Why MEN are important ??👨🏻
1. You can't spell (Madam)👩🏻
without the (Adam)👨🏻in it
2. Neither can you spell (Woman) 👩🏻
without the (Man)👨🏻
3. You also cannot spell (Female)👩🏻
without the (Male)👨🏻
4. Nor spell (She)👩🏻
without the (He)👨🏻
5. You most definitely cannot spell (Mrs)👩🏻
without the (Mr)👨🏻
6. and finally, in prayers, we continue to say (Amen) �
and not (A-women)...
Dedicated to All Wonderful MEN😄
HAPPY INTERNATIONAL MEN'S DAY
*******
ಸ್ತ್ರೀ ಹೇಗಿರಬೇಕೆನ್ನುವುದೇ ಅಲ್ಲ
ಪುರುಷ ಕೂಡಾ ಹೇಗಿರಬೇಕೆನ್ನುವುದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ಕಾರ್ಯೇಷು ಯೋಗೀ ಕರಣೇಷು ದಕ್ಷ:
ರೂಪೇ ಚ ಕೃಷ್ಣ: ಕ್ಷಮಯಾ ತು ರಾಮಃ:
ಭೋಜ್ಯೇಷು ತೃಪ್ತಃ: ಸುಖ ದುಃಖ ಮಿತ್ರಂ
ಷಟ್ಕರ್ಮಯುಕ್ತ: ಖಲು ಧರ್ಮನಾಥ:
1. ಕಾರ್ಯೇಷು ಯೋಗೀ
ಕೆಲಸ ಮಾಡುವುದರಲ್ಲಿ ಒಬ್ಬ ಯೋಗಿಯಂತೆ ಪ್ರತಿಫಲವನ್ನಪೇಕ್ಷಿಸದೆ ಮಾಡಬೇಕು
2.ಕರಣೇಷು ದಕ್ಷ:🏹
ಕುಟುಂಬವನ್ನು ನಡೆಸುವುದರಲ್ಲಿ, ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ, ದಕ್ಷತೆಯಿಂದಲೂ, ಸಂಯಮದಿಂದಲೂ ವ್ಯವಹರಿಸಬೇಕು, ಸಮರ್ಥನಾಗಿರಬೇಕು.
3. ರೂಪೇಚ ಕೃಷ್ಣ:
ರೂಪದಲ್ಲಿ ಕೃಷ್ಣನಂತೆ ಇರಬೇಕು, ಅಂದ್ರೆ ಎಂದಿಗೂ ಉತ್ಸಾಹದಿಂದಲೂ, ಸಂತೋಷದಿಂದಲೂ ಇರಬೇಕು.
4. ಕ್ಷಮಯಾ ತು ರಾಮಃ
ಸಂಯಮದಲ್ಲಿ ರಾಮನಂತೆಯೂ, ಏಕಪತ್ನಿವ್ರತಸ್ತನಂತೆಯೂ, ಮರ್ಯಾದಾ ಪುರುಷೋತ್ತಮನಾಗಿಯೂ, ರಾಮನಂತೆ ಕ್ಷಮಿಸುವ ಗುಣ ಹೊಂದಿರುವವನು ಆಗಿರಬೇಕು.
5. ಭೋಜ್ಯೇಷು ತೃಪ್ತಃ:
ಪತ್ನಿ/ ತಾಯಿ ಬಡಿಸಿದ ಊಟವನ್ನು ಸಂತೃಪ್ತಿಯಿಂದ (ಕೊಂಕು ನುಡಿಯದೆ,)
ಉಣ್ಣಬೇಕು.
6. ಸುಖ ದುಃಖ ಮಿತ್ರಂ
ಪತ್ನಿಯ ಎಲ್ಲಾ ಸುಖ ದುಃಖಗಳಲ್ಲಿ , ಕುಟುಂಬದ ನೋವು ನಲಿವುಗಳಲ್ಲಿ, ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲಾ ಸರಿ-ತಪ್ಪುಗಳನ್ನು ಹಂಚಿಕೊಳ್ಳುವಂತವನಾಗಿರ ಬೇಕು.
ಈ ಎಲ್ಲಾ ಗುಣಗಳುಳ್ಳವನು ಆದರ್ಶ ಪುರುಷನಾಗುತ್ತಾನೆ.
*****
ಪತ್ನಿಯ ಒಂಬತ್ತು ಅವತಾರಗಳು ..
1.ಬೆಳಗ್ಗೆ ಮನೆ ಕೆಲಸದಲ್ಲಿ ಮಗ್ನಳು.
ಆಗ... ಅಷ್ಟಭುಜಾ
2.ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವಳು
ಆಗ..ಸರಸ್ವತಿ..
3. ಮನೆಯ ಖರ್ಚಿನಲ್ಲಿ ದುಡ್ಡು ಉಳಿಸುವಳು
ಆಗ..ಮಹಾಲಕ್ಷ್ಮಿ
4.ಮನೆಯಲ್ಲಿ ಗೃಹಿಣಿ ಯಾಗಿ ಅಡಿಗೆ ಮಾಡುವಳು.
ಆಗ...ಅನ್ನಪೂರ್ಣ.
5. ಮನೆಯಲ್ಲಿಯ ಸಮಸ್ಯೆ ಗಳನ್ನು ನಿವಾರಿಸುವಳು
ಆಗ..ಪಾರ್ವತಿ .
6. ಮನೆಯಲ್ಲಿ ಯಾರಾದರೂ ಏನಾದರೂ ತಪ್ಪು ಮಾಡಿದರೆ..
ಆಗ.. ದುರ್ಗಾ..
7. ಪೇಟೆಯಿಂದ ಪತಿ ಏನಾದರೂ ತಪ್ಪು ವಸ್ತು ತಂದರೆ..
ಆಗ .. ಕಾಳಿ ಮಾತಾ..
8. ಪತಿ ದೇವರು ತವರು ಮನೆ ಬಗ್ಗೆ ಏನಾದರೂ ಅಸಂಬದ್ಧ ಮಾತಾಡಿದರೆ..
ಆಗ..ಮಹಿಷಾಸುರ ಮರ್ದಿನಿ
9.ಗಂಡ ತಪ್ಪಿ ಏನಾದರೂ ಇನ್ನೊಬ್ಬ ಹೆಣ್ಣಿನ ಗುಣಗಾನ ಮಾಡಿದ್ರೆ..
ಆಗ..ರಣಚಂಡಿ..
ಒಳ್ಳೆಯ ನಶೀಬವಾನ ಗಂಡಂದಿರೇ,
ಮನೆ ಯಲ್ಲಿ ಯೇ ಕುಳಿತು ದೇವಿಯ 9 ಅವತಾರ ದರ್ಶನ
ಮಾಡಬಹುದು. ನವರಾತ್ರಿ ಉತ್ಸವ ಶುರು.. ಹಾರ್ದಿಕ ಶುಭಾಶಯಗಳು.
*****
ನಾನು ಒಬ್ಬ ಹಿರಿಯರನ್ನು ಕೇಳಿದೆ -
" ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು?''
ಹಿರಿಯರು ಹೇಳಿದರು -
" ಮೊದಲು ನೀನು ನಿನ್ನ ಕೋಣೆಯನ್ನು ತಪಾಸಣೆ ಮಾಡಿ ಅರ್ಥಮಾಡಿಕೊ..."
ಹಿರಿಯರ ಮಾತಿನಂತೆ ನಾನು ನನ್ನ ಕೋಣೆಯಲ್ಲೆಲ್ಲಾ ಕಣ್ಣೋಡಿಸಿದಾಗ ನನ್ನ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿತು...
ಮನೆಯ ಮೇಲ್ಛಾವಣಿ ಹೇಳಿತು -
" ನಿನ್ನ ಗುರಿ ಎತ್ತರವಾಗಿರಬೇಕು..."
ಫ್ಯಾನ್ ಹೇಳಿತು -
" ಯಾವಾಗಲೂ ಕೂಲ್ ಆಗಿರು..."
ಗಡಿಯಾರ ಹೇಳಿತು -
" ಸಮಯವು ಬೆಲೆಯುಳ್ಳದ್ದಾಗಿದೆ..."
ಕ್ಯಾಲೆಂಡರ್ ಹೇಳಿತು -
" ದಿನಗಳು ಅತ್ಯಮೂಲ್ಯವಾದದ್ದು ದಿನವನ್ನು ಸದುಪಯೋಗಪಡಿಸಿಕೊ....."
ಪರ್ಸ್ ಹೇಳಿತು -
" ಮುಂದಿನ ಭವಿಷ್ಯಕ್ಕಾಗಿ ಈಗಿನಿಂದಲೇ ಶೇಖರಿಸಿ ಇಡು....
ಕನ್ನಡಿ ಹೇಳಿತು -
" ನೀನು ಮೊದಲು ನಿನ್ನನ್ನು ಅರ್ಥ ಮಾಡಿಕೊ..."
ದೀಪ ಹೇಳಿತು -
" ಇತರರಿಗೂ ಬೆಳಕನ್ನು ಹರಡು..."
ಗೋಡೆ ಹೇಳಿತು -
" ಕೈಲಾದಷ್ಟು ಇತರರ ಭಾರವನ್ನು ಹೋರು..."
ಕಿಟಕಿ ಹೇಳಿತು -
" ನಿನ್ನ ನೋಟ ದೀರ್ಘ ದೂರದವರೆಗೂ ವ್ಯಾಪಿಸುವಂತಿರಲಿ...."
ನೆಲ ಹೇಳಿತು -
" ಭೂಮಿಯನ್ನು ಪ್ರೀತಿಸು..."
ಮೆಟ್ಟಿಲು ಹೇಳಿತು -
" ಮುಂದೆ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಶ್ರದ್ಧೆಯಿಂದ ಇಡು...."
*******
ಹೆಣ್ಣು : ಸಂಪೂರ್ಣ ವಿಕಸಿತ ಪರಿಪೂರ್ಣ ಸೃಷ್ಟಿ
ಹುಟ್ಟಿನಿಂದ ಸಾವಿನತನಕ ಪುರುಷ ಭಾವನಾತ್ಮಕವಾಗಿ ಹೆಣ್ಣನ್ನು ವಿಪರೀತ ಅವಲಂಬಿಸಿರುತ್ತಾನೆ. ಪುರುಷರು ಬಾಲ್ಯದಲ್ಲಿ ತಾಯಿಯನ್ನು, ಯೌವನದಲ್ಲಿ ಪತ್ನಿಯನ್ನು, ವೃದ್ಧಾಪ್ಯದಲ್ಲಿ ಮಕ್ಕಳನ್ನು (ಮಾನಸಿಕವಾಗಿ ಹೆಣ್ಣುಮಕ್ಕಳನ್ನು) ಅವಲಂಬಿಸಿರುತ್ತಾರೆ. ಈ ಅವಲಂಬನೆ ಆರ್ಥಿಕ ಅಥವಾ ರಕ್ಷಣಾ ಸಂಗತಿಗಳಿಗಾಗಿ ಅಲ್ಲ. ಶುದ್ಧ ಭಾವನಾತ್ಮಕವಾದದ್ದು. ~ ಗಾಯತ್ರಿ
woman
ಶಕ್ತಿ ಇಲ್ಲದೆ ಚಲನೆ ಇಲ್ಲ. ಜಗತ್ತು ನಡೆಯುತ್ತಿರುವುದೇ ಅಗೋಚರ ಶಕ್ತಿಯ ಆಧಾರದ ಮೇಲೆ. ಸೃಷ್ಟಿ ಮೂಲವಾದ ಈ ಶಕ್ತಿಯು ಅದನ್ನು ಪೋಷಿಸುವ, ಸುಸ್ಥಿಯಲ್ಲಿಡುವ ಹೊಣೆಗಳನ್ನು ಮಾತ್ರವಲ್ಲ, ಕಾಲಕಾಲಕ್ಕೆ ಲಯಗೊಳಿಸಿ ಪುನರ್ ಸೃಷ್ಟಿಯನ್ನೂ ಮಾಡುತ್ತದೆ. ಈ ಸೃಷ್ಟಿ ಕ್ರಿಯೆ ನಡೆಯುವ ಬ್ರಹ್ಮಾಂಡವನ್ನು (ಕಾಸ್ಮಿಕ್ ವೂಂಬ್) ಆದಿ ಶಕ್ತಿಯ ಗರ್ಭವೆಂದು ಹೇಳಲಾಗುತ್ತದೆ. ಮತ್ತು ಈ ಆದಿಶಕ್ತಿಯನ್ನು ಹೆಣ್ಣಿನ ರೂಪದಲ್ಲಿ ಪರಿಭಾವಿಸಲಾಗುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ದೇವತೆಗಳ ಆರಾಧನೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ನಮ್ಮ ಜನಪದಗಳು ಗ್ರಾಮದೇವತೆಯ ರೂಪದಲ್ಲಿ ಮಾತೃಶಕ್ತಿಯನ್ನು ಪೂಜಿಸುತ್ತವೆ. ನವರಾತ್ರಿಯ ಸಂದರ್ಭದಲ್ಲಿ ಶಕ್ತಿ ಆರಾಧನೆಯ ವೈಭವದ ಉತ್ತುಂಗವನ್ನು ನಾವು ಕಾಣಬಹುದು.
ನಮ್ಮ ಪ್ರಾಚೀನ ಸಾಹಿತ್ಯಗಳು `ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾಃ’ ಎಂದು ಹೇಳಿವೆ. ಇದರರ್ಥ, ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲ್ಪಡುತ್ತಾರೋ (ಪೂಜ್ಯ ಭಾವನೆಯಿಂದ ಕಾಣಲ್ಪಡುತ್ತಾರೋ) ಅಲ್ಲಿ ದೇವತೆಗಳು ನಲಿಯುತ್ತಾರೆ ಎಂದು. ಆದರೆ ಇದು ಕೇವಲ ತೋರುಗಾಣಿಕೆಯ ಮಾತಾಗಬಾರದು. ಕಾರ್ಯರೂಪಕ್ಕೆ ಬರಬೇಕು. ಹೆಣ್ಣು ಸಮಾನವಾಗಿ, ಸ್ವತಂತ್ರವಾಗಿ ಇರುವ ವಾತಾವರಣ ಸಹಜವಾಗಿ ಇರುವಂತಾಗಬೇಕು.
ಪಾತ್ರವೈವಿಧ್ಯದಲ್ಲಿದೆ ಸೌಂದರ್ಯ
ಹೆಣ್ಣಿನ ಸೌಂದರ್ಯ ಇರುವುದು ಆಕೆ ತಳೆಯುವ ಪಾತ್ರ ವೈವಿಧ್ಯದಲ್ಲಿ. ಸಂಬಂಧದ ಯಾವುದೇ ಅಂಕಿತದಲ್ಲಿಯಾದರೂ ಆಕೆ ಪ್ರತಿಯೊಬ್ಬರಿಗೂ ಸಂಪೂರ್ಣ ನ್ಯಾಯ ಸಲ್ಲಿಸುತ್ತಾಳೆ. ಇದು ಮೂಲ ಸ್ತ್ರೈಣ ಗುಣ. ಹೆಣ್ಣಿನ ಈ ಸಾಧ್ಯತೆ ಹುಟ್ಟಿಸುವ ಬೆರಗೇ ಆಕೆಯ ಹೆಚ್ಚುಗಾರಿಕೆ. ಕೌಟುಂಬಿಕ ಸ್ತರದಲ್ಲಿ ಎಲ್ಲವನ್ನು ಸರಿದೂಗಿಸುವ ಆಕೆಯ ಶಕ್ತಿ, ಜಗಜ್ಜನನಿಯ ಜಗತ್‍ನಿರ್ವಹಣಾ ಶಕ್ತಿಯ ಅಂಶಭಾಗವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ನಡುವಿನ ಹೆಣ್ಣುಗಳು ಆದಿ ಶಕ್ತಿಯ ವ್ಯಕ್ತ ರೂಪಗಳು. ಆದ್ದರಿಂದಲೇ ಹೆಣ್ಣು ಏಕಕಾಲಕ್ಕೆ ಅಷ್ಟೊಂದು ನಿಗೂಢವೂ ಸೂಕ್ಷ್ಮವೂ ರೂಕ್ಷವೂ ಆಗಿ ತೋರುವುದು. (ಲಲಿತಾ ಸಹಸ್ರನಾಮದಲ್ಲಿ ಸ್ಥೂಲ – ಸೂಕ್ಷ್ಮ – ಮಹಾರೌದ್ರೀ ಎಂದು ಹೇಳಿರುವುದು ಇದನ್ನೇ). ವಿಶ್ವಸೃಷ್ಟಿಯ ರಹಸ್ಯ ಆದಿಶಕ್ತಿಯ ಗರ್ಭದಲ್ಲಿ ಅಡಗಿರುವಂತೆ, ಜೀವಸೃಷ್ಟಿಯ ರಹಸ್ಯ ಎಲ್ಲ ಜಾತಿಯ ಜಂತುಗಳ ಸ್ತ್ರೀಗರ್ಭದಲ್ಲಿ ಅಡಗಿದೆ. ವಿಜ್ಞಾನ ಅದೆಷ್ಟೇ ಹಂತಗಳಲ್ಲಿ ಭ್ರೂಣದ ಬೆಳವಣಿಗೆಯನ್ನು ತೋರಿಸಿದರೂ ಸೃಷ್ಟಿ ನಿರಂತರತೆಗೆ ಜೀವವೂಡುವ ವಿದ್ಯೆ ಗರ್ಭಕ್ಕಷ್ಟೆ ಗೊತ್ತು. ಪ್ರನಾಳದಲ್ಲಿ ಭ್ರೂಣ ಮೊಳೆಸಿದರೂ ಅದು ಬೆಳೆದು ಜನ್ಮ ತಳೆಯಲು ಹೆಣ್ಣಿನೊಡಲೇ ಬೇಕು.
ಹಾಗೆಂದು ಹೆಣ್ಣಿಗೆ ತಾಯ್ತನವಷ್ಟೇ ಗುರುತಲ್ಲ. ಆಕೆ ಸೃಜನಶೀಲತೆ, ದುಡಿಮೆ, ಆಡಳಿತ, ಕ್ರೀಡೆ – ಹೀಗೆ ಎಲ್ಲ ವಲಯಗಳಲ್ಲೂ ತನ್ನ ಛಾಪು ಹೊಂದಿದ್ದಾಳೆ. ಸಮಾಜ ಇದನ್ನು ಗುರುತಿಸಿ, ಈ ನಿಟ್ಟಿನಲ್ಲಿಯೂ ಸ್ತ್ರೀಯರನ್ನು ಪರಿಗಣಿಸಬೇಕು.
ಮನುಷ್ಯ ಜೀವಿಗಳಲ್ಲಿ ಹೆಣ್ಣಿನೊಂದಿಗಿನ ಭಾವನಾತ್ಮಕ ಬೆಸುಗೆ ಅತ್ಯಂತ ಹೆಚ್ಚಿನದು. ಉಳಿದ ಪ್ರಾಣಿಗಳಲ್ಲೂ ಇದನ್ನು ನೋಡಬಹುದಾದರೂ ಅಭಿವ್ಯಕ್ತಿಯ ಅವಕಾಶ ಇರುವುದರಿಂದ ಇದು ಎದ್ದು ತೋರುತ್ತದೆ. ಹುಟ್ಟಿನಿಂದ ಸಾವಿನತನಕ ಪುರುಷ ಭಾವನಾತ್ಮಕವಾಗಿ ಹೆಣ್ಣನ್ನು ವಿಪರೀತ ಅವಲಂಬಿಸಿರುತ್ತಾನೆ. ಪುರುಷರು ಬಾಲ್ಯದಲ್ಲಿ ತಾಯಿಯನ್ನು, ಯೌವನದಲ್ಲಿ ಪತ್ನಿಯನ್ನು, ವೃದ್ಧಾಪ್ಯದಲ್ಲಿ ಮಕ್ಕಳನ್ನು (ಮಾನಸಿಕವಾಗಿ ಹೆಣ್ಣುಮಕ್ಕಳನ್ನು) ಅವಲಂಬಿಸಿರುತ್ತಾರೆ. ಈ ಅವಲಂಬನೆ ಆರ್ಥಿಕ ಅಥವಾ ರಕ್ಷಣಾ ಸಂಗತಿಗಳಿಗಾಗಿ ಅಲ್ಲ. ಶುದ್ಧ ಭಾವನಾತ್ಮಕವಾದದ್ದು.
ತನ್ನ ಜೀವನದಲ್ಲಿ ಒಬ್ಬ ಹೆಣ್ಣನ್ನು, ಹೆಣ್ಣಿನ ಪ್ರೇಮವನ್ನು ಹೊಂದಿರದ ಗಂಡು ಅತ್ಯಂತ ನೀರಸ ಬದುಕನ್ನು ನಡೆಸುತ್ತಾನೆ. ಅದು ಪತ್ನಿ ಅಥವಾ ಪ್ರೇಯಸಿಯೇ ಆಗಿರಬೇಕೆಂದಿಲ್ಲ. ಯಾವ ಪಾತ್ರದಲ್ಲಾದರೂ ಸರಿ, ಹೆಣ್ಣಿನ ಸಾಂಗತ್ಯ, ಗಂಡಿನ ಆಂತರ್ಯದಲ್ಲಿ ಮಾರ್ದವವನ್ನು, ಕೋಮಲತೆಯನ್ನು ತುಂಬುತ್ತದೆ. ಪ್ರೇಮಿಕೆಯ ರೂಪದಲ್ಲಂತೂ ಹೆಣ್ಣಿನ ಸಾಂಗತ್ಯ ಒಂದು ಅನುಭಾವ ರಸ. ಅದರಿಂದ ದೂರವಿದ್ದರೆ ಮಾತ್ರ ಅದು ವೈರಾಗ್ಯ, ಸನ್ಯಾಸ.
ಪ್ರಾಚೀನ ಹಿಂದೂ ಶಾಸ್ತ್ರಗಳಲ್ಲಿ ಹೆಣ್ಣಿಗೆ ಸನ್ಯಾಸ ನೀಡುವ ಪದ್ಧತಿ ಇರಲಿಲ್ಲ. ಸ್ತ್ರೀ ಸಹವಾಸದಿಂದ – ಪ್ರಭೆಯಿಂದ ದೂರವಿರುವುದು ಕೂಡ ವೈರಾಗ್ಯದ ನಿಯಮವಾಗಿದ್ದು, ಸ್ತ್ರೀ ಹೇಗೆ ತಾನೆ ತನ್ನ ಅಸ್ತಿತ್ವದಿಂದ, ಜೀವಸಹಜ ರಸ ಗುಣದಿಂದ ದೂರವಿರಬಲ್ಲಳು? ಬಹುಶಃ ಈ ಕಾರಣದಿಂದಲೇ ಹೆಣ್ಣುಮಕ್ಕಳಿಗೆ ಸನ್ಯಾಸ ನೀಡುವ ಬಗ್ಗೆ ಯೋಚನೆಯನ್ನೇ ನಮ್ಮ ಪೂರ್ವಜರು ಮಾಡಿರಲಿಕ್ಕಿಲ್ಲ. ಮುಂದೆ ಬುದ್ಧ ಆಧ್ಯಾತ್ಮಿಕ ಸಾಧನೆಯಲ್ಲಿ ಸಮಾನತೆ ತರಲಿಕ್ಕಾಗಿ ಈ ಪದ್ಧತಿ ಪರಿಚಯಿಸಿದ. ಅದೇ ಕಾಲಕ್ಕೆ ಜೈನ ಮತದಲ್ಲೂ ಸಾಧ್ವಿಯರ ದೀಕ್ಷೆ ವ್ಯಾಪಕಗೊಳ್ಳತೊಡಗಿತು. ಆಧುನಿಕ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲೂ ಸನ್ಯಾಸಿನೀ ಪರಂಪರೆಯನ್ನು ಜನಪ್ರಿಯಗೊಳಿಸಿದರು.
ಪರಿಪೂರ್ಣತೆ
ಸ್ತೀಶಕ್ತಿ ಸ್ತುತಿಯ ಉತ್ತುಂಗವನ್ನು ಕೇಳಬೇಕೆಂದರೆ ಲಲಿತಾ ಸಹಸ್ರನಾಮ ಹಾಗೂ ಸೌಂದರ್ಯ ಲಹರಿಗಳನ್ನು ಓದಬೇಕು. ಹಿಂದೂ ಧರ್ಮದ ಮುಖ್ಯ ಮೂರು ದೇವತೆಗಳು ಪ್ರತ್ಯೇಕವಾಗಿ ಮೂರು ಜವಾಬ್ದಾರಿಗಳಿಗೆ ಭಾಜನರಾಗಿದ್ದಾರೆ. ಆದರೆ ಜಗಜ್ಜನನಿಯೆಂದು ಕರೆಯಲ್ಪಡುವ ಆದಿಶಕ್ತಿಯು ಸೃಷ್ಟಿ – ಸ್ಥಿತಿ – ಲಯಕಾರ್ಯಗಳನ್ನು ತಾನೊಬ್ಬಳೆ ನಡೆಸುತ್ತಾಳೆ! ಈಕೆಯ ನಗೆ ಮಾತ್ರದಿಂದ ಸೃಷ್ಟಿಯೂ ಕೋಪದ ಹೂಂಕಾರದಿಂದ ಪ್ರಳಯವೂ ಉಂಟಾಗುತ್ತದೆ ಎಂದು ಭಕ್ತ ಕವಿಗಳು ಬಣ್ಣಿಸುತ್ತಾರೆ. ಇಂತಹ ಬಣ್ಣನೆಗಳಿಗೇನಿದ್ದರೂ ಸ್ತ್ರೀದೇವತೆಯಷ್ಟೆ ಭಾಜನಳಾಗಬಲ್ಲಳು! (ಲೌಕಿಕ ನೆಲೆಯಲ್ಲೂ ಹೆಣ್ಣಿನ ನಗುವಿಂದ ಜೀವನೋತ್ಸಾಹ, ಕೋಪದಿಂದ ಮರಣ ತಾಪ ಎಂದು ಹಾಡಿದ್ದಾರೆ ಕವಿಗಳು).
ಮಾನವ ಜೀವಜಾತಿಯ ಹೆಣ್ಣನ್ನು ಅತ್ಯುನ್ನತ ಪರಿಪೂರ್ಣ ಸೃಷ್ಟಿ ಎನ್ನಲಾಗುತ್ತದೆ. ಆದಿ ಶಕ್ತಿಯನ್ನು ಹೆಣ್ಣು ಎನ್ನುವುದೂ ಆ ಶಕ್ತಿಯ ಪರಿಪೂರ್ಣತೆಯ ಕಾರಣದಿಂದಲೇ. ಹೆಣ್ಣಿನ ಬಾಹ್ಯ ರೂಪ, ಸೌಷ್ಟವದ ಪ್ರಶ್ನೆ ಇಲ್ಲಿ ಉದಿಸುವುದಿಲ್ಲ. ಕೆನ್ನಾಲಗೆ ಹೊರಚಾಚಿ, ಅರೆನಗ್ನಳಾಗಿ, ರುಂಡ ಮಾಲೆ ಧರಿಸಿದ ಕಾಳೀ ಚಿತ್ರವನ್ನು ಪ್ರೇಮ ಭಕ್ತಿಗಳಿಂದ ಪೂಜಿಸುವುದಿಲ್ಲವೆ? ಇದರ ಹಿಂದೆಯೂ ಆಕೆ ಜಗಜ್ಜನನಿಯೆಂಬ ಭಾವವೇ ಮುಖ್ಯವಾಗಿರುತ್ತದೆ. ಈ ಭಾವನೆಗಳು ಕೇವಲ ಪೂಜಾರಾಧನೆಗೆ, ಅವಲಂಬನೆಗಳಿಗೆ ಸೀಮಿತವಾಗದೆ, ಶಕ್ತಿ ಸ್ವರೂಪವಾದ ಸ್ತ್ರೀ ಸಂಕುಲವನ್ನು ಗೌರವದಿಂದ ನಡೆಸಿಕೊಳ್ಳುವ ಮೂಲಕ ಅಭಿವ್ಯಕ್ತವಾಗಬೇಕು. ಆಗಷ್ಟೆ ಹೆಣ್ಣಿಗೆ ಸಂಬಂಧಿಸಿದ ಯಾವುದೇ ಆಚರಣೆಯು ಸಾರ್ಥಕಗೊಳ್ಳುವುದು.
***
ನಮ್ಮ ಹಣೆಯ ಮೇಲೆ ಕುಂಕುಮ ಇದೆ ಅಲ್ಲಿ ಲಕ್ಷ್ಮೀ ನಾರಾಯಣರ ಸನ್ನಿಧಾನ ಬಂತು , ಕೆನ್ನೆಗೆ ಅರಿಷಿಣ ದ ಲೇಪನ ಇದೆ ಅಲ್ಲಿ ಹಳದಿ ಹರಿದ್ರಾ ದೇವಿ ಮುಖಕಾಮಿನಿ ಸೌಭಾಗ್ಯದ ಪ್ರತೀಕ ಅಲ್ಲಿ ಪಾರ್ವತಿಯ ಸನ್ನಿಧಾನ ಬಂತು ,
ಕಣ್ಣಿಗೆ ಕಾಡಿಗೆ ಇದೆ ಅಲ್ಲಿ ಭಾರತಿ ರತಿದೇವಿಯ ಸನ್ನಿಧಾನ ಮುಡಿದಿರುವ ಹೂವಿನಲ್ಲಿ ಉಮಾಮಹೇಶ್ವರ ಸನ್ನಿಧಾನ ,ಭಾರತೀಯರ ಪ್ರತೀಕವಾದ ಸೀರೆ ಇದೆ ಸೆರಗಿನಲ್ಲಿ ಸೀತಾ ದೇವಿ ಸನ್ನಿಧಾನ , ನೆರಗೆಯಲ್ಲಿ ತಾರೆಯ ಸನ್ನಿಧಾನ ಸೀರೆಯ ಅಂಚಿನಲ್ಲಿ ದ್ರೌಪದಿಯ ಸನ್ನಿಧಾನ ಕುಪ್ಪಸದಲ್ಲಿ ಅಹಲ್ಯೆಯ ಸನ್ನಿಧಾನ ಕುಪ್ಪಸದ ಅಂಚಿನಲ್ಲಿ ಮಂಡೋದರಿ ವಾಸ ,ಕೊರಳಲ್ಲಿ ಮುತ್ತೈದೆ ಪ್ರತೀಕ ಮಾಂಗಲ್ಯ , ಮುಗಿನಲ್ಲಿ ಮುಗುತಿ ಕಿವಿಯಲ್ಲಿ ಓಲೆ ಇವು ಐದು ಮುತ್ತುಗಳು , ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಹೆಣ್ಣು ಸುಂದರಿನೆ. ಒಂದು ಸಲ ನೀವು ಹಣೆತುಂಬ ಕುಂಕುಮ ತಲೆಯಲ್ಲಿ ಮಾಲೆ ಮುಡಿದು ನೋಡಿ ಸೌಂದರ್ಯ ಎಲ್ಲಿದೆ ಅಂತ ಹೇಳುತ್ತೆ ..... ಸೌಂದರ್ಯ ಇರುವುದು ನಮ್ಮ ಮುಖದಲ್ಲಿ ಅಲ್ಲ ಅಚ್ಚುಕಟ್ಟಾಗಿ ಪಾಲಿಸಿದ ನಮ್ಮ ಸಂಪ್ರದಾಯದಲ್ಲಿ , ನಾವು ಪಾಲಿಸಿದ ಸಂಸ್ಕಾರ ನಾಲ್ಕು ಜನ ನಮಗೆ ಕೈಯೆತ್ತಿ ನಮಸ್ಕರಿಸುವಂತೆ ಮಾಡುತ್ತೆ , ಇದು ನಮ್ಮ ಸಂಸ್ಕೃತಿ ನಮ್ಮ
***
ಅ - ಅಂದದ ಹೆಂಡತಿಯನ್ನು ಅನುಮಾನಿಸಬೇಡಿ.
ಆ - ಆರಾದಿಸಿ ಆದರೆ ಅಳಿಸ ಬೇಡಿ.
ಇ - ಇರುವೆ ನಿನ್ನ ಜೊತೆಎನ್ನಿ. ಇರಬೇಡ ಎನ್ನಬೇಡಿ.
ಉ - ಉದ್ದಾರ ಮಾಡುನಮ್ಮನ್ನ ಎನ್ನಿ ಉರುಗುಟ್ಟ ಬೇಡಿ.
ಊ - ಊರಿಗೆ ಹೋಗಿ ಬಾ ಎನ್ನಿ ಮುಖ ಊದಿಸಬೇಡಿ.
ಋ - ಋಣಾನುಭಂಧ ಬೆಸೆಯಿರಿ. ಋಣಹರಿದು ಕೊಳ್ಳ ಬೇಡಿ.
ಎ -ಎಷ್ಟು ಕಷ್ಟಪಡುವೆ ಎನ್ನಿ.ಎಗರಾಡಬೇಡಿ.
ಏ - ಏ ನಮ್ಮ ಎನ್ನಿ ಏನೆಲೇ ಎನ್ನಬೇಡಿ.
ಐ - ಐಲು (ಹುಚ್ಚು) ಎನ್ನಬೇಡಿ.ಐಲವ್ ಯು ಎನ್ನಿ.
ಒ -ಒಂದೇ ನಾವೆಲ್ಲರೂ ಎನ್ನಿ.ಒದ್ದಾಡಬೇಡಿ.
ಓ - ಓಡಾಡಲುಬಿಡಿ ಓಡಿಸಬೇಡಿ.
ಔ - ಔದಾರ್ಯ ತೋರಿಸಿ.ಔಡುಕಚ್ಚಬೇಡಿ.
ಅಂ -ಅಂಗೀಕರಿಸಿ.ಆಸಡ್ಡೆ ಮಾಡಬೇಡಿ.
ಅಃ- ಅಃ (ಹಾ) ಎನ್ನಿ,ಹಂಗಿಸಬೇಡಿ
ಕ - ಕನಿಕರಿಸಿ. ಕಂಗೆಡಿಸಬೇಡಿ
ಖ-ಖಡಕ್ ಆಗಿರಿ. ಋಂಡಿಸ ಬೇಡಿ.
ಗ. - ಗಂಡನಾಗಿರಿ. ಗಡುಸಾಗಿರಬೇಡಿ
ಘ - ಘ(ಗ)ರ್ವದಿಂದಿರಿ. ಘರ್ಜಿಸಬೇಡಿ.
ಚ - ಚನ್ನಾಗಿ ನೋಡಿ ಕೊಳ್ಳಿ .ಚಮಚರಾಗಬೇಡಿ.
ಛ -ಛಲದಿಂದಬದುಕಿ. ಛತ್ರಿಯಾಗಬೇಡಿ.
ಜ - ಜನುಮದಜೋಡಿ ಎನ್ನಿ. ಜಗಳವಾಡಬೇಡಿ.
ಝ - ಝರಿಯಂತೆ (ನೀರು)ಹರಿ ಎನ್ನಿ.ಝಾಡಿಸಬೇಡಿ.
ಟ -ಟಮೋಟೊ ತರಹ ಎನ್ನಿ. ಚಟ್ನಿ ಮಾಡಬೇಡಿ.
ಠ - ಠಕ್ಕ ನಾನು ನಿನಗೆ ಎನ್ನಿ. ಠಕ್ಕರಾಗಬೇಡಿ.
ಡ - ಡಮರುಗ ಬಾರಿಸಿ. ಢಕ್ಕೆ ಹೊಡೆಯಬೇಡಿ.
ಢ - ಢಂಬಾಚಾರ ಮಾಡಬೇಡಿ.
ಡೋಲಾಯಮಾನರಾಗಬೇಡಿ
ತ - ತಕ್ಕವಳು ನೀನು ನನಗೆ ಎನ್ನಿ.ತಕ್ಕಡಿಯಲ್ಲಿ ತೂಗಬೇಡಿ.
ಥ -ಥಕ ಥಕ ಕುಣಿಸಬೇಡಿ. ಥರಥರ ನಡುಗಿಸಬೇಡಿ.
ದ - ದಯಾವಂತರಾಗಿ. ದಬಾಯಿಸಬೇಡಿ.
ಧ - ಧನವಂತರಾಗರಿ. .ದಾನವಂತರಾಗರಿ ಬಾಳಿ.
ನ - ನಗುಮುಖರಾಗಿರಿ. ನಗುನಗುತಾಬಾಳಿರಿ.
ಪ - ಪರಿಹಾರ ಹುಡುಕಿ. ಪರಿಶ್ರಮಪಡಿರಿ.
ಫ -ಫಲ ಪುಫ್ಪ ತನ್ನಿರಿ. ಫಲಭರಿತಮರವಾಗಿರಿ.
ಬ - ಬದುಕನ್ನು ಆನಂದಿಸಿ. ಬದಲಾಗಬೇಡಿ
ಭವಸಾಗರಸುಲಭವಾಗಿದಾಟಿ.ಭಯಬೀಳಬೇಡಿ.
ಮ -ಮಮತೆಯ ಮಕರಂದವಾಗಿ. ಮಮಕಾರ ಬಿಡಬೇಡಿ.
ಯ - ಯಾರಿವನು?ಎನ್ನುವಂತಾಗಿರಿ. ಯಾಮಾರಬೇಡಿ.
ರ- ರಾಮ ರಾಮ ಎನ್ನಿ. ರಾಮಾಯಣ ಮಾಡಬೇಡಿ.
ಲ - ಲವಲವಿಕೆಯಿಂದ ಇರಿ.ಲಾವಣಿಗಳನ್ನು ಹಾಡಿ.
ವ -ವಯಸ್ಸಾಯಿತು ಎನ್ನಿ. ವರಾತಮಾಡಬೇಡಿ.
ಶ - ಶರಣಾಗುವೆ ಎನ್ನಿ. ಶಹನಾಯಿ ಬಾರಿಸಿ.
ಸ - ಸಹಕಾರಿಯಾಗಿ ಸಹಬಾಳ್ವನಡೆಸಿ.
ಹ -ಹಾಲಾಹಲ ಬಿಟ್ಟು ಹಂಸ ಪಕ್ಫಿಯಂತೆಬಾಳಿ. ಅ ಇಂದ ಹ ವರೆಗೆ - 👌🏾👏🏽💐
****
No comments:
Post a Comment