1. ಬೇಸಿಗೆ ರಜಾದಿನಗಳು - 45 ದಿನಗಳು
2. ಹೋಳಿ ರಜಾದಿನಗಳು - 5 ದಿನಗಳು
3. ದಸರಾ ರಜಾದಿನಗಳು - 5 ದಿನಗಳು
4. ದೀಪಾವಳಿ ರಜಾದಿನಗಳು - 5 ದಿನಗಳು
5. ಕ್ರಿಸ್ಮಸ್ ರಜಾದಿನಗಳು - 12 ದಿನಗಳು
ಇದು ಯಾವುದೇ ಶಿಶುವಿಹಾರದ ರಜೆ ಪಟ್ಟಿಯಲ್ಲ. ಬ್ಯಾಂಕಿನ ರಜಾದಿನಗಳು ಕೂಡ ಅಲ್ಲ. ಗೌರವಾನ್ವಿತ ಸುಪ್ರೀಂ ಕೋರ್ಟ್ನ ರಜಾದಿನಗಳ ಕ್ಯಾಲೆಂಡರ್ ಇದು. 60,000 ಪ್ರಕರಣಗಳು ಬಾಕಿ ಉಳಿಸಿಕೋಂಡು ವರ್ಷಕ್ಕೆ 190 ದಿನಗಳು ಮಾತ್ರ ಕೆಲಸ ಮಾಡುತ್ತಿವೆಯಂದರೆ ಕೋರ್ಟಿನ ಕ್ಷಮತೆ ಯಾವ ರೀತಿಯಲ್ಲಿ ಸರಿ ಇದೆ?ಅವರಿಗಿರುವ ಕೆಲಸದ ಹೊರೆಗೆ ಯಾವುದೇ ರೀತಿಯ ನ್ಯಾಯ ಒದಗಿಸುತ್ತಾರೆ? ಇದು ಕೇವಲ ದೀರ್ಘಾವಧಿಯ ರಜಾದಿನಗಳ ಪಟ್ಟಿಯಾಗಿದೆ, ಇದಲ್ಲದೆ ಅವರಿಗೆ ಗಣರಾಜ್ಯೋತ್ಸವ, ಸಂಕ್ರಾಂತಿ, ಕ್ಯಾಶುಯಲ್ ರಜೆಗಳು, ವೈಯಕ್ತಿಕ ರಜೆ ರಜಾದಿನಗಳನ್ನು ಹೊಂದಿದ್ದಾರೆ.
ಕೆಲಸ ಮಾಡಿದ 190 ಕೆಲಸದ ದಿನಗಳಲ್ಲಿ ಪಟಾಕಿಯನ್ನು ಯಾವಾಗ ಸುಡಬಹುದು, ಸ್ಯಾಂಡಲ್ ಮತ್ತು ಸ್ಲಿಪ್ಪರ್ ನಡುವಿರುವ ವ್ಯತ್ಯಾಸದಂತಹ 'ಮಹತ್ತರ' ತೀರ್ಪು ನೀಡುತ್ತಾರೆ.
ಬಹಳಷ್ಟು ಘನತೆವೆತ್ತ ನ್ಯಾಯಧೀಶರುಗಳು ವರ್ಷಕ್ಕೆ 190 ದಿನಗಳು ಮಾತ್ರ ಕೆಲಸ ಮಾಡುತ್ತಾ, ಬ್ರಿಟೀಷರು ಮಾಡಿದ್ದ ಗೊಡ್ಡು ಸಂಪ್ರದಾಯವನ್ನು ತಮ್ಮನುಕೂಲಕ್ಕಾಗಿ ಮುಂದುವರೆಸುತ್ತಿದ್ದಾರೆ.
***********
No comments:
Post a Comment