SEARCH HERE

Friday, 1 October 2021

ವೈಟ್ ಚಹಾ ಟೀ ಮತ್ತು ಬೆಲ್ಲದ ಚಹ ಕುಡಿಯಬೇಕು

 ಚಹಾವನ್ನು ಎಷ್ಟರ ಮಟ್ಟಿಗೆ ಇಷ್ಟ ಪಡುತ್ತೇವೆ ಎಂದರೆ ಚಹಾ ಕುಡಿಯಲು ನಮಗೆ ಯಾವುದೇ ಸಮಯವನ್ನು ಕಾಯುವುದಿಲ್ಲ. ಅದೆಷ್ಟೇ ಬಿಸಿಲಿರಲಿ, ಮೈ ಕೊರೆಯುವ ಚಳಿ ಇರಲಿ ಅಥವಾ ಒಂದೇ ಸಮನೆ ಮಳೆ ಸುರಿಯುತ್ತಿದ್ದರೂ ಪರವಾಗಿಲ್ಲ, ಚಹಾ ಕುಡಿಯಬೇಕು ಎಂದೆನಿಸಿದರೆ ಸಾಕು ಚಹಾದ ಅಂಗಡಿಗೆ ಹೋಗಿ ಚಹಾ ಕುಡಿಯುತ್ತೇವೆ. ಮನೆಯಲ್ಲಿದ್ದರೆ ನೇರವಾಗಿ ಅಡುಗೆಮನೆಗೆ  ಹೋಗಿ ಚಹಾ ಮಾಡಿಕೊಂಡು ಕುಡಿಯುತ್ತೇವೆ.ಅದೇನೋ ಗೊತ್ತಿಲ್ಲ, ಚಹಾ ಕುಡಿದರೆ ಒಂದು ರೀತಿಯ ತಾಜಾತನದ ಅನುಭವ ಸಿಗುವುದಂತೂ ನಿಜ.

ಏನೋ ಒಂದು ಕೆಲಸ ಮಾಡುತ್ತಿದ್ದಾಗ ನಿದ್ದೆ ಬಂದರೂ, ಸುಸ್ತು ಅನ್ನಿಸಿದರೂ, ಸ್ವಲ್ಪ ತಲೆ ನೋವಿದ್ದರೂ ಮತ್ತು ದಿನದ ಕೆಲಸ ಮುಗಿಸಿ ಮನೆಗೆ ಸಂಜೆ ಬಂದಾಗಲೂ ಹೀಗೆ ನಮಗೆ ಚಹಾ ಬೇಕೇ ಬೇಕು. ಈಗಂತೂ ಜನರು ಆರೋಗ್ಯವಾಗಿರಲು ಮತ್ತು ತಮ್ಮ ದೇಹದಲ್ಲಿನ ಅಧಿಕವಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಗ್ರೀನ್ ಟೀ, ಬ್ಲ್ಯಾಕ್ ಟೀ ಹೀಗೆ ವಿವಿಧ ರೀತಿಯ ಚಹಾವನ್ನು ಸೇವಿಸಲು ಪ್ರಾರಂಭಿಸಿದ್ದಾರೆ.

1.ವೈಟ್ ಟೀ ಕುಡಿದು ನೋಡಿ

ಆದರೆ ನೀವು ಎಂದಾದರೂ ವೈಟ್ ಟೀ (ಬಿಳಿ ಚಹಾ) ಯ ಬಗ್ಗೆ ಕೇಳಿದ್ದೀರಾ..? ಬಹುಶಃ ಎಂದಿಗೂ ಕೇಳಿರಲಿಕ್ಕಿಲ್ಲ ಬಿಡಿ. ಇದು ಎಲ್ಲಾ ಚಹಾ ವಿಧಗಳಲ್ಲಿ ಕಡಿಮೆ ಸಂಸ್ಕರಿಸಿದ್ದಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಕ್ಯಾಮೆಲ್ಲಿಯೊ ಸಿನೆನ್ಸಿಸ್ ಸಸ್ಯದ ಎಲೆಗಳು ಮತ್ತು ಮೊಗ್ಗುಗಳಿಂದ ತಯಾರಿಸಲಾಗುತ್ತದೆ. ಅವುಗಳನ್ನು ಹಾಕಿ ಟೀ ತಯಾರಿಸುವ ಒಂದು ದಿನ ಮೊದಲೇ ಈ ಎಲೆಗಳನ್ನು ಕೀಳಲಾಗುತ್ತದೆ.

2.ವೈಟ್​ ಟೀ ಪ್ರಯೋಜನಗಳು

ನಂತರ ಈ ಎಲೆಗಳನ್ನು ಸ್ವಚ್ಛಗೊಳಿಸದೆ ಹಾಗೆಯೇ ಒಣಗಿಸಲಾಗುತ್ತದೆ. ಇದನ್ನು ಕಚ್ಚಾ ಮತ್ತು ನೈಸರ್ಗಿಕ ಚಹಾ ಎಂದು ಹೆಸರಿಸಿದರೆ, ಅದು ತಪ್ಪಾಗುವುದಿಲ್ಲ. ಶ್ರೀಲಂಕಾ ಮತ್ತು ಭಾರತದಲ್ಲಿ ಇದು ಇತರ ಗಿಡಮೂಲಿಕೆ ಚಹಾಗಳಿಗಿಂತಲೂ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಇದು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುವ ಪರಿಸರದಲ್ಲಿರುವ ಟಾಕ್ಸಿನ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ‘ಫ್ಯಾಟ್ ಟು ಸ್ಲಿಮ್’ ನ ಸ್ಥಾಪಕ ಮತ್ತು ಪೌಷ್ಟಿಕ ತಜ್ಞೆ ಶಿಖಾ ಅಗರ್ವಾಲ್ ಶರ್ಮಾ ಅವರು ಈ ವೈಟ್ ಟೀ ದೀರ್ಘಕಾಲದ ರೋಗಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ವಿವರಿಸುತ್ತಾರೆ.

ಹಾಗಾದರೆ ಬನ್ನಿ ಈ ವೈಟ್ ಟೀ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯೋಣ

1. ದೇಹದ ತೂಕ ಕಡಿಮೆ ಮಾಡುತ್ತದೆ

ಹಲವಾರು ಪ್ರಯತ್ನಗಳ ನಂತರವೂ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ವಿಫಲರಾಗಿದ್ದರೆ, ಆಗ ನೀವು ವೈಟ್ ಟೀ ಅನ್ನು ಪ್ರಯತ್ನಿಸಬಹುದು. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರ ಜೊತೆಗೆ, ಇದು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಇದನ್ನು ಕುಡಿಯುವ ಮೂಲಕ ನಿಮ್ಮ ದೇಹದ ತೂಕವು ತುಂಬಾ ವೇಗವಾಗಿ ಮತ್ತು ಸರಿಯಾದ ರೀತಿಯಲ್ಲಿ ಕಡಿಮೆಯಾಗುತ್ತದೆ.

2. ಒತ್ತಡವನ್ನು ನಿವಾರಿಸುತ್ತದೆ

ನೀವು ಆತಂಕ ಅಥವಾ ಖಿನ್ನತೆಯಿಂದ ಬಳಲುತ್ತಿದ್ದು, ಆದ್ದರಿಂದ ನೀವು ಇವುಗಳಿಂದ ದೂರವಿರಲು ಬಯಸಿದರೆ ವೈಟ್ ಟೀ ಅನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಖಿನ್ನತೆ, ಆತಂಕದ ಸಮಸ್ಯೆ ಯುವ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಈ ಕಾರಣದಿಂದಾಗಿ, ಅನೇಕ ಬಾರಿ ಅವರು ನಿದ್ರೆ ಮಾತ್ರೆಗಳು ಮತ್ತು ಅನೇಕ ರೀತಿಯ ಪೂರಕಗಳನ್ನು ತೆಗೆದುಕೊಳ್ಳುವುದನ್ನು ಸಹ ನಾವು ನೋಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಆತಂಕ ಮತ್ತು ಖಿನ್ನತೆಯನ್ನು ನಿಯಂತ್ರಿಸಲು ಈ ವೈಟ್ ಟೀ ತುಂಬಾನೇ ಪ್ರಯೋಜನಕಾರಿಯಾಗಿದೆ ಎಂದು ಹೇಳಬಹುದು.

3. ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹದಿಂದ ಬಳಲುತ್ತಿರುವವರಿಗೆ ವೈಟ್ ಟೀ ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅದು ಟೈಪ್-1 ಮಧುಮೇಹವಾಗಿರಲಿ ಅಥವಾ ಟೈಪ್-2 ಮಧುಮೇಹವಾಗಿರಲಿ, ಈ ಚಹಾವು ಎರಡನ್ನೂ ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕೋವಿಡ್‌ನಲ್ಲಿ, ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲವಾಗಿಡುವುದು ಎಷ್ಟು ಮುಖ್ಯ ಎಂಬುದನ್ನು ನಾವೆಲ್ಲರೂ ಕಲಿತಿದ್ದೇವೆ. ನಮ್ಮ ರೋಗನಿರೋಧಕ ಶಕ್ತಿ ಬಲವಾಗಿದ್ದರೆ, ನಮ್ಮ ದೇಹವು ವಿವಿಧ ರೀತಿಯ ವೈರಸ್ ಗಳಿಂದ ಸುರಕ್ಷಿತವಾಗಿರಬಹುದು. ಆದ್ದರಿಂದ, ವೈಟ್ ಟೀ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯಕವಾಗಿದೆ.

ವೈಟ್ ಟೀ ಸೇವಿಸುವುದು ಹೇಗೆ..?

ಚಹಾದ ವಿಷಯಕ್ಕೆ ಬಂದಾಗ, ಕೆಲವೊಬ್ಬರು ದಿನಕ್ಕೆ 5 ರಿಂದ 7 ಕಪ್ ಚಹಾವನ್ನು ಕುಡಿಯುತ್ತಾರೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. 2 ರಿಂದ 3 ಕಪ್ ವೈಟ್ ಟೀ ಕುಡಿದರೆ ಸಾಕು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಇದನ್ನು ತಯಾರಿಸಲು ಒಂದು ಕಪ್ ಬಿಸಿ ನೀರಿನಲ್ಲಿ ಒಂದು ಟೀ ಚಮಚ ವೈಟ್ ಟೀಯನ್ನು ಹಾಕಿ ಕುಡಿಯಿರಿ. ನೀವು ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಬಹುದು. ಈ ಚಹಾವನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ನೀವು ಬಯಸಿದರೆ ರಾತ್ರಿ ಮಲಗುವ ಮೊದಲು ಸೇವಿಸಬಹುದು. 

***

ಕುಡಿದರೆ ಸಕ್ಕರೆ ಅಲ್ಲ- ಬೆಲ್ಲದ ಚಹಾ ಕುಡಿಯಬೇಕು! ಯಾಕೆ ಗೊತ್ತಾ?


ಬೆಲ್ಲದ ಚಹಾ ಯಾಕೆ ಕುಡಿಯಬೇಕು ಎಂದು ಕೆಲವರು ಪ್ರಶ್ನೆ ಕೇಳುತ್ತಾರೆ. ಮಳೆಗಾಲ ಕುಡಿಯುವ ಹಾಗೆ ಮಾಡುತ್ತದೆ ಎಂದು ಹಲವರು ಅದಕ್ಕೆ ಉತ್ತರ ಕೊಡುತ್ತಾರೆ. ಇದು ನಿಜ ಎಂದು ಹೇಳುತ್ತದೆ ಸಂಶೋಧನೆ. ಅಸಲಿ ಕಾರಣ ಇಲ್ಲಿದೆ.


ಬೆಲ್ಲ ಸಕ್ಕರೆಗೆ ಪರ್ಯಾಯವಾಗಿ ಸಿಹಿಯನ್ನು ಕೊಡುವ ಒಂದು ಪದಾರ್ಥ. ಅಷ್ಟೇ ಪ್ರಮಾಣ ದಲ್ಲಿ ಇದರಲ್ಲಿ ಪೌಷ್ಟಿಕಾಂಶ ಸಹ ಇದೆ. ಯಾವುದೇ ಹಲ್ವಾ, ಲಾಡು ಅಥವಾ ಬರ್ಫಿ ತಯಾರು ಮಾಡ ಬೇಕಾದರೆ ಅದಕ್ಕೆ ಬೆಲ್ಲವನ್ನು ಹಾಕಿ ತಯಾರು ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.


ಅದೇ ರೀತಿ ಪ್ರತಿ ದಿನ ಚಹಾ ಕುಡಿಯುವ ಅಭ್ಯಾಸ ಇದ್ದವರು ಕೂಡ ಬೆಲ್ಲವನ್ನು ಹಾಕಿ ಚಹಾ ಮಾಡಿ ಕುಡಿದರೆ ಉತ್ತಮ. ಏಕೆಂದರೆ ಈಗ ಮಳೆಗಾಲ. ಈ ಸಮಯದಲ್ಲಿ ವಿಪರೀತ ಗಾಳಿ, ಮಳೆ, ಚಳಿ ಇದ್ದೇ ಇರುತ್ತದೆ. ನಮ್ಮ ದೇಹದ ತಾಪಮಾನ ಈ ಸಮಯದಲ್ಲಿ ಕುಸಿತ ಕಾಣಬಹುದು.


ಹೀಗಾಗಿ ತಾಪಮಾನ ನಿರ್ವಹಣೆಗಾಗಿ ನಾವು ಬೆಲ್ಲ ಹಾಕಿದ ಚಹಾ ಅಥವಾ ಎಳ್ಳು-ಬೆಲ್ಲ ಮಿಶ್ರಣ ಮಾಡಿದ ಯಾವುದಾದರೂ ಆಹಾರ ಪದಾರ್ಥಗಳು ಇವುಗಳನ್ನು ಸೇವನೆ ಮಾಡಬೇಕು. ಆಗ ದೇಹದಲ್ಲಿ ಬಿಸಿ ಉತ್ಪತ್ತಿಯಾಗುತ್ತದೆ ಮತ್ತು ಚಳಿಯಲ್ಲಿ ಸಾಕಷ್ಟು ನಡುಗುವುದು ತಪ್ಪುತ್ತದೆ. ಬೆಲ್ಲದ ಚಹಾ ಕುಡಿದರೆ ಯಾವೆಲ್ಲಾ ಆರೋಗ್ಯದ ಲಾಭಗಳು ಸಿಗುತ್ತವೆ ಎಂದು ನೋಡುವುದಾದರೆ.....


ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ


ಬೆಲ್ಲದಲ್ಲಿ ಕಬ್ಬಿಣದ ಪ್ರಮಾಣ, ಖನಿಜಾಂಶಗಳು ಮತ್ತು ಇನ್ನಿತರ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ಸಿಗುತ್ತವೆ. ಹಾಗಾಗಿ ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಆರೋಗ್ಯಕರ ವಾದ ರೀತಿಯಲ್ಲಿ ನಮ್ಮನ್ನು ಮಳೆಗಾಲ ಹಾಗೂ ಚಳಿಗಾಲದಲ್ಲಿ ಕಾಪಾಡುತ್ತದೆ.


ಚಹಾದಲ್ಲಿ ಉಪಯೋಗಿಸುವ ಲವಂಗ, ದಾಲ್ಚಿನ್ನಿ ಮತ್ತು ಶುಂಠಿ ತಮ್ಮಲ್ಲಿ ವಿಶೇಷವಾದ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ವೈರಲ್ ಗುಣ ಲಕ್ಷಣಗಳನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಸಹಜವಾಗಿ ಕಂಡುಬರುವ ಶೀತ ಮತ್ತು ಜ್ವರವನ್ನು ಹೋಗಲಾಡಿಸುವಲ್ಲಿ ಇದು ಕೆಲಸ ಮಾಡುತ್ತದೆ. ದೇಹದಲ್ಲಿ ಉಷ್ಣ ವಾತಾವರಣವನ್ನು ಹೆಚ್ಚಿಸುತ್ತದೆ ಮತ್ತು ಚಳಿಯಿಂದ ರಕ್ಷಣೆ ಕೊಡುತ್ತದೆ.


ದೇಹದ ಜೀರ್ಣಶಕ್ತಿ ಹೆಚ್ಚಾಗುತ್ತದೆ


ಬೆಲ್ಲದ ಚಹಾ ಕುಡಿಯುವುದರಿಂದ ನಾವು ಸೇವನೆ ಮಾಡಿದ ಆಹಾರ ಹೊಟ್ಟೆಯಲ್ಲಿ ಚೆನ್ನಾಗಿ ಜೀರ್ಣ ವಾಗುತ್ತದೆ. ಏಕೆಂದರೆ ಆಹಾರವನ್ನು ಜೀರ್ಣ ಮಾಡಲು ಅಗತ್ಯವಾಗಿ ಬೇಕಾದ ಜೀರ್ಣರಸಗಳು ಹೊಟ್ಟೆಯಲ್ಲಿ ಉತ್ಪತ್ತಿಯಾಗುತ್ತವೆ. ಇದರಿಂದ ಕರುಳು ಚುರುಕಾಗಿ ಕೆಲಸ ಮಾಡಿ ಮಲಬದ್ಧತೆ ಸಮಸ್ಯೆ ಸಹ ದೂರವಾಗುತ್ತದೆ.


ತೂಕ ನಿಯಂತ್ರಣ ಬೆಲ್ಲದಿಂದ ಸಾಧ್ಯ


ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ನಮ್ಮ ದೇಹದಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಗಳು ಕರಗುತ್ತವೆ. ಇದು ಗೊತ್ತಿರುವ ವಿಚಾರ. ಆದರೆ ಇಷ್ಟು ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿಗಳು ಕರಗಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಹಾಗಾಗಿ ಈ ಸಂದರ್ಭದಲ್ಲಿ ಬೆಲ್ಲದ ಚಹಾ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ.


ರಕ್ತ ಶುದ್ಧೀಕರಣವಾಗುತ್ತದೆ


ನಮ್ಮ ರಕ್ತನಾಳಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆದು ದೇಹದಲ್ಲಿ ಎಲ್ಲಾ ಭಾಗಕ್ಕೆ ಪೂರೈಕೆ ಯಾಗಬೇಕು ಎಂದರೆ ರಕ್ತ ಶುದ್ಧವಾಗಿರಬೇಕು. ಅದಕ್ಕಾಗಿ ನಾವು ಬೆಲ್ಲದ ಚಹಾ ಕುಡಿದರೆ ಒಳ್ಳೆಯದು.

ಏಕೆಂದರೆ ದೇಹದಲ್ಲಿ ಉಷ್ಣಾಂಶವನ್ನು ಉತ್ಪತ್ತಿ ಮಾಡುವ ಯಾವುದೇ ಆಹಾರ ಪದಾರ್ಥ ರಕ್ತದಲ್ಲಿ ಜಿಡ್ಡಿನ ಅಂಶ ಇರಲು ಬಿಡುವುದಿಲ್ಲ. ಹೀಗಾಗಿ ಹೃದಯರಕ್ತನಾಳದ ಆರೋಗ್ಯ ಕೂಡ ಅತ್ಯುತ್ತಮವಾಗಿ ಇರಲಿದೆ.


ಬೆಲ್ಲದ ಚಹಾ ತಯಾರು ಮಾಡುವ ವಿಧಾನ


ಇದು ತುಂಬಾ ಸಿಂಪಲ್. ನೀವು ಸಾಧಾರಣವಾಗಿ ಪ್ರತಿದಿನ ಹೇಗೆ ಚಹಾ ತಯಾರು ಮಾಡುತ್ತೀರಿ ಅದೇ ರೀತಿ ತಯಾರಿಸುವುದು. ಆದರೆ ಸಕ್ಕರೆ ಬದಲು ಬೆಲ್ಲ ಹಾಕಬೇಕು.

ಹಾಲು ನಿಮಗೆ ಬೇಕಾದರೆ ಹಾಕಿಕೊಳ್ಳಬಹುದು ಇಲ್ಲವೆಂದರೆ ಬಿಡಬಹುದು. ದಿನಕ್ಕೆ ನಾಲ್ಕೈದು ಬಾರಿ ಚಹಾ ಕುಡಿಯುವ ಅಭ್ಯಾಸ ಇದ್ದವರಿಗೆ ಬೆಲ್ಲದ ಚಹಾ ಚಳಿಗಾಲ ಹಾಗೂ ಮಳೆಗಾಲದಲ್ಲಿ ಮೈ ಬೆಚ್ಚಗೆ ಮಾಡುವ ಒಂದು ಅದ್ಭುತ ಪಾನೀಯ ಎಂದು ಹೇಳಬಹುದು.


ಮನೋಹರ್ ವಿ ಶೆಟ್ಟಿ

ವಿಜಯಕರ್ನಾಟಕ.

***


No comments:

Post a Comment