SEARCH HERE

Friday, 1 October 2021

ಕಣ್ಣಿನ ದೃಷ್ಟಿ ಹೆಚ್ಚಿಸುವ ಹತ್ತು ಮನೆಮದ್ದುಗಳು

ಕಣ್ಣಿನ ದೃಷ್ಟಿ ಹೆಚ್ಚಿಸುವ ಹತ್ತು ಮನೆಮದ್ದುಗಳು..!


ಪ್ರತಿದಿನ ರಾತ್ರಿ ಒಂದು ಚಮಚ ತ್ರಿಫಲ ಪುಡಿಗೆ ಅರ್ಧ ಚಮಚ ತುಪ್ಪ ಮತ್ತು ಕಾಲು ಚಮಚ ಜೇನುತುಪ್ಪ ಕಲಸಿ ಮಲಗುವ ಮುನ್ನ ಸೇವಿಸಿದರೆ ದೃಷ್ಟಿ ಹೆಚ್ಚಾಗುತ್ತದೆ. ಕರಿ ಮೆಣಸಿನ ಪುಡಿಯನ್ನು ಜೇನುತುಪ್ಪದ ಜೊತೆ ಕಲಸಿ ಸೇವಿಸಿದರೂ ಲಾಭದಾಯಕ.


ಒಂದು ಲೋಟ ಹಾಲಿಗೆ ಒಂದು ಚಮಚ ಜೇಷ್ಠಮಧು ಪುಡಿ ಬೆರೆಸಿ ಕುಡಿದರೂ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಪ್ರತಿದಿನ ರಾತ್ರಿ ಮಲಗುವಾಗ ಎರಡೂ ಪಾದಗಳಿಗೆ ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯಿಂದ ಮಸಾಜ್‌ ಮಾಡಿದರೂ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ.


ಮಾವಿನ ಹಣ್ಣು ಸಿಗುವ ಕಾಲದಲ್ಲಿ ಮಾವಿನ ಹಣ್ಣನ್ನು ಸೇವಿಸಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.ಐದರಿಂದ ಎಂಟು ಬಾದಾಮಿಯನ್ನು ರಾತ್ರಿ ವೇಳೆ ನೀರಲ್ಲಿ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ಪೇಸ್ಟ್‌ ಮಾಡಿ ಬಿಸಿ ಹಾಲಿನ ಜೊತೆಗೆ ಆ ಬಾದಾಮಿ ಪೇಸ್ಟ್‌ ಸೇವಿಸಿದರೆ ಕಣ್ಣಿನ ದೃಷ್ಟಿಗೆ ಒಳ್ಳೆಯದು.

ಆಹಾರದಲ್ಲಿ ಹೆಚ್ಚಾಗಿ ಕ್ಯಾರೆಟ್‌, ಪಾಲಕ್‌ ಸೊಪ್ಪು, ಬಾದಾಮಿ, ಗೋಡಂಬಿ, ಪಿಸ್ತಾ, ಕೆಂಪು ಬಣ್ಣದ ದೊಡ್ಡ ಮೆಣಸಿನಕಾಯಿ, ಹಾಲು, ತುಪ್ಪ, ಬೆಣ್ಣೆ ಮತ್ತು ಮೊಸರು ಬಳಸಿದರೆ ಕಣ್ಣಿನ ಆರೋಗ್ಯಕ್ಕೆ ಬೆಸ್ಟ್‌. ಕಣ್ಣಿನ ದೃಷ್ಟಿ ಹೆಚ್ಚಿಸಲು ಪ್ರತಿದಿನ ಐದರಿಂದ ಆರು ಸೂರ್ಯಕಾಂತಿ ಬೀಜಗಳನ್ನು ಸೇವಿಸಿ.


ಸಮ ಪ್ರಮಾಣದ ಬಾದಾಮಿ ಮತ್ತು ಸೊಂಪು ಕಾಳನ್ನು ಸಕ್ಕರೆ ಜೊತೆ ಪುಡಿ ಮಾಡಿಡಿ. ಪ್ರತಿದಿನ ರಾತ್ರಿ ಮಲಗುವ ಮೊದಲು ಅರ್ಧ ಚಮಚ ಪುಡಿಯನ್ನು ಬಿಸಿ ಹಾಲಿನ ಜೊತೆ ಸೇರಿಸಿ ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.

***

 

No comments:

Post a Comment