SEARCH HERE

Friday, 1 October 2021

ಗರುಡ ಪುರಾಣ ಕೆಲವು ನೀತಿವಚನಗಳು garuda purana

 ಗರುಡ ಪುರಾಣದ ಕೆಲವು ನೀತಿವಚನಗಳು !

ಕಷ್ಟಕಾಲದಲ್ಲಿ ಚಿರಪರಿಚಿತರೂ ಕೂಡ ಮೆಲ್ಲಮೆಲ್ಲಗೆ ಹೇಗೆ ಜಾರಿಕೊಳ್ಳುತ್ತಾರೆಂದರೆ – ಪಕ್ಷಿಗಳು ಹಣ್ಣುಗಳಿಲ್ಲದ ಮರವನ್ನು ಬಿಟ್ಟುಹೋಗುತ್ತವೆೆ. ನೀರು ಬತ್ತಿದ ಕೊಳದಲ್ಲಿ ಕಮಲಗಳಿರುವುದಿಲ್ಲ. ಹೂವು ಬಾಡಿದರೆ ದುಂಬಿಗಳು ಅಲ್ಲಿಗೆ ಬರುವುದಿಲ್ಲ. ಸುಟ್ಟುಹೋದ ಅಡವಿಯಲ್ಲಿ ಪ್ರಾಣಿಗಳು ಉಳಿಯಲಾರವು. ಅಂತೆಯೇ ಕಷ್ಟಕಾಲದಲ್ಲಿ ಚಿರಪರಿಚಿತರೂ ದೂರವಾಗುತ್ತಾರೆ. ಆದರೆ ಈ ಎಲ್ಲವೂ ಪುನಃ ಒಮ್ಮೆ ತಮ್ಮ ಮೊದಲಿನ ಸ್ವರೂಪವನ್ನು ಪಡೆದುಕೊಂಡರೆ ಎಲ್ಲರೂ, ಎಲ್ಲವೂ ಪುನಃ ಬಂದು ಆಶ್ರಯಿಸುತ್ತವೆ. ಸ್ವಾರ್ಥದ ಸ್ವಭಾವಸ್ವರೂಪವು ಹೇಗಿರುತ್ತದೆ ಎಂಬುದನ್ನು ಈ ನೀತಿಯಿಂದ ತಿಳಿಯಬಹುದು.

ವಿನಾಕಾರಣ ಅನ್ಯರ ಮನೆಯಲ್ಲಿ ವಾಸ ಮಾಡಬಾರದು’; ‘ಮೂರ್ಖ ಶಿಷ್ಯನಿಗೆ ಪಾಠ ಹೇಳುವುದರಿಂದಲೂ, ಕೆಟ್ಟ ಸ್ವಭಾವದ ಹೆಂಡತಿಯನ್ನು ಪಡೆಯುವುದರಿಂದಲೂ, ಮಹಾಮೇಧಾವಿಯೂ ಗೌರವವನ್ನು ಕಳೆದುಕೊಳ್ಳುತ್ತಾನೆ.

ಶತ್ರುಗಳಾದರೂ ನಮ್ಮ ಹಿತವನ್ನು ಬಯಸುವುದಾದರೆ ಅವರೇ ನಿಜವಾದ ಬಂಧುಗಳು. ನೆಂಟನಾದವನು ನಮ್ಮ ವಿನಾಶವನ್ನು ಬಯಸುತ್ತಿದ್ದರೆ ಅವನೇ ನಿಜವಾದ ಶತ್ರು.

ನಮ್ಮಲ್ಲಿ ಉಂಟಾದ ರೋಗ ನಮಗೆ ಶತ್ರು. ದೂರದ ಅಡವಿಯಲ್ಲಿದ್ದ ಔಷಧವು ನಮಗೆ ಮಿತ್ರ.

ಯಾವ ಪ್ರದೇಶದಲ್ಲಿ ನಮಗೆ ಗೌರವ, ಆದರ ಮತ್ತು ಬಂಧುಗಳಿರುವುದಿಲ್ಲವೋ ಮತ್ತು ವಿದ್ಯೆಯನ್ನು ಸಂಪಾದಿಸುವ ಅವಕಾಶವಿರುವುದಿಲ್ಲವೋ ಆ ಪ್ರದೇಶವನ್ನು ಬಿಡುವುದೇ ಲೇಸು.

ಉತ್ತಮ ಅಧ್ಯಯನವನ್ನು ಮಾಡಬೇಕೆಂಬುವವನು ನಿದ್ರೆ ಆಹಾರಗಳನ್ನು ಕುರಿತು ಚಿಂತಿಸಬಾರದು.

ಗರುಡನು ಎಷ್ಟೂ ದೂರವಾದರೂ ಹೋಗಿ ತನ್ನ ಗುರಿಯನ್ನು ಸಾಧಿಸುತ್ತಾನಷ್ಟೆ!’; - ‘ನೂರಾರು ಗೋವುಗಳಿದ್ದರೂ ಕರುವು ಅದರಲ್ಲಿ ತನ್ನ ತಾಯಿಯನ್ನು ಗುರುತಿಸಿ ಹೇಗೆ ತನ್ನ ತಾಯಿಯನ್ನೇ ಸೇರಿಕೊಳ್ಳುತ್ತದೆಯೋ, ಹಾಗೆ ಮಾಡಿದ ಪುಣ್ಯ-ಪಾಪಗಳು ಆ ಕರ್ತನನ್ನೇ ಅನುಸರಿಸುತ್ತವೆ.

ರೋಗಗಳು ಯಾರಿಗಾದರೂ ಬರಬಹುದು, ಸಂಪತ್ತು ಯಾರನ್ನಾದರೂ ಬಿಡಬಹುದು.

ಜಿಪುಣನ ಕೈಯಲ್ಲಿನ ಹಣ, ಒರಟನ ಹತ್ತಿರದ ಜ್ಞಾನ, ಪರಾಕ್ರಮವಿಲ್ಲದ ಅಂದಚೆಂದಗಳು, ಕಷ್ಟಕಾಲದಲ್ಲಿ ಸಹಾಯಕ್ಕೆ ಬಾರದ ಮೈತ್ರಿ ವ್ಯರ್ಥ’;

ಕೆಟ್ಟವರ ಸಹವಾಸ ಮಾಡಿದರೆ ಇಹವೂ ಇಲ್ಲ ಪರವೂ ಇಲ್ಲ ಆದ್ದರಿಂದ ಉತ್ತಮರ ಸಹವಾಸವನ್ನೇ ಮಾಡಬೇಕು.

ಇಂತಹ ಅಸಂಖ್ಯಾತ ನೀತಿಗಳಿಂದ ತುಂಬಿದ ಗರುಡಪುರಾಣವು ಅದ್ಭುತ ಗ್ರಂಥವಾಗಿದೆ.

ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

***


ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬ ಹಿರಿಯರ ಕಟ್ಟುಪಾಡು ಎಷ್ಟು ಸರಿ,ಇದಕ್ಕೆ ಕಾರಣವೇನು?


ಸಂಪೂರ್ಣ ಗರುಡ ಪುರಾಣದಲ್ಲಿ ಸರಿ ಸುಮಾರು ೧೯೦೦೦ ಶ್ಲೋಕಗಳಿದ್ದು, ಅದರಲ್ಲಿ ಜ್ಞಾನಕಾಂಡ, ಧರ್ಮಕಾಂಡ, ಹಾಗು ಕರ್ಮಕಾಂಡ (ಪ್ರೇತಕಾಂಡ) ಎಂಬ ೩ ವಿಭಾಗಗಳಿವೆ. ಅವು ಕ್ರಮವಾಗಿ ವಿಶ್ವದ ಸೃಷ್ಠಿ, ಸ್ಥಿತಿ, ಹಾಗು ಲಯದ ಬಗೆಗಿನ ವಿವರಗಳನ್ನು ತಿಳಿಸುತ್ತದೆ.


ಕ್ರಮವಾಗಿ, ಮನುಷ್ಯನ ಜನನ, ಜೀವನ, ಮರಣ, ಹಾಗು ಮರಣದ ನಂತರದ ಬಗೆಗಿನ ಹಲವಾರು ಮಾಹಿತಿಗಳನ್ನು ಕೊಡುವ ಏಕೈಕ ಹೊತ್ತಿಗೆಯೇ ಗರುಡ ಪುರಾಣ.


ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬ ಹಿರಿಯರ ಈ ಕಟ್ಟುಪಾಡು ಬರಲು ಕಾರಣ, ಗರುಡ ಪುರಾಣದ ಬಗ್ಗೆ ಇರುವ ಅಲ್ಪಜ್ಞಾನ, ಏಕೆಂದರೆ ಗರುಡಪುರಾಣ ಎಂದೊಡನೆ, ನೆನಪಿಗೆ ಬರುವುದು ಪ್ರೇತಕಾಂಡವೆಂಬ ಅಧ್ಯಾಯ ಹಾಗು ಅದರಲ್ಲಿ ಬರುವ, ಸಾವಿನ ನಂತರದ ಬಗ್ಗೆ ಇರುವ ವಿಚಾರಗಳು, ಆದರೆ ಪ್ರೇತಕಾಂಡವು ವಾಸ್ತವವಾಗಿ ಗರುಡ ಪುರಾಣ ವೆಂಬ ಮಹಾನ್ ಸಮುದ್ರದಲ್ಲಿ ಒಂದು ಸಣ್ಣ ಚೊಂಬಿನ ನೀರಿನಷ್ಟು ಮಾತ್ರವೇ ಹೊರತು, ಸಂಪೂರ್ಣವಾಗಿ ಅದೇ ಅಲ್ಲ.


ಜನರಿಗೆ ಹೆಚ್ಚು ತಿಳಿದಿರುವುದು ಇಲ್ಲಿನ ಪ್ರೇತಕಾಂಡ ಹಾಗು ಅಲ್ಲಿ ಬರುವ ಕೆಲವು ಸಾವಿನ ನಂತರದ ವರ್ಣನೆಗಳು, ಹಾಗಾಗಿ ಇದನ್ನು ಸಣ್ಣ ವಯಸ್ಸಿನ ವ್ಯಕ್ತಿಗಳು ಕೇಳಿದರೆ ವೈರಾಗ್ಯ ಉಂಟಾಗಿ, ವಂಶಾಭಿವೃದ್ಧಿಗೆ ತೊಂದರೆ ಆಗುವುದೆಂದು ನಮ್ಮ ಹಿರಿಯರು ಈ ಕಟ್ಟುಪಾಡನ್ನು ಹೇರಿದರೆ ಹೊರತು ಬೇರೆ ಯಾವುದೇ ಕಾರಣಕ್ಕು ಅಲ್ಲ.


ಸಾಮಾನ್ಯವಾಗಿ ಗರುಡ ಪುರಾಣವನ್ನು ಮನೆಯಲ್ಲಿ ಯಾವುದಾದರೋ ಸಾವು ಸಂಭವಿಸಿದಾಗ ಓದಿಸುತ್ತಿದ್ದರು, ಏಕೆಂದರೆ ಇದು ಮಹತ್ತರವಾದ ಪುರಾಣ ವಾಗಿದ್ದು ಇದರಲ್ಲಿನ ಪ್ರೇತಕಾಂಡವು ಸ್ಮಶಾನ ವೈರಾಗ್ಯವನ್ನು ತರುವಂತಹದು, ಇದನ್ನು ಸಾವು ಸಂಭವಿಸಿದಾಗ ಓದುವುದರಿಂದ ೧೫ ದಿನಗಳ ಅಪಾರ ಕಾರ್ಯದ ವೇಳೆಯಲ್ಲಿ ಸಂಭಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಮಹತ್ತರವಾದುದು ಅಲ್ಲ ಎಂಬ ಅರಿವುಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನು ಇಲ್ಲ . ಹಾಗಾಗಿ ಇದು ಕಾಲಾನಂತರದಲ್ಲಿ ವಾಡಿಕೆಯಾಯಿತೇ ಹೊರತು ಬೇರೆ ಏನು ಅಲ್ಲ.

***

ಮರಣದ ನಂತರ - ಗರುಡ ಪುರಾಣ🤍


🌹ಗರುಡ ವಿಷ್ಣುವಿನ ವಾಹನ. ಒಮ್ಮೆ ಗರುಡನು ಭಗವಾನ್ ವಿಷ್ಣುವಿಗೆ ಜೀವಿಗಳ ಸಾವು, ಯಮಲೋಕ ಯಾತ್ರೆ, ಸ್ವರ್ಗ - ನರಕ ಮತ್ತು ಮೋಕ್ಷದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. ಈ ಎಲ್ಲಾ ಪ್ರಶ್ನೆಗಳಿಗೂ ಭಗವಾನ್ ವಿಷ್ಣು ವಿವರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ದೀರ್ಘ ಮಾಲೆಯಿಂದ ಗರುಡ ಪುರಾಣವನ್ನು ರಚಿಸಲಾಗಿದೆ🌹

🕉️ಗರುಡ ಪುರಾಣದ ವಿಶೇಷ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.🕉️

🪷ಮರಣದ ನಂತರದ ಪರಿಸ್ಥಿತಿ 🪷

🌹ಗರುಡ ಪುರಾಣದಲ್ಲಿ, ಸಾವಿನ ಮೊದಲ ಮತ್ತು ನಂತರದ ಪರಿಸ್ಥಿತಿಯನ್ನು ಹೇಳಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸಾಮಾನ್ಯವಾಗಿ ಮರಣದ ನಂತರ ಆ ವ್ಯಕ್ತಿಯ ಕುಟುಂಬದಲ್ಲಿ ಓದಲಾಗುತ್ತದೆ🌹

🪷ಇವುಗಳ ಬಗ್ಗೆ ಅರಿವು 🪷

🌹ಓರ್ವ ವ್ಯಕ್ತಿ ಮರಣ ಹೊಂದಿದ 13 ದಿನಗಳವರೆಗೆ ತಮ್ಮ ಪ್ರೀತಿಪಾತ್ರರ ಜೊತೆ ಇರುತ್ತಾರೆ. ಈ ಸಮಯದಲ್ಲಿ, ಗರುಡ ಪುರಾಣದ ಪಠ್ಯವನ್ನು ಇಟ್ಟುಕೊಂಡು, ಅವರು ಸ್ವರ್ಗ-ನರಕ, ಮೋಕ್ಷ, ಅವನತಿ ಮುಂತಾದ ಚಲನೆಗಳ ಪ್ರಕಾರಗಳನ್ನು ತಿಳಿದುಕೊಳ್ಳುತ್ತಾನೆ🌹

🪷ಆತ್ಮದ ಪ್ರಯಾಣ 🪷

🌹ಮರಣಾ ನಂತರ ಆತ್ಮದ ಪ್ರಯಾಣದಲ್ಲಿ ಆ ತ್ಮವು ಏನೆಲ್ಲಾ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ, ಯಾವ ಲೋಕಕ್ಕೆ ಹೋಗಬಹುದು, ಇದೆಲ್ಲವನ್ನೂ ಗರುಡ ಪುರಾಣವನ್ನು ಕೇಳಿ ತಿಳಿದುಕೊಳುತ್ತಾರೆ🌹

🪷ಮೋಕ್ಷ ನೀಡುವ ಕಾರ್ಯ 🪷

🌹ಮರಣಾನಂತರ ಮನೆಯಲ್ಲಿ ಗರುಡ ಪುರಾಣವನ್ನು ಪಠಿಸಿದಾಗ, ಸತ್ತವರ ಸಂಬಂಧಿಕರಿಗೆ ಯಾವುದು ಕೆಟ್ಟದು ಮತ್ತು ಯಾವ ರೀತಿಯ ಕಾರ್ಯಗಳು ಮೋಕ್ಷವನ್ನು ನೀಡುತ್ತವೆ ಎಂದು ತಿಳಿಯುತ್ತದೆ, ಇದರಿಂದ ಮರಣಿಸಿದವರು ಮತ್ತು ಅವರ ಕುಟುಂಬದವರಿಗೆ ನಮ್ಮ ಪಿತೃಗಳ ಆತ್ಮಕ್ಕೆ ಶಾಂತಿ ನೀಡಲು ನಾವು ಉತ್ತಮವಾದ ಯಾವ ಕೆಲಸವನ್ನು ಮಾಡಬೇಕೆನ್ನುವುದು ತಿಳಿಯುತ್ತದೆ🌹

🪷ಶುಭ ಕಾರ್ಯಗಳಿಗೆ ಪ್ರೇರಣೆ 🪷

🌹ಗರುಡ ಪುರಾಣವು ನಮಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ಸತ್ಕರ್ಮ ಮತ್ತು ದಯೆಯಿಂದ ಮಾತ್ರ ಮೋಕ್ಷ ಮತ್ತು ಮುಕ್ತಿ ದೊರೆಯುತ್ತದೆ ಎಂಬುದು ನಮಗೆ ಅರ್ಥವಾಗುವಂತೆ ಮಾಡುತ್ತದೆ🌹

🪷ನರಕಗಳಲ್ಲಿ ನೀಡುವ ಶಿಕ್ಷ🪷

🌹ಗರುಡ ಪುರಾಣದಲ್ಲಿ, ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ, ವಿವಿಧ ನರಕಗಳನ್ನು ಶಿಕ್ಷೆಯಾಗಿ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಯಾವ ವಿಷಯಗಳು ವ್ಯಕ್ತಿಯನ್ನು ಮೋಕ್ಷದ ಕಡೆಗೆ ಕೊಂಡೊಯ್ಯುತ್ತವೆ ಎನ್ನುವುದಕ್ಕೆ ಭಗವಾನ್ ವಿಷ್ಣುವು ಉತ್ತರವನ್ನು ನೀಡಿದ್ದಾನೆ🌹

🪷ನಿಗೂಢ ವಿಷಯಗಳ ಬಗ್ಗೆ ಜ್ಞಾನ 🪷

🌹ಗರುಡ ಪುರಾಣದಲ್ಲಿ ನಮ್ಮ ಜೀವನದ ಬಗ್ಗೆ ಅನೇಕ ನಿಗೂಢ ವಿಷಯಗಳನ್ನು ಹೇಳಲಾಗಿದೆ. ಒಬ್ಬ ವ್ಯಕ್ತಿಯು ತಿಳಿದಿರಬೇಕಾದ ಬಗ್ಗೆ. ಆತ್ಮಜ್ಞಾನದ ಚರ್ಚೆಯು ಗರುಡ ಪುರಾಣದ ಮುಖ್ಯ ವಿಷಯವಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಸಾವಿರ ಶ್ಲೋಕಗಳಲ್ಲಿ ಜ್ಞಾನ, ಧರ್ಮ, ನೀತಿ, ರಹಸ್ಯ, ಪ್ರಾಯೋಗಿಕ ಜೀವನ, ಸ್ವಯಂ, ಸ್ವರ್ಗ, ನರಕ ಮತ್ತು ಇತರ ಲೋಕಗಳ ವಿವರಣೆಯು ಗರುಡ ಪುರಾಣದಲ್ಲಿ ಕಂಡುಬರುತ್ತದೆ🌹

🪷ಜೀವನ ಸುಂದರವಾಗುವುದು 🪷

🌹ಇದರಲ್ಲಿ ಭಕ್ತಿ, ಜ್ಞಾನ, ವೈರಾಗ್ಯ, ಪುಣ್ಯ, ನಿಸ್ವಾರ್ಥ ಕಾರ್ಯಗಳ ಮಹಿಮೆಯಿಂದ ಶ್ರೀಸಾಮಾನ್ಯನ ತ್ಯಾಗ, ದಾನ, ತಪಸ್ಸು, ತೀರ್ಥಯಾತ್ರೆ ಮುಂತಾದ ಶುಭ ಕಾರ್ಯಗಳಲ್ಲಿ ಪಾಲ್ಗುಳ್ಳುವುದರ ಅನೇಕ ವಿಶ್ವಾತ್ಮಕ ಮತ್ತು ಪಾರಮಾರ್ಥಿಕ ಫಲಗಳ ಬಗ್ಗೆ ವಿವರಿಸಲಾಗಿದೆ. ಸತ್ತವರು ಮತ್ತು ಅವರ ಕುಟುಂಬದವರು ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡರೆ ಅವರ ಜೀವನವನ್ನು ಸುಂದರಗೊಳಿಸಬಹುದು🌹

🪷ಆಯುರ್ವೇದದ ಜ್ಞಾನ🪷

🌹ಇದಲ್ಲದೇ ಆಯುರ್ವೇದ, ನೀತಿಸಾರ ಮೊದಲಾದ ವಿಷಯಗಳ ವಿವರಣೆಯ ಜೊತೆಗೆ ಸತ್ತ ಆತ್ಮದ ಕೊನೆಯ ಸಮಯದಲ್ಲಿ ಮಾಡಬೇಕಾದ ಕಾರ್ಯಗಳನ್ನು ವಿವರವಾಗಿ ವಿವರಿಸಲಾಗಿದೆ🌹

🪷ಆತ್ಮಕ್ಕೆ ಮೋಕ್ಷ 🪷

🌹ಗರುಡ ಪುರಾಣದ ಪಠ್ಯವನ್ನು ಕೇಳುವುದರಿಂದ ಮಾತ್ರ, ಮೃತರ ಆತ್ಮವು ಶಾಂತಿಯನ್ನು ಪಡೆಯುತ್ತದೆ ಮತ್ತು ಮೋಕ್ಷದ ಮಾರ್ಗವನ್ನು ತಿಳಿಯುತ್ತದೆ ಎಂದು ಹೇಳಲಾಗುತ್ತದೆ. ಆತ್ಮವು ತನ್ನೆಲ್ಲಾ ವೇದನೆಗಳನ್ನು ಮರೆತು ಭಗವಂತನ ಮಾರ್ಗದಲ್ಲಿ ನಡೆದು ಮೋಕ್ಷವನ್ನು ಪಡೆದ ನಂತರ ಪಿತೃ ಲೋಕಕ್ಕೆ ಹೋಗುತ್ತೆ ಅಥವಾ ಮತ್ತೆ ಮಾನವನಾಗಿ ಜನ್ಮ ಪಡೆಯುತ್ತಾನೆ. ಅವನು ಪ್ರೇತಾತ್ಮವಾಗಿ ಅಲೆಯುವ ಅವಶ್ಯಕತೆಯಿರುವುದಿಲ್ಲ

***

.ಸಾವಿನ ನಂತರ ಯಮಲೋಕದವರೆಗೆ ಜೀವದ ಪ್ರಯಾಣ ಹೇಗಿರುತ್ತದೆ? : ಗರುಡಪುರಾಣದ ವಿವರಣೆ ಓದಿ


ಸಾವಿನ ನಂತರ ಜೀವ ಎಲ್ಲಿಗೆ ಹೋಗುತ್ತದೆ? ಸ್ವರ್ಗ ನರಕಗಳು ಇರುವುದು ನಿಜವೇ? ಇತ್ಯಾದಿ ಕುತೂಹಲ ಎಲ್ಲ ದೇಶಕಾಲಗಳ ಮನುಷ್ಯರನ್ನೂ ಕಾಡಿದೆ. ಹಾಗೆಂದೇ ಬಹುತೇಕ ಎಲ್ಲ ಮತ ಪಂಥಗಳು, ಜನಪದ – ನಾಗರಿಕತೆಗಳು ಈ ಬಗ್ಗೆ ತಮ್ಮದೇ ವಿವರಗಳನ್ನು ನೀಡಲು ಯತ್ನಿಸಿವೆ. ಅಂಥವುಗಳಲ್ಲಿ ನಮ್ಮ ಗರುಡಪುರಾಣವೂ ಒಂದು. ಈ ಲೇಖನದಲ್ಲಿ ಗರುಡಪುರಾಣದಲ್ಲಿ ಹೇಳಲಾಗಿರುವಂತೆ ಸಾವಿನ ನಂತರ ಜೀವದ ಪ್ರಯಾಣ ಮತ್ತು ಅವಸ್ಥೆಯ ಬಗ್ಗೆ ಮಾಹಿತಿ ಇದೆ. 


ಜೀವಿಯು ಗತಿಸಿದ ಮೇಲೆ ಒಂದು ವರ್ಷದ ಪರ್ಯಂತ ಧೀರ್ಘ ಪ್ರಯಾಣ ಮಾಡಿ ಯಮಲೋಕವನ್ನು ತಲುಪುವುದು. ದಿನಕ್ಕೆ 2470 ಯೋಜನದಂತೆ 86,000 ಯೋಜನ ದೂರದಲ್ಲಿ ಯಮಲೋಕವಿದೆ. ದೇಹ ತ್ಯಜಿಸಿದ 10 ದಿನಗಳವರೆಗೂ ಸ್ಥೂಲಕಾಯ ದಿಂದ( ದೇಹದಿಂದ) ಬೇರ್ಪಟ್ಟ ಜೀವಿಯು ಹಸ್ತ ಪ್ರಮಾಣದಷ್ಟೇ ಬೆಳೆಯುವನು. ಬಳಿಕ ಮುಂದೆ ಯಮಲೋಕ ದಲ್ಲಿಒಂದು ವರ್ಷದ ಬಳಿಕವಷ್ಟೇ ಅಂಗುಷ್ಠ ಪ್ರಮಾಣದಲ್ಲಿ ಬೆಳೆದು ಯಮಭೋಗವನ್ನು ಕರ್ಮಾನು ಸಾರವಾಗಿ ಭೋಗಿಸುವನು.


ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿ ಶತೈರಪಿ |

ಅಭುಕ್ತ್ವಾ ಯಾತನಾಂ ಜಂತುರ್ಮಾನುಷಂ ಲಭತೇ ನಹಿ ||


ನೂರು ಕೋಟಿಕಲ್ಪ ಕಾಲವಾದರೂ ಕರ್ಮಫಲವು ಅನುಭವಿಸಿದಲ್ಲದೇ ಅದು ಎಂದೆಂದೂ ಬಿಡದು. (ದೇವತೆಗಳಿಗೂ ಇದು ಬಿಟ್ಟಿಲ್ಲ. ಸ್ವತಃ ಯಮರಾಜನು ಅಣಿಮಾಂಡವ್ಯ ಋಷಿಗಳ ಶಾಪಕ್ಕೆ ತುತ್ತಾಗಿ ವಿದುರನಾಗಿ ಜನ್ಮವೆತ್ತಬೇಕಾಯಿತು). ಹಾಗೆಯೇ ಯಾತನೆ ಯನ್ನು ಅನುಭವಿಸದೆ ಜೀವಿಗೆ ಮನುಷ್ಯ ಜನ್ಮ ಲಭ್ಯವಿಲ್ಲ. ಸತ್ತ ಜೀವಿಗೆ ಪಿಂಡ ಪ್ರಧಾನ ಏಕೆಂದರೆ 10 ದಿನಗಳಲ್ಲಿ ಸೂಕ್ಷ್ಮ ದೇಹ ನಿರ್ಮಾಣವಾಗಿ ಜೀವಿಗೆ ಯಮಪುರಿ ಸೇರಲು ಶಕ್ತಿ ಸಿಗುವುದು. ಪಿಂಡ ಪ್ರಧಾನ ಕಾರ್ಯಗಳು ಮಾಡದಿದ್ದಲ್ಲಿ ಆತ್ಮವು ಪ್ರೇತವಾಗಿ ಅಲೆದಾಡಬೇಕಾಗುತ್ತದೆ ಎಂಬ ನಂಬಿಕೆ ಇದೆ. ಬಹುತೇಕ ಜನಿವಾರಧಾರಿಗಳಲ್ಲಿ ಈ ಸಂಪ್ರದಾಯವಿರುತ್ತದೆ. ಉಳಿದಂತೆ ಆಯಾ ಜಾತಿ – ಸಮುದಾಯಗಳು ತಮ್ಮ ಪರಂಪರಾನುಗತ ನಂಬಿಕೆಯ ಅನುಸಾರ ಹಾಲು ತುಪ್ಪ ಬಿಡುವುದೇ ಮೊದಲಾದ ಆಚರಣೆಗಳನ್ನು ನಡೆಸುತ್ತವೆ.


5 ನೇ ತಿಂಗಳಲ್ಲಿ ಯಮ ಕಿಂಕರರು ಜೀವಿಗೆ ದಾರಿ ಮಧ್ಯೆ ವಿಶ್ರಾಂತಿ ನೀಡುವರು. 6ನೇ ತಿಂಗಳಲ್ಲಿ ಆತ್ಮವು ವೈತರಣಿ ನದಿ ದಾಟುವುದು. (ದಕ್ಷನ ಯಜ್ಞದಲ್ಲಿ ದಾಕ್ಷಾಯಣಿಯು ದೇಹ ತ್ಯಾಗ ಮಾಡಿದಾಗ ಆ ನೋವಿನಲ್ಲಿ ರುದ್ರನು ಹರಿಸಿದ ಕಣ್ಣೀರಿನ ನದಿಯೇ ಈ ವೈತರಣಿ ನದಿಯಾಯಿತು ಎಂದು ಪ್ರತೀತಿ ಇದೆ). ಬಳಿಕ ಆತ್ಮವು ಯಮಪುರಿ ಸೇರುವುದು. ಇದೊಂದು ದೀರ್ಘ ಪ್ರಯಾಣವೇ ಹೌದು.


ಮೊದಲು ಮನುಷ್ಯನ  ಕರ್ಮಾಕರ್ಮಗಳ ವಿಚಾರಣೆ ನಡೆಯುವುದು ಯಮಪುರಿಯಲ್ಲೇ. ನರಕದಲ್ಲೇ ಯಮಲೋಕವಿರುವುದು. ನರಕಗಳು ಭೂಮಿಯಿಂದ ದಕ್ಷಿಣ ದಿಕ್ಕಿಗೆ ನೀರಿನ ಮೇಲೆ ನಿಂತಿದೆ. ಇಲ್ಲಿಯೇ ಪಿತೃ ದೇವತೆಗಳ ವಾಸ.ಇಲ್ಲಿಂದಲೇ ಪಿತೃಗಳು ಕಾಲಕಾಲಕ್ಕೆ ತಮ್ಮ ವಂಶಜರು ನೀಡುವ ತರ್ಪಣಗಳನ್ನು ಸ್ವೀಕರಿಸಿ( ವರ್ಷಂ ಪ್ರತೀ ) ತಮ್ಮ ವಂಶದಲ್ಲಿ ಹುಟ್ಟುವವರಿಗೆ ಮಂಗಳವಾಗಲಿ ಎಂದು  ಹರಸುತ್ತಿರುತ್ತಾರೆ.


ಯಮಧರ್ಮನು ನರಕಾಧಿಪತಿಯಾಗಿದ್ದು, ಮೃತ ಜೀವಿಗಳ ಪಾಪ – ಪುಣ್ಯಗಳಿಗೆ ಅನುಗುಣವಾಗಿ ತಾಮಿಸ್ರ, ಅಂಧ ತಾಮಿಸ್ರ, ರೌರವ, ಮಹಾ ರೌರವ, ಕುಂಭಿಪಾಕ, ಕಾಲಸೂತ್ರ, ಅಸಿಪತ್ರವನ ಇತ್ಯಾದಿ21 ನರಕಗಳಲ್ಲಿ ಶಿಕ್ಷೆ ವಿಧಿಸುವನು. ಇದಲ್ಲದೇ ಜೀವಿಯು ಸೌಮ್ಯ, ಸೌರಿ ಪುರ, ನಗೇಂದ್ರ ಭವನ, ಕ್ರೌಂಚ, ವಿಚಿತ್ರ ಭವನ, ಶೀತಾಢ್ಯಬಹುಭೀತಪುರ, ಧರ್ಮ ಭವನ ಇತ್ಯಾದಿ ಫಲಗಳನ್ನು ಅನುಭವಿಸಿ ಬಳಿಕ ಪುಣ್ಯಾಂಶಗಳಿಗೆ ಅನುಸಾರವಾಗಿ ಸ್ವಗಕ್ಕೆ( ವೈಕುಂಠ ಅಥವಾ ಕೈಲಾಸ) ಕ್ಕೆ ತೆರಳುವುದು. ಬಳಿಕ ಸ್ವರ್ಗದಲ್ಲಿ ಪುಣ್ಯಾಂಶ ಅನುಭವಿಸಿದ ಬಳಿಕ ನಿಗದಿತ ಯೋನಿಯೊಂದರಲ್ಲಿ ಮತ್ತೆ ಕರ್ಮಾನುಸಾರ ಭೂಮಿಗೆ ಮರಳುವುದು. ಇಲ್ಲಿಗೆ ಜೀವಿಯ ಜನನ – ಮರಣ ಚಕ್ರದ ಒಂದು ಸುತ್ತು ಮುಗಿದು ಇನ್ನೊಂದರ ಆರಂಭವಾಗುವುದು !

***

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?

ಏನು ಯೋಚನೆ ಇರುತ್ತದೆ ಎಂಬುದನ್ನು ಸತ್ತರವರಂತೂ ಹೇಳುವುದಿಲ್ಲ. ಇತರರಿಗೆ ಗೊತ್ತಾಗುವುದೂ ಇಲ್ಲ.ಆದರೆ ಜೀವಾತ್ಮ ದೇಹ ತ್ಯಜಿಸುವ ಸಿದ್ಧಾಂತ ಹೇಳುತ್ತದೆ.


ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ?


ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು ಹುಡುಕಿ ಇಂದಿನ ವ್ಯಾವಹಾರಿಕತೆಗೆ ಹೊಂದುವಂತೆ ಬರೆಯ ಬಹುದಷ್ಟೆ. ಮನುಷ್ಯನು ತನ್ನ ಕೊನೆಯುಸಿರಿನ ಕಾಲದಲ್ಲಿ ಏನು ಯೋಚಿಸಿರುವನು? ಇದನ್ನು ಹೇಳಲಿಕ್ಕೆ ಆ ಮನುಷ್ಯನು ಇರುವುದಿಲ್ಲ. ಮರಣಕ್ಕೆ ಕೆಲ ಗಳಿಗೆಗೆ ಮುಂಚೆ ಕೆಲವರು ಅವರ ಮನದ ಇಂಗಿತಗಳನ್ನು ಹೇಳಿದ್ದಿದೆ. ಆದರೆ ಕೊನೆಯ ಉಸಿರಿನಲ್ಲಿ ಇರುವಾಗ ಮನದ ಯೋಚನೆಗಳು ಏನಿರ ಬಹುದು ಎಂದು ಯೋಚಿಸಿದವರಿಲ್ಲ. ಇಲ್ಲಿ ನಾಲ್ಕು ವಿಧಗಳ ಚಿಂತನೆಗಳಿವೆ. 

ಆರ್ತ, 

ರೌದ್ರ, 

ಧನ್ಯ 

ಮತ್ತು ಶುಕ್ಲ. 

ಇವುಗಳಲ್ಲಿ ಯಾವುದಾದರೂ ಒಂದು ಚಿಂತನೆ ಬರಲೇ ಬೇಕು ಎಂಬುದು ಮರಣ ಕಾಲದ ಸಿದ್ಧಾಂತ.


ಆರ್ತ- ಹೆಸರೇ ಹೇಳುತ್ತದೆ ಆರ್ತ ನಾದ ಎಂದು. ಅಯ್ಯೋ ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಆಸ್ತಿ ಎಲ್ಲಾ ಬಿಟ್ಟು ಹೋಗ ಬೇಕಲ್ಲಾ ಎಂಬ ದುಃಖ ಬರುತ್ತದೆ. 

ನೀವು ನೋಡಿರ ಬಹುದು ಕೆಲ ಮನುಷ್ಯರು ಮರಣ ಕಾಲಕ್ಕೆ ಸದಾ ಅಳುವ ದೃಶ್ಯವನ್ನು.ಅಂದರೆ ಇವರಿಗೆ ಈ ಲೋಕದ ವ್ಯಾಮೋಹವನ್ನು ತುಂಡು ಮಾಡಿ ಹೋಗಲು ಆಗುತ್ತಿಲ್ಲ. ಆ ಕಡೆಯಿಂದ ಯಮ ಪಾಶ ಎಳೆಯುತ್ತದೆ. ಹಾಗಾಗಿ ದುಃಖಿಸುತ್ತಾರೆ. ಆಗ ಅವರ ಮಕ್ಕಳು ‘ಅಪ್ಪಾ, ಅಜ್ಜಾ, ಅಮ್ಮಾ. ನಿನಗೆ ಏನು ಆಸೆ ಇದೆ ಹೇಳು ‘ ಎಂದು ಸಾಂತ್ವನ ಹೇಳುತ್ತಾರೆ. ಅಂತೂ ಕೊನೆಗೆ ಕ್ಷೀಣವಾಗಿ ಆತ ಇಹಲೋಕವನ್ನು ಒತ್ತಾಯ ಪೂರ್ವಕ ತ್ಯಜಿಸ ಬೇಕಾಗುತ್ತದೆ. ಇದನ್ನು ಆರ್ತ ಮರಣ ಎಂದಿದ್ದಾರೆ. ‘ಯಥಾ ಮರಣ ಸ್ವರೂಪಂ ತಥಾ ಪುನರ್ಜಃನ್ಮಃ’ ಅಂದರೆ ಯಾವ ಚಿಂತೆಯಲ್ಲಿ ಸಾಯುತ್ತಾನೋ ಅದೇ ಸ್ವರೂಪದ ಪುನರ್ಜನ್ಮ ಲಭಿಸುತ್ತದೆ. ಈ ರೀತಿಯಲ್ಲಿ ಹುಟ್ಟಿದವರು ಮುಂದಿನ ಜನ್ಮದಲ್ಲಿ ಹೇಗಿರುತ್ತಾನೆ ಎಂಬುದು ನವಜಾತ ಶಿಶುವಿನ ಅಳುವು ಸೂಚಿಸುತ್ತದೆ. ನವಜಾತ ಶಿಶುವು ವಿಪರೀತ ಅಳುವುದು ಈ ಸಂಬಂಧದಿಂದ. ಇದೊಂದು ರೀತಿಯ ಮಾನವನ ಮನಶಾಸ್ತ್ರದ. ಕಲಿಕೆಯಂತೆ. ಈ ವ್ಯಕ್ತಿ ಜೀವನದಲ್ಲಿ ಜಿಪುಣ, ದುಃಖಿತನಾಗಿ ಬಾಳುತ್ತಾನೆ. ಅದರೆ ಉತ್ತಮ ಸಂಯೋಜಕರಿದ್ದರೆ ಇದನ್ನು ಸರಿ ಮಾಡಲು ಸಾಧ್ಯವಿದೆ. ಅದಕ್ಕಾಗಿ ವಿದ್ವಜ್ಜನರ ಸಂಪರ್ಕ ಬೇಕು ಎನ್ನುವುದು.


ರೌದ್ರ: ನೀವು ಕೆಲ ಮನುಷ್ಯರು ಆಡುವ ಮಾತುಗಳನ್ನು ಕೇಳಿರ ಬಹುದು. 'ನಾನು ಸತ್ತರೂ ನನ್ನ ಹೆಣ ಮುಟ್ಟ ಬೇಡ, ನಾನು ಸತ್ತರೂ ದೆವ್ವವಾಗಿ ನಿನ್ನನ್ನು ಬಿಡುವುದಿಲ್ಲ, ನನ್ನ ಚಿತೆಗೆ ಹಿರಿ ಮಗ ಕೊಳ್ಳಿ ಇಡುವುದು ಬೇಡ, ನಾನು ಸತ್ತರೆ ನೀನು ನನ್ನ ಅಂತ್ಯ ವಿಧಿ ಮಾಡ ಬೇಡ', ಈ ರೀತಿ ಮಾತಾಡುವವರಿಗೆ ರೌದ್ರ ಚಿಂತನೆ ಮರಣವಿರುತ್ತದೆ. ಇವರ ಮುಂದಿನ ಜನ್ಮ ಕಲಹ ಸ್ವರೂಪದಲ್ಲಿ ಇರುತ್ತದೆ. ಇಂತವರ ಪುನರ್ಜನ್ಮದಲ್ಲಿ ಶಿಶುವಿನಿಂದಲೇ ಈ ಗುಣ ತಿಳಿಯ ಬಹುದು. ವಿಪರೀತ ಹಟ ಮಾಡುವಿಕೆ, ಕೋಪದಿಂದ ಮಗುವಿನ ಮುಖದ ವರ್ಣವೇ ಬದಲಾಗುವುದು, ಹಾಲಿನ ಬಾಟಲಿಯನ್ನು ಎಳೆದು ಬಿಸಾಡುವಿಕೆ, ಕೆಲ ಜನರನ್ನು ಕಂಡರೆ ಅಳುವುದು ಇತ್ಯಾದಿ ಗುಣಗಳಿರುತ್ತದೆ. ಇಂತಹ ಗುಣವುಳ್ಳ ಮಗುವನ್ನು ಅದರ ಮಾತಾ ಪಿತೃಗಳು ಒಳ್ಳೆಯ ಪೋಲೀಸ್ ಅಧಿಕಾರಿಯೋ, IAS ಅಧಿಕಾರಿಯನ್ನೋ ಮಾಡಿದಾಗ ಈ ಮನ ಪರಿವರ್ತನೆಯಾಗಿ ಆತ ಒಬ್ಬ ನಿಷ್ಟಾವಂತ ಮನುಷ್ಯನಾಗ ಬಹುದು. ಇಲ್ಲವಾದಲ್ಲಿ ಮತ್ತೆ ಪಾಪಿಯೇ ಆಗ ಬಹುದು.


ಧನ್ಯ: ಈ ವ್ಯಕ್ತಿಯು ಜೀವನದಲ್ಲಿ ಸದಾ ಸಜ್ಜನಿಕೆಯುಳ್ಳವನೆ. ಇವನು ತನ್ನ ಕೊನೆಯ ಕಾಲದಲ್ಲಿ, 'ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಅನೇಕ ಜನರಿಗೆ, ಸಂಘ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ, ಯಾರನ್ನೂ ದೂಷಿಸಿಲ್ಲ, ಒಟ್ಟಿನಲ್ಲಿ ಸತ್ಯದಲ್ಲೇ ನಡೆದಿದ್ದೇನೆ ಎಂದು ಯೋಚಿಸುತ್ತಾ ಜೀವ ಬಿಡುತ್ತಾನೆ. ಇದು ಧನ್ಯ ಚಿಂತನಾ ಮರಣ. ಮುಂದಿನ ಜನ್ಮದಲ್ಲಿ ಸಾತ್ವಿಕನೂ ಶ್ರೀಮಂತನೂ, ದಾನಿಯೂ ಆಗಿ ಹುಟ್ಟುತ್ತಾನೆ. ಇವನು ಮಗುವಿದ್ದಾಗಲೂ ಯಾರಿಗೂ ಹಿಂಸೆ ನೀಡುವುದಿಲ್ಲ. ನೀವು ಕೆಲ ತಾಯಂದಿರ ಮಾತು ಕೇಳಿರ ಬಹುದು. ನನ್ನ ದೊಡ್ಡ ಮಗ ಶಿಶುವಾಗಿದ್ದಾಗ ರಗಳೆಯೇ ಇಲ್ಲ. ಹಾಲು ಕೊಟ್ಟು ಮಲಗಿಸಿದರೆ ಅವನಷ್ಟಕ್ಕೇ ಆಟವಾಡಿ ಕೊಂಡು ಇರುತ್ತಾನೆ. ಅಳುವುದು ಬಾರೀ ಕಡಿಮೆ. ಅಂತೂ ಇವನ ಬಾಲ್ಯದಲ್ಲಿ ನನಗೇನೂ ರಗಳೆಯಾಗಲಿಲ್ಲಪ್ಪ’ ಎಂದು ಮಗುವಿನ ಬಗ್ಗೆ ಗುಣಗಾನ ಮಾಡುತ್ತಾಳೆ. ಇದು ಧನ್ಯ ಚಿಂತನೆಯಲ್ಲಿ ಮರಣಿಸಿದವನ ಪುನರ್ಜನ್ಮದ ರೂಪ.


ಶುಕ್ಲ : ಈ ಮರಣ ಬರುವುದು ಅಪರೂಪ. ಕಲಿಯುಗದಲ್ಲಂತೂ ಲಕ್ಷಕ್ಕೆ ಒಬ್ಬ ಮಾತ್ರ ಎನ್ನ ಬಹುದು. ಇದು ಹೇಗೆಂದರೆ ಇವರ ಮರಣ ಕಾಲದಲ್ಲಿ ಅವರ ಕ್ರಿಯಾ ಉದ್ದೇಶ ಚಿಂತನೆ, ತಾನು ಏನು ಮಾಡಿದ್ದೇನೆ ಎಂಬುದರ ಮೆಲುಕು ಇವರಲ್ಲಿ ಇಲ್ಲ. ಉದಾ: ಮಾಜಿ ರಾಷ್ಟ್ರಪತಿ ಕಲಾಂ ಮೇಷ್ಟ್ರು, ಯಕ್ಷಗಾನ ವೇಷಧಾರಿಯಾದ ಕೆರೆಮನೆ ಶಂಬು ಹೆಗ್ಗಡೆ, ಯಕ್ಷಗಾನ ಭಾಗವತರಾದ ದಾಮೋದರ ಮಂಡೆಚ್ಚರು, ನಮ್ಮ ಪ್ರೀತಿಯ ಅಪ್ಪು, ಹೋರಾಟದಲ್ಲೇ ಮಡಿಯುವ ಯೋಧರು ಇತ್ಯಾದಿ ತನ್ನ ಉದ್ದೇಶಿತ ಕೆಲಸದ ಮಧ್ಯದಲ್ಲೇ ಅಸು ನೀಗುವವರು. ಅವರಿಗೆ ಗತ ಕಾಲದ ಚಿಂತನೆಗಳಿಲ್ಲ. ಆ ಕಾಲದ ವಿಚಾರ ಮಾತ್ರವೇ ಇರುತ್ತದೆ.ಇನ್ನು ಕೆಲ ಜ್ಞಾನಿಗಳೂ ಶುಕ್ಲ ಚಿಂತನೆಯಲ್ಲಿ ಕೊನೆಗೊಳ್ಳುತ್ತಾರೆ. ಇವರು, ನಾನು ಏನೂ ಮಾಡಲಿಲ್ಲವಪ್ಪಾ, ಎಲ್ಲಾ ದೈವ ಪ್ರೇರಣೆಯಂತೆ ನನ್ನ ಮೂಲಕ ನಡೆದಿರ ಬಹುದು ನಾನು ಕೇವಲ ನಿಮಿತ್ತ ಮಾತ್ರ ಎಂದು ಯೋಚಿಸುವವರು. ಇವರು ತಪ್ಪಿಯೂ ನನಗೆ ಮೋಕ್ಷ ಸಿಗಲಿ ಎಂದು ಬಯಸುವವರಲ್ಲ.

ಇಂತವರಿಗೆ ಮೋಕ್ಷ ಯೋಗವಿರುತ್ತದೆ. ಆತ್ಮಕಾರಕ ಶುಭಗ್ರಹ ಮೀನಾಂಶದಲ್ಲಿ ಬಂದವರಿಗೆ ನಿಶ್ಚಿತವಾಗಿಯೂ ಮೋಕ್ಷ ಯೋಗವಿದೆ. ಇಂತವರಿಗೆ ಮರು ಹುಟ್ಟಿಲ್ಲ. 

ಆದರೆ ಇವರು ಆರ್ತ, ರೌದ್ರ, ಧನ್ಯ ಮರಣಗಳನ್ನು ದಾಟಿಯೇ ಬರ ಬೇಕು. ಇದು ಒಂದು ರೀತಿಯ ವಿಕಾಸ. 'ಅಯೋಗ್ಯ ಪುರುಷಂ ನಾಸ್ತಿ’ ಎಂದು ವೇದಗಳು ಹೇಳಿವೆ. ಆದರೆ ಸಂಯೋಜಕರು ಸರಿ ಇರ ಬೇಕು. ಅದು ಸರಿ ಇಲ್ಲದಿದ್ದಾಗ ಅಯೋಗ್ಯರಾಗಬಹುದು. ಅದಕ್ಕಾಗಿಯೇ ಪೂರ್ವ ಶೋಡಶ ಸಂಸ್ಕಾರಗಳಿರುವುದು.ಅದರ ಉದ್ದೇಶ ತಿಳಿಯದೆ ಸಂಸ್ಕಾರ ಪಡೆದರೂ ಪ್ರಯೋಜನವಿಲ್ಲ. ಅರ್ಥ ತಿಳಿದರೆ ಅವನಿಗೆ ಹಂತ ಹಂತಗಳಲ್ಲಿ ಜ್ಞಾನವೃದ್ಧಿ ಆಗುತ್ತದೆ. ಜ್ಞಾನಿಗೆ ದುಃಖ ಸುಳಿಯದು. ದುಃಖ ರಹಿತನಿಗೆ ಶುಕ್ಲ ರೂಪದ ಮರಣವೂ ಮೋಕ್ಷವೂ ಲಭ್ಯವಾಗುತ್ತದೆ.

ಅನಾಯಾಸೇನ ಮರಣಂ

ವಿನಾ ದೈನ್ಯೇನ ಜೀವನಂ

ಕೃಪಯಾ ಭಕ್ತವತ್ಸಲ|

ಎಂಬ ಧ್ಯೇಯ ಜೀವನದಲ್ಲಿ ಇದ್ದಾಗ, ಸಾಕಷ್ಟು ನೆಮ್ಮದಿ,ಸುಖ ಶಾಂತಿಯೂ, ಪರದಲ್ಲಿ ಅಕ್ಷಯ ಪುಣ್ಯಲೋಕ ಪ್ರಾಪ್ತಿಯೂ ಸಿಗುತ್ತದೆ.

(whatsapp)

***

ಗರುಡ ಪುರಾಣ ಶತಾಪರಾಧಸ್ತೋತ್ರಮ್


ನಾರದ ಉವಾಚ –

ನಾಪರಾಧಾಂಶ್ಚರೇತ್ ಕ್ವಾಪಿ ವಿಷ್ಣೋರ್ದೇವಸ್ಯ ಚಕ್ರಿಣಃ |

ಇತಿ ತ್ವಯೋದಿತಂ ಪೂರ್ವಂ ತಾನಾಚಕ್ಷ್ವ ಮಮಾಧುನಾ ||


ಜ್ಞಾತ್ವೈವ ವಿನಿವರ್ತಂತೇ ಪಂಡಿತಾಃ ಪಾಪಬುದ್ಧಿತಃ(ಪದ್ಧತೇಃ) |

ತಸ್ಮಾತ್ ತತ್ಕರ್ತೃಕಾನಾಹುರ್ಮಾಧವೋ ಯೈರ್ನ ತುಷ್ಯತಿ ||


ಬ್ರಹ್ಮೋವಾಚ –

ಅಪರಾಧಸಹಸ್ರಾಣಿ ಕ್ರಿಯಂತೇಽಹರ್ನಿಶಂ ನರೈಃ |

ವಕ್ತುಂ ತಾನ್ ಕಃ ಕ್ಷಮೋ ಲೋಕೇ ತಸ್ಮಾನ್ಮುಖ್ಯಾನಹಂ ಬ್ರುವೇ || ೧ ||


ಜ್ಞಾತ್ವಾ ವೈ ವಿನಿವರ್ತಂತೇ ಪಂಡಿತಾಃ ಪಾಪಮಾರ್ಗತಃ |

ನಿವೃತ್ತಿಂ ಮಾನವಾ ಯಾಂತಿ ತದ್ವಿಷ್ಣೋಃ ಪರಮಂ ಪದಮ್ || ೨ ||


ಅಸ್ನಾತ್ವಾ ದೇವಪೂಜಾಯಾಃ ಕರಣಂ ಶಂಕಯಾ ವಿನಾ |

ದೇವಾಲಯೇ ಪ್ರವೇಶಶ್ಚ ದೀಪಹೀನಾಲಯೇಽಪಿ ಚ || ೩ ||


ಅಪ್ರಕ್ಷಾಲಿತಪಾದಶ್ಚ ಪ್ರವೇಶೋಽಭಿಮುಖಾಗತಿಃ |

ಗೋಮಯಾನನುಲಿಪ್ತೇ ಚ ದೇಶೇ ದೇವಸ್ಯ ಪೂಜನಮ್ || ೪ ||


ಅಪ್ರಕ್ಷಾಲ್ಯ ಚ ಪುಷ್ಪಾಣಿ ಪ್ರಕ್ಷಾಲ್ಯ ತುಲಸೀಂ ವಿಭೋ |

ಪ್ರಲಪನ್ ದೇವತಾಪೂಜಾ ಗಂಧವರ್ಜಿತಪೂಜನಮ್ || ೫ ||


ಅಘಂಟಾದೇವತಾರ್ಚಾ ಚ ಮುಖಫೂತ್ಕೃತವಹ್ನಿನಾ |

ಧೂಪಾರ್ತಿಕಾರ್ಪಣಂ ವಿಷ್ಣೋಃ ಸ್ತೋತ್ರಪಾಠಂ ವಿನಾ ತಥಾ || ೬ ||


ನಿರ್ಮಾಲ್ಯೋದ್ವಾಸನಂ ವಸ್ತ್ರಾಶೋಧಿತಾಗ್ರ್ಯೋದಕಾಹೃತಿಃ |

ಅಗ್ರ್ಯೋದಕೇ ನರಚ್ಛಾಯಾಪತನಂ ಚಾಭಿಷೇಚನಮ್ || ೭ ||


ಅಗ್ರ್ಯೋದಕೇ ನಖಸ್ಪರ್ಶೋ ಜಾನುಜಂಘಾವಲಂಬನಮ್ |

ದೇವೋಪಕರಣಸ್ಪರ್ಶಃ ಪದಾ ನಾರೀನರೈಸ್ತಥಾ || ೮ ||


ಅಧೂತವಸ್ತ್ರೈರಸ್ನಾತೈರ್ನೈವೇದ್ಯಸ್ಯಾಪಿ ಪಾಚನಮ್ |

ಅನಾಚ್ಛಾದ್ಯ ತು ಕುಂಭಸ್ಯ ಮುಖಮಗ್ರ್ಯೋದಕಾಹೃತಿಃ || ೯ ||


ಅಭಕ್ಷ್ಯಭಕ್ಷಣಂ ವಿಷ್ಣೋರಭಕ್ಷ್ಯಸ್ಯ ನಿವೇದನಮ್ |

ಕೇಶಶ್ಮಶ್ರುನಖಸ್ಪರ್ಶಹಸ್ತಾಭ್ಯಾಂ ದೇವಸ್ಪರ್ಶನಮ್ || ೧೦ ||


ಅನ್ಯಾವಶಿಷ್ಟವಸ್ತ್ರಸ್ಯ ದೇವತಾನಾಂ ಸಮರ್ಪಣಮ್ |

ಹೀನವಸ್ತ್ರಾರ್ಪಣಂ ವಿಷ್ಣೋರ್ನೀಲವಸ್ತ್ರಸಮರ್ಪಣಮ್ || ೧೧ ||


ಅಧೂತವಸ್ತ್ರಪೂಜಾ ಚ ನಿಷಿದ್ಧಾನ್ನನಿವೇದನಮ್ |

ಅಷ್ಟಾಕ್ಷರೋಪದೇಶಾಚ್ಚ ಋತೇ ದೇವಾರ್ಚನಂ ತಥಾ || ೧೨ ||


ಚೌರ್ಯಾಹೃತಾನಾಂ ಪುಷ್ಪಾಣಾಂ ದೇವಾನಾಂ ಚ ಸಮರ್ಪಣಮ್ |

ಅನ್ಯಾವಶಿಷ್ಟಪರ್ಯುಷ್ಟಮ್ಲಾನಪುಷ್ಟಸಮರ್ಪಣಮ್ || ೧೩ ||


ಛಿನ್ನಭಿನ್ನಾತಿರಿಕ್ತಾನಾಂ ಪುಷ್ಪಾಣಾಂ ಚ ಸಮರ್ಪಣಮ್ |

ಸ್ವಾಂಗಭೂಗಲಿತಾನಾಂ ಚ ನಿಕೃಂತನಾಂ ಸಮರ್ಪಣಮ್ || ೧೪ ||


ವಸ್ತ್ರಾರ್ಕೈರಂಡಪತ್ರೇಷ್ವಾಹೃತಾನಾಂ ಸಮರ್ಪಣಮ್ |

ನಿರ್ಗಂಧಕುಸುಮಾನಾಂ ಚ ತುಲಸೀರಹಿತಾರ್ಚನಮ್ || ೧೫ ||


ಲೋಕವಾರ್ತಾಂ ವದನ್ ವಿಷ್ಣೋರ್ನಿರ್ಮಾಲ್ಯಸ್ಯ ವಿಸರ್ಜನಮ್ |

ಅರ್ಚನೇ ವರ್ಜನಂ ಷಟ್ಕಮುದ್ರಾಣಾಂ ಮುನಿಸತ್ತಮ || ೧೬ ||


ಏರಂಡತೈಲದೀಪಶ್ಚ ಪಂಚಸಂಸ್ಕಾರವರ್ಜನಮ್ |

ಭೂತ್ವಾ ಶೂನ್ಯಲಲಾಟಶ್ಚ ದೇವತಾಯಾಃ ಪ್ರಪೂಜನಮ್ || ೧೭ ||


ಸಾಮ್ಯೇನ ಶಂಕರಾದ್ಯೈಶ್ಚ ಪೂಜಾ ವಾ ಸಮಕಾಲತಃ |

ತುಲಸೀಪದ್ಮಾಕ್ಷಮಾಲಾನಾಂ ತಥಾ ಕಂಠೇ ತ್ವಧಾರಣಮ್ || ೧೮ ||


ಉತ್ತರೀಯಪರಿತ್ಯಾಗಃ ಪವಿತ್ರಗ್ರಂಥಿವರ್ಜನಮ್ |

ಅಕಚ್ಛಃ ಪುಚ್ಛಕಚ್ಛೋ ವಾ ದೇವತಾಯಾಃ ಪ್ರಪೂಜನಮ್ || ೧೯ ||


ಪಾಖಂಡೀನಾಂ ಚ ಸಂಸರ್ಗೋ ದುಃಶಾಸ್ತ್ರಾಭ್ಯಾಸ ಏವ ಚ |

ನರಸ್ತುತೀನಾಂ ಶ್ರವಣಂ ನರಸ್ತುತ್ಯಾ ಚ ಜೀವನಮ್ || ೨೦ ||


ಪೂಜ್ಯಸ್ತುತಿಪರಿತ್ಯಾಗಃ ಸಚ್ಛಾಸ್ತ್ರಾಭ್ಯಾಸವರ್ಜನಮ್ |

ಶ್ರವಣಂ ವಿಷ್ಣುನಿಂದಾಯಾ ಗುರುನಿಂದಾಶ್ರುತಿಸ್ತಥಾ || ೨೧ ||


ಸತ್ಪುರುಷನಿಂದಾಶ್ರವಣಂ ಸಚ್ಛಾಸ್ತ್ರಸ್ಯಾಪಿ ನಾರದ |

ದೇವಸ್ಯ ಪೂಜಾಸಮಯೇ ಬಾಲಾನಾಂ ಲಾಲನಂ ತಥಾ || ೨೨ ||


ವ್ಯಾಸಂಗೋ ದೇವತಾರ್ಚಾಯಾಂ ಕೇಶಾದೀನಾಂ ವಿಸರ್ಜನಮ್ |

ಆಜ್ಯಾಭಿಘಾರಹೀನಸ್ಯ ನೈವೇದ್ಯಸ್ಯ ಸಮರ್ಪಣಮ್ || ೨೩ ||


ಆಲಸ್ಯಾದ್ದೇವಪೂಜಾ ಚ ತುಚ್ಛೀಕೃತ್ಯ ತಥಾ ವಿಭೋ |

ಮಲಂ ಬಧ್ವಾ ದೇವಪೂಜಾಽಜೀರ್ಣಾನ್ನೇನಾರ್ಚಿತಂ ವಿಭೋ || ೨೪ ||


ದೇವಸ್ಯ ಪೂಜಾಸಮಯೇ ವಿದಿತ್ವಾಽಽಗಮನಂ ಸತಾಮ್ |

ಅನುಭ್ಯುತ್ಥಾನಮಾರ್ಯಾಣಾಂ ಪರಿತ್ಯಾಗಶ್ಚ ಕರ್ಮಣಾಮ್ || ೨೫ ||


ಶಠತ್ವಾಚ್ಛ್ರವಣಂ ವಿಷ್ಣೋಃ ಕಥಾಯಾಃ ಪುರುಷರ್ಷಭ |

ಪುರಾಣಶ್ರುತಿಸಮಯೇ ತಾಂಬೂಲಾದೇಶ್ಚ ಚರ್ವಣಮ್ || ೨೬ ||


ಗುರೋಃ ಸಮಾಸನಾರೂಢಃ ಪುರಾಣಶ್ರವಣಂ ತಥಾ |

ಅಶ್ರದ್ಧಯಾ ಪುರಾಣಸ್ಯ ಶ್ರವಣಂ ಕಥನಂ ತಥಾ || ೨೭ ||


ದಿನಾಪನಯನಂ ಲೋಕವಾರ್ತಯಾ ಗೃಹಚಿಂತಯಾ |

ನಮಸ್ಕಾರಾತ್ ಪರಂ ವಿಷ್ಣೋರ್ಧೂಲಿಧೂತಾವಧೂನನಾ || ೨೮ ||


ಆರ್ದ್ರವಸ್ತ್ರೇಣ ದೇವಸ್ಯ ಪೂಜಾಯಾಃ ಕರಣಂ ತಥಾ |

ಏಕಾದಶೀಪರಿತ್ಯಾಗಃ ಪರ್ವಮೈಥುನಮೇವ ಚ || ೨೯ ||


ಪುಂಸೂಕ್ತಮಪಠಿತ್ವಾ ಚ ದೇವಪೂಜಾಸಮಾಪನಮ್ |

ಆದಾವಂತೇ ಸಹಸ್ರಾಣಾಂ ನಾಮ್ನಾಂ ಪಾಠವಿವರ್ಜಿತಮ್ || ೩೦ ||


ಅಹುತ್ವಾವಾಽಪ್ಯದತ್ವಾ ವಾ ಭೋಜನಂ ಋಷಿಸತ್ತಮ |

ಪುಣ್ಯಕಾಲಾತಿಶಯಿತದೇವಪೂಜಾಸಮರ್ಪಣಮ್ || ೩೧ ||


ಭೋಗೇ ನಿವೇದಿತಾನ್ನಸ್ಯ ಹ್ಯನ್ಯದೇವಾರ್ಪಿತಸ್ಯ ಚ |

ವಿಷ್ಣೋಶ್ಚ ಸ್ಥಾನರಹಿತೋ ಗ್ರಾಮವಾಸಶ್ಚ ಪಂಡಿತಃ || ೩೨ ||


ಸತ್ಸಂಗಮವಿಹೀನೇ ಚ ವಿಷ್ಣ್ವನ್ಯನ್ನಾಮಧಾರಣಮ್ |

ನಿತ್ಯಂ ಸಕಾಮಪೂಜಾ ಚ ದೇವೋಪಕರಣೈಸ್ತಥಾ || ೩೩ ||


ಸಂಸಾರಯಾತ್ರಾಕರಣಂ ತಥಾ ವೈ ದೇವಮಂದಿರೇ |

ಶಯನೇ ಮಿಥುನೀಭಾವಃ ಶಂಖವರ್ಜಿತಪೂಜನಮ್ || ೩೪ ||


ದೇವತಾಭಿಮುಖಃ ಪಾದಪ್ರಸಾರೋ ಮುನಿಸತ್ತಮ |

ಅವೃಂದಾವನಗೇಹೇ ಚ ವಾಸೋ ವ್ರತವ್ಯತಿಕ್ರಮಃ || ೩೫ ||


ತುಲಾಮಕರಮೇಷೇಷು ಪ್ರಾತಃಸ್ನಾನವಿವರ್ಜಿತಮ್ |

ಪೂಜಾಂತೇ ದೇವದೇವಸ್ಯ ಮುಖವಸ್ತ್ರಾಸಮರ್ಪಣಮ್ || ೩೬ ||


ಬ್ರಹ್ಮಪಾರಪರಸ್ತೋತ್ರಾಪಠನಂ ತ್ವಿತಿ ನಾರದ |

ಅಪರಾಧಶತಂ ಚೈತನ್ಮಹಾನರ್ಥಸ್ಯ ಸಾಧನಮ್ || ೩೭ ||


ಜ್ಞಾತ್ವಾ ಪುಂಸಾ ಪರಿತ್ಯಾಜ್ಯಂ ವಿಷ್ಣೋಃ ಪ್ರೀತಿಮಿಹೇಚ್ಛತಾ |

ಅನ್ಯಥಾ ನರಕಂ ಯಾತಿ ವಿಷ್ಣೋರ್ಮಾರ್ಗಂ ನ ಪಶ್ಯತಿ || ೩೮ ||


ಶತಾಪರಾಧಮಧ್ಯಾಯುಂ ಯೋ ವಾ ಪಠತಿ ನಿತ್ಯಶಃ |

ತಸ್ಯಾಪರಾಧಶತಕಂ ಸಹತೇ ವಿಷ್ಣುರವ್ಯಯಃ || ೩೯ ||


ವಿಷ್ಣೋರ್ನಾಮಸಹಸ್ರಂ ತು ಯೋ ವಾ ಪಠತಿ ನಿತ್ಯಶಃ |

ತಸ್ಯ ಪುಣ್ಯಫಲಂ ಧತ್ತೇ ಪಠತಸ್ತು ದಯಾನಿಧಿಃ || ೪೦ ||


|| ಇತಿ ಶ್ರೀಗರುಡಪುರಾಣೇ ಬ್ರಹ್ಮನಾರದಸಂವಾದೇ ಶತಾಪರಾಧಸ್ತೋತ್ರಮ್ ||

***



No comments:

Post a Comment