SEARCH HERE

Friday 1 October 2021

ದೇವರು ಧರ್ಮ ಮತ್ತು ಕ್ರೈಮ್

 Religion

ದೇವರು, ಧರ್ಮ ಮತ್ತು ಕ್ರೈಮ್


ನಿಮಗೆ ಗೊತ್ತಿದಿಯೋ ಇಲ್ಲವೋ, ಸಾಕಷ್ಟು ದೇಶಗಳಲ್ಲಿ ಜನರು ದೇವರಿಗೆ ನಮಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ. ಅವರು ಧರ್ಮಗಳಿಂದ ಆಚೆ ಬರುತ್ತಿದ್ದಾರೆ. ಅಂಥ ಕೆಲ ದೇಶಗಳ ಹೆಸರುಗಳನ್ನು ಹೇಳುತ್ತೇನೆ ಕೇಳಿ; ಚೆಕ್ ರಿಪಬ್ಲಿಕ್, ಎಸ್ತೋನಿಯಾ, ನೆದರ್‌ಲ್ಯಾಂಡ್, ವಿಯೇಟ್ನಾಮ್, ಡೆನ್‌ಮಾರ್ಕ್, ಸೌತ್ ಕೊರಿಯಾ, ಸ್ವೀಡನ್, ಯುಕೆ, ಅಲ್ಬೇನಿಯಾ, ಜಪಾನ್, ಅಲ್‌ಬಾಯಿಜನ್, ಚೈನಾ, ನ್ಯೂಜಲ್ಯಾಂಡ್, ರಷ್ಯಾ, ಬೆಲರಸ್, ಉರುಗ್ವೇ, ಫ್ರಾನ್ಸ್, ಕ್ಯೂಬಾ, ಪಿನ್‌ಲ್ಯಾಂಡ್, ಹಂಗ್ರಿ, ಐಸ್‌ಲ್ಯಾಂಡ್, ಲತ್ವಿಯಾ, ಚಿಲಿ, ಬೆಲ್ಜಿಯಂ. ಈ ದೇಶಗಳಲ್ಲಿ ಶೇ.52 ರಿಂದ 70ರಷ್ಟು ಜನ ಧರ್ಮವನ್ನು ತೊರೆದಿದ್ದಾರೆ. 

ಹೀಗೆ ದೇವರನ್ನು ಕೈ ಬಿಟ್ಟ ದೇಶಗಳ ಕ್ರೈಮ್ ರೇಟು ಚೆಕ್ ಮಾಡಿ, ತುಂಬಾ ಕಡಿಮೆ ಇದೆ. ಅಸಾಲ್ಟಿಂಗ್, ರಾಬರಿ, ಕೊಲೆ, ಬೆದರಿಕೆ. ಇವೆಲ್ಲವೂ ಧರ್ಮಪರವಾದ ದೇಶಗಳಲ್ಲೇ ಹೆಚ್ಚು ನಡೆಯುತ್ತಿರುತ್ತವೆ. ದೇವರಿಗಾಗಿಯೇ ದೇಶಗಳು ಹೊಡೆದಾಡಿಕೊಂಡು ಸಾಯುತ್ತಿರುತ್ತವೆ. ಎಲ್ಲ ಧರ್ಮಗಳ ಮನಃಶಾಂತಿಗಾಗಿಯೇ ಅಂತಾರೆ. ಆದರೆ, ಎರಡು ದೇಶಗಳ ನಡುವಿನ ಯುದ್ಧಗಳಿಗಿಂತ ಧರ್ಮಪರವಾದ ಯುದ್ಧಗಳಲ್ಲೇ ಹೆಚ್ಚು ಮಂದಿ ಸತ್ತು ಹೋಗಿದ್ದಾರೆ. ನಮಗಿಷ್ಟವಾದ ದೈವದ ಬಗ್ಗೆ ಕಡಿಮೆ ಮಾಡಿ ಮಾತನಾಡಿದರೆ ಅವನನ್ನ ಕೊಚ್ಚಬೇಕು ಅನಿಸುತ್ತದೆ. ಆ ಕೊಚ್ಚಬೇಕು ಎನ್ನುವ ಕೋರಿಕೆ ಧರ್ಮದಿಂದಲೇ ಹುಟ್ಟುತ್ತದೆ. ಪೀಪುಲ್ ವಿಲ್ ಬಿಕಾಮ್ ವೈಲೆಂಟ್ ಬಿಗಾಸ್ ಆಫ್ ಗಾಡ್. ಎಷ್ಟು ದೊಡ್ಡ ಧರ್ಮ ಆದರೆ ಅಷ್ಟು ದೊಡ್ಡ ಯುದ್ಧ ಮಾಡುತ್ತಾನೆ. ಎಷ್ಟು ದೊಡ್ಡ ದೇವರಾದರೆ ಅಷ್ಟು ದೊಡ್ಡ ಕೊಲೆಗಳು ನಡೆಯುತ್ತವೆ. ಚಿಕ್ಕ ದೇವರಿಗೆ ಚಿಕ್ಕ ಕೊಲೆ, ದೊಡ್ಡ ದೇವರಿಗೆ ದೊಡ್ಡ ರಕ್ತಪಾತ!

 ಅತಿ ದೊಡ್ಡ ಭ್ರಷ್ಟಾಚಾರ ನಡೆಯುವುದು ಅತಿ ದೊಡ್ಡ ದೇವಸ್ಥಾನಗಳಲ್ಲೇ. ಎಲ್ಲರು ದೇವಸ್ಥಾನಕ್ಕೆ ಹೋಗುವುದು ಮನಃಶಾಂತಿಗಾಗಿಯೇ ಅಂತಾರೆ. ಅಂದರೆ ಮನಃಶಾಂತಿ ಇಲ್ಲದಿರುವವರೆಲ್ಲರು ದೇವಸ್ಥಾನಗಳಿಗೆ ಹೋಗುತ್ತಾರೆ ಎಂದಾಯಿತು. ದೆ ಆರ್ ಫ್ರೆಸ್ಟೇಟೆಡ್ ಇನ್ ಲೈಫ್. ದೆ ವಾಂಟ್ ಆನ್ಸರ್ ಎಕ್ಸ್‌ಪೆಟಿಂಗ್ ಲಾಟ್ ಆಫ್ ಮನಿ, ಹೆವೆನ್ ಇತ್ಯಾದಿ. ಸೋ ಆಲ್ ರೆಡಿ ಫ್ರೆಸ್ಟೇಟೆಡ್. ಅಂಥವರನ್ನು ಕೆದಕಿದರೆ ದೆ ಬಿಕಾಮ್ ಮೋರ್ ವೈಲೆಂಟ್. ನನ್ನ ಮಾತು ಕೆಲ ಮಂದಿಗೆ ಕೋಪವನ್ನು ತರಿಸಬಹುದು. ನಾನು ಹೇಳೋದು ಅದನ್ನೇ, ಕೋಪ ಬರುತ್ತಿದೆ ಯಾಕೆ ನನಗೆ ಅಂತ ಯೋಚಿಸಿ. ದೇವರು ಹುಟ್ಟಿದ್ದೇ ನಮಗಾಗಿ, ನಮ್ಮನ್ನು ಕಾಪಡಲಿಕ್ಕಾಗಿಯೇ ಎಂದು ನಂಬಿದರೆ ಆತನ ಕೆಲಸ ಆತ ಮಾಡಿಕೊಳ್ಳುತ್ತಾನೆ. ನಮಗೆ ಯಾಕೆ ಟೆಂಕ್ಷನ್. ನಮ್ಮ ಕೆಲಸ ನಾವು ಮಾಡಿಕೊಳ್ಳೋಣ. ಕೆಲಸವೇ ದೇವರು. ದೇವರಿಂದ ದೂರ ಇದ್ದರೆ ಸಂತೋಷ ಪಡುವುದು ದೇವರೇ. ಸುಮ್ಮನೆ ಒಂದು ಸಲ ತಮಾಷೆಗಾದರೂ ಇದನ್ನ ಟ್ರೈ ಮಾಡಿ ನೋಡಿ.

***

No comments:

Post a Comment