SEARCH HERE

Friday 1 October 2021

ಮನುಷ್ಯನನ್ನು ಕಾಡುವ ಗೋಚರ ಮತ್ತು ಅಗೋಚರ ಶಾಪಗಳು

 ಮನುಷ್ಯನನ್ನು ಕಾಡುವ ಶಾಪಗಳು.. ...“ಗೋಚರ ಮತ್ತು ಅಗೋಚರ ಶಾಪಗಳು”

೧. ಮಾತಾ ಪಿತೃ ಶಾಪ :

ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ..

ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಸಂಸಾರ ಮಾಡುತ್ತಾರೆಯೋ..

ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳು..

ಕೊಂಕು ಮಾತನಾಡಿ ,ತಿರಸ್ಕಾರದಿಂದ ನೋಯಿಸಿದ್ದರೂ ಬರುತ್ತದೆ.

ತಂದೆ ತಾಯಿಗಳ ಪಾಲನೆ ಪೋಷಣೆ ಮಾಡದ ಮಕ್ಕಳು..: ತಂದೆ ತಾಯಿಯರನ್ನು ಅಗಲಿಸಿದ ಮಕ್ಕಳು..

ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು..

ತಂದೆ ತಾಯಿಯರ ನಂತರ ಶ್ರಾದ್ಧ ಮಾಡದ ಮಕ್ಕಳು..…. ಇತ್ಯಾದಿ:

ಇವೆಲ್ಲವೂ ಮಾತಾಪಿತೃ ಶಾಪ ಎಂದು ಕರೆತುತ್ತೇವೆ.‌

ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ , ಮಕ್ಕಳ ಏಳಿಗೆಯಾಗುವುದಿಲ್ಲ , ಸಂತಾನ ದೋಷವೂ ಆಗಬಹುದು, ನೆಮ್ಮದಿ ಇರದ ದಾರಿದ್ರ್ಯದ ಜೀವನ, ..

೨. “ಸ್ತ್ರೀ ಶಾಪ”

ಅನ್ಯ ಸ್ತ್ರೀಯರಿಗೆ ನಂಬಿಸಿ ಮೋಸ ಮಾಡಿದ ದೋಷಗಳು..

ಅನ್ಯ ಸ್ತ್ರೀ ಆಭರಣ ಅಡಮಾನ ದೋಷಗಳು..

ಸ್ತ್ರೀ ಗೆ ಮಾತು ಕೊಟ್ಟು ತಪ್ಪಿದ ದೋಷಗಳು..

ಒಬ್ಬರು ಸ್ತ್ರೀಗೆ ಮಾತುಕೊಟ್ಟು ಅನ್ಯ ಸ್ತ್ರೀಯನ್ನು ವಿವಾಹವಾದ ದೋಷಗಳು..

ಸ್ತ್ರೀಯರ ಹಣನುಂಗಿದ ದೋಷಗಳು. .. ಇತ್ಯಾದಿ

ಸ್ತ್ರೀಯರನ್ನು ನಿಂದಿಸಿ , ಕಣ್ಣೀರು ಹಾಕಿಸಿದ ದೋಷಗಳು.. ಇವೆಲ್ಲವೂ ಸ್ತ್ರೀಶಾಪಗಳಾಗುತ್ತವೆ..ನಾರೋಗ್ಯ, ಕಷ್ಟದ ಜೀವನ, ಮನೆಯಲ್ಲಿ ಜಗಳಗಳು, ವಿವಾಹಕ್ಕೆ ದೋಷಗಳು, ಅಪಘಾತದ ಭಯಗಳು ಆಗುತ್ತಿರುತ್ತವೆ.

೩. “ಗುರುಶಾಪ”..

ಗುರುವಿನಿಂದ ಮಂತ್ರದೀಕ್ಷೆ ಪಡೆದು ದಕ್ಷಿಣೆ ಕೊಡದ ದೋಷಗಳು..

ಗುರುವಿನ ನಿಂದನೆ ಮಾಡಿದ ದೋಷಗಳು.‌

ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದ ದೋಷಗಳು..

ಗುರುವಿನಿಂದ ವಿದ್ಯೆ ಕಲಿತು ಗುರುವಿಗೇ ತಿರುಮಂತ್ರ ಹೇಳಿದ ದೋಷಗಳು..

ಗುರುವನ್ನು ತಿರಸ್ಕಾರ ಮಾಡಿದ ದೋಷಗಳು.‌

ಗುರುಗಳು ನೊಂದುಕೊಳ್ಳುವಂತೆ ಮಾಡಿದ ದೋಷಗಳು..

ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು , ಅದನ್ನು ಕೆಟ್ಟ ಕಾರ್ಯಗಳಿಗೆ ಉಪಯೋಗಿಸಿದ ದೋಷಗಳು....…. ಇತ್ಯಾದಿ:

ಇವೆಲ್ಲವೂ ಗುರುಶಾಪಗಳಾಗುತ್ತವೆ..

ಇಂತಹವರಿಗೆ ಜೀವನದಲ್ಲಿ ಅಭಿವೃದ್ಧಿನೇ ಇರುವುದಿಲ್ಲ, ಸಂತಾನಭಾಗ್ಯ ಕಷ್ಟ, ಮಕ್ಕಳಿಗೆ ವಿದ್ಯೆ ಹತ್ತುವುದಿಲ್ಲ, ಅಗೋಚರ ಕಾಯಿಲೆಗಳಾಗುತ್ತವೆ , ವಂಶವು ಅಧಃಪತನವಾಗುವುದು..

ಈ ಮೇಲಿನ ದೋಷಗಳಿಗೆ ಪರಿಹಾರವಿದ್ದರು ಹೇಳುವುದು ತಪ್ಪು.

ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

***


No comments:

Post a Comment