SEARCH HERE

Tuesday, 22 September 2020

ಆಹಾರದಲ್ಲಿನ ಶಿಸ್ತು food discipline health

06.10.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-280
••••••••••••••••
✍️: ಇಂದಿನ ವಿಷಯ:
ಕಷಾಯದಲ್ಲಿನ 38 ಘಟಕ ದ್ರವ್ಯಗಳ ಸಂಕ್ಷಿಪ್ತ ಮಾಹಿತಿ
•••••••••••••••••••••••••••••••••••••••
"ಆಯುರ್ವೇದದಲ್ಲಿ ಯಾವುದೋ ಒಂದು ರೋಗ ಬರುವ ಮುನ್ನವೇ ಆ ರೋಗಹರ ಔಷಧ ಪ್ರಯೋಗ ಮಾಡುವುದರಿಂದ ಅದು ಬಾರದಂತೆ ತಡೆಯಬಹುದು" 
ಆದರೆ,
ಆಧುನಿಕ‌ಪದ್ಧತಿ ಹಾಗಲ್ಲ. ಜ್ವರ ಇಲ್ಲದೇ ಜ್ವರದ ಮಾತ್ರೆ ಕೊಟ್ಟರೆ, ಮಧುಮೇಹ ಇಲ್ಲದೇ ಮಧುಮೇಹಹರ ಮಾತ್ರೆ ಕೊಟ್ಟರೆ ಅಪಾಯ ಖಂಡಿತಾ ಇದೆ.

ಹಿಂದಿನ ಅನೆಕ ಸಂಶೋಧನೆಗಳು ತಿಳಿಸುವಂತೆ- ಈ 38 ಔಷಧಿ ದ್ರವ್ಯಗಳನ್ನು ಕೊರೋನಾ ಸೋಂಕಿನಲ್ಲಿ ಬರುತ್ತಿರುವ ಹಲವಾರು ಲಕ್ಷಣಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿವೆ ಎಂದು ಸಾಬೀತಾಗಿವೆ. ಒಂದು ದ್ರವ್ಯವಂತೂ ನೇರ ಕೊರಾನಾ ವೈರಾಣುವಿನ‌ ಮೇಲೆಯೇ ಯಶಸ್ವಿ ಪ್ರಯೋಗ ಕಂಡಿದೆ. 
ಹಾಗೆಯೇ,
ಈಗ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ನಮ್ಮ ಕೇಂದ್ರ ಸರ್ಕಾರ ಕೂಡಾ ಆಯುರ್ವೇದ ಬಳಸುವಂತೆ ಸೂಚಿಸಿದೆ. 

ಹಾಗಾಗಿ, 
"ಸೋಂಕು ತಗುಲುವ ಮುನ್ನವೇ ತಡೆಯೋಣ"

ಈ 38 ದ್ರವ್ಯಗಳ ಕೆಲಸವನ್ನೊಮ್ಮೆ ನೋಡಿ, ಸೋಂಕು ನಮ್ಮ ಬಳಿ ಬರುವ ಮುನ್ನ‌ವೇ ತಡೆಯಿರಿ.
••••••••••••••••••••••••••••••

1) ಕೃಷ್ಣ ಜೀರಕ:
ಈ ದ್ರವ್ಯವು 12.01.2014 ರಲ್ಲಿ ಕೊರೋನ ವೈರಾಣುವಿನ ದ್ವಿಗುಣಗೊಳ್ಳುವಿಕೆಯನ್ನು ತಡೆಯುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

2) ದಶಮೂಲ:  ನೋವು ನಿವಾರಕ (analgesic), ಊತನಾಶಕ (anti-inflammatory), anti-plataletic 

3) ತುಳಸಿ: ಸೂಕ್ಷ್ಮ ಜೀವಾಣು ನಿವಾರಕ (anti-microbial)

4)ಅಮೃತ : ವೈರಾಣು ನಿವಾರಕ (anti-viral)

5)ತ್ವಕ್ : ವೈರಾಣು ನಿವಾರಕ (anti-viral)

6)ಶುಂಠಿ : Neuro protective , Anti inflammatory, Anti bacterial, Anti oxidant.

7)ಮರೀಚ : ಬ್ಯಾಕ್ಟೀರಿಯಾ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ. (Anti- bacterial)

8)ಭೂಮ್ಯಾಮಲಕಿ: ಹೆಪಟೈಟಿಸ್ ವೈರಾಣುವಿನ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ. 

9)ಅಶ್ವಗಂಧ : Anti-influenzic activity

10) ಭದ್ರ ಮುಸ್ತಾ : Phytochemical, antimicrobial, antioxidant,antigenotoxic activity

11)ಬಲಾ : ಗಾಯವನ್ನು ಒಣಗಿಸುವ ಕಾರ್ಯದಲ್ಲಿ ಯಶಸ್ವಿ.

12)ಯಷ್ಟಿಮಧು : ವೈರಾಣುವಿನ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ.

13) ವಾಸಾ ಪತ್ರ : Anti-spasmodic, ಉಸಿರಿನಾಳದ ತನುತ್ವ ಕಾರಕ (expectorant)

14) ಕಂಟಕಾರಿ : ಉಸಿರ್ನಾಳ ಹಿಗ್ಗಿಸುವಿಕೆ(bronchodilator).

15) ದ್ರೋಣಪುಷ್ಪಿ : Anti diabetic, Hepato protective, Anti inflammatory, Anti bacterial, Anti oxidant, Anti ulcerative.

16) ಹರಿದ್ರಾ : Anti histamine, inhibition of aggregation of platelets.

17) ಸಿತೋಫಲಾಧಿ ಚೂರ್ಣ : Anti - histaminic effect.

18) ತಾಲೀಸಾದಿ ಚೂರ್ಣ : Anti-fungal activity

19) ಲತಾಕರಂಜ : Hepato protective , Anti malarial, Anti fungal, Anti microbial, Anti filarial.

20) ಏಲಾ : ಕ್ಯಾನ್ಸರ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ.

21) ಮಂಜಿಷ್ಠ : ಹೃದಯ ಸಂರಕ್ಷಕ (cardioprotective).

22) ಸೌವರ್ಚ ಲವಣ : ಕಫ ನಿವಾರಕ , ಪುಪ್ಪುಸಗಳ ಶೋಥ ನಿವಾರಕ, ಸಂಧುಗಳ ಬಿಗಿಹಿಡಿತ ನಿವಾರಕ(rheumatic pain),  ಗಂಟಲು ಊತ ನಿವಾರಕ.

23) ಸೈಂಧವ ಲವಣ : ಕಫ ನಿವಾರಕ , ಪುಪ್ಪುಸಗಳ ಶೋಥ ನಿವಾರಕ, ಸಂಧುಗಳ ಬಿಗಿಹಿಡಿತ ನಿವಾರಕ , ಗಂಟಲು ಊತ ನಿವಾರಕ

24) ದಾಡೀಮ ಫಲ ತ್ವಕ್ : ಕ್ಯಾನ್ಸರ್ ನಿಂದ ಉಂಟಾಗುವ ಊತ ನಿವಾರಕ.

25) ಪಿಪ್ಪಲಿ : Immunomodulatory, Anti tumour activity.

26) ಪಿಪ್ಪಲಿ ಮೂಲ: ಉಸಿರ್ನಾಳದ ರೋಗಗಳನ್ನು ಗುಣಪಡಿಸುತ್ತದೆ.

27) ಚವ್ಯ : ಡೆಂಗ್ಯೂದಂತಹ ವೈರಾಣುವಿನ ವಿರುದ್ಧ ಹೋರಾಡುತ್ತದೆ.

28) ಚಿತ್ರಕ : Rheumatic pain, Fever , Anti fungal, Anti tumour, Diseases of heart.

29) ತಾಲೀಸಪತ್ರ : Anti bacterial, Anti depressant , Anti inflammatory activity.

30) ನಾಗಕೇಸರ : Anti viral activity.

31) ಆಮ್ಲವೇತಸ : ಯಕೃತ್ ಸಂರಕ್ಷಕ (hepatoprotective).

32) ಜೀರಕ : Anti bacterial

33) ವಿಡಂಗ : Anti bacterial activity

34) ನಿಂಬಪತ್ರ : Anti viral activity

35) ಅಭ್ರಕ ಭಸ್ಮ : ರೋಗನಿರೋಧಕ ಶಕ್ತಿ ವರ್ಧಕ

36) ಷಂಖ ಭಸ್ಮ : Anti acidic, Anti ulcer, Anti cough.

37) ಏರಂಡ : Anti rheumatic, Anti pyretic, Anti inflammatory.

38) ರಾಸ್ನಾ : Anti rheumatic


ಎಲ್ಲ ದ್ರವ್ಯಗಳ ಸಂಶೋಧನಾ ಮಾಹಿತಿಗಾಗಿ ಕೆಳಗಿನ‌ ಲಿಂಕ್ ನೋಡಿರಿ
👇

https://hospitalfreelife.blogspot.com/2020/07/atharva-ayurveda-research-instituteis.html
*********

-ಆತ್ಮೀಯರೇ ನಮಸ್ಕಾರ🙏

ಅಥರ್ವ ಆಯುರ್ವೇದ ಸಂಸ್ಥೆ ತಯಾರಿಸಿದ (36+2)38 ಆಯುರ್ವೇದೀಯ ದ್ರವ್ಯಗಳನ್ನೊಳಗೊಂಡ ರೋಗನಿರೋಧಕ ಕಷಾಯ ಚೂರ್ಣದ ವಿವರ.

 ಒಬ್ಬರಿಗೆ ಒಂದು ತಿಂಗಳು ಬಳಸಬಹುದಾದ 60 ಗ್ರಾಂ ನ ಒಂದು ಪ್ಯಾಕ್ ನ
ದರ: ₹. 240/-

ನಿಮ್ಮ ಅಗತ್ಯಕ್ಕೆ ಅನುಸಾರ ಪಡೆಯಲು ಈ ಕೆಳಗಿನ ಯಾವುದಾದರೂ ಒಂದು ವಿಧಾನ ಅನುಸರಿಸಿ ಹಣವನ್ನು ಜಮೆ ಮಾಡಿ, ಅದರ ಮಾಹಿತಿ ಮತ್ತು ನಿಮ್ಮ ವಿಳಾಸವನ್ನು 9148702645 ಗೆ ವ್ಯಾಟ್ಸಅಪ್ ಮಾಡಿದರೆ, ಕೋರಿಯರ್ ಅಥವಾ ಅಂಚೆಯ ಮೂಲಕ ಕಳಿಸಿಕೊಡಲಾಗುವುದು.
ಸೂಚನೆ: ಒಂದಕ್ಕಿಂತ ಹೆಚ್ಚಿನ ಪ್ಯಾಕ್ ಖರೀದಿಸಿದರೆ ಕೋರಿಯರ್ ಅಥವಾ ಅಂಚೆಯ ದರವನ್ನು ವಿಧಿಸಲಾಗುವುದಿಲ್ಲ.

ಈ ವಿಧಾನವನ್ನು ಅನುಸರಿಸಿ
👇

ಫೋನ್ ಪೇ ಅಥವಾ ಗೂಗಲ್ ಪೇ ಮಾಡುವ ಸಂಖ್ಯೆ👉 9343855135

ಆಥವಾ

ಈ ಖಾತೆಗೆ ಜಮೆ ಮಾಡಿ :
ಹೆಸರು: Dr.Mallikarajun D
ಖಾತೆ ಸಂಖ್ಯೆ: 64000592318
ಬ್ಯಾಂಕ್: SBI
ಶಾಖೆ: Vinobanagara
IFSC ಕೋಡ್: SBIN0040444
***
📞 ಸಂಪರ್ಕಿಸಿ:
ಮಂಜುನಾಥ.ಬಿ,
ವ್ಯವಸ್ಥಾಪಕರು,
ಅಥರ್ವ ಆಯುರ್ಧಾಮ,
ಶಿವಮೊಗ್ಗ.
9148702645

**********\

22.09.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-266
••••••••••••••••
✍️: ಇಂದಿನ ವಿಷಯ:

ಆಹಾರದಲ್ಲಿನ ಶಿಸ್ತು - ಭಾಗ ೧

"ಜಲವಿಲ್ಲದ ಆಹಾರ ರೋಗಕ್ಕೆ ಆಧಾರ"

ಸೃಷ್ಠಿಯಲ್ಲಿ ಜೀವಿಗಳು ಇರುವುದೇ ಜಲದ ಆಧಾರದಲ್ಲಿ. ಹಾಗಾಗಿ ವಿಜ್ಞಾನಿಗಳು ಅನ್ಯ ಗ್ರಹದಲ್ಲಿ ಜಲದ ಹುಡುಕಾಟವನ್ನು ಮಾಡುತ್ತಾರೆ. ಜಲವಿದ್ದಲ್ಲಿ ಜೀವ ಇದ್ದೇ ಇರುತ್ತದೆ. ಜಲ ಕಡಿಮೆ ಇದ್ದಲ್ಲಿ ರೋಗವು, ಜಲ ಇರದಿದ್ದಲ್ಲಿ ನಿರ್ಜೀವತತ್ವವು ಸಿದ್ಧವಾಗುತ್ತದೆ. 

ಮಾನವನ ಈ ಶರೀರದಲ್ಲಿ ಜಲವು ಪ್ರಧಾನವಾಗಿರುವುದರಿಂದ ಈ ಶರೀರದ ಕಚ್ಚಾವಸ್ತುವಾದ ಆಹಾರದಲ್ಲಿಯೂ ಸಹ ಜಲವು ಪ್ರಧಾನವಾಗಿ ಇರಬೇಕಾಗುತ್ತದೆ. 

ಹಾಗೆಂದು, ಅತಿಯಾಗಿ ನೀರನ್ನು ಕುಡಿದರೆ ಶರೀರ ರೋಗಗ್ರಸ್ತವಾಗುತ್ತದೆ. ಏಕೆಂದರೆ, ಅಕ್ಕಿಯನ್ನು ತಿಂದು ನೀರನ್ನು ಕುಡಿದರೆ ಹೊಟ್ಟೆಯಲ್ಲಿ ಅದು ಅನ್ನವಾಗದು. 

ಮಾನವನು ಬೇಯಿಸಿದ ಆಹಾರಕ್ಕೆ ಒಗ್ಗಿಕೊಂಡಿರುವುದರಿಂದ ಆಹಾರವನ್ನು ಬೇಯಿಸುವಾಗ ಯಥೇಚ್ಛವಾಗಿ ನೀರನ್ನು ಬಳಸಬೇಕಾಗುತ್ತದೆ. ಇದರಿಂದ ಜೀವಕೋಶಗಳು ಆಹಾರದೊಳಗಿನ ನೀರನ್ನು ವಾಹಕವಾಗಿ ಬಳಸಿ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಂಡು ಬೆಳೆಯುತ್ತವೆ. ಜಲಾಂಶ ಕಡಿಮೆಯಿರುವ ಅಥವಾ ಕಡಿಮೆ ನೀರನ್ನು ಹಾಕಿ ಬೇಯಿಸುವ, ಗಟ್ಟಿಯಾಗಿರುವ, ಉದುರಾಗಿರುವ ಆಹಾರವನ್ನು ನಾವು ಸೇವಿಸಿದರೆ ಅದು ಉದರ, ಕರುಳು, ರಕ್ತ ಮತ್ತು ಜೀವಕೋಶಗಳ ಹಂತದಲ್ಲಿಯೂ ಜೀರ್ಣವಾಗಿ ಶರೀರಗತವಾಗಲು ಸೂಕ್ತ ವಾಹಕವಾದ (media) ಜಲ ಕಡಿಮೆ ಇರುವುದರಿಂದ ಅಥವಾ ಇಲ್ಲದಿರುವುದರಿಂದ ಉದರ, ಕರುಳು, ರಕ್ತದಲ್ಲಿನ ಜೀವಕೋಶಗಳೊಳಗಿನ ಜಲಾಂಶ (cellular fluid)  ತಾನು ಕಡಿಮೆ ಜಲ ಇರುವ ಈ ಆಹಾರದೊಂದಿಗೆ ಸೇರಿ ಅದನ್ನು ಪಚನ ಮಾಡಲು ಸಹಾಯ ಮಾಡುತ್ತದೆ, ಆಗ ಜೀವಕೋಶಗಳು ದ್ರವಾಂಶವನ್ನು ಕಳೆದುಕೊಳ್ಳುವುದರಿಂದ ದುರ್ಬಲಗೊಳ್ಳುತ್ತಾ ಸಾಗುತ್ತವೆ.

ಈ ರೀತಿ ದುರ್ಬಲಗೊಂಡ ಜೀವಕೋಶಗಳಿಗೆ ಸೋಂಕು ತಗುಲುವುದು ಮತ್ತು ಯಥೇಚ್ಛವಾಗಿ ವೈರಾಣುಗಳು ವೃದ್ಧಿಯಾಗಿ ಶರೀರದ ಅವಯವಗಳ ಮೇಲೆ ದಾಳಿಯಿಡುವುದು ಅತ್ಯಂತ ಸುಲಭವಾಗಿಬಿಡುತ್ತದೆ. 

ಹಾಗಾಗಿ, 
ಬಾಯಿ ರುಚಿಗೆಂದು ಜಲಾಂಶ ಕಡಿಮೆಯಿರುವ ಮತ್ತು ಸುಲಭವಾಗಿ ನೀರಿನಲ್ಲಿ ಕರಗಿ ಒಂದಾಗದ ಬಿಸ್ಕೆಟ್, ಬ್ರೆಡ್, ಪೂರಿ, ವಡೆ, ಚಕ್ಕುಲಿ, ಚಪಾತಿ, ದೋಸೆ, ಚಿತ್ರಾನ್ನ, ಪುಳಿಯೋಗರೆ ಮುಂತಾದವುಗಳನ್ನೂ ಮತ್ತು ಉದುರು ಉದುರಾದ ಅನ್ನ , ಉಪ್ಪಿಟ್ಟು ಮುಂತಾದವುಗಳನ್ನು ಸೇವಿಸುವುದು ಅನಾರೋಗ್ಯಕ್ಕೆ ದಾರಿ.

ಆಹಾರದಲ್ಲಿ ಇದೊಂದೇ ಶಿಸ್ತನ್ನು ಪಾಲಿಸಿ ಒಂದು ವಾರದೊಳಗೆ ಈ ಕೆಳಗಿನ ಫಲಿತಾಂಶಗಳನ್ನು ಕಾಣಬಹುದು.  
-ಆಮ್ಲಪಿತ್ತ 
-ಹೊಟ್ಟೆಯುಬ್ಬರ
-ಮಲಬದ್ಧತೆ
-ನಿಶ್ಯಕ್ತಿ
-ನಿದ್ರಾಹೀನತೆ
ಮುಂತಾದವುಗಳನ್ನು ಔಷಧ ರಹಿತವಾಗಿ ಮತ್ತು ಶಾಶ್ವತವಾಗಿ ಗೆಲ್ಲಬಹುದು.
********


ಆಹಾರದಲ್ಲಿನ ಶಿಸ್ತು - ಭಾಗ 2

"ಆಹಾರದಲ್ಲಿನ ಜಲದ ಮಹತ್ವ"

ಹೀಗೆಂದಾಕ್ಷಣ ಆಹಾರದ ಜೊತೆಗೆ ಕುಡಿಯುವ ನೀರೆಂದು ತಿಳಿಯಬಾರದು. 
ಇದನ್ನು,
'ಆಹಾರ ಬೇಯಿಸಲು ಬಳಸುವ ನೀರು" ಎಂದು ಅರ್ಥೈಸಿಕೊಳ್ಳಬೇಕು.

ನೀರಿನಲ್ಲಿ ಆಹಾರ ಬೇಯುವಾಗ ಅದು ಪ್ರತ್ಯೇಕವಾಗಿ ಉಳಿಯದೇ ಆಹಾರದ ಭಾಗವಾಗಿಬಿಡುತ್ತದೆ. 
ಹೇಗೆ, ಬೇಳೆ, ತರಕಾರಿ, ಉಪ್ಪು, ಹುಳಿ, ಮಸಾಲೆಗಳನ್ನು ಒಂದುಮಾಡಿ ತಾನೂ ಸಹ ಅದರೊಂದಿಗೆ ಸೇರಿಕೊಂಡು ಸಾಂಬಾರ್ ಎಂಬ ಪದಾರ್ಥ ತಯಾರಾಗುತ್ತದೆಯೋ ಹಾಗೆಯೇ ಎಲ್ಲಾ ಆಹಾರದ ಜೊತೆಗೆ ನೀರು ಆಹಾರದ ಒಂದು ಭಾಗವೇ ಆಗಬೇಕಾಗುತ್ತದೆ. ಇದನ್ನು ಮರೆತು ನೀರಿನ ಅಂಶವಿರದ ಚಕ್ಕುಲಿ, ಪೂರಿ ಮುಂತಾದ ಕರಿದ ಪದಾರ್ಥ ಹಾಗೂ ನೀರು ಕಡಿಮೆ ಇರುವ ಚಪಾತಿ, ಉಪ್ಪಿಟ್ಟು ಮುಂತಾದವುಗಳನ್ನು ಸೇವಿಸಿದರೆ ಶರೀರ ಬಾಯಾರಿಕೆಯ ರೂಪದಲ್ಲಿ ನೀರನ್ನು ಕೇಳುತ್ತದೆ. ಆದರೆ , ಹಾಗೆ ಬಾಯಾರಿಕೆಯಿಂದ ಕುಡಿಯುವ ನೀರು ಎಂದಿಗೂ ಆಹಾರದ ಭಾಗವಾಗುವುದಿಲ್ಲ. ಏಕೆಂದರೆ ಅದು ಪಕ್ವವಾಗದ ಕೇವಲ "ಹಸಿಯ ನೀರು"

ಇದು ಸರಳ ಸಿದ್ಧಾಂತದಂತೆ ತೋರಿದರೂ ಆರೋಗ್ಯದ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ.

ಚಿಕ್ಕ ಮತ್ತು ಮಧ್ಯಮ ವಯಸ್ಸಿನಲ್ಲಿ 
CKD (chornic kidney disease ), 
CLD (chronic liver disease), 
CAD (coronary arterial disease) , Asthma, Allergy ಮುಂತಾದ ರೋಗಗಳಿಂದ ಬಳಲುತ್ತಿರುವುದಕ್ಕೆ ಈ ರೀತಿಯ ಆಹಾರಗಳೇ ಕಾರಣ. ದುರದೃಷ್ಟವಶಾತ್ ಬಹುಪಾಲು ರೋಗಿಗಳನ್ನು ಚಿಕಿತ್ಸಿಸುತ್ತಿರುವ ಆಧುನಿಕ ವೈದ್ಯಪದ್ಧತಿಯು ಈ ವಿಧದ ಆಹಾರದ ಬಗ್ಗೆ ಒಂದಕ್ಷರವನ್ನೂ ಹೇಳುವುದಿಲ್ಲ, ಬದಲಾಗಿ, ಆಹಾರದ ಜೊತೆಗೆ ಯಥೇಚ್ಛವಾಗಿ ನೀರು ಕುಡಿಯಲು ಹೇಳುತ್ತಾರೆ. ಏಕೆಂದರೆ, ಆಧುನಿಕ ವಿಜ್ಞಾನಕ್ಕೆ "ವಿಪಾಕ" ಎಂಬುದರ ಪರಿಕಲ್ಪನೆಯೇ ಇಲ್ಲ!!!

ಸೇವಿಸಿದ ಆಹಾರವು ಜೀವಕೋಶವಾಗಿ ಮಾರ್ಪಾಡಾಗುವ ಮುನ್ನ, ತನ್ನೊಳಗಿನ ಜಲವನ್ನೇ ಬಳಸಿಕೊಂಡು ಪರಿವರ್ತನೆಗೆ ಸೂಕ್ತರೀತಿಯಲ್ಲಿ ಸಿದ್ಧವಾಗುತ್ತದೆ, ಈ ರಸವಿಶೇಷವನ್ನೇ "ವಿಪಾಕ" ಎನ್ನುತ್ತೇವೆ.
ಉದಾಹರಣೆಗೆ: ಅಕ್ಕಿಯನ್ನು ಬೇಯಿಸಿ ಬಂದ ಗಂಜಿ ರಸವಿಶೇಷ ಎಂದರೆ, ಅಕ್ಕಿಯನ್ನು ನೀರಿಗೆ ಹಾಕಿ ಕದಡಿದರೆ ಬರುವ ಜಲವನ್ನು ಕಲಗಚ್ಚು ಎನ್ನುತ್ತಾರೆ. 
ಇವೆರಡೂ ದ್ರವಾಂಶವೇ ಆದರೂ ಗುಣದಲ್ಲಿ ಮಹಾನ್ ಅಂತರವಿದೆ. ಗಂಜಿ ಶರೀರವನ್ನು ಪೋಷಣೆ ಮಾಡಿದರೆ, ಕಲಗಚ್ಚು ಅದರ ವಿರುದ್ಧ ಕಾರ್ಯವನ್ನು ಮಾಡುತ್ತದೆ!!

ಬೇಗ ಕೆಡಬಾರದೆಂದು ಪೂರ್ಣ ಬೇಯಿಸದೇ ಆಹಾರ ತಯಾರಿಸುತ್ತಿರುವ ಹೋಟೆಲ್, ಖಾನಾವಳಿ ಮತ್ತು ಪಿ.ಜಿಗಳಲ್ಲಿ ಆಹಾರ ಸೇವಿಸುತ್ತಿರುವ ಬಹಳಷ್ಟು ಯುವಪೀಳಿಗೆಗಳಿಗೆ ಬರುತ್ತಿರುವ ರೋಗಗಳನ್ನು ನೋಡಿ ನಮಗೆ ಅತೀವ ಸಂಕಟವಾಗುತ್ತದೆ. 

ಗಮನಿಸಿ ನೋಡಿ:
ಈ ರೀತಿ ಪಿ.ಜಿಯಲ್ಲಿ / ಹೊಟೆಲ್ ಗಳಲ್ಲಿ ಅಲ್ಪಜಲ ಬಳಸಿ ತಯಾರಿಸುವ ಆಹಾರಗಳನ್ನು ಸೇವಿಸಿದ ವ್ಯಕ್ತಿಗಳು ಗುಣಪಡಿಸಲಾಗದ ಕಾಯಿಲೆಗಳಿಂದ ಅಥವಾ ಶಾಶ್ವತವಾಗಿ ಔಷಧಿಗಳ ಮೇಲೆ ಅವಲಂಬಿತರಾಗಿ ಜೀವಿಸುವಂತಹ ಕಾಯಿಲೆಗಳಿಂದ ವ್ಯಥೆಪಡುತ್ತಿದ್ದಾರೆ. 

ಗಟ್ಟಿ ಆಹಾರ ತಿಂದು ಮೇಲಿಂದ ನೀರು ಕುಡಿಯುವುದಕ್ಕೂ , ಆಹಾರದೊಳಗೇ ಒಂದಾಗಿರುವ ನೀರನ್ನು ಬಳಸುವುದಕ್ಕೂ ಇರುವ ಬಹುದೊಡ್ಡ ವ್ಯತ್ಯಾಸವೇ 

"ರೋಗ ಮತ್ತು ಆರೋಗ್ಯ"
*************


24.09.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-268
••••••••••••••••
✍️: ಇಂದಿನ ವಿಷಯ:

ಆಹಾರದಲ್ಲಿನ ಶಿಸ್ತು - ಭಾಗ 3

"ಹುಳಿ ಬರಿಸಿದ ಆಹಾರಗಳು ಅಪಾಯಕಾರಿ".
•••••••••••••••••••••••••••••••••••••••

ಸಮಶೀತೋಷ್ಣ ವಲಯದ ಜೀವಿಗಳಾದ ಭಾರತೀಯರಿಗೆ ಕಿಣ್ವೀಕರಣ (fermented) ಗೊಳಿಸಿದ ಆಹಾರಗಳು ಕಾಲಾಂತರದಲ್ಲಿ ಅಪಾಯವನ್ನುಂಟುಮಾಡುತ್ತವೆ.
ಉದಾಹರಣೆಗೆ: ಉದ್ದು ಹಾಕಿದ ದೋಸೆ, ಇಡ್ಲಿ, ಪಡ್ಡುಗಳು.
ಬ್ರೆಡ್, ಬಿಸ್ಕೆಟ್, ಕೇಕ್ ಗಳು.

★★★★★★★

50 ವರ್ಷಗಳ ಹಿಂದೆ ಭಾರತದಲ್ಲಿ ಯಾವುದೇ ಆಹಾರ ಹುಳಿಬಂದರೆ ಅದನ್ನು ಸಾಕುಪ್ರಾಣಿಗಳಿಗೆ ಹಾಕುತ್ತಿದ್ದರು. ದುರದೃಷ್ಟವಶಾತ್ ಇಂದು ನಾವಾಗಿ ಹುಳಿಬರಿಸಿಕೊಂಡು, ಅಷ್ಟಲ್ಲದೇ ಪರಮ ಶ್ರೇಷ್ಠ ಆಹಾರ ಎಂಬ ಬಿರುದನ್ನು ಕೊಟ್ಟುಕೊಂಡು ಅತೀ ಹೆಚ್ಚು ಇಡ್ಲಿಯನ್ನು ಸೇವಿಸುತ್ತಿದ್ದೇವೆ, ಹಾಗೆಯೇ, ದೋಸೆ, ಪಡ್ಡು, ಬ್ರೆಡ್, ಬಿಸ್ಕೆಟ್, ಕೇಕ್ ಗಳು.

★★★★★★★

ಮೇಲಿನ ಎಲ್ಲಾ ಆಹಾರ ಪದಾರ್ಥಗಳು ಪಚನ ಕ್ರಿಯೆಯಲ್ಲಿ ಉಷ್ಣತೆಯನ್ನು ಹೊರಹಾಕುವುದರಿಂದ ಮತ್ತು ರಕ್ತದಲ್ಲಿ ಆಮ್ಲದ ಪ್ರಭಾವವನ್ನು ಬೀರುವುದರಿಂದ (Acid) ಇಡೀ ಶರೀರವು ಉಷ್ಣತೆಯನ್ನು ಅನುಭವಿಸುತ್ತದೆ. ಸಾಮಾನ್ಯ ಭಾಷೆಯಲ್ಲಿ ಜನರು ಇದನ್ನು " ನನಗೆ heat ಆಗಿದೆ", "ನನ್ನ ಶರೀರ ಸ್ವಲ್ಪ heat" ಎಂದು ಹೇಳುತ್ತಾರೆ.

ದೋಸೆ ಇಡ್ಲಿಗಳಂತೂ ಆಲ್ಕೋಹಾಲ್ ಪ್ರಭಾವವನ್ನೇ ಬೀರುತ್ತವೆ. ಗಮನಿಸಿ ನೋಡಿ, ದೋಸೆ ತಿಂದ ನಂತರ, ಹೆಚ್ಚಿನ ಪ್ರಮಾಣದ ಇಡ್ಲಿ ತಿಂದ ನಂತರ ಸ್ವಲ್ಪಮಟ್ಟಿನ ಮತ್ತು ಬರುವುದು.
ಈ ರೀತಿಯ ಆಹಾರಗಳನ್ನು ಹೆಚ್ಚು ಹೆಚ್ಚು ಬಳಸುತ್ತಿರುವುದರಿಂದ ಹಿಂದೆ ಆಲ್ಕೋಹಾಲ್ ಸೇವಿಸುತ್ತಿದ್ದವರಿಗೆ ಮಾತ್ರ ಉಂಟಾಗುತ್ತಿದ್ದ fatty liver ಇಂದು ಬಹುಜನರಿಗೆ ಸಾಮಾನ್ಯವಾಗಿದೆ.

ಈ ಶರೀರದ ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಕೃತ್ ಅನ್ನು ಹಾಳು ಮಾಡಿಕೊಳ್ಳಬಾರದು. ಏಕೆಂದರೆ, ಶರೀರದ ಎಲ್ಲಾ ಅವಯವಗಳೂ ಯಕೃತ್ ಅನ್ನು ಅವಲಂಬಿಸಿ ಆರೋಗ್ಯದಿಂದ ಕೆಲಸ ನಿರ್ವಹಿಸುತ್ತಿರುತ್ತವೆ. 

★Fermented ಆಹಾರಗಳನ್ನು ಎಲ್ಲಿ ಬಳಸಬಹುದು?👇
ಶೀತ ಪ್ರದೇಶಗಳಾದ ಲಡಾಖ್, ಹಿಮಾಲಯದ ತಪ್ಪಲು, ಉತ್ತರಖಂಡ, ಚೀನಾ, ರಷ್ಯ, ಯು ಕೆ, ನಾರ್ಥ ಅಮೆರಿಕ , ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮುಂತಾದ  ಧ್ರುವ ಪ್ರದೇಶಗಳಿಗೆ ಹತ್ತಿರವಿರುವ ದೇಶಗಳಲ್ಲಿ ಮಾನವ ಶರೀರವು ಆಂತರಿಕವಾಗಿ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿರುವುದರಿಂದ ಅಲ್ಲಿ ಈ ಪದಾರ್ಥಗಳ ಸೇವನೆ ಅನಿವಾರ್ಯ. 

ಭೂಮಧ್ಯ ರೇಖೆಗೆ ಹತ್ತಿರವಿರುವ ಭಾರತ, ಶ್ರೀಲಂಕಾದಂತಹ ದೇಶಗಳಲ್ಲಿ ಹೊರಗಿನ ತಾಪಮಾನವೇ ಹೆಚ್ಚಿರುವುದರಿಂದ ಇಲ್ಲಿ ಆಂತರಿಕವಾಗಿ ಉಷ್ಣತೆಯನ್ನು ಬಿಡುಗಡೆ ಮಾಡುವಂತಹ ಆಹಾರಗಳ ಸೇವನೆಯಿಂದ ಅತೀ ಹೆಚ್ಚು ತೊಂದರೆ ಉಂಟಾಗುತ್ತದೆ.

ಹಾಗಾಗಿ, ಉದ್ದು ಹಾಕಿ ಹುಳಿಬರಿಸಿದ ಆಹಾರಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.
************


ಆಹಾರದಲ್ಲಿನ ಶಿಸ್ತು - ಭಾಗ 4
Fermented ಆಹಾರದ ಬಗ್ಗೆ ಓದುಗರ ಪ್ರಶ್ನೆಗಳಿಗೆ ಉತ್ತರಗಳು.
•••••••••••••••••••••••••••••••••••••••
ಬಹಳಷ್ಟು ಸಹೃದಯ ಓದುಗರು ಇಡ್ಲಿ-ದೋಸೆಗಳ ಬಗೆಗಿನ ಮಾಹಿತಿಗಾಗಿ  ಅಭಿನಂದನೆ ಸಲ್ಲಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು.
                 🌷🍃🌷
ಹಾಗೆಯೇ, ತಮ್ಮ ಪ್ರಶ್ನೆಗಳ ಮೂಲಕ ಇಂದಿನ ಈ ಸಂಚಿಕೆಗೆ ವಿಷಯವನ್ನು ಕೊಟ್ಟಂತಹ ಓದುಗರಿಗೂ ಧನ್ಯವಾದಗಳು.
                  🌷🍃🌷

ಈ ಪ್ರತಿಕ್ರಿಯೆಗಳನ್ನು ನೋಡಿದರೆ ನಾವು ಇಡ್ಲಿ-ದೋಸೆಗಳನ್ನು ಅದೆಷ್ಟು ನಿರಂತರವಾಗಿ ಸೇವಿಸುತ್ತಿದ್ದೇವೆ ಎಂದು ತಿಳಿದುಬರುತ್ತದೆ!!
ಆದರೆ, ಈ ಕಾರಣದಿಂದಲೇ ಅದೆಷ್ಟೋ ಕಾಯಿಲೆಗಳನ್ನು ತಂದುಕೊಂಡಿದ್ದೇವೆಂದು  ಅನೇಕರಿಗೆ ತಿಳಿದೇಯಿಲ್ಲ!!!

▪️ಪ್ರಶ್ನೆ 1:ಇಡ್ಲಿ-ದೋಸೆಗಳನ್ನು ಸೇವಿಸಿ ನಮ್ಮ ಹಿರಿಯರು 90-100 ವರ್ಷ ಆರೋಗ್ಯದಿಂದ ಜೀವಿಸಿದ್ದರಲ್ಲವೇ?
▫️ಉತ್ತರ: ಹೌದು. ಅದಕ್ಕೆ ಎರಡು ಕಾರಣಗಳಿವೆ, ಅವರು ಉದ್ದಿನಬೇಳೆ ಬಳಸುತ್ತಿರಲಿಲ್ಲ ಮತ್ತು ನಮ್ಮಷ್ಟು ನಿರಂತರವಾಗಿ ಸೇವಿಸುತ್ತಿರಲಿಲ್ಲ. 
ಬ್ರಿಟೀಷರ ಆಗಮನದ ನಂತರ ಭಾರತದಲ್ಲಿ ಈ ಪದ್ಧತಿ ಜಾರಿಗೆ ಬಂದಿದೆ. ಹೆಚ್ಚು ಕಡಿಮೆ ಅವರ ಎಲ್ಲಾ ಜೀವನ ಶೈಲಿಯನ್ನು ನಾವು ಅನುಕರಿಸಿರುವ ಕಾರಣ ಹುಳಿಬರಿಸುವ ವಿಧಾನದಿಂದ ತಯಾರಾದ ಇಡ್ಲಿ-ದೋಸೆಗಳು, ಮತ್ತು ಬೇಕರಿಗಳು ಚಾಲ್ತಿಗೆ ಬಂದವು. ಅವರ ದೇಶದಲ್ಲಿ ಮಾನವ ಜೀವಿಸಲು ಆಲ್ಕೋಹಾಲ್ ಸೇವನೆ, ಬ್ರೆಡ್-ಬಿಸ್ಕೆಟ್ ಸೇವನೆ, ಮನೆಯೊಳಗೆ ಅಗ್ಗಿಷ್ಟಿಕೆಯಿಂದ ಅಥವಾ ಹೀಟರ್ ಗಳಿಂದ ಮನೆಯ ಆಂತರಿಕವನ್ನು ವಾತಾವರಣವನ್ನು ಬೆಚ್ಚಗಿಟ್ಟುಕೊಳ್ಳುವುದು, ನೆಕ್ ಟೈ, ಕೋಟು, ಸಾಕ್ಸ್ , ಶೂ ಧರಿಸುವುದು ಮುಂತಾದವುಗಳು ಅತ್ಯಂತ ಅನಿವಾರ್ಯ. ದುರದೃಷ್ಟವಶಾತ್ ಟೈ-ಕೋಟು-ಬೂಟುಗಳನ್ನು ಸುಡುವ ಬಿಸಿಲಿನಲ್ಲೂ ಧರಿಸುವ ನಾವು ಬ್ರೆಡ್-ಬಿಸ್ಕೆಟ್-ದೋಸೆಗಳನ್ನೂ ಅನುಕರಣೆ ಮಾಡುತ್ತಿದ್ದೇವೆ.

▪️ಪ್ರಶ್ನೆ 2: ಉದ್ದಿನಬೇಳೆ ಇಷ್ಟೊಂದು ಹಾನಿಕರವೇ?
▫️ಉತ್ತರ: ಸ್ವಭಾವತಃ ಉದ್ದಿನಬೆಳೆಯು ಪುರೀಷವನ್ನು (ಮಲ) ಹೆಚ್ಚಿಸುತ್ತದೆ. ಅತಿಸಾರವಾಗಿ ಮಲಕ್ಷಯವಾದಾಗ, ಜೀರ್ಣಶಕ್ತಿಗೆ ಬಲ ಕುಂದಿರುವಾಗ ಔಷಧಿ ರೂಪದಲ್ಲಿ "ಮಾಷವನ್ನು (ಉದ್ದಿನಬೆಳೆ)" ಕೊಟ್ಟು ಮಲವನ್ನು ವೃದ್ಧಿಸಿ ಅಗ್ನಿ/ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತೇವೆ.

ನೇರ "ಮಾಷ"ವನ್ನು ಸೇವಿಸದೇ "ಮಹಾಮಾಷ ತೈಲ, ಮಾಷಬಲಾದಿ ಚೂರ್ಣ....." ಮುಂತಾದ ಔಷಧಿಗಳ ರೂಪದಲ್ಲಿ ತಯಾರಿಸಿ ಮಾಂಸಖಂಡಗಳನ್ನು, ಮೇದಸ್ಸನ್ನು(ಕೊಬ್ಬು) ಹೆಚ್ಚಿಸಲು ಬಳಸುತ್ತೇವೆ. 
ಆದರೆ, ಉದ್ದಿನಬೇಳೆಯನ್ನು (fermentation) ಕಿಣ್ವೀಕರಣಗೊಳಿಸಿ ಬಳಸಿದರೆ ಅದು ಮಾಂಸಮೇದಸ್ಸುಗಳನ್ನು ವೃದ್ಧಿಸುವ ಬದಲು ಶೀಘ್ರದಲ್ಲೇ ಶಕ್ತಿಯ ರೂಪದಲ್ಲಿ ಪರಿವರ್ತನೆಯಾಗುತ್ತದೆ. ಅದನ್ನೇ, ಸಾಮಾನ್ಯ ಜನರು heat ಎಂದು ಕರೆಯುತ್ತಾರೆ. ಹಾಗಾಗಿ, ಈ ರೂಪದಲ್ಲಿ ಬಳಸಲು ಉದ್ದಿನಬೇಳೆ ನಿಷಿದ್ಧವಾಗಿದೆ.

▪️ಪ್ರಶ್ನೆ 3: ಧ್ರುವ ಪ್ರದೇಶಗಳಲ್ಲಿ ಕಿಣ್ವೀಕರಣಗೊಂಡ ಆಹಾರ ಏಕೆ ಸೂಕ್ತ?
▫️ಉತ್ತರ : ಕಿಣ್ವೀಕರಣದ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್ ಉತ್ಪತ್ತಿಯಾಗುವುದರಿಂದ ಮತ್ತು ಈ ರೀತಿಯ ಆಹಾರಗಳಿಂದ ಉಷ್ಣತೆಯು ಬಿಡುಗಡೆಯಾಗುವುದರಿಂದ ಅಲ್ಲಿನ ತಂಪು ಹವಾಮಾನಕ್ಕೆ ಇದು ಅನಿವಾರ್ಯವಾಗಿ ಬೇಕಾಗುತ್ತದೆ. 

▪️ಪ್ರಶ್ನೆ 4: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ದೋಸೆಗಳನ್ನು ಬಳಸುತ್ತಿದ್ದರಲ್ಲವೇ?
▫️ಉತ್ತರ: ಹೌದು ಬಳಸುತ್ತಿದ್ದರು. ಅದು, ಮಲೆನಾಡು ಭಾಗದಲ್ಲಿ ನೀರ್ ದೋಸೆಯಾಗಿಯೂ , ಉತ್ತರಕರ್ನಾಟಕದಲ್ಲಿ ಜೋಳದ ದೋಸೆಯಾಗಿಯೂ, ಮೈಸೂರು ಪ್ರಾಂತ್ಯದಲ್ಲಿ ರಾಗಿದೋಸೆಯಾಗಿಯೂ, ವಾಯುವ್ಯ ಭಾರತದ ಭಾಗದಲ್ಲಿ ಗೋಧಿ ದೋಸೆಯಾಗಿಯೂ ಬಳಕೆಯಾಗುತ್ತಿತ್ತೇ ವಿನಃ ಈಗಿನ ಉದ್ದು ಹಾಕಿದ ಮಸಾಲೆದೋಸೆ ಆಗಿರಲಿಲ್ಲ. 

▪️ಪ್ರಶ್ನೆ 5: ನಿಮ್ಮ ಹಿಂದಿನ ಸಂದೇಶಗಳನ್ನು ಓದಿ ಉದ್ದಿನ ಬಳಕೆಯನ್ನು ಬಿಟ್ಟನಂತರ ಹೊಟ್ಟೆಯುಬ್ಬರ ಕಡಿಮೆಯಾಗಿದೆ ಮತ್ತು ಶರೀರ ಹಗುರವಾಗಿದೆ. ಇದಕ್ಕೆ ಸಂಬಂಧವಿದೆಯೇ? 
▫️ಉತ್ತರ: ಖಂಡಿತ ಇದೆ. ಅಗ್ನಿಯಿಂದ     ಜೀರ್ಣಕ್ಕೆ ಕಷ್ಟವಾಗುವ ಉದ್ದು , ತಾನು ಸ್ವತಃ ವಿಭಜನೆಗೊಂಡು ಗ್ಯಾಸ್ ಅನ್ನು ಬಿಡುಗಡೆಗೊಳಿಸುತ್ತದೆ (ಮೊಳಕೆಕಾಳುಗಳಂತೆ) ಹಾಗಾಗಿ , ಹೊಟ್ಟೆಯುಬ್ಬರ ಉಂಟಾಗುವುದು ಸಹಜ.
ಉದರದಲ್ಲಿ ವಾತ ಸಂಚಯವಾದಾಗ ಶರೀರದ ಸಂಧುಗಳು, ಮಾಂಸಖಂಡಗಳು ಜಡತ್ವ ಅನಿವಾರ್ಯವಾಗುತ್ತದೆ. ಹಾಗಾಗಿ, ಇಡ್ಲಿ-ದೋಸೆಗಳನ್ನು ಬಿಟ್ಟ ನಂತರ ಹೊಟ್ಟೆಯುಬ್ಬರ,ಜಡತ್ವ ಕಡಿಮೆಯಾಗುತ್ತದೆ. 


ಓದುಗರಲ್ಲಿ ಇನ್ನೇನಾದರೂ ಪ್ರಶ್ನೆಗಳಿದ್ದಲ್ಲಿ ಕೇವಲ ಇಪ್ಪತ್ತೊಂದು ದಿನಗಳ ಕಾಲ ಇಡ್ಲಿ-ದೋಸೆಗಳನ್ನು ನಿಲ್ಲಿಸಿದರೆ ಅವರ ಶರೀರದಲ್ಲಾಗುವ ಆರೋಗ್ಯಕರ ಬದಲಾವಣೆಗಳೇ ಅವರಿಗೆ ಉತ್ತರಗಳನ್ನು ಹೇಳುತ್ತವೆ.

ಅತ್ಮೀಯರೇ, 
ಕೆಲಕಾಲ ಉದ್ದು ರಹಿತ ಇಡ್ಲಿ-ದೋಸೆಗಳನ್ನು ಸೇವಿಸೋಣ
                         ⬇️
ಇತರರಿಗೂ ಈ ಹಾದಿಯನ್ನು ಪ್ರೋತ್ಸಾಹಿಸೋಣ
                         ⬇️
                         🤝
ಸ್ವಸ್ಥ ಸಮಾಜವನ್ನು ಕಟ್ಟೋಣ. 
                          🇮🇳 


🥀🥀🥀🥀⚜️⚜️⚜️⚜️🥀🥀🥀🥀
      ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
                     ಹಾಗೆಯೇ 
         ಸ್ವಾಸ್ಥ್ಯ ಸರ್ವರದ್ದೂ ಆಗಲಿ
**************

ಆತ್ಮೀಯರೇ ನಮಸ್ಕಾರ 🙏
••••••••••••••••••••••••••••••••••••••••••
26.09.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-270
••••••••••••••••
✍️: ಇಂದಿನ ವಿಷಯ:

ಕಾಂತಿಯುತ ತ್ವಚೆ-ಕೇಶದ ರಹಸ್ಯ 🔐 ❓
•••••••••••••••••••••••••••••••••••••••

ಕಾಂತಿಯುತ ಶರೀರ ಯಾರಿಗೆ ಬೇಡ‼️❔
ಅದಕ್ಕಾಗಿ ದೊಡ್ಡ ದೊಡ್ಡ ಕಂಪನಿಗಳನ್ನು ನಡೆಸುವಷ್ಟು ಹಣವನ್ನು ವಿನಿಯೋಗಿಸುತ್ತಿದ್ದೇವೆ. ನಿಜವಾದ ಮತ್ತು ಶಾಶ್ವತವಾದ ತ್ವಚೆಯ ಕಾಂತಿಗೆ ಮೂಲ ಕಾರಣ ಎಲ್ಲಿದೆ ನೋಡೋಣ. 

ಏಳು ಪದರಗಳ ನಮ್ಮ ಚರ್ಮವು ಕಾಂತಿಯನ್ನು ಹೊರಸೂಸಲು ಕಾರಣವಾಗುವ ಚರ್ಮದ ಪದರಕ್ಕೆ "ರೋಹಿಣಿ ತ್ವಚೆ" ಎಂದು ಹೆಸರು. ಇದರ ಬಗ್ಗೆ 2020 ರ ಜನವರಿಯಲ್ಲಿ ಸ್ವಲ್ಪ ಮಾಹಿತಿಯನ್ನು ನೋಡಿದ್ದೀರಿ, ಇಂದು ರೋಹಿಣಿ ತ್ವಚೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಬೇಕಾಗುವ ಆಹಾರ ವಿಹಾರ ಉಪಚಾರಗಳನ್ನು ನೋಡೋಣ. 

🔹ರೋಹಿಣಿ ತ್ವಚೆಯ ಆರೋಗ್ಯದ ಮೇಲೆ ನಮ್ಮ ಚರ್ಮದ ಬಣ್ಣ , ಕಾಂತಿ , ಬಲ ಮತ್ತು ಕೂದಲುಗಳ ಆರೋಗ್ಯ ಅವಲಂಬಿತವಾಗಿರುತ್ತದೆ. 
ಹಾಗಾಗಿ, ಈ ತ್ವಚಾ ಪದರದ ಆರೋಗ್ಯಕ್ಕೆ ಬೇಕಾದ ಉಪಾಯಗಳನ್ನು ನೋಡೋಣ:

🔹 ನಮ್ಮ ರಕ್ತ ಮತ್ತು ರೋಹಿಣಿ ತ್ವಚಾದಲ್ಲಿರುವ ರಕ್ತನಾಳಗಳೇ ಸಪ್ತ ತ್ವಚೆಗಳ ಪೋಷಣೆ ಮತ್ತು ಆರೋಗ್ಯವನ್ನು ನೋಡಿಕೊಳ್ಳುತ್ತವೆ. 
ಜಗತ್ತಿನ ಎಲ್ಲಾ ವಸ್ತುಗಳ ಬಣ್ಣಕ್ಕೆ ಕಾರಣವಾಗುವ ಸೂರ್ಯನ ತೇಜಸ್ಸು ನಮ್ಮ ಶರೀರದಲ್ಲಿ ರಕ್ತದ ರೂಪದಲ್ಲಿ ಇದೆ. ರಕ್ತವೇ ಈ ಶರೀರದ ಸೂರ್ಯ. ರಕ್ತ ಬಲವಾಗಿದ್ದರೆ ವ್ಯಕ್ತಿಯು ಕಾಂತಿಯುತವಾಗಿಯೂ, ಅದು ದುರ್ಬಲವಾಗಿದ್ದರೆ ಕಾಂತಿಹೀನವಾಗಿ ಕಾಣುತ್ತಾನೆ. 

🔹ರಕ್ತವು ಪಿತ್ತದ ಆರೋಗ್ಯದ ಮೇಲೆ ಅವಲಂಬಿತವಾಗಿದೆ, ಅಂದರೆ, ಶುದ್ಧ ಪಿತ್ತ ಉತ್ಪತ್ತಿಯಾದರೆ ಕಾಂತಿಯೂ ಮತ್ತು ಅಶುದ್ಧ ಪಿತ್ತ ಉತ್ಪತ್ತಿಯಾದರೆ ತೇಜೋ ಹೀನತೆಯು ಕಂಡುಬರುತ್ತದೆ. ಹಾಗಾಗಿ,
ಪಿತ್ತ ದೋಷವನ್ನು ಬಲಪಡಿಸುವ ಮತ್ತು ಅದರ ವಿಕೃತಿಯನ್ನು ನಿಯಂತ್ರಿಸುವ ಆಹಾರಗಳನ್ನು ಸೇವಿಸಿ. 

🔹ಕ್ಷೀರವು ಪಿತ್ತ ದೋಷದ ವಿಕೃತಿಯನ್ನು ನಿವಾರಿಸುವ ಶ್ರೇಷ್ಠ ಆಹಾರ ಮತ್ತು ಔಷಧವೂ ಆಗಿದೆ. 
ಔಷಧ ಮತ್ತು ಆಹಾರವಾಗಿ ಕೆಲಸ ನಿರ್ವಹಿಸುವ ಕ್ಷೀರವನ್ನು ಕುಡಿಯುವವರ ತ್ವಚೆಯು ಕಾಂತಿಯುತವಾಗಿರುವುದಲ್ಲಿ ಸಂದೇಹವೇ ಇಲ್ಲ. 

🔹ಮಕ್ಕಳು ಹೆಚ್ಚು ಹೆಚ್ಚು ಹಾಲನ್ನು ಸೇವಿಸುವ ಕಾರಣದಿಂದಲೇ ಕಾಂತಿಯುತವಾಗಿ ಕಾಣುತ್ತವೆ. 

🔹ಕ್ಷೀರವು ಮನೋಶಾಂತಿಯನ್ನು, ಸೌಮ್ಯತೆಯನ್ನು ದಯಪಾಲಿಸುತ್ತದೆ. ಇದೂ ಸಹ ಶರೀರದ ಕಾಂತಿಗೆ ಬಹು ದೊಡ್ಡ ಕಾರಣವಾಗಿದೆ. 

🔹ಪಿತ್ತದ ವಿಕಾರಗಳಲ್ಲಿ ಆಯುರ್ವೇದವು ಔಷಧಿ ದ್ರವ್ಯಗಳನ್ನು ಹಾಲಿನಲ್ಲಿ ಕುದಿಸಿ ಸೇವಿಸುವ ಕ್ಷೀರಪಾಕ ಎಂಬ ವಿಧಾನವನ್ನು ಪ್ರಧಾನವಾಗಿ ಹೇಳುತ್ತದೆ. 

🔹ಹಾಲಿನ ಸೋಪು, ಕ್ರೀಮ್, ಹಾಲಿನ ಲೇಪಗಳನ್ನು ಹಾಕುವುದರಿಂದ ಅತ್ಯಲ್ಪ ಲಾಭವನ್ನು ಪಡೆಯಬಹುದಷ್ಟೇ, ಅದೇ ಹಾಲನ್ನು ಸೇವಿಸಿದರೇ ಅತೀ ಹೆಚ್ಚು ಲಾಭವನ್ನು ಗಳಿಸಬಹುದು.

🔹ಯಾರ ಕೂದಲು ಕಾಂತಿಹೀನಾವಾಗಿದೆಯೋ, ಅಕಾಲದಲ್ಲಿ ಬೀಳುಪಾಗಿದೆಯೋ ಮತ್ತು ಯಾರ ಚರ್ಮವು ಅಕಾಲದಲ್ಲಿ ಸುಕ್ಕಾಗಿದೆಯೋ ಅವರುಗಳು ಸತತ ಇಪ್ಪತ್ತೊಂದು ದಿನಗಳ ಕಾಲ ಹಾಲು ಮತ್ತು ಅನ್ನವನ್ನು ವೈದ್ಯರ ಸಲಹೆಯ ಮೇರೆಗೆ ಬಳಸಿ. ಹೀಗೆ ಮಾಡಿ ಬಿಳಿಕೂದಲು ಕಪ್ಪಾದದ್ದನ್ನೂ, ಚರ್ಮದ ಸುಕ್ಕು ನಿವಾರಣೆಯಾದದ್ದನ್ನೂ ಕಂಡಿದ್ದೇವೆ. 

⏭️ಹಾಗೆಯೇ, ಕ್ಷೀರವನ್ನು ಸೇವಿಸದ ಅನೇಕ ಯುವಕ-ಯುವತಿಯರ ತ್ವಚೆ, ನೇತ್ರ, ಕೇಶಗಳ ಕಾಂತಿ ಗಣನೀಯವಾಗಿ ಕುಂದಿರುವುದನ್ನು ಕಂಡಿದ್ದೇವೆ. 
ಹಾಗಾಗಿ, ಆತ್ಮೀಯರೇ ದಯಮಾಡಿ ಬಾಲ್ಯದಿಂದ  ಇಪ್ಪತ್ತೈದು ವರ್ಷಗಳ ವರೆಗೆ ತಪ್ಪದೇ ನಿತ್ಯವೂ ಕ್ಷೀರ ಬಳಕೆಯನ್ನು ಮಾಡಿ.

           🔐  ➖🥛🔄 🔑➖ 🔓


           "ಇದೇ ಕಾಂತಿಯ ರಹಸ್ಯ"
***********


ಸಂಚಿಕೆ-271
••••••••••••••••
✍️: ಇಂದಿನ ವಿಷಯ:

ರಾತ್ರಿಯ ಆಹಾರದ ಪ್ರಾಮುಖ್ಯತೆ.
••••••••••••••••••••••••••••••••••••••• 
ರಾತ್ರಿಯ ಆಹಾರದ ಬಗ್ಗೆ ಇಂದು ಎರಡು ಪ್ರಮುಖ ವಿಷಯಗಳನ್ನು ನೋಡೋಣ:

⏺️ವಿಷಯ 1: 
ರಾತ್ರಿಯ ಆಹಾರವನ್ನು ಕಡ್ಡಾಯವಾಗಿ ಸೇವಿಸಲೇಬೇಕು.

ಆಯುರ್ವೇದದಲ್ಲಿ ಅಜೀರ್ಣವಿದ್ದಾಗ ಆಹಾರ ಸೇವಿಸಬಾರದು. ಏಕೆಂದರೆ, ಅದು ರೋಗವನ್ನುಂಟುಮಾಡುತ್ತದೆ ಎಂದು ಉಲ್ಲೇಖಿತವಾಗಿದೆ. 
ಆದರೆ, 
ಆಚಾರ್ಯರೆಲ್ಲರೂ ರಾತ್ರಿಯ ಆಹಾರವನ್ನು ಸೇವಿಸಲೇಬೇಕು ಎಂದು ಕಡ್ಡಾಯಗೊಳಿಸಿದ್ದಾರೆ. ಏಕೆಂದರೆ, ರಾತ್ರಿಯ ನಂತರ ಮುಂದಿನ 12 ರಿಂದ 14 ತಾಸುಗಳವರೆಗೆ ಏನನ್ನೂ ಸೇವಿಸುವುದಿಲ್ಲ. ಇಷ್ಟು ದೀರ್ಘಕಾಲದಲ್ಲಿ ಎಲ್ಲಾ ಅವಯವಗಳಿಗೆ ಬೇಕಾದ ಅತ್ಯಗತ್ಯ ಪೋಷಕಾಂಶಗಳನ್ನು ಪೂರೈಸದಿದ್ದರೆ ಮಾಂಸಖಂಡಗಳ, ಮೇದ-ಮಜ್ಜೆಗಳಲ್ಲಿನ ಶಕ್ತಿಯನ್ನು ವ್ಯಯಿಸಿಕೊಂಡು ಅವಯವಗಳು ಕಾರ್ಯವನ್ನು ನಿರ್ವಹಿಸುತ್ತವೆ. 

ವಿಶೇಷವಾಗಿ ಮಾನವನ ಮೆದುಳು ರಾತ್ರಿಯ ವಿಶ್ರಾಂತಿಯಿಂದಲೇ ಚುರುಕಾಗುತ್ತದೆ ಮತ್ತು ಮಜ್ಜೆಯು ಮೆದುಳಿಗೆ ಪೋಷಣೆಯನ್ನು ಮಾಡುತ್ತದೆ.
ಹಾಗಾಗಿಯೇ, ರಾತ್ರಿ ನಿದ್ದೆಗೆಟ್ಟವರು, ರಾತ್ರಿಯ ಆಹಾರ ಸೇವಿಸದವರು ಮರುದಿನ ಉತ್ಸಾಹಹೀನರಾಗಿರುತ್ತಾರೆ. ಮೆದುಳಷ್ಟೇ ಅಲ್ಲದೇ ಇನ್ನೂ ಅನೇಕ ಆವಯಗಳ ಸ್ವಾಸ್ಥ್ಯಕ್ಕಾಗಿ, ಪೋಷಣೆಗಾಗಿ, ಸವಕಳಿಯನ್ನು ತಡೆಯುವುದಕ್ಕಾಗಿ ರಾತ್ರಿಯ ಆಹಾರ ಅತ್ಯಂತ ಅನಿವಾರ್ಯ. ಹಾಗಾಗಿಯೇ ನಮ್ಮ ಹಿರಿಯರು ಹೇಳುತ್ತಿದ್ದರು "ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಬಾರದೆಂದು". ಅವರ ಆ ಜ್ಞಾನ ಸೂಕ್ಷ್ಮತೆಗೆ ಈಗಿನ ವಿಜ್ಞಾನ ಯುಗದ ನಾವು ತಲೆಬಾಗಲೇಬೇಕು🛐

〰️〰️〰️〰️〰️〰️〰️〰️〰️〰️

ಆದರೆ, ರಾತ್ರಿಯ ಆಹಾರದ ವಿಷಯದಲ್ಲಿ ಎರಡನೆಯದಾದ ಈ ಕೆಳಗಿನ ಪ್ರಮುಖ ವಿಚಾರವನ್ನು ಮರೆಯದೇ ಪಾಲಿಸಬೇಕು⏬

⏺️ವಿಷಯ 2: 
ರಾತ್ರಿಯ ಆಹಾರ ಮಿತವಾಗಿರಲೇಬೇಕು.

ಮೇಲಿನ ವಿಷಯವನ್ನೋದಿ ಸಂಭ್ರಮದಿಂದ ಶಕ್ತಿಯುತ ಆಹಾರಗಳನ್ನಾಗಲೀ, ಹೊಟ್ಟೆ ತುಂಬುವ ಹಾಗೆ ತಿನ್ನುವುದಾಗಲೀ ಮಾಡಿದರೇ ಆರೋಗ್ಯದ ಬದಲು ರೋಗವು, ಆಯು ಹ್ರಾಸತೆಯು (ಅಲ್ಪಾಯು) ಉಂಟಾಗುತ್ತದೆ. 

⭕ಅಧಿಕ ಆಹಾರದಿಂದ ಹಾನಿ->>

ಚಟುವಟಿಕೆಯನ್ನು ಶೇಕಡಾ 90 ರಷ್ಟು ಕಡಿಮೆ ಮಾಡಿಕೊಂಡ ರಾತ್ರಿಯ ಅವಸ್ಥೆಯಲ್ಲಿ ಅಧಿಕ ಶಕ್ತಿಯ, ಅಧಿಕ ಪ್ರಮಾಣದ ಆಹಾರ ಸೇವನೆಯಿಂದ ಖರ್ಚಾಗದೇ ಉಳಿಯುವ ಆಹಾರದ ಶಕ್ತಿಯು ಸಂಚಯವಾಗುತ್ತಾ ,
 ◆ಸ್ಥೌಲ್ಯ
◆ಕೊಬ್ಬಿನಂಶ ಹೆಚ್ಚುವಿಕೆ 
◆ಪ್ರೊಟೀನ್ ವಿಷ ಶೇಖರಣೆ
◆ಮೆದುಳಿನ ಜಾಡ್ಯ
◆ಹೃದಯದ ರಕ್ತನಾಳಗಳು ಕಟ್ಟಿಕೊಳ್ಳುವಿಕೆ 
 ◆ಕಿಡ್ನಿ ವೈಫಲ್ಯ
◆ಮಧುಮೇಹ
◆ಪಿ ಸಿ ಓ ಡಿ 
ಇನ್ನೂ ಮುಂತಾದ ಅನೇಕಾನೇಕ ರೋಗಗಳು ಉಂಟಾಗುತ್ತವೆ. 
ಆದರೆ, 
ವಿಶೇಷವಾಗಿ ಗಮನಿಸಿ: ಮಕ್ಕಳಿಗೆ ಈ ಸಿದ್ಧಾಂತ ಅನ್ವಯಿಸುವುದಿಲ್ಲ. ಏಕೆಂದರೆ, ಅವರ ಜೀವಕೋಶಗಳು ನಿರಂತರ ಬೆಳವಣಿಗೆಯಲ್ಲಿ ಅಂದರೆ, ಅವಯವಗಳು ಹಿಗ್ಗುವಿಕೆಯಲ್ಲಿ ತೊಡಗಿರುತ್ತವೆ. ರಾತ್ರಿ ಮಕ್ಕಳು ತಿಂದ ಆಹಾರ ಅಜೀರ್ಣವಾಗಲೀ, ರೋಗಕಾರಕವಾಗಿ ಆಗಲೀ ಪರಿಣಮಿಸುವುದಿಲ್ಲ. 

ಹದಿನಾರು ವರ್ಷ ಮೇಲ್ಪಟ್ಟವರೆಲ್ಲರೂ ರಾತ್ರಿಯ ಆಹಾರವನ್ನು ಮಿತವಾಗಿ ಸೇವಿಸುವುದರಿಂದ ಅಂದರೆ, ಅರ್ಧ ಪ್ರಮಾಣದಲ್ಲಿ ಸೇವಿಸುವುದರಿಂದ ಅನೇಕ ಲಾಭಗಳನ್ನು ಗಳಿಸಬಹುದು. ಅವುಗಳೆಂದರೆ, 
◆ಶರೀರದಲ್ಲಿ ಅನಗತ್ಯ ಕೊಬ್ಬು ಶೇಖರಣೆಗೊಳ್ಳದ್ದು. 
◆ಮಧುಮೇಹವನ್ನು ತಡೆಯಬಹುದು. 
◆ಬಿ ಪಿ ಬರುವುದನ್ನು ತಗಟ್ಟಬಹುದು. 
◆ನಿರಂತರ ಉತ್ಸಾಹವನ್ನು ಹೊಂದಿರಬಹುದು. 
◆ಸುಖವಾಗಿ ಆಳವಾದ ನಿದ್ದೆಯನ್ನು ಮಾಡಬಹುದು. 
◆ಓಜೋ ವರ್ಧನೆಯಿಂದ ಶರೀರ ಕಾಂತಿಯು , ದೀರ್ಘಾಯುವು ನಮ್ಮದಾಗುತ್ತದೆ. 


              🙂  ♻️  👨👩
      ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲೀ
               ಹಾಗೆಯೇ 
       ಸ್ವಾಸ್ಥ್ಯ ಸರ್ವರದ್ದೂ ಆಗಲಿ.
*******

18.10.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-292
••••••••••••••••
✍️: ಇಂದಿನ ವಿಷಯ:

ಸದಾ ಆತಂಕ , ಗಾಭರಿ ಇರುವವರಿಗಾಗಿ.....
•••••••••••••••••••••••••••••••••••••••

ನನಗೆ ಹೃದಯಾಘಾತವಾಗುತ್ತಿದೆ, ಸುಮ್ಮನೆ ಭಯವಾಗುತ್ತದೆ, ಜನರೆದುರು ಮಾತನಾಡಲು ಬಾಯಿ ಒಣಗುತ್ತದೆ, ಗಾಭರಿಯಿಂದ ಅಂಗೈ- ಅಂಗಾಲು ಬೆವರುತ್ತವೆ ಅಥವಾ ಆಗಾಗ ಕಂಪಿಸುತ್ತವೆ, ಸುಮ್ಮನೇ ದುಃಖ ಬರುತ್ತದೆ......
Anxiety neurosis ಎಂದು ಕರೆಸಿಕೊಳ್ಳುವ ಈ ಲಕ್ಷಣಗಳಿಗೆ ಮೂಲಕಾರಣ ನಮ್ಮ ಕರುಳಿನಲ್ಲಿರುತ್ತದೆ ಎಂಬುದು ಬಹುಜನರಿಗೆ ತಿಳಿದಿಲ್ಲ‼️

ಮೇಲಿನ ಲಕ್ಷಣ ಹೊಂದಿರುವವರು ಆಮ್ಲಪಿತ್ತದಿಂದ ಬಾಧೆಗೊಳಗಾದಾಗ ತೀವ್ರತರನಾಗಿ ಆ ಲಕ್ಷಣಗಳನ್ನು ಅನುಭವಿಸುತ್ತಾರೆ.
ಹಾಗೆಯೇ, ಇದೇ ರೋಗಿಗಳಿಗೆ ಆಮ್ಲಪಿತ್ತವಿಲ್ಲದೇ ಹೊಟ್ಟೆ ಹಗುರ ಇದ್ದಾಗ ಈ ಯಾವ ಲಕ್ಷಣಗಳೂ ಇಲ್ಲದೇ ನಿರಾತಂಕವಾಗಿ ಆರೋಗ್ಯದಿಂದಿರುವುದನ್ನು ಕಾಣಬಹುದು.

ಅನೇಕರ ಅನುಭವದ ನುಡಿಗಳಿವು. ಅಂದಮೇಲೆ ಚಿಕಿತ್ಸೆಯನ್ನು ಮೆದುಳಿಗೆ ಮಾಡಬೇಕೋ ? ಅಥವಾ ಕರುಳಿಗೆ ಮಾಡಬೇಕೋ?

◆◆◆◆◆◆◆◆◆◆◆◆◆

ಆಯುರ್ವೇದದಲ್ಲಿ " ಪ್ರಮೋಹ" ಎಂಬುದು ಮೇಲಿನ ಎಲ್ಲಾ ಲಕ್ಷಣಗಳನ್ನು ಒಳಗೊಂಡ ಒಂದು ಅವಸ್ಥೆಯಾಗಿದ್ದು, ಇದು, ಕೆಳಗಿನ ಕರುಳಿನಲ್ಲಿ ಉಂಟಾಗುವ ಆಮ್ಲೀಯತೆಯಿಂದ ಬರುವ ಒಂದು ಅವಸ್ಥೆ.

"ಅಧೋಗ ಆಮ್ಲಪಿತ್ತ" ಎಂದು ಇದನ್ನು ಗುರುತಿಸುತ್ತಾರೆ. 
ಆಮ್ಲ/ಹುಳಿಯ ಅಂಶ ಜಠರದಲ್ಲಿ ಹೆಚ್ಚಾದರೆ ವಾಂತಿ ಬಂದಂತಾಗುವುದು, ಊಟ ಸೇರದಿರುವುದು, ತಲೆನೋವು ಬರುವುದು ಮುಂತಾದ ಲಕ್ಷಣಗಳನ್ನು ತೋರಿಸುತ್ತದೆ. 
ಅದೇ ಆಮ್ಲ/ಹುಳಿಯು ಸಣ್ಣ ಕರುಳಿನ ಕೊನೆಯ ಭಾಗ ಮತ್ತು ದೊಡ್ಡಕರುಳಿನಲ್ಲಿ ಸೇರಿಕೊಂಡರೆ, ಮೆದುಳಿನ ಸ್ಥಿರತೆಯನ್ನು ಅಲುಗಾಡಿಸುತ್ತದೆ. ಹೀಗೆ ಅಸ್ಥಿರಗೊಂಡ ಮೆದುಳೇ ಆತಂಕ, ಭಯ, ಮುಂತಾದ ಲಕ್ಷಣಗಳುಳ್ಳ "ಪ್ರಮೋಹ" ಎಂಬ ಅವಸ್ಥೆಯನ್ನು ತರುತ್ತದೆ. 

"ಪ್ರಮೋಹ" ಎಂದರೆ ಇಲ್ಲದಿರುವ ರೋಗಲಕ್ಷಣಗಳನ್ನು ಇದೆ ಎಂಬಂತೆ, ಶೇಕಡಾ 100 ರಷ್ಟು ಸತ್ಯವೆಂಬಂತೆ ಆಭಾಸಗೊಳಿಸುವ ಮಿಥ್ಯಾತಂಕ ಅವಸ್ಥೆ.

◆◆◆◆◆◆◆◆◆◆◆◆◆

ಇದರ ಪರಿಹಾರಕ್ಕಾಗಿ ,
◆ಪಚನಕ್ಕೆ ಕಷ್ಟವಾಗಿ, ಗ್ಯಾಸ್ ಉತ್ಪತ್ತಿಮಾಡುವ ಯಾವುದೇ ಆಹಾರವನ್ನು ಆರು ವಾರಗಳ ಕಾಲ ಸಂಪೂರ್ಣವಾಗಿ ನಿಲ್ಲಿಸಿ. 
◆ಹಗುರವಾಗಿ ಪಚನವಾಗುವ ಆಹಾರಗಳನ್ನು ಸೇವಿಸಿ.
◆ಬಾಳೆಹಣ್ಣು, ಕಲ್ಲಂಗಡಿಯನ್ನು ಹೊರತುಪಡಿಸಿ ಆಯಾ ಋತುವಿನಲ್ಲಿ ಸಿಗುವ ಎಲ್ಲಾರೀತಿಯ ಹಣ್ಣುಗಳನ್ನು ಆಹಾರವಾಗಿ ದಿನದಲ್ಲಿ ಒಂದುಹೊತ್ತು  ಸೇವಿಸಿ. 
◆ಯಾವುದೇ ಕಾರಣಕ್ಕೂ ಹಸಿಯ ತರಕಾರಿ, ಮೊಳಕೆಕಾಳುಗಳನ್ನು ಸೇವಿಸದೇ ಮೇಲಿನ ಆಹಾರ ನಿಯಮ ಪಾಲಿಸಿ ಭಯಾತಂಕಗಳಿಂದ ಶಾಶ್ವತವಾಗಿ ನಿವೃತ್ತಿಯನ್ನು ಹೊಂದಿರಿ.

ಇಷ್ಟಾಗಿಯೂ ಸ್ವಲ್ಪಮಟ್ಟಿನ ಆತಂಕ ಉಳಿದರೆ ಮನೋವೈದ್ಯರ ಬದಲಾಗಿ ಆಯುರ್ವೇದೀಯ "ಕಾಯಚಿಕಿತ್ಸಕ"ರನ್ನು ಭೇಟಿಯಾಗಿ.

••••••••••••••••••••••••••••••••••••••••••
ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

🙏ಧನ್ಯವಾದಗಳು🙏

No comments:

Post a Comment