಮುನಿಗಳು ಪರಿಕ್ಷೀತರಾಜ ನಿಗೆ ಹೇಳುತ್ತಾರೆ.
ರಾಜನ್! ಕೇಳು ಧ್ರುವ ರಾಯನ ಕಠಿಣ ತಪಸ್ಸಿಗೆ ಮೆಚ್ಚಿ ಭಗವಂತನು ಗರುಡಾರೂಢನಾಗಿ ಮಧುವನಕ್ಕೆಬರುತ್ತಾನೆ.
ಚತುರ್ಭುಜ ಧಾರಿಯಾಗಿ ಶಂಖ ಚಕ್ರ ಗದಾ ಪದ್ಮ ಧಾರಿಯಾಗಿ ಕಿರೀಟಕುಂಡಲಗಳಿಂದ,ಸರ್ವಾಭರಣಗಳಿಂದ ಅಲಂಕೃತ ನಾಗಿ ,ಪೀತಾಂಭರದಾರಿ ಯಾಗಿ ಧೃವರಾಜರ ಎದುರಿಗೆ ಬಂದು ನಿಂತಿದ್ದಾನೆ.
ಆದರು ಧ್ರುವರಾಯ ಕಣ್ಣು ತೆರೆಯಲಿಲ್ಲ.ಇಂತಹ‌ ಭವ್ಯವಾದ ಭಗವಂತನ ರೂಪ ಅವನ ಎದುರಿಗೆ ಬಂದು ನಿಂತಿದ್ದರು ಬಾಲಕ ಕಣ್ಣು ತೆರೆದು ನೋಡುತ್ತಾ ಇಲ್ಲ ಪರಮಾತ್ಮನು ಬಂದು  ನಿಂತು ಬಹಳ ಹೊತ್ತಾಯಿತು.
ಇನ್ನೂ ಕಣ್ಣು ಮುಚ್ಚಿ ಕೊಂಡು ಧ್ರುವ ರಾಯ ತಪಸ್ಸು ಮಾಡುತ್ತಾ ಇದ್ದಾರೆ.
ಅವಾಗ ಧೃವರಾಜರು ಏನು ಮಾಡುತ್ತಾ ಇದ್ದರು ಅಂದರೆ ತಮ್ಮ ಹೃದಯದ ಒಳಗಡೆ ಒಂದು ಪರಮಾತ್ಮನ ಪ್ರತಿಮೆ ಯನ್ನು ಮಾಡಿಕೊಂಡು ಅದರಲ್ಲಿ ಪರಮಾತ್ಮನು ಸನ್ನಿಹಿತ ನಾಗಿದ್ದಾನೆ ಎಂದು ಧ್ಯಾನ ಮಾಡುತ್ತಾ ಇದ್ದರಂತೆ.ಒಳಗಡೆ ಭಗವಂತನ ರೂಪ ಅವರಿಗೆ ಕಾಣಿಸುತ್ತಾ ಇದೆ. ತಕ್ಷಣ ಪರಮಾತ್ಮನು ವಿಚಾರ ಮಾಡಿದ್ದಾರೆ. ಪರಮಾತ್ಮನು ಆ ರೂಪವನ್ನು ತಿರೋಹಿತ(ಅದೃಶ್ಯ) ಮಾಡಿದ್ದಾನೆ.ಪರಮಾತ್ಮನ ರೂಪ ಅದೃಶ್ಯ ವಾದ ಕೂಡಲೆ ಧೃವರಾಜರು ಕಣ್ಣು ತೆರೆದು ನೋಡುತ್ತಾರೆ. 
ಆಗ ಅದೇ
ತರಹದ ಭಗವಂತನ ರೂಪ ಕಣ್ಣಿನ ಎದುರಿಗೆ ಬಂದು ನಿಂತಿದ್ದು ಕಾಣಿಸುತ್ತದೆ. ಬಹಳ ಸಂತೋಷ ವಾಗಿದೆ.ಜೊತೆಗೆ ಗಲಿಬಿಲಿ ಉಂಟಾಗುತ್ತದೆ. 
ಇಂತಹ ಭವ್ಯವಾದ ರೂಪವನ್ನು ನೋಡಿ,ಸಾಷ್ಟಾಂಗ ಪ್ರಣಾಮವನ್ನು ಮಾಡಿ ಎದ್ದು ನಿಂತು ಏನೋ ಹೇಳಬೇಕು ಎಂದು ಪ್ರಯತ್ನ ಮಾಡಿದ್ದಾನೆ. 
ಬಾಯಲ್ಲಿ ಮಾತು ಬರುತ್ತಾ ಇಲ್ಲ.ಬರಿ ತುಟಿ ಮಾತ್ರ ಅಲುಗಾಡುತ್ತಾ ಇದೆ.
ಕೈ ಜೋಡಿಸಿ ನಿಂತ ಪುಟ್ಟ ಬಾಲಕನ ಪರಿಸ್ಥಿತಿ ನೋಡಿ ಭಗವಂತ ತನ್ನ ಶಂಖದಿಂದ ಅವನ‌ಕೆನ್ನೆಗೆ ಸ್ಪರ್ಶವನ್ನು ಮಾಡಿದ್ದಾನೆ.
ಕೂಡಲೇ ಸಂದರ್ಭ ಉಚಿತವಾದ ಮಾತು ಹೊರಟಿತಂತೆ.ಧೃವರಾಜರ ಬಾಯಿಯಿಂದ.
"ಹೇ !ಪರಮಾತ್ಮನೇ ಎಂದು ನೋಡದೇ ಇರತಕ್ಕಂತಹ ಅಭೂತಪೂರ್ವ ವಾದ ಈ ರೂಪವನ್ನು ನೋಡಿದ ಕೂಡಲೇ ನನ್ನ ಮನಸ್ಸು ಸಂತಸ ಉಂಟಾಗಿ ನನಗೆ ಮಾತೇ ನಿಂತು ಹೋಗಿತ್ತು. ಮೌನವಾಗಿತ್ತು.ಅಂತಹ ಸಮಯದಲ್ಲಿ ನೀನು ನನ್ನ ಒಳಗಡೆ ಪ್ರವೇಶ ಮಾಡಿ ನನ್ನ ವಾಗಿಂದ್ರಿಯಾಭಿಮಾನಿ ದೇವತೆಯನ್ನು ಪ್ರೇರಣೆ ಮಾಡಿದೆ.ಆದ್ದರಿಂದ ನನ್ನ ಬಾಯಿಯಿಂದ ಮಾತು ಹೊರಟಿತು.
ಇದೊಂದು ನಿದರ್ಶನ ಮಾತ್ರ.
 ವಾಗಿಂದ್ರಿಯ ಮಾತ್ರವಲ್ಲದೆ ಕೈ,ಕಾಲು,ಶ್ರವಣೇಂದ್ರಿಯ,ಚಕ್ಷುರಿಂದ್ರಿಯ,ಮತ್ತು ಯಾವ ಇಂದ್ರಿಯಗಳು ಏನು ಪ್ರೇರಣೆ ಮಾಡಬೇಕು ಎಂಬುದು ನಿನ್ನ ಪ್ರೇರಣೆ ಇಂದ ಆಗಬೇಕು. ಅದು ನನಗೆ ಅರ್ಥ ವಾಯಿತು. 
ಹೀಗೆ ಸರ್ವ ಇಂದ್ರಿಯಗಳು, ಸರ್ವ ದೇವತೆಗಳಿಗು ನಿಯಾಮಕ ಮತ್ತು ಪ್ರೇರಕನಾದ ನಿನಗೆ ನಮಸ್ಕಾರ" ಎಂದು ಹೇಳಿ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ..
ಯಾಕೆ ಭಗವಂತ ಶಂಖುವಿನಿಂದ ಸ್ಪರ್ಶವನ್ನು ಮಾಡಿದ ಅಂದರೆ
ವಾಗೀಂದ್ರಿಯಕ್ಕೆ ಅಭಿಮಾನಿ ದೇವತೆ ಅಗ್ನಿ. ಅಗ್ನಿ ದೇವರು ಆ ಸಮಯದಲ್ಲಿ ಸ್ತಬ್ಧ ರಾಗಿದ್ದರು.
ಪರಮಾತ್ಮನ ಶಂಖ ಸ್ಪರ್ಶದಿಂದ ಅವರಿಗೆ ಎಚ್ಚರಿಕೆ ಆಗಿದೆ.
(ಇದಕ್ಕೆ  ಲೌಕಿಕದ ಉದಾಹರಣೆ
  ಕುಳಿತಲ್ಲಿ ತೂಕಡಿಸಿ ನಿದ್ದೆ ಮಾಡುವರ ಮೇಲೆ ನೀರನ್ನು ಪ್ರೋಕ್ಷಣೆ ಮಾಡಿದರೆ ಹೇಗೆ ಎಚ್ಚರಿಕೆ ಗೊಳ್ಳುವರು)
ಶಂಖುವಿನಲ್ಲಿ ಸಕಲ ತೀರ್ಥ ಗಳ ಸನ್ನಿಧಾನ ಇದೆ. ಎಲ್ಲಾ ತೀರ್ಥೊದಕದಿಂದ ಚುಮುಕಿಸಿದಂತೆ ಅಗ್ನಿ ದೇವರಿಗೆ ಆಗಿದೆ.ವಾಗೀಂದ್ರೀಯವನ್ನು ಪ್ರೇರಣೆ ಮಾಡಿ ಭಗವಂತನ ಸ್ತೋತ್ರ ಮಾಡಿದ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಗಜ ,ಧ್ರುವ ,ಬಲಿ, ಪಾಂಚಾಲಿ, ವರದನೆಂಬ|
ನಿಜವಾದ ಬಿರುದುಳ್ಳ ವಿಜಯವಿಠ್ಠಲ ರೇಯಾ||🙏🙏
********

||ಪಿಬತ ಭಾಗವತಂ ರಸಮಾಲಯಂ||
Day56
ಶುಕಮುನಿಗಳು ಪರಿಕ್ಷೀತ ರಾಜನಿಗೆ ಹೇಳುತ್ತಾರೆ.
ರಾಜನ್! ಕೇಳು.
ಯಾವಾಗ ಪರಮಾತ್ಮನು ತನ್ನ ಶಂಖ ದಿಂದ ಬಾಲಕನಾದ ಧ್ರುವ ರಾಯನ ಕೆನ್ನೆಯನ್ನು ಸ್ಪರ್ಶವನ್ನು ಮಾಡಿದನೋ..
ತಕ್ಷಣ ಧ್ರುವ ರಾಯರು ಭಗವಂತನ ವರ್ಣನೆ ಮಾಡಲು
ಆರಂಭಿಸಿದರು.
ಸಕಲ ಇಂದ್ರಿಯಗಳಿಗೆ ನಿಯಾಮಕ ಮತ್ತು ಪ್ರೇರಕನಾದ, ಹೇ ನಾರಾಯಣ ನಿನಗೆ ನಮಸ್ಕಾರ. 
ನಿನ್ನ ಉದರದಲ್ಲಿ ಇದ್ದ ಜೀವರನ್ನು ಸಾಧನೆ ಮಾಡಿಸಲೋಸುಗ ಈ ಜಗತ್ತಿಗೆ ತಂದು,ಅವರನ್ನು ಸೃಷ್ಟಿ ಮಾಡಿ,ಅವರ ದೇಹದಲ್ಲಿ ನಿಂತು ಸಕಲ ಕರ್ಮಫಲ ಅನುಸಾರವಾಗಿ ಸಾಧನೆ ಯನ್ನು ಮಾಡಿಸುವ ನಿನ್ನ ಕಾರುಣ್ಯಕ್ಕೆ ಏನೆಂದು ಹೇಳಲಿ.
ನಿನ್ನ ನಂಬಿದವನಿಗೆ ಜ್ಞಾನ ಕೊಡುವೆ.
ಕೆಲವೊಮ್ಮೆ ಜೀವಿಗಳು ನಿನ್ನ ಮಾಯೆಗೆ ಸಿಲುಕಿ ಸಂಸಾರ ಸುಖವನ್ನು ಅಪೇಕ್ಷಿತ ಮಾಡುತ್ತಾ ಸಂಸಾರ ಬಂಧನ ತಾರಕನಾದ ನಿನ್ನನ್ನು ಮರೆತು ಭವದೊಳಗೆ ಬಳಲುವರು.ಇನ್ನೂ ಕೆಲವೊಂದು ಜೀವರು ನಿನ್ನ ಪೂಜೆ ಯನ್ನು ಮಾಡುತ್ತಾ ಅಶಾಶ್ವತ ವಾದ ಲೌಕಿಕದ ಕಾಮನೆಯನ್ನು ಬೇಡುವರು.
ನಿನ್ನ ಭಕುತರು ಮಾತ್ರ ನಿನ್ನ ಹೊರೆತು ಏನನ್ನು ಅವರು ಅಪೇಕ್ಷಿತ ಪಡರು.
ಅವರಿಗೆ ಬೇಕಾಗಿದ್ದು ನಿನ್ನ ಕಥಾ ಶ್ರವಣ,ನಿನ್ನಲ್ಲಿ ಭಕ್ತಿ, ನಿನ್ನ ಪಾದ ಸೇವೆ.ಇಂತಹವರಿಗೆ ಲೌಕಿಕದ ಯಾವುದೇ ಇಚ್ಛೆ ಇರುವುದಿಲ್ಲ. ಲೌಕಿಕದ ಇಚ್ಛೆ ಇದ್ದವರಿಗೆ ಇವು ಮನಸ್ಸಿನ ಒಳಗಡೆ ಬರುವುದಿಲ್ಲ.
ನಾನು ನಿನ್ನಲ್ಲಿ ಕೇಳುವದು ಇದನ್ನು ಮಾತ್ರ.
ನಿನ್ನಲ್ಲಿ ನನಗೆ ಭಕ್ತಿ ಪ್ರವಾಹವು ನಿರಂತರವಾಗಿ ಇರಲಿ.ನಿರ್ಮಲ ಮನಸ್ಕ ರಾದ ,ಸದಾ ಹರಿಕಥಾ ಶ್ರವಣಾಸಕ್ತರಾದ ನಿನ್ನ ಭಕ್ತರ ಸಂಗ ಎನಗಾಗಲಿ.
ನಿನ್ನ ಮಹಿಮೆಯನ್ನು ರಮಾದೇವಿ ಮೊದಲು ಗೊಂಡು ಯಾರು ಅರಿಯಲು ಸಾಧ್ಯವಿಲ್ಲ.ಇನ್ನೂ ನಮ್ಮಂತಹವರ ಪಾಡೇನು?ನಿನ್ನ ಕಾರುಣ್ಯಕ್ಕೇನೆಂಬೆ??ಹೊಸದಾಗಿ ಪ್ರಸವಿಸಿದ ಹಸು ತನ್ನ ಕರುವನ್ನು ಸದಾ
 ಬಿಡದೇ ಇರುವಂತೆ ಸದಾ ಕಾಲ ನಿನ್ನ ಭಕ್ತರನ್ನು ಕಾಪಾಡುವ ನಿನ್ನ ದಯೆಯನ್ನು ಎಷ್ಟು ನಾನು ಪೊಗಳಲು ಸಾಧ್ಯ??
ನಿನ್ನ ಪಾದ ಪದ್ಮ ಧ್ಯಾನದಿಂದ,ನಿನ್ನ ಕಥಾ ಶ್ರವಣ ದಿಂದ ಏನು ಸಂತೋಷ ಉಂಟಾಗುತ್ತದೆ ಆ ಸಂತೋಷ ನಿರಂತರವಾಗಿ ಇರಲಿ.
ಶ್ರೀ ಹರಿಯೇ ನಮೋ ನಮಃ.🙏🙏
ನಿರ್ಮಲವಾದ ಮನಸ್ಸು ನಿಂದ,ಭಕ್ತಿ ಇಂದ ತನ್ನ ಸ್ತೋತ್ರ ಮಾಡಿದ ರಾಜಸುತನ ಮಾತನ್ನು ಕೇಳಿ ಪರಮ ಸಂತೋಷದಿಂದ ಭಕ್ತವತ್ಸಲನಾದ ಪರಮಾತ್ಮನು ಹೀಗೆಂದು ನುಡಿದನು.
"ರಾಜಬಾಲಕ!ನಿನ್ನ ಅಪೇಕ್ಷೆ ಏನಿದೆ ನನಗೆ ತಿಳಿದಿದೆ.ಏತಕ್ಕೆ ತಪಸ್ಸಿಗೆ ಬಂದಿದ್ದೀಯಾ!!ಎಲ್ಲವನ್ನೂ ನಾನು ಬಲ್ಲೆ.ನೀನು ಕೇಳಿದ ಭಕ್ತಿಯನ್ನು ಕೊಡುತ್ತೇನೆ. ಮೇಲಾಗಿ ಅಪ್ಪನ ತೊಡೆಯ ಮೇಲೆ ‌ಕುಳಿತುಕೊಳ್ಳುವದಕ್ಕೆ ಸ್ಥಾನ ಸಿಗಲಿಲ್ಲವೆಂದು ಅಪಮಾನಿತನಾಗಿ ನೀನು ಬಂದಿದ್ದೀಯಾ.ನಿನಗೆ ನಿನ್ನ ಅಪ್ಪನ ತೊಡೆಯ ಮೇಲೆ ಕೂಡುವ ಭಾಗ್ಯ ಅಷ್ಟೇ ಅಲ್ಲದೇ ಮೂವತ್ತಾರು ಸಾವಿರ ವರುಷದವರೆಗೆ ಸಿಂಹಾಸನದ ಅಧಿಪತ್ಯ ನಿನಗೆ ದೊರೆಯುತ್ತದೆ.ಯಾರಿಗೆ ಸಹ ಸಿಗದಂತಹ ಧ್ರುವ ಪದವಿಯನ್ನು ನಿನಗೆ ಕೊಟ್ಟಿರುವೆನು.ಗ್ರಹಗಳು,ನಕ್ಷತ್ರ, ತಾರೆಗಳು ಅದನ್ನು ಪ್ರದಕ್ಷಿಣೆ ಮಾಡುತ್ತಾ ಇರುತ್ತವೆ. ಅಂತಹ ಪ್ರಕಾಶಮಾನವಾದ ಧ್ರುವ ಲೋಕ ಅಧಿಪತ್ಯ ಸುಲಭವೇನಲ್ಲ.ಎಲ್ಲಾ ಸಪ್ತರ್ಷಿಗಳು,ಜ್ಯೋತಿ ಗ್ರಹ ಮಂಡಲ ಗಳಿಗೆ ಆಧಾರನಾದ ಶಿಂಶುಮಾರ ರೂಪಿ ಪರಮಾತ್ಮನ ಬಾಲದ ಅಗ್ರ ನ ಸ್ಥಾನ ನಿನಗೆ ಸಿಗುತ್ತದೆ. ಆ ಶಿಂಶುಮಾರ ಲೋಕದಲ್ಲಿ ಧೃವ ಮಂಡಲದ ಅಧಿಪತ್ಯ ಪಡೆದು ಕೊನೆಯಲ್ಲಿ ನೀನು ಶಾಶ್ವತ ವಾದ ಮೋಕ್ಷ ವನ್ನು ಪಡೆಯುತ್ತೀಯಾ ಎಂದು ಭಗವಂತ ಅನುಗ್ರಹ ಮಾಡಿದ್ದಾನೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಅ.ವಿಜಯ ವಿಠ್ಠಲ🙏
********

ಪಿಬತ ಭಾಗವತಂ ರಸಮಾಲಯಂ||
Day57
ಶುಕಮುನಿಗಳು ಪರಿಕ್ಷೀತ ರಾಜನಿಗೆ ಹೇಳುತ್ತಾರೆ.
ರಾಜನ್! ಕೇಳು.
ಯಾವಾಗ ಪರಮಾತ್ಮನು ತನ್ನ ಶಂಖ ದಿಂದ ಬಾಲಕನಾದ ಧ್ರುವ ರಾಯನ ಕೆನ್ನೆಯನ್ನು ಸ್ಪರ್ಶವನ್ನು ಮಾಡಿದನೋ..
ತಕ್ಷಣ ಧ್ರುವ ರಾಯರು ಭಗವಂತನ ವರ್ಣನೆ ಮಾಡಲು
ಆರಂಭಿಸಿದರು.
ಸಕಲ ಇಂದ್ರಿಯಗಳಿಗೆ ನಿಯಾಮಕ ಮತ್ತು ಪ್ರೇರಕನಾದ, ಹೇ ನಾರಾಯಣ ನಿನಗೆ ನಮಸ್ಕಾರ. 
ನಿನ್ನ ಉದರದಲ್ಲಿ ಇದ್ದ ಜೀವರನ್ನು ಸಾಧನೆ ಮಾಡಿಸಲೋಸುಗ ಈ ಜಗತ್ತಿಗೆ ತಂದು,ಅವರನ್ನು ಸೃಷ್ಟಿ ಮಾಡಿ,ಅವರ ದೇಹದಲ್ಲಿ ನಿಂತು ಸಕಲ ಕರ್ಮಫಲ ಅನುಸಾರವಾಗಿ ಸಾಧನೆ ಯನ್ನು ಮಾಡಿಸುವ ನಿನ್ನ ಕಾರುಣ್ಯಕ್ಕೆ ಏನೆಂದು ಹೇಳಲಿ.
ನಿನ್ನ ನಂಬಿದವನಿಗೆ ಜ್ಞಾನ ಕೊಡುವೆ.
ಕೆಲವೊಮ್ಮೆ ಜೀವಿಗಳು ನಿನ್ನ ಮಾಯೆಗೆ ಸಿಲುಕಿ ಸಂಸಾರ ಸುಖವನ್ನು ಅಪೇಕ್ಷಿತ ಮಾಡುತ್ತಾ ಸಂಸಾರ ಬಂಧನ ತಾರಕನಾದ ನಿನ್ನನ್ನು ಮರೆತು ಭವದೊಳಗೆ ಬಳಲುವರು.ಇನ್ನೂ ಕೆಲವೊಂದು ಜೀವರು ನಿನ್ನ ಪೂಜೆ ಯನ್ನು ಮಾಡುತ್ತಾ ಅಶಾಶ್ವತ ವಾದ ಲೌಕಿಕದ ಕಾಮನೆಯನ್ನು ಬೇಡುವರು.
ನಿನ್ನ ಭಕುತರು ಮಾತ್ರ ನಿನ್ನ ಹೊರೆತು ಏನನ್ನು ಅವರು ಅಪೇಕ್ಷಿತ ಪಡರು.
ಅವರಿಗೆ ಬೇಕಾಗಿದ್ದು ನಿನ್ನ ಕಥಾ ಶ್ರವಣ,ನಿನ್ನಲ್ಲಿ ಭಕ್ತಿ, ನಿನ್ನ ಪಾದ ಸೇವೆ.ಇಂತಹವರಿಗೆ ಲೌಕಿಕದ ಯಾವುದೇ ಇಚ್ಛೆ ಇರುವುದಿಲ್ಲ. ಲೌಕಿಕದ ಇಚ್ಛೆ ಇದ್ದವರಿಗೆ ಇವು ಮನಸ್ಸಿನ ಒಳಗಡೆ ಬರುವುದಿಲ್ಲ.
ನಾನು ನಿನ್ನಲ್ಲಿ ಕೇಳುವದು ಇದನ್ನು ಮಾತ್ರ.
ನಿನ್ನಲ್ಲಿ ನನಗೆ ಭಕ್ತಿ ಪ್ರವಾಹವು ನಿರಂತರವಾಗಿ ಇರಲಿ.ನಿರ್ಮಲ ಮನಸ್ಕ ರಾದ ,ಸದಾ ಹರಿಕಥಾ ಶ್ರವಣಾಸಕ್ತರಾದ ನಿನ್ನ ಭಕ್ತರ ಸಂಗ ಎನಗಾಗಲಿ.
ನಿನ್ನ ಮಹಿಮೆಯನ್ನು ರಮಾದೇವಿ ಮೊದಲು ಗೊಂಡು ಯಾರು ಅರಿಯಲು ಸಾಧ್ಯವಿಲ್ಲ.ಇನ್ನೂ ನಮ್ಮಂತಹವರ ಪಾಡೇನು?ನಿನ್ನ ಕಾರುಣ್ಯಕ್ಕೇನೆಂಬೆ??ಹೊಸದಾಗಿ ಪ್ರಸವಿಸಿದ ಹಸು ತನ್ನ ಕರುವನ್ನು ಸದಾ
 ಬಿಡದೇ ಇರುವಂತೆ ಸದಾ ಕಾಲ ನಿನ್ನ ಭಕ್ತರನ್ನು ಕಾಪಾಡುವ ನಿನ್ನ ದಯೆಯನ್ನು ಎಷ್ಟು ನಾನು ಪೊಗಳಲು ಸಾಧ್ಯ??
ನಿನ್ನ ಪಾದ ಪದ್ಮ ಧ್ಯಾನದಿಂದ,ನಿನ್ನ ಕಥಾ ಶ್ರವಣ ದಿಂದ ಏನು ಸಂತೋಷ ಉಂಟಾಗುತ್ತದೆ ಆ ಸಂತೋಷ ನಿರಂತರವಾಗಿ ಇರಲಿ.
ಶ್ರೀ ಹರಿಯೇ ನಮೋ ನಮಃ.🙏🙏
ನಿರ್ಮಲವಾದ ಮನಸ್ಸು ನಿಂದ,ಭಕ್ತಿ ಇಂದ ತನ್ನ ಸ್ತೋತ್ರ ಮಾಡಿದ ರಾಜಸುತನ ಮಾತನ್ನು ಕೇಳಿ ಪರಮ ಸಂತೋಷದಿಂದ ಭಕ್ತವತ್ಸಲನಾದ ಪರಮಾತ್ಮನು ಹೀಗೆಂದು ನುಡಿದನು.
"ರಾಜಬಾಲಕ!ನಿನ್ನ ಅಪೇಕ್ಷೆ ಏನಿದೆ ನನಗೆ ತಿಳಿದಿದೆ.ಏತಕ್ಕೆ ತಪಸ್ಸಿಗೆ ಬಂದಿದ್ದೀಯಾ!!ಎಲ್ಲವನ್ನೂ ನಾನು ಬಲ್ಲೆ.ನೀನು ಕೇಳಿದ ಭಕ್ತಿಯನ್ನು ಕೊಡುತ್ತೇನೆ. ಮೇಲಾಗಿ ಅಪ್ಪನ ತೊಡೆಯ ಮೇಲೆ ‌ಕುಳಿತುಕೊಳ್ಳುವದಕ್ಕೆ ಸ್ಥಾನ ಸಿಗಲಿಲ್ಲವೆಂದು ಅಪಮಾನಿತನಾಗಿ ನೀನು ಬಂದಿದ್ದೀಯಾ.ನಿನಗೆ ನಿನ್ನ ಅಪ್ಪನ ತೊಡೆಯ ಮೇಲೆ ಕೂಡುವ ಭಾಗ್ಯ ಅಷ್ಟೇ ಅಲ್ಲದೇ ಮೂವತ್ತಾರು ಸಾವಿರ ವರುಷದವರೆಗೆ ಸಿಂಹಾಸನದ ಅಧಿಪತ್ಯ ನಿನಗೆ ದೊರೆಯುತ್ತದೆ.ಯಾರಿಗೆ ಸಹ ಸಿಗದಂತಹ ಧ್ರುವ ಪದವಿಯನ್ನು ನಿನಗೆ ಕೊಟ್ಟಿರುವೆನು.ಗ್ರಹಗಳು,ನಕ್ಷತ್ರ, ತಾರೆಗಳು ಅದನ್ನು ಪ್ರದಕ್ಷಿಣೆ ಮಾಡುತ್ತಾ ಇರುತ್ತವೆ. ಅಂತಹ ಪ್ರಕಾಶಮಾನವಾದ ಧ್ರುವ ಲೋಕ ಅಧಿಪತ್ಯ ಸುಲಭವೇನಲ್ಲ.ಎಲ್ಲಾ ಸಪ್ತರ್ಷಿಗಳು,ಜ್ಯೋತಿ ಗ್ರಹ ಮಂಡಲ ಗಳಿಗೆ ಆಧಾರನಾದ ಶಿಂಶುಮಾರ ರೂಪಿ ಪರಮಾತ್ಮನ ಬಾಲದ ಅಗ್ರ ನ ಸ್ಥಾನ ನಿನಗೆ ಸಿಗುತ್ತದೆ. ಆ ಶಿಂಶುಮಾರ ಲೋಕದಲ್ಲಿ ಧೃವ ಮಂಡಲದ ಅಧಿಪತ್ಯ ಪಡೆದು ಕೊನೆಯಲ್ಲಿ ನೀನು ಶಾಶ್ವತ ವಾದ ಮೋಕ್ಷ ವನ್ನು ಪಡೆಯುತ್ತೀಯಾ ಎಂದು ಭಗವಂತ ಅನುಗ್ರಹ ಮಾಡಿದ್ದಾನೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಅ.ವಿಜಯ ವಿಠ್ಠಲ🙏

*******
ಪಿಬತ ಭಾಗವತಂ ರಸಮಾಲಯಂ||
Day58
ಮತ್ತೆ ಪರಮಾತ್ಮನು ಹೇಳುತ್ತಾನೆ.
"ಕಂದ!ನಿನಗೆ ಧ್ರುವ ಪದವಿಯನ್ನು, ಮತ್ತು ಈ ಧರೆಯ ಸಿಂಹಾಸನದ ಅಧಿಪತ್ಯ ವನ್ನು ಕೊಟ್ಟಿರುವೆನು.ನಿನ್ನ ತಂದೆ ವಾನಪ್ರಸ್ಥ ಆಶ್ರಮಕ್ಕೆ ಹೋಗುವನು.ಆ ನಂತರ ನಿನಗೆ ರಾಜ್ಯದ ಪಟ್ಟಾಭಿಷೇಕ ವಾಗುತ್ತದೆ. ಮೂವತ್ತಾರು ಸಾವಿರ ವರ್ಷಗಳ ಕಾಲ ರಾಜ್ಯವನ್ನು ಆಳು. 
ನಿನ್ನ ತಮ್ಮನಾದ ಉತ್ತಮನು ಬೇಟೆ ಆಡಲು ಹೋದಾಗ ಯಕ್ಷನ ಕೈಯಲ್ಲಿ ಸಿಕ್ಕಿ ಸಾಯುವನು.
ಮಗನ ಸಾವಿನ ನೋವು ತಾಳದೇ  ಹುಚ್ಚಿಯಾಗಿ ಅವನನ್ನು ಹುಡುಕಲು ತಾಯಿಯಾದ ಸುರುಚಿಯು ಸಹ  ಅದೇ ಕಾಡಿನಲ್ಲಿ ಹೋಗಿ ಕಾಡ್ಗಿಚ್ಚು ಗೆ ಸಿಕ್ಕಿ ಬೆಂದು ಬೂದಿ ಆಗುವಳು.
ಯಜ್ಞೇಶನಾದ ನನ್ನ ಪ್ರೀತಿಗಾಗಿ ಅನೇಕ ಯಜ್ಞ ಗಳನ್ನು ಮಾಡಿ ದಕ್ಷಿಣ ಯಿಂದ ತೃಪ್ತಿಕರ ವಾದ ವಿಪ್ರರ ಪ್ರಶಂಸೆಯನ್ನು, ಐಹಿಕ ಸುಖವನ್ನು ಪೊಂದು.
 ನೀನು ಮರಣಕಾಲದಲ್ಲಿ ನನ್ನ ವಿಶೇಷ ಸ್ಮರಣೆಯನ್ನು ಮಾಡಿ ಸಪ್ತರ್ಷಿ ಮಂಡಲದ ಮೇಲಿರುವ ನನ್ನ ಇಂದ ಸೃಷ್ಟಿಸಿದ ಈ ಧೃವ ಲೋಕಕ್ಕೆ ಬರುವೆ.
ಇಷ್ಟು ಹೇಳಿದ ಭಗವಂತನು ಧ್ರುವ ರಾಯರಿಗೆ ಅಭಯವನ್ನು ಕೊಟ್ಟು ಅವರು ನೋಡುತ್ತಾ ಇದ್ದ ಹಾಗೆ ಗರುಡಾರೂಢನಾಗಿ ಅಂತರ್ಧಾನನಾಗಿದ್ದಾನೆ.
ಇತ್ತ ಧ್ರುವ ರಾಯ ತನ್ನ ಊರಿಗೆ ಹೊರಟಿದ್ದಾರೆ.
ದಾರಿಯಲ್ಲಿ ಹೋಗುವಾಗ ವಿಚಾರ ಮಾಡುತ್ತಾರೆ.
ಶ್ರೀ ಹರಿಯ ದರುಶನ ಬಲು ವಿರಳ. ಇಂತಹ ಪರಮಾತ್ಮನ ದರುಶನ ಪಡೆದರು  ಧ್ರುವ ರಾಯರ ಮನಸ್ಸಿನ ಒಳಗಡೆ ಸ್ವಲ್ಪ ಅಸಮಾಧಾನ ವಾಗಿದೆ.
ಯಾಕೆಂದರೆ ಸವತಿ ತಾಯಿಯ ಮಾತನ್ನು ಕೇಳಿ ಮನಸ್ಸು ಬೇಸರವಾಗಿ ತಪಸ್ಸು ಮಾಡಿದಾಗ  ಕೈವಲ್ಯವನ್ನು ಕೊಡುವ ಆ  ದೇವಾದಿದೇವ ನಾದ ಕೇಶವ ಎದುರಿಗೆ ಬಂದರು  ಮುಕ್ತಿ ಯನ್ನು ಬೇಡದೆ ಸುಮ್ಮನೆ ಇದ್ದು ಬಿಟ್ಟೆನಲ್ಲ ಎಂದು.
ಎಷ್ಟೋ ಜನ ಮುನಿಗಳು ಕಠಿಣ ತಪಸ್ಸು ಮಾಡಿದರು ದೊರಕದ ಆ ಶ್ರೀಹರಿಯ ಪಾದ ಪದ್ಮಗಳು ಕೇವಲ ಆರು ತಿಂಗಳ ಒಳಗಡೆ ಕಂಡೆ.ಮುಕ್ತಿಯ ಬೇಡದೇ ಮತ್ತೆ ಲೌಕಿಕದ ಕಡೆ ಆಸಕ್ತಿಯನ್ನು ಹೊಂದುವಂತೆ ಆಯಿತಲ್ಲ.
ಮಂದಭಾಗ್ಯನಾದ ನನ್ನ ಮುಂದೆ ರಮಾಧವನು ಬಂದು ನಿಂತಾಗ  ಅವನ ಪಾದವನ್ನು ಹೊಂದದೆ,ಮುಕ್ತಿ ಯನ್ನು ಬೇಡದೇ ಹೋದೆನಲ್ಲ?ಯಾಕೀ ಅಜ್ಞಾನ ನನಗೆ ಬಂದಿತು??
ನಾರದರು ಮೊದಲೇ ಹೇಳಿದಂತೆ ಶ್ರೀ ಹರಿಯ ಮಾಯೆಗೆ ಸಿಲುಕದವರಿಲ್ಲ ಎನ್ನುವ ಮಾತು ಸತ್ಯ.
ಇದೆಲ್ಲಾ ಅವನ ಮಾಯೆ.ಅವನ‌ ಬಂಧಕ ಶಕುತಿಗೆ ಸಿಲುಕದವರಿಲ್ಲ.ಅವನು ಸ್ವತಂತ್ರ.
ಈ ಉನ್ನತವಾದ ಪದವಿಯನ್ನು ಕೇಳಿ ತಪ್ಪು ಮಾಡಿದೆ.
ಭವರೋಗ ನಿವಾರಣೆ ಮಾಡುವ ಭಗವಂತ ಎದುರಿಗೆ ಬಂದಿದ್ದರು ಮತ್ತೆ ಈ ಭವದೊಳಗೆ ಬೀಳುವ  ವರವನ್ನು ಕೇಳುವ ಬುದ್ದಿ ಯಾಕೆ ಬಂದಿತು??
ಚಕ್ರವರ್ತಿ ಬಳಿ ಭಿಕ್ಷೆ ಬೇಡುವವ ಬಂದು ಒಂದು ಬೊಗಸೆ ಅಕ್ಕಿ ಕೇಳಿದ ಹಾಗಾಗಿದೆ ನನ್ನ ಸ್ಥಿತಿ.
ಎಲ್ಲಾ ಅವನ ಇಚ್ಛೆ. ಅವನು ಸರ್ವತಂತ್ರ ಸ್ವತಂತ್ರ.

ಆಯುಸ್ಸು ಮುಗಿದವನ ಮುಂದೆ ಎಷ್ಟು ಔಷಧ ಮತ್ತು ಚಿಕಿತ್ಸೆ ಕೊಟ್ಟರು ಅವನು ಬದುಕುವನೇ??
ಅದರಂತೆ ಇವಾಗ ಪಶ್ಚಾತ್ತಾಪ ಪಟ್ಟರೇ ಏನು ಫಲ.??
ಹೀಗೆಂದು ಚಿಂತಿಸುತ್ತಾ ತನ್ನ ಅರಮನೆಯ ಕಡೆ ನಡೆದನು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಶ್ರೀ ಕೃಷ್ಣಾಯ ನಮಃ🙏*******

ಪಿಬತ ಭಾಗವತಂ ರಸಮಾಲಯಂ||
Day59
ಆರು ತಿಂಗಳ ನಂತರ ಧ್ರುವ ರಾಜರು ತಮ್ಮ ರಾಜಧಾನಿ 
 ಹಿಂತಿರುಗಿ ಬರುವಸುದ್ದಿಯನ್ನು ಕೇಳಿ ಸಂತೋಷ ಪಟ್ಟು ಉತ್ತಾನಪಾದ ಆನೆಯ ಮೇಲೆ ಕೂಡಿಸಿ ಊರು ತುಂಬಾ ಮೆರವಣಿಗೆ ಮಾಡಿದ್ದಾನೆ. ನಂತರದಲ್ಲಿ ಧೃವರಾಜರು ಅರಮನೆಗೆ ಹಿಂತಿರುಗಿ ದ್ದಾರೆ.
ಮನೆಗೆ ಹಿಂತಿರುಗಿದ ಮೇಲೆ ತಂದೆ ಮತ್ತುತಾಯಿಯಂದಿರಾದ ಸುರುಚಿ ಮತ್ತು ಸುನೀತಿ ಗೆ ನಮಸ್ಕಾರ ಮಾಡಿದ್ದಾರೆ. ಸುರುಚಿಗೆ ಜ್ಞಾನೋದಯವಾಗಿದೆ.ಹಿಂದೆ ತನ್ನ ವರ್ತನೆ ಹಾಗು ತಪ್ಪಿನ ಅರಿವಾಗಿದೆ.
ಧ್ರುವ ರಾಜನನ್ನು ಗಾಢವಾಗಿ ಆಲಿಂಗನ ಮಾಡಿಕೊಂಡು ಕಂದಾ! ಹಿಂದೆ ನಾನು ನಿನಗೆ ಎಂತಹ ಅಪಮಾನ ಮಾಡಿ ಬಿಟ್ಟಿದ್ದೆ ನಿನಗೆ.ಬಹು ಕಾಲ ಸುಖದಿಂದ ಬಾಳು.ಪರಮಾತ್ಮನ ಒಲಿಸಿಕೊಂಡು ಬಂದಿದ್ದೀಯಾ. ಭಗವಂತನು ಪ್ರಸನ್ನ ನಾದರೆ ಯಾವುದು ಅಸಾಧ್ಯ ವಲ್ಲ.ಎಲ್ಲಾ ನದಿಗಳು ಹೋಗಿ ಸಮುದ್ರವನ್ನು ಸೇರುವಂತೆ ಸಕಲ ಜನರು ಸಹ ಬಂದು‌ ನಿನ್ನ ಪಾದಕ್ಕೆ ಎರಗಲಿ ಎಂದು ಆಶೀರ್ವಾದ ಮಾಡಿದ್ದಾಳೆ.
ಮುಂದೆ ಧ್ರುವ ರಾಯರು ಪ್ರಾಪ್ತ ವಯಸ್ಸಿಗೆ ಬಂದಿದ್ದಾರೆ.ಅವರ ಒಳ್ಳೆಯ ಗುಣಗಳನ್ನು ನೋಡಿ ಉತ್ತಾನಪಾದ ರಾಜ್ಯ ವನ್ನು ಒಪ್ಪಿಸಿ,ಪಟ್ಟಾಭಿಷೇಕ ಮಾಡಿ ತಾನು ತಪಸ್ಸಿಗೆ ಕಾಡಿಗೆ ಹೋಗಿದ್ದಾರೆ.
 ಧೃವರಾಜರಿಗೆ ಶ್ರೀಹರಿ ಮತ್ತು ವಾಯುದೇವರು ತಮ್ಮ ಮಕ್ಕಳನ್ನು ಕೊಟ್ಟು ವಿವಾಹವನ್ನು ಮಾಡಿಕೊಟ್ಟಿದ್ದಾರೆ.
ಶಿಂಶುಮಾರ ರೂಪಿ ಪರಮಾತ್ಮನ ಮಗಳಾದ ಭ್ರಮಿ ಮತ್ತು ವಾಯುದೇವರ ಮಗಳಾದ ಇಳಾ ಧ್ರುವ ರಾಯರ ಪತ್ನಿಯರು.
ಇಬ್ಬರು ಸಹ ಹೆಣ್ಣು ಕೊಟ್ಟ ಮಾವಂದಿರು.
ಭ್ರಮಿಯಲ್ಲಿ ಕಲ್ಪ ಮತ್ತು ವತ್ಸರ ಎಂಬ ಇಬ್ಬರು ಮಕ್ಕಳು ಹಾಗು ಇಳಾದೇವಿಯಲ್ಲಿ ಉತ್ಕಲ ಎಂಬ ಪುತ್ರರು ಜನಿಸಿದ್ದಾರೆ.
ಸತ್ಯ ಸಂಕಲ್ಪ ನಾದ ಪರಮಾತ್ಮನ ವಾಣಿಯಂತೆ, ಮೊದಲೇ ಹೇಳಿದಂತೆ ಉತ್ತಮನು  ಬೇಟೆಗಾಗಿ ಹೋದಾಗ ಯಕ್ಷನ ಜೊತೆಯಲ್ಲಿ ಯುದ್ಧ ಮಾಡಿ ಸಾಯುತ್ತಾನೆ. ಮಗನ ಸಾವಿನ ಸುದ್ದಿ ತಿಳಿದ ಸುನೀತಿ ಹುಚ್ಚಿಯಂತೆ ಅಡವಿಗೆ ಹೋಗಿ ಮಗನನ್ನು ಕರೆದುಕೊಂಡು ಬರುತ್ತೇನೆ ಎಂದು ಹೋಗಿದ್ದಾಳೆ.ಕಾಡಿಗೆ ಹಬ್ಬಿದ ಕಾಡ್ಗಿಚ್ಚು ಅವಳನ್ನು ಸುಟ್ಟು ಹಾಕಿದೆ.
ಇತ್ತ ಈ ವಾರ್ತೆಯನ್ನು ತಿಳಿದ ಧ್ರುವ ರಾಜರು ಶೋಕ ಮತ್ತು ಕ್ರೋಧ ಪೂರಿತರಾಗಿ ಯಕ್ಷರ ಕುಲವನ್ನು ಸಂಹಾರ ಮಾಡುತ್ತೇನೆ ಎಂದು  ದಿಗ್ವಿಜಯ ರಥವನ್ನು ಏರಿ ಅಲಕಾಪುರಿಯನ್ನು ಸೇರಿದ್ದಾರೆ ಯುದ್ದ ಆರಂಭಿಸಿದರು. ಎಷ್ಟೋ ಜನ ಯಕ್ಷರು ಹತರಾಗಿದ್ದಾರೆ.
ಕೋಪದಿಂದ ಯಕ್ಷರು ಮಾಯಾ ವಿದ್ಯೆಯಿಂದ ಯುದ್ಧ ಆರಂಭಿಸಿದರು. ಎಲ್ಲಾ ಕಡೆಇಂದ ಆಯುಧಗಳು ಬರುತ್ತಾ ಇದೆ ಕ್ರೂ ರ ಪ್ರಾಣಿಗಳ ರೂಪದಲ್ಲಿ ಬಂದು ಧ್ರುವನ ಸಾರಥಿ ಯನ್ನು ಹೆದರಿಸಿ ದ್ದಾರೆ.
ಇವರ ಮಾಯಾ ವಿದ್ಯೆಗೆ ಧ್ರುವ ರಾಯರು ಕಂಗೆಟ್ಟರು.ತಕ್ಷಣ ಸಪ್ತ ಋಷಿಗಳು ಬಂದು ನಾರಾಯಣ ಅಸ್ತ್ರ  ಪ್ರಯೋಗ ಮಾಡಲು ಹೇಳಿದ್ದಾರೆ. 
ಕೊನೆಯಲ್ಲಿ ಯಕ್ಷರು ಮಾಯಾ ವಿದ್ಯೆ ಆರಂಭಿಸಲು ಅವರ ಮೇಲೆ ನಾರಾಯಣ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಆ ಅಸ್ತ್ರ ಕ್ಕೆ ಎದುರಿಸಲು ಯಾರ ಕೈಯಲ್ಲಿ ಸಾಧ್ಯ ವಾಗಲಿಲ್ಲ.
ತಕ್ಷಣ ದಲ್ಲಿ ಅಲ್ಲಿಗೆ ಸ್ವಾಯಂಭುವ ಮನುವು ಬಂದಿದ್ದಾರೆ.
ತನ್ನ ತಾತನಾದ ಸ್ವಾಯಂಭುವ ಮನುವನ್ನು ಕಂಡು ಧ್ರುವರಾಜರು ಅವರಿಗೆ ನಮಸ್ಕಾರ ಮಾಡುತ್ತಾರೆ.
ಅವಾಗ ಮನುವು
ವತ್ಸ!ಧ್ರುವ ಸಾಕಿನ್ನು .ಈ ರೋಷವನ್ನು ಬಿಡು.ನಿನ್ನ ತಮ್ಮನಾದ ಉತ್ತಮ ಒಬ್ಬ ಯಕ್ಷನ ಕೈಯಲ್ಲಿ ಸತ್ತನೆಂದು ನಿರಪರಾಧಿಯಾದ ಇಡೀ ಯಕ್ಷರ ಕುಲವನ್ನು ಸಂಹಾರ ಮಾಡಲು ಹೊರಟಿರುವೆಯಲ್ಲ.ಇದು ನ್ಯಾಯವೇ??ಸಜ್ಜನರ ವರ್ತನೆ ಮತ್ತು ಸ್ವಭಾವವೇ ಇದು??
ಕುಬೇರನ ಭಟರು ನಿನ್ನ ತಮ್ಮನನ್ನು ಕೊಂದರೆ?ಕೊಲ್ಲಲು ಅವರಾರು ಯಾರು??ಜೀವಿಗಳ ಜನನ ಮತ್ತು ಮರಣಕ್ಕೆ ಕಾರಣನಾದವ ಒಬ್ಬನೇ ಆ ಶ್ರೀಹರಿಯು.ಅವನು ಯಾವ ಕಾರ್ಯ ಮಾಡುವನೆಂಬುದು ಶ್ರೀರಮಾ ಬ್ರಹ್ಮಾದಿಗಳಿಗೆ ತಿಳಿಯದು.ಇನ್ನೂ ಇತರರು ಹೇಗೆ ತಿಳಿಯಲು ಸಾಧ್ಯ??
ಹೇಗೆ ವೃಷಭವು ತನ್ನ  ಭುಜದ ಮೇಲೆ ಬಂಡಿಯ ಸಮೇತವಾಗಿ ಸಾಮಾನುಗಳನ್ನು  ಹೊತ್ತು ಕೊಂಡು ಯಜಮಾನನು ಹೇಳಿದ ಕಡೆ ಹೋಗುವದೋ..
ಅದರಂತೆ ಶ್ರೀರಮಾ ದೇವಿಯರು ಮೊದಲು ಗೊಂಡು,ಬ್ರಹ್ಮಾದಿ,ಸಕಲ ದೇವತೆಗಳು, ಸಕಲ ಜೀವರು,ಅವರೆಲ್ಲರೂ ಸ್ವತಂತ್ರನಾದ ಆ ಶ್ರೀಹರಿಯ ಸೇವಕರಾಗಿ ಸೇವೆ ಮಾಡುತ್ತಾ ಇರುವರು.
ನೀನಾದರು ಆ ಶ್ರೀಹರಿಯ ಭಕ್ತ ಇದ್ದೀ.ಐದು ವರುಷ ಇದ್ದಾಗ ಆ ಶ್ರೀ ಹರಿಯನ್ನು ಒಲಿಸಿಕೊಂಡು ಬಂದವನು ನೀನು.ಭೂತ ದಯಾ ಪರನಾಗು.ಸರ್ವರನ್ನು ರಕ್ಷಣಾ ಮತ್ತು ಸಂಹಾರ ಮಾಡುವವ ಆ ಶ್ರೀ ಹರಿಯು ಒಬ್ಬನೇ.ಆದ್ದರಿಂದ ಯಕ್ಷ ಬರಿ ನಿಮಿತ್ತ ಮಾತ್ರನಾದವನು.ಇಂತಹ ಕೋಪಕ್ಕೆ ಕಾರಣವಾದದ್ದು ಅಹಂಕಾರ.
ಹೇಗೆ ಔಷದ ತೆಗೆದುಕೊಂಡಾಗ ಕಾಯಿಲೆ ಗುಣವಾಗುವದೋ  ಹಾಗೇ ಭಗವಂತನ ಮಹಿಮಾ ಶ್ರವಣದಿಂದ ಅವನ ಪಾದ ಸ್ಮರಣೆ, ಸೇವೆಯನ್ನು ಮಾಡಿ ಸಕಲ ಪಾಪಗಳನ್ನು ಕಳೆದುಕೊಳ್ಳಲು ಪ್ರಯತ್ನ ಮಾಡು.ಈಗ ನೀನು ಮಾಡಿದ ಕಾರ್ಯದಿಂದ ಕುಬೇರ ನಿಗು ಮತ್ತು ಅವರ  ಮಿತ್ರರಾದ ಶ್ರೀರುದ್ರ ದೇವರಿಗೆ ಸಹ ಅಪಮಾನ ಮಾಡಿದಂತಾಗಿದೆ.ಭಗವಂತನ ಭಕ್ತರಿಗೆ ಅಪಮಾನ ಮಾಡಿದರೆ ಘೋರ ಅನರ್ಥವು.ಅದರಿಂದ ಶ್ರೀಹರಿಯು ಪ್ರಸನ್ನ ನಾಗಲಾರ.
ಕುಬೇರ ನ ಬಳಿ ಹೋಗಿ ಕ್ಷಮೆ ಕೇಳಿಕೊ ಎಂದು ಹೇಳಿ ಸ್ವಾಯಂಭುವ ಮನುವು ಅಲ್ಲಿಂದ ಹೊರಟಿದ್ದಾರೆ.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಶ್ರೀ ವಾಮನಾಯ ನಮಃ🙏
**********
ಪಿಬತ ಭಾಗವತಂ ರಸಮಾಲಯಂ||
 Day 60
 ✍️ತನ್ನ ತಾತನಾದ ಸ್ವಾಯಂಭುವ ಮನುವಿನ‌ ಆಜ್ಞೆಯಂತೆ ಕುಬೇರರ ಬಳಿ ತೆರಳಿ  ಧ್ರುವ ರಾಯರು  ತಮ್ಮಿಂದ ಆದ ಅಪರಾಧಕ್ಕೆ ಕ್ಷಮೆ ಕೇಳಲು ಅದಕ್ಕೆ ಯಕ್ಷರ ರಾಜನಾದ, ಧನಾಧಿಪತಿಯಾದ ಕುಬೇರನು ಬಹಳ ಸಂತಸಪಟ್ಟು 
ಏನಾದರು ವರವನ್ನು ಕೇಳು ಎಂದು ಹೇಳುತ್ತಾರೆ.
ಅದಕ್ಕೆ ಧ್ರುವ ರಾಯರು
ಸ್ವಾಮಿ! ಧನಾಧಿಪತಿಯಾದ,ಯಕ್ಷರ ಒಡೆಯನಾದ ನಿನಗೆ ನಮಸ್ಕಾರ.
ಸಂಸಾರ ಸಾಗರವನ್ನು ದಾಟಲು ಯಾವ ಸಾಧನವು ಇಲ್ಲ.ಇರುವುದು ಒಂದೇ ಅದು ಭಗವಂತನ ನಾಮ ಸ್ಮರಣೆ.ಅದನ್ನು ಕೊಟ್ಟು ನನಗೆ ಸದಾ ನನ್ನ ಮನ ಶ್ರೀಹರಿಯಲ್ಲಿ ಸದಾ ಚಿಂತನೆ ಮಾಡುವಂತೆ ವರವನ್ನು ಕೊಡಬೇಕೆಂದು ಕೇಳಿಕೊಂಡಾಗ
ತಥಾಸ್ತು! ಎಂದು ಹೇಳಿ ಅಲ್ಲಿಂದ ಧನಾಧಿಪತಿಯು ಅಂತರ್ಧಾನವಾಗಿದ್ದಾರೆ.
ಇತ್ತ ಧ್ರುವ ರಾಯರು ತನ್ನ ಪುರವನ್ನು ಸೇರಿ ಅನೇಕ ಯಜ್ಞ ಯಾಗಾದಿಗಳನ್ನು,ಭೂರಿ ದಕ್ಷಿಣೆಯನ್ನು ಕೊಟ್ಟು ಭಗವಂತನ ಪ್ರೀತಿ ಗಾಗಿ ಮಾಡಿದ್ದಾರೆ. ಇಂತಹ ಸಂಪನ್ನರಾದ ಧ್ರುವ ರಾಯರನ್ನು ನೋಡಿ ಸಕಲರು ತಮ್ಮ ತಂದೆಯಂತೆ  ಅವರು ರಕ್ಷಣಾ ಮಾಡುವುದನ್ನು ಕಂಡು ಸಂತೋಷ ಪಡುತ್ತಾರೆ.
ಈ ಭೂಮಂಡಲವನ್ನು ಮೂವತ್ತಾರು ಸಾವಿರ ವರುಷಗಳ ಕಾಲ ರಾಜ್ಯ ವನ್ನು ಆಳಿ,ಪುಣ್ಯ ಸಂಪಾದಿಸಿ, 
ತನ್ನ ಪಾಪವನ್ನು ಪ್ರಾಯಶ್ಚಿತ್ತಾದಿ ರೂಪದಲ್ಲಿ,ಜ್ಞಾನ ಸಾಮರ್ಥ್ಯ ದಿಂದ ಕಳೆದುಕೊಂಡರು.
ನಂತರ  ತನ್ನ ಮಗನಾದ ವತ್ಸರನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ತಾನು ತಪಸ್ಸಿಗೆ ತೆರಳಿದರು.
ತನ್ನ ಈ ದೇಹ,ಸತಿ,ಸುತ,ಮಿತ್ರ ಬಾಂಧವ,ರಾಜ್ಯ ಇವೆಲ್ಲವೂ ಅಶಾಶ್ವತ. ಕಾಲ ನಾಮಕ ಪರಮಾತ್ಮನಿಂದ ನಷ್ಟ ವಾಗುವದೆಂದು ತಿಳಿದು ಬದರಿಕಾಶ್ರಮದಲ್ಲಿ ತಪಸ್ಸಿಗೆ ಕೂಡುತ್ತಾರೆ.ಅಲ್ಲಿ ಅಲಕನಂದಾ ದಲ್ಲಿ ಸ್ನಾನ ಮಾಡಿ ಧ್ಯಾನ ಕ್ಕೆ ಕುಳಿತರು.ತನ್ನ ದೇಹದ ಮೇಲಿನ ಮೋಹ ವನ್ನು ಬಿಟ್ಟು ಹರಿಯನ್ನು ಸ್ಮರಿಸುತ್ತಾ ದೇಹತ್ಯಾಗವನ್ನು ಯೋಗಬಲದಿಂದ ಮಾಡುತ್ತಾರೆ. ತಕ್ಷಣವೇ ಆಗಸದಿಂದ ವಿಮಾನವು ಬಂದಿದೆ.ಅದರ ಚಂದ್ರ ಸಮ ಕಾಂತಿಯಿಂದ ಸಕಲ ದಶ ದಿಕ್ಕುಗಳಲ್ಲೂ ಬೆಳಗಿದವು.
ಚತುರ್ಭುಜರು,ನಾನಾವಿಧವಾದ ಆಭರಣಗಳನ್ನು ಧರಿಸಿದ ಪರಮ ಸುಂದರವಾದ ದೇಹಕಾಂತಿಯುಳ್ಳ ವಿಷ್ಣು ದೂತರು ಆ ವಿಮಾನದಿಂದ ಕೆಳಗೆ ಇಳಿಯಲು, ಅವರನ್ನು ಕಂಡು ಧ್ರುವ ರಾಯರು ನಮಸ್ಕಾರ ಮಾಡುತ್ತಾರೆ
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ
🙏ಶ್ರೀವಾಮನಾಯನಮಃ🙏
***********

||ಪಿಬತ ಭಾಗವತಂ ರಸಮಾಲಯಂ||
Day61
ಇಂದು ಧ್ರುವ ರಾಯರ ಚರಿತ್ರೆ ಸಂಪೂರ್ಣ ಮತ್ತು ಫಲಶೃತಿ.
🙏🙏🙏🙏
ನಿನ್ನೆಯ ದಿನ ಶ್ರೀ ಮದ್ಭಾಗವತದಲ್ಲಿ ಧ್ರುವರಾಯರು ರಾಜ್ಯವನ್ನು ಮಗನಿಗೆ ಒಪ್ಪಿಸಿ ತಾವು ತಪಸ್ಸಿಗೆ ತೆರಳಿ ಬದರಿಕಾಶ್ರಮದಲ್ಲಿ ತಪಸ್ಸಿಗೆ ಕುಳಿತು ಕೊಂಡು ಅಲಕನಂದಾ ನದಿಯಲ್ಲಿ ಸ್ನಾನಮಾಡಿ ತಮ್ಮ ದೇಹದ ಮೇಲಿನ ಅಭಿಮಾನ ವನ್ನು ತೊರೆದು,ತಮ್ಮ ಯೋಗಬಲದಿಂದ ಭಗವಂತನ ನಾಮವನ್ನು ಸ್ಮರಿಸುತ್ತಾ ದೇಹತ್ಯಾಗವನ್ನು ಮಾಡುತ್ತಾರೆ.
ತಕ್ಷಣ ದಲ್ಲಿ ದೇವಲೋಕದಿಂದ ವಿಮಾನ ಬಂದಿದೆ.
ವಿಷ್ಣು ದೂತರು ಬಂದಿದ್ದಾರೆ.
ಬಂದಂತಹ ವಿಷ್ಣು ದೂತರಿಗೆ ಧ್ರುವ ರಾಯರು ನಮಸ್ಕಾರ ಮಾಡಿದ್ದಾರೆ.ಅವರು ತಮ್ಮ ಪರಿಚಯ ಮಾಡಿಕೊಳ್ಳುವರು.
ಧ್ರುವರಾಜ !ನಿನಗೆ ಮಂಗಳವಾಗಲಿ.ನಾವು ನಂದ, ಸುನಂದರು.ಆ ಕಮಲನಾಭನ ಒಡೆಯನಾದ ಶ್ರೀ ಮನ್ನಾರಾಯಣನ ಕಿಂಕರರು.
ನೀನು ಪುಣ್ಯ ವಂತ.ಐದನೇ ವರ್ಷದಲ್ಲಿ ಭಗವಂತನನ್ನು ತಪಗೈದು ಒಲಿಸಿಕೊಂಡು ಬಂದವನು.ಶ್ರೀಶಿಂಶುಮಾರ ರೂಪಿ ಪರಮಾತ್ಮನ ಆಜ್ಞೆ ಯಂತೆ ಅವನು ಕಳುಹಿಸಿರುವ ಈ ವಿಮಾನವನ್ನು ಏರು.ಸಪ್ತರ್ಷಿಗಳು ದೂರದಿಂದ ನೋಡಿ ಪ್ರದಕ್ಷಿಣೆ ಮಾಡುವ ಧ್ರುವ ಪದವಿಯು ನಿನ್ನದಾಗಿದೆ.ಚಂದ್ರ ಸೂರ್ಯಾದಿ ಗ್ರಹಗಳು,ಅಶ್ವಿನಿ ಆದಿ ನಕ್ಷತ್ರಗಳು,ಮೇಷಾದಿ ರಾಶಿಗಳು ಸುತ್ತಲೂ ಸುತ್ತಿ ತಿರುಗುವ ಧ್ರುವ ಮಂಡಲವನ್ನು ಸೇರು.ಏಳು!!ಇಲ್ಲಿಯವರೆಗೆ ಯಾರು ಸಹ ಆ ಉನ್ನತ ಪದವಿಯನ್ನು ಪಡೆದವರಿಲ್ಲ.ಶ್ರೀಶಿಂಶುಮಾರ ರೂಪಿ ಪರಮಾತ್ಮನು ಧರಿಸಿರುವ ಆ ಲೋಕವನ್ನು ನೀನು ಆಳು ಎಂದು ಹೇಳುತ್ತಾರೆ.
ವೈಕುಂಠ ಪುರದ ಭೃತ್ಯರ‌ ಮಾತನ್ನು ಕೇಳಿ ಹರಿಯ ಭಕ್ತನಾದ ಧ್ರುವ ರಾಯರು ಅಲ್ಲಿ ನೆರೆದಿದ್ದ ಸಕಲ ಮುನಿಗಳಿಗೆ ನಮಸ್ಕಾರ ಮಾಡುವರು.ಮತ್ತು ವಿಮಾನವನ್ನು ಪ್ರದಕ್ಷಿಣೆ ಮಾಡಿ ಆ ವಿಮಾನವನ್ನು ಏರುತ್ತಾರೆ..
ಆಗಸದಲ್ಲಿ ದೇವ ದುಂದುಭಿಗಳು ಮೊಳಗಿದವು.ಗಂಧರ್ವರು ಪಾಡಿದರು.ಅಪ್ಸರೆಯರು ನಾಟ್ಯವಾಡಿದರು.ಆಕಾಶದಿಂದ ದೇವತೆಗಳು ಹೂವಿನ ಮಳೆ ಗರೆದರು.
ವಿಮಾನವನ್ನು ಏರುವ ಮೊದಲು ಧ್ರುವರಾಯರು 
ತನ್ನ ತಾಯಿಯಾದ ಸುನೀತಿ ಎಲ್ಲಿ??ಆಕೆಯನ್ನು ಬಿಟ್ಟು ನಾ ಬರಲಾರೆ??  ಎಂದು ಹೇಳಿದಾಗ 
ವಿಷ್ಣು ದೂತರು ತಮ್ಮ ವಿಮಾನದ ಮೊದಲೇ ಅಂದಣವನ್ನು ಏರಿ ಸ್ವರ್ಗಕ್ಕೆ ಪೋಗುತ್ತಿರುವ ಸುನೀತಿಯನ್ನು ತೋರಿಸಿದರು.
ಧ್ರುವರಾಯರು ವಿಮಾನದಲ್ಲಿ ಕುಳಿತು ದಾರಿಯಲ್ಲಿ ಸುರಿಸುವ ಹೂವಿನ ಮಳೆಯ ರಾಶಿಯಲ್ಲಿ ಮುಳುಗಿ,ಕ್ರಮವಾಗಿ ಎಲ್ಲಾ ಗ್ರಹಾದಿಗಳನ್ನು ದಾಟಿ ಸ್ವರ್ಗವನ್ನು ಸೇರಿದ್ದಾರೆ.
ಶ್ರೀ ಹರಿಯ ಭಕ್ತಳಾದ  ಮತ್ತು ತನ್ನ ತಾಯಿಯಾದ ಸುನೀತಿಯ ಆಶೀರ್ವಾದವನ್ನು ಪಡೆದು 
ಸ್ವರ್ಗ ದಿಂದಹೊರಟು ಧ್ರುವಮಂಡಲಕ್ಕೆ ಬಂದಿದ್ದಾರೆ.ಇಂದಿಗು ಪ್ರಕಾಶಮಾನವಾದ ಆ ಧ್ರುವ ಮಂಡಲದಲ್ಲಿ ಭಗವಂತನ ನಾಮ ಧ್ಯಾನ ಪರರಾಗಿ ಧ್ರುವ ರಾಯರು ಇದ್ದಾರೆ.
ಅಲ್ಲಿ ಖಳರ ಪ್ರವೇಶವಿಲ್ಲ. ಸಕಲಭೂತ ದಯಾಪರರು,ಧರ್ಮಾಚರಣೆ ಪಾಲಕರು ಆ ಲೋಕವನ್ನು ಸೇರುವರು.ಒಟ್ಟಿಗೆ ಹೇಳಬೇಕು ಎಂದರೆ ಅಚ್ಯುತನ ಭಕ್ತರಿಗೆ ಬಿಟ್ಟು ಅನ್ಯರಿಗೆ ಅಲ್ಲಿ ಪ್ರವೇಶ ಇಲ್ಲ.
ಇಂತಹ ಧ್ರುವ ರಾಯರ ಚರಿತ್ರೆ ಯನ್ನು ಶ್ರೀನಾರದರು ಒಮ್ಮೆ ಪ್ರಜೇತಸರ ಯಾಗದಲ್ಲಿ ಉಲ್ಲೇಖ ಮಾಡುತ್ತಾರೆ. 
ಮಹಾ ಪತಿವ್ರತೆಯು,ಹರಿಯಭಕ್ತಳು ಆದ ಸುನೀತಿಯು ಅವಳ ಮಗನಾದ ಧ್ರುವ ರಾಯ ನು ಸಹ ತಪಸ್ವಿಯು.ಎಂದು ಕೊಂಡಾಡುತ್ತಾರೆ.

ಮೈತ್ರೇಯರು ಹೇಳುತ್ತಾರೆ.
ವಿದುರ!  ಈ ಧ್ರುವ ರಾಯನ ಚರಿತ್ರೆ ಯನ್ನು ಯಾರು ಕೇಳುವರೋ ಅವರಿಗೆ ಯಶಸ್ಸು ಪ್ರಾಪ್ತಿ ಆಗುವದು.
ಈ ಚರಿತ್ರೆ ಕೇಳುವದರಿಂದ ಆಯುಸ್ಸು ಅಭಿವೃದ್ಧಿ ಯು,ಪುಣ್ಯಕರವು ಮತ್ತು ಮಂಗಳಕರವು.ಇದನ್ನು ಭಕ್ತಿಯಿಂದ ಕೇಳಿದವರಿಗೆ ಭಗವಂತನಲ್ಲಿ ಭಕ್ತಿ ಪುಟ್ಟುವದು.
ಬ್ರಾಹ್ಮಣ ಸಭೆಯಲ್ಲಿ ಪ್ರಾತಃ ಕಾಲ ದಲ್ಲಿ,ಅಥವಾ ಸಾಯಂಕಾಲ ದಲ್ಲಿ ಅಚ್ಯುತನ ಪ್ರಿಯನಾದ ಧ್ರುವ ಚರಿತ್ರೆ ಯನ್ನು ಪೇಳಿದವನು ಭಕ್ತಿಯನ್ನು ಹೊಂದಿ ಸುಖಿಸುವರು.

ಪೂರ್ಣಿಮಾ, ಶುಕ್ಲ ಪಕ್ಷದ  ದ್ವಾದಶಿ,ಚತುರ್ದಶಿ,, ಶ್ರವಣ ನಕ್ಷತ್ರ, ವ್ಯತಿಪಾತ ಯೋಗ,ಸಂಕ್ರಮಣ, ಭಾನುವಾರದಲ್ಲಿ ಭಗವಂತನ ಪಾದ ಪದ್ಮವನ್ನು ನಂಬಿ ಯಾವುದೇ ಫಲ ಅಪೇಕ್ಷೆ ಇಲ್ಲದೇ ಹೇಳಿದವನು ಮತ್ತು ಕೇಳಿದವನು ಸಹ ಹರಿಯ ಅನುಗ್ರಹ ವನ್ನು ಪಡೆಯುವರು.

ಇಂತಹ ಧ್ರುವ ರಾಯರ ಚರಿತ್ರೆ ಪರಮ ಮಂಗಳವು.
ಶ್ರೀ ಹರಿಯ ಅನುಗ್ರಹದಿಂದ ಅವನ ಭಕುತರ ಚರಿತ್ರೆ ಕೇಳುವ ಓದುವ ಭಾಗ್ಯನನಗೆ ಸಿಕ್ಕಿತು.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
***

OCTOBER 5, 2020
||ಎನ್ನ ಪುಣ್ಯ ಗಳಿಂದ ಈ ಪರೀ ಉಂಟೇನೋ||
🙏🙏🙇‍♂
✍️ಪವಿತ್ರವಾದ ಈ ಚಾತುರ್ಮಾಸ್ಯ ಶುಭ ಸಂಧರ್ಭದಲ್ಲಿ ಭಾದ್ರಪದ ಮಾಸದ ಶುಕ್ಲಪಕ್ಷದ ಪಾಡ್ಯ ದಿನದಿಂದ ಆರಂಭಿಸಿ ಸತತ 34 ದಿನಗಳ ಕಾಲ ಶ್ರೀ ಮದ್ಭಾಗವತ ಲೇಖನರೂಪಿ ಜ್ಞಾನ ಯಜ್ಞ 
 ವನ್ನು
ಯಾವುದೇ ಅಡೆ ತಡೆ ಇಲ್ಲದಂತೆ ನಿರ್ವಿಘ್ನವಾಗಿ 
ನನ್ನ ಒಳಗಡೆ ನಿಂತು ಬರೆಸಿದ 
ನನ್ನ ಬಿಂಬರೂಪಿ ಪರಮಾತ್ಮನ ಕಾರುಣ್ಯ ವನ್ನು ವರ್ಣಿಸಲು ಸಾಧ್ಯವಿಲ್ಲ.
ಹಾಗೇಯೆ 
ನಿಮ್ಮ ಒಳಗಡೆ  ಸ್ವಾಮಿ ತಾ ನಿಂತು ಅದನ್ನು ಓದಿ ಆನಂದಿಸಿ, ನಿಮ್ಮ ಒಳಗಡೆ ನಿಂತು  ಆಶೀರ್ವಾದ ಮಾಡಿದ  ಅಧ್ಯಾತ್ಮಿಕ ಬಂಧುಗಳ ಉಪಕಾರ ಮರೆಯಲಾಗದು.
 ಇದೆಲ್ಲವು ನಮ್ಮ ಶ್ರೀ ಅಪ್ಪಾವರ ಅನುಗ್ರಹ ಬಲ ಮತ್ತು ಶ್ರೀ ಹರಿ ವಾಯು ಗುರುಗಳ ಕಾರುಣ್ಯದ ಫಲ ಮತ್ತು ಬಲ  ಇಷ್ಟು ಬರೆಯಲು ಈ ಮಂದಮತಿ ಇಂದ ಸಾಧ್ಯವಾಯಿತು.
ಕಾರಣಾಂತರಗಳಿಂದ ಶ್ರೀ ಮದ್ ಭಾಗವತ ವನ್ನು ಬರೆಯಲು ಆಗಲಿಲ್ಲ.
ಒಟ್ಟು ಅಷ್ಟು ದಿನದ ಸಂಚಿಕೆಯನ್ನು ಪಿಡಿಎಫ್ ರೂಪದಲ್ಲಿ ಬಂದಿದೆ.ಅದನ್ನು ಇಲ್ಲಿ ಹಾಕಿದ್ದೇನೆ.
ಮುಂದಿನ ಭಾಗದೊಂದಿಗೆ ಶ್ರೀ ಮದ್ ಭಾಗವತ ವನ್ನು ಬರೆಯಲು ಪ್ರಯತ್ನ ಮಾಡುವೆ.
ನಿಮ್ಮ ಎಲ್ಲರ ಆಶೀರ್ವಾದ ಪ್ರೋತ್ಸಾಹ ಸದಾ ಎನ್ನ ಮೇಲಿರಲಿ..
🙏ಉತ್ತಮರ ಸಂಗ ಎನಗಿತ್ತು ಸಲಹೋ🙏
🙏ಅ.ವಿಜಯವಿಠ್ಠಲ🙏
click

  SRIMAD BHAGAVATA IN KANNADA 

*************

No comments:

Post a Comment