SEARCH HERE

Tuesday 13 April 2021

ಪ್ರಾಣಮಯ ಕೋಶ ಯೋಗಿ ಸಮಾಧಿ ವಿಜ್ಞಾನ pranamaya kosha yogi samadhi science


 

ಸಮಾಧಿ ಸ್ಥಿತಿಯನ್ನು ಸಾಧಿಸಿದ ಯೋಗಿಗಳು ಸತ್ತಾಗ ಅವರನ್ನು ಸುಡುವುದಿಲ್ಲ. ಮಣ್ಣು ಮಾಡಲಾಗುತ್ತದೆ. ಏಕೆಂದರೆ ದೇಹವನ್ನು ಸುಟ್ಟರೆ ಬಯೋಪ್ಲಾಸ್ಮಾ ಭೂಮಿಯಿಂದ ಆಕಾಶಕ್ಕೆ ತೇಲತೊಡಗುತ್ತದೆ. ಬಯೋಪ್ಲಾಸ್ಮಾವನ್ನು ಕೆಲ ದಿನಗಳವರೆಗೆ ಮಾತ್ರ ಅನುಭವಿಸಬಹುದು. ನಂತರ ಅದು ಬ್ರಹ್ಮಾಂಡದಲ್ಲಿ ಲೀನವಾಗಿಬಿಡುತ್ತದೆ. ಭೌತಿಕ ದೇಹವನ್ನು ಹಾಗೇ ಇಟ್ಟರೆ ಅದರ ಸುತ್ತಲಿನ ಚೈತನ್ಯದೇಹ ದೂರ ಹೋಗದೆ ಅಲ್ಲೇ ಇರುತ್ತದೆ.

ನಶ್ವರ. ನಾವು ಮಾಡಿದ ಪಾಪ ಪುಣ್ಯ, ಕರ್ಮಗಳೇ ಸಾವಿನ ನಂತರವೂ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವ ಮಾತು ಸರ್ವವಿಧಿತ. ಕರ್ಮ, ಆಚಾರವಿಚಾರಗಳಿಗೆ ಸ್ಪಂದಿಸುವಂತದ್ದು ನಮ್ಮ ದೇಹ. ಅದು ಪವಿತ್ರವಾಗಿದ್ದರೆ, ಒಳಿತಿಗೆ ಮುಖ ಮಾಡಿದ್ದರೆ ಆತ್ಮ ಪರಿಶುದ್ಧವಾಗಿರುತ್ತದೆ. ಯೋಗಗುರು ಪತಂಜಲಿ ಮಾನವನ ವ್ಯಕ್ತಿತ್ವವನ್ನು ಐದು ದೇಹಗಳಾಗಿ ವರ್ಗೀಕರಿಸುತ್ತಾನೆ. ಆತನ ಪ್ರಕಾರ ಮಾನವನಿಗೆ ಒಂದರ ಮೇಲೊಂದರಂತೆ ಐದು ದೇಹಗಳಿವೆ. ಕಣ್ಣಿಗೆ ಕಾಣದ ಈ ಸೂಕ್ಷ್ಮದೇಹಗಳು ಮನುಷ್ಯನನ್ನು ಬಹುಪಾಲು ಆಳಬಲ್ಲಲ್ಲ.

ಅನ್ನಮಯ ಕೋಶ; ಮೊದಲ ಪತಂಜಲಿ ಅನ್ನಮಯ ಕೋಶವೆಂದಿರುವುದು. ನಾಶವಾಗದಂತೆ ಉಳಿಯಲು ಅನ್ನದ ಅವಶ್ಯಕತೆ ಇರುವ ದೇಹವಿದು. ನಾವು ಏನು ಉಣ್ಣುತ್ತೇವೆ, ಎಷ್ಟು ಉಣ್ಣುತ್ತೇವೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಉಂಡ ಆಹಾರ ಕೇವಲ ಆಹಾರವಲ್ಲ. ಅದು ನಿಮ್ಮ ರಕ್ತವೋ, ಮಜ್ಜೆಯೋ, ಎಲುಬೋ ಆಗುತ್ತದೆ. ನಿಮ್ಮಲ್ಲಿ ಪರಿಚಲನೆಗೊಳ್ಳುತ್ತದೆ. ಹಾಗಾಗಿ ಪವಿತ್ರ ಆಹಾರ, ಪವಿತ್ರ ಅನ್ನಮಯ ಕೋಶವನ್ನು ರೂಪಿಸುತ್ತದೆ.

ಮೊದಲ ದೇಹ ಪವಿತ್ರವಾಗಿದ್ದರೆ ಎರಡನೇ ದೇಹಕ್ಕೆ ಪ್ರವೇಶಿಸಬಹುದು. ಯಾವಾಗ ನಿಮ್ಮ ಮೊದಲ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಆಗ ಎಚ್ಚರವಾಗಿರುವುದು ಅಸಾಧ್ಯ. ಹಾಗಂತ ಉಪವಾಸವನ್ನು ಸರಿಯಾದ ಕ್ರಮವಿಲ್ಲದೆ ಮಾಡಲಿಕ್ಕೆ ಹೋಗಬಾರದು.

ಪ್ರಾಣಮಯ ಕೋಶ; ಪತಂಜಲಿ ಎರಡನೇ ದೇಹವನ್ನು ಪ್ರಾಣಮಯ ಕೋಶ ಎಂದು ಕರೆಯುತ್ತಾರೆ. ಇದಕ್ಕೆ ಶಕ್ತಿ ದೇಹ ಅಂತಲೂ ಕರೆಯಬಹುದು. ಈ ದೇಹ ವಿದ್ಯುತ್‌ಕ್ಷೇತ್ರದಿಂದ ರೂಪುಗೊಂಡಿದೆ. ಇದು ಮೊದಲ ದೇಹಕ್ಕಿಂತ ಬಹಳ ಸೂಕ್ಷ್ಮವಿದೆ. ಮತ್ತು ಮೊದಲ ದೇಹದಿಂದ ಎರಡನೆ ದೇಹಕ್ಕೆ ಪ್ರವೇಶಿಸುವವರಲ್ಲಿ ಒಂದು ಬಗೆಯ ಶಕ್ತಿ ಸಂಚಯಗೊಳ್ಳುತ್ತದೆ. ಆ ಶಕ್ತಿ ಅವರಲ್ಲಿ ತೇಜಸ್ಸು ತರುತ್ತದೆ. ಹೊಸ ಬಟ್ಟೆ, ರೂಪುಗಳಿಲ್ಲದೆ ಬೇರೆಯವರನ್ನು ಸೆಳೆಯುವಂಥ ಸಮ್ಮೋಹಿನಿ ಶಕ್ತಿ ಅವರಿಗೆ ಪ್ರವಹಿಸುತ್ತದೆ.

ರಷ್ಯಾದಲ್ಲಿ ನಡೆದ ಸಂಶೋಧನೆ



ಎರಡನೇ ದೇಹ ನಿಮ್ಮಲ್ಲಿ ಹೊಸ ಗಾಳಿ, ಸಡಿಲತನ, ಹೊಸ ವ್ಯಾಪ್ತಿಯನ್ನು ತೆರೆದಿಡುತ್ತದೆ. ಅದು ನಿಮ್ಮ ಮೊದಲ ದೇಹಕ್ಕಿಂತ ತುಂಬಾ ದೊಡ್ಡದು. ಭೌತಿಕ ದೇಹಕ್ಕೆ ಮಿತಿಗೊಂಡಿರುವುದಿಲ್ಲ. ಶಕ್ತಿಯ ಪ್ರಭಾವಳಿಯಂತೆ ದೇಹವನ್ನು ಆವರಿಸಿರುತ್ತದೆ. ಇದನ್ನು ಫೋಟೋದಲ್ಲಿ ಸೆರೆ ಹಿಡಿಯಬಹುದು ಎಂದು ಇತ್ತೀಚೆಗೆ ರಷ್ಯನ್ನರು ಸಂಶೋದಿಸಿದ್ದಾರೆ. ಅವರು ಈ ಶಕ್ತಿಯ ಆವರಣವನ್ನು ಬಯೋಪ್ಲಾಸಮ್ ಎಂದು ಕರೆಯುತ್ತಾರೆ. ಆದರೆ ನಿಜ ಹೆಸರು ಪ್ರಾಣ. ತಾವೋಗಳು ಇದನ್ನು ‘ಚಿ ’ ಎನ್ನುತ್ತಾರೆ.


ನಮ್ಮ ಅನ್ನಮಯಕೋಶಕ್ಕೆ ಅಂದರೆ ಮೊದಲ ದೇಹಕ್ಕೆ ಬರುವ ರೋಗಗಳು, ಬಾಧೆಗಳು ಆರು ತಿಂಗಳು ಮುಂಚೆ ಎರಡನೇ ದೇಹಕ್ಕೆ ಬಂದಿರುತ್ತವೆ ಎಂಬ ಮಹತ್ವದ ಸತ್ಯವನ್ನು ರಷ್ಯನ್‌ರ ಸಂಶೋಧನೆ ಹೊರಗೆಡಹಿದೆ. ನೀವು ಕ್ಷಯ, ಕ್ಯಾನ್ಸರ್ ಅಥವ ಇನ್ಯಾವುದೇ ರೋಗಗಳಿಗೆ ತುತ್ತಾಗುವವರಿದ್ದರೆ ಅವುಗಳ ಲಕ್ಷಣಗಳು ಎರಡನೇ ದೇಹದಲ್ಲಿ ಆರು ತಿಂಗಳ ಮುಂಚೆಯೇ ಗೋಚರಿಸುತ್ತವೆ. ಯಾವುದೇ ಪರೀಕ್ಷೆಗಳಿಲ್ಲದೆ, ಮುಂಬರುವ ರೋಗಗಳನ್ನು ಪತ್ತೆ ಹಚ್ಚಬಹುದು. ಒಬ್ಬ ಮನುಷ್ಯ ರೋಗಕ್ಕೆ ತುತ್ತಾಗುವ ಮೊದಲೇ ಅದನ್ನು ವಾಸಿ ಮಾಡಲು ಸಾಧ್ಯವಿದೆ ಎಂದು ರಷ್ಯಾದ ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದು ಸಾಧ್ಯವಾಗಿಬಿಟ್ಟರೆ ಮಾನವ ಜನಾಂಗ ರೋಗಗಳಿಗೆ ತುತ್ತಾಗುವ ಪ್ರಮೇಯವೇ ಬರಲಾರದು. ಕಿರ್ಲಿಯನ್ ವಿಧಾನದ ಮೂಲಕ ತೆಗೆದ ಫೋಟೋಗಳು ನಿಮಗೆ ಬಂದೆರಗಲಿರುವ ಜಡ್ಡಿನ ಲಕ್ಷಣಗಳನ್ನು ತೋರಿಸುತ್ತವೆ. ಪ್ರಾಣಮಯ ಕೋಶದಲ್ಲೇ ಅದನ್ನು ವಾಸಿ ಮಾಡಿ ಕೈಬಿಡಬಹುದು.

ಪ್ರಾಣಮಯ ಕೋಶ ಸಕ್ರೀಯಗೊಳಿಸುವ ಪ್ರಾಣಾಯಾಮ



ಯೋಗದಲ್ಲಿ ಉಸಿರಿನ ಪಾವಿತ್ರ್ಯ ಕಾಪಾಡುವುದಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಪ್ರಾಣಮಯ ಕೋಶ ನಮ್ಮೊಳಗೆ ಉಸಿರಿನ ಮೂಲಕ ಪರಿಚಲನೆಗೊಳ್ಳುತ್ತದೆ. ಆರೋಗ್ಯವಂಥ ಪಾಣಕೋಶದ ಮನುಷ್ಯನಿಗೆ ದಣಿವಾಗುವುದಿಲ್ಲ. ಆತ ಯಾವಾಗಲೂ ಉತ್ಸಾಹಿಯಾಗಿ, ಎಂತಹ ಸಮಯದಲ್ಲೂ ಕೆಲಸ ನಿರ್ವಹಿಸಲು ಶಕ್ತನಾಗಿರುತ್ತಾನೆ. ಸವಾಲು ಸ್ವೀಕರಿಸಲು ಸದಾ ಸಿದ್ಧನಿರುತ್ತಾನೆ. ಆತನಲ್ಲಿ ಬಹಳಷ್ಟು ಚೈತನ್ಯ ಇರುವುದರಿಂದ ಆತ ಯಾವ ಕ್ಷಣದ ಸವಾಲಿಗೂ ಪ್ರತಿಕ್ರಿಯಿಸಬಲ್ಲ.


ಪ್ರಣಾಯಾಮ ಪ್ರಾಣಮಯ ಕೋಶವನ್ನು ಬೆಳೆಸುತ್ತದೆ. ಸ್ವಾಭಾವಿಕವಾಗಿ ಉಸಿರಾಡುವುದನ್ನು ಕಲಿತರೆ, ಎರಡನೇ ದೇಹಕ್ಕೆ ಪ್ರವೇಶ ಸುಲಭ. ದೇಹ ಮೊದಲನೆ ದೇಹಕ್ಕಿಂತ ಶಕ್ತಿಯುಳ್ಳದ್ದೂ ಬಹಳಷ್ಟು ಕಾಲ ಬಾಳುವಂಥದ್ದೂ ಹಾಗಾಗಿ ಒಬ್ಬ ಮನುಷ್ಯ ಸತ್ತ ಮೂರು ದಿನಗಳವರೆಗೆ ಆತನ ಬಯೋಪ್ಲಾಸ್ಮಾವನ್ನು ನೋಡಬಹುದು. ಬಹಳಷ್ಟು ಸಲ ಈ ಬಯೋಪ್ಲಾಸ್ಮಾವನ್ನೇ ದೆವ್ವವೆಂದು ಭಾವಿಸಲಾಗುತ್ತದೆ. ಭೌತಿಕ ದೇಹ ಸತ್ತಿದ್ದರೂ ಚೈತನ್ಯದೇಹ ಬದುಕಿರುತ್ತದೆ. ಸತ್ತ ವ್ಯಕ್ತಿಗೆ ಮೂರು ದಿನಗಳವರೆಗೆ ತಾನು ಸತ್ತಿದ್ದೇನೆಂದು ನಂಬಿಕೆ ಬರುವುದಿಲ್ಲ ಎಂದು ಸಾವಿನ ಬಗ್ಗೆ ಬಹಳಷ್ಟು ಸಂಶೋಧನೆ ಮಾಡಿದವರು ಹೇಳುತ್ತಾರೆ. ಕೆಲವರು ಸತ್ತ ಮೇಲೆ ಹದಿಮೂರು ದಿನಗಳವರೆಗೆ ಅವರ ಚೈತನ್ಯದೇಹ ಬದುಕಿರುವುದುಂಟು. ಅದಕ್ಕಿಂತ ಜಾಸ್ತಿ ದಿನಗಳವರೆಗೂ ಬದುಕಬಹುದು.

ಸಮಾಧಿ ಸ್ಥಿತಿಯನ್ನು ಯೋಗಿಗಳು ಸತ್ತಾಗ ಅವರನ್ನು ಸುಡುವುದಿಲ್ಲ. ಮಣ್ಣು ಮಾಡಲಾಗುತ್ತದೆ. ಏಕೆಂದರೆ ದೇಹವನ್ನು ಸುಟ್ಟರೆ ಬಯೋಪ್ಲಾಸ್ಮಾ ಭೂಮಿಯಿಂದ ಆಕಾಶಕ್ಕೆ ತೇಲತೊಡಗುತ್ತದೆ. ಬಯೋಪ್ಲಾಸ್ಮಾವನ್ನು ಕೆಲ ದಿನಗಳವರೆಗೆ ಮಾತ್ರ ಅನುಭವಿಸಬಹುದು. ನಂತರ ಅದು ಬ್ರಹ್ಮಾಂಡದಲ್ಲಿ ಲೀನವಾಗಿಬಿಡುತ್ತದೆ. ಭೌತಿಕ ದೇಹವನ್ನು ಹಾಗೇ ಇಟ್ಟರೆ ಅದರ ಸುತ್ತಲಿನ ಚೈತನ್ಯದೇಹ ದೂರ ಹೋಗದೆ ಅಲ್ಲೇ ಇರುತ್ತದೆ. ಹಾಗಾಗಿ ಸಮಾಧಿ ಸ್ಥಿತಿ ಸಾಧಿಸಿದ, ಜ್ಞಾನೋದಯ ಸಂಪಾದಿಸಿದ ಯೋಗಿಗಳ ದೇಹವನ್ನು ಸುಡದೆ ಮಣ್ಣು ಮಾಡಲಾಗುತ್ತದೆ. ಅವರ ಚೈತನ್ಯದ ಪ್ರಭಾವಳಿಯಿಂದ ಹಲವು ಭಕ್ತರಿಗೆ ಎಂದು ಹಾಗೆ ಮಾಡಲಾಗುತ್ತದೆ. ಹಾಗಾಗಿ ಹಲವರಿಗೆ ತಮ್ಮ ಗುರುಗಳು ಪ್ರತ್ಯಕ್ಷವಾದ ಅನುಭವಗಳಾಗುತ್ತದೆ. ಅರವಿಂದರ ಆಶ್ರಮದಲ್ಲಿ ಅರವಿಂದರ ದೇಹವನ್ನು ಸುಡದೆ ಸಮಾಧಿ ಮಾಡಲಾಗಿದೆ. ಹಲವು ಭಕ್ತರಿಗೆ ಅರವಿಂದರನ್ನು ಕಂಡ ಅನುಭವಗಳಾಗಿವೆ. ಹಲವರಿಗೆ ಅರವಿಂದ ಪಾದದ ಸದ್ದು ಕೇಳಿಸಿದ ಅನುಭವಗಳಾಗಿವೆ. ಇದು ಅರವಿಂದರಲ್ಲ. ಅವರ ಬಯೋಪ್ಲಾಸ್ಮಾ.

ಅರವಿಂದರು ಕಾಲವಾದರೂ ಅವರ ಪ್ರಾಣಮಯ ಕೋಶ ಕಾಲವಾಗಿಲ್ಲ. ಅದು ಶತಮಾನಗಳವರೆಗೆ ಇರುತ್ತದೆ. ಇದನ್ನೇ ಸ್ಥಳ ಮಹಾತ್ಮೆ ಅನ್ನುವುದು. ಮನೋಮಯ ಕೋಶ ; ಇದು ಮನಸಿಗೆ ಮೂರನೇ ದೇಹ. ಇದು ಎರಡನೇ ದೇಹಕ್ಕಿಂತ ಸೂಕ್ಷ್ಮ ಮತ್ತು ವಿಸ್ತಾರ. ನೀವು ಈ ಕೋಶವನ್ನು ಬೆಳೆಸಿಕೊಳ್ಳದಿದ್ದರೆ ಮಾನವರಾಗುವ ಸಾಧ್ಯತೆಯಾಗಷ್ಟೆ ಉಳಿಯುತ್ತೀರಿ ಹೊರತು ನಿಜ ಮಾನವರಾಗುವುದಿಲ್ಲ. ಯಾವಾಗ ನೀವು ನಿಮ್ಮ ಬದುಕಿನ ಪ್ರಶ್ನೆಗಳಿಗೆ ಕಾಪಿ ಮಾಡದೆ ಉತ್ತರಿಸಲಿಕ್ಕೆ ಪ್ರಾರಂಭಿಸುತ್ತೀರೊ ಆಗ ಮನೋಮಯ ಕೋಶ ಬೆಳೆಯಲಿಕ್ಕೆ ಪ್ರಾರಂಭಿಸುತ್ತದೆ.

ವಿಜ್ಞಾನಮಯ ಕೋಶ; ಮನೋಕೋಶಕ್ಕಿಂತ ಹಿರಿದಾದುದು ವಿಜ್ಞಾನಮಯ ಕೋಶ. ಇದು ನಾಲ್ಕನೇ ದೇಹ. ಸಾಕ್ಷಾತ್ಕಾರ ದೇಹ ಅನ್ನಬಹುದು ಇದಕ್ಕೆ. ಈ ಕೋಶ ಕಾರಣಗಳನ್ನು ಮೀರಿದ್ದು. ದೇಹಕ್ಕೆ ಸಂಗತಿಗಳ ಹೃದಯ ಕಾಣುತ್ತದೆ. ಯಾವುದೇ ಯೋಚನೆ, ವಿಶ್ಲೇಷಣೆಗಳ ಜರಡಿಯಿಲ್ಲದೆ ಸಂಗತಿಗಳನ್ನು ಕಾಣುತ್ತದೆ. ಸತ್ಯವನ್ನು ಕಾರಣಗಳ ಹಂಗಿಲ್ಲದೆ ನೇರ ನಿಮ್ಮೊಳಕ್ಕೆ ಇಳಿಸುವ ಕೋಶವಿದು. ಇದು ನಿಮ್ಮನ್ನು ಹಲವು ಧಿಗಂತಗಳೆಡೆಗೆ ಒಯ್ಯಬಲ್ಲುದು.

ಆನಂದಮಯ ಕೋಶ; ಇದು ಸಂಪೂರ್ಣ ಸಂತೋಷದಿಂದ ಮಾಡಲ್ಪಟ್ಟದ್ದು. ಆನಂದವಷ್ಟೇ ಸತ್ಯ ಇಲ್ಲಿ. ಸಾಕ್ಷಾತ್ಕಾರವನ್ನೂ ಮೀರಿದ್ದು ಇದು. ಒಂದಾದ ಮೇಲೊಂದರಂತೆ ದೇಹಗಳನ್ನು ಹೊಂದಲು ನಮ್ಮ ಮಿತಿಗಳನ್ನು ಮೀರುತ್ತಾ ಹೋಗಬೇಕು. ಈ ಸೂಕ್ಷ್ಮದೇಹಗಳು ಒಂದಕ್ಕಿಂತ ಒಂದು ವಿಸ್ತಾರವಿವೆ . ಆದರೆ ಭೌತಿಕ ದೇಹದ ದಾಸರಾಗಿದ್ದಾರೆ. ಮತ್ತು ತಮ್ಮನ್ನು ಅದರ ಪೋಷಣೆಗಷ್ಟೆ ಸೀಮಿತಗೊಳಿಸಿಕೊಂಡಿದ್ದಾರೆ.

**

No comments:

Post a Comment