SEARCH HERE

Friday, 5 March 2021

ಕನ್ನಡ ಕಲಿ ಕರ್ನಾಟಕದ ಜಿಲ್ಲೆಗಳು ಊರುಗಳು ಕನ್ನಡ ಪದಗಳು learn kannada districts/ towns of Karnataka kannada words

 Really good











***

ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ ಎಂದು ತಿಳಿದಿಲ್ಲದಿರಬಹುದು.  ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ.  ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ.  ಉದಾ.  ನೋಡಿ:


  ಕಖಗಘಙ - ಈ ಐದು ಅಕ್ಷರದ ಗುಂಪನ್ನು ಕಾಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ಗಂಟಲಿನಿಂದ ಶಬ್ದ ಹೊರಬರುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.



  ಚಛಜಝಞ - ಈ ಐದು ಅಕ್ಷರದ ಗುಂಪನ್ನು ಅಂಗುಳ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಅಂಗುಳನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.


 ಟಠಡಢಣ : ಈ ಐದು ಅಕ್ಷರಗಳ ಗುಂಪನ್ನು ಮುರ್ಧನ್ಯಾ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಮುರ್ಧನ್ಯವನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.


  ತಥದಧನ - ಈ ಐದು ಅಕ್ಷರದ ಗುಂಪನ್ನು ದಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಹಲ್ಲುಗಳನ್ನು ಮುಟ್ಟುತ್ತದೆ.  ಒಮ್ಮೆ ಪ್ರಯತ್ನಿಸಿ


  ಪಫಬಭಮ - ಈ ಐದು ಅಕ್ಷರದ ಗುಂಪನ್ನು ಆಷ್ಟವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸಲು ಎರಡೂ ತುಟಿಗಳು ಭೇಟಿಯಾಗುತ್ತವೆ.  ಒಮ್ಮೆ ಪ್ರಯತ್ನಿಸಿ


  ವಿಶ್ವದ ಬೇರೆ ಯಾವುದೇ ಭಾಷೆಯಲ್ಲಿ ಇಂತಹ ವೈಜ್ಞಾನಿಕ ವಿಧಾನವಿದೆಯೇ?  ನಮ್ಮ ಭಾರತೀಯ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಬೇಕು ಆದರೆ ಅದೇ ಸಮಯದಲ್ಲಿ ಏಕೆ ಎಂದು ನಮಗೆ ತಿಳಿಸಿ ಮತ್ತು ಜಗತ್ತಿಗೆ ತಿಳಿಸಿ.  

🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🙏

****



x #ಕನ್ನಡ_ಪದಗಳು 

Xerox - ನೆರಳಚ್ಚು/ ಚಿತ್ರ ಪ್ರತಿ.

Email - ಮಿಂಚಂಚೆ / ಮಿಂಚೆ / ಮಿಂಚೋಲೆ.

Smart phone - ಜಾಣುಲಿ.

Tomato - ತಕ್ಕಾಳಿ / ಗೂದೆಹಣ್ಣು.

Carrot - ಕೆಂಬೇರು.

Beetroot - ಕಂದುಬೇರು.

Dream - ಕನಲು.

Cold - ಕುಳಿರು.

Laptop - ಮಡಿಲೆಣ್ಣುಕ / ತೊಡೆಗಣಕ.

Mobile/Cell phone - ಜಂಗಮವಾಣಿ / ಅಲೆಯುಲಿ.

License - ಪರವಾನಗಿ / ಸನ್ನದು.

Ringtone - ಕರೆಸದ್ದು.

Doctor - ಮಾಂಜುಗ.

Science - ಅರಿಮೆ.

Medicine - ಮಾಂಜರಿಮೆ.

Network - ಜಾಲಬಂಧ / ನೆಲುಹು.

Bicycle - ತುಳಿಬಂಡಿ / ಕಾಲ್ಗಾಲಿ.

College - ಉನ್ನತ ಶಿಕ್ಷಣ ಶಾಲೆ / ಪೆರ್ಕಲಿಮನೆ.

Engineer - ಬಿಣಿಗೆಯರಿಗ / ಅಭಿಯಂತರ.

Video - ಓಡುತಿಟ್ಟ.

Camera - ತಿಟ್ಟುಕ / ಬಿಂಬಗ್ರಾಹಿ.

Internet - ಮಿಂಬಲೆ.

Website - ಮಿಂಬಲೆತಾಣ / ಜಾಲತಾಣ.

Download - ನಕಲಿಳಿಸು.

Refrigerator - ಮಂಜುಪೆಟ್ಟಿಗೆ / ಕುಳಿರರೆ / ಶೀತಕ.

Online - ಮಿನ್ನೇರ.

Keyboard - ಕೀಲಿಮಣೆ / ಬೆರಳಚ್ಚುಮಣೆ.

Apartment - ಕೂಡುಮನೆ.

Bus - ಮಂದಿ ಬಂಡಿ.

Car - ಚಕ್ಕಡಿ.

Traffic - ಒಯ್ಯಾಟ / ಸಾಗಾಟ.

Ice cream - ಕೆನೆಮಂಜು.

Police - ಕಾಪುಗ.

Ambulance - ಮದ್ದುಬಂಡಿ.

Radio - ಬಾನುಲಿ / ಬಾನ್ನುಡಿ.

Fan - ಪಂಕ / ಬೀಸಣಿಕೆ.

Photo - ನೆರಳುತಿಟ್ಟ.\


ಕರ್ನಾಟಕದ ಜಿಲ್ಲೆಗಳು ಊರುಗಳು  districts/ towns of Karnataka






























********

















 We have so many regions and places in Bangalore that most people wouldn't know why are they named what they are named. 


1. HSR: Stands for Hosur, Sarjapur Road

2. BTM: Gets its name from surrounding Byrasandra, Taverekere and Madiwala

3. Banashankari: From the Banashankari Temple

4. Malleshwaram: From the Kadu Malleshwara temple

5. Majestic: From the Majestic Cinema theatre nearby

6. Cubbon Park: Named after British administrator Mark Cubbon

7. Jayanagar: Translates to 'Victory City' named after the first name of a famous king of Mysore, "Jayachamaraja"

8. Indiranagar: Named after Indira Gandhi

9. Basavanagudi: Basava means bull, gudi means temple. Bull Temple

10. JP Nagar: Named after Jay Prakash Narayan

11. Kengeri: Derived from Kempu Mannu (red soil) + Keri (area)

12. Rajarajeswari Nagar: Named after the temple there

13. KR market: Named after King Krishnarajendra Wodeyar

14. Fraser town: Named after Stuart Mitford Fraser, a British officer

15. Hulimavu: Means sour mangoes. Named after mangoes grown in the area

16. Ulsoor: There used to be a jackfruit orchard near the Ulsoor Lake, and the Kannada name for Jackfruit being 'Halasina Hannu', the area came to be known as Halasuru. During the British rule, the name was anglicised to 'Ulsoor'.

17. Marathahalli: They say that there was a temple of Maruti in the locality and Halli meaning village in Kannada. Other people believe that a fighter aircraft called “Marut” crash landed at the place.

18. Whitefield: A huge number of Anglo Indians used this area to settle down post Independence.

19. Bellandur: Named after the Bellandur Lake that was built during the reign of the Western Ganga dynasty in the 10th century (yes the lake is man-made)

20. Vijayanagara: Derives its name from Vijayanagara empire that flourished in South India during the 15th and 16th centuries.

21. Sadashivnagar: Named in honour of Karnad Sadashiva Rao, a veteran freedom fighter, philanthropist and politician.

22. Koramangala: Koramangala used to be swamp land once upon a time, famous for being marshy and mosquito-ridden. Name derived from the Kannada words ‘kora’ meaning overhaul and ‘mangala’ meaning ‘welfare.’ 

23. Lavelle Road: Named after Michael Lavelle, an Irish soldier who discovered gold mining in Kolar

24. Vittal Mallya Road (formerly Grant Road): Named after Vittal Mallya, founder of UB Group

25: Kasturba Road (formerly Sydney Road): Named after Kasturba Gandhi

26. Dollars Colony: As the name suggests, the homes in Dollars Colony was built by NRIs who turned to Bangalore looking for its great weather and quiet lifestyle

27. Arekere: Are in Kannada means half. Kere in Kannada means a water reservoir or pond. Named after lake.

28.Basaveshwara Nagar: Named after the famous Kannada poet Basaveshwara

29. Domlur: Derived from Tombalur, a kind of flower which is used to worship Lord Shiva. Other theory being Domalu (mosquito in Telugu) + ooru (village)

30. Hebbal: Named after the lake

31.Jeevanbheemanagar: The area was reserved for employees of LIC (Jeevan Bheema) and KPWD (Karnataka Public Works Department)

32. Rajajinagar: Named after C Rajagopalachari, the last Governor General of India & popularly called " Rajaji"& a  great freedom fighter from Southern part of India

33. Rajarajeshwari Nagar: Named after the temple

34. Nagarbhavi: Literally translates to "well of snakes" in Kannada. Once there used to be a lot snakes in the vicinity

35. Kodigehalli: This place/area was reportedly given as a gift(gift = Koduge in Kannada) by the former King Kempegowda to someone

36. Madiwala: Translates to 'washerman' in Kannada. Years when Bangalore ended in Jayanagar, this area was full of washermen and hence the area got the same name

37. Sunkadkatte: The area was like a tollgate which was next to Lake and in Kannada Sunka means Tax and Katte means place where we can sit

38. Seshadripuram: The area was named after the late Diwan of Mysore Seshadri Iyer

39. Doddanekundi: The area was again dominated by Telugu origin where it was originally called as Dodda Nakka Vundi which means ‘There’s a big jackal there’ which then became Doddanekundi in the Kannada usage

40. RT Nagar: Named after Rabindranath Tagore

*******

ನಿರ್ವಾಣ ಸಂಸ್ಕೃತ:निर्वाणಪಾಳಿ:निब्बानಪ್ರಾಕೃತ:णिव्वाणನಿರ್ವಾಣವು ಸಂಕಷ್ಟ(ಅಥವಾ ದುಃಖ)ದಿಂದ ಮುಕ್ತವಾಗಿರುವ ಸ್ಥಿತಿ ಎಂದು ಶ್ರಮಣ ಚಿಂತನೆಯಲ್ಲಿದೆ. ಪಾಲಿಯಲ್ಲಿ "ನಿಬ್ಬಾನಾ"ಎಂದರೆ "ನಂದಿಸುವುದು"-ಅಸೂಯೆ,ದ್ವೇಷ ಮತ್ತು ಅಜ್ಞಾನದ ಬೆಂಕಿಗಳನ್ನು ನಂದಿಸುವುದು.[೧] ಇದು ಬೌದ್ಧಧರ್ಮದಲ್ಲಿ ಶ್ರೇಷ್ಟ ಸತ್ಯವಾಗಿದ್ದು,ಜೈನಧರ್ಮದಲ್ಲಿ ಮುಖ್ಯ ಪರಿಕಲ್ಪನೆಯಾಗಿದೆ.

***

 ಕನ್ನಡ ಕಸ್ತೂರಿ ವರ್ಣಮಾಲೆಗಳನ್ನು ಮುದ್ದು ,ಮುತ್ತಾಗಿ ಜೋಡಿಸಿದ್ದಾರೆ..


ಅ ರೆ ರೇ

ಆ ತ್ಮೀಯ ಬಂಧುಗಳೇ

ಇ ದೀಗ ನಮ್ಮನ್ನು ಕಾಡುತ್ತಿರುವ

ಈ ಸಮಸ್ಯೆಯನ್ನು ಬಗೆಹರಿಸುವ

ಉ ಪಾಯ ನಮ್ಮಲ್ಲೇ ಇದೆ

ಊ ರ/ದೇಶದ 

ಋ ಣ ತೀರಿಸಲು ಸದವಕಾಶ.

ಎ ಲ್ಲೂ ಹೋಗದೆ

ಏ ಳು ಬೀಳುಗಳನ್ನು ಸಹಿಸಿ

ಐ ಷಾರಾಮಗಳನ್ನೆಲ್ಲ ತೊರೆದು

ಒ ಡನಾಡಿಗಳೊಂದಿಗೆ ಬೆರೆತು

ಓ ದುವ / ಬರೆಯುವ

ಔ ದಾರ್ಯವನ್ನು ಮೆರೆದರೆ

ಅಂ ಕುಶವ ಹಾಕಿ ಈ

ಅಹಂ ಕಾರಿ ವೈರಾಣುವನ್ನು ತಡೆಯಬಹುದು


ಕ ಠಿಣವಾದ ಈ ಪರಿಸ್ಥಿತಿಯಲ್ಲಿ

ಖಂ ಡಿತವಾಗಿಯೂ

ಗ ಮನವಿಟ್ಟು ನಮ್ಮ

ಘ ನ ಸರ್ಕಾರದ

ಜ್ಞಾ ಪನೆಗಳನ್ನು ಪಾಲಿಸೋಣ

ಚ ಮತ್ಕಾರಗಳನ್ನು ನಿರೀಕ್ಷಿಸದೆ

ಛ ಲದಿಂದ ಹೋರಾಡಿ

ಜ ನಜಂಗುಳಿಯಿಂದ ದೂರವಿರುತ್ತ,  ಸೂರ್ಯನ 

ಝ ಳವನ್ನು ಆನಂದಿಸುತ್ತಾ, 

ತ ಜ್ಞ ರ ಮಾತಿಗೆ ಬೆಲೆ ಕೊಟ್ಟು

ಟ ಲಾಯಿಸುತ್ತಾ ಅತ್ತಿಂದಿತ್ತ ಮನೆಯಲ್ಲೇ

ಠ ಸ್ಸೆ ಹೊಡೆಸಿಕೊಂಡವರನ್ನು ದೂರವಿರಿಸಿ,

ಡಂ ಬಾಚಾರಕ್ಕೆ ಎಡೆಗೊಡದೆ

ಢ ವಗುಟ್ಟುವ ಎದೆಯನ್ನು ಸ್ಥಿಮಿತ ದಲ್ಲಿಇರಿಸೋ ಣ . ಹೀಗಿದ್ದಲ್ಲಿ

ತ ಡೆಗಟ್ಟಬಹುದು

ಥ ರಥರ ನಡುಗಿಸುವ ಈ ಮಾರಿಯನ್ನು. 

ದ ಯವಿಟ್ಟು ಈ ಪರಿಸ್ಥಿತಿಯಲ್ಲಿ ನಮ್ಮ

ದಂ ಧೆ ಗೆ ವಿರಾಮ ಕೊಟ್ಟು

ನ ಮ್ಮ ಆರೋಗ್ಯಕ್ಕೆ ಗಮನ ಕೊಟ್ಟು

ಪ ರಿಸರ ಸ್ನೇಹಿಗಳಾಗುತ್ತ ಅದರ

ಫ ಲವನ್ನು

ಬ ರುವ ದಿನಗಳಲ್ಲಿ ಅನುಭವಿಸಿ

ಭ ವಿಷ್ಯವನ್ನು ಭದ್ರ ಪಡಿಸಿಕೊಳ್ಳುವತ್ತ

ಮ ನಸ್ಸನ್ನು ಕೇಂದ್ರೀಕರಿಸೋಣ.

ಯ ಥಾಸ್ಥಿತಿ ತಲುಪುವ ವರೆಗೆ

ರ ಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು

ಲ ವಲವಿಕೆಯಿಂದ ಇರುತ್ತಾ

ವ ದಂತಿಗಳಿಗೆ ಕಿವಿಗೊಡದೆ

ಶ ರೀರದ ಶುಚಿತ್ವ ಕಾಪಾಡಿಕೊಂಡು ಸರ್ಕಾರದ

ಷ ರತ್ತುಗಳನ್ನು ಉಲ್ಲಂಘಿಸದೆ

ಸ ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಾ

ಹ ರಡುತ್ತಿರುವ ಈ ಸಾಂಕ್ರಾಮಿಕ ರೋಗದ

ಉಪಟ ಳ ದ ಅಂತ್ಯಕ್ಕೆ

ಕ್ಷ ಣ ಗಣನೆ ಶುರುವಾಗಲಿ ಎಂದು ಹಾರೈಸೋಣ..‌‌. 

***


ಕರ್ನಾಟಕದ ಪ್ರಥಮಗಳು 


=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.

=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.

=> ಕನ್ನಡ ಭಾಷೆಯ ಮೊದಲ ಪದ : ಇಸಿಲ.

=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.

=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.

=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ

=> ಕನ್ನಡದ ಮೊದಲ ವಂಶ : ಕದಂಬ

=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ

=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.

***

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಜನ ಕನ್ನಡ ಸಾಹಿತಿಗಳು💥

➡️ಕುವೆಂಪು - ಶ್ರೀ ರಾಮಾಯಣ ದರ್ಶನಂ ,1967

➡️ದ.ರಾ ಬೇಂದ್ರೆ - ನಾಕುತಂತಿ ,1973

➡️ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು ,1977

➡️ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ,1983

➡️ವಿ. ಕೃ .ಗೋಕಾಕ್ ಭಾರತ ಸಿಂಧೂ ರಶ್ಮಿ ,1990

➡️ಯು .ಆರ್ .ಅನಂತಮೂರ್ತಿ -  ಸಮಗ್ರ ಸಾಹಿತ್ಯ,1994

➡️ಗಿರೀಶ್ ಕಾರ್ನಾಡ್- ಸಮಗ್ರ ಸಾಹಿತ್ಯ ,1998

➡️ಚಂದ್ರಶೇಖರ್ ಕಂಬಾರ - ಸಮಗ್ರ ಸಾಹಿತ್ಯ, 2010

***

ರಾಜಮನೆತನ ಮತ್ತು ರಾಜಲಾಂಛನ🛑


➡️ಮೌರ್ಯರು      👉 ನವಿಲು

➡️ಶಾತವಾಹನರು  👉 ವರುಣ

➡️ಕದಂಬರು         👉 ಸಿಂಹ

➡️ಗಂಗರು            👉 ಮದಗಜ

➡️ಬಾದಾಮಿ ಚಾಲುಕ್ಯರು 👉 ವರಾಹ

➡️ರಾಷ್ಟ್ರಕೂಟರು      👉 ಗರುಡ

➡️ಕಲ್ಯಾಣಿ ಚಾಲುಕ್ಯರು  👉 ವರಾಹ

➡️ವಿಜಯನಗರ          👉 ವರಾಹ

➡️ಮೈಸೂರು ಒಡೆಯರು 👉 ಗಂಡಬೇರುಂಡ

➡️ಚಿತ್ರದುರ್ಗ ನಾಯಕರು 👉ಆನೆ

➡️ಹೊಯ್ಸಳರು 👉ಹುಲಿಯನ್ನು ಕೊಲ್ಲುತ್ತಿರುವ ಯುವಕ

➡️ಯಲಹಂಕದ ನಾಡಪ್ರಭುಗಳು👉 ಗಂಡಬೇರುಂಡ

➡️ಕೆಳದಿ ನಾಯಕರು 👉ಗಂಡ ಬೇರುಂಡ

➡️ಕರ್ನಾಟಕದಲ್ಲಿ ಮರಾಠರು 👉ಖಡ್ಗ ಮತ್ತು ಕುದುರೆ

***

.ಭೈರಪ್ಪನವರ ಕೃತಿಗಳಿಂದ ಕರೋನ ಅಡ್ಡಪರಿಣಾಮಗಳ ವರ್ಣನೆ...

( ಅವರ ಕಾದಂಬರಿಗಳ ಹೆಸರುಗಳನ್ನು ಹೆಣೆದು ಮಾಡಿದ ವರ್ಣನೆ )

ವಿಶ್ವದಲ್ಲೆಡೆ ಬಂದೇ ಬಿಟ್ಟಿದೆ, ಕರೋನಾದ "ಪರ್ವ" ಕಾಲ....

ಅದಕ್ಕೆ , ಅಪಾರ ಜನಗಳು ಬಲಿಯಾಗುತ್ತಿರುವುದೇ "ಸಾಕ್ಷಿ"...

ಹೇಗಾದರೂ ಮಾಡಿ ಈ ಮಹಾ ಸಂಕಟವನ್ನು "ದಾಟ" ಲೇ ಬೇಕಾಯ್ತು...

ಅದಕ್ಕೆ,ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನಗಳು ಒಬ್ಬರಿಂದೊಬ್ಬರು "ದೂರ ಸರಿದರು"

ಹಾಗೂ, ಎಲ್ಲೂ ಸುತ್ತಾಡದೇ ತಮ್ಮ ತಮ್ಮ ಮನೆಯಲ್ಲೇ ೬ ತಿಂಗಳು "ನೆಲೆ" ನಿಂತರು...

ಹಲವಾರು ಮನೆಗಳಲ್ಲಿ ಕರೋನ ಬಾಧಿಸಿ , "ಗೃಹಭಂಗ" ಉಂಟಾಯ್ತು..

ಅಗಾಧ ಸಮಸ್ಯೆಗಳು, ರೋಗಗಳು "ನಾಯಿನೆರಳಿ" ನಂತೆ ಹಿಂಬಾಲಿಸಿದವು...

ಈ ಕಾಲದಲ್ಲಿ, ವಿವಾಹಕ್ಕಾಗಿ ಸೂಕ್ತ ಗಂಡು, ಹೆಣ್ಣಿನ  "ಅನ್ವೇಷಣೆ" ಗಳು ಎಲ್ಲೆಲ್ಲೂ ನಡೆದವು...

ಸಕಾಲದಲ್ಲಿ ಮದುವೆಗಳೇ  ನಡೆಯದೇ, "ವಂಶವೃಕ್ಷ" ಬೆಳೆಯುವುದೇ ಕಷ್ಟವಾಯ್ತು....

ದೇಶದ "ಅಂಚಿ" ನಲ್ಲಿ ಯುದ್ಧದ ಭೀತಿ ಬೇರೆ ಶುರುವಾಯ್ತು....

ಮೂರ್ಮೂರು "ಗ್ರಹಣಗಳು" ಬೇರೆ ಒಟ್ಟಿಗೆ ಕಾಡಿದವು....

ಎಲ್ಲೆಲ್ಲೂ ಅತಿವೃಷ್ಟಿಯಾಗಿ "ಜಲಪಾತಗ" ಳು ಭೋರ್ಗರೆದವು..

ಆದರೂ ಜನಗಳು, ನಮೋ ಪರ "ಮತದಾನ" ಮಾಡಿದ್ದು ಸಾರ್ಥಕವಾಯ್ತು ಅಂದ್ರು....

ಹೊಸ ,ಹೊಸ ವ್ಯಾಕ್ಸೀನು ಕಂಡು ಹಿಡಿಯಲು  "ಕವಲು" ದಾರಿಗಳು ಹುಟ್ಟಿದವು...

ಲಸಿಕೆಗಳು ಸಫಲವಾಗಬಹುದೆಂಬ ಹೊಸ  "ಬೆಳಕು ಮೂಡಿತು" ...

ಭೀಮಕಾಯ ಹೊಂದಿದ್ದವರೂ ಕೊರೋನಾದಿಂದ ಪಾರಾಗದೇ ಧರ್ಮಶ್ರೀ ಗಳ ಮೊರೆ ಹೋಗಬೇಕಾಯಿತು. 

ಇದನ್ನು ನಿರಾಕರಣೆ ಮಾಡಿದವರು ತಬ್ಬಲಿಯು ನೀನಾದೆ ಮಗನೆ ಎಂದು ತಮ್ಮನ್ನು ತಾವೇ ಹಳಿದುಕೊಳ್ಳುವಂತಾಯಿತು.

 ಇವರ ಮಂದ್ರ ಸ್ಥಾಯಿಯ ಗೋಳು ಇಡೀ ಆವರಣ ದಲ್ಲಿ ತಂತು ಗಳಾಗಿ ಪಸರಿಸಿದರೂ ನೆಲೆ ಸಿಕ್ಕದಾಯಿತು.......

ವಿಶ್ವಾದ್ಯಂತ,  ಸಮುದ್ರ, ವಿಮಾನ "ಯಾನ" ಗಳೇ  ನಿಂತುಹೋದವು...

ಇವೆಲ್ಲದರ "ಉತ್ತರಕಾಂಡ" ಹೇಗಿದೆ ಎಂದು ನೋಡಲು ಇನ್ನೂ ಬಹಳ ಕಾಲ ಕಾಯಬೇಕು...!!!!

***

puja in kannada at Hiremagalur village by Kannan


ನಾವು ನಮ್ಮ ಮಾತೃಭಾಷೆ ಕನ್ನಡಕ್ಕೆ ಮಾಡುವ ಅಪಮಾನಗಳ ಪಟ್ಟಿ ಇಲ್ಲಿವೆ


😹 ಹೆಂಡತಿಯನ್ನು, " ವೈಫ್ " ಅಂತೀವಿ,

ಜೀವನವನ್ನು,"ಲೈಫ್"ಅಂತೀವಿ

ಚಾಕುವನ್ನು" ನೈಫ್ " ಅಂತೀವಿ,

ಕನ್ನಡವನ್ನು ಮರೆ ಮಾಚಿ

ನಿಂತಿ-ದ್ದೀವಿ


😹 ಅತ್ತೆಯನ್ನು"ಆಂಟಿ"

ಅಂತೀವಿ,

ಅವರ ಮಗಳನ್ನು " ಸ್ವೀಟಿ " ಅಂತೀವಿ,

ಕರ್ತವ್ಯವನ್ನು " ಡ್ಯೂಟಿ " ಅಂತೀವಿ,

ಪ್ರೇಮಿಯನ್ನು " ಬ್ಯೂಟಿ " ಅಂತೀವಿ.


😹 ಪ್ರೇಮವನ್ನು " ಲವ್ "  ಅಂತೀವಿ,

ಹಸುವನ್ನು " ಕೌ " ಅಂತೀವಿ,

ಇಷ್ಟಪಟ್ಟರೆ " ವಾವ್ " ಅಂತೀವಿ 

ಇದನ್ನೇ ಕನ್ನಡ ಅಂದ್ಕೊಂಡ್ಡಿದ್ದೀವಿ.


😹 ಮುತ್ತನ್ನು " ಕಿಸ್ " ಅಂತೀವಿ,

ಟೀಚರನ್ನು " ಮಿಸ್ " ಅಂತೀವಿ,

ಗೊಜ್ಜನ್ನು " ಸಾಸ್ " ಅಂತೀವಿ,

ಚೆನ್ನಾಗಿದ್ದರೆ " ನೈಸ್ " ಅಂತೀವಿ.


😹 ಕ್ಷಮೆ ಕೇಳಲು " ಸಾರಿ " ಅಂತೀವಿ,

ಸೀರೆಯನ್ನು "ಸ್ಯಾರಿ " ಅಂತೀವಿ,

ಸಾಂತ್ವನಕ್ಕೆ " ಡೋಂಟ್ ವರಿ " ಅಂತೀವಿ  

ಕನ್ನಡದ ಬಾಯಲ್ಲಿ ಆಂಗ್ಲವನ್ನು ನರ್ತಿಸುತ್ತೀವಿ.


😹 ಮುಠಾಳನನ್ನು " ಲೂಸ್ " ಅಂತೀವಿ,

ಅವಕಾಶವನ್ನು "ಚಾನ್ಸ್ " ಅಂತೀವಿ,

ಮೋಹವನ್ನು " ರೊಮಾನ್ಸ್‌ " ಅಂತೀವಿ,

ಕನ್ನಡವನ್ನು ಮರೆಯುತ್ತ ಬಾಳುತ್ತಿದ್ದೀವಿ.


😹 ನಿಶ್ಯಬ್ದವನ್ನು " ಸೈಲೆನ್ಸ್ " ಅಂತೀವಿ,

ಹೊಡೆದಾಟವನ್ನು " ವೈಲೆನ್ಸ್" ಅಂತೀವಿ,

ತಕ್ಕಡಿಯನ್ನು " ಬ್ಯಾಲೆನ್ಸ್ " ಅಂತೀವಿ 

ಕನ್ನಡವನ್ನು ನಮ್ಮಲ್ಲೇ ನುಂಗಿಕೊಂಡಿದ್ದೀವಿ.


ಈಗ ಹೇಳಿ ಕನ್ನಡವನ್ನು ಮರೆಮಾಚುತ್ತಿರುವರು ಯಾರು

***



No comments:

Post a Comment