SEARCH HERE

Saturday, 31 July 2021

ಮಳೆ ನಕ್ಷತ್ರ male nakshatra rain stars

 ಮಳೆ ನಕ್ಷತ್ರ 

ಮಳೆ ಬಂದಷ್ಟೂ ಒಳ್ಳೆಯದಂತೆ...


ಹಿಂದೆ ನಮ್ಮ ಪೂರ್ವಜರು ಮಳೆ ಮತ್ತು ಮಳೆ ನಕ್ಷತ್ರಗಳ ಮೇಲೆ ಕಟ್ಟಿದ ಗಾದೆಗಳ ಮಾಹಿತಿ ಇಲ್ಲಿದೆ.

#ಮಳೆಯ_ಕುರಿತಾದ_ಗಾದೆಗಳು


ಹಿಂದೆ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ.


🔹ಮೃಗಶಿರ -

🌧 ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು.

🌧 ಮೃಗಶಿರಾ ಮಳೆಯಲಿ ಗಿಡ ಮುರಿದು ನೆಟ್ಟರೂ ಬದುಕುವುದು.

🌧 ಮ್ರಗಶಿರ ಮಿಂಚಿದರೆ ಮೂರು ಮಳೆ ಇಲ್ಲ.


🔹ಆರಿದ್ರಾ-

 🌧ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, 

🌧 ಆದರೆ ಆರಿದ್ರಾ, ಇಲ್ವಾದ್ರೆ ದರಿದ್ರ!

🌧 ಆರಿದ್ರಾ ಮಳೆ ಆರದೆ ಹುಯ್ಯುತ್ತೇ, 

🌧 ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, 

🌧 ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

🌧 ಆರಿದ್ರೆಯಲಿ ಗಿಡ ಆದರೆ ಆದಿತು..


🔹 ಪುನರ್ವಸು -

ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು. 


🔹ಪುಷ್ಯ-

🌧 ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)

🌧 ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು..


🔹ಆಶ್ಲೇಷ-

🌧 ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, 

🌧 ಅಸಲೆ ಮಳೆ ಕೈತುಂಬಾ ಬೆಳೆ, 

🌧 ಆಶ್ಲೇಷ ಮಳೆ ಈಸಲಾರದ ಹೊಳೆ.

🌧 ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು. 

🌧 ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗೀತು

🌧 ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ.

🌧 ಆಶ್ಲೇಷಾ ಗಿಡಗಳಿಗೆ ಕೊಳೆಬರಿಸುವ  ನಂಜಿನ ಮಳೆ.

🌧 ಅಶ್ಲೆ ಮಳೆ ಹುಯ್ಶಾಲಿ, ಸೋಸಲು ಗಟ್ಟ ಹತ್ತಾಲಿ


🔹ಮಘ- 

🌧 ಬಂದರೆ ಮಗೆ ಹೋದರೆ ಹೊಗೆ, 

🌧 ಬಂದರೆ ಮಘೆ ಇಲ್ಲದಿದ್ದರೆ ಧಗೆ, 

🌧 ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

🌧 ಮಗೆ ಮಳೆ ಮಗೆ ಗಾತ್ರ ಬೀಳ್ತದೆ.

🌧 ಮಘೇ ಮೊಗೆಬೆಳೆಯುವ ಮಳೆ.. 

🌧 ಮಘಮಳೆ ಮೊಗೆದು ಹೊಯ್ಯುವುದು.


🔹ಹುಬ್ಬ-

🌧 ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.

🌧 ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ..

🌧 ಹುಬ್ಬೆ ಮಳೆ ಅಬ್ಬೆ ಹಾಲು ಕುಡದ್ಹಾಂಗೆ.

🌧 ಹುಬ್ಬೆ ಮಳೆ ಉಬ್ಬುಬ್ಕೊಂಡು ಹೊಡೆ.

🌧 ಹುಬ್ಬೇ ಮಳೆ ಉಬ್ಬುಬ್ಬುಕೊಂಡು ಬಂದ್ರು ಗುಬ್ಬಚ್ಚಿ ಪುಕ್ಕ ನೆನಿಲಿಲ್ಲ.


🔹ಉತ್ತರೆ-

🌧 ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.

🌧 ಉತ್ತರ ಎದುರುತ್ತರದ ಮಳೆ.

🌧 ಉತ್ತರೆ ಮಳೆಗೆ ಹುತ್ತದಲ್ಲಿರುವ ಹಾವೆಲ್ಲಾ ಹೊರಗೆ.

🌧 ಉತ್ತರಿ ಬಿತ್ತಿರಿ ಅದು ಬರದಿದ್ದರೆ ನೀವು ಸತ್ತಿರಿ


🔹ಹಸ್ತ-

🌧 ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ

🌧 ಹಸ್ತಾ ಭಾರಿಸಿದರೆ ಅಷ್ಟೇ..

🌧 ಹಸ್ತ ಮಳೆ ಎತ್ಲಿಂದಾದ್ರೂ ಬರುತ್ತೆ


🔹ಚಿತ್ತ-

🌧 ಕುರುಡು ಚಿತ್ತೆ ಎರಚಿದತ್ತ ಬೆಳೆ.

🌧 ಚಿತ್ತಾ ಮಳೆ ವಿಚಿತ್ರ ಬೆಳೆ!

🌧 ಚಿತ್ತಾ ಚಿತ್ರವಿಚಿತ್ರ ಮಳೆ..

🌧 ಕುರ್ಡು ಚಿತ್ತೆ ಎತ್ಲಾಗ ಬಿದ್ದರೂ ಬರುತ್ತೆ.


🔹ಸ್ವಾತಿ-

🌧 ಸ್ವಾತಿ ಮಳೆ ಮುತ್ತಿನ ಬೆಳೆ.

🌧 ಸ್ವಾತಿ ಮಳೆ ಹೇತೆನೆಂದ್ರೂ ಬಿಡದು.

🌧 ಸ್ವಾತಿ ಮುತ್ತಿನ ಹನಿಯ ಮಳೆ..

🌧 ಸ್ವಾತಿ ಮಳೆ ಹೋದ್ರಾ ಇನ್ಯಾತರ ಮಳೆ


🔹ವಿಶಾಖ-

🌧 ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

🌧 ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ.

🌧 ವಿಶಾಖೆ ಮಳೆಗೆ ಹುಳವೆಲ್ಲಾ ಸಾಯುತ್ತೆ.


🔹ಅನುರಾಧ-

🌧 ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.

🌧 ಅನುರಾಧಾ ಹೊಯ್ದರೆ ರೋಗ ನಿವಾರಣೆ.


🔹 ಪೂರ್ವಾಷಾಢ, ಉತ್ತರಾಷಾಢ 

🌧 ಪೂರ್ವಾಷಾಢ, ಉತ್ತರಾಷಾಢ ಬೇಡವೇ ಬೇಡ. 


ಸದ್ವಿಚಾರ ... ಸಂಗ್ರಹ.

***


No comments:

Post a Comment