ಪುಣ್ಯ ನದಿಗಳ ಸ್ನಾನದ ಮಹತ್ವ..!
ಜಗತ್ತಿನ ಜೀವನಾಡಿಯೇ ನದಿಗಳು. ನದಿಗಳಿಲ್ಲದೆ ದೇಶವಿಲ್ಲ. ನಮ್ಮ ಭಾರತ ದೇಶದಲ್ಲಿ ಅತಿ ದೊಡ್ಡ ಗಂಗಾ ನದಿ ಇದು ಪುಣ್ಯ ನದಿ ದೇವನದಿಯಾಗಿದೆ.
ಶಿವನ ಶಿರ ತದಿಂದಲೇ ಪುಣ್ಯ ಪ್ರಧಾನಳಾದ ಗಂಗೆಯ ದರ್ಶನ ಮಾಡಿದರೆ ಪುನೀತರಾಗುತ್ತಾರೆ. ಪರಶಿವನ ತಲೆ ಮೇಲೆ ವಿರಾಜಮಾನಳಾಗಿರುವ ಗಂಗೆಯ ಒಂದು ಹನಿ ಪ್ರೋಕ್ಷಣೆಯಾದರೆ ನೆತ್ತಿಯ ನೀರು ಕಾಲಿಗೆ ಇಳಿದು ಹರಿದು ಹೋದಂತೆ ಕಲಿಗಾಲದ ಪಾಪಗಳೆಲ್ಲ ಜಾರಿ ಹೋಗುತ್ತದೆ. ಗಂಗೆಯ ಸ್ಪರ್ಶ ಮಾಡಿದವರನ್ನು ಸ್ವರ್ಗಲೋಕಕ್ಕೆ ಸ್ವಾಗತಿಸಲು ದೇವತೆಗಳೇ ನಿಂತಿರುತ್ತಾರೆ ಎಂಬ ಪ್ರತೀತಿ ಇದೆ. ಗಂಗಾ ಸ್ನಾನದಿಂದ ಸಕಲ ಪಾಪಗಳಿಂದ ಮುಕ್ತಿ ದೊರೆತು ವಿಷ್ಣು ಲೋಕ ಪ್ರಾಪ್ತಿ ಯಾಗುತ್ತದೆ ಎಂದು ತಿಳಿಸಲಾಗಿದೆ. ಪಾಪ ಪರಿಹಾರ ಮತ್ತು ಪುಣ್ಯ ಸಂಪಾದನೆ ಮಾಡಿಕೊಳ್ಳಲು ತೀರ್ಥಯಾತ್ರೆ ಹೋಗಬೇಕು. ಅಂದರೆ ಪುಣ್ಯ ನದಿಗಳ ಸ್ನಾನ- ಕ್ಷೇತ್ರ- ದರ್ಶನ ದಿಂದ ಯಾಗ ಯಜ್ಞ ಮಾಡಿದ ಪುಣ್ಯಕ್ಕಿಂತಲೂ ಅಧಿಕ ಪುಣ್ಯ ಫಲ ಸಿಗುತ್ತದೆ
ಚೈತ್ರ, ವೈಶಾಖ, ಕಾರ್ತಿಕ, ಮಾಘ, ಇಂಥ ಕೆಲವು ಮಾಸಗಳಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ವಿಶೇಷ ಪುಣ್ಯವಿದೆ. ನದಿಗೆ ಭಾಗಿರತಿ ಬಂದಿದ್ದಾಳೆ, ಪುಷ್ಕರ ಬಂದಿದ್ದಾನೆ, ಅಂತ ಹೇಳುತ್ತಾರೆ. ಭಾಗಿರತಿ ಅಂದರೆ ಕೆಲವು ಮಾಸಗಳಲ್ಲಿ ಗಂಗೆಯು ಕಾವೇರಿ, ಗೋದಾವರಿ ಯಂಥ ನದಿಗಳಿಗೆ ಹಾಗೆ ಸಮುದ್ರದ ಕೆಲವೊಂದು ಭಾಗದಲ್ಲಿ ಅಂತರ್ವಾಹಿನಿ ಯಾಗಿ ಹರಿಯುತ್ತಾಳೆ. ಇಂಥ ಸಮಯದಲ್ಲಿ ಸ್ನಾನ ಮಾಡಿ ಗಂಗೆ ಪೂಜೆ ಮಾಡಿ, ಚಿಕ್ಕಬಾಗಿನ ಅರ್ಪಿಸಿ ದೊನ್ನೆಗಳಲ್ಲಿ ದೀಪ ಬಿಡುತ್ತಾರೆ. (ಭಾಗಿರತಿ ಹುಣ್ಣಿಮೆ) ನದಿಯಲ್ಲಿ ತುಂಬಾ ನೆರೆ ಬಂದಿದ್ದರೆ ಶಾಂತವಾಗಿ ಇಳಿದು ಹೋಗು ತಾಯಿ ಎಂದೂ, ಸಮೃದ್ಧಿ ಯಾಗುವಷ್ಟು ಮಳೆ ಬಂದು ಕೆರೆ ಹಳ್ಳ ಕೊಳ್ಳ ತುಂಬಿದ್ದರೆ, ಪ್ರತಿ ವರ್ಷವೂ ಹೀಗೆ ತುಂಬಿ ಬಾ ಎಂದೂ, ಪ್ರಾರ್ಥಿಸಿ ದೀಪ ಬಿಟ್ಟು ಹೊಸ ನೀರನ್ನು ಒಂದು ಗಿಂಡಿಯಲ್ಲಿ ಮನೆಗೆ ತರುತ್ತಾರೆ.
ಪುಷ್ಕರ ಎಂದರೆ, ಇವನನ್ನು ತೀರ್ಥಗಳ ರಾಜ ಎಂದು ಕರೆಯುತ್ತಾರೆ. ವರುಣನ ಮಗ ಪುಷ್ಕರ. ಇವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದನು, ಬ್ರಹ್ಮನು ಇವನ ತಪಸ್ಸಿಗೆ ಪ್ರಸನ್ನಗೊಂಡು ವರ ಕೊಡುತ್ತೇನೆ ಎಂದಾಗ, ಬ್ರಹ್ಮ ದೇವರೇ ನಿಮ್ಮ ಕಮಂಡಲದೊಳಗೆ ನಾನು ಇರಬೇಕು ಎಂದನು. (ಸೃಷ್ಟಿಕರ್ತ ಬ್ರಹ್ಮನ ಕಮಂಡಲ ಅಂದರೆ ಅದರಲ್ಲಿ ಗಂಗೆಯನ್ನು ಹಿಡಿದಿಟ್ಟ ಪವಿತ್ರವಾದ ಕಮಂಡಲ.) ಬ್ರಹ್ಮನು ಅಸ್ತು ಎಂದನು. ಪುಷ್ಕರನು ಬ್ರಹ್ಮನ ಕಮಂಡಲದೊಳಗೆ ಸೇರಿದನು. ಪುಷ್ಕ ರನು ಪ್ರತಿ ತಿಂಗಳು ಒಂದೊಂದು ನದಿಗಳಲ್ಲಿ ಬಂದು 12 ದಿನಗಳ ಕಾಲ ಇರುತ್ತಾನೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀವನದ ಅರ್ಧ ಭಾಗದಲ್ಲಿ ಮಾಡ ಬಹುದಾದ ಪುಣ್ಯ ಪ್ರಾಪ್ತಿಯಾಗುತ್ತದೆ. 12 ದಿನಗಳ ನಂತರ ಮತ್ತೆ ವರ್ಷದ ಕೊನೆಯಲ್ಲಿ 12 ದಿನಗಳು ಬರುತ್ತಾನೆ.
ಮೇಷ ರಾಶಿ ಬಂದಾಗ ಪುಷ್ಕರನು ಗಂಗಾ ನದಿಯಲ್ಲಿ ಇರುತ್ತಾನೆ ಗಂಗೆಯಲ್ಲಿ ಪುಷ್ಕರ ಸೇರಿ ಗಂಗಾ ಪುಷ್ಕರ ಸೇರಿದ ನದಿಯಾಗುತ್ತದೆ. ಆಗ ಗುರು ಬೃಹಸ್ಪತಿಗಳು ಗಂಗೆಯಲ್ಲಿ ಇರುತ್ತಾರೆ. ಎಲ್ಲವೂ ಸೇರಿ ವಿಶೇಷ ಶಕ್ತಿ ಯು ಸೇರುತ್ತದೆ. ಹಾಗೆಯೇ ವೃಷಭ ರಾಶಿ ಇದ್ದಾಗ ನರ್ಮದಾ ನದಿ( ನರ್ಮದ ಪುಷ್ಕರ), ಮಿಥುನದಲ್ಲಿ ಸರಸ್ವತಿ ನದಿ,( ಸರಸ್ವತಿ ಪುಷ್ಕರ) , ಕರ್ಕಾಟಕ ಯಮುನಾ ನದಿಗೆ, ಸಿಂಹ ರಾಶಿ ಗೋದಾವರಿ ನದಿ, ಕನ್ಯಾ ರಾಶಿಗೆ ಕೃಷ್ಣಾ ನದಿ, ತುಲಾ ರಾಶಿಗೆ ಕಾವೇರಿ, ವೃಶ್ಚಿಕ ರಾಶಿಗೆ ಭಿಮಾ ನದಿ, ಧನು ರಾಶಿಗೆ ಬ್ರಹ್ಮಪುತ್ರ, ಮಕರಕ್ಕೆ ತುಂಗಭದ್ರ , ಕುಂಭಕ್ಕೆ ಸಿಂಧೂ ನದಿ, ಮೀನ ರಾಶಿಗೆ ಮಹಾನದಿ ಯಲ್ಲಿ ಪುಷ್ಕರ ಇರುತ್ತಾನೆ.
ಇಂಥ ಮಾಸಗಳಲ್ಲಿ ಅಂತಹ ನದಿಗಳಲ್ಲಿ ಸ್ನಾನ ಮಾಡಿ ಪೂಜೆ, ಸ್ತೋತ್ರಗಳನ್ನು ಪಠಿಸುವುದು ದಾನ- ಧರ್ಮ ಮಾಡುವುದು, ಹೀಗೆ ಏನಾದರೂ ಸತ್ಕಾರ್ಯಗಳನ್ನು ಮಾಡಿದರೆ ತುಂಬಾ ಒಳ್ಳೆಯದು ಜಾತಕ ದೋಷಗಳು, ಶನಿ ಕಾಟ, ಗ್ರಹಚಾರ ಅದು ಇದು ಅಂಥ ಕಠಿಣ ಸಮಯದಲ್ಲಿ ದುಷ್ಟ ಶಕ್ತಿಯ ಪ್ರಭಾವ ತಗ್ಗುತ್ತದೆ ಇದು ಸರಳ ಪರಿಹಾರ ಮಾರ್ಗವು ಆಗಿದೆ.
ಪುಷ್ಕರ ತಪಸ್ಸು ಮಾಡಿ ಬ್ರಹ್ಮನಿಂದ ವರ ಪಡೆದಂತೆ ದೇವಗುರು ಬೃಹಸ್ಪತಿ ಗಳು ಬ್ರಹ್ಮನನ್ನು ಕುರಿತು ಪ್ರಾರ್ಥನೆ ಮಾಡಿದರು. ಏನು ವರ ಬೇಕೆಂದು ಬ್ರಹ್ಮ ಕೇಳಿದಾಗ, ನಾನು ಪುಷ್ಕರನ ಜೊತೆ ಇರಬೇಕು ಎಂದರು. ಅಂದರೆ ಪುಷ್ಕರ ಇರುವ ಕಮಂಡಲ ದೊಳಗೆ ಅಲ್ಲ. ಬೃಹಸ್ಪತಿಗಳಿಗೆ ಕಮಂಡಲದೊಳಗೆ ಇರಲು ಆಗುವುದಿಲ್ಲ ಅವರು ದೇವ ಗುರು. ದೇವ ಕಾರ್ಯಗಳಲ್ಲಿ ನಿರತರಾಗಿರಬೇಕು, ಆಯಾ ಕಾಲಕ್ಕೆ ಸರಿಯಾಗಿ ಸಲಹೆ- ಸೂಚನೆ- ಬೋಧನೆಗಳನ್ನು ದೇವತೆ ಗಳಿಗೆ ಕೊಡಬೇಕು. ಅವರ ಪುರೋಹಿತರಾಗಿ ದೇವಾನು ದೇವಗಳ ಶ್ರೇಯೋ ಭಿವೃದ್ಧಿಗೆ ಸದಾಕಾಲವು ಗುರು ಬೃಹಸ್ಪತಿ ಇರಬೇಕು ಆದುದರಿಂದ ಅವರು ಪುಷ್ಕರನ ಜೊತೆಯಲ್ಲಿ ( ಆಗಾಗ್ಗೆ ಪುಷ್ಕರನ ಜೊತೆ ಇರುವುದು) ನಾನೂ ಇರಬೇಕು ಎಂದರು. ಅದು ಹೇಗೆ? ಎಂದು ಯೋಚಿಸಿ ಬ್ರಹ್ಮನೇ ಹೇಳಿದ, ಬೃಹಸ್ಪತಿಗಳೇ ಪ್ರತಿಯೊಂದು ರಾಶಿಗೂ ಒಂದೊಂದು ಪ್ರಿಯವಾದ ನದಿ ಇರುತ್ತದೆ. ನೀವು ಸಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಒಂದು ವರ್ಷ ಪೂರ್ತಿ ಆ ರಾಶಿಯಲ್ಲಿ ಇರುತ್ತಾರೆ. ಆ ಸಮಯದಲ್ಲಿ ಆಯಾ ರಾಶಿ ತನಗೆ ಪ್ರಿಯವಾದ ನದಿಯಲ್ಲಿ ಇರುತ್ತದೆ. ಗುರು ಒಂದು ರಾಶಿ ಪ್ರವೇಶ ಮಾಡಿದರೆ ಆ ರಾಶಿಯಲ್ಲಿ ಒಂದು ವರ್ಷ ಇರುತ್ತಾರೆ. ರಾಶಿಗಳು ಅವುಗಳಿಗೆ ಪ್ರಿಯವಾದ ನದಿಯಲ್ಲಿ ಇರುತ್ತವೆ. ಆ ನದಿಗೆ ಗುರುವಿನ ಅಂಶವೂ ಸೇರುತ್ತದೆ 12 ತಿಂಗಳು ಕಳೆದ ಮೇಲೆ ಮತ್ತೊಂದು ರಾಶಿಗೆ ಗುರು ಪ್ರವೇಶ ಮಾಡುತ್ತಾರೆ. ಈ ರೀತಿ ಬೃಹಸ್ಪತಿ ಗಳು ಯಾವ ರಾಶಿಗೆ ಪ್ರವೇಶಿಸುತ್ತಾರೋ ಆ ರಾಶಿ ಯಾವ ನದಿಯಲ್ಲಿ ಇರುತ್ತದೆಯೋ ಆ ಸಮಯದ ಆರಂಭದಲ್ಲಿ 12 ದಿನಗಳ ಕಾಲ ಪುಷ್ಕರ ಬರುತ್ತಾನೆ. ಮತ್ತು ಆ ನದಿಯಲ್ಲಿದ್ದ ರಾಶಿ ಮುಂದಿನ ನದಿ ಪ್ರವೇಶಿಸುವ ಮುಂಚಿನ 12 ದಿನಗಳು ಮತ್ತೆ ಪುಷ್ಕರ ನದಿಗೆ ಬರುತ್ತಾನೆ ಆ ಸಮಯದಲ್ಲಿ ಅಂದರೆ ವರ್ಷದ ಆರಂಭದ 12 ದಿನ, ವರ್ಷದ ಕೊನೆಯ 12 ದಿನಗಳು ಪುಷ್ಕರನ ಜೊತೆಯಲ್ಲಿ ನೀವು ಇರಬಹುದು. ಎಂದು ಬೃಹಸ್ಪತಿ ಗಳಿಗೆ ಬ್ರಹ್ಮನು ಹೇಳಿದನು.
ಅಂದರೆ ಗುರು ಬಹಸ್ಪತಿ ಯಾವುದೇ ರಾಶಿಯಲ್ಲಿ ಇರುವ ಮೊದಲು 12 ದಿವಸ ಮತ್ತು ಬಿಡುವ ಕೊನೆಯ 12 ದಿನಗಳು ಪುಷ್ಕರನ ಜೊತೆ ಗುರು ಇದ್ದಂತಾಗುತ್ತದೆ. ಆ ರಾಶಿ ಯಲ್ಲಿ ಗುರುವಿದ್ದರೆ ಗುರುವಿನ ಅಂಶವು ಆ ನದಿ ಯಲ್ಲಿ ಇರುತ್ತದೆ. ಪುಷ್ಕರನು ಒಂದು ರಾಶಿಯಲ್ಲಿ 12 ದಿನಗಳು ಇದ್ದು ಮತ್ತೆ ವಾಪಸ್ಸು ಹೋಗಿ ಬ್ರಹ್ಮನ ಕಮಂಡಲು ಸೇರಿಕೊಳ್ಳುತ್ತಾನೆ ಮತ್ತು ಯಾವ ನದಿಯಲ್ಲಿ ಪುಷ್ಕರ ಬಂದಿರುತ್ತಾನೋ ಆ ನದಿಗೆ 12 ದಿನಗಳು ವರೆಗೆ ವಿಶೇಷ ಶಕ್ತಿ ಇರುತ್ತದೆ. ವರ್ಷಕ್ಕೊಮ್ಮೆ ಸಂಚರಿಸುವ ಗುರು ಗ್ರಹವು ಆ ನದಿಗೆ ಪ್ರವೇಶ ಮಾಡಿದಾಗ ಮತ್ತಷ್ಟು ದೈವಿಕ ಶಕ್ತಿ ಹೆಚ್ಚಾಗುತ್ತದೆ. ಏಕೆಂದರೆ ದೈವಿಕ ಶಕ್ತಿಯ ಜೊತೆ ಬ್ರಹ್ಮಾಂಡದ ಎಲ್ಲಾ ತೀರ್ಥಗಳು ಗುಪ್ತ ವಾಹಿನಿಯಾಗಿ ಹರಿಯುತ್ತದೆ. ದೇವಾನು ದೇವತೆಗಳು, ಋಷಿಗಳು ಪಿತೃಗಳು ಗುರು ಬೃಹಸ್ಪತಿ ಪುಷ್ಕರ ನೊಂದಿಗೆ ಸನ್ನಿಹಿತರಾಗಿರುತ್ತಾರೆ. ಈ ರೀತಿ ಗುರು ಬೃಹಸ್ಪತಿ ಚಲಿಸಿದ ರಾಶಿ
ಇರುವ ನದಿಗೆ ಪುಷ್ಕರ ಪ್ರವೇಶ ಮಾಡಿದ ಮಹಾಪುಣ್ಯ ಆ ನದಿಯಲ್ಲಿ ಒಂದು ವರ್ಷದ ತನಕ ಇರುತ್ತದೆ. ಕಾರ್ತಿಕ ಮಾಸದ ಹುಣ್ಣಿಮೆ ದಿನ ಮಾಡುವ ಸ್ನಾನ ದಿಂದ ಅನಂತ ಪುಣ್ಯ ಫಲ ಪ್ರಾಪ್ತಿ ದೊರೆಯುತ್ತದೆ. ಇಂಥ ಸಮಯದಲ್ಲಿ ಸ್ನಾನ ಪೂಜೆ ಮಾಡುವುದು ಜಲದೇವತೆಗೆ ಪೂಜೆ ,ಅರ್ಘ್ಯ ಅರ್ಪಿ ಸಿದ್ದು ದೇವತೆಗೆ ಕೃತಜ್ಞತೆ ಸಲ್ಲಿಸಿದ ಹಾಗೆ ಆಗುತ್ತದೆ. ಗುರು ಬಲವಿಲ್ಲದವರು ಪುಷ್ಕರ ಸ್ನಾನ ಮಾಡಿದರೆ ಗುರುಬಲ ದೊರೆಯುತ್ತದೆ ಗುರು ಮತ್ತು ರಾಹು ಸಂಯೋಗ ದಿಂದ ಉಂಟಾಗುವ ದೋಷ ನಿವಾರಣೆಯಾಗುತ್ತದೆ. ಬ್ರಾಹ್ಮೀ ಮುಹೂರ್ತ ದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅಭಿಮುಖವಾಗಿ ಅರ್ಘ್ಯ ಕೊಡಬೇಕು ಇದರಿಂದ ದೀರ್ಘಕಾಲದ ಅನಾ ರೋಗ್ಯ ಗುಣವಾಗುತ್ತದೆ. ಆತಂಕಗಳು ಕಳೆಯುತ್ತದೆ. ಅನೇಕ ಶುಭಕಾರ್ಯ ಕೈಗೊಳ್ಳುವಂತೆ ಮನಸ್ಸಿಗೆ ಪ್ರೇರಣೆ ದೊರೆತು, ದೇಹ ಸ್ವಾಸ್ಥ್ಯವಾಗಿರುತ್ತದೆ.
ಈ ಸಮಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ, ಸೂರ್ಯನಿಗೆ ಅರ್ಘ್ಯ, ಹಾಗೆ ಅರಳಿ, ಬೇವು, ಆಲ, ಅಶ್ವತ ಮರಗಳು, ತುಳಸಿ, ನಲ್ಲಿ, ಬಿಲ್ವಪತ್ರೆ, ಗಿಡಗಳಿಗೆ ನೀರು ಹಾಕಿ ಒಂದು ಪ್ರದಕ್ಷಿಣೆ ನಮಸ್ಕಾರ ಮಾಡಿದರೆ ಹಲವು ಪಾತಕಗಳ ದೋಷ ನಿವಾರಣೆಯಾಗುತ್ತದೆ. ಗೋವುಗಳಿಗೆ ಗೋಗ್ರಾಸ ಇಡುವುದು, ಅನ್ನ- ವಸ್ತ್ರ ಗಳು ದಾನ ಮನೆಯಲ್ಲಿ ಚಿಕ್ಕದಾಗಿ ಒಂದು ಪೂಜೆ
(ದೇವಿ ಪಾರಾಯಣ, ಜಪ, ನವಗ್ರಹ ಪೂಜೆ, ಸತ್ಯ ನಾರಾಯಣ ಪೂಜೆ)
ಏನಾದರೂ ಒಂದು ಮಾಡಿಸುವ ಪದ್ಧತಿ ಬೆಳೆಸಿಕೊಂಡಿರುತ್ತಾರೆ. ಚೈತ್ರ ವೈಶಾಖ ಮಾಸಗಳು ಮಾಸಗಳಿಗೆ ರಾಜರಿದ್ದಂತೆ. ವಸಂತ ಋತು, ಸಮೃದ್ಧಿ ಯಾಗಿ ಹೂವು ಹಣ್ಣು ಸಿಗುವ ಕಾಲ. ಪ್ರಶಸ್ತವಾದ ಮುಹೂರ್ತಗಳು
ಸಿಗುತ್ತವೆ. ಇಂಥ ಶುಭ ಮುಹೂರ್ತಗಳಿಗಾಗಿ ಭಕ್ತರು ಕಾದಿರುತ್ತಾರೆ
ನದೀ ಸ್ತೋತ್ರಂ :-
ನದೀ ಸ್ತೋತ್ರಂ ಪ್ರವಕ್ಷ್ಯಾಮಿ ಸರ್ವ ಪಾಪ ಪ್ರಣಾಶನಂ!
ಭಾಗೀರಥಿ ವಾರಣಾಸೀ ಯಮುನಾ ಚ ಸರಸ್ವತೀ !
ನಾರದೀ ಚ ನದೀ ಪೂರ್ಣಾ ಸರ್ವನದ್ಯ:
ಪ್ರಾತ:ಕಾಲೇ ಪಠೇನಿತ್ಯಂ ಸ್ನಾನಕಾಲೇ ವಿಶೇಷತಃ!!
ಕೋಟಿ ಜನ್ಮಾರ್ಜಿತಂ ಪಾಪಕ ಸ್ಮರಣೇನ ವಿನಶ್ಯತಿ!
ಇಹಲೋಕೇ ಸುಖೀ ಭೂತ್ವಾ ವಿಷ್ಣು ಲೋಕಂ ಸಗಚ್ಛತಿ !!
***
ನದಿ ಮತ್ತು ಸರೋವರಗಳಲ್ಲಿ ಮಾಡಿದ ಸ್ನಾನವು ಏಕೆ ಉತ್ತಮ ?
ನದಿ ಮತ್ತು ಜಲಾಶಯಗಳಲ್ಲಿನ ನೀರು ಹರಿಯುತ್ತಿರುತ್ತದೆ. ಈ ನೀರಿನಲ್ಲಿ, ಹರಿಯುವ ನೀರಿನ ನಾದದಿಂದ ಸುಪ್ತ ಸ್ತರದಲ್ಲಿ ತೇಜ ದಾಯಕ ಇಂಧನವನ್ನು ನಿರ್ಮಾಣ ಮಾಡುವ, ಹಾಗೆಯೇ ಅದನ್ನು ಘನೀಕೃತಗೊಳಿಸುವ ಕ್ಷಮತೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಸ್ನಾನ ಮಾಡುವುದರಿಂದ ನೀರಿನ ತೇಜ ದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವು ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತದೆ.
ನದಿ ಮತ್ತು ಜಲಾಶಯಗಳಲ್ಲಿ ಮಾಡಿದ ಸ್ನಾನವು ಉತ್ತಮ, ಬಾವಿಯಲ್ಲಿ ಮಾಡಿದ ಸ್ನಾನವು ಮಧ್ಯಮ ಮತ್ತು ಮನೆಯಲ್ಲಿ ಮಾಡಿದ ಸ್ನಾನವು ನಿಕೃಷ್ಟವಾಗಿದೆ.
ನದಿ ಮತ್ತು ಸರೋವರಗಳಲ್ಲಿ ಮಾಡಿದ ಸ್ನಾನವನ್ನು ಉತ್ತಮವೆಂದು ತಿಳಿದುಕೊಳ್ಳುವುದರ ಕಾರಣಗಳು : ನದಿ ಮತ್ತು ಜಲಾಶಯಗಳಲ್ಲಿನ ನೀರು ಹರಿಯುತ್ತಿರುತ್ತದೆ. ಈ ನೀರಿನಲ್ಲಿ, ಹರಿಯುವ ನೀರಿನ ನಾದದಿಂದ ಸುಪ್ತ ಸ್ತರದಲ್ಲಿ ತೇಜ ದಾಯಕ ಇಂಧನವನ್ನು ನಿರ್ಮಾಣ ಮಾಡುವ, ಹಾಗೆಯೇ ಅದನ್ನು ಘನೀಕೃತಗೊಳಿಸುವ ಕ್ಷಮತೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಸ್ನಾನ ಮಾಡುವುದರಿಂದ ನೀರಿನ ತೇಜ ದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವು ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತದೆ.
ಈ ರೀತಿಯಲ್ಲಿ ಈ ರಜ-ತಮಾತ್ಮಕ ಇಂಧನವು ನೀರಿನಲ್ಲಿ ವಿಸರ್ಜನೆಯಾಗಿ ನೀರಿನಲ್ಲಿನ ತೇಜದಲ್ಲಿಯೇ ವಿಘಟನೆಯಾಗುತ್ತದೆ. ಇದರಿಂದ ದೇಹವು ಸ್ಥೂಲದೊಂದಿಗೆ ಸೂಕ್ಷ್ಮದಲ್ಲಿಯೂ ಶುದ್ಧ ಮತ್ತು ಪವಿತ್ರವಾಗುತ್ತದೆ. ಆದುದರಿಂದ ಈ ಸ್ನಾನವನ್ನು ಉತ್ತಮವೆಂದು ತಿಳಿದುಕೊಳ್ಳಲಾಗುತ್ತದೆ. ನೀರು ಎಷ್ಟು ಹರಿಯುತ್ತಿರುತ್ತದೆಯೋ ಅದು ಅಷ್ಟೇ ಪ್ರಮಾಣದಲ್ಲಿ ತೇಜತತ್ತ್ವದ ಸ್ತರದಲ್ಲಿ ರಜ-ತಮಾತ್ಮಕ ಕಣಗಳನ್ನು ವಿಘಟಿಸುವಂತಹದ್ದಾಗಿರುತ್ತದೆ.
ನದಿ, ಕೆರೆ, ಸರೋವರ ಮುಂತಾದ ಸ್ಥಳಗಳಲ್ಲಿ ಸ್ನಾನವನ್ನು ಮಾಡುವುದರಿಂದ ಜೀವಕ್ಕೆ ಪಂಚತತ್ತ್ವಗಳ ಸಹಾಯದಿಂದ ದೇಹದ ಶುದ್ಧಿಯನ್ನು ಮಾಡಿಕೊಳ್ಳಲು ಆಗುತ್ತದೆ : ಸಾಧ್ಯವಿದ್ದಲ್ಲಿ ನದಿ, ಕೆರೆ, ಸರೋವರ ಮುಂತಾದ ಸ್ಥಳಗಳಲ್ಲಿ ಸ್ನಾನವನ್ನು ಮಾಡಬೇಕು. ಪ್ರಕೃತಿಯ ವಾತಾವರಣದಲ್ಲಿ ಸ್ನಾನವನ್ನು ಮಾಡುವುದರಿಂದ ಜೀವಕ್ಕೆ ಪಂಚತತ್ತ್ವಗಳ ಸಹಾಯದಿಂದ ದೇಹದ ಶುದ್ಧಿಯನ್ನು ಮಾಡಿಕೊಳ್ಳಲು ಬರುತ್ತದೆ. ಇದರಿಂದ ದೇಹದಲ್ಲಿರುವ ರಜ-ತಮಕಣಗಳು ದೊಡ್ಡ ಪ್ರಮಾಣದಲ್ಲಿ ವಿಘಟನೆಯಾಗುತ್ತವೆ. ಜೀವದ ಪ್ರಾಣದೇಹ, ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹಗಳ ಶುದ್ಧಿಯಾಗಿ ಎಲ್ಲ ದೇಹಗಳು ಸಾತ್ತ್ವಿಕತೆಯನ್ನು ಗ್ರಹಿಸಲು ಸಜ್ಜಾಗುತ್ತವೆ ಮತ್ತು ಜೀವವು ಸ್ವಲ್ಪ ಪ್ರಮಾಣದಲ್ಲಿ ನಿರ್ಗುಣ ಇಂಧನವನ್ನು ಮತ್ತು ಉಚ್ಚ ದೇವತೆಗಳ ತತ್ತ್ವವನ್ನು ಗ್ರಹಿಸಬಲ್ಲದು. ಅದೇ ರೀತಿ ಜೀವದ ಬಾಹ್ಯ ವಾಯುಮಂಡಲವು ಬ್ರಹ್ಮಾಂಡದ ವಾಯುಮಂಡಲದ ಸಂಪರ್ಕಕ್ಕೆ ಬರುವುದರಿಂದ ಜೀವವು ಬ್ರಹ್ಮಾಂಡದಲ್ಲಿನ ತತ್ತ್ವಗಳನ್ನೂ ಸ್ವಲ್ಪ ಪ್ರಮಾಣದಲ್ಲಿ ಪಿಂಡದ ಮಾಧ್ಯಮದಿಂದ ಗ್ರಹಣ ಮಾಡಿಕೊಂಡು ಪ್ರಕ್ಷೇಪಿಸಬಹುದು. – ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರು ಓರ್ವ ಜ್ಞಾನಿ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೧೬.೪.೨೦೦೭, ಸಾಯಂಕಾಲ ೬.೧೩)
(ಇದೇ ಕಾರಣಕ್ಕಾಗಿ ಯಾವುದಾದರೂ ತೀರ್ಥ ಕ್ಷೇತ್ರದಲ್ಲಿ ಧಾರ್ಮಿಕ ವಿಧಿಗಳನ್ನು ಮಾಡಲು ಹೋದಾಗ ಪುರೋಹಿತರು ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಲು ಹೇಳುತ್ತಾರೆ. – ಶ್ರೀ. ನಿಷಾದ ದೇಶಮುಖ)
(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ’)
***
ಕುಂಭಮೇಳ ಎನ್ನುವದುಮೌಡ್ಯವೇ🤔❓
ಉತ್ತರ ಇಲ್ಲಿ ಇದೆ👇
ಗಂಗಾನದಿಯು ಉದ್ಭವಿಸುವುದು ಗಂಗೋತ್ರಿಯಲ್ಲಿಯೋ ಅಥವಾ ಗೋಮುಖದಲ್ಲಿಯೋ..❓
ಅವೆರಡರಲ್ಲಿಯೂ ಅಲ್ಲ...‼️
ಉತ್ತರಖಂಡ ರಾಜ್ಯದ ಶ್ರೀ ಕ್ಷೇತ್ರ ಬದರಿನಾಥದಿಂದ ಮೇಲೆ ಸಾತೋಪತ್ ಹಿಮಾನಿ ಎನ್ನುವ ಸ್ಥಳದಿಂದ ಎರಡು ಪುಟ್ಟ ಪುಟ್ಟ ನದಿಗಳು ಉಗಮವಾಗುತ್ತದೆ ವಿಷ್ಣುಗಂಗಾ ಮತ್ತು ದೌಲಿಗಂಗಾ...‼️
ಈ ಎರಡು ನದಿಗಳು ಹರಿದು ಮುಂದೆ ಬಂದು ಒಂದರೊಳಗೊಂದು ಸಂಗಮವಾಗುತ್ತದೆ, ಇದು ಮೊತ್ತ ಮೊದಲ ಸಂಗಮ ಕ್ಷೇತ್ರ ವಿಷ್ಣು ಪ್ರಯಾಗ...‼️
ಎರಡು ನದಿಗಳು ಸಂಗಮವಾದಾಗ ಯಾವ ನದಿಯ ಆಳ ಹೆಚ್ಚಾಗಿರುತ್ತದೆಯೋ ಆ ನದಿಯ ಹೆಸರಿನಿಂದ ಮುಂದಿನ ನದಿಯನ್ನು ಗುರುತಿಸುತ್ತಾರೆ.
ಎರಡು ನದಿಗಳ ಆಳ ಸಮಸಮವಾಗಿದ್ದರೆ ಮುಂದಿನ ಹರಿವಿಗೆ ಹೊಸ ಹೆಸರನ್ನು ಇಡುತ್ತಾರೆ.
ವಿಷ್ಣು ಪ್ರಯಾಗದಲ್ಲಿ ವಿಷ್ಣುಗಂಗಾ ಮತ್ತು ದೌಲಿಗಂಗಾ ಈ ಎರಡು ನದಿಗಳ ಆಳ ಹೆಚ್ಚುಕಡಿಮೆ ಸಮ ಸಮವಾಗಿರುವುದರಿಂದ ಮುಂದೆ ಈ ನದಿಯನ್ನು ಅಲಕಾನಂದ ಎಂದು ಕರೆಯುತ್ತಾರೆ.
ಅಲಕಾನಂದ ನದಿಯು ಮುಂದೆ ಹರಿದು ಬರುವಾಗ ನಂದಾಕಿನಿ ನದಿ ಎಡ ಬಾಗದ ಕಡೆಯಿಂದ ಹರಿದು ಬಂದು ಅಲಕಾನಂದ ನದಿಯೊಳಗೆ ಲೀನವಾಗಿ ಬಿಡುತ್ತಾಳೆ ಆ ಜಾಗ ನಂದಪ್ರಯಾಗ.
ಅಲಕಾನಂದ ನದಿಯು ನಂದಾಕಿನಿ ನದಿಯೊಡನೆ ಕೂಡಿಕೊಂಡು ಮುಂದೆ ಹರಿದು ಬರುವಾಗ ಅಲಕಾನಂದ ನದಿಯ ಮಡಿಲಿಗೆ ಪಿಂಡಾರ ನದಿ ಬಂದು ಸೇರುತ್ತಾಳೆ. ಈ ಜಾಗವನ್ನು ಕರ್ಣ ಪ್ರಯಾಗ ಎಂದು ಹೆಸರಿಸಿದ್ದಾರೆ.
ಈ ಅಲಕಾನಂದ ನದಿ ಮುಂದೆ ಹರಿದು ಸಾಗುವಾಗ ಕೇದಾರನಾಥದಲ್ಲಿ ಉಗಮವಾಗಿ ಬಹಳ ಗಂಭೀರವಾಗಿ ಹರಿದು ಬಂದು ಅಲಕಾನಂದೆಯಲ್ಲಿ ಲೀನವಾಗುವುದು ಮಂದಾಕಿನಿ.
ಅಲಕಾನಂದ ಮತ್ತು ಮಂದಾಕಿನಿಯ ಸಂಗಮ ಸ್ಥಳ ರುದ್ರ ಪ್ರಯಾಗ ಎಂದು ಪ್ರಸಿದ್ಧವಾಗಿದೆ
1) ನಂದಾಕಿನಿ 2) ಪಿಂಡಾರ ಮತ್ತು 3) ಮಂದಾಕಿನಿ ಈ ಮೂರು ನದಿಗಳ ಆಳ ಅಲಕಾನಂದ ನದಿಯ ಆಳಕ್ಕಿಂತ ಕಡಿಮೆ ಇರುವುದರಿಂದ ಈ ನದಿಗಳು ಅಲಕಾನಂದ ನದಿಯೊಡನೆ ಸಂಗಮವಾದ ತಕ್ಷಣ ಅವುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ ಮತ್ತು ಮುಂದೆ ಅವುಗಳನ್ನು ಅಲಕಾನಂದ ಎಂದೇ ಗುರುತಿಸುತ್ತಾರೆ.
ಉತ್ತರಖಂಡದ ಮತ್ತೊಂದು ಭಾಗ ಉತ್ತರಕಾಶಿಯಲ್ಲಿರುವ ಗಂಗೋತ್ರಿಯ ಗೋಮುಖದಿಂದ ಭಾಗೀರಥಿ ನದಿ ಉದ್ಭವಿಸಿ ಅಲಕಾನಂದ ಇರುವಡೆಗೆ ಧಾವಿಸಿ ಬರುತ್ತಾಳೆ.
ಹೀಗೆ ದಾವಿಸಿ ಬಂದ ಭಾಗೀರಥಿ ನದಿ ಮತ್ತು ಅಲಕಾನಂದ ನದಿ ಒಂದರೊಳಗೊಂದು ಸಂಗಮ ವಾಗುವ ಕ್ಷೇತ್ರವೇ ದೇವ ಪ್ರಯಾಗ.
ದೇವ ಪ್ರಯಾಗದಲ್ಲಿ ಸಂಗಮವಾಗುವ ಭಾಗೀರಥಿ ಮತ್ತು ಅಲಕಾನಂದ ನದಿಗಳ ಆಳ ಸಮವಾಗಿರುವುದರಿಂದ ದೇವ ಪ್ರಯಾಗದಲ್ಲಿ ಅಲಕಾನಂದ ಮತ್ತು ಭಾಗೀರಥಿ ನದಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಮುಂದೆ ಗಂಗಾ ನದಿಯಾಗಿ ಹರಿಯುತ್ತದೆ.
ಈ ಐದು ಕ್ಷೇತ್ರಗಳನ್ನು ಅಂದರೆ 1) ವಿಷ್ಣು ಪ್ರಯಾಗ 2)ನಂದ ಪ್ರಯಾಗ 3) ಕರ್ಣ ಪ್ರಯಾಗ 4) ರುದ್ರ ಪ್ರಯಾಗ ಮತ್ತು 5) ದೇವ ಪ್ರಯಾಗಗಳನ್ನು ಕೂಡಿಸಿ ಪಂಚ ಪ್ರಯಾಗ ಎಂದೇ ಗುರುತಿಸುತ್ತಾರೆ.
ಹೀಗೆ ಹಲವು ನದಿಗಳು ಕೂಡಿ ಗಂಗಾ ನದಿಯಾಗಿ ಗಿರಿ ಪರ್ವತಗಳ ಸಾಲಿನಿಂದ ಗಂಗೆ ಹೃಷಿಕೇಶಕ್ಕೆ ಇಳಿದು ಬರುತ್ತಾಳೆ.
ಹೃಷಿಕೇಶ, ಹರಿದ್ವಾರವನ್ನು ಹಾದು ಮುಂದೆ ಬರುವ ಗಂಗಾ ಮಾತೆ ಯಮುನೋತ್ರಿಯಲ್ಲಿ ಉದ್ಭವಿಸುವ ಯಮುನಾ ನದಿ ಜೊತೆ ಸಂಗಮವಾಗುವ ಜಾಗ ಪ್ರಯಾಗಗಳಲ್ಲಿ ಅತ್ಯುನ್ನತವಾದ ಕ್ಷೇತ್ರ ಪ್ರಯಾಗಗಳಲ್ಲೇ ರಾಜ..‼️
ಪ್ರಯಾಗರಾಜ್
ಗಿರಿ ಕಂದರಗಳ ನಡುವೆ ಉಗಮವಾಗಿ ಗಂಗಾ ನದಿಯಾಗಿ ಹರಿದು ಬರುವ ಈ ನೀರಿನಲ್ಲಿ ಬ್ಯಾಕ್ಟೀರಿಯೋಫೇಜ್ ಅಂದರೆ ಬ್ಯಾಕ್ಟೀರಿಯಾ ಭಕ್ಷಕನಿರುತ್ತಾನೆ ಇದೇ ಕಾರಣದಿಂದಾಗಿ ಗಂಗಾನದಿಯ ನೀರು ಬಹಳ ಪರಿಶುದ್ಧವಾಗಿರುತ್ತದೆ..‼️
ಈ ಗಂಗೆಯ ನೀರನ್ನು ಶೇಖರಿಸಿ ತಂದು ಮನೆಯಲ್ಲಿಟ್ಟುಕೊಂಡರೆ ವರ್ಷಗಳು ಕಳೆದರೂ ನೀರು ಕೆಡುವುದಿಲ್ಲ ...‼️
ಇಂತಹ ಪರಿಶುದ್ಧವಾದ ಮತ್ತು ಅಮೃತ ಸಮಾನವಾದ ಗಂಗೆಯಲ್ಲಿ ಮಿಂದು, ಗಂಗಾ ಪಾನ ಮಾಡುವ ನಮ್ಮ ಸಾಧು ಸಂತರ ಜೊತೆ ಸೇರಿ ನಾವು ಮಾಡುವ ದಿವ್ಯ ಸ್ನಾನವೇ ಭವ್ಯ ಕುಂಭ ಸ್ನಾನ..‼️
ಅದುವೇ
ಮಹಾಕುಂಭದ ಸಂಭ್ರಮ...
ಅದು ನಮ್ಮ ದೇಹದ ಹೊರಗಿನ ಮತ್ತು ಒಳಗಿನ ಮಲಿನವನ್ನು ಸಂಪೂರ್ಣವಾಗಿ ತೊಳೆದು ಹಾಕುವ ಒಂದು ವಿಧಾನ...!!
ಈ ಎಲ್ಲಾ ವಿಷಯಗಳು ತಿಳಿಯದೆ ಇರುವವರು ಕುಂಭಮೇಳ ಎನ್ನುವುದೊಂದು ಮೌಡ್ಯ ಎಂದು ಎಲ್ಲರನ್ನು ದಾರಿ ತಪ್ಪಿಸುತ್ತಿರುತ್ತಾರೆ.😡
***
No comments:
Post a Comment