SEARCH HERE

Friday 1 October 2021

ಜೋತಿಷ್ಯ ದ್ವಾದಶ ಲಗ್ನಗಳಲ್ಲಿ ಜನಿಸಿದ ಫಲ

ಜೋತಿಷ್ಯ ದ್ವಾದಶ ಲಗ್ನಗಳಲ್ಲಿ ಜನಿಸಿದ ಫಲ


ಮೇಷ ಲಗ್ನ   .... ಕೋಪಿಷ್ಟನು , ಸ್ನೇಹಿತರಲ್ಲಿ ಭೇದ ಹುಡುಕುವವನು. ಇಷ್ಟವಾದವರ ಮಾತನ್ನು ಶಿರಸಾವಹಿಸಿ

ನಡೆಸಿಕೊಡುವನು.

ಹೆಚ್ಚು ಕೆಲಸಗಳನ್ನು ತಾನೇ ಮುತುವರ್ಜಿಯಿಂದ ಮಾಡುವನು. 


ವೃಷಭ ಲಗ್ನ   .....ಉಬ್ಬಿದ ಕೆನ್ನೆಗಳು , ಅಗಲ ಹಣೆ , ಆಕರ್ಷಕ ಮುಖ ,  ‌ಉದಾರಗುಣ , ಸಮಯವ ಅರಿತು ಹೆಚ್ಚು ಖರ್ಚುಮಾಡುವವ , ಸೌಂದರ್ಯಕ್ಕೆ ಹೆಚ್ಚು ಗಮನ , ಬಂಗಾರ ಹಾಗೂ ರೇಶ್ಮೆಯ ಆಸೆ. ಕಷ್ಟಪಟ್ಟು ಕೆಲಸ ಮಾಡುವವ ಆದರೆ ಆಗಾಗ ಸೋಮಾರಿತನ. ನೆನೆಸಿಕೊಂಡು, ಚಪಲಗೊಂಡು ತಿನ್ನುವವನು.


ಮಿಥುನ ಲಗ್ನ     ....ಒಳ್ಳೆಯ ಸುಮಧುರ ಮಾತುಗಳು , ಅತಿಶಯದ ಕೆಲಸಗಳ ನಿರ್ವಹಣೆ , ಎಲ್ಲರನ್ನೂ ಸಮವಾಗಿ ಕಾಣುವವನು , ಮಾತಿನಿಂದ ಶತ್ರುವನ್ನು ಜಯಿಸತಕ್ಕವನು , ಧರ್ಮಕಾರ್ಯ ಕೈಗೊಳ್ಳುವವನು , ಬಹಳ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುವವನು.


ಕಟಕ ಲಗ್ನ    .... ಹಿಂದಿನ , ವರ್ತಮಾನದ , ಮುಂದಿನ ಕಾಲದ ಬಗ್ಗೆ ಹೆಚ್ಚು ಆಲೋಚನೆ. ತಮ್ಮ ಕುಟುಂಬವೆಂದರೆ ಬಹಳ ಹೆಮ್ಮೆಯುಳ್ಳವರು .ಇವರಿಂದ ಹಣ ಹರಿದುಹೋಗುವುದು. ಎಲ್ಲರಲ್ಲಿಯೂ ಪ್ರೀತಿ ತೋರುವರು .

ಉಪಚಾರ ಚೆನ್ನಾಗಿ ಮಾಡುವರು. 


ಸಿಂಹ ಲಗ್ನ    .... ಹೃದಯವಂತರು , ನಿಷ್ಕಪಟಿಗಳು , ಆತ್ಮವಿಶ್ವಾಸವುಳ್ಳವರು ,

ದೊಡ್ಡಸ್ತಿಕೆಯ ತೋರ್ಪಡಿಕೆ , ಇತರರಿಗೆ ಸಹಾಯ ಮಾಡುವವರು. ಧೀಮಂತ ನಡವಳಿಕೆ . ಉದಾರ ಮನೋಭಾವ.


ಕನ್ಯಾ ಲಗ್ನ    .... ಸೂಕ್ಷ್ಮಗ್ರಾಹಿಗಳು , 

ತಮಗೆ ಇಂತಹುದು ಬೇಕೆಂದು ಎಂದೂ ಹಠ ಹಿಡಿಯರು , ಮೃದು ಮಾತು , ತೀವ್ರ ಬುದ್ಧಿ , ಆಲೋಚಿಸಿಯೇ ಕೆಲಸ , ಕಲ್ಪನೆಯ ಬರಹ , ನೈಜ ಬರಹ , ಯಾರನ್ನೂ ಸುಲಭವಾಗಿ ನಂಬುವುದಿಲ್ಲ.


ತುಲಾ ಲಗ್ನ    ... ಸತ್ಯವಂತರು , ನ್ಯಾಯಶೀಲರು , ಹೆಚ್ಚಿನ ಗೆಳೆಯರ ಬಳಗ, ಸಂಗೀತ , ಚಿತ್ರಕಲೆ , ನಾಟಕ , ಸಿನಿಮಾದಲ್ಲಿ ಪ್ರೀತಿಯುಳ್ಳವರು. ತಮ್ಮ ಪ್ರತಿಭೆಯಿಂದ ಹೆಸರು ಗಳಿಸುವರು.


ವೃಶ್ಚಿಕ ಲಗ್ನ    ..... ದೃಢ ಮನಸ್ಸುಳ್ಳವರು , ವಾದವಿವಾದಗಳಲ್ಲಿ ಗೆಲ್ಲುವವರು , ಅಭಿಪ್ರಾಯಗಳ ಹೇರುವಿಕೆ ಇರುತ್ತದೆ. ರಹಸ್ಯ ಇಲಾಖೆಗಳಲ್ಲಿ ಕೆಲಸ ಮಾಡುವುದರಲ್ಲಿ ಅಗ್ರಗಣ್ಯರು.


ಧನಸ್ಸು ಲಗ್ನ    ... ಉದಾರ ಮನಸ್ಸು , ಶುದ್ಧ ಅಂತಃಕರಣ , ಎಲ್ಲರೂ ಇವರನ್ನು ಇಷ್ಟಪಡುವರು. ದಾನ, ಧರ್ಮ , ಸಹಾನುಭೂತಿ ಇರುತ್ತದೆ.  ನೀತಿನಿಪುಣರು, ತತ್ವಜ್ಞಾನಿಗಳು , ಕಾನೂನು ಬಲ್ಲವರು.


ಮಕರ ಲಗ್ನ    ....ಶಾಂತ ಸ್ವಭಾವ , ಸ್ಥಿರ ಮನ , ಗಂಭೀರ ಮುಖ , ದಕ್ಷತೆಯ ಕಾರ್ಯ , ಆಗಾಗ ಉದಾಸೀನತ್ವ , ಭಾವೋದ್ವೇಗಕ್ಕೆ ಬೇಗ ಒಳಗಾಗುವರು.

ಅಲ್ಪ ಸ್ನೇಹಿತರು.


ಕುಂಭ ಲಗ್ನ     ....ಶಾಸ್ತ್ರೀಯ ವಿಷಯಾಸಕ್ತಿ. ಸತ್ಯ ನುಡಿ ,ಸಹನ ಶೀಲರು  

ತಾವು ಮಾಡುವ ಅನೇಕ ಒಳ್ಳೆಯ ಕೆಲಸಗಳನ್ನು ಯಾರಿಗೂ ಹೇಳುವುದಿಲ್ಲ.

ಪ್ರಭಲ ಆಕಾಂಕ್ಷಿಗಳು , ಕೆಲವೊಮ್ಮೆ ವ್ಯಸನಿಗಳು.


ಮೀನ ಲಗ್ನ    ...ಸಮಾಜದಲ್ಲಿ ಒಳ್ಳೆಯ ಹೆಸರು , ಭೋಜನ ಪ್ರಿಯರು , ಉತ್ತಮ ಗ್ರಹಣ ಶಕ್ತಿಯುಳ್ಳವರು , ಅನೇಕ ಕಲೆಗಳಲ್ಲಿ ಆಸಕ್ತಿ. ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸುವರು , ಒಳ್ಳೆಯ ಲೇಖಕರು.

ವ್ಯವಹಾರ ಚತುರರು.

***



No comments:

Post a Comment