SEARCH HERE

Monday 12 April 2021

ರೋಗದ ಉಪಶಾಂತಿಗಾಗಿ ಶ್ರೀ ಹರಿಕಥಾಮೃತ ಸಾರ get well through harikathamruta sara

 ರೋಗದ ಉಪಶಾಂತಿಗಾಗಿ ಶ್ರೀ ಹರಿಕಥಾಮೃತ ಸಾರದಲ್ಲಿ ಶ್ರೀ ದಾಸಾಯ೯ರು ನೀಡಿದ ಈ ಕೆಳಗಿನ ಪದಗಳು ನಿಯಮಿತವಾಗಿ ಪಾರಾಯಣ ಮಾಡಿದಲ್ಲಿ ಬಂದ, ಬರುವ ಆಪತ್ತಿನಿಂದ ಪಾರಾಗಬಹುದು.


1 ನೇ ಸಂಧಿಯ (4)ನೇಯ ನುಡಿ

7 ನೇ ಸಂಧಿಯ (15)ಮತ್ತು(16) ನೇ ನುಡಿ

32 ನೇ ಸಂಧಿಯ (41) ನೇಯ ನುಡಿಗಳನ್ನು ಶ್ರೀ ಧನ್ವಂತ್ರಿ ನಾಮಕ ಬಾಲಗೊಪಾವಿಠ್ಠಲನಲ್ಲಿ  ವಿಶ್ವಾಸವಿಟ್ಟು ಪಠಿಸಿರಿ  

ಶ್ರೀಮಧ್ವೇಶಾಪ೯ಣಮಸ್ತು


1ನೇ ಸಂಧಿ ಮಂಗಳಾಚರಣಸಂಧಿ 4ನೇ ಪದ

 ಆರುಮೂರೆರಡೊಂದು ಸಾವಿರ 

ಮೂರೆರಡು ಶತಶ್ವಾಸ ಜಪಗಳ

ಮೂರುವಿಧಜೀವರೊಳಗಬ್ಜಕಲ್ಪ ಪರಿಯಂತ l

ತಾ ರಚಿಸಿ ಸಾತ್ವರಿಗೆ ಸುಖ, ಸಂಸಾರ ಮಿಶ್ರರಿಗಧಮಜನರಿಗಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ ll



7ನೇ ಸಂಧಿ ಪಂಚತನ್ಮಾತ್ರ ಸಂಧಿ

15ನೇ ಪದ

ಮತ್ತೆ ಚಿದ್ದೇಹದ ಒಳಗೆ ಎಂಭತ್ತು ಸಾವಿರದೇಳುನೂರಿಪ್ಪತ್ತ ಐದು ನೃಸಿಂಹರೂಪದೊಳಿದ್ದು ಜೀವರಿಗೆ l

ನಿತ್ಯದಲಿ ಹಗಲಿರುಳು ಬಪ್ಪವ ಮೃತ್ಯುವಿಗೆ ಮೃತ್ಯುನೆನಿಸುವ ಭೃತ್ಯವತ್ಸಲ ಭಯನಾಶನ ಭಾಗ್ಯ ಸಂಪನ್ನ ll


16 ನೇ ಪದ

ಜ್ವರನೊಳಿಪ್ಪತ್ತೇಳು ಹರನೊಳಗಿರುವನಿಪ್ಪತ್ತೆಂಟು ರೂಪದಿ

ಎರಡುಸಾವಿರದೆಂಟುನೂರಿಪ್ಪತ್ತರೇಳೆನಿಪ l

ಜ್ವರಹರಾಹ್ವಯ ನಾರಸಿಂಹನ ಸ್ಮರಣೆಮಾತ್ರದಿ ದುರಿತರಾಶಿಗಳಿರದೆ ಪೋಪವು ತರಣಿಬಿಂಬವ ಕಂಡ ಹಿಮದಂತೆ ll


32 ನೇ ಸಂಧಿ

41ನೇ ಪದ

ಪಾಮರರನು ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ ನಾಮಗಳಿಗಭಿಮಾನಿಯಾದ ಉಷಾಖ್ಯಾದೇವಿಯರು l

ಭೂಮಿಯೊಳಗುಳ್ಳಖಿಳ ಸಜ್ಜನರಾಮಯಾದಿಗಳಳಿದು ಸಲಹಲಿ ಆ ಮರುತ್ತನ ಮನೆಯ ವೈದ್ಯರ ರಮಣಿ ಪ್ರತಿದಿನದಿ ll

******

No comments:

Post a Comment