ಊಟದ ಪ್ರಭಾವ ಜೀವನದ ಮೇಲೆ..
ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ಅನ್ನ.
ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ ,both
Physical and mental change.
ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ.so ಅಡಿಗೆ
ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ (ಇದು ಈಗ common ಆಗಿದೆ)
ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆ ಗೆ
Negative vibrations ಹೊಗುವದು common. ನೆನಪಿಡಿ ನಾವು ಅದನ್ನೇ ಉಣ್ಣುವ ದು.
ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ ಗುಡಿ , ಮಠ , ದಾಸೋಹ ಗಳಲ್ಲಿ ಕಾಣುವ ದುಂಟು.
ಅಡಿಗೆ , ಊಟಾ ೩ ತರಹ
1. ಹೋಟೆಲ್ ಪಾರ್ಟಿಗಳಲ್ಲಿನ ಊಟ
2.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ.
3.ಮಂದಿರ, ಮಠಗಳಲ್ಲಿ ಮಾಡುವ ಅಡಿಗೆ, ಊಟ.
ಈ ಮೂರು ಪ್ರಕಾರದ ಊಟದಲ್ಲಿ ಬೇರೆ ಬೇರೆ ತರಹದ ಸ್ಪಂದನೆಗಳು ಇರುವವೂ.
ಹೋಟೆಲ್ ಊಟ..
ಇಲ್ಲಿ ಯಾವುದೇ ಪಾಸಿಟಿವ್ vibrations ಇರುವುದಿಲ್ಲ.
ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹದ ಇರುವವೋ ಗೊತ್ತಿಲ್ಲ,
ಅವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡಿಗೆಯಲ್ಲಿ ಇಳಿಯುವವು.
ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡಿಗೆ...
ಇಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಪಾಸಿಟಿವ್ ಸ್ಪಂದನೆಗಳು ಇರುವ ಅಡಿಗೆ.
ಆದರೆ ಇತ್ತೀಚಿಗೆ ಮನೆಯಲ್ಲಿ
ಅಡಿಗೆ ಕೆಲಸದವಳು ಅಡಿಗೆ ಮಾಡುವ fashion ಆಗಿದೆ.
ಮನೆಯಲ್ಲಿ ಒಂದಿಬ್ಬರೆ ಇದ್ದರೂ
ಅಡಿಗೆ ಮಾಡುವುದು ಅಡಿಗೆ ಕೆಲಸದವಳೆ , ಅವಳ ಮನಸ್ಸು ಯಾವ ತರಹ ಇದೆ, ಅವಳು ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು so ಅಲ್ಲಿಯೂ
ನೆಗೆಟಿವ್ vibration ಇರುವುದು
So ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ
ಸ್ವಲ್ಪ ವಿಚಾರ ಮಾಡಿ ನೋಡಿ.
ನಿಮ್ಮ ಮನೆಯ ಅಜ್ಜಿ , ತಾಯೀ ಮಾಡಿದ ಅಡಿಗೆ ಮತ್ತು ಕೆಲಸದವಳು ಮಾಡುವ ಅಡಿಗೆಗೆ ಎಷ್ಟು ವ್ಯತ್ಯಾಸ ?
ತಾಯಿ ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಅವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.
ಮಂದಿರ ಮಠಗಳಲ್ಲಿನ ಅಡಿಗೆ....
ಅದು ದೇವರಿಗೆ ನೈವೇದ್ಯ ಅರ್ಪಿಸಿ , ನಮಗೆ ಬಡಿಸುವ ಅಡಿಗೆ, ಅದು ನಾವು ಉಣ್ಣುವುದು ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ vibrations ತುಂಬಿ ತುಳುಕುತ್ತಿರುತ್ತದೆ.
ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ , .
ಅದರ ಸ್ವಲ್ಪ ಭಾಗ ಬಡವರಿಗೆ
ಸಮರ್ಪಿಸಿ ನಾವು ಸೇವಿಸುವುದು ಉತ್ತಮ.
ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಂದಿರ, ಬಡಬಗ್ಗರು , ನಿರ್ಗತಿಕರು, ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ,
ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ ಎಂದು ಕೊಡುವುದನ್ನು ನಾನು ಸಣ್ಣವನಿದ್ದಾಗ ನೋಡಿದ ನೆನಪಿದೆ.
ಅನ್ನದಲ್ಲಿ ಜಾದು ಇದೆ,. ಅಡಿಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿದೆ. ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ ಊಟ ಮಾಡಿ ನೋಡಿ.
3 ತಿಂಗಳು ಇದನ್ನು ಮಾಡಿ ನೋಡಿ.
ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.
***
ದಕ್ಷಿಣ ದಿಕ್ಕಿನಲ್ಲಿ ಊಟಕ್ಕೆ ಯಾಕೆ ಕುಳಿತುಕೊಳ್ಳಬಾರದು..? ಯಾವ ದಿಕ್ಕಿನಲ್ಲಿ ಆಹಾರ ಸೇವಿಸಬೇಕು..🌼
🌸ನಮ್ಮ ಹಿರಿಯರು ಕೆಲವೊಂದು ದಿಕ್ಕುಗಳಲ್ಲಿ ಊಟ ಮಾಡಲು ಕುಳಿತುಕೊಳ್ಳಬಾರದು ಎನ್ನುತ್ತಾರೆ. ಇದರ ಹಿಂದಿನ ಕಾರಣವೇನು, ಊಟ ಮಾಡಲು ಯಾವ ದಿಕ್ಕು ಉತ್ತಮವಾದುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.🌸 🌸ವಾಸ್ತು ಶಾಸ್ತ್ರವು ವಾಸ್ತುಶಾಸ್ತ್ರದ ಪ್ರಾಚೀನ ವಿಜ್ಞಾನವಾಗಿದ್ದು ಅದು ನಮ್ಮ ಆರೋಗ್ಯದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಇದು ಜ್ಯೋತಿಷ್ಯ, ವಿಜ್ಞಾನ, ಕಲೆ ಮತ್ತು ಖಗೋಳಶಾಸ್ತ್ರವನ್ನು ಒಂದುಗೂಡಿಸುತ್ತದೆ. ವಾಸ್ತು ಶಾಸ್ತ್ರದ ಪ್ರಾಚೀನ ಗ್ರಂಥಗಳಲ್ಲಿ, ಆರೋಗ್ಯ ಮತ್ತು ವಾಸ್ತು ಅಥವಾ ದಿಕ್ಕುಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಒಬ್ಬ ವ್ಯಕ್ತಿಯು ವಾಸಿಸುವ ಮನೆ ತನ್ನದೇ ಆದ ಕಂಪನ ಮತ್ತು ಶಕ್ತಿಯನ್ನು ಹೊಂದಿರುವ ಜೀವಂತ ಘಟಕವಾಗಿದೆ ಎಂದು ಹೇಳಲಾಗುತ್ತದೆ. ಸಂಪರ್ಕವು ಎಷ್ಟರಮಟ್ಟಿಗೆ ಇದೆಯೆಂದರೆ ಮನೆಯ ಪ್ರತಿಯೊಂದು ಮೂಲೆಯು ದೇಹದ ಒಂದು ನಿರ್ದಿಷ್ಟ ಅಂಗವನ್ನು ನಿಯಂತ್ರಿಸುತ್ತದೆ ಮತ್ತು ಅಸಮತೋಲನ ಕಂಡುಬಂದರೆ, ದೇಹದ ಅಂಗವು ಅದರಿಂದ ಪ್ರಭಾವಿತವಾಗಿರುತ್ತದೆ. ಮನೆಯ ಎಲ್ಲಾ ದಿಕ್ಕುಗಳು ಪ್ರಕೃತಿಯ ಐದು ಅಂಶಗಳಿಂದ ನಿಯಂತ್ರಿಸಲ್ಪಡುತ್ತವೆ, ಅಂದರೆ, ಗಾಳಿ (ವಾಯು), ನೀರು (ಜಲ), ಬೆಂಕಿ (ತೇಜಸ್), ಭೂಮಿ (ಪೃಥ್ವಿ) ಮತ್ತು ಬಾಹ್ಯಾಕಾಶ (ಆಕಾಶ) ಮತ್ತು ಪ್ರತಿಯೊಂದು ಮೂಲೆ ಅಥವಾ ದಿಕ್ಕು ಅವುಗಳಿಂದ ನಿಯಂತ್ರಿಸಲ್ಪಡುತ್ತವೆ. ಪರಿಪೂರ್ಣ ಆರೋಗ್ಯವನ್ನು ಪಡೆಯಲು, ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತಿನ್ನಬೇಕು ಎಂದು ಹೇಳಲಾಗುತ್ತದೆ🌸
🌸ವಾಸ್ತು ಶಾಸ್ತ್ರದ ಪ್ರಕಾರ, ತಿನ್ನುವಾಗ ಕುಳಿತುಕೊಳ್ಳುವ ದಿಕ್ಕು ಒಬ್ಬರ ಆರೋಗ್ಯ ಮತ್ತು ದೇಹದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ, ಆಹಾರವನ್ನು ತಿನ್ನುವಾಗ ಒಂದು ದಿಕ್ಕು ಒಡ್ಡಬಹುದಾದ ಆರೋಗ್ಯದ ಅಪಾಯಗಳ ಬಗ್ಗೆ ತಿಳಿಯಲು ಈ ಲೇಖನವನ್ನು ತಪ್ಪದೇ ಓದಿ🌸
1🌹ಪೂರ್ವ ದಿಕ್ಕು🌹
ವಾಸ್ತು ಶಾಸ್ತ್ರದ ಪ್ರಕಾರ, ನಾವು ಪೂರ್ವ ದಿಕ್ಕಿಗೆ ಮುಖಮಾಡಿ ತಿನ್ನುವುದರಿಂದ ನಿಮ್ಮ ಮೆದುಳು ಶಕ್ತಿಯುತವಾಗಿರುತ್ತದೆ ಮತ್ತು ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ, ಜೀರ್ಣಕ್ರಿಯೆಯು ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಆದ್ದರಿಂದ ಯಾವಾಗಲೂ ಈ ದಿಕ್ಕಿನಲ್ಲಿ ಕುಳಿತುಕೊಂಡು ತಿನ್ನಬೇಕು. ದುರ್ಬಲ ಜೀರ್ಣಾಂಗ ವ್ಯವಸ್ಥೆ ಇರುವವರಿಗೆ ಪೂರ್ವ ದಿಕ್ಕು ಸೂಕ್ತವಾಗಿರುತ್ತದೆ.
2🌹ಪಶ್ಚಿಮ ದಿಕ್ಕು🌹
ಇದು ಲಾಭದ ದಿಕ್ಕು ಎಂದು ಪರಿಗಣಿಸಲ್ಪಟ್ಟಿರುವುದರಿಂದ ಆಹಾರವನ್ನು ತಿನ್ನಲು ಸಹ ಇದು ಉತ್ತಮ ದಿಕ್ಕು. ನೀವು ಪಶ್ಚಿಮ ದಿಕ್ಕಿಗೆ ಮುಖಮಾಡಿ ಕುಳಿತಾಗ, ಅದು ನಿಮ್ಮ ಮನಸ್ಸನ್ನು ವಾಹಕವಾಗಿ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ದಿಕ್ಕನ್ನು ವ್ಯಾಪಾರ, ಉದ್ಯೋಗ ಅಥವಾ ಬರವಣಿಗೆ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಪರರಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ನೀವು ಪಶ್ಚಿಮ ದಿಕ್ಕಿಗೆ ಮುಖಮಾಡಿ ತಿನ್ನುವುದರಿಂದ ನಿಮ್ಮ ಲಾಭದ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ವಾಸ್ತು ಹೇಳುತ್ತದೆ.
3🌹ಉತ್ತರ ದಿಕ್ಕು🌹
ಜ್ಞಾನ ಮತ್ತು ಹಣವನ್ನು ಹುಡುಕುತ್ತಿರುವವರಿಗೆ ಈ ದಿಕ್ಕು ಸೂಕ್ತವಾಗಿದೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಈ ದಿಕ್ಕಿನಲ್ಲಿ ಆಹಾರವನ್ನು ಸೇವಿಸಲು ಉತ್ತರ ದಿಕ್ಕು ಸೂಕ್ತವಾಗಿದೆ. ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವವರಿಗೆ ಆಹಾರವನ್ನು ಸೇವಿಸಲು ಈ ದಿಕ್ಕನ್ನು ಸೂಚಿಸಲಾಗುತ್ತದೆ.
4🌹ದಕ್ಷಿಣ ದಿಕ್ಕು🌹
ಇದು ಎಲ್ಲಕ್ಕಿಂತ ಕೆಟ್ಟದು. ಸತ್ತವರಿಗೆ ದಕ್ಷಿಣ ದಿಕ್ಕು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರವು ಕೂಡಾ ಈ ದಿಕ್ಕಿನಲ್ಲಿ ತಿನ್ನುವುದು ಮಾಡಬಾರದು ಎಂದು ಹೇಳುತ್ತದೆ. ಇದು ಯಮರಾಜನ ದಿಕ್ಕು ಆದ್ದರಿಂದ ಈ ದಿಕ್ಕಿನಲ್ಲಿ ಆಹಾರ ಸೇವನೆ ತಪ್ಪಿಸಬೇಕು ಎಂದು ವಾಸ್ತು ಹೇಳುತ್ತದೆ. ವಿಶೇಷವಾಗಿ, ಪೋಷಕರು ಜೀವಂತವಾಗಿದ್ದರೆ, ಈ ದಿಕ್ಕಿನಲ್ಲಿ ಕುಳಿತು ನೀವು ಎಂದಿಗೂ ತಿನ್ನಬಾರದು.
5🌹ಊಟದ ಕೋಣೆಗೆ ಸರಿಯಾದ ದಿಕ್ಕು🌹
ವಾಸ್ತು ಶಾಸ್ತ್ರದ ಪ್ರಕಾರ ಊಟದ ಕೋಣೆ ಯಾವಾಗಲೂ ಮನೆಯ ಪಶ್ಚಿಮ ದಿಕ್ಕಿನಲ್ಲಿರಬೇಕು. ಈ ದಿಕ್ಕನ್ನು ಮಂಗಳಕರ ಮತ್ತು ಲಾಭದಾಯಕವೆಂದು ಪರಿಗಣಿಸಲಾಗುತ್ತದೆ ಮತ್ತು ಜನರು ಈ ದಿಕ್ಕಿನಲ್ಲಿ ಸೇವಿಸಿದಾಗ ಅದು ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ಆಹಾರ ಮತ್ತು ಇತರ ಬೆಲೆಬಾಳುವ ವಸ್ತುಗಳ ಕೊರತೆ ಇರುವುದಿಲ್ಲ.
***
ಭಾರತೀಯ ಪರಂಪರೆಯಲ್ಲಿ ಕೈಯಿಂದ ಊಟ ಮಾಡುವುದಕ್ಕೆ ಮಹತ್ವ ಏಕೆ ನೀಡಲಾಗಿದೆ..
ಸಜೀವ ವ್ಯಕ್ತಿಗಳಲ್ಲಿ ನಿರ್ಜೀವ ವಸ್ತುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವಿರುತ್ತದೆ. ಚಮಚ ಧಾತುವಿನದ್ದಾಗಿರುವುದರಿಂದ, ಹಾಗೂ ಅದು ನಿರ್ಜೀವವಾಗಿರುವುದರಿಂದ, ಅದರಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯ ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಅದೇ ಮನುಷ್ಯರಲ್ಲಿ ಕಡಿಮೆಯೆಂದರೂ ಸಾತ್ತ್ವಿಕತೆ ಶೇ. ೨೦ ರಷ್ಟು ಇರುತ್ತದೆ. ಅವನ ಐದೂ ಬೆರಳುಗಳಿಂದ ಪಂಚತತ್ತ್ವಗಳಿಗೆ ಸಂಬಂಧಿಸಿದ ಶಕ್ತಿ ಪ್ರವಹಿಸುತ್ತಿರುತ್ತದೆ. ಇದರ ಬಗ್ಗೆ ಸೂಕ್ಷ್ಮದಿಂದ ದೊರೆತ ಜ್ಞಾನವನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ
ಚಮಚದಿಂದ ಊಟ ಮಾಡುವುದು ಮತ್ತು ಕೈಯಿಂದ ಊಟ ಮಾಡುವುದರಲ್ಲಿರುವ ವ್ಯತ್ಯಾಸ
ಚಮಚದಿಂದ ಆಹಾರವನ್ನು ಸೇವಿಸುವುದು ಕೈಗಳಿಂದ ಆಹಾರವನ್ನು ಸೇವಿಸುವುದು
೧. ಆಹಾರವನ್ನು ಸೇವಿಸುವ ಪದ್ಧತಿ ಯಾವುದು ಪಾಶ್ಚಿಮಾತ್ಯ ಭಾರತೀಯ
೨. ತ್ರಿಗುಣಗಳಲ್ಲಿ ಕಾರ್ಯನಿರತವಾಗಿರುವ ಗುಣ ರಜ-ತಮ ರಜ-ಸತ್ತ್ವ
೩. ಪಂಚತತ್ತ್ವಗಳಲ್ಲಿ ಕಾರ್ಯನಿರತ ತತ್ತ್ವ ಪೃಥ್ವಿ ಕಿರುಬೆರಳಿನಲ್ಲಿ ಪೃಥ್ವಿ, ಅನಾಮಿಕಾದಲ್ಲಿ (ಉಂಗುರದ ಬೆರಳು) ಆಪ, ಮಧ್ಯಮಾದಲ್ಲಿ ತೇಜ, ತೋರು ಬೆರಳಿನಲ್ಲಿ ವಾಯು ಮತ್ತು ಹೆಬ್ಬರಳಿನಲ್ಲಿ ಆಕಾಶ, ಹೀಗೆ ಪಂಚತತ್ತ್ವಗಳೂ ಕಾರ್ಯನಿರತವಾಗಿರುತ್ತವೆ
೪. ಶಕ್ತಿಪಾತ ಯೋಗಕ್ಕನುಸಾರ ಆಹಾರವನ್ನು ಸೇವಿಸುವುದರಿಂದ ದೇಹದ ಶಕ್ತಿ ಪುನಃ ದೇಹದಲ್ಲಿ ಪ್ರವೇಶಿಸುವುದು / ಪ್ರವೇಶಿಸದಿರುವುದು ಪ್ರವೇಶಿಸುವುದಿಲ್ಲ ಪ್ರವೇಶಿಸುತ್ತದೆ
೫. ಆಹಾರಕ್ಕೆ ಚಮಚ ಅಥವಾ ಕೈಬೆರಳುಗಳ ಸ್ಪರ್ಶ ಆದಾಗ ಆಹಾರದ ಮೇಲಾಗುವ ಪರಿಣಾಮಗಳ ಸ್ವರೂಪ ಆಹಾರದಲ್ಲಿ ಚಮಚದ ರಜ-ತಮ ಲಹರಿಗಳು ಪ್ರವೇಶಿಸುವುದರಿಂದ ಆಹಾರದ ಸಾತ್ತ್ವಿಕತೆಯು ಕಡಿಮೆಯಾಗುವುದು ಬೆರಳುಗಳಿಂದ ಪ್ರವಹಿಸುವ ಸಾತ್ತ್ವಿಕತೆ ಆಹಾರದಲ್ಲಿ ಪ್ರವೇಶಿಸುವುದರಿಂದ ಆಹಾರ ಹೆಚ್ಚು ಸಾತ್ತ್ವಿಕವಾಗುವುದು
೬. ಆಹಾರವನ್ನು ಸೇವಿಸುವುದರಿಂದ ಆಗುವ ಪರಿಣಾಮಗಳ ಸ್ವರೂಪ, ಪ್ರಮಾಣ (ಶೇ.) ಮತ್ತು ಕಾಲಾವಧಿ
೬ಅ. ಸ್ವರೂಪ ತೊಂದರೆದಾಯಕ ಒಳ್ಳೆಯ
೬ಆ. ಪ್ರಮಾಣ (ಶೇ.) ೧೦ ೨೦
೬ಇ. ಕಾಲಾವಧಿ ಕೆಲವು ಗಂಟೆಗಳು ಒಂದು ದಿನ
೭. ಚಮಚ ಅಥವಾ ಕೈಬೆರಳುಗಳಿಂದ ಆಹಾರ ಸೇವಿಸುವುದರಿಂದ ವ್ಯಕ್ತಿಯ ದೇಹದ ಮೇಲಾಗುವ ಪರಿಣಾಮ ದೇಹದಲ್ಲಿರುವ ಸಾತ್ತ್ವಿಕತೆ ಚಮದಲ್ಲಿ ಪ್ರವಹಿಸಿ ಕಡಿಮೆಯಾಗುವುದು ದೇಹದಲ್ಲಿರುವ ಸಾತ್ತ್ವಿಕತೆ ಆಹಾರದ ಮೂಲಕ ಪುನಃ ದೇಹದಲ್ಲಿ ಪ್ರವೇಶಿಸುವುದರಿಂದ ಹೆಚ್ಚಳವಾಗುವುದು
೮. ಎಷ್ಟು ಶೇಕಡಾ ಮಟ್ಟದ ವರೆಗೆ ಪರಿಣಾಮವಾಗುತ್ತದೆ ? (ಟಿಪ್ಪಣಿ) ೨೦ ರಿಂದ ೬೦ ೩೦ಕ್ಕಿಂತ ಮುಂದೆ
ಟಿಪ್ಪಣಿ : ಶೇ. ೬೧ ಮಟ್ಟದ ಬಳಿಕ ಬಾಹ್ಯ ವಿಷಯಗಳಿಂದ ದೇಹದ ಸಾತ್ತ್ವಿಕತೆಯ ಮೇಲಾಗುವ ಪರಿಣಾಮದ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಶೇ. ೬೧ ಮಟ್ಟದ ಬಳಿಕ ಚಮಚದಿಂದ ಆಹಾರ ಸೇವಿಸುವುದರ ಪರಿಣಾಮವು ಕಡಿಮೆಯಾಗತೊಡಗುತ್ತದೆ. ಶೇ. ೭೧ ರಿಂದ ೮೦ ರಷ್ಟು ಮಟ್ಟದವರೆಗೆ ಚಮಚದಿಂದ ಆಹಾರ ಸೇವಿಸುವುದರ ಪರಿಣಾಮ ಕೇವಲ ಶೇ. ೧ ರಷ್ಟು ಆಗುತ್ತದೆ ಮತ್ತು ಶೇ. ೮೧ ರಷ್ಟು ಮಟ್ಟದ ನಂತರ ಈ ಪರಿಣಾಮ ಶೇ. ೦ ರಷ್ಟು, ಅಂದರೆ ಸ್ವಲ್ಪವೂ ಆಗುವುದಿಲ್ಲ.
ವ್ಯಕ್ತಿಯು ಕೈಯಿಂದ ಊಟ ಮಾಡುವಾಗ ಅವನ ಕೈಯ ಐದೂ ಬೆರಳುಗಳಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆ ಅವನ ಕೈಯಲ್ಲಿರುವ ತುತ್ತಿನ ಕಡೆಗೆ ಪ್ರವಹಿಸುತ್ತದೆ ಮತ್ತು ಅವನು ಆಹಾರ ಸೇವಿಸಿದಾಗ ಈ ಸಾತ್ತ್ವಿಕತೆ ಪುನಃ ಅವನ ದೇಹದಲ್ಲಿ ಹೋಗುತ್ತದೆ. ಈ ರೀತಿ ಶಕ್ತಿಪಾತ ಯೋಗಕ್ಕನುಸಾರ ವ್ಯಕ್ತಿಯಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆ ಮತ್ತು ಶಕ್ತಿ ಅವನಿಗೆ ಪುನಃ ಸಿಗುತ್ತದೆ. ಅದೇ ಚಮಚವನ್ನು ಉಪಯೋಗಿಸುವುದರಿಂದ ಶಕ್ತಿಯು ಹೆಬ್ಬೆರಳು ಮತ್ತು ತೋರು ಬೆರಳಿನ ಮೂಲಕ ಚಮಚದಲ್ಲಿ ಪ್ರವೇಶಿಸಿ ಚಮಚದ ರಜ-ತಮ ಕಡಿಮೆಯಾಗಲು ಉಪಯೋಗವಾಗುತ್ತದೆ. ಇದರಿಂದ ಅವನಿಗೆ ತನ್ನ ಸಾತ್ತ್ವಿಕತೆಯನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಚಮಚದಲ್ಲಿನ ರಜ-ತಮಾತ್ಮಕ ಸ್ಪಂದನಗಳು ಚಮಚದಲ್ಲಿರುವ ಆಹಾರಕಣಗಳಲ್ಲಿ ಹೋಗುತ್ತವೆ ಮತ್ತು ಅವನಿಗೆ ಆಹಾರದಿಂದ ರಜ-ತಮಾತ್ಮಕ ಶಕ್ತಿ ದೊರಕುತ್ತದೆ. ಇದರಿಂದ ಅವನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವ ಬದಲು ಹಾನಿಯೇ ಆಗುತ್ತದೆ.
ಆದುದರಿಂದ ವ್ಯಕ್ತಿಯು ಚಮಚದಿಂದ ಆಹಾರ ಸೇವಿಸುವುದಕ್ಕಿಂತ ಕೈಯಿಂದ ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಧಿಕ ಯೋಗ್ಯವಾಗಿದೆ. ಹೀಗಿದ್ದರೂ, ಚರ್ಮರೋಗ, ಕೈಯ ಬೆರಳುಗಳಿಗೆ ಏನಾದರೂ ಗಾಯಗಳಾಗಿದ್ದರೆ ಅಥವಾ ಸೂಪ್, ಪಾಯಸಗಳಂತಹ ಪದಾರ್ಥಗಳನ್ನು ಸೇವಿಸುವಾಗ ವ್ಯಕ್ತಿಯ ಕೈಗಳಿಗಿಂತ ಚಮಚದಿಂದ ಆಹಾರವನ್ನು ಸೇವಿಸುವುದು ಅಧಿಕ ಯೋಗ್ಯವಾಗಿದೆ. ಮೇಲಿನ ಕೆಲವು ಅಪವಾದಾತ್ಮಕ ಪರಿಸ್ಥಿತಿಯನ್ನು ಹೊರತುಪಡಿಸಿದರೆ ವ್ಯಕ್ತಿಯು ಕೈಗಳಿಂದ ಆಹಾರವನ್ನು ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ.
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ.
***
No comments:
Post a Comment