SEARCH HERE

Saturday, 20 February 2021

ಭೀಷ್ಮರ ಚರಿತ್ರೆ bheeshma charitre

ಮಾಘ ಶುಕ್ಲ ಅಷ್ಟಮಿ - ಭೀಷ್ಮಾಷ್ಟಮಿ 

ಭೀಷ್ಮರ ಚರಿತ್ರೆ  

ಲೇಖನ. ಮಧುಸೂದನ ಕಲಿಭಟ್ ಬೆಂಗಳೂರು

ವಿಕಾರಿ ಪುಷ್ಯ ಕೃ. ಏಕಾದಶಿ 21.1.2020.

ಒಂದಾನೊಂದು ಕೆಲದಲ್ಲಿ ಬ್ರಹ್ಮದೇವನು ಪೂರ್ವ ಸಮುದ್ರ ತೀರದಲ್ಲಿ ಧ್ಯಾನದಲ್ಲಿ ಕುಳಿತಿದ್ದನು.   ಅದು ಗಂಗಾ ನದಿ ಸಮುದ್ರ ಸೇರುವ ಗಂಗಾ ಸಾಗರ ಕ್ಷೇತ್ರ ವಾಗಿತ್ತು.  ಅಂದು ಹುಣ್ಣಿಮೆ, ಸಮುದ್ರ ರಾಜ ವರುಣ ತನ್ನ ಪತ್ನಿ ಹರಿದು ಬರುವದನ್ನು ನೋಡಿ ಸಂತೋಷv ಉಕ್ಕಿ ಹರಿಸುತ್ತಿದ್ದ.  ಆಗ ಒಂದು ಹನಿ ನೀರು ಬ್ರಹ್ಮನ  ಮೈಮೇಲೆ ಬಿದ್ದು ಅವನ ಧ್ಯಾನ ಭಂಗ ಆಯಿತು.  ಬ್ರಹ್ಮ ದೇವ ವರುಣನಿಗೆ ನೀನು ಎರಡು  ಜನ್ಮ ಮನುಷ್ಯ ಯೋನಿಯಲ್ಲಿ ಜನಿಸು ಎಂದು ಶಾಪ ಕೊಟ್ಟನು.  ಮೊದಲು ಮಹಾಭಿಷಕ್ ಎಂಬ ರಾಜ, ನಂತರ ಇನ್ನೊಂದು.  ವರುಣ ಉಕ್ಕಿ ಬಂದಾಗ ಬ್ರಹ್ಮ ಶಾಂತ ತನು  ಎಂದುಹೇಳಿದ  ಕಾರಣ ವರುಣ ಪ್ರತೀಪ ರಾಜನ ಮಗ ಶಂತನು ಆದನು.   ಒಂದು ಜನ್ಮ ನಂತರ ದೇವಲೋಕದಲ್ಲಿ ಸಭೆ ನಡೆದಾಗ ಗಂಗಾ ದೇವಿಯ ಸೆರಗು ಜಾರಿತು.  ಎಲ್ಲ ದೇವತೆಗಳು ತಲೆ ಕೆಳಗೆ ಹಾಕಿದರು.  ವರುಣ ಮಾತ್ರ ತನ್ನ ಮಡದಿಯನ್ನು ನೋಡುತ್ತಲೇ ಇದ್ದನು.  ಆಗ ಬ್ರಹ್ಮನು ವರುಣನಿಗೆ ಈಗಲೇ ಮಾನವ ಲೋಕಕ್ಕೆ ಹೋಗೆಂದು ನುಡಿದನು.  ಗಂಗೆ ಮಾತ್ರ ದೇವತಾ ರೂಪದಿಂದ ತನ್ನ  ಪತಿಯ ಬಲಿ ಬರಲು ನಿರ್ಧಾರ ಮಾಡಿದಳು.  

ಅಷ್ಟ ವಸುಗಳಲ್ಲಿ ಕೊನೆಯವನು ದ್ಯು  ನಾಮಕ ವಸು . ಅವನ ಹೆಂಡತಿ ವರಾಂಗಿ.  ಕುರಂಗ ಎಂಬ ರಾಜನ ರಾಣಿಯ ಹೆಸರು ವರಾಂಗಿ.  ರಾಣಿಯು ವಸುವಿನ ಪತ್ನಿಗೆ ನಂದಿನಿ ಹಸುವಿನ ಹಾಲು ತಂದು ಕೊಡಲು ವಸುವಿಗೆ ಕೇಳೆಂದು ಹೇಳಿದಳು.  ಅದರಿಂದ 10000 ವರ್ಷ ಯೌವನ ಇರುವದೆಂದು ಪ್ರೋತ್ಸಾಹಿಸಿದಳು. ಪತ್ನಿಯ ಮಾತಿಗೆ ಒಪ್ಪಿ ದ್ಯು ವಸುವು  ನಂದಿನಿಯನ್ನು ತರಲು ತನ್ನ ಅಣ್ಣಂದಿರ ಸಹಾಯ ಕೇಳಿದನು.  ಎಂಟೂ ಜನರು ಕೂಡಿಕೊಂಡು ವಸಿಷ್ಠ ಋಷಿ ಆಶ್ರಮಕ್ಕೆ ಬಂದು ಹಸುವಿನ ಕಳುವಿಗೆ ಪ್ರಯತ್ನಿಸಿದರು.  ಇದನ್ನು ನೋಡಿ ವಸಿಷ್ಠರು ಕೋಪದಿಂದ ಏಳು ಜನ ವಸುಗಳಿಗೆ ಮಾನವರಾಗಿ ಹುಟ್ಟಿರೆಂದು ಶಾಪ ಕೊಟ್ಟರು.  ದ್ಯು  ನಿಗೆ ಹೆಂಡತಿಯ ಮಾತು ಕೇಳಿದ್ದಕ್ಕೆ ಮನುಷ್ಯನಾದಾಗ ಮದುವೆ  ಆಗುವದೇ ಬೇಡ ಎಂದು ಹೇಳಿದರು.  ಉಳಿದ ವಸುಗಳು ಗಂಗೆಯಲ್ಲಿ ಬೇಡಿಕೊಂಡು ತಾವೆಲ್ಲರೂ ಅವಳ ಮಕ್ಕಳಾಗಿ ಜನಿಸುವೆವು. ನೀನು ನಮ್ಮನ್ನು ಜನಿಸಿದ ತಕ್ಷಣ ನಡಿಗೆ ಹಾಕಿ ಸಾಯಿಸಬೇಕೆಂದು ಕೇಳಿ ಕೊಂಡರು.  ಗಂಗೆ ಒಪ್ಪಿದಳು ಆದರೆ ವರ ಬೇಡಿದಳು.  ಏನೆಂದರೆ ತನಗೆ ಶಿಶು ಹತ್ಯ  ಪಾಪ ಬರಬಾರದು ಎಂದು ಕೇಳಿದಳು.  ಅದಕ್ಕೆ ವಸುಗಳು ಆಗಲಿ ಎಂದು ತಮ್ಮ ಏಳು ಜನರ ಬುದ್ಧಿ ಜ್ಞಾನ ಆಯುಷ್ಯವನ್ನು ದ್ಯು  ನಿಗೆ ಕೊಡುತ್ತೇವೆ  ಅವನು ಪ್ರಸಿದ್ಧ ನಾಗಿ ಬಾಳಲಿ ಎಂದು  ಹರಿಸಿದರು.

*****

ಭೀಷ್ಮರ ಚರಿತ್ರೆ         ಭಾಗ 2

ಇತ್ತ ಗಂಗೆ ಪ್ರತೀಪ ರಾಜನಲ್ಲಿ ಸುಂದರ ಸ್ತ್ರೀ ರೂಪ ಧರಿಸಿ ಆತನ ಬಾಳ ತೊಡೆಯ ಮೇಲೆ ಕುಳಿತಳು.  ಬಲತೊಡೆಯ ಮೇಲೆ ಕುಳಿತದ್ದರಿಂದ ಅವಳು ರಾಜನಿಗೆ ಸೊಸೆ, ಮಗಳ ಸಮಾನಳಾದಳು.  ಅವಳುರಾಜನಿಗೆ ಕರಾರು ಹಾಕಿದಳು.  ನಿನ್ನ ಮಗ ಶಂತನು ನನ್ನ ಗಂಡನಾಗಬೇಕು, ನಾನು ಮಾಡುವ ಯಾವದೇ ಕೆಲಸಕ್ಕೆ ಹೀಗೇಕೆ ಮಾಡುವಿ ಎಂದು  ಕೇಳಬಾರದು, ನಾನು ಯಾರೆಂದು ಕೇಳಬಾರದು.  ಈ ಮಾತುಗಳನ್ನು ಮೀರಿದರೆ ನಾನು ಹೋಗುವೆನು.  ಎಂದು ಹೇಳಿ ರಾಜನನ್ನು ಒಪ್ಪಿಸಿ ಶಂತನುವನ್ನು ವಿವಾಹವಾದಳು.  ಒಂದಾದ ಮೇಲೆ ಒಂದರಂತೆ ಏಳು ಮಕ್ಕಳನ್ನುಹುಟ್ಟಿದ ತಕ್ಷಣ ನದಿಗೆ  ಎಸೆದಳು.  ಶಂತನುವಿಗೆ ಇದನ್ನು ನೋಡಿ ಮನಸ್ಸಿಗೆ ಖೇದ ಆಯಿತು. ಕೊನೆಗೆ ಎಂಟನೇಯ ಶಿಶುವನ್ನು 

ಎಸೆಯುವದರಲ್ಲಿ  ಹೇ  ಚಂಡಾಲಿ ನೀನುಯಾರು ಎಂದು ಕೇಳಿದನು.  ಗಂಗೆ ಮಗುವನ್ನು ಅವನ ಕೈಯಲ್ಲಿ ಹಾಕಿ ತಾನು ಗಂಗೆ ನಿನ್ನ ಪತ್ನಿಯೆಂದು ಹೇಳಿದಳು. ಮಗುವಿಗೆ 300ವರ್ಷ ಪರಶುರಾಮರಲ್ಲಿ ಅಸ್ತ್ರ ಮತ್ತು ಶಸ್ತ್ರ ವಿದ್ಯಾಭ್ಯಾಸ ಮಾಡಿಸಿ ಕಳಿಸಿದಳು .  ಮಗನಿಗೆ ದೇವವೃತ ಎಂದು ನಾಮಕರಣ ಮಾಡಿದ್ದಳು.  ದೇವವೃತನಿಗೆ ಇನ್ನು ಕಲಿಯಬೇಕು ಎಂಬ ಆಶೆ.  ಮತ್ತೆ ಪರಶುರಾಮರಲ್ಲಿ ಹೋಗಿ 200 ವರ್ಷ ಶಾಸ್ತ್ರ ಅಭ್ಯಾಸ ಮಾಡಿ ಮರಳಿ ತಂದೆ ಹತ್ತಿರ ಬಂದನು. 


ವಸಿಷ್ಠ ಋಷಿ ಗಳು ವಸುಗಳಿಗೆ ಶಾಪ ಕೊಡುವಾಗ ಅವರಲ್ಲಿ ಅಗ್ನಿ ಯೂ ಒಬ್ಬ ವಸುವಾಗಿದ್ದನು.  ತಾರತಮ್ಯ ಪ್ರಕಾರ ಅಗ್ನಿ ವಸಿಷ್ಠರಿಗಿಂತ ಮೇಲಿನ ಕಕ್ಷೆ.  ಕೆಳಗಿನ  ಕಕ್ಷೆಯ ಋಷಿಗಳಿಂದ ಶಾಪ ಹೇಗೆ ಎಂಬ ಪ್ರಶ್ನೆ.  ವಸಿಷ್ಟರಲ್ಲಿ  ಬ್ರಹ್ಮ ದೇವರ ಆವೇಶ ಇದ್ದಿದ್ದರಿಂದ ಅಗ್ನಿ ಶಾಪ ವನ್ನೂ ಸ್ವೀಕರಿಸಿದನು.  ಋಷಿ ಗಳು ದ್ಯು  ನಿಗೆ ಏಳು ಜನರ ಗರ್ಭ ವಾಸ, ಏಳುಜನರ ಮರಣ ಕಾಲದ ದುಃಖ ಆಗಲೆಂದು ನುಡಿದರು.  


ತಂದೆಯ ಬಳಿ ಬಂದ ದೇವವೃತನು ತಂದೆಗೆ ದಾಶರಾಜನ ಪುತ್ರಿ ಸತ್ಯವತಿಯ ಮೇಲೆ ಮನಸು ಆಗಿದೆ ಎಂದು ತಿಳಿದು ಕೊಂಡನು.  ದಾಶರಾಜ ಬಳಿಬಂದು ಅವನ ಪುತ್ರಿಯನ್ನು ತನ್ನ ತಂದೆಗೆ ಮದುವೆ ಮಾಡಿಕೊಡಬೇಕೆಂದು ವಿನಂತಿ ಮಾಡಿದನು.  ಆಗ ದಾಶ ರಾಜ ಒಂದು ಕರಾರು ಮಾಡಿದನು.  ಮಗಳ ಹೊಟ್ಟೆಯಿಂದ ಹುಟ್ಟುವ ಮಕ್ಕಳಿಗೆ ರಾಜ್ಯ ಸಿಂಹಾಸನ ಕೊಡುವದಾದರೆ ಮಾತ್ರ ಮಗಳನ್ನು ಕೊಡುವೆನೆಂದನು.  ಇದಕ್ಕೆ ದೇವವೃತನು  ತಾನು  ಆಜನ್ಮ ಬ್ರಹ್ಮಚಾರಿ ಯಾಗಿ ಇರುವೆನೆಂದು,ತಂದೆಗಾಗಿ ಘೋರ ಪ್ರತಿಜ್ಞೆ ಮಾಡಿದನು.  ದೇವತೆಗಳು ಈ ಪ್ರತಿಜ್ಞೆ ಕೇಳಿ ಅವನಿಗೆ ಭೀಷ್ಮ ಎಂದು ಕರೆದರು.   ಶಂತನು ರಾಜನು ಮಗನ ತ್ಯಾಗಕ್ಕೆ ಮೆಚ್ಚಿ ಇಚ್ಚಾಮರಣಿ  ಯಾಗೆಂದು ಹರಿಸಿದನು.  ಸತ್ಯವತಿಯಲ್ಲಿ ಚಿತ್ರವೀರ್ಯ, ವಿಚಿತ್ರವೀರ್ಯ  ಇಬ್ಬರು ಮಕ್ಕಳು.  ಆದರೆ ಆವರು ಮಕ್ಕಳಿಲ್ಲದೆ ಮರಣಹೊಂದಿದರು.   ಆಗ ಸತ್ಯವತಿಯು ವೇದವ್ಯಾಸ ರನ್ನು ನೆನೆದು ನಿಯೋಗ ಪದ್ಧತಿ ಪ್ರಕಾರ ಸೊಸೆಯರಲ್ಲಿ ಮತ್ತು ದಾಸಿಯಲ್ಲಿ, ಕ್ರಮವಾಗಿ ಹುಟ್ಟು ಕುರುಡ ಧೃತರಾಷ್ಟ್ರ, ಪಾಂಡು, ಮತ್ತು ವಿದುರ  ಹುಟ್ಟುವರು.

******


ದೇವವೃತನು  ತಮ್ಮ ವಿಚಿತ್ರವೀರ್ಯನಿಗೆ ವಿವಾಹ ಮಾಡಲೆಂದು ಕನ್ಯೆ ಹುಡುಕುತ್ತಲಿದ್ದನು.  ಇನ್ನೊಬ್ಬ ತಮ್ಮ ಚಿತ್ರಾಂಗದ ಒಂದು ದಿನ ಚಿತ್ರಾಂಗದನೆಂಬ ಗಂಧರ್ವ ನಿಂದ ಯುದ್ಧದಲ್ಲಿ ಹತನಾದನು.  ಚಿತ್ರಾಂಗದನಿಗೆ ಚಿತ್ರವೀರ್ಯ  ಎಂದು ಹೆಸರಿದೆ.  ಹೀಗಿರಲಾಗಿ ಕಾಶಿ ರಾಜ ತನ್ನ ಮೂವರು ಹೆಣ್ಣು ಮಕ್ಕಳನ್ನು  ಸಾಲ್ವ ದೇಶದ ರಾಜ ಬ್ರಹ್ಮದತ್ತ ನಿಗೆ ಕೊಟ್ಟು ವಿವಾಹ ಮಾಡುವ ಸಮಯದಲ್ಲಿ ಭೀಷ್ಮರು ಕನ್ಯೆಯರನ್ನು ಅಪಹರಿಸಿ ರಥದಲ್ಲಿ ಕೂಡಿಸಿ ಕೊಂಡು  ಬಂದರು.  ರಾಜರೆಲ್ಲರೂ ಬೆನ್ನಟ್ಟಿದರೂ   ಅವರನ್ನು ಸೋಲಿಸಿ ಕರೆತಂದರು.  ಕನ್ಯೆಯರ ಹೆಸರು ಕ್ರಮವಾಗಿ ಅಂಬೆ, ಅಂಬಿಕೆ, ಅಂಬಾಲಿಕೆ  ಎಂದು ಇತ್ತು. ಅವರು ಎಲ್ಲಿಗೆ ಕರೆದೊಯ್ಯುತ್ತಿರುವೆ ಎಂದು ಕೇಳಿದಾಗ ತಮ್ಮನಿಗೆ ಮದುವೆ ಮಾಡಲು ಎಂದು ಹೇಳಿದರು.  ಅಂಬೆ ಮಾತ್ರ ಒಪ್ಪಲಿಲ್ಲ.  ನಿನ್ನನ್ನೇ ಮದುವೆ ಆಗುವೆ ಎಂದು ಹಠ ಹಿಡಿದಳು.  ಅದು ಶಕ್ಯವಿಲ್ಲ, ನಾನು ಬ್ರಹ್ಮಚಾರಿ  ಎಂದು ಹೇಳಿದರು.  ಅಂಬೆ ಬ್ರಹ್ಮದತ್ತನ ಹತ್ತಿರ ವಿವಾಹ ಆಗಲು ಕೇಳಿಕೊಂಡಳು. ಅವನು ಒಪ್ಪಲಿಲ್ಲ.  ಮತ್ತೆ ಭೀಷ್ಮರಲ್ಲಿ ಬಂದಳು.  ಅವರೂ ನಿರಾಕರಿಸಿದರು.  ಹೀಗೆ ಅವಳು ಇಬ್ಬರ ನಡುವೆ ಓಡಾಡಿ ಆರು ವರ್ಷ ಕಳೆದಳು.  ಹೇಗಾದರೂ ಮಾಡಿ ಭೀಷ್ಮರನ್ನೇ ವರಿಸಬೇಕೆಂದು ಪಣ ತೊಟ್ಟಳು.  ಇತ್ತ ಭೀಷ್ಮರು ತಮ್ಮ ವಿಚಿತ್ರವೀರ್ಯನ ವಿವಾಹ ಮಾಡಿದರು.  ಆದರೆ ಅವನಿಗೆ ಸಂತಾನ ಆಗಲಿಲ್ಲ. 

          ಅಂಬೆ ಗುರುಗಳಿಂದ ಭೀಶ್ಮನಿಗೆ ಹೇಳಿಸಿ ವಿವಾಹ ಆಗೋಣ ಎಂದು ಪರುಶರಾಮರಲ್ಲಿಗೆ ಹೋಗಿ ತನ್ನ ಕಥೆ ಹೇಳಿ ವಿನಂತಿಸಿಕೊಂಡಳು. ಅವರು  ಭೀಷ್ಮರಿಗೆ ತಿಳಿಹೇಳಿದರು.  ಅದು ಫಲಿಸಲಿಲ್ಲ.  ಗುರುವಿನ ಸಂಗಡ ಯುದ್ಧ ವಾಯಿತು.  ಅದರಲ್ಲಿ ಭಾರ್ಗವರ ಕಪಟನಾಟಕದಿಂದ ಶಿಷ್ಯನಿಗೇ  ಜಯವಾಯಿತು.  ಅಂಬೆ ನಿರಾಶಳಾಗಿ ಮದುವೆ ವಿಚಾರ ಬಿಟ್ಟು ಭೀಷ್ಮರನ್ನು ಸಂಹಾರ ಮಾಡುವ ಯೋಜನೆ ಮಾಡಿದಳು.  ಅಂಬೆ ಪೂರ್ವ ಜನ್ಮದಲ್ಲಿ ದ್ಯು ನಾಮಕ ವಸುವಿನ ಮಡದಿ ವರಾಂಗಿ ಆಗಿದ್ದಳು.  ನಂದಿನಿ ಹಸುವಿನ ಕಳ್ಳತನಕ್ಕೆ ಗಂಡನ ಮನಸ್ಸು ಓಲಸಿದ್ದರಿಂದ, ಅವಳಿಗೇ ವಿವಾಹ ಆಗುವದು ಬೇಡ ವೆಂಬ ಶಾಪ ವಸಿಷ್ಠ ಋಷಿಗಳು  ಕೊಟ್ಟಿದ್ದರು.  ಅಂಬೆ ಶಿವನನ್ನು ಕುರಿತ ತಪಸ್ಸು ಮಾಡಿದಳು.  ಶಿವನು ಒಂದು ಹಾರ ವನ್ನು ಕೊಟ್ಟು ಇದನ್ನು ಯಾರ ಕೊರಳಿಗೆ ಹಾಕು ವಿಯೋ ಅವರಿಂದ ಭೀಷ್ಮ ಸಾಯು ವನು. 

ಎಂದು ರುದ್ರ ದೇವ ಅಂಬೆಯನ್ನು  ಹರಿಸಿ ಕಳಿಸಿದನು.


ನಂತರ ಅಂಬೆಯು  ದ್ರುಪದ  ರಾಜನ ಹತ್ತಿರ ಬಂದು ಮಾಲೆ ಹಾಕಿ ಕೊಳ್ಳಲು ಕೇಳಿದಳು.  ಭೀಷ್ಮರ  ಶೌರ್ಯ  ತಿಳಿದು  ಅವನೂ ನಿರಾಕರಿಸಿದನು. ಮಾಲೆ ಬಾಡದೆ  ಹಾಗೆ ಇತ್ತು. ರುದ್ರ ದೇವ ಕೊಟ್ಟಾಗ  ಅಂಬೆ ಕೊರಳಲ್ಲಿ  ಧರಿಸಿದಳು.  ಕೊನೆಗೆ ಆ ಹಾರವನ್ನು ರಾಜನ ಮನೆಯ  ಬಾಗಿಲ  ಬಳಿ ಇಟ್ಟು  ಹೋಗಿ ದೇಹ ತ್ಯಾಗ  ಮಾಡಿದಳು. ದ್ರುಪದನು  ನೋಡಿ ಹಾರವನ್ನು ದೇವರ ಮನೆಯಲ್ಲಿ  ಇಟ್ಟನು. ಅದೇ ಹಾರವನ್ನು ಮುಂದೆ ದ್ರೌಪದಿಯು ಅರ್ಜುನಗೆ  ಹಾಕಿದಳು.  ಕಾರಣ ಅರ್ಜುನ  ಭೀಷ್ಮರನ್ನು  ಗೆದ್ದನು.  

ಸ್ವಲ್ಪ ಕಾಲದ ನಂತರ ದ್ರುಪದ ರಾಜನಿಗೆ ಗಂಡು ಮಗು ಆಗಬೇಕು  ಎಂಬ ಆಸೆ  ಆಗಿ ರುದ್ರ ದೇವರ ಕುರಿತು ತಪಸ್ಸು ಮಾಡುವನು. ಅದರ ಫಲವಾಗಿ ರುದ್ರ ದೇವರು  ರಾಜನಿಗೆ  " ರಾಜಾ ನಿನಗೆ  ಹೆಣ್ಣು ಮಗು ಆಗಿ ಅದೇ ನಂತರ ಗಂಡು  ಆಗುವದೆಂದು ಹರಸಿದರು. ದ್ರುಪದನಿಗೆ ಕಾಲಾನಂತರ  ಹೆಣ್ಣು ಮಗು ಆಯಿತು. ಆದರೆ ರಾಜ ರಾಣಿ ಗುಟ್ಟು ಒಡೆಯದೇ  ಗಂಡು ಮಗು ಎಂದು ಪ್ರಚಾರ ಮಾಡಿದರು. ಪುರುಷ ಅಲಂಕಾರ ವನ್ನು ಮಗುವಿಗೆ  ಮಾಡಿದರು. ಶಿಖಂಡಿ ಎಂದು ನಾಮಕರಣ ಮಾಡಿದರು. ಎಲ್ಲಾ ತರಹದ ವಿದ್ಯೆ  ಕಲಿಸಿದನು. ದಶಾ ರ್ಣ  ದೇಶದ ರಾಜಕುಮಾರಿ  ಜೊತೆಗೆ ವಿವಾಹ ಮಾಡಿದನು. ಮಗನು ಇಂದಿಲ್ಲ ನಾಳೆ ಪುರುಷ ನಾಗುವ ಎಂದು ನಂಬಿಕೆ ಇತ್ತು. ಬೀಗನಾದ ರಾಜಮಗಳಿಗೆ ಮೋಸ ಆಯಿತು ಎಂದು ಯುದ್ಧಕ್ಕೆ  ಬಂದನು.  ದ್ರುಪದ ನಿಮಗೆ  ಗೊತ್ತು ಆಗಿಲ್ಲ,  ನನ್ನ ಮಗ ಗಂಡಸೇ ಎಂದು ವಾದಿಸಿದ. ಇತ್ತ  ಶಿಖಂಡಿ ಅಡವಿಗೆ  ಹೋಗಿ ಅಲ್ಲಿ ತುಂಬುರು  ಎಂಬ ಗಂಧರ್ವಗೆ ತನ್ನ ಕಥೆ ಹೇಳಿದನು. ಆತನು ಕರುಣೆ ತೋರಿಸಿ ತನ್ನ ಪುರುಷ ದೇಹವನ್ನು ಒಂದು ದಿನದ ಮಟ್ಟಿಗೆ ಕೊಟ್ಟನು.  ದಶಾರ್ಣ  ರಾಜನಿಗೆ  ಸಂತೋಷವಾಯಿತು. ಮತ್ತೆ ಶಿಖಂಡಿ  ಗಂಧರ್ವನಲ್ಲಿ ಬಂದು ಪುರುಷ ದೇಹ ಕೊಡಲು  ಹೋದನು. ಅಲ್ಲಿ ಆದದ್ದೇ ಬೇರೆ. ಕುಬೇರ ಗಂಧರ್ವರ ರಾಜ. ಅವನು ತುಂಬುರ ನಿಗೆ ಕರೆದಾಗ ಅಡಗಿ ಕುಳಿತ. ಇದು ಕುಬೇರನಿಗೆ ತಿಳಿದು ನಿನಗೆ  ಸ್ತ್ರೀ ದೇಹವು  ಶಿ ಖಂಡಿ ಸಾಯುವ ವರೆಗೆ ಇರಲಿ ಎಂದು ಶಾಪಿಸಿದನು.  ಹೀಗಾಗಿ ಶಿಖಂಡಿ ಹೆಣ್ಣು ಹೋಗಿ ಗಂಡಾದನು.

*******


ಮಹಾಭಾರತ ಯುದ್ಧ ನಡೆದಾಗ  ಒಂಬತ್ತು ದಿನವಾದರೂ ಭೀಷ್ಮ ಸೋಲಲಿಲ್ಲ.  ಸಾವಿರಾರು ಸೈನಿಕರು ಸಾಯುತ್ತಿದ್ದಾರೆ.  ಪಾಂಡವರು ಶ್ರೀ ಕೃಷ್ಣನ ಅನುಮತಿ ಯಂತೆ ಭೀಷ್ಮ ರಲ್ಲಿಗೆ ಹೋಗಿ ನಮಸ್ಕಾರ ಮಾಡಿ ತಮಗೆ ಜಯವಾಗಲಿ ಎಂದು ಹರಿಸಿದ ನೀವು ಸೋಲುವ ಅಥವಾ ಮರಣಿಸುವದು ಹೇಗೆ ಎಂದು ಕೇಳಿದರು.  ಅದಕ್ಕೆ ಸಂತೋಷದಿಂದ ಭೀಷ್ಮ ಶಿಖಂಡಿ ಎದುರು ಬಂದರೆಶಸ್ತ್ರ  ತ್ಯಾಗಮಾಡುವೆ  ಎಂದು ತಿಳಿಸಿದರು ಅಲ್ಲದೆ ಪಾಂಡವರಿಗೆ ಜಯಶೀಲ ರಾಗಿರೆಂದು ಆಶೀರ್ವಾದ ಮಾಡಿದರು.  

ಮರುದಿನ ಹತ್ತನೇಯ ದಿನ ಶಿಖಂಡಿಯನ್ನು ಮುಂದೆ ಮಾಡಿ ರಕ್ಷಣೆಗೆ ಹಿಂದೆ ಅರ್ಜುನ ನಿಂತನು.  ಶಿಖಂಡಿ ಬಾಣ  ಬಿಟ್ಟರೂ  ಭೀಷ್ಮ ತಿರುಗಿ ಬಾಣ ಬಿಡಲಿಲ್ಲ.  ಆದರೂ 25000 ಸೈನಿಕರನ್ನು ಕೊಂದರು.  ಶಿಖಂಡಿ ನಿಮಿತ್ತ ಮಾತ್ರ ಅರ್ಜುನನ ಬಾಣ ತಗುಲಿ ಶಶ್ತ್ರ  ತ್ಯಾಗ ಮಾಡಿ ಬಾಣಗಳ ಮೇಲೆ ಮಲಗಿದರು.  ಗಂಗೆ ಋಷಿಗಳನ್ನು ಕಳಿಸಿ ಈಗ ದಕ್ಷಿಣಾಯಣ ಎಂದು ತಿಳಿಸಿ ಉತ್ತರಾಯಣ ದಲ್ಲಿ ಪ್ರಾಣ ಬಿಡಲು ಹೇಳಿದರು  ಎಲ್ಲರೂ ಬಂದರು.  ಭೀಷ್ಮರು ನೀರು ಬೇಡಿದರು, ತಕ್ಷಣ ಅರ್ಜುನ ಪರ್ಜನ್ಯ ಅಸ್ತ್ರ ಪ್ರಯೋಗಿಸಿ ಭೀಷ್ಮರ ಬಾಯಲ್ಲಿ ನೀರು ಬೀಳುವಂತೆ ಮಾಡಿ ಅವರ ಪ್ರೀತಿಗೆ ಪಾತ್ರನಾದನು.

*******





No comments:

Post a Comment