SEARCH HERE

Sunday, 11 April 2021

ಚೈತ್ರ ನವರಾತ್ರಿಯ ವೈಶಿಷ್ಟ್ಯ chaitra navaratri

in north Bharat navaratra is for yugadi day to ramanavami day 

ಚೈತ್ರ ನವರಾತ್ರಿಯ ವೈಶಿಷ್ಟ್ಯ


ಚೈತ್ರ ಶುದ್ಧ ಪ್ರತಿಪದದಿಂದ ಚೈತ್ರ ಶುದ್ಧ ನವಮಿವರೆಗೂ "ರಾಮನವರಾತ್ರೋತ್ಸವ" ಅಥವಾ "ವಸಂತ ನವರಾತ್ರಿ" ನಡೆಯುತ್ತದೆ.   ಶ್ರೀರಾಮಚಂದ್ರ ಚೈತ್ರ ಶುದ್ಧ ನವಮಿಯಂದು ಕೌಸಲ್ಯಾ - ದಶರಥರ ಮೂಲಕ ಪ್ರಕಟನಾದ.  

ಚೈತ್ರ ಮಾಸ ಹೆಸರು ಬರಲು ಕಾರಣ ಆ ಮಾಸದ ಹುಣ್ಣಿಮೆ ಅಥವಾ ಮಾರನೇ ದಿನ ಚಿತ್ತಾ ನಕ್ಷತ್ರ ವಿರುತ್ತದೆ.   ಅದೇ ರೀತಿ ಪ್ರತಿಮಾಸದಲ್ಲೂ ಆ ಆ ನಕ್ಷತ್ರಗಳು ಆ ಮಾಸದ ಹುಣ್ಣಿಮೆ ಸನಿಹದಲ್ಲಿ ಬರುತ್ತದೆ.  ವೈಶಾಖ ಮಾಸದಲ್ಲಿ ವಿಶಾಖ, ಜ್ಯೇಷ್ಠ ಮಾಸದಲ್ಲಿ ಜ್ಯೇಷ್ಠ, ಹೀಗೆ ಬರುತ್ತದೆ.

ಚೈತ್ರ ಮಾಸ ಬಂತೆಂದರೆ ವಸಂತ ಕಾಲದ ಆಗಮನ.   ತರುಲತೆಗಳು ಚಿಗುರಿ ಗಿಡ ಹೊಸ ಹೂವನ್ನು ಫಸಲಿಸುತ್ತದೆ.  ಚೈತ್ರ ಮಾಸ ನಿಯಾಮಕ ಭಗವದ್ರೂಪ ಪದ್ಮಿನಿ ವಿಷ್ಣು. 

ಚೈತ್ರ ಮಾಸವು ಶುಕ್ಲ ಪ್ರತಿಪಾದದಿಂದ ಪ್ರಾರಂಭವಾಗುತ್ತದೆ, ಇದು ಕಲ್ಪಾದಿ ತಿಥಿ. ಚೈತ್ರ ಶುಕ್ಲ ಪ್ರತಿಪದ ದಿನಾಂಕವನ್ನು ಸತ್ಯಯುಗದ ಆರಂಭವೆಂದು ಪರಿಗಣಿಸಲಾಗಿದೆ.  ಈ ದಿನದಂದು ಬೆಳಿಗ್ಗೆ ಅಭ್ಯಂಜನ ಮಾಡಿಕೊಂಡು ದೇವರ ಪೂಜೆ, ತುಳಸೀ ಪೂಜೆ ಮಾಡಿ, ನಂತರ ವರ್ಷದಲ್ಲಿ ಎಲ್ಲಾ ಕಾರ್ಯಗಳಲ್ಲಿ ಕಹಿಅನುಭವದೊಂದಿಗೆ ಸಿಹಿಫಲ ಅನುಭವಿಸುವ ಕುರುಹಾಗಿ, ನಿಂಬಕದಳ (ಬೇವು ಬೆಲ್ಲ ಮೆಣಸು ಜೀರಿಗೆ ಇಂಗು ಮತ್ತು ಅಜವಾನ) ದೇವರಿಗೆ ಸಮರ್ಪಿಸಿ,  ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಮ್||  ಎಂಬ ಮಂತ್ರದಿಂದ ನಾವೂ ಭಕ್ಷಿಸಬೇಕು.  ಸಂಜೆ ಪಂಚಾಂಗ ಶ್ರವಣ ಮಾಡಬೇಕು.  

ಚೈತ್ರ ಶುದ್ಧ ತೃತೀಯ ಪರಮಾತ್ಮ   ಸತ್ಯವ್ರತರಾಜನ ಉದ್ಧಾರಕ್ಕಾಗಿ ಮತ್ಸ್ಯ ರೂಪ ಅವತಾರ ತೋರಿ, ಮತ್ಸ್ಯ ಪುರಾಣವನ್ನು ಉಪದೇಶಿಸಿದನು.  ಹಯಗ್ರೀವಾಸುರನ ಕೊಂದು ಸಮಸ್ತ ವೇದಗಳನ್ನು ಚತುರ್ಮುಖನಿಗೆ ಉಪದೇಶಿಸಿದನು.  

ಚೈತ್ರ ಶುದ್ಧ ತದಿಗೆ - ಗೌರಿ ತದಿಗೆ - ಶಿವ ಪಾರ್ವತಿಯರ ವಿವಾಹವಾದ ದಿನ.   ಸೌಭಾಗ್ಯ, ಸಂತಾನ, ಅವಿಚ್ಛಿನ್ನ ದಾಂಪತ್ಯ ಸುಖ ಈಡೇರಲು ಗೌರಿ ಹರ ಪೂಜೆ ಮಾಡಿ, ಮುತ್ತೈದೆಯರಿಗೆ ಪಾನಕ, ಕೋಸಂಬರಿ, ಹಣ್ಣು, ದಕ್ಷಿಣೆ ತಾಂಬೂಲ ಸಹಿತ ಕೊಟ್ಟು ಆಶೀರ್ವಾದ ಪಡೆಯಬೇಕು.  ಮಾಸ ಪರ್ಯಂತ ಅಂದರೆ ವೈಶಾಖ ಶುದ್ಧ ತೃತೀಯವರೆಗೂ ಮಾಡತಕ್ಕದ್ದು.

ದವನ ಸಮರ್ಪಣೆ -   ರುದ್ರ ದೇವರು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದಾಗ, ತಪಸ್ಸಿಂದ ಹೊರಬಂದು ಪಾರ್ವತಿ ಪರಮೇಶ್ವರರ ಅನುರಕ್ತರಾಗಲು ಲೋಕಕಲ್ಯಾಣಕ್ಕಾಗಿ ಮನ್ಮಥನು ಪಂಚಬಾಣಗಳನ್ನು ರುದ್ರ ದೇವರ ಮೇಲೆ ಪ್ರಯೋಗಿಸಲು, ತಪೋಭಂಗವಾಗಿ ಮೂರನೇ ಕಣ್ಣಿನಿಂದ ಮನ್ಮಥ ದಮನನಾದ. ಕಾಮದಹನದಿಂದ ಪತಿರಹಿತಳಾದ ರತಿದೇವಿ ದು:ಖಿತಳಾಗಿ, ಹರಿದ ಕಣ್ಣೀರು ಒಂದು ಗಿಡ ವಾಯಿತು.  ಆ ಗಿಡವೇ ದಮನ, ಆಡುಭಾಷೆಯಲ್ಲಿ ದವನವಾಗಿದೆ.    ಚೈತ್ರ ಮಾಸದಲ್ಲಿ ದವನವನ್ನು ಪ್ರತಿನಿತ್ಯ ಒಂದೊಂದು ದೇವರಿಗೆ ಸಮರ್ಪಿಸಿದರೆ ವಿಶೇಷ ಫಲ.   ವಿಷ್ಣವಿಗೆ,  ಗೌರಿ ಶಿವನಿಗೆ,  ವಿನಾಯಕನಿಗೆ, ನಾಗನಿಗೆ, ಸ್ಕಂಧನಿಗೆ, ಸೂರ್ಯನಿಗೆ, ದುರ್ಗೆಗೆ, ಮನ್ಮಥನಿಗೆ, ದವನಾರ್ಪಣೆ ಮಾಡಬೇಕು.

ಈ ನವದಿನಗಳಲ್ಲಿ ಶಿವ ಪಾರ್ವತಿ ದೇವಿಗೆ ಉಪದೇಶ ಮಾಡಿದ ವಿಷ್ಣು ಸಹಸ್ರನಾಮ ಸದೃಶವಾದ ಮಂತ್ರ "ಶ್ರೀ ರಾಮ ರಾಮ ರಾಮೇತಿ, ರಮೇ ರಾಮೇ ಮನೋರಮೇ|

ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ||'' ಮಂತ್ರಪಠನದಿಂದ ಅಧಿಕ ಪುಣ್ಯ ಪ್ರಾಪ್ತಿ.

***

No comments:

Post a Comment