ಭಾರತದ ದೇವಾಲಯಗಳ ವಿಶೇಷತೆಗಳು
c
some mysterious temples
Ayodhya Ram Mandir
ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವ ಸ್ನೇಹಿತರಿಗಾಗಿ,
ಅಯೋಧ್ಯೆಯ ಕುರಿತು ಒಂದಿಷ್ಟು ಮಾಹಿತಿಗಳು...
ಮೊದಲಿಗೆ....ಅಯೋಧ್ಯೆ ದೊಡ್ಡ ನಗರವೇನಲ್ಲ.
ಫೈಜಾ಼ಬಾದ್ ಎಂಬ ನಗರದ ಹೊರವಲಯದಲ್ಲಿ, ಕೇವಲ ಐದು ಕಿಮೀ ಸುತ್ತಳತೆಯಲ್ಲಿರೋ, ಒಂದೇ ದಿನದೊಳಗೆ ಬರಿಗಾಲಲ್ಲೇ ಇಡೀ ಊರನ್ನು ಅಳೆದು ಮುಗಿಸಬಹುದಾದಂತಹ ಪುಟ್ಟ ಊರು ಇದು. ಹಾಗಾಗಿ ತೀರಾ ಐಷಾರಾಮಿ ಸೌಲಭ್ಯಗಳ ನಿರೀಕ್ಷೆಯನ್ನಿಟ್ಟುಕೊಳ್ಳಬೇಡಿ....
ನೋಡುವ ಸ್ಥಳಗಳು :
ಅಯೋಧ್ಯೆಯಲ್ಲಿ ಮೊದಲ ದರ್ಶನ ಹನುಮಂತನಿಗೇ ಅನ್ನೋ ನಂಬಿಕೆಯಿರೋ ಕಾರಣ, ಮೊದಲು...
1. ಹನುಮಾನ್ ಗಢಿ ಮಂದಿರ ತಲುಪಿ ದರ್ಶನ ಮುಗಿಸಿ. ಇಲ್ಲಿಂದ ಹೊರ ಬಂದು ರಾಜಪಥ ಮಾರ್ಗದಲ್ಲಿ ಎಡಕ್ಕೆ ಚಲಿಸಿದಲ್ಲಿ ನೋಡಬೇಕಿರೋ ಅಷ್ಟೂ ಜಾಗಗಳೂ ಇದೇ ಹಾದಿಯಲ್ಲಿ ಸಿಗುತ್ತವೆ. ಹಾಗಾಗಿ ಗೈಡುಗಳ ಅವಶ್ಯಕತೆಯೂ ಇಲ್ಲ...
2. ರಾಜದ್ವಾರ ಮಂದಿರ ( ಹನುಮಾನ್ ಮಂದಿರದ ಎದುರಲ್ಲೇ ಇದೆ)
3. ಭರತ ಮಿಲಾಪ್ ಮಂದಿರ. ( 50mtr ಅಂತರ)
4. ದಶರಥ ಮಹಲ್ ( 200mtr ಅಂತರ)
5. ರಾಮಜನ್ಮಭೂಮಿ ಶ್ರೀರಾಮ ಮಂದಿರ ( 500mtr ದೂರದಲ್ಲಿದೆ)
6. ಅರಬಿಂದೋ ಆಶ್ರಮ. (ಶ್ರೀರಾಮಮಂದಿರದ Exit ಗೇಟ್ ಬಳಿ )
7. ಸುಗ್ರೀವ ಕಿಲಾ ಮಂದಿರ. ( ಶ್ರೀರಾಮಮಂದಿರದ ಪ್ರವೇಶ ದ್ವಾರದಿಂದ 400mtr)
8. ಕನಕಭವನ ( ಸೀತೆಗೆ ಕೈಕೇಯಿ ಉಡುಗೊರೆಯಾಗಿ ನೀಡಿದ ಮಹಲು. ದಶರಥ ಮಹಲಿನಿಂದ 200mtr ).
9. ಚೋಟಿ ದೇವ್‌ಕಾಲಿ ದೇವಸ್ಥಾನ.(900mtr from ಹನುಮಾನ್ ಗಢಿ)
10. ರಾಮ್ ಕೀ ಪೈಡಿ, ಸರಯೂ ಘಾಟ್... (ಹನುಮಾನ್ ಮಂದಿರದಿಂದ 2km).
11. ಗುಪ್ತಾರ್ ಘಾಟ್ (ಅಯೋಧ್ಯೆಯಿಂದ 10km ದೂರದಲ್ಲಿ ಸರಯೂ ನದಿ ದಂಡೆಯಲ್ಲಿರೋ ಈ ಘಾಟಿನಲ್ಲಿಯೇ ಜಲಸಮಾಧಿಯಾಗುವ ಮೂಲಕ ಶ್ರೀರಾಮ ತನ್ನ ಅವತಾರವನ್ನು ಮುಗಿಸಿದ್ದು ).
12. ಬಡಿ ದೇವ್‌ಕಾಲಿ ಮಂದಿರ, ಅಯೋಧ್ಯೆಯ ಕುಲದೇವತೆ. ( ಹನುಮಾನ್ ಗಢಿಯಿಂದ 5km )
ಕೆಲವೊಂದು ಗಮನಿಸಬೇಕಾದ ಅಂಶಗಳು...
ಬಹುತೇಕ ಜನರೆಲ್ಲಾ ಬೆಳಗ್ಗಿನ ಸಮಯದಲ್ಲಿ ದರ್ಶನ ಮುಗಿಸಿ ಊರುಗಳಿಗೆ ತೆರಳೋದ್ರಿಂದಾಗಿ, ಅಯೋಧ್ಯೆಯಲ್ಲಿಯೇ ತಂಗುವುದಾದಲ್ಲಿ ಸಂಜೆಯ ನಂತರದ ದರ್ಶನದ ಆಯ್ಕೆ ಮಾಡಿಕೊಳ್ಳೋದು ಉತ್ತಮ.
ಜನಸಂದಣಿ ಕಡಿಮೆಯಿರುತ್ತದೆ...
ಸಾಮಾನ್ಯವಾಗಿ ಶ್ರೀರಾಮನ ದರ್ಶನಕ್ಕೆ ಕನಿಷ್ಟ ಎರಡು ಗಂಟೆಗಳು ತೆಗೆದುಕೊಳ್ಳುತ್ತದೆ.
ತುಂಬಾ ಬಿಗಿಬಧ್ರತೆಯಿರೋ ಕಾರಣ, ಮೊಬೈಲ್, ಇಯರ್ ಫೋನ್, ಚಾರ್ಜರ್ ಕೇಬಲ್, ಸ್ಮಾರ್ಟ್ ವಾಚ್, ಪವರ್‌ಬ್ಯಾಂಕ್ ಇತ್ಯಾದಿ
ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಗುಗಳು ಇತ್ಯಾದಿಗಳನ್ನು ಶ್ರೀರಾಮಮಂದಿರದೊಳಗೆ ಬಿಡುವುದಿಲ್ಲ. ಹಾಗಾಗಿ ಇವ್ಯಾವುದೂ ಜೊತೆಗೆ ಕೊಂಡೊಯ್ಯಬೇಡಿ. ಅಲ್ಲಿ ಲಾಕರ್ ಗಳ ಸೌಲಭ್ಯವಿದ್ದರೂ ಇದಕ್ಕಾಗಿಯೇ ಗಂಟೆಗಟ್ಟಲೆ ಕಾಯಬೇಕಿಲ್ಲಿ.
ಪ್ರಸಾದಗಳು ನಮ್ಮಲ್ಲೆಲ್ಲಾ ಸಿಗುವಂತೆ ದೇವಸ್ಥಾನದ ಒಳಗೆಲ್ಲಾ ಕೌಂಟರ್‌ಗಳಲ್ಲಿ ಸಿಗೋದಿಲ್ಲ. ಹೊರಗಡೆಯಿರೋ ಅಂಗಡಿಗಳಲ್ಲಿ ಲಾಡು ಇತ್ಯಾದಿ ಖರೀದಿಸಿ ಕೊಂಡೊಯ್ದಲ್ಲಿ ಅದನ್ನು ದೇವರಿಗೆ ಸಮರ್ಪಿಸಿ ನಿಮಗೇ ವಾಪಸ್ ಕೊಡುತ್ತಾರೆ.
ಹೀಗೆ ಖರೀದಿಸುವಾಗ ಪಾದರಕ್ಷೆಗಳನ್ನೆಲ್ಲಾ ಆ ಅಂಗಡಿಗಳಲ್ಲೇ ಬಿಟ್ಟು, ಬರಿಗಾಲಲ್ಲೇ ಅಷ್ಟೂ ದರ್ಶನ ಮುಗಿಸಿ ಬಂದು ಧರಿಸೋದು ಉತ್ತಮ.
ದಶರಥಮಹಲ್ ಹಾಗೂ ಕನಕಭವನ ಮಧ್ಯಾಹ್ನ 12ರಿಂದ 4pm ವರೆಗೂ ಮುಚ್ಚಿರುತ್ತವೆ.
ಸರಯೂ ಘಾಟಿನಲ್ಲಿ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸರಯೂ ಆರತಿ, ಇದು ಮುಗಿಯುತ್ತಿದ್ದಂತೆಯೇ ಎದುರಲ್ಲಿರೋ ರಾಮ್ ಕೀ ಪೈಡಿಯಲ್ಲಿ ಕಾರ್ಯಕ್ರಮಗಳಿರುತ್ತವೆ.
ಹನುಮಾನ್ ಗಢಿ/ಶ್ರೀರಾಮ ಮಂದಿರದಿಂದ ಸರಯೂ ಘಾಟಿಗೆ ತೆರಳಲು ಶೇರಿಂಗ್ ಆಟೋಗಳು ಲಭ್ಯವಿದೆ.
ವಸತಿ ವ್ಯವಸ್ಥೆ :
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಿಂದ ಕೂಗಳತೆ ದೂರದಲ್ಲೇ, ಪೇಜಾವರ ಮಠದ ಮಾಧವಾಶ್ರಮ, ಬಿರ್ಲಾ ಧರ್ಮಶಾಲಾ, ರಾಮ್ ಸಿಂಧೂ ಧರ್ಮಶಾಲಾ, ಜಾನಕಿಮಹಲ್ ಧರ್ಮಶಾಲಾ ಸೇರಿದಂತೆ ನೂರಕ್ಕೂ ಹೆಚ್ಚು ಧರ್ಮಶಾಲೆಗಳಿದ್ದು ಉಚಿತ ಅಥವಾ ಅತೀಕಡಿಮೆ ಬೆಲೆಯಲ್ಲಿ ಇಲ್ಲೆಲ್ಲಾ ಉಳಿದುಕೊಳ್ಳೋ ವ್ಯವಸ್ಥೆಯಿದೆ. ಜೊತೆಗೇ ಇಲ್ಲೆಲ್ಲಾ AC / Non Ac ರೂಮುಗಳೂ ಲಭ್ಯವಿದ್ದು, Yatradham . org ನಲ್ಲಿ ಆನ್ ಲೈನ್ ಬುಕಿಂಗ್ ಕೂಡಾ ಸಾಧ್ಯವಿದೆ..
ಒಂದಿಷ್ಟು ಉತ್ತಮ ದರ್ಜೆಯ ಹೋಟೆಲ್ ಗಳ ನಿರೀಕ್ಷೆಯಿದ್ದಲ್ಲಿ ಆನ್ ಲೈನಲ್ಲಿ ಮುಂಗಡ ಬುಕಿಂಗ್ ಮಾಡದೆ ಹೋಗಬೇಡಿ.
ಇದಲ್ಲದೆ ಈಗ ಹೊಸದಾಗಿ ನಗರದ ಹೊರವಲಯಗಳಲ್ಲಿ ಟೆಂಟ್ ಸಿಟಿಗಳೂ ನಿರ್ಮಾಣವಾಗಿದ್ದು ಇಲ್ಲಿಯೂ ಉಳಿಯಬಹುದಾಗಿದೆ....
***
Anjani mahadev mandir
Anjani Mahadev Mandir is up 14 kms from Manali. It is believed that Anjanidevi, Lord Hanuman's mother prayed Lord Shiva to give her 'darshan' at this place. Pleased by her prayer Lord Shiva gave her darshan. Hence the importance of this wonderful place.
***
Tiruvarappu kerala
50 Nrusimha (Narasimha) Kshetra-
click---> 50 nrusimha kshetras
🙏ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು..🙏
1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ
2. ಕೊಲ್ಲಾಪುರ ಲಕ್ಷ್ಮಿ ದೇಗುಲ
3. ಬೆಂಗಳೂರು ಗವಿ ಗಂಗಾಧರ ದೇಗುಲ
4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ
5. ಮೋಗಳೇಶ್ವರ್
6. ಕೋದಂಡರಾಮ ಕಡಪ ಜಿಲ್ಲೆ
🙏ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು🙏
1. ಮಹಾನಂದಿ
2. ಜಂಬುಕೇಶ್ವರ್
3. ಬುಗ್ಗ ರಾಮಲಿಂಗೇಶ್ವರ
4. ಕರ್ನಾಟಕ ಕಮಂಡಲ ಗಣಪತಿ
5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ
6. ಮಲ್ಲೇಶ್ವರಂ.. ಬೆಂಗಳೂರು
6. ರಾಜರಾಜೇಶ್ವರ ಬೆಲ್ಲಂಪಲ್ಲಿ ಶಿವಾಲಯ
7. ಸಿದ್ದಗಂಗಾ ತುಮಕೂರು
🙏ನಿರಂತರ ಜ್ವಾಲರೂಪದಲ್ಲಿ ದರುಶನ ನೀಡೋ ದೇಗುಲಗಳು🙏
1. ಜ್ವಾಲಾಮುಖಿ.. ಜ್ವಾಲದೇವಿ
2. ಅರುಣಾಚಲ ಈಶ್ವರ್
3. ಮಂಜುನಾಥ
🙏ಶ್ವಾಸ ತಗೊಳ್ಳುವ ಕಾಲಹಸ್ತೀಶ್ವರ್.🙏
🙏ಪೂಜೆಗಾಗಿ ಸಮುದ್ರ ಹಿಂದೆ ಹೋಗುವ ದೇವಸ್ಥಾನ🙏
1. ಗುಜರಾತ್ ನಿಷ್ಕಳಂಕ ಮಹಾದೇವ್
2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ
🙏 ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗೋ ದೇಗುಲ🙏
1. ಅಸ್ಸಾಂ ಕಾಮಕ್ಯ ದೇವಿ
2. ಕೇರಳ ದುರ್ಗಾ ಮಾತ
🙏 ಬಣ್ಣ ಬದಲಾಗುವ ದೇಗುಲ🙏
1. ಉತ್ತರಾಯಣ ಮತ್ತು ದಕ್ಷಿಣಾಯಣ ಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ T. N.
2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆ ಗೆ ಕಪ್ಪು ಬಣ್ಣ ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ
🙏ನಿರಂತರ ಬೆಳೆಯುವ ಮೂರ್ತಿಗಳು🙏
1. ಕಾಣಿಪಾಕಂ
2. ಯಾಗಂಟಿ ಬಸವಣ್ಣ
3. ಬಸವನಗುಡಿಯ ಬಸವ, ಬೆಂಗಳೂರು
4. ಬಿಕ್ಕವೊಳು ಲಕ್ಷ್ಮಿ ಗಣಪತಿ
🙏6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು🙏
1. ಕೇದಾರನಾಥ
2. ಬದರಿನಾಥ್
ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ
3. ಗುಹ್ಯ ಕಾಳಿ ಮಂದಿರ
🙏ವರ್ಷಕ್ಕೊಮ್ಮೆ ತೆರೆಯುವ ದೇವಾಲಯ🙏
ಅಮರನಾಥ ದೇವಾಲಯ
ಹಾಸನಾಂಬ ದೇಗುಲ ಹಾಸನ..
ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರುತ್ತೆ.
🙏12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ H. p.
🙏ಸ್ವಯಂ ಪ್ರಸಾದ ಸೇವಿಸೋ🙏
1. ಕೇರಳ ಶ್ರೀ ಕೃಷ್ಣ ದೇವಾಲಯ..
2. ಬೃಂದಾವನ ರಾಧಾಕೃಷ್ಣ
🙏ನೀರಿನಲ್ಲಿ ದೀಪ ಬೆಳಗುವ ಮಂದಿರ🙏
ಘದಿಯ ಘಾಟ್ ಮಾತಾಜಿ ಮಂದಿರ.. M.P.
🙏ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ ಮಂದಿರ🙏
1. ಹಿಮಾಚಲ ನರಸಿಂಹ ದೇವಾಲಯ
2. ಇಷ್ಟ ಕಾಮೇಶ್ವರಿ . ಶ್ರೀಶೈಲ
🙏ಪಾನಕ ಚಪ್ಪರಿಸುತ್ತ ಕುಡಿಯೋ ದೇವರು🙏
ಪಾನಕಾಲ ನರಸಿಂಹ ದೇವರು A. P.
🙏ಛಾಯಾ ವಿಶೇಷ🙏
ಛಾಯಾ ಸೋಮೇಶ್ವರ.. ಸ್ಥಂಬದ ನೆರಳು ಕಾಣುತ್ತೆ
2. ಹಂಪಿ ವಿರೂಪಾಕ್ಷ.. ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು..
🙏ನೀರಿನಲ್ಲಿ ತೇಲುವ ದೇವರು🙏
Nepal vishnu (ಸಾವಿರ ಟನ್ ವಿಗ್ರಹ)
ತಿರುಪತಿ ಬಾಲಾಜಿ
ಅನಂತ ಪದ್ಮನಾಭ ಕೇರಳ
ರಾಮೇಶ್ವರ
ಕಂಚಿ
ಚಿಲುಕೂರಿ ಬಾಲಾಜಿ
ಪಂದರಿನಾಥ
ಬದ್ರಾಚಲಂ
ಅನ್ನವರಂ
🙏 ಪೂರಿ ಜಗನ್ನಾಥ್ ವಿಶೇಷ🙏
ಹಕ್ಕಿಗಳು ಹಾರೋದಿಲ್ಲ ಸಮುದ್ರ ಘೋಷ ಇಲ್ಲ ಗೋಪುರದ ನೆರಳು ಬೀಳದು ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..
ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಭರತ ಖಂಡದಲ್ಲಿ ಇವೆ.
***
explained in English
ತೆಲಂಗಾಣ ಹೇಮಾಚಲ ನರಸಿಂಹ ದೇವಾಲಯ
ಆಂದ್ರಪ್ರದೇಶದ ತೆಲಂಗಾಣ ಹೇಮಾಚಲ ಪ್ರದೇಶದ ಅರಣ್ಯದ ಮಧ್ಯದಲ್ಲಿ ದೇವಾಲಯವಿದೆ. ಈ ನರಸಿಂಹ ವಿಗ್ರಹ ವು ಜೀವಂತವಾಗಿದೆ. ದೇಹವು ಮೆತ್ತನೆಯದಾಗಿದೆ. ನಮ್ಮಂತೆ ದೇಹದ ಮೇಲೆ ರೋಮಗಳು ಇವೆ. ದೇವರ ಮೈಯಿಂದ ನೀರು ಬರುತ್ತದೆ. ಈ ವಿಗ್ರಹವನ್ನು ಸ್ವಯಂಭೂ ಭಗವಂತನೆಂದು ಹೇಳುವರು. ಬಹಳ ಜನರಿಗೆ ಪರಿಚಯವಿಲ್ಲ. ಈ ವಿಗ್ರಹ ಯಾವ ಪದಾರ್ಥಗಳಿಂದ ಒಡಗೂಡಿದೆ ತಿಳಿದಿಲ್ಲ. ವಿಗ್ರಹದ ದೇಹದಿಂದ ಬೆವರಿನ ರೂಪದಲ್ಲಿ ಹರಿಯುವ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಜನರು ತಮ್ಮ ಅನೇಕ ವ್ಯಾಧಿಗಳಿಗೆ ಈ ತೀರ್ಥ ತೆಗೆದುಕೊಂಡು ಹೋಗುವರು. ಈ ದೇವಾಲಯ ಸುಮಾರು ನಾಲ್ಕು ಸಾವಿರ ವರ್ಷಗಳ ಪ್ರಾಚೀನವೆಂದೂ, ದ್ವಾಪರಯುಗದೆಂದು ಹೇಳುವರು. ಭಗವಂತನ ಎದೆಯಲ್ಲಿ ಬಂಗಾರದ ಲಕ್ಷ್ಮೀ ದೇವಿ ಎದೆಯ ಭಾಗದಲ್ಲಿದೆ. ಶ್ರೀ ಕೃಷ್ಣದೇವರಾಯ- ಕಾಕತೀಯ ರಾಜರ ಕಾಲದಲ್ಲಿ ಬೆಳಕಿಗೆ ಬಂದಿತು ಎಂದು ಹೇಳಲಾಗುತ್ತದೆ. ಅರಣ್ಯ ಮಧ್ಯ ಪ್ರದೇಶದಲ್ಲಿರುವ ಈ ದೇವಾಲಯದ ಇತಿಹಾಸ ಕಳೆದು ಹೋಗಿವೆ. ಒಮ್ಮೆ ಯಾದರೂ ಈ ದೇವಾಲಯ ದ ಸಂದರ್ಶನ ಪಡೆಯಬೇಕೆಂದು ಅರ್ಚಕರು ಹೇಳುವರು.
***
ಐತಿಹಾಸಿಕ ಕ್ಷೇತ್ರವಾದ ನೀರಾ ನರಸಿಂಹ ದೇವಾಲಯವ
more at -> https://www.youtube.com/watch?v=s24vBLNgATo ಐತಿಹಾಸಿಕ ಕ್ಷೇತ್ರವಾದ ನೀರಾ ನರಸಿಂಹ ದೇವಾಲಯವ
ಈ ನೀರಾನರಸಿಂಹ ಕ್ಷೇತ್ರವು ವಿಜಯಪುರದಿಂದ 191 ಕಿಲೋಮೀಟರ್ ದೂರದಲ್ಲಿದ್ದು ಪುಣೆ ಜಿಲ್ಲೆ ಹಾಗೂ ಸೋಲಾಪುರ ಜಿಲ್ಲೆಗಳ ಮಧ್ಯಭಾಗ ; ಪುಣೆ ಜಿಲ್ಲೆಗೆ ಸೇರುವ ಅಕ್ಲೂಸ್ ತಾಲ್ಲೂಕಿನಲ್ಲಿ ಬರುತ್ತದೆ. ನೀರಾ ನರಸಿಂಹ ಕ್ಷೇತ್ರ ಮತ್ತು ಪಂಢರಪುರಕ್ಕೆ ನಲವತ್ತು ಕಿಲೋಮೀಟರ್ ಅಂತವಷ್ಟೇ.. ನೀರಾ ನರಸಿಂಹ ಕ್ಷೇತ್ರದಲ್ಲಿ ನೀರಾ ಭೀಮಾ ಮತ್ತು ಗುಪ್ತಗಂಗಾ ಮೂರು ನದಿಗಳು ಕುಡೂವದರಿಂದ ಇದನ್ನು ತ್ರಿವೇಣಿ ಸಂಗಮ ಕ್ಷೇತ್ರವೆಂದು ಕರೆಯುತ್ತಾರೆ..
ಅಗೋ.. ಇಲ್ಲಿ ಕಾಣುತ್ತಿರುವುದೇ ನೀರಾ ನದಿ.... ಅಲ್ಲಿ ಗೋಪುರ ನೀರಾ ನರಸಿಂಹಸ್ವಾಮಿ ದೇವಾಲಯ..... ನೀರಾ ನದಿಯಿಂದಾಗಿ ಇಲ್ಲಿನ ನರಸಿಂಹಸ್ವಾಮಿಯನ್ನು ನೀರಾ ನರಸಿಂಹ ಸ್ವಾಮಿ ಎಂದು ಕರೆಯಲಾಗುತ್ತದೆ...
ಪುರಾಣ ಹಿನ್ನಲೆ ಪ್ರಕಾರ ಇಲ್ಲಿ ಎರಡು ನರಸಿಂಹಸ್ವಾಮಿ ಮೂರ್ತಿಗಳಿದ್ದು ಒಂದನ್ನು ಸಾಕ್ಷಾತ್ ಬ್ರಹ್ಮದೇವರು ಸ್ಥಾಪನೆ ಮಾಡಿದರೆ ಮತ್ತೊಂದು ಪ್ರಮುಖ ಮೂರ್ತಿಯಲ್ಲಿ ಭಕ್ತ ಪ್ರಲ್ಹಾದರು ಸ್ಥಾಪನೆ ಮಾಡುತ್ತಾರೆ..
ಅದು ಸತ್ಯಯುಗ ಕಾಲಾವಧಿ , ಕಾಶ್ಯಪ ಗೋತ್ರದ ಹಿರಣ್ಯ ಕಶ್ಯಪು ಮತ್ತು ಹಿರಾಣ್ಯಾಕ್ಷರೆಂಬ ಅಣ್ಣ-ತಮ್ಮಿಂದಿರು. ಅಣ್ಣ ಹಿರಾಣ್ಯಾಕ್ಷನು ಭೂದೇವಿಯನ್ನು ಅಪಹರಿಸಿ ಪಾತಾಳ ಲೋಕದಲ್ಲಿ ಬಚ್ಚಿಡಲು ವರಹ ಅವತಾರದಿಂದ ವಿಷ್ಣು ಭೂದೇವಿಯನ್ನು ಮೇಲೆಕ್ಕೆತ್ತಿ ಹಿರಣ್ಯಾಕ್ಷನ್ನು ಸಂಹರಿಸಿದ್ದರಿಂದ ತಮ್ಮ ಹಿರಣ್ಯ ಕಶ್ಯಪುವಿಗೆ ವಿಷ್ಣು ಮೇಲೆ ಅಗಾಧ ದ್ವೇಷ..
ಹಿರಣ್ಯ ಕಶ್ಯಪು ಶಿವನ ಕುರಿತು ತಪಸ್ಸು ಮಾಡಲು ಕಾಡಿಗೆ ಹೋಗುತ್ತಾನೆ. ಈ ಸಮಯದಲ್ಲಿ ಹಿರಣ್ಯ ಕಶಿಪುವಿನ ಪತ್ನಿ ಕಯಾದು ಗರ್ಭಿಣಿಯಾಗಿರುತ್ತಾಳೆ. ಈ ಸಮಯದಲ್ಲಿ ರಾಕ್ಷಸನ ಹೊಟ್ಟೆಯಲ್ಲಿ ರಾಕ್ಷಸನೇ ಹುಟ್ಟಿ ದೇವತೆಗಳಿಗೆ ತೊಂದರೆ ಕೊಡುತ್ತಾನೆ ಎಂದು ತಿಳಿದ ಇಂದ್ರನು ಕಯಾದುಗಳನ್ನು ಅಪಹರಿಸಿ ಆಕೆಯ ಗರ್ಭದಲ್ಲಿನ ಮಗುವನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಮಹರ್ಷಿ ನಾರದರು ಬಂದು ಇಂದನನ್ನು ತಡೆದು ಕಯಾದುಳ ಗರ್ಭದಲ್ಲಿನ ಮಗುವು ಮಹಾನ್ ವಿಷ್ಣು ಭಕ್ತನಾಗುತ್ತಾನೆ ಎಂದು ಹೇಳುತ್ತಾರೆ. ಇಂದ್ರನು ಕಯಾದುಳನ್ನು ನಾರದರೊಟ್ಟಿಗೆ ಅವರ ಆಶ್ರಮಕ್ಕೆ ಕಳಿಸಿಕೊಡುತ್ತಾನೆ.
ಮಹರ್ಷಿ ನಾರದರ ಆಶ್ರಮ ನರಸಿಂಹಪುರ ಕೋಟಿ ತೀರ್ಥದ ಮೇಲಿತ್ತು. ಕೋಟಿ ತೀರ್ಥ ಎಂದರೆ ಈಗಿನ ನೀರಾ ನದಿಯನ್ನು ಪುರಾಣದಲ್ಲಿ ಕೋಟಿ ತೀರ್ಥವೆಂದು ಹೇಳಿದ್ದಾರೆ. ಮಹರ್ಷಿ ನಾರದರು ಕಯಾದುವಿಗೆ 'ಓಂ ನಮೋ ನಾರಾಯಣಯ' ಎಂದು ಮಂತ್ರೋಪದೇಶ ಮಾಡುತ್ತಾರೆ. ವಿಷ್ಣು ಭಕ್ತಳಾದ ಕಯಾದು ಪತಿದಿನ ವಿಷ್ಣುವಿನ ಉಪಾಸನೆ ಮಾಡುತ್ತಿರುತ್ತಾಳೆ. ಮಹರ್ಷಿ ನಾರದರ ಆಶ್ರಮದಲ್ಲಿಯೇ ಭಕ್ತ ಪ್ರಲ್ಹಾದರ ಜನನವಾಗುತ್ತದೆ..
ಭಕ್ತ ಪ್ರಲ್ಹಾದರು ತಪ್ಪಸ್ಸು ಮಾಡಿ ಇಲ್ಲಿನ ಕೋಟಿತೀರ್ಥ ಅಂದರೆ ನೀರಾನದಿಯಲ್ಲಿ ಉಸುಕಿನಿಂದ ನರಸಿಂಹ ದೇವರ ಮೂರ್ತಿ ಮಾಡಿ ಪೂಜಿಸುತ್ತಾರೆ ಎಂದು ಹೇಳಲಾಗುತ್ತದೆ. ಭಕ್ತ ಪ್ರಲ್ಹಾರು ಮಾಡಿದ ಮರಳಿನ ಮೂರ್ತಿಯೇ ಇಂದಿಗೂ ಪೂಜೆಗೊಳಗಾಗಿತ್ತಿದೆ ಎನ್ನುವುದು ಪುರಾಣದ ಐತಿಹ್ಯ ಹಾಗೂ ಭಕ್ತರ ನಂಬಿಕೆಯಾಗಿದೆ..
ಪ್ರಲ್ಹಾದರು ಮಾಡಿದ ಮರಳಿ ಮೂರ್ತಿ ಎನ್ನಲಾದ ನರಸಿಂಹಸ್ವಾಮಿ ಮೂರ್ತಿಯೂ ಕುಳಿತ ಮೂರ್ತಿಯಲ್ಲಿ ಬಲಗಾವನ್ನು ಅರ್ಧವೂರಿ ಹೊಟ್ಟೆಯ ಕಡೆಗೆ ಮಡಚಿಕೊಂಡು ಎಡ ಮಡಿಚಿಕೊಂಡು ಎರಡು ಕೈಗಳು ತೊಡಯ ಮೇಲೆ ಇಟ್ಟುಕೊಂಡ ವೀರಸನಸ್ಥ ಭಂಗಿಯಲ್ಲಿದೆ... ಮೂರ್ತಿಯ ಮುಖವು ಸಣ್ಣದಾಗಿದ್ದು ದೊಡ್ಡಕಣ್ಣುಗಳು , ಉಗ್ರಚರ್ಯ ಇರುವುದನ್ನು ಕಾಣಬಹುದು...
ಉತ್ತರದ ಪ್ರಯಾಗನಲ್ಲಿ ಗಂಗಾ , ಯಮುನಾ ಗುಪ್ತಗಾಮಿನಿಯಾದ ಸರಸ್ವತಿ ನದಿಗಳ ಸಂಗಮ ಇರುವಂತೆ ದಕ್ಷಿಣದಲ್ಲಿ
ಭೀಮಾ , ನೀರಾ ಗುಪ್ತಗಾಮಿನಿಯಾಗಿ ಗುಪ್ತ ಗಂಗಾ ತ್ರಿವೇಣಿ ನದಿಗಳ ಸಂಗಮ ಇರುವಯದರಿಂದ ದಕ್ಷಿಣ ಪ್ರಯಾಗ ಅಂತಲೂ ಕರೆಯುತ್ತಾರೆ. ಸ್ವತಃ ಸಂತ ತುಕಾರಾಂ ಅವರು ತಮ್ಮ ಒಂದು ಅಭಂಗದಲ್ಲಿ ದಕ್ಷಿಣದ ಪ್ರಯಾಗ್ ನರಸಿಂಹಪುರ ಅಂತಲೂ ಹೇಳಿದ್ದಾರೆ.
ದೇವಗಿರಿಯ ಯಾದವರು ಅರಸರು ಈ ನರಸಿಂಹಸ್ವಾಮಿ ಭಕ್ತರಾಗಿದ್ದರು ಇಲ್ಲಿ ಅಗ್ರಹಾರ ನಿರ್ಮಿಸಿದನೆಂದು ಪ್ರತೀತಿ.
ತದನಂತರ ಬಂದ ಆದಿಲ್ ಶಾಹಿಗಳು ದೇವಾಲಯಕ್ಕೆ ಸನದು ಕೊಡುತ್ತಾರೆ. ಅಲಿ ಆದಿಲ್ ಶಾಹಿಯುವ ದೇವಾಲಯ ಜೀರ್ಣೋದ್ಧಾರ ಮಾಡಿ ಉಮಾಪತಿ ಪಂಡಿತನಿಗೆ ಅಗ್ರಹಾರ ದಾನ ಮಾಡಿದನು. ನಂತರ ಬರಯವ ಛತ್ರಪತಿ ಶಿವಾಜಿಯು ದೇವಾಲಯವನ್ನು ಪುನರುಜ್ಜೀವನಗೊಳಿಸುತ್ತಾರೆ. ಶಿವಾಜಿ ನಂತರ ಬರುವ ಪೇಶ್ವೆಗಳು ದೇವಾಲಯವನ್ನು ಮತ್ತಷ್ಟು ಜೀರ್ಣೋದ್ಧಾರ ಮಾಡುತ್ತಾರೆ. ಸದ್ಯ ಈ ದೇವಾಲಯ ಪೇಶ್ವೆಗಳ ಕಟ್ಟಡ ಶೈಲಿಯಲ್ಲಿ ಇರುವುದು ಕಾಣಬಹುದು. ನರಸಿಂಹಸ್ವಾಮಿ ಎಡಭಾಗದಲ್ಲಿ ಲಕ್ಷ್ಮೀದೇವಿ ಇದ್ದು ವಿಜಯನಗರ ಅರಸರು ಕುಲದೇವತೆ ಎಂದು ಹೇಳಲಾಗುತ್ತದ
ದೇವಗಿರಿಯ ಯಾದವರು ಅರಸರು ಈ ನರಸಿಂಹಸ್ವಾಮಿ ಭಕ್ತರಾಗಿದ್ದರು ಇಲ್ಲಿ ಅಗ್ರಹಾರ ನಿರ್ಮಿಸಿದನೆಂದು ಪ್ರತೀತಿ.
ತದನಂತರ ಬಂದ ಆದಿಲ್ ಶಾಹಿಗಳು ದೇವಾಲಯಕ್ಕೆ ಸನದು ಕೊಡುತ್ತಾರೆ. ಅಲಿ ಆದಿಲ್ ಶಾಹಿಯುವ ದೇವಾಲಯ ಜೀರ್ಣೋದ್ಧಾರ ಮಾಡಿ ಉಮಾಪತಿ ಪಂಡಿತನಿಗೆ ಅಗ್ರಹಾರ ದಾನ ಮಾಡಿದನು. ನಂತರ ಬರಯವ ಛತ್ರಪತಿ ಶಿವಾಜಿಯು ದೇವಾಲಯವನ್ನು ಪುನರುಜ್ಜೀವನಗೊಳಿಸುತ್ತಾರೆ. ಶಿವಾಜಿ ನಂತರ ಬರುವ ಪೇಶ್ವೆಗಳು ದೇವಾಲಯವನ್ನು ಮತ್ತಷ್ಟು ಜೀರ್ಣೋದ್ಧಾರ ಮಾಡುತ್ತಾರೆ. ಸದ್ಯ ಈ ದೇವಾಲಯ ಪೇಶ್ವೆಗಳ ಕಟ್ಟಡ ಶೈಲಿಯಲ್ಲಿ ಇರುವುದು ಕಾಣಬಹುದು.
ನರಸಿಂಹಸ್ವಾಮಿ ಎಡಭಾಗದಲ್ಲಿ ಲಕ್ಷ್ಮೀದೇವಿ ಇದ್ದು ವಿಜಯನಗರ ಅರಸರು ಕುಲದೇವತೆ ಎಂದು ಹೇಳಲಾಗುತ್ತದೆ..
1787 ಪೇಶ್ವೆ ಮಾಧವರಾವ್ ಇದನ್ನು ಜೀರ್ಣೋದ್ಧಾರ ಮಾಡುತ್ತಾರೆ. ದೇವಾಲಯ ರಕ್ಷಣಾ ಕೋಟೆ ನಿರ್ಮಿಸಲಾಗಿದ್ದು ಇದು ದೂರದಿಂದ ನೋಡಿದರೆ ಕೋಟೆ ರೀತಿಯಲ್ಲಿ ಕಾಣುತ್ತದೆ.. ಮೂರು ಪ್ರವೇಶ ದ್ವಾರಗಳಿವೆ.. ಪೂರ್ವ ಪಶ್ಚಿಮ ಮತ್ತು ಉತ್ತರಕ್ಕೆ..
ದೇವಾಲಯ ಮುಖ ಮಂಟಪ ಸಭಾ ಮಂಟಪ ಅಂತರಾಳ ಮತ್ತು ಗರ್ಭಗೃಹವನ್ನು ಹೊಂದಿದೆ. ಸಭಾಭವನ ಪ್ರವೇಶಕ್ಕೆ ಉತ್ತರ , ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಪ್ರದೇಶಿ ದ್ವಾರಗಳಿವೆ.
ದೇವಾಲಯ ಎದುರಿನ ಮಂಟಪದಲ್ಲಿ ಪ್ರಲ್ಹಾರ ಕಂಬ ಇತ್ತು , ಈಗ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.
***
ತುಳಜಾಭವಾನಿ ದೇವಸ್ಥಾನ- ಉಸ್ಮಾನಾಬಾದ್, ಮಹಾರಾಷ್ಟ್ರ.
ತುಳಜಾ ಭವಾನಿ ದೇವಸ್ಥಾನವು ಮಹಾರಾಷ್ಟ್ರದಲ್ಲಿ ಪ್ರಮುಖವಾಗಿದೆ.
ಇದು ಮಹಾರಾಷ್ಟ್ರದ ತುಳಜಾಪುರ ಜಿಲ್ಲೆಯ ಒಸ್ಮಾನಾಬಾದ್‌ನಲ್ಲಿದೆ. ಇದು ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಅನೇಕ ಮನೆಗಳಲ್ಲಿ ಕುಲದೇವತೆ (ಕುಲದೇವತೆ) ಆಗಿದೆ. ತುಳಜಾಭವಾನಿಯನ್ನು 'ತೂರ್ಜಾ' ಎಂದೂ ಕರೆಯುತ್ತಾರೆ, ಇದು ಮಹಾರಾಷ್ಟ್ರದ ದೇವತೆ ಮತ್ತು ಭಾರತದ ಐವತ್ತೊಂದು ಶಕ್ತಿಪೀಠಗಳಲ್ಲಿ ಒಂದಾಗಿದೆ.
ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ತುಳಜಾಪುರಕ್ಕೆ ಯಾತ್ರಾರ್ಥಿಗಳು ಬರುತ್ತಾರೆ. ತುಳಜಾ ಭವಾನಿ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ತುಳಜಾ ಭವಾನಿ ರಾಜ ಭೋಸಲೆ ಕುಟುಂಬದ ದೇವತೆ. ಶಿವಾಜಿ ಮಹಾರಾಜರು ದೇವರ ಆಶೀರ್ವಾದ ಪಡೆಯಲು ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ನಂಬಲಾಗಿದೆ. ದೇವಿ ಶಿವಾಜಿ ಮಹಾರಾಜನಿಗೆ ಭವಾನಿ ಖಡ್ಗ ಎಂಬ ಖಡ್ಗವನ್ನು ಉಡುಗೊರೆಯಾಗಿ ನೀಡಿದಳು ಎಂದು ಪುರಾಣ ಹೇಳುತ್ತದೆ. ಈ ದೇವಾಲಯವು ಯಮುನಾಚಲ ಎಂದು ಗುರುತಿಸಲಾದ ಬಾಲಾ ಘಾಟ್‌ನ ಉದ್ದಕ್ಕೂ ಬೆಟ್ಟದ ಮೇಲಿದೆ.
ಭವಾನಿ ದೇವಿಯ ವಿಗ್ರಹವು ಸ್ವಯಂಪೋಷಕ ವಿಗ್ರಹವಾಗಿದೆ. ಇದು ಸುಮಾರು 3 ಅಡಿ ಎತ್ತರದ ಗ್ರಾನೈಟ್ ಪ್ರತಿಮೆಯ ರೂಪದಲ್ಲಿದೆ ಮತ್ತು ವಿವಿಧ ಆಯುಧಗಳೊಂದಿಗೆ ಎಂಟು ತೋಳುಗಳನ್ನು ಹೊಂದಿದೆ. ಈ ದೇವಾಲಯದ ಮುಖ್ಯ ದ್ವಾರವನ್ನು ಸರ್ದಾರ್ ನಿಂಬಾಳ್ಕರ್ ಗೇಟ್ ಎಂದು ಕರೆಯಲಾಗುತ್ತದೆ. ದೇವಾಲಯವು ಎರಡು ಪ್ರವೇಶದ್ವಾರಗಳನ್ನು ಹೊಂದಿದೆ, ಒಂದು ಸರ್ದಾರ್ ನಿಂಬಾಳ್ಕರ್ ದ್ವಾರದ ಮೂಲಕ ಮಾರ್ಕಂಡೇಯ ಋಷಿ ದೇವಾಲಯಕ್ಕೆ ರಾಜಾ ಶಾಜಿಯ ಮುಖ್ಯ ದ್ವಾರದ ಬಲಕ್ಕೆ. ಮೆಟ್ಟಿಲುಗಳನ್ನು ಇಳಿಯುವುದು ಮುಖ್ಯ ತುಳಜಾ ಭವಾನಿ ದೇವಸ್ಥಾನ ದೇವಾಲಯದ ಆವರಣದಲ್ಲಿ ಗೋಮುಖ ತೀರ್ಥ ಮತ್ತು ಕಲ್ಲೋಳ್ ತೀರ್ಥ ಎಂಬ ಎರಡು ತೀರ್ಥಗಳಿವೆ.
ದೇವಾಲಯವನ್ನು ಪ್ರವೇಶಿಸುವ ಮೊದಲು ಭಕ್ತರು ಈ ತೀರಗಳಲ್ಲಿ ಸ್ನಾನ ಮಾಡುತ್ತಾರೆ. ಈ ದೇವಾಲಯದ ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ ದತ್ ದೇವಾಲಯ, ಸಿದ್ಧಿ ವಿನಾಯಕ ದೇವಾಲಯ ಮತ್ತು ಅಮೃತ್ ಕುಂಡ್. ದೇವಾಲಯದ ಆವರಣದಲ್ಲಿ ಅನ್ನಪೂರ್ಣ ದೇವಿಗೆ ಸಮರ್ಪಿತವಾದ ದೇವಾಲಯವೂ ಇದೆ. ಈ ದೇವಾಲಯದ ಇತಿಹಾಸವನ್ನು ಸ್ಕಂದ ಪುರಾಣದಲ್ಲಿ ವಿವರಿಸಲಾಗಿದೆ. ಹಳೆಯ ದಂತಕಥೆಯ ಪ್ರಕಾರ, ಒಮ್ಮೆ ಕರ್ದಮ ಎಂಬ ಋಷಿ ಇದ್ದನು. ಅವನ ಹೆಂಡತಿ ಮಂದಾಕಿನಿ ನದಿಯ ದಡದಲ್ಲಿ ಭವಾನಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದಾಗ ಕುಕುರ್ ಎಂಬ ರಾಕ್ಷಸನಿಂದ ಅವಳು ತೊಂದರೆಗೀಡಾದಳು. ಭವಾನಿ ದೇವಿಯು ಅವರ ರಕ್ಷಣೆಗೆ ಬಂದು ರಾಕ್ಷಸನನ್ನು ಕೊಂದಳು. ಅಂದಿನಿಂದ ಭವಾನಿ ದೇವಿಯನ್ನು ತುಳಜಾ ಭವಾನಿ ಎಂದು ಕರೆಯುತ್ತಾರೆ.
ಇನ್ನೊಂದು ದಂತಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ, ದೇವರುಗಳು ಮತ್ತು ಮನುಕುಲವು ಮತಂಗ ಎಂಬ ರಾಕ್ಷಸನಿಂದ ಪೀಡಿತರಾಗಿದ್ದರು. ದೇವತೆಗಳು ಭಗವಾನ್ ಬ್ರಹ್ಮನ ಬಳಿಗೆ ಬಂದಾಗ, ಅವರು ಭವಾನಿ ದೇವಿಯ ಸಹಾಯವನ್ನು ಪಡೆಯಲು ಸಲಹೆ ನೀಡಿದರು. ದೇವತೆಗಳ ಅಪೇಕ್ಷೆಯಂತೆ ರಾಕ್ಷಸನನ್ನು ಕೊಂದಳು. ಮೂರನೆಯ ಪುರಾಣದ ಪ್ರಕಾರ, ಭವಾನಿ ದೇವಿಯು ಮತ್ತೊಂದು ರಾಕ್ಷಸನಾದ ಮಹಿಷಾಸುರನನ್ನು ಎಮ್ಮೆ ರೂಪದಲ್ಲಿ ಕೊಂದಳು. ರಾಕ್ಷಸನನ್ನು ಕೊಂದ ನಂತರ, ಅವಳು ಇಂದು ದೇವಾಲಯವಿರುವ ಯಮುನಾಚಲ ಬೆಟ್ಟದಲ್ಲಿ ತನ್ನ ವಾಸಸ್ಥಾನವನ್ನು ತೆಗೆದುಕೊಂಡಳು.
🎙️ತುಳಜಾಭವಾನಿಯ ಒಂಬತ್ತು ರೂಪಗಳು
1 – ಶೈಲಪುತ್ರಿ, 2- ಬ್ರಹ್ಮಚಾರಿಣಿ, 3 – ಚಂದ್ರಘಂಟಾ, 4 – ಕೂಷ್ಮಾಂಡ, 5 – ಸ್ಕಂಧಮಾತಾ, 6 – ಕಾತ್ಯಾಯನಿ, 7 – ಕಾಳರಾತ್ರಿ, 8 – ಮಹಾಗೌರಿ, 9 – ಸಿದ್ಧರಾತ್ರಿ.
ತುಳಜಾಭವಾನಿ ದೇವಾಲಯದ ವಾಸ್ತುಶಿಲ್ಪವು ಹೇಮದ್ಪಂಥಿ ಶೈಲಿಯಲ್ಲಿದೆ, ಇದು ಆರಂಭಿಕ ಭಾರತೀಯ ಯುಗದಲ್ಲಿ ಪ್ರಚಲಿತವಾಗಿತ್ತು ಮತ್ತು ಜನಪ್ರಿಯವಾಗಿತ್ತು. ತುಳಜಾಭವಾನಿ ದೇವಸ್ಥಾನವನ್ನು ಪ್ರವೇಶಿಸುವಾಗ ಎರಡು ದೊಡ್ಡ ದ್ವಾರಗಳು ಅಥವಾ ಮಹಾದ್ವಾರಗಳಿವೆ. ಮೊದಲು ದೇವಾಲಯವನ್ನು ಪ್ರವೇಶಿಸಿದ ನಂತರ ನಾವು ಕಲ್ಲೋಲ್ ತೀರ್ಥವನ್ನು ಗಮನಿಸುತ್ತೇವೆ, ಇದು ನೂರ ಎಂಟನೇ ತೀರ್ಥಗಳು ಅಥವಾ ಪವಿತ್ರ ನೀರಿನ ಸಂಗಮವಾಗಿದೆ.
ಕೆಲವು ಹೆಜ್ಜೆ ಮುಂದೆ ನಡೆದ ನಂತರ ನಾವು ಗೋಮುಖ ತೀರ್ಥಕ್ಕೆ ಬರುತ್ತೇವೆ, ಅಲ್ಲಿಂದ ನೀರು ನಿರಂತರವಾಗಿ ಹರಿಯುತ್ತದೆ.
ದಕ್ಷಿಣಾಭಿಮುಖವಾಗಿ ಹಿತ್ತಾಳೆಯ ದ್ವಾರವಿದೆ. ಮುಖ್ಯ ಗರ್ಭಗುಡಿಯನ್ನು ಪ್ರವೇಶಿಸಿದ ನಂತರ ತುಳಜಾಭವಾನಿಯ ಮೂಲ (ಸ್ವಯಂಭು) ವಿಗ್ರಹವನ್ನು ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ ಮತ್ತು ಆಭರಣಗಳಿಂದ ಹೊದಿಸಿರುವುದನ್ನು ಕಾಣಬಹುದು. ಮೂರ್ತಿಯ ದರ್ಶನ ನಮ್ಮ ಮನಸ್ಸಿಗೆ ಆನಂದ ನೀಡುತ್ತದೆ. ಮುಖ್ಯ ಕೋಣೆಯ ಬಳಿ ಬೆಳ್ಳಿಯ ಹಾಸಿಗೆಯಿದ್ದು, ಅದರ ಮೇಲೆ ಅಮ್ಮನ ಭಕ್ತಿ ಸೇವೆಯನ್ನು ನಡೆಸಲಾಗುತ್ತದೆ. ಎದುರಿಗೆ ಮಹಾದೇವನ ಪ್ರತಿಮೆ ಇದೆ. ಭವಾನಿ ಮತ್ತು ಶಂಕರರ ವಿಗ್ರಹಗಳು ಮುಖಾಮುಖಿಯಾಗಿ ಕುಳಿತಿರುವುದನ್ನು ಗಮನಿಸಬಹುದು.
ತಲುಪುವುದು ಹೇಗೆ:
1. ವಿಮಾನದ ಮೂಲಕ : ಔರಂಗಾಬಾದ್ ತುಳಜಾಪುರದಿಂದ 288 ಕಿಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ.
2. ರೈಲಿನ ಮೂಲಕ : ರೈಲ್ವೇ ನಿಲ್ದಾಣ ಉಸ್ಮಾನಾಬಾದ್ ತುಸ್ಜಾಪುರದಿಂದ 30.7 ಕಿ.ಮೀ.
3. ರಸ್ತೆಯ ಮೂಲಕ: ದೇಶದ ಇತರ ಪ್ರಮುಖ ನಗರಗಳಿಂದ ಸಾಮಾನ್ಯ ಬಸ್‌ಗಳ ಮೂಲಕ ನೀವು ಸುಲಭವಾಗಿ ತುಳಜಾಪುರವನ್ನು ತಲುಪಬಹುದು.
4. ದೇವಾಲಯದ ಭೇಟಿ ಸಮಯ: 5:00 AM ನಿಂದ 9:00 PM
***
ತಲೆಕೆಳಗಾಗಿ ನಿಂತಿರುವ (ಶೀರ್ಷಾಸನ) ಶಿವ
ತಲೆಕೆಳಗಾಗಿ ನಿಂತಿರುವ (ಶೀರ್ಷಾಸನ) ಶಿವ
ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪಿಯಾಗಿ
ಹಲವೆಡೆ ವಿಗ್ರಹರೂಪಿಯಾಗಿ ಕಾಣುತ್ತೇವೆ.
ಆದರೆ ಆಂಧ್ರಪ್ರದೇಶದ ಭೀಮವರಂ ನಿಂದ 4ಕಿಮೀ ದೂರದಲ್ಲಿರುವ ಯನಮುದುರು ಎಂಬ ಗ್ರಾಮದಲ್ಲಿ ಶೀರ್ಷಾಸನದಲ್ಲಿ ನಿಂತಿರುವ ಶಿವನನ್ನು ದರ್ಶಿಸಬಹುದು. ಆತನ ಪಕ್ಕದಲ್ಲಿ ಮಾತೆ ಪಾರ್ವತಿಯು ಮೂರು ತಿಂಗಳ ಹಸುಗೂಸನ್ನು ಎತ್ತಿಕೊಂಡು ಕುಳಿತಿದ್ದಾಳೆ
ಇಲ್ಲಿ ಶಿವ ಹೀಗೇಕೆ ಶೀರ್ಷಾಸನದಲ್ಲಿ ನಿಂತಿದ್ದಾನೆ ಅನ್ನುವುದಕ್ಕೆ ಒಂದು ದಂತಕಥೆಯನ್ನು ಹೇಳುತ್ತಾರೆ ಹಿರಿಯರು,
ಅಸುರನೊಬ್ಬ ತನ್ನಲ್ಲಿದ್ದ ರಕ್ಕಸ ಶಕ್ತಿಯಿಂದ ಅಟ್ಟಹಾಸವನ್ನು ಮೆರೆಯಲು ಆರಂಭಿಸ್ತಾನೆ. ಅವನಿಂದ ಜನಸಾಮಾನ್ಯರು, ಋಷಿಮುನಿಗಳು, ದೇವಾನುದೇವತೆಗಳು ಆತಂಕದಲ್ಲಿ ಜೀವನ ಸಾಗಿಸುವಂತಾಯಿತು. ಆ ರಕ್ಕಸನ ಸಂಹಾರ ಯಮನಿಂದ ಮಾತ್ರ ಸಾಧ್ಯ ಅನ್ನೋದನ್ನು ಅರಿತ ದೇವಾನುದೇವತೆಗಳು ಯಮನ ಬಳಿಗೆ ಹೋಗ್ತಾರೆ. ರಕ್ಕಸನ ಅಟ್ಟಹಾಸದ ಬಗ್ಗೆ ಹೇಳ್ತಾರೆ ಇದನ್ನು ಅರಿತ ಯಮಧರ್ಮರಾಯ ಆತನನ್ನು ಸಂಹಾರ ಮಾಡಲು ಮುಂದಾಗ್ತಾರೆ. ಆದ್ರೆ ಯಮಧರ್ಮರಾಯ ತಮ್ಮೆಲ್ಲಾ ಶಕ್ತಿಯನ್ನು ಪ್ರಯೋಗಿಸಿದ್ರೂ ಸಹಾ ಅದು ಸಾಧ್ಯವಾಗದಂತಹ ಸ್ಥಿತಿ ಎದುರಾಗುತ್ತೆ. ಅಂತಹ ಸ್ಥಿತಿಯಲ್ಲಿ ಯಮ ಆ ರಕ್ಕಸನನ್ನು ಸಂಹರಿಸಲು ಶಿವನ ಸಹಾಯ ಕೋರಿ ಕೈಲಾಸಕ್ಕೆ ಹೋಗುತ್ತಾನೆ. ಅಲ್ಲಿರುವ ಶಿವದೂತರು ಶಿವನು ಕೈಲಾಸದಲ್ಲಿ ಇಲ್ಲವೆಂದೂ
ತಪಸ್ಸಿಗೆ ಹೋಗಿದ್ದಾರೆಂದೂ ತಿಳಿಸುತ್ತಾರೆ. ಶಿವನನ್ನು ಹುಡುಕುತ್ತಾ ಹೊರಟ ಯಮನಿಗೆ ಈ ಸ್ಥಳದಲ್ಲಿ ಶಿವ ಶೀರ್ಷಾಸನದಲ್ಲಿ ತಪಸ್ಸು ಮಾಡುತ್ತಾ ಕಾಣಿಸುತ್ತಾನೆ. ಪಕ್ಕದಲ್ಲಿ ಮಾತಾ ಪಾರ್ವತಿಯು ಮೂರು ತಿಂಗಳ ಹಸುಗೂಸು ಕಾರ್ತಿಕೇಯನನ್ನು ಎತ್ತಿಕೊಂಡು ಕುಳಿತಿದ್ದಾಳೆ.
ಯಮ ತನ್ನ ಸಮಸ್ಯೆಯನ್ನು ಶಿವನಿಗೆ ಅರುಹಿ ರಕ್ಕಸ ಸಂಹಾರಕ್ಕೆ ಶಕ್ತಿಯನ್ನು ಬೇಡುತ್ತಾನೆ. ಯಮನ ಯಾವ ಮಾತಿಗೂ ಶಿವ ಪ್ರತಿಕ್ರಿಯೆ ನೀಡುವುದಿಲ್ಲ ಆಗ ಯಮನು ಮಾತೆಯ ಕಡೆಗೆ ದೃಷ್ಟಿ ಹರಿಸುತ್ತಾನೆ ಅದಾಗಲೇ ಶಿವನಿಂದ ಜ್ಞಾನ ಸಂದೇಶ ಪಡೆದಿದ್ದ ಪಾರ್ವತಿಯು ತನ್ನ ಶಕ್ತಿಯನ್ನು ಯಮನಿಗೆ ಧಾರೆ ಎರೆಯುತ್ತಾಳೆ. ಆ ದಂಪತಿಯಿಂದ ಅದ್ಭುತವಾದ ಶಕ್ತಿಯನ್ನು ಪಡೆದಂತಹ ಯಮಧರ್ಮರಾಯ ರಕ್ಕಸನನ್ನು ಸಂಹಾರ ಮಾಡ್ತಾನೆ
ಅಂದಿನಿಂದ ಈ ಸ್ಥಳದ ಹೆಸರು ಯಮಪುರಿ ಎಂದು ಆಯಿತು ಆದರೆ ಆದು ಜನರ ಬಾಯಲ್ಲಿ ಇಂದು ಯನಮದುರು ಆಗಿದೆ. ಈ ಘಟನೆ ಇಲ್ಲಿ ನಡೆದದ್ದರಿಂದ ಶೀರ್ಷಾಸನದಲ್ಲಿ ಶಿವನಿರುವಂತೆ ವಿಗ್ರಹ ಪ್ರತಿಷ್ಠೆ ಮಾಡಲಾಗಿದೆ ಪಕ್ಕದಲ್ಲಿ ಹಸುಗೂಸಿನ ಸಮೇತ ಪಾರ್ವತಿಯ ವಿಗ್ರಹ ವನ್ನು ಪ್ರತಿಷ್ಟಿಸಲಾಗಿದೆ.
ಯಮ ಇಲ್ಲಿ ಶಕ್ತಿಯನ್ನು ಪಡೆದದ್ದರಿಂದ ಇಲ್ಲಿರುವ ಶಿವನನ್ನು ಶಕ್ತೇಶ್ವರ ಎಂದೂ ಕರೆಯುತ್ತಾರೆ. ಇಲ್ಲಿಗೆ ಭಕ್ತರು ಬಂದು ಬೇಡಿದರೆ ಕರುಣಿಸುತ್ತಾರೆಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಾರೆ.
ಪುರಾಣಗಳ ಪ್ರಕಾರ ಕವಿ ಕಾಳಿದಾಸನು ತನ್ನ ಕುಮಾರ ಸಂಭವ ದಲ್ಲಿ ಯನಮದುರು ವಿನ ಬಗ್ಗೆ ಪ್ರಸ್ತಾಪವಿದೆ.
ಭೋಜರಾಜನೂ ಇಲ್ಲಿಗೆ ಭೇಟಿ ನೀಡಿದ್ದನು ಎಂದು ಉಲ್ಲೇಖಗಳಿವೆ. ಈ ದೇಗುಲದ ಬಳಿ ಒಂದು ಶಕ್ತಿಗುಂಡಂ ಹೆಸರಿನ ಕೆರೆ ಇದ್ದು ಇಲ್ಲಿ ಗಂಗಾ ನದಿಯು ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆಂದೂ ಹಾಗೂ ಈ ಕೆರೆಗೆ ಎರಡು ಶಕ್ತಿಶಾಲಿ ಸರ್ಪಗಳು ಕಾವಲು ಇವೆಯೆಂದೂ ನಂಬಿಕೆ ಈ ಕೆರೆಯ ನೀರನ್ನೇ ಈಗಲೂ ಅಭಿಷೇಕಕ್ಕಾಗಿ ಹಾಗೂ ನೈವೇದ್ಯಕ್ಕಾಗಿ ಬಳಸಲಾಗುತ್ತದೆ. ಒಂದು ವೇಳೆ ಬೇರೆ ನೀರನ್ನು ಬಳಸಿದರೆ ನೈವೇದ್ಯ ಬೇಯುವುದಿಲ್ಲವೆಂದು ಹೇಳುತ್ತಾರೆ ಇಲ್ಲಿನ ಅರ್ಚಕರು.
***
c
Located in Tamar 60 km toward the south from Ranchi, Jharkhand, Maa Dewri Temple is an ancient temple. Dedicated to Solha Bhuji Goddess, an avatar of Goddess Durga, the temple also houses an idol of Lord Shiva. The main attraction of the temple is that the idol of Durga is having 16 hands whereas normally Goddess Durga have only 8 hands.
According to the legends, it is believed that whoever tried to change the temple structure has come across severe consequences because of the rage of the Gods. Because of this, the temple structure of Maa Dewri Temple has never been changed since earlier times. Alongside the Brahmin priests, there are six tribal priests known as Pahans who worship in this temple and take part in different rituals and prayers. It is the only temple where the tribal priests are allowed to worship the Goddess.
***
Kalaram Temple, is a Hindu temple in Nashik of Nashik district in Maharashtra, dedicated to the deity Rama. It is a temple situated in Panchavati area of the Nashik. The temple derives its name from a black statue of Rama. The literal translation of kalaram is "black Rama". The sanctum sanctorum also houses the statues of the goddess Sita and the god Lakshmana. Thousands of devotees visit the temple every day.The original temple dedicated to an unknown deity was very old, estimated to be of the Rashtrakuta Period from 7th to 11th centuries. However, the claimed antiquity of the Rama idol that it was more than 2000 years old has not been verified. According to an anecdote, during the period of early Turkish invasions, the idol of the deity was thrown in the Godavari River by the Temple Brahmins in order to save it. The new temple was funded by one Sardar Rangarao Odhekar, and was rebuilt around 1788.
****
MALLUR NARASIMHA TEMPLE
mallur, warangal dist telangana - jeevita murthy live idol
Thodikkulam Temple at Kannavam is an ancient temple dedicated to Lord Shiva located at the Kannur district of Kerala. This temple is a must-visit place, not only for devotees but also for all art lovers because of its eye catching art works. This temple is believed to be built around 2000 years ago and houses more than 150 mural paintings in about 40 panels on an area of 700 sq. ft. It shall be amazing to watch four walls of the sreekovil (sanctum sanctorum) that is adorned with beautiful mural paintings based on the myths related to Lord Vishnu and Lord Shiva. The murals also show the village life of this region from the 16th to 18th centuries. This temple is an ideal place for people who wish to watch the unique art works of Kerala.
***
At a distance of 2 km from Nashik Central Bus Station, Sundarnarayan temple is situated at the corner of Ahillyabai Holkar Bridge near Ram Kund in Panchavati area of Nashik.
The Sundarnarayan Temple is built by Gangadhar Yashwant Chandrachud in 1756. The presiding deity of the temple is Lord Vishnu as Sundarnarayan. According to legend, once the area was a place haunted by an evil demon named Jalandar who was an ardent devotee of Lord Shiva. Even though the demon was wild and practiced evil deeds, he had a pious and virtuous wife Vrinda Devi. Lord Shiva was highly impressed by his devotion and he blessed the demon with a boon of immortality. This boon made Jalandar to create destruction in the area.
***
During Initial days of Vayu Lingam origination, there is not much water availabile at Sri Kalahasthi. Water scarcity is high, not getting enough water for daily Pooja activities at the Temple, Sages and Pilgrims to take bath before Lord Siva and Gnana prasoonambika Darshan. Sages requested Maharshi Agasthya to find solution for this.
Sage Agasthya after knowing Lord Vinayaka relaxing near to Temple. Lord Vinayaka who is relaxing at Pathala Cave which is North West to Vayu Lingam, after succeeding the huge war with Gajasura. Sage Agasthya offered sincere prayers to Vinayaka so that he can put an end to water crisis in this Holy place.
Lord Vinayaka is so pleased with Sage Agasthya’s sincere prayers and decided to reside at Pathala Cave. Lord Vinayaka then removed sand from this place to give birth to Pathala Ganga. Water from Pathala Ganga started it’s flow and soon turned into a river.
***
.
*
ವಳೆ, ಗೋವಾ ಇಲ್ಲಿನ ನಯನಮನೋಹರ ಮತ್ತು ಜಾಗೃತ ಶ್ರೀ ಶಾಂತಾದುರ್ಗಾ ದೇವಸ್ಥಾನ
*
ಕವಳೆ, ಗೋವಾ ಇಲ್ಲಿ ನೆಲೆಸಿರುವ ಶ್ರೀ ಶಾಂತಾದುರ್ಗಾದೇವಿಯು ಆ ಜಗದಂಬೆಯ ರೂಪವೇ! ಇದು ಗೋವಾ ರಾಜ್ಯದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಸ್ಥಾನ. ಶ್ರೀ ಶಾಂತಾದುರ್ಗಾ ದೇವಿ ಮತ್ತು ದೇವಿಯ ವಿವಿಧ ರೂಪಗಳ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ.
೧. ಶ್ರೀ ಶಾಂತಾದುರ್ಗಾ ದೇವಿಯ ಪೌರಾಣಿಕ ಕಥೆ
ಒಮ್ಮೆ ಯಾವುದೊ ಕಾರಣದಿಂದ ಶಿವ ಮತ್ತು ವಿಷ್ಣುವಿನ ಮಧ್ಯೆ ಯುದ್ಧವಾಯಿತು, ಇದರಿಂದ ಪ್ರಳಯ ಸಂಭವಸಿತು. ಆಗ ಎಲ್ಲ ದೇವತೆಗಳು, ಮಾನವರು, ಋಷಿಗಳು ಆರ್ತತೆಯಿಂದ ತಾಯಿ ಜಗದಾಂಬೆಗೆ ಶರಣಾಗಿ ಪ್ರಾರ್ಥಿಸಿದರು, ಜಗದಂಬೆಯು ತನ್ನ ಮಹಾಕಾಯ ರೂಪದಲ್ಲಿ ಅವತರಿಸಿ ಹರಿ ಹರರನ್ನು ಶಾಂತಗೊಳಿಸಿ ಬಾಲರೂಪದಲ್ಲಿ ಇಬ್ಬರ ಕೈಹಿಡಿದಳು. ‘ಕೃದ್ಧೌ ಶಾಂತಿಯುತೌ ಕೃತೌ ಹರಿಹರೌ’ ಅಂದರೆ ಕ್ರೋಧಿತರಾದ ಹರಿ ಹರರನ್ನು ಶಾಂತಗೊಳಿಸಿದಳು ಎಂದು ಜಗದಂಬೆಯು ‘ಶಾಂತಾದುರ್ಗಾ’ ಆಡಲು. ಕರ್ದಲೀವನ (ಇಂದಿನ ಸಾಶಷ್ಠಿ ತಾಲೂಕಿನ ಕೆಳಶಿ) ಇದು ಶಾಂತಾದುರ್ಗಾ ದೇವಿಯ ಮುಕ್ಲ್ಯಾ ಸ್ಥಾನ. ಇಲ್ಲಿ ಸುಮಾರು ೧೬ನೇ ಶತಕದ ವರೆಗೆ ದೇವಿಯ ದೇವಸ್ಥಾನವಿತ್ತು. ಪರಶುರಾಮನ ಸಮಯದಲ್ಲಿ ಪರಶುರಾಮನು ಗೋಮಾಂತಕ ಪ್ರದೇಶಕ್ಕೆ ಕರೆತಂದಿದ್ದ ದಶಗೋತ್ರಿ ಬ್ರಾಹ್ಮಣರಲ್ಲಿ ಕೌಶಿಕ ಗೋತ್ರದ ಲೋಮಶರ್ಮ ಎಂಬ ಬ್ರಾಹ್ಮಣನಿಗೆ ಈ ಕರ್ದಲೀಪುರ ಅಗ್ರಹಾರವಾಗಿ ದೊರೆತಿತ್ತು. ಈ ಲೋಮಶರ್ಮನೇ ಇಲ್ಲಿ ಶಾಂತಾದುರ್ಗಾ ದೇವಿಯನ್ನು ಇಲ್ಲಿ ಸ್ಥಾಪಿಸಿದನು ಎಂಬ ಮಾಹಿತಿಯನ್ನು ಪೌರಾಣಿಕ ಗ್ರಂಥಗಳಲ್ಲಿ ನೀಡಲಾಗಿದೆ.
೨. ಶ್ರೀ ಶಾಂತಾದುರ್ಗಾ ದೇವಿಯ ದೇವಸ್ಥಾನದ ಇತಿಹಾಸ
ಕೆಳಶಿಯ ಶ್ರೀ ಶಾಂತಾದುರ್ಗಾ ದೇವಿಯ ದೇವಸ್ಥಾನವನ್ನು ಶೇಣವಿ ಮಾನೆ ಎಂಬ ಹೆಸರಾಂತ ವ್ಯಾಪಾರಿಯು ಕಟ್ಟಿಸಿದ್ದನು ಎಂಬ ದಾಖಲೆಗಳಿವೆ. ನಂತರ, ಏನಂದ್ರೆ ೧೬ನೇ ಶತಮಾನದಲ್ಲಿ ಪೋರ್ತುಗೀಜರು ಸಾಶಷ್ಠಿಯ ಮೇಲೆ ಆಕ್ರಮಣ ಮಾಡಿ ಹಿಂದೂಗಳ ದೇವಾಲಯಗಳನ್ನು ಕೆಡವಿಹಾಕಿದರು. ಆ ಸಮಯದಲ್ಲಿ ಕೆಲವು ಭಕ್ತರು ದೇವಿಯ ಮೂರ್ತಿಯನ್ನು ಕೈವಲ್ಯಪುರಕ್ಕೆ (ಕವಳೆ) ಸ್ಥಳಾಂತರಿಸಿದರು. ಕವಳೆಯಲ್ಲಿರುವ ದೇವಸ್ಥಾನವನ್ನು ಮೊದಲಿಗೆ ಯಾವ ವರ್ಷದಲ್ಲಿ ಕಟ್ಟಲಾಯಿತು ಎಂಬುವುದರ ದಾಖಲೆಗಳು ಲಭ್ಯವಿಲ್ಲ. ನಂತರ ಸುಮಾರು ೧೭೧೩ ಇಂದ ೧೭೩೮ ಕಾಲಾವಧಿಯಲ್ಲಿ ಈಗಿರುವ ದೇವಸ್ಥಾನವನ್ನು ನಿರ್ಮಿಸಲಾಯಿತು ಎಂಬ ದಾಖಲೆಗಳಿವೆ.
ನಾರೋರಾಮ ಮಂತ್ರಿಗೆ ಈ ದೇವಸ್ಥಾನವನ್ನು ನಿರ್ಮಿಸುವ ಪ್ರೇರಣೆಯನ್ನು ಸಾಕ್ಷಾತ್ ಶಾಂತಾದುರ್ಗಾದೇವಿಯೇ ನೀಡಿದಳು. ಸರದಾರ ನಾರೋರಾಮ ಶೇಣವಿ ರೆಗೆ ಇವರು ಸಿಂಧುದುರ್ಗ ಜಿಲ್ಲೆಯ ಕೊಚಾರ್ ಎಂಬ ಊರಿನವರಾಗಿದ್ದರು. ೧೭೧೩ ರಲ್ಲಿ ಅವರು ಛತ್ರಪತಿ ಶಾಹುವಿನ ಆಸ್ಥಾನದಲ್ಲಿ ಮಂತ್ರಿಯಾದರು. ಆವರಿಗೆ ‘ದೇವಿಯು ತನಗೆ ಐಶ್ವರ್ಯ, ಸಂಪತ್ತು ನೀಡಿದ್ದಾಳೆ’ ಎಂಬ ಬಲವಾದ ಶ್ರದ್ಧೆ ಇತ್ತು, ಆದುದರಿಂದ ಅವರು ದೇವಿಗೊಂದು ದೇವಸ್ಥಾನವನ್ನು ಕಟ್ಟಿಸಬೇಕು ಎಂದು ತೀರ್ಮಾನಿಸಿ, ೧೭೩೦ ರಲ್ಲಿ ತನ್ನದೇ ದುಡ್ಡಿನಲ್ಲಿ ಈಗಿರುವ ಶ್ರೀ ಶಾಂತದುರ್ಗಾ ದೇವಿಯ ಭವ್ಯ ಮತ್ತು ಸುಂದರ ದೇವಸ್ಥಾನವನ್ನು ಕಟ್ಟಿಸಿದರು.
೩. ದೇವಸ್ಥಾನದ ಮಾಹಿತಿ
ಪುರ್ವಾಭಿಮುಖವಾಗಿರುವ ಶ್ರೀ ಶಾಂತಾದುರ್ಗಾ ದೇವಿಯ ದೇವಸ್ಥಾನದ ಮುಂದೆ ಒಂದು ನಯನಮನೋಹರ ದೀಪಸ್ತ೦ಭ ಇದೆ. ದೇವಸ್ಥಾನದ ಮುಂದೆ ಒಂದು ಕೊಳ ಇದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಾದ್ಯವೃಂದದವರು ಕುಳಿತುಕೊಳ್ಳಲು ಚಾವಡಿ ಇದೆ. ಗರ್ಭಗೃಹದ ಮೇಲೆ ಚಿನ್ನದ ಕಲಶ ಶೋಭಿಸುತ್ತದೆ. ಗರ್ಭಗೃಹದಲ್ಲಿ ಶಾಂತಾದುರ್ಗಾದೇವಿಯು ಚತುರ್ಭುಜ ರೂಪದಲ್ಲಿ ದರ್ಶನವನ್ನು ನೀಡುತ್ತಾಳೆ. ಅವಳ ಒಂದು ಕೈಯಲ್ಲಿ ಶಿವ ಮತ್ತು ಇನ್ನೊಂದು ಕೈಯಲ್ಲಿ ವಿಷ್ಣು ಇದ್ದಾರೆ. ಈ ಮೂರ್ತಿಯ ಪಕ್ಕದಲ್ಲಿ ೬ ಇಂಚಿನಷ್ಟು ಕರಿಕಲ್ಲಿನ ಒಂದು ಶಿವಲಿಂಗ ಇದೆ. ಈ ದೇವಸ್ಥಾನದ ಎಡಬದಿಗೆ ಹತ್ತಿರದಲ್ಲೇ ಶ್ರೀ ನಾರಾಯಣನ ದೇವಸ್ಥಾನವಿದೆ. ಈ ದೇವಸ್ಥಾನದ ಮುಖ್ಯ ಪೀಠದಲ್ಲಿ ಶ್ರೀ ನಾರಾಯಣ ಮತ್ತು ಶ್ರೀ ಗಣಪತಿಯು ವಿರಾಜಮಾನರಾಗಿದ್ದಾರೆ. ಇದರ ಪಕ್ಕದಲ್ಲೇ ಒಂದು ಪಾರಿಜಾತ ಮರದ ಕಟ್ಟೆ ಇದೆ. ಅದರ ಮೇಲೆ ಶ್ರೀ ಭಗವತಿಯ ಒಂದು ಮೂರ್ತಿ ಮತ್ತು ಓರ್ವ ಅಜ್ಞಾತ ಸನ್ಯಾಸಿಯ ಪಾದುಕೆಗಳು ಕೂಡ ಇವೆ. ದೇವಸ್ಥಾನದ ಮುಂದೆ ಶ್ರೀ ಕ್ಷೇತ್ರಪಾಲಕರ ಶಿಲೆ ಇದೆ. ದೇವಾಲಯದ ಹಿಂದೆ ಮ್ಹಾರು ದೇವರ ಶಿಲೆ ಇದೆ. ಅದಲ್ಲದೆ ದೇವಸ್ಥಾನದ ಪಕ್ಕದಲ್ಲಿ ಒಂದು ಚಿಕ್ಕ ಗುಡಿ ಇದ್ದು, ಅದರಲ್ಲಿ ಮೂಲ ಪುರುಷರಾದ ಕೌಶಿಕ ಗೋತ್ರದ ಲೋಮಶರ್ಮ ಇವರ ಕಲ್ಲಿನ ಮೂರ್ತಿಯನ್ನು ಸ್ಥಾಪಿಸಲಾಗಿದೆ.
೪. ಜಾತ್ರೆ
ಮಾಘ ಶುಕ್ಲಪಕ್ಷ ಪಂಚಮಿಯಂದು ಪರ್ವಕಾಲ ಪ್ರಾರಂಭವಾಗುತ್ತದೆ. ಮಾಘ ಶುಕ್ಲ ಪಕ್ಷ ಷಷ್ಠಿಯಂದು ಮುಂಜಾನೆ ಶ್ರೀ ದೇವಿಯು ಪಲ್ಲಕ್ಕಿಯಲ್ಲಿ ವಿರಾಜಮಾನಳಾಗಿ ಮೆರವಣಿಗೆಯಲ್ಲಿ ಹೊರಬರುತ್ತಾಳೆ. ಇದರೊಂದಿಗೆ ಈ ಪರ್ವಕಾಲದ ಮುಖ್ಯ ಉತ್ಸವ ಪೂರ್ಣಗೊಳ್ಳುತ್ತದೆ. ಈ ಮೆರವಣಿಗೆಯು ಹೊರಡುವ ಮೊದಲು ದೇವಿಯು ರಥಾರೂಢಳಾದ ಮೇಲೆ ಅವಳಿಗೆ ಆರತಿಯನ್ನು ಮಾಡಿ ದೇವಸ್ಥಾನದಲ್ಲಿ ತೆಂಗಿನ ಕಾಯಿಯನ್ನು ಹೊಡೆಯುತ್ತಾರೆ. ಈ ದೇವಸ್ಥಾನದಲ್ಲಿ ಪ್ರತಿ ತಿಂಗಳೇನೇ ಶುಕ್ಲ ಮತ್ತು ಕೃಷ್ಣ ಪಕ್ಷದ ಪಂಚೆಮಿಯಂದು ನಿತ್ಯೋತ್ಸವ ನಡೆಯುತ್ತದೆ. ಈ ದಿನಗಳಂದು ರಾತ್ರಿ ಪುರಾಣ-ಕೀರ್ತನೆ ಮುಂತಾದ ಕಾರ್ಯಕ್ರಮಗಳು ಆದಮೇಲೆ ದೇವಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
೫. ಪ್ರಾರ್ಥನೆ
ಭಕ್ತನಿಗೆ ಇಹ ಪರದಲ್ಲಿ ಬರುವ ದುಃಖ, ಕಷ್ಟಗಳನ್ನು ಜಗದಂಬೆಯು ನಿವಾರಿಸುತ್ತಾಳೆ. ತನ್ನನ್ನು ಆರಾಧಿಸುವವನ ಎಲ್ಲಾ ಇಚ್ಛೆಗಳನ್ನೂ ಪೂರ್ಣಗೊಳಿಸುತ್ತಾಳೆ. ಹಾಹಾಗಿ ಉಪಾಸಕರು ‘ಹೇ ದೇವಿ, ನನಗೆ ಸದ್ಬುದ್ಧಿಯನ್ನು ನೀಡು. ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು.
ಸಂಕಲಕರು : ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ ಫಲಿತ ವಿಶಾರದೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ.
*
Bhubaneswar: The excavators and JCB’s have stopped short before many temples that surround the Lingaraj complex. While extensive damage has been done to the many heritage structures of the Old Town, the administration has not demolished a single temple, big or small, till now.
However, the iconic Ganesh temple called as the Budha Ganesh (Old Ganesh), on the northern side of Lingaraj complex is slated for demolition due to the road expansion. This small temple dates to the 11th Century CE, contemporary to the Lingaraj temple. It was originally one of the subsidiary temples and was inside the complex before the wall was built in later years. It has been listed as a protected monument years ago and is one of the smallest Ganesh temples of the Old City.
***
This temple in Basar has gained a reputation of being the second most popular temple of Goddess Saraswati, and one of the most beautiful temples in Telangana. The religious significance of the temple has earned a lot of footfalls from the devotees.
The place of worship represents the holy trinity in the form of Goddess Saraswati, Lakshmi, and Kali. As Goddess Saraswati is also known as the “Goddess of Learning” according to Hindu Mythology, small children are brought to this place for “Akshara Abhyasam” initiating their first collaboration with writing.
***
*
*
***
***
ಪುರಿ ಜಗನ್ನಾಥ ರಥಯಾತ್ರೆ 🌹🪷
ಪ್ರತಿ ವರ್ಷ ಒಡಿಶಾದ ಪುರಿಯಲ್ಲಿ ನಡೆಯುವ ಭಗವಾನ್ ಜಗನ್ನಾಥ ರಥಯಾತ್ರೆ ವಿಶ್ವವಿಖ್ಯಾತವಾಗಿದೆ. ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ದೂರದೂರುಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ರಥಯಾತ್ರೆಯ ಈ ಹಬ್ಬವನ್ನು ಇಡೀ 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದು ಹೇಗೆ ಹಬ್ಬವೋ, ಇದರಲ್ಲಿ ಪಾಲ್ಗೊಂಡವರ ಮೇಲೆ ಜಗನ್ನಾಥನ ಅನುಗ್ರಹ ಸದಾ ಇರುತ್ತದೆ ಎಂಬ ನಂಬಿಕೆ.
🔯 ಜಗನ್ನಾಥ ರಥಯಾತ್ರೆ ದಿನಾಂಕ
ಹಿಂದೂ ಕ್ಯಾಲೆಂಡರ್ ಪ್ರಕಾರ, ರಥಯಾತ್ರೆಯನ್ನು ಆಷಾಢ ಮಾಸದ(ಉತ್ತರ ಭಾರತದ) ಶುಕ್ಲ ಪಕ್ಷದ ಎರಡನೇ ದಿನಾಂಕದಂದು ತೆಗೆದುಕೊಳ್ಳಲಾಗುತ್ತದೆ.
ಆಷಾಢ ಮಾಸದ ಶುಕ್ಲಪಕ್ಷದ ದ್ವಿತೀಯಾರ್ಧದ ಆರಂಭ - ಬೆಳಿಗ್ಗೆ
ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾರ್ಧ ಅಂತ್ಯ - ಮಧ್ಯಾಹ್ನ
🔯 ರಥಯಾತ್ರೆಯ ಮಹತ್ವ
ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರಾ ರಥಯಾತ್ರೆಯ ಸಮಯದಲ್ಲಿ ರಥದಲ್ಲಿ ಕುಳಿತು ತಮ್ಮ ಗುಂಡಿಚಾ ದೇವಸ್ಥಾನಕ್ಕೆ ಹೋಗುತ್ತಾರೆ. ಗುಂಡಿಚಾ ದೇವಸ್ಥಾನವು ಜಗನ್ನಾಥನ ಚಿಕ್ಕಮ್ಮನ ಮನೆ ಎಂದು ಹೇಳಲಾಗುತ್ತದೆ. ಇಲ್ಲಿ ಈ ಮೂವರು ಸಹೋದರ ಮತ್ತು ಸಹೋದರಿಯರು 7 ದಿನಗಳವರೆಗೆ ವಿಶ್ರಾಂತಿ ಪಡೆಯುತ್ತಾರೆ. ಇದರ ನಂತರ, ಆಷಾಢ ಶುಕ್ಲ ಪಕ್ಷದ ದಶಮಿ ತಿಥಿಯಂದು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ದೇವಸ್ಥಾನದಲ್ಲಿ ಮತ್ತೆ ಇರಿಸಲಾಗುತ್ತದೆ. ರಥಯಾತ್ರೆಯಲ್ಲಿ ಭಾಗವಹಿಸುವ ಭಕ್ತರ ಕಷ್ಟಗಳು ದೂರವಾಗುತ್ತವೆ. ಭಗವಾನ್ ಜಗನ್ನಾಥನ ರಥವನ್ನು ಎಳೆಯುವವನು 100 ಯಾಗಗಳನ್ನು ಮಾಡಿದ ಸಮಾನವಾದ ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
🔯 ಜಗನ್ನಾಥ ರಥಯಾತ್ರೆಯ ಇತಿಹಾಸ
ಜಗನ್ನಾಥ ರಥಯಾತ್ರೆಯ ಮೂಲವು 12ನೇ ಶತಮಾನದಷ್ಟು ಹಿಂದಿನದು. ಇದರ ವಿವರವನ್ನು ಹಿಂದೂ ಪವಿತ್ರ ಗ್ರಂಥಗಳಾದ ಪದ್ಮ ಪುರಾಣ, ಬ್ರಹ್ಮ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಕಾಣಬಹುದು. ದಂತಕಥೆಯ ಪ್ರಕಾರ, ಈ ದಿನದಂದು, ಜಗನ್ನಾಥನು ತನ್ನ ಸಹೋದರಿ ಸುಭದ್ರ ಮತ್ತು ಅಣ್ಣ ಬಲಭದ್ರನೊಂದಿಗೆ ತನ್ನ ಚಿಕ್ಕಮ್ಮನ ಮನೆಯ ಮೂಲಕ ಗುಂಡಿಚಾ ದೇವಾಲಯಕ್ಕೆ ಹೋದನು.
ಈ ದಿನವನ್ನು ಈಗ ಪ್ರತಿ ವರ್ಷ ಜಗನ್ನಾಥ ರಥಯಾತ್ರೆಯೊಂದಿಗೆ ಆಚರಿಸಲಾಗುತ್ತದೆ. ನಡೆಯುವ ಭವ್ಯ ಮೆರವಣಿಗೆಗೆ ಭಾರತದಾದ್ಯಂತ ಭಾರಿ ಮಹತ್ವವಿದೆ. ಹೀಗಾಗಿ, ರಥಯಾತ್ರೆಯ ಇತಿಹಾಸವು ಪ್ರಾಚೀನ ಕಾಲದಿಂದಲೂ ಇದೆ.
🔯 ಜಗನ್ನಾಥ ದೇವಾಲಯದ ಬಗ್ಗೆ
ಪುರಿಯ ಈ ಪ್ರಸಿದ್ಧ ದೇವಾಲಯದಲ್ಲಿ, ಜಗನ್ನಾಥನು ತನ್ನ ಹಿರಿಯ ಸಹೋದರ ಬಲಭದ್ರ (ಬಲರಾಮ್) ಮತ್ತು ಸಹೋದರಿ ಸುಭದ್ರೆಯೊಂದಿಗೆ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ರಥಯಾತ್ರೆಯ ಸಮಯದಲ್ಲಿ, ಮೂವರು ಸಹೋದರ ಸಹೋದರಿಯರ ಮೂರ್ತಿಗಳನ್ನು ರಥದಲ್ಲಿ ಕೂರಿಸಿ ನಗರ ಪ್ರದಕ್ಷಿಣೆಗೆ ಕರೆದೊಯ್ಯಲಾಗುತ್ತದೆ.
ಜಗನ್ನಾಥ ದೇವಾಲಯದ ಅಡುಗೆಮನೆಯು ವಿಶ್ವದ ಅತಿದೊಡ್ಡ ಅಡುಗೆಮನೆ ಎಂದು ನಂಬಲಾಗಿದೆ. ಜಗನ್ನಾಥ ದೇವಾಲಯವು ಪ್ರಸಾದವನ್ನು 'ಮಹಾಪ್ರಸಾದ' ಎಂದು ಕರೆಯುವ ಏಕೈಕ ದೇವಾಲಯವಾಗಿದೆ. ಮಹಾಪ್ರಸಾದವನ್ನು 7 ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಲಾಗುತ್ತದೆ. ಮಹಾಪ್ರಸಾದ ಅಡುಗೆಗೆ ಮರದ ಮತ್ತು ಮಣ್ಣಿನ ಪಾತ್ರೆಗಳನ್ನು ಮಾತ್ರ ಬಳಸಲಾಗುತ್ತದೆ. ಜಗನ್ನಾಥ ದೇವಾಲಯಕ್ಕೆ ಸಂಬಂಧಿಸಿದ ಒಂದು ನಿಗೂಢವೂ ಇದೆ, ಸೂರ್ಯನ ಬೆಳಕಿನಲ್ಲಿ ಈ ದೇವಾಲಯದ ನೆರಳು ರೂಪುಗೊಳ್ಳುವುದಿಲ್ಲ.
ಶ್ರೀಕೃಷ್ಣಾರ್ಪಣಮಸ್ತು
***.
Devipattanam 16 kms from Ramanathapuram 70 kms from Rameshwaram
ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಿ ಪಟ್ಟಿನಮಲ್ಲಿರುವ ನವ ಪಾಶಾನದ ನವಗ್ರಹ ದೇವಸ್ಥಾನದ ಪರಿಚಯ. ಎಲ್ಲಾ ಗ್ರಹದೋಷಗಳಿಗೆ ಒಂದೇ ಕಡೆ ಪರಿಹಾರ!
ಆ ದುರ್ಗಿ ಇದೇ ಜಾಗದಲ್ಲಿ ಮಹಿಷಾಸುರನ ಸಂಹಾರ ಮಾಡಿದ್ದು! ಆದ್ದರಿಂದ ಈ ಊರಿಗೆ ದೇವಿಪಟ್ಟಿನಮ್ ಎಂಬುದಾಗಿ ಹೆಸರು.
***
ಕಾಶೀ ವಿಶ್ವನಾಥ ದೇವಾಲಯ
12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖ ಜ್ಯೋತಿರ್ಲಿಂಗವಾದ ಕಾಶೀ ವಿಶ್ವನಾಥ ದೇವಾಲಯ ವಾರಣಾಸಿಯಲ್ಲಿ ಇರುವುದು ನಮಗೆಲ್ಲಾ ತಿಳಿದಿದೆ ಆತನನ್ನು ದರ್ಶಿಸಿದರೆ ಮೋಕ್ಷ ಸಿಗುವುದೆಂದು ಭಾರತದ ಹಿಂದೂಗಳೆಲ್ಲರ ನಂಬಿಕೆ.
ಮೊದಲಿಗೆ ಶಿವನು ಕಾಶಿಯಲ್ಲಿ ನೆಲೆಗೊಂಡ ಬಗ್ಗೆ ಇರುವ ದಂತಕಥೆಯನ್ನು ತಿಳಿಯೋಣ. ಶಿವನು ಕೈಲಾಸ ವಾಸಿಯಾಗಿದ್ದು, ಆತ ಪಾರ್ವತಿಯನ್ನು ಮದುವೆಯಾದ ನಂತರ ಯಾವುದಾದರೂ ಸಿದ್ಧ ಕ್ಷೇತ್ರದಲ್ಲಿರಲು ಬಯಸುತ್ತಾರೆ. ಆಗ ಇಡೀ ಜಗತ್ತನ್ನು ನೋಡಿ ಅಧ್ಬುತವಾಗಿ ನಿರ್ಮಾಣವಾಗಿದ್ದ ಕಾಶೀ ಪಟ್ಟಣವನ್ನು ಆಯ್ಕೆ ಮಾಡುತ್ತಾರೆ. ಆ ಕಾಲಕ್ಕೆ ಕಾಶಿಯಲ್ಲಿ 27000 ದೇಗುಲಗಳಿದ್ದವಂತೆ ಇದು ಮನುಷ್ಯನ ದೇಹದಲ್ಲಿರುವ ನರಗಳ ಸಂಖ್ಯೆಯೂ ಹೌದೆಂದು ಬಲ್ಲವರು ಹೇಳುತ್ತಾರೆ. ಸತೀ ಪಾರ್ವತಿಯ ಸಮೇತ ಕಾಶಿಯಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ. ಆಗ ಕಾಶೀಯನ್ನು ದಿವೋದಾಸ ಎಂಬ ರಾಜ ಆಳುತ್ತಿರುತ್ತಾನೆ. ಆತನಿಗೆ ಶಿವ ಕಾಶಿಯಲ್ಲಿ ನೆಲೆಗೊಳ್ಳುವುದು ಇಷ್ಟವಿರಲಿಲ್ಲ ಒಮ್ಮೆ ಶಿವನು ಕಾಶಿಯಲ್ಲಿ ನೆಲೆ ನಿಂತರೆ , ಶಿವನೇ ಕ್ರೇಂದ್ರಬಿಂದುವಾಗಿ ಎಲ್ಲರೂ ಆತನ ಸುತ್ತಲೂ ನೆರೆಯುತ್ತಾರೆ ನನ್ನ ಮಾತಿಗೆ ಬೆಲೆ ಕೊಡದಿರಬಹುದು ಎಂಬುದು ಆತನ ಊಹೆಯಾಗಿತ್ತು. ಆಗ ದಿವೋದಾಸನು ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಿದನು. ಆತನ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವನು ಪ್ರತ್ಯಕ್ಷನಾದ ಆಗ ದಿವೋದಾಸನು ಕಾಶಿಯಲ್ಲಿ ಮನುಷ್ಯರು ಮಾತ್ರ ವಾಸಿಸಬೇಕು ಶಿವನಂತಹ ದೇವರುಗಳು ವಾಸಮಾಡಬಾರದು ಎಂದು ವರ ಕೇಳುತ್ತಾನೆ. ಬ್ರಹ್ಮ ತಥಾಸ್ತು ಎಂದು ವರ ಕೊಡುತ್ತಾನೆ. ವರ ಪ್ರಭಾವದಿಂದ ಶಿವನು ತನ್ನ ಪರಿವಾರ ಸಮೇತ ಕಾಶೀಯನ್ನು ಬಿಟ್ಟು ಕೈಲಾಸಕ್ಕೆ ಹೊರಡುತ್ತಾರೆ. ಆದರೆ ಶಿವನಿಗೆ ಕಾಶೀ ನಗರದ ಸೆಳೆತ ಹೆಚ್ಚಾಗಿ ಮತ್ತೆ ಕಾಶೀಗೆ ಹೋಗಲು ಮನ ಹಾತೊರೆಯುತ್ತಿರುತ್ತದೆ. ಶಿವನು 64 ಯೋಗಿನಿಯರನ್ನು ಕಳುಹಿಸುತ್ತಾನೆ, ನೀವು ಏನಾದರೂ ಮಾಡಿ ಆತನನ್ನು ಮೋಹಪಾಶಕ್ಕೆ ಸಿಲುಕಿಸಿ ನಾನು ಅಲ್ಲಿಗೆ ಬರಲು ದಿವೋದಾಸನನ್ನು ಒಪ್ಪಿಸಿ ಎಂದು ಆದರೆ ಅವರು ಕಾಶಿಯ ಬೆರಗಿಗೆ ಮನ ಸೋತು ಬಂದ ಕೆಲಸ ಮರೆತು ಕಾಶಿಯಲ್ಲೇ ಇದ್ದು ಬಿಡುತ್ತಾರೆ.
ನಂತರ ಶಿವನು ಸೂರ್ಯ ದೇವನನ್ನು ಕಳುಹಿಸುತ್ತಾನೆ ಏನಾದರೂ ಮಾಡಿ ನಾನು ಕಾಶಿಗೆ ನಾನು ಬರಲು ದಿವೋದಾಸನನ್ನು ಒಪ್ಪಿಸು ಎಂದು, ಆದರೆ ಸೂರ್ಯದೇವನೂ ಸಹ ಕಾಶಿಯತೇಜಸ್ಸಿಗೆ ಬೆರಗಾಗಿ ಮನಸೋತು ತನ್ನ ಹನ್ನೆರಡು ರೂಪಗಳಲ್ಲಿ ಕಾಶಿಯಲ್ಲಿ ನೆಲೆಸಿಬಿಡುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದೂ ಸಹ ಕಾಶಿಯಲ್ಲಿ 12ಸೂರ್ಯನ ದೇಗುಲಗಳಿವೆ. ನಿರಾಶನಾದ ಶಿವನು ದಿವೋದಾಸನ ಮನವೊಲಿಸಲು ಈ ಸಲ ಬ್ರಹ್ಮನನ್ನು ಕಾಶಿಗೆ ಕಳುಹಿಸುತ್ತಾನೆ. ಬ್ರಹ್ಮದೇವನು ಕಾಶಿನಗರದಿಂದ ಎಷ್ಟು ಪ್ರಭಾವಿತನಾದನೆಂದರೆ ದಿವೋದಾಸನ ಸಹಾಯ ಪಡೆದು ಹತ್ತು ಕುದುರೆಗಳಿಂದ ಅಶ್ವಮೇಧ ಯಾಗಗಳನ್ನು ಮಾಡಿ ಶಾಶ್ವತವಾಗಿ ನೆಲೆಸಿಬಿಡುತ್ತಾನೆ. ಈತ ಅಶ್ವಮೇಧ ಯಾಗ ಮಾಡಿದ ಸ್ಥಳವೇ ಇಂದು ದಶಾಶ್ವಮೇಧ ಘಾಟ್ ಎಂದು ಪ್ರಸಿದ್ಧಿ ಪಡೆದಿದೆ. ನಂತರ ಶಿವನು ತನ್ನ ಇಬ್ಬರು ನಂಬಿಕಸ್ಥ ಗಣಗಳನ್ನು ಕಳುಹಿಸುತ್ತಾನೆ ಅವರೋ ಕಾಶಿಯ ಚೆಲುವಿಗೆ, ಪವಿತ್ರತೆಗೆ ಮನಸೋತು ದ್ವಾರಪಾಲಕರಾಗಿ ನಿಂತು ಬಿಡುತ್ತಾರೆ. ನಂತರ ಶಿವನು ಗಣೇಶನನ್ನು ಆತನ ಗಣಗಳೊಂದಿಗೆ ಕಾಶಿಗೆ ಕಳುಹಿಸುತ್ತಾನೆ. ಗಣೇಶನು ಶಿವ ಕಾಶಿಗೆ ಕಳುಹಿದವರೆಲ್ಲಾ ಇಲ್ಲಿಯೇ ನೆಲೆನಿಂತಿದ್ದು ಎಂದಾದರೂ ಹೇಗಾದರೂ ಶಿವ ಬಂದೇ ಬರತ್ತಾನೆ ಎಂದು ಊಹಿಸಿ ತನ್ನ ಗಣಗಳೊಂದಿಗೆ ಕಾಶೀ ನಗರದ ಭದ್ರತೆ ವ್ಯವಸ್ಥೆ ನೋಡಲು ನಿಂತು ಬಿಡುತ್ತಾನೆ.
ಕಡೆಗೆ ಶಿವನು ವಿಷ್ಣುವನ್ನು ದಿವೋದಾಸನ ಬಳಿಗೆ ಕಳುಹಿಸುತ್ತಾನೆ. ವಿಷ್ಣುವು ಕಾಶೀನಗರದ ಗಂಗಾ ಹಾಗೂ ವರುಣಾ ನದಿಗಳ ಸಂಗಮ ಸ್ಥಳದಲ್ಲಿ ಮೊದಲು ಕಾಣಿಸಿಕೊಳ್ಳುತ್ತಾರೆ. ಆ ಸ್ಥಳದಲ್ಲಿ ಇರುವ ಆದಿಕೇಶವ(ಮೂಲ ಕೇಶವ ದೇಗುಲ) ಈ ಘಟನೆಗೆ ಸಾಕ್ಷಿ ಎನ್ನುತ್ತವೆ ಪುರಾಣಗಳು. ವಿಷ್ಣುವು ದಿವೋದಾಸನನ್ನು ಭೇಟಿ ಮಾಡಿ ನೀನು ಶಿವನು ಕಾಶಿಯಲ್ಲಿ ನೆಲೆಸಲು ಅನುಮತಿ ನೀಡಿದರೆ ನಿನಗೆ ಮೋಕ್ಷ ಸಿಗುವಂತೆ ಮಾಡುತ್ತೇನೆ ಎಂದು ಹೇಳುತ್ತಾನೆ ಹಾಗೂ ಕಾಶಿಯಲ್ಲಿ ನೀನು ಒಂದು ಶಿವಲಿಂಗ ಪ್ರತಿಷ್ಟಿಸು ತಕ್ಷಣ ನಿನ್ನನ್ನು ಕೈಲಾಸಕ್ಕೆ ಕರೆದೊಯ್ಯಲು ಪುಷ್ಪಕವಿಮಾನ ಬರುತ್ತದೆ ನೀನು ಸಶರೀರನಾಗಿ ಕೈಲಾಸಕ್ಕೆ ಹೋಗಬಹುದು ಅನ್ನುತ್ತಾನೆ. ಮೋಕ್ಷಕ್ಕೆ ಆಸೆ ಪಟ್ಟು ದಿವೋದಾಸನು ಶಿವನು ಕಾಶಿಗೆ ಬಂದು ನೆಲೆಸಲು ಒಪ್ಪಿ ಶಿವಲಿಂಗ ಪ್ರತಿಷ್ಟಿಸಿ ಸಶರೀರನಾಗಿ ಪುಷ್ಪಕವಿಮಾನದಲ್ಲಿ ಕೈಲಾಸ ಸೇರುತ್ತಾನೆ ಅಂದು ಆತ ಪ್ರತಿಷ್ಟಿಸಿದ ಶಿವಲಿಂಗವು "ದಿವೋದಾಸೇಶ್ವರ ಶಿವ" ಎನ್ನುವ ಹೆಸರಿನಲ್ಲಿ ದಶಾಶ್ವಮೇಧ ಘಾಟ್ ನ ವಿಶ್ವಭುಜ ಗೌರಿ ದೇಗುಲದ ಬಳಿ ಇಂದಿಗೂ ಪೂಜಿಸಲ್ಪಡುತ್ತಿದೆ.
ಇದು ದಂತಕಥೆಯಾದರೆ ದಾಖಲೆಗಳಲ್ಲಿರುವ ವಿಶ್ವನಾಥ ದೇಗುಲದ ಬಗ್ಗೆ ಈಗ ತಿಳಿಯೋಣ.
ಗುಪ್ತರ ಕಾಲದ ಮಧ್ಯಂತರದಲ್ಲಿ 320-550CE
ಯಲ್ಲಿ ಕಾಶೀವಿಶ್ವನಾಥ ದೇಗುಲವನ್ನು ಮೊದಲಿಗೆ ಭವ್ಯವಾಗಿ ನಿರ್ಮಿಸಿದರೆಂದು ಇತಿಹಾಸ, ಚೀನೀ ಯಾತ್ರಿಕ ಹುಯೆನ್ಸ್ ತ್ಯಾಂಗ್ 635ನೇ ಇಸವಿಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಈ ದೇಗುಲದ ವರ್ಣನೆಯನ್ನು ತಮ್ಮ ಪ್ರವಾಸಕಥನದಲ್ಲಿ ಬರೆದಿದ್ದಾರೆ. ಇದರ ನಂತರ ಕಾಶೀ ವಿಶ್ವನಾಥ ದೇಗುಲವು ಹಲವಾರು ಬಾರಿ ದಾಳಿಗೊಳಗಾಗಿ ಮತ್ತೆ ಪುನರ್ ನಿರ್ಮಾಣ ಗೊಂಡಿದೆ.1194ರಲ್ಲಿ ಮಹಮದ್ ಗೋರಿಯ ಆಳ್ವಿಕೆಯಲ್ಲಿ ಈ ದೇಗುಲವನ್ನು ನಾಶ ಮಾಡಲಾಯಿತು.1210-1236 ರ ನಡುವೆ ಮತ್ತೆ ಗುಜರಾತಿ ವ್ಯಾಪಾರಿಯೊಬ್ಬರು ಪುನರ್ ನಿರ್ಮಾಣ ಮಾಡಿದರು.1300ರಲ್ಲಿ ಫಿರೋಜ್ ಷಾ ಹಾಗೂ 1400ರಲ್ಲಿ ಜಾನ್ ಪುರದ ಶಾರ್ಕಿ ರಾಜರು ಮತ್ತೊಮ್ಮೆ ನಾಶಪಡಿಸಿದರು.1584-85 ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರನ ಆಳ್ವಿಕೆಯಲ್ಲಿ ರಾಜಾತೋಡರಮಲ್ ಅವರು ಮೂಲ ಸ್ಥಳದಲ್ಲಿ ವಿಶ್ವನಾಥ ದೇಗುಲವನ್ನು ಮತ್ತೆ ನಿರ್ಮಿಸಿದರು ಆದರೆ ತೋಡರಮಲ್ ಅವರ ಮಗಳು ಇಸ್ಲಾಂ ಆಡಳಿತಗಾರನನ್ನು ಮದುವೆಯಾಗಿದ್ದರಿಂದ ಸಾಂಪ್ರದಾಯಿಕ ಬ್ರಾಹ್ಮಣರು ದೇಗುಲವನ್ನು ಬಹಿಷ್ಕರಿಸಿದರು.
ನಂತರ ಜಹಾಂಗೀರ್ ನ ಆಳ್ವಿಕೆಯಲ್ಲಿ ವೀರಸಿಂಗ್ ದೇವು ಅವರು ತೋಡರಮಲ್ ನಿಲ್ಲಿಸಿದ್ದ ನಿರ್ಮಾಣ ಮರು ಪ್ರಾಂಭಿಸಿ ಪೂರ್ಣಗೊಳಿಸಿ ಪೂಜೆಗಳಿಗೆ ಅನುವು ಮಾಡಿಕೊಟ್ಟರು. 1669ರಲ್ಲಿ ಔರಂಗಜೇಬನು ಮತ್ತೆ ದೇಗುಲವನ್ನು ಧ್ವಂಸ ಮಾಡಿಶಿವಲಿಂಗವನ್ನು ಸಹ ಧ್ವಂಸ ಮಾಡಿ ಅದನ್ನು ಹಾಗೆಯೇ ಬಿಟ್ಟರೆ ಮತ್ತೆ ದೇಗುಲ ನಿರ್ಮಾಣ ಮಾಡುತ್ತಾರೆಂದು ಆ ಸ್ಥಳದಲ್ಲಿ ಮಸೀದಿ ನಿರ್ಮಿಸುತ್ತಾನೆ.
1742 ರಲ್ಲಿ, ಮರಾಠಾ ದೊರೆ ಮಲ್ಹಾರ್ ರಾವ್ ಹೋಳ್ಕರ್ ಮಸೀದಿಯನ್ನು ಕೆಡವಲು ಮತ್ತು ಸ್ಥಳದಲ್ಲಿ ವಿಶ್ವೇಶ್ವರ ದೇವಾಲಯವನ್ನು ಪುನರ್ನಿರ್ಮಿಸಲು ಯೋಜನೆಯನ್ನು ರೂಪಿಸಿದರು. ಆದಾಗ್ಯೂ, ಅವರ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ, ಭಾಗಶಃ ಅವಧ್ ನ ನವಾಬನ ಮಧ್ಯಸ್ಥಿಕೆಯಿಂದಾಗಿ , ಅವರಿಗೆ ಪ್ರದೇಶದ ನಿಯಂತ್ರಣವನ್ನು ನೀಡಲಾಯಿತು. 1750 ರ ಸುಮಾರಿಗೆ, ಜೈಪುರದ ಮಹಾರಾಜರು ಕಾಶಿ ವಿಶ್ವನಾಥ ದೇವಾಲಯವನ್ನು ಪುನರ್ನಿರ್ಮಿಸಲು ಭೂಮಿಯನ್ನು ಖರೀದಿಸುವ ಉದ್ದೇಶದಿಂದ ಸೈಟ್ ಸುತ್ತಲಿನ ಭೂಮಿಯ ಸಮೀಕ್ಷೆಯನ್ನು ನಿಯೋಜಿಸಿದರು. ಆದರೂ, ದೇವಾಲಯವನ್ನು ಪುನರ್ನಿರ್ಮಾಣ ಮಾಡುವ ಅವರ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ. ಮಲ್ಹಾರ್ ರಾವ್ ಅವರ ಸೊಸೆ
1777ರಲ್ಲಿ ಇಂದೋರ್ ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಮಸೀದಿಯ ಪಕ್ಕದಲ್ಲಿ ಕಾಶೀ ವಿಶ್ವನಾಥ ದೇಗುಲವನ್ನು ಹೊಸದಾಗಿ ನಿರ್ಮಿಸುತ್ತಾಳೆ.ಶಿವಲಿಂಗವನ್ನು ಬೆಳ್ಳಿಯ ತೊಟ್ಟಿಯಾಕಾರದ ರಚನೆಯಲ್ಲಿ ಪ್ರತಿಷ್ಟಿಸಲಾಯಿತು.1835ರಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರ ಧರ್ಮ ಪತ್ನಿಯ ಇಚ್ಚೆಯ ವಿಶ್ವನಾಥ ದೇಗುಲದ ಗೋಪುರಕ್ಕೆ ಚಿನ್ನದ ತಗಡುಗಳನ್ನು ತೊಡಿಸಲು 1ಟನ್ ಚಿನ್ನವನ್ನು ಕೊಡುತ್ತಾನೆ. 1841ರಲ್ಲಿ ನಾಗಪುರದ ರಘುಜಿ ಭೋಂಸ್ಲೆ ದೇಗುಲಕ್ಕೆ ಕೆಜಿಗಟ್ಟಲೆ ಬೆಳ್ಳಿಯನ್ನು ಕೊಟ್ಟರು. 1860ರಲ್ಲಿ ನೇಪಾಳದ ರಾಜ ಏಳು ಅಡಿ ಎತ್ತರದ ಕಲ್ಲಿನ ನಂದಿಯ ವಿಗ್ರಹ ಕೆತ್ತಿಸಿದರು. ಕೆಲವು ವರ್ಷಗಳು ಇಲ್ಲಿ ವಂಶಪಾರಂಪರ್ಯದಿಂದ ಪೂಜೆಗಳು ನಡೆಯುತ್ತಿದ್ದವು. 1983ರಲ್ಲಿ ಈ ಕಾಶೀ ವಿಶ್ವನಾಥ ದೇಗುಲವನ್ನು ಉತ್ತರ ಪ್ರದೇಶ ಸರ್ಕಾರ ತನ್ನ ಸುಪರ್ದಿಗೆ ತೆಗೆದು ಕೊಂಡಿತು ನಂತರ 2017ರಲ್ಲಿ ಹೊಸ ವಿಶ್ವನಾಥ ಕಾರಿಡಾರ್ ಯೋಜನೆ ಜಾರಿಗೆ ಬಂದು ಜನ ಸಂದಣಿ ತಪ್ಪಿಸಲು ವಿಶ್ವನಾಥ ದೇಗುಲದ ಸುತ್ತಲೂ ಇದ್ದ ಅಂಗಡಿಗಳನ್ನು ತೆರವುಗೊಳಿಸಿ ವಿಶಾಲ ಪ್ರಾಂಗಣ ನಿರ್ಮಿಸಲಾಗಿದೆ. ಜ್ಞಾನವಾಪಿಬಾವಿ ಹಾಗೂ ನಂದಿ ವಿಗ್ರಹವನ್ನು ದೇವಾಲಯದ ಆವರಣದೊಳಗೆ ತೆಗೆದುಕೊಳ್ಳಲಾಗಿದೆ. ನಾವು ಭೇಟಿನೀಡಿದಾಗ ನವ ನಿರ್ಮಾಣಗೊಂಡ ದೇಗುಲ ಕಂಡು, ಕಾಶೀವಿಶ್ವನಾಥನ ದರ್ಶನ ಪಡೆದು ಮನ ಪುಳಕಿತಗೊಂಡು ಭಕ್ತಿಭಾವದಲ್ಲಿ ಮಿಂದೆದ್ದೆವು ಎರಡನೇ ಕಾರಿಡಾರ್ ಯೋಜನೆ ಪ್ರಗತಿಯಲ್ಲಿದ್ದು ಮಣಿಕರ್ಣಿಕಾ ಘಾಟ್ ನಿಂದ ವಿಶ್ವನಾಥ ಮಂದಿರಕ್ಕೆ ಸೀದಾ ಹೋಗುವ ದಾರಿ ನಿರ್ಮಾಣ ವಾಗಿದೆ.
***
#ವಿಭೀಷಣ ದೇವಸ್ಥಾನ, ಧನುಷ್ಕೋಡಿ ರಾಮೇಶ್ವರಂ, ತಮಿಳುನಾಡು, ಭಾರತ🇮🇳🇮🇳
#ತಮಿಳುನಾಡಿನ ರಾಮೇಶ್ವರಂನಲ್ಲಿರುವ ಕೋದಂಡರಾಮಸ್ವಾಮಿ ದೇವಾಲಯವು ಭಗವಾನ್ ರಾಮನಿಗೆ ಸಮರ್ಪಿತವಾದ ದೇವಾಲಯವಾಗಿದೆ. ರಾಮೇಶ್ವರಂನಿಂದ 13 ಕಿಲೋಮೀಟರ್ ದೂರದಲ್ಲಿದೆ. 1964 ರ ಚಂಡಮಾರುತವು ಧನುಷ್ಕೋಡಿಯನ್ನು ಕೊಚ್ಚಿಕೊಂಡು ಹೋದ ನಂತರ ಉಳಿದುಕೊಂಡಿರುವ ಏಕೈಕ ಐತಿಹಾಸಿಕ ರಚನೆಯಾಗಿದೆ.
ಈ ದೇವಾಲಯದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ ಮತ್ತು ವಿಭೀಷಣ ದೇವತೆಗಳಿವೆ. ದೇವಾಲಯವು ಸಮುದ್ರದಿಂದ ಆವೃತವಾಗಿದೆ ಮತ್ತು ಪ್ರವಾಸಿ ಆಕರ್ಷಣೆಯಾಗಿ ಉಳಿದಿದೆ.
***
Vadirajaru Kanchi
Sandal wood idol
***
Tara Tarini Shaktipeeth Temple in Ganjam District Odisha
The mesmerizing Tara Tarini Shaktipeeth Temple in Odisha
Tara-Tarini at Kumari hills on the bank of River Rushikulya near Purushottampur in Ganjam District is one of the most ancient Shakti pithas of Odisha.
***
Harishchandragad Fort Maharashtra
The mysterious Kedareshwar cave Temple at Harishchandragad Fort, Maharashtra, where the 4 pillars symbolise the Yugas.
As per legend it's believed that when the last pillar falls it'll be the end of Kaliyug.
****
Mana Village, 3 kms from Badarinath Vyasa Muni's Place
****
Brihadeeswara Temple Tanjavoor
ಇದು ಆಶ್ಚರ್ಯಕ್ಕಿಂತ ಕಡಿಮೆಯೇ...?
80 ಟನ್ ಕೆತ್ತಿದ ಗ್ರಾನೈಟ್, 216 ಅಡಿ ಎತ್ತರಕ್ಕೆ ಮತ್ತು ಸುಮಾರು 0 ಡಿಗ್ರಿಗಳ ಇಳಿಜಾರಿನವರೆಗೆ ಯಂತ್ರರಹಿತ.
ಈ ದೇವಾಲಯವು 130000 ಟನ್ ತೂಕವನ್ನು ಹೊಂದಿದೆ ಮತ್ತು 6 ದೊಡ್ಡ ಭೂಕಂಪಗಳಿಂದ ರಕ್ಷಿಸಲ್ಪಟ್ಟಿದೆ ಅಂತೆ ಮತ್ತು ನಾವು ಏನು ನಿರ್ಮಿಸಿದ್ದೇವೆ ಎಂದು ಕೆಲವರು ಕೇಳುತ್ತಾರೆ.
ಇದು ಸನಾತನ ಧರ್ಮದ ಅದ್ಭುತ ಆವಿಷ್ಕಾರ
ನಾವ್ಯಾಕೆ ನಮ್ಮ ಸನಾತನ ಧರ್ಮದ ಮೇಲೆ ಹೆಮ್ಮೆ ಪಡಬಾರದು...
***
ಶ್ರೀಮುಖ್ಯಪ್ರಾಣದೇವರು, ಹುಳೇಬೀಡುಗ್ರಾಮ (near bellary)
ಶ್ರೀಪುರಂದರದಾಸವರ್ಯರಿಂದ ಸುಪ್ರತಿಷ್ಟಿತ ಶ್ರೀಮುಖ್ಯಪ್ರಾಣದೇವರು, ಹುಳೇಬೀಡುಗ್ರಾಮ
ಶೀಮದ್ವ್ಯಾಸತೀರ್ಥಗುರುವರ್ಯರು
ಶ್ರೀಮುಖ್ಯಪ್ರಾಣದೇವರ ಅನೇಕ ಮೂರ್ತಿಗಳನ್ನು ದೇಶದ ಅನೇಕ ಸ್ಥಳಗಳಲ್ಲಿ ಪ್ರತಿಷ್ಟಾಪನೆ ಗೈದವರು. ಆ ಕ್ರಮದಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ಸಮೀಪದ ಹುಳೇಬೀಡು ಗ್ರಾಮದ ಹತ್ತಿರ ಶ್ರೀ ಹನುಮನ ಪ್ರತಿಷ್ಟಾಪನೆಗೆ ಶ್ರೀ ವ್ಯಾಸರಾಯರು ಸಿದ್ಧತೆಯಲ್ಲಿರಲು, ಸಮ್ಮುಖದಲ್ಲಿದ್ದ ಶ್ರೀಪುರಂದರದಾಸರು, ಶ್ರೀ ಗುರುವರ್ಯರು ಅನೇಕ ಮಾರುತಿ ಮೂರ್ತಿಗಳು ಪ್ರತಿಷ್ಟಾಪನೆ ಗೈಯುತ್ತಿದ್ದಾರೆ. ನನಗೂ ಅಂತಹ ಭಾಗ್ಯ ಯಾವಾಗ ಒದಗುವುದೋ ಎಂದು ಮನದಲ್ಲಿ ಅಂದುಕೊಂಡರಂತೆ. ಶ್ರೀ ವ್ಯಾಸರಾಯರು ಶಿಷ್ಯನ ಮನೋಭಾವ ಅರಿತವರಾಗಿ, ಪುರಂದರದಾಸರೇ, ಇಂದಿನ ಹನುಮನ ಪ್ರತಿಷ್ಟೆಯು ನಿಮ್ಮಿಂದಾಗಲಿ ಎಂದು ಅವರ ಕೈಯಿಂದ ಪ್ರತಿಷ್ಟಾಪನೆ ಮಾಡಿಸಿದ್ದಾರೆ. ಹಾಗಾಗಿ, ನಾರದಾಂಶರಾದ ಶ್ರೀ ಪುರಂದರಾರ್ಯರ ಅಮೃತಹಸ್ತದಿಂದ ಪ್ರತಿಷ್ಟಾಪನೆಗೊಂಡ ಏಕೈಕ ಹನುಮನಮೂರ್ತಿಯಾಗಿದೆ. ಆಲಯ ಗೋಪುರ ಅದ್ಭುತವಾದ ಶಿಲಾಕೆತ್ತನೆಗಳಿಂದ ಕೂಡಿರುವುದು ವಿಶೇಷವಾಗಿದೆ.
***
Jambukeswarar temple in Tiruchirapalli, Tamil Nadu.
#Our_Temple_our_pride
The World isn’t aware that our Temples are far more wonderful than the so called 7 World Wonders even when its clearly visible that they are 100 times far better.
The #Jambukeswarar temple in Tiruchirapalli, Tamil Nadu.
The Temple was built by Emperor Kocengannan Chola 1,800+ years ago
One of the 5 major Shiva Temples (signifying the 5 natural elements- Earth, Water, Fire, Air & Space ). This Temple represents the element of water.
***
ತಿರುಪತಿ ವೆಂಕಟರಮಣನಿಗಿಂತ ಎತ್ತರದ ವೆಂಕಟರಮಣ ? ಮಹಾರಾಷ್ಟ್ರದ ಪೈಗಂಗಾ ನದಿಯ ದಡದಲ್ಲಿ ಮೆಹೇಕರ್ ಗ್ರಾಮ
ನಾವೆಲ್ಲಾ ಆಳೆತ್ತರದ ತಿರುಪತಿಯ ಬಾಲಾಜಿಯನ್ನು ನೋಡಿದ್ದೇವೆ ಈ ವಿಗ್ರಹದ ಎತ್ತರ 9.9 ಆದರೆ ಮಹಾರಾಷ್ಟ್ರದ ಪೈಗಂಗಾ ನದಿಯ ದಡದಲ್ಲಿ ಮೆಹೇಕರ್ ಎಂಬ ಗ್ರಾಮದಲ್ಲಿ 11 ಅಡಿಯಷ್ಟು ಎತ್ತರದ ಬಾಲಾಜಿ ವಿಗ್ರಹವಿದೆ. ಎತ್ತರವಷ್ಟೇ ಅಲ್ಲ ತುಂಬಾ ವಿಶಿಷ್ಟ ಕೆತ್ತನೆಗಳನ್ನು ಒಳಗೊಂಡಿದೆ. ಈ ಒಂದೇ ವಿಗ್ರಹದಲ್ಲಿ 19 ಮೂರ್ತಿಗಳನ್ನು ನೋಡಬಹುದು, ಮುಖ್ಯವಾಗಿ
ಮಧ್ಯದಲ್ಲಿ ವೆಂಕಟರಮಣಸ್ವಾಮಿ ಸ್ವಾಮಿಯ ಪಾದದ ಬಳಿ ಪತ್ನಿಯರಾದ ಭೂದೇವಿ ಹಾಗೂ ಲಕ್ಷೀ ಯರ ವಿಗ್ರಹಗಳು ಹಾಗೂ ಜಯ ವಿಜಯರ ವಿಗ್ರಹಗಳು ಹಾಗೂ ಪ್ರಭಾವಳಿಯಲ್ಲಿ ದಶಾವತಾರಗಳೂ ಹಾಗೂ ಬ್ರಹ್ಮ, ಶಿವನ ವಿಗ್ರಹಗಳು ಹಾಗೂ ವೆಂಕಟರಮಣಸ್ವಾಮಿಯ ಕಿರೀಟವನ್ನೂ ಕಲ್ಲಿನಲ್ಲಿ ಕೆತ್ತಲಾಗಿದ್ದು ಆ ಕಿರೀಟದಲ್ಲಿ ಸಹ ಸಾರಂಗಧರ ವಿಷ್ಣುವನ್ನು ಕೆತ್ತಲಾಗಿದೆ. ಹಾಗೂ ಕಿರೀಟದ ಮೇಲಿನ ಪ್ರಭಾವಳಿಯಲ್ಲಿ ಸಹ ಒಂದು ವಿಷ್ಣು ವಿಗ್ರಹ ಕೆತ್ತಲಾಗಿದೆ.
ಅಲ್ಲಿಗೆ ಈ ವಿಗ್ರಹದಲ್ಲಿ ಒಟ್ಟು 19 ಮೂರ್ತಿಗಳನ್ನು ಈ ವಿಗ್ರಹ ನಯನ ಮನೋಹರ ಹಾಗೂ ಈ ಬಾಲಾಜಿಯ ಮಂದಸ್ಮಿತವದನ ನಮಗೆ ಬೇರೆಲ್ಲೂ ಕಾಣಸಿಗುವುದಿಲ್ಲ. ಹಾಗೂ ಈ ಬಾಲಾಜಿ ಬಲಗೈ ಯಲ್ಲಿ ಕಮಲ ಹಾಗೂ ಗದೆ
ಎಡಗೈಯಲ್ಲಿ ಚಕ್ರ ಹಾಗೂ ಶಂಖ ಹಿಡಿದಿದ್ದಾನೆ.
ಈ ಸುಂದರ ಬಾಲಾಜಿ ವಿಗ್ರಹದ ಹಿಂದೆ ಒಂದು ಐತಿಹ್ಯ ಇದೆ, ರೋಚಕ ಹಾಗೂ ತ್ಯಾಗದ ಕಥೆಯಿದೆ.
ಬಹಳ ಹಿಂದೆ ಮೇಘಂಕರ ಎಂಬ ರಾಕ್ಷಸ ಈ ಪ್ರಾಂತ್ಯದ ಜನರಿಗೆ ತೊಂದರೆ ಕೊಡುತ್ತಿದ್ದನಂತೆ ವಿಷಯ ತಿಳಿದ ವಿಷ್ಣುವು ಸಾರಂಗಧರ ಎಂಬ ಬಿಲ್ಲಿನಿಂದ ಆತನನ್ನು ಸಂಹರಿಸಿದನಂತೆ ಕಡೆಗಳಿಗೆಯಲ್ಲಿ ಮೇಘಂಕರನು ವಿಷ್ಣುವನ್ನು ಹೀಗೆ ವಿನಂತಿಸಿಕೊಳ್ಳುತ್ತಾನೆ. ನಿಮ್ಮ ಕೈಯಲ್ಲಿ ಮರಣ ಹೊಂದುತ್ತಿರವುದು ನನಗೆ ಸಂತೋಷ ತಂದಿದೆ. ಆದರೆ ಈ ಸ್ಥಳ ನನ್ನ ಹೆಸರಿನಿಂದ ಕರೆಯಲ್ಪಡಲಿ ಹಾಗೂ ನೀನು ಸಾರಂಗಧರದಿಂದ ನನ್ನನ್ನು ಸಂಹರಿಸಿದ್ದಕ್ಕಾಗಿ ನೀನು ಸಾರಂಗಧರನಾಗಿ ಇಲ್ಲಿಯೇ ನೆಲೆಸು.
ಆ ಪ್ರಕಾರ ಈ ಸ್ಥಳವನ್ನು ಮೇಘಂಕರ ಎಂದು ಕರೆಯುತ್ತಿದ್ದು ಈಗ ಜನರ ಬಾಯಲ್ಲಿ ಮೆಹೇಕರ್ ಆಗಿ ಬಿಟ್ಟಿದೆ. ಆತನ ಕೋರಿಕೆಯಂತೆ ವಿಷ್ಣುವು ಸಾರಂಗಧರನಾಗಿ ಇಲ್ಲಿ ನೆಲೆಸಿ ಪೂಜೆಗಳನ್ನು ಕೈಗೊಳ್ಳತ್ತಿದ್ದ. ಇಂದಿಗೂ ನಾವು ಈ ಮೂರ್ತಿಯ ಕಿರೀಟದಲ್ಲಿ ಸಾರಂಗಧರನಾದ ವಿಷ್ಣುವಿನ ಕೆತ್ತನೆ ನೋಡಬಹುದು.
ಹೀಗಿರುವಾಗ ಒಮ್ಮೆ 1295ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ದೇವಗಿರಿಯಿಂದ ಆಳುತ್ತಿದ್ದ ಕಾಲ ಆತನ ದೇವಗಿರಿಯಿಂದ ಹೊರಟು ಸಿಕ್ಕ ಸಿಕ್ಕ ಊರುಗಳಲ್ಲಿ ದೇಗುಲಗಳನ್ನು ನಾಶ ಮಾಡುತ್ತಾ ಬರುತ್ತಿದ್ದನಂತೆ ಈ ವಿಷಯ ತಿಳಿದ ಮೆಹೇಕರ್ ಗ್ರಾಮಸ್ಥರು ಈ ಸುಂದರ ಬಾಲಾಜಿ ವಿಗ್ರಹವನ್ನು ಆತನಿಗೆ ಸಿಗದಂತೆ ಬಚ್ಚಿಡುತ್ತಾರೆ. ಕಾಲಾಂತರದಲ್ಲಿ ಈ ವಿಷಯ ಎಲ್ಲರ ಗಮನದಿಂದ ಮರೆಯಾಗಿಬಿಟ್ಟಿರುತ್ತದೆ. ಆದರೆ 1888 ರಲ್ಲಿ ಆ ಗ್ರಾಮದ ರೈತರೊಬ್ಬರು ಹೊಲ ಹಸನು ಮಾಡುವಾಗ ಅವರಿಗೆ ಒಂದು 20 ಅಡಿಯ ಲೋಹದ ಪೆಟ್ಟಿಗೆ ಸಿಗುತ್ತದೆ. ಕುತೂಹಲದಿಂದ ಅದನ್ನು ತೆರೆದ ಗ್ರಾಮಸ್ಥರಿಗೆ ಚಂದನದಲ್ಲಿ ಹುದುಗಿಸಿಟ್ಟ ಸುಂದರ ಕರಿಕಲ್ಲಿನ ಬಾಲಾಜಿ ವಿಗ್ರಹ ಕಾಣುತ್ತದೆ. ಜೊತೆಗೆ ಎರಡು ತಾಮ್ರದ ಹಾಳೆಗಳು ಸಿಗುತ್ತದೆ. ಹಾಗೂ ಆಭರಣಗಳು ಸಹ ಇರುತ್ತವೆ. ಆ ತಾಮ್ರದ ಹಾಳೆಗಳಿಂದ ಈ ವಿಗ್ರಹದ ವೃತ್ತಾಂತ ಗ್ರಾಮಸ್ಥರಿಗೆ ತಿಳಿಯುತ್ತದೆ. ಈ ಸುಂದರ ವಿಗ್ರಹ ನೋಡಲು ಜನ ಸಾಗರೋಪಾದಿಯಲ್ಲಿ ಮೆಹೇಕರ್ ಗೆ ಬರುತ್ತಾರೆ. ಆಗ ಆಂಗ್ಲರ ಆಳ್ವಿಕೆ ಇದ್ದುದರಿಂದ ಅವರೂ ಓಡೋಡಿ ಬಂದು ಎಲ್ಲವನ್ನೂ ವಶಕ್ಕೆ ತೆಗೆದು ಕೊಂಡು ಅವರ ದೇಶಕ್ಕೆ ಕಳುಹಿಸಲು ಪ್ರಯತ್ನಿಸುತ್ತಾರೆ. ಇದನ್ನರಿತ ಗ್ರಾಮಸ್ಥರು ರಾತ್ರೋ ರಾತ್ರಿ ಬಾಲಾಜಿ ವಿಗ್ರಹವನ್ನು ಪ್ರತಿಷ್ಠೆ ಮಾಡಿಬಿಡುತ್ತಾರೆ. ಇದರಿಂದಾಗಿ ಕೋಪಗೊಂಡ ಬ್ರಿಟಿಷರು ಆ ಊರಿನ 60 ಜನರನ್ನು ಬಂಧಿಸಿ ಕೊಡಬಾರದ ಹಿಂಸೆ ಕೊಡುತ್ತಾರೆ ಅದರಲ್ಲಿ ಕೆಲ ರು ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ.
ನಂತರ 1913ರಲ್ಲಿ ಪ್ರಹ್ಲಾದ ಮಹರಾಜ್ ಅನ್ನುವವರು ಸಾಂಗವಾಗಿ ಈ ಮೂರ್ತಿಗೆ ಫುನರ್ ಪ್ರಾಣ ಪ್ರತಿಷ್ಠೆ ಮಾಡಿ ಈ ದೇಗುಲ ನಿರ್ಮಾಣಕ್ಕೆ ಕಾರಣವಾಗುತ್ತಾರೆ. ಸಂಪೂರ್ಣವಾಗಿ ದೇವದಾರು ಮರದಿಂದ ಕಟ್ಟಲ್ಪಟ್ಟಿರುವ ಈ ದೇಗುಲ ಸುವಿಶಾಲವಾಗಿದೆ
ಸುಂದರವಾಗಿದೆ ಹೊರ ಆವರಣದಲ್ಲಿ ಶಿಲ್ಪಕಲೆಯನ್ನೂ ಕಾಣಬಹುದು.
ಈ ಮೂರ್ತಿಯಲ್ಲಿ ಬ್ರಹ್ಮ, ವಿಷ್ಣು, ಶಿವ ಮೂರೂ ಮೂರ್ತಿಗಳೂ ಇರುವುದರಿಂದ ಈ ಮೂರ್ತಿಯನ್ನು ತ್ರಿವಿಕ್ರಮ ಬಾಲಾಜಿ ಎಂದೂ ಕರೆಯುತ್ತಾರೆ.
****
Neelkant Mahadev Temple, Mandav, MP
Nature's wonder at Neelkant Mahadev Temple, Mandav, Madhya Pradesh
ಪ್ರಕೃತಿ ವಿಸ್ಮಯ ಸ್ಥಳ---- ನೀಲಕಂಠ ಮಹದೇವ್ ಮಂದಿರ, ಮಾಂಡವ್, ಮಧ್ಯಪ್ರದೇಶ್
******
ನಾಚಿಯಾರ್ ಕೋಯಿಲ್ ಕ್ಷೇತ್ರದ ವಿಶೇಷ
ಶ್ರೀ ಸತ್ಯಾಭಿನವ ತೀರ್ಥರು ತಾವು ವೃಂದಾವನಸ್ತ ರಾಗಲು ಆಯ್ಕೆ ಮಾಡಿ ಕೊಂಡ ಸ್ಥಳ ನಾಚಿಯಾರ್ ಕೋಯಿಲ್ ಎಂಬ ಗ್ರಾಮ. ಕುಂಭಕೋಣದಿಂದ ಸುಮಾರು ಹತ್ತು ಕಿಲೋಮೀಟರ್ ದೂರವಿರುವ ಸ್ಥಳ. ನಾಚಿಯಾರ್ ಎಂದರೆ ಪದ್ಮಾವತಿ. ಕ್ಷೇತ್ರ ಇತಿಹಾಸ ವಿರುವಹಾಗೆ ಇಲ್ಲಿ ಶ್ರೀನಿವಾಸ ಮತ್ತು ಪದ್ಮಾವತಿ ಮದುವೆಯಾಗಿ ಈ ಸ್ಥಳಕ್ಕೆ ಬಂದರು ಅಲ್ಲಿ ಸ್ವಲ್ಪ ಕಾಲವಿದ್ದು ಅಲ್ಲಿ ಪುನಃ ಮತ್ತೊಮ್ಮೆ ತಾವು ಮದುವೆಯಾದ ರೀತಿಯನ್ನು ನೆನೆದು ಪುನಃ ಮದುವೆಯಾದರು, ಆಗ ಕೃಷ್ಣ ಬಲರಾಮರು ಅಲ್ಲಿ ಬಂದಿದ್ದರು ಮತ್ತು ಸಕಲ ಋಷಿಗಳು ಇದ್ದರು ಎಂಬುದರ ಕುರುಹಾಗಿ ಇಂದಿಗೂ ದೇವಾಲಯದ ಒಳಗಡೆ ಶ್ರೀನಿವಾಸ ಪದ್ಮಾವತಿ ಕೃಷ್ಣ ಬಲರಾಮ ಹಾಗು ವಸಿಷ್ಠ ಋಷಿಗಳ ವಿಗ್ರಹ ಕಾಣಬಹುದು. ಅಲ್ಲಿನ ಒಂದು ವಿಶೇಷ ವೆಂದರೆ ದೇವರ ನೈವೇದ್ಯದ ವಸ್ತುಗಳಿಗೆ ಯಾವುದಕ್ಕೂ ಉಪ್ಪು ಹಾಕುವುದಿಲ್ಲ, ಆದರೆ ನೈವೇದ್ಯದ ನಂತರ ಆ ಆಹಾರ ಉಪ್ಪಾಗಿರುತ್ತದೆ. ಅದಕ್ಕಾಗಿಯೂ ಸ್ಥಳೀಯರು "ಉಪ್ಪಳಿಯಪ್ಪನ್" ಎಂದು ಕರೆಯುತ್ತಾರೆ. ನಾಚಿಯಾರ್ ಗುಡಿ ಅಥವಾ ನಾಚಿಯಾರ್ ಕೋಯಿಲ್ ತುಂಬಾ ವಿಶೇಷತೆ ಯಿಂದ ಕೂಡಿದೆ.
ನಾಚಿಯಾರ್ ಕೋಯಿಲ್
ಗರುಡ ದೇವರ ವಿಶೇಷ
ಈ ದೇವಾಲಯದಲ್ಲಿ ಒಂದು ವಿಸ್ಮಯಕರ ಗರುಡ ದೇವರ ವಿಗ್ರಹವಿದೇ ಸಾಮಾನ್ಯವಾಗಿ ಬೇರೆ ದೇವಾಲಯಗಳಲ್ಲಿ ಹಿತ್ತಾಳೆ ಅಥವಾ ಪಂಚಲೋಹದ ಗರುಡ ವಿಗ್ರಹವಿದ್ದರೆ ಇಲ್ಲಿ ಕಲ್ಲಿನ ಗರುಡ ಮೂರ್ತಿ. ಗರುಡೋತ್ಸವ ಸಂದರ್ಭದಲ್ಲಿ ಈ ಕಲ್ಲಿನ ಗರುಡನನ್ನೇ ಗರ್ಭಗುಡಿಯಿಂದ ತರುತ್ತಾರೆ. ಗರ್ಭಗುಡಿಯಿಂದ ಆಚೆ ತರುವಾಗ ಸುಮಾರು 4 ಜನ ಹಿಡಿಯುತ್ತಾರೆ. ಅಲ್ಲಿಂದ ಪ್ರಥಮ ಪ್ರಾಕಾರಕ್ಕೆ 16 ಜನ ಹಿಡಿಯುತ್ತಾರೆ. ಅಲ್ಲಿಂದ ದ್ವೀತಿಯ ಪ್ರಾಕಾರಕ್ಕೆ 32 ಜನ ಹಿಡಿಯುತ್ತಾರೆ ಹಾಗೆ ದೇವಾಲಯದ ಹೊರಗಡೆ ಬರುವಾಗ ಸುಮಾರು 108 ಜನ ಆ ವಿಗ್ರಹವನ್ನು ಎತ್ತುತ್ತಾರೆ. ಪುನಃ ಉತ್ಸವ ಮುಗಿಸಿ ವಾಪಾಸ್ ಗರ್ಭಗುಡಿಯ ಒಳಗಡೆ ಹೋಗಬೇಕಾದರೆ 108 ಜನರಿಂದ ಭಾರ ಕಡಿಮೆಯಾಗಿ 32 ಜನ ಅಲ್ಲಿಂದ ಪುನಃ 16 ಜನ ಹೀಗೆ ಗರ್ಭ ಗುಡಿಯ ಒಳಗಡೆ ಹೋಗಬೇಕಾದರೆ ಕೇವಲ 4 ಜನ ಎತ್ತುವಷ್ಟು ಭಾರ ಕಡಿಮೆಯಾಗುತ್ತದೆ. ಈ ವಿಸ್ಮಯ ಪ್ರತಿವರ್ಷ ನಡೆಯುತ್ತದೆ. ಸಾಧ್ಯವಾದರೆ ಒಮ್ಮೆ ದೇವರ ದರ್ಶನ ಮತ್ತು ಗುರುಗಳ ದರ್ಶನ ಮಾಡಬಹುದು. ಹೀಗೆ ದೇವಸ್ಥಾನದ ಎದುರಿನಲ್ಲೇ ಶ್ರೀ ಸತ್ಯಾಭಿನವ ತೀರ್ಥರ ಬೃಂದಾವನ ಸನ್ನಿದಿ ಇದೆ. ಶ್ರೀ ಸತ್ಯಾಭಿನವ ತೀರ್ಥರು ಜೇಷ್ಠ ಶುಕ್ಲ ಚತುರ್ದಶಿಯಂದು ನಾಚಿಯಾರ್ ಕೋಯಿಲ್ನಲ್ಲಿ ಲೌಕಿಕ ಕಾಯವನ್ನು ತ್ಯಜಿಸಿ ಶ್ರೀಹರಿಯ ಪಾದಾರವಿಂದಗಳಲ್ಲಿ ಸೇರಿದರು.
ಗುರುಭಕ್ತಿಯಿಂದ ಗುರುಸ್ಮರಣೆಯಿಂದ ನಮಗೆ ಬಂದಂತಹ ಅನೇಕ ಭವಗಳನ್ನು ಪರಿಹಾರ ಮಾಡಿಕೊಟ್ಟವರು ಶ್ರೀ ಸತ್ಯಾಭಿನವ ತೀರ್ಥರು. ಸಾದ್ಯವಾದರೆ ಒಮ್ಮೆ ಅವರ ದರ್ಶನ ಮಾಡೋಣ.
ಗರುಡ ಸೇವೆಯ ವಿಸ್ಮಯದ ದ್ರೃಶ್ಯವನ್ನು Video ಮೂಲಕ ವಿಕ್ಷಣೆ ಮಾಡಬಹುದು in youtube.
***
ಶ್ರೀನರಸಿಂಹ ಸರಸ್ವತೀ ಮಹಾರಾಜರ ಜಾಗೃತಸ್ಥಳ - ನರಸೋಬಾ ವಾಡಿ
ಮೀರಜ-ಕೊಲ್ಲಾಪುರ ಮಾರ್ಗದಲ್ಲಿ ಕೃಷ್ಣಾ-ಪಂಚಗಂಗಾ ಸಂಗಮದಲ್ಲಿ ಈ ಕ್ಷೇತ್ರವಿದೆ. ವಾಡಿಯು ಹೆಸರಿನಂತೆಯೇ ಇದೊಂದು ಹಳ್ಳಿಯಾಗಿದೆ. ಎಲ್ಲ ನಿವಾಸಗಳು ಕಷ್ಣಾ ದಂಡೆಯಲ್ಲಿ ಏಕತ್ರಿತವಾಗಿದೆ. ಕೃಷ್ಣಾ ಘಟ್ಟದಲ್ಲಿಯೇ 'ದತ್ತ ಪಾದುಕಾ' ಮಂದಿರವಿದೆ. ವಾಡಿಯ ಕೃಷ್ಣಾ ದಂಡೆಯು ವಿಶಾಲವಾಗಿದೆ.
ಶ್ರೀ ನೃಸಿಂಹ ಸರಸ್ವತೀಯವರು ಔದುಂಬರದ ಚಾತುರ್ಮಾಸವನ್ನು ಮುಗಿಸಿ ಇಲ್ಲಿಗೆ ಬಂದರು ಮತ್ತು ಹನ್ನೆರಡು ವರ್ಷಗಳ ಕಾಲ ಇಲ್ಲಿದ್ದು ಅನೇಕ ಮಂದಿ ಭಕ್ತರ, ದೀನ-ದಲಿತರ ಜೀವನದಲ್ಲಿ ಸುಖದ ತೋಟಗಳನ್ನು ಅರಳಿಸಿ, ಅನೇಕರ ಸಂಕಟಗಳನ್ನು ದೂರಗೊಳಿಸಿ ನಂತರ ಗಾಣಗಾಪುರದಲ್ಲಿ ಹೋದರು. ಶ್ರೀ ಗುರುಗಳ ಚರಣಸ್ಪರ್ಶದಿಂದ ಪವಿತ್ರವಾದ ದಂಡೆಯ ಭೂಮಿಯನ್ನು ಸ್ಪರ್ಶಿಸುವ ಇಚ್ಛೆಯಿಂದ ಪಾದುಕೆಗಳ ಎದುರಿಂದ ಕೃಷ್ಣಾ ಹರಿಯುತ್ತಾಳೆ ಮತ್ತು ಸಮೀಪದಿಂದಲೇ ಬಲಬದಿಯಿಂದ ಪಂಚಗಂಗಾ ಹರಿದು ಬರುತ್ತಾಳೆ. ದತ್ತ ದರ್ಶನದ ಆನಂದವನ್ನು ಪಂಚಗಂಗೆಯೊಂದಿಗೆ ಹಂಚಿಕೊಳ್ಳಲು ಕೃಷ್ಣಾ, ದತ್ತ ಮಂದಿರದಿಂದ ಅನತಿದೂರದಲ್ಲಿ ಪಂಚಗಂಗೆಯಲ್ಲಿ ವಿಲೀನವಾಗುತ್ತಾಳೆ.
ಕೃಷ್ಣಾ ನದಿಯ ಆಚೆಯದಂಡೆಯಲ್ಲಿ ಔರವಾಡ ಮತ್ತು ಗೌರವಾಡ ಈ ಹೆಸರಿನ ಎರಡು ಗ್ರಾಮಗಳಿವೆ. ಇದರ ಪೈಕಿ ಔರವಾಡವೆಂದರೆ ಗುರುಚರಿತ್ರೆಯಲ್ಲಿನ ಅಮರಾಪುರ. ಈ ಅಮರಾಪುರದಲ್ಲಿ ಅಮರೇಶ್ವರ ಹೆಸರಿನ ಶಿವಸ್ಥಾನವಿದೆ. ಈ ಅಮರಾಪುರದ ಮತ್ತು ಅದರ ಕಷ್ಣಪಂಚಗಂಗಾ-ಸಂಗಮದ ಮಹಿಮೆಯನ್ನು ಗುರುಚರಿತ್ರೆಯಲ್ಲಿ ಕೂಡ ವರ್ಣಿಸಲಾಗಿದೆ.
ಘಟ್ಟದ ಮೊದಲನೆಯ ಹಂತದಲ್ಲಿಯೇ ಚಿಕ್ಕದಾದ ದತ್ತ ಪಾದುಕಾಮಂದಿರವಿದೆ. ಈ ಪಾದುಕೆಗಳಿಗೆ ‘ಮನೋಹರ ಪಾದುಕಾ’ ಎಂಬ ಹೆಸರಿದೆ. ದೇವಸ್ಥಾನದ ಹಿಂದೆ ಔದುಂಬರದ ಕಟ್ಟೆಯಿದೆ. ಮಧ್ಯಾಹ್ನ ಹನ್ನೆರಡು ಗಂಟೆಗೆ ಈ ಮನೋಹರ ಪಾದುಕೆಗಳ ಮಹಾಪೂಜೆಯಾಗುತ್ತದೆ. ಮಹಾಪೂಜೆಯ ಸಮಯದಲ್ಲಿ ಅರ್ಚಕರು ಪಾದುಕೆಗಳಿಗೆ ಸಣ್ಣ ಪಾತ್ರೆಯಷ್ಟು ಹಾಲಿನಿಂದ ಅಭಿಷೇಕ ಮಾಡುತ್ತಾರೆ; ದರ್ಶನಾರ್ಥಿಗಳ ಇಚ್ಛೆಯೂ ಈಡೇರಿಸುತ್ತಾರೆ.
ಘಟ್ಟದ ಕೊನೆಯ ಹಂತದಲ್ಲಿ ಶ್ರೀವಾಸುದೇವಾನಂದ ಸರಸ್ವತೀಯರ ಸ್ಮೃತಿ ಮಂದಿರವಿದೆ. ವಾಡಿಯ ದತ್ತಸ್ಥಾನವೇ ವಾಸುದೇವಾನಂದರ ಪ್ರೇರಣಾಸ್ಥಾನವಿದೆ. ಅವರ ಸ್ಮೃತಿ ಮಂದಿರದ ಹಿಂದೆ ಶ್ರೀ ಗುರುಗಳ ಸಮಕಾಲೀನ ಶ್ರೀ ರಾಮಚಂದ್ರಯೋಗಿಯವರ ಸ್ಮೃತಿಸ್ಥಾನವಿದೆ ಮತ್ತು ಬಲಬದಿಯಲ್ಲಿ ಸಾಲಾಗಿ ನಾರಾಯಣಸ್ವಾಮೀ, ಕಾಶಿಕರಸ್ವಾಮೀ, ಗೋಪಾಳಸ್ವಾಮೀ, ಮೌನೀಸ್ವಾಮೀ ಈ ತಪೋನಿಧಿಗಳ ಸ್ಮಾರಕಗಳಿವೆ. ಅವರ ತಪಸ್ಸಿನಿಂದ ಮತ್ತು ಚಿರವಿಶ್ರಾಂತಿಯಿಂದ ಕೃಷ್ಣಾದಂಡೆಯು ಪವಿತ್ರವಾಗಿದೆ. ಮುಕ್ತೇಶ್ವರರು ಭಾವಾರ್ಥ ರಾಮಾಯಣದ ಉತ್ತರಕಾಂಡವನ್ನು ಇದೇ ಪವಿತ್ರ ಕ್ಷೇತ್ರದಲ್ಲಿ ರಚಿಸಿದರು.
*****
ತಂಜಾವೂರ Tanjore
ರಾಯರೇ ತಮಗಾಗಿ ಆಯ್ಕೆ ಮಾಡಿಕೊಂಡ ಸರ್ಪ ಪೀಠ ಬೃಂದಾವನ
ನಾವು ನಮ್ಮ ಜೀವನದಲ್ಲಿ ಈವರೆಗೂ ಹಲವಾರು ರಾಯರ ಬೃಂದಾವನಗಳನ್ನು ನೋಡಿರುತ್ತೇವೆ. ಬೇರೆ ಬೇರೆ ಊರುಗಳಿಗೆ ಹೋದಾಗ, ಅಲ್ಲಿ ರಾಯರ ಮಠ ಇದ್ದರೇ, ಹೋಗಿ ರಾಯರ ದರ್ಶನ ಮಾಡಲು ಹಪ ಹಪಿಸುತ್ತೇವೆ. ಕೆಲವೊಮ್ಮೆ ಬೆಳಿಗ್ಗೆ ಬೇಗ ಅಭಿಷೇಕ ಇತ್ತ್ಯಾದಿಗಳು ಜರಗುತ್ತಿದ್ದಾಗ, ನೀವು ಸಾಮಾನ್ಯವಾಗಿ ಕೂರ್ಮ ಪೀಠದ (ಆಮೆ ಪೀಠ) ಮೇಲಿರುವ ಬೃಂದಾವನವನ್ನು ನೋಡಿರುತ್ತೀರಾ. ಆದರೆ ಇಲ್ಲಿ ರಾಯರೇ ತಮಗಾಗಿ ಆಯ್ಕೆ ಮಾಡಿಕೊಂಡ ಸರ್ಪ ಪೀಠ ಬೃಂದಾವನ ಇದೆ ಎಂದು ನನಗೆ ಇತ್ತೀಚಿಗೆ ತಿಳಿಯಿತು. ಆ ಬೃಂದಾವನದ ಬಗ್ಗೆ ಮಾಹಿತಿ ಹುಡಿಕಿದಾಗ ಕೆಲವು ಅಚ್ಚರಿ ಮೂಡುವಂತಹ ಸಂಗತಿಗಳು ತಿಳಿದವು. ಅದನ್ನೇ ನಿಮ್ಮ ಜೊತೆ ಹಂಚಿಕೊಳ್ಳುವ ಆಸೆ. ನಿಮ್ಮಲ್ಲಿ ಹಲವರಿಗೆ ಇದರ ಬಗ್ಗೆ ಮಾಹಿತಿ ಇರಬಹುದು. ಇಲ್ಲಿರುವ ಮಾಹಿತಿಯಲ್ಲಿ ಏನಾದ್ರೂ ಸರಿಪಡಿಸುವುದಿದ್ದರೆ, ಕಾಮೆಂಟ್ಸ್ ನಲ್ಲಿ ಹಾಕಿ ತಿಳಿಸಿರಿ. ನಾನು ಈ ಬೃಂದಾವನಕ್ಕೆ ಭೇಟಿ ನೀಡಿಲ್ಲ. ಆದರೆ ಒಮ್ಮೆ ಹೋಗುವಾಸೆ.
ಆಗ ಶ್ರೀಗುರುಸಾರ್ವಭೌಮರು ಬೃಂದಾವನಸ್ಥರಾಗಿ ಕೆಲವು ವರ್ಷಗಳಾಗಿತ್ತು . ಒಮ್ಮೆ ತಂಜಾವೂರಿನ ರಾಜಕುಮಾರ ಅತೀವ ಖಿನ್ನತೆಯಲ್ಲಿ ಇದ್ದನು. ಎಂದಿನಂತೆ ವಾದವಾರು ನದಿ ತೀರದಲ್ಲಿ ವಿಹರಿಸುತ್ತಿದ್ದಾಗ, ಅವನು ರಾಯರ ಬಗ್ಗೆ ಯಾವಾಗಲೂ ಚಿಂತನ ಮಾಡುತ್ತಿದ್ದನು. ಮತ್ತು ಹೇಗೆ ತನ್ನ ಅಜ್ಜನಾದ, ರಘುನಾಥನಾಯಕನಿಗೆ ಶ್ರೀಗುರುಗಳ ಪಟ್ಟಾಭಿಷೇಕ ಸಮಾರಂಭವನ್ನು ನೆರವೇರಿಸುವ ಕಾರ್ಯದಲ್ಲಿ ಭಾಗಿಯಾಗುವ ಸೌಭಾಗ್ಯ ಪಡೆದನು ಎಂದು ಮೆಲಕು ಹಾಕುತ್ತಿದ್ದನು. ಗುರುರಾಯರು ಈಗ ಇದಿದ್ದರೆ, ತನ್ನನ್ನೂ ಈಗಿನ ಸಂಕಷ್ಟ ಕಾಲದಿಂದ ಪಾರು ಮಾಡಿ, ತನ್ನನ್ನು ಕೃತಾರ್ಥನನ್ನಾಗಿ ಮಾಡುತ್ತಿದ್ದರಲ್ಲ ಎಂದು ಚಿಂತಿಸುತ್ತಿದ್ದನು.
ಅದಷ್ಟೇ ಅಲ್ಲ, ಅವನ ತಂದೆ, ಶ್ರೀವಿಜಯರಾಘವನಾಯಕ ಸಹ ಬರಗಾಲದಿಂದ ತಂಜಾವೂರನ್ನು ಕಾಪಾಡಿಕೊಳ್ಳಲು, ರಾಯರನ್ನು ಬರಮಾಡಿಕೊಂಡಿದ್ದನು. ರಾಯರು ತಮ್ಮ ಯಾಗ/ ಯಜ್ನ್ಯ ಫಲದಿಂದ, ಅಲ್ಲಿ ಮಳೆಯನ್ನು ಸುರಿಸಿ, ನದಿ/ ಕೊಳ್ಳ/ ಬಾವಿಗಳನ್ನು ತುಂಬುವಂತೆ ಮಾಡಿ ಬರಗಾಲನ್ನು ನೀಗಿಸಿದ್ದರು. ರಾಯರು ತಂಜಾವೂರಿನಲ್ಲಿ ೧೨ ವರ್ಷಗಳ ಇದ್ದು ಇಲ್ಲಿ ಧ್ಯಾನ ಮಾಡಿ ಈ ಭೂಮಿಯನ್ನು ಪಾವನಗೊಳಿಸುತ್ತಾರೆ.
ಆದರೆ ಈವಾಗ ಎಲ್ಲವೂ ಬದಲಾವಣೆ. ಅವನು ಒಂಟಿತನದಿಂದ ಬಳಲುತ್ತಿದ್ದನು. ಈವಾಗ ನಾಯಕರ ಶಕ್ತಿ/ ಕೀರ್ತಿ ಎಲ್ಲವೂ ಕ್ಷೀಣಿಸುವ ಹಂತದಲ್ಲಿತ್ತು. ಅವನಿಗೆ, ಯಾರು ತನ್ನ ಪೂರ್ವಜರನ್ನ, ಈ ನಾಡನ್ನ ಉದ್ಧರಿಸದರೋ, ಆ ರಾಯರ ಉಪಸ್ಥಿತಿಯ ಕೊರತೆ ಕಾಡ ತೊಡಗಿತ್ತು. ಅವನು ಹಾಗೆಯೇ ಅಲ್ಲಿ ನದಿ ತೀರದಲ್ಲಿ ಕುಳಿತು ರಾಯರ ಧ್ಯಾನ ಮಾಡುತ್ತ, "ಗುರುವೇ, ಯಾವಾಗಲು ನೀನು ನನ್ನ ಜೊತೆಯಲ್ಲಿರು", ಎಂದು ರಾಯರಲ್ಲಿ ಬೇಡಿಕೊಳ್ಳುತ್ತಿದ್ದನು. ಅವನ ಸೇವಕರು ಅವನ ಪರಿಸ್ಥಿತಿಯನ್ನು ಕಂಡು ಮನದಲ್ಲೇ ನೊಂದುಕೊಳ್ಳುತ್ತಿದ್ದರು.
ಆ ರಾತ್ರಿ, ರಾಜಕುಮಾರನು ಮಲಗಿದ್ದಾಗ ಗುರುರಾಯರು ಅವನ ಕನಸಿನಲ್ಲಿ ಬಂದು, "ಚಿಂತಿಸಬೇಡ, ನಾನು ತಂಜಾವೂರಿನಲ್ಲಿ ಬಂದು ನೆಲೆಸುತ್ತೇನೆ. ನನಗೊಂದು ಬೃಂದಾವನ ಕಟ್ಟಿಸು" ಎಂದು ಅಜ್ನ್ಯಾಪಿಸಿದರಂತೆ. ರಾಜಕುಮಾರನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.
ಬೆಳಿಗ್ಗೆ ಸಭೆಯನ್ನು ಕರೆಯಿಸಿ, ತನ್ನ ಅಧಿಕಾರಿಗಳನ್ನು ಉದ್ದೇಶಿಸಿ, "ನಾವು ಗುರುಸಾರ್ವಭೌಮರಿಗೆ ತಂಜಾವೂರಿನಲ್ಲೊಂದು ಬೃಂದಾವನ ನಿರ್ಮಿಸಬೇಕಾಗಿದೆ" ಎಂದನು. ಅಧಿಕಾರಿಗಳಿಗೆ ಸಂತೋಷವಾಗಿ, "ಆಯಿತು ಪ್ರಭು, ಯಾವುದು ಆ ನಿರ್ಧಾರಿತ ಸ್ಥಳ? " ಎಂದು ಕೇಳಿದರಂತೆ. ಆಗ ರಾಜಕುಮಾರನು ತಳಮಳಗೊಂಡು, "ಹೌದಲ್ಲ, ಕನಸಿನಲ್ಲಿ ರಾಯರು ಬೃಂದಾವನದ ಸ್ಥಳದ ವಿಚಾರವಾಗಿ ಏನೂ ತಿಳಿಸಲಿಲ್ಲ, ಮೂರ್ಖನಾದ ನಾನೂ ಅದರ ಬಗ್ಗೆ ಕೇಳಿ ತಿಳಿದುಕೊಳ್ಳಲಿಲ್ಲ" ಎಂದು ವಿಷಾದಿಸಹತ್ತಿದನು. ಆ ರಾತ್ರಿ, ಮಲಗುವಕಿಂತ ಮುಂಚೆ, ರಾಯರ ಧ್ಯಾನದಲ್ಲಿ ಮಗ್ನನಾದನು ಮತ್ತು ತನ್ನ ಗೊಂದಲವನ್ನು ನಿವಾರಿಸಬೇಕು ಎಂದು ಪರಿ ಪರಿಯಾಗಿ ರಾಯರನ್ನ ಬೇಡಿದನು.
ಕರುಣಾಮಯೀ ಆದ ಗುರುರಾಜರು, ತನ್ನ ಭಕ್ತನ ತಾಳ್ಮೆಯನ್ನು ಪರೀಕ್ಷಿಸದೆ, ಆ ರಾತ್ರಿ ಮತ್ತೆ ಅವನ ಕನಸಿನಲ್ಲಿ ಬಂದು, "ರಾಜಕುಮಾರ, ನೀನು ಆದವಾರು ನದಿ ತೀರಕ್ಕೆ ಹೋಗು, ಅಲ್ಲಿ ನಾವೇ ಆ ಸ್ಥಳವನ್ನು ಬಹಿರಂಗಪಡಿಸುತ್ತೇವೆ" ಎಂದರಂತೆ. ಮರುದಿನ ರಾಜಕುಮಾರನು ತಮ್ಮ ಪರಿವಾರ ಮತ್ತು ಅಧಿಕಾರಿಗಳೊಂದಿಗೆ ಹರ್ಷೋಲ್ಲಾಸದಿಂದ ಆದವಾರು ನದಿ ತೀರಕ್ಕೆ ಬಂದನಂತೆ. ದಾರಿಯುದ್ದಕ್ಕೂ "ಶ್ರೀ ರಾಘವೇಂದ್ರಾಯ ನಮಃ" ಎಂದು ಮಂತ್ರ ಪಠನೆ ಮಾಡಿದರು.
ಅವರು ಆದವಾರು ನದಿ ತೀರದ ಹತ್ತಿರ, ರಾಯರ ಸನ್ಯಾಸ ಸಾಧಿಸಿದ ಸ್ಥಳ ಸಮೀಪಿಸಿದಾಗ, ಒಂದು ೫ ಹೆಡೆಯ ಸರ್ಪ ಎಲ್ಲಿಂದಲೋ ಬಂದು ಪ್ರತ್ಯಕ್ಷವಾಯಿತು. ಅದನ್ನು ನೋಡುತ್ತಿದ್ದಂತೆಯೇ, ರಾಜಕುಮಾರನು ಸಾಸ್ಟಾಂಗ ಎರಗಿದನು. ಹರ್ಷ ಮತ್ತು ಭಕ್ತಿಭಾವದಿಂದ ಅವನ ಮುಖ ಅರಳಿ, ಅವನ ಕಣ್ಣಿಂದ ಆನಂದ ಭಾಷ್ಪ ಸುರಿಯಿತು. ಅಲ್ಲಿ ನೆರೆದಿದ್ದವರೆಲ್ಲ ಆಶ್ಚರ್ಯಚಕಿತರಾಗಿ ಜಯಘೋಷ ಕೂಗಿದರು. ಆ ಸರ್ಪವು ನಿಧಾನವಾಗಿಯೂ, ಮನೋಹರವಾಗಿಯೂ ನದಿತೀರದಿಂದ ಒಂದು ಮರದ ಹತ್ತಿರ ಬಂದಿತು. ಅಲ್ಲಿ ತನ್ನ ಪೂರ್ಣ ಹೆಡೆಯನ್ನೆತ್ತಿ ಆ ಸ್ಥಳಕ್ಕೆ ಮೂರು ಬರಿ ಕುಕ್ಕಿ, ಅದೃಶ್ಯವಾಯಿತು.
ನಾವು ಕಂಡಂತೆ ರಾಯರ ಬೃಂದಾವನವನ್ನ ಕೂರ್ಮ ಪೀಠದ ಮೇಲೆ ಸ್ಥಾಪನೆ ಮಾಡಿರುತ್ತಾರೆ. ಆದರೆ ಇಲ್ಲಿ ರಾಯರೇ ಸ್ವತಃ ೫ ಹೆಡೆಯ ಸರ್ಪವಾಗಿ ಪ್ರತ್ಯಕ್ಷರಾಗಿದ್ದ ಕಾರಣ ಗುರುರಾಜರ ಬೃಂದಾವನವನ್ನು ನಾಗ ಪೀಠ ಅಥವಾ ಸರ್ಪ ಪೀಠದ ಮೇಲೆ ಸ್ಥಾಪನೆ ಮಾಡಿದರಂತೆ. ಮತ್ತೊಂದು ಅಚ್ಚರಿಯ ಸಂಗತಿ ಏನಂದ್ರೆ ರಾಯರ ಬೃಂದಾವನದ ಮೇಲೆ ಚಾವಣಿ ಇರುವುದಿಲ್ಲ. ಇದಕ್ಕೆ ಕಾರಣ - ರಾಯರು ತಾವು ಬೃಂದಾವನಸ್ಥರಾಗುವ ಮುಂಚೆ ಇಲ್ಲೇ ೧೨ ವರ್ಷಗಳ ಕಾಲ ಪ್ರಕೃತಿಯ ಮಡಿಲಲ್ಲಿ ಧ್ಯಾನಿಸುತ್ತ ಕಳೆದಿದ್ದರು. ಅವರೇ ಅಜ್ನ್ಯಾಪಿಸಿದಂತೆ ಈ ಬೃಂದಾವನವು ನಿಸರ್ಗದ ಎಲ್ಲ ಅಂಶಗಳಿಗೆ ತೆರೆದಿರಲಿ ಎಂದು ಈಗಲೂ ಈ ಬೃಂದಾವನದ ಮೇಲೆ ಮೇಲ್ಚಾವಣಿ ಇಲ್ಲ.
ಈ ಬೃಂದಾವನದ ಇನ್ನೊಂದು ವಿಶೇಷತೆ ಏನೆಂದರೆ - ಮೂಲಬೃಂದಾವನ ಮತ್ತು ಬಿಚ್ಚಾಲೆಯ ಬೃಂದಾವನವನ್ನು ಹೊರತುಪಡಿಸಿ, ರಾಯರ ಎಲ್ಲ ಮಂತ್ರಾಲಯದ ಹೊರಗಿನ ಬೃಂದಾವನಗಳನ್ನು ಸ್ಥಾಪಿಸುವಾಗ ಮಂತ್ರಾಲಯದಿಂದ ತಂದ ಮೃತ್ತಿಕೆಯನ್ನು ಹಾಕಿರುತ್ತಾರೆ. ಆದರೆ ಇಲ್ಲಿ ಮೃತ್ತಿಕೆ ಇಲ್ಲದೇನೇ ಬೃಂದಾವನವನ್ನು ಸ್ಥಾಪಿಸಿರುತ್ತಾರೆ. ಕಾರಣ - ರಾಯರೇ ಸ್ವತಃ ಇಲ್ಲಿ ವಾಸಿಸಲು ನಿರ್ಧರಿಸಿರುವದರಿಂದ. ಆದರೂ ಆ ಬೃಂದಾವನದಲ್ಲಿ, ರಾಯರು ೧೨ ವರ್ಷಗಳ ಕಾಲ ಧ್ಯಾನ ಮಡಿದ ಸ್ಥಳದ ಮೃತ್ತಿಕೆಯನ್ನು ಹಾಕಿರುವುದಾಗಿ ತಿಳಿದು ಬರುತ್ತೆ. ಆ ಸ್ಥಳದ ಮೃತ್ತಿಯನ್ನು ಇಲ್ಲಿ ಪ್ರಸಾದವಾಗಿಯೂ ಭಕ್ತರಿಗೆ ಹಂಚುತ್ತಾರೆ.
ಈ ಬೃಂದಾವನವು, ಗುರುವಾರ ಹೊರತು ಪಡಿಸಿ, ವಾರದ ಉಳಿದ ದಿನ ಬೆಳಿಗ್ಗೆ ೭:೦೦ ಘಂಟೆಯಿಂದ ೧೨:೩೦ ಘಂಟೆವರೆಗೆ ಮಾತ್ರ ತೆರೆದಿರುತ್ತೆ. ಯಾಕೆ ಎಂದರೆ ಇಲ್ಲಿನ ಅರ್ಚಕರು ಊಟವಾದ ಬಳಿಕ ಪೂಜೆ ಪುನಸ್ಕಾರ ಮಾಡುವುದಿಲ್ಲವಂತೆ. ಗುರುವಾರ ಮಾತ್ರ ಸಂಜೆವರೆಗೂ ರಾಯರ ಬೃಂದಾವ ದರ್ಶನ ಇರತ್ತೆ. ಆಗಿನ ನಾಯಕ ದೊರೆಗಳು ಈ ಬೃಂದಾವನದ ಉಸ್ತುವಾರಿಯನ್ನ, ಮಾತ್ರಾಲಯ ಮಠದ ಟ್ರಸ್ಟೀ ಗಳ ಪೂರ್ವಜರಿಗೆ ವಹಿಸಿದ್ದರಂತೆ.
ರಾಯರು ಇಲ್ಲಿ ಅಂದರೆ ತಂಜಾವೂರಲ್ಲಿ ೧೨ ವರ್ಷಗಳ ಕಾಲ ಧ್ಯಾನದಲ್ಲಿ ಇದ್ದಾಗ, ಯಾವ ಆಚರಣೆಯನ್ನು ಪಾಲಿಸುತ್ತಿದ್ದರೋ, ಅವುಗಳು ಈಗಲೂ ಆಚರಣೆಯಲ್ಲಿ ಇವೆಯಂತೆ. ಯಾಕೆಂದರೆ ಇಲ್ಲಿ ರಾಯರು ಈಗಲೂ ಧ್ಯಾನದಲ್ಲಿ ಇರುವರು ಎಂಬ ನಂಬಿಕೆ. ಇಲ್ಲಿ ಹಸಿಯಾಗಿರುವ ಹೂವು ಅಥವಾ ದಾರದಿಂದ ಕಟ್ಟಿದ ಹೂಮಾಲೆಗಳನ್ನು ಸ್ವೀಕರಿಸುವುದಿಲ್ಲ. ಅದರಂತೆ ನೈಸರ್ಗಿಕವಾಗಿ ಸುವಾಸನೆ ಇಲ್ಲದ ಹೂವುಗಳನ್ನೂ ಸ್ವೀಕರಿಸುವಿದಿಲ್ಲ. ಇಲ್ಲಿನ ಕಟ್ಟು ಪಾಡುಗಳನ್ನು/ ಕಠಿಣ ಆಚರಣೆಗಳನ್ನು ಅಲ್ಲಲ್ಲಿ ಫಲಕಗಳ ಮೇಲೆ ಸಾರ್ವಜನಿಕರ ತಿಳುವಳಿಕೆಗಾಗಿ ಬರೆದು ಹಾಕಿರುವರು.
ಯಾರಾದ್ರೂ ತಂಜಾವೂರಿನವರಾಗಿದ್ದರೆ ಈ ಬೃಂದಾವನದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಇದ್ದಾರೆ ತಿಳಿಸಿ. ಧನ್ಯವಾದಗಳು.
ಶ್ರೀ ರಾಘವೇಂದ್ರಾಯ ನಮಃ
****
ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ನಿಯಮಗಳು ಇರುತ್ತವೆ. ಅವುಗಳನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ದೇವಾಲಯಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ. ಪ್ರತಿಯೊಬ್ಬನು ಆ ನಿಯಮಗಳನ್ನು ಪಾಲಿಸಲೇಬೇಕು. ಲೇಖನದಲ್ಲಿ ತಿಳಿಸುತ್ತಿರುವ ದೇವಾಲಯ ಅತ್ಯಂತ ದೊಡ್ಡದಾದ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ. ಆ ದೇವಾಲಯಕ್ಕೆ ತೆರಳಿ ಸ್ವಾಮಿಯ ಭೇಟಿ ಮಾಡಿದ ನಂತರ ಯಾವುದೇ ಕಾರಣಕ್ಕೂ ಬೇರೆ ದೇವಾಲಯಗಳಿಗೆ ಹೋಗುವುದು ನಿಷಿದ್ಧ. ಅದಕ್ಕೆ ಕಾರಣವೂ ಕೂಡ ಇದೆ. ಸಾಮಾನ್ಯವಾಗಿ ಒಂದು ತಾಣಕ್ಕೆ ತೆರಳಿದ ನಂತರ ಅಲ್ಲಿನ ಎಲ್ಲಾ ಸುತ್ತಮುತ್ತಲ ಪ್ರದೇಶವನ್ನು ನೋಡಿಬಿಡಬೇಕು ಎಂದು ಅಂದುಕೊಳ್ಳುತ್ತೇವೆ.
ಅಸಲಿಗೆ ಆ ಮಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶದಲ್ಲಿದ್ದು, ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಹಾಗಾದರೆ ಆ ತೀರ್ಥಕ್ಷೇತ್ರ ಯಾವುದು? ಆ ದೇವಾಲಯಕ್ಕೆ ತೆರಳಿ ಇತರ ದೇವಾಲಯಕ್ಕೆ ತೆರಳಿದರೆ ಏನಾಗುತ್ತದೆ? ಅದರ ಪರಿಣಾಮವೇನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರವನ್ನು ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ಪಡೆಯೋಣ.
1.ಎಲ್ಲಿದೆ ಆ ದೇವಾಲಯ?
ಆ ಶಕ್ತಿವಂತ ದೇವಾಲಯವೇ ಶ್ರೀ ಕಾಳಹಸ್ತಿ. ಈ ದೇವಾಲಯವು ಸ್ವರ್ಣಮುಖಿ ನದಿ ತೀರದಲ್ಲಿ ನೆಲೆಸಿರುವ ಸ್ವಾಮಿ ಶ್ರೀ ಕಾಳಹಸ್ತಿಶ್ವರನು. ಸ್ವಯಂ ಭೂ ಲಿಂಗ ಎಂದು ಕೆಲವರು ಇನ್ನೂ ಕೆಲವರು ಬ್ರಹ್ಮ ದೇವನು ಪ್ರತಿಷ್ಟಾಪಿಸಿದ ಲಿಂಗ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಲಿಂಗದ ಮುಂಭಾಗದಲ್ಲಿರುವ ದೀಪವು ಶಿವಲಿಂಗದಿಂದ ಬರುವ ಗಾಳಿಯಿಂದ ಕದಲುತ್ತದೆಯಂತೆ. ಶ್ರೀ ಕಾಳಹಸ್ತಿಯನ್ನು ದಕ್ಷಿಣ ಕಾಶಿ ಎಂದು ಸಹ ಕರೆಯುತ್ತಾರೆ.
2. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಶ್ರೀ ಕಾಳಹಸ್ತಿ ದೇವಾಲಯವು ರಾಹು ಹಾಗೂ ಕೇತು ದೋಷವನ್ನು ಪರಿಹರಿಸುವಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಪೂಜೆಗಳು ಮಾಡಿದರೆ ಸಕಲ ದೋಷ ನಿವಾರಣೆಯಾಗಿ ಸಂತಾನ ಭಾಗ್ಯ, ವಿವಾಹ, ಉದ್ಯೋಗ, ಮನೆಯಲ್ಲಿ ಶಾಂತಿ ನೆಲೆಸುತ್ತದೆ. ರಾಹು ಹಾಗೂ ಕೇತು ದೋಷ ಪರಿಹಾರ ಮಾಡಿಸಿಕೊಳ್ಳಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.
ಆದಿ ಶಂಕರಾಚಾರ್ಯರು ಇಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು. ಈ ದೇವಾಲಯದ ಇತರ ಹೆಸರುಗಳೆಂದರೆ, ದಕ್ಷಿಣ ಕೈಲಾಸ, ಸತ್ಯ ಮಾಹಾ ಭಾಸ್ಕರಕ್ಷೇತ್ರ, ಸದಾಮುಕ್ತಿ ಕ್ಷೇತ್ರ ಇನ್ನೂ ಹಲವಾರು. ಶಿವ ರಾತ್ರಿಯ ದಿನದಂದು ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತದೆ.
ಶ್ರೀ ಕಾಳಹಸ್ತಿ ದೇವಾಲಯದ ನಿರ್ಮಾಣದಲ್ಲಿ ಒಂದು ವಿಶೇಷವಿದೆ. ಇಲ್ಲಿನ ವಿನಾಯಕ, ಶ್ರೀ ಕಾಳಹಸ್ತಿಶ್ವರ, ಜ್ಞಾನ ಪ್ರಸೂನಾಂಬ ದೇವತೆ, ದಕ್ಷಿಣ ಮೂರ್ತಿ ಒಬ್ಬೊಬ್ಬರು ಒಂದೊದು ದಿಕ್ಕಿಗೆ ಅಭಿಮುಖವಾಗಿದ್ದಾರೆ. ಈ ದೇವಾಲಯದ ದರ್ಶನದಿಂದಾಗಿ ಎಲ್ಲಾ ಕಾರ್ಯವು ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಶ್ರೀಕಾಳಹಸ್ತಿ ಕ್ಷೇತ್ರದಲ್ಲಿ ಪವಿತ್ರವಾದ ಲಿಂಗವನ್ನು ದರ್ಶನ ಮಾಡಿಕೊಂಡರೆ ರಾಹು, ಕುಜ ಸರ್ವ ದೋಷಗಳು ಪರಿಹಾರವಾಗುತ್ತದೆ. ಹಾಗಾಗಿ ಇಲ್ಲಿ ದಿನನಿತ್ಯ ಸಾವಿರಾರು ಭಕ್ತರು ದಂಪತಿಗಳ ಸಮೇತ ತಮ್ಮ ದೋಷಗಳನ್ನು ಪರಿಹರಿಸಿಕೊಳ್ಳಲು ಭೇಟಿ ನೀಡುತ್ತಾರೆ.
ಶ್ರೀ ಕಾಳಹಸ್ತಿಯಲ್ಲಿ ದರ್ಶನ ಮಾಡಿದ ನಂತರ ಅಥವಾ ರಾಹು, ಕೇತು ಶಾಂತಿ ಮಾಡಿದ ನಂತರ ನೇರವಾಗಿ ಮನೆಗೆ ತೆರಳಬೇಕು. ಇಲ್ಲವಾದರೆ ಅನಿಷ್ಟ ಸಂಭವಿಸುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಕಾರಣ ದೋಷ ಪರಿಹಾರವಾಗಬೇಕಾದರೆ ಶ್ರೀ ಕಾಳಹಸ್ತಿಯಲ್ಲಿ ಪಾಪವನ್ನು ಬಿಟ್ಟು ಹೋಗುವುದೇ ಆಗಿದೆ. ತಿರುಗಿ ಯಾವುದೇ ದೇವಾಲಯಕ್ಕೂ ತೆರಳಬಾರದು ಎಂದು ಹೇಳುತ್ತಾರೆ.
ಗ್ರಹಣಗಳು, ಶನಿ ಭಾದೆಗಳು ಪರಮಶಿವನಿಗೆ ಇರುವುದಿಲ್ಲ ಆದರೆ ಇತರೆ ದೇವತೆಗಳಿಗೆ ಈ ಎಲ್ಲಾ ದೋಷಗಳು ಇರುವುದರಿಂದ ಶ್ರೀ ಕಾಳಹಸ್ತಿಯಿಂದ ತೆರಳಬಾರದು ಎಂದು ಹೇಳುತ್ತಾರೆ. ಇನ್ನು ಎಲ್ಲಾ ದೇವತೆಗಳಿಗೂ ಗ್ರಹಣದ ತೊಂದರೆಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕೆ ಮತ್ತೊಂದು ಆಧಾರವೆನೆಂದರೆ ಚಂದ್ರ ಗ್ರಹಣ.
ಏಕೆಂದರೆ ಗ್ರಹಣದ ಸಮಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಎಲ್ಲಾ ಪುಣ್ಯಕ್ಷೇತ್ರಗಳನ್ನು ಮುಚ್ಚಿ ಹಾಕುತ್ತಾರೆ. ಗ್ರಹಣ ಸಮಾಪ್ತಿಯಾದ ನಂತರ ಪ್ರೋಕ್‍ಷಣೆ ಮಾಡಿ ದೇವಾಲಯವನ್ನು ತೆರೆಯುತ್ತಾರೆ. ಆದರೆ ಶ್ರೀ ಕಾಳ ಹಸ್ತಿಯಲ್ಲಿ ಮಾತ್ರ ಗ್ರಹಣದ ಸಮಯದಲ್ಲಿ ಬಾಗಿಲನ್ನು ತೆರೆದಿರುತ್ತಾರೆ. ಆ ದಿನ ಪ್ರತ್ಯೇಕವಾದ ಪೂಜೆಗಳನ್ನು ಮಾಡಲಾಗುತ್ತದೆ. ಹಾಗಾಗಿಯೇ ಇಲ್ಲಿ ದರ್ಶನ ಮಾಡಿದ ನಂತರ ನೇರವಾಗಿ ಮನೆಗೆ ತೆರಳಬೇಕಾಗುತ್ತದೆ.
ಶ್ರೀ ಕಾಳಹಸ್ತಿಗೆ ತಿರುಪತಿಯಿಂದ 30 ಕಿ,ಮೀ ದೂರದಲ್ಲಿರುವ ಈ ದೇವಾಲಯಕ್ಕೆ 5 ನಿಮಿಷಕ್ಕೆ ಒಮ್ಮೆ ಬಸ್‍ಗಳ ಸೌಕರ್ಯವಿದೆ. ರೈಲ್ವೆ ಮೂಲಕ ಸಾಗುವವರಿಗೆ ಬೆಂಗಳೂರಿನಿಂದ ತಿರುಪತಿಗೆ ನೇರವಾದ ತಿರುಪತಿ ಎಕ್ಸ್‍ಪ್ರೆಸ್ ಇದ್ದು, ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಶ್ರೀ ಕಾಳಹಸ್ತಿ ದೇವಾಲಯಕ್ಕೆ ತೆರಳಬಹುದಾಗಿದೆ.
*******
antya ranga sriranga
Srirangam is the foremost of the eight self-manifested shrines (Swayam Vyakta Kshetras) of Lord Vishnu . It is also considered the first, foremost and the most important of the 108 main Vishnu temples (Divyadesams). This temple is also known as Thiruvaranga Tirupati, Periyakoil, Bhoologa Vaikundam, Bhogamandabam. In the Vaishnava parlance the term "KOIL" signifies this temple only. The temple is enormous in size. The temple complex is 156 acres in extent. It has seven prakaras or enclosures. These enclosures are formed by thick and huge rampart walls which run round the sanctum. There are 21 magnificent towers in all prakaras providing a unique sight to any visitor. this temple lies on an islet formed by the twin rivers Cauvery and Coleroon.
******
wikipedia info
Sri Ranganathaswamy Temple or Thiruvarangam is a Hindu temple dedicated to Ranganatha, a reclining form of the Hindu deityVishnu, located in Srirangam, Tiruchirapalli, Tamil Nadu, India.[3] Constructed in the Dravidian Architecture, this temple is glorified by Alvars in their Divya Prabhanda[4] and is one among the 108 Divya Desams dedicated to Vishnu.[3]
It is one of the most illustrious Vaishnava temples in South India rich in legend and history. The temple has played an important role in Vaishnavism history starting with the 11th-century career of Ramanuja and his predecessors Nathamuni and Yamunacharya in Srirangam.[5] Its location, on an island between the Kollidam and Kaveri rivers,[3] has rendered it vulnerable to flooding as well as the rampaging of invading armies which repeatedly commandeered the site for military encampment.[6] The temple was looted and destroyed by the Delhi Sultanate armies in a broad plunder raid on various cities of the Pandyan kingdom in early 14th century. The temple was rebuilt in late 14th century,[7][8] the site fortified and expanded with many more gopurams in the 16th and 17th centuries.[9][10] It was one of the hubs of early Bhakti movement with a devotional singing and dance tradition, but this tradition stopped during the 14th century and was revived in a limited way much later.[11]
The temple occupies an area of 155 acres (63 ha) with 81 shrines, 21 towers, 39 pavilions and many water tanks integrated into the complex making it the world's largest functioning Hindu temple.[12][3] T
***
17 Nov 2018 food services in Sringeri
Pure madwa catering
Set Dosa:1 set (2pcs)_Rs.20
Podidosa:1 set (2pcs)_Rs.25 MasalDosa:1 set(2pcs)_Rs.30
One chutney and sambar
----------------------------------------------------------
Order cut off time till 5 p.m
----------------------------------------------------------
Pls share with your neighbors, friends and relatives 👍
----------------------------------------------------------
Free home delivery with Min 2 Orders Srirangam, TV Koil, No1 Tollgate Only.
----------------------------------------------------------
Out Side Srirangam Delivery charge will be calculated for minimum 5 orders as follows...
Rs 10 for 5 - 10 kms, Rs.20 for 11 - 15 kms.
----------------------------------------------------------
Contact👇
Sabash Mama Samayal(SMS)
Srirangam
Complete Traditional Vegetarian Foods
Jay Sathya 75986 75973
Vishnu sripadha 9943257776
********
vemalakonda venkatapuram nallagonda AP ಮತ್ಸ್ಯ ನರಸಿಂಹ ವೇಮಲಕೊಂಡ ಆಂಧ್ರ
ಅಪರೂಪದ ಈ ಮತ್ಸ್ಯ ನರಸಿಂಹ ಕೇಳಲೇ ಮೈ ನವಿರೇಳುವುದು, ಮತ್ಸ್ಯರೂಪದ ಈ ನರಸಿಂಹ ಸ್ವಯಂಭೂ ಹಾಗೂ ಇಲ್ಲಿನ ಮೀನುಗಳ ಹಣೆ ಭಾಗದಲ್ಲಿ ಮೂರು ನಾಮ ಇರುವುದು ಅಚ್ಚರಿಯ ಸಂಗತಿ.
ಆಂಜನೇಯನು ಇಲ್ಲಿನ ಕ್ಷೇತ್ರ ಪಾಲಕ.
ಗೋದಾದೇವಿಯ ವಿಗ್ರಹ ಹಾಗೂ ಗುಡಿಯಿದೆ.
ವೇಮಲಕೊಂಡದ ಈ ನರಸಿಂಹನ ದೇವಾಲಯದ ಸುತ್ತ ದೊಡ್ಡ ಪುಷ್ಕರಣಿ ಇದೆ.
ರೋಮಾಂಚನವಾಗುವ ಈ ದೇವಾಲಯದ ನಾಮವನ್ನೊಳಗೊಂಡ ಮೀನನ್ನು ಕಂಡರೇ ನರಸಿಂಹದೇವರನ್ನೇ ಕಂಡಷ್ಟು ಪುಳಕಿತರಾಗುತ್ತಾರೆ. ಸಿಖಂದರಾಬಾದ್ ಗೆ ಹತ್ತಿರವಿರುವ ಹಾಗೂ ಹೈದರಾಬಾದ್ ನಿಂದ ಕೇವಲ 70 ಕಿ.ಮೀ ಇರುವ ಈ ಸ್ಥಳದ ಅಪರೂಪದ ಮತ್ಸ್ಯ ರೂಪಿ ನರಸಿಂಹ ದೇವರ ದರ್ಶನ ತಪ್ಪದೇ ಮಾಡಿ.💐🙏🏼
*ಶ್ರೀ ಮತ್ಸ್ಯ ನರಸಿಂಹ, ವೆಂಕಟಾಪುರಂ, ವೇಮಲಕೊಂಡ, ನಲಗೊಂಡ, ಆಂಧ್ರಪ್ರದೇಶ
*SRI MATHSYA NARASIMHA TEMPLE, VEMALAKONDA, Venkatapuram, Nallagonda, AP
*********
Jagannath Puri
ಬೇವಿನ ಮರದ ಮೂರ್ತಿ (ಬಹಳ ವೈಶಿಷ್ಟ್ಯಪೂರ್ಣ ಮಾಹಿತಿ)
ಸಾಮಾನ್ಯವಾಗಿ ದೇವರ ವಿಗ್ರಹ ಕಲ್ಲಿನದ್ದಾಗಿರುತ್ತದೆ. ಅದಲ್ಲದೇ ಹೋದರೆ ಲೋಹದಿಂದ ವಿಗ್ರಹ ಮಾಡುವುದುಂಟು. ಶಿಷ್ಯ ದೇವರ ಮೂರ್ತಿಯನ್ನು ಮರದಿಂದ ಮಾಡುವುದು ತೀರ ಅಪರೂಪ. ಜಗನ್ನಾಥನ ಮೂರ್ತಿಯನ್ನು ಬೇವಿನ ಮರದಿಂದ ಮಾಡುತ್ತಾರೆ. ಪ್ರತಿ ಏಳು ವರುಷಗಳಿಗೊಮ್ಮೆ ಆ ಮೂರ್ತಿಯನ್ನು ಬದಲಾಯಿಸುತ್ತಾರೆ.
ಏಳು ವರುಷಗಳ ಅನಂತರ ಮೂರ್ತಿಯನ್ನು ಬದಲಾಯಿಸಲಾಗುತ್ತದೆ. ಅದಕ್ಕೋಸ್ಕರವೇ ಏಳು ಗುಂಪುಗಳಲ್ಲಿ ಅರ್ಚಕರ ಗುಂಪು ಮೂರ್ತಿಗೆ ತಕ್ಕ ಮರದ ಹುಡುಕಾಟದಲ್ಲಿ ತೊಡಗುತ್ತದೆ. ಮೂರ್ತಿಗೆ ತಕ್ಕ ಮರ ಸಿಗುವ ತನಕ ಹುಡುಕಾಟ ಮುಂದುವರಿಯುತ್ತದೆ. ಆ ಮರದಲ್ಲಿ ಶಂಖ ಚಕ್ರ ಗದಾ ಪದ್ಮಗಳ ಗುರುತಿರಬೇಕೆಂದೂ ಆ ಮರವನ್ನು ಸರ್ಪ ಕಾವಲು ಕಾಯುತ್ತಿರಬೇಕೆಂದೂ ನೂರೆಂಟು ಕಟ್ಟುಪಾಡುಗಳಿವೆ. ಹೊಸ ಮರ ಪ್ರಾಪ್ತಿಯಾದ ತಕ್ಷಣವೇ ಪೂಜೆಮಾಡಲಾಗುತ್ತದೆ. ಆ ಪೂಜೆಯ ದೃಶ್ಯವೈಭವ ಇದಾಗಿದೆ.
ಹೊಸ ಮೂರ್ತಿ ಸಿದ್ಧವಾಗುತ್ತಿದ್ದಂತೆ ಹಳೇ ಮೂರ್ತಿಯನ್ನು ಸಂಸ್ಕಾರ ಮಾಡಲಾಗುತ್ತದೆ. ಅದಕ್ಕೆಂದೇ ಪ್ರತ್ಯೇಕ ಸ್ಮಶಾನವಿದೆ. ಅಲ್ಲಿ ಹಳೇ ಮೂರ್ತಿಯನ್ನು ಹೂಳುತ್ತಾರೆ. ಹೊಸ ಮೂರ್ತಿಯ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.ಪುರಿ ಜಗನ್ನಾಥ ದೇವಸ್ಠಾನದಲ್ಲಿ ನಡೆಯೋ ಈ ಪವಾಡಗಳಿಗೆ ಉತ್ತರವೇ ಇಲ್ಲ!
ಮರದಿಂದ ಮಾಡಿರುವ ಈ ದೇವಸ್ಥಾನದ ವಿಗ್ರಹವನ್ನು 12-18 ವರ್ಷಕ್ಕೊಮ್ಮೆ ಬದಲಿಸುತ್ತಾರೆ. ಯಮನನ್ನು ಭೇಟಿಯಾಗಲು ಹೊರಟ ಪಾಂಡವರಿಗೆ ಸಪ್ತ ಋಷಿಗಳು 'ಚಾರ್ ಧಾಮ್'ಗೆ ಭೇಟಿ ನೀಡಿ, ಮೋಕ್ಷ ಪಡೆದುಕೊಳ್ಳುವಂತೆ ಸೂಚಿಸಿದ್ದರು. ವರ್ಷದಲ್ಲಿ ಕೆಲವೇ ಸಮಯ ಮಾತ್ರ ಈ ಮಂದಿರದ ಬಾಗಿಲು ತೆರೆಯಲ್ಲಿದ್ದು, ಜನ ಸಾಗರವೇ ಸೇರುತ್ತದೆ. ಇಂಥ ವಿಶೇಷ ಪ್ರಭಾವ ಇರುವ ಪ್ರಖ್ಯಾತ ಪುರಿ ಜಗನ್ನಾಥ ಮಂದಿರದ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳು...
ಗೋಪುರದ ಬಾವುಟ:
ಸಾಮಾನ್ಯ ವಿಜ್ಞಾನ ಹೇಳುವಂತೆ, ಗಾಶಿ ಬೀಸುವ ದಿಕ್ಕಿನಲ್ಲಿ ಬಾವುಟ ಹಾರಬೇಕು. ಆದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರುತ್ತದೆ. ಈ ಸ್ಥಳದಲ್ಲಿ ಯಾವುದೋ ದೈವಿಕ ಪ್ರಭಾವದಿಂದ ಇಂಥದ್ದೊಂದು ಪವಾಡ ನಡೆಯುತ್ತದೆ ಎಂದೇ ಜನರು ನಂಬುತ್ತಾರೆ.
ಸುದರ್ಶನ ಚಕ್ರ :
ಗೋಪುರದ ಮೇಲಿರುವ ಚಕ್ರವು 20 ಅಡಿ ಎತ್ತರವಿದ್ದು, ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಚಕ್ರ ನಮ್ಮೆಡೆಗೇ ಮುಖ ಮಾಡಿದಂತೆ ಕಾಣುತ್ತದೆ. ಈ ಮಂದಿರದ ಮೇಲೆ ಯಾವುದೇ ಪಕ್ಷಿಯಾಗಲಿ, ವಿಮಾನವಾಗಲಿ ಹಾರುವುದಿಲ್ಲ. ಭಾರತದ ಬೇರೆ ಯಾವ ಮಂದಿರದಲ್ಲಿಯೂ ಇಂಥದ್ದೊಂದು ಪ್ರಭಾವ ಇಲ್ಲ. ಯಾವುದೇ ಹಾರಟ ನಿಷೇಧ ಪ್ರದೇಶವೆಂದು ಘೋಷಿಸದೇ ಹೋದರೂ, ಈ ಮಂದಿರದ ಮೇಲೆ ಏನೂ ಹಾರುವುದಿಲ್ಲ. ಇದಕ್ಕೆ ಕಾರಣವೇನೆಂದು ಇನ್ನೂ ನಿಗೂಢವಾಗಿಯೇ ಇದ್ದು, ಯಾವುದೋ ದೈವಿ ಶಕ್ತಿಯಿಂದ ಇಂಥದ್ದೊಂದು ಪವಾಡ ನಡೆಯುತ್ತಂತೆ.
ನೆರಳು ಬೀಳುವುದೇ ಇಲ್ಲ:
ಎಂಥ ಬಿಸಿಲಿದ್ದರೂ ದೇವಾಲಯದಲ್ಲಿ ಮತ್ತು ದೇವಾಲಯ ಆವರಣದಲ್ಲಿ ನೆರಳು ಬೀಳುವುದಿಲ್ಲ. ಇದು ಚಮತ್ಕಾರವೋ, ವಿಸ್ಮಯವೋ, ಪವಾಡವೋ? ಆ ದೇವನೇ ಬಲ್ಲ....ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತ ತರಂಗ..
ದೇವಾಲಯವನ್ನು ಪ್ರವೇಶಿಸಲು ನಾಲ್ಕು ದ್ವಾರಗಳಿದ್ದು, ಮುಖ್ಯ ದ್ವಾರವಾದ ಸಿಂಗದ್ವಾರಮ್ ಅನ್ನು ಪ್ರವೇಶಿಸುವಾಗ, ಶಬ್ದ ತರಂಗಗಳು ಕೇಳಿಸುತ್ತದೆ. ಆದರೆ, ಮತ್ತದೇ ದ್ವಾರದಲ್ಲಿ ಪ್ರವೇಶಿಸಿದರೆ, ಶಬ್ದ ಕೇಳಿಸುವುದಿಲ್ಲ.
ಸಮುದ್ರ ರಹಸ್ಯ:
ಪ್ರಕೃತಿ ವಿಸ್ಮಯದ ಪ್ರಕಾರ ಬೆಳಗಿನ ಸಮಯದಲ್ಲಿ ಗಾಳಿ ಸಮುದ್ರದಿಂದ ಭೂಮಿಯೆಡೆಗೆ ಚಲಿಸುತ್ತದೆ. ಸಂಜೆ ಭೂಮಿಯಿಂದ ಸಮುದ್ರದೆಡೆಗೆ ಗಾಳಿ ಚಲಿಸುತ್ತದೆ. ಆದರೆ ಪುರಿಯಲ್ಲಿ ಈ ವಿಸ್ಮಯ ವಿರುದ್ಧವಾಗಿ ನಡೆಯುತ್ತದೆ!
1800 ವರ್ಷಗಳ ಸಂಪ್ರದಾಯ
ಪ್ರತಿ ದಿನವೂ ಅರ್ಚಕರು 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ, ಎಂಬ ಪ್ರತೀತಿ ಇದೆ.
ಪ್ರಸಾದ ವಿಸ್ತರಣೆ
ದೇವಸ್ಥಾನಕ್ಕೆ 2 ಸಾವಿರದಿಂದ 10 ಸಾವಿರ ಜನರು ಪ್ರವೇಶಿಸುತ್ತಾರೆ. ಮಾಡುವ ಪ್ರಸಾದ ಮಾತ್ರ ಯಾವತ್ತೂ ಹೆಚ್ಚಾಗುವುದೂ ಇಲ್ಲ, ಕಡಿಮೆಯೂ ಆಗುವುದಿಲ್ಲ. ಅಷ್ಟು ನಿಖರವಾಗಿಯೇ ಪ್ರಸಾದವನ್ನು ತಯಾರಿಸಲಾಗುತ್ತದೆ. ಅದು ಹೇಗೋ ಗೊತ್ತಿಲ್ಲ.
ಅಡುಗೆ ಪಾತ್ರೆ
ಪ್ರಸಾದ ಮಾಡುವ ವಿಧಾನವೂ ಇಲ್ಲಿ ಬಹಳ ವಿಶೇಷವಾಗಿರುತ್ತದೆ. ಏಳು ಮಣ್ಣಿನ ಮಡಕೆಗಳನ್ನು ಪ್ರಸಾದ ತಯಾರಿಸಲು ಬಳಸುತ್ತಾರೆ. ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಆಶ್ಚರ್ಯವೆಂದರೆ ಮೇಲಿನ ಮಡಿಕೆ ಪ್ರಸಾದ ಬೆಂದ ನಂತರ ಕೆಳಗಿನ ಮಡಿಕೆಯ ಪ್ರಸಾದ ಬೇಯುತ್ತದೆ.
ಸೃಷ್ಟಿಯಲ್ಲಿ ಹಲವಾರು ಘಟನೆಗಳಿಗೆ ವಿಜ್ಞಾನವೂ ಉತ್ತರಿಸಲು ಆಗುವುದಿಲ್ಲ. ಅದೇ ರೀತಿ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ಇಂಥ ಘಟನೆಗಳಿಗೆ ದೈವೀಶಕ್ತಿಯೇ ಕಾರಣವೆಂದು ಹೇಳಬಹುದೇ ಹೊರತು, ನಿಖರ ಕಾರಣವೇನೆಂದು ಹೇಳುವುದು ಸಾಧ್ಯವಾಗಿಲ್ಲ.
***
ಶ್ರೀ ಕೃಷ್ಣನು ದೇಹವನ್ನು ತೊರೆದಾಗ,ಅವರ ಅಂತಿಮ ಸಂಸ್ಕಾರ ಮಾಡಲಾಯಿತು,ಅವರ ಇಡೀ ದೇಹವು ಪಂಚಭೂತಗಳಲ್ಲಿ ಬೆರೆತುಹೋಯಿತು, ಆದರೆ ಅವರ ಹೃದಯವು ಸಾಮಾನ್ಯ ಮನುಷ್ಯನಂತೆ ಬಡಿಯುತ್ತಿತ್ತಂತೆ ಮತ್ತು ಅವರ ಹೃದಯವು ಸಂಪೂರ್ಣವಾಗಿ ಸುರಕ್ಷಿತವಾಗಿತ್ತಂತೆ ಮತ್ತು ಇಂದಿಗೂ ಸುರಕ್ಷಿತವಾಗಿದೆ, ಜಗನ್ನಾಥನು ಮರದ ವಿಗ್ರಹದೊಳಗೆ ನೆಲೆಸಿದ್ದಾನೆ ಮತ್ತು ಅದೇ ರೀತಿಯಲ್ಲಿ ಅವರ ಹೃದಯವು ಬಡಿತವನ್ನು ಕೇಳಿಬರುತ್ತದೆ..ಈ ವಿಷಯ ಕೆಲವರಿಗೆ ಮಾತ್ರ ತಿಳಿದಿದೆ...
ಮಹಾಪ್ರಭುವಿನ ಮಹಾ ರಹಸ್ಯ
ಚಿನ್ನದ ಪೊರಕೆಯಿಂದ ಸ್ವಚ್ಛತೆ....!
ಮಹಾಪ್ರಭು ಜಗನ್ನಾಥ (ಶ್ರೀ ಕೃಷ್ಣ) ಅನ್ನು ಕಲಿಯುಗದ ದೇವರು ಎಂದೂ ಕರೆಯುತ್ತಾರೆ.ಜಗನ್ನಾಥ ಸ್ವಾಮಿಯು ತನ್ನ ಸಹೋದರಿ ಸುಭದ್ರ ಮತ್ತು ಸಹೋದರ ಬಲರಾಮ್‌ನೊಂದಿಗೆ ಪುರಿ (ಒರಿಸ್ಸಾ) ದಲ್ಲಿ ನೆಲೆಸಿದ್ದಾನೆ, ಆದರೆ ರಹಸ್ಯವು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ...!
ಪ್ರತಿ 12 ವರ್ಷಗಳಿಗೊಮ್ಮೆ ಮಹಾಪ್ರಭುವಿನ ವಿಗ್ರಹವನ್ನು ಬದಲಾಯಿಸಲಾಗುತ್ತದೆ, ಆ ಸಮಯದಲ್ಲಿ ಇಡೀ ಪುರಿ ನಗರದಲ್ಲಿ ಕತ್ತಲೆ ಇರುತ್ತದೆ, ಅಂದರೆ, ಇಡೀ ನಗರದ ದೀಪಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ, ದೀಪಗಳನ್ನು ಆಫ್ ಮಾಡಿದ ನಂತರ, CRPF ಯೋಧರು ದೇವಾಲಯದ ಸಂಕೀರ್ಣವನ್ನು ಸುತ್ತುವರೆದಿರುತ್ತಾರೆ. ಮತ್ತು ಆ ಸಮಯ.ಯಾರೂನ್ನು ದೇವಸ್ಥಾನ ಒಳಗೆ ಪ್ರವೇಶಿಸಲು ಬಿಡುವುದಿಲ್ಲ..
ದೇವಾಲಯದ ಒಳಗೆ ದಟ್ಟವಾದ ಕತ್ತಲೆ ಇರುತ್ತದೆ, ಪೂಜಾರಿಯ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಲಾಗುತ್ತದೆ, ಪುರೋಹಿತರ ಕೈಯಲ್ಲಿ ಕೈಗವಸುಗಳಿರುತ್ತವೆ ನಂತರ ಪೂಜಾರಿಯು ಹಳೆಯ ವಿಗ್ರಹದಿಂದ "ಬ್ರಹ್ಮ ದ್ರವ್ಯ" ವನ್ನು ತೆಗೆದು ಹೊಸ ವಿಗ್ರಹಕ್ಕೆ ಸುರಿಯುತ್ತಾರೆ.ಈ ಬ್ರಹ್ಮ ಪದಾರ್ಥ ಯಾವುದು ಎಂಬುದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಇಲ್ಲಿಯವರೆಗೆ ಯಾರೂ ನೋಡಿಲ್ಲ. ಸಾವಿರಾರು ವರ್ಷಗಳಿಂದ ಇದು ಒಂದು ವಿಗ್ರಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತಿದೆ....
ಇದು ಅಲೌಕಿಕ ವಸ್ತುವಾಗಿದೆ, ಇದನ್ನು ಸ್ಪರ್ಶಿಸಿದರೆ, ವ್ಯಕ್ತಿಯ ದೇಹವು ಚಿದ್ರವಾಗುತ್ತದೆ ಅಂತೆ. ಈ ಬ್ರಹ್ಮ ಪದಾರ್ಥವು ಭಗವಾನ್ ಶ್ರೀ ಕೃಷ್ಣನಿಗೆ ಸಂಬಂಧಿಸಿದೆ. ಆದರೆ ಇದು ಏನು,ಯಾರಿಗೂ ತಿಳಿದಿಲ್ಲ, ಜಗನ್ನಾಥ ದೇವರು ಮತ್ತು ಇತರ ವಿಗ್ರಹಗಳನ್ನು ಅದೇ ವರ್ಷದಲ್ಲಿ ಬದಲಾಯಿಸಲಾಗುತ್ತದೆ, ಯಾವ ವರ್ಷದಲ್ಲಿ ಎರಡು ಆಷಾಢ ಬರುತ್ತದೆ.ಈ ಅವಕಾಶವು 19 ವರ್ಷಗಳ ನಂತರ ಬಂದಿದೆ, ಕೆಲವೊಮ್ಮೆ ಇದು 14 ವರ್ಷಗಳಲ್ಲಿ ಸಂಭವಿಸಿದೆ ಅಂತೆ, ಈ ಸಂದರ್ಭವನ್ನು ನವ್-ಕಲ್ವರ್ ಎಂದು ಕರೆಯಲಾಗುತ್ತದೆ....
ಆದರೆ ಮಹಾಪ್ರಭು ಜಗನ್ನಾಥನ ವಿಗ್ರಹದಲ್ಲಿ ಏನಿದೆ ಎಂದು ಹೇಳಲು ಇಲ್ಲಿಯವರೆಗೂ ಯಾವ ಅರ್ಚಕರಿಗೂ ಸಾಧ್ಯವಾಗಿಲ್ಲ ???
ಕೆಲವು ಪುರೋಹಿತರು ಹೇಳುತ್ತಾರೆ ನಾವು ಅವನನ್ನು ಕೈಗೆ ತೆಗೆದುಕೊಂಡಾಗ ಅವನು ಮೊಲದಂತೆ ಜಿಗಿಯುತ್ತಿರುತ್ತಾನೆ ... ನಮ್ಮ ಕೈಯಲ್ಲಿ ಗ್ಲೌಸ್ ಕಣ್ಣುಗಳನ್ನು ಬಟ್ಟೆಗಳಿಂದ ಕಟ್ಟಲಾಗಿರುತ್ತದೆ ಕೇವಲ ನಾವು ಅದನ್ನು ಅನುಭವಿಸಿದ್ದೆವೇ..
ಇಂದಿಗೂ, ಜಗನ್ನಾಥ ಯಾತ್ರೆಯ ಸಂದರ್ಭದಲ್ಲಿ, ಪುರಿಯ ರಾಜ ಸ್ವತಃ ಚಿನ್ನದ ಪೊರಕೆಯೊಂದಿಗೆ ಪೂರ್ತಿ ದೇವಸ್ಥಾನವನ್ನು ಸ್ವಚ್ಛ ಮಾಡಲು ಬರುತ್ತಾರೆ...
ಜಗನ್ನಾಥ ದೇಗುಲದ ಸಿಂಹದ್ವಾರದಿಂದ ಒಳಗೆ ಮೊದಲ ಹೆಜ್ಜೆ ಇಟ್ಟ ತಕ್ಷಣ ಒಳಗೆ ಸಮುದ್ರದ ಅಲೆಗಳ ಸದ್ದು ಕೇಳಿಸುವುದಿಲ್ಲ, ಆದರೆ ಅಚ್ಚರಿಯ ವಿಷಯವೆಂದರೆ ದೇವಾಲಯದಿಂದ ಒಂದು ಹೆಜ್ಜೆ ಹಿಂದೆ ಇಟ್ಟ ತಕ್ಷಣ ಸಾಗರದ ಸದ್ದು. ಕೇಳಿಸುತ್ತೆ.. .!
ಹೆಚ್ಚಿನ ದೇವಾಲಯಗಳ ಶಿಖರದಲ್ಲಿ ಪಕ್ಷಿಗಳು ಕುಳಿತು ಹಾರುವುದನ್ನು ನೀವು ನೋಡಿರಬೇಕು, ಆದರೆ ಜಗನ್ನಾಥ ದೇವಾಲಯದ ಮೇಲೆ ಯಾವುದೇ ಪಕ್ಷಿಗಳು ಹಾದುಹೋಗುವುದಿಲ್ಲ, ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ, ದಿನದ ಯಾವುದೇ ಸಮಯದಲ್ಲಿಯೂ ಸಹ ಜಗನ್ನಾಥ್ ಮಂದಿರದ ಮುಖ್ಯ ಶಿಖರ ನೆರಳು ಬಿಳಲ್ಲ...
ಜಗನ್ನಾಥ ದೇವಾಲಯದ 45 ಅಂತಸ್ತಿನ ಶಿಖರದಲ್ಲಿರುವ ಧ್ವಜವನ್ನು ಪ್ರತಿದಿನ ಬದಲಾಯಿಸಲಾಗುತ್ತದೆ, ಒಂದು ದಿನವೂ ಧ್ವಜವನ್ನು ಬದಲಾಯಿಸದಿದ್ದರೆ, ದೇವಾಲಯವನ್ನು 18 ವರ್ಷಗಳವರೆಗೆ ಮುಚ್ಚಲಾಗುತ್ತದೆ ಎಂದು ನಂಬಲಾಗಿದೆ...
ಅಂತೆಯೇ, ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿ ಸುದರ್ಶನ ಚಕ್ರವಿದೆ, ಅದು ಪ್ರತಿ ದಿಕ್ಕಿನಿಂದ ನೋಡಿದಾಗ, ನಿಮ್ಮ ಕಡೆಗೆ ಮುಖ ಮಾಡುತ್ತದೆ!
ಭಗವಾನ್ ಜಗನ್ನಾಥ ದೇವಾಲಯದ ಅಡುಗೆಮನೆಯಲ್ಲಿ, ಪ್ರಸಾದವನ್ನು ಬೇಯಿಸಲು 7 ಮಣ್ಣಿನ ಮಡಕೆಗಳನ್ನು ಒಂದರ ಮೇಲೊಂದು ಇರಿಸಲಾಗುತ್ತದೆ, ಇದನ್ನು ಮರದ ಬೆಂಕಿಯಿಂದ ಬೇಯಿಸಲಾಗುತ್ತದೆ, ವಿಚಿತ್ರವೆಂದರೆ ಈ ಸಮಯದಲ್ಲಿ ಮೇಲಿನ ಪಾತ್ರೆಯ ಭಕ್ಷ್ಯ ಮೊದಲು ಬೇಯ್ದಿರುತ್ತದೆ..
ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಮಾಡುವ ಪ್ರಸಾದವು ಭಕ್ತರಿಗೆ ಎಂದಿಗೂ ಕಡಿಮೆಯಾಗುವುದಿಲ್ಲ, ಆದರೆ ಆಶ್ಚರ್ಯಕರ ವಿಷಯವೆಂದರೆ ದೇವಾಲಯದ ಬಾಗಿಲು ಮುಚ್ಚಿದ ತಕ್ಷಣ ಪ್ರಸಾದವೂ ಕೊನೆಗೊಳ್ಳುತ್ತದೆ ಮತ್ತು ಹೇಳುತ್ತಾ ಹೋದರೆ ಇನ್ನು ಹಲವಾರು ಅದ್ಭುತ ಸಂಗತಿಗಳು ನಮ್ಮ ಸನಾತನ ಧರ್ಮದಲ್ಲಿ ಇದ್ದಾವೆ.....
ಸನಾತನ ಧರ್ಮಕ್ಕೆ ಜಯವಾಗಲಿ...
ಸಂಗ್ರಹ...
***
“ಪರಶುರಾಮ ಕುಂಡ” ಅರುಣಾಚಲಪ್ರದೇಶ
ಇದರ ಬಗ್ಗೆ ಬಹಳಷ್ಟು ಹಿಂದುಗಳಿಗೆ ಗೊತ್ತಿಲ್ಲದ ವಿಚಾರ. ಈ ಯಾತ್ರಾಸ್ಥಳ ಅರುಣಾಚಲಪ್ರದೇಶದ ಕಾಮಲಾಂಗ್ ಎನ್ನುವ ಕಾಡಿನಲ್ಲಿ ಇದೆ. ಲೋಹಿತ್ ಎನ್ನುವ ನದಿಯಲ್ಲಿ ಪರಶುರಾಮರ ಮಿಂದು ಎದ್ದ ನಂತರ ಇದನ್ನು ಪವಿತ್ರ ನದಿ ಎಂದು ಪರಿಗಣಿಸಲಾಯಿತು. ಒಂದು ಬಾರಿ ಮಿಂದು ಎದ್ದರೆ ಮಾಡಿದ ಪಾಪ ಎಲ್ಲ ತೊಳೆದು ಹೋಗುತ್ತದೆ ಎನ್ನುವುದು ನಂಬಿಕೆ ಅದಕ್ಕಾಗಿಯೇ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಅಂದರೆ ಜನವರಿ ತಿಂಗಳಲ್ಲಿ ಸುಮಾರು ೬೦,೦೦೦-೭೦,೦೦೦ ದಷ್ಟು ಭಕ್ತಾದಿಗಳು ಬಂದು ಪರಶುರಾಮ ಕುಂಡ ಕ್ಕೆ ಬಂದು ಪವಿತ್ರ ನದಿಯಲ್ಲಿ ಮುಳುಗಿ ಹೋಗುತ್ತಾರೆ.
ಪರಶುರಾಮರ 3 ಪ್ರಮುಖ ಕ್ಷೇತ್ರಗಳು ಭಾರತದಲ್ಲಿ ಇವೆ. ಒಂದು ಕರ್ನಾಟಕದ ತುಳುನಾಡು ಇದನ್ನು ಪರಶುರಾಮ ಕ್ಷೇತ್ರ ಎಂದೇ ಕರೆಯುತ್ತಾರೆ. ಇನ್ನೊಂದು ಒಡಿಶಾದಲ್ಲಿ ಇದೆ ಇದನ್ನು ಪರಶುರಾಮ ಅಂತಾನೆ ಕರೆಯುತ್ತಾರೆ. ಮೂರನೆಯದು ಅರುಣಾಚಲ ಪ್ರದೇಶದ ಪರಶುರಾಮ ಕುಂಡ. ಕೊಂಕಣ ಪ್ರದೇಶ ಅಥವಾ ತುಳುನಾಡು ಅಂದರೆ ದಕ್ಷಿಣ ಕನ್ನಡ ಹಾಗು ಉಡುಪಿ ಇನ್ನು ಕರ್ನಾಟಕದ ಸ್ವಲ್ಪ ಭಾಗ ಸೇರಿದೆ ಇದನ್ನು ಪರಶುರಾಮ ತನ್ನ ಪರಶು ಅಂದರೆ ಕೊಡಲಿ ಸಮುದ್ರಕ್ಕೆ ಎಸೆದು ಎಷ್ಟು ದೂರ ಹೋಗುತ್ತದೋ ಅಷ್ಟು ಜಾಗ ಸಮುದ್ರದ ನೀರು ಹಿಂದೆ ಸರಿದು ಭೂಮಿ ಆಯಿತು. ಆದ್ದರಿಂದ ಇದನ್ನು ಪರಶುರಾಮ ಸೃಷ್ಟಿ ಅನ್ನುತ್ತಾರೆ ಹಾಗು ಪರಶುರಾಮನನ್ನು ಇಲ್ಲಿ ಜನರು ಪೂಜಿಸುತ್ತಾರೆ.ಇನ್ನು ಅರುಣಾಚಲ ಪ್ರದೇಶದ ಪರಶುರಾಮ ಕುಂಡ ಇಲ್ಲಿ ಪರಶುರಾಮರು ಮೋಕ್ಷ ಪಡೆದ ಸ್ಥಳ. ಮೂರನೆಯದ್ದು ಒಡಿಶಾದ ಮಹೇಂದ್ರಗಿರಿ ಪರ್ವತ ಇಲ್ಲಿ ಪರಶುರಾಮರು ತಪಸ್ಸು ಆಚರಿಸಿದರು ಎಂದು ಪುರಾಣಗಳು ತಿಳಿಸುತ್ತವೆ.
ಪರಶುರಾಮ್ ಕುಂಡ ಬಹಳ ವಿಸ್ತಾರವಾಗಿತ್ತು 1950 ರಲ್ಲಿ ನಡೆದ ಭೂಕಂಪ ಈ ಪ್ರದೇಶವನ್ನು ನುಂಗಿಹಾಕಿತ್ತು. ಈಶಾನ್ಯ ರಾಜ್ಯಗಳಲ್ಲಿ ನಡೆದ ಈ ಭೂಕಂಪ ಭಯಾನಕವಾಗಿತ್ತು. ಈ ಭೂಕಂಪನದಿಂದ ಆ ಪ್ರದೇಶದಲ್ಲಿ ಇನ್ನೊಂದು ಪರಶುರಾಮ ಕುಂಡ ತನ್ನಷ್ಟಕ್ಕೆ ರಚನೆಯಾಯಿತು ವೃತ್ತಾಕಾರವಾಗಿ ಬ್ರಹತ್ ಬಂಡೆ ರಚನೆಯಾಯಿತು. ಕುಂಡದ ಮುಖ್ಯ ಸ್ಥಳದಲ್ಲಿ ನದಿ ನೀರು ಬೆಚ್ಚನೆಯಾಗಿದ್ದರೆ ಕುಂಡದ ಇನ್ನೊಂದು ಕಡೆ ನೀರು ತಂಪಾಗಿದೆ.
ಪುರಾಣಗಳ ಪ್ರಕಾರ ಪರಶುರಾಮ ಭಗವಾನ್ ವಿಷ್ಣು ರ ಆರನೇ ಅವತಾರವಾಗಿದೆ. ವಿಷ್ಣುರ ಧಶಾವತಾರದಲ್ಲಿ ಪರಶುರಾಮ ಅವತಾರ ಆರನೆಯದಾಗಿದೆ. ಈ ಎಲ್ಲ ಅವತಾರಗಳು ಒಂದೊಂದು ಯುಗದಲ್ಲಿ ಅವತಾರ ಎತ್ತಿಡವಾಗಿದ್ದವು. ಯಾವಾಗ ಅಧರ್ಮಗಳು ಹೆಚ್ಚಾಗುತ್ತದೆ ಅವಾಗ ವಿಷ್ಣು ಅವತಾರವೆತ್ತಿ ಅಧರ್ಮವನ್ನು ತೊಡೆದು ಧಾರ್ಮ ಸ್ಥಾಪನೆ ಮಾಡುತ್ತಾನೆ ಎನ್ನುವುದು ನಮ್ಮ ಅಂದರೆ ಹಿಂದೂಗಳ ನಂಬಿಕೆ.
ವಿಷ್ಣುನಾ ಈ ಒಂಬತ್ತು ಅವತಾರಗಳು ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬಲರಾಮ ಅಥವಾ ಬುದ್ಧ ಹಾಗು ಹತ್ತನೇ ಅವತಾರ ಕಲ್ಕಿ. ಈ ಕಲ್ಕ್ಯಾವತಾರ ಭಗವಂತ ಇನ್ನು ಎತ್ತಬೇಕಷ್ಟೆ. ಕಲಿಯುಗದಲ್ಲಿ ಅಧರ್ಮ ತಾಂಡವವಾಡುವಾಗ ವಿಷ್ಣು ಕಲ್ಕ್ಯಾವತಾರ ತಾಳಿ ಬರುತ್ತಾನೆ ಎನ್ನುವುದು ನಂಬಿಕೆ.
ವಿಷ್ಣುವಿನ ದಶಾವತಾರದಲ್ಲಿ ಪರಶುರಾಮ ಮಾತ್ರ ಚಿರಂಜೀವಿಯಾಗಿದ್ದಾನೆ. ಅಂದರೆ ಮರಣವೆಂಬುದು ಇಲ್ಲ, ಅಮರತ್ವ ಪಡೆದ ಮಹರ್ಷಿ. ಪೃಥ್ವಿಯಲ್ಲಿ ಒಟ್ಟು 7 ಜನ ಚಿರಂಜೀವಿಗಳಿದ್ದಾರೆ. ಪರಶುರಾಮ, ಆಂಜನೇಯ, ಮಹರ್ಷಿ ವೇದವ್ಯಾಸ, ವಿಭೀಷಣ(ರಾವಣನ ಸಹೋದರ), ಅಶ್ವತ್ತಾಮ( ದ್ರೋಣಾಚಾರ್ಯರ ಮಗ), ಬಲಿ ಚಕ್ರವರ್ತಿ( ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟ ಅಸುರ), ಹಾಗು ಕೃಪಾಚಾರ್ಯ( ಕೌರವ ಹಾಗು ಪಾಂಡವರ ಗುರು). ಚಿರಂಜೀವಿಯಾಗಿರುವ ಪರಶುರಾಮ ಇಂದಿಗೂ ಒಡಿಶಾದಲ್ಲಿರುವ ಮಹೇಂದ್ರಗಿರಿಯಲ್ಲಿ ಧ್ಯಾನಸ್ಥರಾಗಿದ್ದರೆ ಎನ್ನುವುದು ನಂಬಿಕೆ.
ಈ ಏಳು ಚಿರಂಜೀವಿಗಳ ಮಂತ್ರವನ್ನು ಇಂದಿಗೂ ಜನರು ಪಠಿಸುತ್ತಾರೆ.
अश्वत्थामा बलिव्र्यासो हनूमांश्च विभीषण:।
कृप: परशुरामश्च सप्तएतै चिरजीविन:॥
सप्तैतान् संस्मरेन्नित्यं मार्कण्डेयमथाष्टमम्।
जीवेद्वर्षशतं सोपि सर्वव्याधिविवर्जित।।
ಭಗವಾನ್ ವಿಷ್ಣು ಪರಶುರಾಮ ಅವತಾರ ತಾಳಿದ್ದೇಕೆ
ಪರಶುರಾಮ ಹುಟ್ಟಿದ್ದು ಸಪ್ತಋಷಿಗಳಲ್ಲಿ ಒಬ್ಬರಾದ ಜಮದಗ್ನಿ ಋಷಿಗೆ ಹಾಗು ರೇಣುಕಾ ದೇವಿ ಗೆ. ಜಮದಗ್ನಿ ತಾಯಿ ಕ್ಷತ್ರಿಯರಾಗಿದ್ದರು. ಆದ್ದರಿಂದ ಪರಶುರಾಮ ತಂದೆಯಿಂದ ಬ್ರಾಹ್ಮಣನು ಹಾಗು ತಾಯಿ ಮತ್ತು ಅಜ್ಜಿಯಿಂದಾಗಿ ಕ್ಷತ್ರಿಯನು ಆಗಿದ್ದರೆ ಪರಶುರಾಮ.ಹಿಂದೂ ದೇವರುಗಳಲ್ಲಿ ಮೂವರು ಅತಿಮಹಾರಥರು ಇದ್ದಾರೆ ಪರಶುರಾಮ ಅವರಲ್ಲಿ ಒಬ್ಬರು. ಉಳಿದವರು ಇಬ್ಬರಲ್ಲಿ ಒಬ್ಬ ಆಂಜನೇಯ ಇನ್ನೊಬ್ಬ ಮೇಘನಾದ( ರಾವಣನ ಮಗ). ಏನು ಈ ಅತಿಮಹಾರಥರು ಅಂದರೆ? ಎಲ್ಲ ವಿಧದ ಶಸ್ತ್ರ ಹಾಗು ಯುದ್ಧ ರಣತಂತ್ರದಲ್ಲಿ ಪಾರಂಗತರಾದವರನ್ನು ಅತಿಮಹಾರಥಿಗಳು ಎನ್ನುತ್ತಾರೆ.
ಪರಶುರಾಮ ಜನಿಸುವಾಗ ಪೃಥ್ವಿಯಲ್ಲಿ ಕ್ಷತ್ರಿಯರು ಬಲಿಷ್ಠರಾಗಿದ್ದರು. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿ ಬಡವರನ್ನು, ಸಾಮಾನ್ಯ ಜನರನ್ನು ಶೋಷಣೆ ಮಾಡ ತೊಡಗಿದರು. ಪರಶುರಾಮ ಅಂತಹ ಕ್ಷತ್ರಿಯರನ್ನು ಧಮನಿಸಿ ಧರ್ಮದಲ್ಲಿ ನಡೆಯುತ್ತಿದ್ದವರನ್ನು ರಕ್ಷಿಸಿದ. ಪರಶುರಾಮರು ಅತಿ ಹೆಚ್ಚು ಬಳಸಿದ ಆಯುಧ ಪರಶು ಅಂದರೆ ಕೊಡಲಿ.ಆ ಪರಶು ಸಿಕ್ಕಿದ್ದು ಮಹದೇವನಿಂದ. ಯುದ್ಧಾಭ್ಯಾಸ, ಶಾಸ್ತ್ರವಿದ್ಯೆ ಕಲಿತಿದ್ದು ಸ್ವಯಂ ಮಹದೇವನಿಂದ. ಪರಶುರಾಮ ತನ್ನ ಧರ್ಮಯುದ್ಧ ಪ್ರಾರಂಭಿಸಿದ್ದು ಸುರಭಿ ಎಂಬ ಕಾಮದೇನುವನ್ನು ಅಪಹರಿಸಿದ್ದ ಕಾರ್ತಿವೀರ್ಯಾರ್ಜುನನ ಕೊಂದು. ಅವನ ಮರಣಾನಂತರ ಬಹಳ ಕ್ಷತ್ರಿಯ ರಾಜರು ಪರಶುರಾಮನಿಗೆ ಸವಾಲು ಹಾಕಿದರೂ ಅವರನ್ನು ಸೋಲಿಸಿ ಅವರನ್ನು ಧಮನಿಸಿದರು. ೨೧ ಬಾರಿ ಪೃಥ್ವಿಯನ್ನು ಪ್ರಕ್ದಕ್ಷಿಣೆ ಹಾಕಿ ಕ್ಷತ್ರಿಯರ ಸಂಹಾರ ಮಾಡಿದ. ಮಹಾಭಾರತದಲ್ಲೂ ಪರಶುರಾಮರ ಉಲ್ಲೇಖವಿದೆ. ಭೀಷ್ಮ,ಭೀಮ ಕರ್ಣರ ಗುರುಗಳಾಗಿದ್ದರು ಎಂಬುದು ಪುರಾಣಗಳಲ್ಲಿದೆ. ರಾಮಾಯಣದಲ್ಲಿ ರಾಮ ಪರಶುರಾಮರಿಗೆ ನಡೆವ ಯುದ್ಧದ ಸನ್ನಿವೇಶವು ಬರುತ್ತದೆ.
ಪರಶುರಾಮರಿಗು ಪರಶುರಾಮ ಕುಂಡ ಕ್ಕೂ ಏನು ಸಂಬಂಧ?
ಋಷಿ ಜಮದಗ್ನಿ ಹಾಗು ರೇಣುಕಾ ದೇವಿಗೆ ೫ ಮಕ್ಕಳು ಪರಶುರಾಮ ಅತ್ಯಂತ ಕಿರಿಯವ. ರೇಣುಕಾ ದೇವಿ ಪ್ರತಿ ದಿನ ತನ್ನ ಪತಿ ಜಮದಗ್ನಿ ನಡೆಸುವ ಯಜ್ಞಕ್ಕೆ ಸಹಾಯ ಮಾಡುತಿದ್ದಳು. ಪ್ರತಿ ದಿನ ಬೆಳಿಗ್ಗೆ ನದಿ ಬಲಿ ಹೋಗಿ ಸ್ನಾನ ಮಾಡಿ ಪತಿಯ ಯಜ್ಞಕ್ಕೆ ನೀರು ತರುವುದು ಅವಳ ದೈನಂದಿನ ಕಾಯಕವಾಗಿತ್ತು.ಒಂದು ದಿನ ನೀರು ತರಲು ನದಿ ಬಳಿಗೆ ಹೋದಾಗ ಅಲ್ಲಿ ಗಂಧರ್ವರು ಹಾಡು ಹಾಡುತ್ತಿದ್ದರು. ರೇಣುಕಾ ದೇವಿ ಅದರಲ್ಲೇ ಕಳೆದು ಹೋಗಿದ್ದಳು. ಪತಿಯ ಯಜ್ಞಕ್ಕೆ ನೀರು ತರಲು ಮರೆತು ಹೋದ ರೇಣುಕಾ ದೇವಿಯ ಮೇಲೆ ಜಮದಗ್ನಿ ಮಹರ್ಷಿ ಕೋಪಗೊಂಡರು. ಜಮದಗ್ನಿ ತನ್ನ ಮಕ್ಕಳನ್ನು ಕರೆದು ರೇಣುಕಾ ದೇವಿಯನ್ನು ಕೊಳ್ಳಲು ಆದೇಶಿಸಿದರು ನಾಲ್ಕು ಮಕ್ಕಳು ಅದನ್ನು ತಿರಸ್ಕರಿಸಿದಾಗ ಅವರನ್ನು ಕಲ್ಲಾಗುವಂತೆ ಶಾಪ ನೀಡಿದರು. ಪರಶುರಾಮ ತಂದೆ ಆಜ್ಞೆಯಂತೆ ರೇಣುಕಾ ದೇವಿಯ ಶಿರಸ್ಸನ್ನು ಛೇದ ಮಾಡಿ ಬಿಟ್ಟನು. ಇದರಿಂದ ಪ್ರಸನ್ನರಾದ ಜಮದಗ್ನಿ ಬೇಕಾದ ವಾರ ಕೇಳು ಎಂದಾಗ ತನ್ನ ತಾಯಿ ಹಾಗು ತನ್ನ ಸಹೋದರರನ್ನು ಮತ್ತೆ ಬದುಕಿಸುವಂತೆ ವರ ಬೇಡಿದ. ಆದರೆ ಹೆತ್ತ ತಾಯಿಯ ಶಿರಛೇದ ಮಾಡಿದ ಪಾಪ ಪರಶುರಾಮನನ್ನು ಬಿಡಲಿಲ್ಲ. ತಾಯಿಯ ಶಿರಛೇದ ಮಾಡಿದ ಕೊಡಲಿ ಪರಶುರಾಮನ ಕೈಗೆ ಅಂಟಿಕೊಂಡಿತು ಏನು ಮಾಡಿದರು ಕೈಯಿಂದ ತೆಗೆಯಲು ಅಸಾಧ್ಯವಾಯಿತು. ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ದೇಶ ಪರ್ಯಟನೆ ಮಾಡತೊಡಗಿದ ಮೋಕ್ಷಕ್ಕಾಗಿ ಋಷಿ ಮುನಿಗಳನ್ನು ಭೇಟಿಯಾದ.
ಕೊನೆಗೆ ಹಿಮಾಲಯ ತಲುಪಿದಾಗ ಅಲ್ಲಿ ಅವನಿಗೆ ಆಕಾಶವಾಣಿ ಕೇಳಿಸಿತು.ತನ್ನ ಪಾಪ ಕಳೆಯಲು ಅರುಣಾಚಲದ ಲೋಹಿತ ನದಿಯಲ್ಲಿ ಮುಳುಗಿ ಏಳುವಂತೆ ಮಾರ್ಗದರ್ಶನ ಸಿಕ್ಕಿತು. ಅದರಂತೆ ಪರಶುರಾಮರು ಅರುಣಾಚಲದ ಲೋಹಿತ ನದಿಯಲ್ಲಿ ಮಿಂದು ತನ್ನ ಪಾಪ ಕಳೆದುಕೊಂಡರು. ಅಲ್ಲಿಂದ ಈ ನದಿಗೆ ಪರಶುರಾಮ ಕುಂಡ ಎಂಬ ಹೆಸರು ಬಂತು. ಇಲ್ಲಿಗೆ ಯಾರು ಬೇಕಾದರೂ ಹೋಗಬಹುದು ಆದರೆ ತಾಯಿ ಇರುವವರು ಈ ಪರಶುರಾಮ ಕುಂಡದಲ್ಲಿ ಮುಳುಗ ಬಾರದು ಎಂಬ ನಂಬಿಕೆಯೂ ಇದೆ.
ವಾರ್ಷಿಕ ಜಾತ್ರೆ ಇಲ್ಲಿ ನಡೆಯುತ್ತದೆ. ಪ್ರತಿ ವರ್ಷ ಜನವರಿಗೆ ಈ ಪರಶುರಾಮ ಕುಂಡ ಮೇಳ ಶುರುವಾಗುತ್ತದೆ. ಈ ಮೇಳದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.
****
ಇದೊಂದು ವಿಶೇಷ ದೇವಸ್ಥಾನ ಅದುವೇ ಶ್ರೀ ಸುದರ್ಶನ ಆಂಜನೇಯ ಸ್ವಾಮಿ , ಇದು ಇರುವದು ಅದನೂರು ಕುಂಭಕೋಣಂ ಹತ್ತಿರ ಈ ದೇವಸ್ಥಾನದ ವಿಶೇಷತೆ ಎಂದರೆ ಆಂಜನೇಯನ ತಲೆಯಲ್ಲಿ ಸುದರ್ಶನ ಚಕ್ರವಿದೆ ಅದನ್ನು ಬಾಲದಿಂದ ಬಂದಿಸಿದ್ದಾನೆ ಅದನ್ನು ನೋಡಬೇಕು ಅಂದ್ರೆ ಬೆಳಿಗ್ಗೆ ಅಲಂಕಾರ ತೆಗೆದಾಗ ಮಾತ್ರ ನೋಡಲು ಸಿಗುತ್ತದೆ ಅಷ್ಟೇ ಅಲ್ಲ ಆಂಜನೇಯನ ಮುಖ ಸರಿಯಾಗಿ ನೋಡಿ ನಗುತ್ತಿರುವ ಆಂಜನೇಯ
ಅಲ್ಲಿ ವಿಶೇಷ ಏನಾದರೂ ಅಂದು ಕೊಂಡು ಬಂದರೆ ಬೇಗ ಕೆಲಸವಾಗುತ್ತದೆ .ಅನ್ನುವುದು ಅಲ್ಲಿ ಬಂದ ಭಕ್ತರು ಹೇಳುತ್ತಾರೆ
********
The Kitchen, biggest in the World
Sri Jagannath is the Lord of the Universe. His Kitchen is considered as the largest and the biggest Kitchen in the world. It is situated south-east direction of the outer compound of Srimandir. The length of the Kitchen is 150 feet, breadth is 100 feet and height is about 20 feet. It consists of 32 rooms with 250 earthen ovens within these. Around 600cooks(Suaras) and 400 assistants serve here everyday for preparing Lord’s food.
It is believe that Mahalaxmi cooks in the Kitchen Herself; all are felt to be her servants.
Chappan Bhog or Mahaprasad
Mahaprasad is the term applied to the 56 food items offered to Lord Jagannath in the holy Temple of Puri,
According to ” Skanda Purana” Lord Jagannath redeems the devotees by permitting them to partake his Mahaprasad, to have His darshan and to worship him by observing rituals and by offering of gifts .Mahaprasad is treated here as ‘Anna Brahma’. The temple kitchen has got the capacity to cook for a lakh of devotees on a day. Mahaprasad is cooked only in earthen pots and medium of food is fire wood only. The steam-cooked food is offered to Lord Jagannath first and then to Goddess Vimala after which it becomes Mahaprasad. This Mahaprasad is freely taken by people of all castes and creeds without any discrimination.
When the steam cooked food is carried to Lord in slings of earthen pots no flavour comes up from the food but when the same is carried back to the sale point after being offered to the Lord a delicious smell spells along in the breeze to the pleasant surprise of the devotees. Now the food is blessed.
The tourists prefer to carry a particular type of dry Mahaprasad known as” Khaja” (made of maida, sugar and ghee) which stays fresh for days together.
Mahaprasad is ceased to be offered during the 21 days preceding the Ratha Yatra, as the lord is said to be having fever in that period.
Dried rice Mahaprasad known as “Nirmalya” is also used by devotees and tourists for different sacred occasions.
The main 56 items of CHAPANA BHOGA or MAHAPRASAD are as follows:
1. Sadha Anna – Simple Rice water
2. Kanika – Rice, Ghee and Sugar
3. Dahi Pakhal – Curd Rice and water
4. Ada Pakhal – Rice, Ginger and water
5. Thali Khechedi – Lentil, Rice with Sugar and Ghee
6. Ghea Anna – Rice mixed with Ghee
7. Khechedi – Rice mixed with Lentil
8. Mitha Pakhal – Rice , Sugar and water
9. Oria Pakhal – Rice, Ghee, Lemon and Salt
Sweets
10. Khaja – Made of wheat
11. Gaja – Made of wheat, sugar and Ghee
12. Ladu – Made of wheat, sugar and Ghee
13. Magaja Ladu
14. Jeera Ladu
15. Jagannath Ballav – Wheat, Sugar and Ghee
16. Khuruma – Made of wheat, Sugar and Salt
17. Mathapuli – Made of Ghee, Ginger and a kind of beans ground in to a thick paste
18. Kakara – Made of Ghee and Wheat
19. Marichi Ladu – Made of Wheat and Sugar
20. Luni Khuruma – Made of Wheat, Ghee and Salt
(Onreturn of Bahuda Yatra during Suna Vesha, Rasagolla are offered as Bhogas but on no other day Rasagollas are allowed for Bhog)
Cakes, Pancakes and Patties
21. Suar Pitha – Made of wheat and Ghee
22. Chadai Lada – Made of Wheat, Ghee and Sugar
23. Jhilli – Rice Flour, Ghee and Sugar
24. Kanti – Rice Flour and Ghee
25. Manda – Made of wheat and Ghee
26. Amalu – Made of wheat, ghee and sugar
27. Puri – Made of wheat and Ghee and deeply fried like a small thin pan cake
28. Luchi – Made of Rice, Flour and Ghee
29. Bara – Made of Curd, Ghee and a kind of beans
30. Dahi Bara – Cake made of a kind of a beans and curd
31. Arisa – A flat cake made of Rice flour and Ghee
32. Tripuri – Another flat cake made of Rice, Flour and Ghee
33. Rosapaik – A cake made of wheat and
Milk Preparations
34. Khiri – Milk, Sugar with Rice
35. Papudi – Prepared from only the cream of milk
36. Khua – Prepared out of Pure Milk slowly boiled over many hours to a soft custard like consistency
37. Rasabali – Made of Milk, Sugar and Wheat
38. Tadia – Made of fresh cheese, sugar and Ghee
39. Chhena Khai – Made of fresh Cheese, milk and sugar
40. Bapudi Khaja – cream of milk, sugar and ghee
41. Khua Manda – Made of milk, wheat and Ghee
42. Sarapulli – This is the most famous and most difficult milk dish to prepare. It is made of pure milk boiled slowly for hours and spread in to a large pizza shaped pan.
Curry with Vegetables
43. Dali
44. Biri dali
45. Urid Dal
46. Muga Dal
47. Dalama – This is one of the typical dishes in Oriya Home. It is a combination of Dahl and Vegetable. Usually eggplant, beans, sweet potato and tomatoes, although tomatoes are not used in Temple preparations. Coconuts and a dried root of vegetables known as Bodhi which looks like a mush room and is high in protein are added.
48. Maur
49. Besar
50. Sag – A spinch dish
51. Potala Rasa
52. Goti Baigana
53. Khata
54. Raita – a yogurt like dish with curd and radish.
55. Pita
56. Baigilni
*********
ಜಗನ್ನಾಥಪುರಿನೈವೇದ್ಯ
ಅಮ್ಮ ಹೇಳತಿದ್ಲು ಶ್ರೀಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ. ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ. ಅಲ್ಲಿ ನೈವೇದ್ಯದ ಕ್ರಿಯೆಯನ್ನು ಮಹಾಭೋಗ ಎನ್ನುತ್ತಾರೆ. ಅದೇಕೆ ಮಹಾಭೋಗ ಎನ್ನುತ್ತಾರೆ ಅಂದರೆ ಆದು ಸರ್ವ ಶಕ್ತ ವಿಷ್ಣುವಿನ ಪ್ರಸಾದ. ನಾರದ ಮುನಿಯು ಲಕ್ಷ್ಮಿಯನ್ನು ವಿನಂತಿಸಿ ವಿಷ್ಣುವಿನ ತಟ್ಟೆಯಿಂದ ಪಡೆದ ದುರ್ಲಭ ಮಹಾಪ್ರಸಾದ ಅದು.
ಈ ಮಹಾ ಪ್ರಸಾದವನ್ನು ಅರಮನೆಯಿಂದ ಹಾಗೂ ದೇವಾಲಯದಲ್ಲಿ ತಯಾರಿಸಿ ಅರ್ಪಿಸಲಾಗುತ್ತದೆ. ಪ್ರತಿ ದಿನ ಜಗನ್ನಾಥನಿಗೆ 56 ಬಗೆಯ ಸಾಂಪ್ರದಾಯಿಕ ಅಡುಗೆಯನ್ನು ಸಿದ್ದಪಡಿಸಲಾಗುತ್ತದೆ. ಇದನ್ನು ಸಿದ್ಧಪಡಿಸಲೆಂದೇ ಸುಮಾರು 500 ಸಂಖ್ಯೆಯ ಸೌರ ಹಾಗೂ ಅಡುಗೆಯವರು, ಅವರಿಗೆ 300 ಸಹಾಯಕರು, ಮತ್ತು 200 ಕೆಲಸಗಾರರು ಸಿದ್ದರಿರುತ್ತಾರೆ. ಮಹಾ ಪ್ರಸಾದದ ತಯಾರಿಕೆಗೆ ಸೌದೆ ಒಲೆಯನ್ನು ಮಾತ್ರ ಬಳಸಲಾಗುತ್ತದೆ. ಜಗನ್ನಾಥನ ಅಡುಗೆ ಮನೆಯಲ್ಲಿ ಉರಿಯುವ ಅಗ್ನಿಯನ್ನು ವೈಷ್ಣವ ಅಗ್ನಿ ಎನ್ನುತ್ತಾರೆ. ಹಾಗೂ ಎಂದೋ ಹಚ್ಚಿದ ಒಲೆ ಇಂದಿಗೂ ಆರಿಲ್ಲವಂತೆ . ಅಡಿಗೆಯವರು ಅಂದಿನ ಅಗತ್ಯಕ್ಕೆ ತಕ್ಕಂತೆ ಮಡಿಯಲ್ಲಿ ಮಹಾಪ್ರಸಾದವನ್ನು ತಯಾರಿಸಿ ಅದನ್ನು ಸಣ್ಣ ಮಣ್ಣಿನ ಕುಡಿಕೆಯಲಿ ತುಂಬಿ ಮೈಲಿಗೆಯಾಗದಂತೆ ಅರ್ಚಕರಿಗೆ ತಲುಪಿಸುತ್ತಾರೆ.
ಅಡುಗೆಯಲ್ಲಿ ವ್ಯತ್ಯಾಸ ಅಥವಾ ಮೈಲಿಗೆಯಾದರೆ ಅಡುಗೆಯ ಬಳಿ ನಾಯಿಯೊಂದು ಕಾಣಿಸಿಕೊಳ್ಳುತ್ತದಂತೆ. ಆಗ ಮಾಡಿದ ಅಡುಗೆಯನ್ನು ನೆಲದಲ್ಲಿ ಹೂಳಿ ಬೇರೆ ಅಡುಗೆ ಮಾಡುತ್ತಾರಂತೆ. ಈ ನಾಯಿಯನ್ನು ಕುಟುಮಚಂಡಿ ಎಂಬ ತಾಂತ್ರಿಕ ದೇವತೆ ಎನ್ನಲಾಗುತ್ತದೆ. ಅಲ್ಲಿಯ ಅಡಿಗೆಯವರು ಹೇಳುವ ಪ್ರಕಾರ "ನಾವು ಭೋಗದ ಅಡುಗೆಯನ್ನು ತಯಾರಿಸುವ ಕಾರ್ಯ ಮಾತ್ರ ಮಾಡುತ್ತಿದ್ದು ಅದಕ್ಕೆ ರುಚಿ, ಸುಗಂಧ ನೀಡುವುದು ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಗೆ ಸೇರಿದ್ದು. ಆಕೆ ಅಡುಗೆ ಮನೆಯಲ್ಲಿ ಸದಾ ಓಡಾಡುತ್ತಾ ಇರುತ್ತಾಳಂತೆ. ಆಕೆಯ ಗೆಜ್ಜೆ ಸದ್ಧು ನಮಗೆ ಕೇಳುತ್ತದೆ " ಎನ್ನುತ್ತಾರೆ ಅಡುಗೆಯವರು . ಅಲ್ಲಿಯ ಮಹಾಭೋಗದ ಅಡುಗೆ ದಿವ್ಯರುಚಿ ಹಾಗೂ ಸುಗಂಧ ವಿಶಿಷ್ಟವಾಗಿರತ್ತದಂತೆ. 56 ಬಗೆಯ ಅಡುಗೆಗೆ ಅವರದೆ ಆದ ಒಂದು ನಂಬುಗೆ ಇದೆ. ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಏಳು ದಿನಗಳ ಕಾಲ ನಿರಾಹಾರನಾಗಿ ಹಾಗೇ ಇದ್ದನಂತೆ, ಅವ ಸಾಮಾನ್ಯವಾಗಿ ಪ್ರತಿ ದಿನ ಎಂಟು ವಿಧಗಳ ಆಹಾರವನ್ನು ಸೇವನೆ ಮಾಡುತ್ತಿದ್ದನಂತೆ. ಇದರ ನೆನಪಿಗಾಗಿ ಏಳು ದಿನಗಳ ಆಹಾರವನ್ನು ದಿನಕ್ಕೆ ಎಂಟರಂತೆ 56 ವಿಧದಲ್ಲಿ ತಯಾರಿಸಿ ಬಡಿಸಲಾಗುತ್ತದಂತೆ ಎಂದು. ಈ ಮಹಾ ಪ್ರಸಾದದ ಹೆಸರೆ ಛಪ್ಪನ ಮಹಾ ಭೋಗ ಪ್ರಸಾದ ಎಂದು..... ಯಾರು ಜಗನ್ನಾಥಪುರಿಗೆ ಹೋಗುತ್ತೀರೋ ತಪ್ಪದೆ ಆ ಮಹಾಪ್ರಸಾದ ಸ್ವೀಕರಿಸಿ ನೀರು ಸೇರಿಸದ ಮಹಾಪ್ರಸಾದವನ್ನು ನಿರ್ಮಾಲ್ಯ ಮಹಾಪ್ರಸಾದ ಅಥವಾ ಕೈವಲ್ಯ ಮಹಾಪ್ರಸಾದ ಎಂದು ಹೇಳುತ್ತಾರೆ. ಇದನ್ನು ಭಕ್ತರು ಮನೆಗೆ ಕೊಂಡೊಯ್ದು ಇಟ್ಟುಕೊಂಡಿರುತ್ತಾರೆ. ಸಾವಿನ ಹೊಸ್ತಿಲಲ್ಲಿರುವವರಿಗೆ ಕೈವಲ್ಯ ಪ್ರಸಾದವನ್ನು ನೀಡುವುದರಿಂದ ಸಾವಿನ ನಂತರ ವೈಕುಂಠದಲ್ಲಿ ಸ್ಥಾನ ಪಡೆಯುತ್ತಾರಂತೆ ಎಂಬ ನಂಬಿಕೆ. ಇಷ್ಟೊಂದು ಮಹತ್ವವಿದೆ ಜಗನ್ನಾಥ ಪುರಿಯ ಮಹಾ ನೈವೇದ್ಯಕ್ಕೆ.'
*********
ಅತ್ತೀವರದರಾಜ ಕಾಂಚೀಪುರಂ
ಕಳೆದ ೪೮ ದಿನಗಳಿಂದ ಎಲ್ಲರ ಮಸ್ತಕಗಳಲ್ಲಿ, ಮನೆಗಳಲ್ಲಿ, ಮನಸ್ಸುಗಳಲ್ಲಿ, ಮಾತುಗಳಲ್ಲಿ ಕಂಚೀ ಕ್ಷೇತ್ರದ ಅತ್ತಿವರದರಾಜನೇ ಇದ್ದ. ೪೮ ದಿನಗಳ ಕಾಲ ಎಲ್ಲರಿಗೂ ದರ್ಶನ ಕೊಟ್ಟ ವರದರಾಜ ಇವತ್ತು ಬ್ರಾಹ್ಮೀಮುಹೂರ್ತದಲ್ಲಿ ಯಾರಿಗೂ ಕಾಣದಹಾಗೆ ಇನ್ನೂ ೪೦ ವರ್ಷಗಳ ಕಾಲ ದರ್ಶನ ಇಲ್ಲದ ಹಾಗೆ ಕಂಚೀಕ್ಷೇತ್ರದ ಅನಂತಸರೋವರದಲ್ಲಿ ಅನಂತಶಯನನಾಗಿದ್ದಾನೆ. ಅಂಥ ಅತ್ತಿವರದರಾಜನ ಇತಿಹಾಸ ಏನು? ಯಾಕೆ ೪೦ ವರ್ಷಗಳಿಗೊಮ್ಮೆ ದರ್ಶನ? ೪೮ ದಿನಗಳು ಮಾತ್ರ ಯಾಕೆ ದರ್ಶನ? ಅಂತೆಲ್ಲರ ಮನಸ್ಸುಗಳಲ್ಲಿ ಪ್ರಶ್ನೆಗಳು ಬಂದಿರುತ್ತವೆ. ಆ ಇತಿಹಾಸ ತಿಳಿದುಕೊಳ್ಳಲು ಒಂದು ಲೇಖನ. ಎಲ್ಲರೂ ಓದಿ.
ಅತ್ತಿವರದರಾಜ ಸಾಕ್ಷಾತ್ ಶ್ರೀಮನ್ನಾರಾಯಣ. ಇವನನ್ನು ಸತ್ಯಯುಗದಲ್ಲಿ ಪೂಜಿಸಿದವರು ಚತುರ್ಮುಖಬ್ರಹ್ಮದೇವರು. ಈ ಕಟ್ಟಿಗೆಯ ಮೂರ್ತಿಯನ್ನು ವಿಶ್ವಕರ್ಮ ಔದುಂಬರವೃಕ್ಷದ ಮರದಲ್ಲಿ ಕೆತ್ತಿದ್ದನು. ೧೬ ನೇ ಶತಮಾನದ ತನಕ ಕಂಚೀಕ್ಷೇತ್ರದಲ್ಲಿ ಇದೇ ಮೂಲವಿಗ್ರಹವಾಗಿ ಪೂಜೆಗೊಳ್ಳುತ್ತಿತ್ತು. ದೇವರ ಅಪ್ಪಣೆಯಂತೆ ಬ್ರಹ್ಮದೇವರು ಈ ಮೂರ್ತಿಗೆ ಗಜೇಂದ್ರನಿಂದ, ಬೃಹಸ್ಪತಿಯಿಂದ, ಶೇಷನಿಂದ ಪೂಜೆಯನ್ನು ಮಾಡಿಸಿದ್ದಾರೆ.
ಔದುಂಬರವೃಕ್ಷ ಅಂದರೆ ಅತ್ತೀಮರ. ಆ ಅತ್ತೀಮರದಲ್ಲಿ ಮಾಡಿದ ವರದರಾಜಮೂರ್ತಿ ಆದ್ದರಿಂದ ಈ ಮೂರ್ತಿಯನ್ನು ಅತ್ತಿವರದರಾಜ ಎಂದು ಕರೆಯುತ್ತಾರೆ.
೪೦ ವರ್ಷಗಳಿಗೊಮ್ಮೆ ೪೮ ದಿನ ಯಾಕೆ ಪೂಜೆ ಈ ಮೂರ್ತಿಗೆ?
ಅಂದರೆ ಹದಿನಾರನೇ ಶತಮಾನದಲ್ಲಿ ದಕ್ಷಿಣಭಾರತದ ಮೇಲೆ ದಂಡೆತ್ತಿ ಬಂದ ದೆಹಲಿ ಸುಲ್ತಾನರು ಕೈಗೆ ಸಿಕ್ಕ ಹಿಂದೂ ದೇವಾಲಯಗಳನ್ನೆಲ್ಲ ನಾಶಮಾಡುತ್ತ ಬರುತ್ತಿದ್ದರು. ಅವರು ಕಂಚಿಯ ಕಡೆಗೆ ಬರುತ್ತಾರೆಂದು ತಿಳಿದು ಎಲ್ಲಿ ಈ ಅತ್ತಿವರದರಾಜನ ಮೂರ್ತಿ ಹಾಳಾಗುವುದೋ ಎಂದು ಭಯಪಟ್ಟು ಅರ್ಚಕರು ಯಾರಿಗೂ ಗೊತ್ತಾಗದ ಹಾಗೆ ದೇವಾಲಯ ಆವರಣದಲ್ಲಿದ್ದ ಅನಂತಸರೋವರದಲ್ಲಿ ಮುಳುಗಿಸಿಟ್ಟರು. ದೇವಾಲಯದಲ್ಲಿ ಅತ್ತಿವರದರಾಜನ ಮೂರ್ತಿ ಇಲ್ಲದೇಯಿದ್ದ ಕಾರಣ ಮುಂದಿನ ನಲವತ್ತುವರ್ಷಗಳ ಕಾಲ ಪೂಜೆ ನಡೆಯಲೇಯಿಲ್ಲ. ನೀರಿನಲ್ಲಿ ಮುಳುಗಿಸಿಟ್ಟ ದತ್ತಾಚಾರ್ಯರೆಂಬ ಅರ್ಚಕರ ಮರಣ ಆದ್ದರಿಂದ ಈ ಮೂರ್ತಿಯ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಅದಕ್ಕೆ ಆ ಸಮಯದಲ್ಲಿದ್ದ ಅರ್ಚಕರು ಕಂಚೀಕ್ಷೇತ್ರದದಿಂದ ೩೦ ಕಿಲೋಮೀಟರ್ ದೂರದಲ್ಲಿರುವ ಪದ್ಮಗಿರಿಯಿಂದ ಕಲ್ಲಿನ ಹೊಸ ಮೂರ್ತಿಯನ್ನು ತಂದು ಪುನಃ ಪ್ರತಿಷ್ಠಾಪನೆ ಮಾಡಿದರು. ಇದೇ ಮೂರ್ತಿಯನ್ನು ನಾವೆಲ್ಲರೂ ದರ್ಶನ ಮಾಡ್ತಾಯಿದ್ದೇವೆ. ೪೦ ವರ್ಷಗಳಿಗೊಮ್ಮೆ ೪೮ ದಿನ ಮಾತ್ರ ಮೂಲವಿಗ್ರಹದ ದರ್ಶನ.
೪೦ ವರ್ಷಗಳಿಗೊಮ್ಮೆ ೪೦ ದಿನ ಮಾತ್ರ ಯಾಕೆ ದರ್ಶನ? ಅಂದರೆ ಮೂಲಮೂರ್ತಿಗೆ ನಡೆಯಬೇಕಾದ ಪೂಜೆಗಳು ಹೊಸ ಮೂರ್ತಿಗೆ ನಡೆಯುತ್ತಿರುವ ಕಾಲದಲ್ಲಿ ಮೂಲಮೂರ್ತಿ ಸರೋವರದಲ್ಲಿ ಮುಳುಗಿಸಿ ೪೦ ವರ್ಷಗಳ ನಂತರ ೧೭ ನೇ ಶತಮಾನದಲ್ಲಿ ಸರೋವರದ ನೀರು ಕಡಿಮೆಯಾದಾಗ ಈ ಅತ್ತಿವರದರಾಜನ ಮೂಲಮೂರ್ತಿ ಗೋಚರವಾಯಿತು. ಅದಕ್ಕೆ ದೇವಸ್ಥಾನದ ಮುಖ್ಯಸ್ಥರು ಎಲ್ಲರೂ ಸೇರಿ ೪೮ ದಿನ ಅಂದರೆ ಒಂದು ಮಂಡಲ. ಈ ೪೮ ದಿನ ಮಾತ್ರ ಭಕ್ತಿಯಿಂದ ಪೂಜಿಸಿ ಮತ್ತೆ ಸರೋವರದಲ್ಲಿ ಮುಳುಗಿಸಿಡೋಣ ಎಂದು ಒಪ್ಪಂದಕ್ಕೆ ಬಂದರು. ಅವತ್ತಿನಿಂದ ಇವತ್ತಿನವರೆಗೂ ೪೦ ವರ್ಷಗಳಿಗೊಮ್ಮೆ ೪೦ ದಿನಗಳ ಕಾಲ ಪೂಜೆ ದರ್ಶನ ಆಗ್ತಾಯಿದೆ. ಆ ಮೂಲಮೂರ್ತಿಯನ್ನು ಆವಾಗಿನಿಂದ ಇವಾಗಿನವರೆಗೂ ಒಟ್ಟು ಏಳು ಬಾರಿ ಮಾತ್ರ ಮೂರ್ತಿಯನ್ನು ಎತ್ತಿ ಪೂಜಿಸಿ ಮತ್ತೆ ಮುಳುಗಿಸಿಡಲಾಗಿದೆ. ಅತ್ತೀಮರದ ವಿಗ್ರಹ ಆದ್ದರಿಂದ ನೀರಿನಲ್ಲಿ ಮುಳುಗಿಸಿಟ್ಟರೂ ಏನೂ ಆಗಲ್ಲ ಅದು ದೇವರ ಅಚಿಂತ್ಯಶಕ್ತಿ. ಇಂಥ ಅತ್ತಿವರದರಾಜ ನಾವು ಇರುವಾಗ ಹೊರಗೆ ಬಂದು ದರ್ಶನ ಕೊಟ್ಟಿದ್ದಾನೆ. ೪೮ ದಿನಗಳ ಕಾಲ ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥರ ಸನ್ನಿಧಿಯಲ್ಲಿ ದರ್ಶನ ನಾವೆಲ್ಲರೂ ಮಾಡಿದ್ದೇವೆ. ೪೮ ದಿನಗಳ ಕಾಲ ದರ್ಶನ ಕೊಟ್ಟು ಅತ್ತಿವರದರಾಜ ಅನಂತಸರೋವರದಲ್ಲಿ ಅನಂತಶಾಯಿಯಾಗಿದ್ದಾನೆ.
ಇನ್ನು ಮುಂದಿನ ದರ್ಶನ ೨೦೫೯ ನೇ ಇಸ್ವಿಯಲ್ಲಿ ಆಗಲಿಕ್ಕಿದೆ. ಆವಾಗ ನಾವೆಲ್ಲರೂ ಇದ್ದರೆ ಮತ್ತೊಮ್ಮೆ ಅತ್ತಿವರದರಾಜನ ದರ್ಶನ ಮಾಡಿ ಕೃತಾರ್ಥರಾಗೋಣ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
******
ಸತ್ಯನಾರಾಯಣ ಕಥೆಯ ಉಗಮ ಕ್ಷೇತ್ರವಾಗಿರುವ ‘ನೈಮಿಷಾರಣ್ಯ’ ಈ ತೀರ್ಥಕ್ಷೇತ್ರದ ಮಹಾತ್ಮೆ .
🌹 ಸತ್ಯನಾರಾಯಣನ ಕಥೆಯನ್ನು ಶ್ರೀಮಹಾವಿಷ್ಣುವು ನಾರದ ಮಹರ್ಷಿಗಳಿಗೆ ಹೇಳಿದ್ದರು. ದ್ವಾಪರಯುಗದ ಕೊನೆಯಲ್ಲಿ ಶೌನಕಾದಿ ಎಲ್ಲ ಋಷಿ-ಮುನಿಗಳು ‘ಮುಂಬರುವ ಭೀಕರ ಕಲಿಯುಗದಲ್ಲಿ ಮನುಷ್ಯನಿಗೆ ಉಪಾಯವೆಂದು ಯಾವ ವ್ರತ ಮಾಡಬೇಕು ?’ ಎಂದು ಸೂತಋಷಿಗಳಿಗೆ ಕೇಳುತ್ತಾರೆ. ಆಗ ಸೂತಋಷಿಗಳು ‘ನೈಮಿಷಾರಣ್ಯ’ ಕ್ಷೇತ್ರದಲ್ಲಿ ‘ಸತ್ಯನಾರಾಯಣನ ವ್ರತ’ವನ್ನು ಹೇಳಿ ಅದರ ಕಥೆಯನ್ನೂ ಹೇಳುತ್ತಾರೆ. ಇಂತಹ ಪವಿತ್ರ ನೈಮಿಷಾರಣ್ಯ ಕ್ಷೇತ್ರದ ಮಹಾತ್ಮೆಯನ್ನು ಮುಂದೆ ಕೊಡಲಾಗಿದೆ.
🌹ಯಾವ ಸ್ಥಳದಲ್ಲಿ ಬ್ರಹ್ಮದೇವನ ಚಕ್ರವು ಅಪ್ಪಳಿಸಿ ನೀರು ಚಿಮ್ಮಿತೋ, ಅದೇ ಈ ಚಕ್ರತೀರ್ಥ
ಸ್ಥಳ ಮತ್ತು ಮಹತ್ವ
ನೈಮಿಷಾರಣ್ಯವು ಉತ್ತರಪ್ರದೇಶ ರಾಜ್ಯದ ರಾಜಧಾನಿಯಾದ ಲಕ್ಷ್ಮಣಪುರಿ (ಲಖನೌ)ಯಿಂದ ೯೦ ಕಿ.ಮೀ. ದೂರದಲ್ಲಿರುವ ಸೀತಾಪೂರ ಜಲ್ಲೆಯಲ್ಲಿದೆ. ಅದು ಗಂಗಾನದಿಯ ಉಪನದಿಯಾಗಿರುವ ಗೋಮತಿ ನದಿಯ ಎಡ ತೀರದಲ್ಲಿದೆ. ನೈಮಿಷಾರಣ್ಯಕ್ಕೆ ‘ನೀಮಸಾರ’ ಅಥವಾ ‘ನೈಮಿಷಾ’ ಎಂದೂ ಕರೆಯುತ್ತಾರೆ. ನೈಮಿಷಾರಣ್ಯವು ಸತ್ಯಯುಗದಲ್ಲಿನ ತೀರ್ಥಕ್ಷೇತ್ರವಾಗಿದ್ದು ಪೃಥ್ವಿಯ ಮೊಟ್ಟಮೊದಲ ತೀರ್ಥಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ನಿತ್ಯ ೩೩ ಕೋಟಿ ದೇವತೆಗಳ ಮತ್ತು ೮೮ ಸಾವಿರ ಋಷಿ-ಮುನಿಗಳ ವಾಸವಿರುತ್ತದೆ. ಆದ್ದರಿಂದ ಇದು ಎಲ್ಲಕ್ಕಿಂತ ಪವಿತ್ರ ಸ್ಥಾನವೆಂದು ತಿಳಿಯಲಾಗಿದೆ. ಈ ಸ್ಥಳದಲ್ಲಿ ಮಾಡಿದ ಪ್ರತಿಯೊಂದು ಕರ್ಮಗಳು ಫಲಪ್ರದವಾಗುತ್ತವೆ.
🌹 ‘ನೈಮಿಷಾರಣ್ಯ’ ಹೆಸರಿನ ಇತಿಹಾಸ
ನೈಮಿಷಾರಣ್ಯಕ್ಕೆ ‘ನೇಮಿಷಾರಣ್ಯ’, ಎಂದೂ ಕರೆಯುತ್ತಾರೆ. ‘ನೇಮಿ’ ಅಂದರೆ ಚಕ್ರದ (ಅಂಚು) ತುದಿ. ಈ ಸ್ಥಳದಲ್ಲಿ ಬ್ರಹ್ಮನ ‘ಮನೋಮಯ’ ಚಕ್ರವು ಅಪ್ಪಳಿಸಿತ್ತು. ಪೃಥ್ವಿಯ ಮೇಲೆ ಯಾವ ಸ್ಥಳದಲ್ಲಿ ಈ ಚಕ್ರವು ಬಿದ್ದಿತೋ, ಆ ಸ್ಥಳವೆಂದರೆ ‘ನೈಮಿಷಾರಣ್ಯ !’ ಯಾವ ಸ್ಥಳದಲ್ಲಿ ಚಕ್ರದ ತುದಿ ಭೂಮಿಯ ಮೇಲೆ ಅಪ್ಪಳಿಸಿತು, ಆ ಸ್ಥಳವು ‘ಚಕ್ರತೀರ್ಥ (ಚಕ್ರದ ಆಕಾರದಲ್ಲಿರುವ ತೀರ್ಥಕ್ಷೇತ್ರ)’ ಎಂಬ ಹೆಸರಿನಿಂದ ಮತ್ತು ಅದರ ಸುತ್ತಮುತ್ತಲಿರುವ ಅರಣ್ಯವು ‘ನೈಮಿಷಾರಣ್ಯ’ ವೆಂದು ಪ್ರಸಿದ್ಧವಾಯಿತು.
ನೈಮಿಷಾರಣ್ಯ ಕ್ಷೇತ್ರದಲ್ಲಾದ ಚಕ್ರತೀರ್ಥದ ನಿರ್ಮಾಣ : ವಿಶ್ವದ ಉತ್ಪತ್ತಿಯಾದನಂತರ ಎಲ್ಲ ಋಷಿಮುನಿಗಳು ಬ್ರಹ್ಮದೇವನ ಬಳಿಗೆ ಹೋದರು ಮತ್ತು ಅವರು ‘ಎಲ್ಲ ಪಾಪಗಳಿಂದ ಮುಕ್ತರಾಗುವುದು, ನಿರಂತರ ಸಾಧನೆ ಮಾಡುವುದು, ಜ್ಞಾನಪ್ರಾಪ್ತಿ ಮಾಡಿಕೊಳ್ಳುವುದು ಇವುಗಳಿಗಾಗಿ, ಹಾಗೆಯೇ ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ವಿಧಿ ಮಾಡಲು ಯೋಗ್ಯ ಸ್ಥಳ ಯಾವುದಿದೆ ?’ ಅದನ್ನು ಹೇಳಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವನು ‘ನಾನು ‘ಮನೋಮಯ’ ಚಕ್ರವನ್ನು ಕಳುಹಿಸುತ್ತೇನೆ. ಅದು ನಿಮ್ಮನ್ನು ಸರಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗುವುದು. ಯಾವ ಸ್ಥಳದಲ್ಲಿ ಅದು ಬೀಳುತ್ತದೋ, ಆ ಸ್ಥಳ ನಿಮ್ಮ ಪವಿತ್ರ ಸ್ಥಳದ ಕೇಂದ್ರಬಿಂದು ಆಗುವುದು’, ಎಂದು ಹೇಳಿ ಅವರು ಚಕ್ರವನ್ನು ಬಿಟ್ಟರು. ಎಲ್ಲ ಋಷಿಮುನಿಗಳು ಆ ಚಕ್ರದ ಹಿಂದೆ ಹೋದರು. ಸಂಪೂರ್ಣ ಜಗತ್ತಿನ ಸುತ್ತಲೂ ಅನೇಕ ಪ್ರದಕ್ಷಿಣೆ ಹಾಕಿದ ನಂತರ ಕೊನೆಗೆ ಆ ಚಕ್ರವು ಒಂದು ನಿರ್ಜನ ಸ್ಥಳದಲ್ಲಿ ನಿಂತಿತು. ಆ ಶಕ್ತಿಶಾಲಿಯಾದ ಚಕ್ರವು ಮಿಂಚಿನ ವೇಗದಲ್ಲಿ ಪೃಥ್ವಿಯ ಮೇಲೆ ಅಪ್ಪಳಿಸಿದ್ದರಿಂದ ಪಾತಾಳಲೋಕವು ವಿಭಜಿತವಾಯಿತು ಮತ್ತು ಅದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಪುಟಿದೆದ್ದಿತು. ಆಗ ಬ್ರಹ್ಮದೇವನು ಲಲಿತಾದೇವಿಗೆ ಆ ಮನೋಮಯಚಕ್ರವನ್ನು ನಿಲ್ಲಿಸಲು ಹೇಳಿದನು. ಲಲಿತಾದೇವಿಯು ತನ್ನ ದಿವ್ಯ ಶಕ್ತಿಯಿಂದ ಆ ಚಕ್ರವನ್ನು ನಿಲ್ಲಿಸಿದಳು ಮತ್ತು ಅವಳು ಆ ಸ್ಥಳದಲ್ಲಿ ಲಿಂಗಧಾರಿಣಿಯ ರೂಪದಲ್ಲಿ ಸ್ಥಿರವಾದಳು. ಅಂದಿನಿಂದ ಬ್ರಹ್ಮದೇವನ ‘ಮನೋಮಯ’ ಚಕ್ರ ಬಿದ್ದಿರುವ ಸ್ಥಳಕ್ಕೆ ಮತ್ತು ಅದರ ಸುತ್ತಮುತ್ತಲಿನ ಅರಣ್ಯಕ್ಕೆ ‘ನೇಮಿಷಾರಣ್ಯ’ ಅಥವಾ ‘ನೈಮಿಷಾರಣ್ಯ’ ಎಂದು ಗುರುತಿಸತೊಡಗಿದರು. ಯಾವ ಸ್ಥಳದಲ್ಲಿ ಆ ಚಕ್ರವು ಪೃಥ್ವಿಯ ಮೇಲೆ ಅಪ್ಪಳಿಸಿತೋ ಮತ್ತು ಅಲ್ಲಿಂದ ನೀರು ಚಿಮ್ಮಿತೋ, ಅದೇ ‘ಚಕ್ರತೀರ್ಥ’ವಾಯಿತು. ಈ ಸ್ಥಾನವು ‘ಜಗತ್ತಿನ ಕೇಂದ್ರವಾಗಿದೆ’, ಎಂದು ಹೇಳುತ್ತಾರೆ. ನಂತರ ಅದು ಎಲ್ಲ ಯುಗಗಳಲ್ಲಿನ ಎಲ್ಲ ಸಂತರ ಮತ್ತು ಋಷಿಮುನಿಗಳ ಧ್ಯಾನಧಾರಣೆಯ ಕೇಂದ್ರಸ್ಥಾನವಾಯಿತು.
🌹 ನೈಮಿಷಾರಣ್ಯ’ದೇವಸ್ಥಾನದ ಮಹಾತ್ಮೆ
ನೈಮಿಷಾರಣ್ಯದಲ್ಲಿ ವ್ಯಾಸ ಮಹರ್ಷಿಗಳು ೪ ವೇದ, ೬ ಶಾಸ್ತ್ರಗಳು ಮತ್ತು ೧೮ ಪುರಾಣಗಳನ್ನು ಬರೆದರು. ಅಲ್ಲಿಯೇ ಅವರು ತಮ್ಮ ಪ್ರಿಯ ಶಿಷ್ಯರಾದ ಜೈಮಿನಿ ಮಹರ್ಷಿಗೆ ಸಾಮವೇದವನ್ನು ಕಲಿಸಿದರು.
🌹 ಶ್ರೀ ಸತ್ಯನಾರಾಯಣ ವ್ರತದ ಆರಂಭ ನೈಮಿಷಾರಣ್ಯದಲ್ಲಿಯೇ ಆಯಿತು.
ಇದೊಂದು ಶಕ್ತಿಪೀಠವಿದ್ದು ಇಲ್ಲಿ ನೈಮಿಷಾರಣ್ಯದ ಪ್ರಮುಖ ದೇವತೆಯೆಂದು ಶ್ರೀ ಲಲಿತಾದೇವಿಯ ಪೂಜೆ ಮಾಡಲಾಗುತ್ತದೆ. ಸೋಮವಾರದಂದು ಬರುವ ಅಮವಾಸ್ಯೆ ಅಥವಾ ಹುಣ್ಣಿಮೆಯ ತಿಥಿಯಂದು ಚಕ್ರತೀರ್ಥದಲ್ಲಿ ಸ್ನಾನ ಮಾಡಿ ಶ್ರೀ ಲಲಿತಾದೇವಿಗೆ ಅರ್ಪಣೆ ನೀಡಿದರೆ (ಅಥವಾ ಹವನ ಮಾಡಿದರೆ) ವ್ಯಕ್ತಿಯಿಂದ ಜೀವನವಿಡಿ ಘಟಿಸಿದ ಎಲ್ಲ ಪಾಪಕರ್ಮಗಳಿಂದ ಅವನಿಗೆ ಮುಕ್ತಿ ಸಿಗುತ್ತದೆ .
Naimisha Aranya
This is "Chakra Theertha" in "Naimisha Aranya" in U.P. !! According to Hindu mythology, this place was created by Lord Brahma !! If you stand inside the water, you are pushed by water in a circular current !!
******
ರಾಮೇಶ್ವರ
A must visit placeWonderful video
*******
ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯ ತಿರುವನಂತಪುರ
" ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯ
ತಿರುವನಂತಪುರ "
" ತಿರುವನಂತಪುರ " - ಮಲೆಯಾಳಿಯಲ್ಲಿ
" ಅನಂತ ದೇವನ" ಪಟ್ಟಣ.
ತಿರುವನಂತಪುರ ಇದು ಕೇರಳ ರಾಜ್ಯದಲ್ಲಿದೆ.
ದೇಶದ ಅತ್ಯಂತ ಪ್ರಸಿದ್ಧ ಮತ್ತು ಸಿರಿವಂತ
ದೇವಾಲಯ " ಅನಂತ ಪದ್ಮನಾಭ ದೇವಸ್ಥಾನ "
ಇಲ್ಲಿದೆ.
ಇದರ ಮೂಲ ದೇವಸ್ಥಾನ ಕಾಸರಗೋಡಿನ
ಅನಂತಪುರದಲ್ಲಿದೆ.
ಮಹಾವಿಷ್ಣುವಿನ 108 ಪ್ರಮುಖ ಪುಣ್ಯ
ಕ್ಷೇತ್ರಗಳಲ್ಲಿ ಇದು ಒಂದು. ಇದು ವಿಷ್ಣು
ದೇವಾಲಯ." ದಿವ್ಯ ದೇಸಂ " ನಲ್ಲಿ ಉಲ್ಲೇಖವಿದೆ.
ಪರುಶರಾಮನು ತಾರನನಲ್ಲೂರ ನಂಬೂದರಿ
ಪಾದರಿಗೆ ಈ ದೇವಾಲಯ ದ ನೀಲನಕ್ಷೆ
ಹಾಗು ತಂತ್ರಗಾರಿಕೆ ಹೇಳಿದ್ದರೆಂದು ಬ್ರಹ್ಮಾನಂದ
ಪುರಾಣದಲ್ಲಿದೆ.
ದಿವಾಕರ ಮುನಿ ವಿಷ್ಣುವಿನ ಮಹಾಭಕ್ತ.
ಆತನ ಕೋರಿಕೆಯಂತೆ ಮಹಾವಿಷ್ಣು
" ಅನಂತ ಕಾಡು " ವಿನಲ್ಲಿ ಬಂದು ನೆಲೆಸುತ್ತಾನೆ.
" ಇಲಪ್ಪ " ಗಿಡ ಆದಿಶೇಷನ ಐದು ಹೆಡೆಯ
ಶಯನದ ಮೇಲೆ ಮಲಗಿರುವ ಮಹಾವಿಷ್ಣು
ಭಂಗಿಯ - " ಅನಂತ ಪದ್ಮನಾಭನ " ಮಹಾ
ದರ್ಶನ ಭಾಗ್ಯ ನಯನಗಳು ವೀಕ್ಷಿಸುವದೇ
ಪರಮಾನಂದ.
ಸಕಲ ಪಾಪಗಳು ನಾಶವಾಗಿ , ಸರ್ವ ಇಷ್ಟಾರ್ಥ
ಸಿದ್ಧಿಯಾಗುವವು - ಎಂಬುದು ಭಕ್ತರ
ಅಚಲವಾದ ನಂಬಿಕೆ.
" ಶ್ರೀ ಅನಂತಸ್ವಾಮಿ ನಾಮಾವಳಿ "
ಓಂ ಕೃಷ್ಣಾಯ ನಮಃ
ಓಂ ಕಮಲ ನಾಥಾಯ ನಮಃ
ಓಂ ವಾಸುದೇವಾಯ ನಮಃ
ಓಂ ಸನಾತನಾಯ ನಮಃ
ಓಂ ಹರಿಯೇ ನಮಃ
ಓಂಶ್ರೀ ಶಾಯ ನಮಃ
ಓಂ ಗೋವಿಂದಾಯ ನಮಃ
ಓಂಅನಂತಾಯ ನಮಃ
ಓಂ ಯೋಗಿನೇ ನಮಃ
ಓಂಜನಾರ್ಧನಾಯ ನಮಃ
ಓಂ ಜಗನ್ನಾಥಾಯ ನಮಃ
----'-------××× -----‐--
ಓಂ ಶ್ರೀ ಕೃಷ್ಣಾರ್ಪಣಮಸ್ತು
********
ಕಂಚಿಯ ಬಂಗಾರದ ಹಲ್ಲಿಯ ರಹಸ್ಯ
💐ಈ ಬಂಗಾರದ ಹಲ್ಲಿಯನ್ನು ಮುಟ್ಟಿ ನಮಸ್ಕರಿಸಿದರೆ ಸಾಕು ಮೈಮೇಲೆ ಹಲ್ಲಿ ಬಿದ್ದ ದೋಷಗಳು ನಿವಾರಣೆಯಾಗುತ್ತವೆ💐
👉ಪುಣ್ಯಕ್ಷೇತ್ರಗಳಲ್ಲಿ ಒಂದು ಕಾಂಚಿಪುರಂ. ಕಂಚಿಯ ಬಗ್ಗೆ ಕಥೆಯನ್ನು ಪುಂಖಾನುಪುಂಖವಾಗಿ ನಾವೆಲ್ಲರೂ ಕೇಳಿದ್ದೇವೆ.ಹಾಗೂ ಎಲ್ಲರೂ ಕೇಳಿರುತ್ತಾರೆ.ಅವು ಎಲ್ಲವು ತಿಳಿದಿರುವಂತಹವು.ಇನ್ನು ಈ ಕಥೆಗಳನ್ನು ಪಕ್ಕಕ್ಕಿಟ್ಟರೆ , ಮನೆಗಳಲ್ಲಿ ಓಡಾಡುವ ಹಲ್ಲಿಗಳು ಯಾವಾಗ್ಲಾದ್ರೂ ಮೈಮೇಲೆ ಬಿದ್ದಾಗ ಯಾವುದೇ ಭಾಗದಲ್ಲಿ ಬಿದ್ದರೂ ನಾವು ತಕ್ಷಣ ಹೋಗಿ ಬಂಗಾರದ ಹಲ್ಲಿಯನ್ನು ಮುಟ್ಟಿ ನಮಸ್ಕಾರ ಮಾಡಿ ಬಂದವರ ಕಾಲಿಗೆ ಬಿದ್ದು ನಮಸ್ಕರಿಸುವುದು ರೂಡಿಯಾದ ಒಂದು ಕೆಲಸವಾಗಿದೆ.
👉ಅದು ಯಾಕೆ ? ಮೈಮೇಲೆ ಹಲ್ಲಿ ಬಿದ್ದರೆ ನಾವು ಅವರಿಗೆ ನಮಸ್ಕಾರ ಮಾಡಬೇಕು ? ಇನ್ನು ಬಂಗಾರದ ಹಲ್ಲಿಯ ಗುಡಿಯಲ್ಲಿ ನೂರಾರು ಹಲ್ಲಿಗಳು ಯಾಕೆ ಓಡಾಡತ್ತವೆ? ಎಂದು ಹಲವಾರು ಪ್ರಶ್ನೆಗಳು ಹಲವಾರು ಜನರಿಗೆ ಕಾಡೋದು ಸಹಜವೇ.
ಇನ್ನು ಆ ರಹಸ್ಯಗಳ ಹಿಂದಿನ ಸತ್ಯಾಂಶವನ್ನು ತಿಳಿಯೋಣ.
🌻ಚರಿತ್ರೆಗಳ ಕಥೆ🌻
👉 ಒಬ್ಬ ಋಷಿಕುಮಾರನು ದೇವತಾರ್ಚನೆಗಾಗಿ ಗಂಗಾಜಲ ತರಲು ಹೇಳಿದ್ದನಂತೆ.ಮಗನು ತಂದ ಗಂಗಾಜಲದಲ್ಲಿ ಹಲ್ಲಿ ಇರುವುದನ್ನು ನೋಡಿದ ಋಷಿಯು ಹಾಗೆಯೆ ತಂದಿದ್ದನ್ನು ಕಂಡು ಕೋಪಿಷ್ಟನಾದ ಮುನಿಯು ಅವನಿಗೆ ಹಲ್ಲಿಯಾಗುವಂತೆ ಶಾಪವನ್ನು ನೀಡುತ್ತಾನೆ.ಮೊದಲಿಗೆ ಕೋಪಾದ್ರಿಕ್ತನಾದ ಮುನಿಯ ಶಾಪದಿಂದ ಮಗನು ಹಲ್ಲಿಯ ರೂಪವನ್ನು ತಾಳುತ್ತಾನೆ.
👉ತದನಂತರ ಮಗನಲ್ಲಿ ದೋಷವೇನು ಇಲ್ಲವೆಂದು ತಿಳಿದ ಋಷಿಯು ಕಂಚಿಯಲ್ಲಿಯೇ ಬಂಗಾರದ ಹಲ್ಲಿಯಾಗಿ ಸರ್ವರಿಂದಲೂ ಪೂಜಿಸುವಂತವನಾಗು ಎಂದು ವರವನ್ನು ನೀಡುತ್ತಾನೆ. ಹೀಗೆ ಆ ಮಗನು ಅಂದಿನಿಂದ ಅಲ್ಲಿ ಬಂಗಾರದ ಹಲ್ಲಿಯಾದನೆಂದು ಹೇಳುತ್ತವೆ ಪುರಾಣಗಳು.ಅದನ್ನು ಮುಟ್ಟಿದರೆ ಸಾಕು ಮನೆಯಲ್ಲಿ ಮೈಮೇಲೆ ಎಲ್ಲೇ ಹಲ್ಲಿ ಬಿದ್ದರೂ ಆ ದೋಷ ತೊಲಗಿ ಹೋಗುತ್ತವೆ ಎಂದು ಅಲ್ಲಿನ ಪುರಾಣಕಥೆಗಳ ಪ್ರಕಾರ ಹೇಳಿರುವಂತಹ ಸುದ್ದಿಯಾಗಿದೆ.
👉ಆ ಋಷಿ ತನ್ನ ಮಗನಿಗೆ ವರವನ್ನು ನೀಡಿದ್ದಾನೆ ಇದನ್ನು ಸಾಕಷ್ಟು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಭಾರತ ದೇಶದ ನಾಲ್ಕು ಮೂಲೆಗಳಿಂದ ಕಂಚಿಯಲ್ಲಿರುವ ಬೆಳ್ಳಿ ಹಾಗೂ ಬಂಗಾರದ ಹಲ್ಲಿಗಳನ್ನು ಮುಟ್ಟಿ ನಮಸ್ಕರಿಸುವುದು , ಹಲ್ಲಿ ಬಿದ್ದ ದೋಷ ಪರಿಹರಿಸಿಕೊಳ್ಳುವುದಕ್ಕಾಗಿ ಭಕ್ತಾದಿಗಳು ಬಂದು ದರ್ಶನ ಮಾಡಿಕೊಂಡು ಹೋಗುತ್ತಾರೆ.
👉ಹಾಗೆಯೇ ಈ ದೇವಾಲಯದ ಹೊರಾಂಗಣದಲ್ಲಿ ಆನಂದ ಸರೋವರ ಹಾಗೂ ಬಂಗಾರ ತಾವರ್ ತಟಾಕ್ ಎಂಬ ಪ್ರದೇಶಗಳು ಇವೆ.ಅಂದರೆ ಒಂದು ಚಿಕ್ಕ ಪುಷ್ಕರಣಿ.ಆನಂದ ಸರೋವರದ ಮಧ್ಯದಲ್ಲಿ ಇರುವ ಮಂಟಪದಲ್ಲಿ ಜಲಾಂತರ ಭಾಗದಲ್ಲಿ ಅತ್ತಿ ದೇವತಾಮೂರ್ತಿಗಳು ಇವೆಯಂತೆ. ಅವು ಪ್ರತಿ ನಲವತ್ತು ವರ್ಷಗಳಿಗೊಮ್ಮೆ ಪೂಜಾಕಾರ್ಯಾದಿಗಳನ್ನು ಮುಗಿಸಿ ದರ್ಶನಾರ್ಥವಾಗಿ ಪ್ರತಿಷ್ಠಾಪಿಸಲಾಗುತ್ತದೆ.
🌷ದೇವಾಲಯ ಇತಿಹಾಸ🌷
👉 ಹೀಗೆ ಅದು 1979 ರಲ್ಲಿ ಶ್ರೀವರದರಾಜ ಪೆರುಮಾಳ್ ಸ್ವಾಮಿಯನ್ನು ಪುಷ್ಕರಿಣಿಯಿಂದ ಹೊರತೆಗೆದು ಪೂಜಾಕೈಂಕರ್ಯಗಳನ್ನು ಮಾಡಿ ನಂತರ ಭಕ್ತಾಧಿಗಳಿಗೆ ದರ್ಶನ ಭಾಗ್ಯ ಲಭಿಸಿತ್ತಂತೆ.
ಮತ್ತೆ ಈಗ 2019 ರಲ್ಲಿ ಜೂನ್ ತಿಂಗಳಲ್ಲಿ ಅತ್ತಿ ಶ್ರೀವರದರಾಜ ಪೆರುಮಾಳ್ ಅವರ ದರ್ಶನ ಭಾಗ್ಯ ಲಭಿಸಿದೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇನ್ನು ಒಂದು ತಿಂಗಳ ಕಾಲ ದರ್ಶನ ಭಾಗ್ಯ ಭಕ್ತಾಧಿಗಳಿಗೆ ಲಭಿಸಲಿದೆಯಂತೆ.
👉ಇನ್ನು ಈ ದೇವಾಲಯ ಪ್ರಾಕಾರವನ್ನು ನೋಡಿದ್ರೆ 11ನೇ ಶತಮಾನದಲ್ಲಿ ಉತ್ತುಂಗಚೋಳ, ವಿಕ್ರಮಚೋಳ ಮುಂದೆ ವಿಜಯನಗರದ ರಾಜರುಗಳಿಂದ ನಿರ್ಮಿಸಲ್ಟಟ್ಟವು ಎಂದು ಇತಿಹಾಸ ಸಾರುತ್ತಿದೆ.ಅಷ್ಟೆ ಅಲ್ಲ ಈ ದೇವಾಲಯ ಪುನರುತ್ಥಾನ ಸಾಕಷ್ಟು ಬಾರಿ ಮಾಡಲಾಗಿದೆ ಎಂದೂ ಸಹ ದಾಖಲಿಸಲಾಗಿದೆ.ಇನ್ನು ಈ ದೇವಾಲಯದಲ್ಲಿ ಸಾವಿರ ಕಂಬಗಳ ಮಂಟಪವೊಂದಿದೆ.
👉ಇತಿಹಾಸದ ಪ್ರಕಾರ ಇಲ್ಲಿ ವರದರಾಜ ಸ್ವಾಮಿ ಕೃತಯುಗದಲ್ಲಿ ಬ್ರಹ್ಮನಾಗಿ , ತ್ರೇತಾಯುಗದಲ್ಲಿ ಗಜೇಂದ್ರನಾಗಿ ಮತ್ತು ದ್ವಾಪರಯುಗದಲ್ಲಿ ಬೃಹಸ್ಪತಿಯಾಗಿ , ಕಲಿಯುಗದಲ್ಲಿ ಅನಂತಶೇಷನಾಗಿ ಪೂಜೆಯನ್ನು ಮಾಡಿದ್ದನೆಂದು ಹೇಳಲಾಗುತ್ತದೆ.
ಹೀಗೆ ಕಾಂಚಿಪುರಂ ಪುಣ್ಯಕ್ಷೇತ್ರದಲ್ಲಿನ ಬಂಗಾರದ ಹಲ್ಲಿಯ ಮಹಾತ್ಮೆ ತಿಳಿದರೆ ಸಾಕು ನಮಗೆ ಹಲ್ಲಿ ಬಿದ್ದ ದೋಷ ತೊಲಗಿ ಹೋಗುತ್ತವೆ ಎಂದು ಪುರಾಣಗಳು ಸಾರುತ್ತವೆ.
*******
ಆಂಧ್ರದ ಸುರುಟಪಲ್ಲಿ ಎಂಬಲ್ಲಿರುವ ಪಲ್ಲಿಕೊಂಡೇಶ್ವರ ದೇವಸ್ಥಾನದಲ್ಲಿರುವ,
ಪಾರ್ವತಿಯ ತೊಡೆಯ ಮೇಲೆ ಮಲಗಿ,ವಿಶ್ರಾಂತಿ ಪಡೆಯುತ್ತಿರುವ ಭಂಗಿಯ ಈಶ್ವರನ ಏಕಮಾತ್ರ ಮೂರ್ತಿ.
ಮತ್ತೆಲ್ಲಿಯೂ ಇಂತಹ ಮೂರ್ತಿಗಳಿಲ್ಲ.
ಸಮುದ್ರ ಮಥನ ಕಾಲದಲ್ಲಿ ಉತ್ಪತ್ತಿಯಾದ ಘೋರವಿಷ ಹಾಲಾಹಲವನ್ನು ಕುಡಿದ ಈಶ್ವರನು ವಿಷದ ತೀಕ್ಷ್ಣತೆ ಶಮನವಾಗಲೆಂದು ಪಾರ್ವತಿಯ ತೊಡೆಯ ಮೇಲೆ ಮಲಗಿ ಸುಧಾರಿಸಿಕೊಳ್ಳುತ್ತಿದ್ದಾನೆಂದು ಸ್ಥಳೀಯರು ಹೇಳುತ್ತಾರೆ.
*****
ಕುರುಕ್ಷೇತ್ರ ಸ್ಥಳದ ಮಹತ್ವ ತಿಳಿಸಿದ ವ್ಯಾಸ - ಯುದ್ಧಕ್ಕೂ ಮುನ್ನ ವ್ಯಾಸರು ಕುರುಕ್ಷೇತ್ರ ಸ್ಥಳದ ಮಹತ್ವವನ್ನು
ಪಾಂಡವರಿಗೆ, ಕೌರವರಿಗೆ, ಯುದ್ಧ ಸ್ಥಳದಲ್ಲಿ ಸನ್ನದ್ಧರಾಗಿ ನಿಂತಿದ್ದ ರಾಜಧಿರಾಜರುಗಳಿಗೆ, ತಿಳಿಸಲು ಮುಂದಾಗುತ್ತಾರೆ. ವ್ಯಾಸರು ಹೇಳಿದ ಬಳಿಕ ಭಗವದ್ಗೀತೆಯನ್ನು ಭೋದಿಸಿದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಕುರುಕ್ಷೇತ್ರ ಈ ಸ್ಥಳ ಎಷ್ಟು ಪರಮ ಪವಿತ್ರವೆಂದು ಹೇಳುತ್ತಲೇ ತನ್ನ ಭೋಧನೆ ಆರಂಭಿಸುತ್ತಾನೆ ಕೌರವ ಪಾಂಡವರಿಗೆ ಹಿ೦ದಿನ ಹನ್ನೊಂದನೆಯ ತಲೆಮಾರಿನವನಾದ ರಾಜನ ಹೆಸರು ಕುರು ರಾಜ ಈ ಕುರುರಾಜನು ಸೂರ್ಯದೇವನ ಮಗ ತಪತೀ ದೇವಿಗೂ ಚಂದ್ರವಂಶ ಸಾರ್ವಭೌಮನಾದ ಸಂವರಣನಿಗೂ ಹುಟ್ಟಿದವನು.
ಈ ಕುರುರಾಜನು ಸತ್ರಯಾಗ ನಿರ್ವಹಣೆಗಾಗಿ ನೂರು ಮೈಲುಗಳ ಉದ್ದ ಮೂವತ್ತು ಮೈಲಿಗಳು ಇರುವ ಸ್ಥಳವನ್ನು ನಿರ್ಣಹಿಸಿ ಕುರುರಾಜನು ಬಂಗಾರದ ನೇಗಿಲು ಹಿಡಿದು ಭೂಮಿಯನ್ನು ಉಳುತ್ತಾನೆ. "ಸತ್ರಯಾಗಕ್ಕಾಗಿ ಕುರು ರಾಜನು ಮಾಡುವ ಈ ಮಹೋನ್ನತ ಕೃಷಿಯನ್ನು ನೋಡಿ ದೇವತೆಗಳು ಆಶ್ಚರ್ಯಚಕಿತರಾದರು.
`ಕುರುರಾಜ ದೀಕ್ಷೆಗೆ ಮೆಚ್ಚಿದ ದೇವಾನು ದೇವತೆಗಳು ಆ ಸ್ಥಳಕ್ಕೊಂದು ದಿವ್ಯ ಮಹತ್ವವನ್ನು ಕಲ್ಪಿಸಲು ನಿಶ್ಚಯಿಸಿ" ಯಾರೇ ಮಾನವರು. ಈ. ಸ್ಥಳದಲ್ಲಿ ಜೀವ ಬಿಟ್ಟರೆ", ಅವರಿಗೆ ಸ್ವರ್ಗಲೋಕ ಪ್ರಾಪ್ತಿ ಆಗುವಂತೆ ವರವನ್ನು ನೀಡುತ್ತಾರೆ
ಈ ಭೂಮಿಯಲ್ಲಿ ಕುರುರಾಜನು ನೂರು ವರ್ಷಗಳ ಕಾಲ ದೇವರ್ಷಿ ಬ್ರಹ್ಮರ್ಷಿಗಳಿಂದ ಸತ್ರಯಾಗವನ್ನು ಮಾಡಿಸಿದ ನಿತ್ಯ ಧಾನವನ್ನು
ಮಾಡಿಸಿದ 'ಶಾಂಡಿಲ್ಯಾದಿ ಮಹಾ ಮುನಿಗಳು ಇಲ್ಲಿಯೇ ಯೋಗ
ಸಿದ್ದಿಯನ್ನು ಪಡೆದಿದ್ದರು. ಶ್ರೀ ಮಹಾ ವಿಷ್ಣು ಕೆಲವು ವರ್ಷಗಳು
ಯೋಗ ಸಿದ್ದಿಗಾಗಿ, ತಪಸ್ಸನ್ನು ಮಾಡಿದ ಹಸ್ತಿನವಾತಿಯ ನೂರು
ಮೈಲಿನ ದೂರದಲ್ಲಿ ಈ ಕುರುಕ್ಷೇತ್ರವೆಂಬ ಸ್ಥಳವಿದೆ ಈ ಪುಣ್ಯ ಸ್ಥಳಕ್ಕೆ ಒಂದು ಕಡೆ ಸರಸ್ವತಿ ನದಿ. ಮತ್ತೊಂದು ಕಡೆ ದೃಷದ್ವತಿ ನದಿಗಳಿವೆ.
ಜಮದಗ್ನಿ ಮಹರ್ಷಿಗಳ ಮಗನಾದ ಪರಶು ರಾಮನು ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯ ಸಂಹಾರ ಮಾಡಿದ ನಂತರ ಈ ಕುರುಕ್ಷೇತ್ರದಲ್ಲಿ ಐದು ಕೆರೆಗಳನು,ನಿರ್ಮಿಸಿ, ಪಿತೃಪಿ೦ಡ ಪ್ರದಾನ ಮಾಡಿದ್ದಾನೆ. ಈ ಐದು ಕೆರೆಗಳನ್ನು “ಶಮಂತ' ಪಂಚಕ” ವೆ೦ದು ಕರೆಯುತ್ತಾರೆ.----
ಕುರುಕ್ಷೇತ್ರದಲ್ಲಿ ಸತ್ತರೆ ಸ್ವರ್ಗ ಸಿಗುತ್ತದೆಂಬ ಆಸೆಯಿಂದ
ಭೂಲೋಕದಲ್ಲಿರುವ ಎಲ್ಲಾ ರಾಜರು ಕುರುಕ್ಷೇತ್ರ ಯುದ್ಧಕ್ಕೆ ಬಂದು ನಿ೦ತಿದ್ದಾರೆ.ಕುರುಕ್ಷೇತ್ರ ಯುದ್ಧ ನಡೆಯುವ ಸಮಯಕ್ಕೆ ಭರತ ಖಂಡದಲ್ಲಿ ಐವತ್ತಾರು ರಾಜ್ಯಗಳಿವೆ. ಈ ಭರತಖಂಡವನ್ನೇ ಜಂಬೂದ್ವೀಪವೆನು ತ್ತಾರೆ,
ಜಂಭು ದ್ವೀಪವನ್ನು ಒ೦ಭತ್ತು ಭಾಗಗಳಾಗಿ ವಿಭಜನೆ ಮಾಡಿದ್ದಾರೆ.
ಹಿಮ ವತ್ಪರ್ವಕ್ಕೆ ದಕ್ಷಿಣ ಭಾಗದಲ್ಲಿರುವ ಭೂಮಿಯನ್ನು “ಭರತಪರ್ವ' ಅಥವಾ ಭರತ ಭೂಮಿ ಎನ್ನುತ್ತಾರೆ. ಈ ಭರತ ಭೂಮಿ ಪರಮ "ಪವಿತ್ರಭೂಮಿ. ಸ್ವರ್ಗದ ಲೋಕದ ದೇವತೆಗಳು ; ಇಲ್ಲಿಯೇ ಹುಟ್ಟುವುದಕ್ಕೆ ಇಷ್ಟಪಡುತ್ತಾರೆಅನೇಕ ವಿಧದ ನದಿಗಳು ಅನೇಕ ರೀತಿಯ ಧಾನ್ಯಗಳು, ಅನೇಕ ರೀತಿಯ ಜನರು, ಅನೇಕ ಆಚಾರ ಧರ್ಮಗಳು ಇಲ್ಲಿ ಜೀವಂತವಾಗಿವೆ.
ಇಂದು ಹಿಂದು ಸಂಸ್ಕೃತಿಯಲ್ಲಿ ಪರಮ ಪವಿತ್ರ ಸ್ಥಾನ ಪಡೆದಿದೆ ಭಗವದ್ಗೀತೆ. ಪರಮಾತ್ಮನ ಅಂಶವಾದ ಆತ್ಮವು ಮಾನವ ಶರೀರ ಪಡೆದು ಭೂಮಿಯ ಮೇಲೆ ಬಂದ ಕ್ಷಣದಿಂದಲೆ ಅದರ ಜೀವನ ಚಕ್ರ ಪ್ರಾರಂಭವಾಗುತ್ತದೆ. ಹೀಗೆ ಮಾನವ ಜನ್ಮ ಪಡೆದ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಯಾವ ರೀತಿಯಾಗಿ ನಡೆ ನುಡಿಗಳನ್ನು ಆಚರಿಸುತ್ತ, ಧರ್ಮದಿಂದ ಜೀವನ ನಡೆಸಿ ಮೃತ್ಯು ಮತ್ತು ಜನನ ಚಕ್ರಗಳಿಂದ ಮುಕ್ತಿ ಪಡೆದು ಮತ್ತೆ ಪರಮಾತ್ಮನಲ್ಲಿ ಲೀನವಾಗಬಹುದು ಎಂಬುದನ್ನು ಬಲು ಸೂಕ್ಷ್ಮವಾಗಿ ವಿವರಿಸುತ್ತದೆ ಭಗವದ್ಗೀತೆ__
ಇಂತಹ ಪವಿತ್ರವಾದ ಗ್ರಂಥ ಭಗವದ್ಗೀತೆ ಮೊದಲ ಬಾರಿಗೆ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಶ್ರೀಕೃಷ್ಣನಿಂದ ಅರ್ಜುನನಿಗೆ ಬೋಧಿಸಲ್ಪಟ್ಟಿತು. ಅದೂ ಕೂಡ ಯಾವ ಸಂದರ್ಭದಲ್ಲಿ ಪಾಂಡವರ ಹಾಗೂ ಕೌರವರ ಮಧ್ಯೆ ಘನಘೋರವಾದ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ! ಹೀಗೆ ಕೃಷ್ಣನು ಭಗವದ್ಗೀತೆ ಬೋಧಿಸಿದ ಆ ಮಹಾ ಸ್ಥಳವನ್ನೆ ಕುರುಕ್ಷೇತ್ರ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಹಾಗೂ ಈ ಕ್ಷೇತ್ರವು ಪ್ರಸ್ತುತ ಭಾರತದ ಹರ್ಯಾಣ ರಾಜ್ಯದಲ್ಲಿದೆ.
ಬ್ರಹ್ಮ ಸರೋವರ ಕುರುಕ್ಷೇತ್ರದಲ್ಲಿರುವ ಒಂದು ಪವಿತ್ರ ಕೊಳವಾಗಿದೆ. ಪ್ರತಿ ಅಮವಾಸ್ಯೆಯಂದು ಹಾಗೂ ಸೂರ್ಯ ಗ್ರಹಣದ ಸಂದರ್ಭದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಈ ಕೊಳಕ್ಕೆ ಭೇಟಿ ನೀಡಿ ಸ್ನಾನ ಮಾಡುತ್ತಾರೆ. ಇದರಿಂದ ಎಲ್ಲ ಪಾಗಳು ನಶಿಸಿ ಮುಕ್ತಿ ದೊರೆಯುವುದೆಂಬ ನಂಬಿಕೆಯಿದೆ. ಇದೊಂದು ದೊಡ್ಡ ಕೊಳವಾಗಿದ್ದು ಮಧ್ಯದಲ್ಲಿ ಪುರುಷೋತ್ತಮ ಉದ್ಯಾನವನ್ನು ಹೊಂದಿದೆ. ಅಲ್ಲಿ ರಥದಲ್ಲಿರುವ ಕೃಷ್ಣಾರ್ಜುನರ ಆಕರ್ಷಕ ಕಂಚಿನ ವಿಗ್ರಹವಿದೆ.
ಸನ್ನಿಹಿತ ಸರೋವರ ಕುರುಕ್ಷೇತ್ರದ ಮತ್ತೊಂದು ಧಾರ್ಮಿಕ ಆಕರ್ಷಣೆಯಾಗಿದೆ. ಏಳು ಪವಿತ್ರ ಸರಸ್ವತಿಯರು ಸೇರುವ ಸ್ಥಳ ಇದಾಗಿದೆ ಇಲ್ಲಿನ ನೀರು ಸಾಕಷ್ಟು ಪವಿತ್ರವಾಗಿದ್ದು ಇಲ್ಲಿ ಸ್ನಾನ ಮಾಡಿದರೆ ಪಾಪಗಳಿಂದ ಮುಕ್ತವಾಗಿ ಅಶ್ವಮೇಧ ಯಾಗದಿಂದ ದೊರಕುವ ಪುಣ್ಯಕ್ಕೆ ಸಮನಾದ ಪುಣ್ಯ ದೊರಕುತ್ತದೆಂದು ನಂಬಲಾಗುತ್ತದೆ. ಹೀಗಾಗಿ ಗ್ರಹಣದ ಸಂದರ್ಭದಲ್ಲಿ, ಈ ಕೊಳಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ.
ಬೀಷ್ಮ ಇಚ್ಚಾಮರಣಿ ತನಗಿಷ್ಟ ಬಂದಾಗ ಸಾಯುವ ವರವಿರುತ್ತದೆ.
ಕುರುಕ್ಷೇತ್ರ ಯುಧ್ಧದ ಸಮಯದಲ್ಲಿ ಅರ್ಜುನ ರಕ್ತ ಸಂಬಂಧಿಗಳ
ಜೊತೆಗೆ ನಾ ಯುಧ್ಧ ಮಾಡಲಾರೆ. ಬೇಕಾದರೆ 'ನೀನೆ ಮಾಡು' ಎಂದು ಹೇಳಲು ಭಗವಂತ ಒಂದು ಕ್ಷಣ ತಾಳ್ಮೆ ಕಳೆದುಕೊಂಡು ಭೀಷ್ಮರ ವಿರುಧ್ಧ
ಯುಧ್ಧಾಸ್ತ್ರವ ಪ್ರಯೋಗಿಸಲು ಮುಂದಾಗುತ್ತಾನೆ ಆಗ ಅರ್ಜುನ ತಕ್ಷಣ
ಕೃಷ್ಣನ ಕಾಲು ಹಿಡಿದು ಯುಧ್ಧಾಸ್ತ್ರವ ಪ್ರಯೋಗಿಸಬೇಡ ಬೇಡ ಎಂದು
ಬೇಡಿಕೊಳ್ಳುತ್ತಾನೆ. "ಸಾಯುವುದಾದರೆ ಕೃಷ್ಣನಿಂದಲೇ ಸಾಯಬೇಕು. ಎಂಬ ಭೀಷ್ಮರ ಆಸೆಗೆ ಅರ್ಜುನನೇ ಅಂದು ಅಡ್ಡ ಬರುತ್ತಾನೆ. ಭೀಷ್ಮಾಚಾರ್ಯರು ಅಂದೇ,ಸಾಯಲು ಮನಸಾರೆ ಇಚ್ಛಿಸಿದ್ದರು!
ಕುರುಕ್ಷೇತ್ರದಲ್ಲಿ ಕುತೂಹಲ ಕೆರಳಿಸುವ ಮತ್ತೊಂದು ತಾಣ. ಸ್ಥಳ ಪುರಾಣದಂತೆ ಇಲ್ಲೊಂದು ಅತ್ಯಂತ ಪುರಾತನವಾದ ವಟ ವೃಕ್ಷವಿದೆ. ನಂಬಿಕೆಯಂತೆ ಇದು ನಶಿಸಲಾರದ ವೃಕ್ಷವಾಗಿದ್ದು ಕೃಷ್ಣನು ಇದೆ ಸ್ಥಳದಲ್ಲಿ ಅರ್ಜುನನಿಗೆ ಗೀತೆ ಬೋಧಿಸಿದನೆಂದೂ ಅದಕ್ಕೆ ಸಾಕ್ಷಿಯಾಗಿ ಈ ಮರವಿತ್ತೆಂದು ಹೇಳಲಾಗುತ್ತದೆ. ಭೀಷ್ಮಕುಂಡ ಕುರುಕ್ಷೇತ್ರದ ಮತ್ತೊಂದು ಆಕರ್ಷಣೆಯಾಗಿದ್ದು ಭೀಷ್ಮನು ಬಾಣಗಳ ಹಾಸಿಗೆಯ ಮೇಲಿದ್ದಾಗ ಅವನ ಬಾಯಾರಿಕೆಯನ್ನು ತಣಿಸಲೆಂದು ಅರ್ಜುನನು ಬಾಣಗಳನ್ನು ಬಿಟ್ಟು ನಿರ್ಮಿಸದ ಕೊಳ ಇದಾಗಿದೆ. ಎಂದು ಹೇಳಲಾಗುತ್ತದೆ.
*****
ಶಿವನು ನೆಲೆಸಿರುವ ಲಖ್‍ಮಂಡಲ್ ಮಂದಿರ lakhmandal shiva temple
ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು.🙏🙏🙏
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ ಆದರೆ ನಮ್ಮ ಭಾರತ ದೇಶದಲ್ಲಿ ಒಂದಲ್ಲ ಒಂದು ವಿಸ್ಮಯವಾಗುವುದಂತು ಸತ್ಯ. ಅದರಲ್ಲಿಯೂ ಜೀವನದಲ್ಲಿ ಎಂದೂ ನಂಬಲಾಗದಂತಹ ಸನ್ನಿವೇಶಗಳಾಗುತ್ತಾ ಇರುತ್ತವೆ. ಆ ಘಟನೆಗಳಲ್ಲಿ ಲಖ್‍ಮಂಡಲ್ ಕೂಡ ಒಂದು. ನಮಗೆ ನಿಮಗೆ ಸಾಮಾನ್ಯವಾಗಿ ತಿಳಿದಿರುವ ಸಂಗತಿ ಏನೆಂದರೆ ಆ ಭಗಂತನು ಮನುಷ್ಯರ ಪ್ರಾಣವನ್ನು ಯಾವಾಗ? ಹೇಗೆ? ತೆಗೆದುಕೊಳ್ಳುತ್ತಾನೆಯೋ ಆತನಿಗೆ ಮಾತ್ರ ಗೊತ್ತ. ಹಾಗೆಯೇ ಹೋದ ಪ್ರಾಣ ಮತ್ತೆ ಬರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.. ಆದರೆ ಈ ಒಂದು ಸ್ಥಳದಲ್ಲಿ ಮಾತ್ರ ಹೋದ ಪ್ರಾಣ ಕೆಲವು ನಿಮಷಗಳ ಕಾಲ ಬದುಕಿಸುವ ಶಕ್ತಿಯನ್ನು ಹೊಂದಿದೆ ಎಂತೆ.
ಇದು ಸತ್ಯವೇ, ಸುಳ್ಳೇ ಎಂದು ನಿಮಗೆ ಅನ್ನಿಸದೇ ಇರುದು ಆದರೆ ಒಮ್ಮೆ ಭೇಟಿ ನೀಡಿ ನೀವೆ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬಹುದು. ಅಸಲಿಗೆ ಈ ದೇವಾಲಯದ ಇರುವುದು ಎಲ್ಲಿ? ಆ ಪುಣ್ಯ ಸ್ಥಳವಾದರೂ ಯಾವುದು? ಆ ಸ್ಥಳದ ಮಹಿಮೆಯಾದರೂ ಏನು? ಎಂಬ ಹಲವಾರು ಪ್ರೆಶ್ನೆಗಳಿಗೆ ಉತ್ತರವನ್ನು ಲೇಖನದ ಮೂಲಕ ಸಂಕೀಪ್ತವಾಗಿ ಮಾಹಿತಿಯನ್ನು ಪಡೆಯೋಣ.
ಮಹಿಮಾನ್ವಿತವಾದ ಸ್ಥಳ
ಸತ್ತವರನ್ನು ಕೆಲವು ನಿಮಿಷಗಳ ಕಾಲ ಬದುಕಿಸುವ ಆ ಮಹಿಮಾನ್ವಿತವಾದ ಸ್ಥಳವಾದರೂ ಯಾವುದು ಎಂದು ಯೋಚಿಸುತ್ತಿದೀರಾ? ಹಾಗಾದರೆ ಕೇಳಿ ಆ ಪುಣ್ಯಸ್ಥಳವೇ ಪರಮಶಿವನು ನೆಲೆಸಿರುವ ಶಕ್ತಿಯುತವಾದ ದೇವಾಲಯವಾಗಿದೆ. ಆ ದೇವಾಲಯದ ಹೆಸರು ಲಖ್‍ಮಂಡಲ್ ಮಂದಿರ.
ಲಖ್‍ಮಂಡಲ್ ಮಂದಿರ್
ಲಖ್‍ಮಂಡಲ್ ಒಂದು ಪುರಾತನವಾದ ಹಿಂದೂ ದೇವಾಲಯವಾಗಿದ್ದು, ಮಹಾಶಿವನಿಗೆ ಅರ್ಪಿತವಾದ ಪವಿತ್ರವಾದ ಸ್ಥಳವಾಗಿದೆ. ಈ ಮಂದಿರವು ತನ್ನ ಶಕ್ತಿಗೆ ಅತ್ಯಂತ ಪ್ರಸಿದ್ಧವಾಗಿದೆ ಎಂದೇ ಹೇಳಬಹುದು. ಈ ದೇವಾಲಯಕ್ಕೆ ಭೇಟಿ ನೀಡಿದರೆ ತಮ್ಮ ದುರದೃಷ್ಟವನ್ನು ದೂರವಾಗಿಸಿಕೊಳ್ಳುತ್ತಾರೆ ಎಂದೂ ಕೂಡ ಹೇಳಲಾಗುತ್ತಿದೆ.
ಪಾಂಡವರು
ಪಾಂಡವರ ಅಜ್ಞಾತ ವಾಸದಲ್ಲಿದ್ದಾಗ ಕೆಲವು ಕಾಲಗಳು ಈ ಸ್ಥಳದಲ್ಲಿ ಕಳೆದರೆ ಎಂದು ಹೇಳಲಾಗುತ್ತದೆ. ಪಾಂಡವರು ಕಾಲಿಟ್ಟ ಪವಿತ್ರವಾದ ಸ್ಥಳ ಇದು ಎಂದೇ ಹೇಳಬಹುದು
ಲಿಂಗ
ಲಖ್‍ಮಂಡಲ್ ಎಂಬ ಪದವು 2 ಪದಗಳಿಂದ ಬಂದಿದೆ. ಲಖಾ ಅಂದರೆ 'ಆನೇಕ' ಮತ್ತು ಮಂಡಲ್ ಎಂದರೆ ' ದೇವಾಲಯ' ಅಥವಾ 'ಲಿಂಗ' ಎಂಬರ್ಥವನ್ನು ನೀಡುತ್ತದೆ. ಇಲ್ಲಿ ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ಉತ್ಖನನದಲ್ಲಿ ಸಾಕಷ್ಟು ಕಲಾತ್ಮಕವಾದ ಕೃತಿಗಳು ಇಲ್ಲಿ ಕಂಡು ಬಂದಿದೆ.
ಆಕರ್ಷಣೆ
ಈ ದೇವಾಲಯದ ಮುಖ್ಯವಾದ ಆಕರ್ಷಣೆ ಎಂದರೆ ಅದು ಗ್ರಾನೈಟ್‍ನ ಲಿಂಗವೇ ಆಗಿದೆ. ತೇವ ಮತ್ತು ಅದರ ಸುತ್ತಮುತ್ತಲಿನ ಪ್ರತಿಬಿಂಬವನ್ನು ಅದು ಹೊಳೆಯುವಂತೆ ಮಾಡುತ್ತದೆ. ಲಿಂಗವನ್ನು ಕಂಡರೆ ಭಕ್ತರು ಭಕ್ತಿ, ಭಾವದಿಂದ ತಲ್ಲೀನರಾಗುತ್ತಾರೆ.
ಮಹಾಭಾರತ
ಸ್ಥಳೀಯ ಜನರ ಪ್ರಕಾರ, ಮಹಾಭಾರತದಲ್ಲಿನ ದುರ್ಯೋಧನ ಒಂದು ಲಕ್ಷ್ಯಗೃಹದಲ್ಲಿ ಭಾಸ್ಕರನನ್ನುಜೀವಂತವಾಗಿ ಸುಡುವಂತೆ ಒಂದು ಮನೆಯನ್ನು ನಿರ್ಮಾಣ ಮಾಡುತ್ತಾನೆ. ಆ ಗೃಹವೇ ಪ್ರಸ್ತುತ ದೇವಾಲಯವಿರುವ ಮತ್ತು ಪಕ್ಕದ ಪ್ರದೇಶ ಎಂದು ನಂಬಲಾಗಿದೆ.
ದನಾವ ಮತ್ತು ಮಾನವ ಪ್ರತಿಮೆ
ದನಾವ ಮತ್ತು ಮಾನವ ಎಂಬ ಅವಳಿ ಪ್ರತಿಮೆಗಳು ಮುಖ್ಯವಾದ ದೇವಾಲಯದ ಪಕ್ಕದಲ್ಲಿಯೇ ಇದೆ. ಈ ಪ್ರತಿಮೆಯನ್ನು ಕೆಲವರು ಪಾಂಡವ ಸಹೋದರರಾದ ಭೀಮ ಮತ್ತು ಅರ್ಜುನರು ಎಂದು ನಂಬುತ್ತಾರೆ.
ಸತ್ತವರು ಮತ್ತೆ ಬದುಕುವುದು
ದನಾವ ಮತ್ತು ಮಾನವ ಪ್ರತಿಮೆಗಳು ವಿಷ್ಣುವಿನ ದ್ವಾರಪಾಲಕರಾದ ಜೈ ಮತ್ತು ವಿಜಯರನ್ನು ಹೋಲುತ್ತಾರೆ. ಯಾರಾದರೂ ಸಾಯುತ್ತಿರುವ ಸಮಯದಲ್ಲಿ ಅಥವಾ ಮರಣಹೊಂದುತ್ತಿರುವಾಗ ಈ ಮೂರ್ತಿಗಳ ಮುಂದೆ ಕರೆದುತರುತ್ತಾರೆ.
ಜೀವಂತ
ತದನಂತರ ಮಹಾಶಿವನ ಪವಿತ್ರವಾದ ಅಭಿಷೇಕದ ಜಲವನ್ನು ಸಾಯುತ್ತಿರುವ ಮಾನುಷ್ಯನಿಗೆ ಅಥವಾ ಸತ್ತಿರುವ ಮನುಷ್ಯನಿಗೆ ಕುಡಿಸಿದರೆ ಕೆಲವು ನಿಮಿಷಗಳ ಕಾಲ ಬಹುದುಕುತ್ತಾರೆ ಅಂತೆ. ಇಲ್ಲಿ ಆ ಪರಮಶಿವನ ಶಕ್ತಿಯನ್ನು ಹೊಂದಿರುವ ಪವಿತ್ರವಾದ ಸ್ಥಳ ಎಂದು ನಂಬಲಾಗಿದೆ. ಆ ಪವಿತ್ರವಾದ ಜಲವು ಮಾನವನಿಗೆ ಜೀವಂತವಾಗಿಸುತ್ತದೆ ಎಂದರೆ ಯಾರಿಗೆ ತಾನೇ ಆಶ್ಚರ್ಯವಾಗುವುದಿಲ್ಲ ಹೇಳಿ.
ಧುಂಧಿ ಓಡಾರಿ
ಈ ಸ್ಥಳಕ್ಕೆ ಹತ್ತಿರುದಲ್ಲಿಯೇ ಒಂದು ಧುಂಧಿ ಓಡಾರಿ ಎಂದು ಕರೆಯಲಾಗುವ ಗುಹೆ ಇದೆ. ಸ್ಥಳೀಯ ಜನರ ಪ್ರಕಾರ ದುರ್ಯೋಧನನಿಂದ ಕಾಪಾಡಿಕೊಳ್ಳಲು ಪಾಂಡವರು ಈ ಸ್ಥಳದಲ್ಲಿ ವಾಸವಿದ್ದರು ಎಂದು ನಂಬಲಾಗಿದೆ.
ಎಲ್ಲಿದೆ ಈ ದೇವಾಲಯ?
ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಕೇಳಿ ಈ ಮಹಿಮಾನ್ವಿತವಾದ ದೇವಾಲಯವು ಉತ್ತರಾಖಂಡ ರಾಜ್ಯದಲ್ಲಿನ ಡೆಹ್ರಾಡೂನ್ ಜಿಲ್ಲೆಯ ಜೌನ್ಸರ್-ಬಾವರ್ ಪ್ರದೇಶದಲ್ಲಿದೆ. ಈ ದೇವಾಲಯವನ್ನು ಉತ್ತರಭಾರತ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಹೇಗೆ ತಲುಪಬೇಕು?
ಲಖ್ ಮಂಡಲ್ ಮಂದಿರವು ಚಕ್ರತಾದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ರಸ್ತೆಯ ಮೂಲಕವೆಂದರೆ ಮೊದಲಿಗೆ ಪ್ರವಾಸಿಗರು ಚಕ್ರತಾಗೆ ತಲುಪಿ ತದನಂತರ ಸುಲಭವಾಗಿ ಲಖ್‍ಮಂಡಲಿಗೆ ಬಸ್ಸು ಅಥವಾ ಟ್ಯಾಕ್ಸಿಯ ಮೂಲಕ ತೆರಳಬಹುದಾಗಿದೆ.
ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಡೆಹ್ರಾಡೂನ್ ರೈಲ್ವೆ ನಿಲ್ದಾಣ. ಈ ರೈಲ್ವೆ ನಿಲ್ದಾಣದಿಂದ ಲಖ್‍ಮಂಡಲಿಗೆ ಸುಮಾರು 107 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಸು ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ಇಲ್ಲಿಂದ ಲಖ್‍ಮಂಡಲಿಗೆ ಸುಮಾರು 130 ಕಿ.ಮೀ ದೂರದಲ್ಲಿದೆ.
********
ಬೌದ್ಧನಾಥ ಸ್ತೂಪ ನೇಪಾಳ nepal buddhist stupas
ಬೌದ್ಧರ ವಾಸ್ತುಶಿಲ್ಪದಲ್ಲಿ ಬಹಳ ಪ್ರಮುಖವಾದುದು ಸ್ತೂಪ. ಬುದ್ಧನ ಅಥವಾ ಬೌದ್ಧ ಭಿಕ್ಷುವಿನ ಅವಶೇಷಗಳ ಮೇಲೆ ಕಟ್ಟಿದ ಸ್ಮಾರಕಕ್ಕೆ ಸ್ತೂಪ ಎನ್ನುತ್ತಾರೆ. ಬುದ್ಧನ ಪರಿನಿರ್ವಾಣದ ಬಳಿಕ ಅವನ ಕಳೇಬರ ದಹಿಸಿ ಅವಶೇಷಗಳನ್ನು ಹತ್ತು ಭಾಗ ಮಾಡಿ ಒಂದೊಂದು ವಿಭಾಗದ ಮೇಲೂ ಸ್ತೂಪಗಳನ್ನು ಕಟ್ಟಿಸಲಾಯಿತೆಂಬ ಪ್ರತೀತಿ ಇದೆ. ಪ್ರಪಂಚದಲ್ಲಿನ ಕೆಲವೇ ಕೆಲವು ಅತಿ ದೊಡ್ಡ ಸ್ತೂಪಗಳಲ್ಲಿ ಒಂದಾದ ನೇಪಾಳದ ‘ಬೌದ್ಧನಾಥ ಸ್ತೂಪ’ದ ಸಂಕ್ಷಿಪ್ತ ಪರಿಚಯ ಇಲ್ಲಿದೆ.
| ಶ್ರುತಿ ಶರ್ಮಾ ಬೆಂಗಳೂರು
ಬೌದ್ಧರ ಧಾರ್ವಿುಕ ನಂಬಿಕೆಗಳಲ್ಲಿ ‘ಸ್ತೂಪ’ಗಳಿಗೆ ಬಹಳ ಪ್ರಾಮುಖ್ಯತೆಯಿದೆ. ಬೌದ್ಧ ಸ್ಮಾರಕ ಕಟ್ಟಡವಾದ ಸ್ತೂಪವು ಸಾಮಾನ್ಯವಾಗಿ ಬುದ್ಧ ಅಥವಾ ಬೌದ್ಧ ಮತದ ಸಂತರಿಗೆ ಸಂಬಂಧಿಸಿರುವ ಅವಶೇಷಗಳನ್ನು ಒಳಗೊಂಡಿದ್ದು ಪವಿತ್ರವೆನಿಸಲ್ಪಡುತ್ತದೆ.
ನೇಪಾಳದಲ್ಲಿ ಪರ್ಯಟನೆ ಮಾಡುವುದಾದರೆ ಅಲ್ಲಿ ಅನೇಕ ಸ್ತೂಪಗಳನ್ನು ಕಾಣಬಹುದು. ಅಲ್ಲಿನ ಜನಸಂಖ್ಯೆಯಲ್ಲಿ ಹೆಚ್ಚೆಂದರೆ ಶೇ. 15ರಷ್ಟು ಜನ ಮಾತ್ರ ಬೌದ್ಧ ಮತಾನುಯಾಯಿಗಳಿರಬಹುದು. ಆದರೂ ಅಲ್ಲಿನ ಬಹಳಷ್ಟು ವಿಚಾರಗಳಲ್ಲಿ ಬೌದ್ಧಮತದ ಪ್ರಭಾವ ಕಂಡುಬರುತ್ತದೆ. ಅತ್ಯಂತ ಪವಿತ್ರವೆನಿಸಿದ ಅಲ್ಲಿನ ಸ್ತೂಪವು ‘ಬೌದ್ಧನಾಥ ಸ್ತೂಪ’ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅದು ಅಲ್ಲಿನ ಅತ್ಯಂತ ದೊಡ್ಡ ಸ್ತೂಪವೂ, ಪ್ರಪಂಚದಲ್ಲಿನ ಕೆಲವೇ ಕೆಲವು ಅತಿ ದೊಡ್ಡ ಸ್ತೂಪಗಳಲ್ಲಿ ಒಂದು ಕೂಡ ಆಗಿದೆ.
ಬೌದ್ಧನಾಥ ಸ್ತೂಪದ ಬಗ್ಗೆ ಹಲವು ಹಿನ್ನೆಲೆ, ವಿಚಾರಗಳು ತಿಳಿದುಬರುತ್ತವೆ. ಹಲವು ಮೂಲಗಳ ಪ್ರಕಾರ ಬೌದ್ಧನಾಥ ಸ್ತೂಪದಲ್ಲಿ ಮೂರನೆಯ ಬುದ್ಧನಾದ ಕಶ್ಯಪನ ಅವಶೇಷಗಳನ್ನು ಸಂರಕ್ಷಿಸಲಾಗಿದೆಯೆಂದು ಹೇಳುತ್ತಾರೆ. ಇನ್ನು ಕೆಲವು ಮೂಲಗಳ ಪ್ರಕಾರ ಐತಿಹಾಸಿಕ ಬುದ್ಧನ (ಸಿದ್ಧಾರ್ಥ ಗೌತಮ) ಮೂಳೆಯ ತುಂಡೊಂದನ್ನು ಇಲ್ಲಿ ಸಂರಕ್ಷಣೆ ಮಾಡಲಾಗಿದೆಯೆಂದೂ ಹೇಳಲಾಗುತ್ತದೆ. ಜನಪದ ಅಧ್ಯಯನಗಳ ಪ್ರಕಾರ ರಾಜನು ತಿಳಿಯದೆಯೇ ತನ್ನ ತಂದೆಯನ್ನು ಕೊಂದುದರ ಪ್ರಾಯಶ್ಚಿತ್ತವಾಗಿ ಈ ಬೌದ್ಧ ಸ್ತೂಪವನ್ನು ಕಟ್ಟಿಸಿದನೆನ್ನುವ ಕಥೆಯಿದೆ.
ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ ಈಶಾನ್ಯದತ್ತ 6-7 ಕಿ.ಮೀ. ಪಯಣಿಸಿದರೆ ಬೌದ್ಧನಾಥ ಸ್ತೂಪವನ್ನು ತಲುಪಬಹುದು. ಸ್ತೂಪವು ಒಂದು ದೊಡ್ಡ ಅಡಿಪಾಯ, ಅದರ ಮೇಲೆ ದೊಡ್ಡದಾದಂತಹ ದಿಬ್ಬದಂತಿರುವ ಬ್ರಹ್ಮಾಂಡವನ್ನು ಸಂಕೇತಿಸುವ ಒಂದು ಗುಮ್ಮಟ, ಅದರ ಮೇಲೆ ಕರ್ಮ, ಜ್ಞಾನಗಳನ್ನು ಸಂಕೇತಿಸುವ ಕಣ್ಣುಗಳ ಚಿತ್ರ, ‘ನಿರ್ವಾಣ’ವನ್ನು ಪ್ರತಿಬಿಂಬಿಸುವ ಶಂಖದ ತಿರುವಿನಂತೆ ಗೋಚರಿಸುವ ಮೂಗಿನಂತಹ ರಚನೆ, ಮಂಡಲ, ಬೋಧಿಸತ್ವನ ಜ್ಞಾನೋದಯದ 13 ಘಟ್ಟಗಳನ್ನು ಬಿಂಬಿಸುವ 13 ಮೆಟ್ಟಿಲುಗಳು ಇತ್ಯಾದಿಗಳನ್ನು ಒಳಗೊಂಡಿದೆ. ಹೀಗೆ ಸಂಕೇತಗಳ ಮೂಲಕ ಅಪಾರವಾದ ತತ್ವಗಳನ್ನು ತೋರಿಸುವ ಕಟ್ಟಡದ ಸುತ್ತ ನಡೆಯಲು ಧಾರಾಳ ಸ್ಥಳಾವಕಾಶವಿದೆ. ಒಳಪ್ರವೇಶಕ್ಕಿರುವ ಬಾಗಿಲುಗಳೂ ಸಿಗುತ್ತವೆ. ಒಳಹೊಕ್ಕರೆ ಅಲ್ಲಲ್ಲಿ ಹಚ್ಚಿಟ್ಟ ಹಣತೆಗಳು, ಹೂವುಗಳಷ್ಟೇ ಅಲ್ಲದೆ ಪ್ರಾರ್ಥನೆಯ ಚಕ್ರಗಳು, ಘಂಟೆಗಳು ಕಾಣಸಿಗುತ್ತವೆ. ಶತಮಾನಗಳಿಂದ ಪ್ರಚಲಿತವಾದಂತೆ, ಬೌದ್ಧಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಂತೆ ಮೂರು ಪೀಳಿಗೆಯ ಬೋಧಿಸತ್ವರು ಅಲ್ಲಿ ನೆಲೆಯಾಗಿದ್ದು, ಅಲ್ಲಿ ಮಾಡುವ ಪ್ರಾರ್ಥನೆಗಳು ತಪ್ಪದೆ ಈಡೇರುತ್ತವೆ ಎಂಬ ನಂಬಿಕೆಯಿದೆ.
36 ಮೀಟರ್ ಎತ್ತರದ ಈ ಸ್ತೂಪವು 11 ಕಿ.ಮೀ. ವಿಸ್ತಾರವಾಗಿದೆ. 14ನೆಯ ಶತಮಾನದಲ್ಲಿ ಮುಘಲರಿಂದ ಆಕ್ರಮಣಕ್ಕೊಳಗಾಗಿ ಧ್ವಂಸವಾಗಿದ್ದ ಮೂಲ ಸ್ತೂಪದ ಸ್ಥಳದಲ್ಲಿ ಮತ್ತೆ ಸ್ತೂಪ ಕಟ್ಟಲಾಯಿತು. ಆದರೆ 2015ರಲ್ಲಿ ಭೂಕಂಪದಿಂದ ಮತ್ತೆ ಹಾನಿಗೀಡಾಯಿತು. ಮೊದಲಿನ ರೀತಿಯಲ್ಲೇ ಪುನಃ ನಿರ್ವಿುಸಲಾದ ಬೌದ್ಧ ಸ್ತೂಪವು ಪ್ರಸ್ತುತ ಪ್ರವಾಸಿಗರ, ಭಕ್ತರ ಪ್ರವೇಶಕ್ಕೆ ಸದಾ ತೆರೆದಿರುತ್ತದೆ. 1979ರಲ್ಲಿ ಇದು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿತು. ಟಿಬೆಟ್ನ ಹೊರಗಿರುವ ಟಿಬೆಟಿಯನ್ ದೇವಾಲಯಗಳಲ್ಲಿ ಅತ್ಯಂತ ಪವಿತ್ರ ಎನಿಸಲ್ಪಡುವ ಈ ಬೌದ್ಧಸ್ತೂಪಕ್ಕೆ ಲಕ್ಷಾಂತರ ಅನುಯಾಯಿಗಳಾದಿಯಾಗಿ ಅಧ್ಯಯನಾರ್ಥಿಗಳು, ಪ್ರವಾಸಿಗರು ನಿತ್ಯವೂ ಭೇಟಿ ನೀಡುತ್ತಿರುತ್ತಾರೆ. ಟಿಬೆಟಿಯನ್ ಯಾತ್ರಿಗಳ ಪ್ರದಕ್ಷಿಣೆಯ ಸಂದರ್ಭದಲ್ಲಿ ಜತೆಗೂಡಿ ಸ್ತೂಪಕ್ಕೊಂದು ಸುತ್ತು ಹಾಕಿದರೆ ಚೆಂದದ ಅನುಭವವನ್ನೂ, ವಿಹಂಗಮ ನೋಟವನ್ನೂ ನೀಡುತ್ತದೆ.
ಸ್ತೂಪ ಎಂದರೇನು?
ಸ್ತೂಪ ಬೌದ್ಧರ ವಾಸ್ತುಶಿಲ್ಪದಲ್ಲಿ ಪ್ರಮುಖವಾದುದು. ಬುದ್ಧನ ಅಥವಾ ಬೌದ್ಧ ಭಿಕ್ಷುವಿನ ಅವಶೇಷಗಳ ಮೇಲೆ ಕಟ್ಟಿದ ಸಮಾಧಿ ಅಥವಾ ಸ್ಮಾರಕ. ಬುದ್ಧನ ಪರಿನಿರ್ವಾಣದ ಅನಂತರ ಅವನ ಕಳೇಬರವನ್ನು ದಹಿಸಿ ಅವಶೇಷಗಳನ್ನು ಹತ್ತು ವಿಭಾಗಮಾಡಿ ಒಂದೊಂದು ವಿಭಾಗದ ಮೇಲೂ ಸ್ತೂಪಗಳನ್ನು ಕಟ್ಟಿಸಲಾಯಿತೆಂಬ ಪ್ರತೀತಿ ಇದೆ.
ಅವಶೇಷಕ್ಕೆ ಧಾತುವೆಂದು ಇದನ್ನು ಒಳಗೊಂಡ ಈ ಗೋಳಾಕಾರದ ಘನಕಟ್ಟಡಕ್ಕೆ ಧಾತುಗರ್ಭವೆಂದು (ಸಿಂಹಳದಲ್ಲಿ ದಾಗೋಬಾ) ಹೆಸರಿದ್ದಿತು. ಈ ಅವಶೇಷಗಳಲ್ಲಿ ಮೂರು ಬಗೆ-ಶಾರೀರಕ (ಮೂಳೆ, ಭಸ್ಮ, ಕೂದಲು, ಹಲ್ಲು ಇತ್ಯಾದಿ), ಪರಿಭೋಗಿಕ (ಉಪಯೋಗಿಸುತ್ತಿದ್ದ ವಸ್ತುಗಳು, ಭಿಕ್ಷಾಪಾತ್ರೆ, ಜೀವರ ಇತ್ಯಾದಿ) ಮತ್ತು ಉದ್ದೇಶಿಕ (ಸಾಂಕೇತಿಕ). ಅಶೋಕಚಕ್ರವರ್ತಿಯ ಕಾಲಕ್ಕೆ ಇವು ಪೂಜಾಸ್ಥಾನಗಳಾಗಿ ಮಾರ್ಪಟ್ಟವು.
ಅವಶೇಷವನ್ನು ಒಳಗೊಂಡ ಕರಂಡವನ್ನಿಟ್ಟು ಅದರ ಮೇಲೆ ಹಾಗೂ ಸುತ್ತಲೂ ಮಣ್ಣು ಕಲ್ಲುಗಳಿಂದ ಗುಮ್ಮಟ (ಗರ್ಭ ಅಥವಾ ಅಂಡ) ಮತ್ತು ಸ್ತೂಪವನ್ನು ನಿರ್ವಿುಸುತ್ತಿದ್ದರು. ಅದು ಪೂಜಾಸ್ಥಾನವಾದಾಗ ನೆಲದ ಮೇಲೆ, ಸುತ್ತಲೂ ಪ್ರದಕ್ಷಿಣೆ ಮಾಡಲು ಅನುಕೂಲವಾಗುವಂತೆ ವೇದಿಕೆಗೆ ಆಲಂಬನ, ಸ್ತಂಭಗಳು, ತೋರಣದಂತಿರುವ ಅಡ್ಡಪಟ್ಟಿಗಳು (ಸೂಚಿ), ಉಷ್ಣೀಷವೂ (ಮೇಲುಭಾಗ) ಇರುತ್ತಿದ್ದುವು. ಅಶೋಕನ ಕಾಲಾನಂತರ ಸೊಗಸಾದ ಭವ್ಯ ಬೌದ್ಧಶಿಲ್ಪಗಳ ನಿರ್ವಣವಾಗಿವೆ. ವೇದಿಕಾಶಿಲ್ಪಿಗಳಿಂದ ಸಾಂಚಿಸ್ತೂಪ, ಬಾರ್ಹತ್ ಸ್ತೂಪಗಳು ಪ್ರಪಂಚ ಪ್ರಸಿದ್ಧವಾಗಿವೆ.
ಪ್ರದಕ್ಷಿಣಾಪಥವನ್ನು ಹಂತಹಂತಗಳಾಗಿ ನಿರ್ವಿುಸಿದಾಗ ಏರಿಹೋಗಲು ಅನುಕೂಲವಾಗುತ್ತಿತ್ತು. ಸ್ತೂಪದ ಮೇಲ್ಭಾಗದಲ್ಲಿ ಚಚ್ಚೌಕವಾದ ಸಮಪ್ರದೇಶದ ಹರ್ವಿುಗಳನ್ನು (ಸಿಂಹಳದಲ್ಲಿ ದೇವತಾ ಕೊಡುವ) ಮಾಡುತ್ತಿದ್ದರು. ಮರದಿಂದ (ಸ್ಟಕ್ಕೋದಿಂದ) ಮಾಡಿದ ಛತ್ರವನ್ನು (ಛತ್ರಾವಳಿ) ಆಸರೆಗಾಗಿ ಇಡುತ್ತಿದ್ದರು. ಮಳೆನೀರನ್ನು ಶೇಖರಿಸಲು ವರ್ಷಭಾಂಡವನ್ನೂ ಹರ್ವಿುಕೆಯಲ್ಲಿ ಇಡುವ ಪದ್ಧತಿಯಿದ್ದಿತು. ಸ್ತೂಪವು ಸುಮೇರು ಪರ್ವತದ ಪ್ರತೀಕವೆಂದೂ ಮೇಲುಭಾಗದ ಹರ್ವಿುಕೆ ಅಮರಾವತಿ (ಇಂದ್ರನ ರಾಜಧಾನಿ) ಸಂಕೇತವೆಂದೂ ಭಾವಿಸಲಾಗಿತ್ತು.
ಸ್ತೂಪನಿರ್ವಣ ಶ್ರೀಮಂತರಿಗೆ ಪುಣ್ಯಪ್ರದವೆಂಬ ಕಲ್ಪನೆಯಿದ್ದಿತು. ಸದ್ಧರ್ಮದ ಪ್ರಸಾರದಲ್ಲಿ ನೆರವಾಗಲು ಈ ಸ್ತೂಪ ಯಂತ್ರವೆಂದೂ ಸ್ತೂಪವನ್ನು ಪೂಜಿಸಿದರೆ ಬುದ್ಧನನ್ನೇ ಪೂಜಿಸಿದಂತೆ ಎಂಬ ನಂಬಿಕೆಗಳಿದ್ದುವು. ಇದ್ದ ಸ್ತೂಪಗಳನ್ನು ದುರಸ್ತಿ ಮಾಡಿಸುವುದು, ಅವುಗಳ ಗಾತ್ರವನ್ನು ಹೆಚ್ಚಿಸುವುದೂ ಪುಣ್ಯಕಾರ್ಯವಾಗಿತ್ತು. ದೊಡ್ಡ ಹಾಗೂ ಚಿಕ್ಕ ಪ್ರಮಾಣದ ಸ್ತೂಪಗಳನ್ನು ನಿರ್ವಿುಸಲಾಗಿತ್ತು. ಸಣ್ಣ ಸಣ್ಣ ಸ್ತೂಪಗಳ ಮೇಲೆ ಮಂದಿರಗಳನ್ನು ನಿರ್ವಿುಸುವ ಸಂಪ್ರದಾಯವಿದ್ದು, ಇವುಗಳನ್ನು ಚೈತ್ಯವೆಂದು ಕರೆಯಲಾಗುತ್ತಿತ್ತು.
ಈಗ ಇರುವ ಸ್ತೂಪಗಳಲ್ಲೆಲ್ಲ ಸಾಂಚಿ ಸ್ತೂಪವೇ ಪ್ರಾಚೀನವಾದುದು. ಕ್ರಿಸ್ತಶಕ ಮೊದಲನೆಯ ಶತಮಾನದ ಬಾರ್ಹತ್ ಸ್ತೂಪದಲ್ಲಿರುವ ಶಿಲ್ಪಗಳು ಪ್ರಪಂಚಖ್ಯಾತವಾಗಿವೆ. ಇಲ್ಲಿಯೂ ಸಾಂಚಿಯಲ್ಲಿದ್ದಂತೆ ಜಾತಕ ಕಥೆಗಳನ್ನು ಚಿತ್ರಿಸಿ ಬೌದ್ಧಪ್ರಸಂಗಗಳನ್ನು ನಿರೂಪಿಸಲಾಗಿದೆ. ಅನಾಥಪಿಂಡಕನು ಜೇತವನವನ್ನು ದಾನ ಮಾಡುತ್ತಿರುವುದು, ಬುದ್ಧನು ತ್ರಯಸ್ತ್ರಿಂಶಸ್ವರ್ಗದಿಂದ ಹಿಂದಿರುಗಿ ಬರುತ್ತಿರುವುದು, ಕುರಂಗಮಿಗಜಾತಕ ಮುಂತಾದ ದೃಶ್ಯಗಳು ಸೊಗಸಾಗಿವೆ.
ಕನಿಷ್ಕನ ಕಾಲದಲ್ಲಿ ರೂಪಗೊಂಡ ಸಾರನಾಥ (ವಾರಾಣಸಿ) ಸ್ತೂಪದಲ್ಲಿ ರಮಣೀಯವಾದ ಶಿಲ್ಪಗಳಿವೆ. ಎರಡನೆಯ ಶತಮಾನದ ಅಮರಾವತಿಯ ಸ್ತೂಪ, ಬತನ್ಪೂರಾಸ್ತೂಪ, ಜಗ್ಗಯ್ಯಪೇಟೆಯ ಸ್ತೂಪ – ಇವು ಪ್ರಸಿದ್ಧವಾದ ಕಲಾಕೃತಿಗಳು. ಸಿಂಹಳದಲ್ಲಿ ರುವನ್ವೆಲಿ ದಾಗಬ ಎಂಬ ಸ್ತೂಪವನ್ನು ದುಟ್ಠಗಾಮನಿ (ಕ್ರಿ.ಪೂ. 101-77) ಎಂಬ ಚಕ್ರವರ್ತಿ ಅನುರಾಧಪುರದಲ್ಲಿ ಕಟ್ಟಿಸಿದ. ಮಿರಿಸ್ವೇಟಿಯ ಮತ್ತು ಅಭಯಗಿರಿ ದಾಗಬಗಳು ಪ್ರಾಚೀನವಾದುವು. ನೇಪಾಲದಲ್ಲಿ ಷೊರ್ಟೆನ್ ಎಂಬ ಪೂಜಾಸ್ಥಳಗಳು ಸ್ತೂಪದ ಮಾದರಿಯಲ್ಲಿವೆ. ಬರ್ವದ (ಈಗ ಮಯನ್ಮಾರ್) ಮಿಂಗಲಚೇದಿಸ್ತೂಪ (1274ರಲ್ಲಿ ಪಾಗನ್ನಲ್ಲಿ ಕಟ್ಟಿದ್ದು) ಪ್ರಖ್ಯಾತವಾಗಿದೆ. ಪ್ರಪಂಚಖ್ಯಾತವಾದ ಅಂಗ್ಕೋರ್ವಾಟ್ ದೇವಾಲಯವನ್ನು ಸ್ತೂಪವೆಂದು ಹೇಳಲಾಗಿದೆ.
(ಪೂರಕ ಮಾಹಿತಿ: ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ)
******
[8:24 AM, 12/29/2018] +91 99644 64007: This is the most unusual Temple in the world
It is open 23.58 x 7 a day
TEMPLE.
NO CLOSING TIME.
HERE, GOD KRISHNA IS ALWAYS HUNGRY!!.
This Temple is situated in Thiruvarppu in kottayam district, Kerala at least 1500 years old temple.
Lord Krishna here is always hungry.
So all the 23.58 hours, 365 days the temple is open.
The temple is closed for only 2 minutes.
From 11.58 pm to 12.00 am.
Another peculiarity of this temple is that, the priest is given an AXE as well as the key to open the door in the early hours( only 2 minute closed).
People believe that Krishna cannot tolerate hunger and so if there is any delay in opening the door with the key, the priest is permitted to break open the door with an axe.
People believe that Lord Krishna's idol in the Temple is of the very exhausted Krishna after he killed Kamsa.
So, after the Abhishekam is over, the lord's head is first dried, the naivedyam offered to him and then only his body is dried.
There are 10 times Naivedhya pooja.
Another peculiarity of this Temple is that even during Eclipse times, the Temple is not closed.
People believe that this God Krishna would become hungry.
It seems once, the temple was closed during eclipse. When they reopened the door they found that the waist belt of the lord has slipped down.
Sri Adi Shankaracharya who came at that time told that it was because of God Krishna became very hungry.
From then on, they stopped closing the during Eclipse times also.
God Krishna Sleeping time is daily 11.58 pm to 12.00 am. Only 2 minutes.
No devotees is allowed to leave without consuming Prasadam.
Everyday 11.57 pm ( before closing the temple) the priest calls out loudly IS THERE ANYBODY HERE WHO IS HUNGRY? "
This is to ensure the all devotees partake in Prasadam.
Another important thing is once you taste the Prasadam, you will not be hungry and life time you will not have any problem getting food.
Lord Krishna is taking care of all devotees who pray here and take prasadam.
The Temple's address is,
Tiruvarppu Krishna Temple, Tiruvarppu-686020
Temple opening time is 12.00 am to 11.58 pm..
*****
Rare kind of Vaadiraja pratistapita, Anjaneya swami, adjacent to kaveri river.
Do you know there is a Pejawara mutt just next to this Temple?
Landmark - Sri Vijendra swami mutt, Kumbakonam.
Mutt manager number - 9952962247
Note - Now mutt is renovated and AC room stay is available.
*****
ತ್ರ್ಯಂಬಕೇಶ್ವರ
ತ್ರ್ಯಂಬಕೇಶ್ವರವು ( ಮರಾಠಿಯಲ್ಲಿ ತ್ರಿಂಬಕೇಶ್ವರ್ ) ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿನ ಒಂದು ಪ್ರಾಚೀನ ಹಿಂದೂ ದೇವಾಲಯ. ಇದು ನಾಶಿಕ್ ನಗರದಿಂದ ೨೮ ಕಿ.ಮೀ. ದೂರದಲ್ಲಿ ಗೋದಾವರಿ ನದಿಯ ಉಗಮಸ್ಥಾನದ ಬಳಿಯಲ್ಲಿದೆ. ಶಿವದೇವಾಲಯವಿರುವ ಈ ಕ್ಷೇತ್ರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಸಮೀಪದಲ್ಲಿನ ಬ್ರಹ್ಮಗಿರಿ ಬೆಟ್ಟದಸಾಲಿನಲ್ಲಿ ಉದ್ಬವಿಸುವ ಗೋದಾವರಿ ನದಿಯು ಭಾರತ ಜಂಬೂದ್ವೀಪದ ಅತಿ ಉದ್ದದ ನದಿಯಾಗಿದೆ. ತ್ರ್ಯಂಬಕೇಶ್ವರದ ಕುಶಾವರ್ತ ಎಂಬ ಕುಂಡದಿಂದ ಮುಂದೆ ಗೋದಾವರಿಯ ಹರಿವು ಸ್ಪಷ್ಟವಾಗುವುದರಿಂದ ಈ ಸ್ಥಾನವನ್ನು ಹಿಂದೂಶ್ರದ್ಧಾಳುಗಳು ಪವಿತ್ರವೆಂದು ಭಾವಿಸಿ ಪುಣ್ಯಸ್ನಾನ ಕೈಗೊಳ್ಳುವರು. ತ್ರ್ಯಂಬಕೇಶ್ವರದದ ವೈಶಿಷ್ಟ್ಯವೆಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತೀಕವಾಗಿವೆ. ಭಾರತದ ಉಳಿದ ಹನ್ನೊಂದು ಜ್ಯೋತಿರ್ಲಿಂಗಗಳೆಲ್ಲವೂ ಶಿವಪ್ರಧಾನವಾಗಿವೆ. ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ತ್ರ್ಯಂಬಕೇಶ್ವರ ದೇವಾಲಯವು ಕರಿಕಲ್ಲಿನಿಂದ ಕಟ್ಟಲ್ಪಟ್ಟಿದ್ದು ಸುಂದರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಇಲ್ಲಿಂದ ೭ ಕಿ.ಮೀ. ದೂರದಲ್ಲಿರುವ ಅಂಜನೇರಿ ಪರ್ವತವು ಹನುಮಂತನ ಜನ್ಮಸ್ಥಾನವೆಂದು ಹೇಳಲ್ಪಡುವುದು.
ಇದು ಇತರೆ ಜ್ಯೋತಿಲಿಂಗಗಳ ಸ್ಥಳಪುರಾಣದಂತೆಯೇ ಇದೆ. ಈ ಜ್ಯೋತಿಲಿ೯ಂಗಗಳು ಶಿವನ ಜ್ಯೋತಿಯ ಅಂಶಗಳನ್ನು ಹೊಂದಿವೆ ಎಂದು ಹೇಳುತ್ತಾರೆ. ಬ್ರಹ್ಮ ಮತ್ತು ವಿಷ್ಣು ಇವರಲ್ಲಿ ಯಾರು ಮೇಲೆಂದು ಚರ್ಚೆಯಾದಾಗ, ಅವರು ಯಾರು ಮೇಲೆಂದು ಶಿವನನ್ನು ಕೇಳುವರು. ಶಿವನು ಮೂರು ಜ್ಯೋತಿಗಳ (ಬೆಳಕಿನ) ಕಂಬಗಳನ್ನು ಸೃಷ್ಠಿಸಿದನು (ಜ್ಯೋತಿರ್ಲಿಂಗ). ವಿಷ್ಣು ಮತ್ತು ಬ್ರಹ್ಮರಿಗೆ ಅದರ ಮೇಲಿನ ಮತ್ತು ಕೆಳಗಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ (ಮೇಲಿನ) ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮನು ತಾನು ನೋಡಿರುವದಾಗಿ ಹೇಳಿದನು. ಈಶ್ವರನು ಎರಡನೇ ಜ್ಯೋತಿಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆಯಿಲ್ಲದಿರಲಿ ಎಂದು ಶಪಿಸಿದನು .ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆಗೆ ಅರ್ಹನೆಂದು ಹೇಳಿದನು ಆ ಜ್ಯೋತಿಯೇ ಈ ಜ್ಯೋತಿರ್ ಲಿಂಗವಾಗಿದೆ ಎಂದು ಶಿವ ಪುರಾಣ ಹೇಳುತ್ತದೆ.
***
ಕಾಣಿಪಾಕಂ ವಿಘ್ನೇಶ್ವರ ದೇವಾಲಯ - ಸತ್ಯದ ದೇವರೆಂದು ಖ್ಯಾತವಾದ ಗಣಪತಿ
* ಲೇಖಕರು: ಟಿ.ಎಂ.ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ
ಆಂಧ್ರಪ್ರದೇಶದಲ್ಲಿರುವ ವಿಘ್ನೇಶ್ವರ ಕ್ಷೇತ್ರಗಳಲ್ಲಿ ಚಿತ್ತೂರು ಜಿಲ್ಲೆಯಯ ಐರಲ ತಾಲೂಕಿನಲ್ಲಿರುವ ಕಾಣಿಪಾಕಂ ವಿಘ್ನೇಶ್ವರ ದೇವಾಲಯವೂ ಪ್ರಮುಖವಾದ್ದು. ಸತ್ಯ ಗಣಪತಿ ಎಂದೇ ಖ್ಯಾತವಾದ ಸ್ವಯಂಭು ವಿನಾಯಕ ಮೂರ್ತಿಯಿರುವ ಕಾಣಿಪಾಕಂ ಹಲವು ಪವಾಡಗಳ ತಾಣ.
ಸ್ಥಳ ಪುರಾಣದ ರೀತ್ಯ ಹಿಂದೆ ಈ ಗ್ರಾಮದಲ್ಲಿದ್ದ ಮೂವರು ರೈತ ಸೋದರರಿದ್ದರು. ಅವರಲ್ಲಿ ಒಬ್ಬನಿಗೆ ಕಣ್ಣು ಕಾಣುತ್ತಿರಲಿಲ್ಲ, ಮತ್ತೊಬ್ಬನಿಗೆ ಮಾತು ಬರುತ್ತಿರಲಿಲ್ಲ, ಮಗದೊಬ್ಬನಿಗೆ ಕಿವಿ ಕೇಳುತ್ತಿರಲಿಲ್ಲವಂತೆ. ಆದರೆ ಪರಸ್ಪರ ಸಹಾಯದಿಂದ ಮೂವರೂ ಜೀವಿಸುತ್ತಿದ್ದರು. ತಮ್ಮ ಹೊಲದಲ್ಲಿದ್ದ ಬಾವಿಯಿಂದ ಪೈರಿಗೆ ನೀರುಣಿಸುತ್ತಿದ್ದರಂತೆ. ಒಮ್ಮೆ ಬಾಯಿಯಲ್ಲಿ ನೀರು ಬತ್ತಿಹೋದಾಗ ಅವರು ಚಿಂತಾಕ್ರಾಂತರಾದರು. ಮತ್ತಷ್ಟು ಆಳ ತೆಗೆಯಲು ತೀರ್ಮಾನಿಸಿ ಬಾವಿಯಲ್ಲಿ ಇಳಿದು ಅಗೆದಾಗ, ಹಾರೆ ಕಲ್ಲೊಂದಕ್ಕೆ ತಗುಲುತ್ತಿದ್ದಂತೆ ಅದರಿಂದ ರಕ್ತ ಚಿಮ್ಮಿತಂತೆ. ಆ ರಕ್ತ ಸಿಂಚನದಿಂದ ಕುರುಡನಿಗೆ ಕಣ್ಣು ಬಂದರೆ, ಕಿವುಡನಿಗೆ ಕಿವಿ ಕೇಳುವಂತಾಯಿತಂತೆ, ಮತ್ತೊಬ್ಬನಿಗೆ ಮಾತು ಬಂತಂತೆ. ಈ ಪವಾಡದ ಬಗ್ಗೆ ತಿಳಿದ ಪುರಜನರು ಬಾವಿಯ ಬಳಿ ಬಂದಾಗ ಅಲ್ಲಿ ಗಣಪತಿಯ ವಿಗ್ರಹ ಗೋಚರಿಸಿತಂತೆ. ಪುರಜನರು ಆ ಗಣಪತಿ ವಿಗ್ರಹವನ್ನು ಅಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಲಾರಂಭಿಸಿದರಂತೆ.
ಈ ಸುದ್ದಿ ಊರಿಂದ ಊರಿಗೆ ಹಬ್ಬಿ ಜನರು ತಂಡೋಪತಂಡವಾಗಿ ಆಗಮಿಸಿ ದೇವರಿಗೆ ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿದರಂತೆ. ಹೀಗೆ ಜನ ಒಡೆದ ತೆಂಗಿನಕಾಯಿಯ ನೀರು ದೇವಾಲಯದ ಎದುರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಕಲ್ಯಾಣಿಯಾಗಿ ಮಾರ್ಪಟ್ಟಿತಂತೆ. ಜೊತೆಗೆ ದೇವರ ಬಳಿಯ ಬಾಯಿಯಿಂದ ನೀರು ಉಕ್ಕಿ ಕಲ್ಯಾಣಿ ತುಂಬಿ ನೀರು ಹೊರ ಹರಿಯಲಾರಂಭಿಸಿತಂತೆ. ಈ ಪ್ರದೇಶದಲ್ಲಿ ತಮಿಳು ಭಾಷಿಕರು ಹೆಚ್ಚಾಗಿರುವ ಕಾರಣ ಇವರು ಇದಕ್ಕೆ ಕಾಣಿಪಾಕಂ ಎಂದು ಕರೆದರಂತೆ. ಕಾಣಿ ಎಂದರೆ ಒಂದು ಎಕರೆ ಎಂದೂ, ಪರಕಂ ಎಂದರೆ ಹರಿಯುವ ನೀರೆಂದೂ ಅರ್ಥ. ಹೀಗಾಗಿ ಇದು ಕಾಣಿಪರಕಂ ಎಂದು ಖ್ಯಾತವಾಗಿತ್ತು. ಕಾಲಾನಂತರದಲ್ಲಿ ಕಾಣಿಪಾಕಂ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಜೋಳರ ಕಾಲದಲ್ಲಿ ಅಂದರೆ 11ನೇ ಶತಮಾನದಲ್ಲಿ ಒಂದನೇ ಕುಲತುಂಗ ಚೋಳ ಇಲ್ಲಿದ್ದ ದೇವಾಲಯವನ್ನು ವಿಸ್ತರಣೆ ಮಾಡಿ ಭವ್ಯ ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತದೆ. ಬಳಿಕ 1336ರಲ್ಲಿ ವಿಜಯನಗರದ ಅರಸರು ದೇವಾಲಯಕ್ಕೆ ಗೋಪುರ ನಿರ್ಮಿಸಿದರೆಂದೂ ತಿಳಿದುಬರುತ್ತದೆ. ಈ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು, ಐದು ಅಂತಸ್ತುಗಳ ಭವ್ಯ ಗೋಪುರ, ಮುಖ ಮಂಟಪ ನಿರ್ಮಿಸಲಾಗಿದೆ.
ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಬಾವಿಯಲ್ಲಿ ಸಿಕ್ಕ ಸ್ವಯಂಭು ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಘ್ನೇಶ್ವರ ಮೂರ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದೂ ಹೇಳಲಾಗುತ್ತದೆ. 50 ವರ್ಷಗಳ ಹಿಂದೆ ಲಕ್ಷ್ಮಮ್ಮ ಎಂಬ ಭಕ್ತರೊಬ್ಬರು ಮಾಡಿಸಿಕೊಟ್ಟಿದ್ದ ಬೆಳ್ಳಿಯ ಕವಚ, ಕಿರೀಟ ಎಲ್ಲವೂ ಈಗ ಚಿಕ್ಕದಾಗಿದ್ದು, ದೇವರಿಗೆ ತೊಡಿಸಲು ಆಗುವುದಿಲ್ಲವಂತೆ. ಹೀಗಾಗಿ ದೇವರ ಮೂರ್ತಿ ಬೆಳೆಯುತ್ತಿದೆ ಎಂಬುದು ಸಾಬೀತಾಗುತ್ತದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿಯವರು. ಕಳೆದ ಕೆಲವು ದಶಕಗಳಿಂದ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ, ದೇಗುಲದ ಮುಂದಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದರೆ ಸಕಲ ರೋಗ ನಿವಾರಣೆ ಆಗುತ್ತದೆ. ಮನದಲ್ಲಿ ಅಂದು ಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ. ಹಲವರು ಇಲ್ಲಿ ಬಂದು ಸತ್ಯ ಮಾಡಿಸುವ ಪರಿಪಾಠವೂ ಇದೆ.
ಬೆಳಗ್ಗೆ 4ಗಂಟೆಗೆ ತೆರೆಯುವ ದೇವಾಲಯದಲ್ಲಿ ರಾತ್ರಿ 9.30ರವರೆಗೂ ವಿವಿಧ ಪೂಜೆ, ಅಭಿಷೇಕಗಳು ನಡೆಯುತ್ತವೆ. ಬೆಂಗಳೂರಿನಿಂದ ತಿರುಪತಿಗೆ ಹೋಗುವವರು ಸಾಮಾನ್ಯವಾಗಿ ಮಾರ್ಗ ಮಧ್ಯೆಯೇ ಇರುವ ಈ ಗಣಪತಿ ದೇವಾಲಯಕ್ಕೂ ಹೋಗಿ ಬರುತ್ತಾರೆ.
****
Sleeping Hanuman at Triveni Sangam Allahabad
Today's divine Darshan of Shri Bade Hanumanji @ Triveni Sangam, Uttar Pradesh 🙏
|| Sri Anjaneyam ||
Hanuman Ji is undoubtedly the strongest personalities in the Indian Ramayan. Hanuman temples can be located everywhere each and every village but the Sleeping Hanuman at Allahabad is one of its kind.
The history of the murthy of Shri Bade Hanumanji, situated at the Sangam Kshetra of Prayag is very unique. The internal story connected with the history of the idol is like this. In the city of Kannauj a very rich but issueless trader was living. He had a great storage of money and material and had all the enjoyments of life; But unfortunately that trader had no issue.
This trader went towards the hills of Vindhychal to construct a temple of Hanuman Ji to fulfil his wish of getting a son. In the chain of hills of Vindhyachal that trader had constructed a huge statue of Hanuman Ji out of stone. He decided to bathe that statue of Hanuman Ji at many places of pilgrimage. While bathing this statue of Hanuman Ji at various Teerthsthals, he ultimately arrived at Sangam Kshetra of Prayag. While he was taking rest in the night he dreamt that if he leaves this statue at this holy place his all the wishes and hankerings will be fulfilled. At the dawn of the day he decided to work on the lines of the previous night dream. Thus leaving that statue at Prayag Kshetra that rich trader left for his city Kannauj. As the time passed that rich trader got a son born to his wife by the kindness of Shri Bade Hanuman Ji and all his wishes were also fulfilled.
After some time that huge statue of Shri Bade Hanuman Ji remained submerged in the waters and got stucked under the sands. After some time a pinancing Mahatma Ji cladded with Vyaghracharma arrived at Sangam Kshetra in the holy month of Magha to have a pious dip in Triveni. The name of that pinancing Mahatma cladded with Vyaghracharma was Balagiri. Fortunately on one day when that pinancing Mahatma was piercing his Trishul in the sand to form his Dhooine, he got some inkling of that huge Shri Vigrah. That pinancing Mahatma Balgiri started to remove soil and sand from that place. He got at that place the Shri Vighrah of Shri Bade Hanumanji. After purifying that Shri Vighrah that pinancing Mahatama had it situated at that very place and started to meditating upon Shri Bade Hanumanji. The nearby people were very much impressed by the sacred influence of that pinancing Mahatma Shri Balagiri and the fame of Shri Bade Hanuman Ji started to extend for and wide very rapidly.
*******
ಶಾರದಾದೇವಿ ಋಷಿ ಕಷ್ಯಪರ ಕಾಶ್ಮೀರ... sharada devi in kashmir
ಇದು ಯಾರ ಕಾಶ್ಮೀರ?
ಇದು ಶಾರದಾದೇವಿಯ ಕಾಶ್ಮೀರ.
"ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ | ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೇ |"
ಹೀಗೆ...ಶಾರದಾದೇವಿಯನ್ನು ಸ್ತುತಿಸುವುದೇ 'ಕಾಶ್ಮೀರ ಪುರವಾಸಿನಿ' ಎಂದು.
ಕಾಶ್ಮೀರದ ಲಿಪಿಯ ಹೆಸರೇನು ಗೊತ್ತೇ?... 'ಶಾರದ'.ಅಂದಿನ ಕಾಶ್ಮೀರದ ವೇದಶಾಲೆಗಳನ್ನು ಏನೆಂದು ಕರೆಯುತ್ತಿದ್ದರು?....ಶಾರದ ಪೀಠ!
ಇದೆಲ್ಲಾ ಇರಲಿಬಿಡಿ.. ಅಂದೊಮ್ಮೆ ಇಡೀ ಕಾಶ್ಮೀರವನ್ನೇ 'ಶಾರದ ದೇಶ' ಎಂದು ಕರೆಯುತ್ತಿದ್ದರು.
ಆದರೆ ದುರಾದೃಷ್ಟ ನೋಡಿ ನಮ್ಮ ಶಾರದಮ್ಮನ ಮೂಲ ದೇವಸ್ಥಾನ ಪಾಕಿಸ್ತಾನದಲ್ಲಿದೆ. ಅದರ ಸ್ಥಿತಿ ನೋಡಿ...
*
ಇದು ಯಾರ ಕಾಶ್ಮೀರ?ಇದು ಋಷಿ ಕಷ್ಯಪರ ಕಾಶ್ಮೀರ...'ಮೈರಾ' ಎನ್ನುವ ಸಂಸ್ಕೃತ ಪದದ ಅರ್ಥ ಸರೋವರ ಎಂದು. ಈಗಿನ ಮನ್ವಂತರದಲ್ಲಿ, ಸಪ್ತರ್ಷಿಗಳಲ್ಲಿ ಒಬ್ಬರು ಕಶ್ಯಪರು, ಇವರು ಬ್ರಹ್ಮನ ಮೊಮ್ಮಗ. ಇವರ ತಂದೆಯಾದ ಮಹರ್ಷಿ ಮಾರೀಚಿ, ಬ್ರಹ್ಮನ ಮಾನಸ ಪುತ್ರರು. ಪ್ರಜಾಪತಿ ದಕ್ಷ ತನ್ನ ಹದಿಮೂರು ಹೆಣ್ಣುಮಕ್ಕಳನ್ನು ಕಶ್ಯಪ ಮುನಿಗೆ ಕೊಟ್ಟು ಮದುವೆ ಮಾಡಿ ಕೊಡುತ್ತಾರೆ.
ಕಶ್ಯಪ ಗೋತ್ರ ಆರಂಭವಾಗುವುದೇ ಇಲ್ಲಿಂದ. ಇವರ ಸಂತಾನದಲ್ಲಿ, ದೇವತೆಗಳು, ದೈತ್ಯರು, ದಾನವರು, ನಾಗಾಗಳು, ಮಾನವರು ಎಲ್ಲಾ ಪಂಗಡಗಳ ಜೀವಿಗಳು ಸೇರಿರುತ್ತಾರೆ.
ನೀಲಮತ ಪುರಾಣದ ಪ್ರಕಾರ ಈಗಿನ ಕಾಶ್ಮೀರವಿರುವ ಸ್ಥಳದಲ್ಲಿ 'ಸತೀಸರ'ಎನ್ನುವ ಬಹುದೊಡ್ಡ ಸರೋವರವಿತ್ತಂತೆ. ಶಿವನ ಪತ್ನಿ ಸತಿಗೆ ಅದು ತುಂಬಾ ಪ್ರಿಯವಾದ ಸರೋವರವಾಗಿದ್ದರಿಂದ ಕಶ್ಯಪರು ಈ ಸರೋವರವನ್ನು ಶಿವ ಸತಿಯರಿಗ ಬಳುವಳಿಯಾಗಿ ಕೊಟ್ಟಿದ್ದರಂತೆ. ಆದರೆ ಆ ಸರೋವರದಲ್ಲಿ ಜಲೋಧ್ಭವ ಎನ್ನುವ ರಾಕ್ಷಸ ಅಡಗಿಕೊಂಡು ಕಶ್ಯಪರ ಸಂತಾನಗಳಿಗೆ ಕಿರುಕುಳ ಕೊಡುತ್ತಿದ್ದ. ಆಗ ಕಶ್ಯಪರು ಅವರ ಮಗ 'ಅನಂತ ನಾಗ'ನ ಜೊತೆಗೂಡಿ ಒಂದು ವರಾಹ ಮುಖ (ಇಂದಿನ ಬಾರಮುಲ್ಲ) ಎನ್ನುವ ಕಣಿವೆಯನ್ನು ಕಡಿದು ಆ ಸರೋವರದ ನೀರನ್ನು ಹೊರ ಹರಿಸುತ್ತಾರೆ. ಹೀಗೆ ಹರಿದ ನೀರು ಪಶ್ಚಿಮದ ಇನ್ನೊಂದು ಕಣಿವೆಗೆ ಹರಿಯುತ್ತದೆ. ಅದನ್ನು ಕಶ್ಯಪ ಸಾಗರವೆಂದೂ (ಇಂದಿನ ಕ್ಯಾಸ್ಪಿಯನ್ ಸಮುದ್ರ) ಕರೆಯುತ್ತಾರೆ.
ನಂತರ ವಿಷ್ಣು ಆ ಜಲೋಧ್ಭವ ರಾಕ್ಷಸರ ಸಂಹಾರ ಮಾಡುತ್ತಾರೆ. ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದವ್ಯಾಸಂಗಕ್ಕೆಂದೇ ವಿಷೇಶವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆ...ಅದನ್ನು 'ಕಶ್ಯಪರ ಮೈರಾ'..ಕಶ್ಯಪ ಪುರ...ಕ್ರಮೇಣ "ಕಾಶ್ಮೀರ" ದ ಉಧ್ಭವವಾಗುತ್ತದೆ.
ಈ ಸುಂದರ ಕಾಶ್ಮೀರವನ್ನು ನೋಡಲು ಗೌರಿಯೂ ಗಣೇಶನ ಜೊತೆ ಹಿಮಚ್ಚಾದಿತ ಪರ್ವತಮಾರ್ಗವಾಗಿ ಬರುತ್ತಿದ್ದಳು. ಅದನ್ನು “ಗೌರೀ ಮಾರ್ಗ” ಎಂದು ಕರೆಯುತ್ತಿದ್ದರು. ಅದೂ ಸಹಾ ಇಸ್ಲಾಮೀಕರಣಗೊಂಡು “ ಗುಲ್ಮರ್ಗ” ವಾಗಿದೆ.
'ನೀಲಮತಿ ಪುರಾಣ' ಮತ್ತು ಅದರ ಆಧಾರಿತ 'ರಾಜತರಂಗಿಣಿ' ಇವು ಕಾಶ್ಮೀರದ ಪೌರಾಣಿಕ ಮತ್ತು ಐತಿಹಾಸಕದ ದಾಖಲೆಗಳು. ಹನ್ನೆರಡನೇ ಶತಮಾನದಲ್ಲಿ 'ಕಲ್ಹಣ' ಎಂಬ ಪಂಡಿತರು ಬರೆದ ಗ್ರಂಥಗಳ ಸರಮಾಲೆ ವಿಶ್ವದೆಲ್ಲೆಡೆ ಬಹಳ ಕುತೂಹಲ ಮತ್ತು ಆಸ್ಥೆಯಿಂದ ಅಭ್ಯಸಿಸಲಾಗುತ್ತಿದೆ....ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಇದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಕೊಳ್ಳುವುಸಿದಿಲ್ಲ...ಯಾಕೆಂದರೆ ಮಾಧ್ಯಮಗಳು ಬಿಂಬಿಸುವ ಕಾಶ್ಮೀರವೇ ಬೇರೆ.
ನಮ್ಮ ದುರದೃಷ್ಟ….
ಇದು ಯಾರ ಕಾಶ್ಮೀರ?
ಇದು ಶಾರದಾದೇವಿಯ ಕಾಶ್ಮೀರ.
"ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೇ |"
ಹೀಗೆ...ಶಾರದಾದೇವಿಯನ್ನು ಸ್ತುತಿಸುವುದೇ 'ಕಾಶ್ಮೀರ ಪುರವಾಸಿನಿ' ಎಂದು.
ಕಾಶ್ಮೀರದ ಲಿಪಿಯ ಹೆಸರೇನು ಗೊತ್ತೇ?... 'ಶಾರದ'
ಅಂದಿನ ಕಾಶ್ಮೀರದ ವೇದಶಾಲೆಗಳನ್ನು ಏನೆಂದು ಕರೆಯುತ್ತಿದ್ದರು?....ಶಾರದ ಪೀಠ!
ಇದೆಲ್ಲಾ ಇರಲಿಬಿಡಿ.. ಅಂದೊಮ್ಮೆ ಇಡೀ ಕಾಶ್ಮೀರವನ್ನೇ
'ಶಾರದ ದೇಶ' ಎಂದು ಕರೆಯುತ್ತಿದ್ದರು.
ಇಷ್ಟಿಲ್ಲದಿದ್ದರೆ ಶಂಕರಾಚಾರ್ಯರು ಕಾಶ್ಮೀರಕ್ಕೆ ಏಕೆ ಹೋಗುತ್ತಿದ್ದರು.
ಅಲ್ಲಿಯ ಕೃಷ್ಣಗಂಗೆ ನದಿಯ ತೀರದಲ್ಲಿರುವ ಶಾರದ ಪೀಠದ ಸೊಬಗನ್ನು ನೋಡಿ, ಅದೇ ತರಹದ ಇನ್ನೊಂದು ಶಾರದ ದೇವಸ್ಥಾನವನ್ನು ತುಂಗಭಧ್ರಾ ನದಿಯ ತೀರದ ಶೃಂಗೇರಿಯಲ್ಲಿ ಸ್ಥಾಪಿಸಲು ಪ್ರೇರಣೆ ಸಿಕ್ಕಿದ್ದು ಆ ಕಾಶ್ಮೀರದ ಶಾರದ ಪೀಠದಿಂದ.
ಶಾರದಾ ದೇವಿಯ ಶ್ರೀಗಂಧದ ಮೂಲ ವಿಗ್ರಹವನ್ನು ಕಾಶ್ಮೀರದಿಂದಲೇ ಶೃಂಗೇರಿಗೆ ತರಲಾಗಿತ್ತಂತೆ.
ಕಾಶ್ಮೀರಕ್ಕೆ ತಮ್ಮ ಕೆಲವು ಶಿಷ್ಯರೊಂದಿಗೆ ಹೋದ ಹೊಸತರಲ್ಲಿ ಶಂಕರಾಚಾರ್ಯರು ಒಬ್ಬ ಕಾಶ್ಮೀರಿ ಪಂಡಿತರ ಅತಿಥಿಯಾಗಿದ್ದರಂತೆ. ಮೊದಲ ದಿನವೇ ಅವರ ಪಾಂಡಿತ್ಯಕ್ಕೆ ಬೆರಗಾದ ಪಂಡಿತ ದಂಪತಿಗಳು ಅವರನ್ನು ಇನ್ನಷ್ಟು ದಿನಗಳು ತಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡರಂತೆ. ಅದಕ್ಕೆ ಒಪ್ಪಿಕೊಂಡ ಶಂಕರಾಚಾರ್ಯರು ಒಂದು ಶರತ್ತು ಹಾಕುತ್ತಾರೆ, ಅದೇನೆಂದರೆ ನಮ್ಮ ಅಡುಗೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು. ಇದು ಪಂಡಿತ ದಂಪತಿಗಳಿಗೆ ಸ್ವಲ್ಪ ಅವಮಾನಿತವಾಗಿ ಕಂಡರೂ..ಅವರಿಷ್ಟ ಎಂದು ಅಡುಗೆಗೆ ಬೇಕಾದ ದವಸ ಧಾನ್ಯಗಳನ್ನು, ಪಾತ್ರೆ ಕಟ್ಟುಗೆಗಳನ್ನು ಕೊಟ್ಟು ವಿರಮಿಸುತ್ತಾರೆ.
ಆದರೆ ಅಡುಗೆ ಮಾಡಲು ಬೇಕಾದ ಬೆಂಕಿಯನ್ನು ಕೊಡಲು ಮರೆತು ಬಿಡುತ್ತಾರೆ. ಇನ್ನೊಮ್ಮೆ ಅವರನ್ನು ಕರೆದು ತೊಂದರೆ ಕೊಡುವುದರ ಬದಲು ಹಾಗೇ ಹಸಿದ ಹೊಟ್ಟೆಯಲ್ಲೇ ಮಲಗಿ ಬಿಡುತ್ತಾರೆ. ಬೆಳಗ್ಗೆದ್ದು ಪಂಡಿತ ದಂಪತಿಗಳು ಬಂದು ನಮಸ್ಕರಿಸಿ ಮಾತನಾಡಿಸುವಾಗ ಅಡುಗೆಯ ಪಧಾರ್ಥಗಳೆಲ್ಲಾ ಹಾಗೇ ಇರುವುದನ್ನು ನೋಡಿ ಏಕೆಂದು ವಿಚಾರಿಸುತ್ತಾರೆ. ಆಗ ಅವರ ಶಿಷ್ಯರುಗಳು ಬೆಂಕಿ ಇಲ್ಲದ್ದರಿಂದ ಅಡುಗೆ ಮಾಡಲಾಗಲಿಲ್ಲ ಎಂದು ಹೇಳುತ್ತಾರೆ. ತಕ್ಷಣ ಆ ಗೃಹಿಣಿ ಅಲ್ಲೇ ಇದ್ದ ನೀರನ್ನು ಕಟ್ಟಿಗೆಯ ಮೇಲೆ ಚಿಮುಕಿದಾಕ್ಷಣ ಬೆಂಕಿ ಉರಿಯ ತೊಡಗುತ್ತದೆ !.
ಈ ಪ್ರಸಂಗದಿಂದ ಶಂಕರಾಚಾರ್ಯರಿಗೆ ತಾವಿನ್ನೂ ತುಂಬಾ ಕಲಿಯುವುದಿದೆ ಈ ಶಾರದ ದೇಶದಲ್ಲಿ ಎನಿಸಿ ಹಲವುದಿನಗಳ ಕಾಲ ಅಲ್ಲೇ ನೆಲೆಸುತ್ತಾರೆ. ಅವರು ನೆಲಸಿದ ಬೆಟ್ಟ ಈಗಲೂ 'ಶಂಕರಾಚಾರ್ಯ ಬೆಟ್ಟ' ಎಂದು ಪ್ರಸಿಧ್ಧ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಇದು ಶ್ರೀನಗರದ ನಟ್ಟ ನಡುವೆ , ಪ್ರಸಿಧ್ಧವಾದ 'ದಲ್ 'ಸರೋವರದ ಪಕ್ಕದಲ್ಲಿದೆ.
ಅಂದಿನ ಶಾರದಾ ಪೀಠ, ದುರದೃಷ್ಟವಶಾತ್ ಈಗ ಪಾಕೀಸ್ತಾನದ ಆಳ್ವಿಕೆಯ ಕಾಶ್ಮೀರದ ಭಾಗದಲ್ಲಿದೆ. ಅಲ್ಲಿಗೆ ಹೋಗಲು ಯಾರಿಗೂ ಅನುಮತಿ ಸಿಗುತ್ತಿಲ್ಲ. ಶಾರದಾ ದೇವಸ್ಥಾನ ಶಿಥಿಲಗೊಂಡು ದಿನೇ ದಿನೇ ಧರೆಗುರುಳುತ್ತಿದೆ.
ವಿಷಿಷ್ಟಾದೈತ ಸಿಧ್ಧಾಂತ ನಾಥಮುನಿಯಿಂದ ಪ್ರಾರಂಭವಾದುದು ಎಂದು ಉಲ್ಲೇಖವಿದೆ, ಅದನ್ನು ಯಮುನಾಚಾರ್ಯರು ವಿಸ್ತರಿಸಿದರು ಮತ್ತು ರಾಮಾನುಜರು ಬ್ರಹ್ಮ ಸೂತ್ರದ ಚೌಕಟ್ಟಿನಲ್ಲಿ ಪ್ರತಿಪಾದಿಸಿ,' ಶ್ರೀ ಭಾಷ್ಯಂ' ಎನ್ನುವ ಮೇರುಗ್ರಂಥವನ್ನು ಸೃಷ್ಟಿಸಿದರು. ಇದೇ ವೈಷ್ಣವರ ಮೂಲಗ್ರಂಥ.
ಇಂತಹದ್ದೊಂದು ಗ್ರಂಥವನ್ನು ಸೃಷ್ಟಿಸಲು ರಾಮಾನುಜರು ತಮ್ಮ ಶಿಷ್ಯ ಕುರುತ್ತಾಳ್ವಾರ್ (ಕುರೇಸಿ) ಜೊತೆಗೂಡಿ ಬ್ರಹ್ಮಸೂತ್ರವನ್ನು ಹುಡುಕಿಕೊಂಡು ಕಾಶ್ನೀರಕ್ಕೆ ಹೋಗಿದ್ದರು. ಅವರಿಗಾಗಲೇ ಅರವತ್ತು ವರ್ಷ ಆಗ !.
ಹೀಗೆ ಶಾರದಾದೇವಿಯ ಕೃಪಾಕಟಾಕ್ಷ ಅನಾದಿಕಾಲದಿಂದಲೂ ಕಾಶ್ಮೀರದ ಮೇಲಿರುವಾಗ..ಕಾಶ್ಮೀರ ಇನ್ನಾರದಾಗಲು ಸಾಧ್ಯ?
ಇದು ಯಾರ ಕಾಶ್ಮೀರ
ಇದು ಭಟ್ಟರ ಕಾಶ್ಮೀರ...
ನೀಲಮತ ಪುರಾಣದ ಪ್ರಕಾರ ಕಾಶ್ಮೀರಕ್ಕೆ ಸುಮಾರು 5100 ವರ್ಷದ ಇತಿಹಾಸವಿದೆ. 13 ನೇ ಶತಮಾನದವರೆಗೂ ಕಾಶ್ಮೀರದಲ್ಲಿ ಶತಪ್ರತಿಶತ ಹಿಂದು ಮತ್ತು ಬೌಧ್ಧ ಧರ್ಮಿಗಳಿದ್ದರು.
ಕೇವಲ ಏಳು ಶತಕಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ 97 ಪ್ರತಿಶತ ಮುಸ್ಲೀಮರು!
ಏನೇನೆಲ್ಲಾ ಆಗಿರ ಬಹುದು ಈ ಏಳು ಶತಕಗಳಲ್ಲಿ.
ಕಾಶ್ಮೀರದ ಪಂಡಿತರನ್ನು 'ಭಟ್ಟರು' ಎಂದು ಕರೆಯುತ್ತಾರೆ. ಇವರು ಶೈವ ಸಾರಸ್ವತ ಬ್ರಾಹ್ಮಣರು. ಸುಂದರ ಕಾಶ್ಮೀರದ ಶಾಂತಿ ಪ್ರಿಯ ಜನಾಂಗ. ವೇದ ಪಾರಾಯಣ, ಪೂಜೆ ಪುನಸ್ಕಾರಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಖೀಜೀವನ ನಡೆಸುತ್ತಿದ್ದ ಜನಾಂಗ. ಕಣಿವೆಯ ಜನರಲ್ಲಿ ಒಂದು ರೀತಿಯ ಭೌಗೋಳಿಕ ಏಕಾಂತತೆ ಇರುತ್ತದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ, ಹಾಗೇ ಹೊರಗಿನವರಿಗೆ ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ, ಹಾಗೂ ತಮ್ಮ ತಮ್ಮಲ್ಲೇ ಒಗ್ಗಟ್ಟೂ ಇರುವುದಿಲ್ಲ.
13 ನೇ ಶತಮಾನದ ಲೋಹಾನರ ರಾಜವಂಶದ ರಾಜ ರಾಮಚಂದ್ರನೇ ಕೊನೆಯ ಹಿಂದೂ ರಾಜ.
ಅಷ್ಟೊತ್ತಿಗಾಗಲೇ ತುರ್ಕಿಸ್ಥಾನದ 'ದುಲ್ಚ 'ಎನ್ನುವ ದುಷ್ಟ ಕಾಶ್ಮೀರದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ಸುಮಾರು ಐವತ್ತು ಸಾವಿರ ಕಾಶ್ಮೀರಿಗಳನ್ನು ಗುಲಾಮನರನ್ನಾಗಿ ಸೆರೆಹಿಡಿದು ಕೊಂಡು ಹೋದ.
ಮುಂದೆ 'ರಿನ್ಚೆನ್' ಎನ್ನುವ ಬೌಧ್ಧ ಧರ್ಮದ ಸೇನಾನಿ ರಾಮಚಂದ್ರ ರಾಜನನ್ನು ಮೋಸದಿಂದ ಕೊಃದು ತಾನೇ ರಾಜನಾದ.
ಇಲ್ಲೊಂದು ಕುತೂಹಲಕಾರಿ ವಿದ್ಯಾಮಾನ ನಡೆಯುತ್ತದೆ. 'ರಿನ್ಚೆನ್' ಕಾಶ್ಮೀರದ ಪ್ರಜೆಗಳನ್ನು ಓಲೈಸಲು "ಶೈವ" ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸುತ್ತಾನೆ. ಇದನ್ನು ರಾಜಗುರು ದೇವಸ್ವಾಮಿಯ ಹತ್ತಿರ ವಿಚಾರಣೆ ಮಾಡುತ್ತಾನೆ. ದೇವಸ್ವಾಮಿ ಈ ವಿಷಯವನ್ನು ಕಾಶ್ಮೀರಿ ಪಂಡಿತರ ಬಳಿ ನಿಷ್ಕರ್ಶಿಸಿ, ಇದಕ್ಕೆ ಶೈವ ಮತದಲ್ಲಿ ಅವಕಾಶವಿಲ್ಲವೆಂದು ಹೇಳಿಬಿಡುತ್ತಾರೆ!
ಇದರಿಂದ ಅವಮಾನಿತನಾದ ರಿನ್ಛೆನ್ ಮುಸ್ಲೀಮ್ ಧರ್ಮಕ್ಕೆ ಮತಾಂತರಗೊಂಡು, ಜೊತೆಗೆ ಹತ್ತು ಸಾವಿರ ಪಂಡಿತರನ್ನೂ ಮುಸ್ಲೀಮರನ್ನಾಗಿ ಮತಾಂತರಗೊಳಿಸಿಬಿಡುತ್ತಾನೆ.
ಇಲ್ಲಿಂದ ಶುರುವಾಗುತ್ತದೆ ನೋಡಿ ಭಟ್ಟರ ಮತಾಂತರದ, ಮಾರಣಹೋಮದ ವೃತ್ತಾಂತ.
ಇದು ಯಾರ ಕಾಶ್ಮೀರ
ಇದು ರಿಷಿಗಳ, ಸಂತರ, ಕವಿಗಳ ಕಾಶ್ಮೀರ..
13 ನೇ ಶತಮಾನದಿಂದ ಆರಂಭವಾದ ಮತಾಂತರ, ಕೇವಲ ಏಳು ಶತಮಾನಗಳಲ್ಲಿ ಹಿಂದೂ ಮತ್ತು ಬೌಧ್ಧರ ಸಂಖ್ಯೆಯನ್ನು..... ಶತ ಪ್ರತಿಶತದಿಂದ ಕೇವರ ಮೂರು ಪ್ರತಿಶತಕ್ಕಿಳಿಸಿ ಬಿಟ್ಟಿತ್ತು!.
ಭಾರತದಲ್ಲಿ ಈ ತರಹದ ಕ್ಷಿಪ್ರವಾಗಿ ನಡೆದ ಮತಾಂತರದ ಉದಾಹರಣೆಗಳು ಬಹುಷಃ ಬೇರೆಲ್ಲೂ ಕಾಣಸಿಗದು.... of course ...ಗೋವಾ ಒಂದನ್ನು ಹೊರತು ಪಡಿಸಿ.
ಇಲ್ಲಿ ಒಂದು ಕುತೂಹನ ವಿದ್ಯಮಾನವೆಂದರೆ ಈ ಎರಡೂ ರಾಜ್ಯಗಳ ಮತಾಂತರದ ಮಂಥನದಲ್ಲಿ ಸಿಲುಕಿದವರು ಪ್ರಮುಖವಾಗಿ ಸಾರಸ್ವತ ಬ್ರಾಹ್ಮಣರು!
ಕಶ್ಯಪರ ಕಾಶ್ಮೀರದಲ್ಲಿ ಶೈವ ಸಾರಸ್ವತ ಬ್ರಾಹ್ಮಣರು ಮತ್ತು ವಿಶ್ವಾಮಿತ್ರರ ಗೋಮಾಂತದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು.
ಈ ರಕ್ತಸಿಕ್ತ ಇತಿಹಾಸದ ಅವಧಿಯಲ್ಲೂ ಕಾಶ್ಮೀರದಲ್ಲಿ ಹಲವು ಕ್ರಾಂತಿಕಾರಕ ಘಟನೆಗಳು ನಡೆಯುತ್ತವೆ, ಸೂಫಿ ಸಂತರ, ನಂದ ರಿಷಿಯಂತಹ ಮುಸ್ಲಿಂ ಸನ್ಯಾಸಿಯ ಮತ್ತು ಲಲ್ಲೇಶ್ವರಿಯಂತಹ ಸಂತ ಕವಿಗಳ ಉಧ್ಭವವಾಗುತ್ತದೆ.
ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಕ್ಕಮಹಾದೇವಿಯ ವೃತ್ತಾಂತ ಹದಿನಾಲ್ಕನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಲಲ್ಲೇಶ್ವರಿಯ ಹೆಸರಿನಲ್ಲಿ ಪುನಾರಾವರ್ತನೆಯಾಗುತ್ತದೆಯೇನೋ ಎನ್ನುವಷ್ಟು ಹೊಂದಾಣಿಕೆ.
ಇಬ್ಬರೂ ಶಿವಾರಾಧಕರು, ಇಬ್ಬರೂ ಅಪ್ರತಿಮ ಸುಂದರಿಯರು, ಇಬ್ಬರೂ ವಿವಾಹ ಬಂಧನದಿಂದ ಹೊರಬಂದು ಆಧ್ಯಾತ್ಮದ ಹಾದಿಯಲ್ಲಿ ನಡೆದವರು ಮತ್ತು ಇಬ್ಬರೂ ಅಧ್ಭುತ ಕಾವ್ಯಗಳ, ಸಾಹಿತ್ಯದ ರಚನಾಕಾರರು...ಅಕ್ಕಮಹಾದೇವಿ ವಚನನಗಳನ್ನು ರಚಿಸಿದರೆ ಲಲ್ಲೇಶ್ವರಿಯ ರಚನೆಗಳು 'ವಾಕ್' ಹೆಸರಿನಲ್ಲಿ ವಿಶ್ವವದೆಲ್ಲೆಡೆ ಹೆಸರುವಾಸಿಯಾಗಿವೆ.
ಅಕ್ಕಮಹಾದೇವಿಯನ್ನು 'ಅಕ್ಕ' ಎಂದು ಸಂಭೋದಿಸದರೆ ಲಲ್ಲೇಶ್ವರಿಯನ್ನು ಅಮ್ಮ (ಲಾಲ್ ದೇಡ್) ಎಂದು ಸಂಭೋದಿಸಲಾಗುತ್ತದೆ.
ಇಬ್ಬರೂ ಆಕಾಶವೇ ಹೊದಿಕೆ ಎಂದು ಕೇಶವಸ್ತ್ರಧಾರಿಗಳಾಗಿ ನಡೆದಾಡುತ್ತಿದ್ದರಂತೆ ಎನ್ನುವ ಪ್ರತೀತಿ.
ಲಲ್ಲೇಶ್ವರಿಯ ವೈಶಿಷ್ಟ್ಯವೆಂದರೆ ಅವರ ಶಿಷ್ಯವರ್ಗದಲ್ಲಿ ಮುಸ್ಲೀಮರೇ ಹೆಚ್ಚು!
'ಹಿಂದೂ ಮುಸ್ಲೀಮರೆನ್ನುವ ಭೇದ ಭಾವ ಬೇಡ
ಶಿವ ಸೂತ್ರವೇ ಎಲ್ಲದರ ಮೂಲ' ಎಂದು ಭೋಧಿಸಿ ಶಿವಾರಾಧಕರ.. ಸೂಫಿ ಸಂತರ..ಮಾತೆಯಾಗಿ ಮೆರೆದಳು ಕಾಶ್ಮೀರದ ಲಲ್ಲೇಶ್ವರಿ.
ಇದು ಯಾರ ಕಾಶ್ಮೀರ
ಕರ್ನಾಟಕದ ಬಿಲ್ಹಣ..
ಕಾಶ್ಮೀರದ ಕಲ್ಹಣ...ಇದು ಇವರ ಕಾಶ್ಮೀರ
ಕಾಶ್ಮೀರದ ನಂಟು ಕರ್ನಾಟಕಕ್ಕೂ ಇತ್ತು..!
ಅದು ಹೇಗೆ?
ಅನಾದಿಕಾಲದಿಂದಲೂ ಈ ದೇವನಾಡಿನಲ್ಲಿ ಪ್ರಚಲಿತವಾದ ದೇವಭಾಷೆ ಸಂಸ್ಕೃತ.
ಹನ್ನೊಂದನೇ ಶತಮಾನದಲ್ಲಿ 'ಕಲ್ಹಣ' ಎಂಬ ಮಹಾನ್ ಕವಿ ಕಾಶ್ಮೀರದ ಇತಿಹಾಸದ ಬಗ್ಗೆ, ಇಲ್ಲಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಂದು ಬೃಹತ್ ಗ್ರಂಥವನ್ನು ಬರೆಯುತ್ತಾರೆ. ಅದೇ "ರಾಜತರಂಗಿಣಿ".
ಇದೇ ಸಮಯದಲ್ಲಿ "ಬಿಲ್ಹಣ" ಎನ್ನುವ ಬಹುಮುಖ ಪ್ರತಿಭೆಯ ಕಾಶ್ಮೀರದ ಕವಿಯೊಬ್ಬರ ರಚನೆಗಳು ಬೆಳಕಿಗೆ ಬರುತ್ತವೆ. ಆದರೆ ಅವರು ಪ್ರಖ್ಯಾತಿ ಪಡೆದಿದ್ದು ಮತ್ತು ಅವರ ರಚನೆಗಳು ಬೆಳಕು ಕಂಡಿದ್ದು ಅಂದಿನ ಕರ್ನಾಟಕದಲ್ಲಿ!
ಕಾಶ್ಮೀರದಿಂದ ಹೊರಬಂದು ವಿಧರ್ಭ, ವಂಗ, ಮಾಳವ ದೇಶಗಳನ್ನೆಲ್ಲಾ ಸುತ್ತಾಡಿ ಅಂದಿನ ಕಲ್ಯಾಣಕಟಕಕ್ಕೆ ಬಂದು ಸೇರುತ್ತಾರೆ. ಅದು ಚಾಳುಕ್ಯ ವಂಶದ ರಾಜರಾದ ಆರನೇ ವಿಕ್ರಮಾದಿತ್ಯರ ರಾಜಧಾನಿ. ವಿಕ್ರಮಾದಿತ್ಯರು ಇವರ ಸಂಸ್ಕೃತದ ಪಾರಂಗತ್ಯವನ್ನು ಮೆಚ್ಚಿ ಅವರಿಗೆ ಆಸ್ಥಾನ ಕವಿಯ ಸ್ಥಾನವನ್ನು ಕೊಟ್ಟು ಗೌರವಿಸುತ್ತಾರೆ.
ಇಲ್ಲಿ ಅವರು "ವಿಕ್ರಮಾಂಕ ದೇವಚರಿತ" ವನ್ನು ಬರೆಯುತ್ತಾರೆ.
ಆದರೆ ಬಿಲ್ಹಣರ ರಸಿಕತೆಯ ಪರಿಚಯವಾಗುವುದು ಅವರ ಇನ್ನೊಂದು ಕೃತಿ.."ಚೌರ ಪಂಚಶಿಖಾ" ಎನ್ನುವ ಐವತ್ತು ಪ್ರೇಮಗೀತೆಗಳ ಕೃತಿಯಿಂದ. ಇದರ ಹಿನ್ನಲೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ಇದೆ.
ವಿಕ್ರಮಾದಿತ್ಯರ ರಾಜ್ಯಕ್ಕೂ ಬರುವ ಮೊದಲು, ಬಿಲ್ಹಣ ಅಂದಿನ ಗುಜರಾತಿನ ವೀರಸೇನರ ಆಸ್ಥಾನದ ವಿದ್ವಾಂಸರಾಗಿರುತ್ತಾರೆ. ಈ ಯುವ ಕವಿಗೆ ರಾಜಕುಮಾರಿ ಚಂಪಾವತಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿದ್ದರು. ಆದರೆ ಇದಕ್ಕೆ ಕೆಲವು ನಿರ್ಭಂದನೆಗಳನ್ನು ವಹಿಸಿದ್ದರು.
ಅಪ್ರತಿಮ ಸುಂದರಿಯಾದ ರಾಜಕುಮಾರಿ ಈ ಸುಂದರ, ಪ್ರತಿಭಾನ್ವಿತ ಕವಿಯಿಂದ ಸಾಹಿತ್ಯದ, ಸಂಸ್ಕೃತದ ಶಿಕ್ಷಣದ ಸಮಯದಲ್ಲಿ ವಯೋಸಹಜವಾದ ವಾಂಛನೆಗಳು ಬರಬಾರದು ಎಂದು ರಾಜ ವೀರಸೇನ ಬಿಲ್ಹಣನ ಕಣ್ಣು ಕಟ್ಟಿ..ಇವರು ಕುರುಡರು ಎಂದು , ರಾಜಕುಮಾರಿ ಕುಷ್ಟರೋಗಿ ಎಂದು ಒಬ್ಬರಿಗೊಬ್ಬರನ್ನು ಪರಿಚಯಿಸಿ ನಡುವೆ ಒಂದು ದಪ್ಪನೆಯ ಪರದೆಯನ್ನು ಹಾಕುತ್ತಾರೆ. ಇದೇ ನಿಜವೆಂದು ನಂಬಿ ರಾಜಕುಮಾರಿಯ ವ್ಯಾಸಂಗ ನಡೆಯುತ್ತಿರುತ್ತದೆ.
ಒಮ್ಮೆ ಬೆಳದಿಂಗಳ ಚಂದ್ರನನ್ನು ವರ್ಣಿಸುತ್ತಾ ಒಂದು ಪ್ರೇಮಕವಿತೆಯನ್ನು ಹೇಳಿಕೊಡುತ್ತಾರೆ. ಆಗ ಬರುತ್ತದೆ ನೋಡಿ ರಾಜಕುಮಾರಿಗೆ ಬಿಲ್ಹಣನ ಬಗ್ಗೆ ಅನುಮಾನ...ಒಬ್ಬ ಕುರುಡನು, ಎಂದೂ ಚಂದ್ರನನ್ನು ನೋಡದವನು ಇಷ್ಟು ಸುಂದರವಾದ ವಿವರಣೆ ಕೊಡುವುದು ಹೇಗೆ ಸಾಧ್ಯ? ಕುತೂಹಲ ತಾಳಲಾರದೆ ರಾಜಕುಮಾರಿ ಪರದೆಯಿಂದ ಹೊರಗೆ ಬಂದು ಬಿಲ್ಹಣನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾಳೆ. ಬಿಲ್ಹಣನೂ ರಾಜಕುಮಾರಿಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ.
ಇಬ್ಬರೂ ರೋಮಾಂಚಿತರಾಗಿ ಕ್ಷಣಾರ್ಧದಲ್ಲಿ ಪ್ರೇಮಾಂಕುರವಾಗಿ ಬಿಡುತ್ತದೆ!
ಕಾಲಾನಂತರ ವಿಷಯ ತಿಳಿದ ರಾಜ, ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ. ಅಲ್ಲಿ ರಚಿತವಾಗುತ್ತದೆ
"ಚೌರ ಪಂಚಶಿಖಾ" ಎನ್ನುವ ಐವತ್ತು ಪ್ರೇಮ ಮತ್ತು ವಿರಹಗೀತೆಗಳ ಸಂಗ್ರಹ. ಸೆರೆಮನೆಯಲ್ಲಿ ಇನ್ನೂ ಉತ್ಕಟಕ್ಕೇರಿದ ಪ್ರೇಮಾಯಣದ ಅರಿವಾದ ರಾಜ ವಿರಸೇನ ಬಿಲ್ಹಣನನ್ನು ಸೆರೆಯಿಂದ ಬಿಡುಗಡೆ ಮಾಡಿ ಅವರಿಬ್ಬರ ಮದುವೆಗೆ ಸಮ್ಮತಿಸುತ್ತಾನೆ ಎನ್ನುವ ಪ್ರತೀತಿ.
ಅಂತೂ ಬಿಲ್ಹಣ ಮತ್ತು ಚಂಪಾವತಿಯರ ಪ್ರೇಮಗಾಥೆ ಸುಖಾಂತ್ಯವನ್ನು ಕಾಣುತ್ತದಂತೆ.
ಮುಂದೊಮ್ಮೆ ಈ ಪ್ರೇಮಗ್ರಂಥ ಹಲವಾರು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ದೇಶವಿದೇಶಗಳಲ್ಲಿ ಪ್ರಸಿಧ್ಧಿ ಪಡೆಯುತ್ತದೆ. 1948 ರಲ್ಲಿ ಮದ್ರಾಸಿನಲ್ಲಿ ಈ ಕಥೆಯಾಧಾರಿತ ಚಲನಚಿತ್ರವೊಂದೂ ಸಹ ಬಿಡುಗಡೆಯಾಗುತ್ತದೆ!
ಹತ್ತು- ಹನ್ನೊಂದನೇ ಶತಮಾನದಲ್ಲಿ ಭಾರತದ ಮೇಲೆ ಘಜ್ನಿ ಮೊಹಮ್ಮದನ ದಾಳಿಗಳು ನಡೆಯುತ್ತವೆ. ಸತತವಾಗಿ ಹದಿನೇಳು ಬಾರಿ ದಂಡೆತ್ತಿ ಬಂದು ಭಾರತದ ಸಂಪತ್ತನ್ನು, ವಿಷೇಶವಾಗಿ ದೇವಸ್ಥಾನಗಳಲ್ಲಿದ್ದ ಅಪಾರ ಧನಕನಕಗಳನ್ನು ಲೂಟಿ ಮಾಡಿಕೊಂಡು ಹೋಗುತ್ತಾನೆ.
ವಿಚಿತ್ರವೆಂದರೆ ಈ ದುಷ್ಟನ ಜೊತೆ ಅಲ್ ಬಿರೂನಿ ಎನ್ನುವ ಒಬ್ಬ ಮಿತ್ರನೂ ಭಾರತಕ್ಕೆ ಬರುತ್ತಾನೆ. ಇವನೊಬ್ಬ ಮೇಧಾವಿ, ವಿಜ್ಞಾನಿ, ಖಗೋಳ ಶಾಸ್ತ್ರದ, ವೈದ್ಯಕೀಯ ಶಾಸ್ತ್ರದ ್ಗೆ, ಸನಾತನ ಧರ್ಮದ ಬಗ್ಗೆ, ಇಲ್ಲಿಯ ಸಾಂಸ್ಕೃತಿಕತೆಯ ಬಗ್ಗೆ ಹಲವಾರು ಪುಸ್ತಕಗಳನ್ನು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗೆ ಭಾಷಾಂತರಿಸುತ್ತಾನೆ.
ಹಾಗೆ ಭಾಷಾಂತರಿಸಿದ ಅನೇಕ ಪುಸ್ತಕಗಳಲ್ಲಿ ಒಂದು
“ಕಿತಾಬ್ ಎಲ್ ಬತಾಂಜಲ್”...ಇದು ಪತಂಜಲಿಯ ಯೋಗಸೂತ್ರದ ಅವತರಣ!
ನಮಾಜ಼್ ಎನ್ನುವ ಪದ ‘ನಮಃ’ ಎನ್ನುವ ಮೂಲ ಪದದಿಂದ ಬಂದಿತಂತೆ. ನಮಾಜಿನಲ್ಲಿ ಬರುವ ಸಲ್ಹಾ ವಿಧಾನಗಳು ಪತಂಜಲಿಯ ಯೋಗಸೂತ್ರದ ಅಳವಡಿಕೆಗಳೆಂದು ಹಲವೆಡೆಗಳಲ್ಲಿ ಉಲ್ಲೇಖಿಸಲಾಗಿದೆ.
✍️…..ವಿಂಗ್ ಕಮಾಂಡರ್ ಸುದರ್ಶನ
ಸಂಗ್ರಹ. ಕೃಷ್ಣ ಮೂರ್ತಿ ಊರ್ಡಿಗೆರೆ
Is Kashmir just a political issue for an Indian ??
An interesting insight as you grapple your dinner plate,. 5 mins of your dinner time, thoda alag socho .. yeh pagalpan Kya hai, kyon and why our generation 🤔
Whose Kashmir is it Anyway?
It is Rishi Kashyap's Kashmira
How this place got it's name...
Kashyap's Mira.. mira in Sanskrit means a huge lake, Sarovar.
Rishi Kashyap is one of the Saptarishis...seven sages of the present Vaivasvata Manvantara.
Those who belong to Kashyap Gotra are said to be the progenies of this rishi.
Prajapati Daksha gave away thirteen of his daughters in marriage to Kashyap rishi. Devatas, Danavas, Yakshas, Nagas etc, all are progenies of Kashyap.
There was a huge, beautiful lake amidst the Meru Parvat range.
Lord Shiva along with his consort Sati were very attracted by the beauty of the lake and were the regular visitors to the lake.
Kashyap presented this lake to Sati. The lake was then called Sati Sar.
A demon called Jalodbhava started residing in the lake and started terrorising the people around the lake. People living in the vicinity went to Kashyap complaining and sought help. Kashyap called his Naga son Ananta naga to plan a strategy to eliminate Jalodbhava. They decided to empty the lake and expose the demon and asked Lord Vishnu to destroy him.
Accordingly, a valley in the western side, called Varaha Mukh, (presently Bara mullah) was cut to let the lake water to drain off in to a land locked sea which then later called Kashyapa's sea (presently called Caspian sea). The demon then came out of the lake and Lord Vishnu killed him.
Partly emptied lake was then developed into a learning center for study of holy scriptures, Vedas, upanishads. The place developed into a rich city of cultural heritage and thus named Srinagar. Anantnag, the Naga son of Kashyap built an other city in the neighborhood of Srinagar which is now a district Headquarter Anantnag.
The entire Srinagar became very famous. Devi Gauri and Ganesh were the frequent visitors. The route through which they were using was known as "Gauri Marg"...the present day Gulmarg!
Based on Nilamata Purana, Kalhana wrote
" Rajatarangini" which is an historical authority on Kashmir. All over the world the researchers on Kashmir use this great work as reference.
The most simplified version of this book available in English is written by a British archeologist M A Stein. It is in three volumes.
Whose Kashmir is it Anyway?
Kashmir belongs to the Presiding Deity Devi Sharada.
"Namaste Sharada Devi, Kashmira pura vasini,
Tvamahe Prarthye nityam Vidya daanincha dehime".
Devi Sharada is addressed as 'Kashmira Pura Vasini'. The script for the Kashmir was once called 'Sharada", innumerable learning centers of Kashmir were called 'Sharada Peethas'.
The entire Kashmir was called "Sharada Desha" once!
Adi Shankaracharya visited Kashmir in the ninth century. Kashmir was then the prominent seat of Shaivism. Atop Gopaladri hill he Composed "Soundarya Lahari", expounding the union of Shiva and Shakti. This hill in Srinagar is now called Shankaracharya hill.
Shankaracharya also visited Sharada temple on the Banks of Krishna ganga river (now in PoK). He was so impressed with the beauty of the temple on the bank of the river, he got inspired to establish a similar temple in Sringeri on the Banks of Tunga river.
The sandalwood moola vigraha of Sharada in Sringeri was brought from Kashmir.
There is an interesting episode that occurred while Shankaracharya was traveling in Kashmir along with his disciples. A Kashmiri Pandit couple invited Shankaracharya to be their guest for couple of days. Shankaracharya agreed to be their guest on one condition that they prepare their own food. The couple slightly felt offended though, agreed and gave all the items required to prepare the food and retired for the day. They forgot to provide fire to cook. Shankaracharya told the disciples not to disturb them and slept without eating dinner.
Next day the couple got shocked on learning that they all didn't eat anything.
Disciples said that there was no fire
The lady took some water and sprinkled on the firewood. Lo and behold the wood caught fire instantly. This was a great revelation to Shankara. He realized that there is lot to learn from ordinary people of Kashmir.
In the 11th Century Ramanujacharya visited Kashmir. Here he wrote
"Sri Bhashya" based on Brahma Sutra which was available only in Kashmir. The book was shown to them only in the library and they were not allowed to make any notes.
Every day Ramanujacharya and his disciple Kurutthalwar would sit and read in the library remember word by word and come back to Sharada Peeth and reproduce in a book. This went on for three months and then finally "Sri Bhashya" was completed. This became the Moola grantha of Srivaishnavas.
Kashmir the Goddess of learning Sri Sharada appeared before Ramanuja and blessed him by presenting an icon of Hayagreeva.
Whose Kashmir is it Anyway?
Kashmir belongs to Bhattas..Pandits and scholars.
As per Nilamata Purana, Kashmir has a recorded history of over 5100 years. Entire population consisted of Hindus and Buddhists.
While the Islam was making forced entry elsewhere around the world, it was kept away from the western borders of India, thanks to brave Kings of Lohana dynasty. Lohanas were the great sword fighters in the army of king Lava. The present day Lahore was Lavapuri of Ramayan.
"Those who forget history are condemned to repeat it"
******
jwalamukhi devi himachal pradesh
*********
Trishund Mayureshwar Ganpati Mandir Pune
The Trishund Mayureshwar GanpatiMandir is located in the center of Pune City in Somwar Peth.It is rare Heritage Temple dedicated to Lord Ganesh. It is the only temple in Pune which is built entirely in stone masonry.
The Lord Ganesh idol in this temple is very unique because Ganpati has 3 trunks (Trishund) and he is riding a Peacock (Mayureshwar). So, he is known as Trishund Mayureshwar Ganpati.
This Temple was built in 1754 to 1770 by Bhimjigiri Gosavi as a samadhi for Gosavi Sect. The Temple has gopuram shaped roof and has lots of intricate carvings.
There are three inscriptions on the wall of the sanctum of the temple, two of them are in Devanagari script and Sanskrit language and the third one is in the Persian script and language. The first inscription illustrates the foundation of Rameshwara and the creation of this temple in 1754. The second Sanskrit inscription gives a verse from the Bhagavad Gita.The third inscription, which is in Persian, informs that a temple of Gurudevadatta was constructed.
The temple has an idol of Lord Ganesh with three trunks and six hands, seated on a peacock, which in fact is a rare depiction of this deity.The temple is constructed on a high platform and has a small courtyard.
The facade of the temple is highly decorated with the depictions of different real and mythological creatures. The entrance has the sculpture of Goddess Lakshmi flanked by two elephants on the top and opens into a hall which further leads to a passage to the sanctum. The entrance of the sanctum has many sculptures.
The exteriors of this temple are also decorated with the images of Shiva, and Vishnu, as the original plan was to dedicate this temple to Shiva.
There are several unique sculptures carved on the frontage of this temple, a rhinoceros which is being tied tight with iron chains by a British soldier is one of them.This is a clever depiction of the historical fact that after the battle of Plassey in 1757, the British had captured Bengal and Assam.A rhinoceros symbolising Assam was used by the artist to give this suggestion.The architecture of the temple is a mixture of Rajasthani, Malwa and South Indian styles, but the Shikhara (tower over the sanctum) is missing today.This temple is looked after by a trust.
This temple is a masterpiece of stone masonry carvings by Bhimjigiri Gosavi and is considered to be a monument of the Gosavi sect.The entire construction is in black stone.
********
Holy Spots in Bharatavarsha - Abhaya Hastha Swayambu Sri Lakshmi Narasimha Swamy Temple, Agaram Village, Hosur, Tamil Nadu
This temple houses the swayambhu Deity of Lord Narasimha in the form of a huge rock. Lord's Narasimha's weapon, the Sudarshana chakra is also found on the other side of the Deity. A swayambhu Hanuman Deity which was found at the time of the discovery of swayambhu Narasimha is also worshiped in the temple.
A few years back, Lord Narasimha appeared in the dream of a devotee who owned a small piece of land in the Agaram village and told him that His Deity is present on his land. Being excited at hearing this, the devotee started digging his land but was dismayed that he couldn't find any Deity. There was one huge rock on his land which could not be moved and hence, he got a bulldozer to move it. Surprisingly, the bulldozer broke down while trying to move the rock. The very same night, Lord Narasimha appeared in the dream of the devotee and told him that the rock itself was His Deity. the devotee was asked to dig a pond at a specific place in the land. This was done and surprisingly, sweet water was found at a depth of six feet when there were no water bodies or source of water anywhere else in the land. A swayambhu Deity of Lord Hanuman was also found. This was informed to the Jeeyar of the Ahobilam Mutt who visited the place and performed pujas to Lord Narasimha.
A temple was constructed at this spot after forming a trust.
Tirtha Yatra is on WhatsApp. To receive regular yatra updates, send 'START <your name, email-id>' to 9844700850 by WhatsApp.
***
ahobala
#ಅಹೋಬಿಲಂ #ಒಂಭತ್ತು #ನರಸಿಂಹ #ದೇವಾಲಯಗಳ #ವಿವರ #ಮಹತ್ವ
🌺🌺🌺🌺🌺🌺🌺
"ಅಹೋ" ಅನ್ನುವುದು ಒಂದು ಉದ್ಗಾರವಾಚಕ ಪದವಾಗಿದ್ದು ಬಿಲಂ (ಬಲಂ) ಅಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಎಂಬ ಹೆಸರು ಅಗಾಧ ಶಕ್ತಿಯು ನೆಲೆಸಿರುವ ಪ್ರದೇಶವಾಗಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಭಗವಂತ ವಿಷ್ಣು ಅಸುರನಾದ ಹಿರಣ್ಯಕಶಿಪುವಿನನ್ನು ಸಂಹರಿಸಲು ಅರ್ಧ ಮನುಷ್ಯ ಅರ್ಧ ಸಿಂಹದ ರೂಪ ಪಡೆದು ನರಸಿಂಹನಾಗಿ ಅವತರಿಸಿದ್ದು ಈ ಸ್ಥಳದಲ್ಲಿಯೆ.
ವಿಷ್ಣುವಿನ ಈ ಭಯಂಕರ ರೂಪ ಕಂಡು ಸಕಲ ದೇವತೆಗಳು ಅವನನ್ನು ಕುರಿತು "ಅಹೋ ಬಲಂ" (ಓ...ಅಗಾಧ ಶಕ್ತಿಯೆ) ಎಂದು ಜೈಕಾರ ಹೇಳಿದರು. ಅದರಂತೆ ಕ್ರಮೇಣವಾಗಿ ಈ ಕ್ಷೇತ್ರಕ್ಕೆ ಅಹೋಬಿಲಂ/ಅಹೋಬಲಂ ಎಂಬ ಹೆಸರು ಬಂದಿತು. ಪ್ರಸ್ತುತ ಅಹೋಬಿಲಂ ಕ್ಷೇತ್ರವು ಸೀಮಾಂಧ್ರದ ಕರ್ನೂಲ್ ಜಿಲ್ಲೆಯ ಅಲ್ಲಾಗಡ್ಡಾ ಮಂಡಲ (ತಾಲೂಕು) ದಲ್ಲಿ ನೆಲೆಸಿದೆ.
ಈ ಕ್ಷೇತ್ರಕ್ಕೆ ತೆರಳಲು ಕರ್ನೂಲ್, ನಾಂದ್ಯಾಲ್ ಹಾಗೂ ಹೈದರಾಬಾದ ನಗರಗಳಿಂದ ಸುಲಭವಾಗಿ ಬಸ್ಸುಗಳು ದೊರೆಯುತ್ತವೆ. ಈ ಕ್ಷೇತ್ರದಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ ಹಾಗೂ ಹತ್ತಿರದ ರೈಲು ನಿಲ್ದಾಣವು ನಾಂದ್ಯಾಲ್ ನಲ್ಲಿದೆ. ಇದು ಬೆಂಗಳೂರು - ವೈಜಾಗ್ ರೈಲು ಮಾರ್ಗದಲ್ಲಿ ಲಭಿಸುತ್ತದೆ.
ದಂತಕಥೆಯ ಪ್ರಕಾರ, ಈ ಒಂದು ಸ್ಥಳದಲ್ಲಿಯೆ ನರಸಿಂಹನು ಹಿರಣ್ಯಕಶಿಪು ರಾಕ್ಷಸನನ್ನು ಸಂಹರಿಸಿ, ರಕ್ಕಸನ ಮಗನಾದ ಪ್ರಹ್ಲಾದನನ್ನು ಅಶೀರ್ವದಿಸಿದ್ದನು.
ಪುರಾತನ ನಾಲಯಿರಾ (ಅಂದರೆ ನಾಲ್ಕು ಸಾವಿರ) ದಿವ್ಯ ಪ್ರಬಂಧಂ ಎಂಬ ತಮಿಳಿನ ಕವಿತೆಗಳ ಸಂಗ್ರಹಗಳಲ್ಲಿ ಹತ್ತು ಕವಿತೆಗಳು ಅಹೋಬಿಲಂನ ದೇವತೆಯಾದ ನರಸಿಂಹನಿಗೆ ಸಮರ್ಪಿತವಾಗಿರುವುದನ್ನು ಕಾಣಬಹುದು.
ಅಹೋಬಿಲಂನ ಹೆಸರಿನ ಕುರಿತು ವಿವರಿಸುವ ಒಂದು ಪುರಾತನ ಸುಂದರ ಶ್ಲೋಕ ಇಂತಿದೆ :
ಅಹೋ ವೀರ್ಯಂ, ಅಹೋ ಶೌರ್ಯಂ, ಅಹೋ ಬಾಹು ಪರಾಕ್ರಮ!
ನರಸಿಂಹಂ ಪರಮ ದೈವಂ ಅಹೋ ಬಿಲಂ! ಅಹೋ ಬಲಂ
ಅಹೋಬಿಲಂ ಕ್ಷೇತ್ರದಲ್ಲಿ ವಿವಿಧ ದಿಕ್ಕುಗಳಲ್ಲಿ ನಿರ್ಮಿಸಲಾಗಿರುವ ನರಸಿಂಹ ದೇವರಿಗೆ ಸಮರ್ಪಿತವಾಗಿರುವ ಒಂಭತ್ತು ದೇವಾಲಯಗಳಿವೆ. ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿರುವ ಈ ದೇವಾಲಯಗಳು ಅತ್ಯದ್ಭುತ ಶಿಲ್ಪಕಲೆಗೆ ಉದಾಹರಣೆಯಾಗಿದ್ದು ಸ್ತಪತಿಯರ ಕೈಚಳಕಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇಲ್ಲಿನ ಕೆಲವು ದೇವಾಲಯಗಳು ಗುಹೆಗಳೊಳಗಿದ್ದರೆ ಇನ್ನಿತರೆ ದೇವಾಲಯಗಳನ್ನು ಟ್ರೆಕ್ ಮಾಡಿ ತಲುಪಬಹುದಾಗಿದೆ. ಟ್ರೆಕ್ ಸಮಯದಲ್ಲಿ ಪ್ರದೇಶದ ಸುಂದರ ಪರಿಸರವನ್ನು ಕಣ್ತುಂಬ ಸವಿಯುತ್ತ ಸಾಗಬಹುದು. ಆದರೆ ಗಮನವಿರಲಿ ಕೆಲವು ಟ್ರೆಕ್ ಗಳು ಕಠಿಣವಾಗಿವೆ.
ಮನುಷ್ಯನ ಜೀವನ ನಿರ್ಧರಿಸುವ 9 ಗೃಹಗಳು ತಮಗಂಟಿದ ಶಾಪಗಳು ಹಾಗೂ ಶತ್ರುಗಳಿಂದ ಮುಕ್ತಿ ಪಡೆಯಲು ಇಲ್ಲಿನ ಈ ಒಂಭತ್ತು ನರಸಿಂಹ ಸ್ಥಾನಗಳನ್ನು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ.
ಪ್ರದೇಶದ ಸುತ್ತಮುತ್ತಲಿರುವ ನಲ್ಲಮಲ್ಲ ಬೆಟ್ಟಗಳನ್ನು ವಿಷ್ಣುವಿನ ಆಸನವಾದ ಆದಿಶೇಷ ಸರ್ಪಕ್ಕೆ ವ್ಯಾಖ್ಯಾನಿಸಲಾಗಿದೆ. ಅಂದರೆ ಸರ್ಪದ ಹೆಡೆಯು ತಿರುಪತಿ ತಿರುಮಲ ಪ್ರದೇಶವಾಗಿದ್ದು, ಅಹೋಬಿಲಂ ಮಧ್ಯ ಭಾಗವಾಗಿದ್ದು, ಬಾಲವನ್ನು ಶ್ರೀಶೈಲಂ ಎಂದು ಸಾಂಕೇತಿಕವಾಗಿ ಬಿಂಬಿಸಲಾಗಿದೆ.
ಅರ್ಧ ಸಿಂಹ, ಅರ್ಧ ಮನುಷ್ಯನಾಕಾರನಾಗಿ ವಿಷ್ಣುವು ಖಂಬ ಸೀಳಿ ಹೊರಬಂದಾಗ, ಎಲ್ಲ ದೇವತೆಗಳು 'ಅಹೋ ಬಲಂ' ಅಥವಾ 'ಅಹೋ ಬಿಲಂ' ಎಂದು ಕೂಗಿಕೊಂಡರು. ಅದರಂತೆ ಆ ಖಂಬವನ್ನು ಇಂದಿಗೂ ಸಹ ಇಲ್ಲಿ ಕಾಣಬಹುದಾಗಿದ್ದು ಅದನ್ನು 'ಉಗ್ರಸ್ಥಂಬ' ಅಥವಾ ತೆಲುಗಿನಲ್ಲಿ 'ಉಕ್ಕು ಸ್ಥಂಬ' ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಅಹೋಬಿಲಂ ಪ್ರದೇಶವು ಕೆಳಭಾಗದ ಅಹೋಬಿಲಂ ಹಾಗೂ ಮೇಲ್ಭಾಗದ ಅಹೋಬಿಲಂ ಎಂಬ ಎರಡು ಭಾಗವಾಗಿ ವಿಂಗಡನೆಗೊಂಡಿದೆ. ಮೇಲ್ಭಾಗದ ನರಸಿಂಹನ ವಿಗ್ರಹವು ಉಗ್ರ ರೂಪಿಯಾಗಿದ್ದರೆ ಕೆಳಭಾಗದ ಅಹೋಬಿಲಂನಲ್ಲಿರುವ ನರಸಿಂಹನು ಶಾಂತರೂಪಿಯಾಗಿದ್ದಾನೆ.
ದಂತಕಥೆಯ ಪ್ರಕಾರ, ಸ್ವತಃ ಭಗವಂತ ಶ್ರೀನಿವಾಸನು ತನ್ನ ಕಲ್ಯಾಣ (ವಿವಾಹ)ದ ಸಮಯದಲ್ಲಿ ನರಸಿಂಹನ ದರುಶನ ಪಡೆದು ಆಶೀರ್ವಾದ ಪಡೆದುಕೊಂಡಿದ್ದನಂತೆ. ನರಸಿಂಹನು ಉಗ್ರರೂಪದಲ್ಲಿರುವುದನ್ನು ಕಂಡು ಸಾಮಾನ್ಯ ಮನುಷ್ಯರು ಭಯ ಪಡದ ರೀತಿಯಲ್ಲಿ ಶಾಂತ ರೂಪದ ನರಸಿಂಹನನ್ನು ಸ್ವತಃ ಶ್ರೀನಿವಾಸನೆ ಕೆಳಭಾಗದ ಅಹೋಬಿಲಂನಲ್ಲಿ ಪ್ರತಿಷ್ಠಾಪಿಸಿದನಂತೆ.
ಆಚರಣೆಯಲ್ಲಿರುವ ರೂಢಿಯಂತೆ ಇಂದಿಗೂ ಸಹ ಭಕ್ತರು ಶಾಂತರೂಪದ ನರಸಿಂಹನನ್ನು ದರುಶಿಸಿದ ನಂತರ ಇಲ್ಲಿಂದ 8 ಕಿ.ಮೀ ದೂರದಲ್ಲಿ ಗುಡ್ಡದ ತುದಿಯಲ್ಲಿ ಗುಹೆಯಲ್ಲಿರುವ ಉಗ್ರನರಸಿಂಹನನ್ನು ದರುಶಿಸುತ್ತಾರೆ.
ಆಚರಣೆಯಲ್ಲಿರುವ ಮತ್ತೊಂದು ರೂಢಿಯೆಂದರೆ ಶಾಂತ ರೂಪಿ ನರಸಿಂಹನ ದರ್ಶನದ ನಂತರ ಕಡ್ಡಾಯವಾಗಿ ಪ್ರದೇಶದ ಒಂಭತ್ತೂ ನರಸಿಂಹರ ದೇಗುಲಗಳ ದರ್ಶನ ಪಡೆಯಬೇಕು.
ಸ್ಥಳೀಯ ಪುರಾಣದ ಪ್ರಕಾರ, ರಕ್ಕಸ ಹಿರಣ್ಯಕಶಿಪುವನ್ನು ಕೊಂದ ಬಳಿಕ ನರಸಿಂಹನು ನಲ್ಲಮಲ್ಲ ಅರಣ್ಯದ ತುಂಬೆಲ್ಲ ಘರ್ಜನೆಯ ನಗುವಿನೊಂದಿಗೆ ಸುತ್ತಾಡುತ್ತ ಒಂಭತ್ತು ಸ್ಥಳಗಳಲ್ಲಿ ವಿಶ್ರಮಿಸಿ ಭಕ್ತರನ್ನು ಆಶೀರ್ವದಿಸಿದ್ದನಂತೆ. ಅದರಂತೆ ಆ ಸ್ಥಳಗಳಲ್ಲಿ ಇಂದು ಒಂಭತ್ತು ನರಸಿಂಹನ ದೇವಾಲಯಗಳನ್ನು ಕಾಣಬಹುದು.
ಇನ್ನೂ ಕೆಲವು ಸ್ಥಳೀಯ ಪುರಾಣಗಳ ಪ್ರಕಾರ, ಪ್ರಖ್ಯಾತ ಪುರಾತನ ಕವಿ ಅಣ್ಣಮ್ಮಾಚಾರ್ಯರು ಇಲ್ಲಿ ಕೆಲ ಸಮಯ ತಂಗಿ ನರಸಿಂಹ ಸ್ವಾಮಿಯ ಕುರಿತು ಹಲವು ಗೀತೆಗಳನ್ನು ರಚಿಸಿದ್ದಾರೆ. ಅಲ್ಲದೆ, ಪೋತುಲುರಿ ವೀರಬ್ರಹ್ಮೇಂದ್ರ ಸ್ವಾಮಿ ಎಂಬ ಮುನಿಗಳು ಇಲ್ಲಿ ಕೆಲ ಕಾಲ ತಪಸ್ಸನ್ನಾಚರಿಸಿ ಕಾಲಜ್ಞಾನ ಎಂಬ ಗ್ರಂಥ ಬರೆದಿದ್ದಾರೆ.
ಬನ್ನಿ ಒಂಭತ್ತು ನರಸಿಂಹ ದೇವಾಲಯಗಳ ಹೆಸರು ತಿಳಿಯೋಣ. ಮೊದಲನೇಯದಾಗಿ ಭಾರ್ಗವ ನರಸಿಂಹ ಸ್ವಾಮಿ ದೇವಾಲಯ ಕೆಳ ಅಹೋಬಿಲಂ ನಿಂದ 2.5 ಕಿ.ಮೀ ದೂರದಲ್ಲಿದೆ. ಪರಶುರಾಮರು ನರಸಿಂಹನನ್ನು ಕುರಿತು ಇಲ್ಲಿ ತಪಸ್ಸನ್ನಾಚರಿಸಿದ್ದರು ಎಂದು ಹೇಳಲಾಗುತ್ತದೆ.
ಎರಡನೇಯದಾಗಿ, ಯೋಗಾನಂದ ನರಸಿಂಹ ಸ್ವಾಮಿ ದೇವಾಲಯ ಧ್ಯಾನಕ್ಕೆ ಯೋಗ್ಯವಾದ ಸ್ಥಳ ಇದಾಗಿದೆ. ಪ್ರಹ್ಲಾದನು ಈ ಒಂದು ಸ್ಥಳದಲ್ಲೆ ಧ್ಯಾನ ಮಾಡಿ ವರವನ್ನು ಪಡೆದನು ಎನ್ನುತ್ತದೆ ಇಲ್ಲಿನ ಪುರಾಣ.
ಮೂರನೇಯದಾಗಿ, ಚತ್ರವತ ನರಸಿಂಹ ಸ್ವಾಮಿ ದೇವಾಲಯ. ಕೇತು ಗೃಹವು ಈ ಒಂದು ಸ್ಥಳದಲ್ಲಿ ನರಸಿಂಹನ ಕುರಿತು ಪ್ರಾರ್ಥಿಸಿ ಆಶೀರ್ವಾದ ಪಡೆದನು. ಲಲಿತಕಲೆ, ಕಲೆಗಳಲ್ಲಿ ಆಸಕ್ತಿಯಿದ್ದವರು ಈ ಸ್ಥಳದ ದರುಶನ ಮಾಡಿದರೆ ಲಾಭವಾಗುತ್ತದೆ ಎನ್ನಲಾಗಿದೆ.
ನಾಲ್ಕನೇಯದಾಗಿ, ಅಹೋಬಿಲ ನರಸಿಂಹ (ಉಗ್ರ) ಸ್ವಾಮಿ ದೇವಾಲಯ. ಅಹೋಬಿಲದ ಪ್ರಮುಖ ದೇವಾಲಯ ಇದಾಗಿದೆ. ಮೇಲ್ಭಾಗದ ಅಹೋಬಿಲಂನಲ್ಲಿ ಈ ದೇವಾಲಯ ಸ್ಥಿತವಿದೆ. ಚೆಂಚು ಲಕ್ಷ್ಮಿಯೊಂದಿಗಿರುವ ನರಸಿಂಹನನ್ನು ಇಲ್ಲಿ ದರ್ಶಿಸಬಹುದು. ಈ ಸ್ವಾಮಿಯ ದರುಶನದಿಂದ ಭಯ, ಹೆದರಿಕೆಗಳು ಮಾಯವಾಗುತ್ತವೆ ಎಂದು ನಂಬಲಾಗಿದೆ.
ಐದನೇಯದಾಗಿ, ವರಾಹ ನರಸಿಂಹ ಸ್ವಾಮಿ ದೇವಾಲಯ. ಮೇಲ್ಭಾಗದ ಅಹೋಬಿಲಂ ದೇವಾಲಯದಿಂದ ಒಂದು ಕಿ.ಮೀ ದೂರದಲ್ಲಿರುವ ನರಸಿಂಹ ಸ್ವಾಮಿಯ ಈ ದೇವಾಲಯವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತದೆ ಎನ್ನಲಾಗಿದೆ. ಇದನ್ನು ಕ್ರೋಧ ನರಸಿಂಹ ಸ್ವಾಮಿ ಎಂತಲೂ ಸಹ ಕರೆಯಲಾಗುತ್ತದೆ. ಮೂಲ ವಿಗ್ರಹವು ಕೆತ್ತಿದ ಬಂಡೆಯೊಂದರಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದು, ನೀರಿನ ತೊರೆಯೊಂದಕ್ಕೆ ಅಭಿಮುಖವಾಗಿ ನೆಲೆಸಿದೆ.
ಆರನೇಯದಾಗಿ, ಮಾಲೋಲ ನರಸಿಂಹ ಸ್ವಾಮಿ ದೇವಾಲಯ. ಈ ದೇವಾಲಯವು ಇಲ್ಲಿನ ಲಕ್ಷ್ಮಿ ಪರ್ವತ ಎಂಬ ಗುಡ್ಡದ ಮೇಲಿದೆ. ಈ ನರಸಿಂಹ ಸ್ವಾಮಿಯನ್ನು ಪೂಜಿಸುವುದರಿಂದ ಬ್ರಹ್ಮಾನಂದವನ್ನು ಹೊಂದಬಹುದೆಂದು ಹೇಳುತ್ತದೆ ಇಲ್ಲಿನ ಸ್ಥಳೀಯ ಪುರಾಣ.
ಏಳನೇಯದಾಗಿ, ಜ್ವಾಲಾ ನರಸಿಂಹ ಸ್ವಾಮಿ ದೇವಾಲಯ. ಹಿರಣ್ಯಕಶಿಪುವಿನ ಹೊಟ್ಟೆಯನ್ನು ತನ್ನ ಉಗುರುಗಳಿಂದ ಬಗೆಯುತ್ತಿರುವ ನರಸಿಂಹ ಸ್ವಾಮಿಯನ್ನು ಇಲ್ಲಿ ಕಾಣಬಹುದು. ಈ ಸ್ವಾಮಿಯನ್ನು ಪೂಜಿಸುವುದರಿಂದ ಎಲ್ಲ ಕಷ್ಟ ಕಾರ್ಪಣ್ಯಗಳು ಮಾಯವಾಗಿ ಯಶಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಮಾಸದಲ್ಲಿ ತುಪ್ಪದ ಬತ್ತಿ ಬೆಳಗಿ ಶೃದ್ಧೆಯಿಂದ ಪ್ರಾರ್ಥಿಸಿದರೆ ಯಶಸ್ಸು ಸಿಗುವುದು ಖಂಡಿತ ಎಂದು ನಂಬಲಾಗಿದೆ.
ಎಂಟನೇಯದಾಗಿ, ಪಾವನ ನರಸಿಂಹ ಸ್ವಾಮಿ ದೇವಾಲಯ. ನವ ನರಸಿಂಹರ ದೇವಸ್ಥಾನಗಳಲ್ಲೆ ಈ ದೇಗುಲದ ನರ್ಸಿಂಹ ಸ್ವಾಮಿಯು ಅತ್ಯಂತ ಶಾಂತರೂಪಿ ಎಂದು ಹೇಳಲಾಗುತ್ತದೆ. ಒಂಭತ್ತು ಕ್ಷೇತ್ರಗಳ ರತ್ನ ಎಂದೆ ಬಿಂಬಿತವಾಗಿರುವ ಈ ದೇವಾಲಯದಲ್ಲಿ ನರಸಿಂಹನನ್ನು ಭಕ್ತಿ, ಶೃದ್ಧೆಗಳಿಂದ ಪೂಜಿಸಿದರೆ, ಹಿಂದಿನ, ಇಂದಿನ ಎಲ್ಲ ಪಾಪ, ಕರ್ಮಗಳು ನಾಶವಾಗುತ್ತವೆ ಎಂದು ಹಲವು ಋಷಿ ಮುನಿಗಳು ಈ ಕ್ಷೇತ್ರದ ಕುರಿತು ಹೇಳಿದ್ದಾರೆ ಎನ್ನಲಾಗುತ್ತದೆ
ಒಂಭತ್ತನೇಯ ಹಾಗೂ ಕೊನೆಯದಾಗಿ ಕಾರಂಜ ನರಸಿಂಹ ಸ್ವಾಮಿ ದೇವಾಲಯ. ಭಾವ, ಶಬ್ದ ಹಾಗೂ ಕ್ರೀಯೆಗಳಿಂದ ಯಾರು ಈ ನರಸಿಂಹನನ್ನು ಪೂಜಿಸುವರೊ ಅವರಿಗೆ ಸರ್ವವು ಒಳಿತಾಗುತ್ತದೆ ಎಂದು ನಂಬಲಾಗಿದೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಬ್ರಹ್ಮೋತ್ಸವವನ್ನು ಅತಿ ವಿಜ್ರ್‍ಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೆ ಪ್ರತಿ ತಿಂಗಳು ಭಗವಂತನ ನಕ್ಷತ್ರವಾದ ಸ್ವಾತಿ ನಕ್ಷತ್ರದ ದಿನದಂದು ಗ್ರಾಮೋತ್ಸವವನ್ನು ಆಚರಿಸಲಾಗುತ್ತದೆ.
***
Pashupatinath Temple in Nepal
*****
Panki Hanuman Mandir KANPUR
|| Manojavam Marut Tulya Vegam Jitendriyam Buddhi Mataam Varishtham ।Vaataatmajam Vaanara Yooth Mukhyam Shri Raama Dootam Sharnam Prapadye ।।
The ancient Panki Hanuman Temple, located on the border of Kanpur at Panki area is about 8kms from Kanpur.
This small temple is devoted to Lord Hanuman has a magnificent statute of the lord in a standing position facing east. The temple is having three entrance from the east, north and west. The idol with lot of embossed silver artwork has an interesting feature. In the morning, the deity's face appears bright and childish as Bala Hanuman (Balargha sathrusha annanaha), at noon the face seems to be youthful ( Brahmachari) and by evening it appears mature as an Maha Purush .(Tejashwi).
The temple draws lot of devotees from all over the country and their wishes are heard and fulfilled by the Lord.He showers his blessings on the devotees who come here with full devotion and absolute faith.
Although no auntentic evidence regarding the history of the temple is available,yet as per the legendary the temple is about 400 years old.
The temple is believed to have been founded by Mahant Sri Sri 1008 Purushottam Dasji Maharaj. There is a story behind the existence of the temple. It is said that during the pilgrimage to Chitrakoot on a bullock cart, the Maharaj had stopped near Chitrakoot for his morning prayers and while continuing the journey after prayer, he stumbled upon a rock like thing. It was an idol of Lord Hanuman and by divine intuition the king carried the idol with him in the bullock cart. When the crew reached Panki, the Maharaj found that the bullock cart was unable to move because of the heavy load of the Lord. The king installed the idol according to the divine direction and then onwards people started worshipping Lord Hanuman. Later a small temple was built here which came to be known as Panki Hanuman Temple.
A huge crowd visit the temple on Tuesdays and on Buddha Mangal the massacre of the devotees take place.
******
ಕೊಲ್ಲಾಪುರ ಮಹಾಲಕ್ಷ್ಮಿ
ಕೊಲ್ಲಾಪುರ ಕೋಲಾಪುರವು ಇಂದು ಮಹಾರಾಷ್ಟ್ರಕ್ಕೆ ಸೇರಿರುವ ಒಂದು ಅಪೂರ್ವ ಕ್ಷೇತ್ರ.
ವೈಕುಂಠದಿಂದ ಮಹಾಲಕ್ಷ್ಮಿಯು ಕೋಲಾಪುರಕ್ಕೂ, ಶ್ರೀಮನ್ನಾರಾಯಣನು ವೇಂಕಟಾದ್ರಿಗೂ ಆಗಮಿಸಿದ ವಿವರ ಭವಿಷ್ಯೋತ್ತರಪುರಾಣದ ವೇಂಕಟೇಶಮಹಾತ್ಮ್ಯದಲ್ಲಿದೆ.
ಪುರಾಣ ಪ್ರಸಿದ್ಧವಾದ ಕರವೀರಪುರ ಕ್ಷೇತ್ರವೇ ಕೋಲಾಪುರವಾಗಿದೆ.
ಆದರೆ ಇಂದು ಕೋಲಾಪುರದಲ್ಲಿ ಅಷ್ಟಾಗಿ ಸರೋವರಗಳು ಕಂಡುಬರುವುದಿಲ್ಲ. ಪ್ರಾಚೀನ ಸರೋವರಗಳೆಲ್ಲಾ ಬಡಾವಣೆಗಳಾಗಿ ಪರಿವರ್ತಿತವಾಗಿರುವುದು ಸ್ಪಷ್ಟ. ಮಹಾಲಕ್ಷ್ಮೀ ದೇವಸ್ಥಾನದ ಹಿಂಭಾಗದಲ್ಲಿ ಒಂದು ವಿಶಾಲವಾದ ಸರೋವರವಿದ್ದು ಅಲ್ಲಿ ಇಂದಿಗೂ ಅಸಂಖ್ಯ ಕಮಲಪುಷ್ಪಗಳನ್ನು ಕಾಣಬಹುದು.
ಕೊಲ್ಲಾಪುರದ ಹಳೆಯ ಅರಮನೆಯ ಖಜಾನೆಯ ಹಿಂಭಾಗದಲ್ಲಿದೆ ಈ ವಿಶಾಲವಾದ ಶ್ರೀಮಹಾಲಕ್ಷ್ಮಿಯ ದೇವಸ್ಥಾನ.
ಸ್ಕಂದಪುರಾಣದಲ್ಲಿ ಈ ಕ್ಷೇತ್ರದ ವರ್ಣನೆ ಇದೆ.
ಮಹಾಲಕ್ಷ್ಮಿಯನ್ನು ರಾಜರು 2 ಶ್ಲೋಕಗಳಿಂದ ವರ್ಣಿಸುತ್ತಾರೆ.
ಅಮಾನವನಜಸ್ಥಾನ ಸರಸೀಕುಲಸಂಕುಲೇ |
ರಮಾ ಕೊಹ್ಲಾಪುರಕ್ಷೇತ್ರೇ ವಸತೀತಿ ಕಿಮದ್ಭುತಮ್ ||೮೪||
ಅಸಂಖ್ಯ ಕಮಲಪುಷ್ಪಗಳಿಗೆ ನೆಲೆಯಾಗಿರುವ ಅನೇಕ ಸರೋವರಗಳಿಂದ ತುಂಬಿರುವ ಕೋಲಾಪುರ ಕ್ಷೇತ್ರದಲ್ಲಿ ಮಹಾಲಕ್ಷ್ಮಿಯು ನೆಲೆಸಿರುವಳು ಎಂಬಲ್ಲಿ ಆಶ್ಚರ್ಯವೇನಿದೆ !?
ಕೋಲಾಪುರ ಕ್ಷೇತ್ರವು ಅಸಂಖ್ಯಾತವಾದ ಕಮಲ ಪುಷ್ಪಗಳಿಗೆ ಆಶ್ರಯಸ್ಥಾನವಾದ ಪಂಚಗಂಗಾ ಮೊದಲಾದ ಅನೇಕ ಸರೋವರಗಳ ಸಮೂಹದಿಂದ ತುಂಬಿದೆ. ಅಲ್ಲಿ ತಾವರೆಗಳು ಯಾವಾಗಲೂ ಬೆಳೆಯುತ್ತವೆ. ಇಂತಹಾ ಪವಿತ್ರ ಕ್ಷೇತ್ರದಲ್ಲಿ " ಪದ್ಮಾಲಯಾ " ಎಂದು ಹೆಸರು ಪಡೆದಿರುವ ಮಹಾಲಕ್ಷ್ಮಿಯು ನಿತ್ಯ ಸನ್ನಿಹಿತಳಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿದೆ? ಏಕೆಂದರೆ ಕಮಲ ಪುಷ್ಪಗಳೇ ಲಕ್ಷ್ಮೀದೇವಿಯ ಪ್ರಮುಖ ಆವಾಸ ಸ್ಥಾನಗಳಾಗಿವೆ.
ಕೋಲಾಪುರದಲ್ಲಿ ಪಂಚಗಂಗಾತೀರ್ಥ ಮೊದಲಾದ ಅನೇಕ ಸರೋವರಗಳಿದ್ದು ಅವುಗಳಲ್ಲಿ ಕಮಲಪುಷ್ಪಗಳು ವಿಶೇಷವಾಗಿ ಬೆಳೆಯುತ್ತವೆ. ಕಮಲಪುಷ್ಪವು ಮಹಾಲಕ್ಷ್ಮಿಯ ವಾಸಸ್ಥಾನವೆಂದು ಶಾಸ್ತ್ರಸಿದ್ಧವಾದ ವಿಚಾರ. "ಪದ್ಮಾ ಪದ್ಮಾಲಯಾ" ಮೊದಲಾಗಿ ವೇದಗಳಲ್ಲೂ ಕೋಶಗಳಲ್ಲೂ ಉಲ್ಲೇಖವಿದೆ. ಹೀಗೆ ಅಸಂಖ್ಯ ಪದ್ಮಗಳಿಗೆ ನೆಲೆಯಾದ ಸರೋವರಗಳಿಂದ ತುಂಬಿದ ಕೋಲಾಪುರ ಕ್ಷೇತ್ರದಲ್ಲಿ ಮಹಾಲಕ್ಷ್ಮಿಯು ನೆಲೆಸಿರುವುದು ತೀರಾ ಸಹಜ. ಕಮಲಗಳಿರುವಲ್ಲಿ ಕಮಲೆಯಿರುವುದು ಏನಾಶ್ಚರ್ಯ ಎಂದು ಭಾವ.
ಕೋಲಾಪುರದಲ್ಲಿ ಶಿವಾ, ಭದ್ರಾ, ಭೋಗವತೀ, ಕುಂಭೀ ಮತ್ತು ಸರಸ್ವತೀ ಎಂಬ ಐದು ನದಿಗಳಿರುವುದರಿಂದ ಅದಕ್ಕೆ ಪಂಚಗಂಗಾಕ್ಷೇತ್ರ ಎಂದು ಪ್ರಸಿದ್ಧಿ.
ಧ್ಯಾತಾಽಽಧ್ಯಾತಾಂತಶಾಂತಪ್ರಿಯಜನವಿಭವಾಯಾನ್ವಹಂ ಯಾ ಹೃದಂತಃ |
ಖ್ಯಾತಾಽಖ್ಯಾ ತಾದೃಶಾಭ್ಯುನ್ನತಿ ವಿತರಣಶಕ್ತ್ಯಾಲಯಾ ಯಾ ಪಯೋಬ್ಧೇಃ||
ಜಾತಾಽಜಾತಾದಿದೇವವ್ರಜಮನುಜತತೇಃ ಶ್ರೇಯಸೇ ಭೂಯಸೇ ಸಾ|
ಮಾತಾ ಮಾ ತಾಪಸಾರಾಧಿತಪದಕಮಲಾಽಧೋಕ್ಷಜ ಪ್ರೇಯಸೀ ಸ್ಯಾತ್||೮೫||
ಮನೋವ್ಯಥೆಯಿಂದ ಬಳಲುವ ಜ್ಞಾನಿಜನರಿಂದ ಒಳಿತಿಗೋಸ್ಕರ ಹೃದಯದಲ್ಲಿ ಸದಾ ಧ್ಯಾನಿಸಲ್ಪಡುವ, ತನ್ನ ಹೆಸರಿಗೆ ಒಪ್ಪುವಂತೆ ಅಭ್ಯುದಯ ನೀಡುವ ಸಾಮರ್ಥ್ಯಕ್ಕೆ ನೆಲೆಯಾದ, ಕ್ಷೀರಸಾಗರದಿಂದ ಪ್ರಾದುರ್ಭವಿಸಿದ, ಬ್ರಹ್ಮಾದಿ ದೇವತೆಗಳಿಗೂ ಮನುಕುಲಕ್ಕೂ ಜನನಿಯಾದ, ತಪಸ್ವಿಜನರಿಂದ ಆರಾಧಿತ ಪಾದಕಮಲಳಾದ, ಅಧೋಕ್ಷಜನಾದ ಶ್ರೀಹರಿಗೆ ಪ್ರಿಯಳಾದ ಮಹಾಲಕ್ಷ್ಮಿಯು ನಮ್ಮ ಬಹುತರವಾದ ಶ್ರೇಯಸ್ಸಿಗೆ ಕಾರಣಳಾಗಲಿ.
ಮಾನಸಿಕ ಕ್ಷೋಭೆಯಿಂದ ಬಳಲಿದ ಸಾತ್ವಿಕರು ಹೃದಯದಲ್ಲಿ ಭಕ್ತಿಪೂರ್ವಕವಾಗಿ ಧ್ಯಾನಿಸಿದಲ್ಲಿ ಅವರಲ್ಲಿ ಪ್ರಸನ್ನಳಾಗಿ ಅನುಗ್ರಹಿಸುತ್ತಿರುವ ಪ್ರಸಿದ್ಧವಾದ ಮಂಗಲ ದೇವತೆಯೆಂಬ ಹೆಸರುಳ್ಳ, ಭಕ್ತರಿಗೆ ಹೆಚ್ಚಾದ ಐಶ್ವರ್ಯವನ್ನು ನೀಡುವ ಕ್ಷೀರ ಸಮುದ್ರದಲ್ಲಿ ಜನಿಸಿದ ಬ್ರಹ್ಮಾದಿ ದೇವತೆಗಳಿಗೆ ತಾಯಿಯಾದ ಮತ್ತು ಅವರಿಂದ ಪೂಜಿಸಲ್ಪಟ್ಟ ಪಾದಕಮಲಗಳುಳ್ಳ ನಾರಾಯಣನ ರಮಣಿಯಾದ ಮಹಾಲಕ್ಷ್ಮಿಯು ನಮಗೆ ಹೆಚ್ಚಿನ ಸಂಪದಗಳನ್ನು ನೀಡಲಿ.
ಶ್ರೇಯಃ ಎಂಬುದಕ್ಕೆ ಕಠೋಪನಿಷತ್ತಿನಲ್ಲಿ ಬಂದಿರುವಂತೆ ಪಾರತ್ರಿಕ ಸುಖ ಎಂದರ್ಥ.
******
Ratneshwar Temple, Varanasi
***
Kolhapur Mahalakshmi
Know these
Kirnotsav of Kolhapur Mahalakshmi
Kirnotsav (festival of Sun rays) is celebrated when the sun rays fall directly on the deity's idol at the time of sunset.
31st January & 9th November :
Sun rays fall directly on the feet of the deity.
1st February & 10th November :
Sun rays fall directly on the chest of the deity.
2nd February & 11th November :
Sun rays fall directly on the entire body of the deity.
Kolhapur is a place to visit. The major tourist attractions are:
Mahalakshmi Temple -> Everyone know about this 'jagrat sthal'.
Shahu Maharaja Palace -> now a museum with collection of royal relics
Panhala Fort -> 23 kms from Kolhapur. Shivaji escaped from this fort when the fort was captured from outside by Adil Shah in 1659
Rankala Lake -> 5 kms from Kolhapur (to visit in the evening)
Kaneri Math - also called Gramjivan Museum -> 13 kms from Kolhapur. Feels like you are in a village/janapada loka. The artwork is breathtaking.
If travelling by owned/privately hired vehicle two more places to visit while returning.
Gokak Water Falls which is 100 kms from Kolhapur can be covered.
Further down 75 kms is Savadathi Yellamma.
***
#ಕೊಲ್ಲಾಪುರದ_ಮಹಾಲಕ್ಷ್ಮಿ
ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿರುವ ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯವು, ಭಾರತದ ಅತಿ ಪುರಾತನ ದೇವಾಲಯಗಳಲ್ಲಿ ಒಂದು. ಮಹಾರಾಷ್ಟ್ರದ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ಮಂದಿರದ ಬಗ್ಗೆ ಸ್ಕಂದ ಪುರಾಣದಲ್ಲೂ ಉಲ್ಲೇಖವಿದೆ.
ಹಿಂದೆ, ಕೊಲ್ಲಾಸುರನೆಂಬ ರಾಕ್ಷಸನು, ದೇವತೆ ಮತ್ತು ಋಷಿಮನಿಗಳಿಗೆ ಉಪಟಳ ನೀಡುತ್ತಾ, ಲೋಕಕಂಟಕನಾಗಿದ್ದ. ಆಗ, ಸಕಲ ದೇವತೆಗಳು, ಕೊಲ್ಲಾಸುರನಿಂದ ಕಾಪಾಡು ತಾಯಿ ಎಂದು ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿದಾಗ, ದೇವಿಯು ಕೊಲ್ಲಾಸುರನ ಶಿರಚ್ಛೇದ ಮಾಡಿದಳು. ರಾಕ್ಷಸ ಸಂಹಾರವಾದ ಸ್ಥಳವೇ ಕೊಲ್ಲಾಪುರವೆಂದು ಖ್ಯಾತಿ ಪಡೆಯಿತು.
ಇನ್ನೊಂದು ಪುರಾಣ ಕಥೆಯ ಪ್ರಕಾರ, ಭೃಗು ಮಹರ್ಷಿಯು ವಿಷ್ಣುವಿನ ಎದೆಯ ಮೇಲೆ ಕಾಲಿಟ್ಟು ಅಪಮಾನ ಮಾಡಿದಾಗ, ವಿಷ್ಣುವಿನ ವಕ್ಷಸ್ಥಳವಾಸಿನಿಯಾದ ಲಕ್ಷ್ಮಿಗೆ ಎಲ್ಲಿಲ್ಲದ ಕೋಪ ಬಂತು. ಆದರೂ, ವಿಷ್ಣುವು ಭೃಗು ಮಹರ್ಷಿ ಮೇಲೆ ಸಿಟ್ಟು ಮಾಡಿಕೊಳ್ಳಲಿಲ್ಲ. ಅದರಿಂದ ಬೇಸರಗೊಂಡ ಲಕ್ಷ್ಮಿಯು ವೈಕುಂಠವನ್ನು ತೊರೆದು, ಕೊಲ್ಹಾಪುರಕ್ಕೆ ಬಂದು ನೆಲೆಸಿದಳು ಎಂಬ ಪ್ರತೀತಿಯಿದೆ.
#ಚಾಲುಕ್ಯರ_ಕಾಲದ_ಮಂದಿರ
ಚಿಕ್ಕ ಗುಡಿಯಾಗಿದ್ದ ದೇವಾಲಯವನ್ನು, ಕ್ರಿ.ಶ. 600ರಲ್ಲಿ ಚಾಲುಕ್ಯರ ರಾಜ ಕರ್ಣದೇವನು ಪಿರಮಿಡ್ ಆಕಾರದಲ್ಲಿ ನಿರ್ಮಿಸಿದನು. ಕೆತ್ತನೆ ಕಂಬಗಳಿಂದಲೇ ಈ ದೇವಾಲಯವು ಹೆಸರುವಾಸಿಯಾಗಿದೆ. ಗೋಡೆಗಳ ಮೇಲೆ ನೃತ್ಯ ಭಂಗಿಗಳ, ಸಂಗೀತಗಾರರ ಕೆತ್ತನೆಗಳಿವೆ. ದೇವಾಲಯದ ಆವರಣ ವಿಶಾಲವಾಗಿದ್ದು, ನಾಲ್ಕು ದಿಕ್ಕುಗಳಲ್ಲಿಯೂ ದ್ವಾರಗಳಿವೆ. ಮುಖ್ಯದ್ವಾರ ಪಶ್ಚಿಮ ದಿಕ್ಕಿನಲ್ಲಿದ್ದು, ಎದುರಿಗೆ ಗರುಡ ಮಂಟಪವಿದೆ. ಕಲ್ಲಿನ ಮಂಟಪದಲ್ಲಿ ಗಣೇಶ, ಪ್ರಾಂಗಣದ ಮಧ್ಯೆ ಗರ್ಭಗುಡಿಯಲ್ಲಿ ಮಹಾಲಕ್ಷ್ಮಿ ಪಶ್ಚಿಮಾಭಿಮುಖವಾಗಿ ಕುಳಿತು ದರ್ಶನ ನೀಡುತ್ತಾಳೆ.
#ಸಿಂಹವಾಹಿನಿ_ಲಕ್ಷ್ಮಿ
ಗರ್ಭಗುಡಿಯಲ್ಲಿ ಆರು ಅಡಿ ಎತ್ತರದ ವೇದಿಕೆಯ ಮೇಲೆ, ಎರಡು ಅಡಿಯ ಪೀಠದಲ್ಲಿ, ಮೂರು ಅಡಿಯ ಕಪ್ಪು ಶಿಲೆಯಿಂದ ಕೆತ್ತಿರುವ ಮಹಾಲಕ್ಷ್ಮಿ ವಿಗ್ರಹ ಆಕರ್ಷಕವಾಗಿದೆ. ಕೌಮೋದಕಿ, ಕೇತಕ, ಫಲ, ರಸಪಾತ್ರೆ ಧರಿಸಿ ಸಿಂಹವಾಹಿನಿಯಾಗಿದ್ದಾಳೆ ದೇವಿ. ಆಕೆಯ ಮುಕುಟದಲ್ಲಿ ಶೇಷನಾಗವಿದ್ದು, ಅಸಂಖ್ಯಾತ ನೆರಿಗೆಗಳಿಂದ ಕೂಡಿದ ಸೀರೆಯನ್ನುಟ್ಟು, ಸರ್ವಾಲಂಕಾರ ಭೂಷಿತಳಾಗಿದ್ದಾಳೆ. ಮಹಾಲಕ್ಷ್ಮಿ ಗರ್ಭಗುಡಿ ಪಕ್ಕದಲ್ಲಿ ಮಹಾಕಾಳಿ ಮತ್ತು ಸರಸ್ವತಿಯರಿದ್ದಾರೆ. ನವಗ್ರಹ, ಸೂರ್ಯ, ಮಹಿಷಾಸುರ ಮರ್ದಿನಿ ಕಾತ್ಯಾಯಿನಿ, ಭವಾನಿ, ಶಿವಲಿಂಗ, ನಂದಿ ಮುಂತಾದ ವಿಗ್ರಹಗಳೂ.
#ಸೂರ್ಯ_ಸ್ಪರ್ಶ
ವರ್ಷದಲ್ಲಿ ಮೂರು ದಿನಗಳಂತೆ, ಎರಡು ಬಾರಿ ಸೂರ್ಯ ಕಿರಣಗಳು ನೇರವಾಗಿ ಮಹಾಲಕ್ಷ್ಮಿ ವಿಗ್ರಹವನ್ನು ಸ್ಪರ್ಶಿಸುತ್ತವೆ. ಇದನ್ನು ಕಿರಣೋತ್ಸವೆಂದು ಆಚರಿಸಲಾಗುತ್ತದೆ. ಮೊದಲನೆಯ ದಿನ ದೇವಿಯ ಪಾದಾರವಿಂದಗಳ ಮೇಲೆ, ಎರಡನೆಯ ದಿನ ಮಧ್ಯ ಭಾಗ ಹಾಗೂ ಮೂರನೆಯ ದಿನ ಮುಖದ ಮೇಲೆ ಸೂರ್ಯನ ಬೆಳಕಿನಾರತಿ ಸಲ್ಲುತ್ತದೆ. ಈ ಅಚ್ಚರಿಯು ಪ್ರತಿ ವರ್ಷ, ಜನವರಿ 31, ಫೆಬ್ರುವರಿ 1 ಮತ್ತು 2 ಹಾಗೂ ನವಂಬರ್ 9, 10 ಮತ್ತು 11ರಂದು ಜರುಗುತ್ತವೆ.
#ಜನ_ಪ್ರೀತಿಯ_ಅಂಬಾಬಾಯಿ
ಪ್ರತಿದಿನ ಸೂರ್ಯೋದಯದ ಮುಂಚೆ ದೇವಿಗೆ ಅಭಿಷೇಕ ಮಾಡಲಾಗುತ್ತದೆ. ಪ್ರತಿದಿನ, ಐದು ಸಾರಿ ಅರ್ಚನೆಯಾಗುತ್ತದೆ. ಶುಕ್ರವಾರ ವಿಶೇಷ ಪೂಜೆ, ನವರಾತ್ರಿ ವೇಳೆ ದೇವಿಯನ್ನು ವಿವಿಧ ರೂಪದಲ್ಲಿ ಅಲಂಕರಿಸುವುದು ವಿಶೇಷ. ಇಲ್ಲಿನ ಜನರು, ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಅಂಬಾಬಾಯಿ ಎಂದು ಕರೆಯುತ್ತಾರೆ. ದೇವಿಗೆ, ಕಮಲ ಪುಷ್ಪಗಳನ್ನು ವಿಶೇಷವಾಗಿ ಸಮರ್ಪಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 4.30 ರಿಂದ ರಾತ್ರಿ 10 ರವರೆಗೆ ದೇವಾಲಯ ತೆರೆದಿರುತ್ತದೆ.
#ದರುಶನಕೆ_ದಾರಿ…
ಬೆಂಗಳೂರು ಮತ್ತು ಪುಣೆ (ಎನ್‌ಎಚ್-4) ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಹಾಪುರವಿದ್ದು, ಬೆಂಗಳೂರಿನಿಂದ 796 ಕಿ.ಮೀ ಹಾಗೂ ಬೆಳಗಾವಿಯಿಂದ 114 ಕಿ.ಮೀ ಅಂತರದಲ್ಲಿದೆ. ರೈಲು ಮತ್ತು ಬಸ್ ಸೌಲಭ್ಯವಿದೆ.
ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನದಲ್ಲಿರುವಂತಹ ಶ್ರೀ ದುರ್ಗೇಯ ಮೂರ್ತಿ ಇದು ಅಪರೂಪ ನೋಡಲು ಸಿಗುವುದು , ಇದನ್ನು ಮೂರು ಲೋಹ (Metal)ನಿಂದ ಮಾಡಿದಂತಹ ವಿಶೇಷ ವಾಗಿದೆ ,ಮುಖ ನೋಡಿ ಬೆಳ್ಳಿ , ದೇಹ ತಾಮ್ರದ್ದು ಮತ್ತು ಪ್ರಭಾವಳಿ ಹಿತ್ತಾಳೆಯದು...ಇದುಅತ್ಯಂತ ಪುರಾತನವಾದದ್ದು.
******
Airavatheswarar Temple; Mrithyunjesarar temple - Iravasthanam - Kanchipuram
As we all know, Kanchipuram is one the main temple town in Tamilnadu like Kumbakonam and it is splitted into Siva Kanchi and Vishnu Kanchi. As name suggests, Siva Kanchi consists of Siva temple which are also called as Padal Petra sthalam and Vishnu kanchi consists of Perumal / Vishnu temples and infact out of 108 Divya desams 20+ are based in kanchipuram and it shows the signifiance of this temple.
Kanchipuram is also one of the seven puniya sthala in India as per Garudapuranam. The places like Ayothya, Mathura, Haridwar, Varanasi, Avanthika, Dwakara and Kanchipuram are considered as Mokstha sthala where we get liberation from cycles of birth
Kanchipuram has been ruled by sevaral people and prominent of them are Pallavas followed by Cholas. Infact, Pallavas had Kanchi as their capital. Kanchi is referred by Tirunavukkarasar as a boundless wisdom – Kalviyil Karayiladha Kanchi Managarm and beauty city – Nakareshu Kanchi - by great poet Mahakavi Kalidas.
This temple Iravatheswarar or Airavatheswarar is located right next to Railway station. This temple was almost in depleted state during those time with full of trees and plants.
Recently this temple has been taken under the control of Indian Archealogical group and hence was intersted to visit. The areas has been cleaned and temple is being maintained with Priest regularly. SwethaKulam is the sacred Theertha of the temple.
This temple seems to be built between 6 - 8th century by Pallava king Narashimavarman II alias Rajasimhan. The significance of the temple is circular goppuram or vimana which is considered as splendid architectural work. This temple is considered as minor siva temple and the main entrace do not have any gopuram like typical south indian temple, either it was never constructed or depleted with time for which no records available.
Significance of this temple is that Markandeyar had workshipped lord Siva here he got the boon of not becoming old at any time of his life in the earth and he will be reach adobe of heaven only when he decides. Hence this temple is referred as Iravatheswarar which means there is no death until we wish for it. To continue this legacy and importance, Ayush homa for kids under 5 years of age are done in this temple. Temple has only 2 major locations. One Nandi with in smaller vimana right infront of Lord Siva and then need to get into few steps to reach the bigger shrine where Lord Siva is there to grace his devotees. Legend also goes like Sages reached out ot Lord Brahma for life longitivity and he advised the sages to go to Kanchi and workship Lord Siva, as per this guidance, all the sages visited Kanchi and installed siva linga and got their boon, hence this place is also Iravatheswarar or Iravasthanam / Iravasthalam
The lord Siva is referred as Mrithunjeswarar and the temple is referred as Mrithyunjewsarar / Mrityunjeshwarar temple - Iravasthalam which means no death till we wish for it.
The temple is open from 6.00 a.m. to 11.00 a.m. and from 4.00 p.m. to 8.00 p.m.
*****
Just behind famous Trambkeshwar Shiv Temple of Nasik is a rising rocky feature called Trimbakgarh alias Brahmgiri. Just behind that is an adjoining feature called Durgbhandar. Just see the amazing carved route joining these features. video Brahmgiri Durgbhandar
*****
Kedaranath
last day
.ಕೇದಾರನಾಥ ದೇಗುಲವು ಪ್ರಪಂಚದ ಒಂದು ವಿಶಿಷ್ಟ ವಿಸ್ಮಯವಾಗಿದೆ.
ಅಂತಹಾ ಸ್ಥಳದಲ್ಲಿ ಕೇದಾರನಾಥ ದೇವಾಲಯವನ್ನು ಯಾರು ನಿರ್ಮಿಸಿದರು ಎಂಬುದರ ಕುರಿತು ಬಹಳಷ್ಟು ಹೇಳಲಾಗುತ್ತದೆ. ಅದನ್ನು ಪಾಂಡವರಿಂದ ಹಿಡಿದು ಆದಿ ಶಂಕರಾಚಾರ್ಯರವರೆಗೆ ನಾನಾ ರೀತಿಯಲ್ಲಿ ದಂತಕಥೆಗಳನ್ನು ಹೇಳಲಾಗುತ್ತಿದೆ.
ಇಂದಿನ ವಿಜ್ಞಾನವು ಕೇದಾರನಾಥ ದೇವಾಲಯವನ್ನು ಬಹುಶಃ 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ. ನೀವು ಎಷ್ಟೇ ಇಲ್ಲ ಎಂದು ಹೇಳಿದರೂ, ಈ ದೇವಾಲಯವು ಕನಿಷ್ಠ 1200 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ 21ನೇ ಶತಮಾನದಲ್ಲಿಯೂ ಕೇದಾರನಾಥ ಭೂಮಿ ಅನೇಕ ರೀತಿಯಲ್ಲಿ ಅತ್ಯಂತ ಪ್ರತಿಕೂಲವಾಗಿದೆ.
ಒಂದು ಕಡೆ 22,000 ಅಡಿ ಎತ್ತರದ ಕೇದಾರನಾಥ ಬೆಟ್ಟ,
ಇನ್ನೊಂದು ಬದಿಯಲ್ಲಿ 21,600 ಅಡಿ ಎತ್ತರದ ಕರಚಕುಂಡ್ ಮತ್ತು ಮೂರನೇ ಭಾಗದಲ್ಲಿ 22,700 ಅಡಿ ಎತ್ತರದ ಭರತಕುಂಡವಿದೆ.
ಈ ಮೂರು ಪರ್ವತಗಳ ಮೂಲಕ ಹರಿಯುವ ಐದು ನದಿಗಳೆಂದರೆ ಮಂದಾಕಿನಿ, ಮಧುಗಂಗಾ, ಚಿರಗಂಗಾ, ಸರಸ್ವತಿ ಮತ್ತು ಸ್ವರಂದಾರಿ. ಇವುಗಳಲ್ಲಿ ಕೆಲವು ನದಿಗಳ ಹೆಸರನ್ನು ಈ ಪುರಾಣದಲ್ಲಿ ಬರೆಯಲಾಗಿದೆ.
ಈ ಪ್ರದೇಶವು "ಮಂದಾಕಿನಿ ನದಿ"ಯ ಏಕೈಕ ಜಲಾನಯನ ಪ್ರದೇಶವಾಗಿದೆ.
ಈ ದೇವಾಲಯವು ಒಂದು ವಿಶಿಷ್ಟ ಕಲಾಕೃತಿಯಾಗಿದ್ದು, ಚಳಿಗಾಲದಲ್ಲಿ ಭಾರೀ ಪ್ರಮಾಣದ ಹಿಮ ಮತ್ತು ಮಳೆಗಾಲದಲ್ಲಿ ಅತ್ಯಂತ ವೇಗದಲ್ಲಿ ನೀರು ಹರಿಯುವ ಅಂತಹಾ ಸ್ಥಳದಲ್ಲಿ ಕಲಾಕೃತಿಯಂತಹಾ ದೇವಾಲಯವನ್ನು ನಿರ್ಮಿಸುವುದು ಎಷ್ಟು ಅಸಾಧ್ಯವಾಗಿದೆ. ಇವತ್ತಿಗೂ ಆ ಜಾಗವನ್ನು ಕಾರಿನಲ್ಲಿ ತಲುಪಲು ಸಾಧ್ಯವಿಲ್ಲ.
ಹಾಗಾದರೆ ಅಂತಹ ಸ್ಥಳದಲ್ಲಿ ಈ ದೇವಾಲಯವನ್ನು ಏಕೆ ನಿರ್ಮಿಸಲಾಯಿತು?
ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ, 1200 ವರ್ಷಗಳ ಹಿಂದೆ ಅಂತಹ ಅದ್ಭುತ ದೇವಾಲಯವನ್ನು ಹೇಗೆ ನಿರ್ಮಿಸಲಾಯಿತು?
1200 ವರ್ಷಗಳ ಅನಂತರವೂ , ಆ ಪ್ರದೇಶದಕ್ಕೆ ಎಲ್ಲವನ್ನೂ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುತ್ತದೆ, ಇನ್ನು ಅಲ್ಲಿ ಜೆಸಿಬಿ ಹೋಗುವುದು ತಾನೇ ಹೇಗೆ? ಈ ದೇವಾಲಯವು ಬಹಳ ಪ್ರಬಲವಾಗಿದೆ.
ಇದನ್ನು ನಾವೆಲ್ಲರೂ ಒಮ್ಮೆಯಾದರೂ ಯೋಚಿಸಬೇಕು.
ಈ ದೇವಾಲಯವು 10 ನೇ ಶತಮಾನದಲ್ಲಿ ಭೂಮಿಯ ಮೇಲೆ ಇದ್ದಿದ್ದರೆ, ಅದು "ಹಿಮಯುಗ" ದ ಅಲ್ಪಾವಧಿಯಲ್ಲಿ ಇರಬಹುದೆಂದು ವಿಜ್ಞಾನಿಗಳು ಊಹಿಸುತ್ತಾರೆ.
ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಜಿಯಾಲಜಿ, ಡೆಹ್ರಾಡೂನ್ ಕೇದಾರನಾಥ ದೇವಾಲಯದ ಬಂಡೆಗಳ ಮೇಲೆ ಲಿಗ್ನೋಮ್ಯಾಂಟಿಕ್ ಡೇಟಿಂಗ್ ನ್ನು ಪರೀಕ್ಷಿಸಿದೆ.
"ಕಲ್ಲುಗಳ ಜೀವನ" ವನ್ನು ಗುರುತಿಸಲು ಇದನ್ನು ಮಾಡಲಾಗುತ್ತದೆ.
ದೇವಾಲಯವು 14 ನೇ ಶತಮಾನದಿಂದ 17 ನೇ ಶತಮಾನದ ಮಧ್ಯಭಾಗದವರೆಗೆ ಸಂಪೂರ್ಣವಾಗಿ ಮಂಜುಗಡ್ಡೆಯ ಅಡಿಯಲ್ಲಿ ಹೂತುಹೋಗಿತ್ತು ಎಂದು ಪರೀಕ್ಷೆಗಳು ಬಹಿರಂಗಪಡಿಸಿದವು. ಆದರೆ, ದೇಗುಲಕ್ಕೆ ಯಾವುದೇ ಹಾನಿಯಾಗಿಲ್ಲ.
2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಭೀಕರ ಪ್ರವಾಹವನ್ನು ಎಲ್ಲರೂ ಕಂಡಿರಬಹುದು. ಆ ಸಮಯದಲ್ಲಿ ಸರಾಸರಿಗಿಂತ 375% ಹೆಚ್ಚು ಮಳೆಯಾಯಿತು. ಅನಂತರದ ಪ್ರವಾಹವು "5748 ಜನರನ್ನು" (ಸರ್ಕಾರದ ಅಂಕಿಅಂಶಗಳು) ಕೊಚ್ಚಿಸಿಕೊಂಡು ಹೋಯಿತು ಮತ್ತು 4200 ಹಳ್ಳಿಗಳನ್ನು ಹಾನಿಗೊಳಿಸಿತು. ಭಾರತೀಯ ವಾಯುಪಡೆಯು 1 ಲಕ್ಷ 10 ಸಾವಿರಕ್ಕೂ ಹೆಚ್ಚು ಜನರನ್ನು ಹೆಲಿಕಾಪ್ಟರ್ ಮೂಲಕ ಆಹಾರ ಪದಾರ್ಥಗಳನ್ನು ಒದಗಿಸಿ ರಕ್ಷಿಸಿದರು. ಆದರೆ ಅಂತಹ ಭೀಕರ ಪ್ರವಾಹವು ಕೇದಾರನಾಥ ದೇವಾಲಯಕ್ಕೆ ಯಾವುದೇ ಪರಿಣಾಮ ಬೀರಲಿಲ್ಲ.
ಆರ್ಕಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ, ಪ್ರವಾಹದ ನಂತರವೂ, 99 ಪ್ರತಿಶತದಷ್ಟು ದೇವಾಲಯದ ರಚನೆಯು ಆಡಿಟ್‌ನಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
2013 ರ ಪ್ರವಾಹದ ಸಮಯದಲ್ಲಿ ದೇಗುಲಕ್ಕೆ ಎಷ್ಟು ಪ್ರಮಾಣದ ಹಾನಿಯಾಗಿದೆ ಮತ್ತು ಅದರ ಪ್ರಸ್ತುತ ಸ್ಥಿತಿಯನ್ನು ಅಧ್ಯಯನ ಮಾಡಲು "IIT ಮದ್ರಾಸ್" ದೇವಾಲಯದ ಮೇಲೆ "NDT ಪರೀಕ್ಷೆ" ನಡೆಸಿತು. ಅಲ್ಲದೆ ದೇವಸ್ಥಾನ ಸಂಪೂರ್ಣ ಸುರಕ್ಷಿತ ಮತ್ತು ಬಲಿಷ್ಠವಾಗಿದೆ ಎಂದು ಹೇಳಿತು.
ಎರಡು ವಿಭಿನ್ನ ಸಂಸ್ಥೆಗಳು ನಡೆಸುವ "ವೈಜ್ಞಾನಿಕ ಪರೀಕ್ಷೆ" ಯಲ್ಲಿ ದೇವಾಲಯವು ಉತ್ತೀರ್ಣರಾಗದಿದ್ದರೆ, ಇಂದಿನ ವಿಮರ್ಶಕರು ನಿಮಗೆ ಆ ಬಗ್ಗೆ ಯಾವರೀತಿಯಲ್ಲಿ ಉತ್ತಮವಾಗಿ ಏನು ಹೇಳುತ್ತಾರೆ?
ದೇವಾಲಯದ ಹಿಂದೆ ಹಾಗೇ ನಿಂತಿದೆ:
ಈ ದೇವಾಲಯವನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಲಾಗಿದೆ ಮತ್ತು ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ.
ಇವು ಮುಖ್ಯ ಕಾರಣಗಳು.
ಎರಡನೆಯದಾಗಿ, ಅದರಲ್ಲಿ ಬಳಸಿದ ಕಲ್ಲು ತುಂಬಾ ಕಠಿಣ ಮತ್ತು ಬಾಳಿಕೆ ಬರುವಂತಹದ್ದಾಗಿದೆ. ವಿಶೇಷವೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳು ಆ ಸ್ಥಳದಲ್ಲಿ ಲಭ್ಯವಿಲ್ಲ, ಹಾಗಾದರೆ ಆ ಕಲ್ಲನ್ನು ಅಲ್ಲಿಗೆ ಹೇಗೆ ತೆಗೆದುಕೊಂಡು ಹೋಗಿರಬಹುದೆಂದು ಊಹಿಸಿ.
ಆಗ ಅಷ್ಟು ದೊಡ್ಡ ಕಲ್ಲನ್ನು ಹೊತ್ತೊಯ್ಯುವಷ್ಟು ಉಪಕರಣಗಳೂ ಲಭ್ಯವಿರಲಿಲ್ಲ. ಈ ಕಲ್ಲಿನ ವಿಶೇಷತೆ ಏನೆಂದರೆ, 400 ವರ್ಷಗಳ ಕಾಲ ಮಂಜುಗಡ್ಡೆಯ ಅಡಿಯಲ್ಲಿದ್ದರೂ, ಅದರ "ಗುಣಲಕ್ಷಣಗಳಲ್ಲಿ" ಯಾವುದೇ ವ್ಯತ್ಯಾಸವಾಗುವುದಿಲ್ಲ.
ದೇವಾಲಯದ ನಿರ್ಮಾಣದಲ್ಲಿ ಬಳಸಲಾದ ಕಲ್ಲು ಮತ್ತು ರಚನೆ ಮತ್ತು ಅದನ್ನು ನಿರ್ಮಿಸಿದ ದಿಕ್ಕಿನಿಂದಲೇ ಈ ದೇವಾಲಯವು ಅಂತಹಾ ಪ್ರವಾಹ ಬಂದಾಗಲೂ ಉಳಿಯಲು ಸಾಧ್ಯವಾಯಿತು ಎಂದು ಇಂದಿನ ವಿಜ್ಞಾನ ಹೇಳುತ್ತದೆ.
ಕೇದಾರನಾಥ ದೇವಾಲಯವನ್ನು "ಉತ್ತರ-ದಕ್ಷಿಣ" ರೂಪದಲ್ಲಿ ನಿರ್ಮಿಸಲಾಗಿದೆ. ಭಾರತದಲ್ಲಿ ಬಹುತೇಕ ಎಲ್ಲಾ ದೇವಾಲಯಗಳು "ಪೂರ್ವ-ಪಶ್ಚಿಮ" ಇವೆ. ತಜ್ಞರ ಪ್ರಕಾರ, ದೇವಾಲಯವು "ಪೂರ್ವ-ಪಶ್ಚಿಮ" ಆಗಿದ್ದರೆ ಅದು ಈಗಾಗಲೇ ನಾಶವಾಗುತ್ತಿತ್ತು ಅಥವಾ ಕನಿಷ್ಠ 2013 ರ ಅಂತಹಾ ಭಾರೀ ಪ್ರವಾಹದಲ್ಲಿ ಅದು ನಾಶವಾಗುತ್ತಿತ್ತು. ಆದರೆ ಅದನ್ನು ನಿರ್ಮಿಸಿದ ದಿಕ್ಕಿನಿಂದಾಗಿ ಕೇದಾರನಾಥ ದೇವಾಲಯವು ಇನ್ನೂ ಉಳಿದಿದೆ.
ಆದ್ದರಿಂದ, ದೇವಾಲಯವು ಪ್ರಕೃತಿಯ ಚಕ್ರದಲ್ಲಿ ತನ್ನ ಶಕ್ತಿಯನ್ನು ಉಳಿಸಿಕೊಂಡಿದೆ. ದೇವಾಲಯದ ಆ ಬಲವಾದ ಕಲ್ಲುಗಳು ಯಾವುದೇ ಸಿಮೆಂಟ್ ಇಲ್ಲದೆ "ಆಷ್ಲರ್" ರೀತಿಯಲ್ಲಿ ಒಂದಕ್ಕೊಂದು ಒಟ್ಟಿಗೆ ಅಂಟಿಕೊಂಡಿವೆ. ಆದ್ದರಿಂದ ಕಲ್ಲಿನ ಸಂಧಿಯ ಮೇಲೆ ತಾಪಮಾನ ಬದಲಾವಣೆಯ ಯಾವುದೇ ಪರಿಣಾಮವಿಲ್ಲದೆ ದೇವಾಲಯದ ಬಲವು ಅಭೇದ್ಯವಾಗಿದೆ.
ಟೈಟಾನಿಕ್ ಮುಳುಗಿದ ಅನಂತರ, ಪಾಶ್ಚಿಮಾತ್ಯರು "NDT ಪರೀಕ್ಷೆ" ಮತ್ತು "ತಾಪಮಾನ" ಉಬ್ಬರವಿಳಿತವನ್ನು ಹೇಗೆ ತಿರುಗಿಸಬಹುದು ಎಂಬುದನ್ನು ಅರಿತುಕೊಂಡರು.
ಆದರೆ ಭಾರತೀಯರು ಇದನ್ನು 1200 ವರ್ಷಗಳ ಹಿಂದೆ ಯೋಚಿಸಿದರು ಮತ್ತು ಪರೀಕ್ಷಿಸಿದರು. ಕೇದಾರನಾಥವು ಮುಂದುವರಿದ ಭಾರತೀಯ ವಾಸ್ತುಶಿಲ್ಪದ ಉಜ್ವಲ ಉದಾಹರಣೆಯಲ್ಲವೇ?
2013 ರಲ್ಲಿ, ದೇವಾಲಯಕ್ಕೆ ಸರಿಯಾಗಿ ಅದರ ಹಿಂಭಾಗದಲ್ಲಿ ಒಂದು ದೊಡ್ಡ ಬಂಡೆಯು ಸಿಲುಕಿಕೊಂಡಿತ್ತು ಮತ್ತು ನೀರಿನ ಹರಿವು ದೇವಾಲಯದ ಎರಡೂ ಬದಿಗಳಲ್ಲಿ ಹರಿಯಿತು ಆದರೆ ದೇವಾಲಯ ಮತ್ತು ದೇವಾಲಯದಲ್ಲಿ ಆಶ್ರಯ ಪಡೆದ ಜನರನ್ನು ಆ ದೊಡ್ಡ ಬಂಡೆಯು ರಕ್ಷಿಸಿತು. ಮರುದಿನ ಭಾರತೀಯ ಸೇನೆಯ ಯೋಧರು ಜನರನ್ನು ಏರ್‌ಲಿಫ್ಟ್ ಮಾಡಿದರು.
ನಮ್ಮ ನಮ್ಮ ನಂಬಿಕೆಯ ಮೇಲೆ ವಿಶ್ವಾಸವಿಡಬೇಕೋ ಬೇಡವೋ ಎಂಬುದು ಪ್ರಶ್ನೆಯಲ್ಲ. ಆದರೆ 1200 ವರ್ಷಗಳ ಕಾಲ ತನ್ನ ಸಂಸ್ಕೃತಿ ಮತ್ತು ಶಕ್ತಿಯನ್ನು ಉಳಿಸಿಕೊಳ್ಳುವ ದೇವಾಲಯದ ನಿರ್ಮಾಣಕ್ಕಾಗಿ ಆಯ್ದುಕೊಂಡ ಆ ಸ್ಥಳ, ಅದರ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಿದವರು ಆ ದೇಗುಲವನ್ನು ನಿರ್ಮಿಸಲು ಅಗತ್ಯವಿರುವ ಕಟ್ಟಡ ಸಾಮಗ್ರಿಗಳು ಮತ್ತು ಪ್ರಕೃತಿಯನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದರು ಎಂಬುದರಲ್ಲಿ ಸಂದೇಹವಿಲ್ಲ.
6 ಅಡಿ ಎತ್ತರದ ವೇದಿಕೆಯನ್ನು ನಿರ್ಮಿಸಲು ಬಳಸಲಾದ ಕಲ್ಲನ್ನು ದೇವಾಲಯದ ಸ್ಥಳಕ್ಕೆ ಹೇಗೆ ತರಲಾಯಿತು ಎಂದು ಪ್ರಾಚೀನ ಭಾರತೀಯ ವಿಜ್ಞಾನದ ದೊಡ್ಡ ಪ್ರಯತ್ನದ ಬಗ್ಗೆ ನಾವು ಆಶ್ಚರ್ಯ ಪಡುತ್ತೇವೆ.
ಇಂದು, ಎಲ್ಲಾ ಪ್ರವಾಹಗಳ ಅನಂತರವೂ, ಅದೇ ಭವ್ಯತೆಯಿಂದ 12 ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಎತ್ತರದ ಗೌರವವನ್ನು ಪಡೆಯುವ ಕೇದಾರನಾಥದ ನಿರ್ಮಾಣಕ್ಕಾಗಿ ನಾವು ಆ ವಿಜ್ಞಾನಿಗಳ ಮುಂದೆ ದೀರ್ಘದಂಡ ನಮನವನ್ನು ಸಲ್ಲಿಸುತ್ತೇವೆ.
ವೈದಿಕ ಹಿಂದೂ ಧರ್ಮ ಮತ್ತು ಸಂಸ್ಕೃತಿ ಎಷ್ಟು ಮುಂದುವರಿದಿತ್ತು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಆ ಸಮಯದಲ್ಲಿ ನಮ್ಮ ಋಷಿಮುನಿಗಳು ಮತ್ತು ವಿಜ್ಞಾನಿಗಳು ವಾಸ್ತುಶಿಲ್ಪ, ಹವಾಮಾನಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ ಮತ್ತು ಆಯುರ್ವೇದದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರು.
ಅದಕ್ಕಾಗಿಯೇ ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ
ಈಗ ಕೇದಾರನಾಥದ ಬಾಗಿಲು ತೆರೆದಿದೆ, ದೇವದೇವ ಕೇದಾರನಾಥ ಎಲ್ಲರ ಇಷ್ಟಾರ್ಥಗಳನ್ನು ಪೂರೈಸಲಿ.
(whatsapp)
***
*****
ಬದರಿನಾಥ BADARINATH
raghavendra swami mutt contact Pavan 63019 17255
opinion by travellers in May 2019 - ನಾವು 24 ಜನ ಮೊನ್ನೆ ಚಾರ್ ಧಾಮ್ ಯಾತ್ರೆ ಹೋಗಿ ಬದರಿ, ಕೇದಾರದಲ್ಲಿ ಮೊದಲ ದಿನ ದರ್ಶನ ಮಾಡಿದೆವು, ಬದರಿನಾಥದಲ್ಲಿ ಉಡುಪಿ ಪೇಜಾವರ ಶ್ರೀ ಗಳ ಅನಂತ ಮಠವಿದ್ದು ಅಲ್ಲಿ ಬೋಜನ ವ್ಯವಸ್ಥೆ ಮಾಡಿಕೊಟ್ಟರು, ನಮ್ಮಲ್ಲಿ ನಾವಿಬ್ಬರೆ ಬ್ರಾಹ್ಮಣರು, ಮಿಕ್ಕವರೆಲ್ಲ ಇತರರು ಆದರೆ ಸಸ್ಯಹಾರಿಗಳು, ಇದನ್ನು ನಾನು ಮೊದಲೆ ಹೇಳಿದ್ದೆ, ಆದರೂ ಯಾವುದೆ ಭೇದವಿಲ್ಲದೆ ಅನ್ನ ನೀಡಿದರು, ವಾರಗಟ್ಟಲೆ ದಕ್ಷಿಣ ಭಾರತದ ಊಟವಿಲ್ಲದೆ ಸೊರಗಿದ್ದ ನಮಗೆ ಜೀವ ನೀಡಿದರು, ಹಣ ಸಹ ಕೇಳುವುದಿಲ್ಲ, ನಮಗೆ ತೋಚಿದಷ್ಟು ಕಾಣಿಕೆ ನೀಡಬಹುದು, ಹಾಗೆ ಹರಿಧ್ವಾರದಲ್ಲೂ ಸಹ ವ್ಯವಸ್ಥೆ ಇತ್ತು, ಆದರೆ ಇಲ್ಲಿ ಊಟ ತಿಂಡಿ ಉಚಿತ ಅಂದರೂ ಸಹ ಪ್ರತಿ ವ್ಯಕ್ತಿ ಭೋಜನಕ್ಕೆ ತಲಾ 100/- ರೂನಂತೆ ಕಾಣಿಕೆ ರಸೀತಿ ಬರೆಯುತ್ತಾರೆ, ಅದನ್ನು ಪಾವತಿಸಬೇಕು, ಆದಾಗ್ಯೂ ಉತ್ತರ ಭಾರತದಲ್ಲಿ ಅಷ್ಟು ಮಾತ್ರ ಅನ್ನಾಹಾರ ಒದಗಿಸಿದ, ನನ್ನನ್ನು ಬ್ರಾಹ್ಮಣರಲ್ಲಿ ಯಾವ ಮತ ಎಂದು ಕೇಳದೆ ಬದರಿನಾಥ ಹಾಗು ಹರಿದ್ವಾರದ ಸಿಬ್ಬಂದಿಗೆ ಮತ್ತು ಗುರುಗಳಿಗೆ, ಮತ್ತು ವಿಶೇಷವಾಗಿ ಅಂತಹ ಮೈನೆಸ್ ಡಿಗ್ರಿ ಚಳಿ,ಮಳೆಯಲ್ಲೂ ಹಣ ಸಹ ಕೇಳದೆ ಅನ್ನ ನೀಡುತ್ತಿರುವ ಬದರಿನಾಥದ ಸಿಬ್ಬಂದಿಗಳಿಗೆ ನಮ್ಮೆಲ್ಲರ ಸಾಷ್ಟಾಂಗ ಭಕ್ತಿ ಪೂರ್ವಕ ನಮಸ್ಕಾರಗಳು
Ananth mutt Badrinath,
Name- Sandeep, very nice gentleman
094129 61274,
Haridwar, Madhwamutt,
Manoj- he also very polite and service oriented person
+91 99974 43686 (year 2019)
*****
ಬದರೀನಾಥ ಕ್ಷೇತ್ರದ ಇತಿಹಾಸ ಮತ್ತು ಮಹತ್ವ.
🏔️ಬದರಿಯು ಭರತಖಂಡದ ಸರ್ವಶ್ರೇಷ್ಠ ಪುಣ್ಯಕ್ಷೇತ್ರ.
🏔️ಇದರ ವರ್ಣನೆಯು ಮಹಾಭಾರತ, ಹರಿವಂಶ, ಭಾಗವತ ಮೊದಲಾದ ಇತಿಹಾಸ ಪುರಾಣಗಳಲ್ಲಿ ವಿಫುಲವಾಗಿ ಬಂದಿದೆ.
🏔️ಭರತಖಂಡದ ಆಧ್ಯಾತ್ಮಿಕ ರಾಜಧಾನಿ ಎಂಬುದಾಗಿ ಭಾಗವತವು ವರ್ಣಿಸಿದೆ. ಆದ್ದರಿಂದಲೇ ಬದರಿ ಯಾತ್ರೆಗೆ ಭಾರತದ ಧಾರ್ಮಿಕ ಜನತೆಯಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ.
🏔️ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಇದರ ಸ್ವಾಮಿಯಾದ ನಾರಾಯಣನೇ ಸರ್ವೋತ್ತಮ ದೇವತೆಯಾಗಿರುವನು ಎಂಬುದು ಸಿದ್ಧವಾಗುವುದು.
🏔️ಇಲ್ಲಿ ಹರಿಯುವ ಗಂಗಾ(ಅಲಕಾನಂದಾ) ನದಿಯು ಜಗತ್ತಿನ ಸರ್ವಶ್ರೇಷ್ಠ ನದಿಯಾಗಿದೆ.
🏔️ಇದು ಮೂಲತಃ ನಾರಾಯಣನ ಪಾದೋದಕ ಎಂಬುದೂ ಗಮನಾರ್ಹ.
🏔️ಪ್ರಾಚೀನ ಯುಗಗಳ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.
🏔️ಧರ್ಮಪುತ್ರತ್ವೇನ ಅವತರಿಸಿದ ಶ್ರೀಮನ್ನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ.
🏔️ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ.
ಉರ್ವಶಿಯು ಶ್ರೀಮನ್ನಾರಾಯಣನಿಂದ ಜನ್ಮ ತಳೆದ ಸ್ಥಳ.
🏔️ಶ್ರೀಕೃಷ್ಣರೂಪದಿಂದ ಶ್ರೀಹರಿಯು ಘಂಟಾಕರ್ಣರಿಗೆ ಮೋಕ್ಷವಿತ್ತ ಸ್ಥಳ.
🏔️ಪಾಂಡವರು ಅವತರಿಸಿದ ಸ್ಥಳ.
ಪಾಂಡವರು ಬಾಲ್ಯವನ್ನು ಕಳೆದದ್ದಲ್ಲದೇ ತಮ್ಮ ತೀರ್ಥಯಾತ್ರೆಯ ಕಾಲದಲ್ಲೂ ಮಹಾಪ್ರಸ್ಥಾನದ ಸಮಯದಲ್ಲೂ ಸಂದರ್ಶಿಸಿದ ಸ್ಥಳ.
🏔️ಶ್ರೀಮದಾಚಾರ್ಯರು ತಮ್ಮ ಪ್ರಥಮ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಸಮರ್ಪಿಸಿದ್ದು, ಪಾಠ ಹೇಳಿದ್ದು, ೪೮ ದಿನಗಳ ಕಾಲ ಕಾಷ್ಠಮೌನವ್ರತವನ್ನು, ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವೇದವ್ಯಾಸದೇವರನ್ನು ಸಂದರ್ಶಿಸಿ ಉತ್ತರಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯವು ವರ್ಣಿಸುವುದು.
🏔️ಬದರಿಯಲ್ಲಿ ಪರಸ್ಪರ ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತಗಳು ಇವೆ. ಬದರಿನಾರಾಯಣನ ಗುಡಿ ಇರುವ ಪರ್ವತವೇ ನಾರಾಯಣ ಪರ್ವತ.
🏔️ಎದುರಿನದು ನರಪರ್ವತ.
🏔️ನಾರಾಯಣಪರ್ವತದ ಬುಡದಲ್ಲೇ ಅಲಕಾನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತದೆ. ಅದರ ತೀರದಲ್ಲೇ ಶ್ರೀಮನ್ನಾರಾಯಣ ದೇವರ ಧ್ಯಾನಮಗ್ನ ಮೂರ್ತಿ ಇದೆ.
🏔️ದೇವತಾಪರಿವಾರವೂ ಇದೆ.
🏔️ಅಲಕಾನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧವೆನ್ನುವಷ್ಟು ತಂಪಾಗಿದೆ.
🏔️ಅದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ, ಶೀತದಿಂದಾಗಿ ಅಲಕಾನಂದೆಯ ಸ್ನಾನ ಇಲ್ಲಿ ಸಾಮಾನ್ಯರಿಗೆ ಎಂದೂ ಸಾಧ್ಯವಾಗುವಂತದ್ದಲ್ಲ.
🏔️ದೇವಾಲಯದ ಒಳಾಂಗಣವೇ ಅನಂತಮಠ ಎಂದು ಪ್ರಸಿದ್ಧವಾದ ಸ್ಥಳವು.
🏔️ಶ್ರೀಮದಾಚಾರ್ಯರು ಇಲ್ಲಿಯೇ ತಂಗಿದ್ದು ಗೀತಾಭಾಷ್ಯವನ್ನು ರಚಿಸಿದರು.
🏔️ಬದರಿಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಸರಸ್ವತೀ ಮತ್ತು ಅಲಕಾನಂದಾ ನದಿಗಳ ಸಂಗಮಸ್ಥಳವಾದ ಕೇಶವಪ್ರಯಾಗ ಎಂಬ ಅಪೂರ್ವ ಸ್ಥಳ ಇದೆ.
🏔️ಅದರ ಬಳಿಯಲ್ಲೇ ಬೆಟ್ಟದಲ್ಲಿ ಗಣೇಶ ಗುಹಾ ಎಂಬ ಸ್ಥಳವಿದ್ದು, ಅದು ಮಹಾಭಾರತವನ್ನು ಗಣೇಶನು ಬರೆದ ಸ್ಥಳ ಎನ್ನುವರು.
🏔️ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ವ್ಯಾಸಗುಹೆ ಇದೆ.
🏔️ಇದನ್ನು ವ್ಯಾಸಾಶ್ರಮ ಎನ್ನುವರು. ಅಲ್ಲಿಂದ ಮೇಲೆ ಸುಮಾರು ಹತ್ತು ಕಿಮೀಗಳಷ್ಟು ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನ ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣನ ದರ್ಶನವಾದ ಮುಚುಕುಂದಗುಹೆ ಇದೆ.
🏔️ಕೇಶವಪ್ರಯಾಗದಲ್ಲಿ ಅಲಕಾನಂದೆಯನ್ನು ಸೇರುವ ಸರಸ್ವತಿಯು ಒಂದು ಕಿಮೀ ಮೊದಲು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು.
🏔️ಅದು ಧುಮುಕುವ ಸ್ಥಳದಲ್ಲೇ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿರ್ಮಿಸಿದ ಭೀಮಸೇತು ಎಂಬ ಸೇತುವೆ ಇದೆ.
🏔️ಜಗತ್ತಿನ ಯಾವ ಪ್ರಸಿದ್ಧ ಜಲಪಾತಕ್ಕೂ ಇಂತಹಾ ಏಕಶಿಲೆಯ ಸೇತುವೆ ಇಲ್ಲ.
🏔️ಇದು ಭೀಮಸೇನ ದೇವರ ಅಗಾಧ ಬಲ ಮತ್ತು ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ.
🏔️ಈ ಸರಸ್ವತೀ ನದಿಯ ತೀರದ ಸ್ಥಳವೇ ಭಾಗವತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಮ್ಯಾಪ್ರಾಸ ಎಂಬ ಭಾಗವತ ರಚನೆಯ ಪುಣ್ಯಸ್ಥಳ.
🏔️ಬದರಿಗಿಂತ ೨೦ ಕಿಮೀ ಮುಂಚಿತವಾಗಿ ಪಾಂಡುಕೇಶ್ವರ ಎಂಬ ಸ್ಥಳವಿದೆ.
🏔️ಅಲಕಾನಂದಾ ತೀರದ ಈ ಸ್ಥಳದಲ್ಲಿಯೇ, ಪಾಂಡುರಾಜನು ತನಗೆ ಕಿಂದಮೃಷಿಗಳಿಂದ ಶಾಪ ಬಂದ ನಂತರದ ಕಾಲದಲ್ಲಿ ವಾಸಿಸಿದ್ದನು.
ಅಲಕಾನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮೊದಲಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸಲ್ಪಡುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯು ಪ್ರಾಪ್ತವಾಗುವುದೆಂಬ ಕಾರಣದಿಂದಾಗಿ ಗಯಾಕ್ಷೇತ್ರದ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ತ್ವವನ್ನು ಶಾಸ್ತ್ರಗಳು ವಿಧಿಸಿವೆ.
🏔️ಪ್ರಸಿದ್ಧವಾದ ಎರಡು ಬದರಿಗಳಲ್ಲಿ ವಿಶಾಲಬದರಿಯೇ ನಾರಾಯಣಾಶ್ರಮದ ಬದರಿಯಾಗಿದೆ. ಭಾಗವತಾದಿಗಳಲ್ಲಿ ಇದನ್ನು ವಿಶಾಲಬದರಿ ಎಂದೇ ಕರೆಯಲಾಗಿದೆ.
🏔️ಶ್ರೀವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರೀ ಎಂಬ ಇನ್ನೂ ಶ್ರೇಷ್ಠವಾದ ಮತ್ತೊಂದು ಬದರಿಯ ಪ್ರಸ್ತಾಪ ಮಹಾಭಾರತದಲ್ಲೂ ಮಹಾಭಾರತತಾತ್ಪರ್ಯನಿರ್ಣಯದಲ್ಲೂ ಬಂದಿದೆ.
🏔️ ನರಾಗಮ್ಯವಾದ ಆ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀಮನ್ನಾರಾಯಣ ದೇವರಿಂದಲೂ ಅದರ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರವು ಮಧ್ವವಿಜಯದಲ್ಲಿ ಇದೆ.
🏔️ಅಲ್ಲದೇ ಅವರು ಅದ್ಯಾಪಿ ಈ ಬದರಿಯಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ನಂತರ ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.
🏔️ಇಷ್ಟೆಲ್ಲಾ ಮಹತ್ತ್ವದ ಪುಣ್ಯಭೂಮಿಯಾದ ಈ ದೇವಭೂಮಿಯಲ್ಲಿ ಕಾಲಿಟ್ಟರೂ ಪುಣ್ಯವೆನ್ನುತ್ತಾರೆ ಬಲ್ಲವರು.
****
ಬದರೀ ಕ್ಷೇತ್ರ ಮಹಾತ್ಮೆ-
ಬದರಿಯು ಭರತಖಂಡದ ಸರ್ವಶ್ರೇಷ್ಠ ಪುಣ್ಯಕ್ಷೇತ್ರ. ಇದರ ವರ್ಣನೆಯು ಮಹಾಭಾರತ, ಹರಿವಂಶ, ಭಾಗವತ ಮೊದಲಾದ ಇತಿಹಾಸ ಪುರಾಣಗಳಲ್ಲಿ ವಿಫುಲವಾಗಿ ಬಂದಿದೆ. ಭರತಖಂಡದ ಆಧ್ಯಾತ್ಮಿಕ ರಾಜಧಾನಿ ಎಂಬುದಾಗಿ ಭಾಗವತವು ವರ್ಣಿಸಿದೆ. ಆದ್ದರಿಂದಲೇ ಬದರಿ ಯಾತ್ರೆಗೆ ಭಾರತದ ಧಾರ್ಮಿಕ ಜನತೆಯಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ.
ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಇದರ ಸ್ವಾಮಿಯಾದ ನಾರಾಯಣನೇ ಸರ್ವೋತ್ತಮ ದೇವತೆಯಾಗಿರುವನು ಎಂಬುದು ಸಿದ್ಧವಾಗುವುದು. ಇಲ್ಲಿ ಹರಿಯುವ ಗಂಗಾ(ಅಲಕಾನಂದಾ) ನದಿಯು ಜಗತ್ತಿನ ಸರ್ವಶ್ರೇಷ್ಠ ನದಿಯಾಗಿದೆ. ಇದು ಮೂಲತಃ ನಾರಾಯಣನ ಪಾದೋದಕ ಎಂಬುದೂ ಗಮನಾರ್ಹ. ಪ್ರಾಚೀನ ಯುಗಗಳ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.
ಧರ್ಮಪುತ್ರತ್ವೇನ ಅವತರಿಸಿದ ಶ್ರೀಮನ್ನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ.
ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ.
ಉರ್ವಶಿಯು ಶ್ರೀಮನ್ನಾರಾಯಣನಿಂದ ಜನ್ಮ ತಳೆದ ಸ್ಥಳ.
ಶ್ರೀಕೃಷ್ಣರೂಪದಿಂದ ಶ್ರೀಹರಿಯು ಘಂಟಾಕರ್ಣರಿಗೆ ಮೋಕ್ಷವಿತ್ತ ಸ್ಥಳ.
ಪಾಂಡವರು ಅವತರಿಸಿದ ಸ್ಥಳ.
ಪಾಂಡವರು ಬಾಲ್ಯವನ್ನು ಕಳೆದದ್ದಲ್ಲದೇ ತಮ್ಮ ತೀರ್ಥಯಾತ್ರೆಯ ಕಾಲದಲ್ಲೂ ಮಹಾಪ್ರಸ್ಥಾನದ ಸಮಯದಲ್ಲೂ ಸಂದರ್ಶಿಸಿದ ಸ್ಥಳ.
ಶ್ರೀಮದಾಚಾರ್ಯರು ತಮ್ಮ ಪ್ರಥಮ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಸಮರ್ಪಿಸಿದ್ದು, ಪಾಠ ಹೇಳಿದ್ದು, ೪೮ ದಿನಗಳ ಕಾಲ ಕಾಷ್ಠಮೌನವ್ರತವನ್ನು, ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವೇದವ್ಯಾಸದೇವರನ್ನು ಸಂದರ್ಶಿಸಿ ಉತ್ತರಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯವು ವರ್ಣಿಸುವುದು.
ಬದರಿಯಲ್ಲಿ ಪರಸ್ಪರ ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತಗಳು ಇವೆ. ಬದರಿನಾರಾಯಣನ ಗುಡಿ ಇರುವ ಪರ್ವತವೇ ನಾರಾಯಣ ಪರ್ವತ. ಎದುರಿನದು ನರಪರ್ವತ. ನಾರಾಯಣಪರ್ವತದ ಬುಡದಲ್ಲೇ ಅಲಕಾನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತದೆ. ಅದರ ತೀರದಲ್ಲೇ ಶ್ರೀಮನ್ನಾರಾಯಣ ದೇವರ ಧ್ಯಾನಮಗ್ನ ಮೂರ್ತಿ ಇದೆ. ದೇವತಾಪರಿವಾರವೂ ಇದೆ.
ಅಲಕಾನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧವೆನ್ನುವಷ್ಟು ತಂಪಾಗಿದೆ. ಅದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ, ಶೀತದಿಂದಾಗಿ ಅಲಕಾನಂದೆಯ ಸ್ನಾನ ಇಲ್ಲಿ ಸಾಮಾನ್ಯರಿಗೆ ಎಂದೂ ಸಾಧ್ಯವಾಗುವಂತದ್ದಲ್ಲ.
ದೇವಾಲಯದ ಒಳಾಂಗಣವೇ ಅನಂತಮಠ ಎಂದು ಪ್ರಸಿದ್ಧವಾದ ಸ್ಥಳವು. ಶ್ರೀಮದಾಚಾರ್ಯರು ಇಲಿಯೇ ತಂಗಿದ್ದು ಗೀತಾಭಾಷ್ಯವನ್ನು ರಚಿಸಿದರು.
ಬದರಿಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಸರಸ್ವತೀ ಮತ್ತು ಅಲಕಾನಂದಾ ನದಿಗಳ ಸಂಗಮಸ್ಥಳವಾದ ಕೇಶವಪ್ರಯಾಗ ಎಂಬ ಅಪೂರ್ವ ಸ್ಥಳ ಇದೆ. ಅದರ ಬಳಿಯಲ್ಲೇ ಬೆಟ್ಟದಲ್ಲಿ ಗಣೇಶ ಗುಹಾ ಎಂಬ ಸ್ಥಳವಿದ್ದು, ಅದು ಮಹಾಭಾರತವನ್ನು ಗಣೇಶನು ಬರೆದ ಸ್ಥಳ ಎನ್ನುವರು. ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ವ್ಯಾಸಗುಹೆ ಇದೆ. ಇದನ್ನು ವ್ಯಾಸಾಶ್ರಮ ಎನ್ನುವರು. ಅಲ್ಲಿಂದ ಮೇಲೆ ಸುಮಾರು ಹತ್ತು ಕಿಮೀಗಳಷ್ಟು ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನ ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣನ ದರ್ಶನವಾದ ಮುಚುಕುಂದಗುಹೆ ಇದೆ.
ಕೇಶವಪ್ರಯಾಗದಲ್ಲಿ ಅಲಕಾನಂದೆಯನ್ನು ಸೇರುವ ಸರಸ್ವತಿಯು ಒಂದು ಕಿಮೀ ಮೊದಲು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು. ಅದು ಧುಮುಕುವ ಸ್ಥಳದಲ್ಲೇ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿರ್ಮಿಸಿದ ಭೀಮಸೇತು ಎಂಬ ಸೇತುವೆ ಇದೆ. ಜಗತ್ತಿನ ಯಾವ ಪ್ರಸಿದ್ಧ ಜಲಪಾತಕ್ಕೂ ಇಂತಹಾ ಏಕಶಿಲೆಯ ಸೇತುವೆ ಇಲ್ಲ. ಇದು ಭೀಮಸೇನ ದೇವರ ಅಗಾಧ ಬಲ ಮತ್ತು ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ.
ಈ ಸರಸ್ವತೀ ನದಿಯ ತೀರದ ಸ್ಥಳವೇ ಭಾಗವತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಮ್ಯಾಪ್ರಾಸ ಎಂಬ ಭಾಗವತ ರಚನೆಯ ಪುಣ್ಯಸ್ಥಳ.
ಬದರಿಗಿಂತ ೨೦ ಕಿಮೀ ಮುಂಚಿತವಾಗಿ ಪಾಂಡುಕೇಶ್ವರ ಎಂಬ ಸ್ಥಳವಿದೆ. ಅಲಕಾನಂದಾ ತೀರದ ಈ ಸ್ಥಳದಲ್ಲಿಯೇ, ಪಾಂಡುರಾಜನು ತನಗೆ ಕಿಂದಮೃಷಿಗಳಿಂದ ಶಾಪ ಬಂದ ನಂತರದ ಕಾಲದಲ್ಲಿ ವಾಸಿಸಿದ್ದನು.
ಅಲಕಾನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮೊದಲಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸಲ್ಪಡುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯು ಪ್ರಾಪ್ತವಾಗುವುದೆಂಬ ಕಾರಣದಿಂದಾಗಿ ಗಯಾಕ್ಷೇತ್ರದ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ತ್ವವನ್ನು ಶಾಸ್ತ್ರಗಳು ವಿಧಿಸಿವೆ.
ಪ್ರಸಿದ್ಧವಾದ ಎರಡು ಬದರಿಗಳಲ್ಲಿ ವಿಶಾಲಬದರಿಯೇ ನಾರಾಯಣಾಶ್ರಮದ ಬದರಿಯಾಗಿದೆ. ಭಾಗವತಾದಿಗಳಲ್ಲಿ ಇದನ್ನು ವಿಶಾಲಬದರಿ ಎಂದೇ ಕರೆಯಲಾಗಿದೆ. ಶ್ರೀವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರೀ ಎಂಬ ಇನ್ನೂ ಶ್ರೇಷ್ಠವಾದ ಮತ್ತೊಂದು ಬದರಿಯ ಪ್ರಸ್ತಾಪ ಮಹಾಭಾರತದಲ್ಲೂ ಮಹಾಭಾರತತಾತ್ಪರ್ಯನಿರ್ಣಯದಲ್ಲೂ ಬಂದಿದೆ. ನರಾಗಮ್ಯವಾದ ಆ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀಮನ್ನಾರಾಯಣ ದೇವರಿಂದಲೂ ಅದರ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರವು ಮಧ್ವವಿಜಯದಲ್ಲಿ ಇದೆ. ಅಲ್ಲದೇ ಅವರು ಅದ್ಯಾಪಿ ಈ ಬದರಿಯಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ನಂತರ ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.
ಇಷ್ಟೆಲ್ಲಾ ಮಹತ್ತ್ವದ ಪುಣ್ಯಭೂಮಿಯಾದ ಈ ದೇವಭೂಮಿಯಲ್ಲಿ ಕಾಲಿಟ್ಟರೂ ಪುಣ್ಯವೆನ್ನುತ್ತಾರೆ ಬಲ್ಲವರು.
***
#ಬದರಿನಾಥ_ಕ್ಷೇತ್ರ
ಬದರಿನಾರಾಯಣ ದರ್ಶನ ಆಗಬೇಕು ಅಂದ್ರೆ ಯೋಗದಲ್ಲಿ ಬರೆದಿರಬೇಕು . ಯಾಕೆಂದರೆ ಆ ದಾರಿ ಅಷ್ಟು ದುರ್ಗಮ ಇದೆ . ಭಕ್ತರು ಜೀವ ಕೊಟ್ಟು ಆದರೂ ಭಗವಂತನ ದರ್ಶನಕ್ಕೆ ಹೋಗ್ತಾರೆ ಯಾಕೆಂದರೆ ಚಾರುಧಾಮ ಯಾತ್ರೆ ಮಾಡದೆ ಜೀವನಕ್ಕೆ ಸಾರ್ಥಕತೆ ಇಲ್ಲ .
ಇನ್ನು ಬದರಿನಾಥ ದೇವಸ್ಥಾನ ಬಗ್ಗೆ ಹೇಳುವುದಾದರೆ
ಅಲಕನಂದಾ ನದಿಯ ತಟದಲ್ಲಿರುವ ಭಗವಂತ ಯೋಗಮುದ್ರೆ ಯಲ್ಲಿದ್ದಾನೆ ಅದಕ್ಕೆ ಹೇಳುವರು
ಭಗವಂತ ಸ್ನಾನಕ್ಕೆ ರಾಮೇಶ್ವರ
ನೈವೇದ್ಯಕ್ಕೆ ಜಗನ್ನಾಥ ಪುರಿ
ಯೋಗಕ್ಕೆ ಬದರಿಗೆ ಹೋಗುತ್ತಾನೆ ಅಂತ ಪ್ರತಿತಿ...
ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ ಬದರಿ . ಸಮುದ್ರ ಮಟ್ಟದಿಂದ 3415 ಸರಾಸರಿಮೀ. ಎತ್ತರವಿರುವ ಬದರಿನಾಥವು ಗಢ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಿತವಾಗಿದೆ. ರಿಷಿಕೇಶದಿಂದ 305 ಕಿ.ಮೀ. ದೂರದಲ್ಲಿರುವ ಬದರಿನಾಥ ಕೇದಾರನಾಥದಿಂದ ಸುಮಾರು233 ಕಿ.ಮೀ. ದೂರದಲ್ಲಿದೆ.
ಶ್ರೀಮದ್ಭಾಗವತದ ಪ್ರಕಾರ "ಅಲ್ಲಿ ಬದರಿಕಾಶ್ರಮದಲ್ಲಿ ವಿಷ್ಣುವು ತನ್ನ ಅವತಾರಗಳಾದ ನರ ಮತ್ತು ನಾರಾಯಣ ಋಷಿಗಳ ರೂಪದಲ್ಲಿ ನೆಲೆಸಿದ್ದು ಸಮಸ್ತ ಜೀವಿಗಳ ಒಳಿತಿಗಾಗಿ ಯುಗಯುಗಾಂತರಗಳಿಂದ ತಪಸ್ಸಿನಲ್ಲಿ ನಿರತನಾಗಿರುವನು.
ಬದರಿನಾರಾಯಣ ಮಂದಿರವೆಂದು ಸಹ ಕರೆಯಿಸಿಕೊಳ್ಳುವ ಈ ಮಂದಿರವು ಅಲಕನಂದಾ ನದಿಯ ದಂಡೆಯ ಮೇಲೆ ಇದೆ. ಆದಿ ಶಂಕರರು ಅಲಕನಂದಾ ನದಿಯಲ್ಲಿ ಮುಳುಗಿದ್ದ ಮೂರ್ತಿಯನ್ನು ತಪ್ತ ಕುಂಡದ ಬಳಿಯ ಗುಹೆಯೊಂದರಲ್ಲಿ ಪ್ರತಿಷ್ಠಾಪಿಸಿದರು. ಜೊತೆಗೆ ಮೂರ್ತಿಗೆ ನಿಯಮಿತ ಪೂಜಾವ್ಯವಸ್ಥೆಗಳನ್ನು ಸಹ ನಿಗದಿಮಾಡಿದರು. ಮುಂದೆ ಹದಿನೇಳನೆನಯ ಶತಮಾನದಲ್ಲಿ ಗಢ್ವಾಲ್‌ನ ಅರಸನು ಇಂದು ಕಾಣುವ ಹೊಸ ದೇವಾಲಯವನ್ನು ನಿರ್ಮಿಸಿ ಬದರಿನಾರಾಯಣ ಮೂರ್ತಿಯನ್ನು ಅಲ್ಲಿ ಪುನರ್ಪ್ರತಿಷ್ಠಾಪಿಸಿದನು.ಈ ಮಂದಿರವು ಹಲವು ಬಾರಿ ಪುನರುಜ್ಜೀವನಗೊಳಿಸಲ್ಪಟ್ಟಿದೆ. ತೀವ್ರ ಹಿಮಪಾತ ಮತ್ತು ಭೂಕಂಪಗಳಂತಹ ನೈಸರ್ಗಿಕ ಪ್ರಕೋಪಗಳು ದೇವಾಲಯದ ಕಟ್ಟಡಕ್ಕೆ ಸಾಕಷ್ಟು ಬಾರಿ ಹಾನಿಯುಂಟುಮಾಡಿವೆ.
ಇಲ್ಲಿರುವ ಮೂರ್ತಿಶ್ರೀಮನ್ನಾರಾಯಣನದಾಗಿದ್ದು ಈ ಮೂರ್ತಿಯು ಕಪ್ಪು ಶಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಒಂದು ಮೀ. ಎತ್ತರವಾಗಿದೆ. ಈ ವಿಗ್ರಹವು ಒಂದು ಸ್ವಯಂ ವ್ಯಕ್ತ ಕ್ಷೇತ್ರವೆಂತಲೂ ಪ್ರತಿತಿ
ಇಲ್ಲಿ ನಾರಾಯಣನು ಧ್ಯಾನನಿರತ ಭಂಗಿಯಲ್ಲಿ ನೆಲೆಯಾಗಿರುವನು. ಸುಮಾರು 5೦ ಅಡಿ ಎತ್ತರವಾಗಿರುವ ದೇವಾಲಯವು ಚಿನ್ನದ ವಿಮಾನ ಮತ್ತು ಚಾವಣಿಗಳನ್ನು ಹೊಂದಿದೆ. ದೇವಾಲಯದಲ್ಲಿ ಬದರಿನಾರಾಯಣನ ಮೂರ್ತಿಯ ಜೊತೆಗೆ ನರ ಮತ್ತು ನಾರಾಯಣ, ನರಸಿಂಹ, ಲಕ್ಷ್ಮಿ, ಉದ್ಧವ, ಗರುಡ, ಕುಬೇರ, ನಾರದ ಮತ್ತು ನವದುರ್ಗೆಯರ ಮೂರ್ತಿಗಳು ಸಹ ಸ್ಥಾಪಿಸಲ್ಪಟ್ಟಿದ್ದು ಪೂಜಿಸಲ್ಪಡುತ್ತಿವೆ. ದೇವಾಲಯದ ಬಳಿಯಲ್ಲಿರುವ ತಪ್ತ ಕುಂಡವೆಂಬ ಹೆಸರಿನ ಬಿಸಿನೀರಿನ ಕೊಳಗಳಲ್ಲಿ ಸ್ನಾನ ಮಾಡಿದ ನಂತರವೇ ದೇವರ ದರ್ಶನಕ್ಕೆ ತೆರಳುವುದು ವಾಡಿಕೆ.
ಇಲ್ಲಿನ ಮುಖ್ಯ ಅರ್ಚಕರು ಅಂದರೆ ಅವರನ್ನು ರಾವಲ್ ಅಂತ ಅನ್ನುವುದು ದಕ್ಷಿಣದ ಕೇರಳದ ನಂಬೂದಿರಿ ಬ್ರಾಹ್ಮಣ ಮನೆತನಕ್ಕೆ ಸೇರಿದವರಾಗಿರುತ್ತಾರೆ. ಆದಿ ಶಂಕರಾಚಾರ್ಯರು ಈ ಪರಂಪರೆಯನ್ನು ಸ್ಥಾಪಿಸಿದರು. ರಾವಲ್‌ರಿಗೆ ಪೂಜಾ ಕೈಂಕರ್ಯಗಳಲ್ಲಿ ನೆರವಾಗಲು ಗಢ್ವಾಲ್‌ನ ಡಿಮ್ಮರ್ ಗ್ರಾಮದ ಡಿಮ್ರೀ ಪಂಡಿತರೆಂದು ಹೆಸರಾದ ಬ್ರಾಹ್ಮಣ ವಿದ್ವಾಂಸರು ಇರುತ್ತಾರೆ.ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತವಿರುವ ಶ್ರೌತ ಸಂಪ್ರದಾಯದ ತಂತ್ರ ವಿಧಿಗಳನ್ನು ಅನುಸರಿಸುವ ಉತ್ತರ ಭಾರತದ ಕೆಲವೇ ದೇವಾಲಯಗಳಲ್ಲಿ ಬದರಿನಾಥ ಕ್ಷೇತ್ರ ಒಂದು.
ಇನ್ನು ಮಹಾಭಾರತದ ಪ್ರಕಾರ
ಸ್ವರ್ಗಾರೋಹಿಣಿ ಎಂಬ ಪರ್ವತವನ್ನು ಹತ್ತಿಹೋಗಿ ಪಾಂಡವರು ಭೂಲೋಕವನ್ನು ತೊರೆದು ಸ್ವರ್ಗವನ್ನೈದಿದರೆಂದು ನಂಬಲಾಗಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಪಾಂಡವರು ಬದರಿನಾಥ ಕ್ಷೇತ್ರ ಮತ್ತು ಮಾಣಾಗಳನ್ನು ಹಾದುಹೋಗಿ ಮುಂದೆ ಸ್ವರ್ಗಾರೋಹಿಣಿ ಪರ್ವತವನ್ನು ತಲುಪಿದರು. ಮಾಣಾದಲ್ಲಿ ವ್ಯಾಸಗುಹೆ ಎಂಬ ಹೆಸರಿನ ಗುಹೆಯಿದ್ದು ಇಲ್ಲಿಯೇ ವೇದವ್ಯಾಸ ಮಹಾಋಷಿ ಗಳು ಮಹಾಭಾರತವನ್ನು ಗಣೇಶನಿಗೆ ಹೇಳುವ ಮೂಲಕ ರಚಿಸಿದರೆಂದು ನಂಬಿಕೆ. ಗಣೇಶನು ವ್ಯಾಸರು ಹೇಳಿದ್ದನ್ನು ಕೇಳಿಸಿಕೊಂಡು ಬರೆಯುತ್ತಿದ್ದ ಸ್ಥಳವೆನ್ನಲಾದ ಗಣೇಶ ಗುಹೆ ಎಂಬ ಹೆಸರಿನ ಗುಹೆಯು ಸಹ ಬಳಿಯಲ್ಲಿದೆ
ಬದರಿಗೆ ಯಾವಾಗ ಬೇಕೆಂದರೆ ಆವಾಗ ಹೋಗಲುಸಾದ್ಯವಿಲ್ಲ ಕಾರಣ ಹೋಗಲು ಸೂಕ್ತ ಸಮಯವೆಂದರೆ
ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನನಿಂದ ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ.
ಇನ್ನು ನಾಲ್ಕುಬದರಿ ದೇವಸ್ಥಾನಗಳು ಪ್ರಸಿದ್ದಿಯಲ್ಲಿ ಇದನ್ನು ಸೇರಿಸಿ ಪಂಚ ಬದರಿ ಕ್ಷೇತ್ರಗಳು ..
ಪಂಚ ಬದರಿಗಳು
ಮಹಾವಿಷ್ಣುವನ್ನು ಕುರಿತಾದ ಹಿಮಾಲಯದ ಐದು ಕ್ಷೇತ್ರಗಳು ಪಂಚ ಬದರಿ ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಬದರಿನಾಥ ಕ್ಷೇತ್ರವು ಸಹ ಸೇರಿದೆ.
1 ವಿಶಾಲ ಬದರಿ : ಬದರಿನಾಥ ಕ್ಷೇತ್ರ
2 ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
3 ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ 17 ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ.
4 ವೃದ್ಧ ಬದರಿ : ಜ್ಯೋತಿರ್ಮಠದಿಂದ 7 ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
5 ಆದಿ ಬದರಿ : ಕರ್ಣಪ್ರಯಾಗದಿಂದ 17 ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ಮೂರು ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ
(ಸಂಗ್ರಹ)
*****
ಬದರಿ ಯಾತ್ರೆ - ಮಾಡಬೇಕಾದ ತಯಾರಿ.-ಒಂದು ಸುಂದರ ದೈವೀಕ ಅನುಭವ.- (re posting )
ಬದರಿ ಯಾತ್ರೆ - ಮಾಡಬೇಕಾದ ತಯಾರಿ.-ಒಂದು ಸುಂದರ ದೈವೀಕ ಅನುಭವ.-ಕಮಲಾತನಯ.
ಹಿಂದುಗಳಾದ ನಮಗೆ ತೀರ್ಥ ಕ್ಷೇತ್ರ ದರ್ಶನ ಬಹಳವೇ ಸಾಮಾನ್ಯವಾದ ವಿಚಾರ. ಆದರೆ ಬ್ರಾಹ್ಮಣರಾದವರಿಗೆ ಬದರಿಕಾಶ್ರಮದ ಯಾತ್ರೆ,ಅದರಲ್ಲೂ ಶ್ರೀ ಬದರಿ ನಾರಾಯಣನ ದರುಶನದೊಂದಿಗೆ ಅಲಕನಂದಾ ತೀರದಲ್ಲಿ ಮಾಡುವ ಪಿತೃಕಾರ್ಯ ಬಳಿಕ ಬ್ರಹ್ಮಳಕಪಾಲದಲ್ಲಿ ಪಿತೃ ಪಿಂಡವಿಟ್ಟು ಗಂಗೆಯಲ್ಲಿ ವಿಸರ್ಜನೆ ಕರ್ತವ್ಯವಲ್ಲದಿದ್ದರೂ ಅದನ್ನು ಮಾಡಿದರೆ ಜೀವನ ಸಾರ್ಥಕವಾದ ಅನುಭವ. ಪಿತೃಗಳಿಗೆ ಮೋಕ್ಷದದಾರಿ.
ಇಲ್ಲಿರುವುದು ನನ್ನ ಬದರಿ ಯಾತ್ರೆಯ ಅನುಭವ, ಪ್ರತಿಯೊಂದು ಯಾತ್ರಿಗೂ ತನ್ನದೇ ಆದ ಸುಂದರ,ದೈವೀಕ, ಸಹನೀಯ, ಅಸಯನೀಯ,ಅನಾರೋಗ್ಯ, ಕಷ್ಟಗಳನ್ನು ಎದುರಿಸಿದ ಅನುಭವವಿರುತ್ತದೆ. ಬದರಿಗೆ ಹೋಗಿ ತಿರುಗಿ ಬಂದಾಗ ಸಿಗುವ ಅನುಭವ ಮನಶಾಂತಿ ಅನುಭವಿಸಿದವರೀಗೆ ಗೊತ್ತು.
ಬದರಿಕಾಶ್ರಮ -ಹಿಂದೂಗಳ ೪ ಅತೀ ಮಹತ್ವದ ಪುಣ್ಯಕ್ಷೇತ್ರಗಳಲ್ಲಿ ಒಂದು. (ಬದರಿ,ದ್ವಾರಕ, ಪುರಿ, ಮತ್ತು ರಾಮೇಶ್ವರ).ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಪುಟ್ಟ ನಗರ.ಸಮುದ್ರ ಮಟ್ಟದಿಂದ ೧೦೮೦೦ ಅಡಿ ಎತ್ತರದಲ್ಲಿ ಹಿಮಾಲಯದಲ್ಲಿ ನರ ನಾರಾಯಣ ಪರ್ವತದ ಮಧ್ಯ ಅಲಕನಾಂದಾ ನದಿಯ ದಡದಲ್ಲಿದೆ.ಇಂಡೋ ಚೈನಾ ಗಡಿಪ್ರದೇಶ ದಲ್ಲಿದೆ.
ಆದಿ ಶಂಕರರೀಗೆ ಅಲಕನಂದ ನದಿಯಲ್ಲಿ ಸಿಕ್ಕಿದ ಸಾಲಿಗ್ರಾಮ ಶಿಲೆಯ ವಿಗ್ರಹವೆ ಶ್ರೀ ಬದರಿ ನಾರಾಯಣ ವಿಗ್ರಹ ೩.೩ ಅಡಿ ಎತ್ತರದ ಸಾಲಿಗ್ರಾಮ ಶಿಲೆಯ ಪದ್ಮಾಸನ ಹಾಕಿ ಕೂತಿರುವ ೪ ಕೈಗಳುಳ್ಳ ಶ್ರೀ ಬದರಿ ನಾರಾಯಣ. ಎತ್ತಿದ ಎರಡು ಕೈಗಳಲ್ಲಿ ಶಂಕ ಚಕ್ರ , ಉಳಿದೆರಡು ಯೋಗಮುದ್ರೆಯಲ್ಲಿ ತೊಡೆಯಮೆಲಿದೆ..
ಅನುಕೂಲವಾದ ಸಮಯ ಜೂನ್ -ಸಪ್ಟೆಂಬರ್ ವರೆಗೆ.
ಹರಿದ್ವಾರ--ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಗಂಗಾ ನದಿಯ ದಡದಲ್ಲಿರುವ ಪಟ್ಟಣ. ಇದು ೭ ಮಹಾ ಪುಣ್ಯ ಕ್ಷೇತ್ರಗಳಲ್ಲಿ ಒಂದು.ಅಯೋಧ್ಯ ಮದುರ ಮಾಯಾ ಕಾಶಿ ಕಾಂಚಿ ಅವಂತಿಕ ಪುರಿ ದ್ವಾರಾವತಿ ಚೈವ ಸಪ್ತೈತ ಮೊಕ್ಷದಾಯಕಾಹ. ಇದರಲ್ಲಿ ಮಾಯಾ ಅನ್ನುವುದೇ ಈಗಿನ ಹರಿದ್ವಾರ. ಅಲ್ಲಿರುವ ದೇವರು ಮಾಯಾದೇವಿ ಮತ್ತು ಚಾಮುಂಡಿ.
ಕುರುಕ್ಷೇತ್ರ, ಗೋಕುಲ, ವೃಂದಾವನ ಮಥುರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ . ಇವೆಲ್ಲವೂ ಮಹಾಭಾರತ ಮತ್ತು ಕೃಷ್ಣ ನಿಗೆ ಸಂಭಂದಿಸಿದ ಊರು.
ಯಾತ್ರೆಯ ತಯಾರಿ.
ಉಡುಪಿ, ಮಂಗಳೂರು,ಬೆಂಗಳೂರು, ಮೈಸೂರು ನವರಿಗೆ ವಿಮಾನದಲ್ಲಿ ಡೆಲ್ಲಿ ಅಥವಾ ದೇಹರಡುಂ ಗೆ ಹೋಗುವುದು ಅನುಕೂಲ.ಅದೇ ರೀತಿ ರಿಟರ್ನ್ ಬರುವುದು ಅನುಕೂಲ ವಿಚಾರ.
ಡೆಲ್ಲಿ ಇಂದ ಟೂರಿಸ್ಟ್ ಟ್ಯಾಕ್ಸಿ ಇಲ್ಲವೇ ೨೫ ಜನರಿದ್ದರೆ ಕಾಂಟ್ರಾಕ್ಟ್ ಬಸ್ ವ್ಯವಸ್ತೆ ಮಾಡಿಕೊಳ್ಳುವುದು ಅನುಕೂಲ.ಖರ್ಚು ಕಡಿಮೆ ಅದಕ್ಕೆ. ದೆಲ್ಹಿಯಲ್ಲಿ ಶ್ರೀ ಪೇಜಾವರ ಮಠದಲ್ಲಿ ಕೋಣೆಗಳ ವ್ಯವಸ್ತೆ ಇದೆ. ಅದರ ಉಪಯೋಗವನ್ನು ಪಡೆದುಕೊಲ್ಲ ಬಹುದು. ಅಲ್ಲಿಂದ ಸೀದಾ ಹರಿದ್ವಾರಕ್ಕೆ ಹೊರಟು ಅಲ್ಲಿಯ ಶ್ರೀ ಪೇಜಾವರ ಮಠದಲ್ಲಿ ಇದ್ದು , ಬೆಳಿಗ್ಗೆ ಗಂಗಾಸ್ನಾನ ಮಾಡಿ ತರ್ಪಣಾದಿಗಳನ್ನು ಕೊಟ್ಟು.ಅಲ್ಲೇ ಮದ್ಯನ್ನದ ಪ್ರಸಾದ ಸ್ವೀಕರಿಸಬಹುದು. ಮದ್ಯನ್ನದ ಸಮಯದಲ್ಲಿ ಶ್ರೀ ಚಂಡಿ ಮತ್ತು ಮಾಯಾ ದೇವಸ್ಥಾನಗಳ ದರ್ಶನ ಮಾಡಿಕೊಳ್ಳಬಹುದು. ಹಾಗೆ ಸೂರ್ಯಸ್ತಕ್ಕೆ ಸರಿಯಾಗಿ ಗಂಗಾ ಆರತಿ ಇದೆ ಅದನ್ನು ನೋಡಬಹುದು. ಮರುದಿನ ರುಶಿಕೇಹ ಯಾತ್ರೆ ಮುಗಿಸಿ ಸಾಯಂಕಾಲದ ಸಮಯದಲ್ಲಿ ದೊಡ್ಡ ಅಂಜನೆಯ ಸ್ವಾಮಿ (ಪಲಿಮಾರ್ ಮಠ ) ಸಂದರ್ಶನ ಮುಗಿಸಬಹುದು.
ಮರುದಿನ ಬೆಳಿಗ್ಗೆ ಬೇಗ ಬದರಿಗೆ ಹೊರಟರೆ ದಾರಿಯಲ್ಲಿ ಸಿಗುವ ದೇವಪ್ರಯಾಗ, ರುದ್ರ ಪ್ರಯಾಗ, ಕರ್ಣ ಪ್ರಯಾಗ, ನಂದ ಪ್ರಯಾಗ ಸ್ನಾನ ತರ್ಪಣ ಮುಗಿಸಿ ಅಲ್ಲೇ ಇರುವ ಗೆಸ್ಟ್ ಹೌಸ್ ನಲ್ಲಿ ಉಳಕೊಂಡು ಬೆಳಿಗ್ಗೆ ಹೊರಟರೆ ವಿಷ್ಣುಪ್ರಯಾಗ ಸ್ನಾನ ಮಾಡಿ ಜೊಶಿಮಠ ಸಂದರ್ಶನ ಮಾಡಿ ೩ ಗಂಟೆಯ ಹೊತ್ತಿಗೆ ಬದರಿ ಸೇರಬಹುದು. ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ಮಧ್ಯಾನ್ನದ ಪ್ರಸಾದ ಸ್ವೀಕರಿಸಿ , ೪ ಗಂಟೆಯ ಹೊತ್ತಿಗೆ ಬದರಿ ನಾರಾಯಣನ ದರ್ಶನಕ್ಕೆ ಹೊರಡಬಹುದು.ಅನುಕೂಲ ಇದ್ದವರು ಬದರಿ ನಾರಾಯಣನಿಗೆ ಬೆಳಗ್ಗಿನ ಅಭಿಷೇಕವನ್ನು ಸೇವೆಯಾಗಿ ಕೊಡಬಹುದು, (4.30AM to 8AM )೩ ಜನರಿಗೆ ಪ್ರವೇಶವಿದೆ, ಬಳಿಕ ಪಿತ್ರುಪಿಂಡಪ್ರಧಾನ ಕಾರ್ಯಕ್ರಮ ಇದ್ದವರು ಬೆಳಿಗ್ಗೆ ಅಲಕನಂದಾದಲ್ಲಿ ಮತ್ತು ತಪ್ತ ಕುಂಡದಲ್ಲಿ ಸ್ನಾನಮಾಡಿ ಪಿಂಡಪ್ರಧಾನ ಮುಗಿಸಿ ದೇವರ ದರ್ಶನ ಮುಗಿಸಿ ಶ್ರೀ ಪೆಜವರ ಮಠದಲ್ಲಿ ಪ್ರಸಾದ ಸ್ವೀಕರಿಸಿ , ಸಾಯಂಕಾಲದ ಸಮಯಕ್ಕೆ ವ್ಯಾಸಗುಹೆ , ಗಣೇಶ ಗುಹೆ , ಸರಸ್ವತಿ ನದಿಯ ದರ್ಶನ ಮತ್ತು ಕೇಶವ ಪ್ರಯಾಗ ನೋಡಬಹುದು.ವಯಸಾದವರಿಗೆ ಡಾಲಿಯ ಹೊತ್ತುಕೊಂಡುಹೊಗುವ ವ್ಯವಸ್ತೆ ಇದೆ.(ರು.೩೫೦ ರಿಂದ ೫೦೦ ಪ್ರತಿಒಬ್ಬರಿಗೆ )
ಪ್ರಯಾಗಗಳಲ್ಲಿ ಸ್ನಾನ ಮಾಡುವವರು ಸ್ನಾನಕ್ಕೆ ಬೇಕಾದ ಉಡುಪುಗಳನ್ನು ಹಿಡಿದುಕೊಂಡರೆ ಅನುಕೂಲ.ತರ್ಪಣಕ್ಕೆ ಬೇಕಾದ ಎಳ್ಳು ಅವಶ್ಯ. ಬದರಿಯಲ್ಲಿ ಚಳಿ ಇರುವುದರಿಂದ ತಲೆಗೆ ಮಂಕಿ ಕ್ಯಾಪ್ , ಗ್ಲೌಸೆ, ಸಾಕ್ಸ್ ಹೊದೆಯಲು ಬೆಚ್ಚಗಿನ ಶಾಲು ಅವಶ್ಯ.
ಮರುದಿನ ಹೊರಟು ಹರಿದ್ವಾರಕ್ಕೆ ಬಂದರೆ ವಿಶ್ರಮಿಸಿ ಮರುದಿನ ಕುರುಕ್ಷೆತ್ರಕ್ಕೆ ಹೊರಡಬಹುದು. ಬೆಳಗಿನ ೯ ಗಂಟೆಗೆ ಅಲ್ಲಿಸೇರಿದರೆ ಅಲ್ಲಿಯ ಸೂರ್ಯ ಸರೋವರ - ಪಂಪಾ ಸರೋವರ , ಗೀತೋಪದೇಶದ ಸ್ತಳ -ಇಲ್ಲಿ ಗೀತ ಪರಾಯಣ ವಿಶೇಷ. , ಭೀಮಶ ಪಿತಾಮಹರು ಶರ ಶಯ್ಯೆಯಲ್ಲಿಮಲಗಿದ ಸ್ತಳ ಇಲ್ಲೇ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ವಿಶೇಷ . ಬ್ರಹ್ಮ ಸರೋವರ -ಅತೀದೊಡ್ಡ ಪ್ರಕೃತಿ ನಿರ್ಮಿತ ಸರೋವರ, ಸೂರ್ಯ , ಚಂದ್ರ ಗ್ರಹಣ ದಿನದಂದು ಲಕ್ಷ ಗಟ್ಟಲೆ ಜನ ಬಂದು ಸ್ನಾನಮಾಡುವ ಸರೋವರ. ನೋಡಿ ಅಲ್ಲಿಂದ ಡೆಲ್ಲಿ ಸೇರಬಹುದು.
ಮರುದಿನ ಬೇಗ ಹೊರಟರೆ ಮಥುರ, ಗೋಕುಲ, ವೃಂದಾವನ , ನೋಡಬಹುದು. ಇಲ್ಲಿ ಗೈಡ್ಸ್ ಮತ್ತು ಪಂಡರ ಹಾವಳಿ ತುಂಬಾ ಜಾಸ್ತಿ. ಗೋಧಾನ , ಬ್ರಾಹ್ಮಣ ಭೋಜನಧಾನ ಅಂತೆಲ್ಲ ಹೇಳಿ ಹಣ ಸುಲಿಗೆ ಮಾಡುವವರೆ ಜಾಸ್ತಿ. ಜಾಗ್ರತೆ ವಹಿಸುವುದು ಉತ್ತಮ.ಶ್ರೀ ಕೃಷ್ಣ ನ ಜನ್ಮಸ್ತಾನ , (ಈಗ ಅರ್ದದಸ್ಟು ಜಾಗದಲ್ಲಿ ಮಸಿದಿ ಇದೆ.) ಶ್ರೀ ಕೃಷ್ಣ ಓಡಿ ಆಡಿದ ಸ್ತಳ. ,(ಫಂಡರು ಗೈಡ್ಸ್ ಹೇಳುವಂತೆ). ಗೋವರ್ಧನ ಗಿರಿ ನೋಡಬಹುದು. ರಾತ್ರಿ ಡೆಲ್ಲಿ ತಲುಪಿ ವಿರಮಿಸಿ ಮರುದಿನ ರಿಟರ್ನ್ ಹೊರಡಬಹುದು, ಇಲ್ಲಹುದು. ಇಲ್ಲವೇ ಡೆಲ್ಲಿ ಒಂದು ದಿನ ನೊಡಿ ಬರಬಹುದು.
ವಿ.ಸೂ.ಸಕ್ಕರೆ ಖಾಯಿಲೆ, ರಕ್ತದೊತ್ತಡ ,ಆಸ್ತಮಾ ಗಳಿಗೆ ಮದ್ದು ತೆಗೆದು ಕೊಳ್ಳುವವರು ತಮಗೆ ಬೇಕಾದಷ್ಟು ಮದ್ದಿನೊಡನೆ, ನೋವಿಗೆ, ಜ್ವರಕ್ಕೆ, ಬೇಕಾದ ಮದ್ದನ್ನು ಕೊಂಡುಹೊಗುವುದು ಉತ್ತಮ. Dryfruits ಕೊಂಡುಹೊದರೆ ದೇವರ ಸಮರ್ಪಣೆಗು ತದನಂತರ ಸ್ವಕಾರ್ಯಕ್ಕು ಬರುತ್ತದೆ.
Distence chart
ಡೆಲ್ಲಿ ಇಂದ ಹರಿದ್ವಾರ.......220KM
ಹರಿದ್ವಾರ ದಿಂದ ರುಶಿಕೆಹ್ಸ...20KM
ಹರಿದ್ವಾರ ದಿಂದ ಬದರಿ.....321KM
ಹರಿದ್ವಾರ ದಿಂದ ಕುರುಕ್ಷೇತ್ರ 141km
ಕುರುಕ್ಷೇತ್ರ ದಿಂದ ಡೆಲ್ಲಿ.154KM
ಡೆಲ್ಲಿ ಇಂದ ಮಥುರ. 178KM
ಕಮಲಾತನಯ.
ಚಾರ್ ಧಾಮ್ ಯಾತ್ರೆಯ ಮುಂದುವರಿದ ಭಾಗ -೨
ಈ ಚಾರ್ ಧಾಮ್ ಯಾತ್ರೆಯು ವೈಶಾಖ ಮಾಸದ- ಇಂಗ್ಲಿಷ್ ಕ್ಯಾಲೆಂಡರಿನ ಮಾರ್ಚ್ ಅಥವಾ ಎಪ್ರಿಲ್ ನಲ್ಲಿ ಬರುವ ಅಕ್ಷಯ ತೃತೀಯ ದಿನದಿಂದ ಪ್ರಾರಂಭಗೊಂಡು ದೀಪಾವಳಿಯ ನಂತರದ ಉತ್ವಾನ ದ್ವಾಧಶಿ - ತುಳಸಿ ಹಬ್ಬದ (ನವೆಂಬರ್ ) ಒಂದೆರಡು ದಿನ ಹಿಂದೆ ಅಥವಾ ಮುಂದೆ ವರೆಗೂ ಕೈಗೊಳ್ಳ ಬಹುದು. ಇದು ಪ್ರವಾಸಕ್ಕೆ ಸೂಕ್ತ ಸಮಯ. ನಂತರ ಇಲ್ಲಿನ ದೇವಸ್ಥಾನಗಳು ಮುಚ್ಚಿ ಹೋಗುತ್ತವೆ, ಅತಿಯಾದ ಚಳಿ ಮತ್ತು ಮಂಜು ಪ್ರವಾಸಕ್ಕೆ ಅಡ್ಡಿ ಯಾಗುತ್ತದೆ.
ಈ ಯಾತ್ರೆಗೆ ಬೇಕಾದ ತಯಾರಿ ಬಗ್ಗೆ ಹಲವರು ಕೇಳಿದ್ದೀರಿ.
ಮೊದಲು ಮಾನಸಿಕವಾದ ದೃಢಹಸಂಕಲ್ಪ ,ಧೈಹಿಕ ಆರೋಗ್ಯ ,ರಕ್ತದೊತ್ತಡ, ಉಸಿರಾಟದ ತೊಂದರೆ ಇರುವವವರು ಹೆಚ್ಚು ಕಾಳಜಿ ವಹಿಸುವುದು ಉತ್ತಮ. ಅಂದರೆ ತಾವು ದಿನನಿತ್ಯ ತೆಗೆದು ಕೊಳ್ಳುತ್ತಿರುವ ಔಷಧಿ ಮಾತ್ರೆ ಗಳನ್ನು ತಪ್ಪದೆ, ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲೆ ತೆಗೆದು ಕೊಂಡು ಹೋಗಬಹುದು. ಜೊತೆಗೆ ಸಾಮಾನ್ಯ ತಲೆನೋವು,ಕೆಮ್ಮು , ಜ್ವರ, ನೋವು ನಿವಾರಕಗಳು ಮತ್ತು ಶೀತ ಇವುಗಳಿಗೆ ಮುನ್ನೆಚ್ಚರಿಕೆಯಾಗಿ ಇಟ್ಟುಕೊಳ್ಳಬಹುದು. ತುರ್ತು ಚಿಕಿತ್ಸಾ ವ್ಯವಸ್ಥೆಗಳು ಎಲ್ಲ ತಾಣದಲ್ಲೂ ಲಭ್ಯವಿದೆ ಚಿಂತಿಸುವಂತಿಲ್ಲ.
ಬೆಚ್ಚಗಿನ ಉಣ್ಣೆಯ ಬಟ್ಟೆ,ಕಾಲುಚೀಲ, ಕೈ ಚೀಲಗಳು, ಟೋಪಿ ತುಂಬಾ ಮುಖ್ಯ. ಹೆಚ್ಚು ಹೇಳಿ ನಿಮ್ಮನ್ನು ಹೆದರಿಸಲು ಇಷ್ಟವಿಲ್ಲ.
ನೀವು ನಿಗಧಿ ಪಡಿಸಿಕೊಂಡ ದಿನಕ್ಕಿಂತ ಒಂದು ಅಥವಾ ಎರಡು ದಿನಗಳು ಹೆಚ್ಚಿಗೆ ಲೆಕ್ಕ ಇಡುವುದು ಒಳಿತು. ಪ್ರಕೃತಿ ವಿಕೋಪ ಅಥವಾ ಸಂಪರ್ಕ ಸಾಧನಗಳ ವ್ಯತ್ಯಯದಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಇದು ಬಹು ಉಪಯೋಗಿ ಒಟ್ಟು ೯ ದಿನಗಳ ಪ್ರವಾಸ ವಾದರೆ ೧೦ ದಿನಗಳನ್ನು ನೀವು ಪರಿಗಣಿಸಿದರೆ ಒಳಿತು.
ಒಂದಷ್ಟು ತಿಂಡಿ,ನೀರು ಯಾವಾಗಲೂ ಜೊತೆ ಇರಲಿ.
ಪ್ರವಾಸದ ಮೊದಲ ಘಟ್ಟ ಯಮುನೋತ್ರಿಗೆ ಹೋಗೋಣವೆ ?
ಹರಿದ್ವಾರದಿಂದ ಯಮುನೋತ್ರಿ ಮೊದಲ ಗಮ್ಯವಾದರೆ ಉತ್ತಮ. ಏಕೆಂದರೆ ಅದೇ ಈ ಪ್ರವಾಸದ ಹೆಚ್ಚು ಶ್ರಮ ಬೇಡುವ ತಾಣ. ಆದುದರಿಂದ ನಾವು ಇನ್ನು ಉತ್ಸುಕರಾಗಿ ಇರುವಾಗ ಮೊದಲ ಭೇಟಿ ಯಮುನೋತ್ರಿ ಆಗಲಿ.
ಹರಿದ್ವಾರದಲ್ಲಿ ಮೊದಲು ಗಂಗೆಯಲ್ಲಿ ಮಿಂದು ಈ ಯಾತ್ರೆ ಪ್ರಾರಂಭಿಸುವುದು ವಾಡಿಕೆ.ಈ ಗಂಗೆ...ಐದು ಉಪನದಿಗಳ ಸಂಗಮ,ಅಲಂಕಾನಂದ,ಭಾಗೀರಥಿ,ಮಂದಾಕಿನಿ ಮತ್ತು ಪಿಂಡರ್ ಹಾಗೂ ದೌಲಿ ಗಂಗಾ.
ಹರಿದ್ವಾರದಿಂದ ಯಮುನೋತ್ರಿಗೆ ೮ ಗಂಟೆಗಳ ಪ್ರಯಾಣ ೨೨೧ km ನ ದಾರಿ , ಈ ದಾರಿಯಾ ಮದ್ಯೆ ರಾಣಾ ಛೆಟ್ಟಿಯ ನಂತರ, ಒಂದು ಲಕ್ಷ ಮಂಡಾಲ ಅಥವಾ ಲಾಕ್ ಮಂಡಲ್ ಎನ್ನುವ ಒಂದು
ಪೌರಾಣಿಕ ಹಿನ್ನೆಲೆಯ ತಾಣ ವಿದೇ . ಇದು ಹೆಚ್ಚು ಜನರಿಗೆ ತಿಳಿದಿಲ್ಲವೆಂಬುದು ಅಲ್ಲಿನ ಅರ್ಚಕರಿಂದ ತಿಳಿದು ಬಂತು .
ಈ ಸ್ಥಳದಲ್ಲಿ ಪಾಂಡವರು ,ತಾಯಿ ಕುಂತಿಯೊಂದಿಗೆ ಲಕ್ಷ ಗೃಹದಲ್ಲಿ ಮಲಗಿರುವಾಗ, ದೃಯೋಧನನು ಮೋಸದಿಂದ ಅವರನ್ನು ಕೊಲ್ಲ ಲು ಪುರುಚಕ ಎಂಬವನಿಗೆ( ಆ ಅರಿಗಿನ ಮನೆ ಕಟ್ಟಿದವನು )ತಿಳಿಸುತ್ತಾನೆ. ಆ ಮನೆಗೆ ಬೆಂಕಿ ಹಚ್ಚಿದ ಪುರುಚನನಿಗೆ ನಂತರ ತಿಳಿದು ಬರುವುದು ಅವನ ಅಕ್ಕ ಮತ್ತು ಐದು ಜನ ಪುತ್ರರು ಅಂದು ಆ ಮನೆಯಲ್ಲಿ ತಂಗಿದ್ದರು, ಅವರು ಪಾಂಡವರ ಬದಲಾಗಿ ಸುಟ್ಟು ಭಸ್ಮವಾಗಿ ಹೋಗಿರುತ್ತಾರೆ.
ಇಲ್ಲಿ ಧರ್ಮರಾಜ ಪ್ರತಿಷ್ಠಾಪಿಸಿದನೆನ್ನಲಾದ ಸಾಕಸ್ಟು ಲಿಂಗಗಳು ಕಾಣಬಹುದು. ಈ ರೀತಿಯಾಗಿಯೂ ಲಕ್ಷಕ್ಕೂ ಮೀರಿದ ಲಿಂಗಗಳಿರುವ ಸ್ಥಳ ಎಂಬುದಾಗಿಯೂ ಹೇಳುತ್ತಾರೆ. ಈ ತಾಣ ಒಂದು ಸಣ್ಣ ಕಡಿದಾದ ಓಣಿಯಂತ ಮಾರ್ಗವಾಗಿ ಸಾಗಿ ಹೋಗುವ ವಿಶಾಲ ಗೋಪುರವಿರುವ ದೇವಸ್ಥಾನವಾಗಿದೆ.
ಪೂಲ್ ಛೆಟ್ಟಿ,ಸೈನಾ ಛೆಟ್ಟಿ,ಹನುಮಾನ್ ಚೆಟ್ಟಿ ಧಾಟಿ ಜಾನಕಿ ಛೆಟ್ಟೆ ಯಲ್ಲಿ ಉಳಿದು ಕೊಂಡೆವು. ನಾವು ಉಳಿದು ಕೊಂಡ ಹೋಟೆಲ್...ಯಮುನೋತ್ರಿಯ ತುದಿಯಿಂದ ೭ km ಅಷ್ಟು ದೂರ.
(ಛೆಟ್ಟಿ ಎಂದರೆ ತುದಿ,ಹಿಮಾಲಯ ಪರ್ವತಸ ಶ್ರೇಣಿಯಲ್ಲಿರುವ ಪುಟ್ಟ ಪುಟ್ಟ ಬೆಟ್ಟಗಳ ಶೃಂಗ ಎಂದರ್ಥ ಎಂದು ಅಲ್ಲಿನ ಸ್ಥಳೀಯರು ತಿಳಿಸಿದರು. )
ಬೆಳೆಗ್ಗೆ ಎಂಟರ ಹೊತ್ತಿಗೆ ಉಪಹಾರ (ಲಘುವಾಗಿದಷ್ಟು ಒಳಿತು) ಮಾಡಿ ಯಮುನೋತ್ರಿಯನ್ನು ಕಾಲ್ನಡಿಗೆಯಲ್ಲಿ ಹತ್ತಲು ಪ್ರಾರಂಭಿಸಿದೆವು.ನಾವು ಹೊರಡುವಾಗ ಹೋಟೆಲ್ ನವರು ನಾವು ನಾಲ್ಕು ಜನರ ಕೈಯಲ್ಲಿ ಒಂದೊಂದು ಕೋಲು ಕೊಡಲು ಮರೆಯಲಿಲ್ಲ. ನನಗೆ ಇದೇನೋ ವಯಸ್ಸಾದವರಂತೆ ಈ ಕೋಲು ಯಾವುದಕ್ಕೆ ಉಪಯೋಗ ತಿಳಿಯದೆ ಹಾಸ್ಯಮಾಡಿದ್ದೆ.
ಆಗದವರಿಗೆ ಡೋಲಿ ಮತ್ತು ಕುದುರೆ ವ್ಯವಸ್ಥೆ ಇದೆ . ಒಂದು ಮಾಹಿತಿ ಪ್ರಕಾರ ಕುದುರೆ,ಡೋಲಿಯಲ್ಲಿ ಹೋದವರೇ ನಮಗಿಂತ ಹೆಚ್ಚು ಭಾದೆಗೊಳಗಾದವರು .
ಮೊದಲು ನಾಲ್ಕು ರಿಂದ ಐದು km.. ಅಷ್ಟು ಪ್ರಯಾಸ ಎನಿಸದು ಏಕೆಂದರೆ ೨೫ ರಿಂದ ೩೦ ಡಿಗ್ರಿ ಕೋನ (Gradient )ದಲ್ಲಿರುವ ದಾರಿ. (ಅಲ್ಲಲ್ಲಿ ಬ೦ಡೇ,ಕಲ್ಲುಗಳಿವೆ )
ಮದ್ಯೆ ದಣಿವಾರಿಸಿಕೊಳ್ಳಲು ಸಾಲು,ಸಾಲು - ಸಮೋಸ ಜಿಲೇಬಿ, ಬಿಸಿಬಿಸಿ ಟೀ ಲಭ್ಯವಿರುವ ಅಂಗಡಿಗಳಿವೆ. ಪ್ರಕೃತಿಯ ಹಸಿರು ಮಡಿಲಲ್ಲಿ ನಿಜವಾಗಿಯೂ ಒಂದು ತೊಟ್ಟು ಬೆವರದೇ.. ಖುಷಿಯಾಗಿ ನಡೆದು ಹೋಗಬಹುದು. ಕುರಿಯ ಉಣ್ಣೆಯ ಬಟ್ಟೆಯಂತೆ ಸುತ್ತಲ ಬೆಟ್ಟಗಳೆಲ್ಲಾ ಹಸಿರು ಉಣ್ಣೆಯ ಶಾಲು ಹೊದೆದು ಕೊಂಡಿದೆಯೇನೋ ಅನ್ನುವಸ್ಟು ದಟ್ಟ ಮರಗಳು,. ಅಕ್ಟೋಬರ್ ತಿಂಗಳಾದುದರಿಂದ ಮಂಜು ಅಷ್ಟೇನು ಇಲ್ಲ, ಬೆಟ್ಟಗಳ ತುದಿ ಮಾತ್ರ ಬೆಣ್ಣೆ ಮೆತ್ತಿದಂತೆ ಮಂಜು. ಅಲ್ಲಲ್ಲಿ ಹಿಮ ಕರಗಿ ಹರಿವ ಜಲಧಾರೆ. ಅದರ ಮೇಲಿಂದ ಬೀಸುವ ತಂಗಾಳಿ..ನಿಜಕ್ಕೂ ಒಂದು ಸುಂದರ ಅನುಭವ. ಕಣ್ಣಿಗೊಂದು ಹಬ್ಬ.
ಚಳಿ ಮಾತ್ರ ಮೈ ನಡುಗಿಸುತ್ತಿತ್ತು. ಪಕ್ಕಾ ಕುರಿ ಕಾಯುವವರಂತೆ ಎರಡೆರಡು ಸ್ವೇಟರ್, ಕುಲಾವಿ, ಕೈ ಕಾಲುಚೀಲಗಳು, ಶೂಸ್ ಜೊತೆಗೊಂದು ಕೋಲು .
ಕೊನೆಯ ೨ km ದುರ್ಗಮ ಹಾದಿ, ಮೆಟ್ಟಿಲುಗಳು ಕಡಿದಾಗಿವೆ, ಸಣ್ಣ,ಸಣ್ಣ ಸಂಕುಚಿತ ಮಾರ್ಗ.
ಎಲ್ಲಕಿಂತ ಒಮ್ಮೆಲೇ ೫೦ ರಿಂದ ೬೦ ಡಿಗ್ರಿ ಕೋನದಲ್ಲಿ(Gradient )ಏರುವ ಮಾರ್ಗ, ಕಾಲುಗಳನ್ನು ಹೆಚ್ಚೇ ಶ್ರಮಪಟ್ಟು ಮುಂದಿಡುವಂತಾಗುತ್ತದೆ. ಈ ಭಾಗದಲ್ಲಿ ಸ್ವಲ್ಪ ಆಮ್ಲಜನಕದ(oxygen) ಕೊರತೆ ಕಾಣಬಹುದು. ಉಸಿರಾಟದ ತೊಂದರೆ ಇರುವವವರು, ಧೀರ್ಘ ಉಸಿರಾಟ ತೆಗೆದುಕೊಂಡು ಬಿಡುವುದು ಒಳಿತು. ಪ್ರಾಣಾಯಾಮದ ಅನುಭವಿದ್ದರೆ ಸುಲಭ. ಆದರೂ ಖಂಡಿತ ಕಷ್ಟ ವೇನು ಇಲ್ಲ. ಅಲ್ಲಲ್ಲಿ ಆಮ್ಲಜನಕದ ಸಿಲಿಂಡರ್ ಗಳು ಲಭ್ಯವಿರುತ್ತದೆ.
ಯಮುನೆಯ ಜುಳು ಜುಳು ಹರಿವ ಶಬ್ದ ಕೇಳುವ ಕಿವಿ ಸ್ವಲ್ಪ ಮಂದವಾಗುವಂತೆ ತೋರುತ್ತದೆ.ಕಾರಣ ಎತ್ತರದ ವ್ಯತ್ಯಾಸ(altitude ) ನೀವೀಗ ೧೦೫೦೦ ಅಡಿ, ಸಮುದ್ರ ಮಟ್ಟಕ್ಕಿಂತ ಮೇಲಿರುತ್ತಿರಿ.
ಸಲಾಗಿ ದೇವಸ್ಥಾನಗಳು ಅದರಲ್ಲಿ ಮೂಲ , ಯಮುನೆಯ ಪ್ರತಿಮೆ ,ಉತ್ಸವ ಮೂರ್ತಿ ಮತ್ತು,ಗಂಗೆ ಯಾ ಪ್ರತಿಮೆಗಳು ಕಾಣಬಹುದು.
ಪ್ರಕೃತಿಯಲ್ಲಿನ ಆಶ್ಚರ್ಯ ಒಂದು ನೀವು ಇಲ್ಲಿ ಕಾಣಬಹುದು, ಪ್ರಾಣಿಕುಲದಲ್ಲೇ ಅತಿ ಬುದ್ದಿವಂತ ಮನುಷ್ಯಪ್ರಾಣಿ ಎಷ್ಟೇ ತಲೆಕೆಳಗಾದರು ಈ ಸೃಷ್ಟಿಗೆ ಪ್ರತಿಸ್ಪರ್ಧಿಯಾಗಲಾರಾ. . ಅದು ಇಲ್ಲಿ ಸಿಗುವ ತಪ್ತ ಕುಂಡಗಳು, ಬಿಸಿನೀರಿನ ಹೋಂಡ. ಈ ಪ್ರಮಾಣದ ಬಿಸಿ ನೀರು ಒದಗಿಸಲು ಯಾರಿಂದಲೂ ಸಾಧ್ಯವಿಲ್ಲ. ... ನಿಸರ್ಗದ ಜಾದು, ಯಮುನೆಯ ತಣ್ಣನೆಯ ಕೊರೆಯುವ ನೀರು ,ಇಲ್ಲಿ ಹರಿಯುವ ಪರ್ವತ ಶ್ರೀಣಿ ಗಂಧಕದಿಂದ (SULFUR) ಶ್ರೀಮಂತವಾಗಿರುವುದರಿಂದ, ಹರಿಯುವ ನೀರು ಈ ಗಂಧಕದ ಮೇಲೆ ಹರಿದು ಘರ್ಷಣೆಯೊಂದಿಗೆ ಕುದಿಯುವ ನೀರಾಗಿ ಕುಂಡಗಳನ್ನು ತುಂಬುತ್ತವೆ!!!
ದುರ್ಗಮ ಹಾದಿ ಏರಿ ಬಂದವರ ದೈಹಿಕ ಧಣಿವು ನೀಗಿಸಲು ಈ ತಪ್ತ ಕುಂಡದಲ್ಲಿ ಸ್ನಾನ ಮಾಡಿದರೆ ಸಾಕು. ಆಯಾಸವೇ ಕಾಣದು.
ಇನ್ನು.. ಹರಿಯುವ ಯಮುನೆ ಸ್ವಲ್ಪ ಕಪ್ಪು ಮಿಶ್ರಿತ ಹಸಿರು, ಮನಸ್ಸಿನ ಧಣಿವನ್ನು ಬಗೆ ಹರಿಸುತ್ತಾಳೆ.
ವಾಸ್ತವದಲ್ಲಿ ಈ ದೇವಸ್ಥಾನದ ೨೪ km ನಷ್ಟು ಎತ್ತರದಲ್ಲಿ ಯಮುನೆಯ ಉಗಮ, ಅಲ್ಲಿ ತಲುಪಲು ಸಾಮಾನ್ಯ ಮನುಷ್ಯರಿಂದ ಕಷ್ಟ ಸಾಧ್ಯ. ಇಲ್ಲಿ ಮತ್ತೊಮೆ ಪ್ರಕಟಗೊಂಡು ಧುಮ್ಮಿಕ್ಕುವ ಯಮುನೆಯನ್ನು ನಾವು ಇಲ್ಲಿ ನೋಡ ಬಹುದು.
ಮುತೈದೆಯರು ಇಲ್ಲಿ ಯಮುನೆಗೆ ಬಾಗಿನ ಕೊಡುವ ವಾಡಿಕೆ ಇದೆ. ಇಲ್ಲಿ ಸೂಚ್ಯವಾಗಿ ಸಣ್ಣ ಒಂದು ಜೊತೆ ಮರ,ಬಳೆ ,ಬಿಚ್ಚೋಲೇ ಮತ್ತು ಅರಿಶಿನ ಕುಂಕುಮವನ್ನು ಬಾಗಿನ ವಾಗಿ ,ಪೂಜೆ ಮಾಡಿ ನದಿಗೆ ಬಿಡುತ್ತಾರೆ.ಯಮುನೆಯ ನೀರನ್ನು ಸೂರ್ಯನಿಗೆ ಅರ್ಘ್ಯ ಕೊಟ್ಟು ಬರುವ ಪ್ರತೀತಿ ಇದೆ.
ಇಲ್ಲಿ ಅಕ್ಕಿ ಮತ್ತು ಆಲೂಗಡ್ಡೆಯನ್ನು ಈ ಸಣ್ಣ ಸಣ್ಣ ಕುದಿಯುವ ನೀರಿನ ಹೊಂಡದಲ್ಲಿ ಕೆಲವೇ ನಿಮಿಷಗಳು ,ಇಟ್ಟು ಬೇಯಿಸಿ ಪ್ರಸಾದವಾಗಿ ಕೊಡುತ್ತಾರೆ.
ಪೂಜಾ ವಿಧಿಗಳನ್ನು ಮುಗಿಸಿ ಇಳಿಯಲು ಪ್ರಾರಂಬಿಸ ಬಹುದು. ಈಗ ನೋಡಿ ಕೋಲಿನ ಮಹತ್ವ ನನಗೆ ಅರಿವಾಯಿತು. ನಿಜಕ್ಕೂ ಗುರುತ್ವಾಕರ್ಶಣೆಯ( gravitational force) ದಿಕ್ಕಿಗೆ ಸೆಳೆಯುವ ಹಾದಿ ಯಲ್ಲಿ ಕೋಲು ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲದಿದ್ದಲ್ಲಿ ನಾವು ಮುಗ್ಗರಿಸಿ ಬೀಳುವುದು ಖಚಿತ.
ನಿಧಾನವಾಗಿ ಕೋಲೂರಿಕೊಂಡು ನಡೆಯುವ ಅಭ್ಯಾಸ ಆಗುತ್ತದೆ, ಮೊದಲ ಎರಡು km ದುರ್ಗಮ ಹಾದಿ ಸಾಗಿ ನಂತರ ಸ್ವಲ್ಪ ಸರಳ ಹಾದಿ ಯಾಲ್ಲಿ ಕ್ರಮಿಸ ಬಹುದು.
ನಾವು ಬೆಳೆಗ್ಗೆ ೮ ಗಂಟೆಗೆ ಬಿಟ್ಟವರು ಸಂಜೆ ೪.೩೦ ಕ್ಕೆ ಹೋಟೆಲ್ ತಲುಪಿದೆವು. ಒಟ್ಟು ೧೪km ಕಾಲ ನಡಿಗೆ ಕಷ್ಟವಾದರೂ, ಮನಸ್ಸಿಗೇನೋ ಉಲ್ಲಾಸ ತಂದಿದ್ದಂತೂ ನಿಜ.
ನಿಮಗೊಂದು ಅನುಮಾನವಿರ ಬಹುದು.. ಯಾವ ವಯಸಸ್ಸಿನವರು ಈ ರೀತಿಯ ಚಾರಣಕ್ಕೆ ಯೋಗ್ಯರು ಎಂದು. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಆದರು ನಾನು ನಾನು ನಾನ್ನ ಪತಿ ೪೫ ರಿಂದ ೫೫ ವಯಸ್ಸಿನವರು, ನನ್ನ ಪತಿಯ ಅಕ್ಕ ಮತ್ತು ಭಾವ ೬೫ ರಿಂದ ೭೦ ವಯಸ್ಸಿನವರು, ಭಾವನವರು ಅರ್ಧ ಧಾರಿಯಿಂದ ಕುದುರೆ ಸವಾರಿ ಪಡೆದರು, ಆದರೆ ನಾವು ಮೂವರು, ಪೂರ್ತಿಯಾಗಿ ಹತ್ತಿ ಇಳಿದೆವು. ವರ್ಷದಿಂದ ವರ್ಷಕ್ಕೆ ಸರ್ಕಾರ ಮಾರ್ಗವನ್ನು ಉತ್ತಮ ಗೊಳಿಸುತ್ತಿದೆ. ಖಂಡಿತ ಯಾವ ವಯಸ್ಸಿನವರು ಈ ಸುಂದರ ಧಾರ್ಮಿಕ ತಾಣವನ್ನು ನೋಡುವ ಅವಕಾಶ ಕಳೆದು ಕೊಳ್ಳಬೇಡಿ.
ಮುಂದುವರೆಯುತ್ತದೆ. ......
✒️ ಪಂಚಮ
ಚಾರ್ ಧಾಮ್ ಯಾತ್ರೆ ಭಾಗ -೪
ಇಂದು ಗಂಗೋತ್ರಿಯಿಂದ ಕೇದಾರನಾಥಕ್ಕೆ ಪ್ರಯಾಣ ಬೆಳೆಸೋಣವೇ..
ಗಂಗೋತ್ರಿಯಿಂದ ಕೇದಾರನಾಥ 121 ಮೈಲಿ . ರಾತ್ರಿ ಗಂಗೋತ್ರಿಯಿಂದ ಸಾಕಷ್ಟು ಕತ್ತಲಾದ ಮೇಲೆ ಹೊರಟಿದ್ದೆವು. ತಿಲವಾರ ಎಂಬ ಜಾಗದಲ್ಲಿ ನಮ್ಮ ವಾಸ್ತವ್ಯ ಎಂದು ನಿರ್ಧರಿಸಲಾಗಿತ್ತು. ಕಡುಗತ್ತಲೆಯ ರಾತ್ರಿ ೮ ಗಂಟೆ ಇರಬಹುದು, ಬೆಟ್ಟದ ಮೇಲೆ , ನಾವು hairpin curves ಗಳಲ್ಲಿ ಮೇಲೇರುತ್ತಿದ್ದೆವು. ಹಿಂದೆ ಮತ್ತು ಮುಂದೆ ಕಣ್ಣಿಗೆ ಕಾಣುವಷ್ಟು ದೂರಕ್ಕೂ ಒಂದು ವಾಹನವಾಗಲಿ, ಮನುಷ್ಯರಾಗಲಿ ಕಾಣುತ್ತಿರಲಿಲ್ಲ. ದಟ್ಟವಾದ ಅರಣ್ಯ ಪ್ರದೇಶವದು. ಒಮ್ಮೆಲೇ ಒಂದು ಪ್ರಾಣಿ ನಮ್ಮ ಕಾರಿನ ಚಕ್ರ ತಪ್ಪಿಸಿಕೊಂಡು ಮುಂದೆ ಓಡಿತು. ಏನಿದು ನೋಡುವಷ್ಟರಲ್ಲಿ ಆ ಕಡೆಯಿಂದ ಹುಲಿ ರಸ್ತೆ ದಾಟಿ ಓಡಿ ಹೋಯಿತು. ಕಾರನ್ನು ಒಂದು ೧೦ ನಿಮಿಷ ಅಲ್ಲೇ ನಿಲ್ಲಿಸಿ ಸ್ತಬ್ಧವಾಗಿ ನಾವೆಲ್ಲ ಕುಳಿತು ಬಿಟ್ಟೆವು. ಕಾರ್ ಡ್ರೈವರ್ ದೀಪವನ್ನು ಆರಿಸಿ ನಿಂತುಬಿಟ್ಟ. ಹುಲಿ ಮುಂದೆ ಹೋಗಿದ್ದು ನೋಡಿಕೊಂಡು ಮತ್ತೆ ನಾವುಗಳು ಕಾರ್ ಸ್ಟಾರ್ಟ್ ಮಾಡಿ ಸಾಗಿದೆವು.
ಈ ಅನಿರೀಕ್ಷಿತ ಹುಲಿರಾಯನ ದರ್ಶನ ,ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆಗಲೇ ಇಲ್ಲ.
ಎಷ್ಟೋಬಾರಿ ದುಡ್ಡು ಕೊಟ್ಟು ನೈಟ್ ಸ್ಫಫಾರಿಯಲ್ಲಿ ಕಾಡು ಪ್ರಾಣಿ ನೋಡಲು ಹೋಗಿದ್ದೆವು ಆಗೆಲ್ಲ ಕಾಣದ ಹುಲಿ ಈ ರೀತಿ ನಮ್ಮನೂ ಎದುರಾಗಿ ಆಶ್ಚರ್ಯಗೊಳಿಸಿತ್ತು.
ರಾತ್ರಿ "ತಿಲ್ವಾರ್" ಎಂಬಲ್ಲಿ ಉಳಿದು ಕೊಂಡು, ಬೆಳೆಗ್ಗೆ ಕೇದಾರನಾಥದ ಹೆಲಿಕ್ಯಾಪ್ಟರ್ ಪ್ರಯಾಣಕ್ಕಾಗಿ (sersi ಎಂಬ ಸ್ಥಳ ದಿಂದ ) ಹೆಲಿಪ್ಯಾಡ್ಗೆ ಬಂದೆವು. ೨ km ಗಳ (parameter ) ಅಂತರದಲ್ಲಿ ,೨ ಅಥವಾ ೩ ಹೆಲಿಪ್ಯಾಡ್ ಗಳು ಇವೆ. ಅಲ್ಲೂ ಒಂದಷ್ಟು ನಿಯಮಗಳಿವೆ, ಒಂದೊಂದು ಏಜನ್ಸಿ ಗಳು ಒಂದೊಂದು ದರದಲ್ಲಿ ಹೆಲಿಕ್ಯಾಪ್ಟರ್ ಸೇವೆ ಒದಗಿಸುತ್ತದೆ. ನಮ್ಮ ಕಾರ್ ಚಾಲಕ ತನ್ನ ಪರಿಚಯದವರ ಪೂಲಕ 6350/- (govt fixed rate)ಒಂದು ಟಿಕಿಟಿಗೆ ಖರೀಧಿಸಿ ಕೊಟ್ಟ.
ಇಲ್ಲೊಂದು ರೀತಿಯ ಸುಲಿಗೆ ನಡೆಯುತ್ತದೆ, ನಮ್ಮ ಬ್ಯಾಗ್ ಮತ್ತು ನಮ್ಮ ತೂಕ ಸೇರಿ ೮೦ ಕೆಜಿ ಗಿಂತ ಹೆಚ್ಚಾದರೆ, ಪ್ರತಿ ಒಂದು ಕೆಜಿಗೆ ರೂ ೧೦೦ ಹೆಚ್ಚಾಗಿ ವಸೂಲಿ ಮಾಡುತ್ತಾರೆ. ಆದಷ್ಟು ಕಡಿಮೆ ಲಗೇಜ್ ಇಟ್ಟು ಕೊಳ್ಳುವುದು ಒಳಿತು. ಆದರೆ ಬೆಚ್ಚನೆಯ ಬಟ್ಟೆಯಂತೂ ಬೇಕೇ ಬೇಕು ಏಕೆಂದರೆ ನಾವು ಚಾರ್ಧಾಮ್ನ ಅತಿ ಎತ್ತರದ ಸ್ಥಳಕ್ಕೆ ಹೋಗುತ್ತಿರುತ್ತೇವೆ.
ಎಲ್ಲ procedures ಮುಗಿಸಿ ನಮ್ಮ ಸರದಿ ಬಂದಾಗ ಹೆಲಿಪಿಕಾಪ್ಟರ್ ಬಳಿಗೆ ಬಂದೆವು. ಇಲ್ಲಿ ಯಾವುದೇ ಶಾರ್ಪ ವಸ್ತುಗಳಾದ, ಚಾಕು, ನೈಲ್ ಕಟರ್ ಸಹ ಜೊತೆಗೆ ಒಯ್ಯುವಂತಿಲ್ಲ. ಹೆಲಿಕ್ಯಾಪ್ಟರ್ ಮೇಲಿನ ಬ್ಲೆಡ್ ತಿರುಗುವಿಕೆಯ ವೇಗ ಎಷ್ಟಿರುತ್ತದೆಂದರೆ, ನಾವೇ ಹಾರಿ ಹೋಗುವೆವೆನೋ ಎನಿಸುತ್ತದೆ. .ಒಮ್ಮೆಗೆ ೬ ಜನ ಕುಳಿತು ಕೊಳ್ಳಬಹುದಾದ ಹೆಲಿಕ್ಯಾಪ್ಟರ್.
ಸಣ್ಣ ಮಕ್ಕಳಂತೆ ನಾವು ಸಂಬ್ರಮಿಸಿದೆವು. ಒಳಗೆ ಕುಳಿತ ಕೂಡಲೆ ೭ ನಿಮಿಷದ ಪ್ರಯಾಣ, ಗಾಜಿನಿಂದ ಕೆಳಗೆ ಕಾಣುವ ರಮಣೀಯ ದೃಶ್ಯಗಳು. ಅಯ್ಯೋ ಬಂದೆ ಬಿಟ್ಟಿತು ಇಳಿಯುವ ಸ್ಥಳ, ಕೆಳಗೆ ಇಳಿದಂತೆ, ಅಬ್ಬಾ ಹಲ್ಲುಗಳು ಕಟ,ಕಟ ಒಂದೋಕೊಂದು ಬಡೆದುಕೊಳ್ಳುವಷ್ಟು ಚಳಿ. ಬಾಯಿ ಬಿಟ್ಟರೆ ಸಿಗರೇಟ್ ಹೊಗೆಯಂತೆ ಬಾಯಿಯಿಂದ ಹೊಗೆ. ಹಾಗೆ ನಡೆಯುತ್ತಾ ಕೇದಾರನಾಥದ ಮೂಲ ದೇವಸ್ಥಾನಕ್ಕೆ ಬಂದೆವು.
ಪೌರಾಣಿಕ ಹಿನ್ನೆಲೆ.
ಪಾಂಡವರು ಕುರುಕ್ಷೇತ್ರದ ಯುದ್ಧದ ನಂತರ ಬಹಳವಾಗೇ ನೊಂದಿರುತ್ತಾರೆ ತಾವು ಹೋರಾಡಿದ್ದಾದರೂ ಯಾರ ಮೇಲೆ ತಮ್ಮ ದಾಯಾದಿಗಳೊಂದಿಗೆ, ಸತ್ತವರೆಲ್ಲ ತಮ್ಮ ಬಂದು ಮಿತ್ರರೇ, ಹೀಗಿರುವಾಗ ಶ್ರೀ ಕೃಷ್ಣನು, ರುದ್ರ ದೇವರನ್ನು ಕೇದಾರನಾಥದಲ್ಲಿ ಹೋಗಿ ದರುಶನ ಮಾಡಿ ಎಂದು ಹೇಳುತ್ತಾನೆ. ಅದರಂತೆ ಪಾಂಡವರು, ಕುಂತಿ ಮತ್ತು ದ್ರೌಪದಿ ಯೊಂದಿಗೆ ಶಿವನ ಆರಾಧನೆಗಾಗಿ ಬಂದಾಗ , ಶಿವನು ವೃಷಭದ ರೂಪದಲ್ಲಿ ಬಚ್ಚಿಟ್ಟು ಕೊಂಡನೆಂದು ಉಲ್ಲೇಖವಿದೆ, ಹಾಗೆ ಬಚ್ಚಿಟ್ಟು ಕೊಂಡ ಶಿವ ಭೂಮಿಯೊಳಗೆ ಹೋಗುವಾಗ ಪಾಂಡವರು ಬೆನ್ನನ್ನು ಮಾತ್ರ ಸ್ಪರ್ಶಿಸಿದರೆಂದು ಅದರಿಂದ ಅವರಿಗೆ,ಸ್ವಗೋತ್ರದವರ ಹತ್ಯೆಯ ಪಾಪವು ಕಳೆಯಿತೆಂದು ಹೇಳುತ್ತಾರೆ. ಕೆದಾರನಾಥದ, ಗರ್ಭ ಗುಡಿಯಲ್ಲಿರುವ ಬ0ಡೆಯಾಕಾರವು ಇದೆ ಶಿವನ ಬೆನ್ನನ್ನು ಹೋಲುತ್ತದೆ.
ಶಿವನ ಮುಂದಿನ ಭಾಗವು ನೇಪಾಳದಲ್ಲಿ, ಪಶುಪತಿ
ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ.ಇದನ್ನು ಕೇದಾರ ನಾಥಕ್ಕೆ ಹೋದವರು,ಶಿವನ ಶಿರದ ಭಾಗವನ್ನು ನೇಪಾಳದ ಪಶುಪತಿಯಲ್ಲಿ ನೋಡಬೇಕೆಂದು ಹೇಳುತ್ತಾರೆ.
ಇಲ್ಲಿ ಸಾಕಷ್ಟು ಬೇರೆ,ಬೇರೆ ರೀತಿಯ ವ್ಯಖ್ಯಾನಗಳು ಇವೆ ಯಾವುದು ಸರಿ ಎಂಬುದು ತಿಳಿದಿಲ್ಲ.
ಈ ಕೇದಾರನಾಥದ ಒಳಾ೦ಗಣದಲ್ಲಿ ಪಂಚ ಪಾಂಡವರು, ಕುಂತಿ ದ್ರೌಪದಿಯ ವಿಗ್ರಹಗಳನ್ನು ಕಾಣ ಬಹುದು,
ಇಲ್ಲಿ ತಣ್ಣಗೆ ,ಮಂದಾಕಿನಿ ನದಿ ಹರಿಯುತ್ತಾಳೆ. ಈ ಕೇದಾರ ಗುಡಿಯ ಹಿಂದೆ ದೊಡ್ಡದಾದ ಬಂಡೆ ಇದೆ, ಇದನ್ನು ಭೀಮನ ಬಂಡೆ ಎನ್ನುತ್ತಾರೆ. ಭೀಮ ಇಟ್ಟ ಬಂಡೆ ಎಂಬ ಪ್ರತೀತಿ.
ಏನಾಶ್ಚರ್ಯ !!! ೨೦೧೩ ರ ಜೂಲೈ ತಿಂಗಳಲ್ಲಿ ನಡೆದ ದುರಂತ ,cloud burst ನಿಂದಾಗಿ, ಕೇದಾರನಾಥ ದೇವಸ್ಥಾನದ ಹಿಂದೆ ಹರಿಯುವ ಕಾಂತಿ (ಗಾಂಧಿ) ಸಾರೋವರ್ ಎನ್ನುವ ಕೆರೆಕಟ್ಟೆ ಒಡೆದು, ಪ್ರವಾಹದಂತೆ ನೀರು ನುಗ್ಗಿದಾಗ, ಈ ಭೀಮನ ಬಂಡೆಯು, ದೇವಸ್ಥಾನಕ್ಕೆ ಸ್ವಲ್ಪವೂ ಹಾನಿಯಾಗದಂತೆ ತಡೆ ಹಿಡಿದಿದೆ. ಚಿತ್ರದಲ್ಲಿ ಕಾಣಬಹುದು.
ನಿಜಕ್ಕೂ ಪ್ರಕೃತಿಯ.. ಸುಂದರ ದೃಶ್ಯ ಸೆರೆಹಿಡಿಯಲು ಯಾವ ಕ್ಯಾಮರಾಗಳಿಗೂ ಸಾಧ್ಯವಿಲ್ಲವೇನೋ,ಅಲ್ಲಿಂದ ಹಿಂದಿರುಗುವಾಗ ಸಾಯಂಕಾಲ ೩. ೩೦ ಇಂದ ೪ ಗಂಟೆ ಇರಬಹುದು, ಬಿಸಿಲು ಕಡಿಮೆಯಾಗಿ, ತಾಪಮಾನ -೨ ಡಿಗ್ರಿ ಯಸ್ಟು ಆಗಿ ನಾವೆಲ್ಲಾರೂ , ನಡುಗಿ ಹೋದೆವು. ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದ ಸ್ಥಳ ಇದು.
ಹೆಲಿಕ್ಯಾಪ್ಟರ್ ನಿಂದ ಕೆಳಗೆ ಬಂದು, ಊಟ ಮಾಡುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆವು. ಊಟ ಮುಗಿಸಿ ೫ ಗಂಟೆ ಹೊತ್ತಿಗೆ ಅಲ್ಲಿಂದ ಹೊರಟು , ತ್ರಿಯುಗಿ ನಾರಾಯಣ ದೇವಸ್ಥಾನ ೨೭ km ದೂರವಿದೆ, ಇದಕ್ಕೆ ಮುನ್ನ ಗೌರಿ ಕುಂಡ ವಿದೇ, ಆದರೆ ಈಗ ೨೦೧೩ ರಲ್ಲಿ ಆದ ದುರಂತದಲ್ಲಿ ಕೊಚ್ಚಿ ಹೋಗಿದೆ ಎಂದು ತಿಳಿದು ಬಂತು.
ರಾತ್ರಿ ೭ ಗಂಟೆ ಹೊತ್ತಿಗೆ ತ್ರಿಯುಗಿ ನಾರಾಯಣ ದೇವಸ್ಥಾನಕ್ಕೆ ಬಂದೆವು.
ಇಲ್ಲಿ ನಾರಾಯಣನ ಸಮ್ಮುಖದಲ್ಲಿ , ಶಿವ ಪಾರ್ವತಿಯರು ಮದುವೆಯಾದರೆಂದು ಹೇಳುತ್ತಾರೆ. , ಒಂದು ದೊಡ್ಡ ಹೋಮ ಕುಂಡವಿದೆ, ೩ ಯುಗದಿಂದ ಈ ಹೋಮ ಕುಂಡದಲ್ಲಿ ಅಗ್ನಿ ಆರಿಲ್ಲ ಎಂದು ಹೇಳುತ್ತಾರೆ, ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹಾಕಿ ಹೋಮಕುಂಡದಲ್ಲಿ ಈಗಲೂ ಅಗ್ನಿ ಉರಿಯುತ್ತಿದೆ. ಒಂದಷ್ಟು ಅಕ್ಕಿ , ಹಣ್ಣುಗಳನ್ನು ಪೂಜೆ ಮಾಡಿಸಲು ಕೊಟ್ಟು , ಆ ಹೋಮಕುಂಡಕ್ಕೆ ಒಂದಷ್ಟು ಕಟ್ಟಿಗೆ ಹಾಕಿಸಿ, ದಂಪತಿಗಳಿಗೆ ಧೀರ್ಘ ಧಾಂಪತ್ಯ ಜೀವನ ಲಭಿಸಲಿ ಎಂದು ಹೇಳಿ ಅಲ್ಲಿನ ಅರ್ಚಕರು, ನಾವು ಪೂಜೆ ಮಾಡಿಸಿದ ಅಕ್ಕಿಯಲ್ಲಿ ಸ್ವಲ್ಪ ಭಾಗವನ್ನು ಮುತೈದೆಗೆ ಕೊಟ್ಟು ಆಶಿರ್ವಧಿಸುತ್ತಾರೆ.
ಅಲ್ಲಿಂದ ಸೀತಾಪುರ ಎಂಬಲ್ಲಿಗೆ ಬಂದು ರಾತ್ರಿ ಉಳಿದುಕೊಂಡೆವು.
ಮಾರನೇ ದಿನ ೩೯ km ಪ್ರಯಾಣ ಬೆಳೆಸಿ ಗುಪ್ತ ಕಾಶಿ ತಲುಪಿದೆವು. ಇಲ್ಲಿ ಗಂಗೆ ಮತ್ತು ಯಮುನೆಯರು ಗುಪ್ತವಾಗಿ ಹರಿದು, ಪ್ರಕಟಗೊಳ್ಳುವ ಒಂದು ಸ್ಥಳ ಇದು. ಇಲ್ಲಿಯೂ ರುದ್ರ ದೇವರ ಗುಡಿ ಇದೆ . ಗಂಗೆಯು ಗೋಮುಖದಲ್ಲಿ, ಯಮುನೆಯು ಆನೆಯ ಮುಖದಿಂದ ಹರಿದು ಬರುವುದನ್ನು ನೋಡಬಹುದು.
ಅಲ್ಲಿಂದ ೧೯ km ದೂರದಲ್ಲಿ ಉಖೀ ಮಠವಿದೆ. ಕೇದಾರನಾಥ, ಉತ್ವಾನದ್ವಾದಶಿಯ ನಂತರ ಹಿಮದಿಂದ ಆವೃತ್ತವಾಗಿ ಮುಚ್ಚಿಹೋದಮೇಲೆ, ಅಲ್ಲಿನ ಉತ್ಸವ ಮುರ್ತಿಯನ್ನು ಈ ಮಠದಲ್ಲಿ ತಂದು ಪೂಜಿಸುತ್ತಾರೆ. ಈ ದೇವಸ್ಥಾನವನ್ನು ಮಾಂಧಾತಾ ರಾಜ ಕಟ್ಟಿದ ಎಂದು ತಿಳಿದು ಬಂದಿತು.
ಅಲ್ಲಿಂದ ಬದರಿಗೆ ಹೋಗುವ ದಾರಿಯಲ್ಲಿ , ಜೋಶಿ ಮಠದ ಕಡೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿಯೇ ಅಂದಿನ ರಾತ್ರಿ ತಂಗಿದೆವು.\
ಪಂಚಮ
1. ಕೇದಾರನಾಥ
2.ಭೀಮ ಬಂಡೆ
3.ಮಂದಾಕಿನಿ
4.ಗುಪ್ತ ಕಾಶಿ(zoom ಮಾಡಿ ನೋಡಿ,ಗೋಮುಖ,ಆನೆಯ ಮುಖದಿಂದ ನೀರು ಹರಿಯುವುದು)
***
ಅನಂತಗಿರಿ ಅನಂತಪದ್ಮನಾಭ ದೇವಾಲಯ
ಸ್ನೇಹಿತರೆ, ಇದು ದಕ್ಷಿಣ ಭಾರತದ ನಮ್ಮ ನೆರೆಯ ರಾಜ್ಯವಾಗಿರುವ ತೆಲಂಗಾಣ ರಾಜ್ಯದ
ವಿಕಾರಾಬಾದ್ ಜಿಲ್ಲೆಯಲ್ಲಿರುವ ಅನಂತಗಿರಿಯಲ್ಲಿ ನೆಲೆಸಿರುವ ವೈಕುಂಠ ವಾಸಿಯಾದ ಮಹಾ ವಿಷ್ಣುವಿನ ಮತ್ತೊಂದು ಅವತಾರವಾದ ಅನಂತಪದ್ಮನಾಭ ಸ್ವಾಮಿಯವರಿಗೆ ಸಮರ್ಪಿತವಾದ ದೇವಾಲಯ ವಾಗಿದೆ. ಅನಂತಪದ್ಮನಾಭ ಸ್ವಾಮಿ ವ್ರತಾಚಾರಣೆ ಇರುವುದರಿಂದ ಸ್ವಾಮಿಯವರು ಇಲ್ಲಿ ಅತ್ಯಂತ ವೈಭವದಿಂದ ಭಕ್ತಾದಿಗಳಿಂದ ಪೂಜಿಸಲ್ಪಡುತ್ತಾರೆ, ಹಾಗೂ ಸಕಲರ ಇಷ್ಟಾರ್ಥಗಳನ್ನು ನೆರೆವೇರಿಸುತ್ತಿದ್ದಾರೆ...
#ದಂತಕತೆ.
ಸ್ಕಂದ ಪುರಾಣದ ಪ್ರಕಾರ ದ್ವಾಪರ ಯುಗದಲ್ಲಿ ಋಷಿ ಮಾರ್ಕಂಡೇಯ ಮಹಾಮುನಿಗಳಿಂದ ಈ ದೇವಾಲಯವು ಸ್ಥಾಪಿತವಾಗಿದೆಯೆಂದು ನಂಬಲಾಗಿದೆ. ಹಿಂದೆ, ಇಲ್ಲಿನ ಅನಂತಗಿರಿ ಬೆಟ್ಟಗಳ ಪ್ರಶಾಂತ ವಾತಾವರಣದಿಂದ ಆಕರ್ಷಿತರಾದ ಮಾರ್ಕಂಡೇಯ ಋಷಿಗಳು ಯೋಗ ಸಾಧನೆಗಾಗಿ ಇಲ್ಲಿಗೆ ಬಂದರು . ಪ್ರತಿದಿನ ಮಾರ್ಕಂಡೇಯರು ತಮ್ಮ ಯೋಗಸಾಧನೆಯಿಂದ ಇಲ್ಲಿರುವ ಗುಹೆಯ ಮೂಲಕ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಅನಂತಗಿರಿಯಿಂದ ಕಾಶಿಗೆ ತೆರಳುತ್ತಿದ್ದರು ಹಾಗೂ ನಂತರ ಇದೇ ಬೆಟ್ಟಕ್ಕೆ ಬಂದು ಶ್ರೀಮನ್ನಾರಾಯನರನ್ನು ಪೂಜಿಸುತ್ತಿದ್ದರು.. ಒಂದು ದಿನ ಮುಂಜಾನೆ ಬೇಗ ಎದ್ದು ಸ್ನಾನಕ್ಕೆ ಕಾಶಿಗೆ ಹೋಗಲು ಸಾಧ್ಯವಾಗದೇ ಪೂಜಾ ಕಾರ್ಯಗಳನ್ನು ನೆರೆವೇರಿಸಲು ಅಡ್ಡಿಯುಂಟಾಯಿತು. ಇದರಿಂದ ಮಹರ್ಷಿಗಳು ಚಡಪಡಿಸಲು ಆರಂಭಿಸಿದಾಗ ಇವರ ಭಕ್ತಿಗೆ ಮೆಚ್ಚಿದ ಭಗವಂತನು ಇಲ್ಲಿ ಅನಂತಪದ್ಮನಾಭ ಸ್ವಾಮಿ ಸ್ವರೂಪದಲ್ಲಿ ದರ್ಶನವನ್ನು ನೀಡಿ ಗಂಗಾನದಿಯಲ್ಲಿ ಸ್ನಾನ ಮಾಡಲು ಸಹಾಯ ಮಾಡಿದರು. ಆದ್ದರಿಂದಲೇ ಮಾರ್ಕಂಡೇಯ ಮುನಿಗಳು ಇಲ್ಲಿ ಅನಂತಪದ್ಮನಾಭಸ್ವಾಮಿ ದೇವಾಲಯವನ್ನು ಸ್ಥಾಪಿಸಿದರು ಎಂಬ ಪ್ರತೀತಿಯಿದೆ.
#ಮತ್ತೊಂದುಸ್ಥಳಪುರಾಣದ_ಕತೆ.
ಹಿಂದೆ ರಾಜರ್ಷಿ ಮುಚುಕುಂದನು ರಾಕ್ಷಸನಾದ ಕಾಲಯವನ ಜೊತೆ ಹೋರಾಡಿ ಅವನನ್ನು ಸಂಹರಿಸಿದ ಮತ್ತು ವಿಶ್ರಾಂತಿ ಪಡೆಯಲು ಅನಂತಗಿರಿಯಲ್ಲಿ ಆಳವಾದ ನಿದ್ರೆಗೆ ಜಾರಿದನು ಎಂಬ ಪ್ರತೀತಿಯಿದೆ. ಹಿಂದೆ ದೇವೇಂದ್ರನಿಂದ ಮುಚುಕುಂದನು ""ತನ್ನ ನಿದ್ರೆಯನ್ನು ಹಾಳುಮಾಡುವವನು ಸುಟ್ಟು ಬೂದಿಯಾಗಲಿ" ಎಂಬ ವರವನ್ನು ಪಡೆದಿದ್ದನು. ಈ ಮೊದಲು
ಕಾಲಯವನ ರಾಕ್ಷಸನು ದ್ವಾರಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದನು. ಇವನನ್ನು ಸಂಹರಿಸಲು ಕೃಷ್ಣ ಪರಮಾತ್ಮನು ಒಂದು ಉಪಾಯ ಹೂಡಿ ಶ್ರೀಕೃಷ್ಣ ಮತ್ತು ಬಲರಾಮರು ಈಗಿನ ಅನಂತಗಿರಿ ಪ್ರದೇಶಕ್ಕೆ ಭೇಟಿ ನೀಡುತ್ತಾರೆ... ಇವರಿಂದ ತನಗೆ ತೊಂದರೆಯಾಗಬಹುದೆಂದು ಕಾಲಯವನ ರಾಕ್ಷಸನು
ಯಾವಾಗಲೂ ಕೃಷ್ಣ ಬಲರಾಮರನ್ನು ಹಿಂಬಾಲಿಸುತ್ತಿರುತ್ತಾನೆ. ಅನಂತಗಿರಿ ಪ್ರದೇಶಕ್ಕೆ ಬಂದ ಕಾಲಯವನು ಮುಚುಕುಂದನು ಇಲ್ಲಿ ನಿದ್ರಿಸುತ್ತಿರುವುದನ್ನು ಕಂಡು ತನ್ನ ಶಕ್ತಿ ಪ್ರದರ್ಶನ ಮಾಡಲು ಮುಚುಕುಂದ ರಾಜರ್ಷಿಯ ನಿದ್ರೆಯನ್ನು ಹಾಳುಮಾಡಿದನು. ನಂತರ ಶಾಪಗ್ರಸ್ತನಾಗಿ ಸುಟ್ಟು ಬೂದಿಯಾಗಿ ಇದೇ ಸ್ಥಳದಲ್ಲಿ ಕೊಲ್ಲಲ್ಪಟ್ಟನು ಎಂಬ ಕತೆ ಪ್ರಚಲಿತವಾಗಿದೆ. ಶ್ರೀಕೃಷ್ಣನು ಮುಚಿಕುಂದನಿಗೆ ಶ್ರೀ ಅನಂತ ಪದ್ಮನಾಭ ಸ್ವಾಮಿಯ ರೂಪದಲ್ಲಿ ದರ್ಶನವನ್ನು ನೀಡಿ ನದಿಯ ರೂಪದಲ್ಲಿ ಜಗತ್ತಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಳ್ಳುವಂತೆ ಅನುಗ್ರಹಿಸಿದನು. ಆದ್ದರಿಂದಲೇ ಹೈದರಾಬಾದ್ ನಗರದ ಮೂಲಕ ಹಾದುಹೋಗುವ ತೆಲಂಗಾಣದ ಪ್ರಸ್ಥಭೂಮಿ ಪ್ರದೇಶದಲ್ಲಿ ಹರಿಯುವ ಕೃಷ್ಣಾ ನದಿಯ ಉಪನದಿಯಾದ ಮೂಸಿ ನದಿಯನ್ನು ಮುಚುಕುಂದ ನದಿ ಎಂದೂ ಕರೆಯಲಾಗುತ್ತದೆ. ದರ್ಶನ ಮಾಡಿ..
ಸ್ಮರಿಸಿ...
ಶ್ರೀ ಅನಂತ ಪದ್ಮನಾಬ ಸ್ವಾಮಿಯೇ ನಮಃ🙏
****
ಅನಂತಪದ್ಮನಾಭಸ್ವಾಮಿದೇಗುಲ #ತಿರುವನಂತಪುರಂ.
ವಿಷ್ಣುವಿನ ರೂಪಗಳು ಅನೇಕ. ಅವನು ಸರ್ವಾಂತರ್ಯಾಮಿ. ಅದರಂತೆ ಅವನ ವಿಧವಿಧವಾದ ರೂಪಗಳಲ್ಲಿ ಅನೇಕ ದೇವಾಲಯಗಳಿವೆ. ಕೃಷ್ಣ, ವೆಂಕಟೇಶ್ವರ, ನರಸಿಂಹ,,ಶ್ರೀರಾಮ ಹೀಗೆ ನಾನಾ ವಿಧವಾದ, ವಿಶೇಷವಾದ ಪ್ರಸಿದ್ಧವಾದ, ಸುಂದರವಾದ ಅನೇಕ ದೇವಾಲಯಗಳು ಭಾರತಕ್ಕೆ ಕಲಶಪ್ರಾಯವಾಗಿ ದೇಶದ ಕೀರ್ತಿಯನ್ನು ಹೆಚ್ಚಿಸಿವೆ. ಹೇಗೆ ತಿರುಪತಿಯ ವೆಂಕಟೇಶ್ವರ ದೇವಾಲಯ ಬಹಳ ಶ್ರೀಮಂತ ದೇವರು ಎಂಬ ಹೆಗ್ಗಳಿಕೆಯನ್ನು ಹೊಂದಿ ಪ್ರಸಿದ್ಧಿಯನ್ನು ಪಡೆದಿದೆಯೋ ಅದರಂತೆ, ತಿರುವನಂತಪುರಂನ ಶ್ರೀ ಪದ್ಮನಾಭ ದೇವಾಲಯವೂ ವಾಸ್ತುಶಿಲ್ಪ ಕಲೆಯ ಜೊತೆಜೊತೆಗೆ ಅದರ ಶ್ರೀಮಂತಿಕೆಗೂ ಸಹ ಬಹಳ ಪ್ರಸಿದ್ಧಿಯನ್ನು ಪಡೆದಿದೆ.
ತಿರುವನಂತಪುರಂ ಕೇರಳದ ರಾಜಧಾನಿಯೂ ಆಗಿದೆ. ದೇವರ ಹೆಸರಿನಲ್ಲೆ ಕ್ಷೇತ್ರಕ್ಕೆ ಹೆಸರು ಬಂದಿದೆ. ಅನಂತ ಎಂದರೆ ಆದಿಶೇಷನ ಮೇಲೆ ಮಲಗಿರುವ ರೂಪದಲ್ಲಿ ಮಲಗಿರುವ ಸ್ವಾಮಿಯ ಮೂರ್ತಿಯು ನಯನ ಮನೋಹರವಾಗಿದೆ. ಸ್ವಾಮಿಯ ನಾಭಿಯಿಂದ ಹೊರ ಬಂದಿರುವ ಕಮಲದಲ್ಲಿ ಬ್ರಹ್ಮ ವಿರಾಜಮಾನನಾಗಿರುವುದರಿಂದ ಈ ಮೂರ್ತಿಗೆ ಅನಂತ ಪದ್ಮನಾಭ ಎಂಬ ಹೆಸರು ಬಂದಿದೆ. ಈ ಮೂರ್ತಿಯನ್ನು 12008 ಸಾಲಿಗ್ರಾಮಗಳನ್ನು ಹೊಂದಿದ್ದು ಗಂಧಕ ನದಿಯ ದಡದಿಂದ ತೆಗೆಯಲಾಗಿದ್ದು ನೇಪಾಳದಿಂದ ತರಿಸಲಾಗಿದೆ ಎನ್ನಲಾಗುತ್ತದೆ. 18 ಅಡಿ ಉದ್ದವಾಗಿರುವ ಮೂರ್ತಿ ಬೃಹದಾಕಾರವಾಗಿದೆ. ಮೂರ್ತಿಯನ್ನು ಮೂರು ಬಾಗಿಲುಗಳಿಂದ ನೋಡಬಹುದಾಗಿದೆ. ಮೊದಲನೇ ಬಾಗಿಲಿನಿಂದ ತಲೆ ಎದೆ, ಎರಡನೆಯ ಬಾಗಿಲಿನಿಂದ ಕೈಗಳನ್ನು ಹಾಗೂ ಮೂರನೇ ಬಾಗಿಲಿನಿಂದ ಕಾಲುಗಳನ್ನು ನೋಡಬಹುದಾಗಿದೆ. ಇಲ್ಲಿ ಕಮಲ ತೀರ್ಥ ಎಂಬ ಕೊಳವೂ ಸಹ ಇದೆ.
ತಿರುವನಂತ ರಾಜರಲ್ಲಿ ಸುಪ್ರಸಿದ್ಧವಾದ ಮಾರ್ತಾಂಡ ವರ್ಮ ಎಂಬ ರಾಜನ ಕಾಲದಲ್ಲಿ ದೇವಾಲಯ ನವೀಕರಣಗೊಂಡು ಇಂದಿನ ರೂಪವನ್ನು ಪಡೆದುಕೊಂಡಿದೆ.ಈ ರಾಜನೇ ಮೂರಜಪಂ ಹಾಗೂ ಭದ್ರಜಪಂ ಎಂಬ ಪೂಜೆ ಪದ್ಧತಿಯನ್ನು ಪರಿಚಯಿಸಿದನು. ಮೂರಾಜಪಂ ಎಂದರೆ ನಿರಂತರವಾಗಿ ಪ್ರಾರ್ಥನೆಯನ್ನು ಸಲ್ಲಿಸುವುದಾಗಿದೆ. ಇದನ್ನು ಪ್ರತಿ ಆರು ವರ್ಷಗಳಿಗೊಮ್ಮೆ ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ.
1750ರಲ್ಲಿ ಮಾರ್ತಾಂಡ ವರ್ಮನು ದೇವರ ಹೆಸರಿನಲ್ಲಿ ತನ್ನ ಸಾಮ್ರಾಜ್ಯವನ್ನು ಮೀಸಲಿರಿಸಿದನು. ದೇವರ ಪರವಾಗಿ ಪಧ್ಮನಾಭ ದಾಸರು ಅಥವಾ ದೇವರ ಸೇವಕರು ಎಂದು ದೇವರ ಪ್ರತಿನಿಧಿಯಾಗಿ ಆಡಳಿತವನ್ನು ಮಾಡುತ್ತಿದ್ದರು. ಈಗಲೂ ಸಹ ಖ್ಯಾತ ಸಂತ ಕುಲಶೇಖರ ಆಳ್ವಾರ್ ವಂಶಸ್ಥರು ದೇವಾಲಯದ ಟ್ರಸ್ಟ್ ನಿರ್ಮಿಸಿ ಪೂಜಾ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಈ ದೇವಾಲಯವು ಆಪಾರವಾದ ಧನ ಸಂಪತ್ತು ಹೊಂದಿದೆ. 2011 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೆರೆಗೆ ದೇವಾಲಯದ ನೆಲಮಾಳಿಗೆಯಲ್ಲಿ ಇರುವ ಕೋಣೆಗಳನ್ನು ತೆರೆದಾಗ ಅಪಾರವಾದ ಚಿನ್ನದ ಪಾತ್ರೆಗಳು, ನಾಣ್ಯಗಳು, ಆಭರಣಗಳು, ವಿಗ್ರಹಗಳು, ಆಯುಧಗಳು, ವಜ್ರದ ಆಭರಣಗಳು ಸುಮಾರು 500 ಕೆ.ಜಿ ಗೂ ಹೆಚ್ಚು ದೊರೆಯಿತು. 18 ಅಡಿ ಉದ್ದದ ನಾಣ್ಯಗಳ ಚೀಲಗಳು ದೊರೆಯಿತು. ಇದನ್ನು ಕಂಡು ಪ್ರಪಂಚವೇ ನಿಬ್ಬೆರಗಾಯಿತು. ಆದರೆ ಎರಡನೇ ಕೋಣೆ ಎಂದರೆ 'ಬಿ' ಕೋಣೆಯನ್ನು ಇಂದಿನವರೆಗೂ ತೆರೆದಿಲ್ಲ.
#ಪುರಾಣಕಥೆ.
ಸುಮಾರು 950 ವರ್ಷಗಳ ಹಿಂದೆ ಕಲ್ಪ ಮಂಗಳಂ ಎಂಬ ಸ್ವಾಮಿಗಳು ಮಹಾ ವಿಷ್ಣುವಿನ ಪರಮ ಭಕ್ತರಾಗಿದ್ದರು. ಒಮ್ಮೆ ಇವರಿಗೆ ಒಬ್ಬ ಹುಡುಗ ಕಾಣಿಸಿಕೋಂಡನು. ಬಹಳ ಆಕರ್ಷಿತನಾಗಿದ್ದನು. ಅವನನ್ನು ತಮ್ಮ ಮನೆಯಲ್ಲೇ ಉಳಿದುಕೊಳ್ಳುವಂತೆ ತಿಳಿಸಿದಾಗ, ಹುಡುಗ ತಾನು ಏನೇ ಮಾಡಿದರೂ ಎದುರು ಮಾತನಾಡಿದರೆ ಹೋಗಿ ಬಿಡುವೆ ಎಂದು ಷರತ್ತು ವಿಧಿಸಿದನು. ಅದಕ್ಕೆ ಸ್ವಾಮಿಗಳು ಒಪ್ಪಿ ಮನೆಗೆ ಕರೆತಂದರು. ಆದರೆ ಆ ಹುಡುಗನ ತುಂಟಾಟ ಹೆಚ್ಚಾಗಿ ತಾಳಲಾರದಾದರು. ಒಮ್ಮೆ ಪೂಜೆ ಮಾಡುವಾಗ ಅನಂತನ ವಿಗ್ರಹವನ್ನು ಹುಡುಗ ಆಟವಾಡಲು ತೆಗೆದುಕೊಂಡಾಗ ಸ್ವಾಮಿಗಳು ಬೇಡವೆಂದು ತಿಳಿಸಿದರು. ಆಗ ಆ ಹುಡುಗ ಮನೆ ಬಿಟ್ಟು ಅನಂತ ಎಂಬ ಕಾಡಿಗೆ ಹೊರಟ. ಸ್ವಾಮಿಗಳು ಕೂಗುತ್ತ ಹಿಂಬಾಲಿಸಿದರು. ಆ ಹುಡುಗ ದೊಡ್ಡ ಮರವನ್ನು ಹೊಕ್ಕ. ಆ ಮರ ಸುಮಾರು 18 ಕಿ.ಮಿ ಉದ್ದವಾಗಿ ನೆಲಕ್ಕುರುಳಿ ಐದು ಹೆಡೆ ನಾಗವಾಯಿತು. ಆಗ ಸ್ವಾಮೀಗಳು ಪ್ರಾರ್ಥಿಸಿ ಸಣ್ಣದಾಗುವಂತೆ ತಿಳಿಸಿದಾಗ. ಸಣ್ಣದಾಗಿ ವಿಗ್ರಹವಾಯಿತು. ನಂತರ ಸ್ವಾಮಿಗಳು ವಿಷಯವನ್ನು ರಾಜ ಮನೆತನದವರಿಗೆ ತಿಳಿಸಿ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ.
ಆಚರಣೆ
ಅನಂತ ಪದ್ಮನಾಭ ವ್ರತವನ್ನು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ದಂಪತಿಯರಿಬ್ಬರೂ ಕೂಡಿ ಆಚರಿಸುತ್ತಾರೆ. ಈವ್ರತಕ್ಕೇ ಎಲ್ಲಾ ಹದಿನಾಲ್ಕು ರೀತಿಯ ಪುಷ್ಫಗಳು, ಹಣ್ಣುಗಳು, ನೈವೈದ್ಯ ಎಲ್ಲಾ ಹದಿನಾಲ್ಕು ತರಹ ಇಟ್ಟು ಪೂಜಿಸಿ, ಪ್ರಾರ್ಥಿಸಿ ಅನಂತನ ಕೃಪೆಗೆ ಪಾತ್ರರಾಗ ಬಹುದು.
ನಾಳೆ ಶುಕ್ರವಾರ ಅನಂತ ಪದ್ಮನಾಭ ವ್ರತವಿದೆ. ಆ ಸ್ವಾಮಿ ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ.
ಧನ್ಯವಾದಗಳು
#ಜಯಲಕ್ಷ್ಮೀಕೃಷ್ಣ
***
ಯಾರಿವರುಇವರದರ್ಶನಮಾಡದೇಇದ್ದರೆತಿರುಪತಿಯಾತ್ರೆಯಪೂರ್ಣಫಲದೊರೆಯುವುದಿಲ್ಲ_ಏಕೆ???,,ಓದಿ..
ಸ್ನೇಹಿತರೆ, ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿಶ್ವವಿಖ್ಯಾತ ತಿರುಪತಿಯ ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿಯವರ ದೇವಾಲಯದ ಉತ್ತರದ ಆವರಣದಲ್ಲಿರುವ ಸ್ವಾಮಿ ಪುಷ್ಕರಿಣಿಯ ಮೆಟ್ಟಿಲುಗಳ ಮೇಲೆ ವಾಯುವ್ಯ ಮೂಲೆಯಲ್ಲಿ ಅತ್ಯಂತ ಶಕ್ತಿ ಶಾಲಿಯಾದ ವಿಶಿಷ್ಠ ರೂಪಧಾರಿಯಾದ ಶ್ರೀವರಾಹಸ್ವಾಮಿಯವರಿಗೆ ಸಮರ್ಪಿಸಲ್ಪಟ್ಟ ದೇವಾಲಯವಿದೆ. ಈ ದೇವಾಲಯವು ಬೆಟ್ಟದ ಮೇಲೆ ಶ್ರೀ ವೆಂಕಟೇಶ್ವರ ಸ್ವಾಮಿಯವರ ದೇವಾಲಯಕ್ಕಿಂತ ಹಳೆಯದಾಗಿದ್ದು ಮೊದಲೇ ಸ್ಥಾಪಿತವಾಗಿತ್ತು ಎಂಬ ಪ್ರತೀತಿಯಿದೆ.. ಇಲ್ಲಿರುವ ವರಾಹಸ್ವಾಮಿಯವರನ್ನು ಭೂ ವರಾಹಸ್ವಾಮಿ ಎಂದು ಕರೆಯುತ್ತಾರೆ...
#ದಂತಕಥೆ..
ಶ್ರೀ ವರಾಹಸ್ವಾಮಿಯು ತಿರುಮಲಬೆಟ್ಟದಲ್ಲಿ ವೆಂಕಟೇಶ್ವರನಿಗಿಂತ ಮುಂಚೆಯೇ ನೆಲೆಸಿದ್ದರು. .
ತಿರುಮಲ ಕ್ಷೇತ್ರದ ಪದ್ಧತಿಯಂತೆ ಮೊದಲು ವರಾಹಸ್ವಾಮಿಯನ್ನು ಭೇಟಿ ಮಾಡಿ, ಪೂಜೆ ಸಲ್ಲಿಸಿ, ನೈವೇದ್ಯ ಸಲ್ಲಿಸಿದ ನಂತರವೇ ವೆಂಕಟೇಶ್ವರನ ದರ್ಶನ ಮಾಡಿದರೆ ಮಾತ್ರವೇ ತಿರುಮಲ ಯಾತ್ರೆ ಸಂಪೂರ್ಣವಾಗಲಿದೆ.. ಇದು ವರಾಹಸ್ವಾಮಿಯೊಂದಿಗೆ ವೆಂಕಟೇಶ್ವರ ಸ್ವಾಮಿಯವರು ಮಾಡಿಕೊಂಡ ಸಂಧಿಯೂ ಹೌದು.
#ತಿರುಮಲೆಗೆಆದಿವರಾಹಕ್ಷೇತ್ರಎಂಬಹೆಸರಿದೆ.
ದಂತಕಥೆಯ ಪ್ರಕಾರ, ಹಿರಣ್ಯಾಕ್ಷನಿಂದ ಅಪಹರಿಸಲ್ಪಟ್ಟು ಬಂದಿಯಾಗಿದ್ದ (ಭೂ ದೇವಿ) ಭೂಮಿತಾಯಿಯನ್ನು ಕಾಪಾಡಲು ಶ್ರೀಮನ್ನಾರಾಯಣರು ವರಾಹ ರೂಪ ಧರಿಸಿ ಹಿರಣ್ಯಕ್ಷನನ್ನು ಸಂಹರಿಸಿ ಭೂ ದೇವಿಯನ್ನು ಸ್ವಸ್ಥಾನಕ್ಕೆ ಸೇರಿಸಿದ ನಂತರ ವರಾಹಸ್ವಾಮಿಯವರು ತಿರುಮಲೆಗೆ ಬಂದು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡು ಪರ್ವತದಲ್ಲಿ ಈಗಿನ ಪುಷ್ಕರಿಣಿಯ ಉತ್ತರ ದಂಡೆಯಲ್ಲಿ ಉಳಿದುಕೊಂಡರು. ಆದ್ದರಿಂದ ತಿರುಮಲ ಬೆಟ್ಟವನ್ನು ಆದಿವರಾಹಕ್ಷೇತ್ರ ಎಂದೂ ಕರೆಯುತ್ತಾರೆ. ಕಲಿಯುಗದ ಪ್ರಾರಂಭದಲ್ಲಿ ವೆಂಕಟೇಶ್ವರನ ಅವತಾರದಲ್ಲಿ ಜನ್ಮ ತಳೆದ ನಾರಾಯಣರ ಕೋರಿಕೆಯ ಮೇರೆಗೆ ವೆಂಕಟೇಶ್ವರರಿಗೆ ಇಲ್ಲಿಯ ಬೆಟ್ಟದ ಮೇಲೆ ವಾಸಿಸಲು ವರಾಹಸ್ವಾಮಿಯವರು 100 ಅಂಕಣಗಳ ಜಾಗವನ್ನು ನೀಡಿದರು. ಆಗ ವೆಂಕಟೇಶ್ವರ ಸ್ವಾಮಿಯವರು ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮೊದಲು, ಅಂದೆ ತಿರುಮಲೆಗೆ ಭೇಟಿ ನೀಡುವ ತನ್ನ ಭಕ್ತಾದಿಗಳು ಮೊದಲು ವರಾಹಸ್ವಾಮಿಯವರನ್ನು ದರ್ಶಿಸಿ ಪೂಜೆ ಸಲ್ಲಿಸಿದ ನಂತರವೇ ತನ್ನ ದರ್ಶನ ಮಾಡಬೇಕು.. ಆಗ ಮಾತ್ರವೇ ಭಕ್ತಾದಿಗಳಿಗೆ ತಿರುಪತಿ ತಿಮ್ಮಪ್ಪನ ದರ್ಶನದ ಪೂರ್ಣ ಫಲ ದೊರಕುವುದು ಎಂದು ಘೋಷಿಸಿದರು,,, ಹಾಗೂ ಇದಕ್ಕೆ ಸಂಭಂದ್ದಿಸಿದಂತೆ ವರಾಹಸ್ವಾಮಿಗೆ ವೆಂಕಟೇಶ್ವರರು ಬರೆದು ಕೊಟ್ಟಿದ್ದು ಎನ್ನಲಾದ ತಾಮ್ರ ಪತ್ರವನ್ನು ಈಗಲೂ ವರಹದೇವಾಲಯದಲ್ಲಿ ಕಾಣಬಹುದಾಗಿದೆ..., ಇಲ್ಲಿ ದಿನನಿತ್ಯ ಪ್ರಥಮ ಪೂಜೆ ಮತ್ತು ನೈವೇದ್ಯವನ್ನು ಸಲ್ಲಿಸಿದ ನಂತರವೇ ತಿಮಪ್ಪನಿಗೆ ಪೂಜೆ ನೈವೇದ್ಯ ಸಮರ್ಪಿಸಲಾಗುವುದು.. ಇಂದಿಗೂ ಇದನ್ನು ಸಂಪ್ರದಾಯದಂತೆ ಅನುಸರಿಸಲಾಗುತ್ತಿದೆ.
ಆದ್ದರಿಂದಲೇ ಬ್ರಹ್ಮ ಪುರಾಣದ ಪ್ರಕಾರ, ಯಾತ್ರಾರ್ಥಿಗಳು ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಶ್ರೀ ಆದಿ ವರಾಹ ಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕು.
ಕ್ರಿ.ಶ.1535 ರಲ್ಲಿ ಪೆದ್ದ ತಿರುಮಲಾಚಾರ್ಯರು ಈ ದೇವಾಲಯವನ್ನು ನವೀಕರಿಸಿದರು. ಆದ್ದರಿಂದಲೇ ವರಾಹಸ್ವಾಮಿಯವರ ದರ್ಶನವಿಲ್ಲದೆ ತಿರುಪತಿ ಯಾತ್ರೆ ಸಂಪೂರ್ಣವಾಗುವುದಿಲ್ಲ..
***
Vishnu Temple, Manipur
Vishnu Temple of Bishnupur, Manipur
The Vishnu Temple, built of burnt bricks and lime mortar, is set on a square ground plan .It is south-facing and has neither a mandapa (a pillared hall) nor an external wall. Its base or plinth rises and then recedes into six courses of steps. The entrance is a narrow, rectangular porch covered by a corbelled roof. The walls of the porch are raised vertically to meet the semicircular eaves. The walls of the square sanctum rise vertically from the base to the shikhara, giving the whole structure the appearance of a double-storied building. A bandhana or horizontal band divides the exterior wall of the temple into two parts. While the southern side of the lower half of the temple has a doorway, the other three walls have corbelled arch niches. The four sides of the upper parts of the temple above the bandhana have projected windows framed by pilasters on either side.
***
Matangeshwar Temple, Khajuraho, Madhya Pradesh
One of the only temples of Chandela reign that is still used for worship, Matangeshwara Temple is a famous temple in the Western group of Khajuraho temples. Dedicated to Lord Shiva, Matangeshwara Temple boasts of one of the largest lingams in North India.
Built about 1100 years ago, Matangeshwar Temple is dedicated to Lord Shiva and serves as one of the most famous pilgrimage sites in Khajuraho. Shivratri festival is celebrated with a lot of fervour at Matangeshwar Temple and also the most favored time to visit here.
***
Ashtalakshmi Kovil Temple, Chennai
The Ashtalakshmi Kovil is a Hindu temple, which lies on the shorelines near the Elliot's beach, in Chennai, IndiaIn this temple, the Ashtalakshmis, the eight forms of goddess Lakshmi, are present in four levels in nine separate sanctums. The shrine of Lakshmi and her consort Vishnu is in level two. One starts the worship from here. Taking the stairs, the path leads to the third floor, which has the shrines of Santhanalakshmi, Vijayalakshmi, Vidyalakshmi and Gajalakshmi. Further few steps would lead to the shrine of Dhanalakshmi, which is the only shrine on the fourth floor. Exiting the main shrine, in the first level, there are shrines for Aadilakshmi, Dhaanya lakshmi and Dharyalakshmi. The temple also has Dashavatara (avatars of Vishnu), Guruvayoorappan, Ganesha, Dhanvanthari and Anjaneyar deities. ***
Saas Bahu Temple, Gwalior
Saas Bahu Temple, Gwalior
Built-in respect of Lord Vishnu who is also known as Sahastrabahu, this temple is located in Gwalior. The temple was built by King Mahipala and its name gradually changed probably due to mispronunciation.
Saas Bahu Temple boasts of splendid carvings which portray the brilliant artistic skills of the artisans and sculptures of that time.
The temple is best known for offering the most enthralling views of the city of Gwalior and a hike from Gwalior Fort to the temple is also a preferred activity if the weather is pleasant.
***
Shivalinga at Kardo Hills Arunachal Pradesh
Shivalinga at Kardo Hills Arunachal Pradesh
Happens to be one of the largest Shiva linga unearthed in recent times, Shiva Lingam in the Kardo Forest is the miraculous discovery of Mr. Prem Subha, who found this 25 ft tall and 22 ft wide Shiva lingam while cutting a tree during the holy month of Shravana. It is believed that the tree was on the verge of falling. Fortunately, nothing happened to the lingam, Suddenly something struck in his mind and realized that it was not a mere stone. It stood clearly visible which appealed him to believe it as Shiva Lingam. One can see the traces of this ancient Lingam in the 17th chapter of the ninth section (Nava Khand ke Satrahwa Adhyaya) edition 1893, where it mentioned that the tallest Shiva Lingam will appear at a place which will be called Lingalaya. At the spot, one can not only see the lingam but also the image of Goddess Parvati and Lord Ganesha with trunk turning leftward. One can also find the river passing by the bottom.
***
Navagraha temple is Chitrachal hill, Guwahati Assam
The location of the Navagraha temple is Chitrachal hill. It is established in the eastern section of the city of Guwahati. The deity worshipped in the temple is Navagraha which implies the nine prime celestial bodies, i.e., Grahas of the astronomy of the Hindu. These celestial bodies comprise of Sun "Surya", Moon "Chandra", Mars "Mangala", Mercury "Budha", Jupiter "Brihaspati", Venus "Shukra", Saturn "Shani", North Lunar Node "Rahu", and South Lunar Node "Ketu".
The temple also serves the purpose of analysis center of astronomy and also of astrology. Due to an earthquake, it suffered huge destruction by losing its tower and a vast portion of it. However, it was later restored. The ruler Rajesvar Singha had built such an incredible temple during the period of 1752 A.D. The destructive earthquake was unable to demolish the garbhagriha which is the internal quarter of the temple. The construction of the upper section of the temple was made of iron sheets.
***
Srikalahasteeswara Temple is a very famous Shiva temple, which is mentioned even in the ancient Puranas. The temple is one of the Pancha Bhoota Stalam where Lord Shiva is manifested in one of the five elements of nature, which is air or vayu. The temple is one among the 275 temples that are included in the Paadal Petra Sthalam or the greatest Shiva temples in the continent. There are many mythological legends associated with this temple. The most famous one is where Vayu or the wind god meditated here for centuries. This is the reason why the shiva linga in this temple is also called Vayu Linga. Lord Brahma is said to have meditated here in all four Yugas. Kannappa who was a king and a devotee of Lord Shiva tried to offer his eyes to the shiv linga here.
***
Ambreshwar Shiva Mandir at Ambarnath near Mumbai.
Built nearly 1000 years ago. The outer walls are carved very beautifully & gracefully on black rock. The Temple is heavily ornamented inside and out, replete with excellent sculptural works. The ruins of Ambershwar have remained a shadow of its golden past.
***
kashi vishwanatha temple
ಕಾಶಿಯಲ್ಲಿನ ಕೆಲವು ವಿಚಿತ್ರಗಳು..ವಿಶೇಷಗಳು.
ಕಾಶಿಯಲ್ಲಿ ಹದ್ದುಗಳು ಹಾರುವುದಿಲ್ಲ, ಹಸುಗಳು ಗುಮ್ಮುವುದಿಲ್ಲ, ಹಲ್ಲಿಗಳು ಶಬ್ದ ಮಾಡುವುದಿಲ್ಲ, ಶವಗಳಿಂದ ಕೆಟ್ಟ ವಾಸನೆ ಬರುವುದಿಲ್ಲ, ಕಾಶಿಯಲ್ಲಿ ಮರಣ ಹೊಂದಿದ ಪ್ರತಿ ಜೀವಿಯ ಬಲ ಕಿವಿ ಮೇಲಕ್ಕೆ ಎದ್ದಿರುತ್ತದೆ.
ಕಾಶಿಯಲ್ಲಿ ಮಂದಿರದ ಸುತ್ತಲೂ ಅನೇಕ ಚಿಕ್ಕ ಪುಟ್ಟ ಸಂದುಗಳು ಇದ್ದು ಅಂತಹ ಸಂದುಗಳು ಅನೇಕ ವಲಯಾಕಾರವಾಗಿ ಸುತ್ತಿದ ಹಾಗೆ ಇದ್ದು ಒಂದು ಪದ್ಮ ವ್ಯೂಹದ ಹಾಗೆ ಹೊಸಬರಿಗೆ ಸುಳಿವು ಸಿಗದ ಹಾಗೆ ಇರುತ್ತದೆ.
ಇದಃ ಪೂರ್ವ ಇಲ್ಲಿ ಅನೇಕ ಸುಂದರವಾದ ವನಗಳು, ಹೂವಿನ ಗಿಡಗಳ ಮಧ್ಯ ಇದ್ದ ಮಂದಿರವನ್ನು ವಿದೇಶೀ ದಂಡ ಯಾತ್ರಿಕರ ದಾಳಿಗಳಿಂದ ಕಾಪಾಡುವುದಕ್ಕಾಗಿ ಪ್ರಜೆ ಗಳೆಲ್ಲಾ ಗುಡಿಯ ಸುತ್ತಲೂ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿ ಶತ್ರು ಸೈನಿಕರಿಗೆ ದಾರಿ ಇಲ್ಲದ ಹಾಗೆ ಮಾಡಿದ್ದಾರೆ.
ಅನೇಕ ದೇಶಗಳಿಂದ ದೊಡ್ಡ ದೊಡ್ಡ ಶಾಸ್ತ್ರವೇತ್ತರು ಬಂದು ಕಾಶಿಯಲ್ಲಿ ಅನೇಕ ರೀಸರ್ಚ್ಗಳನ್ನು ಮಾಡಿ ಆಶ್ಚರ್ಯ ಪಟ್ಟರು.
ಅಸಲು ಈ ಕಾಸ್ಮೋರ್ಸ್ ಎಲ್ಲಿಂದ ಬರುತ್ತಿದೆ ?
ಆಗಿನ ಪೂರ್ವಿಕರು ಶಕ್ತಿ ಚಲನೆ ಇದ್ದ ಕಡೆಗಳಲ್ಲೆಲ್ಲಾ ಮಂದಿರಗಳನ್ನು ನಿರ್ಮಿಸಿದ್ದಾರೆ.
ಅಷ್ಟು ಪರಿಜ್ಞಾನ ಆ ಕಾಲದವರಿಗೆ ಎಲ್ಲಿಂದ ಬಂತು ಅಂತ ಆಶ್ಚರ್ಯಕ್ಕೆ ಗುರಿಯಾದರು.
ಕಾಶಿ ವಿಶ್ವೇಶ್ವರನಿಗೆ ಶವಭಸ್ಮ ಲೇಪನದಿಂದ ಪೂಜೆ ಪ್ರಾರಂಭಿಸುತ್ತಾರೆ.
ಕಾಶಿಯಲ್ಲಿನ ಪರಾನ್ನ ಭುಕ್ತೇಶ್ವರನ ದರ್ಶಿಸಿದರೆ ಜೀವಿಗೆ ಪರರ ಅನ್ನ ತಿಂದ ಋಣದಿಂದ ಮುಕ್ತಿ ಲಭಿಸುತ್ತದೆ.
ಕಾಶಿ ಕ್ಷೇತ್ರದಲ್ಲಿ ಪುಣ್ಯ ಮಾಡಿದರೆ ಕೋಟಿ ಸಂಖ್ಯೆಯಲ್ಲಿ ಫಲ ಇರುತ್ತದೆ; ಪಾಪ ಮಾಡಿದರೂ ಕೋಟಿ ಸಂಖ್ಯೆಯಲ್ಲಿ ಪಾಪ ಅಂಟಿಕೊಳ್ಳುತ್ತದೆ.
ವಿಶ್ವನಾಥನನ್ನು ಅಭಿಷೇಕಿಸಿದ ನಂತರ ಕೈಯ ರೇಖೆಗಳು ಬದಲಾಗುತ್ತದೆ.
ಇಲ್ಲಿನ ಶಕ್ತಿ ಪೀಠ ವಿಶಾಲಾಕ್ಷಿ ಅಮ್ಮನವರು, ಜಗತ್ತಿನ ಎಲ್ಲರಿಗೂ ಅನ್ನವಿಡುವ ಅನ್ನಪೂರ್ಣ ದೇವಿ ನಿವಾಸ ಸ್ಥಳ ಕಾಶಿ.
ಪ್ರಪಂಚದಲ್ಲಿ ಇರುವ ಎಲ್ಲಾ ಭಾಷೆಗಳಿಗೆ ತಾಯಿ ಆಗಿರುವ ಅತೀ ಪ್ರಾಚೀನ ಸಂಸ್ಕ್ರತ ಪೀಠ ಕಾಶಿಯಲ್ಲೇ ಇರುವುದು.
ಕಾಶಿಯಲ್ಲಿ ಗಂಗೆಯ ತೀರದಲ್ಲಿ 84 ಘಾಟ್ ಗಳು ಇದೆ......
ಇದರಲ್ಲಿ ದೇವತೆಗಳು, ಋಷಿಗಳು, ರಾಜರು ಗಳೊಂದಿಗೆ, ಎಷ್ಟೋ ಜನರು ತಮ್ಮ ತಪಃ ಶಕ್ತಿಯಿಂದ ನಿರ್ಮಿಸಿರುವ ಎಷ್ಟೋ ಇದೆ. ಅದರಲ್ಲಿ ಕೆಲವು:
ದಶಾಶ್ವಮೇಧ ಘಾಟ್:
ಬ್ರಹ್ಮ ದೇವನು 10 ಸಾರಿ ಅಶ್ವಮೇಧ ಯಾಗ ಮಾಡಿರುವುದು ಇಲ್ಲೇ. ಪ್ರತಿದಿನ ಸಾಯಂಕಾಲ ವಿಶೇಷವಾದ ಗಂಗಾ ಹಾರತಿ ನಡೆಯುತ್ತದೆ.
ಪ್ರಯಾಗ್ ಘಾಟ್:
ಇಲ್ಲಿ ಭೂಗರ್ಭದಲ್ಲಿ ಗಂಗೆಯೊಂದಿಗೆ ಯಮುನಾ, ಸರಸ್ವತೀ ನದಿ ಸಂಗಮವಾಗುತ್ತದೆ.
ಸೋಮೇಶ್ವರ ಘಾಟ್:
ಚಂದ್ರನಿಂದ ನಿರ್ಮಿತವಾಗಿದೆ.
ಮೀರ್ ಘಾಟ್:
ಸತೀದೇವಿ ಕಣ್ಣು ಬಿದ್ದ ಸ್ಥಳ. ವಿಶಾಲಾಕ್ಷಿ ದೇವಿ ಶಕ್ತಿ ಪೀಠ.
ಇಲ್ಲೇ ಯಮನು ಪ್ರತಿಷ್ಠಾಪಿಸಿದ ಲಿಂಗ ಇರುತ್ತದೆ.
ನೇಪಾಳಿ ಘಾಟ್:
ಪಶುಪತಿನಾಥ್ ಮಂದಿರದ ಬಂಗಾರದ ಕಲಶವನ್ನು ನೇಪಾಳದ ರಾಜ ಕಟ್ಟಿಸಿದ.
ಮಣಿ ಕರ್ಣಿಕಾ ಘಾಟ್:
ಇದು ಕಾಶಿಯ ಮೊಟ್ಟ ಮೊದಲನೆಯದು. ಇದನ್ನು ವಿಷ್ಣು ದೇವನು ಸ್ವಯಂ ಸುದರ್ಶನ ಚಕ್ರದಿಂದ ಅಗೆದು ನಿರ್ಮಿಸಿದ. ಇಲ್ಲಿ ಸಕಲ ದೇವತೆಗಳು ಸ್ನಾನ ಮಾಡುತ್ತಾರೆ. ಇಲ್ಲಿ ಗಂಗೆ ನಿರ್ಮಲವಾಗಿ ಹರಿಯುತ್ತಾಳೆ. ಇಲ್ಲಿ ಮಧ್ಯಾಹ್ನ ಸಮಯದಲ್ಲಿ ಯಾರಾದರೂ ಸುಚೇಲ ಸ್ನಾನ ಮಾಡಿದರೆ ಅವರಿಗೆ ಜನ್ಮ ಜನ್ಮದ ಪಾಪಗಳು ತೊಲಗಿ ಹೋಗುವುದು. ಜೀವಿಗೆ ಎಷ್ಟು ಪುಣ್ಯ ಪ್ರಾಪ್ತಿಯಾಗುವುದೋ ಚತುರ್ಮುಖ ಬ್ರಹ್ಮ ದೇವನಿಂದಲೂ ಕೂಡ ವರ್ಣಿಸಲು ಆಗುವುದಿಲ್ಲವಂತೆ.
ವಿಶ್ವೇಶ್ವರ್ ಘಾಟ್:
ಇವಾಗ ಸಿಂಧಿಯಾ ಘಾಟ್ ಅಂತಾರೆ. ಇಲ್ಲೇ ಅಹಲ್ಯಾ ಬಾಯಿ ತಪಸ್ಸು ಮಾಡಿದ್ದು. ಇಲ್ಲೇ ಸ್ನಾನ ಮಾಡಿ ಬಿಂದು ಮಾಧವನನ್ನು ದರ್ಶಿಸುತ್ತಾರೆ.
ಪಂಚ ಗಂಗಾ ಘಾಟ್:
ಇಲ್ಲೇ ಭೂಗರ್ಭದಿಂದ ಗಂಗೆಯೊಳಗೆ 5 ನದಿಗಳು ಸೇರುತ್ತದೆ.
ಗಾಯ್ ಘಾಟ್:
ಗೋ ಪೂಜೆ ನಡೆಯುತ್ತದೆ.
ತುಳಸಿ ಘಾಟ್:
ತುಳಸಿ ದಾಸ್ ಸಾಧನೆ ಮಾಡಿ ರಾಮಚರಿತ ಮಾನಸ್ ಬರೆಯುವಂತೆ ಶಿವನ ಆದೇಶ ಹೊಂದಿದನು.
ಹನುಮಾನ್ ಘಾಟ್:
ಇಲ್ಲಿ ನಡೆಯುವ ರಾಮ ಕಥೆ ಕೇಳಲು ಹನುಮಂತನು ಬರ್ತಾರೆ.ಇಲ್ಲೇ ಸೂರ್ಯನು ತಪಸ್ಸು ಮಾಡಿ ಅನೇಕ ಶಕ್ತಿಗಳನ್ನು ಹೊಂದಿರುವ ಲೋಲಾರ್ಕ್ ಕುಂಡ ಇರುವುದು.ಇಲ್ಲೇ ಶ್ರೀ ವಲ್ಲಭಾಚಾರ್ಯರು ಜನಿಸಿದರು.
ಅಸ್ಸಿ ಘಾಟ್:
ಪೂರ್ವದಲ್ಲಿ ದುರ್ಗಾದೇವಿ ಶುಂಭ, ನಿಶುಂಭ ಎನ್ನುವ ರಾಕ್ಷಸರನ್ನು ಸಂಹರಿಸಿ ದಂತಹ ಖಡ್ಗವನ್ನು ಹಾಕಿದ್ದರಿಂದ ಇಲ್ಲಿ ಒಂದು ತೀರ್ಥ ಉದ್ಭವಿಸಿದೆ.
ಹರಿಶ್ಚಂದ್ರ ಘಾಟ್:
ಸರ್ವವನ್ನು ಕಳೆದುಕೊಂಡು ಹರಿಶ್ಚಂದ್ರನು ಇಲ್ಲಿ ಶವ ದಹನ ಕೂಲಿಯಾಗಿ ಕೆಲಸ ಮಾಡಿ ದೈವ ಪರೀಕ್ಷೆಯಲ್ಲಿ ಗೆದ್ದು ತನ್ನ ರಾಜ್ಯವನ್ನು ಹೊಂದಿದನು. ಇಂದಿಗೂ ಇಲ್ಲಿ ನಿತ್ಯ ಚಿತೆ ಉರಿಯುತ್ತಲೇ ಇರುತ್ತದೆ.
ಮಾನಸ ಸರೋವರ ಘಾಟ್:
ಇಲ್ಲಿ ಕೈಲಾಸ ಪರ್ವತದಿಂದ ಭೂಗರ್ಭ ಜಲದಾರೆ ಸೇರುತ್ತದೆ. ಇಲ್ಲಿ ಸ್ನಾನ ಮಾಡಿದರೆ ಕೈಲಾಸ ಪರ್ವತ ಸುತ್ತಿದ ಪುಣ್ಯ ಲಭಿಸುತ್ತದೆ.
ನಾರದ ಘಾಟ್:
ನಾರದನು ಲಿಂಗ ಸ್ಥಾಪಿಸಿದ್ದಾನೆ.
ಚೌತಸ್ಸಿ ಘಾಟ್:
ಇಲ್ಲೇ ಸ್ಕಂದ ಪುರಾಣದ ಪ್ರಕಾರ ಇಲ್ಲಿ 64 ಯೋಗಿನಿಯರು ತಪಸ್ಸು ಮಾಡಿದ್ದಾರೆ. ಇದು ದತ್ತಾತ್ರೇಯರಿಗೆ ಪ್ರೀತಿ ಪಾತ್ರ ಸ್ಥಳ... ಇಲ್ಲಿ ಸ್ನಾನ ಮಾಡಿದರೆ ಪಾಪಗಳು ತೊಲಗಿ 64 ಯೋಗಿನಿಯರ ಶಕ್ತಿಗಳು ಪ್ರಾಪ್ತಿಸುತ್ತದೆ.
ರಾನಾ ಮಹಲ್ ಘಾಟ್:
ಇಲ್ಲೇ ಪೂರ್ವದಲ್ಲಿ ಬ್ರಹ್ಮ ದೇವನು ಸೃಷ್ಟಿ ಕಾರ್ಯದಲ್ಲಿ ಬರುವ ವಿಘ್ನಗಳನ್ನು ತೊಲಗಿಸುವಂತೆ ವಕ್ರತುಂಡ
ವಿನಾಯಕನನ್ನು ತಪಸ್ಸು ಮಾಡಿ ಪ್ರಸನ್ನ ಮಾಡಿಕೊಂಡನು.
ಅಹಲ್ಯಾ ಬಾಯಿ ಘಾಟ್:
ಈಕೆ ಕಾರಣದಿಂದಾಗಿ ನಾವು ಈ ದಿವಸ ಕಾಶಿ ವಿಶ್ವೇಶ್ವರನ ದರ್ಶನ ಮಾಡುತ್ತಿದ್ದೇವೆ.
🌸🌸🌸🌸🌸🌸🌸🌸🌸🌸🌸🌸🌸
ಕಾಶಿಯಲ್ಲಿ ಗಂಗಾ ನದಿಯ ಪ್ರವಾಹದೊಳಗೆ ಅನೇಕ ಘಾಟ್ಗಳ ಹತ್ತಿರ ಉದ್ಭವಿಸುವ ತೀರ್ಥಗಳು ಸೇರಿಕೊಳ್ಳುತ್ತದೆ.
https://whatsapp.com/channel/0029Va9eH0M3bbUz1vZGVU0V
ಪೂರ್ವ ಕಾಶಿಯಲ್ಲಿ ದೇವತೆಗಳು,ಋಷಿಗಳು,
ರಾಜರೂ ನಿರ್ಮಿಸಿದ ಅನೇಕ ಮಂದಿರಗಳು ಕಟ್ಟಡಗಳು ವನಗಳ ಮಧ್ಯ ವಿಶ್ವನಾಥನ ಮಂದಿರ ಎಷ್ಟೋ ವೈಭವೋಪೇತವಾಗಿ ಬೆಳಗುತ್ತಿತ್ತು.
ಆದರೆ ಮಹಮ್ಮದೀಯ ದಂಡ ಯಾತ್ರಿಕರು ಕಾಶಿಯನ್ನು ಲಕ್ಷ್ಯವಾಗಿ ಮಾಡಿಕೊಂಡು ದಾಳಿಯನ್ನು ಮಾಡಿ ಧ್ವಂಸ ಮಾಡಿದ ನಂತರದ ಕಾಶಿಯನ್ನು ನಾವು ನೋಡುತ್ತಿದ್ದೇವೆ.
ವಿಶ್ವನಾಥ, ಬಿಂದು ಮಾಧವ ರೊಂದಿಗೆ ಎಷ್ಟೋ ಅನೇಕ ಮಂದಿರಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದಾರೆ.
ಇಂದಿಗೂ ವಿಶ್ವನಾಥ ಮಂದಿರದ ನಂದಿ, ಮಸೀದು ಇರುವ ಕಡೆಯ ಕೆಡವಿದ ಮಂದಿರದ ಕಡೆಗೆ ನೋಡುತ್ತಿದೆ.
ಅಲ್ಲೇ ಶಿವನು ತ್ರಿಶೂಲದಿಂದ ತೋಡಿದ ಜ್ಞಾನವಾಪಿ ತೀರ್ಥ ಬಾವಿ ಇರುತ್ತದೆ.
ಈದಿನ ನಾವು ದರ್ಶಿಸುವ ವಿಶ್ವನಾಥ ಮಂದಿರ ಅಸಲು ಮಂದಿರಕ್ಕೆ ಪಕ್ಕದ ಇಂದೋರ್ ರಾಣಿ ಶ್ರೀ ಅಹಲ್ಯಾ ಬಾಯಿ ಹೋಲ್ಕರ್ ಅವರು ಕಟ್ಟಿಸಿದರು.
🙏🏻🙏🏻🙏🏻 ಕಾಶಿಯ ಸ್ಮರಣೆ ಸದಾ ಮೋಕ್ಷಕಾರಕ🙏🏻🙏🏻
***
Mrityunjay Mahadev Temple, Kashi, Varanasi
Mrityunjay Mahadev Temple of Lord Shiva is situated on the way of Daranagar to Kalbhairav temple in Kashi.Near Mrityunjay Mahadev Temple temple, there is a well of religious importance; it is believed that its water is a mixture of several underground streams and is good for treating several diseases. In this temple Shiva is worshipped in the form of Mritunjay. It is believed that on worshipping Mritunjay Mahadev one can win over his death. Many people from across the world came here to perform Mahamritunjay-Path. Just besides this temple there is a well. According to another popular myth Dhanvantri the father of Ayurveda poured all his medicines in this well .So its water is sacred and eliminate several diseases.
***
Naina Devi Temple Nainital
Naina Devi Temple NainitalStanding on one side of the beautiful Naini Lake is the Naina Devi Temple, which is a famous Indian pilgrimage and one of the 51 Shaktipeeths in India. Located on the banks of the lake, it is a beautiful tourist destination as well.
The Naina Devi temple gets its name from the mythological legend that Goddess Sati’s eyes (Nayan) fell at this place when Lord Vishnu cuts her body into 51 different parts. In fact, the whole town (Nainital), the lake (Naini Lake) and the Naini temple, all three of them are named after the legend.
The Naina Devi temple is considered as one of the most sacred temples in the country showering blessings on devotees from across the world. The great Shivalik range of Himalayas surround the town and the temple is guarded by the highest peak Mt. Nanda Devi which is believed to be the sister of goddess Naina Devi.
***
Shivalinga in Malaysia
Shivalinga where water falls 24/7. This is in Malaysia.
***
The famous Shani Dev Temple, also known as Kokilavan Dham, at Kosi Kalan near Mathura in Uttar Pradesh is believed to be the spot where Lord Krishna gave darshan to Shani Dev .Legend has it that when Lord Krishna was born all Devas (demigods) visited Nandgaon. Shani Dev too came to see little Krishna but Yashoda did not let him see young Krishna. Reason Shanidev might bring bad upon Krishna.
Shani felt disappointed and went to a nearby forest and started performing austerities (tapas). He wanted to know why he was being sidelined when he is doing his duty of punishing people according to their Karma. It is said that Shani only creates trouble on those people who do bad Karma.
Moved by Shani’s plight, Lord Krishna appeared before him in the forest and asked him to stay near Nandgaon. He also granted him the boon that whoever visited his temple will be immediately freed from troubles.
***
Gopinath Temple in Jaipur
wrist watch is runing
***
Popularly known as South Palani or Dakshina Palani, Sree Subramanya Swami temple at Harippad in Alappuzha district is one of the oldest shrines in Kerala, believed to have been consecrated by Sage Parasurama. The presiding deity of this 3500 year-old temple is Lord Subramanya in a four-armed form with a Vel (a divine spear) in one hand and a Vajrayudha (a divine weapon) in the other. This temple has the largest dhwajastambham (flag mast) among Kerala temples.
***
Sharada Peetha Temple in Kashmir State
****
ಪಲ್ಲಿ ಕೊಂಡೇಶ್ವರ ಸುರುಟ್ ಪಲ್ಲಿ surut palli kondeshwara andhra
ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ಏಕೈಕ ಕ್ಷೇತ್ರ ಇದು - ದೇಶದಲ್ಲಿ ಹಲವಾರು ಶಿವನ ದೇವಾಲಯಗಳು ಇವೆ. ಅವುಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಶಿವನು ಲಿಂಗರೂಪದಲ್ಲಿಯೇ ಕಾಣಸಿಗುತ್ತಾನೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಮಾನವ ರೂಪದ ವಿಗ್ರಹದ ಮೂಲಕ ಕಾಣಸಿಗುತ್ತಾನೆ. ಅದೂ ಕೂಡಾ ನಿಂತಿರುವ ಭಂಗಿಯಲ್ಲೇ ಕಾಣಸಿಗುವುದು. ಆದರೆ ಆಂಧ್ರಪ್ರದೇಶದ ಪಲ್ಲಿ ಕೊಂಡೇಶ್ವರ ಕ್ಷೇತ್ರದಲ್ಲಿ ಶಿವನು ಪಾರ್ವತಿಯ ಮಡಿಲಿನಲ್ಲಿ ಮಲಗಿರುವ ರೂಪದಲ್ಲಿ ಶಿವ ಕಾಣಿಸಿಕೊಳ್ಳುತ್ತಾನೆ.
ಮಲಗಿರುವ ಶಿವ ದೇಶದಲ್ಲಿ ಬೇರೆಲ್ಲೂ ಇಲ್ಲ
ಶಿವನು ಮಲಗಿರುವಂತಹ ಶಿವನ ವಿಗ್ರಹವಿರುವುದು ಇಡೀ ದೇಶದಲ್ಲಿ ಇದೊಂದೇ ದೇವಸ್ಥಾನದಲ್ಲಿ. ಈ ದೇವಸ್ಥಾನವನ್ನು ಸುರುಟ್‌ಪಳ್ಳಿ ಎಂದೂ ಕರೆಯುತ್ತಾರೆ. ಸುತ್ತಲೂ ಹಸಿರು, ಕಡಲತಡಿಯ ಮಧ್ಯೆ ಇರುವ ಈ ಕ್ಷೇತ್ರ ಮನಸ್ಸಿಗೆ ಆನಂದವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ .
ಪುರಾಣಗಳ ಪ್ರಕಾರ
ಸಮುದ್ರ ಮಂಥನ ಸಂದರ್ಭದಲ್ಲಿ ಹೊರಬರುವ ವಿಷವನ್ನು ಶಿವನು ಕುಡಿಯುತ್ತಾನೆ. ಹಾಗಾಗಿ ಆತನಿಗೆ ನೀಲಕಂಠೇಶ್ವರ ಎನ್ನುವ ಹೆಸರು ಬಂದಿರುವ ಕಥೆ ನಿಮಗೆ ಗೊತ್ತೇ ಇರಬಹುದು.
ಅಮುದಾಂಬಿಕೆ ಎನ್ನುವ ಹೆಸರೂ ಇದೆ.
ಶಿವ ಕುಡಿದ ವಿಷ ಒಳಗೆ ಹೋಗಬಾರದೆಂದು ಪಾರ್ವತಿ ದೇವಿ ಶಿವನ ಗಂಟಲನ್ನು ಗಟ್ಟಿಯಾಗಿ ಹಿಡಿಯುತ್ತಾಳೆ. ಒಳ ಸೇರುತ್ತಿದ್ದ ವಿಷವನ್ನು ತಡೆದು ಜೀವವನ್ನು ಅಮೃತವಯವಾಗಿಸಿದ್ದಕ್ಕೆ ಆಕೆಗೆ ಅಮುದಾಂಬಿಕೆ ಎನ್ನುವ ಹೆಸರು ಕೂಡಾ ಬಂತು.
ಶಿವ ಶಯನ ಕ್ಷೇತ್ರಂ
ಈ ಘಟನೆಯ ನಂತರ ಪಾರ್ವತಿ , ಪರಮೇಶ್ವರರು ತಿರುಗಿ ಕೈಲಾಸಕ್ಕೆ ಹೊರಡುತ್ತಾರೆ. ಆ ಪ್ರಯಾಣ ಸಂದರ್ಭ ಕೊಂಡೇಶ್ವರ ಕ್ಷೇತ್ರ ಹತ್ತಿರ ಬರುವಾಗ ಶಿವನ ಶರೀರದಲ್ಲಿ ಇನ್ನೂ ವಿಷದ ಪ್ರಭಾವ ಇರುವುದು ಕಂಡುಬರುತ್ತದೆ. ಶಿವ ಅಲ್ಲೇ ಸ್ವಲ್ಪ ಸುಧಾರಿಸಿಕೊಳ್ಳಲು ಮಲಗುತ್ತಾನೆ. ಆಗ ಪಾರ್ವತಿ ತನ್ನ ತೊಡೆಯ ಮೇಲೆ ಶಿವನನ್ನು ಮಲಗಿಸುತ್ತಾಳೆ. ಶಿವನು ಪಾರ್ವತಿಯ ಮಡಿಲಲ್ಲಿ ಮಲಗಿರುವ ಕಾರಣ ಈ ಕ್ಷೇತ್ರಕ್ಕೆ ಶಿವ ಶಯನ ಕ್ಷೇತ್ರಂ ಎನ್ನುವ ಹೆಸರು ಬಂದಿದೆ ಎನ್ನುವುದಪಡೆಯಬೇಕು
ಮೊದಲು ಪಾರ್ವತಿಯ ದರ್ಶನ ಪಡೆಯಬೇಕು.
ಶಿವನನ್ನು ವಿಷದಿಂದ ರಕ್ಷಿಸಿದ ಕಾರಣ ಮೊದಲಿಗೆ ಪಾರ್ವತಿ ದೇವಿಯ ದರ್ಶನ ಪಡೆಯಬೇಕು. ಈ ಕ್ಷೇತ್ರದಲ್ಲಿ ಅಮುದಾಂಬಿಕೆಯ ರೂಪದಲ್ಲಿರುವ ಪಾರ್ವತಿಯನ್ನು ದರ್ಶನ ಪಡೆಯುವುದು ಸಂಪ್ರವಿಗ್ರಹ
12 ಅಡಿ ಎತ್ತರದ ವಿಗ್ರಹ
ಶ್ರೀ ಪಲ್ಲಿ ಕೊಂಡೇಶ್ವರ ಸ್ವಾಮಿಯ ವಿಗ್ರಹವು 12 ಅಡಿ ಎತ್ತರವಿದೆ. ಈ ವಿಗ್ರಹವು ಶಿವ ಪಾರ್ವತಿಯ ಮಡಿಲಲ್ಲಿ ಮಲಗಿದ್ದು, ದೇವತೆಗಳು, ಸುತ್ತಲೂ ನಿಂತು ಪ್ರಾರ್ಥಿಸುತ್ತಿರುವ ರೀತಿಯಲ್ಲಿ ವಿಗ್ರಹ ಕಾಣಿಸುತ್ತದೆ.
ಸುರುಟ್ ಪಲ್ಲಿ ಎನ್ನುವ ಹೆಸರು ಬಂದಿದ್ದು ಯಾಕೆ?
ಸುರುಟ್ ಅಂದರೆ ದೇವತೆಗಳು. ಶಿವ ಚೇತರಿಸಿಕೊಳ್ಳುವವರೆಗೂ ದೇವತೆಗೆಳೂ ಬ್ರಹ್ಮ, ಮಹಾವಿಷ್ಣು ಅಲ್ಲೇ ಇದ್ದರು. ಹಾಗಾಗಿ ಈ ಕ್ಷೇತ್ರಕ್ಕೆ ಸುರುಟ್ ಪಲ್ಲಿ ಎಂದೂ ಕರೆಅಭಿಷೇಕವಿಲ್ಲ
ವಿಗ್ರಹಕ್ಕೆ ಅಭಿಷೇಕವಿಲ್ಲ.
ಈ ವಿಗ್ರಹಕ್ಕೆ ಅಭೀಷೇಕ ಮಾಡಿದರೆ ವಿಷ ದೇಹದ ಒಳಕ್ಕೆ ಸೇರುತ್ತದೆ ಎನ್ನುವ ಕಾರಣಕ್ಕೆ ಹದಿನೈದು ದಿನಕ್ಕೊಮ್ಮೆ ತಮಿಳುನಾಡಿನ ಒಂದು ಗುಪ್ತ ಸ್ಥಳದಿಂದ ಚಂದನ ತೈಲವನ್ನು ಈ ವಿಗ್ರಹಕ್ಕೆ ಲೇಪಿಸುತ್ತಾರೆ. ಇದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಅಲ್ಲಿಯವರದ್ದು,.
***
Vasudhara Falls, Uttarakhand
At the banks of Alaknanda river, further to Dharmavan these sacred, enchanting, picteresque water falls will surely mesmerize you. Vasudhara Falls are located approximately seven kilometers from Badrinath The water of this falls cascades from the height of 400 feet and by the winds the water sprinkles in droplets around the vicinity. The water can only be savoured by those who are clean, pure and unstained from guilt.
When the eight vasus heard the glories of this place from Narada Muni, they then meditated here for thirty thousand years and had Lord Vishnu's darshan and achieved unflinching devotion to the Lord.
The water of this waterfall of Vasudhara Falls turns away from the visitors who are not pure at heart. Just by the shower under this fall, one's mind and body jubilates.
contact for religious tours Tirtha Yatra 9844700850 - WhatsApp only.
Barefoot walk by Badrinath incharge poojari
***
Raghunath Temple Devprayag
Raghunath Temple is a Hindu temple dedicated to Lord Rama. This temple is located at Devprayag, Tehri district of the Indian state of Uttarakhand, at the confluence of rivers Alaknanda and Bhagirathi. It is located 74.2 km away from Rishikesh on the Badrinath Highway.
Raghunath Temple is one of the 108 Divyadevas dedicated to Lord Vishnu. Lord Rama and Mata Sita are worshiped in the Raghunath temple. It is considered that Adi Shankaracharya founded the temple during the 8th century with the subsequent expansion of the Garhwal kingdom.
It is believed that Lord Rama killed Ravana. Ravana was a brahmana. Hence Lord Rama did penance at this place to repent for killing a brahmin.
****
Bedecked on the confluence of river Alaknanda and the Pindari River, Karnaprayag is named after Karna, a Mahabharata hero. It is said that Karna meditated here for his father, Lord Surya. He did that for many years to acquire the impregnable shield, which made him a formidable warrior on the battlefield. It is also the location where Lord Krishna performed Karna’s last rites. Swami Vivekananda meditated for 18 days at this beautiful and tranquil location. The relationship between Shakuntala and Dushyant bloomed here, according to Kalidas’ Abhijnana-ShakuntalamKarnaprayag, located 33 km from Rudraprayag, is named after Karna, a Mahabharata hero. It is said that Karna meditated here for his father, Lord Surya. He did that for many years to acquire the impregnable shield, which made him a formidable warrior on the battlefield. It is also the location where Lord Krishna performed Karna’s last rites. Swami Vivekananda meditated for 18 days at this beautiful and tranquil location.
***
Rudraprayag
Located 66 km from Devprayag, Rudraprayag is a gorgeous town at the confluence of the Mandakini and Alaknanda rivers. This little pilgrim village is named after Lord Shiva’s angry form, known as Rudra. It is the fourth of the Panch Prayags. The merging of two rivers reflects the beauty of each and appears to be a sister’s union. A widely accepted belief is that Lord Shiva once performed Tandav at this place. Rudraprayag was previously part of the Chamoli and Tehri districts. However, in 1997, Tehri, Pauri, and Kedarnath Valley joined forces to establish Rudraprayag as a district.
Point where Alakananda and Mandakini in Rudraprayag
***
Vishwanath Temple near Rudraprayag
The Vishwanath Temple is located in the town of Gupatakashi in Rudraprayag district and is visited by many devotees all-round the year. The whole district of Rudraprayag in Uttarakhand is named because of the presence of the numerous temples of Lord Shiva or Lord Rudra there and among these the Gupatakashi Vishwanath Temple is one of the prominent ones. The Vishwanath Temple in Guptakashi has a stark visual similarity with the Kashi Vishwanath Temple of the holy city of Varanasi. This may be the reason for the similarity between the names of the two temples. Aside this, the Vishwanath Temple is also part of the Rudra temple conglomerate of Rudraprayag that conjures up the temple chain of Panch Kedars and the Chota Kedarnath.
**
Mana Bhimpur Badrinath
Saraswati river becomes Guptagamini at this point.
This is at Mana ... Bhimpur in Badrinath where Vyasa wrote Mahabharata. He curses Saraswati river as she was making sound and Ganesha was unable to hear him. Saraswati river vanishes inside earth. The best part is you can see the river vanishing. Please show this to your children.
****
No comments:
Post a Comment