SEARCH HERE

Friday 1 October 2021

ಪುರುಷ ಕೂಡಾ ಹೇಗಿರಬೇಕೆನ್ನುವುದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ

 ಕಾರ್ಯೆಷು ದಾಸಿ

ಕರಣೇಶು ಮಂತ್ರಿ

ಭೋಜನೇಶು ಮಾತಾ

ಶಯನೇಶು ರಂಭಾ

ರೂಪೇಶು ಲಕ್ಷ್ಮೀ

ಕ್ಷಮಯಾಧರಿತ್ರಿ

ಸತ್ಧರ್ಮ ಯುಕ್ತಾ

ಕುಲಧರ್ಮ ಪತ್ನೀ


ಈ ಶ್ಲೋಕವನ್ನು ನೀವೆಲ್ಲರೂ ಕೇಳಿರುತ್ತೀರಿ. ಆದರೆ ಪುರುಷ ಗುಣಗಾನದ ಒಂದು ಶ್ಲೋಕ ಇದೆ.


ಸ್ತ್ರೀ ಹೇಗಿರಬೇಕೆನ್ನುವುದೇ ಅಲ್ಲ 

ಪುರುಷ ಕೂಡಾ ಹೇಗಿರಬೇಕೆನ್ನುವುದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.


ಕಾರ್ಯೇಷು ಯೋಗೀ ಕರಣೇಷು ದಕ್ಷ:  

ರೂಪೇ ಚ ಕೃಷ್ಣ: ಕ್ಷಮಯಾ ತು ರಾಮಃ: 

ಭೋಜ್ಯೇಷು ತೃಪ್ತಃ: ಸುಖ ದುಃಖ ಮಿತ್ರಂ

ಷಟ್ಕರ್ಮಯುಕ್ತ: ಖಲು ಧರ್ಮನಾಥ:


1. ಕಾರ್ಯೇಷು ಯೋಗೀ

ಕೆಲಸ ಮಾಡುವುದರಲ್ಲಿ ಒಬ್ಬ ಯೋಗಿಯಂತೆ ಪ್ರತಿಫಲವನ್ನಪೇಕ್ಷಿಸದೆ ಮಾಡಬೇಕು


2.ಕರಣೇಷು ದಕ್ಷ:🏹

ಕುಟುಂಬವನ್ನು ನಡೆಸುವುದರಲ್ಲಿ, ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ, ದಕ್ಷತೆಯಿಂದಲೂ, ಸಂಯಮದಿಂದಲೂ ವ್ಯವಹರಿಸಬೇಕು, ಸಮರ್ಥನಾಗಿರಬೇಕು.


3. ರೂಪೇಚ ಕೃಷ್ಣ:

ರೂಪದಲ್ಲಿ ಕೃಷ್ಣನಂತೆ ಇರಬೇಕು, ಅಂದ್ರೆ ಎಂದಿಗೂ ಉತ್ಸಾಹದಿಂದಲೂ, ಸಂತೋಷದಿಂದಲೂ ಇರಬೇಕು.


4. ಕ್ಷಮಯಾ ತು ರಾಮಃ

ಸಂಯಮದಲ್ಲಿ ರಾಮನಂತೆಯೂ, ಏಕಪತ್ನಿವ್ರತಸ್ತನಂತೆಯೂ, ಮರ್ಯಾದಾ ಪುರುಷೋತ್ತಮನಾಗಿಯೂ, ರಾಮನಂತೆ ಕ್ಷಮಿಸುವ ಗುಣ ಹೊಂದಿರುವವನು ಆಗಿರಬೇಕು.


5. ಭೋಜ್ಯೇಷು ತೃಪ್ತಃ:

ಪತ್ನಿ/ ತಾಯಿ ಬಡಿಸಿದ ಊಟವನ್ನು ಸಂತೃಪ್ತಿಯಿಂದ (ಕೊಂಕು ನುಡಿಯದೆ,) 

 ಊಟ ಮಾಡಬೇಕು 


6. ಸುಖ ದುಃಖ ಮಿತ್ರಂ 

ಪತ್ನಿಯ ಎಲ್ಲಾ ಸುಖ ದುಃಖಗಳಲ್ಲಿ , ಕುಟುಂಬದ ನೋವು ನಲಿವುಗಳಲ್ಲಿ, ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲಾ  ಸರಿ-ತಪ್ಪುಗಳನ್ನು ಹಂಚಿಕೊಳ್ಳುವಂತವನಾಗಿರ ಬೇಕು.


ಈ ಎಲ್ಲಾ ಗುಣಗಳುಳ್ಳವನು ಆದರ್ಶ ಪುರುಷನಾಗುತ್ತಾನೆ..

No comments:

Post a Comment